28.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನಿಮ್ಮ
ಪ್ರೀತಿಯು ವಿನಾಶಿ ಶರೀರಗಳೊಂದಿಗೆ ಇರಬಾರದು, ಒಬ್ಬ ವಿದೇಹಿ ತಂದೆಯನ್ನು ಪ್ರೀತಿ ಮಾಡಿ, ದೇಹವನ್ನು
ನೋಡಿಯೂ ನೋಡದಂತಿರಿ”
ಪ್ರಶ್ನೆ:
ಬುದ್ಧಿಯನ್ನು
ಸ್ವಚ್ಛಮಾಡಿಕೊಳ್ಳುವ ಪುರುಷಾರ್ಥವೇನಾಗಿದೆ? ಸ್ವಚ್ಛಬುದ್ಧಿಯವರ ಚಿಹ್ಹೆಗಳೇನು?
ಉತ್ತರ:
ದೇಹೀ-ಅಭಿಮಾನಿಯಾಗುವುದರಿಂದಲೇ ಬುದ್ಧಿಯು ಸ್ವಚ್ಛವಾಗುತ್ತದೆ, ಇಂತಹ ದೇಹೀ-ಅಭಿಮಾನಿ ಮಕ್ಕಳು
ತಮ್ಮನ್ನು ಆತ್ಮವೆಂದು ತಿಳಿದು ಒಬ್ಬ ತಂದೆಯನ್ನು ಪ್ರೀತಿ ಮಾಡುತ್ತಾರೆ, ತಂದೆಯಿಂದಲೇ ಕೇಳುತ್ತಾರೆ
ಆದರೆ ಯಾರು ಮೂಡಮತಿಗಳಿದ್ದಾರೆಯೋ ಅವರು ದೇಹವನ್ನೇ ಪ್ರೀತಿ ಮಾಡುತ್ತಾರೆ, ದೇಹವನ್ನೇ
ಶೃಂಗರಿಸುತ್ತಿರುತ್ತಾರೆ.
ಓಂ ಶಾಂತಿ.
ಓಂ ಶಾಂತಿ ಎಂದು ಯಾರು ಹೇಳಿದರು ಮತ್ತು ಯಾರು ಕೇಳಿದರು? ಬೇರೆ ಸತ್ಸಂಗಗಳಲ್ಲಂತೂ ಜಿಜ್ಞಾಸುಗಳು
ಕೇಳುತ್ತಾರೆ. ಮಹಾತ್ಮ ಅಥವಾ ಗುರುಗಳು ಹೇಳಿದರೆಂದು ಹೇಳುತ್ತಾರೆ. ಇಲ್ಲಿ ಪರಮಾತ್ಮನು ತಿಳಿಸಿದರು
ಮತ್ತು ಆತ್ಮವು ಕೇಳಿತು. ಹೊಸಮಾತಾಯಿತಲ್ಲವೆ. ದೇಹೀ-ಅಭಿಮಾನಿಗಳಾಗಬೇಕಾಗಿದೆ. ಕೆಲವರು ಇಲ್ಲಿಯೂ
ಸಹ ದೇಹಾಭಿಮಾನಿಗಳಾಗಿ ಕುಳಿತುಕೊಳ್ಳುತ್ತಾರೆ, ನೀವು ಮಕ್ಕಳು ದೇಹೀ-ಅಭಿಮಾನಿಗಳಾಗಿ
ಕುಳಿತುಕೊಳ್ಳಬೇಕು, ನಾನಾತ್ಮನು ಈ ಶರೀರದಲ್ಲಿ ವಿರಾಜಮಾನನಾಗಿದ್ದೇನೆ. ಶಿವತಂದೆಯು ನಮಗೆ
ತಿಳಿಸುತ್ತಾರೆ ಎಂಬುದು ಬುದ್ಧಿಯಲ್ಲಿ ಚೆನ್ನಾಗಿ ನೆನಪಿರಬೇಕು. ನಾನಾತ್ಮನ ಸಂಬಂಧವು ಪರಮಾತ್ಮನ
ಜೊತೆಯಿದೆ. ಪರಮಾತ್ಮನು ಬಂದು ಈ ಶರೀರದ ಮೂಲಕ ತಿಳಿಸುತ್ತಾರೆ, ಇವರು ದಲ್ಲಾಳಿಯಾದರು. ನಿಮಗೆ
ತಿಳಿಸಿಕೊಡುವವರು ತಂದೆಯಾಗಿದ್ದಾರೆ, ಇವರಿಗೂ ಸಹ ಆಸ್ತಿಯನ್ನು ತಂದೆಯೇ ಕೊಡುತ್ತಾರೆ ಅಂದಮೇಲೆ
ಬುದ್ಧಿಯು ಅವರಕಡೆ ಇರಬೇಕು. ತಿಳಿದುಕೊಳ್ಳಿ, ತಂದೆಗೆ 5-7 ಮಂದಿ ಮಕ್ಕಳಿದ್ದರೆ ಅವರೆಲ್ಲರ
ಬುದ್ಧಿಯು ತಂದೆಯ ಕಡೆಯಿರುತ್ತದೆಯಲ್ಲವೆ. ಏಕೆಂದರೆ ತಂದೆಯಿಂದ ಆಸ್ತಿಯು ಸಿಗಬೇಕಾಗಿದೆ,
ಸಹೋದರನಿಂದ ಆಸ್ತಿಯು ಸಿಗುವುದಿಲ್ಲ. ಯಾವಾಗಲೂ ತಂದೆಯಿಂದಲೇ ಸಿಗುತ್ತದೆ. ಆತ್ಮನಿಂದ ಆತ್ಮನಿಗೆ
ಆಸ್ತಿಯು ಸಿಗುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಆತ್ಮದ ರೂಪದಲ್ಲಿ ನಾವೆಲ್ಲರೂ
ಸಹೋದರ-ಸಹೋದರರಾಗಿದ್ದೇವೆ, ನಾವೆಲ್ಲಾ ಆತ್ಮಗಳ ಸಂಬಂಧವು ಒಬ್ಬ ಪರಮಪಿತ ಪರಮಾತ್ಮನ ಜೊತೆಯಿದೆ.
ಅವರು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ನನ್ನೊಬ್ಬನ ಜೊತೆಯಲ್ಲಿ ಪ್ರೀತಿಯನ್ನಿಡಿ,
ರಚನೆಯ ಜೊತೆಯಿಟ್ಟುಕೊಳ್ಳಬೇಡಿ. ದೇಹೀಅಭಿಮಾನಿಗಳಾಗಿ. ನನ್ನ ವಿನಃ ಮತ್ತ್ಯಾವುದೇ ದೇಹಧಾರಿಯನ್ನು
ನೆನಪು ಮಾಡುತ್ತೀರೆಂದರೆ ಅದಕ್ಕೆ ದೇಹಾಭಿಮಾನವೆಂದು ಹೇಳಲಾಗುತ್ತದೆ. ಭಲೆ ಈ ದೇಹಧಾರಿಯು (ಬ್ರಹ್ಮಾ)
ನಿಮ್ಮ ಸನ್ಮುಖದಲ್ಲಿದ್ದಾರೆ ಆದರೆ ನೀವು ಇವರನ್ನು ನೋಡಬೇಡಿ. ಬುದ್ಧಿಯಲ್ಲಿ ತಂದೆಯ ನೆನಪೇ ಇರಬೇಕು.
ಅವರಂತೂ ಕೇವಲ ನಾಮಮಾತ್ರಕ್ಕೆ ನಾವು ಸಹೋದರ-ಸಹೋದರರೆಂದು ಹೇಳುತ್ತಾರೆ ಆದರೆ ನೀವೀಗ ಯಥಾರ್ಥವಾಗಿ
ತಿಳಿದುಕೊಂಡಿದ್ದೀರಿ - ನಾವಾತ್ಮರು ಪರಮಪಿತ ಪರಮಾತ್ಮನ ಸಂತಾನರಾಗಿದ್ದೇವೆ. ಆಸ್ತಿಯು ಪರಮಾತ್ಮ
ತಂದೆಯಿಂದ ಸಿಗುತ್ತದೆ. ಆ ತಂದೆಯು ತಿಳಿಸುತ್ತಾರೆ - ನಿಮ್ಮ ಪ್ರೀತಿಯು ನನ್ನೊಬ್ಬನ ಜೊತೆಯಿರಬೇಕು.
ನಾನೇ ಸ್ವತಃ ಬಂದು ನೀವಾತ್ಮಗಳನ್ನು ನನ್ನ ಜೊತೆ ನಿಶ್ಚಿತಾರ್ಥ ಮಾಡಿಸುತ್ತೇನೆ.
ದೇಹಧಾರಿಯೊಂದಿಗಿನ ನಿಶ್ಚಿತಾರ್ಥವಲ್ಲ. ಮತ್ತೆಲ್ಲಾ ಸಂಬಂಧಗಳು ದೇಹದ ಸಂಬಂಧಗಳಾಗಿವೆ. ಈ ಸಮಯದಲ್ಲಿ
ನೀವು ದೇಹೀಅಭಿಮಾನಿಗಳಾಗಬೇಕಾಗಿದೆ. ನಾವಾತ್ಮಗಳು ತಂದೆಯಿಂದ ಕೇಳುತ್ತೇವೆ, ಬುದ್ಧಿಯು ತಂದೆಯ ಕಡೆ
ಹೋಗಬೇಕು, ತಂದೆಯು ಇವರ (ಬ್ರಹ್ಮಾ) ಆತ್ಮನ ಪಕ್ಕದಲ್ಲಿ ಕುಳಿತು ನಮಗೆ ಜ್ಞಾನವನ್ನು ತಿಳಿಸುತ್ತಾರೆ.
ಅವರು ಶರೀರವನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಆತ್ಮವು ಈ ಶರೀರರೂಪಿ ಮನೆಯಲ್ಲಿ ಬಂದು
ಪಾತ್ರವನ್ನಭಿನಯಿಸುತ್ತದೆ. ಆತ್ಮವು ಪಾತ್ರವನ್ನಭಿನಯಿಸುವುದಕ್ಕಾಗಿ ತನ್ನನ್ನು ಶರೀರವೆಂಬ
ಮನೆಯಲ್ಲಿ ಬಂಧಿಸಿಕೊಳ್ಳುತ್ತದೆ. ಇರುವುದು ಸ್ವತಂತ್ರವಾಗಿಯೇ ಆದರೆ ಇದರಲ್ಲಿ ಪ್ರವೇಶ ಮಾಡಿ
ತನ್ನನ್ನು ಈ ಮನೆಯಲ್ಲಿ ಬಂಧಿಸಿಕೊಂಡು ಪಾತ್ರವನ್ನಭಿನಯಿಸುತ್ತದೆ. ಆತ್ಮವೇ ಒಂದು ಶರೀರವನ್ನು
ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ಪಾತ್ರವನ್ನಭಿನಯಿಸುತ್ತದೆ. ಈ ಸಮಯದಲ್ಲಿ ಯಾರೆಷ್ಟು
ದೇಹೀ-ಅಭಿಮಾನಿಯಾಗಿರುತ್ತೀರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಈ ಬಾಬಾರವರ
ಶರೀರದೊಂದಿಗೂ ನಿಮಗೆ ಅಂಶಮಾತ್ರವೂ ಪ್ರೀತಿಯಿರಬಾರದು. ಈ ಶರೀರವು ಯಾವುದೇ ಪ್ರಯೋಜನಕ್ಕಿಲ್ಲ. ನಾನು
ಈ ಶರೀರದಲ್ಲಿ ಕೇವಲ ನಿಮಗೆ ತಿಳಿಸುವುದಕ್ಕಾಗಿಯೇ ಪ್ರವೇಶಿಸುತ್ತೇನೆ. ಇದು ರಾವಣರಾಜ್ಯ,
ಪರದೇಶವಾಗಿದೆ. ರಾವಣನನ್ನು ಸುಡುತ್ತಾರೆ ಆದರೆ ತಿಳಿದುಕೊಂಡಿಲ್ಲ. ಯಾವುದೆಲ್ಲಾ ಚಿತ್ರಗಳನ್ನು
ಮಾಡುತ್ತಾರೆಯೋ ಅದನ್ನು ಅರಿತುಕೊಂಡಿಲ್ಲ. ಸಂಪೂರ್ಣ ಮೂಢಮತಿಗಳಾಗಿದ್ದಾರೆ. ರಾವಣರಾಜ್ಯದಲ್ಲಿ
ಎಲ್ಲರೂ ಮೂಢಮತಿಗಳಾಗಿಬಿಡುತ್ತಾರೆ, ದೇಹಾಭಿಮಾನಿಯಾಗಿದ್ದಾರಲ್ಲವೆ. ತುಚ್ಛಬುದ್ಧಿಯವರಾಗಿದ್ದಾರೆ.
ತಂದೆಯು ತಿಳಿಸುತ್ತಾರೆ - ಯಾರು ಮೂಢಮತಿಗಳಾಗಿದ್ದಾರೆಯೋ ಅವರು ದೇಹವನ್ನೇ ನೆನಪು
ಮಾಡುತ್ತಿರುತ್ತಾರೆ, ದೇಹದೊಂದಿಗೇ ಪ್ರೀತಿಯನ್ನಿಟ್ಟುಕೊಳ್ಳುತ್ತಾರೆ. ಯಾರು ಸ್ವಚ್ಛಬುದ್ಧಿಯವರೋ
ಅವರು ತಮ್ಮನ್ನು ಆತ್ಮವೆಂದು ತಿಳಿದು ಪರಮಾತ್ಮನನ್ನು ನೆನಪು ಮಾಡಿ. ಪರಮಾತ್ಮನಿಂದಲೇ ಕೇಳುತ್ತಾರೆ,
ಇದರಲ್ಲಿಯೇ ಪರಿಶ್ರಮವಿದೆ. ಇದಂತೂ ತಂದೆಯ ರಥವಾಗಿದೆ, ಅನೇಕರಿಗೆ ಈ ರಥದೊಂದಿಗೆ
ಪ್ರೀತಿಯುಂಟಾಗಿಬಿಡುತ್ತದೆ. ಹೇಗೆ ಹುಸೇನನ ಕುದುರೆಯು ಇದೆ ಅದಕ್ಕೆ ಎಷ್ಟೊಂದು ಶೃಂಗರಿಸುತ್ತಾರೆ.
ಈಗ ಮಹಿಮೆಯಂತೂ ಹುಸೇನನಿಗೇ ಇದೆಯಲ್ಲವೆ, ಕುದುರೆಗಲ್ಲ. ಅವಶ್ಯವಾಗಿ ಮನುಷ್ಯನ ತನುವಿನಲ್ಲಿಯೇ
ಹುಸೇನ (ಭಗವಂತ) ನ ಆತ್ಮವು ಬಂದಿರಬೇಕಲ್ಲವೆ. ಅವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಈಗ ಇದಕ್ಕೆ
ರಾಜಸ್ವ ಅಶ್ವಮೇಧ ಅವಿನಾಶಿ ರುದ್ರಜ್ಞಾನಯಜ್ಞವೆಂದು ಹೇಳಲಾಗುತ್ತದೆ. ಅಶ್ವ ಎಂಬ ಹೆಸರನ್ನು ಕೇಳಿ
ಅವರು ಕುದುರೆಯೆಂದು ತಿಳಿದುಕೊಂಡಿದ್ದಾರೆ, ಅದನ್ನು ಸ್ವಾಹಾ ಮಾಡುತ್ತಾರೆ. ಇವೆಲ್ಲವೂ
ಭಕ್ತಿಮಾರ್ಗದ ಕಥೆಗಳಾಗಿವೆ. ಈಗ ನಿಮ್ಮನ್ನು ಸುಂದರರನ್ನಾಗಿ ಮಾಡುವ ಯಾತ್ರಿಕನು ಈ
ತಂದೆಯಾಗಿದ್ದಾರಲ್ಲವೆ.
ನೀವು
ತಿಳಿದುಕೊಂಡಿದ್ದೀರಿ - ಮೊದಲು ನಾವು ಸುಂದರರಾಗಿದ್ದೆವು, ಈಗ ಕಪ್ಪಾಗಿದ್ದೇವೆ. ಆತ್ಮಗಳು
ಮೊಟ್ಟಮೊದಲಿಗೆ ಬಂದಾಗ ಸತೋಪ್ರಧಾನರಾಗಿರುತ್ತಾರೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ.
ತಂದೆಯು ಬಂದು ಎಲ್ಲರನ್ನೂ ಸುಂದರರನ್ನಾಗಿ ಮಾಡುತ್ತಾರೆ. ಯಾರೆಲ್ಲಾ ಧರ್ಮಸ್ಥಾಪಕರು ಬರುತ್ತಾರೆಯೋ
ಅವರೆಲ್ಲರೂ ಸುಂದರ ಆತ್ಮಗಳಾಗಿದ್ದಾರೆ. ನಂತರ ಕಾಮಚಿತೆಯ ಮೇಲೆ ಕುಳಿತು ಕಪ್ಪಾಗಿಬಿಡುತ್ತಾರೆ.
ಮೊದಲು ಸುಂದರ ನಂತರ ಶ್ಯಾಮನಾಗುತ್ತಾರೆ. ಇವರೇ ನಂಬರ್ವನ್ನಲ್ಲಿ ಮೊಟ್ಟಮೊದಲಿಗೆ ಬರುತ್ತಾರೆ.
ಆದ್ದರಿಂದ ಎಲ್ಲರಿಗಿಂತ ಹೆಚ್ಚು ಸುಂದರನಾಗುತ್ತಾರೆ. ಈ ಲಕ್ಷ್ಮೀ-ನಾರಾಯಣರಿಗಿರುವ ಸ್ವಾಭಾವಿಕ
ಸೌಂದರ್ಯವು ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಇದು ಜ್ಞಾನದ ಮಾತಾಗಿದೆ. ಭಲೆ ಕ್ರಿಶ್ಚಿಯನ್ನರು
ಭಾರತವಾಸಿಗಳಿಗಿಂತಲೂ ಸುಂದರರಾಗಿದ್ದಾರೆ ಏಕೆಂದರೆ ಅವರು ಹೊರದೇಶದವರಾಗಿದ್ದಾರೆ ಆದರೆ
ಸತ್ಯಯುಗದಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ. ಆತ್ಮ ಮತ್ತು ಶರೀರ ಎರಡೂ ಸುಂದರವಾಗಿರುತ್ತದೆ.
ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಮತ್ತೆ ತಂದೆಯು ಬಂದು ಎಲ್ಲರನ್ನೂ ಸುಂದರರನ್ನಾಗಿ
ಮಾಡುತ್ತಾರೆ. ಮೊದಲು ಸತೋಪ್ರಧಾನ, ಪವಿತ್ರರಾಗಿದ್ದವರೇ ನಂತರ ಇಳಿಯುತ್ತಾ-ಇಳಿಯುತ್ತಾ
ಕಾಮಚಿತೆಯನ್ನೇರಿ ಕಪ್ಪಾಗಿಬಿಡುತ್ತಾರೆ. ಈಗ ತಂದೆಯು ಎಲ್ಲಾ ಆತ್ಮಗಳನ್ನು ಪವಿತ್ರರನ್ನಾಗಿ ಮಾಡಲು
ಬಂದಿದ್ದಾರೆ. ತಂದೆಯನ್ನು ನೆನಪು ಮಾಡುವುದರಿಂದಲೇ ಪಾವನರಾಗುತ್ತೀರಿ ಆದ್ದರಿಂದ ಒಬ್ಬರನ್ನೇ ನೆನಪು
ಮಾಡಬೇಕು, ದೇಹಧಾರಿಯೊಂದಿಗೆ ಪ್ರೀತಿಯನ್ನಿಡಬಾರದು. ಬುದ್ಧಿಯಲ್ಲಿ ಇದು ನೆನಪಿರಲಿ - ನಾವು ಒಬ್ಬ
ತಂದೆಯ ಮಕ್ಕಳಾಗಿದ್ದೇವೆ. ಅವರೇ ಸರ್ವಸ್ವವೂ ಆಗಿದ್ದಾರೆ. ಈ ಕಣ್ಣಿಗೆ ಕಾಣುತ್ತಿರುವವರೆಲ್ಲರೂ
ವಿನಾಶವಾಗುತ್ತಾರೆ, ಈ ಕಣ್ಣುಗಳೂ ವಿನಾಶವಾಗುತ್ತದೆ. ಪರಮಪಿತ ಪರಮಾತ್ಮನಿಗೆ ತ್ರಿನೇತ್ರಿ ಎಂದು
ಹೇಳಲಾಗುತ್ತದೆ. ಅವರಿಗೆ ಜ್ಞಾನದ ಮೂರನೆಯ ನೇತ್ರವಿದೆ, ತ್ರಿನೇತ್ರಿ, ತ್ರಿಕಾಲದರ್ಶಿ,
ತ್ರಿಲೋಕಿನಾಥನೆಂಬ ಬಿರುದು ಅವರಿಗೇ ಸಿಕ್ಕಿದೆ. ಈಗ ನಿಮಗೆ ಮೂರೂಲೋಕಗಳ ಜ್ಞಾನವಿದೆ ಮತ್ತೆ ಇದು
ಪ್ರಾಯಃಲೋಪವಾಗಿಬಿಡುತ್ತದೆ ಆದ್ದರಿಂದ ಯಾರಲ್ಲಿ ಜ್ಞಾನವಿದೆಯೋ ಅವರೇ ಬಂದು ಕೊಡುತ್ತಾರೆ. ನಿಮಗೆ
ತಂದೆಯು 84 ಜನ್ಮಗಳ ಜ್ಞಾನವನ್ನು ತಿಳಿಸುತ್ತಾರೆ. ಹೇಳುತ್ತಾರೆ - ತಮ್ಮನ್ನು ಆತ್ಮನೆಂದು
ತಿಳಿಯಿರಿ, ನಿಮ್ಮನ್ನು ಪಾವನರನ್ನಾಗಿ ಮಾಡಲು ನಾನು ಈ ಶರೀರದಲ್ಲಿ (ಬ್ರಹ್ಮಾ) ಪ್ರವೇಶ ಮಾಡಿ
ಬಂದಿದ್ದೇನೆ. ನನ್ನನ್ನು ನೆನಪು ಮಾಡುವುದರಿಂದಲೇ ಪಾವನರಾಗುತ್ತೀರಿ, ಮತ್ತ್ಯಾರನ್ನು ನೆನಪು
ಮಾಡಿದರೂ ಸತೋಪ್ರಧಾನರಾಗಲು ಸಾಧ್ಯವಿಲ್ಲ, ಪಾಪಗಳು ಭಸ್ಮವಾಗುವುದಿಲ್ಲ. ಆಗಲೇ ವಿನಾಶಕಾಲೇ ವಿಪರೀತ
ಬುದ್ಧಿ ವಿನಃಶ್ಯಂತಿ ಎಂದು ಹೇಳಲಾಗುತ್ತದೆ. ಮನುಷ್ಯರಂತೂ ಬಹಳ ಅಂಧಶ್ರದ್ಧೆಯಲ್ಲಿದ್ದಾರೆ,
ದೇಹಧಾರಿಗಳಲ್ಲಿಯೇ ಮೋಹವನ್ನಿಟ್ಟುಕೊಳ್ಳುತ್ತಾರೆ. ಈಗ ನೀವು ದೇಹೀಅಭಿಮಾನಿಗಳಾಗಬೇಕಾಗಿದೆ, ಒಬ್ಬ
ತಂದೆಯಲ್ಲಿಯೇ ಮೋಹವನ್ನಿಡಬೇಕಾಗಿದೆ, ಮತ್ತ್ಯಾರೊಂದಿಗಾದರೂ ಮೋಹವಿದೆಯೆಂದರೆ ತಂದೆಯೊಂದಿಗೆ
ವಿಪರೀತ ಬುದ್ಧಿಯಿದೆಯೆಂದರ್ಥ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ಎಷ್ಟೊಂದು
ತಿಳಿಸುತ್ತಾರೆ. ಇದರಲ್ಲಿಯೇ ಪರಿಶ್ರಮವಿದೆ. ನಾವು ಪತಿತರನ್ನು ಬಂದು ಪಾವನ ಮಾಡಿ ಎಂದು ನೀವೇ
ಹೇಳುತ್ತೀರಿ. ತಂದೆಯೇ ಪಾವನರನ್ನಾಗಿ ಮಾಡುತ್ತಾರೆ, ನೀವು ಮಕ್ಕಳಿಗೆ 84 ಜನ್ಮಗಳ
ಇತಿಹಾಸ-ಭೂಗೋಳವನ್ನು ತಂದೆಯೇ ತಿಳಿಸಿಕೊಡುತ್ತಾರೆ. ಇದು ಸಹಜವಲ್ಲವೆ. ಉಳಿದಂತೆ ನೆನಪಿನದೇ ಬಹಳ
ಕಷ್ಟವಾದ ವಿಷಯವಾಗಿದೆ, ತಂದೆಯ ಜೊತೆ ಬುದ್ಧಿಯೋಗವನ್ನಿಡುವುದರಲ್ಲಿ ಯಾರೂ ಬುದ್ಧಿವಂತರಿಲ್ಲ.
ಯಾವ ಮಕ್ಕಳು ನೆನಪಿನಲ್ಲಿ
ಬುದ್ಧಿವಂತರಲ್ಲವೋ ಅವರು ಪಂಡಿತರಿದ್ದಂತೆ, ಜ್ಞಾನದಲ್ಲಿ ಭಲೆ ಎಷ್ಟೇ ಬುದ್ಧಿವಂತರಾಗಿರಬಹುದು ಆದರೆ
ನೆನಪು ಮಾಡಲಿಲ್ಲವೆಂದರೆ ಅವರು ಕೇವಲ ಪಂಡಿತರೆಂದರ್ಥ. ತಂದೆಯು ಒಬ್ಬ ಪಂಡಿತನ ಕಥೆಯನ್ನು
ತಿಳಿಸುತ್ತಾರಲ್ಲವೆ. ನದಿಯನ್ನು ದಾಟುವಾಗ ಪರಮಾತ್ಮನನ್ನು ನೆನಪು ಮಾಡಿದರೆ ನೀವು
ಪಾರಾಗಿಬಿಡುತ್ತೀರೆಂದು ತಿಳಿಸಿದರು. ಅದನ್ನು ತಾವೇ ಮಾಡಲಿಲ್ಲ ಆ ಕಾರಣ ಮಧ್ಯದಲ್ಲಿ
ಸಿಕ್ಕಿಹಾಕಿಕೊಂಡರು. ಪಂಡಿತನ ಈ ದೃಷ್ಟಾಂತವೂ ಸಹ ನಿಮಗಾಗಿಯೇ ಇದೆ. ನೀವು ತಂದೆಯನ್ನು ನೆನಪು
ಮಾಡಿದರೆ ಪಾರಾಗಿಬಿಡುತ್ತೀರಿ. ಕೇವಲ ಮುರುಳಿಯಲ್ಲಿ ತೀಕ್ಷ್ಣವಾಗಿದ್ದರೆ ಪಾರಾಗಲು ಸಾಧ್ಯವಿಲ್ಲ.
ನೆನಪು ಮಾಡದೆ ವಿಕರ್ಮಗಳು ವಿನಾಶವಾಗುವುದಿಲ್ಲ. ಇವೆಲ್ಲಾ ದೃಷ್ಟಾಂತಗಳನ್ನು ರಚಿಸಿದ್ದಾರೆ,
ತಂದೆಯು ಕುಳಿತು ಯಥಾರ್ಥವನ್ನು ತಿಳಿಸುತ್ತಾರೆ. ಪಂಡಿತನು ಯಾರಿಗೆ ತಿಳಿಸಿದರೋ ಅವರಿಗೆ
ನಿಶ್ಚಯವಾಗಿಬಿಟ್ಟಿತು. ಪರಮಾತ್ಮನನ್ನು ನೆನಪು ಮಾಡುವುದರಿಂದ ಪಾರಾಗಿಬಿಡುತ್ತೇವೆಂಬ ಒಂದೇ
ಮಾತನ್ನು ಹಿಡಿದುಕೊಂಡರು. ಕೇವಲ ಜ್ಞಾನವಿದೆ, ಯೋಗವಿಲ್ಲವೆಂದರೆ ಶ್ರೇಷ್ಠಪದವಿಯನ್ನು ಪಡೆಯಲು
ಸಾಧ್ಯವಿಲ್ಲ. ಹೀಗೆ ಅನೇಕರಿದ್ದಾರೆ, ನೆನಪಿನಲ್ಲಿ ಇರುವುದೇ ಇಲ್ಲ. ಮೂಲಮಾತೇ ನೆನಪಿನದಾಗಿದೆ.
ಬಹಳ ಒಳ್ಳೊಳ್ಳೆಯ ಸೇವೆ ಮಾಡುವವರಿದ್ದಾರೆ, ಆದರೆ ಬುದ್ಧಿಯೋಗವು ಸರಿಯಿಲ್ಲವೆಂದರೆ
ಸಿಕ್ಕಿಹಾಕಿಕೊಳ್ಳುತ್ತಾರೆ. ಯೋಗವಿರುವವರು ಎಂದೂ ದೇಹಾಭಿಮಾನದಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ,
ಅಶುದ್ಧ ಸಂಕಲ್ಪಗಳು ಬರುವುದಿಲ್ಲ, ನೆನಪಿನಲ್ಲಿ ಕಚ್ಚಾ ಇದ್ದರೆ ಬಿರುಗಾಳಿಗಳು ಬರುತ್ತವೆ.
ಯೋಗದಿಂದ ಕರ್ಮೇಂದ್ರಿಯಗಳು ವಶದಲ್ಲಿ ಬರುತ್ತವೆ. ತಂದೆಯು ಸರಿ ಮತ್ತು ತಪ್ಪನ್ನು ತಿಳಿದುಕೊಳ್ಳುವ
ಬುದ್ಧಿಯನ್ನು ಕೊಡುತ್ತಾರೆ. ಅನ್ಯರ ದೇಹದ ಕಡೆಗೆ ಬುದ್ಧಿಯು ಹೋಗುವುದರಿಂದ ವಿಪರೀತ ಬುದ್ಧಿ
ವಿನಃಶ್ಯಂತಿಯಾಗಿಬಿಡುತ್ತದೆ. ಜ್ಞಾನವೇ ಬೇರೆ ಮತ್ತು ಯೋಗವೇ ಬೇರೆಯಾಗಿದೆ. ಯೋಗದಿಂದ ಆರೋಗ್ಯವು,
ಜ್ಞಾನದಿಂದ ಭಾಗ್ಯವು ಸಿಗುತ್ತದೆ. ಯೋಗದಿಂದ ಶರೀರದ ಆಯಸ್ಸು ಹೆಚ್ಚುತ್ತಿರುತ್ತದೆ, ಆತ್ಮದ
ಗಾತ್ರವಂತೂ ಚಿಕ್ಕದು, ದೊಡ್ಡದಾಗುವುದಿಲ್ಲ. ನನ್ನ ಶರೀರದ ಆಯಸ್ಸು ಹೆಚ್ಚಾಗುತ್ತದೆ ಎಂದು ಆತ್ಮವು
ಹೇಳುತ್ತದೆ. ಈಗ ಆಯಸ್ಸು ಬಹಳ ಕಡಿಮೆಯಾಗಿದೆ. ಅಂದರೆ ಸತ್ಯಯುಗದಿಂದ ಶರೀರದ ಆಯಸ್ಸು
ಅರ್ಧಕಲ್ಪಕ್ಕಾಗಿ ಬಹಳ ಧೀರ್ಘವಾಗಿರುವುದು. ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೇವೆ.
ಆತ್ಮವು ಪವಿತ್ರವಾಗುತ್ತದೆ, ಆತ್ಮವನ್ನು ಪವಿತ್ರ ಮಾಡಿಕೊಳ್ಳುವುದರ ಮೇಲೆಯೇ ಎಲ್ಲವೂ
ಆಧಾರಿತವಾಗಿದೆ. ಪವಿತ್ರರಾಗಿಲ್ಲವೆಂದರೆ ಪದವಿಯನ್ನೂ ಪಡೆಯುವುದಿಲ್ಲ.
ಮಾಯೆಯು ಚಾರ್ಟ್
ಇಡುವುದರಲ್ಲಿ ಮಕ್ಕಳನ್ನು ಸುಸ್ತು ಮಾಡಿಬಿಡುತ್ತದೆ. ವಾಸ್ತವದಲ್ಲಿ ಮಕ್ಕಳು ನೆನಪಿನ ಯಾತ್ರೆಯ
ಚಾರ್ಟನ್ನು ಬಹಳ ಆಸಕ್ತಿಯಿಂದ ಇಟ್ಟುಕೊಳ್ಳಬೇಕು. ತಮ್ಮನ್ನು ನೋಡಿಕೊಳ್ಳಬೇಕು - ನಾವು ತಂದೆಯನ್ನು
ನೆನಪು ಮಾಡುತ್ತೇವೆಯೇ ಅಥವಾ ಮತ್ತ್ಯಾವುದೇ ಮಿತ್ರಸಂಬಂಧಿಗಳಕಡೆ ಬುದ್ಧಿಯೋಗವು ಹೋಗುತ್ತದೆಯೇ? ಇಡೀ
ದಿನದಲ್ಲಿ ಯಾರ ನೆನಪಿತ್ತು ಅಥವಾ ಯಾರ ಜೊತೆ ಪ್ರೀತಿಯಿತ್ತು, ಎಷ್ಟು ಸಮಯವನ್ನು ವ್ಯರ್ಥ ಮಾಡಿದೆವು?
ಹೀಗೆ ನಮ್ಮ ಚಾರ್ಟನ್ನು ಇಡಬೇಕು ಆದರೆ ಕೆಲವರಲ್ಲಿ ನಿಯಮಿತವಾಗಿ ಚಾರ್ಟನ್ನಿಡುವ ಶಕ್ತಿಯೇ ಇಲ್ಲ.
ಕೆಲವರೇ ವಿರಳ ಚಾರ್ಟನ್ನಿಡುತ್ತಾರೆ. ಮಾಯೆಯೂ ಸಹ ಬಿಡುವುದಿಲ್ಲ, ಒಮ್ಮೆಲೆ ಸುಸ್ತು
ಮಾಡಿಬಿಡುತ್ತದೆ. ಸ್ಪೂರ್ತಿಯೇ ಹೊರಟುಹೋಗುತ್ತದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ
ನೆನಪು ಮಾಡಿ, ನಾನಂತೂ ಎಲ್ಲಾ ಪ್ರಿಯತಮೆಯರ ಪ್ರಿಯತಮನಾಗಿದ್ದೇನೆ. ಅಂದಮೇಲೆ ಪ್ರಿಯತಮನನ್ನು ನೆನಪು
ಮಾಡಬೇಕಲ್ಲವೆ. ಪ್ರಿಯತಮ ತಂದೆಯು ತಿಳಿಸುತ್ತಾರೆ - ನೀವು ಅರ್ಧಕಲ್ಪ ನನ್ನನ್ನು ನೆನಪು
ಮಾಡಿದ್ದೀರಿ ಆದ್ದರಿಂದ ಈಗ ನಾನು ತಿಳಿಸುತ್ತೇನೆ, ನನ್ನನ್ನು ನೆನಪು ಮಾಡಿರಿ. ಅದರಿಂದ ವಿಕರ್ಮಗಳು
ವಿನಾಶವಾಗುವುದು. ಯಾವ ತಂದೆಯು ಇಷ್ಟು ಸುಖದಾತನಾಗಿದ್ದಾರೆಯೋ ಅವರನ್ನು ಎಷ್ಟೊಂದು ನೆನಪು ಮಾಡಬೇಕು!
ಅವರೆಲ್ಲರೂ ದುಃಖವನ್ನೇ ಕೊಡುವವರಾಗಿದ್ದಾರೆ, ಮತ್ತೇನೂ ಕೆಲಸಕ್ಕೆ ಬರುವುದಿಲ್ಲ. ಅಂತ್ಯದ
ಸಮಯದಲ್ಲಿ ಒಬ್ಬ ಪರಮಾತ್ಮ ತಂದೆಯು ಕೆಲಸಕ್ಕೆ ಬರುತ್ತಾರೆ. ಅಂತಿಮ ಸಮಯವಂತೂ ಒಂದು ಹದ್ದಿನ
ದಾಗಿರುತ್ತದೆ, ಮತ್ತೊಂದು ಬೇಹದ್ದಿನದಾಗಿರುತ್ತದೆ.
ತಂದೆಯು ತಿಳಿಸುತ್ತಾರೆ
- ಚೆನ್ನಾಗಿ ನೆನಪು ಮಾಡುತ್ತಾ ಇದ್ದರೆ ಅಕಾಲಮೃತ್ಯುವಾಗುವುದಿಲ್ಲ. ನಿಮ್ಮನ್ನು ಅಮರರನ್ನಾಗಿ
ಮಾಡುತ್ತಾರೆ ಆದರೆ ಮೊದಲು ತಂದೆಯ ಜೊತೆ ಪ್ರೀತಿಬುದ್ಧಿಯಿರಬೇಕು. ಯಾರ ಶರೀರದ ಜೊತೆಯಾದರೂ
ಪ್ರೀತಿಯಿದ್ದರೆ ಕೆಳಗೆ ಬೀಳುತ್ತೀರಿ, ಅನುತ್ತೀರ್ಣರಾಗಿಬಿಡುತ್ತೀರಿ, ಚಂದ್ರವಂಶದಲ್ಲಿ
ಹೊರಟುಹೋಗುತ್ತೀರಿ. ಸತ್ಯಯುಗೀ ಸೂರ್ಯವಂಶಿ ರಾಜಧಾನಿಗೆ ಸ್ವರ್ಗವೆಂದು ಕರೆಯಲಾಗುತ್ತದೆ.
ತ್ರೇತಾಯುಗಕ್ಕೂ ಸ್ವರ್ಗವೆಂದು ಹೇಳಲಾಗುವುದಿಲ್ಲ. ಹೇಗೆ ದ್ವಾಪರ ಮತ್ತು ಕಲಿಯುಗವಿದ್ದಾಗ
ಕಲಿಯುಗಕ್ಕೆ ರೌರವ ನರಕವೆಂದು ತಮೋಪ್ರಧಾನವೆಂದು ಹೇಳಲಾಗುತ್ತದೆ. ದ್ವಾಪರಕ್ಕೆ ಹೀಗೆ
ಹೇಳುವುದಿಲ್ಲ. ಮತ್ತೆ ತಮೋಪ್ರಧಾನರಿಂದ ಸತೋಪ್ರಧಾನರಾಗಲು ಯೋಗವು ಬೇಕು. ನಮಗೆ ಇಂತಹವರ ಜೊತೆ ಬಹಳ
ಪ್ರೀತಿಯಿದೆ, ಅವರ ಆಧಾರವಿಲ್ಲದೆ ನಮ್ಮ ಕಲ್ಯಾಣವಾಗುವುದಿಲ್ಲ ಎಂಬುದನ್ನು ತಾವು
ತಿಳಿದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಒಂದುವೇಳೆ ಶರೀರವನ್ನು ಬಿಟ್ಟರೆ ಏನಾಗಬಹುದು! ವಿನಾಶಕಾಲೇ
ವಿಪರೀತಬುದ್ಧಿ ವಿನಃಶ್ಯಂತಿ, ಬಹಳ ಕನಿಷ್ಟವಾದ ಪದವಿಯನ್ನು ಪಡೆಯಬೇಕಾಗುತ್ತದೆ.
ಇತ್ತೀಚಿನ ಪ್ರಪಂಚದಲ್ಲಿ
ಫ್ಯಾಷನ್ನಿನದೂ ಬಹಳ ದೊಡ್ದ ಸಮಸ್ಯೆಯಾಗಿದೆ. ತಮ್ಮ ಮೇಲೆ ಆಕರ್ಷಿತ ಮಾಡಿಕೊಳ್ಳಲು ಶರೀರಕ್ಕೆ
ಎಷ್ಟೊಂದು ಟಿಪ್-ಟಾಪ್ ಮಾಡುತ್ತಾರೆ! ಈಗ ತಂದೆಯು ತಿಳಿಸುತ್ತಾರೆ - ಮಕ್ಕಳು ಯಾರದೇ ನಾಮ-ರೂಪದಲ್ಲಿ
ಸಿಕ್ಕಿಹಾಕಿಕೊಳ್ಳಬೇಡಿ. ಲಕ್ಷ್ಮೀ-ನಾರಾಯಣರ ಉಡುಪನ್ನು ನೋಡಿ, ಎಷ್ಟು ಘನತೆಯಿಂದ ಕೂಡಿದೆ.
ಸತ್ಯಯುಗವು ಶಿವಾಲಯ, ಇದಕ್ಕೆ ವೇಶ್ಯಾಲಯವೆಂದು ಹೇಳಲಾಗುತ್ತದೆ. ಈ ದೇವತೆಗಳ ಮುಂದೆ ಹೋಗಿ ನಾವು
ವೇಶ್ಯಾಲಯದಲ್ಲಿದ್ದೇವೆಂದು ಹೇಳುತ್ತಾರೆ. ಇತ್ತೀಚೆಗಂತೂ ಫ್ಯಾಷನ್ನಿನದೂ ಸಹ ಒಂದು
ಸಮಸ್ಯೆಯಾಗಿಬಿಟ್ಟಿದೆ. ಎಲ್ಲರ ದೃಷ್ಟಿಯು ಅವರ ಮೇಲೆ ಹೊರಟು ಹೋಗುತ್ತದೆ ಮತ್ತೆ ಹಿಡಿದುಕೊಂಡು
ನಂತರ ಓಡಿಸಿಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಂತೂ ನಿಯಮಪೂರ್ವಕವಾದ ಚಲನೆಯಿರುತ್ತದೆ, ಅಲ್ಲಿ
ಸ್ವಾಭಾವಿಕ ಸೌಂದರ್ಯವಿರುತ್ತದೆಯಲ್ಲವೆ. ಅಂಧಶ್ರದ್ಧೆಯ ಮಾತಿಲ್ಲ. ಇಲ್ಲಂತೂ ನೋಡಿದಾಗ ಅವರೊಂದಿಗೆ
ಮನಸ್ಸಾಯಿತೆಂದರೆ ಬೇರೆ ಧರ್ಮದವರೊಂದಿಗೂ ಸಹ ವಿವಾಹ ಮಾಡಿಕೊಳ್ಳುತ್ತಾರೆ. ಈಗ ನಿಮ್ಮದು ಈಶ್ವರೀಯ
ಬುದ್ಧಿಯಾಗಿದೆ, ಕಲ್ಲುಬುದ್ಧಿಯವರಿಂದ ಪಾರಸಬುದ್ಧಿಯವರನ್ನಾಗಿ ತಂದೆಯ ವಿನಃ ಮತ್ತ್ಯಾರು ಮಾಡಲು
ಸಾಧ್ಯವಿಲ್ಲ. ಅವರು ರಾವಣ ಸಂಪ್ರದಾಯದವರಾಗಿದ್ದಾರೆ, ನೀವೀಗ ರಾಮನ ಸಂಪ್ರದಾಯದವರಾಗಿದ್ದೀರಿ.
ಪಾಂಡವರು ಮತ್ತು ಕೌರವರು ಒಂದೇ ಸಂಪ್ರದಾಯದವರಾಗಿದ್ದರು, ಬಾಕಿ ಯಾದವರು ಯುರೋಪ್
ನಿವಾಸಿಗಳಾಗಿದ್ದಾರೆ. ಯಾದವರು ಯುರೋಪ್ ನಿವಾಸಿಗಳೆಂದು ಗೀತೆಯಿಂದ ಯಾರೂ ತಿಳಿದುಕೊಳ್ಳುವುದಿಲ್ಲ.
ಅವರಂತೂ ಯಾದವ ಸಂಪ್ರದಾಯದವೂ ಸಹ ಇಲ್ಲಿಯದೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಯಾದವರು
ಯುರೋಪಿಯನ್ನರಾಗಿದ್ದಾರೆ, ಯಾರು ತಮ್ಮ ವಿನಾಶಕ್ಕಾಗಿ ಈ ಅಣ್ವಸ್ತ್ರಗಳನ್ನು ತಯಾರಿಸಿದ್ದಾರೆ,
ಪಾಂಡವರ ವಿಜಯವಾಗುತ್ತದೆ. ಅವರು ಹೋಗಿ ಸ್ವರ್ಗದ ಮಾಲೀಕರಾಗುತ್ತಾರೆ. ಪರಮಾತ್ಮನೇ ಬಂದು ಸ್ವರ್ಗದ
ಸ್ಥಾಪನೆ ಮಾಡುತ್ತಾರೆ. ಶಾಸ್ತ್ರಗಳಲ್ಲಂತೂ ಪಾಂಡವರು ಪರ್ವತಗಳ ಮೇಲೆ ಕರಗಿಹೋದರೆಂದು
ತೋರಿಸುತ್ತಾರೆ. ಮತ್ತೇನಾಯಿತು? ಏನನ್ನೂ ತಿಳಿದುಕೊಂಡಿಲ್ಲ. ಕಲ್ಲುಬುದ್ಧಿಯಾಗಿದೆಯಲ್ಲವೆ! ನಾಟಕದ
ರಹಸ್ಯವನ್ನು ಯಾರೂ ಸ್ವಲ್ಪವೂ ಅರಿತುಕೊಂಡಿಲ್ಲ. ತಂದೆಯ ಬಳಿ ಮಕ್ಕಳು ಬರುತ್ತಾರೆ, ಆಗ ಭಲೆ ಒಡವೆ
ಇತ್ಯಾದಿಗಳನ್ನು ಧರಿಸಿ ಎಂದು ತಂದೆಯು ಹೇಳುತ್ತಾರೆ. ಬಾಬಾ, ಇಲ್ಲಿ ಆಭರಣಗಳು ಎಲ್ಲಿ ಶೋಭಿಸುತ್ತವೆ
ಎಂದು ಹೇಳುತ್ತಾರೆ. ಪತಿತ ಆತ್ಮ, ಪತಿತ ಶರೀರಕ್ಕೆ ಆಭರಣಗಳೆಲ್ಲಿ ಶೋಭಿಸುತ್ತವೆ! ನಾವು
ಸತ್ಯಯುಗದಲ್ಲಿ ಈ ಆಭರಣಗಳಿಂದ ಶೃಂಗರಿತರಾಗಿರುತ್ತೇವೆ, ಅಪಾರ ಧನವಿರುತ್ತದೆ, ಎಲ್ಲರೂ ಸುಖಿ0iÉುೀ
ಸುಖಿಯಾಗಿರುತ್ತಾರೆ. ಭಲೆ ಅಲ್ಲಿ ಇವರು ರಾಜರಾಗಿದ್ದಾರೆ, ನಾವು ಪ್ರಜೆಗಳಾಗಿದ್ದೇವೆ ಎಂಬುದು
ಅನುಭವಕ್ಕೆ ಬರುತ್ತದೆ ಆದರೆ ದುಃಖದ ಮಾತಿರುವುದಿಲ್ಲ. ಇಲ್ಲಂತೂ ದವಸ-ಧಾನ್ಯಗಳು ಸಿಗುವುದಿಲ್ಲ
ಆದ್ದರಿಂದ ದುಃಖಿಯಾಗುತ್ತಾರೆ. ಸತ್ಯಯುಗದಲ್ಲಿ ಎಲ್ಲವೂ ಸಿಗುತ್ತದೆ, ದುಃಖವೆಂಬ ಶಬ್ಧವು ಮುಖದಿಂದ
ಬರುವುದಿಲ್ಲ. ಹೆಸರೇ ಸ್ವರ್ಗವಾಗಿದೆ, ಯುರೋಪಿಯನ್ನರು ಅದಕ್ಕೆ ಪ್ಯಾರಡೈಸ್ ಎಂದು ಹೇಳುತ್ತಾರೆ
ಅಲ್ಲಿ ಗಾಡ್-ಗಾಡೆಸ್ಸ್ ಇರುತ್ತಿದ್ದರೆಂದು ತಿಳಿಯುತ್ತಾರೆ ಆದ್ದರಿಂದ ಅವರ ಚಿತ್ರಗಳನ್ನೂ ಸಹ ಬಹಳ
ಖರೀದಿಸುತ್ತಾರೆ ಆದರೆ ಆ ಸ್ವರ್ಗವು ಮತ್ತೆ ಎಲ್ಲಿ ಹೋಯಿತು? ಎಂಬುದು ಯಾರಿಗೂ ತಿಳಿದಿಲ್ಲ. ಈ
ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಹೊಸದರಿಂದ ಹಳೆಯದು,
ಹಳೆಯದರಿಂದ ಮತ್ತೆ ಹೊಸಪ್ರಪಂಚವಾಗುತ್ತದೆ. ದೇಹೀ-ಅಭಿಮಾನಿಗಳಾಗುವುದರಲ್ಲಿ ಬಹಳ ಪರಿಶ್ರಮವಿದೆ.
ನೀವು ದೇಹೀ-ಅಭಿಮಾನಿಗಳಾಗುವುದರಿಂದ ಈ ಅನೇಕ ಖಾಯಿಲೆಗಳು ಇತ್ಯಾದಿಗಳಿಂದ ಮುಕ್ತರಾಗುತ್ತೀರಿ.
ತಂದೆಯನ್ನು ನೆನಪು ಮಾಡುವುದರಿಂದ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವುದೇ
ದೇಹಧಾರಿಯನ್ನು ತಮ್ಮ ಆಧಾರ ಮಾಡಿಕೊಳ್ಳಬಾರದಾಗಿದೆ. ಶರೀರದೊಂದಿಗೆ ಪ್ರೀತಿಯನ್ನಿಟ್ಟುಕೊಳ್ಳಬಾರದು.
ಹೃದಯದ ಪ್ರೀತಿಯನ್ನು ಒಬ್ಬ ತಂದೆಯೊಂದಿಗೇ ಇಡಬೇಕಾಗಿದೆ. ಯಾರದೇ ನಾಮ-ರೂಪದಲ್ಲಿ
ಸಿಕ್ಕಿಹಾಕಿಕೊಳ್ಳಬಾರದು.
2. ನೆನಪಿನ ಚಾರ್ಟನ್ನು
ಬಹಳ ಆಸಕ್ತಿಯಿಂದ ಇಡಬೇಕಾಗಿದೆ. ಇದರಲ್ಲಿ ಸುಸ್ತಾಗಬಾರದು. ಚಾರ್ಟನಲ್ಲಿ ನೋಡಿಕೊಳ್ಳಬೇಕು - ನನ್ನ
ಬುದ್ಧಿಯು ಯಾರ ಕಡೆ ಹೋಗುತ್ತದೆ? ಎಷ್ಟು ಸಮಯವನ್ನು ವ್ಯರ್ಥ ಮಾಡುತ್ತೇನೆ? ಸುಖಕೊಡುವಂತಹ ತಂದೆಯ
ನೆನಪು ಎಷ್ಟು ಸಮಯವಿರುತ್ತದೆ?
ವರದಾನ:
ಗೃಹಸ್ಥ
ವ್ಯವಹಾರ ಮತ್ತು ಈಶ್ವರೀಯ ವ್ಯವಹಾರ ಎರಡನ್ನೂ ಸಮಾನತೆಯ ಮೂಲಕ ಸದಾ ಹಗುರ ಮತ್ತು ಸಫಲ ಭವ
ಎಲ್ಲಾ ಮಕ್ಕಳಿಗೆ ಶರೀರ
ನಿರ್ವಾಹ ಮತ್ತು ಆತ್ಮ ನಿರ್ವಾಹದ ಡಬಲ್ ಸೇವೆ ಸಿಕ್ಕಿದೆ. ಆದರೆ ಎರಡೂ ಸೇವೆಯಲ್ಲಿ ಸಮಯದ,
ಶಕ್ತಿಗಳಕಡ ಸಮಾನ ಗಮನ ಕೊಡಬೇಕಾಗಿದೆ. ಒಂದುವೇಳೆ ಶ್ರೀಮತದ ಮುಳ್ಳು ಸರಿಯಾಗಿದ್ದರೆ ಎರಡೂ ಕಡೆ
ಸಮಾನವಾಗಿರುತ್ತದೆ. ಆದರೆ ಗೃಹಸ್ಥ ಎಂಬ ಶಬ್ದ ಹೇಳುತ್ತಲೇ ಗೃಹಸ್ಥೆಯಾಗಿಬಿಡುವಿರಿ ಆಮೇಲೆ
ನೆಪಹೇಳುವುದು ಪ್ರಾರಂಭವಾಗಿಬಿಡುತ್ತದೆ ಆದ್ದರಿಂದ ಗೃಹಸ್ಥಿ ಅಲ್ಲ ಟ್ರಸ್ಟಿಯಾಗಿರಿ, ಈ
ಸ್ಮೃತಿಯಿಂದ ಗೃಹಸ್ಥ ವ್ಯವಹಾರ ಮತ್ತು ಈಶ್ವರೀಯ ವ್ಯವಹಾರ ಎರಡರಲ್ಲಿ ಸಮಾನತೆಯನ್ನಿಡಿ ಆಗ ಸದಾ
ಹಗುರ ಮತ್ತು ಸಫಲವಾಗಿರುವಿರಿ.
ಸ್ಲೋಗನ್:
ಫಸ್ಟ್
ಡಿವಿಷನ್ನಲ್ಲಿ ಬರಬೇಕಾದರ ಕರ್ಮೇಂದ್ರಿಯಜೀತ್, ಮಾಯಾ ಜೀತ್ ಆಗಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ನಿಮ್ಮ ಶಿವಶಕ್ತಿಯ
ಕಂಬೈಂಡ್ ರೂಪದ ನೆನಪಾರ್ಥ ಸದಾ ಪೂಜಿಸಲಾಗುತ್ತದೆ. ಶಕ್ತಿ ಶಿವನಿಂದ ಬೇರೆಯಲ್ಲ, ಶಿವ ಶಕ್ತಿಯಿಂದ
ಬೇರೆಯಲ್ಲ. ಈ ರೀತಿ ಕಂಬೈಂಡ್ ರೂಪದಲ್ಲಿರಿ, ಇದೇ ಸ್ವರೂಪವನ್ನು ಸಹಜಯೋಗಿ ಎಂದೂ ಹೇಳಲಾಗಿದೆ. ಯೋಗ
ಜೋಡಿಸುವಂತಹವರಲ್ಲ ಆದರೆ ಸದಾ ಕಂಬೈಂಡ್ ಅರ್ಥಾತ್ ಜೊತೆ ಇರುವಂತಹವರು. ಏನು ಪ್ರತಿಜ್ಞೆಯಿದೆ
ಜೊತೆಯಲ್ಲಿ ಇರುವೆವು, ಜೊತೆಯಲ್ಲಿ ಹೋಗುವೆವು, ಜೊತೆಯಲ್ಲಿ ಬದುಕುವೆವು,... ಈ ಪ್ರತಿಜ್ಞೆ ಪಕ್ಕಾ
ನೆನಪಿಟ್ಟುಕೊಳ್ಳಿ.