28.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ತಂದೆಯ ಬಳಿ ತಮ್ಮ ಶ್ರೇಷ್ಠ ಅದೃಷ್ಟವನ್ನು ಮಾಡಿಕೊಳ್ಳಲು ಬಂದಿದ್ದೀರಿ, ಶ್ರೀಮತದಂತೆ ಎಷ್ಟು ನಡೆಯುತ್ತೀರಿ ಅಷ್ಟು ಶ್ರೇಷ್ಠ ಅದೃಷ್ಟವಾಗುವುದು”

ಪ್ರಶ್ನೆ:
ಭಕ್ತಿಯ ಯಾವ ಅಭ್ಯಾಸವು ಈಗ ನೀವು ಮಕ್ಕಳಲ್ಲಿ ಇರಬಾರದು?

ಉತ್ತರ:
ಭಕ್ತಿಯಲ್ಲಿ ಸ್ವಲ್ಪ ದುಃಖವಾದರೆ, ಖಾಯಿಲೆಯಾದರೆ ಸಾಕು ಹೇ ರಾಮ, ಹೇ ಭಗವಂತ, ಅಯ್ಯೋ-ಅಯ್ಯೋ ಎನ್ನುವ ಅಭ್ಯಾಸವು ಭಕ್ತಿಯಲ್ಲಿರುತ್ತದೆ. ಈಗ ನೀವೆಂದೂ ಸಹ ಬಾಯಿಂದ ಇಂತಹ ಮಾತುಗಳನ್ನು ಮಾತನಾಡಬಾರದು. ನೀವಂತೂ ಒಳಗಿಂದೊಳಗೇ ಮಧುರ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ.

ಗೀತೆ:
ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ.........

ಓಂ ಶಾಂತಿ.
ಪ್ರತಿಯೊಬ್ಬ ಮನುಷ್ಯನೂ ಸುಖ ಮತ್ತು ಶಾಂತಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಪುರುಷಾರ್ಥ ಮಾಡುತ್ತಾನೆ. ಸಾಧು, ಸಂತ, ಸನ್ಯಾಸಿಗಳೂ ಸಹ ನಮಗೆ ಶಾಂತಿ ಬೇಕು, ದುಃಖ ದೂರ ಮಾಡಿ ಸುಖ ಕೊಡಿ ಎಂದು ಹೇಳುತ್ತಾರೆ. ಭಗವಂತನೇ ಮನುಷ್ಯ ಮಾತ್ರನ ದುಃಖಹರ್ತ-ಸುಖಕರ್ತನಾಗಿದ್ದಾರೆಂದು ತಿಳಿಯುತ್ತಾರೆ. ಈಗ ಭಗವಂತನನ್ನು ಮನುಷ್ಯರು ತಿಳಿದುಕೊಂಡಿಲ್ಲ. ನೀವಂತೂ ಶಿವಬಾಬಾ ಎಂದು ಹೇಳುತ್ತೀರಿ, ಬ್ರಹ್ಮಾ-ವಿಷ್ಣು-ಶಂಕರನಿಗೆ ಬಾಬಾ ಎಂದು ಹೇಳುವುದಿಲ್ಲ. ಅವರಂತೂ ದೇವತೆಗಳಾಗಿದ್ದಾರೆ. ಭಗವಂತನಿಗೇ ತಂದೆಯೆಂದು ಹೇಳುತ್ತಾರೆ, ಅವರು ನಿರಾಕಾರನಾಗಿದ್ದಾರೆ, ಅವರ ಪೂಜೆ ಮಾಡುತ್ತಾರೆ. ಅವರು ಎಲ್ಲರ ತಂದೆಯಾಗಿದ್ದಾರೆಂದು ತಿಳಿದಿದೆ ಆದರೆ ನಾವೇಕೆ ತಂದೆಯೆಂದು ಹೇಳುತ್ತೇವೆ? ಒಬ್ಬ ಲೌಕಿಕ ತಂದೆಯಂತೂ ಇದ್ದಾರೆ ಇವರು ಎಂತಹ ತಂದೆಯಾಗಿದ್ದಾರೆ ಎಂಬ ವಿಚಾರವೇ ಬರುವುದಿಲ್ಲ. ಅವರು ನಿರಾಕಾರ ತಂದೆಯಾಗಿದ್ದಾರೆ ಎಂದು ಆತ್ಮವು ಹೇಳುತ್ತದೆ. ಅವರೂ ನಿರಾಕಾರನಾಗಿದ್ದಾರೆ, ನಾವಾತ್ಮರೂ ನಿರಾಕಾರಿಯಾಗಿದ್ದೇವೆ. ಸಾಕಾರಿ ತಂದೆಯಿದ್ದರೂ ಸಹ ಆತ್ಮವು ಆ ತಂದೆಯನ್ನು ಮರೆಯುವುದಿಲ್ಲ. ಅವರು ಪರಮ ಆತ್ಮನಾಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ. ಪರಮಪಿತನೆಂದು ಹೇಳುತ್ತಾರೆ. ಆಂಗ್ಲ ಭಾಷೆಯಲ್ಲಿ ಗಾಡ್ಫಾದರ್, ಸುಪ್ರೀಂ ಸೌಲ್, ಎಲ್ಲರಿಗಿಂತ ಶ್ರೇಷ್ಠನೆಂದು ಹೇಳುತ್ತಾರೆ. ಲೌಕಿಕ ತಂದೆಯು ಶರೀರದ ರಚಯಿತನಾಗಿದ್ದಾರೆ ಮತ್ತು ಇವರು ಪಾರಲೌಕಿಕ ತಂದೆಯಾಗಿದ್ದಾರೆ. ತಂದೆಯೇ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ತಂದೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವು ತಂದೆಯ ಬಳಿ ಆಸ್ತಿಯನ್ನು ತೆಗೆದುಕೊಳ್ಳಲು ಬರುತ್ತೀರಿ. ದುಃಖಹರ್ತ, ಸುಖಕರ್ತ ತಂದೆಯೇ ಬಂದು ಸುಖದ ಮಾರ್ಗವನ್ನು ತಿಳಿಸುತ್ತಾರೆ. ಅಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ಇಲ್ಲಂತೂ ಬಹಳ ದುಃಖವಿದೆಯಲ್ಲವೆ. ಎಲ್ಲರೂ ಹೋಗುತ್ತಾರೆ. ಈಗಂತೂ ಪ್ರಪಂಚದಲ್ಲಿ ಬಹಳ ದುಃಖವು ಮುಂದೆ ಬರಲಿದೆ. ಯಾರಾದರೂ ಮರಣ ಹೊಂದಿದರೆ ಎಷ್ಟೊಂದು ದುಃಖಿಯಾಗುತ್ತಾರೆ. ‘ಅಯ್ಯೋ ಭಗವಂತ’ ಎಂದು ಅಳುತ್ತಾರೆ. ಅವರೇ ಕಲ್ಯಾಣಕಾರಿ ತಂದೆಯಾಗಿದ್ದಾರೆ. ಹಾಡುತ್ತಾರೆಂದರೆ ಅವಶ್ಯವಾಗಿ ದುಃಖವನ್ನು ಹರಣ ಮಾಡಿ, ಸುಖವನ್ನು ಕೊಟ್ಟಿದ್ದಾರಲ್ಲವೆ. ಆ ತಂದೆಯೇ ಬಂದು ತಿಳಿಸುತ್ತಾರೆ - ಮಕ್ಕಳೇ, ನೀವು ಕಲ್ಪ-ಕಲ್ಪವೂ ಯಾವಾಗ ಬಹಳ ದುಃಖಿ, ಪತಿತರಾಗಿ ಬಿಡುತ್ತೀರೋ ಆಗ ತಂದೆಯೇ ಬನ್ನಿ ಎಂದು ಕರೆಯುತ್ತೀರಿ. ನಾನು ಕಲ್ಪ-ಕಲ್ಪವೂ ಸಂಗಮದಲ್ಲಿಯೇ ಬರುತ್ತೇನೆ, ಪಾವನ ಪ್ರಪಂಚದ ಆದಿ ಮತ್ತೆ ಪತಿತ ಪ್ರಪಂಚದ ಅಂತ್ಯಕ್ಕೆ ಸಂಗಮವೆಂದು ಹೇಳಲಾಗುತ್ತದೆ. ಇದೊಂದೇ ಸಂಗಮ ಯುಗದ ಗಾಯನವಿದೆ. ತಂದೆಯು ಎಲ್ಲರ ಜ್ಯೋತಿಯನ್ನು ಜಾಗೃತ ಮಾಡಲು ದುಃಖವನ್ನು ದೂರ ಮಾಡಿ, ಸುಖವನ್ನು ಕೊಡಲು ಬರುತ್ತಾರೆ. ನಾವು ಪಾರಲೌಕಿಕ ತಂದೆಯ ಬಳಿ ಬಂದಿದ್ದೇವೆ, ಆ ತಂದೆಯು ಇವರಲ್ಲಿ ಪ್ರವೇಶ ಮಾಡಿದ್ದಾರೆಂದು ನಿಮಗೆ ತಿಳಿದಿದೆ. ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ, ಇವರಿಗೆ ಬ್ರಹ್ಮಾನೆಂದು ಹೆಸರನ್ನಿಡುತ್ತೇನೆ. ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ನಿಮಗೆ ಈ ನಿಶ್ಚಯವಿದೆ - ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳಲು ನಾವು ಬ್ರಹ್ಮನ ಸಂತಾನರಾಗಿದ್ದೇವೆ. ನೀವು ಮಕ್ಕಳಿಗೇ ಸುಖವಿತ್ತು ಯಾವಾಗ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗ ಕಲಿಯುಗ, ದುಃಖಧಾಮವಾಗಿದೆ, ಅದರ ನಂತರ ಮತ್ತೆ ಸತ್ಯಯುಗವು ಬರುವುದು. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತದೆಯಲ್ಲವೆ. ಸತ್ಯಯುಗದಲ್ಲಿ ಮತ್ತೆ ಈ ಲಕ್ಷ್ಮೀ-ನಾರಾಯಣರದೇ ರಾಜ್ಯಬೇಕು. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ತಂದೆಯು ತಿಳಿಸುತ್ತಾರೆ - ನೀವು ನರಕವಾಸಿಗಳಾಗಿದ್ದೀರಿ, ಈಗ ಮತ್ತೆ ಸ್ವರ್ಗವಾಸಿಗಳಾಗಬೇಕಾಗಿದೆ. ನೀವು ದೇವಿ-ದೇವತೆಗಳ ವೃಕ್ಷವು ಬಹಳ ಚಿಕ್ಕದಾಗಿತ್ತು, ಈಗ ನಿಮಗೆ ಸ್ಮೃತಿ ಬಂದಿದೆ, ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ನಾವು ಇಡೀ ವಿಶ್ವದ ಮಾಲೀಕರಾಗಿದ್ದೇವೆ, ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದೇವೆ. ಈಗ ನಿಮ್ಮ 84 ಜನ್ಮಗಳ ಅಂತಿಮದಲ್ಲಿಯೂ ಅಂತ್ಯವಾಗಿದೆ. ಪ್ರಪಂಚವು ಹೊಸದರಿಂದ ಹಳೆಯದು ಖಂಡಿತ ಆಗುವುದು. ಹೊಸ ಪ್ರಪಂಚವು ಪಾವನವಾಗಿತ್ತು, ಈಗ ಹಳೆಯ ಪತಿತ ಪ್ರಪಂಚವಾಗಿದೆ. ಎಷ್ಟೊಂದು ದುಃಖಿ, ಕಂಗಾಲರಾಗಿದ್ದಾರೆ. ಭಾರತವು ಬಹಳ ಸಾಹುಕಾರನಾಗಿತ್ತು, ಪವಿತ್ರ ಗೃಹಸ್ಥಾಶ್ರಮವಾಗಿತ್ತು, ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾಗಿದ್ದರು – ಈ ಎಲ್ಲಾ ಮಾತುಗಳು ಶಾಸ್ತ್ರಗಳಲ್ಲಿಲ್ಲ. ಶಾಸ್ತ್ರಗಳು ಭಕ್ತಿಮಾರ್ಗಕ್ಕಾಗಿಯೇ ಇವೆ. ಅದರಲ್ಲಿ ಭಕ್ತಿಯ ರೀತಿ-ಪದ್ಧತಿಗಳೇ ಇವೆ. ತಂದೆಯೊಂದಿಗೆ ಮಿಲನ ಮಾಡುವ ಮಾರ್ಗವು ಶಾಸ್ತ್ರಗಳಿಂದ ಸಿಗಲು ಸಾಧ್ಯವಿಲ್ಲ. ಭಗವಂತನು ಇಲ್ಲಿಯೇ ಬರಬೇಕಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅಲ್ಲಿ ಹೋಗುವ ಮಾತಂತೂ ಇಲ್ಲ, ಯಜ್ಞ-ತಪ ಇತ್ಯಾದಿಗಳನ್ನು ಮಾಡುವುದೇನೂ ಮಾರ್ಗವಲ್ಲ. ಭಗವಂತನನ್ನು ಬನ್ನಿ, ಬಂದು ಮಾರ್ಗವನ್ನು ತಿಳಿಸಿ, ನಾವಾತ್ಮಗಳು ತಮೋಪ್ರಧಾನರಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ಆತ್ಮವು ತಮೋಪ್ರಧಾನವಾಗಿರುವ ಕಾರಣ ಹಾರಲು ಆಗುತ್ತಿಲ್ಲ ಅರ್ಥಾತ್ ತಂದೆಯ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗೆ ನೋಡಿದರೆ ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗುತ್ತದೆ. ಅಮೇರಿಕಾದವರೆಗೂ ಹೋಗುತ್ತದೆ. ಯಾರದು ಯಾರ ಜೊತೆ ಸಂಬಂಧವಿರುವುದೋ ಅಲ್ಲಿಗೆ ಆತ್ಮವು ಒಂದು ಸೆಕೆಂಡಿನಲ್ಲಿ ಹಾರುತ್ತದೆ ಆದರೆ ಅದು ಹಾರಿ ತನ್ನ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಏಕೆಂದರೆ ಪತಿತರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ - ಇಡೀ ಪ್ರಪಂಚವು ಪತಿತವಾದಾಗಲೇ ನಾನು ಬರುತ್ತೇನೆ. ಪತಿತ ಪ್ರಪಂಚದಲ್ಲಿ ಒಬ್ಬರೂ ಪಾವನರಿಲ್ಲ. ಗಂಗೆಯು ಪತಿತ-ಪಾವನಿ ಎಂದು ತಿಳಿಯುತ್ತಾರೆ ಆದ್ದರಿಂದ ಸ್ನಾನ ಮಾಡಲು ಹೋಗುತ್ತಾರೆ ಆದರೆ ನೀರಿನಿಂದ ಯಾರೂ ಪಾವನರಾಗಲು ಸಾಧ್ಯವಿಲ್ಲ. ಹಳೆಯ ಪ್ರಪಂಚವು ಪತಿತ, ಹೊಸ ಪ್ರಪಂಚವು ಪಾವನವಾಗಿದೆ. ನೀವೀಗ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ನೀವು ಪುಣ್ಯಾತ್ಮರಾಗಬೇಕಾಗಿದೆ. ನಿಮ್ಮ ಆತ್ಮವು ಸತೋಪ್ರಧಾನವಾಗಿತ್ತು, ಅದೇ ಈಗ ತಮೋಪ್ರಧಾನವಾಗಿದೆ. ಮತ್ತೆ ಅದು ಯಾವುದೇ ಗಂಗಾ ಸ್ನಾನದಿಂದ ಸತೋಪ್ರಧಾನವಾಗುವುದಿಲ್ಲ, ಪತಿತರನ್ನು ಪಾವನ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ಬಾಕಿ ನೀರಿನ ನದಿಗಳಂತೂ ಎಲ್ಲಾ ಸ್ಥಳಗಳಲ್ಲಿಯೂ ಇವೆ, ಮೋಡಗಳಿಂದ ಮಳೆ ಸುರಿಯುತ್ತದೆ, ಎಲ್ಲರಿಗೆ ಸಿಗುತ್ತದೆ. ಒಂದುವೇಳೆ ನೀರಿನ ನದಿಗಳು ಪಾವನ ಮಾಡುವುದಾದರೆ ಎಲ್ಲರನ್ನೂ ಪಾವನ ಮಾಡಿ ಬಿಡಬೇಕಾಗಿತ್ತು, ಪಾವನರಾಗುವ ಯುಕ್ತಿಯನ್ನು ತಂದೆಯೇ ಬಂದು ಇವರ ಮೂಲಕ ತಿಳಿಸುತ್ತಾರೆ. ಇವರಿಗೂ ತಮ್ಮ ಆತ್ಮವಿದೆ. ಶಿವ ತಂದೆಯು ತಿಳಿಸುತ್ತಾರೆ - ನನಗೆ ನನ್ನದೇ ಆದ ಶರೀರವಿಲ್ಲ, ನಿಮಗೆ ಕಲ್ಪಕಲ್ಪವೂ ತಿಳಿಸಲು ಇವರಲ್ಲಿಯೇ ಬರುತ್ತೇನೆ. ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ.

ತಂದೆಯು ತಿಳಿಸುತ್ತಾರೆ - ಇದು 84 ಜನ್ಮಗಳ ಚಕ್ರವಾಗಿದೆ, 5000 ವರ್ಷಗಳಲ್ಲಿ 84 ಲಕ್ಷ ಜನ್ಮಗಳನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಸ್ವರ್ಗದಲ್ಲಿ ನೀವು 16 ಕಲಾ ಸಂಪೂರ್ಣರಾಗಿದ್ದಿರಿ, ನಂತರ 2 ಕಲೆಗಳು ಕಡಿಮೆಯಾಯಿತು, ಮತ್ತೆ ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತದೆ, ಹೊಸ ಪ್ರಪಂಚದಿಂದ ಹಳೆಯದಾಗುತ್ತದೆ. ದ್ವಾಪರ-ಕಲಿಯುಗಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ನನಗೇ ಜ್ಞಾನ ಸಾಗರನೆಂದು ಹೇಳುತ್ತಾರೆ, ನಾನು ಯಾವುದಾದರೂ ಶಾಸ್ತ್ರಗಳನ್ನು ಓದುತ್ತೇನೆಯೇ? ನಾನು ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ. ಭಕ್ತಿ ಮಾರ್ಗದವರಿಗೆ ಈ ಜ್ಞಾನವಿರಲು ಸಾಧ್ಯವಿಲ್ಲ, ಅದೆಲ್ಲವೂ ಭಕ್ತಿಯ ಜ್ಞಾನವಾಗಿದೆ, ನಾವು ಪಾಪಿಗಳು, ನೀಚರಾಗಿದ್ದೇವೆ. ನಮ್ಮಲ್ಲಿ ಯಾವುದೇ ಗುಣವಿಲ್ಲ, ತಾವೇ ದಯೆ ತೋರಿಸಿ ಎಂದು ಹಾಡುತ್ತಾರೆ. ಇವರ ಮೇಲೆ ದಯೆ ತೋರಿಸಿದ್ದಾರೆ, ಆದ್ದರಿಂದ ಮನುಷ್ಯರಿಂದ ದೇವತೆಗಳಾಗಿದ್ದಾರೆ. ಇದಕ್ಕೆ ಶ್ರೇಷ್ಠಾತಿ ಶ್ರೇಷ್ಠ ಅದೃಷ್ಟವೆಂದು ಹೇಳಲಾಗುತ್ತದೆ. ಶಾಲೆಯಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಹೋಗುತ್ತಾರೆ, ಕೆಲವರು ವಕೀಲ, ಕೆಲವರು ಇಂಜಿನಿಯರ್ ಆಗುತ್ತಾರೆ, ಅದು ವಿಕಾರಿ ಅದೃಷ್ಟವಾಗಿದೆ, ನಿಮ್ಮದು ಈಶ್ವರನ ಮೂಲಕ ಅದೃಷ್ಟವು ಬೆಳಗುತ್ತದೆ ಆದ್ದರಿಂದ ದುಃಖಹರ್ತ-ಸುಖಕರ್ತನೆಂದು ಕರೆಯುತ್ತಾರೆ. ದೇವತೆಗಳನ್ನಾಗಿ ಮಾಡಲು ತಂದೆಯ ವಿನಃ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯು ಕುಳಿತು ಆತ್ಮರೊಂದಿಗೆ ಮಾತನಾಡುತ್ತಾರೆ. ಇದು ನನ್ನ ಶರೀರವೆಂದು ಆತ್ಮವೇ ಹೇಳುತ್ತದೆ, ನನ್ನ ಆತ್ಮವೆಂದು ಶರೀರವು ಹೇಳುವುದಿಲ್ಲ. ಶರೀರದ ಒಳಗೆ ಆತ್ಮವಿದೆ, ಇದು ನನ್ನ ಶರೀರವೆಂದು ಆತ್ಮವೇ ಹೇಳುತ್ತದೆ. ನಾನಾತ್ಮನನ್ನು ನೋಯಿಸಬೇಡಿ ಎಂದು ಮನುಷ್ಯರು ಹೇಳುತ್ತಾರೆ. ಆತ್ಮವು ಶರೀರದಲ್ಲಿ ಇಲ್ಲದಿದ್ದರೆ ಹೇಳುವುದೂ ಇಲ್ಲ. ಆತ್ಮವು ಹೇಳುತ್ತದೆ - ನಾನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ, ನಾವು ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡು ನರಕವಾಸಿಗಳಾಗಿದ್ದೇವೆ. ಈಗ ಪುನಃ ನೀವು ಸ್ವರ್ಗವಾಸಿಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯೇ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ, ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇಂತಹವರು ಸ್ವರ್ಗವಾಸಿಯಾದರು ಎಂದು ಯಾವ ಮಾತನ್ನು ಹೇಳುತ್ತಾರೆಯೋ ಇದು ಸುಳ್ಳಾಗಿದೆ ಏಕೆಂದರೆ ಇದು ನರಕವಾಗಿದೆ. ಯಾರಾದರೂ ಸತ್ತರೆ ಸ್ವರ್ಗದಲ್ಲಿ ಹೋದರೆಂದು ಹೇಳುತ್ತಾರೆ ಅಂದಮೇಲೆ ಬಂದು ಭೋಜನವನ್ನು ಸ್ವೀಕರಿಸಿ ಎಂದು ಅವರನ್ನು ನರಕದಲ್ಲಿ ಏಕೆ ಕರೆಯುತ್ತಾರೆ? ಸ್ವರ್ಗದಲ್ಲಿ ಅವರಿಗೆ ಬಹಳ ವೈಭವ ಸಿಗುತ್ತದೆ ಅಂದಮೇಲೆ ನೀವು ನರಕದಲ್ಲಿ ಏಕೆ ಕರೆಯುತ್ತೀರಿ? ಮನುಷ್ಯರಲ್ಲಿ ಇಷ್ಟಾದರೂ ತಿಳುವಳಿಕೆಯಿಲ್ಲ. ತಂದೆಯು ತಿಳಿಸುತ್ತಾರೆ - ಈಗ ಈ ಕಲಿಯುಗವು ಸಮಾಪ್ತಿಯಾಗಲಿದೆ, ಇದಕ್ಕೆ ಬೆಂಕಿಬೀಳುವುದು. ಎಲ್ಲರೂ ಸಮಾಪ್ತಿ ಆಗಿ ಬಿಡುತ್ತಾರೆ. ನೀವು ಮಕ್ಕಳು ಯಾರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರೋ ಅವರು ಸತ್ಯಯುಗದಲ್ಲಿ ಬಂದು ರಾಜ್ಯಭಾರ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರಿಗೆ ಆಸ್ತಿಯನ್ನು ಯಾರು ಕೊಟ್ಟರು? ತಂದೆ. ನೀವೀಗ ತಂದೆಯ ಮೂಲಕ ಯೋಗ್ಯರಾಗುತ್ತಿದ್ದೀರಿ. ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತಿದ್ದೇವೆಂದು ನೀವು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಸ್ವರ್ಗವಾಸಿಯಾಗುವುದಿಲ್ಲ, ನಾನಂತೂ ಪರಮಧಾಮದಲ್ಲಿರುತ್ತೇನೆ. ನರಕವಾಸಿ, ಸ್ವರ್ಗವಾಸಿಗಳು ನೀವೇ ಆಗುತ್ತೀರಿ. ಆತ್ಮರ ನಿವಾಸ ಸ್ಥಾನವೇ ಶಾಂತಿಧಾಮವಾಗಿದೆ, ನಂತರ ನೀವು ಸುಖಧಾಮದಲ್ಲಿ ಬರುತ್ತೀರಿ, ಇದು ದುಃಖಧಾಮವಾಗಿದೆ. ಈಗ ಇದರ ವಿನಾಶವಾಗುವುದು. ಭಗವಂತನು ಬ್ರಹ್ಮಾ ತನುವಿನಲ್ಲಿ ಬಂದು ರಾಜಯೋಗವನ್ನು ಕಲಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಕೃಷ್ಣನು ಬಂದನೆಂದು ಅವರು ತಿಳಿಯುತ್ತಾರೆ, ಕೃಷ್ಣನ ತನುವಿನಲ್ಲಿ ಬಂದರೆಂದೂ ಹೇಳುವುದಿಲ್ಲ. ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಕೃಷ್ಣನಂತೂ ವಿಶ್ವದ ಮಾಲೀಕನಾಗಿದ್ದಾನೆ, ಎಲ್ಲರ ಮುಕ್ತಿದಾತನು ಒಬ್ಬರೇ ಆಗಿದ್ದಾರೆ. ಅವರು ಪರಮ ಆತ್ಮನಾಗಿದ್ದಾರೆ. ನಾವು ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿದುಕೊಳ್ಳುವಂತಹ ಸತ್ಸಂಗವು ಮತ್ತ್ಯಾವುದೂ ಇರುವುದಿಲ್ಲ. ಪತಿತರಿಂದ ಪಾವನರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನು ನಿಮ್ಮ ಸತ್ಯವಾದ ಗುರುವಾಗಿದ್ದೇನೆ, ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ, ಬಾಕಿ ಗಂಗಾನೀರು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ, ಇದು ಪಾಪಾತ್ಮರ ಪ್ರಪಂಚವಾಗಿದೆ. ಏನೇ ಮಾಡಿದರೂ ಸಹ ಏಣಿಯನ್ನು ಇಳಿಯಲೇಬೇಕಾಗಿದೆ. ಸತೋಪ್ರಧಾನರಿಂದ ತಮೋಪ್ರಧಾನ ಆಗಲೇಬೇಕಾಗಿದೆ. ನೀವು ಭಕ್ತಿ ಮಾಡುವುದಿಲ್ಲ, ಅಯ್ಯೋ ರಾಮ ಎಂದು ಹೇಳುವುದಿಲ್ಲ. ಅವರು ನಿಮ್ಮ ತಂದೆಯಾಗಿದ್ದಾರೆ, ನಿಮಗೆ ಓದಿಸುತ್ತಿದ್ದಾರೆ. ಹೇ ಭಗವಂತ ಬನ್ನಿ, ಹೇ ರಾಮ ಎಂದೂ ಹೇಳಬಾರದು ಆದರೆ ಅನೇಕರಲ್ಲಿ ಈ ಅಭ್ಯಾಸವಾಗಿ ಬಿಟ್ಟಿದೆ. ಆದ್ದರಿಂದ ಅಂತಹ ಶಬ್ಧಗಳು ಬಂದು ಬಿಡುತ್ತವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ನನ್ನ ಬಳಿಗೆ ಬಂದು ಬಿಡುತ್ತೀರಿ. ಒಬ್ಬರನ್ನೇ ನೆನಪು ಮಾಡಬೇಕಾಗಿದೆ.

ತಂದೆಯು ತಿಳಿಸುತ್ತಾರೆ - ನಿಮ್ಮದು ಇದು ಅಂತಿಮ ಜನ್ಮವಾಗಿದೆ, ಈಗ ಆಸ್ತಿಯನ್ನು ತೆಗೆದುಕೊಂಡರೆ ತೆಗೆದುಕೊಂಡಂತೆ, ಮತ್ತೆಂದೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ, ಯಾರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆಯೋ ಅವರು ಮೂಲತಃ ದೇವಿ-ದೇವತಾ ಧರ್ಮದವರು ಆಗಿದ್ದಾರೆ, ಕ್ರಿಶ್ಚಿಯನ್ ಧರ್ಮದವರೆಂದೂ ಹೆಸರನ್ನು ಬದಲಾಯಿಸಿಕೊಳ್ಳುವುದಿಲ್ಲ. ಭಲೆ ತಮೋಪ್ರಧಾನದವರಾದರೂ ಸಹ ಕ್ರಿಶ್ಚಿಯನ್ ಧರ್ಮದಲ್ಲಿಯೇ ಇರುತ್ತಾರೆ. ನೀವು ದೇವಿ-ದೇವತೆಗಳಾಗುತ್ತೀರಿ ಆದರೆ ಪತಿತರಾಗಿರುವ ಕಾರಣ ತಮಗೆ ಹಿಂದೂಗಳೆಂದು ಹೇಳಿಕೊಳ್ಳುತ್ತೀರಿ. ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನಾವು ಮೂಲತಃ ದೇವಿ-ದೇವತೆಗಳಾಗಿದ್ದೆವೆಂದು ಮರೆತು ಹೋಗಿದ್ದಾರೆ. ತಮ್ಮನ್ನು ಯಾರೂ ದೇವತಾ ಧರ್ಮದವರೆಂದು ಕರೆಸಿಕೊಳ್ಳುವುದಿಲ್ಲ ಏಕೆಂದರೆ ವಿಕಾರಿಯಾಗಿದ್ದಾರೆ, ಇದು ದೇಹಾಭಿಮಾನವಾಗಿದೆ. ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ. ಇಲ್ಲಿ ಯಾವುದೇ ಸಾಧು-ಸಂತ ಮೊದಲಾದವರಿಲ್ಲ. ನಾನು ವ್ಯಾಪಾರಿಯಾಗಿದ್ದೇನೆ, ನಾನು ಇಂತಹವನಾಗಿದ್ದೇನೆ - ಇದೆಲ್ಲವೂ ದೇಹಾಭಿಮಾನವಾಗಿದೆ. ನೀವೀಗ ದೇಹೀ-ಅಭಿಮಾನಿಗಳು ಆಗಬೇಕಾಗಿದೆ. ದೇಹೀ-ಅಭಿಮಾನಿಗಳಾಗುವುದರಲ್ಲಿಯೇ ಪರಿಶ್ರಮವಿದೆ, ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತಂದೆಯನ್ನು ನೆನಪು ಮಾಡಬೇಕಾಗಿದೆ. ಕೈಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ. ನೀವು ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಎಲ್ಲರ ಸದ್ಗತಿದಾತನು ಒಬ್ಬ ಪ್ರಿಯತಮನಾಗಿದ್ದಾರೆ, ಯಾವಾಗ ಎಲ್ಲರಿಗೆ ಸದ್ಗತಿ ಸಿಗುವುದೋ, ಸ್ವರ್ಗದ ಸ್ಥಾಪನೆಯಾಗುವುದೋ ಆಗ ಅವರು ಬರುತ್ತಾರೆ. ದುಃಖದ ಹೆಸರು, ಗುರುತೂ ಸಹ ಮಾಯವಾಗಿ ಬಿಡುತ್ತದೆ. ಈಗ ನೀವು ಮಕ್ಕಳು ಬೇಹದ್ದಿನ ತಂದೆಯಿಂದ ಸ್ವರ್ಗದ, 21 ಜನ್ಮಗಳಿಗಾಗಿ ಸದಾ ಸುಖದ ಆಸ್ತಿಯನ್ನು ಪಡೆಯಲು ಇಲ್ಲಿಗೆ ಬಂದಿದ್ದೀರಿ, ಮತ್ತ್ಯಾವ ಮನುಷ್ಯ ಮಾತ್ರರು ಯಾರನ್ನೂ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ಶಿವ ತಂದೆಯು ಭಾರತದಲ್ಲಿಯೇ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗುವುದು ಎಂಬುದನ್ನು ಮರೆತು ಹೋಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ವಿದ್ಯೆಯ ಆಧಾರದ ಮೇಲೆ ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳಬೇಕು, ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಪಾವನರಾಗಿ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಮತ್ತೆ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ.

2. ಕೈಗಳಿಂದ ಕೆಲಸ ಮಾಡುತ್ತಾ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ಯಾವುದೇ ಉಲ್ಟಾ ಮಾತನ್ನು ಕೇಳಲೂಬಾರದು, ಹೇಳಲೂಬಾರದು.

ವರದಾನ:
ಸದಾ ತಮ್ಮ ಪವಿತ್ರ ಸ್ವರೂಪದಲ್ಲಿ ಸ್ಥಿತರಾಗಿದ್ದು ಗುಣವೆಂಬ ರತ್ನಗಳನ್ನು ಆಯ್ಕೆ ಮಾಡುವಂತಹ ಪವಿತ್ರ ಹಂಸ ಭವ.

ತಾವು ಪವಿತ್ರ ಹಂಸಗಳ ಸ್ವರೂಪವು ಪವಿತ್ರವಾಗಿರುವುದಾಗಿದೆ ಹಾಗೂ ಕರ್ತವ್ಯ - ಸದಾ ಗುಣಗಳೆಂಬ ರತ್ನಗಳನ್ನೇ ಆಯ್ಕೆ ಮಾಡುವುದು. ಅವಗುಣವೆಂಬ ಕಲ್ಲುಗಳನ್ನೆಂದಿಗೂ ಸಹ ಬುದ್ಧಿಯಲ್ಲಿ ಸ್ವೀಕರಿಸಬಾರದು. ಆದರೆ ಈ ಕರ್ತವ್ಯವನ್ನು ಪಾಲನೆ ಮಾಡುವುದಕ್ಕಾಗಿ ಸದಾ ಒಂದು ಆಜ್ಞೆಯು ನೆನಪಿರಲಿ - ಕೆಟ್ಟ ವಿಚಾರ ಮಾಡಬಾರದು, ಕೆಟ್ಟ ಮಾತುಗಳನ್ನು ಆಲಿಸಬಾರದು, ಕೆಟ್ಟ ಚಿತ್ರವನ್ನು ನೋಡಬಾರದು, ಕೆಟ್ಟ ಮಾತನ್ನು ಮಾತನಾಡಬಾರದು...... ಯಾರು ಈ ಆಜ್ಞೆಯನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾರೆಯೋ ಅವರು ಸದಾ ಸಾಗರನ ದಡದಲ್ಲಿರುತ್ತಾರೆ. ಹಂಸಗಳ ನೆಲೆಯೂ ಸಹ ಸಾಗರವೇ ಆಗಿದೆ.

ಸ್ಲೋಗನ್:
ನಡೆಯುತ್ತಾ-ಸುತ್ತಾಡುತ್ತಾ ಸೂಕ್ಷ್ಮ ದೇವತಾ ಸ್ವರೂಪದಲ್ಲಿ ಇರುವುದೇ ಬ್ರಹ್ಮಾ ತಂದೆಯ ಮನಃಪ್ರಿಯ ಕೊಡುಗೆಯಾಗಿದೆ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.