27.08.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಸತೋಪ್ರಧಾನ ಅದೃಷ್ಟವನ್ನು ರೂಪಿಸಿಕೊಳ್ಳಲು ನೆನಪಿನಲ್ಲಿರುವ ಹೆಚ್ಚು ಪುರುಷಾರ್ಥ ಮಾಡಿ, ನಾನು
ಆತ್ಮನಾಗಿದ್ದೇನೆ, ಇದು ಸದಾ ನೆನಪಿರಲಿ, ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು”.
ಪ್ರಶ್ನೆ:
ಮಕ್ಕಳಿಗೆ
ನೆನಪಿನ ಚಾರ್ಟನ್ನು ಇಡುವುದು ಕಷ್ಟವಾಗುತ್ತದೆ - ಏಕೆ?
ಉತ್ತರ:
ಏಕೆಂದರೆ ಕೆಲವು
ಮಕ್ಕಳು ನೆನಪನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲ. ನೆನಪು ಮಾಡಲು ಕುಳಿತುಕೊಳ್ಳುತ್ತಾರೆ ಮತ್ತು
ಬುದ್ಧಿಯು ಹೊರಗಡೆ ಅಲೆಯುತ್ತಿರುತ್ತದೆ. ಶಾಂತವಾಗುವುದಿಲ್ಲ, ಅಂತಹವರು ವಾತಾವರಣವನ್ನು ಹಾಳು ಮಾಡಿ
ಬಿಡುತ್ತಾರೆ. ನೆನಪು ಮಾಡಲಿಲ್ಲವೆಂದರೆ ಚಾರ್ಟನ್ನು ಹೇಗೆ ಬರೆಯುವುದು? ಒಂದುವೇಳೆ ಸುಳ್ಳು
ಬರೆದಿದ್ದರೆ ಬಹಳ ಶಿಕ್ಷೆಯನ್ನನುಭವಿಸಬೇಕಾಗುವುದು. ಸತ್ಯ ತಂದೆಗೆ ಸತ್ಯವನ್ನೇ ಹೇಳಬೇಕು.
ಗೀತೆ:
ಅದೃಷ್ಟವನ್ನು
ಬೆಳಗಿಸಿಕೊಂಡು ಬಂದಿದ್ದೇನೆ................
ಓಂ ಶಾಂತಿ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯು ನಿತ್ಯವೂ ತಿಳಿಸಿಕೊಡುತ್ತಾರೆ - ಎಷ್ಟು ಸಾಧ್ಯವೋ
ಆತ್ಮಾಭಿಮಾನಿಗಳಾಗಿರಿ. ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿ ಮತ್ತು ತಂದೆಯನ್ನು ನೆನಪು ಮಾಡಿ
ಏಕೆಂದರೆ ನಾವು ಆ ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಅದೃಷ್ಟವನ್ನು ಮಾಡಿಕೊಳ್ಳಲು ಬಂದಿದ್ದೇವೆ
ಎಂಬುದನ್ನು ತಿಳಿದಿದ್ದೀರಿ. ಅವಶ್ಯವಾಗಿ ತಂದೆಯನ್ನು ನೆನಪು ಮಾಡಬೇಕು. ಪವಿತ್ರ
ಸತೋಪ್ರಧಾನರಾಗುವುದರ ವಿನಃ ಸತೋಪ್ರಧಾನ ಅದೃಷ್ಟವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದನ್ನು
ಚೆನ್ನಾಗಿ ನೆನಪಿಟ್ಟುಕೊಳ್ಳಿ. ಮೂಲಮಾತು ಒಂದೇ ಆಗಿದೆ. ಇದನ್ನು ನಿಮ್ಮ ಬಳಿ ಬರೆದಿಟ್ಟುಕೊಳ್ಳಿ.
ಹೊರಗಡೆ ನೀವು ಹೆಸರನ್ನು ಬರೆಯುತ್ತೀರಲ್ಲವೆ, ನೀವೂ ಬರೆದುಕೊಳ್ಳಿ - ನಾವು ಆತ್ಮರಾಗಿದ್ದೇವೆ,
ಬೇಹದ್ದಿನ ತಂದೆಯಿಂದ ನಾವು ಆಸ್ತಿಯನ್ನು ಪಡೆದುಕೊಳ್ಳುತ್ತಿದ್ದೇವೆ ಏಕೆಂದರೆ ಮಾಯೆಯು ಮರೆಸಿ
ಬಿಡುತ್ತದೆ. ಆದ್ದರಿಂದ ಬರೆದಿದ್ದೇ ಆದರೆ ಘಳಿಗೆ-ಘಳಿಗೆಗೆ ನೆನಪಿರುತ್ತದೆ. ಮನುಷ್ಯರು ಓಂನ ಅಥವಾ
ಕೃಷ್ಣನ ಚಿತ್ರವನ್ನು ನೆನಪು ಮಾಡಲು ತಿಳಿಸುತ್ತಾರೆ ಆದರೆ ಇದು ಹೊಸದಕ್ಕಿಂತ ಹೊಸ ನೆನಪು. ಇದನ್ನು
ಕೇವಲ ಬೇಹದ್ದಿನ ತಂದೆಯೇ ತಿಳಿಸಿ ಕೊಡುತ್ತಾರೆ. ಇದನ್ನು ತಿಳಿಯುವುದರಿಂದ ನೀವು
ಸೌಭಾಗ್ಯಶಾಲಿಗಳೇನು, ನೀವು ಪದಮಾಭಾಗ್ಯಶಾಲಿಗಳಾಗುತ್ತೀರಿ. ತಂದೆಯನ್ನು ತಿಳಿದುಕೊಳ್ಳದೇ ಇರುವ
ಕಾರಣ, ನೆನಪು ಮಾಡದೇ ಇರುವ ಕಾರಣ ಕಂಗಾಲಾಗಿರಾಗಿ ಬಿಟ್ಟಿದ್ದಾರೆ. ಒಬ್ಬ ತಂದೆಯು
ಸದಾಕಾಲಕ್ಕೋಸ್ಕರ ಜೀವನವನ್ನು ಸುಖಿಯನ್ನಾಗಿ ಮಾಡಲು ಬಂದಿದ್ದಾರೆ. ನೆನಪು ಮಾಡುತ್ತಾರೆ ಆದರೆ ಏನೂ
ತಿಳಿದುಕೊಂಡಿಲ್ಲ. ವಿದೇಶಿಗಳೂ ಸಹ ಸರ್ವವ್ಯಾಪಿ ಎಂದು ಹೇಳುವುದನ್ನು ಭಾರತವಾಸಿಗಳಿಂದಲೇ
ಕಲಿತಿದ್ದಾರೆ. ಭಾರತದ ಅವನತಿಯಾದಾಗ ಎಲ್ಲರದೂ ಅವನತಿಯಾಗಿದೆ. ತಾನೂ ಬಿದ್ದು ಅನ್ಯರನ್ನೂ
ಬೀಳಿಸುವುದಕ್ಕೆ ಭಾರತವೇ ಜವಾಬ್ದಾರಿಯಾಗಿದೆ. ನಾನು ಇದೇ ಭಾರತದಲ್ಲಿ ಬಂದು ಸ್ವರ್ಗ, ಸತ್ಯ
ಖಂಡವನ್ನಾಗಿ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ. ಇಂತಹ ಸ್ವರ್ಗವನ್ನಾಗಿ ಮಾಡುವಂತಹವರ
ಎಷ್ಟೊಂದು ನಿಂದನೆಯನ್ನು ಮಾಡಿದ್ದಾರೆ, ಮರೆತು ಹೋಗಿದ್ದಾರೆ ಆದ್ದರಿಂದ ಯಧಾ ಯಧಾಹೀ...... ಎಂದು
ಬರೆಯಲಾಗಿದೆ. ಇದರ ಅರ್ಥವನ್ನೂ ಸಹ ತಂದೆಯೇ ಬಂದು ತಿಳಿಸಿ ಕೊಡುತ್ತಾರೆ. ಬಲಿಹಾರಿ ಒಬ್ಬ
ತಂದೆಯದಾಗಿದೆ. ತಂದೆಯು ಅವಶ್ಯವಾಗಿ ಬರುವಕಾರಣ ಶಿವ ಜಯಂತಿಯನ್ನೂ ಆಚರಿಸುತ್ತಾರೆ. ಆದರೆ ಶಿವ
ಜಯಂತಿಯ ಗೌರವ ಇಲ್ಲವೇ ಇಲ್ಲ. ಯಾರು ಇದ್ದು ಹೋಗಿದ್ದಾರೆಯೋ ಅವರ ಜಯಂತಿಯನ್ನು ಆಚರಿಸಲಾಗುತ್ತದೆ
ಎಂಬುದು ಮಕ್ಕಳಿಗೆ ತಿಳಿದಿದೆ. ಸತ್ಯಯುಗೀ ಆದಿಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಅವರೇ
ಮಾಡುತ್ತಾರೆ. ತಮ್ಮ ಧರ್ಮವನ್ನು ಇಂತಹವರು ಇಂತಹ ಸಮಯದಲ್ಲಿ ಸ್ಥಾಪನೆ ಮಾಡಿದರು ಎಂಬುದು ಬೇರೆ
ಧರ್ಮದವರಿಗೆ ತಿಳಿದಿದೆ. ಅವರೆಲ್ಲರಿಗಿಂತ ಮೊದಲೇ ದೇವಿ-ದೇವತಾ ಧರ್ಮವಿದೆ, ಅದನ್ನು ಖಂಡಿತವಾಗಿಯೂ
ತಿಳಿದುಕೊಂಡಿಲ್ಲ. ಈ ಧರ್ಮವು ಎಲ್ಲಿ ಪ್ರಾಯಲೋಪವಾಗಿ ಬಿಟ್ಟಿದೆಯೆಂದು ತಿಳಿದುಕೊಂಡಿಲ್ಲ. ತಂದೆಯು
ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ, ಮತ್ತ್ಯಾರದೂ ಈ ಮಹಿಮೆಯಿಲ್ಲ. ಧರ್ಮ ಸ್ಥಾಪಕರ ಮಹಿಮೆ
ಏನಿರುತ್ತದೆ. ತಂದೆಯೇ ಪಾವನ ಪ್ರಪಂಚದ ಸ್ಥಾಪನೆ ಮತ್ತು ಪತಿತ ಪ್ರಪಂಚದ ವಿನಾಶ ಮಾಡಿಸುತ್ತಾರೆ
ಮತ್ತು ಮಾಯೆಯ ಮೇಲೆ ಜಯವನ್ನು ಗಳಿಸಿ ಕೊಡುತ್ತಾರೆ. ಇದು ಬೇಹದ್ದಿನ ಮಾತಾಗಿದೆ. ರಾವಣನ ರಾಜ್ಯ ಇಡೀ
ಬೇಹದ್ದಿನ ಪ್ರಪಂಚದ ಮೇಲಿದೆ. ಹದ್ದಿನ ಲಂಕೆಯ ಮಾತಿಲ್ಲ. ಇದು ಸೋಲು-ಗೆಲುವಿನ ಕಥೆಯೂ ಆಗಿದೆ, ಇಡೀ
ಭಾರತದ್ದೇ ಆಗಿದೆ. ಉಳಿದೆಲ್ಲವೂ ಬೈಪ್ಲಾಟ್ ಆಗಿದೆ. ಭಾರತದಲ್ಲಿಯೇ ಡಬಲ್ ಕಿರೀಟಧಾರಿಗಳು ಮತ್ತು
ಸಿಂಗಲ್ ಕಿರೀಟಧಾರಿಗಳು ರಾಜರಾಗುತ್ತಾರೆ ಮತ್ತು ಯಾರೆಲ್ಲಾ ದೊಡ್ಡ-ದೊಡ್ಡ ರಾಜರು ಇದ್ದು
ಹೋಗಿದ್ದಾರೆ, ಯಾರ ಮೇಲೂ ಸಹ ಬೆಳಕಿನ ಕಿರೀಟವಿಲ್ಲ. ಕೇವಲ ದೇವತೆಗಳಿಗೆ ಮಾತ್ರವೇ ಇರುತ್ತದೆ.
ದೇವತೆಗಳಾದರೂ ಸ್ವರ್ಗದ ಮಾಲೀಕರಾಗಿದ್ದರಲ್ಲವೆ. ಈಗ ಶಿವ ತಂದೆಗೆ ಪರಮಪಿತ, ಪತಿತ-ಪಾವನನೆಂದು
ಕರೆಯಲಾಗುತ್ತದೆ. ಇವರಿಗೆ ಬೆಳಕನ್ನು ಹೇಗೆ ತೋರಿಸುತ್ತೀರಿ! ಬೆಳಕು ಇಲ್ಲದ ಪತಿತರಾದಾಗ ಬೆಳಕನ್ನು
ಕೊಡಲಾಗುತ್ತದೆ. ಅವರೆಂದೂ ಬೆಳಕಿಲ್ಲದೇ ಇರಲು ಸಾಧ್ಯವಿಲ್ಲ. ಬಿಂದುವಿನ ಮೇಲೆ ಬೆಳಕನ್ನು ಹೇಗೆ
ಕೊಡಲು ಸಾಧ್ಯ! ಸಾಧ್ಯವಿಲ್ಲ. ದಿನ-ಪ್ರತಿದಿನ ನಿಮಗೆ ಬಹಳ ಗುಹ್ಯ-ಗುಹ್ಯವಾದ ಮಾತನ್ನು
ತಿಳಿಸುತ್ತಿರುತ್ತಾರೆ. ಯಾರು ಎಷ್ಟು ಬೇಕಾದರೂ ಬುದ್ಧಿಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ಬಾಕಿ
ನೆನಪಿನ ಯಾತ್ರೆಯು ಮುಖ್ಯವಾಗಿದೆ. ಇದರಲ್ಲಿ ಮಾಯೆಯ ವಿಘ್ನಗಳು ಬಹಳ ಬರುತ್ತವೆ. ಕೆಲವರು ನೆನಪಿನ
ಚಾರ್ಟ್ನಲ್ಲಿ 50-60% ಎಂದು ಬರೆಯುತ್ತಾರೆ ಆದರೆ ನೆನಪಿನ ಯಾತ್ರೆಯೆಂದು ಯಾವುದಕ್ಕೆ
ಕರೆಯಲಾಗುತ್ತದೆ ಎಂಬುದು ತಿಳಿದುಕೊಂಡೇ ಇರುವುದಿಲ್ಲ. ಈ ಮಾತಿಗೆ ನೆನಪು ಎಂದು ಹೇಳಲಾಗುತ್ತದೆಯೇ?
ಎಂದು ಕೇಳುತ್ತಿರುತ್ತಾರೆ. ಬಹಳ ಕಷ್ಟವಿದೆ. ನೀವು ಇಲ್ಲಿ 10-15 ನಿಮಿಷಗಳ ಕಾಲ
ಕುಳಿತುಕೊಳ್ಳುತ್ತೀರೆಂದರೆ ಅದರಲ್ಲಿಯೇ ಪರಿಶೀಲನೆ ಮಾಡಿಕೊಳ್ಳಿ. ನೆನಪಿನಲ್ಲಿ ಚೆನ್ನಾಗಿ
ಇರುತ್ತೇನೆಯೇ? ಅನೇಕರು ನೆನಪಿನಲ್ಲಿಯೇ ಇರುವುದಿಲ್ಲ ಮತ್ತೆ ವಾತಾವರಣವನ್ನು ಹಾಳು ಮಾಡಿ
ಬಿಡುತ್ತಾರೆ. ನೆನಪಿನಲ್ಲಿರದೇ ಇರುವ ಕಾರಣ ವಿಘ್ನವನ್ನು ಹಾಕುತ್ತಿರುತ್ತಾರೆ. ಇಡೀ ದಿನ ಬುದ್ಧಿಯು
ಹೊರಗಡೆ ಅಲೆಯುತ್ತಿರುತ್ತದೆ ಅಂದಾಗ ಇಲ್ಲಿ ಶಾಂತವಾಗಿರಲು ಹೇಗೆ ಸಾಧ್ಯ, ಆದ್ದರಿಂದ ನೆನಪಿನ
ಚಾರ್ಟನ್ನು ಇಡುವುದಿಲ್ಲ. ಅಸತ್ಯವನ್ನು ಬರೆಯುವುದರಿಂದ ಇನ್ನಷ್ಟು ದಂಡ ಬೀಳುತ್ತದೆ. ಅನೇಕ ಮಕ್ಕಳು
ತಪ್ಪನ್ನು ಮಾಡಿ ಮುಚ್ಚಿಡುತ್ತಾರೆ, ಸತ್ಯವನ್ನು ಹೇಳುವುದಿಲ್ಲ. ತಂದೆಯು ಹೇಳಿದರೂ ಸತ್ಯವನ್ನು
ಹೇಳದೇ ಇದ್ದರೆ ಇಷ್ಟೊಂದು ದೋಷವಾಗುತ್ತದೆ. ಎಂತಹ ದೊಡ್ಡ ಕೊಳಕು ಕರ್ಮವನ್ನು ಮಾಡಿದರೂ ಸಹ
ಸತ್ಯವನ್ನು ಹೇಳುವುದರಲ್ಲಿ ನಾಚಿಕೆಯಾಗುತ್ತದೆ. ಆದಾಗ್ಯೂ ಎಲ್ಲವನ್ನೂ ಸುಳ್ಳನ್ನೇ ಹೇಳುತ್ತಾರೆ.
ಸುಳ್ಳು ಮಾಯೆ, ಸುಳ್ಳು ಕಾಯ....... ಅಲ್ಲವೆ. ಒಮ್ಮೆಲೆ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ.
ಸತ್ಯವನ್ನು ಹೇಳುವುದು ಒಳ್ಳೆಯದೇ ಆಗಿದೆ, ಅನ್ಯರೂ ಸಹ ಕಲಿತುಕೊಳ್ಳುತ್ತಾರೆ. ಇಲ್ಲಿ ಸತ್ಯವನ್ನು
ಹೇಳಬೇಕು. ಜ್ಞಾನದ ಜೊತೆ ಜೊತೆಗೆ ನೆನಪಿನ ಯಾತ್ರೆಯೂ ಸಹ ಅಗತ್ಯವಿದೆ ಏಕೆಂದರೆ ನೆನಪಿನ
ಯಾತ್ರೆಯಿಂದಲೇ ತನ್ನ ಮತ್ತು ವಿಶ್ವದ ಕಲ್ಯಾಣವಾಗಲಿದೆ. ಜ್ಞಾನವನ್ನು ತಿಳಿಸುವುದು ಬಹಳ ಸಹಜವಾಗಿದೆ,
ನೆನಪಿನಲ್ಲಿ ಪರಿಶ್ರಮವಿದೆ. ಬಾಕಿ ಬೀಜದಿಂದ ವೃಕ್ಷವು ಹೇಗೆ ಬರುತ್ತದೆ, ಅದಂತೂ ಎಲ್ಲರಿಗೂ
ತಿಳಿದಿರುತ್ತದೆ. ಬುದ್ಧಿಯಲ್ಲಿ 84 ಜನ್ಮಗಳ ಚಕ್ರವಿದೆ, ಬೀಜ ಮತ್ತು ವೃಕ್ಷದ ಜ್ಞಾನವಂತೂ
ಇರುತ್ತದೆಯಲ್ಲವೆ. ತಂದೆಯಂತೂ ಸತ್ಯ, ಚೈತನ್ಯನಾಗಿದ್ದಾರೆ, ಜ್ಞಾನದ ಸಾಗರನಾಗಿದ್ದಾರೆ. ಅವರಲ್ಲಿ
ಜ್ಞಾನವಿದೆ. ಇದು ಅಸಾಧಾರಣವಾದ ಮಾತಾಗಿದೆ. ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ. ಇದನ್ನೂ ಸಹ
ಯಾರೂ ತಿಳಿದುಕೊಂಡಿಲ್ಲ. ಎಲ್ಲರೂ ನೇತಿ-ನೇತಿ ಎಂದು ಹೇಳುತ್ತಿರುತ್ತಾರೆ. ಕಾಲಾವಧಿಯನ್ನೇ
ತಿಳಿದುಕೊಂಡಿಲ್ಲವೆಂದರೆ ಮತ್ತೇನನ್ನು ತಿಳಿದುಕೊಳ್ಳುತ್ತಾರೆ! ನಿಮ್ಮಲ್ಲಿಯೂ ಸಹ ಬಹಳ ಕಡಿಮೆ ಜನರು
ಚೆನ್ನಾಗಿ ತಿಳಿದುಕೊಂಡಿದ್ದಾರೆ ಆದ್ದರಿಂದ ಸೆಮಿನಾರ್ಗಳಲ್ಲಿ ಕರೆಯುತ್ತಾರೆ. ನಿಮ್ಮ ಸಲಹೆಯನ್ನು
ಕೊಡಿ ಎಂದು ಕೇಳುತ್ತಾರೆ. ಸಲಹೆಯನ್ನಂತೂ ಯಾರು ಬೇಕಾದರೂ ಕೊಡಬಹುದು, ಯಾರ ಹೆಸರಿದೆಯೋ ಅವರೇ ಹೋಗಿ
ಕೊಡಬೇಕೆನ್ನುವುದೇನೂ ಇಲ್ಲ. ನಮ್ಮ ಹೆಸರಿಲ್ಲ, ನಾವು ಹೇಗೆ ಹೇಳುವುದು ಎಂದೇನಿಲ್ಲ. ಯಾರು ಬೇಕಾದರೂ
ಸಹ ಸೇವಾರ್ಥವಾಗಿ ಸಲಹೆಯನ್ನು ಕೊಡುವುದಾಗಲಿ, ಜಾಹೀರಾತುಗಳನ್ನು ಬರೆಯಲು ಸಾಧ್ಯವಿದೆ. ತಂದೆಯು
ತಿಳಿಸುತ್ತಾರೆ - ಯಾವುದೇ ಸಲಹೆ ಬಂದಾಗ ಬರೆಯಿರಿ. ಬಾಬಾ ಈ ಯುಕ್ತಿಯಿಂದ ಸರ್ವೀಸ್ ಬಹಳ
ಹೆಚ್ಚುತ್ತದೆ ಎಂದು ಯಾರಾದರೂ ಸಲಹೆ ಕೊಡಬಹುದು. ಯಾವ-ಯಾವ ಪ್ರಕಾರದ ಸಲಹೆಯನ್ನು ಕೊಟ್ಟಿದ್ದೀರೆಂದು
ನೋಡುತ್ತೇವೆ. ತಂದೆಯಂತೂ ಹೇಳುತ್ತಿರುತ್ತಾರೆ, ಯಾವ ಯುಕ್ತಿಯಿಂದ ನಾವು ಭಾರತದ ಕಲ್ಯಾಣ ಮಾಡುವುದು,
ಎಲ್ಲರಿಗೂ ಸಂದೇಶವನ್ನು ಕೊಡುವುದು ಎಂದು. ಪರಸ್ಪರದಲ್ಲಿ ವಿಚಾರವನ್ನು ತಿಳಿಸಿ, ಬರೆದು ಕಳುಹಿಸಿ.
ಮಾಯೆಯು ಎಲ್ಲರನ್ನು ಮಲಗಿಸಿ ಬಿಟ್ಟಿದೆ. ಯಾವಾಗ ಮೃತ್ಯು ಎದುರಿನಲ್ಲಿ ಬರುತ್ತದೆ, ಆಗ ತಂದೆಯು
ಬರುತ್ತಾರೆ. ಎಲ್ಲರದೂ ವಾನಪ್ರಸ್ಥ ಅವಸ್ಥೆಯಾಗಿದೆ ಎಂದು ತಂದೆಯು ಹೇಳುತ್ತಾರೆ. ಓದಿ ಇಲ್ಲವೆ ಬಿಡಿ
ಆದರೆ ಅವಶ್ಯವಾಗಿ ಎಲ್ಲರೂ ಸಾಯಲೇಬೇಕು. ತಯಾರಿ ಮಾಡಿಕೊಳ್ಳಿ ಇಲ್ಲವೆ ಮಾಡಿಕೊಳ್ಳದೇ ಇರಿ, ಹೊಸ
ಪ್ರಪಂಚವು ಅವಶ್ಯವಾಗಿ ಸ್ಥಾಪನೆಯಾಗಲಿದೆ. ಒಳ್ಳೊಳ್ಳೆಯ ಮಕ್ಕಳೂ ಸಹ ತಮ್ಮ ತಯಾರಿಯನ್ನು
ಮಾಡಿಕೊಳ್ಳುತ್ತಿದ್ದಾರೆ. ಸುಧಾಮನ ಉದಾಹರಣೆಯಲ್ಲಿ ಒಂದು ಹಿಡಿ ಅವಲಕ್ಕಿಯನ್ನು ತೆಗೆದುಕೊಂಡು
ಬಂದನೆಂದು ಗಾಯನವಿದೆ. ಬಾಬಾ, ನಮಗೂ ಸಹ ಮಹಲ್ ಸಿಗಬೇಕು. ಅವರ ಬಳಿಯಿರುವುದೇ ಕೇವಲ ಒಂದು ಹಿಡಿ
ಅವಲಕ್ಕಿಯೆಂದರೆ ಅವರು ತಾನೆ ಏನು ಮಾಡುತ್ತಾರೆ. ಬಾಬಾರವರು ಮಮ್ಮಾರವರ ಉದಾಹರಣೆಯನ್ನು
ಕೊಟ್ಟಿದ್ದಾರೆ, ಮಮ್ಮಾರವರು ಒಂದು ಹಿಡಿ ಅವಲಕ್ಕಿಯನ್ನೂ ಸಹ ತೆಗೆದುಕೊಂಡು ಬರಲಿಲ್ಲ. ನಂತರ ಎಷ್ಟು
ಶ್ರೇಷ್ಠ ಪದವಿಯನ್ನು ಪಡೆದುಕೊಂಡರು. ಇದರಲ್ಲಿ ಹಣದ ಮಾತಿಲ್ಲ. ನೆನಪಿನಲ್ಲಿರಬೇಕು ಮತ್ತು ತನ್ನ
ಸಮಾನ ಮಾಡಿಕೊಳ್ಳಬೇಕು. ಬಾಬಾರವರಿಗಾದರೂ ಯಾವುದೇ ಶುಲ್ಕ (ಫೀಸ್) ಯಾವುದೂ ಇರುವುದಿಲ್ಲ. ನಮ್ಮ ಬಳಿ
ಹಣವಿತ್ತೆಂದರೆ ಅದನ್ನು ಯಜ್ಞ ಸೇವೆಯಲ್ಲಿ ಏಕೆ ಬಳಸಬಾರದು ಎಂದು ತಿಳಿಯುತ್ತಾರೆ. ವಿನಾಶವಂತೂ
ಆಗಿಯೇ ಆಗುತ್ತದೆ. ಎಲ್ಲವೂ ವ್ಯರ್ಥವಾಗಿ ಹೋಗುತ್ತದೆ, ಇದರಲ್ಲಿ ಸ್ವಲ್ಪವಾದರೂ ಸಫಲ
ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಮನುಷ್ಯನೂ ಒಂದಲ್ಲ ಒಂದು ಪ್ರಕಾರದ ದಾನ-ಪುಣ್ಯವನ್ನು ಅವಶ್ಯವಾಗಿ
ಮಾಡುತ್ತಾರೆ. ಅದಾಗಿದೆ ಪಾಪಾತ್ಮರೊಂದಿಗೆ ದಾನ-ಪುಣ್ಯ, ಆದರೂ ಸಹ ಅದರ ಅಲ್ಪಕಾಲದ ಫಲವು ಸಿಗುತ್ತದೆ.
ಈಗ ತಿಳಿದುಕೊಳ್ಳಿ, ಯಾರಾದರೂ ಯುನಿವರ್ಸಿಟಿ, ವಿಶ್ವ ವಿದ್ಯಾಲಯ ಮುಂತಾದುವನ್ನು ಕಟ್ಟಿಸುತ್ತಾರೆ.
ಹಣವು ಹೆಚ್ಚಾಗಿದೆಯೆಂದರೆ ಧರ್ಮಶಾಲೆ ಮುಂತಾದುವನ್ನು ಮಾಡುತ್ತಾರೆ ಅಂತಹವರಿಗೆ ಒಳ್ಳೆಯ ಮನೆಯು
ಸಿಗುತ್ತದೆ. ಆದರೆ ಆರೋಗ್ಯವಾಗಿರಬೇಕೆಂಬುದೇನೂ ಇಲ್ಲ. ಯಾರಾದರೂ ಆಸ್ಪತ್ರೆ, ಮುಂತಾದುವನ್ನು
ಕಟ್ಟಿಸುತ್ತಾರೆಂದರೆ ಒಳ್ಳೆಯ ಆರೋಗ್ಯವಚಿತರಾಗಿರುತ್ತಾರೆ ಆದರೆ ಅದರಲ್ಲಿ ಯಾವುದೇ ಇಚ್ಛೆಗಳು
ಪೂರ್ಣವಾಗುವುದಿಲ್ಲ. ಇಲ್ಲಂತೂ ಬೇಹದ್ದಿನ ತಂದೆಯ ಮೂಲಕ ನಿಮ್ಮ ಎಲ್ಲಾ ಪ್ರಕಾರದ ಕಾಮನೆಗಳು
ಪೂರ್ಣವಾಗುತ್ತವೆ.
ನೀವು
ಪಾವನರಾಗುತ್ತೀರೆಂದರೆ ನಿಮ್ಮ ಎಲ್ಲಾ ಹಣವನ್ನು ವಿಶ್ವವನ್ನು ಪಾವನ ಮಾಡಲು ಉಪಯೋಗಿಸುವುದು
ಒಳ್ಳೆಯದಲ್ಲವೆ! ಮುಕ್ತಿ-ಜೀವನ್ಮುಕ್ತಿಯನ್ನು ಅರ್ಧ ಕಲ್ಪದವರೆಗೆ ಕೊಡುತ್ತಾರೆ! ನಮಗೆ ಶಾಂತಿಯು
ಹೇಗೆ ಸಿಗುವುದೆಂದು ಎಲ್ಲರೂ ಕೇಳುತ್ತಾರೆ, ಅದಂತೂ ಶಾಂತಿಧಾಮದಲ್ಲಿ ಸಿಗುವುದು. ಅದು ಒಂದು
ಧರ್ಮವಿರುವ ಕಾರಣ ಅಲ್ಲಿ ಅಶಾಂತಿಯಿರುವುದಿಲ್ಲ, ಅದು ರಾವಣ ರಾಜ್ಯದಲ್ಲಿರುತ್ತದೆ. ರಾಮ ರಾಜ, ರಾಮ
ಪ್ರಜೆ........ ಎಂಬ ಗಾಯನವಿದೆಯಲ್ಲವೆ. ಅದು ಅಮರಲೋಕವಾಗಿದೆ. ಅಮರಲೋಕದಲ್ಲಿ ಸಾಯುವುದು ಎಂಬ
ಶಬ್ಧವಿರುವುದಿಲ್ಲ. ಇಲ್ಲಂತೂ ಕುಳಿತು-ಕುಳಿತಿದ್ದಂತೆಯೇ ಆಕಸ್ಮಿಕವಾಗಿ ಮರಣ ಹೊಂದುತ್ತಾರೆ,
ಇದಕ್ಕೆ ಮೃತ್ಯುಲೋಕ, ಅದಕ್ಕೆ ಅಮರಲೋಕವೆಂದು ಕರೆಯಲಾಗುತ್ತದೆ. ಅಲ್ಲಿ ಸಾಯುವುದು ಇರುವುದಿಲ್ಲ.
ಹಳೆಯ ಶರೀರವನ್ನು ಬಿಟ್ಟು ನಂತರ ಬಾಲಕನಾಗಿ ಬಿಡುತ್ತಾರೆ, ರೋಗವಿರುವುದಿಲ್ಲ, ಎಷ್ಟೊಂದು
ಲಾಭವಿರುತ್ತದೆ. ಶ್ರೀ ಶ್ರೀರವರ ಮತದಮೇಲೆ ನೀವು ಸದಾಕಾಲಕ್ಕೋಸ್ಕರ ಆರೋಗ್ಯವಂತರಾಗುತ್ತೀರಿ ಅಂದಾಗ
ಇಂತಹ ಆತ್ಮೀಯ ಸೇವಾಕೇಂದ್ರಗಳನ್ನು ಎಷ್ಟೊಂದು ತೆರೆಯಬೇಕು! ಸ್ವಲ್ಪ ಜನರು ಬರುತ್ತಾರೆಂದರೂ ಅದೇನು
ಕಡಿಮೆಯೇನು? ಈ ಸಮಯದಲ್ಲಿ ಯಾವುದೇ ಮನುಷ್ಯರು ಡ್ರಾಮಾದ ಡೈರೆಕ್ಷನ್ ತಿಳಿದುಕೊಂಡಿಲ್ಲ. ನಿಮಗೆ
ಇದನ್ನು ಯಾರು ತಿಳಿಸಿದರು ಎಂದು ಕೇಳುತ್ತಾರೆ. ಅರೆ! ನಮಗೆ ತಿಳಿಸುವಂತಹವರು ತಂದೆಯಾಗಿದ್ದಾರೆ,
ಇಷ್ಟೊಂದು ಜನ ಬಿ.ಕೆ.ಗಳಿದ್ದಾರೆ, ನೀವೂ ಸಹ ಬಿ.ಕೆ. ಆಗಿದ್ದೀರಿ, ಶಿವ ತಂದೆಯ ಮಕ್ಕಳಾಗಿದ್ದೀರಿ.
ಪ್ರಜಾಪಿತ ಬ್ರಹ್ಮಾರವರ ಮಕ್ಕಳಾಗಿದ್ದೀರಿ. ಇವರು ಮನುಕುಲದ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್
ಆಗಿದ್ದಾರೆ. ಇವರಿಂದ ನಾವು ಬಿ.ಕೆ.ಗಳಾಗಿದ್ದೇವೆ. ಮನೆತನಗಳು ಇರುತ್ತವೆಯಲ್ಲವೆ. ನಿಮ್ಮ
ದೇವಿ-ದೇವತಾ ಕುಲವು ಬಹಳ ಸುಖವನ್ನು ಕೊಡುವಂತದ್ದಾಗಿದೆ, ಇಲ್ಲಿ ನೀವು ಉತ್ತಮರಾಗುತ್ತೀರಿ ನಂತರ
ಅಲ್ಲಿ ರಾಜ್ಯವನ್ನು ಮಾಡುತ್ತೀರಿ. ಇದು ಯಾರದೇ ಬುದ್ಧಿಯಲ್ಲಿರಲು ಸಾಧ್ಯವಿಲ್ಲ. ದೇವತೆಗಳ ಪಾದವು
ಈ ತಮೋಪ್ರಧಾನ ಜಗತ್ತಿನಲ್ಲಿ ಇಡಲು ಸಾಧ್ಯವಿಲ್ಲವೆಂದು ನೀವು ಮಕ್ಕಳಿಗೆ ತಿಳಿಸಲಾಗಿದೆ. ಜಡ
ಚಿತ್ರದ ನೆರಳು ಬೀಳಲು ಸಾಧ್ಯವಿದೆ, ಚೈತನ್ಯರ ನೆರಳು ಬೀಳಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳೇ,
ಮೊದಲನೆಯದು ನೆನಪಿನ ಯಾತ್ರೆಯಲ್ಲಿರಿ, ಯಾವುದೇ ವಿಕರ್ಮವನ್ನು ಮಾಡಬೇಡಿ ಮತ್ತು ಸೇವೆಯ
ಯುಕ್ತಿಗಳನ್ನು ರಚಿಸಿ ಎಂದು ತಂದೆಯು ಹೇಳುತ್ತಾರೆ. ಬಾಬಾ, ನಾವು ಲಕ್ಷ್ಮಿ-ನಾರಾಯಣರಂತೆ
ಆಗುತ್ತೇವೆಂದು ಮಕ್ಕಳು ಹೇಳುತ್ತಾರೆ. ನಿಮ್ಮ ಬಾಯಲ್ಲಿ ಗುಲಾಬ್ ಜಾಮೂನ್ ಎಂದು ತಂದೆಯು
ಹೇಳುತ್ತಾರೆ. ಇದಕ್ಕಾಗಿ ಪರಿಶ್ರಮ ಪಡಬೇಕಾಗಿದೆ. ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ತನ್ನ
ಸಮಾನ ಮಾಡಿಕೊಳ್ಳುವ ಸೇವೆ ಮಾಡಿ. ನೀವು ಒಂದು ದಿನ ನೋಡುತ್ತೀರಿ - ಒಬ್ಬೊಬ್ಬ ಮಾರ್ಗದರ್ಶಕನ ಜೊತೆ
100-200 ಯಾತ್ರಿಗಳನ್ನು ಕರೆದುಕೊಂಡು ಬರುತ್ತಾರೆ. ಮುಂದೆ ಹೋದಂತೆ ನೋಡುತ್ತಾ ಇರುತ್ತೀರಿ. ಮೊದಲೇ
ಏನನ್ನಾದರೂ ಹೇಳಲು ಸಾಧ್ಯವಿದೆಯೇ? ಏನೆಲ್ಲಾ ನಡೆಯುತ್ತಿರುತ್ತದೆಯೋ ಅದನ್ನು ನೋಡುತ್ತಿರುತ್ತೀರಿ.
ಇದು ಬೇಹದ್ದಿನ
ನಾಟಕವಾಗಿದೆ. ನಿಮ್ಮದು ತಂದೆಯ ಜೊತೆ ಎಲ್ಲರಿಗಿಂತ ಮುಖ್ಯ ಪಾತ್ರವಾಗಿದೆ, ಹಳೆಯ ಪ್ರಪಂಚವನ್ನು
ಹೊಸದನ್ನಾಗಿ ಮಾಡುತ್ತೀರಿ. ನೀವು ಪುರುಷೋತ್ತಮ ಸಂಗಮಯುಗಿಗಳಾಗಿದ್ದೀರಿ. ನೀವು ಸುಖಧಾಮದ
ಮಾಲೀಕರಾಗುತ್ತೀರಿ. ಅಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ತಂದೆಯು
ದುಃಖಹರ್ತ-ಸುಖಕರ್ತನಾಗಿದ್ದಾರೆ. ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ. ಭಾರತವಾಸಿಗಳು
ಇಷ್ಟೆಲ್ಲಾ ಹಣವಿದೆ, ದೊಡ್ಡ-ದೊಡ್ಡ ಮಹಲಿದೆ, ವಿದ್ಯುತ್ ಇದೆ, ಅಷ್ಟೇ ಇದೇ ಸ್ವರ್ಗವೆಂದು
ತಿಳಿದುಕೊಳ್ಳುತ್ತಾರೆ. ಇದೆಲ್ಲವೂ ಮಾಯೆಯ ಆಡಂಬರವಾಗಿದೆ. ಸುಖಕ್ಕಾಗಿ ಬಹಳ ಸಾಧನಗಳನ್ನು
ಮಾಡುತ್ತಾರೆ. ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟುತ್ತಾರೆ ಆದರೂ ಮೃತ್ಯುವು ಆಕಸ್ಮಿಕವಾಗಿ ಬಂದು
ಬಿಡುತ್ತದೆ. ಅಲ್ಲಿಯಾದರೂ ಮೃತ್ಯುವಿನ ಭಯವಿಲ್ಲ. ಇಲ್ಲಂತೂ ಆಕಸ್ಮಿಕವಾಗಿ ಮರಣ ಹೊಂದುತ್ತಾರೆ
ನಂತರ ಎಷ್ಟೊಂದು ಶೋಕ ಪಡುತ್ತಾರೆ. ನಂತರ ಸಮಾಧಿಯ ಬಳಿ ಹೋಗಿ ಕಣ್ಣೀರನ್ನು ಸುರಿಸುತ್ತಾರೆ.
ಪ್ರತಿಯೊಬ್ಬರದೂ ತಮ್ಮ-ತಮ್ಮದೇ ಆದ ಪದ್ಧತಿಗಳಿವೆ, ಅನೇಕ ಮತಗಳಿವೆ. ಸತ್ಯಯುಗದಲ್ಲಿ ಇಷ್ಟೆಲ್ಲಾ
ಮಾತುಗಳಿರುವುದಿಲ್ಲ. ಅಲ್ಲಿಯಾದರೂ ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತಾರೆ
ಅಂದಾಗ ನೀವು ಎಷ್ಟೊಂದು ಸುಖದಲ್ಲಿ ಹೋಗುತ್ತೀರಿ. ಅದಕ್ಕಾಗಿ ಎಷ್ಟೊಂದು ಪುರುಷಾರ್ಥವನ್ನು ಮಾಡಬೇಕು,
ಹೆಜ್ಜೆ-ಹೆಜ್ಜೆಯಲ್ಲಿ ಸಲಹೆ ಪಡೆದುಕೊಳ್ಳಬೇಕು. ಗುರುವಿನ ಅಥವಾ ಪತಿಯ ಮತವನ್ನು
ತೆಗೆದುಕೊಳ್ಳುತ್ತಾರೆ ಅಥವಾ ತನ್ನ ಮತದಂತೆ ನಡೆಯುತ್ತಾ ಹೋಗುತ್ತಾರೆ. ಆಸುರೀ ಮತವು ಏನು ಕೆಲಸ
ಕೊಡುತ್ತದೆ. ಆಸುರೀ ಕಡೆಯೇ ಅಂಟಿಕೊಳ್ಳುತ್ತಾರೆ. ಈಗ ನಿಮಗೆ ಈಶ್ವರೀಯ ಮತ, ಶ್ರೇಷ್ಠಾತಿ
ಶ್ರೇಷ್ಠವಾದ ಮತ ಸಿಗುತ್ತದೆ. ಆದ್ದರಿಂದ ಶ್ರೀ ಮತ್ಭಗವಾನುವಾಚವೆಂದೂ ಗಾಯನವಿದೆ. ನೀವು ಮಕ್ಕಳು
ಶ್ರೀಮತದಿಂದ ಇಡೀ ವಿಶ್ವವನ್ನು ಪಾವನ ಮಾಡುತ್ತೀರಿ. ಆ ಸ್ವರ್ಗದ ಮಾಲೀಕರಾಗುತ್ತೀರಿ. ಆದ್ದರಿಂದ
ನೀವು ಪ್ರತಿಯೊಂದು ಹೆಜ್ಜೆಯಲ್ಲಿ ಶ್ರೀಮತವನ್ನು ತೆಗೆದುಕೊಳ್ಳುತ್ತಿರಬೇಕು ಆದರೆ ಯಾರ
ಅದೃಷ್ಟದಲ್ಲಿಲ್ಲವೋ ಅಂತಹವರು ಮತದನುಸಾರ ನಡೆಯುವುದಿಲ್ಲ. ತಂದೆಯು ತಿಳಿಸುತ್ತಾರೆ -
ಯಾರಲ್ಲಿಯಾದರೂ ತನ್ನ ಬುದ್ಧಿವಂತಿಕೆಯಿದೆಯೆಂದರೆ, ಸಲಹೆಯಿದೆಯೆಂದರೆ ತಂದೆಗೆ ಕಳುಹಿಸಿಕೊಡಿ.
ಯಾರ್ಯಾರು ಸಲಹೆಯನ್ನು ಕೊಡಲು ಯೋಗ್ಯರಿದ್ದಾರೆ ಎಂಬುದು ತಂದೆಗೆ ತಿಳಿದಿದೆ. ಹೊಸ-ಹೊಸ ಮಕ್ಕಳು
ಹುಟ್ಟುತ್ತಿರುತ್ತಾರೆ. ಯಾರು ಒಳ್ಳೊಳ್ಳೆಯ ಮಕ್ಕಳಿದ್ದಾರೆ ಎಂಬುದು ತಂದೆಗೆ ತಿಳಿದಿದೆ.
ವ್ಯಾಪಾರಸ್ಥರಿಗೂ ಸಹ ಸಲಹೆಯನ್ನು ಕೊಡಬೇಕಾಗಿದೆ. ಈ ರೀತಿ ಪ್ರಯತ್ನ ಪಡುವುದರಿಂದ ತಂದೆಯ ಪರಿಚಯ
ಸಿಗುವುದು. ಅಂಗಡಿಗಳಲ್ಲಿಯೂ ಸಹ ಎಲ್ಲರಿಗೂ ನೆನಪನ್ನು ತರಿಸುತ್ತಾ ಇರಿ - ಭಾರತದಲ್ಲಿ ಯಾವಾಗ
ಸ್ವರ್ಗವಿತ್ತೋ ಆಗ ಒಂದು ಧರ್ಮವಿತ್ತು, ಇದರಲ್ಲಿ ಬೇಸರ ಪಡುವ ಮಾತೇ ಇಲ್ಲ. ಎಲ್ಲರಿಗೂ ಒಬ್ಬರೇ
ತಂದೆಯಿದ್ದಾರೆ. ನನ್ನೊಬ್ಬನನ್ನೇ ನೆನಪು ಮಾಡಿರಿ, ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ,
ಸ್ವರ್ಗಕ್ಕೆ ಮಾಲೀಕರಾಗಿ ಬಿಡುತ್ತೀರಿ ಎಂದು ತಂದೆಯು ಹೇಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಶ್ರೀಮತದಂತೆ
ನಡೆದು ಇಡೀ ವಿಶ್ವವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯನ್ನು ಮಾಡಬೇಕು. ಅನೇಕರನ್ನು ತನ್ನ ಸಮಾನ
ಮಾಡಿಕೊಳ್ಳಬೇಕು. ಆಸುರಿಯ ಮತದಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳಬೇಕು.
2. ನೆನಪಿನ
ಪರಿಶ್ರಮದಿಂದ ಆತ್ಮವನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಬೇಕು. ಸುಧಾಮನ ರೀತಿ ಒಂದು ಹಿಡಿ
ಅವಲಕ್ಕಿಯಿದ್ದರೂ ಸಹ ಅದನ್ನೂ ಸಫಲ ಮಾಡಿ ತಮ್ಮ ಸರ್ವ ಇಚ್ಛೆಗಳನ್ನು ಪೂರ್ಣ ಮಾಡಿಕೊಳ್ಳಬೇಕು.
ವರದಾನ:
ಒಬ್ಬ ತಂದೆಯ
ಹೊರತು ಬೇರೆ ಯಾರೂ ಇಲ್ಲ - ಈ ಧೃಡ ಸಂಕಲ್ಪದ ಮೂಲಕ ಅವಿನಾಶಿ, ಅಮರ ಭವ.
ಯಾವ ಮಕ್ಕಳು ಒಬ್ಬ
ತಂದೆಯ ಹೊರತು ಬೇರೆ ಯಾರೂ ಇಲ್ಲ..... ಎನ್ನುವ ಈ ದೃಢ ಸಂಕಲ್ಪ ಮಾಡುತ್ತಾರೆ ಅವರ ಸ್ಥಿತಿ ಸ್ವತಃ
ಮತ್ತು ಸಹಜವಾಗಿ ಏಕರಸವಾಗಿ ಬಿಡುವುದು. ಇದೇ ದೃಢ ಸಂಕಲ್ಪದಿಂದ ಸರ್ವ ಸಂಬಂಧಗಳ ಅವಿನಾಶಿ ಎಳೆ
ಸೇರಿಕೊಂಡು ಬಿಡುವುದು ಮತ್ತು ಅವರಿಗೆ ಸದಾ ಅವಿನಾಶಿ ಭವ, ಅಮರ ಭವದ ವರದಾನ ಸಿಕ್ಕಿ ಬಿಡುವುದು.
ದೃಢ ಸಂಕಲ್ಪ ಮಾಡುವುದರಿಂದ ಪುರುಷಾರ್ಥದಲ್ಲಿಯೂ ಸಹಾ ವಿಶೇಷ ರೂಪದಿಂದ ಲಿಫ್ಟ್ ಸಿಗುವುದು. ಯಾರಿಗೆ
ಒಬ್ಬ ತಂದೆಯ ಜೊತೆ ಸರ್ವ ಸಂಬಂಧವಿದೆ ಅವರಿಗೆ ಸರ್ವ ಪ್ರಾಪ್ತಿಗಳು ಸ್ವತಃವಾಗಿ ಆಗಿ ಬಿಡುವುದು.
ಸ್ಲೋಗನ್:
ಯೋಚಿಸುವುದು-ಹೇಳುವುದು ಮತ್ತು ಮಾಡುವುದು ಮೂರನ್ನೂ ಒಂದೇ ಸಮಾನ ಮಾಡಿ-ಆಗ ಹೇಳಲಾಗುವುದು
ಸರ್ವೋತ್ತಮ ಪುರುಷಾರ್ಥಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಯಾವ ಸಮಯದಲ್ಲಿ ಯಾವ
ಸಂಬಂಧದ ಅವಶ್ಯಕತೆಯಿದೆಯೋ, ಆ ಸಂಬಂಧದಿಂದ ಭಗವಂತನನ್ನು ತಮ್ಮವರನ್ನಾಗಿಸಿಕೊಳ್ಳಿ. ಹೃದಯದಿಂದ ಹೇಳಿ
ನನ್ನ ಬಾಬಾ, ಮತ್ತು ಬಾಬಾ ಹೇಳುವರು ನನ್ನ ಮಕ್ಕಳೇ, ಇದೇ ಸ್ನೇಹ ಸಾಗರನಲ್ಲಿ ಸಮಾವೇಶವಾಗಿ ಬಿಡಿ.
ಈ ಸ್ನೇಹ ಛತ್ರಛಾಯೆಯ ಕೆಲಸ ಮಾಡುತ್ತದೆ, ಇದರ ಒಳಗಡೆ ಮಾಯೆಯು ಬರಲು ಸಾಧ್ಯವಿಲ್ಲ, ಇದೇ
ಸಹಜಯೋಗಿಯಾಗುವ ಸಾಧನವಾಗಿದೆ.