28.12.25 Avyakt Bapdada
Kannada
Murli 18.03.2008 Om Shanti Madhuban
“ಕಾರಣವನ್ನು
ನಿವಾರಣೆಯಲ್ಲಿ ಪರಿವರ್ತನೆ ಮಾಡಿ ಮಾಸ್ಟರ್ ಮುಕ್ತಿದಾತಾ ಆಗಿರಿ, ಸರ್ವರಿಗೂ ತಂದೆಯ ಸಂಗದ ರಂಗನ್ನು
ಹಚ್ಚಿ ಸಮಾನರನ್ನಾಗಿ ಮಾಡುವ ಹೋಳಿ ಆಚರಿಸಿರಿ”
ಇಂದು ಸರ್ವ ಖಜಾನೆಗಳ
ಮಾಲೀಕ ಬಾಪ್ದಾದಾರವರು ತಮ್ಮ ಎಲ್ಲಾ ಕಡೆಯ ಖಜಾನೆ ಸಂಪನ್ನ ಮಕ್ಕಳನ್ನು ನೋಡುತ್ತಿದ್ದಾರೆ.
ಪ್ರತಿಯೊಬ್ಬ ಮಗುವಿನ ಖಜಾನೆಯಲ್ಲಿ ಎಷ್ಟು ಖಜಾನೆ ಜಮಾ ಆಗಿದೆ. ಖಜಾನೆಯಂತು ಎಲ್ಲರಿಗೂ ಒಂದೇ ಸಮಯ
ಒಂದೇ ರೀತಿಯಲ್ಲಿ ದೊರೆತಿವೆ ಆದರೂ ಜಮಾದ ಖಾತೆ ಪ್ರತಿಯೊಬ್ಬ ಮಗುವಿನದು ಬೇರೆ - ಬೇರೆಯಾಗಿದೆ.
ಏಕೆಂದರೆ ಸಮಯ ಪ್ರಮಾಣ ಈಗ ಬಾಪ್ದಾದಾ ಎಲ್ಲಾ ಮಕ್ಕಳನ್ನು ಸರ್ವ ಖಜಾನೆಗಳಿಂದ ಸಂಪನ್ನ ನೋಡಲು
ಬಯಸುತ್ತಾರೆ, ಏಕೆಂದರೆ ಈ ಖಜಾನೆ ಕೇವಲ ಈ ಒಂದು ಜನ್ಮಕ್ಕಾಗಿ ಅಲ್ಲ, ಈ ಅವಿನಾಶಿ ಖಜಾನೆ ಅನೇಕ
ಜನ್ಮ ಜೊತೆ ಬರುತ್ತವೆ. ಈ ಸಮಯದ ಖಜಾನೆಗಳನ್ನು ಎಲ್ಲ ಮಕ್ಕಳು ತಿಳಿದುಕೊಂಡಿದ್ದೀರಿ.
ಬಾಪ್ದಾದಾರವರು ಯಾವ - ಯಾವ ಖಜಾನೆಗಳನ್ನು ಕೊಟ್ಟಿದ್ದಾರೆ, ಅದನ್ನು ಹೇಳಿದ ತಕ್ಷಣ ಅವು ಎದುರಿಗೆ
ಬರುತ್ತವೆ. ಎಲ್ಲರ ಎದುರು ಖಜಾನೆಗಳ ಪಟ್ಟಿ ಇಮರ್ಜ್ ಆಗಿವೆಯಲ್ಲವೇ! ಏಕೆಂದರೆ ಬಾಪದಾದಾರವರು ಮೊದಲೇ
ಹೇಳಿದ್ದಾರೆ ಖಜಾನೆಗಳಂತು ಸಿಕ್ಕಿವೆ ಆದರೆ ಜಮಾ ಮಾಡಿಕೊಳ್ಳುವ ವಿಧಿ ಏನು? ಯಾರು ಎಷ್ಟು ನಿಮಿತ್ತ
ಹಾಗೂ ನಿರ್ಮಾಣ ಆಗುತ್ತಾರೆ ಅಷ್ಟೇ ಖಜಾನೆ ಜಮಾ ಆಗುತ್ತವೆ. ಅಂದಮೇಲೆ ನಿಮಿತ್ತ ಹಾಗೂ
ನಿರ್ಮಾಣರಾಗುವ ವಿಧಿಯಿಂದ ನಮ್ಮ ಖಾತೆಯಲ್ಲಿ ಎಷ್ಟು ಖಜಾನೆ ಜಮಾ ಆಗಿವೆ ಎಂದು ಪರೀಕ್ಷಿಸಿಕೊಳ್ಳಿರಿ.
ಎಷ್ಟು ಖಜಾನೆ ಜಮಾ ಆಗಿರುತ್ತವೆ, ಸಂಪನ್ನ ಆಗಿರುತ್ತವೆ ಅಷ್ಟು ಅವರ ಚಲನೆ ಹಾಗೂ ಚೆಹರೆಯಿಂದ
ಸಂಪನ್ನ ಆತ್ಮದ ಆತ್ಮಿಕ ನಶೆ ಸ್ವತಃ ಕಾಣಿಸುತ್ತದೆ. ಅವರ ಚೆಹರೆಯಲ್ಲಿ ಸದಾ ಆತ್ಮಿಕ ನಶೆ ಹಾಗೂ
ಹೆಮ್ಮೆ ಹೊಳೆಯುತ್ತಿರುತ್ತದೆ ಹಾಗೂ ಎಷ್ಟು ಆತ್ಮಿಕ ಹೆಮ್ಮೆಯಲ್ಲಿ ಹೊಳೆಯುತ್ತಿರುತ್ತದೆ ಅಷ್ಟು
ನಿಶ್ಚಿಂತ ಚಕ್ರವರ್ತಿಗಳು ಆಗಿರುತ್ತಾರೆ. ಆತ್ಮಿಕ ಹೆಮ್ಮೆ ಅರ್ಥಾತ್ ಆತ್ಮಿಕ ನಶೆ ನಿಶ್ಚಿಂತ
ಚಕ್ರವರ್ತಿಯ ಲಕ್ಷಣವಾಗಿದೆ. ಅಂದಮೇಲೆ ತಮ್ಮನ್ನು ನನ್ನ ಚಲನೆ ಮತ್ತು ಚೆಹರೆಯಲ್ಲಿ ನಿಶ್ಚಿಂತ
ಚಕ್ರವರ್ತಿಯ ನಿಶ್ಚಯ ಹಾಗೂ ನಶೆ ಇದೆಯೇ? ಎಂದು ಪರೀಕ್ಷಿಸಿಕೊಳ್ಳಿರಿ. ಕನ್ನಡಿಯಂತು ಎಲ್ಲರಿಗೂ
ಸಿಕ್ಕಿದೆಯಲ್ಲವೇ! ಅಂದಮೇಲೆ ಹೃದಯರೂಪಿ ಕನ್ನಡಿಯಲ್ಲಿ ತಮ್ಮ ಚೆಹರೆಯನ್ನು ಪರೀಕ್ಷಿಸಿಕೊಳ್ಳಿರಿ.
ಯಾವುದೇ ಪ್ರಕಾರದ ಚಿಂತೆ ಇದೆಯೇ. ಏನು ಆಗುತ್ತದೆ! ಹೇಗೆ ಆಗುತ್ತದೆ! ಹೀಗೆ ಆಗುತ್ತಿಲ್ಲ ತಾನೆ!
ಯಾವುದೇ ಸಂಕಲ್ಪ ಉಳಿದಿಲ್ಲ ತಾನೆ? ನಿಶ್ಚಿಂತ ಚಕ್ರವರ್ತಿಯ ಸಂಕಲ್ಪ ಇದೇ ಆಗಿರುತ್ತದೆ ಏನು
ಆಗುತ್ತಿದೆ ಅದು ಬಹಳ ಒಳ್ಳೆಯದು ಹಾಗೂ ಏನು ಆಗುವುದಿದೆ ಅದು ಇನ್ನೂ ಒಳ್ಳೆಯದು ಆಗುತ್ತದೆ. ಇದಕ್ಕೆ
ಹೆಮ್ಮೆ, ಆತ್ಮಿಕ ಹೆಮ್ಮೆ ಅರ್ಥಾತ್ ಸ್ವಮಾನಧಾರಿ ಆತ್ಮ ಎಂದು ಹೇಳಲಾಗುತ್ತದೆ. ವಿನಾಶಿ ಧನವಂತರು
ಎಷ್ಟು ಸಂಪಾದಿಸುತ್ತಾರೆ ಅಷ್ಟು ಸಮಯ ಪ್ರಮಾಣ ಚಿಂತೆಯಲ್ಲಿ ಇರುತ್ತಾರೆ. ತಮಗೆ ತಮ್ಮ ಈಶ್ವರೀಯ
ಖಜಾನೆಗಳಿಗಾಗಿ ಚಿಂತೆ ಇದೆಯೇ? ನಿಶ್ಚಿಂತ ಆಗಿದ್ದೀರಲ್ಲವೇ! ಏಕೆಂದರೆ ಯಾರು ಖಜಾನೆಗಳ ಮಾಲೀಕರು
ಪರಮಾತ್ಮನ ಬಾಲಕರಾಗಿದ್ದಾರೋ ಅವರು ಸದಾ ಸ್ವಪ್ನದಲ್ಲಿಯೂ ಕೂಡ ನಿಶ್ಚಿಂತ ಚಕ್ರವರ್ತಿಗಳು
ಆಗಿರುತ್ತಾರೆ ಏಕೆಂದರೆ ಅವರಿಗೆ ನಿಶ್ಚಯವಿದೆ ಈ ಈಶ್ವರೀಯ ಖಜಾನೆ ಈ ಜನ್ಮಕ್ಕಷ್ಟೇ ಅಲ್ಲ ಅನೇಕ
ಜನ್ಮಗಳಿಗಾಗಿ ಜೊತೆ ಇದ್ದವು, ಜೊತೆ ಇರುತ್ತವೆ. ಆದ್ದರಿಂದ ಅವರು ನಿಶ್ಚಯಬುದ್ದಿ ನಿಶ್ಚಿಂತರು
ಆಗಿರುತ್ತಾರೆ.
ಅಂದಮೇಲೆ ಬಾಪ್ದಾದಾ
ನಾಲ್ಕೂ ಕಡೆಯ ಮಕ್ಕಳ ಜಮಾದ ಖಾತೆಯನ್ನು ನೋಡುತ್ತಿದ್ದರು. ಮೊದಲೂ ಕೂಡ ಹೇಳಿದ್ದಾರೆ ವಿಶೇಷ ಮೂರು
ಪ್ರಕಾರದ ಖಾತೆ ಜಮಾ ಮಾಡಿದ್ದೀರಿ ಹಾಗೂ ಮಾಡಬಹುದು/ಮಾಡುತ್ತೀರಿ. ಒಂದಾಗಿದೆ – ತಮ್ಮ ಪುರುಷಾರ್ಥ
ಪ್ರಮಾಣ ಖಜಾನೆ ಜಮಾ ಮಾಡಿಕೊಳ್ಳುವುದು. ಇದು ಒಂದು ಖಾತೆಯಾಗಿದೆ. ಎರಡನೆಯ ಖಾತೆಯಾಗಿದೆ –
ಆಶೀರ್ವಾದಗಳ ಖಾತೆ. ಆಶೀರ್ವಾದಗಳ ಖಾತೆ ಜಮಾ ಆಗಲು ಸಾಧನವಾಗಿದೆ ಸದಾ ಸಂಬಂಧ-ಸಂಪರ್ಕ ಹಾಗೂ
ಸೇವೆಯಲ್ಲಿರುತ್ತಾ ಸಂಕಲ್ಪ, ಮಾತು ಹಾಗೂ ಕರ್ಮದಲ್ಲಿ ಮೂರರಲ್ಲಿಯೂ ಸ್ವಯಂ ಸ್ವಯಂನಿಂದ ಸಂತುಷ್ಟರು,
ಇನ್ನೊಂದು ಸರ್ವರು ಹಾಗೂ ಸದಾ ಸಂತುಷ್ಟರಾಗಬೇಕು. ಸಂತುಷ್ಟತೆ ಆಶೀರ್ವಾದಗಳ ಖಜಾನೆಯನ್ನು ವೃದ್ಧಿಸು/ಹೆಚ್ಚಿಸುತ್ತದೆ.
ಮತ್ತು ಮೂರನೆಯ ಖಾತೆಯಾಗಿದೆ - ಪುಣ್ಯದ ಖಾತೆ. ಪುಣ್ಯದ ಖಾತೆಯ ಸಾಧನವಾಗಿದೆ – ಯಾವುದೇ ಸೇವೆ
ಮಾಡುತ್ತೀರಿ, ಮನಸ್ಸಾದಿಂದ ಇರಬಹುದು, ವಾಣಿಯಿಂದ ಇರಬಹುದು, ಕರ್ಮದಲ್ಲಿ ಇರಬಹುದು, ಸಂಬಂಧದಲ್ಲಿ,
ಸಂಪರ್ಕದಲ್ಲಿ ಬರುತ್ತಿದ್ದರೂ ಸದಾ ನಿಸ್ವಾರ್ಥ ಹಾಗೂ ಬೇಹದ್ದಿನ ವೃತ್ತಿ, ಸ್ವಭಾವ, ಭಾವ ಹಾಗೂ
ಭಾವನೆಯಿಂದ ಸೇವೆ ಮಾಡಬೇಕು. ಇದರಿಂದ ಪುಣ್ಯದ ಖಾತೆ ಸ್ವತಃ ಜಮಾ ಆಗುತ್ತದೆ. ಅಂದಮೇಲೆ
ಪರೀಕ್ಷಿಸಿಕೊಳ್ಳಿರಿ - ಪರೀಕ್ಷಿಸಿಕೊಳ್ಳಲು ಬರುತ್ತದೆಯಲ್ಲವೇ! ಬರುತ್ತದೆಯೇ? ಯಾರಿಗೆ
ಬರುವುದಿಲ್ಲ ಅವರು ಕೈ ಎತ್ತಿರಿ. ಯಾರಿಗೆ ಬರುವುದಿಲ್ಲ, ಅಂತಹವರೂ ಯಾರೂ ಇಲ್ಲ ಅಂದರೆ ಎಲ್ಲರಿಗೂ
ಬರುತ್ತದೆ. ಅಂದಮೇಲೆ ಪರೀಕ್ಷಿಸಿಕೊಂಡಿದ್ದೀರಾ? ಸ್ವ-ಪುರುಷಾರ್ಥದ ಖಾತೆ, ಆಶೀರ್ವಾದಗಳ ಖಾತೆ,
ಪುಣ್ಯದ ಖಾತೆ ಮೂರು ಎಷ್ಟು ಪ್ರತಿಶತ % ಜಮಾ ಆಗಿವೆ? ಪರೀಕ್ಷೆ ಮಾಡಿದ್ದೀರಾ? ಯಾರು ಪರೀಕ್ಷೆ
ಮಾಡುತ್ತೀರಿ ಅವರು ಕೈ ಎತ್ತಿರಿ. ಪರೀಕ್ಷೆ ಮಾಡುತ್ತೀರಾ? ಮೊದಲನೆಯ ಲೈನ್ ಮಾಡುತ್ತಿದ್ದೀರಲ್ಲವೇ?
ಪರೀಕ್ಷೆ ಮಾಡುವುದಿಲ್ಲವೇ? ಏನು ಮಾಡುತ್ತೀರಿ? ಮಾಡುತ್ತೀರಲ್ಲವೇ! ಏಕೆಂದರೆ ಬಾಪ್ದಾದಾ
ಹೇಳಿದ್ದಾರೆ, ಸನ್ನೆ/ಇಶಾರಾ ಮಾಡಿದ್ದಾರೆ ಈಗ ಸಮಯದ ತೀವ್ರ ಗತಿಯಿಂದ ಮುಂದೆ ಹೋಗುತ್ತಿದೆ,
ಆದ್ದರಿಂದ ತಮ್ಮನ್ನು ಪದೇ-ಪದೇ ಪರೀಕ್ಷಿಸಿಕೊಳ್ಳಿರಿ. ಏಕೆಂದರೆ ಬಾಪ್ದಾದಾ ಪ್ರತಿಯೊಬ್ಬ ಮಗುವನ್ನು
ರಾಜಾ ಮಗು, ರಾಜಯೋಗಿಯಿಂದ ರಾಜಾ ಮಗು ರೂಪದಲ್ಲಿ ನೋಡಲು ಬಯಸುತ್ತಾರೆ. ಇದೇ ಪರಮಾತ್ಮ ತಂದೆಗೆ
ನಶೆಯಿದೆ ಒಂದೊಂದು ಮಗು ರಾಜಾ ಮಗುವಾಗಿದ್ದೀರಿ. ಸ್ವರಾಜ್ಯ ಅಧಿಕಾರಿಯಿಂದ ವಿಶ್ವ ರಾಜ್ಯ ಅಧಿಕಾರಿ
ಪರಮಾತ್ಮನ ಮಗು ಆಗಿದ್ದೀರಿ.
ಖಜಾನೆಯಂತು
ಬಾಪ್ದಾದಾರವರಿಂದ ಸಿಗುತ್ತಲೇ ಇರುತ್ತವೆ. ಈ ಖಜಾನೆಗಳನ್ನು ಜಮಾ ಮಾಡಿಕೊಳ್ಳಲು ಸಹಜ ವಿಧಿಯಾಗಿದೆ
– ವಿಧಿ ಎಂದಾದರೂ ಹೇಳಿರಿ ಅಥವಾ ಬೀಗದ ಕೈ ಎಂದು ಹೇಳಿರಿ, ಅದು ಗೊತ್ತಿದೆಯಲ್ಲವೇ! ಜಮಾ
ಮಾಡಿಕೊಳ್ಳುವ ವಿಧಿ ಏನು? ಗೊತ್ತಿದೆಯೇ? ಮೂರು ಬಿಂದುಗಳು. ಎಲ್ಲರ ಹತ್ತಿರ ಬೀಗದ ಕೈ ಇದೆಯಲ್ಲವೇ?
ಮೂರು ಬಿಂದುಗಳನ್ನು ಹಾಕಿರಿ ಹಾಗೂ ಖಜಾನೆಗಳು ಸ್ವತಃ ಜಮಾ ಆಗುತ್ತಾ ಹೋಗುತ್ತವೆ. ಮಾತೆಯರಿಗೆ
ಬೀಗದ ಕೈ ಹಾಕಲು ಬರುತ್ತದೆಯಲ್ಲವೇ, ಬೀಗದ ಕೈ ಸಂಭಾಲನೆ ಮಾಡುವುದರಲ್ಲಿ ಚತುರರಾಗಿರುತ್ತಾರಲ್ಲವೇ!
ಅಂದಮೇಲೆ ಎಲ್ಲಾ ಮಾತೆಯರು ಈ ಮೂರು ಬಿಂದುಗಳ ಬೀಗದ ಕೈಯನ್ನು ಸಂಭಾಲನೆ ಮಾಡಿಕೊಂಡು
ಇಟ್ಟುಕೊಂಡಿದ್ದೀರಲ್ಲವೇ, ಬಿಂದು ಹಾಕಿದ್ದೀರಲ್ಲವೇ? ಹೇಳಿರಿ, ಮಾತೆಯರೆ ಬೀಗದ ಕೈ ಇದೆಯಲ್ಲವೇ?
ಯಾರ ಹತ್ತಿರವಿದೆ ಅವರು ಕೈ ಎತ್ತಿರಿ. ಮಾತೆಯರೆ ಕೈ ಎತ್ತಿರಿ. ಬೀಗದ ಕೈ ಕಳ್ಳತನ ಆಗುತ್ತಿಲ್ಲ
ತಾನೇ? ಮನೆಯ ಎಲ್ಲಾ ವಸ್ತುಗಳ ಬೀಗದ ಕೈ ಮಾತೆಯರಿಗೆ ಸಂಭಾಲನೆ ಮಾಡಲು ಬಹಳ ಚೆನ್ನಾಗಿ ಬರುತ್ತದೆ.
ಅಂದಮೇಲೆ ಈ ಬೀಗದ ಕೈ ಕೂಡ ಸದಾ ಜೊತೆಗೆ ಇರುತ್ತದೆಯಲ್ಲವೇ?
ವರ್ತಮಾನ ಸಮಯ ಬಾಪ್ದಾದಾ
ಇದನ್ನೇ ಬಯಸುತ್ತಾರೆ – ಈಗ ಸಮಯ ಸಮೀಪ ಬರುವ ಕಾರಣ ಬಾಪ್ದಾದಾ ಒಂದು ಶಬ್ಧ ಎಲ್ಲ ಮಕ್ಕಳ ಒಳಗಿನಿಂದ/ಮನಸ್ಸಿನಿಂದ,
ಸಂಕಲ್ಪದಲ್ಲಿ, ಮಾತಿನಲ್ಲಿ ಹಾಗೂ ಪ್ರಾಯೋಗಿಕ ಕರ್ಮದಲ್ಲಿ ಪರಿವರ್ತಿಸಲು ಬಯಸುತ್ತಾರೆ.
ಸಾಹಸವಿದೆಯೇ? ಒಂದು ಶಬ್ಧ ಇದನ್ನೇ ಬಾಪ್ದಾದಾ ಪ್ರತಿ ಮಕ್ಕಳಿಂದ ಪರಿವರ್ತನೆ ಬಯಸುತ್ತಾರೆ, ಯಾವ
ಒಂದು ಶಬ್ಧ ತೀವ್ರ ಪುರುಷಾರ್ಥಿಯಿಂದ ಹುಡುಗಾಟಿಕೆಯ ಪುರುಷಾರ್ಥಿಯನ್ನಾಗಿ ಮಾಡುತ್ತದೆ. ಈಗ ಸಮಯ
ಅನುಸಾರ ಯಾವ ಪುರುಷಾರ್ಥ ಬೇಕಾಗಿದೆ? ತೀವ್ರ ಪುರುಷಾರ್ಥ ಹಾಗೂ ಎಲ್ಲರೂ ಬಯಸುವುದು ತೀವ್ರ
ಪುರುಷಾರ್ಥಿಯ ಲೈನ್ ನಲ್ಲಿ ಬರಬೇಕು ಎಂದು. ಆದರೆ ಒಂದು ಶಬ್ಧ ಹುಡುಗಾಟಿಕೆಯನ್ನಾಗಿ ಮಾಡುತ್ತದೆ.
ಅದು ಗೊತ್ತಿದೆಯೇ? ಪರಿವರ್ತನೆ ಮಾಡಲು ತಯಾರು ಇದ್ದೀರಾ? ಕೈ ಎತ್ತಿರಿ, ತಯಾರಿದ್ದೀರಾ? ನೋಡಿರಿ
ತಮ್ಮ ಪೋಟೊ ಟಿ.ವಿ ಯಲ್ಲಿ ಬರುತ್ತಿದೆ. ತಯಾರಾಗಿದ್ದೀರಾ, ಶುಭಾಷಯಗಳು. ಒಳ್ಳೆಯದು ತೀವ್ರ
ಪುರುಷಾರ್ಥದಿಂದ ಪರಿವರ್ತನೆ ಮಾಡಿಕೊಳ್ಳುತ್ತೀರಾ ಅಥವಾ ಮಾಡಿಕೊಳ್ಳುತ್ತೇವೆ, ನೋಡುತ್ತೇವೆ... ಈ
ರೀತಿಯಂತು ಇಲ್ಲವೇ? ಒಂದು ಶಬ್ಧ ತಿಳಿದಿರಬಹುದು, ಏಕೆಂದರೆ ಎಲ್ಲರೂ ಚತುರರಾಗಿದ್ದೀರಿ, ಒಂದು
ಶಬ್ಧ ಆಗಿದೆ – ‘ಕಾರಣ’ ಶಬ್ಧವನ್ನು ಪರಿವರ್ತನೆ ಮಾಡಿ ‘ನಿವಾರಣೆ’ ಶಬ್ಧವನ್ನು ಎದುರಿಗೆ
ತೆಗೆದುಕೊಂಡು ಬನ್ನಿರಿ. ಕಾರಣ ಎದುರಿಗೆ ಬರುವುದರಿಂದ ಹಾಗೂ ಕಾರಣವನ್ನು ಯೋಚನೆ ಮಾಡುವುದರಿಂದ
ನಿವಾರಣೆಯಾಗುವುದಿಲ್ಲ. ಬಾಪ್ದಾದಾ ಸಂಕಲ್ಪದಲ್ಲಿಯೂ, ಕೇವಲ ಮಾತಿನಲ್ಲಿ ಅಲ್ಲ ಸಂಕಲ್ಪದಲ್ಲಿಯೂ ಈ
ಕಾರಣ ಶಬ್ಧವನ್ನು ನಿವಾರಣೆಯಲ್ಲಿ ಪರಿವರ್ತನೆ ಮಾಡಲು ಬಯಸುತ್ತಾರೆ, ಏಕೆಂದರೆ ಕಾರಣ ಭಿನ್ನ-ಭಿನ್ನ
ಪ್ರಕಾರದ್ದು ಇರುತ್ತವೆ ಹಾಗು ಈ ಕಾರಣ ಶಬ್ಧವನ್ನು ಯೋಚಿಸುವುದರಲ್ಲಿ, ಮಾತನಾಡುವುದರಲ್ಲಿ,
ಕರ್ಮದಲ್ಲಿ ಬರುವುದರಿಂದ ತೀವ್ರ ಪುರುಷಾರ್ಥಿಯ ಎದುರು ಬಂಧನವಾಗಿ ಬಿಡುತ್ತದೆ, ಏಕೆಂದರೆ
ತಮ್ಮೆಲ್ಲರದು ಬಾಪ್ದಾದಾರಿಗೆ ಪ್ರತಿಜ್ಞೆಯಾಗಿದೆ, ಸ್ನೇಹದಿಂದ ಪ್ರತಿಜ್ಞೆಯಾಗಿದೆ ನಾವೆಲ್ಲರೂ
ಕೂಡ ತಂದೆಯ ವಿಶ್ವ ಪರಿವರ್ತನೆಯ ಕಾರ್ಯದಲ್ಲಿ ಜೊತೆಗಾರರಾಗಿದ್ದೇವೆ. ತಂದೆಯ ಜೊತೆಗಾರರಾಗಿದ್ದೇವೆ,
ತಂದೆ ಒಬ್ಬರೇ ಮಾಡುವುದಿಲ್ಲ, ಮಕ್ಕಳನ್ನು ಜೊತೆಗೆ ಕರೆದುಕೊಳ್ಳುತ್ತಾರೆ. ಅಂದಮೇಲೆ ವಿಶ್ವ
ಪರಿವರ್ತನೆಯ ಕಾರ್ಯದಲ್ಲಿ ತಮ್ಮ ಕಾರ್ಯ ಏನು? ಸರ್ವ ಆತ್ಮರ ಕಾರಣಗಳನ್ನೂ ನಿವಾರಣೆ ಮಾಡುವುದು
ಏಕೆಂದರೆ ಇತ್ತೀಚಿಗೆ ಹೆಚ್ಚಾಗಿ ದುಃಖಿ, ಅಶಾಂತರಾಗಿರುವ ಕಾರಣ ಈಗ ಮುಕ್ತಿಯನ್ನು ಬಯಸುತ್ತಾರೆ.
ದುಃಖ ಅಶಾಂತಿಯಿಂದ, ಸರ್ವ ಬಂಧನಗಳಿಂದ ಮುಕ್ತಿಯನ್ನು ಬಯಸುತ್ತಾರೆ ಮತ್ತು ಮುಕ್ತಿದಾತರು ಯಾರು?
ತಂದೆಯ ಜೊತೆಗೆ ತಾವು ಮಕ್ಕಳೂ ಮುಕ್ತಿದಾತ ಆಗಿದ್ದೀರಿ. ತಮ್ಮ ಜಡ ಚಿತ್ರಗಳಿಂದ ಇಲ್ಲಿಯವರೆಗೂ ಎನು
ಬೇಡುತ್ತಿದ್ದರು? ಈಗ ದುಃಖ ಅಶಾಂತಿ ಹೆಚ್ಚುತ್ತಿರುವುದನ್ನು ನೋಡಿ ಎಲ್ಲಾ ಗರಿಷ್ಠ/ಹೆಚ್ಚಿನ
ಆತ್ಮರು ತಾವು ಮುಕ್ತಿದಾತಾ ಆತ್ಮರನ್ನು ನೆನಪು ಮಾಡುತ್ತಿದ್ದಾರೆ. ಮನಸ್ಸಿನಲ್ಲಿ ದುಃಖಿಗಳಾಗಿ
ಕೂಗುತ್ತಿದ್ದಾರೆ - ಹೇ ಮುಕ್ತಿದಾತಾ ಮುಕ್ತಿ ಕೊಡಿರಿ. ತಮಗೆ ಆತ್ಮರ ದುಃಖ ಅಶಾಂತಿಯ ಕೂಗು
ಕೇಳಿಸುತ್ತಿಲ್ಲವೇ? ಆದರೆ ಮುಕ್ತಿದಾತರಾಗಿ ಮೊದಲು ಈ ಕಾರಣ ಶಬ್ಧವನ್ನು ಮುಕ್ತ ಮಾಡಿರಿ. ಆಗ ಸ್ವತಃ
ಮುಕ್ತಿಯ ಧ್ವನಿ ತಮ್ಮ ಕಿವಿಯಲ್ಲಿ ಕೇಳಿಸುತ್ತದೆ/ಝೆಂಕರಿಸುತ್ತದೆ. ಮೊದಲು ಆಂತರಿಕವಾಗಿ ತಾವು ಈ
ಶಬ್ಧದಿಂದ ಮುಕ್ತರಾದರೆ ಅನ್ಯರನ್ನೂ ಮುಕ್ತ ಮಾಡಬಹುದು. ಈಗಂತು ದಿನ ಪ್ರತಿದಿನ ತಮ್ಮ ಎದುರು
ಮುಕ್ತಿದಾತ ಮುಕ್ತಿ ಕೊಡಿರಿ ಎಂದು ಕ್ಯು ನಿಲ್ಲಿವುದಿದೆ. ಆದರೆ ಇಲ್ಲಿಯವರೆಗೂ ತಮ್ಮ
ಪುರುಷಾರ್ಥದಲ್ಲಿ ಭಿನ್ನ- ಭಿನ್ನ ಕಾರಣ ಮುಕ್ತಿಯ ದ್ವಾರ/ಬಾಗಿಲು ಮುಚ್ಚಿದೆ.ಆದ್ದರಿಂದ ಇಂದು
ಬಾಪದಾದಾ ಈ ಶಬ್ಧದ, ಇದರ ಜೊತೆಗೆ ಇನ್ನೂ ಅನೇಕ ಬಲಹೀನ/ದುರ್ಬಲ ಶಬ್ಧಗಳು ಬರುತ್ತವೆ. ಕಾರಣ ಶಬ್ಧ
ವಿಶೇಷವಾಗಿದೆ ಮತ್ತು ಅದರಲ್ಲಿ ಇನ್ನೂ ಅನೇಕ ಬಲಹೀನತೆಗಳು ಇರುತ್ತವೆ. ಹೀಗೆ, ಹಾಗೆ, ಹೇಗೆ ಇವುಗಳೂ
ಇದರ ಜೊತೆಗಾರ ಶಬ್ಧಗಳಾಗಿವೆ, ಇವುಗಳು ದ್ವಾರ ಮುಚ್ಚಲು ಕಾರಣವಾಗಿವೆ.
ಇಂದು ಎಲ್ಲರೂ ಹೋಳಿ
ಆಚರಿಸಲು ಬಂದಿದ್ದೀರಲ್ಲವೇ. ಎಲ್ಲರೂ ಓಡೋಡಿ ಬಂದಿದ್ದೀರಿ. ಸ್ನೇಹದ ವಿಮಾನವನ್ನು ಏರಿ ಬಂದಿದ್ದೀರಿ.
ತಂದೆಯ ಜೊತೆ ಸ್ನೇಹವಿದೆ, ಆದ್ದರಿಂದ ತಂದೆಯ ಜೊತೆ ಹೋಳಿ ಆಚರಿಸಲು ತಲುಪಿದ್ದೀರಿ. ಭಲೇ
ಬಂದಿದ್ದೀರಿ, ಶುಭಾಷಯಗಳು. ಬಾಪ್ದಾದಾ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ. ಬಾಪ್ದಾದಾ
ನೋಡುತ್ತಿದ್ದಾರೆ, ಕುರ್ಚಿಯಲ್ಲಿ ನಡೆಯುವವರೂ ಕೂಡ, ಆರೋಗ್ಯ ಸ್ವಲ್ಪ ಹೆಚ್ಚೂ-ಕಡಿಮೆ ಇದ್ದರೂ ಕೂಡ
ಸಾಹಸದಿಂದ ತಲುಪಿದ್ದೀರಿ. ಬಾಪ್ದಾದಾ ಈ ದೃಶ್ಯ ನೋಡುತ್ತಿದ್ದಾರೆ, ಇಲ್ಲಿ ಕ್ಲಾಸ್ ನಲ್ಲಿ
ಬರುತ್ತಾರಲ್ಲವೇ. ಪೆÇ್ರೀಗ್ರಾಮ್ ದಲ್ಲಿ/ಕಾರ್ಯಕ್ರಮದಲ್ಲಿ ಬಂದರೂ ಸಹ ಕುರ್ಚಿಯಲ್ಲಿಯೂ ಗೈಡ್ನನ್ನು
ಹಿಡಿದುಕೊಂಡಾದರೂ ಬರುತ್ತಾರೆ. ಅಂದಮೇಲೆ ಇದನ್ನು ಏನೆಂದು ಹೇಳಲಾಗುತ್ತದೆ? ಪರಮಾತ್ಮ ಪ್ರೀತಿ.
ಬಾಪ್ದಾದಾರವರೂ ಇಂಥ ಸಾಹಸಿ ಸ್ನೇಹೀ, ಹೃದಯ ಸ್ನೇಹಿ ಮಕ್ಕಳಿಗೆ ಬಹಳಷ್ಟು ಹೃದಯದ ಆಶೀರ್ವಾದ,
ಹೃದಯದ ಪ್ರೀತಿ ವಿಶೇಷವಾಗಿ ಕೊಡುತ್ತಿದ್ದಾರೆ. ಸಾಹಸ ಮಾಡಿ ಬಂದಿದ್ದಾರೆ, ತಂದೆ ಮತ್ತು
ಪರಿವಾರದವರ ಸಹಾಯ ಇದ್ದೇ ಇರುತದೆ. ಎಲ್ಲರಿಗೂ ಸ್ಥಾನ ಸರಿಯಾಗಿ ದೊರೆತಿದೆಯೇ? ಸಿಕ್ಕಿದೆಯೇ?
ಯಾರಿಗೆ ಸ್ಥಾನ ಸರಿಯಾಗಿ ದೊರೆತಿದೆ ಅವರು ಕೈ ಎತ್ತಿರಿ. ವಿದೇಶಿಯರಿಗೆ ಸ್ಥಾನ ಸರಿಯಾಗಿ
ದೊರೆತಿದೆಯೇ? ಅಲ್ಲಿಯ ಜಾತ್ರೆಗಳಲ್ಲಿ ಮಣ್ಣೂ ಬರುತ್ತದೆ ಜೊತೆಗೆ ಊಟವೂ ನಡೆಯುತ್ತಿರುತ್ತದೆ. ತಮಗೆ
ಒಳ್ಳೆಯ ಬ್ರಹ್ಮಾ ಭೋಜನ ಸಿಕ್ಕಿತೇ, ಸಿಗುತ್ತಿದೆಯೇ? ಒಳ್ಳೆಯದು ಕೈ ಅಲುಗಾಡಿಸುತ್ತಿದ್ದಾರೆ.
ಮಲಗಲು ಮೂರು ಹೆಜ್ಜೆ ಪೃತ್ವಿ ಸಿಕ್ಕಿದೆ. ಇಂಥ ಮಿಲನ ಮತ್ತೆ 5 ಸಾವಿರ ವರ್ಷದ ನಂತರ ಸಂಗಮದಲ್ಲಿಯೇ
ಆಗುತ್ತದೆ. ನಂತರ ಆಗುವುದಿಲ್ಲ.
ಇಂದು ಬಾಪ್ದಾದಾರಿಗೆ
ಸಂಕಲ್ಪವಿದೆ ಎಲ್ಲಾ ಮಕ್ಕಳ ಜಮಾದ ಖಾತೆಯನ್ನು ನೋಡುವುದು. ನೋಡಿದ್ದಾರೆ, ಮುಂದೆಯೂ ನೋಡುತ್ತಾರೆ
ಏಕೆಂದರೆ ಬಾಪ್ದಾದಾರವರು ಮೊದಲೇ ಸೂಚನೆಯನ್ನು ಕೊಟ್ಟಿದ್ದಾರೆ ಈ ಸಂಗಮಯುಗ ಜಮಾದ ಖಾತೆಯನ್ನು ಜಮಾ
ಮಾಡಿಕೊಳ್ಳುವುದಾಗಿದೆ. ಈ ಸಂಗಮಯುಗದಲ್ಲಿ ಈಗ ಎಷ್ಟು ಜಮಾ ಮಾಡಿಕೊಳ್ಳಬೇಕೋ ಅಷ್ಟು, ಇಡೀ ಕಲ್ಪದ
ಖಾತೆಯನ್ನು ಜಮಾ ಮಾಡಿಕೊಳ್ಳಬಹುದು. ನಂತರ ಜಮಾದ ಖಾತೆಯ ಬ್ಯಾಂಕ್ ಬಂದ್ ಆಗುತ್ತದೆ. ಆಗ ಏನು
ಮಾಡುತ್ತೀರಿ? ಆದ್ದರಿಂದ ಬಾಪ್ದಾದಾರಿಗೆ ತಾವು ಮಕ್ಕಳ ಮೇಲೆ ಪ್ರೀತಿಯಿದೆಯಲ್ಲವೇ. ಬಾಪ್ದಾದಾರಿಗೆ
ಗೊತ್ತಿದೆ ಮಕ್ಕಳು ಹುಡುಗಾಟಿಕೆಯಲ್ಲಿ ಕೆಲವೊಮ್ಮೆ ಮರೆತು ಬಿಡುತ್ತಾರೆ, ಆಗುತ್ತದೆ, ನೋಡುತ್ತೇವೆ,
ಮಾಡುತ್ತಾ ಇದ್ದೇವೆ, ನಡೆಯುತ್ತಿದ್ದೇವಲ್ಲವೇ. ಬಹಳ ಮಜಾದಿಂದ ಹೇಳುತ್ತಾರೆ, ನೀವು ನೋಡುತ್ತಿಲ್ಲವೇ,
ನಾವು ಮಾಡುತ್ತಿದ್ದೇವೆ, ಹಾಂ ನಡೆಯುತ್ತಿದ್ದೇವೆ ಮತ್ತೇ ಏನು ಮಾಡಬೇಕು? ಆದರೆ ನಡೆಯುವುದು ಹಾಗೂ
ಹಾರುವುದಕ್ಕೂ ಎಷ್ಟು ವ್ಯತ್ಯಾಸವಿದೆ? ನಡೆಯುತ್ತಿದ್ದೀರಿ ಶುಭಾಷಯಗಳು. ಆದರೆ ಈಗ ನಡೆಯುವ ಸಮಯ
ಸಮಾಪ್ತಿಯಾಗುತ್ತಿದೆ. ಈಗ ಹಾರುವ ಸಮಯವಿದೆ. ಆಗಲೇ ಗುರಿಯನ್ನು ತಲುಪುತ್ತೀರಿ. ಭಗವಂತನ ಮಕ್ಕಳಾಗಿ
ಸಾಧಾರಣ ಪ್ರಜೆಯಲ್ಲಿ ಬರುವುದು, ಸಾಧಾರಣ ಪ್ರಜೆ! ಶೋಭಿಸುವುದೇ?
ಬಾಪ್ದಾದಾ ಇದನ್ನೇ
ಬಯಸುತ್ತಾರೆ ಹೋಳಿಯ ಅರ್ಥವಾಗಿದೆಯಲ್ಲವೇ – ಆಗಿರುವುದು ಆಗಿ ಹೋಯಿತು. ಹೋಳಿ ಆಚರಿಸಲು ಬಂದಿದ್ದೀರಿ,
ಅಂದಮೇಲೆ ಆಗಿರುವುದು ಆಗಿ ಹೋಯಿತು, ಯಾವುದೇ ಕಾರಣದಿಂದ ಯಾವುದೇ ಬಲಹೀನತೆ ಉಳಿದುಕೊಂಡಿದ್ದರೆ ಈಗ
ಸಮಯ ಆಗಿ ಹೋಗಿರುವುದು ಆಗಿ ಹೋಯಿತು ಎಂದು ತಿಳಿದು ತಮ್ಮ ಚಿತ್ರವನ್ನು ಸ್ಮೃತಿಯಲ್ಲಿ ತನ್ನಿರಿ,
ತಮ್ಮ ಚಿತ್ರಕಾರರಾಗಿ ತಮ್ಮ ಚಿತ್ರ ತೆಗೆಯಿರಿ. ಬಾಪ್ದಾದಾ ಈಗಲೂ ಪ್ರತಿಯೊಬ್ಬ ಮಗುವಿನ ಯಾವ
ಚಿತ್ರವನ್ನು ಎದುರಿಗೆ ನೋಡುತ್ತಿದ್ದಾರೆ? ಎಂದು ಗೊತ್ತಿದೆಯೇ? ಯಾವ ಚಿತ್ರ ನೋಡುತ್ತಿದ್ದಾರೆ? ಈಗ
ತಾವೆಲ್ಲರೂ ತಮ್ಮ ಚಿತ್ರವನ್ನು ಬರೆಯಿರಿ. ಚಿತ್ರ ಬರೆಯಲು ಬರುತ್ತದೆಯಲ್ಲವೇ! ಶ್ರೇಷ್ಠ ಸಂಕಲ್ಪದ
ಪೆನ್ನಿನಿಂದ ತಮ್ಮ ಚಿತ್ರ ಈಗೀಗ ಎದುರಿಗೆ ತನ್ನಿರಿ. ಮೊದಲು ಎಲ್ಲರೂ ಡ್ರಿಲ್ ಮಾಡಿರಿ, ಮನಸ್ಸಿನ
ಡ್ರಿಲ್. ಕರ್ಮೇಂದ್ರಿಯಗಳ ಡ್ರಿಲ್ ಅಲ್ಲ, ಮನಸ್ಸಿನ ಡ್ರಿಲ್ ಮಾಡಿರಿ. ಡ್ರಿಲ್ ಮಾಡಲು
ರೆಡಿಯಾಗಿದ್ದೀರಾ. ತಲೆ ಅಲುಗಾಡಿಸಿರಿ. ನೋಡಿರಿ ಎಲ್ಲದಕ್ಕಿಂತ ಶ್ರೇಷ್ಠಾತಿ ಶ್ರೇಷ್ಠ
ಚಿತ್ರವಾಗಿದೆ ಕಿರೀಟ, ಸಿಂಹಾಸನ, ತಿಲಕಧಾರಿಯ ಚಿತ್ರ. ಅಂದಮೇಲೆ ತಮ್ಮ ಚಿತ್ರ ಎದುರಿಗೆ ತನ್ನಿರಿ.
ಹಾಗೂ ಎಲ್ಲಾ ಸಂಕಲ್ಪ ದೂರ ಮಾಡಿ ನೋಡಿರಿ, ತಾವೆಲ್ಲರೂ ಬಾಪ್ದಾದಾರ ಹೃದಯ
ಸಿಂಹಾಸನಧಾರಿಗಳಾಗಿದ್ದೀರಿ. ಸಿಂಹಾಸನವಿದೆಯಲ್ಲವೇ! ಇಂಥ ಸಿಂಹಾಸನ ಎಲ್ಲಿಯೂ ಸಿಗುವುದಿಲ್ಲ. ನಾನು
ವಿಶೇಷ ಆತ್ಮ, ಸ್ವಮಾನಧಾರಿ ಆತ್ಮ, ಬಾಪ್ದಾದಾರ ಮುದಲನೆಯ ರಚನೆ ಶ್ರೇಷ್ಠ ಆತ್ಮ, ಬಾಪ್ದಾದಾರ ಹೃದಯ
ಸಿಂಹಾಸನಧಾರಿಯಾಗಿದ್ದೇನೆ ಎಂಬ ಚಿತ್ರ ಮೊದಲು ತೆಗೆಯಿರಿ. ಸಿಂಹಾಸನಧಾರಿಗಳಾಗಿದ್ದೀರಿ! ಜೊತೆಗೆ
ನಿಶ್ಚಿಂತ ಚಕ್ರವರ್ತಿಗಳು, ಎಲ್ಲಾ ಹೊರೆಯನ್ನು ಬಾಪ್ದಾದಾರಿಗೆ ಅರ್ಪಣೆ ಮಾಡಿ ಡಬಲ್ ಲೈಟ್ನ
ಕಿರೀಟದಾರಿಯಾಗಿದ್ದೇನೆ. ಅಂದರೆ ಕಿರೀಟ, ಸಿಂಹಾಸನ ಹಾಗೂ ತಿಲಕಧಾರಿ ಇಂಥ ತಂದೆಯ ಅರ್ಥಾತ್
ಪರಮಾತ್ಮನ ಪ್ರಿಯ ಆತ್ಮ ಆಗಿದ್ದೇನೆ.
ಈ ತಮ್ಮ ಚಿತ್ರವನ್ನು
ತೆಗೆದಿರಿ. ಸದಾ ಈ ಡಬಲ್ ಲೈಟ್ನ ಕಿರೀಟ ನಡೆಯುತ್ತಾ - ತಿರುಗಾಡುತ್ತಾ ಧಾರಣೆ ಮಾಡಿಕೊಳ್ಳುತ್ತೀರಾ.
ಯಾವಾಗ ಬೇಕಾದರೂ ತಮ್ಮ ಸ್ವಮಾನ ನೆನಪು ಮಾಡುವಾಗ ಈ ಕಿರೀಟ, ತಿಲಕ, ಸಿಂಹಾಸನಧಾರಿ ಆತ್ಮ ಆಗಿದ್ದೇನೆ,
ಈ ತಮ್ಮ ಚಿತ್ರ ಧೃಢ ಸಂಕಲ್ಪದ ಮೂಲಕ ಎದುರಿಗೆ ತನ್ನಿರಿ. ನೆನೆಪಿದೆಯಾ ಆರಂಭದಲ್ಲಿ ತಮ್ಮ ಅಭ್ಯಾಸ
ಒಂದೇ ಶಬ್ಧದ ಸ್ಮೃತಿಯಲ್ಲಿ ಇರುತ್ತಿತ್ತು, ಆ ಒಂದು ಶಬ್ಧವಾಗಿದೆ - ನಾನು ಯಾರು? ಈ ನಾನು ಯಾರು?
ಈ ಶಬ್ದವನ್ನು ಪದೇ-ಪದೇ ಹಾಗೂ ತಮ್ಮ ಭಿನ್ನ-ಭಿನ್ನ ಸ್ವಮಾನ, ಬಿರುದುಗಳು (ಟೈಟಲ್), ಭಗವಂತನಿಂದ
ದೊರೆತಿರುವ ಟೈಟಲ್ ಸ್ಮೃತಿಯಲ್ಲಿ ತೆಗೆದುಕೊಂಡು ಬನ್ನಿರಿ. ಈಗೀಗ ಜನರಿಗೆ ಮನುಷ್ಯರಿಂದ
ಮನುಷ್ಯರಿಗೆ ಟೈಟಲ್ ದೊರೆತರೂ ಎಷ್ಟು ಮಹತ್ವ ಎಂದು ತಿಳಿಯುತ್ತಾರೆ, ತಾವು ಮಕ್ಕಳಿಗೆ ತಂದೆಯಿಂದ
ಎಷ್ಟು ಟೈಟಲ್ ಸಿಕ್ಕಿವೆ? ಸ್ವಮಾನ ಸಿಕ್ಕಿವೆ? ಸದಾ ಸ್ವಮಾನದ ಲಿಸ್ಟ್ ತಮ್ಮ ಬುದ್ಧಿಯಲ್ಲಿ ಮನನ
ಮಾಡುತ್ತಾ ಇರಿ. ನಾನು ಯಾರು? ಲಿಸ್ಟ್ ಎದುರಿಗೆ ತನ್ನಿರಿ. ಇದೇ ನಶೆಯಲ್ಲಿದ್ದರೆ ಯಾವುದೇ ಕಾರಣಗಳು
ಇದ್ದರೆ ಕಾರಣ ಶಬ್ದ ಮರ್ಜ್ ಆಗುತ್ತದೆ ಹಾಗೂ ನಿವಾರಣೆ ಪ್ರತಿಯೊಂದು ಕರ್ಮದಲ್ಲಿ ಕಾಣಿಸುತ್ತದೆ.
ಯಾವಾಗ ನಿವಾರಣಾ ಸ್ವರೂಪರಾಗುತ್ತೀರಿ ಆಗ ಸರ್ವ ಆತ್ಮರಿಗೆ ನಿರ್ವಾಣಧಾಮ, ಮುಕ್ತಿಧಾಮದಲ್ಲಿ
ಸಹಜವಾಗಿ ಹೋಗಲು ಮಾರ್ಗ ತೋರಿಸಿ ಮುಕ್ತ ಮಾಡಬಹುದು.
ದೃಢ ಸಂಕಲ್ಪ
ಮಾಡಿರಿ-ದೃಢ ಸಂಕಲ್ಪ ಮಾಡಲು ಬರುತ್ತದೆಯೇ? ಯಾವಾಗ ದೃಢತೆ ಇರುತ್ತದೆ ಆಗ ದೃಢತೆಯ ಬೀಗದ ಕೈ
ಸಫಲತೆಯಾಗಿದೆ. ಸ್ವಲ್ಪವೂ ದೃಢ ಸಂಕಲ್ಪದಲ್ಲಿ ಕಡಿಮೆ ಇರಬಾರದು ಏಕೆಂದರೆ ಮಾಯೆಯ ಕೆಲಸವೇ ಆಗಿದೆ
ಸೋಲು ಉಣಿಸುವುದು ಹಾಗೂ ತಮ್ಮ ಕೆಲಸವೇನು? ತಮ್ಮ ಕೆಲಸವಾಗಿದೆ-ತಂದೆಯ ಕೊರಳಿನ ಮಾಲೆ ಆಗುವುದು,
ಮಾಯೆಯಿಂದ ಸೋಲು ಉಣ್ಣುವುದಲ್ಲ. ಅಂದಮೇಲೆ ಎಲ್ಲರೂ ನಾನು ಸದಾ ತಂದೆಯ ಕೊರಳಿನ ವಿಜಯ
ಮಾಲೆಯಾಗಿದ್ದೇನೆ. ಕೊರಳಿನ ಮಾಲೆಯಾಗಿದ್ದೇನೆ ಎಂಬ ಸಂಕಲ್ಪ ಮಾಡಿರಿ. ಕೊರಳಿನ ಮಾಲೆ ವಿಜಯದ
ಮಾಲೆಯಾಗಿದೆ.
ಬಾಪ್ದಾದಾ ಕೈ ಎತ್ತಲು
ಹೇಳಿದರೆ ತಾವು ಏನು ಆಗುತ್ತೀರಿ? ಎಲ್ಲರೂ ಏನು ಉತ್ತರ ಕೊಡುತ್ತೀರಿ? ಒಂದೇ ಉತ್ತರ ಕೊಡಿತ್ತೀರಿ
ಲಕ್ಷ್ಮೀ-ನಾರಾಯಣ ಆಗುತ್ತೇವೆ. ರಾಮ-ಸೀತೆ ಅಲ್ಲ. ಲಕ್ಷ್ಮೀ-ನಾರಾಯಣರಾಗುವ ನಾವು ಬಾಪ್ದಾದಾರ ವಿಜಯ
ಮಾಲೆಯ ಮಣಿಗಳಾಗಿದ್ದೇವೆ, ಪೂಜ್ಯ ಆತ್ಮ ರಾಗಿದ್ದೇವೆ, ನಮ್ಮ ಮಾಲೆಯ ಮಣಿಯನ್ನು ಜಪಿಸುತ್ತ ತಮ್ಮ
ಸಮಸ್ಯಗಳನ್ನು ಸಮಾಪ್ತಿ ಮಾಡಿಕೊಳುತ್ತಾರೆ. ಇಂಥ ಶ್ರೇಷ್ಠ ಮಣಿಗಳಾಗಿದ್ದೀರಿ. ಅಂದಮೇಲೆ ಇಂದು
ಬಾಪ್ದಾದಾರಿಗೆ ಏನು ಕೊಡುತ್ತೀರಿ? ಹೋಳಿ ಹಬ್ಬದ ಏನಾದರೂ ಉಡುಗೊರೆ ಕೊಡುತ್ತಿರಲ್ಲವೆ! ಈ ಕಾರಣ
ಶಬ್ದ, ಈ ರೆ, ರೆ, ಮತ್ತು ಕಾರಣ, ರೆ, ರೆ ಎಂದು ಹೇಳಿದರೆ ಗಿಳಿ ಸಮಾನರಾಗಿತ್ತೀರಿ. ರೆ, ರೆ ಎಂದೂ
ಇಲ್ಲ, ಹಾಗೆ, ಹೀಗೆ ಎಂದೂ ಇಲ್ಲ, ಯಾವುದೇ ಪ್ರಕಾರದ ಕಾರಣ ಅಲ್ಲ, ನಿವಾರಣೆ. ಒಳ್ಳೆಯದು.
ಬಾಪ್ದಾದಾರವರು ಒಂದೊಂದು
ಮಗುವನ್ನು ಸಮಾನರಾಗುವ, ಶ್ರೇಷ್ಠ ಸಂಕಲ್ಪ ಮಾಡುವ ಪದಮ ಪದಮಗುಣ ಶುಭಾಷಯಗಳು ಕೊಡೂತ್ತಿದ್ದಾರೆ.
ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು. ನಶೆಯಿದೆಯಲ್ಲವೇ - ನಮ್ಮಷ್ಟು ಪದಮ-ಪದಮ ಭಾಗ್ಯವಂತರು ಯಾರು?
ಈ ನಶೆಯಲ್ಲಿರಿ. ಒಳ್ಳೆಯದು.
ಈಗ ಒಂದು ಸೆಕೆಂಡಿನಲ್ಲಿ
ಎಲ್ಲಾ ಬ್ರಾಹ್ಮಣರು ತಮ್ಮ ರಾಜಯೋಗದ ಅಭ್ಯಾಸವನ್ನು ಮಾಡುತ್ತಾ ಮನಸ್ಸನ್ನು ಏಕಾಗ್ರ ಮಾಡಿ
ಮಾಲಿಕರಾಗಿ ಮನಸ್ಸನ್ನು ಎಲ್ಲಿಗೆ ಬೇಕೋ, ಎಷ್ಟು ಸಮಯ ಬೇಕೋ ಹೇಗೆ ಬೇಕೋ ಹಾಗೆ ಈಗೀಗ ಮನಸ್ಸನ್ನು
ಏಕಾಗ್ರ ಮಾಡಿ. ಮನಸ್ಸು ಇಲ್ಲಿ ಅಲ್ಲಿ ಚಂಚಲ ಆಗದಿರಲಿ. ನನ್ನಬಾಬಾ, ಮಧುರ ಬಾಬಾ, ಪ್ರಿಯಬಾಬಾ ಈ
ಸ್ನೇಹದ ಸಂಘದ ರಂಗಿನ ಆಧ್ಯಾತ್ಮಿಕ ಹೋಳಿ ಆಚರಿಸಿ. (ಡ್ರಿಲ್) ಒಳ್ಳೆಯದು.
ನಾಲ್ಕೂ ಕಡೆಯ ಶ್ರೇಷ್ಠ
ವಿಶೇಷ ಹೋಲಿ ಹಾಗೂ ಅತ್ಯುತ್ತಮ ಮಕ್ಕಳಿಗೆ, ಸದಾ ಸ್ವಯಂನನ್ನು ತಂದೆಯ ಸಮಾನ ಸರ್ವ ಶಕ್ತಿಗಳಿಂದ
ಸಂಪನ್ನ ಸರ್ವ ಶಕ್ತಿವಾನ ಅನುಭವ ಮಾಡುವವರು, ಸದಾ ಪ್ರತಿಯೊಂದು ಬಲಹೀನತೆಗಳಿಂದ ಮುಕ್ತರಾಗಿ ಅನ್ಯ
ಆತ್ಮರಿಗೂ ಮುಕ್ತಿ ಕೊಡಿಸುವವರು ಮುಕ್ತಿದಾತಾ ಮಕ್ಕಳಿಗೆ, ಸದಾ ಅಮರ ಭವ ವರದಾನದ ಅನುಭವ ಸ್ವರೂಪ
ಇರುವಂತಹ, ಇಂಥ ನಾಲ್ಕೂ ಕಡೆಯ, ಎದುರಿಗೆ ಕುಳಿತಿರಬಹುದು ಅಥವಾ ದೂರ ಕುಳಿತು ಸ್ನೇಹದಲ್ಲಿ ಸಮಾವೇಶ
ಆಗಿರುವ ಮಕ್ಕಳಿಗೆ ನೆನಪು ಪ್ರೀತಿ ಹಾಗೂ ತಮ್ಮ ಉಮ್ಮಸ್ಸು-ಉತ್ಸಾಹ, ಪುರುಷಾರ್ಥದ ಸಮಾಚಾರ ಹಾಗೂ
ಹೃದಯದ ಪದಮಾಪದಮ್ ಗುಣ ನೆನಪು ಸ್ವೀಕರಿಸಬೇಕು ಹಾಗೂ ಎಲ್ಲ ರಾಜಯೋಗಿಯಿಂದ ರಾಜ್ಯ ಅಧಿಕಾರಿ
ಮಕ್ಕಳಿಗೆ ನಮಸ್ತೆ.
ವರದಾನ:
ಸರ್ವ ಶಕ್ತಿಯ
ಅಧಿಕಾರದ ಆಧಾರದ ಮೇಲೆ ಆತ್ಮರನ್ನು ಶ್ರೀಮತರನ್ನಾಗಿ ಮಾಡುವಂತಹ ಪುಣ್ಯ ಆತ್ಮ ಭವ.
ಹೇಗೆ ದಾನ ಪುಣ್ಯದ ಶಕ್ತಿ
ಉಳ್ಳವರು ಸಮರ್ಥ ರಾಜರುಗಳಲ್ಲಿ ಅಧಿಕಾರದಲ್ಲಿ ಪೂರ್ತಿ ಬಲಿಷ್ಠರಾಗಿದ್ದರು. ಆ ಶಕ್ತಿಯ ಆಧಾರದಿಂದ
ಅವರಿಗೆ ಇಷ್ಟ ಬಂದಂತೆ ಯಾರನ್ನು ಏನು ಬೇಕಾದರೂ ಮಾಡುತ್ತಿದ್ದರು. ಅದೇ ರೀತಿ ತಾವು ಮಹಾದಾನಿ
ಪುಣ್ಯ ಆತ್ಮರಿಗೆ ನೇರವಾಗಿ ತಂದೆಯ ಮುಖಾಂತರ ಪ್ರಕೃತಿಜೀತ್, ಮಾಯಾಜೀತ್ನ ವಿಶೇಷ ಅಧಿಕಾರ ದೊರಕಿದೆ.
ತಾವು ತಮ್ಮ ಶುದ್ಧ ಸಂಕಲ್ಪದ ಆಧಾರದಿಂದ ಯಾವುದೇ ಆತ್ಮದ ಸಂಬಂಧ ತಂದೆಯೊಂದಿಗೆ ಜೋಡಿಸಿ ಅವರನ್ನು
ಮಾಲಾಮಾಲ್ ಮಾಡಲು ಸಾಧ್ಯ. ಕೇವಲ ಈ ಅಧಿಕಾರವನ್ನು ಯಥಾರ್ಥ ರೀತಿ ಉಪಯೋಗಿಸಿ.
ಸ್ಲೋಗನ್:
ಯಾವಾಗ ನೀವು
ಸಂಪೂರ್ಣತೆಯ ಅಭಿನಂದನೆಗಳನ್ನು ಆಚರಿಸುವಿರಿ ಆಗ ಪ್ರಕೃತಿ, ಸಮಯ ಮತ್ತು ಮಾಯೆ ನಿಮ್ಮಿಂದ
ಬೀಳ್ಕೊಡುಗೆ ತೆಗೆದುಕೊಳ್ಳುತ್ತದೆ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಯಾವಾಗ ಮನಸ್ಸು-ಬುದ್ಧಿ
ಕರ್ಮದಲ್ಲಿ ಬಹಳ ವ್ಯಸ್ತರಾಗಿರುತ್ತೀರಿ, ಆ ಸಮಯ ಡೈರೆಕ್ಷನ್ ಕೊಡಿ ಫುಲ್ಸ್ಟಾಪ್. ಕರ್ಮದ
ಸಂಕಲ್ಪಗಳು ಸ್ಟಾಪ್ ಆಗಲಿ (ನಿಲಲ್ಲಿ). ಈ ಅಭ್ಯಾಸ ಒಂದು ಸೆಕೆಂಡಿಗಾಗಿಯಾದರೂ ಮಾಡಿ ಆದರೆ ಅಭ್ಯಾಸ
ಮಾಡುತ್ತೀರಿ, ಏಕೆಂದರೆ ಅಂತಿಮ ಸರ್ಟಿಫಿಕೇಟ್ ಒಂದು ಸೆಕೆಂಡಿನ ಫುಲ್ಸ್ಟಾಪ್ ಇಡುವುದರಿಂದಲೇ
ಸಿಗುವುದು. ಸೆಕೆಂಡಿನಲ್ಲಿ ವಿಸ್ತಾರವನ್ನು ಸಮಾವೇಶಿಸಿ, ಸಾರ ಸ್ವರೂಪರಾಗಿರಿ, ಇದೇ ಅಭ್ಯಾಸ
ಕರ್ಮಾತೀತರನ್ನಾಗಿ ಮಾಡುವುದು.