29.06.25    Avyakt Bapdada     Kannada Murli    31.12.2005     Om Shanti     Madhuban


“ಹೊಸ ವರ್ಷದಲ್ಲಿ ತಮ್ಮ ಹಳೆಯ ಸಂಸ್ಕಾರಗಳನ್ನು ಯೋಗಾಗ್ನಿಯಲ್ಲಿ ಭಸ್ಮ ಮಾಡಿಕೊಂಡು ಬ್ರಹ್ಮಾತಂದೆಯ ಸಮಾನ ತ್ಯಾಗ, ತಪಸ್ಸು ಮತ್ತು ಸೇವೆಯಲ್ಲಿ ನಂಬರ್ವನ್ ಆಗಿರಿ”


ಇಂದು ಬಾಪ್ದಾದಾ ನಾಲ್ಕಾರು ಕಡೆಯ ಸನ್ಮುಖದಲ್ಲಿರಬಹುದು, ದೂರದಲ್ಲಿ ಕುಳಿತು ಹೃದಯಕ್ಕೆ ಸಮೀಪವಿರಬಹುದು, ಸರ್ವರಿಗೆ ಮೂರು ಶುಭಾಷಯಗಳನ್ನು ಕೊಡುತ್ತಿದ್ದಾರೆ. ಒಂದು - ನವಜೀವನದ ಶುಭಾಷಯಗಳು, ಎರಡನೆಯದು - ನವಯುಗದ ಶುಭಾಷಯಗಳು ಮತ್ತು ಮೂರನೆಯದು ಇಂದಿನದಿನ ಹೊಸವರ್ಷದ ಶುಭಾಷಯಗಳು. ತಾವೆಲ್ಲರೂ ಸಹ ಹೊಸವರ್ಷದ ಶುಭಾಷಯಗಳನ್ನು ಕೊಡಲು ಹಾಗೂ ಶುಭಾಷಯಗಳನ್ನು ತೆಗೆದುಕೊಳ್ಳಲು ಬಂದಿದ್ದೀರಿ. ವಾಸ್ತವದಲ್ಲಿ ಸತ್ಯಹೃದಯದ ಖುಷಿಯ ಶುಭಾಷಯಗಳನ್ನು ತಾವು ಬ್ರಾಹ್ಮಣ ಆತ್ಮರು ಕೊಡುತ್ತೀರಿ ಹಾಗೂ ತೆಗೆದುಕೊಳ್ಳುತ್ತೀರಿ. ಇಂದಿನ ದಿನಕ್ಕೆ ಮಹತ್ವಿಕೆಯಿದೆ. ಇಂದಿನ ದಿನವು ವಿದಾಯಿ ಹಾಗೂ ಬದಾಯಿ (ಶುಭಾಷಯ) ಯ ದಿನವಾಗಿದೆ. ವಿದಾಯಿ ಮತ್ತು ಬದಾಯಿಯ ಸಂಗಮಯುಗವಾಗಿದೆ. ಇಂದಿನ ದಿನಕ್ಕೆ ಸಂಗಮದ ದಿನವೆಂದು ಹೇಳುತ್ತಾರೆ. ಸಂಗಮದ ಮಹಿಮೆಯು ಬಹಳ ದೊಡ್ಡದಾಗಿದೆ. ತಾವೆಲ್ಲರೂ ತಿಳಿದುಕೊಂಡಿದ್ದೀರಿ - ಸಂಗಮಯುಗದ ಮಹಿಮೆಯ ಕಾರಣ ಈಗಿನ ಮನುಷ್ಯರು ಹಳೆಯ ಹಾಗೂ ಹೊಸವರ್ಷದ ಸಂಗಮಯುಗವನ್ನು ಎಷ್ಟು ವಿಜೃಂಭಣೆಯಿಂದ ಆಚರಿಸುತ್ತಾರೆ! ಸಂಗಮಯುಗದ ಮಹಿಮೆಯ ಕಾರಣವೇ ಈ ಹಳೆಯ ಮತ್ತು ಹೊಸ ವರ್ಷದ ಸಂಗಮಕ್ಕೆ ಮಹಿಮೆಯಿದೆ. ಎಲ್ಲಿ ಎರಡು ನದಿಗಳು ಸೇರುತ್ತವೆ ಅದು ಸಂಗಮವಾಗುತ್ತದೆ. ಅದಕ್ಕೂ ಮಹಿಮೆಯಿದೆ. ಎಲ್ಲಿ ನದಿ ಸಾಗರದ ಸಂಗಮವಾಗುತ್ತದೆಯೋ ಅದಕ್ಕೂ ಮಹಿಮೆಯಿದೆ ಆದರೆ ಎಲ್ಲದಕ್ಕಿಂತ ದೊಡ್ಡಮಹಿಮೆ ಈ ಸಂಗಮಯುಗದ್ದಾಗಿದೆ. ಪುರುಷೋತ್ತಮ ಯುಗದ್ದಾಗಿದೆ ಎಲ್ಲಿ ತಾವು ಬ್ರಾಹ್ಮಣ ಭಾಗ್ಯಶಾಲಿ ಆತ್ಮಗಳು ಕುಳಿತಿದ್ದೀರಿ. ಈ ನಶೆಯಿದೆಯಲ್ಲವೆ! ಒಂದುವೇಳೆ ತಮ್ಮೊಂದಿಗೆ ಯಾರಾದರೂ ತಾವು ಯಾವ ಸಮಯದಲ್ಲಿದ್ದೀರಿ, ಕಲಿಯುಗದಲ್ಲಿದ್ದೀರೋ ಅಥವಾ ಸತ್ಯಯುಗದಲ್ಲಿದ್ದೀರೋ? ಎಂದು ಕೇಳಿದರೆ ನೀವು ಹೆಮ್ಮೆಯಿಂದ ಏನು ಹೇಳುತ್ತೀರಿ? ನಾವು ಈ ಸಮಯದಲ್ಲಿ ಪುರುಷೋತ್ತಮ ಸಂಗಮಯುಗದಲ್ಲಿದ್ದೇವೆ ಎಂದು ಹೇಳುತ್ತೀರಿ. ಅಂದಾಗ ತಾವು ಕಲಿಯುಗಿಗಳಲ್ಲ, ಸಂಗಮಯುಗಿಯಾಗಿದ್ದೀರಿ. ಈ ಸಂಗಮಯುಗದ ವಿಶೇಷ ಮಹಿಮೆ ಏಕೆ ಇದೆ? ಏಕೆಂದರೆ ಭಗವಂತ ಮತ್ತು ಮಕ್ಕಳ ಮಿಲನವಾಗುತ್ತದೆ, ಮೇಳವಾಗುತ್ತದೆ. ಯಾವ ಮಿಲನವು ಮತ್ತ್ಯಾವುದೇ ಯುಗದಲ್ಲಿ ಆಗುವುದಿಲ್ಲ ಅಂದಾಗ ಮಿಲನವನ್ನಾಚರಿಸಲು ಬಂದಿದ್ದೀರಲ್ಲವೆ. ತಾವು ಮಿಲನದ ಮೇಳವನ್ನಾಚರಿಸಲು ಎಲ್ಲೆಲ್ಲಿಂದ ಬಂದಿದ್ದೀರಿ! ಡ್ರಾಮಾದಲ್ಲಿ ನಾನಾತ್ಮನ ಭಾಗ್ಯವು ಹೀಗೂ ನಿಗಧಿಯಾಗಿದೆ ಎಂಬುದನ್ನು ಎಂದೂ ಸ್ವಪ್ನದಲ್ಲಿಯೂ ಯೋಚಿಸಿರಲಿಲ್ಲ ಆದರೆ ಪರಮಾತ್ಮನೊಂದಿಗೆ ಆತ್ಮನ ಮಿಲನ ಮಾಡುವ ಭಾಗ್ಯವು ನಿಗಧಿಯಾಗಿತ್ತು ಮತ್ತು ಆಗಿದೆ. ತಂದೆಯೂ ಸಹ ಪ್ರತಿಯೊಬ್ಬ ಮಗುವಿನ ಭಾಗ್ಯವನ್ನು ನೋಡಿ ಹರ್ಷಿತರಾಗುತ್ತೇವೆ. ವಾಹ್! ಭಾಗ್ಯಶಾಲಿ ಮಕ್ಕಳೇ ವಾಹ್!. ತಾವೂ ಸಹ ತಮ್ಮ ಭಾಗ್ಯವನ್ನು ನೋಡಿಕೊಳ್ಳುತ್ತಾ ತನ್ನ ಪ್ರತಿ ವಾಹ್! ನನ್ನ ಭಾಗ್ಯವೇ ವಾಹ್! ವಾಹ್! ನಾನು ಯಾರಾಗಿದ್ದೇನೆ! ವಾಹ್ ನನ್ನ ತಂದೆಯೇ ವಾಹ್! ವಾಹ್ ನನ್ನ ಬ್ರಾಹ್ಮಣ ಪರಿವಾರವೇ ವಾಹ್! ಎಂದು ವಾಹ್! ವಾಹ್! ನ ಗೀತೆಯನ್ನು ಸದಾ ಹೃದಯದಲ್ಲಿ ಹಾಡುತ್ತಾ ಇರುತ್ತೀರಲ್ಲವೆ.

ಇಂದು ಈ ಸಂಗಮದ ಸಮಯದಲ್ಲಿ ಯಾವ-ಯಾವ ಮಾತುಗಳಿಗೆ ವಿದಾಯಿ ಕೊಡಬೇಕೆಂದು ತಮ್ಮಲ್ಲಿ ಆಲೋಚಿಸಿದ್ದೀರಾ? ಎಲ್ಲರೂ ಆಲೋಚಿಸಿದ್ದೀರಾ? ಸದಾಕಾಲಕ್ಕಾಗಿ ವಿದಾಯಿ ಕೊಡಬೇಕಾಗಿದೆ ಏಕೆಂದರೆ ಸದಾಕಾಲಕ್ಕಾಗಿ ವಿದಾಯಿ ಕೊಡುವುದರಿಂದ ಸದಾಕಾಲದ ಶುಭಾಷಯಗಳನ್ನು ಆಚರಿಸಬಲ್ಲಿರಿ. ಇಂತಹ ಶುಭಾಷಯಗಳನ್ನು ಕೊಡಿ ತಮ್ಮ ಚಹರೆಯನ್ನು ನೋಡುತ್ತಿದ್ದಂತೆಯೇ ಯಾವುದೇ ಆತ್ಮನು ಮುಂದೆಬಂದರೂ ಅವರೂ ಸಹ ಶುಭಾಷಯಗಳನ್ನು ಪ್ರಾಪ್ತಿ ಮಾಡಿಕೊಂಡು ಖುಷಿಯಾಗಿಬಿಡಲಿ. ಯಾರು ಹೃದಯದಿಂದ ಶುಭಾಷಯಗಳನ್ನು ಕೊಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆಯೋ ಅವರು ಸದಾ ಹೇಗೆ ಕಾಣಿಸುತ್ತಾರೆ? ಸಂಗಮಯುಗೀ ಫರಿಶ್ತೆಯಂತೆ. ಎಲ್ಲರದೂ ಬ್ರಾಹ್ಮಣ ಸೋ ಫರಿಶ್ತಾ, ಫರಿಶ್ತಾ ಸೋ ದೇವತಾ. ಏಕೆಂದರೆ ತಂದೆಗೆ ಎಲ್ಲಾ ಪ್ರಕಾರದ ಸಂಕಲ್ಪ ಹಾಗೂ ಪ್ರವೃತ್ತಿಯ, ಕರ್ಮದ ಏನೆಲ್ಲವೂ ಹೊರೆಯಿದೆಯೋ ಎಲ್ಲವನ್ನೂ ಕೊಟ್ಟುಬಿಟ್ಟಿದ್ದೀರಲ್ಲವೆ. ಹೊರೆಯನ್ನು ಕೊಟ್ಟಿದ್ದೀರೋ ಅಥವಾ ಇನ್ನೂ ಸ್ವಲ್ಪ ಉಳಿದುಕೊಂಡಿದೆಯೋ? ಏಕೆಂದರೆ ಅಲ್ಪಸ್ವಲ್ಪ ಹೊರೆಯಿದ್ದರೂ ಸಹ ಅದು ಫರಿಶ್ತೆಗಳಾಗಲು ಬಿಡುವುದಿಲ್ಲ ಮತ್ತು ತಂದೆಯೇ ಮಕ್ಕಳ ಹೊರೆಯನ್ನು ತೆಗೆದುಕೊಳ್ಳಲು ಬಂದಿದ್ದಾರೆ ಅಂದಮೇಲೆ ಹೊರೆಯನ್ನು ಕೊಡುವುದು ಕಷ್ಟವಾಗುತ್ತದೆಯೇ? ಕಷ್ಟವೋ ಅಥವಾ ಸಹಜವೋ? ಯಾರು ಹೊರೆಯಲ್ಲವನ್ನೂ ಕೊಟ್ಟುಬಿಟ್ಟಿದ್ದೇವೆ ಎಂದು ತಿಳಿಯುತ್ತೀರೋ ಅವರು ಕೈಯೆತ್ತಿರಿ. ಕೊಟ್ಟಿದ್ದೀರಾ? ಆಲೋಚಿಸಿ ಕೈಯನ್ನೆತ್ತಿ. ಹೊರೆಯನ್ನು ಕೊಟ್ಟುಬಿಟ್ಟಿದ್ದೀರಾ? ಒಳ್ಳೆಯದು. ಶುಭಾಷಯಗಳು. ಯಾರು ಕೊಟ್ಟುಬಿಟ್ಟಿದ್ದೀರೋ ಅವರಿಗೆ ಶುಭಾಷಯಗಳು ಮತ್ತು ಇನ್ನೂ ಯಾರು ಕೊಟ್ಟಿಲ್ಲವೋ ಅವರು ಏತಕ್ಕಾಗಿ ಇಟ್ಟುಕೊಂಡಿದ್ದೀರಿ? ಹೊರೆಯೊಂದಿಗೆ ಪ್ರೀತಿಯೇ? ಹೊರೆಯು ಇಷ್ಟವಾಗುತ್ತದೆಯೇ? ನೋಡಿ, ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ಏನು ಹೇಳುತ್ತಾರೆ? ಓ ನನ್ನ ನಿಶ್ಚಿಂತ ಚಕ್ರವರ್ತಿ ಮಕ್ಕಳೇ ಎಂದು. ಅಂದಾಗ ಹೊರೆಯಿದ್ದರೆ ಅದರ ಚಿಂತೆಯಿರುತ್ತದೆ ಆದ್ದರಿಂದ ಹೊರೆಯನ್ನು ತೆಗೆದುಕೊಳ್ಳಲು ತಂದೆಯು ಬಂದಿದ್ದಾರೆ ಏಕೆಂದರೆ ತಂದೆಯು ನೋಡುತ್ತಿದ್ದಾರೆ - 63 ಜನ್ಮಗಳಿಂದ ಹೊರೆಯನ್ನು ಹೊತ್ತು-ಹೊತ್ತು ಎಲ್ಲಾ ಮಕ್ಕಳು ಬಹಳ ಭಾರಿಯಾಗಿಬಿಟ್ಟಿದ್ದೀರಿ ಆದ್ದರಿಂದ ಯಾವಾಗ ತಂದೆಯು ಮಕ್ಕಳಿಗೆ ನಿಮ್ಮ ಎಲ್ಲಾ ಹೊರೆಯನ್ನು ನನಗೆ ಕೊಟ್ಟುಬಿಡಿ ಎಂದು ಪ್ರೀತಿಯಿಂದ ಹೇಳುತ್ತಿದ್ದೇವೆ ಅಂದಮೇಲೆ ಇನ್ನೂ ಏಕೆ ಇಟ್ಟುಕೊಂಡಿದ್ದೀರಿ? ಹೊರೆ ಇಷ್ಟವಾಗುತ್ತದೆಯೇ? ಎಲ್ಲದಕ್ಕಿಂತ ಸೂಕ್ಷ್ಮಹೊರೆಯು ಹಳೆಯ ಸಂಸ್ಕಾರದ್ದಾಗಿದೆ. ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಈ ವರ್ಷದ ಅಂದರೆ ಈ ವರ್ಷವು ಪೂರ್ಣವಾಗುತ್ತಿದೆಯಲ್ಲವೆ ಆದ್ದರಿಂದ ಈ ವರ್ಷದ ಚಾರ್ಟನ್ನು ನೋಡಿದೆವು. ತಾವೆಲ್ಲರೂ ತಮ್ಮ-ತಮ್ಮ ವರ್ಷದ ಚಾರ್ಟನ್ನು ಪರಿಶೀಲನೆ ಮಾಡಿಕೊಂಡಿರಬಹುದು ಅಂದಾಗ ಬಾಪ್ದಾದಾ ಏನನ್ನು ನೋಡಿದೆವೆಂದರೆ ಕೆಲವು ಮಕ್ಕಳಿಗೆ ಈ ಹಳೆಯ ಸಂಸಾರದ ಆಕರ್ಷಣೆ ಕಡಿಮೆಯಾಗಿದೆ, ಹಳೆಯ ಸಂಬಂಧದ ಆಕರ್ಷಣೆಯೂ ಕಡಿಮೆಯಾಗಿದೆ ಆದರೆ ಹಳೆಯ ಸಂಸ್ಕಾರದ ಹೊರೆಯು ಮೆಜಾರಿಟಿ ಮಕ್ಕಳಲ್ಲಿ ಉಳಿದುಕೊಂಡಿದೆ. ಯಾವುದಾದರೊಂದು ರೂಪದಲ್ಲಿ ಭಲೆ ಮನಸ್ಸಿನ ಅಶುದ್ಧ ಸಂಕಲ್ಪವಿಲ್ಲ ಆದರೆ ವ್ಯರ್ಥಸಂಕಲ್ಪದ ಸಂಸ್ಕಾರವು ಈಗಲೂ ಸಹ ಪರ್ಸೆಂಟೇಜ್ನಲ್ಲಿ ಕಂಡುಬರುತ್ತಿದೆ, ವಾಚಾದಲ್ಲಿಯೂ ಕಾಣುತ್ತಿದೆ, ಸಂಬಂಧ-ಸಂಪರ್ಕದಲ್ಲಿಯೂ ಸಹ ಯಾವುದಾದರೊಂದು ಸಂಸ್ಕಾರವು ಈಗಲೂ ಕಾಣಿಸುತ್ತಿದೆ.

ಇಂದು ಬಾಪ್ದಾದಾ ಎಲ್ಲಾ ಮಕ್ಕಳಿಗೆ ಶುಭಾಷಯಗಳ ಜೊತೆಜೊತೆಗೆ ಇದೇ ಸೂಚನೆ ನೀಡುತ್ತೇವೆ - ಈ ಉಳಿದುಕೊಂಡಿರುವ ಸಂಸ್ಕಾರವು ಸಮಯದಲ್ಲಿ ಮೋಸಗೊಳಿಸುತ್ತದೆ ಮತ್ತು ಅಂತಿಮದಲ್ಲಿಯೂ ಮೋಸಹೋಗಲು ನಿಮಿತ್ತನಾಗಿಬಿಡುತ್ತದೆ ಆದ್ದರಿಂದ ಇಂದು ಈ ಹಳೆಯ ಸಂಸ್ಕಾರದ ಸಂಸ್ಕಾರ (ಭಸ್ಮ) ಮಾಡಿ. ಪ್ರತಿಯೊಬ್ಬರೂ ತಮ್ಮ ಸಂಸ್ಕಾರವನ್ನು ತಿಳಿದುಕೊಂಡಿದ್ದೀರಿ ಮತ್ತು ಬಿಡುವುದಕ್ಕೂ ಇಚ್ಛಿಸುತ್ತೀರಿ, ಅದರೊಂದಿಗೆ ಬೇಸರವೂ ಇದೆ ಆದರೆ ಸದಾಕಾಲಕ್ಕಾಗಿ ಪರಿವರ್ತನೆ ಮಾಡಿಕೊಳ್ಳುವುದರಲ್ಲಿ ತೀವ್ರ ಪುರುಷಾರ್ಥಿಗಳಾಗಿಲ್ಲ. ಪುರುಷಾರ್ಥಿಗಳಾಗಿದ್ದೀರಿ ಅದರೆ ತೀವ್ರ ಪುರುಷಾರ್ಥಿಗಳಾಗಿಲ್ಲ ಅಂದಾಗ ಇದಕ್ಕೆ ಕಾರಣವೇನು? ತೀವ್ರ ಪುರುಷಾರ್ಥವು ಏಕೆ ಆಗುತ್ತಿಲ್ಲ? ಕಾರಣವು ಇದೇ ಆಗಿದೆ - ಹೇಗೆ ರಾವಣನನ್ನು ಸಾಯಿಸಿದರು, ಕೇವಲ ಸಾಯಿಸಲಿಲ್ಲ, ಸುಟ್ಟುಹಾಕಿದರು. ಹಾಗೆಯೇ ಸಾಯಿಸುವುದಕ್ಕಾಗಿ ಪುರುಷಾರ್ಥ ಮಾಡುತ್ತೀರಿ, ಸ್ವಲ್ಪ ಸಂಸ್ಕಾರವು ಮೂರ್ಛಿತವೂ ಆಗುತ್ತದೆ ಆದರೆ ಅದನ್ನು ಸಂಪೂರ್ಣವಾಗಿ ಸುಡದೇ ಇರುವಕಾರಣ ಮೂರ್ಛಿತವಾಗಿರುವ ಸಂಸ್ಕಾರವು ಮಧ್ಯ-ಮಧ್ಯದಲ್ಲಿ ಮತ್ತೆ ಎದ್ದುನಿಲ್ಲುತ್ತದೆ. ಇದಕ್ಕಾಗಿ ಹಳೆಯ ಸಂಸ್ಕಾರದ ಸಂಸ್ಕಾರ (ಭಸ್ಮ) ಮಾಡಲು ಈ ಹೊಸವರ್ಷದಲ್ಲಿ ಯೋಗಾಗ್ನಿಯಿಂದ ಭಸ್ಮ ಮಾಡಿಕೊಳ್ಳುವ ಧೃಡಸಂಕಲ್ಪದ ಗಮನವನ್ನಿಡಿ. ಈ ಹೊಸವರ್ಷದಲ್ಲಿ ಏನು ಮಾಡಬೇಕೆಂದು ಕೇಳುತ್ತೀರಲ್ಲವೆ! ಸೇವೆಯ ಮಾತೇ ಬೇರೆಯಾಗಿದೆ ಆದರೆ ಮೊದಲು ಸ್ವಯಂನ ಮಾತಾಗಿದೆ - ಯೋಗವನ್ನಂತೂ ಮಾಡುತ್ತೀರಿ, ಬಾಪ್ದಾದಾ ಮಕ್ಕಳು ಯೋಗದ ಅಭ್ಯಾಸ ಮಾಡುವುದನ್ನು ನೋಡುತ್ತೇವೆ. ಅಮೃತವೇಳೆಯಲ್ಲಿಯೂ ಬಹಳ ಪುರುಷಾರ್ಥ ಮಾಡುತ್ತೀರಿ ಆದರೆ ಯೋಗ, ತಪಸ್ಸನ್ನು ತಪದ (ಜ್ವಾಲಾರೂಪ) ರೂಪದಲ್ಲಿ ಮಾಡುವುದಿಲ್ಲ. ಪ್ರೀತಿಯಿಂದ ನೆನಪನ್ನಂತೂ ಮಾಡುತ್ತೀರಿ, ಬಹಳ ವಾರ್ತಾಲಾಪವನ್ನೂ ಮಾಡುತ್ತೀರಿ, ಶಕ್ತಿಯನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡುತ್ತೀರಿ ಆದರೆ ನೆನಪನ್ನು ಇಷ್ಟು ಶಕ್ತಿಶಾಲಿ ಮಾಡಿಕೊಂಡಿಲ್ಲ. ಯಾವುದಕ್ಕೆ ವಿದಾಯಿಯ ಸಂಕಲ್ಪ ಮಾಡುತ್ತೀರೋ ಅದು ವಿದಾಯಿಯಾಗಿಬಿಡಲಿ. ಯೋಗವನ್ನು ಯೋಗ ಅಗ್ನಿಯ ರೂಪದಲ್ಲಿ ಕಾರ್ಯದಲ್ಲಿ ತೊಡಗಿಸುವುದಿಲ್ಲ ಆದ್ದರಿಂದ ಈಗ ಯೋಗವನ್ನು ಶಕ್ತಿಶಾಲಿ ಮಾಡಿಕೊಳ್ಳಿ. ಸಂಸ್ಕಾರವನ್ನು ಭಸ್ಮ ಮಾಡಿಕೊಳ್ಳುವುದರಲ್ಲಿ ವಿಶೇಷವಾಗಿ ಏಕಾಗ್ರತೆಯ ಶಕ್ತಿಯ ಅವಶ್ಯಕತೆಯಿದೆ. ಯಾವ ಸ್ವರೂಪದಲ್ಲಿ ಏಕಾಗ್ರವಾಗಲು ಬಯಸುವಿರೋ, ಎಷ್ಟು ಸಮಯ ಏಕಾಗ್ರವಾಗಲು ಬಯಸುವಿರೋ ಹಾಗೆಯೇ ಏಕಾಗ್ರತೆಯ ಸಂಕಲ್ಪ ಮಾಡಿದಿರಿ ಮತ್ತು ಭಸ್ಮವಾಯಿತು - ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ ಅಂದರೆ ಅದರ ಹೆಸರು, ಗುರುತು ಸಮಾಪ್ತಿಯಾಗಬೇಕು. ಸಾಯಿಸಿದಾಗಲೂ ಸಹ ಇನ್ನೂ ಸ್ವಲ್ಪ ಗುರುತಾದರೂ ಇರುತ್ತದೆಯಲ್ಲವೆ, ಆದರೆ ಭಸ್ಮವಾದ ನಂತರ ಹೆಸರು, ಗುರುತೇ ಸಮಾಪ್ತಿಯಾಗುತ್ತದೆ ಅಂದಾಗ ಈ ವರ್ಷ ಯೋಗವನ್ನು ಶಕ್ತಿಶಾಲಿ ಸ್ಥಿತಿಯಲ್ಲಿ ತನ್ನಿ. ಮಾ|| ಸರ್ವಶಕ್ತಿವಂತರು ಯಾವ ಸ್ವರೂಪದಲ್ಲಿ ಇರಲು ಇಚ್ಛಿಸುವಿರೋ ಅರ್ಥಾತ್ ಆಜ್ಞೆ ಮಾಡುವಿರೋ ಆಗ ಸಮಾಪ್ತಿ ಮಾಡುವ ಶಕ್ತಿಯು ತಮ್ಮ ಆಜ್ಞೆಯನ್ನು ಪಾಲಿಸದೇ ಇರಲು ಸಾಧ್ಯವೇ ಇಲ್ಲ ಏಕೆಂದರೆ ಮಾಲೀಕರಾಗಿದ್ದೀರಿ. ಮಾಸ್ಟರ್ ಎಂದು ಕರೆಸಿಕೊಳ್ಳುತ್ತೀರಲ್ಲವೆ ಅಂದಾಗ ಮಾಸ್ಟರ್ ಆಜ್ಞೆ ಮಾಡಿದಾಗ ಶಕ್ತಿಯು ಹಾಜರ್ ಆಗದಿದ್ದರೆ ಅವರಿಗೆ ಮಾಸ್ಟರ್ ಎಂದು ಹೇಳಲಾಗುವುದೇ? ಅಂದಾಗ ಬಾಪ್ದಾದಾ ನೋಡಿದೆವು - ಹಳೆಯ ಸಂಸ್ಕಾರದ ಯಾವುದಾದರೊಂದು ಅಂಶ ಈಗಲೂ ಉಳಿದುಕೊಂಡಿದೆ ಮತ್ತು ಆ ಅಂಶವು ಮಧ್ಯ-ಮಧ್ಯದಲ್ಲಿ ವಂಶವನ್ನೂ ಸೃಷ್ಟಿಮಾಡಿಬಿಡುತ್ತದೆ. ಅದು ಕರ್ಮದವರೆಗೂ ಕೆಲಸ ಮಾಡಿಬಿಡುತ್ತದೆ. ಯುದ್ಧ ಮಾಡಬೇಕಾಗುತ್ತದೆ ಆದ್ದರಿಂದ ಬಾಪ್ದಾದಾರವರಿಗೆ ಮಕ್ಕಳ ಸಮಯ ಪ್ರಮಾಣ ಯುದ್ಧದ ಸ್ವರೂಪ ಇಷ್ಟವಾಗುವುದಿಲ್ಲ. ಬಾಪ್ದಾದಾ ಪ್ರತಿಯೊಬ್ಬ ಮಗುವನ್ನೂ ಮಾಲೀಕನ ರೂಪದಲ್ಲಿ ನೋಡಲು ಬಯಸುತ್ತೇವೆ, ಆಜ್ಞೆ ಮಾಡಿದಕೂಡಲೆ ಆ ಶಕ್ತಿಯು ಪ್ರತ್ಯಕ್ಷವಾಗಿಬಿಡಬೇಕು.

ಅಂದಾಗ ಈ ವರ್ಷದಲ್ಲಿ ಸ್ವಯಂನ ಪ್ರತಿ ಏನು ಮಾಡಬೇಕೆಂಬುದನ್ನು ಕೇಳಿದಿರಲ್ಲವೇ? ಶಕ್ತಿಶಾಲಿ ನಿಶ್ಚಿಂತ ಚಕ್ರವರ್ತಿಗಳಾಗಿ ಏಕೆಂದರೆ ಎಲ್ಲರ ಲಕ್ಷ್ಯವಾಗಿದೆ - ಯಾರೊಂದಿಗೇ ಕೇಳಿದರೂ ಸಹ ಏನು ಹೇಳುತ್ತೀರಿ? ನಾವು ವಿಶ್ವದ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೇವೆ, ರಾಜ್ಯಾಧಿಕಾರಿಗಳಾಗುತ್ತೇವೆಂದು ಹೇಳುತ್ತೀರಲ್ಲವೆ. ತಮ್ಮನ್ನು ರಾಜಯೋಗಿಗಳೆಂದು ಕರೆಸಿಕೊಳ್ಳುತ್ತೀರಿ, ಪ್ರಜಾಯೋಗಿಗಳೇ? ಯಾರಾದರೂ ಈ ಸಭೆಯಲ್ಲಿ ಪ್ರಜಾಯೋಗಿಗಳಿದ್ದೀರಾ? ಯಾರು ಪ್ರಜಾಯೋಗಿಗಳಾಗಿದ್ದೀರಿ, ರಾಜಯೋಗಿಗಳಲ್ಲ ಅಂತಹವರು ಯಾರಾದರೂ ಇದ್ದೀರಾ? ಟೀಚರ್ಸ್ ಯಾರಾದರೂ ಇದ್ದಾರೆಯೇ? ತಮ್ಮ ಸೇವಾಕೇಂದ್ರದಲ್ಲಿ ಯಾರಾದರೂ ಪ್ರಜಾಯೋಗಿಗಳಿದ್ದಾರೆಯೇ? ಎಲ್ಲರೂ ರಾಜಯೋಗಿಗಳೆಂದು ಕರೆಸಿಕೊಳ್ಳುತ್ತೀರಿ. ಪ್ರಜಾಯೋಗಿಗಳೆಂದು ಹೇಳಿದಾಗ ಯಾರೂ ಕೈಯೆತ್ತುವುದಿಲ್ಲ. ಇಷ್ಟವಾಗುವುದಿಲ್ಲ ಅಲ್ಲವೆ ಮತ್ತು ತಂದೆಗೂ ನಶೆಯಿದೆ. ಬಾಪ್ದಾದಾ ನಶೆಯಿಂದ ಹೇಳುತ್ತೇವೆ - ನನ್ನ ಪ್ರತಿಯೊಬ್ಬ ಮಗುವು ಈ ಸಂಗಮಯುಗದಲ್ಲಿಯೂ ರಾಜಾಮಗುವಾಗಿದೆ, ಮತ್ತ್ಯಾವ ತಂದೆಯೂ ಸಹ ಹೀಗೆ ನನ್ನ ಒಬ್ಬೊಬ್ಬ ಮಗು ರಾಜಾಮಗುವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ಬಾಪ್ದಾದಾ ಹೇಳುತ್ತೇವೆ - ನನ್ನ ಪ್ರತಿಯೊಬ್ಬ ಮಗುವೂ ಸ್ವರಾಜ್ಯ ಅಧಿಕಾರಿ ರಾಜನಾಗಿದೆ. ಪ್ರಜಾಯೋಗಿಗಳಲ್ಲಂತೂ ಕೈಯೆತ್ತುವುದಿಲ್ಲ ಅಲ್ಲವೆ. ಅಂದಾಗ ರಾಜರಾಗಿದ್ದೀರಲ್ಲವೆ. ಆದರೆ ಅಂತಿಂತಹ ಚಿಕ್ಕ-ಪುಟ್ಟ ರಾಜರಾಗಬಾರದು, ಯಾರು ಆಜ್ಞೆ ಮಾಡಿದಾಗ ಸೇವಕರು ಆಜ್ಞೆಯನ್ನು ಪಾಲಿಸದೇ ಇರುವಂತಾಗಬಾರದು. ಇಂತಹ ನಿರ್ಬಲ ರಾಜನಾಗಬೇಡಿ. ಹಿಂದಿರುವವರು ಯಾರಾಗಿದ್ದೀರಿ? ರಾಜಯೋಗಿಗಳಾಗಿದ್ದೇವೆಂದು ಯಾರು ತಿಳಿಯುತ್ತೀರೋ ಅವರು ಕೈಯೆತ್ತಿರಿ. ಮೇಲೂ ಕುಳಿತಿದ್ದಾರೆ (ಗ್ಯಾಲರಿಯಲ್ಲಿ, ಇಂದು ಹಾಲ್ನಲ್ಲಿ 18 ಸಾವಿರ ಮಂದಿ ಸಹೋದರ-ಸಹೋದರಿಯರು ಕುಳಿತಿದ್ದಾರೆ) ಬಾಪ್ದಾದಾ ನೋಡುತ್ತಿದ್ದೇವೆ. ಮೇಲೆ ಕುಳಿತಿರುವವರು ಕೈಯೆತ್ತಿರಿ.

ಈಗ ಈ ಲಾಸ್ಟ್ ಟರ್ನ್ನಲ್ಲಿ ಆರಂಭವಾಗಿಬಿಡುತ್ತದೆ ಆದ್ದರಿಂದ ಬಾಪ್ದಾದಾ ಮೂರುತಿಂಗಳಿನ ಸಮಯವನ್ನು ಕೊಡುತ್ತೇವೆ, ಸರಿಯಲ್ಲವೆ! ಕೊಡುವುದೇ? ಹೋಮ್ವರ್ಕ್ ಕೊಡುತ್ತೇವೆ ಏಕೆಂದರೆ ಈ ಮಧ್ಯ-ಮಧ್ಯದ ಹೋಮ್ವರ್ಕ್ ಅಂತಿಮ ಪರೀಕ್ಷೆಯಲ್ಲಿ ಜಮಾ ಆಗುವುದು. ಆದ್ದರಿಂದ ಮೂರುತಿಂಗಳಿನಲ್ಲಿ ಪ್ರತಿಯೊಬ್ಬರೂ ತಮ್ಮ ಚಾರ್ಟನ್ನು ಪರಿಶೀಲನೆ ಮಾಡಿಕೊಳ್ಳಿ - ನಾನು ಮಾಸ್ಟರ್ ಸರ್ವಶಕ್ತಿವಂತನಾಗಿ ಯಾವುದೇ ಕರ್ಮೇಂದ್ರಿಯಕ್ಕೆ, ಯಾವುದೇ ಶಕ್ತಿಗೆ ಯಾವಾಗ ಆಜ್ಞೆ ಮಾಡುವೆನೋ ಆಗಲೇ ಅದು ಪ್ರತ್ಯಕ್ಷದಲ್ಲಿ ಆಜ್ಞೆಯನ್ನು ಪಾಲಿಸಿತೆ ಅಥವಾ ಇಲ್ಲವೇ? ಇದನ್ನು ಮಾಡಬಲ್ಲಿರಾ? ಮೊದಲ ಸಾಲಿನವರು ಮಾಡಬಲ್ಲಿರಾ? ಕೈ0iÉುತ್ತಿರಿ. ಒಳ್ಳೆಯದು- ಮೂರುತಿಂಗಳು ಯಾವುದೇ ಹಳೆಯ ಸಂಸ್ಕಾರವು ಯುದ್ಧ ಮಾಡದಿರಲಿ. ಹುಡುಗಾಟಿಕೆಯಲ್ಲಿ ಬರಬೇಡಿ, ಆಗಿಬಿಡುತ್ತದೆ ಎಂದು ರಾಯಲ್ರೂಪದ ಹುಡುಗಾಟಿಕೆಯನ್ನು ತರಬೇಡಿ. ಬಾಪ್ದಾದಾರವರೊಂದಿಗೆ ಬಹಳ ಮಧುರಾತಿ ಮಧುರ ಮಾತುಗಳನ್ನಾಡುತ್ತಾರೆ. ಹೇಳುತ್ತಾರೆ - ಬಾಬಾ, ತಾವು ಚಿಂತೆ ಮಾಡಬೇಡಿ. ಎಲ್ಲವೂ ಆಗಿಬಿಡುತ್ತದೆ. ಅದಕ್ಕೆ ಬಾಪ್ದಾದಾ ಏನು ಮಾಡುವರು? ಕೇಳಿ ಮುಗುಳ್ನಗುತ್ತಾರೆ ಆದರೆ ಬಾಪ್ದಾದಾ ಈ ಮೂರುತಿಂಗಳಿನಲ್ಲಿ ಒಂದುವೇಳೆ ಇಂತಹ ಮಾತನ್ನು ಮಾತನಾಡಿದರೆ ಒಪ್ಪುವುದಿಲ್ಲ. ಸರಿಯೇ? ಕೈಯೆತ್ತಿರಿ. ಹೃದಯದಿಂದ ಕೈಯೆತ್ತಿರಿ. ಸಭೆಯ ಕಾರಣ ಕೈಯೆತ್ತುವುದಲ್ಲ, ಮಾಡಲೇಬೇಕಾಗಿದೆ. ಏನಾದರೂ ಸಹನೆ ಮಾಡಬೇಕಾಗಲಿ, ಏನನ್ನೇ ಬಿಡಬೇಕಾಗಲಿ ಪರವಾಗಿಲ್ಲ ಆದರೆ ಮಾಡಲೇಬೇಕಾಗುತ್ತದೆ. ಪಕ್ಕಾ? ಪಕ್ಕಾ? ಪಕ್ಕಾ? ಟೀಚರ್ಸ್ ಮಾಡಬೇಕಲ್ಲವೆ.

ಒಳ್ಳೆಯದು. ಈ ಕಿರೀಟವನ್ನು ಧರಿಸಿರುವ ಮಕ್ಕಳು ಏನು ಮಾಡುತ್ತೀರಿ? ಬಹಳ ಚೆನ್ನಾಗಿ ಕಿರೀಟವನ್ನು ಇಟ್ಟುಕೊಂಡಿದ್ದೀರಿ ಅಂದಾಗ ಆದ್ದರಿಂದ ಎಲ್ಲರೂ ಮಾಡಲೇಬೇಕು. ನೋಡಿ - ಮಕ್ಕಳು ಕೈಯನ್ನೆತ್ತುತ್ತಿದ್ದಾರೆ. ಒಂದುವೇಳೆ ಇದನ್ನು ಮಾಡದಿದ್ದರೆ ಏನು ಮಾಡುವುದು? ಅದನ್ನೂ ತಿಳಿಸಿಬಿಡಿ. ಮತ್ತೆ ಬಾಪ್ದಾದಾರವರ ಸೀಜûನ್ನಿನಲ್ಲಿ ಒಂದುಬಾರಿ ಬರಲು ಅನುಮತಿ ನೀಡುವುದಿಲ್ಲ ಏಕೆಂದರೆ ಬಾಪ್ದಾದಾ ನೋಡುತ್ತಿದ್ದೇವೆ - ಸಮಯವು ತಮಗಾಗಿ ಕಾಯುತ್ತಿದೆ. ತಾವು ಸಮಯಕ್ಕಾಗಿ ಕಾಯುವವರಲ್ಲ, ಸಿದ್ಧರಾಗಿ ನಿಲ್ಲುವವರಾಗಿದ್ದೀರಿ. ಸಮಯವು ತಮಗಾಗಿ ಕಾಯುತ್ತಿದೆ. ಪ್ರಕೃತಿ, ಸತೋಪ್ರಧಾನ ಪ್ರಕೃತಿಯೂ ಸಹ ತಮ್ಮ ಆಹ್ವಾನ ಮಾಡುತ್ತಿದೆ ಅಂದಾಗ ಮೂರುತಿಂಗಳಿಗಾಗಿ ತಮ್ಮ ಶಕ್ತಿಶಾಲಿ ಸ್ಥಿತಿಯಲ್ಲಿ ಉಳಿದುಕೊಂಡಿರುವ ಸಂಸ್ಕಾರಗಳನ್ನು ಪರಿವರ್ತನೆ ಮಾಡಿಕೊಳ್ಳಿ. ಒಂದುವೇಳೆ ಮೂರುತಿಂಗಳಿನಲ್ಲಿ ಗಮನವಿಟ್ಟಿದ್ದೇ ಆದರೆ ಮುಂದೆಯೂ ಸಹ ಅದರ ಅಭ್ಯಾಸವಾಗಿಬಿಡುವುದು. ಒಂದುಬಾರಿ ಪರಿವರ್ತನೆಯ ವಿಧಿಯು ಬಂದುಬಿಟ್ಟಿತೆಂದರೆ ಅದು ಬಹಳ ಕೆಲಸಕ್ಕೆ ಬರುವುದು. ತಾವು ವಿನಾಶವು ಯಾವಾಗ ಆಗುವುದು, ಯಾವಾಗ ಆಗುವುದು ಎಂದು ಸಮಯಕ್ಕಾಗಿ ಕಾಯಬೇಡಿ. ಎಲ್ಲರೂ ವಾರ್ತಾಲಾಪದಲ್ಲಿ ಕೇಳುತ್ತಾರೆ, ಹೊರಗಡೆ ಕೇಳುವುದಿಲ್ಲ ಆದರೆ ಒಳಗೆ ಮಾತನಾಡುತ್ತಾರೆ - ವಿನಾಶವು ಯಾವಾಗ ಆಗುವುದೋ ಗೊತ್ತಿಲ್ಲ, ಎರಡು ವರ್ಷಗಳಲ್ಲಿ ಆಗುವುದೋ ಅಥವಾ 10 ವರ್ಷಗಳಲ್ಲಿ ಆಗುವುದೋ ಅಥವಾ ಎಷ್ಟು ವರ್ಷಗಳಿಗೆ ಆಗುತ್ತದೆ? ಎಂದು. ಸಮಯವುತಮ್ಮನ್ನು ಕಾಯುತ್ತಿದೆ. ತಂದೆಯೊಂದಿಗೆ ಕೆಲವರು ಕೇಳುತ್ತಾರೆ - ತಾರೀಖು ತಿಳಿಸಿಬಿಡಿ, ವರ್ಷವನ್ನು ತಿಳಿಸಿ. 10 ವರ್ಷಗಳು ಹಿಡಿಸುತ್ತದೆಯೇ? 20 ವರ್ಷಗಳು ಹಿಡಿಸುತ್ತದೆಯೇ? ಎಷ್ಟು ವರ್ಷಗಳು ಹಿಡಿಸುತ್ತದೆ?

ಬಾಪ್ದಾದಾ ಮಕ್ಕಳೊಂದಿಗೆ ಪ್ರಶ್ನೆ ಕೇಳುತ್ತೇವೆ - ತಾವೆಲ್ಲರೂ ತಂದೆಯ ಸಮಾನರಾಗಿಬಿಟ್ಟಿದ್ದೀರಾ? ಒಂದುವೇಳೆ ಪರದೆ ತೆಗೆಯಬಹುದು ಆದರೆ ಪರದೆಯನ್ನು ತೆಗೆದರೆ ಕೆಲವರು ಇನ್ನೂ ತಯಾರಾಗುತ್ತಿದ್ದಾರೆ. ಕೆಲವರು ಮುಖಕ್ಕೆ ಕ್ರೀಮ್ ಹಚ್ಚಿಕೊಳ್ಳುತ್ತಿದ್ದಾರೆ. ಒಂದುವೇಳೆ ಎವರೆಡಿಯಾಗಿ ಹಳೆಯ ಸಂಸ್ಕಾರವು ಸಮಾಪ್ತಿಯಾಗಿಬಿಟ್ಟರೆ ಬಾಪ್ದಾದಾರವರಿಗೆ ಪರದೆಯನ್ನು ತೆರೆಯುವುದರಲ್ಲಿ ತಡವಾಗುವುದಿಲ್ಲ. ಆದ್ದರಿಂದ ತಾವು ಸಿದ್ಧರಾಗಿಬಿಡಿ. ಆಗಿಬಿಡುತ್ತೇವೆ, ಆಗಿಬಿಡುತ್ತೇವೆ ಎಂದು ಹೇಳಿ ತಂದೆಯನ್ನು ಬಹಳ ಸಮಯ ಖುಷಿಪಡಿಸಿದ್ದೀರಿ. ಈಗ ಈ ರೀತಿ ಮಾಡಬಾರದು ಆಗಲೇಬೇಕು, ಮಾಡಲೇಬೇಕಾಗಿದೆ. ತಂದೆಯ ಸಮಾನರಾಗಬೇಕಾಗಿದೆ. ಇದರಲ್ಲಂತೂ ಎಲ್ಲರೂ ಕೈಯತ್ತಿಬಿಡುತ್ತಾರೆ. ಬ್ರಹ್ಮಾತಂದೆಯನ್ನು ನೋಡಿ, ಸಾಕಾರದಲ್ಲಂತೂ ಬ್ರಹ್ಮಾತಂದೆಯನ್ನು ಫಾಲೋ ಮಾಡಬೇಕಲ್ಲವೆ. ಬ್ರಹ್ಮಾತಂದೆಯು ಕೊನೆಯ ಘಳಿಗೆಯವರೆಗೂ ತ್ಯಾಗ, ತಪಸ್ಸು, ಸೇವೆಯನ್ನು ಸಾಕಾರರೂಪದಲ್ಲಿ ಪ್ರತ್ಯಕ್ಷದಲ್ಲಿ ತೋರಿಸಿದರು. ಶಿವತಂದೆಯ ಮೂಲಕ ಮಹಾವಾಕ್ಯಗಳ ಉಚ್ಛಾರಣೆಯ ತನ್ನ ಕರ್ತವ್ಯವನ್ನು ಕೊನೆಯ ದಿನದವರೆಗೂ ನಿಭಾಯಿಸಿದರು. ಕೊನೆಯ ಮುರುಳಿಯು ನೆನಪಿದೆಯಲ್ಲವೆ. ಮೂರು ಶಬ್ಧಗಳ ವರದಾನವು ನೆನಪಿದೆಯೇ? ಯಾರಿಗೆ ನೆನಪಿದೆಯೋ ಅವರು ಕೈಯನ್ನೆತ್ತಿರಿ. ಒಳ್ಳೆಯದು. ಎಲ್ಲರಿಗೂ ನೆನಪಿದೆ. ಶುಭಾಷಯಗಳು. ಹಾಗೆಯೇ ಕೊನೆಯ ದಿನದವರೆಗೂ ತಂದೆಯು ತ್ಯಾಗವನ್ನೂ ಮಾಡಿದರು, ಹಳೆಯ ಕೋಣೆಯನ್ನು ಬಿಡಲಿಲ್ಲ. ಮಕ್ಕಳು ಬ್ರಹ್ಮಾತಂದೆಗೆ ಎಷ್ಟು ಪ್ರೀತಿಯಿಂದ ಹೇಳಿದರು ಆದರೆ ತಂದೆಯು ಮಕ್ಕಳಿಗಾಗಿ ಎಲ್ಲವನ್ನೂ ಮಾಡಿಸಿದರೇ ಹೊರತು ಸ್ವಯಂ ಅದನ್ನು ಉಪಯೋಗಿಸಲಿಲ್ಲ ಮತ್ತು ಸದಾ ಎರಡುವರೆ, ಮೂರುಗಂಟೆಗೆ ಎದ್ದು ಸ್ವಯಂನಪ್ರತಿ ತಪಸ್ಸು ಮಾಡಿದರು, ಸಂಸ್ಕಾರವನ್ನು ಭಸ್ಮ ಮಾಡಿಕೊಂಡರು ಆದ್ದರಿಂದ ಕರ್ಮಾತೀತ ಅವ್ಯಕ್ತರಾದರು, ಫರಿಶ್ತೆಯಾದರು. ಏನನ್ನು ಯೋಚಿಸಿದರೋ ಅದನ್ನು ಮಾಡಿ ತೋರಿಸಿದರು. ಯೋಚಿಸುವುದು, ಹೇಳುವುದು ಮತ್ತು ಮಾಡುವುದು ಮೂರೂ ಸಮಾನವಾಗಿತ್ತು. ಅಂದಾಗ ಫಾಲೋ ಫಾದರ್ ಮಾಡಿ. ಕೊನೆಯವರೆಗೂ ತಂದೆಯು ತನ್ನ ಕರ್ತವ್ಯದಲ್ಲಿ ಪೂರ್ಣವಾಗಿದ್ದರು, ಪತ್ರಗಳನ್ನೂ ಬರೆದರು. ಎಷ್ಟು ಪತ್ರಗಳನ್ನು ಬರೆದರು? ಸೇವೆಯನ್ನು ಬಿಡಲಿಲ್ಲ. ಹಾಗೆಯೇ ಫಾಲೋ ಫಾದರ್ ಮಾಡಿ ಅಖಂಡ ಮಹಾದಾನಿ, ಕೇವಲ ಮಹಾದಾನಿಯಲ್ಲ, ಅಖಂಡ ಮಹಾದಾನಿಯ ಪ್ರತ್ಯಕ್ಷರೂಪವನ್ನು ಅಂತ್ಯದವರೆಗೂ ತೋರಿಸಿದರು. ಕೊನೆಯವರೆಗೂ ಯಾವುದೇ ಆಧಾರವಿಲ್ಲದೆ ತಪಸ್ವೀರೂಪದಲ್ಲಿ ಕುಳಿತುಕೊಂಡರು. ಈಗಂತೂ ಮಕ್ಕಳು ಕುಳಿತುಕೊಳ್ಳಲು ಆಧಾರವನ್ನು ತೆಗೆದುಕೊಳ್ಳುತ್ತೀರಲ್ಲವೆ ಆದರೆ ಬ್ರಹ್ಮಾತಂದೆಯು ಆದಿಯಿಂದ ಅಂತ್ಯದವರೆಗೆ ತಪಸ್ವೀ ರೂಪವನ್ನು ಇಟ್ಟುಕೊಂಡರು. ಕಣ್ಣುಗಳಿಗೆ ಕನ್ನಡಕವನ್ನೂ ಹಾಕಿಕೊಳ್ಳಲಿಲ್ಲ. ಇದು ಸೂಕ್ಷ್ಮಶಕ್ತಿಯಾಗಿದೆ ಅಂದರೆ ನಿರಾಧಾರಿಯಾಗಿದ್ದರು. ಶರೀರವು ಹಳೆಯದಾಗಿದೆ, ದಿನ-ಪ್ರತಿದಿನ ಪ್ರಕೃತಿ, ಗಾಳಿ, ನೀರು ಕಲುಷಿತವಾಗುತ್ತಿದೆ ಆದ್ದರಿಂದ ಬಾಪ್ದಾದಾ ತಮ್ಮೆಲ್ಲರಿಗೆ ಆಧಾರವನ್ನು ಏಕೆ ತೆಗೆದುಕೊಳ್ಳುತ್ತೀರಿ? ಕನ್ನಡಕವನ್ನು ಏಕೆ ಧರಿಸುತ್ತೀರಿ ಎಂದು ಹೇಳುವುದಿಲ್ಲ. ಭಲೆ ಹಾಕಿಕೊಳ್ಳಿ ಆದರೆ ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳಿ. ಇಡೀ ವಿಶ್ವದ ಕಾರ್ಯವನ್ನು ಸಮಾಪ್ತಿ ಮಾಡಿದ್ದೀರಾ? ಬಾಪ್ದಾದಾ ತಮ್ಮೊಂದಿಗೆ ಪ್ರಶ್ನೆ ಕೇಳುತ್ತೇವೆ - ವಿಶ್ವಕಲ್ಯಾಣದ ಕಾರ್ಯವು ಪೂರ್ಣವಾಗಿಬಿಟ್ಟಿದೆ ಎಂದು ತಾವೆಲ್ಲರೂ ಸಂತುಷ್ಟರಾಗಿದ್ದೀರಾ? ವಿಶ್ವದ ಕಲ್ಯಾಣದ ಕಾರ್ಯವು ಸಮಾಪ್ತಿಯಾಗಿಬಿಟ್ಟಿದೆ ಎಂದು ಯಾರು ತಿಳಿಯುತ್ತೀರೋ ಅವರು ಕೈಯೆತ್ತಿರಿ. ಒಬ್ಬರೂ ಇಲ್ಲ. ಅಂದಾಗ ವಿನಾಶವು ಯಾವಾಗ ಆಗುವುದೆಂದು ಹೇಗೆ ಹೇಳುತ್ತೀರಿ? ಏಕೆಂದರೆ ಕೊಟ್ಟಿರುವ ಕೆಲಸವನ್ನಂತೂ ಪೂರ್ಣ ಮಾಡಿಲ್ಲ.

ನಾಲ್ಕಾರು ಕಡೆಯ ಸದಾ ಉಮ್ಮಂಗ-ಉತ್ಸಾಹದಲ್ಲಿ ಮುಂದುವರೆಯುವಂತಹ, ಸದಾ ಸಾಹಸದಿಂದ ಬಾಪ್ದಾದಾರವರ ಪದುಮಗುಣದಷ್ಟು ಸಹಯೋಗಕ್ಕೆ ಪಾತ್ರರಾದ ಮಕ್ಕಳಿಗೆ, ಸದಾ ವಿಜಯೀರತ್ನಗಳಾಗಿದ್ದೇವೆ, ಪ್ರತೀ ಕಲ್ಪದಲ್ಲಿ ವಿಜಯಿಗಳಾಗಿದ್ದೆವು ಈಗಲೂ ಆಗಿದ್ದೇವೆ ಮತ್ತು ಪ್ರತೀ ಕಲ್ಪದಲ್ಲಿ ವಿಜಯಿಗಳು ಆಗಿಯೇ ಆಗುತ್ತೇವೆ - ಇಂತಹ ವಿಜಯಿಮಕ್ಕಳಿಗೆ ಸದಾ ಒಬ್ಬ ತಂದೆಯ ವಿನಃ ಯಾರೂ ಇಲ್ಲ. ಸಂಸಾರದ ಆಕರ್ಷಣೆಯೂ ಇಲ್ಲ, ಸಂಸ್ಕಾರದ ಆಕರ್ಷಣೆಯೂ ಇಲ್ಲ. ಹೀಗೆ ಎರಡೂ ಆಕರ್ಷಣೆಗಳಿಂದ ಮುಕ್ತರಾಗಿರುವಂತಹ ಸದಾ ತಂದೆಯ ಸಮಾನ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವರದಾನ:
ಸದಾಕಾಲದ ಅಟೆನ್ಷನ್ ಮುಖಾಂತರ ವಿಜಯ ಮಾಲೆಯ ಮಣಿಯಾಗುವಂತಹ ಸಮಯದ ವಿಜಯಿ ಭವ

ಬಹಳ ಸಮಯದ ವಿಜಯಿ, ವಿಜಯ ಮಾಲೆಯ ಮಣಿಯಾಗುವಿರಿ. ವಿಜಯಿಗಳಾಗಲು ಸದಾ ತಂದೆಯನ್ನು ಎದುರಿಗಿಟ್ಟುಕೊಳ್ಳಿ- ತಂದೆ ಏನು ಮಾಡಿದರು ಅದನ್ನೇ ನಾವು ಮಾಡಬೇಕು. ಪ್ರತಿ ಹೆಜ್ಜೆಯಲ್ಲಿ ತಂದೆಯ ಸಂಕಲ್ಪ ಏನು ಅದೇ ಮಕ್ಕಳ ಸಂಕಲ್ಪ, ತಂದೆಯದು ಯಾವ ಮಾತಾಗಿದೆ ಅದೇ ಮಕ್ಕಳ ಮಾತು-ಆಗ ವಿಜಯಿಗಳಾಗುವಿರಿ. ಈ ಅಟೆನ್ಷನ್ ಸದಾ ಕಾಲಕ್ಕಾಗಿ ಬೇಕು ಆಗ ಸದಾಕಾಲದ ರಾಜ್ಯ-ಭಾಗ್ಯ ಪ್ರಾಪ್ತಿಯಾಗುವುದು ಏಕೆಂದರೆ ಎಂತಹ ಪುರುಷಾರ್ಥ ಅಂತಹ ಪ್ರಾಲಭ್ದ. ಸದಾಕಾಲದ ಪುರುಷಾರ್ಥ ಇದ್ದಾಗ ಸದಾ ಕಾಲದ ರಾಜ್ಯಭಾಗ್ಯ.

ಸ್ಲೋಗನ್:
ಸೇವೆಯಲ್ಲಿ ಸದಾ ಜೀ ಹಜೂóರ್ ಮಾಡುವುದು-ಇದೇ ಪ್ರೀತಿಯ ಸತ್ಯ ಸಾಕ್ಷಿಯಾಗಿದೆ

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಹೇಗೆ ಯಾವುದೇ ವ್ಯಕ್ತಿ ಕನ್ನಡಿಯ ಮುಂದೆ ಹೋಗುತ್ತಿದ್ದಂತೆಯೇ ಸ್ವಯಂ ನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ ಅದೇ ರೀತಿ ನಿಮ್ಮ ಆತ್ಮಿಕ ಸ್ಥಿತಿ ರೂಪ ದರ್ಪಣದ ಮುಂದೆ ಯಾವುದೇ ಆತ್ಮ ಬಂದರೂ ಸಹ ಅವರು ಒಂದು ಸೆಕೆಂಡಿನಲ್ಲಿ ಸ್ವ ಸ್ವರೂಪದ ದರ್ಶನ ಅಥವಾ ಸಾಕ್ಷಾತ್ಕಾರ ಮಾಡಿಕೊಳ್ಳಲಿ. ತಮ್ಮ ಪ್ರತಿಯೊಂದು ಕರ್ಮದಲ್ಲಿ, ಪ್ರತಿಯೊಂದು ಚಲನೆಯಲ್ಲಿ ಆತ್ಮೀಯತೆಯ ಆಕರ್ಷಣೆ ಇರಲಿ. ಯಾರು ಸ್ವಚ್ಛ, ಆತ್ಮಿಕ ಬಲ ಇರುವ ಆತ್ಮಗಳಾಗಿದ್ದಾರೆ, ಅವರು ಎಲ್ಲರನ್ನು ತಮ್ಮ ಕಡೆ ಅವಶ್ಯವಾಗಿ ಆಕರ್ಷಿತರನ್ನಾಗಿ ಮಾಡುತ್ತಾರೆ.