27.06.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನಿಮ್ಮ
ಸಮಯವು ಬಹಳ ಅಮೂಲ್ಯವಾಗಿದೆ ಆದ್ದರಿಂದ ವ್ಯರ್ಥಮಾತುಗಳಲ್ಲಿ ತಮ್ಮ ಸಮಯವನ್ನು ಕಳೆಯಬಾರದು”
ಪ್ರಶ್ನೆ:
ಮನುಷ್ಯರಿಂದ
ದೇವತೆಗಳಾಗಲು ತಂದೆಯಿಂದ ಯಾವ ಶ್ರೀಮತವು ಸಿಕ್ಕಿದೆ?
ಉತ್ತರ:
ಮಕ್ಕಳೇ, ನೀವೀಗ
ಮನುಷ್ಯರಿಂದ ದೇವತೆಗಳಾಗುತ್ತೀರಿ ಅಂದಮೇಲೆ ನಿಮ್ಮಲ್ಲಿ ಯಾವುದೇ ಆಸುರೀ ಸ್ವಭಾವವಿರಬಾರದು. 2.
ಯಾರ ಮೇಲೂ ಕೋಪಿಸಿಕೊಳ್ಳಬಾರದು. 3. ಯಾರಿಗೂ ದುಃಖವನ್ನು ಕೊಡಬಾರದು. 4. ಯಾವುದೇ
ವ್ಯರ್ಥಮಾತುಗಳನ್ನು ಕಿವಿಗಳಿಂದ ಕೇಳಬಾರದು. ತಂದೆಯ ಶ್ರೀಮತವಾಗಿದೆ- ಕೆಟ್ಟದ್ದನ್ನು ಕೇಳಬೇಡಿ,..............
ಓಂ ಶಾಂತಿ.
ನೀವು ಮಕ್ಕಳು ಕುಳಿತುಕೊಳ್ಳುವ ಶೈಲಿಯು ಬಹಳ ಸರಳವಾಗಿದೆ. ನೀವು ಎಲ್ಲಿಯಾದರೂ ಕುಳಿತುಕೊಳ್ಳಬಹುದು.
ಕಾಡಿನಲ್ಲಾದರೂ ಕುಳಿತುಕೊಳ್ಳಿ, ಬೆಟ್ಟದ ಮೇಲ್ಲಾದರೂ ಕುಳಿತುಕೊಳ್ಳಿ, ಮನೆ ಅಥವಾ ಕುಟೀರದಲ್ಲಾದರೂ
ಕುಳಿತುಕೊಳ್ಳಿ. ನೀವು ಎಲ್ಲಾದರೂ ಕುಳಿತುಕೊಳ್ಳಬಹುದು ಆದರೆ ಎಲ್ಲಿಯೇ ಕುಳಿತುಕೊಂಡರೂ ನೆನಪಿನಲ್ಲಿ
ಕುಳಿತುಕೊಳ್ಳುವುದರಿಂದ ನೀವು ಮಕ್ಕಳು ಇಲ್ಲಿಂದ ವರ್ಗಾಯಿತರಾಗಿಬಿಡುತ್ತೀರಿ. ನೀವು ಮಕ್ಕಳಿಗೆ
ತಿಳಿದಿದೆ- ನಾವು ಮನುಷ್ಯರು ಭವಿಷ್ಯಕ್ಕಾಗಿ ದೇವತೆಗಳಾಗುತ್ತಿದ್ದೇವೆ. ಮುಳ್ಳುಗಳಿಂದ
ಹೂಗಳಾಗುತ್ತಿದ್ದೇವೆ. ತಂದೆಯು ಹೂದೋಟದ ಮಾಲೀಕನೂ ಆಗಿದ್ದಾರೆ, ಮಾಲಿಯೂ ಆಗಿದ್ದಾರೆ. ನಾವು
ತಂದೆಯನ್ನು ನೆನಪು ಮಾಡುವುದರಿಂದ ಮತ್ತೆ 84 ಜನ್ಮಗಳ ಚಕ್ರವನ್ನು ತಿರುಗಿಸುವುದರಿಂದ
ವರ್ಗಾವಣೆಯಾಗುತ್ತಿದ್ದೇವೆ. ಇಲ್ಲಾದರೂ ಕುಳಿತುಕೊಳ್ಳಿ, ಎಲ್ಲಿಯಾದರೂ ಕುಳಿತುಕೊಳ್ಳಿ,
ವರ್ಗಾಯಿತರಾಗುತ್ತಾ ಆಗುತ್ತಾ ನೀವು ಮನುಷ್ಯರಿಂದ ದೇವತೆಗಳಾಗುತ್ತಾ ಹೋಗುತ್ತೀರಿ. ನಾವು ಈ
ರೀತಿಯಾಗುತ್ತಿದ್ದೇವೆ ಎಂದು ಬುದ್ಧಿಯಲ್ಲಿ ಗುರಿ-ಧ್ಯೇಯವೂ ಇದೆ. ಯಾವುದೇ ಕೆಲಸಕಾರ್ಯಗಳನ್ನು ಮಾಡಿ,
ರೊಟ್ಟಿಯನ್ನು ಮಾಡುತ್ತಿರುವಾಗಲೂ ಸಹ ಬುದ್ಧಿಯಲ್ಲಿ ಕೇವಲ ತಂದೆಯನ್ನು ನೆನಪು ಮಾಡಿ. ಮಕ್ಕಳಿಗೆ ಈ
ಶ್ರೀಮತ ಸಿಕ್ಕಿದೆ- ನಡೆಯುತ್ತಾ-ತಿರುಗಾಡುತ್ತಾ ಕೇವಲ ನನ್ನ ನೆನಪಿನಲ್ಲಿರಿ. ತಂದೆಯ ನೆನಪಿನಿಂದ
ಆಸ್ತಿಯೂ ನೆನಪಿಗೆ ಬರುತ್ತದೆ, 84 ಜನ್ಮಗಳ ಚಕ್ರದ ನೆನಪೂ ಬರುತ್ತದೆ. ಇದರಲ್ಲಿ ಮತ್ತೇನು
ಕಷ್ಟವಿದೆ! ಯಾವಾಗ ನಾವು ದೇವತೆಗಳಾಗುತ್ತಿದ್ದೇವೆ ಅಂದಮೇಲೆ ಯಾವುದೇ ಅಸುರೀ ಸ್ವಭಾವವೂ ಇರಬಾರದು.
ಅನ್ಯರಮೇಲೆ ಕ್ರೋಧ ಮಾಡುವುದಾಗಲಿ, ದುಃಖವನ್ನು ಕೊಡುವುದಾಗಲಿ, ಯಾವುದೇ ವ್ಯರ್ಥಮಾತುಗಳನ್ನು
ಕಿವಿಗಳಿಂದ ಕೇಳುವುದಾಗಲಿ ಮಾಡಬಾರದು. ಕೇವಲ ತಂದೆಯನ್ನು ನೆನಪು ಮಾಡಿ ಬಾಕಿ ಸಂಸಾರದ ಪರಚಿಂತನೆಯ
ಮಾತುಗಳನ್ನಂತೂ ಬಹಳಷ್ಟು ಕೇಳಿದಿರಿ, ಅರ್ಧಕಲ್ಪದಿಂದ ಈ ಮಾತುಗಳನ್ನು ಕೇಳುತ್ತಾ-ಕೇಳುತ್ತಾ
ನೀವಿನ್ನೂ ಕೆಳಗಿಳಿದಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ- ಇವರು ಪರಚಿಂತನೆ ಮಾಡುತ್ತಾರೆ, ಇವರು
ಹೀಗೆ ಮಾಡುತ್ತಾರೆ, ಇವರಲ್ಲಿ ಇಂತಹ ಅವಗುಣಗಳಿವೆ ಎಂಬ ಯಾವುದೇ ವ್ಯರ್ಥಮಾತುಗಳನ್ನು ಮಾತನಾಡಬಾರದು.
ಇದು ತಮ್ಮ ಸಮಯವನ್ನು ವ್ಯರ್ಥಮಾಡುವುದಾಗಿದೆ. ನಿಮ್ಮ ಸಮಯವು ಬಹಳ ಅಮೂಲ್ಯವಾಗಿದೆ. ವಿದ್ಯೆಯಿಂದಲೇ
ತಮ್ಮ ಕಲ್ಯಾಣವಾಗುತ್ತದೆ. ಇದರಿಂದಲೇ ಪದವಿಯನ್ನು ಪಡೆಯುತ್ತೀರಿ. ಆ ವಿದ್ಯೆಯಲ್ಲಂತೂ ಬಹಳ
ಪರಿಶ್ರಮಪಡಬೇಕಾಗುತ್ತದೆ. ಪರೀಕ್ಷೆಯನ್ನು ಬರೆಯಲು ವಿದೇಶಕ್ಕೆ ಹೋಗುತ್ತಾರೆ. ಇಲ್ಲಿ ನಿಮಗಂತೂ
ಯಾವುದೇ ಕಷ್ಟವನ್ನು ಕೊಡುವುದಿಲ್ಲ. ತಂದೆಯು ಆತ್ಮಗಳಿಗೆ ಇಷ್ಟನ್ನೇ ತಿಳಿಸುತ್ತಾರೆ- ನನ್ನನ್ನು
ನೆನಪು ಮಾಡಿ, ಪರಸ್ಪರ ಎದುರು-ಬದುರು ಕುಳ್ಳರಿಸಿದಾಗಲೂ ಸಹ ತಂದೆಯ ನೆನಪಿನಲ್ಲಿರಿ. ನೆನಪಿನಲ್ಲಿ
ಕುಳಿತುಕೊಳ್ಳುತ್ತಾ-ಕುಳಿತುಕೊಳ್ಳುತ್ತಾ ನೀವು ಮುಳ್ಳಿನಿಂದ ಹೂವಾಗುತ್ತೀರಿ. ಎಷ್ಟು ಒಳ್ಳೆಯ
ಯುಕ್ತಿಯಾಗಿದೆ ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ಪ್ರತಿಯೊಬ್ಬರ ಖಾಯಿಲೆಯು
ಬೇರೆ-ಬೇರೆಯಾಗಿರುತ್ತದೆ. ಪ್ರತಿಯೊಂದು ಖಾಯಿಲೆಗೂ ತಜ್ಞರಿರುತ್ತಾರೆ, ದೊಡ್ಡ-ದೊಡ್ಡವ್ಯಕ್ತಿಗಳಿಗೆ
ವಿಶೇಷ ತಜ್ಞರಿರುತ್ತಾರಲ್ಲವೆ ಆದರೆ ನಿಮ್ಮ ತಜ್ಞರು ಯಾರಾಗಿದ್ದಾರೆ? ಸ್ವಯಂ ಭಗವಂತ. ಅವರು
ಅವಿನಾಶಿ ತಜ್ಞರಾಗಿದ್ದಾರೆ. ನಾನು ನಿಮ್ಮನ್ನು ಅರ್ಧಕಲ್ಪಕ್ಕಾಗಿ ನಿರೋಗಿಯನ್ನಾಗಿ ಮಾಡುತ್ತೇನೆ.
ಕೇವಲ ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು ತಿಳಿಸುತ್ತಾರೆ.
ನೀವು 21 ಜನ್ಮಗಳಿಗಾಗಿ ನಿರೋಗಿಗಳಾಗಿಬಿಡುತ್ತೀರಿ. ಈ ನೆನಪಿನ ಗಂಟನ್ನು ಹಾಕಿಕೊಳ್ಳಿ.
ನೆನಪಿನಿಂದಲೇ ನೀವು ನಿರೋಗಿಗಳಾಗುತ್ತೀರಿ ಮತ್ತೆ 21 ಜನ್ಮಗಳಿಗಾಗಿ ಯಾವುದೇ ರೋಗವಿರುವುದಿಲ್ಲ.
ಭಲೆ ಆತ್ಮವು ಅವಿನಾಶಿಯಾಗಿದೆ, ಶರೀರವೇ ರೋಗಿಯಾಗುತ್ತದೆ. ಆದರೆ ಅನುಭವಿಸುವುದು ಆತ್ಮವೇ ಅಲ್ಲವೆ.
ಸತ್ಯಯುಗದಲ್ಲಿ ಅರ್ಧಕಲ್ಪ ನೀವೆಂದೂ ರೋಗಿಯಾಗುವುದಿಲ್ಲ. ಕೇವಲ ನೆನಪಿನಲ್ಲಿ ತತ್ಫರರಾಗಿರಿ.
ಸೇವೆಯನ್ನಂತೂ ಮಕ್ಕಳು ಮಾಡಲೇಬೇಕಾಗಿದೆ. ಪ್ರದರ್ಶನಿಯಲ್ಲಿ ಮಕ್ಕಳು ಸರ್ವೀಸ್ ಮಾಡುತ್ತಾ ಗಂಟಲು
ಕಟ್ಟಿಬಿಡುತ್ತದೆ. ಕೆಲವು ಮಕ್ಕಳು ನಾವು ಸರ್ವೀಸ್ ಮಾಡುತ್ತಾ-ಮಾಡುತ್ತಾ ತಂದೆಯ ಬಳಿ
ಹೋಗುತ್ತೇವೆಂದು ತಿಳಿಯುತ್ತಾರೆ. ಇದೂ ಸಹ ಸರ್ವೀಸಿನ ಬಹಳ ಒಳ್ಳೆಯ ವಿಧಾನವಾಗಿದೆ.
ಪ್ರದರ್ಶನಿಯಲ್ಲಿಯೂ ಮಕ್ಕಳು ತಿಳಿಸಿಕೊಡಬೇಕು- ಪ್ರದರ್ಶನಿಯಲ್ಲಿ ಮೊಟ್ಟಮೊದಲು ಲಕ್ಷ್ಮೀ-ನಾರಾಯಣನ
ಚಿತ್ರವನ್ನು ತೋರಿಸಬೇಕು. ಇದು ಏವನ್ ಚಿತ್ರವಾಗಿದೆ. ಭಾರತದಲ್ಲಿ ಇಂದಿಗೆ 5000 ವರ್ಷಗಳ ಮೊದಲು
ಅವಶ್ಯವಾಗಿ ಇವರ ರಾಜ್ಯವಿತ್ತು, ಅಪಾರ ಧನವಿತ್ತು, ಪವಿತ್ರತೆ-ಶಾಂತಿ-ಸುಖ ಎಲ್ಲವೂ ಇತ್ತು ಆದರೆ
ಭಕ್ತಿಮಾರ್ಗದಲ್ಲಿ ಈ ಲಕ್ಷ್ಮೀ-ನಾರಾಯಣರ ಚಿತ್ರವು ಫಸ್ಟ್ಕ್ಲಾಸ್ ಆಗಿದೆ. ಸತ್ಯಯುಗದಲ್ಲಿ 1250
ವರ್ಷಗಳವರೆಗೆ ಈ ಧರ್ಮದವರು ರಾಜ್ಯ ಮಾಡಿದರು. ಮೊದಲು ನಿಮಗೂ ತಿಳಿದಿರಲಿಲ್ಲ. ಈಗ ತಂದೆಯು ನೀವು
ಮಕ್ಕಳಿಗೆ ಸ್ಮೃತಿ ತರಿಸಿದ್ದಾರೆ- ನೀವು ಪೂರ್ಣವಿಶ್ವದ ಮೇಲೆ ರಾಜ್ಯ ಮಾಡಿದ್ದಿರಿ, ಇದನ್ನು ನೀವು
ಮರೆತುಹೋದಿರಾ? 84 ಜನ್ಮಗಳನ್ನೂ ನೀವೇ ತೆಗೆದುಕೊಂಡಿದ್ದೀರಿ. ನೀವೇ ಸೂರ್ಯವಂಶಿಗಳಾಗಿದ್ದೀರಿ,
ಪುನರ್ಜನ್ಮವನ್ನಂತೂ ಅವಶ್ಯವಾಗಿ ತೆಗೆದುಕೊಳ್ಳುತ್ತೀರಿ ಆದರೆ 84 ಜನ್ಮಗಳನ್ನು ನೀವು ಹೇಗೆ
ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಸಹಜಮಾತಾಗಿದೆ. ನೀವು ಕೆಳಗಿಳಿಯುತ್ತಾ
ಬಂದಿದ್ದೀರಿ, ಈಗ ಮತ್ತೆ ತಂದೆಯು ಏರುವಕಲೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ನಿಮ್ಮದು
ಏರುವಕಲೆಯಾದಾಗ ಎಲ್ಲರ ಉನ್ನತಿಯಾಗುವುದೆಂದು ಹಾಡುತ್ತಾರೆ. ಶಂಖುಧ್ವನಿ ಮಾಡುತ್ತಾರೆ. ನೀವು
ತಿಳಿದುಕೊಂಡಿದ್ದೀರಿ- ಬಹಳ ಹಾಹಾಕಾರವಾಗುವುದು. ಪಾಕಿಸ್ತಾನದಲ್ಲಿ ನೋಡಿ ಎಲ್ಲರ ಬಾಯಿಂದ ಇದೇ
ಬರುತ್ತಿತ್ತು- ಹೇ ಭಗವಂತ, ಹೇ ರಾಮ ಈಗ ಏನಾಗುವುದೋ! ಈ ವಿನಾಶವಂತೂ ಬಹಳ ದೊಡ್ಡದಾಗಿದೆ. ಇದರನಂತರ
ಜಯಜಯಕಾರವಾಗುವುದು. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಈ ಬೇಹದ್ದಿನ ಪ್ರಪಂಚವು ಈಗ
ವಿನಾಶವಾಗಲಿದೆ. ಬೇಹದ್ದಿನ ತಂದೆಯು ನಿಮಗೆ ಬೇಹದ್ದಿನ ಜ್ಞಾನವನ್ನು ತಿಳಿಸುತ್ತಾರೆ. ಹದ್ದಿನ
ಮಾತುಗಳು ಚರಿತ್ರೆ-ಭೂಗೋಳವನ್ನಂತೂ ಕೇಳುತ್ತಲೇ ಬಂದಿದ್ದೀರಿ ಆದರೆ ಈ ಲಕ್ಷ್ಮೀ-ನಾರಾಯಣರು ಹೇಗೆ
ರಾಜ್ಯಭಾರ ಮಾಡಿದರೆಂದು ಯಾರೂ ತಿಳಿದಿರಲಿಲ್ಲ. ಇವರ ಚರಿತ್ರೆ-ಭೂಗೋಳವು ಯಾರಿಗೂ ಗೊತ್ತಿಲ್ಲ. ನೀವು
ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ- ಇವರು ಇಷ್ಟು ಜನ್ಮಗಳು ರಾಜ್ಯಮಾಡಿದರು, ನಂತರ ಇಂತಿಂತಹ
ಧರ್ಮದವರು ಬರುತ್ತಾರೆ, ಇದಕ್ಕೆ ಆಧ್ಯಾತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಭಲೆ ಇದನ್ನು ಆತ್ಮಿಕ
ತಂದೆಯೇ ಮಕ್ಕಳಿಗೆ ಕೊಡುತ್ತಾರೆ. ಅಲ್ಲಂತೂ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ, ಇಲ್ಲಿ
ನಾವಾತ್ಮರನ್ನು ಪರಮಾತ್ಮನು ತನ್ನಸಮಾನ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರು ಅವಶ್ಯವಾಗಿ
ತಮ್ಮಸಮಾನ ಮಾಡಿಕೊಳ್ಳುತ್ತಾರಲ್ಲವೆ.
ತಂದೆಯು ತಿಳಿಸುತ್ತಾರೆ-
ನಾನು ನಿಮ್ಮನ್ನು ನನಗಿಂತಲೂ ಶ್ರೇಷ್ಠ, ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತೇನೆ. ನೆನಪಿನಿಂದ
ಪ್ರಕಾಶತೆಯ ಕಿರೀಟವು ಸಿಗುತ್ತದೆ ಮತ್ತು 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳುವುದರಿಂದ ನೀವು
ಚಕ್ರವರ್ತಿ ರಾಜರಾಗುತ್ತೀರಿ. ಈಗ ನಿಮಗೆ ಕರ್ಮ, ಅಕರ್ಮ, ವಿಕರ್ಮದ ರಹಸ್ಯವನ್ನು ತಿಳಿಸಿದ್ದೇವೆ.
ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ. ರಾವಣರಾಜ್ಯದಲ್ಲಿಯೂ ಕರ್ಮವು ವಿಕರ್ಮವಾಗುತ್ತದೆ.
ಏಣಿಯನ್ನು ಕೆಳಗಿಳಿಯುತ್ತಾ ಬರುತ್ತಾರೆ. ಕಲೆಗಳು ಕಡಿಮೆಯಾದಂತೆ ಕೆಳಗಿಳಿಯಲೇಬೇಕಾಗಿದೆ. ಎಷ್ಟೊಂದು
ಪತಿತರಾಗಿಬಿಡುತ್ತಾರೆ! ನಂತರ ತಂದೆಯು ಬಂದು ಭಕ್ತರಿಗೆ ಫಲವನ್ನು ಕೊಡುತ್ತಾರೆ. ಪ್ರಪಂಚದಲ್ಲಿ
ಎಷ್ಟೊಂದು ಮಂದಿ ಭಕ್ತರಾಗಿದ್ದಾರೆ, ಸತ್ಯಯುಗದಲ್ಲಿ ಭಕ್ತರ್ಯಾರೂ ಇರುವುದಿಲ್ಲ. ಇಲ್ಲಿ ಭಕ್ತಿಯ
ಕಾಂಡವೇ ಇದೆ, ಸತ್ಯಯುಗದಲ್ಲಿ ಜ್ಞಾನದ ಪ್ರಾಲಬ್ಧವಿರುತ್ತದೆ. ನಾವು ತಂದೆಯಿಂದ ಬೇಹದ್ದಿನ
ಪ್ರಾಲಬ್ಧವನ್ನು ಪಡೆಯುತ್ತಿದ್ದೇವೆಂದು ನಿಮಗೆ ತಿಳಿದಿದೆ. ಯಾರಿಗಾದರೂ ಮೊಟ್ಟಮೊದಲು ಈ
ಲಕ್ಷ್ಮೀ-ನಾರಾಯಣರ ಚಿತ್ರದ ಬಗ್ಗೆ ತಿಳಿಸಿ, ಇಂದಿಗೆ 5000 ವರ್ಷಗಳ ಮೊದಲು ಇವರ ರಾಜ್ಯವಿತ್ತು,
ವಿಶ್ವದಲ್ಲಿ ಸುಖ-ಶಾಂತಿ-ಪವಿತ್ರತೆ ಎಲ್ಲವೂ ಇತ್ತು. ಆಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಈ
ಸಮಯದಲ್ಲಿ ಅನೇಕ ಧರ್ಮಗಳಿವೆ. ಆ ಮೊದಲಿನ ಧರ್ಮವು ಇಲ್ಲ. ಈಗ ಪುನಃ ಆ ಧರ್ಮವು ಅವಶ್ಯವಾಗಿ
ಬರಬೇಕಾಗಿದೆ. ತಂದೆಯು ಎಷ್ಟೊಂದು ಪ್ರೀತಿಯಿಂದ ಓದಿಸುತ್ತಾರೆ. ಯಾವುದೇ ಯುದ್ಧದ ಮಾತಿಲ್ಲ. ಇದು
ಬಿಕಾರಿ ಜೀವನವಾಗಿದೆ, ಪರರಾಜ್ಯವಾಗಿದೆ. ತಮ್ಮದೆಲ್ಲವೂ ಗುಪ್ತವಾಗಿದೆ, ತಂದೆಯೂ ಗುಪ್ತವಾಗಿ
ಬಂದಿದ್ದಾರೆ. ಆತ್ಮಗಳಿಗೆ ತಿಳಿಸಿಕೊಡುತ್ತಾರೆ- ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಶರೀರದ ಮೂಲಕ
ಪಾತ್ರವನ್ನಭಿನಯಿಸುತ್ತದೆ. ಅದು ಈಗ ದೇಹಾಭಿಮಾನದಲ್ಲಿ ಬಂದಿದೆ ಆದ್ದರಿಂದ ದೇಹೀ-ಅಭಿಮಾನಿಯಾಗಿ
ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಯಾವಾಗ ತಂದೆಯು
ಗುಪ್ತರೂಪದಲ್ಲಿ ಬರುತ್ತಾರೆಂದರೆ ನೀವು ಮಕ್ಕಳಿಗೂ ಸಹ ವಿಶ್ವದ ರಾಜ್ಯಭಾಗ್ಯವನ್ನು ಗುಪ್ತದಾನವಾಗಿ
ಕೊಡುತ್ತಾರೆ. ನಿಮ್ಮದೆಲ್ಲವೂ ಗುಪ್ತವಾಗಿದೆ ಆದ್ದರಿಂದ ಸಾಂಪ್ರದಾಯಿಕರೂಪದಲ್ಲಿ ಕನ್ಯೆಗೆ
ವರದಕ್ಷಿಣೆಯನ್ನು ಕೊಡಬೇಕಾದರೆ ಗುಪ್ತವಾಗಿಯೇ ಕೊಡುತ್ತಾರೆ. ವಾಸ್ತವದಲ್ಲಿ ಗುಪ್ತದಾನ
ಮಹಾಪುಣ್ಯವೆಂದು ಗಾಯನವಿದೆ. ಕೊಟ್ಟಿದ್ದು ಇಬ್ಬರು ನಾಲ್ಕುಮಂದಿಗೆ ತಿಳಿಯಿತೆಂದರೆ ಅದರ ಶಕ್ತಿಯು
ಕಡಿಮೆಯಾಗಿಬಿಡುತ್ತದೆ.
ಮಕ್ಕಳೇ,
ಪ್ರದರ್ಶನಿಯಲ್ಲಿ ನೀವು ಮೊಟ್ಟಮೊದಲು ಈ ಲಕ್ಷ್ಮೀ-ನಾರಾಯಣರ ಚಿತ್ರದ ಬಗ್ಗೆ ತಿಳಿಸಿಕೊಡಿ.
ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲೆಂದು ನೀವು ಬಯಸುತ್ತೀರಲ್ಲವೆ ಆದರೆ ಅದು ಯಾವಾಗ ಇತ್ತು ಎಂಬುದು
ಯಾರ ಬುದ್ಧಿಯಲ್ಲಿಯೂ ಇಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಪವಿತ್ರತೆ- ಸುಖ-ಶಾಂತಿ
ಎಲ್ಲವೂ ಇತ್ತು. ಇಂತಹವರು ಸ್ವರ್ಗಸ್ಥರಾದರೆಂದು ನೆನಪು ಮಾಡುತ್ತಾರೆ ಆದರೆ ತಿಳಿದುಕೊಂಡಿಲ್ಲ.
ಯಾರಿಗೇನು ಬರುವುದೋ ಅದನ್ನು ಹೇಳಿಬಿಡುತ್ತಾರೆ, ಅರ್ಥವೇನೂ ಇಲ್ಲ. ಇದು ನಾಟಕವಾಗಿದೆ. ಮಧುರಾತಿ
ಮಧುರ ಮಕ್ಕಳಿಗೆ ಈ ಜ್ಞಾನವಿದೆ- ನಾವು 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ, ಪತಿತಪ್ರಪಂಚದಿಂದ
ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ತಂದೆಯ ನೆನಪಿನಲ್ಲಿರುತ್ತಾ
ವರ್ಗಾವಣೆಯಾಗುತ್ತಾ ಹೋಗುತ್ತೀರಿ, ಮುಳ್ಳಿನಿಂದ ಹೂವಾಗುತ್ತೀರಿ. ನಂತರ ನಾವು ಚಕ್ರವರ್ತಿ
ರಾಜರಾಗುತ್ತೇವೆ. ಮಾಡುವಂತಹವರು ತಂದೆಯಾಗಿದ್ದಾರೆ, ಅವರು ಪರಮ ಆತ್ಮವಂತೂ ಸದಾ
ಪವಿತ್ರವಾಗಿರುತ್ತಾರೆ. ಅವರೇ ಪವಿತ್ರರನ್ನಾಗಿ ಮಾಡಲು ಬರುತ್ತಾರೆ. ಸತ್ಯಯುಗದಲ್ಲಿ ನೀವು
ಅತಿಸುಂದರರಾಗಿರುತ್ತೀರಿ. ಅಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ. ಈಗ ನೋಡಿ, ಕೃತಕ ಶೃಂಗಾರ
ಮಾಡಿಕೊಳ್ಳುತ್ತಾರೆ, ಏನೇನೋ ಫ್ಯಾಷನ್ ಬಂದಿದೆ, ಎಂತೆಂತಹದ್ದೋ ಉಡುಪುಗಳನ್ನು ಧರಿಸುತ್ತಾರೆ.
ಮೊದಲಿಗೆ ಸ್ತ್ರೀಯರು ಯಾರ ದೃಷ್ಟಿಯೂ ಬೀಳಬಾರದೆಂದು ಬಹಳ ಗುಟ್ಟಾಗಿರುತ್ತಿದ್ದರು. ಈಗಂತೂ ಇನ್ನೂ
ಗುಟ್ಟು ರಟ್ಟಾಗಿದೆ. ಎಲ್ಲಿ ನೋಡಿದರಲ್ಲಿ ಕೊಳಕು ಹೆಚ್ಚಾಗಿಬಿಟ್ಟಿದೆ. ತಂದೆಯು ತಿಳಿಸುತ್ತಾರೆ-
ಕೆಟ್ಟದ್ದನ್ನು ಕೇಳಬೇಡಿ.............
ರಾಜನಲ್ಲಿ
ಶಕ್ತಿಯಿರುತ್ತದೆ. ಈಶ್ವರಾರ್ಥವಾಗಿ ದಾನ ಮಾಡುತ್ತಾರೆ ಆದ್ದರಿಂದ ಅವರಿಗೆ ಶಕ್ತಿಯಿರುತ್ತದೆ,
ಇಲ್ಲಂತೂ ಯಾವುದೇ ಶಕ್ತಿಯಿಲ್ಲ. ಯಾರಿಗೇನು ಬರುವುದೋ ಅದನ್ನು ಮಾಡುತ್ತಿರುತ್ತಾರೆ. ಬಹಳ
ಕೆಟ್ಟಮನುಷ್ಯರಿದ್ದಾರೆ. ನೀವಂತೂ ಬಹಳ ಸೌಭಾಗ್ಯಶಾಲಿಗಳಾಗಿದ್ದೀರಿ, ಅಂಬಿಗನೇ ನಿಮ್ಮ ಕೈಯನ್ನು
ಹಿಡಿದಿದ್ದಾನೆ. ನೀವೇ ಕಲ್ಪ-ಕಲ್ಪವೂ ನಿಮಿತ್ತರಾಗುತ್ತೀರಿ. ಮೊದಲನೇ ಮುಖ್ಯವಾದುದು
ದೇಹಾಭಿಮಾನವಾಗಿದೆ. ಅದರ ನಂತರ ಎಲ್ಲಾ ಭೂತಗಳು ಬರುತ್ತವೆ ಆದ್ದರಿಂದ ತಮ್ಮನ್ನು ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡುವ ಪರಿಶ್ರಮಪಡಬೇಕಾಗಿದೆ. ಇದೇನು ಕಹಿಯಾದ ಔಷಧಿಯಲ್ಲ. ತಂದೆಯು
ಇಷ್ಟನ್ನೇ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ,
ನೆನಪಿನಲ್ಲಿದ್ದು ಎಷ್ಟಾದರೂ ಪಾದಯಾತ್ರೆ ಮಾಡಿ ಕಾಲುಗಳು ಸುಸ್ತಾಗುವುದಿಲ್ಲ, ಹಗುರವಾಗಿಬಿಡುತ್ತವೆ.
ಬಹಳ ಸಹಯೋಗವೂ ಸಿಗುತ್ತದೆ. ನೀವು ಮಾ||ಸರ್ವಶಕ್ತಿವಂತರಾಗಿಬಿಡುತ್ತೀರಿ. ನಾವು ವಿಶ್ವದ
ಮಾಲೀಕರಾಗುತ್ತೇವೆಂದು ನಿಮಗೆ ತಿಳಿದಿದೆ. ತಂದೆಯ ಬಳಿ ಬಂದಿದ್ದೀರಿ, ತಂದೆಯು ಮತ್ತ್ಯಾವುದೇ
ಕಷ್ಟವನ್ನು ಕೊಡುವುದಿಲ್ಲ, ಕೇವಲ ಮಕ್ಕಳಿಗೆ ತಿಳಿಸುತ್ತಾರೆ- ಕೆಟ್ಟದ್ದನ್ನು ಕೇಳಬೇಡಿ..... ಯಾರು
ಸೇವಾಧಾರಿ ಮಕ್ಕಳಿದ್ದಾರೆಯೋ ಅವರ ಬಾಯಿಂದ ಸದಾ ಜ್ಞಾನರತ್ನಗಳೇ ಬರುತ್ತವೆ. ಜ್ಞಾನದ ಮಾತುಗಳನ್ನು
ಬಿಟ್ಟು ಮತ್ತ್ಯಾವ ಮಾತುಗಳೂ ಅವರ ಮುಖದಿಂದ ಬರುವುದಿಲ್ಲ. ನೀವು ಅಲ್ಲಸಲ್ಲದ ವ್ಯರ್ಥಮಾತುಗಳನ್ನು
ಎಂದೂ ಕೇಳಬಾರದು. ಸರ್ವೀಸ್ ಮಾಡುವವರ ಬಾಯಿಂದ ಸದಾ ಜ್ಞಾನರತ್ನಗಳೇ ಬರುತ್ತವೆ. ಜ್ಞಾನದ
ಮಾತುಗಳನ್ನು ಬಿಟ್ಟು ಉಳಿದೆಲ್ಲವೂ ಕಲ್ಲನ್ನೆಸೆಯುವುದಾಗಿದೆ. ಕಲ್ಲುಗಳನ್ನು ಎಸೆಯುವುದಿಲ್ಲವೆಂದರೆ
ಅವಶ್ಯವಾಗಿ ಜ್ಞಾನರತ್ನಗಳನ್ನು ಕೊಡುತ್ತಾರೆ. ಕಲ್ಲನ್ನೆಸೆಯುತ್ತಾರೆ, ಇಲ್ಲವೆ ಜ್ಞಾನರತ್ನಗಳನ್ನು
ಕೊಡುತ್ತಾರೆ, ಇದರ ಬೆಲೆಯನ್ನು ಕೇಳಲು ಸಾಧ್ಯವಿಲ್ಲ. ತಂದೆಯು ಬಂದು ನಿಮಗೆ ಜ್ಞಾನರತ್ನಗಳನ್ನು
ಕೊಡುತ್ತಾರೆ. ಅದು ಭಕ್ತಿಯಾಗಿದೆ, ಕಲ್ಲನ್ನೇ ಹಾಕುತ್ತಿರುತ್ತಾರೆ.
ಮಕ್ಕಳಿಗೆ ತಿಳಿದಿದೆ-
ತಂದೆಯು ಬಹಳ-ಬಹಳ ಮಧುರವಾಗಿದ್ದಾರೆ. ನೀವು ಮಾತಾಪಿತಾ...... ಎಂದು ಅರ್ಧಕಲ್ಪದಿಂದ ಹಾಡುತ್ತಾ
ಬರುತ್ತೀರಿ, ಅದರ ಅರ್ಥವನ್ನೂ ತಿಳಿದುಕೊಂಡಿರಲಿಲ್ಲ. ಗಿಳಿಯ ತರಹ ಕೇವಲ ಹಾಡುತ್ತಿದ್ದಿರಿ. ನೀವು
ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು- ತಂದೆಯು ನಮಗೆ ಬೇಹದ್ದಿನ ಆಸ್ತಿ, ವಿಶ್ವದ ರಾಜ್ಯಭಾಗ್ಯವನ್ನು
ಕೊಡುತ್ತಾರೆ. 5000 ವರ್ಷಗಳಿಗೆ ಮೊದಲು ನಾವು ವಿಶ್ವದ ಮಾಲೀಕರಾಗಿದ್ದೆವು, ಈಗಿಲ್ಲ ಪುನಃ
ಆಗುತ್ತೇವೆ. ಶಿವತಂದೆಯು ಬ್ರಹ್ಮಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ಬ್ರಾಹ್ಮಣಕುಲವು
ಬೇಕಲ್ಲವೆ. ಭಗೀರಥನೆಂದು ಹೇಳುವುದರಿಂದಲೂ ಅರ್ಥವಾಗುವುದಿಲ್ಲ ಆದ್ದರಿಂದ ಬ್ರಹ್ಮಾ ಮತ್ತು ಅವರದು
ಬ್ರಾಹ್ಮಣಕುಲವಾಗಿದೆ. ಬ್ರಹ್ಮನ ತನುವಿನಲ್ಲಿ ಪ್ರವೇಶ ಮಾಡುತ್ತಾರೆ. ಆದ್ದರಿಂದ ಅವರಿಗೆ
ಭಗೀರಥನೆಂದು ಹೇಳಲಾಗುತ್ತದೆ. ಬ್ರಹ್ಮನ ಮಕ್ಕಳು ಬ್ರಾಹ್ಮಣರಾಗಿದ್ದೀರಿ. ಬ್ರಾಹ್ಮಣರು ಶಿಖೆಗೆ
ಸಮಾನ. ವಿರಾಟರೂಪದಲ್ಲಿಯೂ ಸಹ ಈ ರೀತಿಯಿರುತ್ತದೆ- ಶಿವತಂದೆ, ನಂತರ ಸಂಗಮಯುಗೀ ಬ್ರಾಹ್ಮಣರು, ಯಾರು
ಈಶ್ವರೀಯ ಸಂತಾನರಾಗಿದ್ದಾರೆ. ನೀವು ತಿಳಿದುಕೊಳ್ಳುತ್ತೀರಿ- ನಾವೀಗ ಈಶ್ವರೀಯ ಸಂತಾನರಾಗಿದ್ದೇವೆ
ನಂತರ ದೈವೀ ಸಂತಾನರಾಗುತ್ತೇವೆ, ಆಗ ದರ್ಜೆಯು ಕಡಿಮೆಯಾಗಿಬಿಡುವುದು. ಈ ಲಕ್ಷ್ಮಿ-ನಾರಾಯಣರ
ದರ್ಜೆಯು ಕಡಿಮೆಯಾಗಿದೆ ಏಕೆಂದರೆ ಇವರಲ್ಲಿಯೂ ಜ್ಞಾನವಿಲ್ಲ. ಜ್ಞಾನವು ನೀವು ಬ್ರಾಹ್ಮಣರಲ್ಲಿದೆ
ಆದರೆ ಲಕ್ಷ್ಮೀ-ನಾರಾಯಣರಿಗೆ ಅಜ್ಞಾನಿಗಳೆಂದು ಹೇಳುವುದಿಲ್ಲ ಏಕೆಂದರೆ ಇವರು ಈ ಜ್ಞಾನದಿಂದ
ಪದವಿಯನ್ನು ಪಡೆದಿದ್ದಾರೆ. ನೀವು ಬ್ರಾಹ್ಮಣರು ಎಷ್ಟು ಶ್ರೇಷ್ಠರಾಗಿದ್ದೀರಿ! ನಂತರ
ದೇವತೆಗಳಾಗುತ್ತೀರೆಂದರೆ ಜ್ಞಾನವೇನೂ ಇರುವುದಿಲ್ಲ. ಒಂದುವೇಳೆ ಅವರಲ್ಲಿ ಜ್ಞಾನವಿದ್ದಿದ್ದರೆ
ದೈವೀವಂಶದಲ್ಲಿ ಜ್ಞಾನವು ಪರಂಪರೆಯಿಂದ ನಡೆದುಬರುತ್ತಿತ್ತು. ಮಧುರಾತಿ ಮಧುರ ಬಹಳಕಾಲ ಅಗಲಿ ಮರಳಿ
ಸಿಕ್ಕಿರುವ ಮಕ್ಕಳಿಗೆ ಎಲ್ಲಾ ರಹಸ್ಯಗಳು, ಎಲ್ಲಾ ಯುಕ್ತಿಗಳನ್ನು ತಿಳಿಸಿಕೊಡುತ್ತಾರೆ. ರೈಲಿನಲ್ಲಿ
ಕುಳಿತಿರುವಾಗಲೂ ಸರ್ವೀಸ್ ಮಾಡಬಹುದು. ಒಂದು ಚಿತ್ರದ ಬಗ್ಗೆ ಕುಳಿತು ಪರಸ್ಪರ ಮಾತನಾಡುತ್ತಿದ್ದರೆ
ಅನ್ಯರು ಬಂದು ಅಲ್ಲಿ ಸೇರುತ್ತಾರೆ. ಯಾರು ಈ ಕುಲದವರಾಗಿರುವರೋ ಅವರು ಚೆನ್ನಾಗಿ ಧಾರಣೆ ಮಾಡಿ
ಪ್ರಜೆಗಳಾಗಿಬಿಡುವರು. ಸರ್ವೀಸಿಗಾಗಿ ಬಹಳ ಒಳ್ಳೊಳ್ಳೆಯ ಚಿತ್ರಗಳು ಇವೆ. ನಾವು ಭಾರತವಾಸಿಗಳು
ಮೊದಲು ದೇವಿ-ದೇವತೆಗಳಾಗಿದ್ದೆವು, ಈಗಂತೂ ಏನೂ ಇಲ್ಲ. ಮತ್ತೆ ಚರಿತ್ರೆಯು ಪುನರಾವರ್ತನೆಯಾಗುವುದು.
ಇದು ಮಧ್ಯದಲ್ಲಿ ಸಂಗಮಯುಗವಾಗಿದೆ. ಇಲ್ಲಿ ನೀವು ಪುರುಷೋತ್ತಮರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಜ್ಞಾನದ
ಮಾತುಗಳ ವಿನಃ ಮತ್ತ್ಯಾವುದೇ ಮಾತುಗಳು ಬಾಯಿಂದ ಬರಬಾರದು. ಅಲ್ಲಸಲ್ಲದ ಮಾತುಗಳನ್ನೆಂದೂ ಕೇಳಬಾರದು.
ಬಾಯಿಂದ ಸದಾ ರತ್ನಗಳೇ ಬರುತ್ತಿರಲಿ, ಕಲ್ಲುಗಳಲ್ಲ.
2) ಸರ್ವೀಸಿನ
ಜೊತೆಜೊತೆಗೆ ನೆನಪಿನ ಯಾತ್ರೆಯಲ್ಲಿದ್ದು ಸ್ವಯಂನ್ನು ನಿರೋಗಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ.
ಅವಿನಾಶಿ ತಜ್ಞ ಸ್ವಯಂ ಭಗವಂತನೇ ನಮ್ಮನ್ನು 21 ಜನ್ಮಗಳಿಗಾಗಿ ನಿರೋಗಿಯನ್ನಾಗಿ ಮಾಡಲು
ಸಿಕ್ಕಿದ್ದಾರೆ...... ಇದೇ ನಶೆ ಹಾಗೂ ಖುಷಿಯಲ್ಲಿರಬೇಕು.
ವರದಾನ:
ಪ್ರತಿ
ಕರ್ಮದಲ್ಲಿ ಫಾಲೋಫಾದರ್ ಮಾಡಿ ಸ್ನೇಹಕ್ಕೆ ಪ್ರತಿಕ್ರೀಯೆ ಕೊಡುವಂತಹ ತೀವ್ರ-ಪುರುಷಾರ್ಥಿ ಭವ
ಯಾರೊಂದಿಗೆ
ಸ್ಮೇಹವಿರುತ್ತದೆ ಅವರನ್ನು ತಾನೇ ತಾನಾಗಿ ಫಾಲೋ ಮಾಡುತ್ತಾರೆ. ಸದಾ ನೆನಪಿರಲಿ ಈ ಕರ್ಮ ಏನು
ಮಾಡುತ್ತಿರುವೆ ಇದು ಫಾಲೋಫಾದರ್ ಆಗಿದೆಯಾ? ಒಂದುವೇಳೆ ಇಲ್ಲವಾದರೆ ಆ ಕರ್ಮನಿಲ್ಲಿಸಿಬಿಡಿ.
ತಂದೆಯನ್ನು ಕಾಪಿ ಮಾಡುತ್ತಾ ತಂದೆಯ ಸಮಾನ ಆಗಿ. ಕಾಪಿ ಮಾಡುವುದಕ್ಕೋಸ್ಕರ ಹೇಗೆ ಕಾರ್ಬನ್ ಪೇಪರ್
ಹಾಕುತ್ತಾರೆ, ಅದೇರೀತಿ ಅಟೆನ್ಷನ್ನ ಪೇಪರ್ ಹಾಕಿದಾಗ ಕಾಪಿಯಾಗಿಬಿಡುತ್ತದೆ ಏಕೆಂದರೆ ಈಗಿಂದಲೇ
ತೀವ್ರ ಪುರುಷಾರ್ಥಿಯಾಗಿ ಸ್ವಯಂನಲ್ಲಿ ಎಲ್ಲಾ ಶಕ್ತಿಗಳಿಂದ ಸಂಪನ್ನರಾಗುವುದಕ್ಕೆ ಈಗ ಸಮಯವಿದೆ.
ಒಂದುವೇಳೆ ಸ್ವಯಂ, ಸ್ವಯಂಗೆ ಸಂಪನ್ನ ಮಾಡಿಕೊಳ್ಳಲಾಗದೆ ಹೋದರೆ ಸಹಯೋಗ ತೆಗೆದುಕೊಳ್ಳಿ. ಇಲ್ಲದೇ
ಹೋದರೆ ಮುಂದುವರೆದಂತೆ ಟೂ ಲೇಟ್ ಆಗಿಬಿಡುತ್ತದೆ.
ಸ್ಲೋಗನ್:
ಸಂತುಷ್ಟತೆಯ ಫಲ
ಪ್ರಸನ್ನತೆಯಾಗಿದೆ, ಪ್ರಸನ್ನಚಿತ್ತ ಆಗುವುದರಿಂದ ಪ್ರಶ್ನೆ ಸಮಾಪ್ತಿಯಾಗಿಬಿಡುತ್ತದೆ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಯಾವುದೇ ಬಲಹೀನ ಆತ್ಮಗಳ
ಬಲಹೀನತೆಯನ್ನು ನೋಡಬೇಡಿ. ವೆರೈಟಿ ಆತ್ಮಗಳಿದ್ದರೆ ಎನ್ನುವ ಮಾತು ಸ್ಮೃತಿಯಲ್ಲಿರಲಿ. ಎಲ್ಲರ ಪ್ರತಿ
ಆತ್ಮಿಕ ದೃಷ್ಟಿ ಇರಲಿ. ಆತ್ಮದ ರೂಪದಲ್ಲಿ ಅವರನ್ನು ಸ್ಮೃತಿಯಲ್ಲಿ ತರುವುದರಿಂದ ಅವರಿಗೆ
ಶಕ್ತಿಯನ್ನು ಕೊಡುತ್ತೀರಿ. ಆತ್ಮ ಮಾತನಾಡುತ್ತಿವೆ, ಆತ್ಮದಲ್ಲಿ ಈ ಸಂಸ್ಕಾರ ಇದೆ, ಈ ಪಾಠವನ್ನು
ಪಕ್ಕ ಮಾಡಿ ಆಗ ಎಲ್ಲರ ಪ್ರತಿ ಸ್ವತಃವಾಗಿ ಶುಭ ಭಾವನೆ ಇರುವುದು.