27.07.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇಡೀ
ಪ್ರಪಂಚದಲ್ಲಿ ನಿಮ್ಮಂತಹ ಅದೃಷ್ಟವಂತರು ಯಾರೂ ಇಲ್ಲ, ನೀವು ರಾಜ ಋಷಿಗಳಾಗಿದ್ದೀರಿ, ರಾಜ್ಯ
ಪದವಿಗಾಗಿ ರಾಜಯೋಗವನ್ನು ಕಲಿಯುತ್ತಿದ್ದೀರಿ”
ಪ್ರಶ್ನೆ:
ನಿರಾಕಾರ
ತಂದೆಯಲ್ಲಿ ಯಾವ ಸಂಸ್ಕಾರವಿದೆ ಅದನ್ನು ಸಂಗಮದಲ್ಲಿ ನೀವು ಮಕ್ಕಳೂ ಸಹ ಧಾರಣೆ ಮಾಡಿಕೊಳ್ಳುತ್ತೀರಿ?
ಉತ್ತರ:
ನಿರಾಕಾರ
ತಂದೆಯಲ್ಲಿ ಜ್ಞಾನದ ಸಂಸ್ಕಾರವಿದೆ ಅವರು ನಿಮಗೆ ಜ್ಞಾನವನ್ನು ತಿಳಿಸಿ ಪತಿತರಿಂದ ಪಾವನರನ್ನಾಗಿ
ಮಾಡಿ ಬಿಡುತ್ತಾರೆ. ಆದ್ದರಿಂದ ಅವರಿಗೆ ಜ್ಞಾನ ಸಾಗರ, ಪತಿತ-ಪಾವನನೆಂದು ಹೇಳಲಾಗುತ್ತದೆ. ನೀವು
ಮಕ್ಕಳೂ ಸಹ ಈಗ ಆ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತೀರಿ. ನೀವು ನಶೆಯಿಂದ ಹೇಳುತ್ತೀರಿ- ನಮಗೆ
ಭಗವಂತ ಓದಿಸುತ್ತಾರೆ, ನಾವು ಅವರಿಂದ ಕೇಳಿ ಅನ್ಯರಿಗೆ ತಿಳಿಸುತ್ತೇವೆ.
ಗೀತೆ:
ಕೊನೆಗೂ ಆ ದಿನ
ಇಂದು ಬಂದಿತು...........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಈ ಮಹಿಮೆ ಯಾರದು? ಒಬ್ಬ ತಂದೆಯದಾಗಿದೆ.
ಶಿವಾಯ ನಮಃ, ಸರ್ವ ಶ್ರೇಷ್ಠನು ಭಗವಂತನಲ್ಲವೆ. ಮಕ್ಕಳಿಗೆ ತಿಳಿದಿದೆ - ಅವರು ನಮ್ಮ
ತಂದೆಯಾಗಿದ್ದಾರೆ, ನಾವೆಲ್ಲರೂ ತಂದೆಯರಾಗಿದ್ದೇವೆ ಎಂದಲ್ಲ, ವಿಶ್ವ ಭ್ರಾತೃತ್ವವೆಂದು ಗಾಯನವಿದೆ.
ಸನ್ಯಾಸಿಗಳು ಅಥವಾ ವಿದ್ವಾಂಸರ ಹೇಳಿಕೆಯ ಪ್ರಕಾರ ಈಶ್ವರನು ಸರ್ವವ್ಯಾಪಿ ಎಂದು ಹೇಳಿದರೆ ವಿಶ್ವ
ಪಿತೃತ್ವವಾಗಿ ಬಿಡುತ್ತದೆ. ವಿಶ್ವ ಭ್ರಾತೃತ್ವವಾದಾಗ ಅವರು ತಂದೆಯೆಂದು ಸಿದ್ಧವಾಗುತ್ತದೆ,
ಅವರಿಂದ ಆಸ್ತಿಯು ಸಿಗಬೇಕಾಗಿದೆ. ವಿಶ್ವ ಪಿತೃತ್ವವೆಂದರೆ ಅಲ್ಲಿ ಆಸ್ತಿಯ ಮಾತೇ ಇರುವುದಿಲ್ಲ,
ಮಕ್ಕಳಿಗೆ ತಿಳಿದಿದೆ - ನಾವೆಲ್ಲಾ ಆತ್ಮರ ತಂದೆಯು ಒಬ್ಬರೇ ಆಗಿದ್ದಾರೆ, ಅವರಿಗೆ ವಿಶ್ವ ಪಿತನೆಂದು
ಹೇಳಲಾಗುತ್ತದೆ. ವಿಶ್ವದಲ್ಲಿ ಯಾರಿದ್ದಾರೆ? ಎಲ್ಲರೂ ಸಹೋದರರಿದ್ದಾರೆ, ಆತ್ಮರಿದ್ದಾರೆ. ಎಲ್ಲರ
ಪಿತನು ಒಬ್ಬರೇ ಆಗಿದ್ದಾರೆ, ಎಲ್ಲರೂ ಆ ತಂದೆಯ ಪ್ರಾರ್ಥನೆ ಮಾಡುತ್ತಾರೆ, ಅವರೊಬ್ಬರಿಗೇ ಪೂಜೆ
ನಡೆಯಬೇಕು, ಅದು ಸತೋಪ್ರಧಾನ ಪೂಜೆಯಾಗಿದೆ. ಇದನ್ನೂ ಸಹ ತಿಳಿಸಿದ್ದಾರೆ - ಜ್ಞಾನ, ಭಕ್ತಿ ಮತ್ತು
ವೈರಾಗ್ಯ. ತಂದೆಯು ಸದ್ಗತಿಗಾಗಿ ಜ್ಞಾನ ಕೊಡುತ್ತಾರೆ, ಜೀವನ್ಮುಕ್ತಿಧಾಮಕ್ಕೆ ಸದ್ಗತಿಯೆಂದು
ಹೇಳಲಾಗುತ್ತದೆ, ಇದನ್ನು ಆತ್ಮವು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಮ್ಮ ಮನೆಯು ಶಾಂತಿ
ಧಾಮವಾಗಿದೆ, ಅದಕ್ಕೆ ಮುಕ್ತಿಧಾಮ, ನಿರ್ವಾಣ ಧಾಮವೆಂದೂ ಹೇಳಲಾಗುತ್ತದೆ. ಎಲ್ಲದಕ್ಕಿಂತ ಒಳ್ಳೆಯ
ಹೆಸರಾಗಿದೆ - ಶಾಂತಿಧಾಮ. ಇಲ್ಲಂತೂ ಕರ್ಮೇಂದ್ರಿಯಗಳಿರುವ ಕಾರಣ ಆತ್ಮವು ಶಬ್ಧದಲ್ಲಿ ಬರುತ್ತದೆ,
ಮಾತನಾಡಬೇಕಾಗುತ್ತದೆ, ಸೂಕ್ಷ್ಮವತನದಲ್ಲಿ ಸನ್ನೆಯ ಭಾಷೆಯಿರುತ್ತದೆ. ಸನ್ನೆಯಿಂದ ಮಾತನಾಡುತ್ತಾರೆ,
ಶಬ್ಧವಿರುವುದಿಲ್ಲ, ಮೂರೂ ಲೋಕಗಳನ್ನು ನೀವು ಅರಿತುಕೊಂಡಿದ್ದೀರಿ,
ಮೂಲವತನ-ಸೂಕ್ಷ್ಮವತನ-ಸ್ಥೂಲವತನ. ಬುದ್ಧಿಯಲ್ಲಿ ಇದು ಚೆನ್ನಾಗಿ ಕುಳಿತುಕೊಂಡಿದೆ. ಮನುಷ್ಯ
ಸೃಷ್ಟಿಗಾಗಿಯೇ ಹೇಳಲಾಗುತ್ತದೆ - ಈ ಸೃಷ್ಟಿಚಕ್ರವು ಸುತ್ತುತ್ತದೆ, ಇದಕ್ಕೆ ವಿಶ್ವದ
ಚರಿತ್ರೆ-ಭೂಗೋಳವೆಂದು ಕರೆಯಲಾಗುತ್ತದೆ. ಮನುಷ್ಯರೇ ಇದನ್ನು ತಿಳಿದುಕೊಳ್ಳುವರಲ್ಲವೆ. ವಿಶ್ವದ
ಚರಿತ್ರೆ-ಭೂಗೋಳವನ್ನು ತಿಳಿಸುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ, ವಿಶ್ವದ
ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ಅವರೇ ತಿಳಿದುಕೊಂಡಿದ್ದಾರೆ. ಈ
ಚಕ್ರವನ್ನು ಅರಿತುಕೊಳ್ಳುವುದರಿಂದಲೇ ನೀವು ಚಕ್ರವರ್ತಿ ರಾಜರಾಗುತ್ತೀರಿ. ದೇವತೆಗಳು ಸಂಪೂರ್ಣ
ನಿರ್ವಿಕಾರಿಗಳೆಂದು ಹಾಡುತ್ತಾರೆ, ಲಕ್ಷ್ಮೀ-ನಾರಾಯಣರ ಚಿತ್ರವಿದೆಯಲ್ಲವೆ. ಅವರು ಸಂಪೂರ್ಣ
ನಿರ್ವಿಕಾರಿಗಳು ಮತ್ತು ತಮಗೆ ಸಂಪೂರ್ಣ ವಿಕಾರಿಗಳೆಂದು ಹೇಳಿಕೊಳ್ಳುತ್ತಾರೆ. ಸತ್ಯಯುಗದಲ್ಲಿ
ಸಂಪೂರ್ಣ ನಿರ್ವಿಕಾರಿಗಳು ಅಥವಾ ಸಂಪೂರ್ಣ ಪಾವನರಿರುತ್ತಾರೆ. ಕಲಿಯುಗದಲ್ಲಿ ಸಂಪೂರ್ಣ ವಿಕಾರಿ,
ಸಂಪೂರ್ಣ ಪತಿತರಿದ್ದಾರೆ. ಭಾರತದ ಮಾತೇ ಆಗಿದೆ. ಇದನ್ನು ತಂದೆಯೇ ಬಂದು ಬುದ್ಧಿಯಲ್ಲಿ
ಕೂರಿಸುತ್ತಾರೆ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಅವರು ಸತ್ಯಯುಗಕ್ಕೆ ಬಹಳ ಸುಧೀರ್ಘ ಸಮಯವನ್ನು
ಕೊಟ್ಟು ಬಿಟ್ಟಿದ್ದಾರೆ. ಲಕ್ಷಾಂತರ ವರ್ಷಗಳ ಮೊದಲು ಸತ್ಯಯುಗವಿತ್ತು ಎಂದು ತಿಳಿದುಕೊಂಡಿದ್ದಾರೆ
ಆದ್ದರಿಂದ ಈ ಮಾತುಗಳು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ.
ಈಗ ಮಕ್ಕಳು
ತಿಳಿದುಕೊಂಡಿದ್ದೀರಿ - ನಾವೀಗ ಸಂಪೂರ್ಣ ವಿಕಾರಿಗಳಿಂದ ಸಂಪೂರ್ಣ ನಿರ್ವಿಕಾರಿಗಳಾಗುತ್ತಿದ್ದೇವೆ,
ಸಂಪೂರ್ಣ ಪತಿತರಿಂದ ಸಂಪೂರ್ಣ ಪಾವನರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಆತ್ಮದಲ್ಲಿಯೇ ತುಕ್ಕು
ಹಿಡಿದಿದೆ, ಸತೋಪ್ರಧಾನರಿಂದ ತಮೋಪ್ರಧಾನವಾಗಿ ಬಿಟ್ಟಿದೆ. ಆತ್ಮದ ಹೋಲಿಕೆ ಮಾಡಲಾಗುತ್ತದೆ. ಇದನ್ನು
ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ, ನೀವು ಮಕ್ಕಳು ಬಹಳ ಅದೃಷ್ಟವಂತರಾಗಿದ್ದೀರಿ, ನಿಮ್ಮಂತಹ
ಅದೃಷ್ಟವಂತರು ಮತ್ತ್ಯಾರೂ ಇಲ್ಲ. ನೀವೀಗ ರಾಜಯೋಗದಲ್ಲಿ ಕುಳಿತಿದ್ದೀರಿ, ರಾಜ ಋಷಿಗಳಾಗಿದ್ದೀರಿ.
ರಾಜ್ಯ ಪದವಿಗಾಗಿ ಓದುವಂತಹ ವಿದ್ಯೆಯು ಎಲ್ಲಾದರೂ ಇರುತ್ತದೆಯೇ? ಭಲೆ ವಕೀಲರನ್ನಾಗಿ ಮಾಡಬಹುದು
ಆದರೆ ವಿಶ್ವದ ಮಹಾರಾಜನನ್ನಾಗಿ ಯಾರು ಮಾಡುವರು? ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ.
ಇಲ್ಲಿ ಮಹಾರಾಜರಂತೂ ಯಾರೂ ಇಲ್ಲ. ಸತ್ಯಯುಗಕ್ಕಾಗಿ ಅವಶ್ಯವಾಗಿ ಮಹಾರಾಜರು ಬೇಕು ಆದ್ದರಿಂದ ತಂದೆಯು
ತಿಳಿಸುತ್ತಾರೆ - ಯಾವಾಗ ಭಕ್ತಿಯು ಮುಕ್ತಾಯವಾಗುವುದೋ ಆಗ ನಾನು ಬರುತ್ತೇನೆ. ಈಗ ಭಕ್ತಿಯು
ಮುಗಿಯಿತು, ಇದರಲ್ಲಿ ಮತ್ತ್ಯಾವುದೇ ಮಾತನ್ನು ತೆಗೆದುಕೊಳ್ಳುವಂತಿಲ್ಲ, ಕೇವಲ ನಮಗೆ ತಂದೆಯೇ
ಕುಳಿತು ತಿಳಿಸುತ್ತಾರೆಂಬ ನಶೆಯಿರಬೇಕು. ನಾವಾತ್ಮರಿಗೆ ನಿರಾಕಾರ ತಂದೆಯು ಪರಮಪಿತ ಪರಮಾತ್ಮ ಶಿವನು
ಓದಿಸುತ್ತಾರೆ, ಶಿವನನ್ನು ಯಾರೂ ಅರಿತುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ -
ತಂದೆಯು ಪುನಃ ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ, ನಾವು ಅವರಿಗೆ ಮಹಾರಾಜ ಶ್ರೀ
ನಾರಾಯಣ ಮತ್ತು ಮಹಾರಾಣಿ ಶ್ರೀಲಕ್ಷ್ಮಿಯೆಂದು ಹೇಳುತ್ತೇವೆ. ಭಕ್ತಿಮಾರ್ಗದಲ್ಲಿ ಸತ್ಯ ನಾರಾಯಣನ
ಕಥೆಯನ್ನು ತಿಳಿಸುತ್ತಾರೆ. ಅಮರ ಕಥೆ ಮತ್ತು ಮೂರನೇ ನೇತ್ರದ ಕಥೆಯಾಗಿದೆ. ತಂದೆಯು ಮೂರನೇ
ನೇತ್ರವನ್ನು ಕೊಡುತ್ತಾರೆ, ನರನಿಂದ ನಾರಾಯಣನಾಗುವ ಕಥೆಯನ್ನು ತಿಳಿಸುತ್ತಾರೆ. ಅದೇ ಮಾತುಗಳು
ಯಾವವು ಕಳೆದು ಹೋಗುತ್ತದೆಯೋ ಅವು ಮತ್ತೆ ಭಕ್ತಿ ಮಾರ್ಗದಲ್ಲಿ ಕೆಲಸಕ್ಕೆ ಬರುತ್ತವೆ. ಈಗ ನೀವು
ಮಕ್ಕಳು ತಿಳಿದುಕೊಳ್ಳುತ್ತೀರಿ - ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ನಾವು
ಹಕ್ಕುದಾರರಾಗುತ್ತೇವೆ, ಭಗವಂತನು ಸ್ವರ್ಗದ ರಚಯಿತನಾಗಿದ್ದಾರಲ್ಲವೆ. ನಾವು ಭಗವಂತನ
ಸಂತಾನರಾಗಿದ್ದೇವೆ ಅಂದಮೇಲೆ ನಾವೇಕೆ ಸ್ವರ್ಗದಲ್ಲಿಲ್ಲ! ಕಲಿಯುಗದಲ್ಲಿ ಏಕೆ ಇದ್ದೇವೆ? ಪರಮಪಿತ
ಪರಮಾತ್ಮನಂತೂ ಹೊಸ ಪ್ರಪಂಚವನ್ನು ರಚಿಸುತ್ತಾರೆ. ಭಗವಂತನು ಹಳೆಯ ಪ್ರಪಂಚವನ್ನು ರಚಿಸುವರೇ! ಮೊದಲು
ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ ಅದರ ನಂತರ ಮತ್ತೆ ಹಳೆಯದನ್ನು ಬೀಳಿಸುತ್ತಾರೆ. ನಾವು
ಸತ್ಯಯುಗಕ್ಕಾಗಿ ರಾಜ್ಯವನ್ನು ಪಡೆಯುತ್ತಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ.
ಸತ್ಯಯುಗದಲ್ಲಿ ಯಾರಿರುತ್ತಾರೆ? ಈ ಲಕ್ಷ್ಮೀ-ನಾರಾಯಣರ ವಂಶಾವಳಿಯಿರುತ್ತದೆ. ಉಳಿದ ರಾಜರೂ
ಇರುತ್ತಾರಲ್ಲವೆ! ಅವರ ವಿಜಯ ಮಾಲೆಯ ಸಾಕ್ಷಿಯಿದೆ, ಮಕ್ಕಳಿಗೆ ತಿಳಿದಿದೆ - ನಾವೀಗ ವಿಜಯ
ಮಾಲೆಯಲ್ಲಿ ಬರುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ಈ ವಿಜಯ ಮಾಲೆಯನ್ನು ಏಕೆ
ಪೂಜಿಸಲಾಗುತ್ತದೆ? ಅದರಲ್ಲಿ ಯಾರ ಸೂಚಕವಾಗಿದೆ ಎಂದು ಪ್ರಪಂಚದಲ್ಲಿ ಮಾಲೆಯ ಅರ್ಥವನ್ನು ಯಾರೂ
ತಿಳಿದುಕೊಂಡಿಲ್ಲ. ಮಾಲೆಯನ್ನು ಜಪಿಸುತ್ತಾ-ಜಪಿಸುತ್ತಾ ಮತ್ತೆ ಹೂವಿಗೆ ನಮಸ್ಕರಿಸುತ್ತಾರೆ, ಪುನಃ
ಮಾಲೆಯನ್ನು ಜಪಿಸುತ್ತಾರೆ. ಹೊರಗಿನ ವಿಚಾರಗಳು ಬರಬಾರದೆಂದು ಮಾಲೆಯನ್ನು ಜಪಿಸುತ್ತಾರೆ. ಒಳಗೆ
ರಾಮ-ರಾಮ ಎಂದು ಹೇಳಿಕೊಳ್ಳುತ್ತಾರೆ. ನಿರಂತರವಾಗಿ ಹೇಳುತ್ತಾ ಇರುತ್ತಾರೆ. ಬಹಳ ಅಭ್ಯಾಸ
ಮಾಡುತ್ತಾರೆ, ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಹಾ! ಬಹಳ ಭಕ್ತಿ ಮಾಡುವವರು ಕೇವಲ ಯಾವುದೇ
ವಿಕರ್ಮ ಮಾಡುವುದಿಲ್ಲ, ತೀವ್ರ ಭಕ್ತಿ ಮಾಡುವವರನ್ನು ನೋಡಿ ಇವರು ಸತ್ಯವಾದಿಯಾಗಿರುವರು ಎಂದು
ತಿಳಿದುಕೊಳ್ಳುತ್ತಾರೆ. ಮಂದಿರದಲ್ಲಿ ಮಾಲೆಯನ್ನಿಟ್ಟಿರುತ್ತಾರೆ, ಮಣಿಗಳನ್ನು ತಿರುಗಿಸುತ್ತಾ
ಬಾಯಿಂದ ರಾಮ-ರಾಮ ಎಂದು ಹೇಳುತ್ತಿರುತ್ತಾರೆ. ಭಕ್ತಿಯಲ್ಲಿ ಪಾಪವಾಗುವುದಿಲ್ಲ ಎಂದು ಅನೇಕರು
ತಿಳಿದುಕೊಳ್ಳುತ್ತಾರೆ. ನೌಧಾ ಭಕ್ತಿ ಮಾಡುವುದರಿಂದ ಮನುಷ್ಯರು ಮುಕ್ತರಾಗಿ ಬಿಡುತ್ತಾರೆಂದು
ಹೇಳುತ್ತಾರೆ ಆದರೆ ಆಗುವುದೇನೂ ಇಲ್ಲ. ಇದೊಂದು ನಾಟಕವಾಗಿದೆ, ಅದರಲ್ಲಿ ಎಲ್ಲರೂ ಸತೋಪ್ರಧಾನರಿಂದ
ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಯಾರೊಬ್ಬರೂ ಹಿಂತಿರುಗಿ ಹೋಗುವುದಿಲ್ಲ. ಹೇಗೆ
ಪರಮಧಾಮದಲ್ಲಿ ಜಾಗವು ಖಾಲಿಯಾಗಿ ಬಿಡುತ್ತದೆಯೋ ಹಾಗೆಯೇ ಇಲ್ಲಿಯೂ ಸಹ ಬಹಳ ಜಾಗವು ಖಾಲಿಯಾಗಿ
ಬಿಡುವುದು. ದೆಹಲಿಯ ಅಕ್ಕಪಕ್ಕ ಸಿಹಿ ನೀರಿನ ನದಿಗಳ ತೀರದಲ್ಲಿ ರಾಜಧಾನಿಯಿರುತ್ತದೆ, ಸಮುದ್ರದ
ಕಡೆಯಿರುವುದಿಲ್ಲ. ಈ ಬಾಂಬೆ ಇತ್ಯಾದಿಗಳು ಇರುವುದೇ ಇಲ್ಲ. ಇಲ್ಲಂತೂ ಮೊದಲು ಮೀನುಗಾರರಿರುತ್ತಾರೆ,
ಈಗ ಸಮುದ್ರವನ್ನು ಒಣಗಿಸಿ ಕಟ್ಟಡಗಳನ್ನು ಕಟ್ಟಿಸಿದ್ದಾರೆ. ಆದರೂ ಸಹ ಮೀನುಗಾರಿಕೆ ಇರುತ್ತದೆ,
ಸತ್ಯಯುಗದಲ್ಲಂತೂ ಈ ಬಾಂಬೆ ಇರುವುದಿಲ್ಲ. ಅಲ್ಲಿ ಯಾವುದೇ ಪರ್ವತ ಇತ್ಯಾದಿಗಳಿರುವುದೇ ಇಲ್ಲ,
ಎಲ್ಲಿಗೂ ಹೋಗುವ ಅವಶ್ಯಕತೆಯೇ ಇರುವುದಿಲ್ಲ. ಇಲ್ಲಿ ಮನುಷ್ಯರು ದಣಿದಾಗ ವಿಶ್ರಾಂತಿ ಪಡೆಯಲು
ಹೋಗುತ್ತಾರೆ. ಸತ್ಯಯುಗದಲ್ಲಿ ದಣಿವಾಗಲು ಯಾವುದೇ ಪ್ರಕಾರದ ಕಷ್ಟವೂ ಇರುವುದಿಲ್ಲ, ನೀವೀಗ
ಸ್ವರ್ಗವಾಸಿಗಳಾಗಿ ಬಿಡುತ್ತೀರಿ. ಅಲ್ಲಿ ಸ್ವಲ್ಪವೂ ಪರಿಶ್ರಮವಾಗುವುದಿಲ್ಲ ಆದ್ದರಿಂದ ಈಗ ಮಕ್ಕಳು
ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ.
ತಂದೆಯು ಹೇಳುತ್ತಾರೆ -
ಮಧುರ ಮುದ್ದಾದ ಮಕ್ಕಳೇ, ಶರೀರ ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರವನ್ನಂತೂ ಮಾಡಲೇಬೇಕು. ಶಾಲೆಯಲ್ಲಿ
ವಿದ್ಯಾರ್ಥಿಗಳು ಓದಿ ಮತ್ತೆ ಮನೆಗೆ ಹೋದ ನಂತರವೂ ಓದುತ್ತಾರೆ, ಮನೆಯ ಕೆಲಸ-ಕಾರ್ಯಗಳನ್ನೂ
ಮಾಡುತ್ತಾರೆ, ಇಲ್ಲಿಯೂ ಹಾಗೆಯೇ. ಈ ವಿದ್ಯೆಯಲ್ಲಿ ನಿಮಗೆ ಯಾವುದೇ ಕಷ್ಟವಿಲ್ಲ, ಆ ವಿದ್ಯೆಯಲ್ಲಂತೂ
ಎಷ್ಟೊಂದು ಸಬ್ಜೆಕ್ಟ್ಗಳಿರುತ್ತವೆ. ಇಲ್ಲಿ ಒಂದೇ ವಿದ್ಯೆ ಮತ್ತು ಒಂದೇ ಮಾತಾಗಿದೆ- ಮನ್ಮನಾಭವ,
ಇದರಿಂದ ನಿಮ್ಮ ಪಾಪಗಳು ನಾಶವಾಗುತ್ತವೆ. ಭಗವಾನುವಾಚವಿದೆಯಲ್ಲವೆ. ಗೀತೆಯನ್ನು ಭಗವಂತನು
ದ್ವಾಪರದಿಂದ ತಿಳಿಸಿದರೆಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ದ್ವಾಪರದಲ್ಲಿ ತಿಳಿಸಿ ಏನು
ಮಾಡುತ್ತಾರೆ? ಕೃಷ್ಣನ ಚಿತ್ರದಲ್ಲಿ ಬರವಣಿಗೆಯು ಬಹಳ ಚೆನ್ನಾಗಿದೆ, ಈ ಯುದ್ಧವಂತೂ ಒಂದು
ನಿಮಿತ್ತವಾಗಿದೆ, ಇದರಲ್ಲಿ ಎಲ್ಲರೂ ಮರಣ ಹೊಂದುವರು ಆಗಲೇ ಹಿಂತಿರುಗಿ ಮುಕ್ತಿ-ಜೀವನ್ಮುಕ್ತಿಯಲ್ಲಿ
ಹೋಗಲು ಸಾಧ್ಯ. ಅದರಲ್ಲಿಯೂ ಕೇವಲ ಯುದ್ಧದಿಂದಲೇ ಸಾಯುವರೇ! ಅನೇಕ ಪ್ರಕಾರದ ಪ್ರಾಕೃತಿಕ ವಿಕೋಪಗಳೂ
ಆಗುತ್ತವೆ, ಮಕ್ಕಳಿಗೆ ಯಾವುದೇ ದುಃಖವಾಗಬಾರದು. ಹೇಗೆ ಮನುಷ್ಯರಿಗೆ ಹೃದಯಾಘಾತವಾದರೆ ಅದರಲ್ಲಿ
ಯಾವುದೇ ದುಃಖವಾಗುವುದಿಲ್ಲ. ಮೃತ್ಯು ಬರುವುದಾದರೆ ಹೀಗೆ ಬರಬೇಕು ಕುಳಿತು-ಕುಳಿತಿದ್ದಂತೆಯೇ
ಹೃದಯಾಘಾತವಾದರೆ ಸಮಾಪ್ತಿಯಾಗುವರು. ವೈದ್ಯರು ಬರುವಷ್ಟರಲ್ಲಿ ಆತ್ಮವು ಹೊರಟು ಹೋಗುತ್ತದೆ. ಈಗಂತೂ
ಎಲ್ಲರ ಮೃತ್ಯುವಾಗುವುದು. ಅಂತಿಮದಲ್ಲಿ ಆಸ್ಪತ್ರೆಗಳಾಗಲಿ, ವೈದ್ಯರಾಗಲಿ, ಕ್ರಿಯಾಕರ್ಮ
ಮಾಡುವವರಾಗಲಿ ಯಾರೂ ಇರುವುದಿಲ್ಲ, ಎಲ್ಲರ ಪ್ರಾಣಗಳು ತನುವಿನಿಂದ ಹೊರಟು ಹೋಗುತ್ತವೆ. ಬೆಂಕಿಯ ಮಳೆ
ಸುರಿಯುತ್ತದೆ, ಮೃತ್ಯುವಾಗುವುದರಲ್ಲಿ ತಡವಾಗುವುದಿಲ್ಲ. ಇಂತಹ ಬಾಂಬುಗಳನ್ನು ತಯಾರಿಸಬೇಕು
ಯಾವುದರಲ್ಲಿ ಮನುಷ್ಯರು ಬಹಳ ಬೇಗನೆ ಸಾಯಬೇಕೆಂದು ಪ್ರಯತ್ನಪಟ್ಟು ಇಂತಿಂತಹ ಬಾಂಬುಗಳನ್ನು ತಯಾರು
ಮಾಡುತ್ತಿರುತ್ತಾರೆ. ಇನ್ನೂ ಆಧುನಿಕ ರೀತಿಯಲ್ಲಿ ಬಾಂಬುಗಳನ್ನು ತಯಾರಿಸುತ್ತಿರುತ್ತಾರೆ, ಇದು
ಡ್ರಾಮಾದಲ್ಲಿ ನಿಗಧಿಯಾಗಿದೆ. ಡ್ರಾಮಾದಲ್ಲಿ ಮಾಡಿ-ಮಾಡಲ್ಪಟ್ಟ ಆಟವಾಗಿದೆ, ಕಲ್ಪ-ಕಲ್ಪವೂ
ವಿನಾಶವಾಗುತ್ತದೆ, ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವಿರುವುದಿಲ್ಲ. ತಂದೆಯೇ ಬಂದು ಜ್ಞಾನ
ಕೊಡಬೇಕಾಗಿದೆ, ಇದರಿಂದ ಸತ್ಯಯುಗದ ಸ್ಥಾಪನೆಯಾಗಿ ಬಿಟ್ಟರೆ ನಂತರ ಜ್ಞಾನದ ಮಾತೇ ಇರುವುದಿಲ್ಲ.
ಮತ್ತೆ ಯಾವಾಗ ರಾವಣ ರಾಜ್ಯವು ಆರಂಭವಾಗುವುದೋ ಆಗ ಭಕ್ತಿಯು ಪ್ರಾರಂಭವಾಗುತ್ತದೆ. ಈಗ ಭಕ್ತಿಯು
ಮುಕ್ತಾಯವಾಗುತ್ತದೆ, ನೀವು ಯೋಗ ಬಲದಿಂದ ಪಾವನರಾಗಬೇಕಾಗಿದೆ. ಪಾವನರಾದಾಗಲೇ ಸುಖಧಾಮ,
ಶಾಂತಿಧಾಮದಲ್ಲಿ ಹೋಗಲು ಸಾಧ್ಯ, ಇದಕ್ಕಾಗಿ ಚಾರ್ಟ್ ಇಟ್ಟುಕೊಳ್ಳಬೇಕಾಗಿದೆ. ಇದಂತೂ ನಿಮಗೆ
ತಿಳಿದಿದೆ- ನಾವು ತಂದೆಯನ್ನು ನೆನಪು ಮಾಡಿ ಇಲ್ಲಿಯೇ ತಮೋ ಪ್ರಧಾನರಿಂದ ಸತೋ ಪ್ರಧಾನರಾಗಬೇಕಾಗಿದೆ.
ಹೀಗೆ ಯಾವುದೇ ಶಾಸ್ತ್ರ ಇತ್ಯಾದಿಗಳಲ್ಲಿ ಬರೆದಿಲ್ಲ, ಮಕ್ಕಳು ಗೀತೆಯನ್ನು ಕೇಳಿದಿರಿ - ಕೊನೆಗೂ ಆ
ದಿನ ಇಂದು ಬಂದಿತು... ಯಾವಾಗ ಭಾರತವಾಸಿಗಳು ಪುನಃ ರಾಜಾಧಿ ರಾಜರಾಗುತ್ತಾರೆ. ರಾಜರಿಗೂ ರಾಜರು
ಅಥವಾ ಮಹಾರಾಜರಾಗುತ್ತೀರಿ ನಂತರ ತ್ರೇತಾದಲ್ಲಿ ರಾಜ-ರಾಣಿಯಿರುತ್ತಾರೆ. ಯಾರು ಪೂಜ್ಯ
ಮಹಾರಾಜ-ಮಹಾರಾಣಿಯಾಗಿದ್ದರೋ ಅವರೇ ದ್ವಾಪರದಲ್ಲಿ ವಾಮಮಾರ್ಗದಲ್ಲಿ ಬಂದು ಪೂಜಾರಿಗಳಾಗಿ
ಬಿಡುತ್ತಾರೆ, ತಾವೇ ಪೂಜ್ಯರಿದ್ದವರು ತಾವೇ ಪೂಜಾರಿಗಳಾಗಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ
- ನಾನು ಪೂಜಾರಿಯಾಗುವುದಿಲ್ಲ, ದೇವತೆಗಳು ಪೂಜ್ಯರಾಗುತ್ತಾರೆ ನಾನಾಗುವುದಿಲ್ಲ, ಪೂಜಾರಿಯೂ
ಆಗುವುದಿಲ್ಲ. ಭಾರತವಾಸಿಗಳು ದೇವಿ-ದೇವತೆಗಳ ಮಂದಿರವನ್ನು ಮಾಡಿ ಅವರ ಪೂಜೆ ಮಾಡುತ್ತಾರೆ.
ಲಕ್ಷ್ಮೀ-ನಾರಾಯಣ ಯಾರು ಮೊದಲು ಪೂಜ್ಯರಾಗಿದ್ದರೋ ಅವರೇ ಭಕ್ತಿಮಾರ್ಗದಲ್ಲಿ ಶಿವ ತಂದೆಯ
ಪೂಜಾರಿಗಳಾಗುತ್ತಾರೆ. ಯಾವ ಶಿವ ತಂದೆಯು ಮಹಾರಾಜ-ಮಹಾರಾಣಿಯರನ್ನಾಗಿ ಮಾಡಿದರೋ ಅವರಿಗೇ ನಂತರ
ಮಂದಿರವನ್ನು ಕಟ್ಟಿಸಿ ಪೂಜೆ ಮಾಡುತ್ತಾರೆ. ಯಾರೂ ಕೂಡಲೇ ವಿಕಾರಿಗಳಾಗಿ ಬಿಡುವುದಿಲ್ಲ,
ನಿಧಾನ-ನಿಧಾನವಾಗಿ ಆಗುತ್ತಾರೆ. ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುವ ಚಿತ್ರಗಳನ್ನೂ
ತೋರಿಸುತ್ತಾರೆ. ಯಾರು ಪೂಜ್ಯ ಲಕ್ಷ್ಮೀ-ನಾರಾಯಣರಾಗಿದ್ದರೋ ಅವರೇ ನಂತರ ಪೂಜಾರಿಗಳಾಗಿ ಬಿಡುತ್ತಾರೆ.
ಮೊಟ್ಟ ಮೊದಲು ಶಿವನ ಮಂದಿರವನ್ನು ಕಟ್ಟಿಸುತ್ತಾರೆ, ಆ ಸಮಯದಲ್ಲಿ ವಜ್ರಗಳನ್ನು ಕತ್ತರಿಸಿ
ಪೂಜೆಗಾಗಿ ಲಿಂಗವನ್ನು ಮಾಡಿಸುತ್ತಾರೆ. ಪರಮಾತ್ಮನು ಚಿಕ್ಕ ಬಿಂದುವಾಗಿದ್ದಾರೆ ಎಂಬುದು ಯಾರಿಗೂ
ತಿಳಿದಿಲ್ಲ. ಇದನ್ನು ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ದೊಡ್ಡ ಲಿಂಗವಾಗಿಲ್ಲ,
ಮಂದಿರಗಳನ್ನಂತೂ ಬಹಳ ಕಟ್ಟಿಸುತ್ತಾರೆ, ರಾಜರನ್ನು ನೋಡಿ ಪ್ರಜೆಗಳೂ ಸಹ ಅದೇ ರೀತಿ ಮಾಡುತ್ತಾರೆ.
ಮೊಟ್ಟ ಮೊದಲು ಶಿವ ತಂದೆಯ ಪೂಜೆಯಾಗುತ್ತದೆ, ಅದಕ್ಕೆ ಅವ್ಯಭಿಚಾರಿ ಸತೋಪ್ರಧಾನ ಪೂಜೆಯೆಂದು
ಹೇಳಲಾಗುತ್ತದೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ. ನೀವೂ ಸಹ ರಜೋ ತಮೋದಲ್ಲಿ ಬಂದಿದ್ದೀರಿ
ಆದ್ದರಿಂದ ಹಿಂದೂಗಳೆಂದು ಹೆಸರನ್ನು ಇಟ್ಟುಕೊಂಡಿದ್ದೀರಿ. ಮೂಲತಃ ದೇವಿ-ದೇವತೆಗಳಾಗಿದ್ದಿರಿ.
ತಂದೆಯು ಹೇಳುತ್ತಾರೆ - ನೀವು ಮೂಲತಃ ದೇವಿ-ದೇವತಾ ಧರ್ಮದವರಾಗಿದ್ದೀರಿ ಆದರೆ ನೀವು ಬಹಳ ಪತಿತರಾಗಿ
ಬಿಟ್ಟಿದ್ದೀರಿ ಆದ್ದರಿಂದ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ
ಅಪವಿತ್ರರಾಗಿದ್ದೀರಿ. ಹಿಂದೂಗಳೆಂಬ ಹೆಸರಂತೂ ಬಹಳ ಕೊನೆಯಲ್ಲಿಡುತ್ತಾರೆ.
ನೀವೀಗ
ತಿಳಿದುಕೊಳ್ಳುತ್ತೀರಿ - ನಾವೇ ಪೂಜ್ಯರಾಗಿದ್ದೆವು, ಈಗ ಸಂಗಮಯುಗದಲ್ಲಿ ಪೂಜ್ಯರೂ ಅಲ್ಲ.
ಪೂಜಾರಿಗಳೂ ಅಲ್ಲ. ನೀವು ಏನು ಮಾಡುತ್ತೀರಿ? ಶ್ರೀಮತದಂತೆ ಪೂಜ್ಯರಾಗುತ್ತಿದ್ದೀರಿ, ಅನ್ಯರನ್ನೂ
ಮಾಡುತ್ತಿದ್ದೀರಿ. ನೀವು ಬ್ರಾಹ್ಮಣರಾಗಿದ್ದೀರಿ, ನಿಮ್ಮ ಆತ್ಮವು ಪವಿತ್ರವಾಗುತ್ತಾ ಹೋಗುತ್ತದೆ.
ಪೂರ್ಣ ಪವಿತ್ರರಾದರೆ ಈ ಹಳೆಯ ಶರೀರವನ್ನು ಬಿಡಬೇಕಾಗುತ್ತದೆ. ತಂದೆಯು ಬಹಳ ಸಹಜ ರೀತಿಯಲ್ಲಿ
ತಿಳಿಸುತ್ತಾರೆ, ವೃದ್ಧ ಮಾತೆಯರಿಗೆ ಧಾರಣೆಯಾಗುವುದಿಲ್ಲ. ತಂದೆಯು ಹೇಳುತ್ತಾರೆ, ಇದನ್ನಂತೂ ನೀವು
ತಿಳಿದುಕೊಂಡಿದ್ದೀರಿ - ನಾವಾತ್ಮರಾಗಿದ್ದೇವೆ, ಆತ್ಮದಲ್ಲಿಯೇ ಒಳ್ಳೆಯ ಅಥವಾ ಕೆಟ್ಟ
ಸಂಸ್ಕಾರವಿರುತ್ತದೆ. ಆತ್ಮವು ಏನೆಲ್ಲಾ ಕರ್ಮ ಮಾಡುವುದೋ ಅದನ್ನು ಇನ್ನೊಂದು ಜನ್ಮದಲ್ಲಿ
ಅನುಭವಿಸಬೇಕಾಗುತ್ತದೆ. ತಂದೆಯೂ ಸಹ ಆತ್ಮಗಳೊಂದಿಗೆ ಮಾತನಾಡುತ್ತಾರೆ. ತಂದೆಯು ಹೇಳುತ್ತಾರೆ - ಹೇ
ಮಕ್ಕಳೇ ಆತ್ಮಾಭಿಮಾನಿಯಾಗಿರಿ. ನಿರಾಕಾರ ಶಿವ ತಂದೆಯು ನಿರಾಕಾರಿ ಆತ್ಮರಿಗೆ ಓದಿಸುತ್ತಾರೆ.
ನಿರಾಕಾರ ತಂದೆಯಲ್ಲಿ ಜ್ಞಾನದ ಸಂಸ್ಕಾರವಿದೆ, ಅವರಿಗೆ ಶರೀರವಂತೂ ಇಲ್ಲ ಆದ್ದರಿಂದ ಅವರು ಜ್ಞಾನ
ಸಾಗರ, ಪತಿತ-ಪಾವನನಾಗಿದ್ದಾರೆ, ಅವರಲ್ಲಿ ಎಲ್ಲಾ ಗುಣಗಳಿವೆ. ತಂದೆಯು ಹೇಳುತ್ತಾರೆ - ನಾನು ಬಂದು
ನೀವು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ, ಯುಕ್ತಿಯು ಎಷ್ಟು ಸಹಜವಾಗಿದೆ. ಒಂದೇ ಅಕ್ಷರವಾಗಿದೆ
- ಮನ್ಮನಾಭವ, ನನ್ನೊಬ್ಬನನ್ನೇ ನೆನಪು ಮಾಡಿರಿ. ನೆನಪಿನಿಂದಲೇ ನಿಮ್ಮ ವಿಕರ್ಮಗಳು
ವಿನಾಶವಾಗುತ್ತದೆ, ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಾವೀಗ ಬ್ರಾಹ್ಮಣರಾಗಿದ್ದೇವೆ ನಂತರ
ಸೂರ್ಯವಂಶಿ, ಚಂದ್ರವಂಶಿ, ವೈಶ್ಯ, ಶೂದ್ರವಂಶಿಯರಾಗುತ್ತೇವೆ. ನಾವೇ ಈ 84 ಜನ್ಮಗಳ ಚಕ್ರದಲ್ಲಿ
ಬರುತ್ತೇವೆ, ಮೇಲಿನಿಂದ ಕೆಳಗಿಳಿದಾಗ ಮತ್ತೆ ತಂದೆಯು ಬರುತ್ತಾರೆ. ಈ ಸೃಷ್ಟಿ ಚಕ್ರವು ಸುತ್ತುತ್ತಾ
ಇರುತ್ತದೆ. ಈ ಸೃಷ್ಟಿಯು ಹಳೆಯದಾದಾಗ ಪುನಃ ಹೊಸದನ್ನಾಗಿ ಮಾಡಲು ತಂದೆಯು ಬರುತ್ತಾರೆ, ಇದಂತೂ
ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆಯಲ್ಲವೆ. ಈ ಚಕ್ರವು ಬುದ್ಧಿಯಲ್ಲಿ ತಿರುಗಬೇಕಾಗಿದೆ. ನೀವೀಗ
ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ ಯಾವುದರಿಂದ ಮತ್ತೆ ಹೋಗಿ ಚಕ್ರವರ್ತಿ ರಾಜರಾಗುತ್ತೀರಿ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದ
ಅನುಸಾರ ಪೂಜ್ಯರಾಗಬೇಕಾಗಿದೆ. ಆತ್ಮದಲ್ಲಿ ಯಾವ ಕೆಟ್ಟ ಸಂಸ್ಕಾರವು ಬಂದು ಬಿಟ್ಟಿದೆಯೋ ಅದನ್ನು
ಜ್ಞಾನ-ಯೋಗದಿಂದ ಸಮಾಪ್ತಿ ಮಾಡಬೇಕಾಗಿದೆ, ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ.
2. ಶರೀರ ನಿರ್ವಹಣೆಗಾಗಿ
ಕರ್ಮ ಮಾಡುತ್ತಲೂ ವಿದ್ಯೆಯನ್ನು ಓದಬೇಕು ಹಾಗೂ ಓದಿಸಬೇಕಾಗಿದೆ. ಯೋಗಬಲದಿಂದ ಪಾವನರಾಗಿ ರಾಜ್ಯ
ಪದವಿಯನ್ನು ಪಡೆಯಬೇಕಾಗಿದೆ.
ವರದಾನ:
ತಮ್ಮ ಶ್ರೇಷ್ಠ
ಸ್ಥಿತಿಯ ಮೂಲಕ ತಮ್ಮ ಮುಂದೆ ಮಾಯೆಯನ್ನು ಬಾಗಿಸುವಂತಹ ಶ್ರೇಷ್ಠ ಪದವಿಯ ಅಧಿಕಾರಿ ಭವ.
ಮಹಾನ್ ಆತ್ಮರೆಂದಿಗೂ
ಯಾರ ಮುಂದೆಯೂ ಬಾಗುವುದಿಲ್ಲ, ಅವರ ಮುಂದೆ ಎಲ್ಲರೂ ಬಾಗುವರು. ಹಾಗೆಯೇ ತಾವು ತಂದೆಯಿಂದ
ಆಯ್ಕೆಯಾಗಿರುವ ಸರ್ವ ಶ್ರೇಷ್ಠ ಆತ್ಮರು, ತಾವೆಲ್ಲಿಯೂ ಯಾವುದೇ ಪರಿಸ್ಥಿತಿಯಲ್ಲಿಯೂ ಅಥವಾ ಮಾಯೆಯ
ಭಿನ್ನ-ಭಿನ್ನವಾದ ಆಕರ್ಷಣೆಗೊಳಿಸುವ ರೂಪಗಳಲ್ಲಿ ತಮ್ಮನ್ನು ಬಾಗಿಸಲು ಸಾಧ್ಯವಿಲ್ಲ. ಈಗಿನಿಂದ ಸದಾ
ಬಾಗಿಸುವಂತಹ ಸ್ಥಿತಿಯಲ್ಲಿ ಸ್ಥಿತರಾಗಿ ಇರುತ್ತೀರೆಂದರೆ, ಶ್ರೇಷ್ಠ ಪದವಿಯ ಅಧಿಕಾರವು
ಪ್ರಾಪ್ತಿಯಾಗುವುದು. ಇಂತಹ ಆತ್ಮರ ಮುಂದೆ ಸತ್ಯಯುಗದಲ್ಲಿಯ ಪ್ರಜೆಗಳು ಸ್ವಮಾನದಿಂದ ಬಾಗುವರು ಹಾಗೂ
ದ್ವಾಪರದಲ್ಲಿ ತಮ್ಮ ನೆನಪಾರ್ಥದ ಮುಂದೆ ಭಕ್ತರು ಬಾಗುತ್ತಾ ಇರುತ್ತಾರೆ (ನಮಸ್ಕರಿಸುವುದು).
ಸ್ಲೋಗನ್:
ಕರ್ಮದ ಸಮಯದಲ್ಲಿ
ಯೋಗದ ಸಮತೋಲನವು ಪರಿಪಕ್ವವಾಗಿ ಇದ್ದರೆ ಹೇಳಲಾಗುತ್ತದೆ- ಕರ್ಮಯೋಗಿ.
ಅವ್ಯಕ್ತ ಸೂಚನೆ:-
ಜ್ವಾಲಾ ಸ್ವರೂಪ ಸ್ಥಿತಿಯಲ್ಲಿರುತ್ತ ಶಕ್ತಿಶಾಲಿ ನೆನಪಿನ ಅನುಭವ ಮಾಡಿ.
ಕೆಲ ಮಕ್ಕಳು ಹೇಳುತ್ತಾರೆ
ಯಾವಾಗ ಯೋಗದಲ್ಲಿ ಕುಳಿತುಕೊಳ್ಳುತ್ತೀರಿ ಆಗ ಆತ್ಮ ಅಭಿಮಾನಿಯಾಗುವ ಬದಲು ಸೇವೆ ನೆನಪು ಬರುತ್ತದೆ.
ಆದರೆ ಹೀಗೆ ಆಗಬಾರದು ಏಕೆಂದರೆ ಅಂತಿಮ ಸಮಯದಲ್ಲಿ ಒಂದುವೇಳೆ ಅಶರೀರಿಯಾಗುವ ಬದಲಾಗಿ ಸೇವೆಯ
ಸಂಕಲ್ಪ ಬಂದರೂ ಸಹ ಸೆಕೆಂಡಿನ್ ಪೇಪರ್ನಲ್ಲಿ ಫೇಲ್ (ನಾಪಾಸ್) ಆಗಿ ಬಿಡುವಿರಿ. ಆ ಸಮಯದಲ್ಲಿ
ತಂದೆಯ, ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ ಬಿಟ್ಟರೆ ಬೇರೆ ಏನು ನೆನಪು ಬರಬಾರದು. ಸೇವೆಯಲ್ಲಿ
ನಂತರವೂ ಸಾಕಾರದಲ್ಲಿ ಬಂದು ಬಿಡುತ್ತೀರಿ ಆ ಸಮಯ ಏನು ಬೇಕೋ ಆ ಸ್ಥಿತಿಯಿರಲಿಲ್ಲವೆಂದರೆ ಮೋಸ
ಹೋಗುತ್ತೀರಿ.