27.09.26 Avyakt Bapdada
Kannada
Murli 30.11.2011 Om Shanti Madhuban
“ಸದಾ ನಶೆಯಲ್ಲಿದ್ದು
ನಿಶ್ಚಿಂತ ಚಕ್ರವರ್ತಿಯಾಗಿರಿ, ತೀವ್ರ ಪುರುಷಾರ್ಥದ ಮೂಲಕ ಸಂಪನ್ನ ಮತ್ತು ಸಮಾನರಾಗಿ ಜೊತೆಯಲ್ಲಿ
ನಡೆಯುವ ತಯಾರಿ ಮಾಡಿಕೊಳ್ಳಿ.”
ಇಂದು ಬಾಪ್ದಾದಾರವರು
ನಿಶ್ಚಿಂತ ಚಕ್ರವರ್ತಿಗಳ ಸಭೆಯನ್ನು ನೋಡುತ್ತಿದ್ದಾರೆ. ಈ ಸಭೆಯು ಈ ಸಮಯದಲ್ಲಿಯೇ ಸೇರುತ್ತದೆ
ಏಕೆಂದರೆ ಎಲ್ಲಾ ಮಕ್ಕಳು ತನ್ನ ಚಿಂತೆಯನ್ನು ತಂದೆಗೆ ಕೊಟ್ಟು ತಂದೆಯಿಂದ ನಶೆಯನ್ನು
ತೆಗೆದುಕೊಂಡಿದ್ದಾರೆ. ಈ ಸಭೆಯೂ ಈಗಲೇ ಸೇರುತ್ತದೆ. ತಾವೂ ಸಹ ಪ್ರತಿಯೊಬ್ಬರೂ ಮುಂಜಾನೆಯೆದ್ದು
ಕರ್ಮ ಮಾಡುತ್ತಿದ್ದರೂ ನಿಶ್ಚಿಂತ ಮತ್ತು ಚಕ್ರವರ್ತಿಯಾಗಿ ನಡೆಯುತ್ತಿದ್ದೀರಲ್ಲವೆ. ಈ ನಿಶ್ಚಿಂತ
ಜೀವನವು ಎಷ್ಟು ಪ್ರಿಯವೆನಿಸುತ್ತದೆ. ನಿಶ್ಚಿಂತತೆಯ ಚಿಹ್ನೆಯಾಗಿ ಏನು ಕಂಡುಬರುತ್ತದೆ?
ಪ್ರತಿಯೊಬ್ಬರ ಮಸ್ತಕದಲ್ಲಿ ಲೈಟ್, ಆತ್ಮವು ಹೊಳೆಯುತ್ತಿರುವುದು ಕಂಡುಬರುತ್ತದೆ. ಈ ನಿಶ್ಚಿಂತ
ಜೀವನವು ಹೇಗೆನಿಸುತ್ತದೆ? ತಂದೆಯು ಮಕ್ಕಳ ಜೀವನದ ಎಲ್ಲಾ ಚಿಂತೆಯನ್ನು ತೆಗೆದುಕೊಂಡು ನಶೆಯನ್ನು
ಕೊಟ್ಟಿದ್ದಾರೆ. ಯಾರ ಜೀವನದಲ್ಲಿ ನಶೆಯಿಲ್ಲ ಚಿಂತೆಯಿಂದರೆ ಅವರ ಮಸ್ತಕದಲ್ಲಿ ಲೈಟ್
ಹೊಳೆಯುವುದಿಲ್ಲ. ಅವರ ಮಸ್ತಕದಲ್ಲಿ ಹೊರೆಯ ಲಕ್ಷಣಗಳು ಕಂಡುಬರುತ್ತದೆ. ಅಂದಮೇಲೆ ಹೇಳಿ - ತಮಗೆ
ಯಾವುದು ಇಷ್ಟವಾಗುವುದು? ಲೈಟ್ ಅಥವಾ ಹೊರೆ ಇಷ್ಟವಾಗುವುದೇ? ಒಂದುವೇಳೆ ಯಾವುದೇ
ಹೊರೆಯುಂಟಾಗುತ್ತದೆ, ಹೊರೆ ಅರ್ಥಾತ್ ಚಿಂತೆಯನ್ನು ತಂದೆಗೆ ಕೊಟ್ಟು ನಶೆಯನ್ನು ತೆಗೆದುಕೊಳ್ಳಬಹುದು.
ತಮ್ಮೆಲ್ಲರಿಗೂ ನಿಶ್ಚಿಂತ ಜೀವನವು ಪ್ರಿಯವಾಗುತ್ತದೆಯಲ್ಲವೆ. ನೋಡುವಂತಹವರೂ ಸಹ ನಿಶ್ಚಿಂತ
ಜೀವನವನ್ನು ಇಷ್ಟ ಪಡುತ್ತಾರೆ.
ಅಂದಮೇಲೆ ಬಾಪ್ದಾದಾರವರು
ನಾಲ್ಕೂ ಕಡೆಯ ಮಕ್ಕಳು ಸಮ್ಮುಖದಲ್ಲಿರಬಹುದು, ಎಲ್ಲಿಯೇ ಕುಳಿತಿರಬಹುದು, ಮಕ್ಕಳ ಮಸ್ತಕದ
ಮಧ್ಯದಲ್ಲಿ ಹೊಳೆಯುತ್ತಿರುವ ಲೈಟ್ನ್ನೇ ನೋಡುತ್ತಿದ್ದರು. ಅಂದಾಗ ಸದಾ ನಿಶ್ಚಿಂತರಾಗಿರುತ್ತೀರಾ
ಅಥವಾ ಯಾವುದಾದರೂ ಚಿಂತೆಯೂ ಬರುತ್ತದೆಯೇ? ಚಿಂತೆಯಿದೆಯೇ? ತಂದೆಯು ಯಾವಾಗ ಪ್ರಕೃತಿಜೀತ, ವಿಕಾರಗಳ
ಜೀತರನ್ನಾಗಿ ಮಾಡಿದ್ದಾರೆಂದರೆ ಚಿಂತೆಯು ಬರಲು ಹೇಗೆ ಸಾಧ್ಯ? ಅಂದಮೇಲೆ ಕೈಯನ್ನೆತ್ತಿರಿ -
ನಿಶ್ಚಿಂತರಾಗಿದ್ದೀರಾ? ಸದಾ ಇದ್ದೀರಾ? ಸದಾ ಇದ್ದೀರಾ ಅಥವಾ ಕೆಲವೊಮ್ಮೆ ಇರುತ್ತೀರಾ? ಕೆಲವೊಮ್ಮೆ
ಇರುವವರೂ ಇದ್ದೀರಾ? ಕೈಯನ್ನಂತು ಮೇಲೆತ್ತುತ್ತಿಲ್ಲ, ಬಾಪ್ದಾದಾರವರೂ ಸಹ ನೋಡಲು ಬಯಸುವುದಿಲ್ಲ.
ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ನಿಶ್ಚಿಂತ ಚಕ್ರವರ್ತಿಯನ್ನಾಗಿ ನೋಡಲು ಬಯಸುತ್ತಾರೆ.
ಒಂದುವೇಳೆ ಕೆಲವೊಮ್ಮೆ ಇರುವವರೂ ಇರಬಹುದು ಅದಕ್ಕಾಗಿ ಬಹಳ ಸಹಜ ವಿಧಿಯಿದೆ - ಯಾವುದೇ ಅಲ್ಪ
ಸ್ವಲ್ಪ ಚಿಂತೆ ಬರುತ್ತದೆಯೆಂದರೆ ನನ್ನದು ಎಂಬುದನ್ನು ನಿನ್ನದು ಎಂಬುದರಲ್ಲಿ ಪರಿವರ್ತನೆ ಮಾಡಿ
ಬಿಡಿ. ಈ ಅಲ್ಪಕಾಲದ ನನ್ನತನವನ್ನು, ನನ್ನದನ್ನು ನಿನ್ನದು ಎನ್ನುವುದರಲ್ಲಿ ಬದಲಾಯಿಸುವುದು ಬಹಳ
ಸಹಜ ವಿಧಿಯಾಗಿದೆ. ತಾವಂತೂ ‘ನನ್ನ ಬಾಬಾ’ ಎಂದು ಹೇಳುತ್ತೀರಿ ಅಂದಮೇಲೆ ಈಗ ಯಾವುದು ನನ್ನದಾಯಿತು?
ಅಲ್ಪಕಾಲದ ನನ್ನದಂತು ಸಮಾಪ್ತಿಯಾಯಿತಲ್ಲವೆ! ನನ್ನ ಬಾಬಾ ಆಗಿದ್ದಾರಲ್ಲವೆ. ಎಲ್ಲರ ಹೃದಯದಿಂದ ಮೇರಾ
ಬಾಬಾ! ಪ್ಯಾರಾ ಬಾಬಾ! ಮೀಠಾ ಬಾಬಾ ಎಂದು ಹೇಳುತ್ತೀರಲ್ಲವೇ! ಅಂದಮೇಲೆ (ಮೇರಾ) ನನ್ನದರಲ್ಲಿ (ತೇರಾ)
ನಿನ್ನದನ್ನು ಸಮಾವೇಶ ಮಾಡಿಕೊಳ್ಳುವುದು ಕಷ್ಟವಾಗುತ್ತದೆಯೇ? ವ್ಯತ್ಯಾಸವೇನಿದೆ? ತೆ ಮತ್ತು ಮೆ (ನ
ಮತ್ತು ನಿ), ಇಷ್ಟು ಸೂಕ್ಷ್ಮ ವ್ಯತ್ಯಾಸವಿದೆ. ಸಂಕಲ್ಪ ಮಾಡಿದಿರಿ - ಎಲ್ಲವೂ ನಿನ್ನದೇ ಆಗಿದೆ
ಮತ್ತೆ ನನ್ನದೇನಿದೆ? ನನ್ನ ಬಾಬಾ.
ಅಂದಾಗ ಬಾಪ್ದಾದಾ
ನೋಡಿದರು - ಮೆಜಾರಿಟಿ ಮಕ್ಕಳು ಅಲ್ಪಕಾಲದ ನನ್ನದನ್ನು ನಿನ್ನದನ್ನಾಗಿ ಮಾಡಿದ್ದೀರಿ ಆದ್ದರಿಂದ
ಏನಾಗಿ ಬಿಟ್ಟಿರಿ? ನಿಶ್ಚಿಂತ ಚಕ್ರವರ್ತಿ. ಆದ್ದರಿಂದ ಇಂದು ಬಾಪ್ದಾದಾರವರು ಮಕ್ಕಳನ್ನು
ನಿಶ್ಚಿಂತ ಚಕ್ರವರ್ತಿಯ ರೂಪದಲ್ಲಿ ನೋಡುತ್ತಿದ್ದಾರೆ. ನೋಡಿ, ಭಕ್ತಿಮಾರ್ಗದಲ್ಲಿಯೂ ತಮ್ಮ
ಚಿತ್ರಗಳನ್ನು ತಯಾರು ಮಾಡುತ್ತಾರೆ ಆಗ ಡಬಲ್ ಕಿರೀಟವನ್ನು ತೋರಿಸುತ್ತಾರೆ. ಒಂದು ಪ್ರಕಾಶತೆಯ
ಕಿರೀಟವಂತು ಇದ್ದೇ ಇರುತ್ತದೆ ಏಕೆಂದರೆ ನಿಶ್ಚಿಂತ ಆತ್ಮನ ಚಿಹ್ನೆಯಾಗಿದೆ - ಮಸ್ತಕದಲ್ಲಿ ಲೈಟ್
ಹೊಳೆಯುತ್ತಿರುವುದು ಮತ್ತು ಎರಡನೆಯ ಕಿರೀಟ- ವಿಕಾರಗಳ ಮೇಲೆ ವಿಜಯಿಗಳಾಗಿದ್ದೀರಿ ಆದ್ದರಿಂದ
ಕಿರೀಟವನ್ನು ತೋರಿಸಲಾಗಿದೆ ಆದ್ದರಿಂದ ಈ ಗಮನವನ್ನಿಡಿ- ಯಾವಾಗ ಬಾಪ್ದಾದಾರವರು ಚಿಂತೆಯನ್ನು
ತೆಗೆದುಕೊಂಡು ನಶೆಯನ್ನು ಕೊಟ್ಟರು ಆಗ ಏನಾಗಿ ಬಿಟ್ಟಿರಿ? ನಿಶ್ಚಿಂತ ಚಕ್ರವರ್ತಿ.
ಚಕ್ರವರ್ತಿಗಳಾಗಿದ್ದೀರಿ ಅಂದಮೇಲೆ ಸಿಂಹಾಸನವೂ ಬೇಕಲ್ಲವೆ. ಅಂದಮೇಲೆ ಬಾಪ್ದಾದಾರವರು ಮೂರು
ಸಿಂಹಾಸನಗಳ ಮಾಲೀಕರನ್ನಾಗಿ ಮಾಡಿದ್ದಾರೆ. ಮೂರು ಸಿಂಹಾಸನಗಳು ಯಾವುದೆಂದು ತಿಳಿದಿದ್ದೀರಾ? ಒಂದು
ಭೃಕುಟಿಯ ಸಿಂಹಾಸನ, ಇದಂತು ಎಲ್ಲರಿಗೂ ಇದ್ದೇ ಇದೆ. ಎರಡನೆಯ ಸಿಂಹಾಸನವಾಗಿದೆ - ಬಾಪ್ದಾದಾರವರ
ಹೃದಯ ಸಿಂಹಾಸನ ಮತ್ತು ಮೂರನೆಯದಾಗಿದೆ - ವಿಶ್ವದ ಸಿಂಹಾಸನ, ರಾಜ್ಯದ ಸಿಂಹಾಸನ. ಅಂದಮೇಲೆ
ತಮ್ಮೆಲ್ಲರಿಗೆ ಈ ಮೂರು ಸಿಂಹಾಸನಗಳು ಪ್ರಾಪ್ತಿಯಾಗಿದೆಯಲ್ಲವೆ. ಎಲ್ಲದಕ್ಕಿಂತ ಶ್ರೇಷ್ಠವಾಗಿದೆ -
ಬಾಪ್ದಾದಾರವರ ಹೃದಯ ಸಿಂಹಾಸನ. ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿ - ಸಿಂಹಾಸನದಲ್ಲಿ ಇರುತ್ತೀರಾ?
ಏಕೆಂದರೆ ಬಾಪ್ದಾದಾರವರ ಹೃದಯ ಸಿಂಹಾಸನದಲ್ಲಿ ಯಾರು ಕುಳಿತುಕೊಳ್ಳುತ್ತಾರೆ? ಯಾರು ಸದಾ
ಬಾಪ್ದಾದಾರವರನ್ನು ತಮ್ಮ ಹೃದಯ ಸಿಂಹಾಸನದಲ್ಲಿ ಕೂರಿಸಿಕೊಂಡಿದ್ದಾರೆ, ಯಾರು ಸದಾ ಶ್ರೇಷ್ಠ
ಸ್ಥಿತಿಯಲ್ಲಿ ಮಾಸ್ಟರ್ ಸರ್ವಶಕ್ತಿವಂತರಾಗಿದ್ದಾರೆ. ಅಂದಮೇಲೆ ಪರಿಶೀಲಿಸಿ - ಸದಾ
ಸಿಂಹಾಸನಾಧಿಕಾರಿ ಆಗಿದ್ದೀರಾ? ಅಥವಾ ಕೆಲವೊಮ್ಮೆ ಮಣ್ಣಿನಲ್ಲಿಯೂ ಬಂದು ಬಿಡುತ್ತೀರಾ. ಈ ದೇಹಭಾನವು
ಮಣ್ಣಾಗಿದೆ. ಬಹಳ ಸಮಯ ಮಣ್ಣಿನಲ್ಲಿದ್ದಿರಿ ಅಂದಮೇಲೆ ಕೆಲವೊಮ್ಮೆ ಮಣ್ಣಿನಲ್ಲಿ ಹೋಗುವುದಿಲ್ಲವೇ?
ಅಂದಮೇಲೆ ಬಾಪ್ದಾದಾರವರು
ಎಲ್ಲಾ ಮಕ್ಕಳಿಗೆ ಸಮಯದ ಸೂಚನೆಯನ್ನು ಕೊಡುತ್ತಿದ್ದಾರೆ. ಅಚಾನಕ್ನ ಪಾಠವನ್ನು ಪಕ್ಕಾ
ಮಾಡಿಸುತ್ತಿದ್ದಾರೆ ಅದಕ್ಕಾಗಿ ಈ ಸಂಗಮದ ಸಮಯಕ್ಕೆ ಬಹಳ-ಬಹಳ ಮಹತ್ವಿಕೆಯನ್ನಿಡಬೇಕಾಗಿದೆ ಏಕೆಂದರೆ
ಈ ಒಂದು ಜನ್ಮದಲ್ಲಿ ಅನೇಕ ಜನ್ಮಗಳ ಪ್ರಾಲಬ್ಧವಾಗುತ್ತದೆ ಆದ್ದರಿಂದ ಬಾಪ್ದಾದಾರವರು ಸೂಚನೆ
ಕೊಟ್ಟಿದ್ದರು ಅಂದಮೇಲೆ ಸಂಗಮದ ಸಮಯದಲ್ಲಿ ಎರಡು ಮಾತುಗಳ ಪ್ರತಿ ಪ್ರತೀಸಮಯ ಗಮನವನ್ನಿಡಬೇಕಾಗಿದೆ.
ಆ ಎರಡು ಮಾತುಗಳಂತು ನೆನಪಿರಬಹುದು - ಸಮಯ ಮತ್ತು ಸಂಕಲ್ಪ. ಎಲ್ಲರೂ ಬಾಪ್ದಾದಾರವರಿಗೆ
ವ್ಯರ್ಥಸಂಕಲ್ಪವನ್ನು ಕೊಡುವ ಸಂಕಲ್ಪದ ಸಾಹಸವನ್ನಿಟ್ಟಿದ್ದಿರಿ. ಅಂದಮೇಲೆ ಪರಿಶೀಲನೆ ಮಾಡಿ -
ಸಾಹಸವು ಸದಾಕಾಲ ಇದೆಯೇ? ಏಕೆಂದರೆ ಮಕ್ಕಳದು ಒಂದು ಪಟ್ಟು ಸಾಹಸವೆಂದರೆ ತಂದೆಯ ಸಾವಿರ ಪಟ್ಟು
ಸಹಯೋಗವಿರುತ್ತದೆ. ಅಂದಮೇಲೆ ಈಗ ಏನೆಂದು ತಿಳಿಯುತ್ತೀರಿ? ವ್ಯರ್ಥ ಸಂಕಲ್ಪದ ಯಾವ ಸಾಹನವನ್ನಿಟ್ಟು
ತಂದೆಯ ಮುಂದೆ ಸಂಕಲ್ಪ ಮಾಡಿದಿರಿ ಅದು ಅವಿನಾಶಿಯಾಗಿದೆಯೇ? ಏಕೆಂದರೆ ಈ ವ್ಯರ್ಥ ಸಂಕಲ್ಪಗಳಲ್ಲಿ
ಸಮಯವು ಬಹಳ ಕಳೆದು ಹೋಗುತ್ತದೆ ಮತ್ತು ತಮ್ಮ ವರ್ತಮಾನ ಸಮಯದ ಪ್ರಮಾಣ ಕಾರ್ಯವಿದೆ - ವಿಶ್ವದ
ಆತ್ಮರಿಗೆ ಸಂದೇಶವನ್ನು ಕೊಡುವುದು. ಅಂದಮೇಲೆ ವ್ಯರ್ಥ ಸಂಕಲ್ಪಗಳನ್ನು ಸಮಾಪ್ತಿ ಮಾಡಬೇಕಾಗಿದೆ
ಆಗಲೇ ದುಃಖಿ, ಅಶಾಂತ ಆತ್ಮರಿಗೆ ಸುಖ-ಶಾಂತಿಯ ಅನುಭವ ಮಾಡಿಸಲು ಸಾಧ್ಯವಾಗುವುದು. ಬಾಪ್ದಾದಾರವರಿಗೆ
ದುಃಖ ಮಕ್ಕಳನ್ನು ನೋಡಿ ಕರುಣೆಯುಂಟಾಗುತ್ತದೆ. ತಮಗೂ ಸಹ ತಮ್ಮ ಸಹೋದರ-ಸಹೋದರಿಯರನ್ನು ನೋಡಿ
ಕರುಣೆಯಂತು ಉತ್ಪನ್ನವಾಗುತ್ತದೆಯಲ್ಲವೆ!
ಬಾಪ್ದಾದಾರವರು ನೋಡಿದರು
- ವರ್ತಮಾನ ಸಮಯದಲ್ಲಿ ಎಲ್ಲರಿಗೂ ರುಚಿಯಿದೆ, ಯೋಜನೆಗಳನ್ನೂ ಮಾಡಿದ್ದೀರಿ, ಪ್ರಾಕ್ಟಿಕಲ್ ಸಹ
ಮಾಡಿದ್ದೀರಿ, ಈ 75 ವರ್ಷಗಳ ಜುಬಿಲಿಯನ್ನಾಚರಿಸಿದಿರಿ. ಬಾಪ್ದಾದಾರವರು ಇದನ್ನೇ ಬಯಸುತ್ತಾರೆ -
ಭಲೆ ಕಾರ್ಯಕ್ರಮಗಳನ್ನಂತು ಎಲ್ಲರೂ ಚೆನ್ನಾಗಿ ಮಾಡಿದ್ದೀರಿ, ಇದಕ್ಕಾಗಿ ಶುಭಾಷಯಗಳನ್ನೂ
ಕೊಡುತ್ತಿದ್ದೇವೆ ಆದರೆ ಈಗಿನ ಸಮಯದ ಪ್ರಮಾಣ ಬಹಳ ಬೇಗನೆ ಅವರನ್ನು ವಾರಸುಧಾರರನ್ನಾಗಿ ಮಾಡಿ, ಅವರು
ಯಾವುದಾದರೊಂದು ಆಸ್ತಿಗೆ ಅಧಿಕಾರಿಯಾಗಿ ಬಿಡಲಿ. ಚೆನ್ನಾಗಿದೆ, ಚೆನ್ನಾಗಿದೆ ಎಂದು ಬಹಳಷ್ಟು
ಹೇಳುತ್ತಾರೆ, ಬಾಪ್ದಾದಾರವರೂ ಸಹ ಮಕ್ಕಳ ಈ ಸೇವೆಯ ಫಲಿತಾಂಶವನ್ನಂತು ನೋಡಿದರು ಮತ್ತು ಮಕ್ಕಳ
ಪ್ರತಿ ತಂದೆಗೆ ಖುಷಿಯೂ ಇದೆ. ತುಂಬು ಹೃದಯದಿಂದ ಮಾಡುತ್ತಿದ್ದೀರಿ ಮತ್ತು ಈಗ ಸಮಯ ಪ್ರಮಾಣ
ರುಚಿಯಿಂದಲೂ ಕೇಳುತ್ತಾರೆ. ಇಷ್ಟು ಅಂತರವಂತು ಬಂದಿದೆ. ಚೆನ್ನಾಗಿದೆ-ಚೆನ್ನಾಗಿದೆ ಎಂದು
ಅನಿಸಿಕೆಯಿದೆ ಆದರೆ ಸ್ವಯಂನ್ನು ಅಚ್ಚಾ (ಒಳ್ಳೆಯವರನ್ನಾಗಿ) ಮಾಡಿಕೊಂಡು ಅಲ್ಪಸ್ವಲ್ಪ ಆಸ್ತಿಗೆ
ಅಧಿಕಾರಿಯನ್ನಾಗಿ ಮಾಡಿರಿ. ಇದಕ್ಕಾಗಿ ಬಾಪ್ದಾದಾರವರು ಇದಕ್ಕೆ ಮೊದಲೂ ಸಹ ಸೂಚನೆಯನ್ನು
ಕೊಟ್ಟಿದ್ದರು - ಈಗ ಸಮಯದನುಸಾರ ತೀವ್ರ ಪುರುಷಾರ್ಥಿಯಾಗುವ ಅವಶ್ಯಕತೆಯಿದೆ. ತೀವ್ರ
ಪುರುಷಾರ್ಥಿಯಾಗಲು ಮುಖ್ಯ ಪುರುಷಾರ್ಥವಾಗಿದೆ - ಸೆಕೆಂಡಿನಲ್ಲಿ ಬಿಂದುವನ್ನಿಡುವುದು. ಸೆಕೆಂಡ್
ಮತ್ತು ಬಿಂದು, ಎರಡು ಸಮಾನವಿರಲಿ. ಅಂದಮೇಲೆ ಈಗ ಬಾಪ್ದಾದಾರವರು ಮಕ್ಕಳನ್ನು ನಿಶ್ಚಿಂತ
ಚಕ್ರವರ್ತಿಯ ರೂಪದಲ್ಲಿ ನೋಡುತ್ತಿದ್ದಾರೆ. ಈಗ ಇದೇ ರೂಪವನು ಸದಾ ಅನುಭವ ಮಾಡುತ್ತಿರಿ. ಯಾವಾಗ ಏನೇ
ಬರಲಿ ಆಗ ನನ್ನದು ಎಂಬುದನ್ನು ನಿನ್ನದು ಎಂಬುದರಲ್ಲಿ ಸಮಾವೇಶ ಮಾಡಿ ಬಿಡಿ.
ಇಂದು ಬಾಪ್ದಾದಾ ನೋಡಿದರು,
ಗುರುವಾರದ ದಿನವಾಗಿದೆ ಬಹಳ ಮಕ್ಕಳು ಬಾಪ್ದಾದಾರವರ ಬಳಿ ತಲುಪಿದರು ಆಗ ಬಾಪ್ದಾದಾರವರು ಹೇಳಿದರು -
ಸಪ್ತಾಹದ ಎರಡುದಿನ ವಿಶೇಷವಾಗಿದೆ. ಒಂದು ಗುರುವಾರ ಇನ್ನೊಂದು ಭಾನುವಾರ, ಸನ್ಡೇ. ಅಂದಮೇಲೆ
ಗುರುವಾರದ ದಿನ ಗುರುವಿನ ದಿನವಾಗಿದೆ, ಗುರುವಿನಿಂದ ಏನು ಸಿಗುತ್ತದೆ? ವರದಾನ. ಅಂದಮೇಲೆ
ಗುರುವಾರದ ದಿನವು ವರದಾನದ ದಿನ ವಿಶೇಷದಿನವಾಗಿದೆ, ಈ ರೂಪದಿಂದ ಗುರುವಾರವನ್ನಾಚರಿಸಿ.
ಅಮೃತವೇಳೆಯಿಂದಲೇ ಬುದ್ಧಿಯಲ್ಲಿ ಯಾವುದಾದರೂ ಒಂದು ವಿಶೇಷ ವರದಾನವನ್ನು ಇಮರ್ಜ್ ಮಾಡಿಟ್ಟುಕೊಳ್ಳಿ.
ವರದಾನಗಳಂತು ಬಹಳಷ್ಟಿದೆ ಆದರೆ ತಮಗಾಗಿ ವಿಶೇಷ ಒಂದು ವರದಾನವನ್ನು ಬುದ್ಧಿಯಲ್ಲಿಟ್ಟುಕೊಂಡು
ಪರಿಶೀಲನೆ ಮಾಡಿ - ವರದಾನಿ ದಿನದಲ್ಲಿ ವರದಾನ ಸ್ವರೂಪರಾಗಿ, ವರದಾನವನ್ನು ರಿಪೀಟ್ ಮಾಡುವುದಲ್ಲ
ಆದರೆ ವರದಾನದ ಸ್ವರೂಪರಾಗಬೇಕಾಗಿದೆ ಮತ್ತು ಪರಿಶೀಲನೆ ಮಾಡುತ್ತಾ ಇರಬೇಕು- ಇಂದು ಎಷ್ಟು ಸಮಯ
ವರದಾನದ ಸ್ವರೂಪದಲ್ಲಿದ್ದೆನು? ಭಾನುವಾರ ವಿಶೇಷವಾಗಿ ಪ್ರಪಂಚದಲ್ಲಿ ರಜಾ ದಿನವಾಗಿರುತ್ತದೆ.
ಅಂದಮೇಲೆ ಭಾನುವಾರದಂದು ತಮ್ಮ ಜೀವನದಲ್ಲಿ ಸಂಕಲ್ಪದಲ್ಲಿಯೂ ಸಹ ಯಾವುದೇ ಬಲಹೀನತೆಯಿರಬಹುದು,
ಸ್ವಪ್ನದಲ್ಲಿಯೂ ಬಲಹೀನತೆಯಿರಬಹುದು ಅದಕ್ಕೆ ರಜಾ ಕೊಡಬೇಕು. ಹೇಗೆ ಪ್ರಪಂಚದವರು ಇವೆರಡೂ ದಿನವನ್ನು
ಚೆನ್ನಾಗಿ ವ್ಯತೀತ ಮಾಡುತ್ತಾರೆ ಹಾಗೆಯೇ ತಾವೂ ಸಹ ಇವೆರಡು ದಿನಗಳಲ್ಲಿ ವಿಶೇಷವಾಗಿ ಈ ಲಕ್ಷ್ಯ
ಮತ್ತು ಲಕ್ಷಣವಿರಲಿ. ಕೇವಲ ಲಕ್ಷ್ಯವಲ್ಲ ಆದರೆ ಲಕ್ಷ್ಯದ ಜೊತೆಗೆ ಲಕ್ಷಣದ ಬಗ್ಗೆಯೂ ಗಮನವನ್ನಿಡಿ.
ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಪ್ರತಿಜ್ಞೆಯನ್ನು ಮಾಡಿದ್ದಾರೆ
ಆದ್ದರಿಂದ ಜೊತೆಯಲ್ಲಿ ನಡೆಯಲು ಯಾವ ತಯಾರಿ ಮಾಡಿಕೊಳ್ಳಬೇಕಾಗಿದೆ? ತಂದೆಯಂತು ಸೆಕೆಂಡಿನಲ್ಲಿ
ಅಶರೀರಿಯಾಗಿ ಬಿಡುತ್ತಾರೆ ಆದರೆ ತಾವು ಯಾವ ಪ್ರತಿಜ್ಞೆಯನ್ನು ಮಾಡಿದ್ದೀರಿ, ತಂದೆಯೂ ಸಹ
ಜೊತೆಯಲ್ಲಿ ನಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಅಂದಮೇಲೆ ಪರಿಶೀಲನೆ ಮಾಡಿ- ಇದರ
ತಯಾರಿಯಾಗಿದೆಯೇ? ಸೆಕೆಂಡಿನಲ್ಲಿ ಬಿಂದುವನ್ನಿಡುವುದು, ಸಂಪನ್ನ ಮತ್ತು ಸಂಪೂರ್ಣರಾಗಿ ಹೊರಡುವುದು
- ಇಂತಹ ತಯಾರಿಯಿದೆಯೇ? ಜೊತೆಯಲ್ಲಂತು ನಡೆಯುತ್ತೀರಲ್ಲವೆ! ನಡೆಯಬೇಕಲ್ಲವೇ? ಕತ್ತನ್ನು ಅಲುಗಾಡಿಸಿ.
ನಡೆಯಬೇಕು, ಒಳ್ಳೆಯದು. ಪಕ್ಕಾ ಇದ್ದೀರಾ? ಕೈಯಲ್ಲಿ ಕೈಯನ್ನು ಕೊಡುವುದರ ಅರ್ಥವಾಗಿದೆ -
ಸಮಾನರಾಗುವುದು. ಅಂದಮೇಲೆ ಪರಿಶೀಲಿಸಿಕೊಳ್ಳಿ - ಸಮಯವಂತು ಅಚಾನಕ್ ಬರುವುದಿದೆ, ಯಾರು ಜೊತೆಯಲ್ಲಿ
ನಡೆಯುತ್ತೀರಿ ಅದಕ್ಕಾಗಿ ಇಷ್ಟೂ ತಯಾರಿಯಿದೆಯೇ?
ತಂದೆಗೆ ಮಕ್ಕಳೊಂದಿಗೆ
ಪ್ರೀತಿಯಿದೆಯಲ್ಲವೆ. ಅಂದಾಗ ತಂದೆಯು ಒಬ್ಬರನ್ನೂ ಜೊತೆಯಲ್ಲಿ ನಡೆಯುವುದರಿಂದ ಹಿಂದೆ ಬಿಡಲು ಇಷ್ಟ
ಪಡುವುದಿಲ್ಲ. ಜೊತೆಯಲ್ಲಿದ್ದೇವೆ, ಜೊತೆಯಲ್ಲಿರುತ್ತೇವೆ, ಜೊತೆಯಲ್ಲಿ ನಡೆಯುತ್ತೇವೆ ಮತ್ತು
ಜೊತೆಯಲ್ಲಿ ರಾಜಧಾನಿಯಲ್ಲಿ ರಾಜಾ ಮನೆತನದಲ್ಲಿ ಬರುತ್ತೇವೆ. ಒಪ್ಪಿಗೆಯಿದೆಯಲ್ಲವೆ! ಒಪ್ಪಿಗೆಯೇ?
ತಯಾರಿಯಾಗಿದ್ದೀರಾ? ಒಪ್ಪಿಗೆಯಿದೆ ಎನ್ನುವುದರಲ್ಲಂತು ಕೈಯನ್ನೆತ್ತುತ್ತೀರಿ, ಈ ಕೈಯನ್ನು
ಮೇಲೆತ್ತಬಾರದು. ತಯಾರಾಗಿದ್ದೇವೆ ಎನ್ನುವುದರಲ್ಲಿ ಕೈಯನ್ನೆತ್ತಿರಿ. ಉದ್ದವಾಗಿ ಕೈಯನ್ನೆತ್ತಿರಿ.
ಒಳ್ಳೆಯದು - ನಾಳೆ ವಿನಾಶವಾದರೆ ತಯಾರಾಗಿದ್ದೀರಾ? ಆದರೆ ತಮ್ಮ ಸೇವೆಯನ್ನು ಸಮಾಪ್ತಿ ಮಾಡಿದ್ದೀರಾ?
ಸೇವೆಯಂತು ಈಗಲೂ ಬಹಳ ಉಳಿದುಕೊಂಡಿದೆಯೇ? ಸೇವೆಯ ಸಮಾಪ್ತಿಯಾಯಿತೇ? ಎಲ್ಲರಿಗೂ ಸಂದೇಶವು ತಲುಪಿದೆಯೇ?
ಕೇವಲ ತಮ್ಮ ಸ್ಥಾನಗಳಲ್ಲಿಯೇ ನೋಡಿ, ತಾವು ಪ್ರತಿಯೊಬ್ಬರಿಗೂ ಈ ಸಂದೇಶವನ್ನು ಕೊಟ್ಟಿದ್ದೀರಾ -
ತಂದೆಯು ಬಂದಿದ್ದಾರೆ, ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತೆಗೆದುಕೊಳ್ಳಿ? ಈಗ ಯೋಜನೆಯನ್ನು
ತಯಾರು ಮಾಡುತ್ತಿದ್ದೀರಿ. ಬಾಪ್ದಾದಾ ಕೇಳಿದ್ದಾರೆ - ಮನೆ-ಮನೆಯಲ್ಲಿ ಸಂದೇಶ ಕೊಡುವ ಯೋಜನೆಯನ್ನು
ಮಾಡುತ್ತಿದ್ದೀರಿ. ಒಳ್ಳೆಯದು, ಸಂದೇಶವನ್ನಂತು ಕೊಡಲೇಬೇಕಾಗಿದೆ, ಇಲ್ಲವೆಂದರೆ ತಮಗೆ ದೂರು
ಸಿಗುತ್ತದೆ. ಕಾರ್ಯಕ್ರಮಗಳನ್ನಂತು ಮಾಡಿದ್ದೀರಲವೆ! ಎದ್ದೇಳಿ, ತಂದೆಗೆ ಯೋಜನೆಯನ್ನು
ತಿಳಿಸಿದ್ದೀರಲ್ಲವೆ! ಎದ್ದೇಳಿ. (ಮೀಡಿಯಾ ವರ್ಗದವರು ಎದ್ದುನಿಂತರು) ಒಳ್ಳೆಯದು - ದೂರುಗಳನ್ನು
ಪೂರ್ಣ ಮಾಡಿ ಬಿಡಿ ಏಕೆಂದರೆ ಅಚಾನಕ್ ಆಗುವುದಿದೆ. ಅಂದಾಗ ಪರಸ್ಪರ ಸೇರಿ ಇದೇ ಪ್ಲಾನ್ನ್ನು
ಪ್ರಾಕ್ಟಿಕಲ್ನಲ್ಲಿ ತನ್ನಿರಿ. ಪರಸ್ಪರದಲ್ಲಿ ಸಲಹೆ-ಅಭಿಪ್ರಾಯಗಳನ್ನು ಬೇಗನೆ ತೆಗೆದುಕೊಳ್ಳಿ,
ಸಮಯ ಹಿಡಿಸುತ್ತದೆಯಲ್ಲವೆ ಆದ್ದರಿಂದ ಉಮ್ಮಂಗವೂ ಸ್ವಲ್ಪ ಕಡಿಮೆಯಾಗಿ ಬಿಡುತ್ತದೆ. ಉಳಿದಂತೆ
ಬಾಪ್ದಾದಾರವರಿಗೆ ಒಪ್ಪಿಗೆಯಾಗಿದೆ - ಮನೆ-ಮನೆಯಲ್ಲಿ ಈ ದೂರುಗಳು ಪೂರ್ಣವಾಗಿ ಬಿಡಲಿ ಆಗ ನಮಗಂತು
ಗೊತ್ತೇ ಇಲ್ಲ, ತಂದೆಯು ಬಂದರು ಮತ್ತು ಹೊರಟು ಹೋದರು, ವಂಚಿತರಾಗಿ ಬಿಟ್ಟೆವು. ಎಲ್ಲರಿಗೂ
ಉಮ್ಮಂಗವಿದೆಯಲ್ಲವೆ! ಎಲ್ಲರಿಗೂ ಉಮ್ಮಂಗವಿದೆಯೇ? ಸೇವೆ ಮಾಡಿ ದೂರುಗಳನ್ನು ಪೂರ್ಣಗೊಳಿಸಿ.
ಉಮ್ಮಂಗವಿದೆಯೆಂದರೆ ಬಾಪ್ದಾದಾರವರ ಸಹಯೋಗವೂ ಇದೆ. ಒಳ್ಳೆಯದು.
ಅಂದಮೇಲೆ ಬಾಪ್ದಾದಾರವರ
ಹೃದಯದ ಆಸೆಯನ್ನಂತು ಎಲ್ಲರೂ ತಿಳಿದು ಕೊಂಡಿದ್ದೀರಿ. ಸಮಾನ ಮತ್ತು ಸಂಪೂರ್ಣ, ಇವೆರಡು ಶಬ್ಧಗಳನ್ನು
ಸದಾ ಪರಿಶೀಲನೆ ಮಾಡಿ ಕೊಳ್ಳುತ್ತೀರೆಂದರೆ ತಂದೆಯ ಈ ಆಶೆಯು ಪೂರ್ಣವಾಗುವುದಿಲ್ಲವೇ? ಏಕೆಂದರೆ ಬಾಪ್
ದಾದಾರವರು ಪ್ರತಿಯೊಂದು ಮಗುವನ್ನು ತಂದೆಯ ಆಶಾ ನಕ್ಷತ್ರವೆಂದು ತಿಳಿಯುತ್ತಾರೆ. ಪ್ರತಿಯೊಂದು
ಮಗುವಿಗೆ ತಂದೆಯೊಂದಿಗೆ ಪ್ರೀತಿಯಿದೆ, ಇದನ್ನಂತು ಬಾಪ್ದಾದಾರವರೂ ತಿಳಿದುಕೊಂಡಿದ್ದಾರೆ.
ಇವೆಲ್ಲರನ್ನೂ ಮಧುಬನದಲ್ಲಿ ಕರೆತರುವುದು ಏನಾಗಿದೆ? ಈ ಪ್ರೀತಿಯ ರೈಲಿನಲ್ಲಿ ಬರುತ್ತಾರೆ.
ಪ್ರೀತಿಯ ವಿಮಾನದಲ್ಲಿ ಬರುತ್ತಾರೆ. ಅಂದಮೇಲೆ ತಂದೆಯೂ ಸಹ ಮಕ್ಕಳ ಪ್ರೀತಿಯ ಸಬ್ಜೆಕ್ಟ್ನಲ್ಲಿ
ಮಕ್ಕಳ ಕಡೆಯಿಂದ ಖುಷಿಯಿದೆ. ಆದರೆ ಯಾವ ಎರಡು ಶಬ್ಧಗಳನ್ನು ತಂದೆಯು ಬಯಸುತ್ತಾರೆ- ಸಮಾನ ಮತ್ತು
ಸಂಪೂರ್ಣ, ಇದನ್ನೂ ಸಹ ಸಂಪನ್ನ ಮಾಡಲೇ ಬೇಕಾಗಿದೆ.
1500 ನಿಮಿತ್ತ
ಶಿಕ್ಷಕಿಯರು ಬಂದಿದ್ದಾರೆ:
ನಿಮಿತ್ತ
ಶಿಕ್ಷಕಿಯರನ್ನಂತು ಬಾಪ್ದಾದಾರವರು ಸದಾ ನೆನಪು ಮಾಡುತ್ತಾರೆ, ಪ್ರೀತಿಯೂ ಮಾಡುತ್ತಾರೆ ಏಕೆಂದರೆ
ನಿಮಿತ್ತ ಶಿಕ್ಷಕಿಯರು ಪ್ರತಿಯೊಬ್ಬ ಸಹೋದರ-ಸಹೋದರಿಯರನ್ನು ಮುಂದುವರೆಸಲು ನಿಮಿತ್ತರಾಗುತ್ತಾರೆ.
ನಿಮಿತ್ತರನ್ನು ಬಾಪ್ದಾದಾರವರು ಗುರು ಭಾಯಿ ಎಂದು ಹೇಳುತ್ತಾರೆ. ಗುರು ಭಾಯಿಯ ಅರ್ಥವಾಗಿದೆ -
ಸಮಾನ. ಏಕೆಂದರೆ ಹೇಗೆ ತಂದೆಯ ಕರ್ತವ್ಯವಾಗಿದೆ - ಸದಾ ಸೇವೆಯಲ್ಲಿ ಬ್ಯುಜಿಯಾಗಿರುವುದು, ಹಾಗೆಯೇ
ಯೋಗ್ಯ ನಿಮಿತ್ತ ಶಿಕ್ಷಕಿಯರು ತಂದೆಯ ಸಮಾನ ಸದಾ ಸೇವಾಧಾರಿ ಮತ್ತು ಸದಾ ಸಫಲತಾ ಸ್ವರೂಪರಾಗಿ ಸಫಲ
ಸ್ವರೂಪವನ್ನಾಗಿ ಮಾಡುವಂತಹವರಾಗಿದ್ದಾರೆ. ಬಾಪ್ದಾದಾರವರಿಗೆ ನಿಮಿತ್ತ ಶಿಕ್ಷಕಿಯರ ಪ್ರತಿ ಸದಾಕಾಲ
ಹೃದಯದ ಪ್ರೀತಿಯಿದೆ. ಏಕೆ? ನಿಮಿತ್ತ ಶಿಕ್ಷಕಿ ಅರ್ಥಾತ್ ಸದಾ ಸೇವಾಧಾರಿ, ಸದಾ ತಂದೆಯ
ಸಮಾನರನ್ನಾಗಿ ಮಾಡುವ ಮತ್ತು ಹೊಸಬರಿಗೆ ತಂದೆಯ ಪರಿಚಯವನ್ನು ಕೊಟ್ಟು ಅನುಭವಿಯನ್ನಾಗಿ ಮಾಡಿ
ತಂದೆಯ ಆಸ್ತಿಗೆ ಅಧಿಕಾರಿಯನ್ನಾಗಿ ಮಾಡುವವರಾಗಿದ್ದಾರೆ. ಅಂದಮೇಲೆ ಬಾಪ್ದಾದಾರವರು ನಿಮಿತ್ತ
ಶಿಕ್ಷಕಿಯರ ಪ್ರತಿ ಖುಷಿಯಿದೆ ಮತ್ತು ಇದೇ ಹೃದಯದ ಪ್ರೀತಿ, ತಂದೆಯ ಪ್ರೀತಿಯನ್ನು
ವಿದ್ಯಾರ್ಥಿಗಳಲ್ಲಿಯೂ ತುಂಬಿಸಿ ಅವರನ್ನೂ ತಂದೆಯ ಪೂರ್ಣ ಆಸ್ತಿಗೆ ಅಧಿಕಾರಿಯನ್ನಾಗಿ
ಮಾಡುವವರಾಗಿದ್ದಾರೆ. ತಂದೆಗೆ ಪ್ರತಿಯೊಬ್ಬ ನಿಮಿತ್ತ ಶಿಕ್ಷಕಿಯರಲ್ಲಿ ಭರವಸೆಯಿರುತ್ತದೆ - ಈ
ಪ್ರತಿಯೊಬ್ಬ ನಿಮಿತ್ತ ಶಿಕ್ಷಕಿಯರು ತಂದೆಯ ಯಾವ ಆಸೆಗಳಿದೆ, ತಂದೆಯ ಯಾವ ಬಯಕೆಯಿದೆ ಅದನ್ನು
ಪ್ರತ್ಯಕ್ಷಗೊಳಿಸುವ ಹಾಗೂ ಪ್ರತ್ಯಕ್ಷ ಮಾಡಿಸುವವರಾಗಿದ್ದಾರೆ ಆದ್ದರಿಂದ ಒಬ್ಬೊಬ್ಬರಿಗೂ
ಬಾಪ್ದಾದಾರವರು ಪದಮಗುಣದಷ್ಟು ಶುಭಾಷಯಗಳನ್ನು ಕೊಡುತ್ತಿದ್ದಾರೆ. ಶುಭಾಷಯಗಳನ್ನು ಕೊಡುತ್ತಿದ್ದಾರೆ.
ಒಳ್ಳೆಯದು.
ಡಬಲ್ ವಿದೇಶಿ
ಸಹೋದರ-ಸಹೋದರಿಯರೊಂದಿಗೆ:
ಡಬಲ್ ವಿದೇಶದವರನ್ನೂ ಸಹ ಬಾಪ್ದಾದಾರವರು ನೋಡಿದರು - ಸೇವೆಯಲ್ಲಿ ಭಾರತದ ಆತ್ಮರಿಗಿಂತ
ಕಡಿಮೆಯೇನಿಲ್ಲ. ಬಾಪ್ದಾದಾರವರಿಗೆ ಖುಷಿಯಾಗುತ್ತದೆ- ಪ್ರತಿಯೊಬ್ಬರೂ ತಮ್ಮ-ತಮ್ಮ ಸ್ಥಾನಗಳಲ್ಲಿ
ಸೇವೆಯನ್ನೂ ವೃದ್ಧಿ ಮಾಡುತ್ತಿದ್ದೀರಿ ಮತ್ತು ಸ್ವಯಂನ್ನೂ ಸಹ ಒಳ್ಳೆಯ ಉಮ್ಮಂಗ-ಉತ್ಸಾಹದಲ್ಲಿ
ನಡೆಸುತ್ತಿದ್ದೀರಿ. ಡಬಲ್ ವಿದೇಶದವರ ಈ ಸಂಸ್ಕಾರವಿದೆ - ಏನನ್ನು ಮಾಡುವರು ಅದನ್ನು
ಉಮ್ಮಂಗ-ಉತ್ಸಾಹದಿಂದ ಮಾಡಿ ಪೂರ್ಣಗೊಳಿಸುತ್ತಾರೆ ಮತ್ತು ಪುರುಷಾರ್ಥದ ಕಡೆಯೂ ಗಮನವಿರುತ್ತದೆ.
ಅಂದಮೇಲೆ ಎಲ್ಲರೂ ತೀವ್ರ ಪುರುಷಾರ್ಥಿಗಳಾಗಿದ್ದೀರಾ? ಕೈಯನ್ನಿತ್ತಿರಿ. ತೀವ್ರ ಪುರುಷಾರ್ಥಿ
ಆಗಿದ್ದೀರಾ? ಒಳ್ಳೆಯದು – ಎಲ್ಲರ ಕಡೆಯಿಂದಲೂ ಬಹಳ-ಬಹಳ ಶುಭಾಷಯಗಳು - ಏಕೆ? ತೀವ್ರ ಪುರುಷಾರ್ಥಿ
ಅರ್ಥಾತ್ ಬಾಪ್ದಾದಾರವರ ಆಸೆಗಳನ್ನು ಪೂರ್ಣಗೊಳಿಸಿ ಪ್ರಾಕ್ಟಿಕಲ್ ಮಾಡುವಂತಹವರಾಗಿದ್ದೀರಿ
ಆದ್ದರಿಂದ ಬಾಪ್ದಾದಾರವರು ತೀವ್ರ ಪುರುಷಾರ್ಥಕ್ಕಾಗಿ ಶುಭಾಷಯಗಳನ್ನು ಕೊಡುತ್ತಿದ್ದಾರೆ. ತೀವ್ರ
ಪುರುಷಾರ್ಥಿ ಆಗಿದ್ದೀರಿ ಮತ್ತು ಸದಾ ತೀವ್ರ ಪುರುಷಾರ್ಥಿಯಾಗಿ ಅನ್ಯರನ್ನೂ ತೀವ್ರ
ಪುರುಷಾರ್ಥಿಯನ್ನಾಗಿ ಮಾಡುತ್ತೀರಿ. ಅಂದಮೇಲೆ ಪೂರ್ಣವಿದೇಶವು ತೀವ್ರ ಪುರುಷಾರ್ಥಿಯ ಲಿಸ್ಟ್ನಲ್ಲಿ
ಬಂದು ಬಿಡಲಿ. ಇಂತಹ ರಿಕಾರ್ಡ್ ಸ್ವಲ್ಪ ಮಂದಿಯದಿದೆ ಮತ್ತು ಸ್ವಲ್ಪ ತೋರಿಸಬೇಕಾಗಿದೆ. ಆದರೆ
ಬಾಪ್ದಾದಾರವರು ಪುರುಷಾರ್ಥದ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಮುರುಳಿಯ ಪ್ರತಿ ಗಮನವೂ ಇದೆ,
ಬಾಪ್ದಾದಾರವರಿಗೆ ಈ ಮುರುಳಿಯ ಸ್ನೇಹವು ಚೆನ್ನಾಗಿದೆಯೆನಿಸುತ್ತದೆ. ಮಧುಬನದ ಪ್ರತಿಯೂ ಪ್ರೀತಿಯಿದೆ,
ಮುರುಳಿಯೊಂದಿಗೂ ಪ್ರೀತಿಯಿದೆ, ಪರಿವಾರದೊಂದಿಗೂ ಪ್ರೀತಿಯಿದೆ ಮತ್ತು ನನ್ನ ಬಾಬಾನೊಂದಿಗೂ
ಪ್ರೀತಿಯಿದೆ. ಈಗ ಸೂಕ್ಷ್ಮ ಪುರುಷಾರ್ಥದ ಕಡೆಯೂ ಒಳ್ಳೆಯ ಗಮನವಿರಲಿ ಮತ್ತು ಬಾಪ್ದಾದಾರವರು
ನೋಡಿದರು - ಜನಕ್ ಮಗುವಿಗೂ ಸಹ ಬಹಳ ಗಮನವಿದೆ. ಇಲ್ಲಿರುತ್ತಲೂ ಪ್ರತೀ ಕ್ಲಾಸ್ ಮಾಡುವಮೊದಲು
ವಿದೇಶಕ್ಕೆ ತಲುಪಿಸುತ್ತಾರೆ. ಅಂದಮೇಲೆ ಪಾಲನೆಯೂ ಚೆನ್ನಾಗಿ ಸಿಗುತ್ತಿದೆ. ಇದೂ ಸಹ ತಮ್ಮ
ಭಾಗ್ಯವಾಗಿದೆ. ಲಕ್ಕಿಯೆಸ್ಟ್ ಮತ್ತು ಸ್ವೀಟೆಸ್ಟ್ ಎರಡೂ ಆಗಿದ್ದೀರಿ. ಒಳ್ಳೆಯದು.
ಮೊದಲ ಬಾರಿ ಬಂದಿರುವವರ
ಪ್ರತಿ: ಇವರಂತು
ಬಹಳಮಂದಿಯಿದ್ದಾರೆ. ಕೈಯನ್ನು ಅಲುಗಾಡಿಸಿ. ಎಲ್ಲರೂ ತಮ್ಮ ಮಧುಬನ ಮನೆಯಲ್ಲಿ ಬಂದಿದ್ದೀರಿ,
ಅದಕ್ಕಾಗಿ ಬಾಪ್ದಾದಾರವರು ಒಂದೊಂದು ಮಗುವಿಗೆ ಶುಭಾಷಯಗಳನ್ನು ಕೊಡುತ್ತಿದ್ದಾರೆ ಏಕೆಂದರೆ ಅಂತಿಮ
ಸಮಯಕ್ಕೆ ಮೊದಲೇ ತಲುಪಿದ್ದೀರಿ. ಲಾಸ್ಟ್ ಸೋ ಫಾಸ್ಟ್ ಹೋಗುವ ಅವಕಾಶವಿದೆ. ಬಾಪ್ದಾದಾರವರು
ಮಕ್ಕಳನ್ನು ನೋಡಿ ಖುಷಿ ಪಡುತ್ತಿದ್ದಾರೆ. ಭಲೆ ಬಂದಿದ್ದೀರಿ ಮತ್ತು ಮುಂದೆ ಹೋಗಲು ಈಗ ತೀವ್ರ
ಪುರುಷಾರ್ಥ ಮಾಡಿ ಬಹಳಷ್ಟು ಮುಂದುವರೆಯುವ ಧೃಡ ಸಂಕಲ್ಪ ಮಾಡಿ. ಧೃಡತೆಯು ಸಫಲತೆಯ ಬೀಗದ ಕೈ ಆಗಿದೆ.
ಅಂದಮೇಲೆ ಬಾಪ್ದಾದಾರವರು ಇಂದು ಯಾರೆಲ್ಲಾ ಮಕ್ಕಳು ಬಂದಿದ್ದೀರಿ ಅವರಿಗೆ ವಿಶೇಷವಾಗಿ ಧೃಡತೆಯ
ಬೀಗದ ಕೈಯನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ. ಧೃಡತೆಯನ್ನು ಎಂದಿಗೂ ಹಗುರ ಮಾಡಬಾರದು. ಧೃಡತೆಯು
ತಮ್ಮನ್ನು ಸದಾ ಸಹಜವಾಗಿ ಮುಂದುವರೆಸುತ್ತಿರುತ್ತದೆ. ಅಂದಮೇಲೆ ಬಾಪ್ದಾದಾರವರಿಗೆ ಖುಷಿಯಿದೆ - ಭಲೆ
ಬಂದಿದ್ದೀರಿ, ತಮ್ಮ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಿ, ಇದಕ್ಕಾಗಿ ಬಹಳ-ಬಹಳ ಶುಭಾಷಯಗಳು.
ಒಳ್ಳೆಯದು.
ನಾಲ್ಕೂ ಕಡೆಯ
ಸರ್ವಬ್ರಾಹ್ಮಣರಿಗೆ ಬಾಪ್ದಾದಾರವರ ಹೃದಯದ ಪ್ರೀತಿ ಮತ್ತು ಸದಾ ಮುಂದುವರೆಯುವ ಶ್ರೇಷ್ಠ
ಸಂಕಲ್ಪವನ್ನು ಕೊಡುತ್ತಿದ್ದಾರೆ. ಒಂದೊಂದು ಮಗುವನ್ನು ನೋಡುತ್ತಿದ್ದಾರೆ ಮತ್ತು ನೋಡಿ-ನೋಡಿ
ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುತ್ತಿದ್ದಾರೆ. ಸಮೀಪದಲ್ಲಿರುವವರಂತು ಬಾಪ್ದಾದಾರವರನ್ನು
ಸನ್ಮುಖದಲ್ಲಿ ನೋಡುತ್ತಿದ್ದಾರೆ ಮತ್ತು ತಾವೆಲ್ಲರೂ ಸಾಧನಗಳ ಮೂಲಕ ಸನ್ಮುಖದಲ್ಲಿಯೇ
ನೋಡುತ್ತಿದ್ದೀರಿ. ಬಾಪ್ದಾದಾರವರೂ ಸಹ ಎಲ್ಲರನ್ನೂ ಎಲ್ಲಿಯೇ ಕುಳಿತಿರಬಹುದು ಆದರೆ ಸನ್ಮುಖದಲ್ಲಿ
ಕುಳಿತಿರುವಂತೆ ನೋಡುತ್ತಿದ್ದಾರೆ ಮತ್ತು ಒಂದೊಂದು ಮಗುವಿಗೆ ಹೃದಯದ ಪ್ರೀತಿಯನ್ನು
ಕೊಡುತ್ತಿದ್ದಾರೆ. ಮುಂದುವರೆಯುತ್ತಿರಿ, ತೀವ್ರ ಪುರುಷಾರ್ಥ ಮಾಡಿ ಬಹಳ ಮುಂದೆ ಸಾಗುತ್ತಿರಿ.
ಒಳ್ಳೆಯದು.
ಸನ್ಮುಖದಲ್ಲಿ
ಕುಳಿತಿರುವವರಿಗೂ ಸಹ ಬಾಪ್ದಾದಾರವರು ನೆನಪು-ಪ್ರೀತಿ ಹಾಗೂ ಸದಾ ಮುಂದುವರೆಯುವ ಶುಭಾಷಯಗಳು,
ಶುಭಾಷಯಗಳು, ಶುಭಾಷಯಗಳು. ಒಳ್ಳೆಯದು.
ವರದಾನ:
ಪ್ರತಿಯೊಂದು
ಶಿಕ್ಷಣವನ್ನು ಸ್ವರೂಪದಲ್ಲಿ ತರುತ್ತಾ ಪ್ರಮಾಣ ಕೊಡುವಂತಹ ಸುಪುತ್ರ ಅಥವಾ ಸಾಕ್ಷಾತ್ಕಾರ ಮೂರ್ತಿ
ಭವ.
ಯಾವ ಮಕ್ಕಳು ತನ್ನ
ಬುದ್ಧಿಯಲ್ಲಿ ಶಿಕ್ಷಣಗಳನ್ನು ಕೇವಲ ಶಿಕ್ಷಣದ ರೀತಿಯಿಂದ ಇಟ್ಟುಕೊಳ್ಳುವುದಿಲ್ಲ ಆದರೆ ಅದನ್ನು
ಸ್ವರೂಪದಲ್ಲಿ ತರುತ್ತಾರೆಯೋ ಅವರು ಜ್ಞಾನ ಸ್ವರೂಪ, ಪ್ರೇಮ ಸ್ವರೂಪ, ಆನಂದ ಸ್ವರೂಪ ಸ್ಥಿತಿಯಲ್ಲಿ
ಸ್ಥಿತರಾಗುತ್ತಾರೆ. ಯಾರು ಪ್ರತಿಯೊಂದು ಜ್ಞಾನ ಬಿಂದುಗಳನ್ನು ಸ್ವರೂಪದಲ್ಲಿ ತರುತ್ತಾರೆಯೋ ಅವರೇ
ಬಿಂದು ರೂಪದಲ್ಲಿ ಸ್ಥಿತರಾಗಲು ಸಾಧ್ಯವಾಗುವುದು. ಜ್ಞಾನ ಬಿಂದುಗಳ ಮನನ ಅಥವಾ ವರ್ಣನೆ ಮಾಡುವುದು
ಸಹಜ, ಆದರೆ ಸ್ವರೂಪರಾಗುತ್ತಾ, ಅದನ್ನು ಅನ್ಯ ಆತ್ಮರಿಗೂ ಅನುಭವ ಮಾಡಿಸುವುದೇ ಪ್ರಮಾಣ
ಕೊಡುವುದಾಗಿದೆ ಅರ್ಥಾತ್ ಸುಪುತ್ರ ಅಥವಾ ಸಾಕ್ಷಾತ್ಕಾರ ಮೂರ್ತಿಯಾಗುವುದು.
ಸ್ಲೋಗನ್:
ಏಕಾಗ್ರತೆಯ
ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುತ್ತೀರೆಂದರೆ, ಮನಸ್ಸು-ಬುದ್ಧಿಯ ಅಲೆದಾಟವು ಸ್ಥಗಿತಗೊಳ್ಳುತ್ತದೆ.
ಅವ್ಯಕ್ತ ಸೂಚನೆ:- ಈಗ
ತಮ್ಮ ದಾತಾ ಸ್ವರೂಪವನ್ನು ಪ್ರತ್ಯಕ್ಷ ಮಾಡಿಕೊಳ್ಳಿ.
ಯಾವುದೇ ನಿರ್ಬಲ ಆತ್ಮ
ನಿಮ್ಮ ಸಮ್ಮುಖದಲ್ಲಿ ಬರುತ್ತದೆ ಅಂದರೆ ಅವರಿಗೆ ಬಲ ಕೊಡಿ. ಯಾವ ಸರ್ವ ಶಕ್ತಿಗಳ ಆಸ್ತಿಯನ್ನು
ಪ್ರಾಪ್ತಿ ಮಾಡಿಕೊಂಡಿದ್ದೀರಿ ಅದನ್ನು ಅವರಿಗೆ ಕೊಡಿ. ಸರ್ವ ಆತ್ಮಗಳಿಗೆ ತಂದೆಯ ಖಜಾನೆಯನ್ನು
ಕೊಡುವಂತಹ ದಾತ ಆಗಿ, ತಮ್ಮ ಶಕ್ತಿಗಳ ಮೂಲಕ ಬಾಯಾರಿರುವ ಆತ್ಮಗಳಿಗೆ ಪ್ರಾಣ ದಾನ ಕೊಡಿ, ವರದಾತ ಆಗಿ
ಪ್ರಾಪ್ತಿ ಆಗಿರುವಂತಹ ವರದಾನಗಳ ಮೂಲಕ ಅವರನ್ನು ತಂದೆಯ ಸಮೀಪ ಸಂಬಂಧದಲ್ಲಿ ತೆಗೆದುಕೊಂಡು ಬನ್ನಿ.
ಇಲ್ಲಿನ ದಾತಾತನದ ಸಂಸ್ಕಾರ ದಿಂದ ಭವಿಷ್ಯದಲ್ಲಿ 21 ಜನ್ಮಗಳಿಗಾಗಿ ರಾಜ್ಯ ಪದವಿ
ಪ್ರಾಪ್ತಿಯಾಗುತ್ತದೆ.