28.07.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ಎಲ್ಲರಿಗೆ ಈ ಖುಷಿಯ ಸಮಾಚಾರವನ್ನು ತಿಳಿಸಿ - ಈಗ ಪುನಃ ವಿಶ್ವದಲ್ಲಿ ಶಾಂತಿಯು ಸ್ಥಾಪನೆಯಾಗುತ್ತಿದೆ, ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಲು ತಂದೆಯು ಬಂದಿದ್ದಾರೆ.

ಪ್ರಶ್ನೆ:
ನೀವು ಮಕ್ಕಳಿಗೆ ಮತ್ತೆ-ಮತ್ತೆ ನೆನಪಿನಲ್ಲಿರುವ ಸೂಚನೆಯನ್ನು ಏಕೆ ಕೊಡಲಾಗುತ್ತದೆ?

ಉತ್ತರ:
ಏಕೆಂದರೆ ಸದಾ ಆರೋಗ್ಯವಂತರು ಮತ್ತು ಸದಾ ಪಾವನರಾಗಲು ಇರುವುದೇ ನೆನಪು ಆದ್ದರಿಂದ ಸಮಯ ಸಿಕ್ಕಿದಾಗಲೆಲ್ಲಾ ನೆನಪಿನಲ್ಲಿರಿ. ಬೆಳಗ್ಗೆ-ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮುಗಿಸಿ ಏಕಾಂತದಲ್ಲಿ ತಿರುಗಾಡಿರಿ, ಇಲ್ಲವೆ ನೆನಪಿನಲ್ಲಿ ಕುಳಿತುಕೊಳ್ಳಿ. ಇಲ್ಲಂತೂ ಸಂಪಾದನೆಯೇ ಸಂಪಾದನೆಯಿದೆ. ನೆನಪಿನಿಂದಲೇ ವಿಶ್ವದ ಮಾಲೀಕರಾಗಿ ಬಿಡುತ್ತೀರಿ.

ಓಂ ಶಾಂತಿ.
ಮಧುರ ಮಕ್ಕಳಿಗೆ ತಿಳಿದಿದೆ - ಈ ಸಮಯದಲ್ಲಿ ಎಲ್ಲರೂ ವಿಶ್ವ ಶಾಂತಿಯನ್ನು ಬಯಸುತ್ತಾರೆ. ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುವುದು? ಎಂದು ಕೇಳುತ್ತಿರುತ್ತಾರೆ. ಆದರೆ ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು ಅದನ್ನು ಈಗ ಪುನಃ ಬಯಸುತ್ತೇವೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ಈ ಲಕ್ಷ್ಮೀ-ನಾರಾಯಣರಿದ್ದಾಗ ವಿಶ್ವದಲ್ಲಿ ಸಂಪೂರ್ಣ ಶಾಂತಿಯಿತ್ತು. ಆದ್ದರಿಂದಲೇ ಇಲ್ಲಿಯವರೆಗೂ ಸಹ ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸುತ್ತಿರುತ್ತಾರೆ. ನೀವು ಯಾರಿಗಾದರೂ ಇದನ್ನು ತಿಳಿಸಬಹುದು, ವಿಶ್ವದಲ್ಲಿ 5000 ವರ್ಷಗಳ ಮೊದಲು ಈ ಶಾಂತಿ ಇತ್ತು, ಈಗ ಪುನಃ ಸ್ಥಾಪನೆಯಾಗುತ್ತಿದೆ. ಯಾರು ಸ್ಥಾಪನೆ ಮಾಡುತ್ತಾರೆ? ಇದು ಮನುಷ್ಯರಿಗೆ ಗೊತ್ತಿಲ್ಲ. ನೀವು ಮಕ್ಕಳಿಗೇ ತಂದೆಯು ತಿಳಿಸಿದ್ದಾರೆ - ಇದನ್ನು ನೀವು ಯಾರಿಗೆ ಬೇಕಾದರೂ ತಿಳಿಸಬಹುದು. ನೀವು ಬರೆಯಬಲ್ಲಿರಿ ಆದರೆ ಇಲ್ಲಿಯವರೆಗೂ ಅದನ್ನು ಬರೆಯಲು ಯಾರಿಗೂ ಧೈರ್ಯವಿಲ್ಲ. ಪತ್ರಿಕೆಗಳಲ್ಲಿಯೂ ಈ ಶಬ್ಧವನ್ನು ಕೇಳುತ್ತೀರಿ. ವಿಶ್ವದಲ್ಲಿ ಎಲ್ಲರೂ ಶಾಂತಿ ಬೇಕೆಂಬ ವಿಷಯವನ್ನು ಪತ್ರಿಕೆಗಳಲ್ಲಿಯೂ ನೋಡುತ್ತೀರಿ. ಯುದ್ಧ ಇತ್ಯಾದಿಗಳಾದಾಗ ಮನುಷ್ಯರು ವಿಶ್ವ ಶಾಂತಿಗಾಗಿ ಯಜ್ಞವನ್ನು ರಚಿಸುತ್ತಾರೆ ಆದರೆ ಯಾವ ಯಜ್ಞ? ರುದ್ರ ಯಜ್ಞವನ್ನು ರಚಿಸುತ್ತಾರೆ. ಈಗ ಮಕ್ಕಳೂ ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ಯಾವ ತಂದೆಗೆ ರುದ್ರ, ಶಿವನೆಂದೂ ಹೇಳಲಾಗುತ್ತದೆಯೋ ಅವರೇ ಜ್ಞಾನ ಯಜ್ಞವನ್ನು ರಚಿಸುತ್ತಾರೆ. ವಿಶ್ವದಲ್ಲಿ ಶಾಂತಿಯೇ ಈಗ ಸ್ಥಾಪನೆಯಾಗುತ್ತಿದೆ. ಸತ್ಯಯುಗ ಹೊಸ ಪ್ರಪಂಚ ಎಲ್ಲಿ ಶಾಂತಿಯಿತ್ತೋ ಅಲ್ಲಿ ರಾಜ್ಯ ಮಾಡುವವರು ಅವಶ್ಯವಾಗಿ ಇದ್ದಾರೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ನಿರಾಕಾರಿ ಪ್ರಪಂಚಕ್ಕಾಗಿ ಹೇಳುವುದಿಲ್ಲ. ಅಲ್ಲಂತೂ ಶಾಂತಿಯೇ ಶಾಂತಿಯಿರುತ್ತದೆ. ವಿಶ್ವವು ಮನುಷ್ಯರದ್ದಾಗಿದೆ, ನಿರಾಕಾರಿ ಪ್ರಪಂಚಕ್ಕೆ ವಿಶ್ವವೆಂದು ಹೇಳುವುದಿಲ್ಲ. ಅದು ಶಾಂತಿಧಾಮವಾಗಿದೆ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ವಿಶ್ವದಲ್ಲಿ ಶಾಂತಿಯು ಹೇಗಿತ್ತು, ಈಗ ಪುನಃ ಹೇಗೆ ಸ್ಥಾಪನೆಯಾಗುತ್ತಿದೆ ಎಂಬುದನ್ನು ತಿಳಿಸುವುದು ಬಹಳ ಸಹಜವಾಗಿದೆ. ಭಾರತದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮದ ರಾಜ್ಯವಿದ್ದಾಗ ಒಳ್ಳೆಯ ಧರ್ಮವಿತ್ತು, ವಿಶ್ವದಲ್ಲಿ ಶಾಂತಿಯಿತ್ತು, ಇದು ಬಹಳ ಸಹಜವಾಗಿ ತಿಳಿಸುವ ಮತ್ತು ಬರೆಯುವ ಮಾತಾಗಿದೆ. ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟಿಸುವವರಿಗೂ ಸಹ ನೀವು ಬರೆದು ಕಳುಹಿಸಿ - ಇಂದಿಗೆ 5000 ವರ್ಷಗಳ ಮೊದಲು ಈ ದೇವಿ-ದೇವತೆಗಳ ರಾಜ್ಯವಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತು. ಇವರದೇ ಮಂದಿರಗಳನ್ನು ನೀವು ಕಟ್ಟಿಸುತ್ತೀರಿ. ಭಾರತದಲ್ಲಿಯೇ ಇವರ ರಾಜ್ಯವಿತ್ತು ಆಗ ಮತ್ತ್ಯಾವುದೇ ರಾಜ್ಯವಿರಲಿಲ್ಲ. ಇದಂತೂ ಸಹಜವಾಗಿದೆ ಮತ್ತು ಬುದ್ಧಿವಂತಿಕೆಯ ಮಾತಾಗಿದೆ. ಡ್ರಾಮಾನುಸಾರ ಮುಂದೆ ಹೋದಂತೆ ಎಲ್ಲರೂ ಅರಿತುಕೊಳ್ಳುತ್ತಾರೆ. ನೀವು ಈ ಖುಷಿಯ ಸಮಾಚಾರವನ್ನು ಎಲ್ಲರಿಗೆ ತಿಳಿಸಿ, ಸುಂದರವಾದ ಕಾರ್ಡಿನಲ್ಲಿ ಮುದ್ರಿಸಲೂಬಹುದು - ಇಂದಿಗೆ 5000 ವರ್ಷಗಳ ಮೊದಲು ವಿಶ್ವದಲ್ಲಿ ಶಾಂತಿಯಿತ್ತು, ಯಾವಾಗ ಹೊಸ ಪ್ರಪಂಚ ಹೊಸ ಭಾರತವಾಗಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗ ವಿಶ್ವದಲ್ಲಿ ಶಾಂತಿಯು ಸ್ಥಾಪನೆಯಾಗುತ್ತಿದೆ. ಈ ಮಾತುಗಳನ್ನು ಸ್ಮರಣೆ ಮಾಡಿದರೂ ಸಹ ನೀವು ಮಕ್ಕಳಿಗೆ ಬಹಳ ಖುಷಿಯಿರುವುದು. ನಿಮಗೆ ತಿಳಿದಿದೆ - ತಂದೆಯನ್ನು ನೆನಪು ಮಾಡುವುದರಲ್ಲಿಯೇ ನಾವು ವಿಶ್ವದ ಮಾಲೀಕರಾಗುವವರಿದ್ದೇವೆ, ಎಲ್ಲವೂ ನೀವು ಮಕ್ಕಳ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ತಂದೆಯು ತಿಳಿಸುತ್ತಾರೆ- ಸಮಯ ಸಿಕ್ಕಿದರೆ ಸಾಕು, ತಂದೆಯ ನೆನಪಿನಲ್ಲಿರಿ. ಮುಂಜಾನೆ ಸ್ನಾನ ಇತ್ಯಾದಿಗಳನ್ನು ಮುಗಿಸಿ ಏಕಾಂತದಲ್ಲಿ ಹೋಗಿ ತಿರುಗಾಡಿ ಇಲ್ಲವೆ ಕುಳಿತು ನೆನಪು ಮಾಡಿ. ಇಲ್ಲಂತೂ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಸದಾ ಆರೋಗ್ಯವಂತರು ಮತ್ತು ಸದಾ ಪಾವನರಾಗಲು ಇರುವುದೇ ನೆನಪು. ಇಲ್ಲಿ ಭಲೆ ಸನ್ಯಾಸಿಗಳು ಪವಿತ್ರರಿದ್ದಾರೆ ಆದರೂ ಸಹ ಅವಶ್ಯವಾಗಿ ರೋಗಿಗಳಾಗುತ್ತಾರೆ. ಇದು ರೋಗಿಗಳ ಪ್ರಪಂಚವಾಗಿದೆ, ಸತ್ಯಯುಗವು ನಿರೋಗಿ ಪ್ರಪಂಚವಾಗಿದೆ. ಇದನ್ನೂ ನೀವು ತಿಳಿದುಕೊಂಡಿದ್ದೀರಿ. ಸ್ವರ್ಗದಲ್ಲಿ ಎಲ್ಲರೂ ನಿರೋಗಿಗಳಿರುತ್ತಾರೆಂದು ಪ್ರಪಂಚದಲ್ಲಿ ಯಾರಿಗೇನು ಗೊತ್ತು! ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ಯಾರೇ ಸಿಕ್ಕಿದರೂ ಸಹ ನೀವು ತಿಳಿಸಿಕೊಡಿ. ಯಾರಾದರೂ ತಮ್ಮನ್ನು ರಾಜ-ರಾಣಿಯೆಂದು ಕರೆಸಿಕೊಳ್ಳಬಹುದು ಆದರೆ ಇಲ್ಲಂತೂ ರಾಜ-ರಾಣಿಯರು ಇಲ್ಲ. ಅವರಿಗೆ ಹೇಳಿ, ನೀವೀಗ ರಾಜ-ರಾಣಿಯರಂತೂ ಅಲ್ಲ. ಇದನ್ನು ಬುದ್ಧಿಯಿಂದ ತೆಗೆದು ಹಾಕಿರಿ ಏಕೆಂದರೆ ರಾಜ-ರಾಣಿಯಿದ್ದರೂ ಸಹ ರಾಜಧಾನಿಯಿಲ್ಲ. ಮಹಾರಾಜ-ಮಹಾರಾಣಿ ಶ್ರೀಲಕ್ಷ್ಮೀ-ನಾರಾಯಣರ ರಾಜಧಾನಿಯಂತೂ ಈಗ ಸ್ಥಾಪನೆಯಾಗುತ್ತಿದೆ. ಆದ್ದರಿಂದ ಅವಶ್ಯವಾಗಿ ಇಲ್ಲಿ ಯಾವುದೇ ರಾಜ-ರಾಣಿಯು ಬೇಕಿಲ್ಲ. ನಾವು ರಾಜ-ರಾಣಿಯಾಗಿದ್ದೇವೆ ಎಂಬುದನ್ನೂ ಸಹ ಮರೆತು ಬಿಡಿ. ಸಾಧಾರಣ ಮನುಷ್ಯರ ತರಹ ನಡೆಯಿರಿ. ಇವರ ಬಳಿಯೂ ಸಹ ಚಿನ್ನ, ಬೆಳ್ಳಿ, ಹಣ ಇತ್ಯಾದಿ ಇರುತ್ತದೆಯಲ್ಲವೆ. ಈಗ ನಿಯಮವು ಬದಲಾವಣೆಯಾಗುತ್ತಿದೆ. ಇವರ ಬಳಿಯಿರುವುದೆಲ್ಲವನ್ನೂ ಸರ್ಕಾರವು ತೆಗೆದುಕೊಳ್ಳುತ್ತದೆ. ನಂತರ ಸಾಮಾನ್ಯ ಮನುಷ್ಯರಂತಾಗಿ ಬಿಡುತ್ತಾರೆ. ಈ ಯುಕ್ತಿಗಳನ್ನು ರಚಿಸುತ್ತಿದ್ದಾರೆ. ಕೆಲವರದು ಮಣ್ಣು ಪಾಲಾಯಿತು, ಕೆಲವರದನ್ನು ರಾಜನು ತಿಂದನು..... ಎಂದು ಗಾಯನವಿದೆಯಲ್ಲವೆ. ಈಗ ರಾಜರು ಯಾರದನ್ನೂ ತಿನ್ನುವುದಿಲ್ಲ. ರಾಜರಂತೂ ಇಲ್ಲವೇ ಇಲ್ಲ. ಪ್ರಜೆಗಳ ಸಂಪತ್ತನ್ನು ಪ್ರಜೆಗಳೇ ತಿನ್ನುತ್ತಿದ್ದಾರೆ. ಈಗಿನ ರಾಜ್ಯವು ಬಹಳ ವಿಚಿತ್ರವಾಗಿದೆ. ಯಾವಾಗ ರಾಜರ ಹೆಸರು ಸಂಪೂರ್ಣ ಹೊರಟು ಹೋಗುತ್ತದೆಯೋ ಆಗ ಪುನಃ ರಾಜಧಾನಿಯು ಸ್ಥಾಪನೆಯಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ಎಲ್ಲಿ ವಿಶ್ವದಲ್ಲಿ ಶಾಂತಿಯಿರುತ್ತದೆಯೋ ಅಲ್ಲಿಗೆ ನಾವೀಗ ಹೋಗುತ್ತಿದ್ದೇವೆ. ಅದು ಸುಖಧಾಮ, ಸತೋಪ್ರಧಾನ ಪ್ರಪಂಚವಾಗಿದೆ. ನಾವು ಅಲ್ಲಿಗೆ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ಮಕ್ಕಳು ಅಷ್ಟು ಸುಂದರವಾಗಿ ತಿಳಿಸಿಕೊಡಬೇಕು ಕೇವಲ ಹೊರಗಿನ ಆಡಂಬರವಿರಬಾರದು. ಈಗಂತೂ ಬಹಳಷ್ಟು ಫ್ಯಾಷನ್ ಬಂದು ಬಿಟ್ಟಿದೆ. ಇಲ್ಲಂತೂ ಪಕ್ಕಾ ಬ್ರಹ್ಮಾಕುಮಾರ-ಕುಮಾರಿಯರು ಬೇಕು.

ನೀವು ಬ್ರಾಹ್ಮಣರು ಬ್ರಹ್ಮಾ ತಂದೆಯ ಜೊತೆ ವಿಶ್ವದಲ್ಲಿ ಶಾಂತಿ ಸ್ಥಾಪನೆಯ ಕಾರ್ಯವನ್ನು ಮಾಡುತ್ತಿದ್ದೀರಿ. ಶಾಂತಿ ಸ್ಥಾಪನೆ ಮಾಡುವಂತಹ ಮಕ್ಕಳು ಬಹಳ ಶಾಂತಚಿತ್ತ ಮತ್ತು ಮಧುರರಾಗಿರಬೇಕು. ಮೊದಲು ನಿಮ್ಮಲ್ಲಿ ಬಹಳ ಶಾಂತಿಯಿರಬೇಕು. ಮಾತನಾಡುವುದೂ ಸಹ ಬಹಳ ನಿಧಾನವಾಗಿ ಘನತೆಯಿಂದ ಮಾತನಾಡಬೇಕು. ನೀವು ಬಹಳ ಗುಪ್ತವಾಗಿದ್ದೀರಿ. ನಿಮ್ಮ ಬುದ್ಧಿಯಲ್ಲಿ ಅವಿನಾಶಿ ಜ್ಞಾನರತ್ನಗಳ ಖಜಾನೆಯು ತುಂಬಿದೆ. ನೀವು ತಂದೆಗೆ ವಾರಸುಧಾರರಲ್ಲವೆ. ತಂದೆಯ ಬಳಿ ಎಷ್ಟು ಖಜಾನೆಯಿದೆಯೋ ಅಷ್ಟು ನೀವೂ ಸಹ ತುಂಬಿಕೊಳ್ಳಬೇಕು. ಇಡೀ ಸಂಪತ್ತೇ ನಿಮ್ಮದಾಗಿದೆ ಆದರೆ ಆ ಸಾಹಸವಿಲ್ಲವೆಂದರೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ತೆಗೆದುಕೊಳ್ಳುವವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಅನ್ಯರಿಗೆ ತಿಳಿಸಿಕೊಡುವ ಉಮ್ಮಂಗವಿರಬೇಕು. ನಾವು ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡಬೇಕಾಗಿದೆ. ಆದ್ದರಿಂದ ತಂದೆಯು ಅವಸರ ಮಾಡುತ್ತಾರೆ ಆದರೂ ಸಹ ಡ್ರಾಮಾನುಸಾರವೇ ಆಗುತ್ತದೆ. ಪ್ರತಿಯೊಬ್ಬರೂ ತಮ್ಮ ಸಮಯದ ಮೇಲೆ ನಡೆಯುತ್ತಿದ್ದಾರೆ. ತಂದೆಯು ಮಕ್ಕಳಿಗೆ ಪುರುಷಾರ್ಥ ಮಾಡಿಸುತ್ತಿದ್ದಾರೆ. ಮಕ್ಕಳಿಗೆ ನಿಶ್ಚಯವಿದೆ- ಇನ್ನು ಸ್ವಲ್ಪವೇ ಸಮಯವಿದೆ, ನಮ್ಮದು ಇದು ಅಂತಿಮ ಜನ್ಮವಾಗಿದೆ. ನಂತರ ನಾವು ಸ್ವರ್ಗದಲ್ಲಿರುತ್ತೇವೆ. ಇದು ದುಃಖಧಾಮವಾಗಿದೆ ನಂತರ ಸುಖಧಾಮವಾಗಿ ಬಿಡುವುದು. ಆಗುವುದರಲ್ಲಿ ಸಮಯವಂತೂ ಹಿಡಿಸುತ್ತದೆಯಲ್ಲವೆ. ಈ ವಿನಾಶವೇನೂ ಚಿಕ್ಕದಲ್ಲ. ಹೇಗೆ ಹೊಸ ಮನೆಯು ತಯಾರಾಗುವಾಗ ಹೊಸ ಮನೆಯ ನೆನಪೇ ಬರುತ್ತದೆ ಆದರೆ ಅದು ಹದ್ದಿನ ಮಾತಾಗಿದೆ. ಅದರಲ್ಲಿ ಸಂಬಂಧಗಳೇನೂ ಬದಲಾಗುವುದಿಲ್ಲ. ಇಲ್ಲಂತೂ ಈ ಹಳೆಯ ಪ್ರಪಂಚವೇ ಬದಲಾಗಲಿದೆ ಮತ್ತು ಯಾರು ಚೆನ್ನಾಗಿ ಓದುವರೋ ಅವರು ರಾಜಕುಲದಲ್ಲಿ ಬರುತ್ತಾರೆ. ಇಲ್ಲವೆಂದರೆ ಪ್ರಜೆಗಳಲ್ಲಿ ಬರುತ್ತಾರೆ. ಮಕ್ಕಳಿಗೆ ಬಹಳ ಖುಷಿಯಿರಬೇಕು. ತಂದೆಯು ತಿಳಿಸಿದ್ದಾರೆ- ನೀವು 50-60 ಜನ್ಮಗಳ ಸುಖವನ್ನು ಪಡೆಯುತ್ತೀರಿ. ದ್ವಾಪರದಲ್ಲಿಯೂ ನಿಮ್ಮ ಬಳಿ ಬಹಳಷ್ಟು ಹಣವಿರುತ್ತದೆ. ಕೊನೆಯಲ್ಲಿ ಅಲ್ಪಸ್ವಲ್ಪ ದುಃಖವು ಸಿಗುತ್ತದೆ. ಯಾವಾಗ ರಾಜರು ಪರಸ್ಪರ ಹೊಡೆದಾಡುವರು, ಬಿರುಕುಂಟಾಗುವುದೋ ಆಗ ದುಃಖವು ಆರಂಭವಾಗುತ್ತದೆ. ಮೊದಲಂತೂ ದವಸ-ಧಾನ್ಯಗಳೂ ಸಹ ಬಹಳ ಸಸ್ತಾ ಆಗಿರುತ್ತದೆ. ಬರಗಾಲವೂ ಸಹ ನಂತರದಲ್ಲಿಯೇ ಬರುತ್ತದೆ. ನಿಮ್ಮಬಳಿ ಬಹಳಷ್ಟು ಹಣವಿರುತ್ತದೆ, ನಿಧಾನ-ನಿಧಾನವಾಗಿ ಸತೋಪ್ರಧಾನತೆಯಿಂದ ತಮೋಪ್ರಧಾನತೆಯಲ್ಲಿ ಬರುತ್ತೀರಿ. ಆದ್ದರಿಂದ ನೀವು ಮಕ್ಕಳಿಗೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು. ತಾನೇ ಖುಷಿಯಾಗಿರುವುದಿಲ್ಲ, ಶಾಂತಿಯಿರುವುದಿಲ್ಲವೆಂದರೆ ಶಾಂತಿಯನ್ನೇನು ಸ್ಥಾಪನೆ ಮಾಡುವಿರಿ! ಅನೇಕರ ಬುದ್ಧಿಯಲ್ಲಿ ಬಹಳ ಅಶಾಂತಿಯಿರುತ್ತದೆ. ತಂದೆಯು ಶಾಂತಿಯ ವರದಾನವನ್ನು ಕೊಡುವುದಕ್ಕಾಗಿಯೇ ಬರುತ್ತಾರೆ. ನನ್ನನ್ನು ನೆನಪು ಮಾಡಿ ಆಗ ತಮೋಪ್ರಧಾನರಾಗಿರುವ ಕಾರಣ ಅಶಾಂತವಾಗಿರುವ ಆತ್ಮವು ಆ ನೆನಪಿನಿಂದ ಸತೋಪ್ರಧಾನ, ಶಾಂತವಾಗಿ ಬಿಡುವುದೆಂದು ತಂದೆಯು ತಿಳಿಸುತ್ತಾರೆ, ಆದರೆ ಮಕ್ಕಳು ನೆನಪಿನ ಪರಿಶ್ರಮವನ್ನೇ ಪಡುವುದಿಲ್ಲ. ನೆನಪಿನಲ್ಲಿ ಇಲ್ಲದಿರುವ ಕಾರಣವೇ ಮಾಯೆಯ ಬಿರುಗಾಳಿಗಳು ಬರುತ್ತವೆ. ನೆನಪಿನಲ್ಲಿದ್ದು ಪೂರ್ಣ ಪಾವನರಾಗಲಿಲ್ಲವೆಂದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು, ಪದವಿಯೂ ಭ್ರಷ್ಟವಾಗುವುದು. ಸ್ವರ್ಗದಲ್ಲಂತೂ ಹೋಗುತ್ತೇವೆ ಅಲ್ಲವೆ ಎಂದು ತಿಳಿಯಬೇಡಿ. ಪೆಟ್ಟು ತಿಂದು ನಯಾಪೈಸೆಯ ಸುಖವನ್ನು ಪಡೆಯುವುದು ಒಳ್ಳೆಯದೇ? ಮನುಷ್ಯರು ಉತ್ತಮ ಪದವಿಗಾಗಿ ಎಷ್ಟೊಂದು ಪುರುಷಾರ್ಥ ಮಾಡುತ್ತಾರೆ, ಏನು ಸಿಕ್ಕಿದರೆ ಅದೇ ಒಳ್ಳೆಯದು ಎಂದಲ್ಲ. ತನಗಾಗಿ ಪುರುಷಾರ್ಥ ಮಾಡದೇ ಇರುವವರು ಯಾರೂ ಇಲ್ಲ. ಭಿಕ್ಷೆ ಬೇಡುವ ಭಿಕ್ಷಕರೂ ಸಹ ತಮ್ಮ ಬಳಿ ಹಣವನ್ನು ಕೂಡಿಡುತ್ತಾರೆ. ಎಲ್ಲರೂ ಹಣಕ್ಕೆ ಬಾಯಾರಿದವರಾಗಿದ್ದಾರೆ. ಹಣದಿಂದ ಪ್ರತಿಯೊಂದು ಮಾತಿನ ಸುಖವು ಸಿಗುತ್ತದೆ. ನಾವು ತಂದೆಯಿಂದ ಅಪಾರ ಧನವನ್ನು ಪಡೆಯುತ್ತೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಕಡಿಮೆ ಪುರುಷಾರ್ಥ ಮಾಡಿದರೆ ಧನವೂ ಕಡಿಮೆ ಸಿಗುವುದು. ತಂದೆಯು ಧನವನ್ನು ಕೊಡುತ್ತಾರಲ್ಲವೆ. ತಿಳಿಸುತ್ತಾರೆ- ಹಣವಿದ್ದರೆ ಅಮೇರಿಕಾ ಮುಂತಾದಕಡೆ ಸುತ್ತಾಡಿಕೊಂಡು ಬನ್ನಿ ಆದರೆ ಎಷ್ಟು ನೆನಪು ಮಾಡುವಿರೋ, ಸರ್ವೀಸ್ ಮಾಡುವಿರೋ ಅಷ್ಟು ಸುಖವನ್ನು ಪಡೆಯುವಿರಿ. ತಂದೆಯು ಪ್ರತಿಯೊಂದು ಮಾತಿನಲ್ಲಿ ಪುರುಷಾರ್ಥ ಮಾಡಿಸುತ್ತಾರೆ. ಶ್ರೇಷ್ಠರನ್ನಾಗಿ ಮಾಡುತ್ತಾರೆ. ಮಕ್ಕಳು ತಮ್ಮ ಕುಲವನ್ನು ಪ್ರಖ್ಯಾತಗೊಳಿಸುತ್ತಾರೆಂದು ತಿಳಿಯುತ್ತಾರೆ. ಹಾಗೆಯೇ ನೀವು ಮಕ್ಕಳೂ ಸಹ ಈಶ್ವರೀಯ ಕುಲವನ್ನು, ತಂದೆಯ ಹೆಸರನ್ನು ಪ್ರಖ್ಯಾತಗೊಳಿಸಬೇಕಾಗಿದೆ. ಇವರು ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾದರು. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಶ್ರೇಷ್ಠಾತಿ ಶ್ರೇಷ್ಠ ಸತ್ಯವಾದ ಸದ್ಗುರುವೂ ಆಗಿದ್ದಾರೆ. ಇದನ್ನೂ ತಿಳಿಸಿದ್ದಾರೆ- ಗುರುವು ಒಬ್ಬರೇ ಇರುತ್ತಾರೆ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ. ಇದನ್ನೂ ನೀವು ತಿಳಿದುಕೊಂಡಿದ್ದೀರಿ, ನೀವೀಗ ಪಾರಸಬುದ್ಧಿಯವರಾಗುತ್ತಿದ್ದೀರಿ. ಪಾರಸಪುರಿಯ ಪಾರಸನಾಥ ರಾಜ-ರಾಣಿಯಾಗುತ್ತಿದ್ದೀರಿ. ಎಷ್ಟೊಂದು ಸಹಜ ಮಾತಾಗಿದೆ. ಭಾರತವು ಸ್ವರ್ಣೀಮ ಯುಗವಾಗಿತ್ತು, ವಿಶ್ವದಲ್ಲಿ ಶಾಂತಿಯು ಹೇಗಿತ್ತು ಎಂಬುದನ್ನು ನೀವು ಈ ಲಕ್ಷ್ಮೀ-ನಾರಾಯಣರ ಚಿತ್ರದ ಬಗ್ಗೆ ತಿಳಿಸಬಹುದು. ಸ್ವರ್ಗದಲ್ಲಿ ಶಾಂತಿಯಿತ್ತು, ಈಗ ನರಕವಾಗಿದೆ. ಇದರಲ್ಲಿ ಅಶಾಂತಿಯಿದೆ. ಸ್ವರ್ಗದಲ್ಲಿ ಈ ಲಕ್ಷ್ಮೀ-ನಾರಾಯಣರಿರುತ್ತಾರಲ್ಲವೆ. ಕೃಷ್ಣನಿಗೆ ಲಾರ್ಡ್ ಕೃಷ್ಣನೆಂದು ಹೇಳುತ್ತಾರೆ, ಕೃಷ್ಣ ಭಗವಂತನೆಂದೂ ಹೇಳುತ್ತಾರೆ. ಈಗ ಲಾರ್ಡ್ಗಳಂತೂ ಅನೇಕರಿದ್ದಾರೆ. ಯಾರ ಬಳಿ ಹೆಚ್ಚು ಜಮೀನು ಇರುವುದೋ ಅವರಿಗೂ ಸಹ ಲ್ಯಾಂಡ್ಲಾರ್ಡ್ ಎಂದು ಹೇಳುತ್ತಾರೆ. ಕೃಷ್ಣನಂತೂ ವಿಶ್ವದ ರಾಜಕುಮಾರನಾಗಿದ್ದನು, ಆಗಿನ ವಿಶ್ವದಲ್ಲಿ ಶಾಂತಿಯಿತ್ತು. ರಾಧೆ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ.

ನಿಮ್ಮ ಬಗ್ಗೆ ಎಷ್ಟೊಂದು ಮಂದಿ ಎಷ್ಟು ಮಾತುಗಳನ್ನಾಡುತ್ತಾರೆ, ಏರುಪೇರು ಮಾಡುತ್ತಾರೆ. ಇವರಂತೂ ಸಹೋದರ-ಸಹೋದರಿಯರನ್ನಾಗಿ ಮಾಡುತ್ತಾರೆಂದೂ ಹೇಳುತ್ತಾರೆ. ತಿಳಿಸಬೇಕು - ಪ್ರಜಾಪಿತ ಬಹ್ಮಾನ ಮುಖವಂಶಾವಳಿ ಬ್ರಾಹ್ಮಣರು ಇವರಿಗೇ ಬ್ರಾಹ್ಮಣ ದೇವಿ-ದೇವತಾಯ ನಮಃ ಎಂದು ಹಾಡುತ್ತಾರೆ. ಬ್ರಾಹ್ಮಣರೂ ಸಹ ಅವರಿಗೆ ನಮಸ್ಕಾರ ಮಾಡುತ್ತಾರೆ ಏಕೆಂದರೆ ಅವರು ಸತ್ಯವಾದ ಸಹೋದರ-ಸಹೋದರಿಯರಾಗುತ್ತಾರೆ, ಪವಿತ್ರರಾಗಿರುತ್ತಾರೆ ಅಂದಮೇಲೆ ಪವಿತ್ರರಿಗೇಕೆ ಗೌರವ ಕೊಡುವುದಿಲ್ಲ! ಕನ್ಯೆಯು ಪವಿತ್ರಳಾಗಿದ್ದಾಗ ಎಲ್ಲರೂ ಕಾಲಿಗೆ ನಮಸ್ಕಾರ ಮಾಡುತ್ತಾರೆ. ಹೊರಗಿನ ವಿಜಿಟರ್ಸ್ ಬರುತ್ತಾರೆಂದರೆ ನೀವು ಬ್ರಹ್ಮಾಕುಮಾರ-ಕುಮಾರಿಯಲ್ಲವೆ. ಮೆಜಾರಿಟಿ ನೀವು ಕನ್ಯೆಯರದ್ದಾಗಿದೆ. ಶಿವಶಕ್ತಿ ಪಾಂಡವ ಸೇನೆಯೆಂದು ಗಾಯನವಿದೆ, ಇದರಲ್ಲಿ ಪುರುಷರೂ ಇದ್ದಾರೆ, ಆದರೆ ಮೆಜಾರಿಟಿ ಮಾತೆಯರದ್ದಾಗಿದೆ ಆದ್ದರಿಂದ ಗಾಯನ ಮಾಡಲಾಗಿದೆ ಅಂದಾಗ ಯಾರು ಚೆನ್ನಾಗಿ ಓದುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನೀವೀಗ ಇಡೀ ವಿಶ್ವದ ಇತಿಹಾಸ-ಭೂಗೋಳವನ್ನು ಅರಿತಿದ್ದೀರಿ. ಸೃಷ್ಟಿಚಕ್ರದ ಬಗ್ಗೆ ತಿಳಿಸಿಕೊಡುವುದು ಅತಿ ಸಹಜವಾಗಿದೆ. ಭಾರತವು ಪಾರಸಪುರಿಯಾಗಿತ್ತು, ಈಗ ಕಲ್ಲಿನ ಪುರಿಯಾಗಿದೆ. ಅಂದಮೇಲೆ ಎಲ್ಲರೂ ಪತ್ತರ್ನಾಥ್ (ಕಲ್ಲಿನ ಸಮಾನ) ಆದರಲ್ಲವೆ. ನೀವು ಮಕ್ಕಳು ಈ 84 ಜನ್ಮಗಳ ಚಕ್ರವನ್ನು ತಿಳಿದುಕೊಂಡಿದ್ದೀರಿ. ಈಗ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡಬೇಕು, ಇದರಿಂದಲೇ ಪಾಪಗಳು ಕಳೆಯುತ್ತವೆ ಆದರೆ ಮಕ್ಕಳು ನೆನಪಿನ ಪರಿಶ್ರಮವನ್ನೇ ಪಡುವುದಿಲ್ಲ ಏಕೆಂದರೆ ಆಲಸ್ಯವಿದೆ. ಅಮೃತವೇಳೆ ಏಳುವುದಿಲ್ಲ. ಒಂದುವೇಳೆ ಏಳದೇ ಇದ್ದರೆ ಮಜಾ ಇರುವುದಿಲ್ಲ. ನಿದ್ರೆಯು ಬರತೊಡಗುತ್ತದೆ ಮತ್ತೆ ಮಲಗಿ ಬಿಡುತ್ತಾರೆ, ನಿರುತ್ಸಾಹಿಗಳಾಗಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ಯುದ್ಧದ ಮೈದಾನವಲ್ಲವೆ. ಇದರಲ್ಲಿ ನಿರುತ್ಸಾಹಿಗಳಾಗಬಾರದು. ನೆನಪಿನ ಬಲದಿಂದಲೇ ಮಾಯೆಯ ಮೇಲೆ ಜಯ ಗಳಿಸಬೇಕಾಗಿದೆ. ಇದರಲ್ಲಿ ಪರಿಶ್ರಮ ಪಡಬೇಕು. ಯಾರು ಬಹಳ ಒಳ್ಳೊಳ್ಳೆಯ ಮಕ್ಕಳಿದ್ದಾರೆಯೋ ಅವರೂ ಸಹ ಯಥಾರ್ಥ ರೀತಿಯಿಂದ ನೆನಪು ಮಾಡುವುದಿಲ್ಲ. ಚಾರ್ಟ್ ಇಟ್ಟುಕೊಳ್ಳುವುದರಿಂದ ಲಾಭ, ನಷ್ಟವು ತಿಳಿಯುತ್ತದೆ. ಚಾರ್ಟ್ ನನ್ನ ಸ್ಥಿತಿಯನ್ನು ಕಮಾಲ್ ಮಾಡಿಬಿಟ್ಟಿದೆಯೆಂದು ಹೇಳುತ್ತಾರಲ್ಲವೆ. ಕೆಲವರೇ ವಿರಳ ಚಾರ್ಟನ್ನಿಡುತ್ತಾರೆ. ಇದೂ ಸಹ ಬಹಳ ಪರಿಶ್ರಮವಿದೆ. ಬಹಳ ಸೇವಾಕೇಂದ್ರಗಳಲ್ಲಿ ಅಸತ್ಯವಂತರೂ ಹೋಗಿ ಕುಳಿತುಕೊಳ್ಳುತ್ತಾರೆ. ವಿಕರ್ಮ ಮಾಡುತ್ತಿರುತ್ತಾರೆ. ತಂದೆಯ ಆದೇಶವನ್ನು ಕಾರ್ಯದಲ್ಲಿ ತರದೇ ಇರುವಕಾರಣ ಬಹಳ ನಷ್ಟ ಮಾಡಿಕೊಳ್ಳುತ್ತಾರೆ. ನಿರಾಕಾರ ತಂದೆಯು ತಿಳಿಸುತ್ತಾರೆಯೇ ಅಥವಾ ಸಾಕಾರ ತಂದೆಯೇ ಎಂಬುದು ಮಕ್ಕಳಿಗೆ ತಿಳಿದೇ ಇಲ್ಲ. ಮಕ್ಕಳಿಗೆ ಮತ್ತೆ-ಮತ್ತೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಯಾವಾಗಲೂ ಶಿವ ತಂದೆಯು ಆದೇಶ ನೀಡುತ್ತಾರೆಂದೇ ತಿಳಿಯಿರಿ ಆಗ ನಿಮ್ಮ ಬುದ್ಧಿಯು ಅಲ್ಲಿ ಜೋಡಣೆಯಾಗಿರುವುದು.

ಇತ್ತೀಚೆಗೆ ನಿಶ್ಚಿತಾರ್ಥವಾದಾಗ ಭಾವಚಿತ್ರವನ್ನು ತೋರಿಸುತ್ತಾರೆ. ಪತ್ರಿಕೆಗಳಲ್ಲಿಯೂ ಇಂತಹವರಿಗೆ ಇಂತಿಂತಹ ಒಳ್ಳೆಯ ಮನೆಯು ಬೇಕೆಂದು ಹಾಕಿಸುತ್ತಾರೆ. ಪ್ರಪಂಚದ ಸ್ಥಿತಿಯು ಏನಾಗಿ ಬಿಟ್ಟಿದೆ! ಇನ್ನೂ ಏನಾಗುವುದಿದೆ! ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಅನೇಕ ಪ್ರಕಾರದ ಮತಗಳಿವೆ. ನೀವು ಬ್ರಾಹ್ಮಣರದು ಒಂದು ಮತವಾಗಿದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವ ಮತವಾಗಿದೆ. ನೀವು ಶ್ರೀಮತದಿಂದ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುತ್ತೀರಿ ಅಂದಾಗ ಮಕ್ಕಳೂ ಸಹ ಶಾಂತಿಯಲ್ಲಿರಬೇಕಾಗಿದೆ. ಯಾರು ಮಾಡುವರೋ ಅವರು ಪಡೆಯುವರು. ಇಲ್ಲವೆಂದರೆ ಬಹಳ ನಷ್ಟವುಂಟಾಗುವುದು. ಇದು ಜನ್ಮ-ಜನ್ಮಾಂತರದ ನಷ್ಟದ ಮಾತಾಗಿದೆ ಆದ್ದರಿಂದ ತಮ್ಮ ನಷ್ಟ ಮತ್ತು ಲಾಭವನ್ನು ನೋಡಿಕೊಳ್ಳಿ ಎಂದು ಮಕ್ಕಳಿಗೆ ಹೇಳುತ್ತಾರೆ. ನಾನು ಯಾರಿಗೂ ದುಃಖವನ್ನು ಕೊಡಲಿಲ್ಲವೇ ಎಂದು ಚಾರ್ಟ್ ನೋಡಿಕೊಳ್ಳಿ. ತಂದೆಯು ತಿಳಿಸುತ್ತಾರೆ- ನಿಮ್ಮ ಈ ಸಮಯದ ಒಂದೊಂದು ಕ್ಷಣವೂ ಸಹ ಅತ್ಯಮೂಲ್ಯವಾಗಿದೆ. ಪೆಟ್ಟು ತಿಂದ ನಂತರ ತುಂಡು ರೊಟ್ಟಿಯನ್ನು ತಿನ್ನುವುದು ದೊಡ್ಡ ಮಾತೇನು! ನೀವಂತೂ ಬಹಳ ಧನವಂತರಾಗಲು ಬಯಸುತ್ತೀರಲ್ಲವೆ. ಮೊಟ್ಟ ಮೊದಲು ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಗಳಾಗಬೇಕಾಗಿದೆ. ಅವರಬಳಿ ಎಷ್ಟೊಂದು ಹಣವಿರುವುದು. ಸೋಮನಾಥ ಮಂದಿರವನ್ನು ಕಟ್ಟಿಸಿ ಪೂಜೆಯನ್ನು ಆರಂಭಿಸುವರು. ಇದೂ ಲೆಕ್ಕವಿದೆ. ಮಕ್ಕಳಿಗೆ ಪುನಃ ತಿಳಿಸುತ್ತೇನೆ- ಮಕ್ಕಳೇ ಚಾರ್ಟ್ ಇಡಿ ಆಗ ಬಹಳ ಲಾಭವಾಗುವುದು. ನೋಟ್ ಮಾಡಿಕೊಳ್ಳಬೇಕು, ಎಲ್ಲರಿಗೆ ಸಂದೇಶ ಕೊಡುತ್ತಾ ಹೋಗಿ. ಸುಮ್ಮನೆ ಕುಳಿತು ಬಿಡಬೇಡಿ. ರೈಲಿನಲ್ಲಿ ಪ್ರಯಾಣಿಸುವಾಗಲೂ ಸಹ ನೀವು ಅನ್ಯರಿಗೆ ತಿಳಿಸಿ, ಪುಸ್ತಕಗಳನ್ನು ಕೊಡಿ. ಇದು ಕೋಟ್ಯಾಂತರ ರೂಪಾಯಿಗಳ ಸಂಪತ್ತೆಂದು ತಿಳಿಸಿರಿ. ಭಾರತದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ವಿಶ್ವದಲ್ಲಿ ಶಾಂತಿಯಿತ್ತು, ಈಗ ತಂದೆಯು ಪುನಃ ಆ ರಾಜಧಾನಿಯನ್ನು ಸ್ಥಾಪನೆ ಮಾಡಲು ಬಂದಿದ್ದಾರೆ. ಆದ್ದರಿಂದ ನೀವೀಗ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವುದು ಮತ್ತು ವಿಶ್ವದಲ್ಲಿ ಶಾಂತಿಯು ಸ್ಥಾಪನೆಯಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಾವು ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡಲು ನಿಮಿತ್ತ ಬ್ರಾಹ್ಮಣರಾಗಿದ್ದೇವೆ. ನಾವು ಬಹಳ-ಬಹಳ ಶಾಂತಚಿತ್ತರಾಗಿರಬೇಕಾಗಿದೆ. ಬಹಳ ನಿಧಾನವಾಗಿ ಮತ್ತು ಘನತೆಯಿಂದ ಮಾತನಾಡಬೇಕಾಗಿದೆ.

2. ಆಲಸ್ಯವನ್ನು ಬಿಟ್ಟು ನೆನಪಿನ ಪರಿಶ್ರಮ ಪಡಬೇಕಾಗಿದೆ. ಎಂದೂ ನಿರುತ್ಸಾಹಿಗಳಾಗಬಾರದು.

ವರದಾನ:
ಪರೀಕ್ಷೆಯಲ್ಲಿ ಗಾಬರಿಗೊಳ್ಳುವುದಕ್ಕೆ ಬದಲಾಗಿ ಪೂರ್ಣವಿರಾಮವನ್ನಿಟ್ಟು ಫುಲ್ಪಾಸ್ ಆಗುವಂತಹ ಸಫಲತಾಮೂರ್ತಿ ಭವ.

ಯಾವಾಗ ಯಾವುದೇ ಪ್ರಕಾರದ ಪರೀಕ್ಷೆಯು ಬರುತ್ತದೆಯೆಂದರೆ ಗಾಬರಿಯಾಗದಿರಿ, ಪ್ರಶ್ನಾರ್ಥಕದಲ್ಲಿ ಬರಬಾರದು, ಇದೇಕೆ ಬಂದಿತು? ಎಂದು. ಇದನ್ನು ಯೋಚಿಸುವುದರಲ್ಲಿ ಸಮಯವನ್ನು ವ್ಯರ್ಥ ಮಾಡದಿರಿ. ಪ್ರಶ್ನೆಯು ಸಮಾಪ್ತಿ ಮತ್ತು ಪೂರ್ಣ ವಿರಾಮ. ಆಗಲೇ ಕ್ಲಾಸ್ ಬದಲಾವಣೆಯಾಗುತ್ತದೆ ಅರ್ಥಾತ್ ಪರೀಕ್ಷೆಯಲ್ಲಿ ಪಾಸ್ ಆಗುತ್ತೀರಿ. ಫುಲ್ಸ್ಟಾಪ್ ಹಾಕುವವರು ಫುಲ್ಪಾಸ್ ಆಗುವರು ಏಕೆಂದರೆ ಫುಲ್ಸ್ಟಾಪ್ ಇರುವುದೇ ಬಿಂದುವಿನ ಸ್ಥಿತಿ. ನೋಡುತ್ತಿದ್ದರೂ ನೋಡದಿರುವುದು, ಕೇಳುತ್ತಿದ್ದರೂ ಕೇಳದಿರುವುದು. ತಂದೆಯು ತಿಳಿಸಿರುವುದನ್ನಷ್ಟೇ ಕೇಳಿರಿ, ತಂದೆಯವರು ಏನು ಕೊಟ್ಟಿದ್ದಾರೆ ಅದನ್ನು ನೋಡುತ್ತಿರುತ್ತೀರೆಂದರೆ ಫುಲ್ಪಾಸ್ ಆಗಿ ಬಿಡುತ್ತೀರಿ ಮತ್ತು ಪಾಸ್ ಆಗುವ ಚಿಹ್ನೆಯಾಗಿದೆ - ಸದಾ ಏರುವ ಕಲೆಯ ಅನುಭವ ಮಾಡುತ್ತಾ, ಸಫಲತೆಯ ನಕ್ಷತ್ರಗಳಾಗಿ ಬಿಡುತ್ತೀರಿ.

ಸ್ಲೋಗನ್:
ಸ್ವ-ಉನ್ನತಿ ಮಾಡಿಕೊಳ್ಳಬೇಕೆಂದರೆ ಪ್ರಶ್ನೆ, ತಿದ್ದುಪಡಿ ಮತ್ತು ಟಿಪ್ಪಣಿಗಳ ತ್ಯಾಗ ಮಾಡಿ, ತಮ್ಮ ಸಂಬಂಧವನ್ನು ಸರಿಯಾಗಿಟ್ಟುಕೊಳ್ಳಿರಿ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.

ಅಂತ್ಯ ಸಮಯದಲ್ಲಿ ತಮ್ಮ ಸುರಕ್ಷತೆಗಾಗಿ ಮನಸ್ಸಾ ಶಕ್ತಿಯೇ ಸಾಧನವಾಗಿದೆ. ಮನಸ್ಸಾ ಶಕ್ತಿಯ ಮೂಲಕವೇ ಸ್ವಯಂನ ಅಂತ್ಯ ಸುಗಮ ಮಾಡುವ ನಿಮಿತ್ತ ಆಗಬಹುದು. ಆ ಸಮಯ ಮನಸ್ಸಾ ಶಕ್ತಿ ಅರ್ಥಾತ್ ಶ್ರೇಷ್ಠ ಸಂಕಲ್ಪ ಶಕ್ತಿ, ಒಬ್ಬರೊಂದಿಗೆ ಲೈನ್ ಸ್ಪಷ್ಟ ಆಗಿರಬೇಕು. ಬೇಹದ್ದಿನ ಸೇವೆಗಾಗಿ ಸ್ವಯಂನ ರಕ್ಷಣೆಗಾಗಿ ಮನಸ್ಸಾ ಶಕ್ತಿ ಹಾಗೂ ನಿರ್ಭಯತೆ ಶಕ್ತಿಯನ್ನು ಜಮಾ ಮಾಡಿ.