27.07.25    Avyakt Bapdada     Kannada Murli    14.03.2006     Om Shanti     Madhuban


"ಪರಮಾತ್ಮ ಮಿಲನದ ಅನುಭೂತಿಗಾಗಿ ಉಲ್ಟಾ ನನ್ನತನವನ್ನು ಸುಟ್ಟು ಹಾಕುವಂತಹ ಹೋಲಿಯನ್ನು ಆಚರಿಸಿ, ದೃಷ್ಟಿಯ ಪಿಚಕಾರಿಯ ಮೂಲಕ ಸರ್ವ ಆತ್ಮಗಳಿಗೆ ಸುಖ, ಶಾಂತಿ, ಪ್ರೇಮ, ಆನಂದದ ಬಣ್ಣವನ್ನು ಹಾಕಿರಿ"


ಇಂದು ಅತ್ಯಂತ ಪರಮ ಪವಿತ್ರ ತಂದೆ ತನ್ನ ಪವಿತ್ರ ಮಕ್ಕಳನ್ನು ಮಿಲನ ಮಾಡುತ್ತಿದ್ದಾರೆ. ನಾಲ್ಕಾರೂ ಕಡೆಯಲ್ಲಿರುವಂತಹ ಪವಿತ್ರ ಮಕ್ಕಳು ದೂರದಲ್ಲಿದ್ದರೂ ಸಮೀಪದಲ್ಲಿ ಇದ್ದಾರೆ. ಬಾಪ್ದಾದಾರವರು ಇಂತಹ ಪವಿತ್ರ ಅರ್ಥಾತ್ ಮಹಾನ್ ಪವಿತ್ರ ಮಕ್ಕಳ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರವನ್ನು ನೋಡುತ್ತಿದ್ದಾರೆ. ಇಂತಹ ಮಹಾನ್ ಪವಿತ್ರರು ಇಡೀ ಕಲ್ಪದಲ್ಲಿ ಮತ್ತ್ಯಾರೂ ಆಗುವುದಿಲ್ಲ. ಈ ಸಂಗಮಯುಗದಲ್ಲಿ ಪವಿತ್ರತೆಯ ವ್ರತವನ್ನು ತೆಗೆದುಕೊಳ್ಳುವಂತಹ ಭಾಗ್ಯವಂತ ಮಕ್ಕಳು ಭವಿಷ್ಯದಲ್ಲಿ ಡಬಲ್ ಪವಿತ್ರರು ಶರೀರದಿಂದಲೂ ಪವಿತ್ರ ಮತ್ತೆ ಆತ್ಮವೂ ಪವಿತ್ರವಾಗುತ್ತದೆ. ಇಡೀ ಕಲ್ಪದಲ್ಲಿ ಸುತ್ತಿಕೊಂಡು ಬನ್ನಿ. ಎಷ್ಟೆಲ್ಲಾ ಮಹಾನ್ ಆತ್ಮರು ಬಂದಿದ್ದಾರೆ, ಆದರೆ ಶರೀರವು ಪವಿತ್ರ ಮತ್ತೆ ಆತ್ಮವು ಪವಿತ್ರ, ಇಂತಹ ಪವಿತ್ರ ಧರ್ಮಾತ್ಮಗಳೂ ಆಗಿಲ್ಲ. ಮಹಾತ್ಮರು ಆಗಿಲ್ಲ. ಬಾಪ್ದಾದಾರವರಿಗೆ ತಾವು ಮಕ್ಕಳ ಮೇಲೆ ಹೆಮ್ಮೆ ಇದೆ - ಆಹಾ! ನನ್ನ ಮಹಾನ್ ಪವಿತ್ರ ಮಕ್ಕಳೇ ಆಹಾ! ಡಬಲ್ ಪವಿತ್ರ, ಡಬಲ್ ಕಿರೀಟಧಾರಿಗಳು ಯಾರೂ ಆಗುವುದಿಲ್ಲ. ಡಬಲ್ ಕಿರೀಟಧಾರಿಗಳು ತಾವು ಶ್ರೇಷ್ಠ ಆತ್ಮಗಳೇ ಆಗುತ್ತೀರಿ. ತಮ್ಮ ಡಬಲ್ ಪವಿತ್ರ ಡಬಲ್ ಕಿರೀಟಧಾರಿ ಸ್ವರೂಪ ಎದುರುಗಡೆ ಬರುತ್ತಿದೆಯಲ್ಲವೆ! ಆದ್ದರಿಂದ ತಾವು ಮಕ್ಕಳದು ಈ ಸಂಗಮಯುಗದಲ್ಲಿ ಪ್ರತ್ಯಕ್ಷ ಜೀವನ ಆಗಿದೆ. ಆ ಒಂದೊಂದು ಜೀವನದ ವಿಶೇಷತೆಯ ನೆನಪಾರ್ಥವನ್ನು ಪ್ರಪಂಚದವರು ಉತ್ಸವದ ರೂಪದಲ್ಲಿ ಆಚರಿಸುತ್ತಾರೆ.

ಇಂದು ತಾವೆಲ್ಲರೂ ಸ್ನೇಹದ ವಿಮಾನದಲ್ಲಿ ಹೋಲಿಯನ್ನು ಆಚರಿಸಲು ಬಂದಿದ್ದೀರಲ್ಲವೇ! ತಾವೆಲ್ಲರೂ ತಮ್ಮ ಜೀವನದಲ್ಲಿ ಹೋಲಿಯನ್ನು ಆಚರಿಸಿದ್ದೀರಾ? ಪ್ರತಿಯೊಂದು ಆಧ್ಯಾತ್ಮಿಕ ರಹಸ್ಯವನ್ನು ಪ್ರಪಂಚದವರು ಸ್ಥೂಲ ರೂಪದಲ್ಲಿ ಆಚರಿಸುತ್ತಾರೆ. ಏಕೆಂದರೆ ದೇಹಾಭಿಮಾನದಲ್ಲಿದ್ದಾರಲ್ಲವೇ! ತಾವು ಆತ್ಮಾಭಿಮಾನಿಗಳಾಗಿದ್ದೀರಿ, ಆಧ್ಯಾತ್ಮಿಕ ಜೀವನವುಳ್ಳವರಾಗಿದ್ದೀರಿ ಮತ್ತೆ ಅವರು ದೇಹಾಭಿಮಾನಿಗಳಾಗಿದ್ದಾರೆ. ಅವರೆಲ್ಲರು ಸ್ಥೂಲ ರೂಪದಲ್ಲಿ ಆಚರಿಸುತ್ತಾರೆ. ತಾವು ಯೋಗಾಗ್ನಿಯ ಮೂಲಕ ತಮ್ಮ ಹಳೆಯ ಸಂಸ್ಕಾರ ಸ್ವಭಾವವನ್ನು ಭಸ್ಮ ಮಾಡಿದ್ದೀರಾ? ಸುಟ್ಟು ಹಾಕಿದ್ದೀರಾ? ಮತ್ತು ಪ್ರಪಂಚದವರು ಸ್ಥೂಲ ಅಗ್ನಿಯನ್ನು ಸುಡುತ್ತಾರೆ ಏಕೆ? ಹಳೆಯ ಸಂಸ್ಕಾರವನ್ನು ಸುಡದ ವಿನಃ ಪರಮಾತ್ಮನ ಸಂಗದ ರಂಗು ಬೀಳುವುದಿಲ್ಲ. ಪರಮಾತ್ಮನ ಮಿಲನದ ಅನುಭವವನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ತಮ್ಮ ಜೀವನಕ್ಕೆ ಇಷ್ಟು ಬೆಲೆಯಿದೆ ಒಂದೊಂದು ಹೆಜ್ಜೆ ತಮ್ಮದು ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ ಏಕೆ? ತಾವು ಪೂರ್ತಿ ಸಂಗಮಯುಗ ಉತ್ಸಾಹ-ಉಮ್ಮಂಗ ಜೀವನವನ್ನು ಮಾಡಿಕೊಂಡಿದ್ದೀರಿ. ತಮ್ಮ ಜೀವನದ ನೆನಪಾರ್ಥ ಒಂದು ದಿನದ ಉತ್ಸವವನ್ನು ಆಚರಿಸುತ್ತಾರೆ. ಅಂದಾಗ ಎಲ್ಲಾರದು ಇಂತಹ ಸದಾ ಉತ್ಸಾಹ-ಉಮ್ಮಂಗ ಖುಷಿಯ ಜೀವನ ಆಗಿದೆಯಲ್ಲವೇ! ಇದೆಯೋ ಅಥವಾ ಕೆಲಕೆಲವೊಮ್ಮೆ ಮಾತ್ರ ಇದೆಯೋ? ಸದಾ ಉತ್ಸಾಹ ಇದೆಯಾ ಅಥವಾ ಕೆಲಕೆಲವೊಮ್ಮೆ ಇದೆಯಾ? ಯಾರು ತಿಳಿದುಕೊಂಡಿದ್ದೀರಿ ಸದಾ ಉತ್ಸಾಹದಲ್ಲಿ ಇರುತ್ತೇವೆ, ಖುಷಿಯಲ್ಲಿ ಇರುತ್ತೇವೆ. ಖುಷಿ ನಮ್ಮ ಜೀವನದ ವಿಶೇಷ ಪರಮಾತ್ಮನ ಉಡುಗೊರೆಯಾಗಿದೆ. ಇಂತಹ ಅನುಭವ ಆಗುತ್ತದೆಯೇ? ಏನಾದರೂ ಆಗಲಿ ಆದರೆ ಬ್ರಾಹ್ಮಣ ಜೀವನದ ಖುಷಿ, ಉಮಂಗ-ಉತ್ಸಾಹ ಹೋಗಲು ಸಾಧ್ಯವಿಲ್ಲ. ಬಾಪ್ದಾದಾರವರು ಪ್ರತಿಯೊಂದು ಮಗುವಿನ ಚೆಹರೆ, ಖುಷಿಯಾಗಿರಲು ನೋಡಲು ಬಯಸುತ್ತಾರೆ. ಏಕೆಂದರೆ ತಮ್ಮಂತಹ ಅದೃಷ್ಟಶಾಲಿಗಳು ಯಾರೂ ಅಗಿಯೂ ಇಲ್ಲ ಮತ್ತೆ ಆಗುವುದೂ ಇಲ್ಲ. ಭಿನ್ನ-ಭಿನ್ನ ವರ್ಗದವರು ಕುಳಿತಿದ್ದೀರಿ ಅಂದಾಗ ಇಂತಹ ಅನುಭವಿಮೂರ್ತಿ ಆಗುವಂತಹ ಸ್ವಯಂ ಪ್ರತಿ ಪ್ಲಾನ್ ಮಾಡಿದ್ದೀರಾ?

ಬಾಪ್ದಾದಾರವರು ಖುಷಿ ಪಡುತ್ತಾರೆ ಇಂದು ಇಂತಹ ವರ್ಗ ಬಂದಿದ್ದಾರೆ ಸ್ವಾಗತ. ಬಂದಿರುವುದಕ್ಕೆ ಶುಭಾಶಯಗಳು. ಸೇವೆಯ ಉಮ್ಮಂಗ-ಉತ್ಸಾಹ ಚೆನ್ನಾಗಿದೆ ಆದರೆ ಸ್ವ ಉನ್ನತಿಯ ಪ್ಲಾನ್ ಬಾಪ್ದಾದಾರವರು ನೋಡಿದ್ದಾರೆ, ಎಲ್ಲಾ ವರ್ಗದವರು ಪ್ಲಾನನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿಯೇ ಮಾಡುತ್ತಾರೆ ಆದರೆ ಜೊತೆ-ಜೊತೆಯಲ್ಲಿ ಸ್ವ ಉನ್ನತಿಯ ಪ್ಲಾನ್ ಮಾಡುವುದು ಅವಶ್ಯಕ. ಬಾಪ್ದಾದಾರವರು ಇದನ್ನೇ ಬಯಸುತ್ತಾರೆ ಸ್ವ-ಉನ್ನತಿಯ ಪ್ರಾಕ್ಟಿಕಲ್ ಪ್ಲಾನನ್ನು ಮಾಡಲಿ ಮತ್ತೆ ನಂಬರ್ ತೆಗೆದುಕೊಳ್ಳಲಿ. ಹೇಗೆ ಸಂಘಟಿತ ರೂಪದಲ್ಲಿ ಒಟ್ಟಿಗೆ ಸೇರುತ್ತೀರಿ, ಭಲೆ ವಿದೇಶದವರು ಆಗಿರಬಹುದು, ದೇಶದವರು ಮೀಟಿಂಗ್ ಮಾಡುತ್ತಾರೆ, ಪ್ಲಾನ್ ಮಾಡುತ್ತೀರಿ ಬಾಪ್ದಾದಾರವರು ಇದರಲ್ಲಿಯೂ ಖುಷಿ ಪಡುತ್ತಾರೆ. ಆದರೆ ಇಂತಹ ಉಮಂಗ-ಉತ್ಸಾಹದಿಂದ ಸಂಘಟಿತ ರೂಪದಲ್ಲಿ ಪ್ಲಾನ್ ಮಾಡುತ್ತೀರಿ ಅಷ್ಟೇ ಉಮ್ಮಂಗ-ಉತ್ಸಾಹದಿಂದ ಸ್ವ ಉನ್ನತಿಯ ನಂಬರ್ ಮತ್ತು ಅಟೇಂಶನ್ ಕೊಟ್ಟು ಮಾಡಿ. ಬಾಪ್ದಾದಾರವರು ಕೇಳಲು ಬಯಸುತ್ತಾರೆ- ಈ ತಿಂಗಳಲ್ಲಿ ಈ ವರ್ಗದವರು ಸ್ವ ಉನ್ನತಿಯ ಪ್ಲಾನ್ ಪ್ರತ್ಯಕ್ಷ ರೂಪದಲ್ಲಿ ತಂದಿದ್ದಾರೆ. ಯಾರೆಲ್ಲಾ ವರ್ಗದವರು ಬಂದಿದ್ದೀರಿ ಅವರು ಕೈ ಎತ್ತಿರಿ. ಎಲ್ಲಾ ವರ್ಗದವರು ಒಳ್ಳೆಯದು ಇಷ್ಟು ಸಂಖ್ಯೆಯಲ್ಲಿ ಬಂದಿದ್ದೀರಿ, ಬಹಳಷ್ಟು ಬಂದಿದ್ದೀರಿ. 5-6 ವರ್ಗದವರು ಬಂದಿದ್ದೀರಿ ಎಂದು ಕೇಳಿದೆ. ಬಹಳ ಒಳ್ಳೆಯದು ಭಲೆ ಬನ್ನಿ. ಈಗ ಒಂದು ಕೊನೆಯ ಸರದಿ ಉಳಿದಿದೆ. ಬಾಪ್ದಾದಾರವರಂತೂ ಹೋಮ್ ವರ್ಕ ಕೊಟ್ಟಿದ್ದರು. ಬಾಪ್ದಾದಾರವರಂತೂ ಪ್ರತಿದಿನ ಫಲಿತಾಂಶವನ್ನು ನೋಡುತ್ತಾರೆ. ತಾವು ತಿಳಿದುಕೊಳ್ಳುತ್ತೀರಿ ಬಾಪ್ದಾದಾರವರು ಲೆಕ್ಕಾಚಾರದ ಕೊನೆಯ ಸರಿದಿಯಲ್ಲಿ ತೆಗೆದುಕೊಳ್ಳುತ್ತಾರೆಂದು ಆದರೆ ಬಾಪ್ದಾದಾರವರು ಪ್ರತಿದಿನ ನೋಡುತ್ತಾರೆ ಈಗಲೂ 15 ದಿನಗಳು ಬಾಕಿ ಉಳಿದಿವೆ. ಈ 15 ದಿನಗಳಲ್ಲಿ ಪ್ರತಿ ವರ್ಗದವರು ಯಾರೆಲ್ಲಾ ಬಂದಿದ್ದೀರಿ ಅವರೂ ಸಹ, ಯಾರು ಬಂದಿಲ್ಲ ಆ ವರ್ಗಕ್ಕೆ ನಿಮಿತ್ತರಾಗಿದ್ದಾರೆ ಆ ಮಕ್ಕಳಿಗೂ ಬಾಪ್ದಾದಾರವರು ಇದೇ ಸೂಚನೆ ನೀಡುತ್ತಾರೆ, ಏನೆಂದರೆ ಪ್ರತಿ ವರ್ಗ ತನ್ನ ಸ್ವ ಉನ್ನತಿಗಾಗಿ ಯಾವುದಾದರೂ ಪ್ಲಾನ್ ಮಾಡಿ, ಯಾವುದಾದರೂ ವಿಶೇಷ ಶಕ್ತಿ ಸ್ವರೂಪ ಆಗುವಂತಹ ಅಥವಾ ವಿಶೇಷ ಯಾವುದಾದರೂ ಗುಣಮೂರ್ತಿ ಆಗುವಂತಹ ವಿಶ್ವ ಕಲ್ಯಾಣದ ಪ್ರತಿ ಒಂದಲ್ಲ ಒಂದು ಲೈಟ್-ಮೈಟ್ ಕೊಡುವಂತಹ ಪ್ರತಿಯೊಂದು ವರ್ಗ ಪರಸ್ಪರದಲ್ಲಿ ನಿಶ್ಚಿತ ಮಾಡಿಕೊಳ್ಳಿ ಮತ್ತು ಪುನಃ ಚೆಕ್ ಮಾಡಿ ಯಾರೆಲ್ಲಾ ವರ್ಗದ ಮೆಂಬರ್ ಇದ್ದೀರಿ, ಮೆಂಬರ್ ಆಗಿರುವುದು ಬಹಳ ಒಳ್ಳೆಯದು ಆದರೆ ಪ್ರತಿಯೊಬ್ಬ ಮೆಂಬರ್ (ಸದಸ್ಯರು) ನಂಬರ್ ವನ್ ಆಗಬೇಕು. ಕೇವಲ ಇಂತಹ ವರ್ಗದ ಮೆಂಬರ್ ಎಂದು ಹೆಸರು ನೊಂದಣೆ ಆಗಿದೆ. ಈ ರೀತಿ ಅಲ್ಲ. ಇಂತಹ ವರ್ಗದ ಸ್ವ ಉನ್ನತಿಯ ಮೆಂಬರ್. ಇದು ನಿಮ್ಮಿಂದ ಆಗುತ್ತದೆಯೇ? ಯಾರು ವರ್ಗಕ್ಕೆ ನಿಮಿತ್ತರಾಗಿದ್ದೀರಿ ಅವರು ಎದ್ದೇಳಿ. ವಿದೇಶದವರು ಯಾರು 4-5 ಜನ ನಿಮಿತ್ತರಾಗಿದ್ದೀರಿ ಅವರು ಎದ್ದೇಳಿ. ಬಾಪ್ದಾದಾರವರಿಗಂತೂ ಬಹಳ ಶಕ್ತಿಶಾಲಿ ಮೂರ್ತಿಯಾಗಿ ಕಂಡು ಬರುತ್ತೀರಿ. ಬಹಳ ಒಳ್ಳೆಯ ಮೂರ್ತಿಗಳಾಗಿದ್ದೀರಿ. ತಾವೆಲ್ಲರೂ ತಿಳಿದುಕೊಳ್ಳುತ್ತೀರಾ? ಇನ್ನೂ 15 ದಿನಗಳಲ್ಲಿ ಏನಾದರೂ ಮಾಡಿ ತೋರಿಸುತ್ತೇವೆ ಇದು ನಿಮ್ಮಿಂದ ಸಾಧ್ಯವೇ? ಹೇಳಿ ನಿಮ್ಮಿಂದ ಆಗುತ್ತದೆಯೇ? (ಪೂರ್ಣ ಪುರುಷಾರ್ಥ ಮಾಡುತ್ತೇವೆ) ಇನ್ನೂ ಹೇಳಿ ನಿಮ್ಮಿಂದ ಏನಾಗುತ್ತದೆ? (ಆಡಳಿತ ವರ್ಗದವರು ಯಾರೂ ಸಹ ಕೋಪ ಮಾಡುವುದಿಲ್ಲ ಎಂದು ಯೋಚನೆ ಮಾಡಿದ್ದಾರೆ) ಅವರ ವಿಚಾರಣೆಯನ್ನೂ ಸಹ ಮಾಡುತ್ತೀರಾ? ತಾವು ಸಹೋದರಿಯರೂ ಸಾಹಸ ಇಟ್ಟುಕೊಂಡಿದ್ದೀರಿ. 15 ದಿನಗಳಲ್ಲಿ ವಿಚಾರಣೆ ಮಾಡಿ ಫಲಿತಾಂಶವನ್ನು ಹೇಳಬಲ್ಲಿರಾ? ವಿದೇಶಿಯರಂತೂ ಹೌದು ಸರಿ ಎಂದು ಹೇಳುತ್ತಿದ್ದಾರೆ. ನೀವೇನು ಅಂದುಕೊಂಡಿದ್ದೀರಿ ಆಗಬಹುದೇ? ಭಾರತವಾಸಿಗಳು ಹೇಳಿ ನಿಮ್ಮಿಂದ ಆಗುತ್ತದೆಯೇ? ಬಾಪ್ದಾದಾರವರು ನಿಮ್ಮೆಲ್ಲರ ಮುಖ ನೋಡಿದಾಗ ಫಲಿತಾಂಶ ಸರಿಯಾಗಿದೆ ಎನಿಸುತ್ತದೆ ಆದರೆ ಈ 15 ದಿನಗಳಲ್ಲಿಯೂ ಸಹ ಅಟೇಂಶನ್ ಇಟ್ಟುಕೊಳ್ಳುವ ಪುರುಷಾರ್ಥ ಮಾಡಿದ್ದೇ ಆದರೆ ಈ ಅಭ್ಯಾಸ ಮುಂದೆಯೂ ಸಹ ಉಪಯೋಗಕ್ಕೆ ಬರುತ್ತದೆ. ಈಗ ಇಂತಹ ಮೀಟಿಂಗ್ ಮಾಡಿ ಪ್ರತಿಯೊಬ್ಬರು ಲಕ್ಷ್ಯ ತೆಗೆದುಕೊಳ್ಳಬೇಕು, ಯಾವುದಾದರು ಗುಣ, ಯಾವುದಾದರು ಶಕ್ತಿರೂಪದ, ಇದಲ್ಲಿ ಬಾಪ್ದಾದಾರವರು ನಂಬರ್ ಕೊಡುತ್ತಾರೆ. ಬಾಪ್ದಾದಾರವರಂತೂ ನೋಡುತ್ತಿರುತ್ತಾರೆ ಸ್ವದೇಶದಲ್ಲಿ ನಂಬರ್ ವನ್ ವರ್ಗ ಯಾರು ಆಗಿದ್ದೀರಿ ಏಕೆಂದರೆ ಬಾಪ್ದಾದಾರವರು ನೋಡಿದ್ದಾರೆ. ಯೋಜನೆಗಳನ್ನು ತುಂಬಾ ಚೆನ್ನಾಗಿ ಮಾಡುತ್ತೀರಿ. ಸೇವೆ ಮತ್ತು ಸ್ವ ಉನ್ನತಿ ಜೊತೆ-ಜೊತೆಯಾಗಿ ಇಲ್ಲದಿದ್ದರೆ ಸೇವೆಯ ಪ್ಲಾನಿನಲ್ಲಿ ಎಷ್ಟು ಸಫಲತೆ ಸಿಗಬೇಕಾಗಿದೆಯೋ ಆಷ್ಟು ಸಿಗುವುದಿಲ್ಲ. ಆದ್ದರಿಂದ ಸಮಯದ ಸಮೀಪತೆಯನ್ನು ಎದುರಗಡೆ ಇಟ್ಟುಕೊಂಡು ಸೇವೆ ಮತ್ತು ಸ್ವ-ಉನ್ನತಿ ಎರಡನ್ನು ಕಂಬೈಂಡ್ ಇಟ್ಟುಕೊಳ್ಳಿ. ಕೇವಲ ಸ್ವ-ಉನ್ನತಿ ಅಲ್ಲ ಸೇವೆಯು ಬೇಕು ಆದರೆ ಸ್ವ-ಉನ್ನತಿಯ ಸ್ಥಿತಿಯಿಂದ ಸೇವೆಯಲ್ಲಿ ಹೆಚ್ಚಿನ ಸಫಲತೆ ಸಿಗುತ್ತದೆ. ಸೇವೆಯ ಹಾಗೂ ಸ್ವ-ಉನ್ನತಿಯ ಸಫಲತೆಯ ಗುರುತಾಗಿದೆ ಸ್ವಯಂ ಎರಡರಲ್ಲಿ ಸ್ವಯಂನಿಂದಲೂ ಸಂತುಷ್ಟರಾಗಿರಬೇಕು ಮತ್ತೆ ಯಾರ ಸೇವೆ ಮಾಡುತ್ತೀರಿ ಅವರಿಗೂ ಸೇವೆಯ ಮೂಲಕ ಸಂತುಷ್ಟತೆಯ ಅನುಭವ ಆಗಬೇಕು. ಒಂದುವೇಳೆ ಸ್ವಯಂಗೆ ಹಾಗೂ ಯಾರ ಸೇವೆಗೆ ನಿಮಿತ್ತರಾಗಿದ್ದೀರಿ ಅವರಿಗೆ ಸಂತುಷ್ಟತೆಯ ಅನುಭವ ಆಗಲಿಲ್ಲವೆಂದರೆ ಸಫಲತೆ ಕಡಿಮೆ, ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ.

ತಾವೆಲ್ಲರೂ ತಿಳಿದಿದ್ದೀರಿ ಸೇವೆಯಲ್ಲಿ ಹಾಗೂ ಸ್ವ ಉನ್ನತಿಯಲ್ಲಿ ಸಫಲತೆಯನ್ನು ಸಹಜವಾಗಿ ಪ್ರಾಪ್ತಿ ಮಾಡಿಕೊಳ್ಳುವ ಚಿನ್ನದ ಬೀಗದ ಕೈ ಯಾವುದಾಗಿದೆ? ಗೋಲ್ಡೆನ್ ಚಾಬಿಯಾಗಿದೆ ಚಲನೆ-ಚೆಹರೆಯಲ್ಲಿ, ಸಂಬಂಧ-ಸಂಪರ್ಕದಲ್ಲಿ ನಿಮಿತ್ತ ಭಾವ, ನಿರ್ಮಾಣಭಾವ, ನಿರ್ಮಲ ವಾಣಿ. ಹೇಗೆ ಬ್ರಹ್ಮಾ ತಂದೆ ಹಾಗೂ ಜಗದಂಬೆಯನ್ನು ನೋಡಿದ್ದೀರಿ ಆದರೆ ಈಗ ಕೆಲವು-ಕೆಲವೊಮ್ಮೆ ಸೇವೆಯ ಸಫಲತೆಯಲ್ಲಿ ಪರ್ಸೆಂಟೇಜ್ ಆಗಿ ಬಿಡುತ್ತದೆ, ಅದಕ್ಕೆ ಕಾರಣ ಏನನ್ನು ಇಷ್ಟ ಪಡುತ್ತೀರಿ, ಎಷ್ಟು ಪ್ಲಾನ್ ಮಾಡುತ್ತೀರಿ ಅದರಲ್ಲಿ ಪರ್ಸೆಂಟೇಜ್ ಏಕೆ ಆಗಿ ಬಿಡುತ್ತದೆ? ಬಾಪ್ದಾದಾರವರು ಮೆಜಾರಿಟಿ ಮಕ್ಕಳಲ್ಲಿ ಕಾರಣವನ್ನು ನೋಡಿದರು ಏನೆಂದರೆ ಸಫಲತೆಯು ಕಡಿಮೆ ಆಗಲು ಕಾರಣ ಒಂದು ಶಬ್ಧ ಅದು ಯಾವುದಾಗಿದೆ? "ನಾನು". ನಾನು ಎಂಬ ಶಬ್ಧ ಮೂರು ಪ್ರಕಾರದಲ್ಲಿ ಉಪಯೋಗವಾಗುತ್ತದೆ. ಆತ್ಮಾಭಿಮಾನಿಯಲ್ಲಿಯೂ ನಾನು ಆತ್ಮನಾಗಿದ್ದೇನೆ, ಇದರಲ್ಲಿಯೂ ನಾನು ಎಂಬುದು ಬರುತ್ತದೆ. ದೇಹಾಭಿಮಾನದಲ್ಲಿಯೂ ನಾನು ಏನು ಹೇಳುತ್ತೇನೆ, ಮಾಡುತ್ತೇನೆ, ಅದೇ ಸರಿಯಾಗಿದೆ. ನಾನು ಬುದ್ಧಿವಂತನಾಗಿದ್ದೇನೆ, ಈ ಹದ್ದಿನ ದೇಹಾಭಿಮಾನದಲ್ಲಿಯೂ ನಾನು ಎಂಬುದು ಬರುತ್ತದೆ ಮತ್ತೆ ಮೂರನೆಯದಾಗಿ ನಾನು ಯಾವಾಗ ಹೃದಯವಿಧೀರ್ಣ ಆಗಿ ಬಿಡುತ್ತೇವೆ ಆಗಲೂ ನಾನು ಎಂಬುದು ಬಂದು ಬಿಡುತ್ತದೆ. ನಾನು ಇದನ್ನು ಮಾಡಲು ಸಾಧ್ಯವಿಲ್ಲ. ನನ್ನಲ್ಲಿ ಧೈರ್ಯವಿಲ್ಲ. ನಾನು ಇದನ್ನು ಕೇಳಲು ಸಾಧ್ಯವಿಲ್ಲ. ನಾನು ಇದನ್ನು ಸಮಾವೇಶ ಮಾಡಿಕೊಳ್ಳಲು ಸಾಧ್ಯವಿಲ್ಲ......... ಬಾಪ್ದಾದಾರವರು ಈ ಮೂರು ಪ್ರಕಾರದ ನಾನು, ನಾನು ಎಂಬ ಗೀತೆಯನ್ನು ಬಹಳಷ್ಟು ಕೇಳುತ್ತಿರುತ್ತಾರೆ. ಬ್ರಹ್ಮಾ ತಂದೆ, ಜಗದಂಬಾ ಅವರು ಯಾವ ನಂಬರ್ ನ್ನು ಪಡೆದರು ಅವರ ವಿಶೇಷತೆ ಇದೆಯಾಗಿದೆ ಉಲ್ಟಾ ನಾನು ಎಂಬುವ ಅಭಾವವಿತ್ತು. ಅವರಲ್ಲಿ ನಾನು ಎಂಬುದು ಅವಿದ್ಯಾ ಆಗಿತ್ತು. ಬ್ರಹ್ಮಾ ಬಾಬಾ ಎಂದೂ ಈ ರೀತಿ ಹೇಳಲಿಲ್ಲ ನಾನು ಸಲಹೆಯನ್ನು ಕೊಡುತ್ತೇನೆ, ನಾನೇ ಸರಿಯಾಗಿದ್ದೇನೆ, ಬಾಬಾ-ಬಾಬಾ-ಬಾಬಾ ಮಾಡಿಸುತ್ತಿದ್ದಾರೆ, ನಾನು ಮಾಡುತ್ತಿಲ್ಲ. ನಾನು ಬುದ್ಧಿವಂತನಲ್ಲ ಮಕ್ಕಳು ಬುದ್ಧಿವಂತರು. ಜಗದಂಬಾರವರ ಸ್ಲೋಗನ್ ಆಗಿತ್ತು ಅದು ನೆನಪಿದೆಯೇ? ಹಳಬರಿಗೆ ನೆನಪಿರಬಹುದು. ಜಗದಂಬ ಇದೇ ಹೇಳುತ್ತಿದ್ದರು - ಮಾಡಿ ಮಾಡಿಸುವಂತಹವರು ಮಾಡಿಸುತ್ತಾ ಇದ್ದಾರೆ, ನಾನಲ್ಲ, ನಡೆಸುವಂತಹವರು ತಂದೆ ನಡೆಸುತ್ತಾ ಇದ್ದಾರೆ, ಮಾಡಿಸುವಂತಹ ತಂದೆ ಮಾಡಿಸುತ್ತಾ ಇದ್ದಾರೆ ಅಂದಾಗ ಮೊದಲು ಎಲ್ಲರೂ ತಮ್ಮ ಒಳಗಡೆ ಈ ಅಪಮಾನದ ನಾನು ಎಂಬುದನ್ನು ಸಮಾಪ್ತಿ ಮಾಡಿ ಮುಂದುವರೆಯಿರಿ. ಸ್ವಾಭಾವಿಕವಾಗಿ ಪ್ರತಿ ಮಾತಿನಲ್ಲಿ ಬಾಬಾ-ಬಾಬಾ ಬರಲಿ, ಸ್ವಾಭಾವಿಕವಾಗಿ ಬರಲಿ ಏಕೆಂದರೆ ತಂದೆಯ ಸಮಾನ ಆಗುವ ಸಂಕಲ್ಪವನ್ನು ಎಲ್ಲರೂ ತೆಗೆದುಕೊಂಡಿದ್ದೀರಿ. ಸಮಾನ ಆಗುವುದರಲ್ಲಿ ಕೇವಲ ಈ ಒಂದು ರಾಯಲ್ ನಾನು ಎಂಬುದನ್ನು ಸುಟ್ಟು ಹಾಕಿರಿ. ಒಳ್ಳೆಯದು. ಕ್ರೋಧವನ್ನು ಮಾಡುವುದಿಲ್ಲ. ಕ್ರೋಧ ಏಕೆ ಬರುತ್ತದೆ? ನನ್ನತನ ಬರುವುದರಿಂದ.

ತಾವೆಲ್ಲರೂ ಹೋಲಿಯನ್ನು ಆಚರಿಸಲು ಬಂದಿದ್ದೀರಲ್ಲವೇ? ಅಂದಾಗ ಮೊದಲ ಹೋಲಿ ಯಾವುದನ್ನು ಆಚರಿಸುತ್ತೀರಿ? ಸುಡುವಂತಹ ಹೋಲಿ. ಆ ರೀತಿ ಬಹಳ ಒಳ್ಳೆಯರಾಗಿದ್ದೀರಿ. ಬಹಳ ಯೋಗ್ಯರಾಗಿದ್ದೀರಿ. ತಂದೆಯ ಆಶಾ ದೀಪವಾಗಿದ್ದೀರಿ. ಕೇವಲ ಈ ಸ್ವಲ್ಪ ನಾನು ಎಂಬುದನ್ನು ತೆಗೆದು ಹಾಕಿರಿ. ಎರಡು ಪ್ರಕಾರದ ನಾನು ಎಂಬುದನ್ನು ತೆಗೆದು ಹಾಕಿ. ಒಂದನ್ನು ಇಟ್ಟುಕೊಳ್ಳಿ. ಏಕೆ? ಬಾಪ್ದಾದಾರವರು ನೋಡುತ್ತಿದ್ದಾರೆ ತಮ್ಮ ಅನೇಕ ಸಹೋದರ-ಸಹೋದರಿಯರು ಬ್ರಾಹ್ಮಣರಾಗಿಲ್ಲ, ಅಜ್ಞಾನಿ ಆತ್ಮಗಳು ತಮ್ಮ ಜೀವನದಲ್ಲಿ ಧೈರ್ಯವನ್ನು ಕಳೆದುಕೊಂಡಿದ್ದಾರೆ. ಈಗ ಅವರಿಗೆ ಧೈರ್ಯದ ರೆಕ್ಕೆಗಳನ್ನು ಕೊಡಬೇಕಾಗಿದೆ. ಪೂರ್ತಿ ನಿರಾಶ್ರಿತರಾಗಿದ್ದಾರೆ, ನಿರುತ್ಸಾಹಿಗಳಾಗಿದ್ದಾರೆ. ಹೇ ದಯಾಹೃದಯಿ, ಕೃಪೆ, ದಯೆ ಮಾಡುವಂತವರು ವಿಶ್ವದ ಆತ್ಮಗಳಿಗೆ ಇಷ್ಟ ದೇವ ಆತ್ಮಗಳೇ ತಮ್ಮ ಶುಭ ಭಾವನೆ, ದಯೆಯ ಭಾವನೆ, ಆತ್ಮಭಾವನೆಯ ಮೂಲಕ ಅವರ ಭಾವನೆಯನ್ನು ಪೂರ್ಣ ಮಾಡಿ. ನಿಮಗೆ ದುಃಖ-ಅಶಾಂತಿಯ ವೈಬ್ರೇಷನ್ ಬರುವುದಿಲ್ಲವೇ? ನಿಮಿತ್ತ ಆತ್ಮರಾಗಿದ್ದೀರಿ, ಪೂಜ್ಯರಾಗಿದ್ದೀರಿ, ಪೂರ್ವಜರಾಗಿದ್ದೀರಿ, ವೃಕ್ಷದ ಬುಡವಾಗಿದ್ದೀರಿ, ಫೌಂಡೇಶನ್ ಆಗಿದ್ದೀರಿ. ಎಲ್ಲರೂ ತಮ್ಮನ್ನು ಹುಡುಕುತ್ತಿದ್ದಾರೆ, ನಮ್ಮ ರಕ್ಷಕರು ಎಲ್ಲಿದ್ದಾರೆ ಎಂದು. ನಮ್ಮ ಇಷ್ಟ ದೇವತೆಗಳು ಎಲ್ಲಿ ಹೋಗಿದ್ದಾರೆ? ತಂದೆಗಂತೂ ಬಹಳಷ್ಟು ಕೂಗು ಕೇಳಿ ಬರುತ್ತದೆ. ಈಗ ಸ್ವ ಉನ್ನತಿಯ ಮೂಲಕ ಭಿನ್ನ-ಭಿನ್ನ ಶಕ್ತಿಗಳ ಸಕಾಶವನ್ನು ಕೊಡಿ. ಧೈರ್ಯದ ರೆಕ್ಕೆಗಳನ್ನು ಕೊಡಿ. ತಮ್ಮ ದೃಷ್ಟಿಯ ಮೂಲಕ, ದೃಷ್ಟಿಯೇ ತಮ್ಮ ಪಿಚಕಾರಿಯಾಗಿದೆ. ತಮ್ಮ ದೃಷ್ಟಿಯ ಪಿಚಕಾರಿಯ ಮೂಲಕ ಸುಖದ ಬಣ್ಣವನ್ನು ಎರಚಿರಿ. ಶಾಂತಿಯನ್ನು ಬಣ್ಣವನ್ನು ಹಾಕಿರಿ, ಪ್ರೇಮ-ಆನಂದದ ಬಣ್ಣವನ್ನು ಹಾಕಿರಿ. ತಾವಂತೂ ಪರಮಾತ್ಮನ ಸಂಗದ ರಂಗಿನಲ್ಲಿ ಬಂದಿದ್ದೀರಿ,. ಅನ್ಯ ಆತ್ಮಗಳಿಗೂ ಸ್ವಲ್ಪ ಆಧ್ಯಾತ್ಮಿಕ ರಂಗಿನ ಅನುಭವ ಮಾಡಿಸಿ. ಪರಮಾತ್ಮನ ಮಿಲನದ ಮಂಗಳ ಮೇಳದ ಅನುಭವ ಮಾಡಿಸಿ. ಅಲೆದಾಡುತ್ತಿರುವ ಆತ್ಮರಿಗೆ ನೆಲೆಯ ಮಾರ್ಗವನ್ನು ತೋರಿಸಿ.

ಸ್ವ-ಉನ್ನತಿಯ ಪ್ಲಾನನ್ನು ಮಾಡುತ್ತೀರಲ್ಲವೇ? ಇದರಲ್ಲಿ ಸ್ವಯಂನ ಚೆಕ್ಕರ್ (ಪರಿಶೀಲಕರು) ಆಗಿ ಚೆಕ್ (ಪರಿಶೀಲನೆ) ಮಾಡಿಕೊಳ್ಳಿ. ರಾಯಲ್ ನಾನು ಎಂಬುದು ಬರುತ್ತಿಲ್ಲವೇ? ಏಕೆಂದರೆ ಇಂದು ಹೋಲಿಯನ್ನು ಆಚರಿಸಲು ಬಂದಿದ್ದೀರಿ. ಬಾಪ್ದಾದಾರವರು ಇದೇ ಸಂಕಲ್ಪ ಕೊಡುತ್ತಾರೆ - ಇಂದು ದೇಹಾಭಿಮಾನ ಮತ್ತು ಅಪಮಾನದ ನಾನು ಎಂಬುದು ಬರುತ್ತದೆ. ಹೃದಯ ವಿಧೀರ್ಣತೆಯ ನಾನು ಎಂಬುದು ಬರುತ್ತದೆ. ಇದನ್ನು ಸುಟ್ಟು ಹಾಕಿ ಹೋಗಿರಿ. ಜೊತೆಯಲ್ಲಿ ತೆಗೆದುಕೊಂಡು ಹೋಗಬೇಡಿ. ಸ್ವಲ್ಪವಾದರೂ ಸುಟ್ಟು ಹಾಕುತ್ತೀರಲ್ಲವೇ. ಬೆಂಕಿಯಲ್ಲಿ ಸುಟ್ಟು ಹಾಕುತ್ತೀರಾ? ಜ್ವಾಲಮುಖಿ ಯೋಗಾಗ್ನಿಯಲ್ಲಿ ಸುಟ್ಟು ಹಾಕಿ. ಸುಟ್ಟು ಹಾಕಲು ಬರುತ್ತದೆಯೇ? ಹೌದು ಜ್ವಾಲಾಮುಖಿ ಯೋಗ ಬರುತ್ತದೆಯೇ? ಅಥವಾ ಸಾಧಾರಣ ಯೋಗ ಬರುತ್ತದೆಯೋ ಜ್ವಾಲಾಮುಖಿಯಾಗಿ ಬಿಡಿ. ಲೈಟ್-ಮೈಟ್ ಹೌಸ್ ಆಗಿರಿ. ಈ ಸ್ಥಿತಿ ಇಷ್ಟ ಅಲ್ಲವೇ. ಅಟೇಂಷನ್ ಪ್ಲೀಜ್ (ದಯೆ ಮಾಡಿ ಗಮನ ಕೊಡಿ) ನಾನು ಎಂಬುದನ್ನು ಸುಟ್ಟು ಹಾಕಿ.

ಬಾಪ್ದಾದಾರವರು ಯಾವಾಗ ನಾನು-ನಾನು ಎಂಬುವ ಗೀತೆಯನ್ನು ಕೇಳುತ್ತಾರೆ ಆಗ ಸ್ವಿಚ್ ಬಂದ್ ಮಾಡಿ ಬಿಡುತ್ತಾರೆ. ವಾಹ್! ವಾಹ್! ಎಂಬ ಗೀತೆ ಹಾಡಿದಾಗ ಶಬ್ಧವನ್ನು ಹೆಚ್ಚಿಸಿ ಬಿಡುತ್ತಾರೆ ಏಕೆಂದರೆ ನಾನು-ನಾನು ಎಂಬುದರಲ್ಲಿ ಸೆಳತ ಬಹಳಷ್ಟು ಆಗುತ್ತದೆ. ಪ್ರತಿಯೊಂದು ಮಾತಿನಲ್ಲಿ ಎಳದಾಡುತ್ತಾರೆ. ಇದಲ್ಲ-ಇದಲ್ಲ, ಈ ರೀತಿ ಅಲ್ಲ-ಈ ರೀತಿ ಅಲ್ಲ ಹೀಗೆ ಎಳದಾಟ ಆಗುವ ಕಾರಣ ಒತ್ತಡ ಉಂಟು ಆಗುತ್ತದೆ. ಬಾಪ್ದಾದಾರವರಿಗೆ ಸೆಳತ, ಒತ್ತಡ ಮತ್ತು ಉಲ್ಟಾ ಸ್ವಭಾವ, ವಾಸ್ತವದಲ್ಲಿ ಸ್ವಭಾವ ಎನ್ನುವ ಶಬ್ಧ ಬಹಳ ಚೆನ್ನಾಗಿದೆ. ಸ್ವಭಾವ- ಸ್ವಯಂನ ಭಾವ ಆದರೆ ಇದನ್ನು ಉಲ್ಟಾ ಮಾಡಿ ಬಿಟ್ಟಿದ್ದಾರೆ. ಮಾತಿನ ಸೆಳದಾಟದಲ್ಲಿ ಬರಬೇಡಿ, ತಮ್ಮ ಕಡೆಗೆ ಯಾರನ್ನೋ ಸೆಳೆಯಬೇಡಿ. ಇದೂ ಸಹ ತುಂಬಾ ತೊಂದರೆ ಕೊಡುತ್ತದೆ. ಯಾರು ಎಷ್ಟೇ ಹೇಳಿದರೂ ಅವರನ್ನು ತಮ್ಮ ಕಡೆ ಸೆಳೆಯಬೇಡಿ, ಯಾವುದೇ ಮಾತಿನ ಸೆಳೆತೆಯಲ್ಲಿ ಬರಬೇಡಿ. ತನ್ನ ಕಡೆ ಸೆಳೆಯಬೇಡಿ, ಸೆಳೆತವನ್ನು ಸಮಾಪ್ತಿ ಮಾಡಿ. ಬಾಬಾ-ಬಾಬಾ ಮತ್ತು ಬಾಬಾ ಇದು ಇಷ್ಟ ಅಲ್ಲವೇ? ಮೂರು ಮಾತುಗಳು ಅಥವಾ ಒಂದರಲ್ಲಿ ನಾನು ಎಂಬುದನ್ನು ಇಲ್ಲಿಯೇ ಬಿಟ್ಟು ಹೋಗಿ. ಜೊತೆಯಲ್ಲಿ ತೆಗೆದುಕೊಂಡು ಹೋಗಬೇಡಿ. ಇಲ್ಲವೆಂದರೆ ಟ್ರೈನ್ನಲ್ಲಿ ಹೊರೆಯಾಗಿ ಬಿಡುತ್ತದೆ. ತಮ್ಮ ಗೀತೆಯಾಗಿದೆ - ನಾನು ತಂದೆಯವನು, ತಂದೆ ನನ್ನವರು. ಇದೇಯಾಗಿದೆಯಲ್ಲವೇ? ಈ ಒಂದು ನಾನು ಎಂಬುದನ್ನು ಇಟ್ಟುಕೊಳ್ಳಿ. ಎರಡನ್ನು ಸಮಾಪ್ತಿ ಮಾಡಿ. ಹೋಲಿಯನ್ನು ಆಚರಿಸಿ ಬಿಟ್ಟಿದ್ದೀರಾ? ಸುಟ್ಟು ಹಾಕಿದ್ದೀರಾ? ಸಂಕಲ್ಪದಲ್ಲಿ ಈಗಂತೂ ಸಂಕಲ್ಪ ಮಾಡಿದ್ದೀರಾ? ಕೈ ಮೇಲೆ ಎತ್ತಿರಿ. ಮಾಡಿದ್ದೀರೋ ಅಥವಾ ಸ್ವಲ್ಪ-ಸ್ವಲ್ಪ ಇದೆಯೋ? ಸ್ವಲ್ಪ-ಸ್ವಲ್ಪ ಅವಕಾಶವನ್ನು ಕೊಡಲೇ? ಹೌದು ಸ್ವಲ್ಪ-ಸ್ವಲ್ಪ ಅವಕಾಶವನ್ನು ಕೊಡಬೇಕಾ? ಯಾರು ತಿಳಿದುಕೊಂಡಿದ್ದೀರಿ - ಸ್ವಲ್ಪ-ಸ್ವಲ್ಪಕ್ಕೆ ಅವಕಾಶವನ್ನು ಕೊಡಬೇಕೆಂದು ಅವರು ಕೈ ಎತ್ತಿರಿ. ಸ್ವಲ್ಪವಂತೂ ಇದ್ದೇ ಇರುತ್ತದೆಯಲ್ಲವೇ? ಅಥವಾ ಇರುವುದಿಲ್ಲವೋ? ನೀವಂತೂ ಬಹಳ ಬಹದ್ದೂರ್ ಆಗಿದ್ದೀರಿ, ಶುಭಾಶಯಗಳು ಖುಷಿಯಲ್ಲಿ ನರ್ತನೆ ಮಾಡಿ, ಹಾಡಿರಿ, ಒತ್ತಡದಲ್ಲಿ ಅಲ್ಲ, ಸೆಳೆದಾಟದಲ್ಲಿ ಅಲ್ಲ. ಒಳ್ಳೆಯದು.

ಈಗ ಒಂದು ಸೆಕೆಂಡಿನಲ್ಲಿ ತಮ್ಮ ಮನಸ್ಸಿನಲ್ಲಿ ಎಲ್ಲಾ ಸಂಕಲ್ಪಗಳನ್ನು ಸಮಾಪ್ತಿ ಮಾಡಿ ಒಂದು ಸೆಕೆಂಡಿನಲ್ಲಿ ತಂದೆಯ ಜೊತೆ ಪರಮಧಾಮದಲ್ಲಿ ಶ್ರೇಷ್ಠಾತಿ ಶ್ರೇಷ್ಠ ಸ್ಥಾನ, ಶ್ರೇಷ್ಠಾತಿ ಶ್ರೇಷ್ಠ ತಂದೆ, ಅವರ ಜೊತೆ ಶ್ರೇಷ್ಠಾತಿ ಶ್ರೇಷ್ಠ ಸ್ಥಿತಿಯಲ್ಲಿ ಕುಳಿತುಕೊಳ್ಳಿ ಮತ್ತೆ ತಂದೆಯ ಸಮಾನ ಸರ್ವ ಶಕ್ತಿವಂತ ಆಗಿ ವಿಶ್ವದ ಆತ್ಮರಿಗೆ ಶಕ್ತಿಯ ಕಿರಣಗಳನ್ನು ನೀಡಿ. ಒಳ್ಳೆಯದು.

ನಾಲ್ಕಾರು ಕಡೆಯ ಅತಿ ಪವಿತ್ರ, ಅತ್ಯುನ್ನತ ಮಕ್ಕಳಿಗೆ ಸರ್ವ ವಿಶ್ವಕಲ್ಯಾಣಕಾರಿ ಶ್ರೇಷ್ಠ ಆತ್ಮರಿಗೆ, ಸರ್ವ ಪೂರ್ವಜ ಮತ್ತು ಪೂಜ್ಯ ಆತ್ಮರಿಗೆ, ತಂದೆಯ ಎಲ್ಲಾ ಹೃದಯ ಸಿಂಹಾಸನಾಧಿಕಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಹೃದಯದ ಆಶೀರ್ವಾದ ಸಹಿತ, ಹೃದಯದ ಪ್ರೀತಿ ಹಾಗೂ ನಮಸ್ತೆ.

ದೂರ-ದೂರದಿಂದ ಬಂದಿರುವ ಪತ್ರಗಳು, ಕಾರ್ಡ್ಗಳು, ಈ-ಮೇಲ್, ಕಂಪ್ಯೂಟರ್ ಮೂಲಕ ಸಂದೇಶ ಬಾಪ್ದಾದಾರವರಿಗೆ ತಲುಪಿದೆ ಮತ್ತೆ ಬಾಪ್ದಾದಾರವರು ಆ ಮಕ್ಕಳನ್ನು ಸಮ್ಮುಖದಲ್ಲಿ ನೋಡಿ ಪದಮಾಗುಣ ನೆನಪು ಹಾಗೂ ಪ್ರೀತಿಯನ್ನು ಕೊಡುತ್ತಿದ್ದಾರೆ.

ವರದಾನ:
ತಮ್ಮ ಪೂರ್ವಜ ಸ್ವರೂಪದ ಸ್ಮತಿಯ ಮೂಲಕ ಸರ್ವ ಆತ್ಮಗಳಿಗೆ ಶಕ್ತಿಶಾಲಿಯನ್ನಾಗಿ ಮಾಡುವಂತಹ ಆಧಾರ, ಉದ್ದಾರ ಮೂರ್ತಿ ಭವ.

ಈ ಸೃಷ್ಠಿ ವೃಕ್ಷದ ಮೂಲ ಬುಡ, ಸರ್ವರ ಪೂರ್ವಜರು ತಾವು ಬ್ರಾಹ್ಮಣ ರಿಂದ ದೇವತೆಗಳಾಗಿರುವಿರಿ. ಪ್ರತಿ ಕರ್ಮದ ಆಧಾರ, ಕುಲ ಮರ್ಯಾದೆಗಳ ಆಧಾರ, ರೀತಿ, ನೀತಿಯ ಆಧಾರ ತಾವು ಪೂರ್ವಜ ಆತ್ಮಗಳ ಆಧಾರ ಮತ್ತು ಉದ್ದಾರ ಮೂರ್ತಿಗಳಾಗಿರುವಿರಿ. ತಾವು ಬುಡದಿಂದಲೇ ಸರ್ವ ಆತ್ಮಗಳಿಗೆ ಶ್ರೇಷ್ಠ ಸಂಕಲ್ಪಗಳ ಶಕ್ತಿ ಅಥವಾ ಸರ್ವ ಶಕ್ತಿಗಳ ಪ್ರಾಪ್ತಿಯಾಗುವುದು. ತಮ್ಮನ್ನು ಎಲ್ಲರೂ ಫಾಲೋ ಮಾಡುತ್ತಿದ್ದಾರೆ ಆದ್ದರಿಂದ ಇಷ್ಟು ದೊಡ್ಡ ಜವಾಬ್ದಾರಿ ಎಂದು ತಿಳಿಯುತ್ತಾ ಪ್ರತಿ ಸಂಕಲ್ಪ ಮತ್ತು ಕರ್ಮ ಮಾಡಿ ಏಕೆಂದರೆ ತಾವು ಪೂರ್ವಜ ಆತ್ಮರ ಆಧಾರದ ಮೇಲೆಯೆ ಸೃಷ್ಠಿಯ ಸಮಯ ಮತ್ತು ಸ್ಥಿತಿಯು ಆಧಾರವಾಗಿದೆ.

ಸ್ಲೋಗನ್:
ಯಾರು ಸರ್ವ ಶಕ್ತಿಗಳ ರೂಪದ ಕಿರಣಗಳು ನಾಲ್ಕಾರು ಕಡೆ ಹರಡುತ್ತದೆ ಅವರೇ ಮಾಸ್ಟರ್ ಜ್ಞಾನ ಸೂರ್ಯರಾಗಿದ್ದಾರೆ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.

ಮೂರು ಶಬ್ಧಗಳ ಕಾರಣ ಕಂಟ್ರೋಲಿಂಗ್ ಪವರ್, ರೂಲಿಂಗ್ ಪವರ್ ಕಡಿಮೆಯಾಗುವುದು. ಆ ಮೂರು ಶಬ್ಧಗಳು ಆಗಿವೆ - 1 ಏಕೆ, 2 ಏನು, 3 ಬೇಕು. ಈ ಮೂರು ಶಬ್ಧಗಳನ್ನು ಸಮಾಪ್ತಿ ಮಾಡಿ ಕೇವಲ ಒಂದು ಶಬ್ಧ ಹೇಳಿ. "ವಾಹ" ಆಗ ಕಂಟ್ರೋಲಿಂಗ್ ಪವರ್ ಬಂದು ಬಿಡುವುದು. ನಂತರ ಸಂಕಲ್ಪ ಶಕ್ತಿಯ ಮೂಲಕ ಬೇಹದ್ದಿನ ಸೇವೆಗೆ ನಿಮಿತ್ತರಾಗಲು ಸಾಧ್ಯ.