28.06.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-ತಮ್ಮ
ಉನ್ನತಿಗಾಗಿ ಪ್ರತೀ ದಿನ ರಾತ್ರಿ ಮಲಗುವ ಮೊದಲು ತಮ್ಮ ಲೆಕ್ಕಪತ್ರ(ಚಾರ್ಟ್)ವನ್ನು ನೋಡಿಕೊಳ್ಳಿ,
ಪರಿಶೀಲನೆ ಮಾಡಿ- ಇಡೀ ದಿನದಲ್ಲಿ ನಾನು ಯಾರಿಗೂ ದುಃಖವನ್ನು ಕೊಡಲಿಲ್ಲವೆ?”
ಪ್ರಶ್ನೆ:
ಮಹಾನ್
ಸೌಭಾಗ್ಯಶಾಲಿ ಮಕ್ಕಳಲ್ಲಿ ಯಾವ ಸಾಹಸವಿರುವುದು?
ಉತ್ತರ:
ಮಹಾನ್
ಸೌಭಾಗ್ಯಶಾಲಿಗಳು ಸ್ತ್ರೀ-ಪುರುಷ ಜೊತೆಯಲ್ಲಿರುತ್ತಾ ಸಹೋದರ-ಸಹೋದರಿಯಾಗಿರುತ್ತಾರೆ.
ಸ್ತ್ರೀ-ಪುರುಷರೆಂಬ ಭಾನವಿರುವುದಿಲ್ಲ. ಪಕ್ಕಾ ನಿಶ್ಚಯಬುದ್ಧಿಯವರಾಗಿರುತ್ತಾರೆ. ಮಹಾನ್
ಸೌಭಾಗ್ಯಶಾಲಿ ಮಕ್ಕಳು ಇದನ್ನು ತಕ್ಷಣ ತಿಳಿದುಕೊಳ್ಳುತ್ತಾರೆ- ನಾನು ವಿದ್ಯಾರ್ಥಿ, ಇವರೂ
ವಿದ್ಯಾರ್ಥಿಯಾಗಿದ್ದಾರೆ ಅಂದಮೇಲೆ ಸಹೋದರ-ಸಹೋದರಿಯಾದರು ಆದರೆ ತಮ್ಮನ್ನು ಆತ್ಮನೆಂದು ತಿಳಿದಾಗಲೇ
ಈ ಸಾಹಸವು ಕೆಲಸ ಮಾಡುತ್ತದೆ.
ಗೀತೆ:
ಮುಖವನ್ನು
ನೋಡಿಕೋ ಪ್ರಾಣಿ..............
ಓಂ ಶಾಂತಿ.
ಈ ಮಾತನ್ನು ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ. ಮಕ್ಕಳೇ, ಮಲಗುವ ಸಮಯದಲ್ಲಿ ತಮ್ಮ
ದಿನಚರಿಯನ್ನು ನೋಡಿಕೊಳ್ಳಿ- ಯಾರಿಗೂ ದುಃಖವನ್ನು ಕೊಡಲಿಲ್ಲವೆ ಮತ್ತು ಎಷ್ಟು ಸಮಯ ತಂದೆಯನ್ನು
ನೆನಪು ಮಾಡಿದೆನು? ಮೂಲಮಾತೇ ಇದಾಗಿದೆ. ಗೀತೆಯಲ್ಲಿಯೂ ಹೇಳುತ್ತಾರೆ- ತಮ್ಮೊಳಗೆ ನೋಡಿಕೊಳ್ಳಿ-
ನಾನೆಷ್ಟು ತಮೋಪ್ರಧಾನದಿಂದ ಸತೋಪ್ರಧಾನನಾಗಿದ್ದೇನೆ. ಇಡೀ ದಿನದಲ್ಲಿ ಎಷ್ಟು ಸಮಯ ಮಧುರತಂದೆಯನ್ನು
ನೆನಪು ಮಾಡಿದೆನು? ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ಎಲ್ಲಾ ಆತ್ಮಗಳಿಗೆ ಹೇಳಲಾಗುತ್ತದೆ-
ತಮ್ಮ ತಂದೆಯನ್ನು ನೆನಪು ಮಾಡಿ, ಈಗ ಹಿಂತಿರುಗಿ ಹೋಗಬೇಕಾಗಿದೆ. ಎಲ್ಲಿಗೆ ಹೋಗಬೇಕು?
ಶಾಂತಿಧಾಮಕ್ಕೆ ಹೋಗಿ ನಂತರ ಹೊಸಪ್ರಪಂಚಕ್ಕೆ ಬರಬೇಕಾಗಿದೆ. ಇದಂತೂ ಹಳೆಯ ಪ್ರಪಂಚವಲ್ಲವೆ. ಯಾವಾಗ
ತಂದೆಯು ಬರುವರೋ ಆಗಲೇ ಸ್ವರ್ಗದ ಬಾಗಿಲು ತೆರೆಯುವುದು. ನಾವೀಗ ಸಂಗಮಯುಗದಲ್ಲಿ ಕುಳಿತಿದ್ದೇವೆ,
ಇದೂ ಸಹ ಆಶ್ಚರ್ಯವಾಗಿದೆ. ಸಂಗಮಯುಗದಲ್ಲಿ ಬಂದು ಹಡಗಿನಲ್ಲಿ ಕುಳಿತು ಮತ್ತೆ ಇಳಿದುಬಿಡುತ್ತೇವೆ.
ಈಗ ಸಂಗಮಯುಗದಲ್ಲಿ ಪುರುಷೋತ್ತಮರಾಗಲು ಮತ್ತು ತೀರವನ್ನು ಸೇರಲು ನಾವೇ ಇಲ್ಲಿ ಕುಳಿತಿದ್ದೇವೆ
ಅಂದಮೇಲೆ ಹಳೆಯ ಕಲಿಯುಗೀ ಪ್ರಪಂಚದಿಂದ ಮನಸ್ಸನ್ನು ತೆಗೆಯಬೇಕಾಗಿದೆ. ಕೇವಲ ಈ ಶರೀರದ ಮೂಲಕ
ಪಾತ್ರವನ್ನಭಿನಯಿಸಬೇಕಾಗಿದೆ. ನಾವೀಗ ಬಹಳ ಖುಷಿಯಿಂದ ಹಿಂತಿರುಗಿ ಹೋಗಬೇಕಾಗಿದೆ. ಮನುಷ್ಯರು
ಮುಕ್ತಿಗಾಗಿ ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ ಆದರೆ ಮುಕ್ತಿ-ಜೀವನ್ಮುಕ್ತಿಯ ಅರ್ಥವನ್ನು
ತಿಳಿದುಕೊಂಡಿಲ್ಲ. ಶಾಸ್ತ್ರಗಳ ಅಕ್ಷರಗಳನ್ನು ಕೇವಲ ಕೇಳಿಸಿಕೊಂಡಿದ್ದಾರೆ ಆದರೆ ಅದೇನಾಗಿದೆ, ಯಾರು
ಕೊಡುತ್ತಾರೆ, ಯಾವಾಗ ಕೊಡುತ್ತಾರೆ ಎಂಬುದೇನನ್ನೂ ತಿಳಿದುಕೊಂಡಿಲ್ಲ. ತಂದೆಯು
ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡುವುದಕ್ಕಾಗಿ ಬರುತ್ತಾರೆ. ಅದು ಕೇವಲ ಒಂದುಬಾರಿಯಲ್ಲ,
ಅನೇಕಬಾರಿ ಬರುತ್ತಾರೆ. ಲೆಕ್ಕವಿಲ್ಲದಷ್ಟುಬಾರಿ ನೀವು ಮುಕ್ತಿ-ಜೀವನ್ಮುಕ್ತಿ ನಂತರ
ಜೀವನಬಂಧನದಲ್ಲಿ ಬಂದಿದ್ದೀರಿ. ಈಗ ನಿಮಗೂ ಸಹ ಇದು ಅರ್ಥವಾಯಿತು. ನಾವಾತ್ಮಗಳಾಗಿದ್ದೇವೆ, ತಂದೆಯು
ನಾವಾತ್ಮಗಳಿಗೆ ಬಹಳ ಶಿಕ್ಷಣವನ್ನು ಕೊಡುತ್ತಾರೆ. ಭಕ್ತಿಮಾರ್ಗದಲ್ಲಿ ದುಃಖದಲ್ಲಿ ನೀವು ಬಹಳ ನೆನಪು
ಮಾಡುತ್ತಿದ್ದಿರಿ ಆದರೆ ಪರಿಚಯವಿರಲಿಲ್ಲ. ಈಗ ನಾನು ನಿಮಗೆ ನನ್ನ ಪರಿಚಯವನ್ನು ಕೊಟ್ಟಿದ್ದೇನೆ.
ನನ್ನನ್ನು ಹೇಗೆ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಇಲ್ಲಿಯವರೆಗೆ ಎಷ್ಟು
ವಿಕರ್ಮಗಳಾಗಿವೆ ಎಂದು ತಮ್ಮ ಲೆಕ್ಕಪತ್ರವನ್ನು ನೀಡುವುದರಿಂದ ತಿಳಿಯುತ್ತದೆ. ಯಾರು ಸೇವೆಯಲ್ಲಿ
ತೊಡಗಿರುವರೋ ಅವರಿಗೆ ತಿಳಿಯುತ್ತದೆ. ಮಕ್ಕಳಿಗೆ ಸರ್ವೀಸಿನ ಉಮ್ಮಂಗವಿರುತ್ತದೆ. ಪರಸ್ಪರ ಸೇರಿ
ಸಲಹೆ ತೆಗೆದುಕೊಂಡು ಮನುಷ್ಯರ ಜೀವನವನ್ನು ವಜ್ರಸಮಾನ ಮಾಡುವ ಸೇವೆಗಾಗಿ ಹೋರಾಡುತ್ತಾರೆ. ಇದು
ಎಷ್ಟು ಪುಣ್ಯದ ಕಾರ್ಯವಾಗಿದೆ! ಇದರಲ್ಲಿ ಖರ್ಚಿನ ಯಾವುದೇ ಮಾತಿಲ್ಲ ಕೇವಲ ವಜ್ರಸಮಾನರಾಗಲು
ತಂದೆಯನ್ನು ನೆನಪು ಮಾಡಬೇಕಾಗಿದೆ. ಪುಖರಾಜಪರಿ, ಸಬ್ಜ್ ಪರಿ ಎಂದು ವಜ್ರಗಳ ಯಾವ ಹೆಸರುಗಳಿವೆಯೋ
ಅದು ನೀವಾಗಿದ್ದೀರಿ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ವಜ್ರಸಮಾನರಾಗಿಬಿಡುತ್ತೀರಿ. ಕೆಲವರು
ಮಾಣಿಕ್ಯದಂತೆ, ಕೆಲವರು ಪುಖರಾಜ ವಜ್ರದಂತೆ ಆಗುತ್ತಾರೆ. ನವರತ್ನಗಳಿರುತ್ತವೆಯಲ್ಲವೆ. ಯಾವುದಾದರೂ
ಗ್ರಹಚಾರವು ಕುಳಿತರೆ ನವರತ್ನಗಳ ಉಂಗುರವನ್ನು ಹಾಕುತ್ತಾರೆ. ಭಕ್ತಿಮಾರ್ಗದಲ್ಲಿ ಬಹಳಷ್ಟು
ಮಂತ್ರಗಳನ್ನು ಕೊಡುತ್ತಾರೆ. ಇಲ್ಲಂತೂ ಎಲ್ಲಾ ಧರ್ಮದವರಿಗಾಗಿ ಒಂದೇ ಮಂತ್ರವಾಗಿದೆ- ಮನ್ಮನಾಭವ.
ಏಕೆಂದರೆ ದೇವರೊಬ್ಬನೆ. ಮನುಷ್ಯರಿಂದ ದೇವತೆಗಳಾಗುವ ಹಾಗೂ ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುವ
ಪುರುಷಾರ್ಥವು ಒಂದೇ ಆಗಿದೆ- ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ ಮತ್ತ್ಯಾವುದೇ ಕಷ್ಟದ
ಮಾತಿಲ್ಲ. ನನಗೆ ನೆನಪು ಏಕೆ ಸ್ಥಿರವಾಗಿರುವುದಿಲ್ಲ ಎಂಬುದನ್ನು ಆಲೋಚಿಸಬೇಕು. ಇಡೀ ದಿನದಲ್ಲಿ
ಇಷ್ಟು ಕಡಿಮೆ ನೆನಪು ಮಾಡಿದೆನು, ಯಾವಾಗ ಈ ನೆನಪಿನಿಂದ ನಾವು ಸದಾ ಆರೋಗ್ಯವಂತರು,
ನಿರೋಗಿಗಳಾಗುತ್ತೇವೆಂದರೆ ತಮ್ಮ ಚಾರ್ಟನ್ನು ಇಟ್ಟುಕೊಂಡು ನಾವೇಕೆ ಉನ್ನತಿಯನ್ನು ಪಡೆಯಬಾರದು?
ಅನೇಕರಿದ್ದಾರೆ, 2-4 ದಿನ ಚಾರ್ಟನ್ನಿಟ್ಟು ಮತ್ತೆ ಮರೆತುಹೋಗುತ್ತಾರೆ. ಯಾರಿಗೆ ಬೇಕಾದರೂ ಈ
ಜ್ಞಾನವನ್ನು ತಿಳಿಸುವುದು ಬಹಳ ಸುಲಭವಾಗುತ್ತದೆ. ಹೊಸಪ್ರಪಂಚಕ್ಕೆ ಸತ್ಯಯುಗ ಮತ್ತು ಹಳೆಯ
ಪ್ರಪಂಚಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಕಲಿಯುಗವೇ ಪರಿವರ್ತನೆಯಾಗಿ ಸತ್ಯಯುಗವಾಗುವುದು.
ಪರಿವರ್ತನೆಯಾಗುತ್ತದೆ ಆದ್ದರಿಂದಲೇ ನಾವು ತಿಳಿಸುತ್ತಿದ್ದೇವೆ.
ಕೆಲವು ಮಕ್ಕಳಿಗೆ ಇದೂ
ಸಹ ಪಕ್ಕಾ ನಿಶ್ಚಯವಿಲ್ಲ- ಆ ನಿರಾಕಾರ ತಂದೆಯೇ ನಮಗೆ ಬ್ರಹ್ಮಾರವರ ತನುವಿನಲ್ಲಿ ಬಂದು
ಓದಿಸುತ್ತಿದ್ದಾರೆ. ಅರೆ! ಬ್ರಾಹ್ಮಣರಲ್ಲವೆ. ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ,
ಅದರ ಅರ್ಥವೇನಾಗಿದೆ, ಆಸ್ತಿಯೆಲ್ಲಿಂದ ಸಿಗುವುದು! ದತ್ತು ಮಾಡಿಕೊಳ್ಳಲಾಗುತ್ತದೆ ಆದ್ದರಿಂದಲೇ
ಪ್ರಾಪ್ತಿ ಸಿಗುತ್ತದೆ. ನೀವು ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರು ಏಕೆ ಆಗಿದ್ದೀರಿ?
ನಿಜವಾಗಿಯೂ ಆಗಿದ್ದೀರೋ ಅಥವಾ ಇದರಲ್ಲಿಯೂ ಯಾರಿಗಾದರೂ ಸಂಶಯ ಬರುತ್ತದೆಯೋ? ಯಾರು ಮಹಾನ್
ಸೌಭಾಗ್ಯಶಾಲಿ ಮಕ್ಕಳಿದ್ದಾರೆಯೋ ಅವರು ಸ್ತ್ರೀ-ಪುರುಷರಿಬ್ಬರೂ ಜೊತೆಯಲ್ಲಿರುತ್ತಾ
ಸಹೋದರ-ಸಹೋದರಿಯರಾಗುತ್ತಾರೆ. ಸ್ತ್ರೀ-ಪುರುಷರೆನ್ನುವ ಪರಿವೆಯಿರುವುದಿಲ್ಲ. ಪಕ್ಕಾ
ನಿಶ್ಚಯಬುದ್ಧಿಯಿಲ್ಲವೆಂದರೆ ಸ್ತ್ರೀ-ಪುರುಷರೆಂಬ ದೃಷ್ಟಿಯು ಪರಿವರ್ತನೆಯಾಗುವುದರಲ್ಲಿ ಸಮಯ
ಹಿಡಿಸುತ್ತದೆ. ಮಹಾನ್ ಸೌಭಾಗ್ಯಶಾಲಿ ಮಕ್ಕಳೇ ನಾನೂ ವಿದ್ಯಾರ್ಥಿ, ಇವರೂ ವಿದ್ಯಾರ್ಥಿ ಅಂದಾಗ
ಸಹೋದರ-ಸಹೋದರ ಆದೆವೆಂದು ಬಹುಬೇಗನೆ ಅರ್ಥಮಾಡಿಕೊಳ್ಳುತ್ತೇವೆ ಆದರೆ ಯಾವಾಗ ತಮ್ಮನ್ನು ಆತ್ಮನೆಂದು
ತಿಳಿಯುವಿರೋ ಆಗಲೇ ಈ ಸಾಹಸವು ನಡೆಯಲು ಸಾಧ್ಯ. ಆತ್ಮಗಳೆಲ್ಲರೂ ಸಹೋದರ-ಸಹೋದರರಾಗಿದ್ದೀರಿ ಮತ್ತೆ
ಬ್ರಹ್ಮಾಕುಮಾರ-ಕುಮಾರಿಯರಾದಾಗ ಸಹೋದರ-ಸಹೋದರಿಯರಾಗುತ್ತೀರಿ. ಕೆಲವರಂತೂ ಬಂಧನಮುಕ್ತರೂ ಆಗಿದ್ದಾರೆ,
ಆದರೂ ಸಹ ಕೆಲವೊಮ್ಮೆ ಬುದ್ಧಿಯು ಹೋಗುತ್ತದೆ. ಕರ್ಮಾತೀತ ಸ್ಥಿತಿಯನ್ನು ಹೊಂದುವುದರಲ್ಲಿ ಸಮಯ
ಹಿಡಿಸುತ್ತದೆ. ನೀವು ಮಕ್ಕಳಲ್ಲಿ ಬಹಳ ಖುಷಿಯಿರಬೇಕು, ಯಾವುದೇ ಜಂಜಾಟವಿಲ್ಲ. ನಾವಾತ್ಮಗಳು ಈಗ
ಹಳೆಯ ಶರೀರ ಇತ್ಯಾದಿಯೆಲ್ಲವನ್ನೂ ಬಿಟ್ಟು ತಂದೆಯ ಬಳಿ ಹೋಗುತ್ತೇವೆ. ನಾವು ಎಷ್ಟೊಂದು
ಪಾತ್ರವನ್ನಭಿನಯಿಸಿದ್ದೇವೆ, ಈಗ ಚಕ್ರವು ಪೂರ್ಣವಾಗುತ್ತದೆ. ಹೀಗೆ ತಮ್ಮೊಂದಿಗೆ ತಾವು
ಮಾತನಾಡಿಕೊಳ್ಳಬೇಕು. ಎಷ್ಟು ಮಾತನಾಡಿಕೊಳ್ಳುತ್ತಾ ಇರುತ್ತೀರೋ ಅಷ್ಟು ಹರ್ಷಿತರಾಗಿರುತ್ತೀರಿ
ಮತ್ತು ನಾವು ಎಲ್ಲಿಯವರೆಗೆ ಲಕ್ಷ್ಮೀ-ನಾರಾಯಣರನ್ನು ವರಿಸಲು ಯೋಗ್ಯರಾಗಿದ್ದೇವೆಂದು ತಮ್ಮ
ಚಲನೆಯನ್ನೂ ನೋಡಿಕೊಳ್ಳುತ್ತಾ ಇರುತ್ತೀರಿ. ಬುದ್ಧಿಯಿಂದ ತಿಳಿಯುತ್ತೀರಿ- ಈಗ ಇನ್ನು ಸ್ವಲ್ಪವೆ
ಸಮಯದಲ್ಲಿ ಹಳೆಯ ಶರೀರವನ್ನು ಬಿಡಬೇಕಾಗಿದೆ. ನೀವು ಪಾತ್ರಧಾರಿಗಳಾಗಿದ್ದೀರಲ್ಲವೆ. ತಮ್ಮನ್ನು ಈಗ
ಪಾತ್ರಧಾರಿಯೆಂದು ತಿಳಿಯುತ್ತೀರಿ, ಮೊದಲು ಹೀಗೆ ತಿಳಿಯುತ್ತಿರಲಿಲ್ಲ. ಈಗ ಜ್ಞಾನವು
ಸಿಕ್ಕಿರುವುದರಿಂದ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು. ಹಳೆಯ ಪ್ರಪಂಚದೊಂದಿಗೆ ವೈರಾಗ್ಯ,
ತಿರಸ್ಕಾರವು ಬರಬೇಕು.
ನೀವು ಬೇಹದ್ದಿನ
ಸನ್ಯಾಸಿಗಳು, ರಾಜಯೋಗಿಗಳಾಗಿದ್ದೀರಿ. ಬುದ್ಧಿಯಿಂದ ಈ ಹಳೆಯ ಪ್ರಪಂಚದ ಸನ್ಯಾಸ ಮಾಡಬೇಕಾಗಿದೆ.
ಇದರೊಂದಿಗೆ ಬುದ್ಧಿಯನ್ನಿಡಬಾರದೆಂದು ಆತ್ಮವು ತಿಳಿಯುತ್ತದೆ. ಬುದ್ಧಿಯಿಂದ ಈ ಹಳೆಯ ಪ್ರಪಂಚ,
ಹಳೆಯ ಶರೀರದ ಸನ್ಯಾಸ ಮಾಡಿದ್ದೇವೆ. ಈಗ ನಾವಾತ್ಮಗಳು ಹೋಗುತ್ತೇವೆ. ಹೋಗಿ ತಂದೆಯೊಂದಿಗೆ ಮಿಲನ
ಮಾಡುತ್ತೇವೆ. ಯಾವಾಗ ಒಬ್ಬ ತಂದೆಯನ್ನು ನೆನಪು ಮಾಡುತ್ತೀರೋ ಆಗಲೇ ಮಿಲನ ಮಾಡುತ್ತೀರಿ,
ಮತ್ತ್ಯಾರದನ್ನಾದರೂ ನೆನಪು ಮಾಡಿದರೆ ಅವಶ್ಯವಾಗಿ ಸ್ಮೃತಿಯೇ ಬರುವುದು ನಂತರ ಶಿಕ್ಷೆಯು ಸಿಗುತ್ತದೆ
ಮತ್ತು ಪದವಿಯೂ ಭ್ರಷ್ಟವಾಗುವುದು. ಯಾರು ಒಳ್ಳೊಳ್ಳೆಯ ವಿದ್ಯಾರ್ಥಿಗಳಿರುವರೋ ಅವರು
ವಿದ್ಯಾರ್ಥಿವೇತನವನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆಂದು ತಮ್ಮೊಂದಿಗೆ ಪ್ರತಿಜ್ಞೆ
ಮಾಡಿಕೊಳ್ಳುತ್ತಾರೆ ಅಂದಾಗ ಇಲ್ಲಿಯೂ ಸಹ ಪ್ರತಿಯೊಬ್ಬರೂ ಸಂಕಲ್ಪವಿಡಬೇಕು- ಈಗ ನಾವು ತಂದೆಯಿಂದ
ರಾಜ್ಯಭಾಗ್ಯವನ್ನು ತೆಗೆದುಕೊಂಡೇ ತೀರುತ್ತೇವೆ. ಮತ್ತೆ ಚಲನೆಯೂ ಸಹ ಅದೇರೀತಿ ಇರುತ್ತದೆ.
ಮುಂದೆಹೋದಂತೆ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ತೀಕ್ಷ್ಣವಾಗಿ ಗುರಿಯನ್ನು ಮುಟ್ಟಬೇಕಾಗಿದೆ.
ನಿತ್ಯವೂ ಸಂಜೆ ತಮ್ಮ ಸ್ಥಿತಿಯನ್ನು ನೋಡಿಕೊಳ್ಳುವುದರಿಂದಲೇ ಗುರಿಯನ್ನು ತಲುಪಲು ಸಾಧ್ಯ. ತಂದೆಯ
ಬಳಿ ಪ್ರತಿಯೊಬ್ಬರ ಸಮಾಚಾರವಂತೂ ಬರುತ್ತದೆಯಲ್ಲವೆ. ತಂದೆಯು ಪ್ರತಿಯೊಬ್ಬರನ್ನೂ
ತಿಳಿದುಕೊಂಡಿದ್ದಾರೆ. ನಿಮ್ಮಲ್ಲಿ ಅಂತಹ ಗುಣಗಳು ಕಾಣುವುದಿಲ್ಲವೆಂದು ಕೆಲವರಿಗೆ ಹೇಳಿಯೂ
ಹೇಳುತ್ತಾರೆ. ಈ ಲಕ್ಷ್ಮೀ-ನಾರಾಯಣರಂತಹ ಗುಣಗಳು ನಿಮ್ಮಲ್ಲಿ ಕಾಣುತ್ತಿಲ್ಲ. ನಡುವಳಿಕೆ,
ಆಹಾರ-ಪಾನೀಯ ಇತ್ಯಾದಿಗಳನ್ನು ನೋಡಿಕೊಳ್ಳಿ. ಸೇವೆಯನ್ನೆಲ್ಲಿ ಮಾಡುತ್ತೀರಿ! ಮಾಡುವುದಿಲ್ಲವೆಂದರೆ
ಏನಾಗುತ್ತೀರಿ? ಆದ್ದರಿಂದ ನಾವು ಏನಾದರೂ ಮಾಡಿ ತೋರಿಸಬೇಕೆಂದು ತಿಳಿಯುತ್ತಾರೆ. ಇದರಲ್ಲಿ
ಪ್ರತಿಯೊಬ್ಬರೂ ಸ್ವಯಂ ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳಲು ಓದಬೇಕಾಗಿದೆ. ಒಂದುವೇಳೆ
ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠಪದವಿಯನ್ನೂ ಪಡೆಯುವುದಿಲ್ಲ. ಈಗ ತೇರ್ಗಡೆಯಾಗಲಿಲ್ಲವೆಂದರೆ
ಕಲ್ಪ-ಕಲ್ಪಾಂತರವೂ ಆಗುವುದಿಲ್ಲ. ನಾವು ಯಾವ ಪದವಿಯನ್ನು ಪಡೆಯಲು ಯೋಗ್ಯರಾಗಿದ್ದೇವೆ ಎಂಬುದೆಲ್ಲವೂ
ಸಾಕ್ಷಾತ್ಕಾರವಾಗುತ್ತದೆ. ತಮ್ಮ ಪದವಿಯ ಸಾಕ್ಷಾತ್ಕಾರವನ್ನೂ ಮಾಡುತ್ತಾ ಇರುತ್ತೀರಿ. ಆರಂಭದಲ್ಲಿಯೂ
ಸಹ ಸಾಕ್ಷಾತ್ಕಾರ ಮಾಡುತ್ತಿದ್ದರು, ಅದನ್ನು ತಿಳಿಸಲು ತಂದೆಯು ನಿರಾಕರಿಸುತ್ತಿದ್ದರು ಹಾಗೆಯೇ
ನಾವೇನಾಗುತ್ತೇವೆ ಎಂಬುದೆಲ್ಲವೂ ಅಂತಿಮದಲ್ಲಿ ಸಾಕ್ಷಾತ್ಕಾರವಾಗುವುದು. ಆದರೆ ಆಗ ಏನನ್ನೂ ಮಾಡಲು
ಸಾಧ್ಯವಾಗುವುದಿಲ್ಲ. ಕಲ್ಪ-ಕಲ್ಪಾಂತರವೂ ಇದೇ ಗತಿಯಾಗುವುದು. ಡಬಲ್ ಕಿರೀಟ, ಡಬಲ್
ರಾಜ್ಯಭಾಗ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈಗಂತೂ ಪುರುಷಾರ್ಥ ಮಾಡಲು ಬಹಳ ಅವಕಾಶವಿದೆ.
ತ್ರೇತಾದ ಅಂತ್ಯವರೆಗೆ 16,108ರ ದೊಡ್ಡಮಾಲೆಯು ಆಗಬೇಕಾಗಿದೆ. ನೀವಿಲ್ಲಿ ಬಂದಿರುವುದೇ ನರನಿಂದ
ನಾರಾಯಣರಾಗುವ ಪುರುಷಾರ್ಥ ಮಾಡಲು. ಯಾವಾಗ ಕಡಿಮೆ ಪದವಿಯ ಸಾಕ್ಷಾತ್ಕಾರವಾಗುವುದೋ ಆಗ ಬಹಳ
ತಿರಸ್ಕಾರವುಂಟಾಗುತ್ತದೆ, ತಲೆಬಗ್ಗಿಸುತ್ತೀರಿ. ನಾನಂತೂ ಏನೂ ಪುರುಷಾರ್ಥ ಮಾಡಲಿಲ್ಲ,
ಚಾರ್ಟನ್ನಿಡಿ, ಹೀಗೆ ಮಾಡಿ ಹಾಗೆ ಮಾಡಿ ಎಂದು ಎಷ್ಟೊಂದು ತಿಳಿಸಿದರು ಆದರೆ ಮಾಡಲಿಲ್ಲ ಎಂದು
ಪಶ್ಚಾತ್ತಾಪಪಡುವಿರಿ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಯಾರೆಲ್ಲಾ ಮಕ್ಕಳು ಬರುವರೋ ಎಲ್ಲರ
ಭಾವಚಿತ್ರಗಳಿರಲಿ. ಭಲೆ ಸಾಮೂಹಿಕ ಭಾವಚಿತ್ರವೇ ಆಗಿರಲಿ, ಪಾರ್ಟಿಯನ್ನು ಕರೆದುಕೊಂಡು
ಬರುತ್ತೀರಲ್ಲವೆ. ಮತ್ತೆ ಆ ಭಾವಚಿತ್ರದಲ್ಲಿ ದಿನಾಂಕ, ಕ್ರಮಸಂಖ್ಯೆ ಎಲ್ಲವೂ ಬರೆಯಲ್ಪಟ್ಟಿರಲಿ.
ಇದರಿಂದ ನಂತರ ಯಾರ್ಯಾರು ಬಿದ್ದುಹೋದರೆಂದು ತಂದೆಯು ತಿಳಿಸುತ್ತಾರೆ. ತಂದೆಯ ಬಳಿ ಎಲ್ಲರ
ಸಾಮಾಚಾರಗಳು ಬರುತ್ತವೆ ಎಂದು ತಿಳಿಸುತ್ತಿರುತ್ತಾರೆ. ಎಷ್ಟೊಂದು ಮಕ್ಕಳನ್ನು ಮಾಯೆಯು
ತೆಗೆದುಕೊಂಡುಹೋಯಿತು. ಸಮಾಪ್ತಿಯಾದರು, ಕೆಲವರು ಕನ್ಯೆಯರೂ ಸಹ ಬೀಳುತ್ತಾರೆ. ದುರ್ಗತಿಯನ್ನು
ಪಡೆದುಕೊಳ್ಳುತ್ತಾರೆ. ಮಾತೇ ಕೇಳಬೇಡಿ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ,
ಎಚ್ಚರದಿಂದಿರಿ, ಮಾಯೆಯು ಯಾವುದಾದರೊಂದು ರೂಪವನ್ನು ಧರಿಸಿ ಹಿಡಿದುಕೊಳ್ಳುತ್ತದೆ. ಯಾರದೇ
ನಾಮ-ರೂಪದಕಡೆ ನೋಡಲೂಬೇಡಿ. ಭಲೆ ಈ ಕಣ್ಣುಗಳಿಂದ ನೋಡುತ್ತೀರಿ ಆದರೆ ಬುದ್ಧಿಯಲ್ಲಿ ಒಬ್ಬ ತಂದೆಯದೇ
ನೆನಪಿರಲಿ. ಮೂರನೆಯ ನೇತ್ರವು ಇದಕ್ಕಾಗಿಯೇ ಸಿಕ್ಕಿದೆ- ತಂದೆಯನ್ನೇ ನೋಡಿ ಮತ್ತು ನೆನಪು ಮಾಡಿ.
ದೇಹಾಭಿಮಾನವನ್ನು ಬಿಡುತ್ತಾಹೋಗಿ ಅಂದರೆ ಕೆಳಗೆ ನೋಡಿಕೊಂಡು ಅನ್ಯರೊಂದಿಗೆ ಮಾತನಾಡಿ ಎಂದಲ್ಲ. ಈ
ರೀತಿ ನಿರ್ಬಲರಾಗಬಾರದು. ನೋಡುತ್ತಿದ್ದರೂ ಸಹ ಬುದ್ಧಿಯೋಗವು ತಮ್ಮ ಪ್ರಿಯತಮನಕಡೆ ಇರಲಿ. ಈ
ಪ್ರಪಂಚವನ್ನು ನೋಡುತ್ತಿದ್ದರೂ ಸಹ ಇದು ಸ್ಮಶಾನವಾಗಲಿದೆ ಎಂದು ಆಂತರ್ಯದಲ್ಲಿ ತಿಳಿಯಿರಿ.
ಇದರೊಂದಿಗೇನೂ ಸಂಬಂಧನವನ್ನಿಡುತ್ತೀರಿ! ನಿಮಗೆ ಜ್ಞಾನವು ಸಿಗುತ್ತದೆ. ಅದನ್ನು ಧಾರಣೆ ಮಾಡಿ
ಅದರನುಸಾರ ನಡೆಯಬೇಕಾಗಿದೆ.
ನೀವು ಮಕ್ಕಳು
ಪ್ರದರ್ಶನಿಯಲ್ಲಿ ತಿಳಿಸುವಾಗ ಸಾವಿರಾರುಬಾರಿ ಬಾಯಿಂದ ಬಾಬಾ, ಬಾಬಾ ಎಂದು ಬರಬೇಕು. ತಂದೆಯನ್ನು
ನೆನಪು ಮಾಡುವುದರಿಂದ ನಿಮಗೆ ಎಷ್ಟೊಂದು ಲಾಭವಾಗುವುದು! ಶಿವತಂದೆಯು ತಿಳಿಸುತ್ತಾರೆ-
ನನ್ನೊಬ್ಬನನ್ನೇ ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಶಿವತಂದೆಯನ್ನು ನೆನಪು
ಮಾಡುವುದರಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗಿಬಿಡುತ್ತೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ-
ನನ್ನನ್ನೇ ನೆನಪು ಮಾಡಿ. ಮರೆಯದಿರಿ. ತಂದೆಯ ಆದೇಶವು ಸಿಕ್ಕಿದೆ- ಮನ್ಮನಾಭವ. ಈ ಬಾಬಾ ಎನ್ನುವ
ಶಬ್ಧವನ್ನು ತಮ್ಮಲ್ಲಿ ಚೆನ್ನಾಗಿ ಅರೆಯುತ್ತಾ (ಮನನ ಮಾಡುತ್ತಾ) ಇರಿ. ಇಡೀ ದಿನ ಬಾಬಾ, ಬಾಬಾ
ಎನ್ನುತ್ತಿರಬೇಕು. ಬೇರೆ ಯಾವುದೇ ಮಾತಿಲ್ಲ. ನಂಬರ್ವನ್ ಮುಖ್ಯಮಾತೇ ಇದಾಗಿದೆ. ಮೊದಲು ತಂದೆಯನ್ನು
ಅರಿತುಕೊಳ್ಳಿ. ಇದರಲ್ಲಿಯೇ ಕಲ್ಯಾಣವಿದೆ. ಈ 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳುವುದು ಬಹಳ
ಸಹಜವಾಗಿದೆ. ಮಕ್ಕಳಿಗೆ ಪ್ರದರ್ಶನಿಯಲ್ಲಿ ತಿಳಿಸಿಕೊಡಲು ಬಹಳ ಉಮ್ಮಂಗವಿರಬೇಕು. ಒಂದುವೇಳೆ ನಮಗೆ
ತಿಳಿಸುವುದಕ್ಕೆ ಆಗುವುದಿಲ್ಲ ಎನಿಸಿದರೆ ನಾವು ನಮ್ಮ ಹಿರಿಯ ಸಹೋದರಿಯನ್ನು ಕರೆಸುತ್ತೇವೆ ಎಂದು
ಹೇಳಬಹುದು ಏಕೆಂದರೆ ಇದು ಪಾಠಶಾಲೆಯಾಗಿದೆಯಲ್ಲವೆ. ಇದರಲ್ಲಿ ಕೆಲವರು ಕಡಿಮೆ ಮತ್ತು ಕೆಲವರು
ಹೆಚ್ಚು ಓದುತ್ತಾರೆ. ಹೀಗೆ ಹೇಳುವುದರಲ್ಲಿ ದೇಹಾಭಿಮಾನವು ಬರಬಾರದು. ಎಲ್ಲಿ ದೊಡ್ಡ
ಸೇವಾಕೇಂದ್ರವಿರುವುದೋ ಅಲ್ಲಿ ಪ್ರದರ್ಶನಿಯನ್ನು ಇಟ್ಟಿರಬೇಕು- ಗೇಟ್ ವೇ ಟು ಹೆವೆನ್ ಎಂಬ ಚಿತ್ರವು
ಹಾಕಲ್ಪಟ್ಟಿರಲಿ. ಈಗ ಸ್ವರ್ಗದ ಬಾಗಿಲು ತೆರೆಯುತ್ತಿದೆ. ಈಗ ಆಗಲಿರುವ ಯುದ್ಧಕ್ಕೆ ಮೊದಲೇ
ಆಸ್ತಿಯನ್ನು ತೆಗೆದುಕೊಳ್ಳಿ. ಹೇಗೆ ಮಂದಿರಕ್ಕೆ ಪ್ರತಿನಿತ್ಯವೂ ಹೋಗುತ್ತಾರೆ ಹಾಗೆಯೇ ನಿಮ್ಮದು
ಪಾಠಶಾಲೆಯಾಗಿದೆ. ಚಿತ್ರಗಳನ್ನು ಹಾಕಿದ್ದಾಗ ಅದರಬಗ್ಗೆ ತಿಳಿಸುವುದರಲ್ಲಿ ಸಹಜವಾಗುವುದು. ನಾವು
ನಮ್ಮ ಪಾಠಶಾಲೆಯನ್ನು ಚಿತ್ರಶಾಲೆಯನ್ನಾಗಿ ಹೇಗೆ ಮಾಡುವುದು ಪ್ರಯತ್ನಪಡಿ. ನೋಡುವುದಕ್ಕೆ
ಸುಂದರವಾಗಿದ್ದಾಗ ಮನುಷ್ಯರು ಬರುತ್ತಾರೆ. ವೈಕುಂಠದಲ್ಲಿ ಹೋಗುವ ಮಾತು ಒಂದುಸೆಕೆಂಡಿನಲ್ಲಿ
ತಿಳಿದುಕೊಳ್ಳುವ ಮಾತಾಗಿದೆ. ತಂದೆಯು ತಿಳಿಸುತ್ತಾರೆ- ತಮೋಪ್ರಧಾನರಂತೂ ವೈಕುಂಠದಲ್ಲಿ ಹೋಗಲು
ಸಾಧ್ಯವಿಲ್ಲ. ಹೊಸಪ್ರಪಂಚದಲ್ಲಿ ಹೋಗಲು ಸತೋಪ್ರಧಾನರಾಗಬೇಕಾಗಿದೆ. ಇದರಲ್ಲಿ ಏನು ಖರ್ಚಿಲ್ಲ.
ಯಾವುದೇ ಮಂದಿರ ಅಥವಾ ಚರ್ಚುಗಳು ಇತ್ಯಾದಿಗಳಲ್ಲಿ ಹೋಗುವ ಅವಶ್ಯಕತೆಯಿಲ್ಲ. ನೆನಪು
ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ನೇರವಾಗಿ ಮಧುರಮನೆಗೆ ಹೋಗುತ್ತೀರಿ. ನಾನು ಗ್ಯಾರಂಟಿ
ಕೊಡುತ್ತೇನೆ- ನೀವು ಅಪವಿತ್ರರಿಂದ ಈ ರೀತಿ ಪವಿತ್ರರಾಗಿಬಿಡುತ್ತೀರಿ. ಗೋಲದ ಚಿತ್ರದಲ್ಲಿ ದ್ವಾರವು
ಬಹಳ ದೊಡ್ಡದಾಗಿ ಚಿತ್ರಿಸಿರಬೇಕು, ಸ್ವರ್ಗದ ದ್ವಾರವು ಹೇಗೆ ತೆರೆಯುತ್ತದೆ, ಎಷ್ಟೊಂದು
ಸ್ಪಷ್ಟವಾಗಿದೆ! ನರಕದ ದ್ವಾರವು ಮುಚ್ಚಲ್ಪಡುವುದು. ಸ್ವರ್ಗದಲ್ಲಿ ನರಕದ ಹೆಸರೂ ಇರುವುದಿಲ್ಲ,
ಕೃಷ್ಣನನ್ನು ಎಷ್ಟೊಂದು ನೆನಪು ಮಾಡುತ್ತಾರೆ ಆದರೆ ಕೃಷ್ಣನು ಯಾವಾಗ ಬರುತ್ತಾನೆಂದು ಯಾರಿಗೂ
ತಿಳಿದಿಲ್ಲ. ತಂದೆಯನ್ನೇ ಅರಿತುಕೊಂಡಿಲ್ಲ. ಭಗವಂತನು ನಮಗೆ ಪುನಃ ರಾಜಯೋಗವನ್ನು ಕಲಿಸುತ್ತಾರೆ
ಎಂಬುದು ನೆನಪಿದ್ದರೂ ಸಹ ಎಷ್ಟೊಂದು ಖುಷಿಯಿರುವುದು ಮತ್ತು ನಾವು ಈಶ್ವರೀಯ
ವಿದ್ಯಾರ್ಥಿಗಳಾಗಿದ್ದೇವೆ ಎಂಬ ಖುಷಿಯಿರಲಿ. ಇದನ್ನೇಕೆ ಮರೆಯುವಿರಿ! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಇಡೀ ದಿನ
ಬಾಯಿಂದ ಬಾಬಾ, ಬಾಬಾ ಎಂದು ಬರುತ್ತಿರಲಿ. ಕೊನೆಪಕ್ಷ ಪ್ರದರ್ಶನಿ ಇತ್ಯಾದಿಗಳಲ್ಲಿ ತಿಳಿಸಿಕೊಡುವ
ಸಮಯದಲ್ಲಿ ಸಾವಿರಾರು ಬಾರಿ ಬಾಬಾ ಬಾಬಾ ಎನ್ನಿರಿ.
2) ಈ ಕಣ್ಣುಗಳಿಂದ
ಎಲ್ಲವನ್ನು ನೋಡುತ್ತಲೂ ಒಬ್ಬ ತಂದೆಯ ನೆನಪಿರಲಿ. ಪರಸ್ಪರ ಮಾತನಾಡುತ್ತಾ ಮೂರನೆಯ ನೇತ್ರದ ಮೂಲಕ
ಆತ್ಮವನ್ನು ಮತ್ತು ಆತ್ಮದ ತಂದೆಯನ್ನು ನೋಡುವ ಅಭ್ಯಾಸ ಮಾಡಬೇಕಾಗಿದೆ.
ವರದಾನ:
ಪ್ರತೀ ಸೆಕೆಂಡ್
ಮತ್ತು ಸಂಕಲ್ಪವನ್ನು ಅಮೂಲ್ಯ ವಿಧಿಯಿಂದ ಉಪಯೋಗಿಸುವಂತಹ ಅಮೂಲ್ಯರತ್ನ ಭವ
ಸಂಗಮ ಯುಗದ ಒಂದು
ಸೆಕೆಂಡ್ ಸಹ ಬಹಳ ಅಮೂಲ್ಯವಾದುದು. ಯಾವ ರೀತಿ ಒಂದಕ್ಕೆ ಲಕ್ಷಪಟ್ಟು ಆಗುತ್ತದೆಯೋ ಹಾಗೆಯೇ
ಒಂದುಸೆಕೆಂಡ್ ಸಹ ವ್ಯರ್ಥವಾಗುತ್ತದೆಯೆಂದರೆ ಲಕ್ಷಪಟ್ಟು ವ್ಯರ್ಥವಾಗಿಬಿಡುತ್ತದೆ ಆದ್ದರಿಂದ ಇಷ್ಟೂ
ಗಮನವನ್ನಿಡುತ್ತೀರೆಂದರೆ ಹುಡುಗಾಟಿಕೆಯು ಸಮಾಪ್ತಿಯಾಗುತ್ತದೆ. ಈಗಂತು ಲೆಕ್ಕತೆಗೆದುಕೊಳ್ಳುವವರು
ಯಾರೂ ಇಲ್ಲ ಆದರೆ ಸ್ವಲ್ಪಸಮಯದ ನಂತರ ಪಶ್ಚಾತ್ತಾಪವಾಗುವುದು ಏಕೆಂದರೆ ಈ ಸಮಯಕ್ಕೆ ಬಹಳ ಬೆಲೆಯಿದೆ.
ಯಾರು ತನ್ನ ಪ್ರತೀ ಸೆಕೆಂಡ್, ಪ್ರತೀಸಂಕಲ್ಪವನ್ನು ಅಮೂಲ್ಯವಾಗಿ ಉಪಯೋಗಿಸುತ್ತಾರೆಯೋ, ಅವರೇ
ಅಮೂಲ್ಯರತ್ನಗಳು ಆಗುವರು.
ಸ್ಲೋಗನ್:
ಯಾರು ಸದಾ
ಯೋಗಯುಕ್ತರಾಗಿರುತ್ತಾರೆಯೋ ಅವರೇ ಸಹಯೋಗದ ಅನುಭವ ಮಾಡುತ್ತಾ ವಿಜಯಿಯಾಗುವರು.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಆತ್ಮ ಶಬ್ಧ ಸ್ಮೃತಿಯಲ್ಲಿ
ಬರುತ್ತಿದ್ದಂತೆಯೇ ಆತ್ಮೀಯತೆಯ ಜೊತೆ ಶುಭ ಭಾವನೆಯು ಸಹ ಬಂದುಬಿಡುತ್ತದೆ. ಪವಿತ್ರ ದೃಷ್ಟಿಯಾಗಿ
ಬಿಡುತ್ತದೆ. ಯಾರೇ ನಿಮ್ಮನ್ನು ಬೈದರು ಸಹ ಈ ಸ್ಮೃತಿ ಇರಲಿ- ಈ ಆತ್ಮ ತಮೋಗುಣಿ ಪಾತ್ರವನ್ನು
ಅಭಿನಯಿಸುತ್ತಿದೆ, ಆಗ ಅವರೊಂದಿಗೆ ದ್ವೇಷದ ಭಾವನೆ ಇರುವುದಿಲ್ಲ, ಅವರ ಪ್ರತಿಯು ಸಹ ಶುಭ ಭಾವನೆ
ಇರುತ್ತದೆ.