28.08.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ - ಈಗ ನಿಮ್ಮ ಕರೆಯು ಕೇಳಲ್ಪಟ್ಟಿದೆ, ಕೊನೆಗೂ ಆ ದಿನ ಇಂದು ಬಂದಿತು, ನೀವು ಉತ್ತಮರಿಗಿಂತ ಉತ್ತಮರು ಈ ಪುರುಷೋತ್ತಮ ಸಂಗಮಯುಗದಲ್ಲಿ ಆಗುತ್ತಿದ್ದೀರಿ".

ಪ್ರಶ್ನೆ:
ಸೋಲು ಮತ್ತು ಗೆಲುವಿಗೆ ಸಂಬಂಧಿಸಿದ ಯಾವ ಒಂದು ಅಂತಹ ಭ್ರಷ್ಟ ಕರ್ಮ ಇದೆ ಅದು ಮನುಷ್ಯರನ್ನು ದುಃಖಿಗಳನ್ನಾಗಿ ಮಾಡುತ್ತದೆ?

ಉತ್ತರ:
"ಜೂಜು" ಬಹಳ ಮನುಷ್ಯರಲ್ಲಿ ಜೂಜಾಡುವಂತಹ ಅಭ್ಯಾಸ ಇರುವುದು, ಇದು ಭ್ರಷ್ಟ ಕರ್ಮವಾಗಿದೆ ಏಕೆಂದರೆ ಸೋಲುವುದರಿಂದ ದುಃಖ, ಗೆಲುವಿನಿಂದ ಖುಷಿಯಾಗುತ್ತದೆ. ನೀವು ಮಕ್ಕಳಿಗೆ ತಂದೆಯ ಆಜ್ಞೆಯಾಗಿದೆ - ಮಕ್ಕಳೇ, ದೈವೀ ಕರ್ಮವನ್ನು ಮಾಡಿ. ಯಾವುದೇ ಅಂತಹ ಕರ್ಮವನ್ನು ಮಾಡಬಾರದು ಇದರಿಂದ ಸಮಯ ವ್ಯರ್ಥವಾಗಿ ಬಿಡುತ್ತದೆ. ಸದಾ ಬೇಹದ್ದಿನ ಗೆಲುವು ಪಡೆಯುವ ಪುರುಷಾರ್ಥ ಮಾಡಿ.

ಗೀತೆ:
ಕೊನೆಗೂ ಆದಿನ ಬಂದಿತು................

ಓಂ ಶಾಂತಿ.
ಡಬಲ್ ಓಂ ಶಾಂತಿ. ನೀವು ಮಕ್ಕಳು ಓಂ ಶಾಂತಿ ಎಂದು ಹೇಳಬೇಕಾಗುತ್ತದೆ ಮತ್ತು ಇದಾಗಿದೆ ಡಬಲ್ ಓಂ ಶಾಂತಿ. ಪರಮಾತ್ಮ ಯಾರನ್ನು ತಂದೆಯೆಂದು ಹೇಳಲಾಗುತ್ತದೆ, ಅವರೂ ಹೇಳುತ್ತಾರೆ ಮತ್ತು ನೀವು ಮಕ್ಕಳೂ ಹೇಳುತ್ತೀರಿ. ನೀವಾತ್ಮಗಳೂ ಹೇಳುತ್ತಿದ್ದೀರಿ, ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ವಾಸ ಮಾಡುವವರೂ ಸಹಾ ಶಾಂತಿ ದೇಶದವರು. ಇಲ್ಲಿ ಈ ಸ್ಥೂಲ ದೇಶದಲ್ಲಿ ಪಾತ್ರವನ್ನಭಿನಯಿಸುವುದಕ್ಕೆ ಬಂದಿದ್ದೀರಿ. ಈ ಮಾತನ್ನು ಆತ್ಮಗಳು ಮರೆತು ಬಿಟ್ಟಿದ್ದಾರೆ ಪುನಃ ಕೊನೆಗೂ ಆ ದಿನ ಅವಶ್ಯವಾಗಿ ಬಂದಿದೆ ಎಂಬ ಹೇಳಿಕೆಯಿದೆ. ಯಾವ ಹೇಳಿಕೆ? ತಂದೆಯೇ, ದುಃಖವನ್ನು ದೂರ ಮಾಡಿ ಸುಖವನ್ನು ಕೊಡು ಎಂದು ಹೇಳುತ್ತಾರೆ. ಪ್ರತಿಯೊಬ್ಬ ಮನುಷ್ಯರು ಸುಖ-ಶಾಂತಿಯನ್ನೇ ಇಚ್ಛಿಸುತ್ತಾರೆ. ತಂದೆಯು ಬಡವರ ಬಂಧುವಾಗಿದ್ದಾರೆ. ಈ ಸಮಯ ಭಾರತವು ಖಂಡಿತವಾಗಿ ಬಡ ರಾಷ್ಟ್ರವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಖಂಡಿತವಾಗಿ ಸಾಹುಕಾರರಾಗಿದ್ದೆವು, ಇದನ್ನೂ ಸಹ ನೀವು ಬ್ರಾಹ್ಮಣ ಮಕ್ಕಳು ತಿಳಿದುಕೊಂಡಿದ್ದೀರಿ. ಉಳಿದವರೆಲ್ಲರೂ ಕಾಡಿನಲ್ಲಿದ್ದಾರೆ. ನೀವು ಮಕ್ಕಳಿಗೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ನಿಶ್ಚಯವಿದೆ. ನೀವು ತಿಳಿದಿದ್ದೀರಿ - ಇವರು ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ, ಅವರ ಮತವೂ ಸಹ ಶ್ರೇಷ್ಠಾತಿ ಶ್ರೇಷ್ಠವಾಗಿದೆ. ಇದು ಭಗವಂತನ ಮಹಾವಾಕ್ಯವಾಗಿದೆಯಲ್ಲವೆ. ಮನುಷ್ಯರಂತೂ ರಾಮ, ರಾಮ ಎಂದು ಧ್ವನಿ ಮಾಡುತ್ತಿರುತ್ತಾರೆ. ಹೇಗೆ ತಾಳವನ್ನೂ ಸಹ ಹಾಕುತ್ತಾ ಇರುತ್ತಾರೆ. ಈಗ ರಾಮನಂತೂ ತ್ರೇತಾದ ರಾಜನಾಗಿದ್ದನು, ಅವನ ಮಹಿಮೆಯೂ ಸಹ ಬಹಳ ಇತ್ತು, 14 ಕಲೆಯುಳ್ಳವರಾಗಿದ್ದರು. ಎರಡು ಕಲೆ ಕಡಿಮೆ, ಅವರಿಗಾಗಿ ಗಾಯನ ಮಾಡಲಾಗಿದೆ-ರಾಮ ರಾಜ್ಯ, ರಾಮ ಪ್ರಜಾ...... ರಾಜನಿಗೆ ಹೇಗೆ ದಾತನೆಂದು ಹೇಳುತ್ತಾರಲ್ಲವೆ, ಅನ್ನದಾತನೆಂದು ಹೇಳುತ್ತಾರೆ. ತಂದೆಯೂ ಸಹ ದಾತನಾಗಿದ್ದಾರೆ, ಅವರು ಎಲ್ಲವನ್ನೂ ಕೊಡುತ್ತಾರೆ. ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಅಲ್ಲಿ ಪಾಪವನ್ನು ಮಾಡುವಂತಹ ಯಾವುದೇ ಅಪ್ರಾಪ್ತಿಯಾಗುವ ವಸ್ತುವಿರುವುದಿಲ್ಲ. ಅಲ್ಲಿ ಪಾಪದ ಹೆಸರೇ ಇರುವುದಿಲ್ಲ. ಅರ್ಧಕಲ್ಪ ದೈವೀ ರಾಜ್ಯವಾಗಿದೆ, ಪುನಃ ಅರ್ಧ ಕಲ್ಪ ಆಸುರೀ ರಾಜ್ಯ. ಅಸುರ ಅರ್ಥಾತ್ ಯಾರಲ್ಲಿ ದೇಹಾಭಿಮಾನ, ಪಂಚ ವಿಕಾರಗಳಿವೆ.

ನೀವೀಗ ಅಂಬಿಗ ಅಥವಾ ಮಾಲೀಕನ ಬಳಿ ಬಂದಿದ್ದೀರಿ. ನಾವು ಡೈರೆಕ್ಟ್ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆಂದು ನಿಮಗೆ ತಿಳಿದಿದೆ ಆದರೆ ನೀವು ಮಕ್ಕಳೂ ಸಹ ಕುಳಿತು-ಕುಳಿತಿದ್ದಂತೆಯೇ ಮರೆತು ಹೋಗುತ್ತೀರಿ. ಭಗವಂತನು ಯಾವ ಆದೇಶವನ್ನು ನೀಡುವರೋ ಅದನ್ನು ಪಾಲಿಸಬೇಕಲ್ಲವೆ. ಮೊದಲನೆಯದಾಗಿ ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡಲು ಅವರು ಶ್ರೀಮತವನ್ನು ಕೊಡುತ್ತಾರೆ ಅಂದಮೇಲೆ ಮತದನುಸಾರ ನಡೆಯಬೇಕಲ್ಲವೆ. ಮೊಟ್ಟ ಮೊದಲನೇ ಮತವನ್ನು ಕೊಡುತ್ತಾರೆ - ದೇಹೀ-ಅಭಿಮಾನಿಗಳಾಗಿ. ತಂದೆಯೇ ನಾವಾತ್ಮಗಳಿಗೆ ಓದಿಸುತ್ತಾರೆ. ಇದನ್ನು ಪಕ್ಕಾ-ಪಕ್ಕಾ ನೆನಪು ಮಾಡಿ. ಈ ಶಬ್ಧವನ್ನು ನೆನಪು ಮಾಡಿದರೂ ಸಹ ಕಷ್ಟದಿಂದ ಪಾರಾಗುವಿರಿ. ಮಕ್ಕಳಿಗೆ ತಿಳಿಸಲಾಗಿದೆ, ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ನೀವೇ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಈ ಪ್ರಪಂಚವಂತೂ ಪತಿತ, ದುಃಖಿಯಾಗಿದೆ. ಸ್ವರ್ಗಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಮಕ್ಕಳಿಗೆ ತಿಳಿದಿದೆ – ಶಿವ ತಂದೆ ಭಗವಂತನೇ ನಮಗೆ ಓದಿಸುತ್ತಾರೆ. ನಾವು ಅವರ ವಿದ್ಯಾರ್ಥಿಗಳಾಗಿದ್ದೇವೆ, ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಅಂದಮೇಲೆ ಚೆನ್ನಾಗಿ ಓದಬೇಕಲ್ಲವೆ. ದೈವೀ ಕರ್ಮವೂ ಬೇಕು, ಯಾವುದೇ ಭ್ರಷ್ಟ ಕರ್ಮ ಮಾಡಬಾರದು. ಭ್ರಷ್ಟ ಕರ್ಮದಲ್ಲಿ ಜೂಜಾಟವೂ ಬಂದು ಬಿಡುತ್ತದೆ. ಇದು ಸಹ ದುಃಖವನ್ನು ಕೊಡುತ್ತದೆ, ಸೋತರೆ ದುಃಖವಾಗುವುದು, ಗೆದ್ದರೆ ಖುಷಿಯಾಗುವುದು. ಈಗ ನೀವು ಮಕ್ಕಳು ಮಾಯೆಯಿಂದ ಬೇಹದ್ದಿನ ಸೋಲನ್ನನುಭವಿಸಿದ್ದೀರಿ. ಇದು ಬೇಹದ್ದಿನ ಸೋಲು ಮತ್ತು ಗೆಲುವಿನ ಆಟವಾಗಿದೆ. ಪಂಚ ವಿಕಾರ ರೂಪಿ ರಾವಣನಿಂದ ಸೋಲೇ ಸೋಲು. ಈಗ ರಾವಣನ ಮೇಲೆ ಜಯ ಗಳಿಸಬೇಕಾಗಿದೆ. ಮಾಯೆಯೊಂದಿಗೆ ನಿಮಗೆ ಸೋಲೇ ಸೋಲು. ಈಗ ನೀವು ಮಕ್ಕಳ ವಿಜಯವಾಗುವುದಿದೆ ಅಂದಾಗ ಈಗ ನೀವೂ ಸಹ ಜೂಜಾಟ, ಇತ್ಯಾದಿಗಳೆಲ್ಲವನ್ನೂ ಬಿಟ್ಟು ಬಿಡಬೇಕು. ಬೇಹದ್ದಿನ ಜಯ ಪಡೆಯುವುದರ ಮೇಲೆ ಪೂರ್ಣ ಗಮನ ಕೊಡಬೇಕು. ಯಾವುದೇ ಇಂತಹ ಕರ್ಮ ಮಾಡಬಾರದು, ಸಮಯ ವ್ಯರ್ಥ ಮಾಡಬಾರದು. ಬೇಹದ್ದಿನ ಜಯವನ್ನು ಪಡೆಯಲು ಪುರುಷಾರ್ಥ ಮಾಡಬೇಕು. ಮಾಡಿಸುವಂತಹ ತಂದೆಯು ಸಮರ್ಥನಾಗಿದ್ದಾರೆ, ಅವರು ಸರ್ವಶಕ್ತಿವಂತನಾಗಿದ್ದಾರೆ. ಇದನ್ನೂ ತಿಳಿಸಲಾಗಿದೆ - ಕೇವಲ ತಂದೆಯೇ ಸರ್ವಶಕ್ತಿವಂತನಲ್ಲ, ರಾವಣನೂ ಸರ್ವಶಕ್ತಿವಂತನಾಗಿದ್ದಾನೆ. ಅರ್ಧ ಕಲ್ಪ ರಾವಣ ರಾಜ್ಯ, ಅರ್ಧ ಕಲ್ಪ ರಾಮ ರಾಜ್ಯವು ನಡೆಯುತ್ತದೆ. ನೀವೀಗ ರಾವಣನ ಮೇಲೆ ಜಯ ಗಳಿಸುತ್ತೀರಿ ಅಂದಮೇಲೆ ಆ ಹದ್ದಿನ ಮಾತುಗಳನ್ನು ಬಿಟ್ಟು ಬೇಹದ್ದಿನಲ್ಲಿ ತೊಡಗಬೇಕಾಗಿದೆ. ಅಂಬಿಗನು ಬಂದಿದ್ದಾರೆ, ಕೊನೆಗೂ ಆ ದಿನ ಬಂದಿತಲ್ಲವೆ. ನಿಮ್ಮ ಕೂಗಿಗೆ ಶ್ರೇಷ್ಠಾತಿ ಶ್ರೇಷ್ಠ ತಂದೆಯು ಓಗೊಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಅರ್ಧ ಕಲ್ಪ ಬಹಳ ಪೆಟ್ಟು ತಿಂದಿದ್ದೀರಿ. ಪತಿತರಾಗಿದ್ದೀರಿ, ಪಾವನ ಭಾರತವು ಶಿವಾಲಯವಾಗಿತ್ತು, ನೀವು ಶಿವಾಲಯದಲ್ಲಿದ್ದಿರಿ, ನೀವೀಗ ವೇಶ್ಯಾಲಯದಲ್ಲಿದ್ದೀರಿ. ನೀವು ಶಿವಾಲಯದಲ್ಲಿರುವವರನ್ನು ಪೂಜಿಸುತ್ತೀರಿ. ಇಲ್ಲಂತೂ ಅನೇಕ ಧರ್ಮಗಳ ಎಷ್ಟೊಂದು ಗಲಾಟೆಯಿದೆ. ತಂದೆಯು ತಿಳಿಸುತ್ತಾರೆ - ನಾನು ಇದೆಲ್ಲವನ್ನೂ ಸಮಾಪ್ತಿ ಮಾಡುತ್ತೇನೆ, ಎಲ್ಲರ ವಿನಾಶವಾಗಬೇಕಾಗಿದೆ, ಮತ್ತು ಧರ್ಮಸ್ಥಾಪಕರು ವಿನಾಶ ಮಾಡಿಸುವುದಿಲ್ಲ ಅಥವಾ ಅವರು ಸದ್ಗತಿ ಮಾಡುವಂತಹ ಗುರುಗಳೂ ಅಲ್ಲ. ಸದ್ಗತಿಯು ಜ್ಞಾನದಿಂದಲೇ ಆಗುತ್ತದೆ. ಸರ್ವರ ಸದ್ಗತಿದಾತನು ಜ್ಞಾನಸಾಗರ ತಂದೆಯೇ ಆಗಿದ್ದಾರೆ. ಈ ಶಬ್ಧವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಬಹಳ ಮಕ್ಕಳು ಇಲ್ಲಿ ಕೇಳುತ್ತಾರೆ, ಮತ್ತೆ ಹೊರಗಡೆ ಹೋದಾಗ ಇಲ್ಲಿಯದು ಇಲ್ಲಿಯೇ ಉಳಿದು ಬಿಡುತ್ತದೆ. ಹೇಗೆ ಗರ್ಭ ಜೈಲಿನಲ್ಲಿಯೂ ಸಹ ನಾವು ಪಾಪ ಮಾಡುವುದಿಲ್ಲ, ಇದರಿಂದ ಹೊರ ಹಾಕಿ ಎಂದು ಆತ್ಮವು ಕೇಳಿಕೊಳ್ಳುತ್ತದೆ. ಹೊರಗಡೆ ಬಂದಮೇಲೆ ಅಲ್ಲಿಯದು ಅಲ್ಲಿಯೇ ಉಳಿದು ಬಿಡುತ್ತದೆ. ಸ್ವಲ್ಪ ದೊಡ್ಡವರಾದರೆ ಸಾಕು, ಪಾಪ ಮಾಡಲು ತೊಡಗುತ್ತಾರೆ, ಕಾಮ ಕಟಾರಿಯನ್ನು ನಡೆಸುತ್ತಾರೆ. ಸತ್ಯಯುಗದಲ್ಲಿಯಾದರೂ ಗರ್ಭವೂ ಸಹ ಮಹಲಿನ ಸಮಾನವಾಗಿರುತ್ತದೆ, ಆದ್ದರಿಂದ ತಂದೆಯು ಕುಳಿತು ತಿಳಿಸುತ್ತಾರೆ - ಕೊನೆಗೂ ಆ ದಿನ ಇಂದು ಬಂದಿತು. ಯಾವ ದಿನ? ಪುರುಷೋತ್ತಮ ಸಂಗಮಯುಗದ ದಿನ. ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಮಕ್ಕಳೂ ಸಹ ಅನುಭವ ಮಾಡುತ್ತೀರಿ - ನಾವು ಪುರುಷೋತ್ತಮರಾಗುತ್ತೇವೆ, ಉತ್ತಮರಿಗಿಂತ ಉತ್ತಮ ಪುರುಷರು ನಾವೇ ಆಗಿದ್ದೆವು, ಶ್ರೇಷ್ಠಾತಿ ಶ್ರೇಷ್ಠ ಧರ್ಮವಿತ್ತು, ಕರ್ಮವೂ ಶ್ರೇಷ್ಠಾತಿ ಶ್ರೇಷ್ಠವಿತ್ತು, ರಾವಣ ರಾಜ್ಯವೇ ಇರುವುದಿಲ್ಲ. ಕೊನೆಗೂ ಆ ದಿನವು ಬಂದಿತು ಯಾವಾಗ ತಂದೆಯು ಓದಿಸಲು ಬಂದಿದ್ದಾರೆ. ಅವರೇ ಪತಿತ-ಪಾವನನಾಗಿದ್ದಾರೆ ಅಂದಾಗ ಇಂತಹ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ಈಗ ಕಲಿಯುಗದ ಅಂತ್ಯವಾಗಿದೆ. ಪಾವನರಾಗಲು ಸ್ವಲ್ಪ ಸಮಯವೂ ಬೇಕಲ್ಲವೆ. 60 ವರ್ಷಗಳ ನಂತರ ವಾನಪ್ರಸ್ಥವೆಂದು ಹೇಳುತ್ತಾರೆ. 60 ವರ್ಷಗಳಾದ ಮೇಲೆ ಕೈಗೆ ಕೋಲು ಬರುತ್ತದೆ. ಈಗಂತೂ ನೋಡಿ, 80 ವರ್ಷಗಳವರೂ ಸಹ ವಿಕಾರಗಳನ್ನು ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಇವರ ವಾನಪ್ರಸ್ಥ ಸ್ಥಿತಿಯಲ್ಲಿ ಪ್ರವೇಶ ಮಾಡಿ ಇವರಿಗೆ ತಿಳಿಸಿ ಕೊಡುತ್ತೇನೆ. ಆತ್ಮವೇ ಪವಿತ್ರವಾಗಿ ಇಲ್ಲಿಂದ ದೂರ ಹೋಗುತ್ತದೆ. ಆತ್ಮವೇ ಹಾರುತ್ತದೆ, ಈಗ ಆತ್ಮದ ರೆಕ್ಕೆಗಳು ಕತ್ತರಿಸಲ್ಪಟ್ಟಿವೆ, ಹಾರಲು ಆಗುತ್ತಿಲ್ಲ. ರಾವಣನು ರೆಕ್ಕೆಗಳನ್ನು ಕತ್ತರಿಸಿದ್ದಾನೆ. ಆತ್ಮವು ಪತಿತವಾಗಿ ಬಿಟ್ಟಿದೆ, ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಮೊಟ್ಟ ಮೊದಲಿಗೆ ಪರಮಾತ್ಮ ತಂದೆಯೇ ಹೋಗಬೇಕು. ಶಿವನ ಮೆರವಣಿಗೆ ಎಂದು ಹೇಳುತ್ತಾರಲ್ಲವೆ. ಶಂಕರನ ಮೆರವಣಿಗೆಯಾಗುವುದಿಲ್ಲ, ತಂದೆಯ ಹಿಂದೆ ನಾವೆಲ್ಲಾ ಮಕ್ಕಳು ಹೋಗುತ್ತೇವೆ. ತಂದೆಯು ಕರೆದುಕೊಂಡು ಹೋಗಲು ಬಂದಿದ್ದಾರೆ, ಶರೀರಸಹಿತವಂತೂ ಕರೆದುಕೊಂಡು ಹೋಗುವುದಿಲ್ಲ ಅಲ್ಲವೆ. ಆತ್ಮಗಳೆಲ್ಲರೂ ಪತಿತರಾಗಿದ್ದಾರೆ. ಎಲ್ಲಿಯವರೆಗೆ ಪವಿತ್ರರಾಗುವುದಿಲ್ಲವೋ ಅಲ್ಲಿಯವರೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ವಿಶ್ವದಲ್ಲಿ ಪವಿತ್ರತೆಯಿದ್ದಾಗ ಸುಖ ಮತ್ತು ಶಾಂತಿಯಿತ್ತು, ಕೇವಲ ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರೇ ಆಗಿದ್ದೀರಿ. ಈಗ ಮತ್ತೆಲ್ಲಾ ಧರ್ಮದವರೂ ಇದ್ದಾರೆ ಆದರೆ ದೇವತಾ ಧರ್ಮವಿಲ್ಲ. ಇದಕ್ಕೆ ಕಲ್ಪವೃಕ್ಷವೆಂದು ಹೇಳಲಾಗುತ್ತದೆ. ಇದನ್ನು ಆಲದ ಮರದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅದರಲ್ಲಿ ಬುಡವೇ ಇರುವುದಿಲ್ಲ, ಇಡೀ ವೃಕ್ಷವು ನಿಂತಿರುತ್ತದೆ ಹಾಗೆಯೇ ಇಲ್ಲಿಯೂ ಸಹ ದೇವಿ-ದೇವತಾ ಧರ್ಮದ ಬುನಾದಿಯು ಇಲ್ಲವೇ ಇಲ್ಲ, ಬಾಕಿ ಇಡೀ ವೃಕ್ಷವು ನಿಂತಿದೆ. ಇದರ ಬುನಾದಿಯು ಅವಶ್ಯವಾಗಿ ಇತ್ತು ಆದರೆ ಪ್ರಾಯಲೋಪವಾಗಿ ಬಿಟ್ಟಿದೆ. ಮತ್ತೆ ಪುನರಾವರ್ತನೆಯಾಗುವುದು. ತಂದೆಯು ತಿಳಿಸುತ್ತಾರೆ - ನಾನು ಒಂದು ಧರ್ಮದ ಸ್ಥಾಪನೆ ಮಾಡಲು ಪುನಃ ಬರುತ್ತೇನೆ ಉಳಿದೆಲ್ಲಾ ಧರ್ಮಗಳ ವಿನಾಶವಾಗುತ್ತದೆ ಇಲ್ಲವಾದರೆ ಸೃಷ್ಟಿಚಕ್ರವು ಹೇಗೆ ತಿರುಗುವುದು? ವಿಶ್ವದ ಇತಿಹಾಸ-ಭೂಗೋಳ ಪುನರಾವರ್ತನೆಯೆಂದು ಹೇಳಲಾಗುತ್ತದೆ. ಈಗ ಹಳೆಯ ಪ್ರಪಂಚವಿದೆ, ಮತ್ತೆ ಹೊಸ ಪ್ರಪಂಚವು ಪುನರಾವರ್ತನೆಯಾಗುವುದು. ಈ ಹಳೆಯ ಪ್ರಪಂಚವು ಬದಲಾಗಿ ಹೊಸ ಪ್ರಪಂಚವು ಸ್ಥಾಪನೆಯಾಗುವುದು. ಇದೇ ಭಾರತವು ಹೊಸದರಿಂದ ಹಳೆಯದಾಗುತ್ತದೆ. ಜಮುನಾ ನದಿಯ ತೀರದಲ್ಲಿ ಸ್ವರ್ಗವಿತ್ತೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಕಾಮ ಚಿತೆಯ ಮೇಲೆ ಕುಳಿತು ಸ್ಮಶಾನಕ್ಕೆ ಯೋಗ್ಯರಾಗಿ ಬಿಟ್ಟಿದ್ದೀರಿ ಮತ್ತೆ ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತೇನೆ. ಶ್ರೀಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ - ಏಕೆ? ಇದು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಹೆಸರಂತೂ ಚೆನ್ನಾಗಿದೆಯಲ್ಲವೆ. ರಾಧೆ ಮತ್ತು ಕೃಷ್ಣ ಇವರು ಹೊಸ ವಿಶ್ವದ ರಾಜಕುಮಾರ-ಕುಮಾರಿಯಾಗಿದ್ದಾರೆ. ನೀವು ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದಲೇ ಕಲಿಯುಗದಲ್ಲಿದ್ದೀರಿ. ಸಾಗರನ ಮಕ್ಕಳು ಕಾಮ ಚಿತೆಯನ್ನೇರಿ ಸುಟ್ಟು ಹೋದರು ಎಂದು ಗಾಯನವೂ ಇದೆ. ಈಗ ತಂದೆಯು ಎಲ್ಲರ ಮೇಲೆ ಜ್ಞಾನದ ಮಳೆಯನ್ನು ಸುರಿಸುತ್ತಾರೆ. ನಂತರ ಎಲ್ಲರೂ ಸತ್ಯಯುಗದಲ್ಲಿ ಹೊರಟು ಹೋಗುತ್ತೀರಿ. ಈಗ ಸಂಗಮಯುಗವಾಗಿದೆ. ನಿಮಗೆ ಅವಿನಾಶಿ ಜ್ಞಾನ ರತ್ನಗಳ ದಾನವು ಸಿಗುತ್ತದೆ. ಇದರಿಂದ ನೀವು ಸಾಹುಕಾರರಾಗುತ್ತೀರಿ. ಈ ಒಂದೊಂದು ರತ್ನವು ಲಕ್ಷಾಂತರ ರೂಪಾಯಿಗಳಷ್ಟು ಬೆಲೆ ಬಾಳುವಂತದ್ದಾಗಿದೆ. ಇದನ್ನು ಅವರು ಶಾಸ್ತ್ರಗಳ ಮಹಾವಾಕ್ಯಗಳು ಲಕ್ಷಾಂತರ ರೂಪಾಯಿಗಳು ಬೆಲೆ ಬಾಳುತ್ತದೆಯೆಂದು ತಿಳಿಯುತ್ತಾರೆ, ಆದರೆ ನೀವು ಮಕ್ಕಳು ಈ ವಿದ್ಯೆಯಿಂದ ಪದಮಾಪತಿಗಳಾಗುತ್ತೀರಿ. ವಿದ್ಯೆಯು ಆದಾಯದ ಮೂಲವಲ್ಲವೆ. ಈ ಜ್ಞಾನ ರತ್ನಗಳನ್ನು ನೀವು ಧಾರಣೆ ಮಾಡಿಕೊಳ್ಳುತ್ತೀರಿ, ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ. ಅವರು ಮತ್ತೆ ಶಂಕರನಿಗೆ ಹೇ ಭಂಭಂ ಮಹಾದೇವ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. ಶಂಕರನ ಮೇಲೆ ಎಷ್ಟೊಂದು ದೋಷ ಹೊರಿಸಿದ್ದಾರೆ! ಬ್ರಹ್ಮಾ ಮತ್ತು ವಿಷ್ಣುವಿನ ಪಾತ್ರವು ಇಲ್ಲಿದೆ, ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, 84 ಜನ್ಮಗಳು ವಿಷ್ಣುವಿಗೂ ಹೇಳುತ್ತಾರೆ, ಲಕ್ಷ್ಮೀ-ನಾರಾಯಣರಿಗೂ ಹೇಳುತ್ತಾರೆ. ನೀವು ಬ್ರಹ್ಮಾರವರಿಗಾಗಿಯೂ ಹೇಳುತ್ತೀರಿ. ತಂದೆಯು ಈಗ ಕುಳಿತು ಸರಿ, ಯಾವುದು ತಪ್ಪೆಂದು ತಿಳಿಸುತ್ತಾರೆ. ಬ್ರಹ್ಮಾ ಮತ್ತು ವಿಷ್ಣುವಿನ ಪಾತ್ರವು ಏನಾಗಿದೆ ಎಂಬುದನ್ನೂ ತಿಳಿಸುತ್ತಾರೆ. ನೀವೇ ದೇವತೆಗಳಾಗಿದ್ದಿರಿ, ಚಕ್ರವನ್ನು ಸುತ್ತಿ ಬಂದು ಬ್ರಾಹ್ಮಣರಾದಿರಿ. ಈಗ ಮತ್ತೆ ದೇವತೆಗಳಾಗುತ್ತೀರಿ. ಪಾತ್ರವೆಲ್ಲವೂ ಇಲ್ಲಿಯೇ ಅಭಿನಯಿಸಲ್ಪಡುತ್ತದೆ. ಕೆಲವರು ವೈಕುಂಠದ ಆಟ-ಪಾಠಗಳನ್ನು ನೋಡುತ್ತಾರೆ. ಇಲ್ಲಂತೂ ವೈಕುಂಠವಿಲ್ಲ, ಭಕ್ತ ಮೀರಾ ನೃತ್ಯ ಮಾಡುತ್ತಿದ್ದಳು, ಅದೆಲ್ಲವೂ ಸಾಕ್ಷಾತ್ಕಾರವೆಂದೇ ಹೇಳಬಹುದು. ಮೀರಾಳಿಗೆ ಎಷ್ಟೊಂದು ಮಾನ್ಯತೆಯಿದೆ, ಸಾಕ್ಷಾತ್ಕಾರ ಮಾಡಿದಳು, ಕೃಷ್ಣನೊಂದಿಗೆ ನರ್ತನ ಮಾಡಿದಳು ಆದರೇನು ಸ್ವರ್ಗದಲ್ಲಂತೂ ಹೋಗಲಿಲ್ಲ ಅಲ್ಲವೆ? ಗತಿ-ಸದ್ಗತಿಯಂತೂ ಸಂಗಮದಲ್ಲಿಯೇ ಸಿಗುತ್ತದೆ. ಈ ಪುರುಷೋತ್ತಮ ಸಂಗಮಯುಗವನ್ನು ನೀವು ತಿಳಿದುಕೊಂಡಿದ್ದೀರಿ. ನಾವು ತಂದೆಯ ಮೂಲಕ ಈಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆ. ವಿರಾಟ ರೂಪದ ಜ್ಞಾನವೂ ಬೇಕಲ್ಲವೆ. ಚಿತ್ರವನ್ನಿಟ್ಟುಕೊಳ್ಳುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ, ಅಕಾಸುರ-ಬಕಾಸುರ ಇವೆಲ್ಲವೂ ಈ ಸಂಗಮದ ಹೆಸರುಗಳಾಗಿವೆ. ಭಸ್ಮಾಸುರನೆಂದೂ ಹೆಸರಿದೆ ಅಂದರೆ ಕಾಮ ಚಿತೆಯನ್ನೇರಿ ಭಸ್ಮವಾಗಿ ಬಿಟ್ಟಿದ್ದಾರೆ. ಈಗ ನಾನು ಎಲ್ಲರನ್ನೂ ಪುನಃ ಜ್ಞಾನ ಚಿತೆಯ ಮೇಲೆ ಕುಳ್ಳರಿಸಿ ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಆತ್ಮಗಳೆಲ್ಲರೂ ಸಹೋದರ-ಸಹೋದರರಾಗಿದ್ದೀರಿ. ಹಿಂದೂ-ಮುಸ್ಲೀಂ ಭಾಯಿ-ಭಾಯಿ (ಸಹೋದರ-ಸಹೋದರರು), ಹಿಂದೂ-ಚೀನಿ ಭಾಯಿ-ಭಾಯಿ ಎಂದು ಹೇಳುತ್ತಾರೆ ಆದರೆ ಈಗ ಸಹೋದರ-ಸಹೋದರರೂ ಸಹ ಪರಸ್ಪರ ಹೊಡೆದಾಡುತ್ತಿರುತ್ತಾರೆ. ಕರ್ಮವನ್ನಂತೂ ಆತ್ಮವೇ ಮಾಡುತ್ತದೆಯಲ್ಲವೆ. ಶರೀರದ ಮೂಲಕ ಆತ್ಮವು ಹೊಡೆದಾಡುತ್ತದೆ. ಪಾಪವೂ ಆತ್ಮಕ್ಕೇ ಅಂಟುತ್ತದೆ ಆದ್ದರಿಂದ ಪಾಪಾತ್ಮರೆಂದು ಹೇಳಲಾಗುತ್ತದೆ. ತಂದೆಯು ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ. ಶಿವ ತಂದೆ ಮತ್ತು ಬ್ರಹ್ಮಾ ತಂದೆ ಇಬ್ಬರಿಗೂ ಸಹ ಮಕ್ಕಳೇ, ಮಕ್ಕಳೇ ಎಂದು ಹೇಳುವ ಹಕ್ಕಿದೆ. ತಂದೆಯು ದಾದಾರವರ ಮೂಲಕ ತಿಳಿಸುತ್ತಾರೆ - ಹೇ ಮಕ್ಕಳೇ! ನೀವು ತಿಳಿದುಕೊಂಡಿದ್ದೀರಲ್ಲವೆ, ನಾವಾತ್ಮಗಳು ಇಲ್ಲಿಗೆ ಬಂದು ಪಾತ್ರವನ್ನಭಿನಯಿಸುತ್ತೇವೆ ಮತ್ತೆ ಅಂತ್ಯದಲ್ಲಿ ತಂದೆಯು ಬಂದು ಎಲ್ಲರನ್ನು ಪವಿತ್ರರನ್ನಾಗಿ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ, ಅವರು ಬರುವುದೂ ಇಲ್ಲಿಯೇ. ಇಲ್ಲಿ ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ. ಶ್ರೀಕೃಷ್ಣನೇ ಮತ್ತೆ ಶ್ರೀನಾರಾಯಣನಾಗುತ್ತಾರೆ ನಂತರ ಚಕ್ರವನ್ನು ಸುತ್ತಿ ಅಂತ್ಯದಲ್ಲಿ ಪತಿತರಾಗುತ್ತಾರೆ. ತಂದೆಯು ಬಂದು ಮತ್ತೆ ಪಾವನರನ್ನಾಗಿ ಮಾಡುತ್ತಾರೆ. ನೀವು ಬ್ರಾಹ್ಮಣರಿಂದ ದೇವತೆಗಳಾಗುತ್ತೀರಿ. ನಂತರ ಏಣಿಯನ್ನು ಕೆಳಗಿಳಿಯುತ್ತೀರಿ. ಈ 84 ಜನ್ಮಗಳ ಚಕ್ರವು ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ತಂದೆಯೇ ಮಕ್ಕಳಿಗೆ ತಿಳಿಸಿ ಕೊಡುತ್ತಾರೆ - ಗೀತೆಯನ್ನು ಕೇಳಿದಿರಿ, ಕೊನೆಗೂ ಭಕ್ತರ ಕೂಗು ಕೇಳಲ್ಪಡುತ್ತದೆ. ಹೇ ಭಗವಂತ ಬಂದು ನಮಗೆ ಭಕ್ತಿಯ ಫಲವನ್ನು ಕೊಡಿ ಎಂದು ಕರೆಯುತ್ತಾರೆ. ಭಕ್ತಿಯು ಫಲ ಕೊಡುವುದಿಲ್ಲ, ಫಲವನ್ನು ಭಗವಂತನು ಕೊಡುತ್ತಾರೆ. ಭಕ್ತರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ಬಹಳ ಭಕ್ತಿಯನ್ನೂ ನೀವೇ ಮಾಡಿದ್ದೀರಿ. ಮೊಟ್ಟ ಮೊದಲು ನೀವೇ ಶಿವನ ಭಕ್ತಿ ಮಾಡಿದಿರಿ. ಯಾರು ಈ ಮಾತುಗಳನ್ನು ಚೆನ್ನಾಗಿ ಅರಿತುಕೊಳ್ಳುವರೋ ಅವರು ನಮ್ಮ ಕುಲದವರೆಂಬುದನ್ನು ನೀವು ಅನುಭವ ಮಾಡುತ್ತೀರಿ. ಯಾರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೋ ಅವರು ಹೆಚ್ಚು ಭಕ್ತಿ ಮಾಡಿಲ್ಲ, ಕೊನೆಯಲ್ಲಿ ಬಂದಿದ್ದಾರೆಂದು ತಿಳಿದುಕೊಳ್ಳಿ, ಇಲ್ಲಿಯೂ ಸಹ ಮೊದಲಿಗೆ ಬರುವುದಿಲ್ಲ. ಇದು ಲೆಕ್ಕವಿದೆ. ಯಾರು ಬಹಳ ಭಕ್ತಿ ಮಾಡಿದ್ದಾರೆಯೋ ಅವರಿಗೆ ಬಹಳ ಫಲವು ಸಿಗುತ್ತದೆ. ಸ್ವಲ್ಪ ಭಕ್ತಿಯೆಂದರೆ ಸ್ವಲ್ಪ ಫಲ. ನಿಮ್ಮ ಬುದ್ಧಿಯು ಈಗ ಕೆಲಸ ಮಾಡುತ್ತದೆ. ತಂದೆಯು ಭಿನ್ನ-ಭಿನ್ನ ಯುಕ್ತಿಗಳನ್ನು ಬಹಳಷ್ಟು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಂದೊಂದು ಅವಿನಾಶೀ ಜ್ಞಾನ ರತ್ನವು ಪದುಮಗಳಿಗೆ ಸಮಾನವಾಗಿದೆ. ಇದರಿಂದ ತಮ್ಮ ಜೋಳಿಗೆಯನ್ನು ತುಂಬಿಕೊಂಡು ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಮತ್ತೆ ದಾನ ಮಾಡಬೇಕಾಗಿದೆ.

2. ಶೀ ಶ್ರೀ ತಂದೆಯ ಶ್ರೇಷ್ಠ ಮತದಂತೆ ಸಂಪೂರ್ಣವಾಗಿ ನಡೆಯಬೇಕಾಗಿದೆ. ಆತ್ಮವನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಲು ದೇಹೀ-ಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:
ಸರ್ವರ ಪ್ರತಿ ಶುಭ ಭಾವ ಮತ್ತು ಶ್ರೇಷ್ಠ ಭಾವನೆ ಧಾರಣೆ ಮಾಡುವಂತಹ ಹಂಸ ಬುದ್ಧಿ ಹೋಲಿ ಹಂಸ ಭವ.

ಹಂಸ ಬುದ್ಧಿ ಅರ್ಥಾತ್ ಸದಾ ಎಲ್ಲಾ ಆತ್ಮಗಳ ಪ್ರತಿ ಶ್ರೇಷ್ಠ ಮತ್ತು ಶುಭ ಯೋಚಿಸುವಂತಹವರು. ಮೊದಲು ಎಲ್ಲಾ ಆತ್ಮಗಳ ಭಾವವನ್ನು ಪರಿಶೀಲಿಸುವಂತಹ ಮತ್ತು ನಂತರ ಧಾರಣೆ ಮಾಡುವಂತಹವರು. ಎಂದೂ ಸಹಾ ಬುದ್ಧಿಯಲ್ಲಿ ಯಾವುದೇ ಆತ್ಮರ ಪ್ರತಿ ಅಶುಭ ಅಥವಾ ಸಾಧಾರಣ ಭಾವ ಧಾರಣೆಯಾಗಬಾರದು. ಸದಾ ಶುಭ ಭಾವ ಮತ್ತು ಶುಭ ಭಾವನೆ ಇಡುವಂತಹವರೇ ಹೋಲಿ ಹಂಸವಾಗಿದ್ದಾರೆ. ಅವರು ಯಾವುದೇ ಆತ್ಮರ ಅಕಲ್ಯಾಣದ ಮಾತು ಕೇಳುತ್ತಾ, ನೋಡುತ್ತಿದ್ದರು ಸಹಾ ಅಕಲ್ಯಾಣವನ್ನು ಕಲ್ಯಾಣದ ವೃತ್ತಿಯಿಂದ ಬದಲಾಯಿಸುತ್ತಾರೆ. ಅವರ ದೃಷ್ಠಿ ಎಲ್ಲಾ ಆತ್ಮರ ಪ್ರತಿ ಶ್ರೇಷ್ಠ ಶುದ್ದ ಸ್ನೇಹದ್ದಾಗಿರುತ್ತದೆ.

ಸ್ಲೋಗನ್:
ಪ್ರೇಮದಿಂದ ಭರ್ಪೂರ್ ಆಗಿ ಈ ರೀತಿ ಗಂಗೆಯರಾಗಿ ಯಾವುದರಿಂದ ನಿಮ್ಮಿಂದ ಪ್ರೀತಿಯ ಸಾಗರ ತಂದೆ ಕಂಡು ಬರಬೇಕು.

ಅವ್ಯಕ್ತ ಸೂಚನೆ:- ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.

ಕೆಲ ಭಕ್ತ ಆತ್ಮರು ಪ್ರಭು ಪ್ರೇಮದಲ್ಲಿ ಲೀನರಾಗಲು ಬಯಸುತ್ತಾರೆ ಮತ್ತು ಕೆಲ ಭಕ್ತರು ಜ್ಯೋತಿಯಲ್ಲಿ ಲೀನರಾಗಲು ಬಯಸುತ್ತಾರೆ. ಇಂತಹ ಆತ್ಮರಿಗೆ ಸೆಕೆಂಡಿನಲ್ಲಿ ತಂದೆಯ ಪರಿಚಯ, ತಂದೆಯ ಮಹಿಮೆ ಮತ್ತು ಪ್ರಾಪ್ತಿಗಳನ್ನು ತಿಳಿಸಿ ಮತ್ತಿ ಸಂಬಂಧದ ಲವಲೀನ ಅವಸ್ಥೆಯ ಅನುಭವ ಮಾಡಿಸಿರಿ. ಲವಲೀನರಾಗಿದ್ದರೆ ಸಹಜವೇ ಲೀನರಾಗುವ ರಹಸ್ಯವನ್ನೂ ತಿಳಿದುಕೊಳ್ಳುವರು.