29.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ಯಾವಾಗ
ಈ ಶರೀರದಲ್ಲಿ ಆತ್ಮವು ಪ್ರವೇಶ ಮಾಡುವುದೋ ಆಗಲೇ ಈ ಶರೀರಕ್ಕೆ ಬೆಲೆಯಿರುತ್ತದೆ ಆದರೆ ಶೃಂಗಾರವು
ಶರೀರಕ್ಕೆ ಮಾಡಲ್ಪಡುತ್ತದೆ, ಆತ್ಮಕ್ಕಲ್ಲ.
ಪ್ರಶ್ನೆ:
ನೀವು ಮಕ್ಕಳ
ಕರ್ತವ್ಯವೇನಾಗಿದೆ? ನೀವು ಯಾವ ಸೇವೆ ಮಾಡಬೇಕಾಗಿದೆ?
ಉತ್ತರ:
ತಮ್ಮ
ಜೊತೆಗಾರರಿಗೆ ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮೀ ಆಗುವ ಯುಕ್ತಿಯನ್ನು ತಿಳಿಸುವುದು ನಿಮ್ಮ
ಕರ್ತವ್ಯವಾಗಿದೆ. ನೀವೀಗ ಭಾರತದ ಸತ್ಯ ಆತ್ಮಿಕ ಸೇವೆ ಮಾಡಬೇಕಾಗಿದೆ. ನಿಮಗೆ ಜ್ಞಾನದ ಮೂರನೇ
ನೇತ್ರವು ಸಿಕ್ಕಿದೆ ಅಂದಾಗ ನಿಮ್ಮ ಬುದ್ಧಿ ಮತ್ತು ಚಲನೆಯು ಬಹಳ ಪರಿಶುದ್ಧವಾಗಿರಬೇಕು. ಯಾರಲ್ಲಿಯೂ
ಅಂಶ ಮಾತ್ರವೂ ಮೋಹವಿರಬಾರದು.
ಗೀತೆ:
ನಯನಹೀನನಿಗೆ
ದಾರಿ ತೋರಿಸು ಪ್ರಭು.....
ಓಂ ಶಾಂತಿ.
ಡಬಲ್ ಶಾಂತಿ. ನೀವು ಮಕ್ಕಳೂ ಸಹ ಓಂ ಶಾಂತಿ ಎಂದು ಪ್ರತ್ಯುತ್ತರ ನೀಡಬೇಕು. ನಮ್ಮ ಸ್ವಧರ್ಮವು
ಶಾಂತಿಯಾಗಿದೆ, ನೀವೀಗ ಶಾಂತಿಗಾಗಿ ಎಲ್ಲಿಯೂ ಹೋಗುವುದಿಲ್ಲ. ಮನುಷ್ಯರು ಮನಃಶ್ಯಾಂತಿಗಾಗಿ
ಸಾಧು-ಸಂತರ ಬಳಿಯೂ ಹೋಗುತ್ತಾರಲ್ಲವೆ. ಮನಸ್ಸು-ಬುದ್ಧಿಯಂತೂ ಆತ್ಮದ ಇಂದ್ರಿಯಗಳಾಗಿವೆ. ಹೇಗೆ
ಶರೀರಕ್ಕೆ ಕರ್ಮೇಂದ್ರಿಯಗಳಿವೆಯೋ ಹಾಗೆಯೇ ಮನಸ್ಸು-ಬುದ್ಧಿ ಮತ್ತು ಚಕ್ಷು ಆತ್ಮದ ಇಂದ್ರಿಯಗಳಾಗಿವೆ.
ಚಕ್ಷುವೆಂದರೆ ಈ ಕಣ್ಣುಗಳಂತಲ್ಲ. ಹೇ ಪ್ರಭು ನಯನಹೀನನಿಗೆ ದಾರಿ ತೋರಿಸು ಪ್ರಭು.... ಎಂದು
ಹೇಳುತ್ತಾರೆ. ಆದರೆ ಪ್ರಭು ಅಥವಾ ಈಶ್ವರನೆಂದು ಹೇಳುವುದರಿಂದ ಅಷ್ಟೊಂದು ತಂದೆಯ ಮೇಲೆ ಪ್ರೀತಿ
ಬರುವುದಿಲ್ಲ. ತಂದೆಯಿಂದ ಮಕ್ಕಳಿಗೆ ಆಸ್ತಿಯೂ ಸಿಗುತ್ತದೆ. ಇಲ್ಲಾದರೆ ನೀವು ತಂದೆಯ
ಸನ್ಮುಖದಲ್ಲಿಯೇ ಕುಳಿತಿದ್ದೀರಿ. ಓದುತ್ತಲೂ ಇದ್ದೀರಿ, ನಿಮಗೆ ಯಾರು ಓದಿಸುತ್ತಾರೆ? ಪರಮಾತ್ಮ
ಅಥವಾ ಪ್ರಭು ಓದಿಸುತ್ತಾರೆಂದು ನೀವು ಹೇಳುವುದಿಲ್ಲ. ಶಿವ ತಂದೆಯೇ ಓದಿಸುತ್ತಾರೆಂದು ನೀವು
ಹೇಳುತ್ತೀರಿ. ಈ ಬಾಬಾ ಎಂಬ ಶಬ್ಧವು ಬಹಳ ಸರಳವಾಗಿದೆ. ಇಲ್ಲಿರುವುದೇ ಬಾಪ್ದಾದಾ, ಆತ್ಮಕ್ಕೆ
ಆತ್ಮವೆಂದೇ ಹೇಳಲಾಗುತ್ತದೆ. ಹಾಗೆಯೇ ಅವರು (ಶಿವ ತಂದೆ) ಪರಮ ಆತ್ಮನಾಗಿದ್ದಾರೆ. ಅವರು
ತಿಳಿಸುತ್ತಾರೆ - ನಾನು ಪರಮ ಆತ್ಮ ಅಂದರೆ ಪರಮಾತ್ಮ, ನಿಮ್ಮ ತಂದೆಯಾಗಿದ್ದೇನೆ. ಡ್ರಾಮಾನುಸಾರವಾಗಿ
ನಾನು ಪರಮ ಆತ್ಮನಿಗೆ ಶಿವನೆಂದು ಹೆಸರನ್ನಿಟ್ಟಿದ್ದಾರೆ. ಡ್ರಾಮಾದಲ್ಲಿ ಎಲ್ಲರ ಹೆಸರು ಬೇಕಲ್ಲವೆ.
ಶಿವನ ಮಂದಿರವೂ ಇದೆ. ಭಕ್ತಿಮಾರ್ಗದವರಂತೂ ಒಂದಕ್ಕೆ ಬದಲು ಅನೇಕ ಹೆಸರನ್ನು ಇಟ್ಟು ಬಿಟ್ಟಿದ್ದಾರೆ
ಮತ್ತು ಅನೇಕಾನೇಕ ಮಂದಿರಗಳನ್ನು ಕಟ್ಟಿಸುತ್ತಾರೆ. ಇರುವುದಂತೂ ಒಬ್ಬರೇ. ಸೋಮನಾಥ ಮಂದಿರವು
ಎಷ್ಟೊಂದು ದೊಡ್ಡದಾಗಿದೆ, ಎಷ್ಟೊಂದು ಶೃಂಗಾರ ಮಾಡುತ್ತಾರೆ. ರಾಜರು ಮೊದಲಾದವರನ್ನು ಎಷ್ಟೊಂದು
ಶೃಂಗಾರ ಮಾಡುತ್ತಾರೆ, ಆತ್ಮಕ್ಕೆ ಶೃಂಗಾರವಿಲ್ಲ. ಹಾಗೆಯೇ ಪರಮಾತ್ಮನಿಗೂ ಶೃಂಗಾರವಿಲ್ಲ. ಅವರು
ಬಿಂದುವಾಗಿದ್ದಾರೆ, ಬಾಕಿ ಏನೆಲ್ಲಾ ಶೃಂಗಾರವಿದೆಯೋ ಅದು ಶರೀರಕ್ಕೆ ಇದೆ. ತಂದೆಯು ತಿಳಿಸುತ್ತಾರೆ
- ನನಗೂ ಶೃಂಗಾರವಿಲ್ಲ, ಆತ್ಮಗಳಿಗೂ ಶೃಂಗಾರವಿಲ್ಲ. ಆತ್ಮವು ಬಿಂದುವಾಗಿದೆ. ಇಷ್ಟು ಚಿಕ್ಕ
ಬಿಂದುವಂತೂ ಏನೂ ಪಾತ್ರವನ್ನಭಿನಯಿಸಲು ಸಾಧ್ಯವಿಲ್ಲ. ಆ ಚಿಕ್ಕದಾದ ಆತ್ಮವು ಶರೀರದಲ್ಲಿ ಪ್ರವೇಶ
ಮಾಡುತ್ತದೆಯೆಂದರೆ ಶರೀರಕ್ಕೆ ಎಷ್ಟೊಂದು ಪ್ರಕಾರದ ಶೃಂಗಾರವಾಗುತ್ತದೆ! ಮನುಷ್ಯರಿಗೆ ಎಷ್ಟೊಂದು
ಹೆಸರುಗಳಿವೆ! ರಾಜ-ರಾಣಿಗೆ ಎಷ್ಟೊಂದು ಶೃಂಗಾರವಾಗುತ್ತದೆ, ಆತ್ಮವಂತೂ ಸಾಧಾರಣ ಬಿಂದುವಾಗಿದೆ.
ನೀವು ಮಕ್ಕಳು ಇದನ್ನೂ ಸಹ ತಿಳಿದುಕೊಂಡಿದ್ದೀರಿ. ಆತ್ಮವೇ ಜ್ಞಾನವನ್ನು ಧಾರಣೆ ಮಾಡುತ್ತದೆ.
ತಂದೆಯು ತಿಳಿಸುತ್ತಾರೆ - ನನ್ನಲ್ಲಿಯೂ ಜ್ಞಾನವಿದೆಯಲ್ಲವೆ. ಶರೀರಕ್ಕೆ ಜ್ಞಾನವಿರುವುದಿಲ್ಲ,
ನಾನಾತ್ಮದಲ್ಲಿ ಜ್ಞಾನವಿದೆ. ಅದನ್ನು ನಿಮಗೆ ತಿಳಿಸುವುದಕ್ಕಾಗಿ ನಾನು ಶರೀರದ ಆಧಾರವನ್ನು
ತೆಗೆದುಕೊಳ್ಳಬೇಕಾಗುತ್ತದೆ. ಶರೀರವಿಲ್ಲದೆ ನೀವು ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ನಯನಹೀನರಿಗೆ
ದಾರಿ ತೋರಿಸು ಪ್ರಭು... ಎಂದು ಗೀತೆಯನ್ನು ರಚಿಸಿದ್ದಾರೆ ಅಂದಮೇಲೆ ಶರೀರಕ್ಕೆ ದಾರಿ
ತೋರಿಸಬೇಕಾಗಿದೆಯೇ? ಇಲ್ಲ. ಆತ್ಮವನ್ನು ಆತ್ಮವೇ ಕರೆಯುತ್ತದೆ, ಶರೀರಕ್ಕಂತೂ ಎರಡು ನೇತ್ರಗಳಿವೆ,
ಮೂರು ಇರುವುದಿಲ್ಲ. ಮೂರನೆಯ ನೇತ್ರದ ಚಿಹ್ನೆಯಾಗಿ ಮಸ್ತಕದಲ್ಲಿ ತಿಲಕವನ್ನಿಟ್ಟುಕೊಳ್ಳುತ್ತಾರೆ.
ಕೆಲವರು ಕೇವಲ ಬಿಂದುವಿನ ತರಹ ಇಟ್ಟುಕೊಳ್ಳುತ್ತಾರೆ, ಇನ್ನೂ ಕೆಲವರು
ಗೆರೆಗಳನ್ನಿಟ್ಟುಕೊಳ್ಳುತ್ತಾರೆ. ಆತ್ಮವು ಬಿಂದುವಾಗಿದೆ, ಬಾಕಿ ಜ್ಞಾನದ ಮೂರನೆಯ ನೇತ್ರವು
ಸಿಗುತ್ತದೆ. ಆತ್ಮಕ್ಕೆ ಮೊದಲು ಜ್ಞಾನದ ಮೂರನೆಯ ನೇತ್ರವಿರಲಿಲ್ಲ. ಯಾವುದೇ ಮನುಷ್ಯಾತ್ಮರಿಗೆ ಈ
ಜ್ಞಾನವಿಲ್ಲ ಆದ್ದರಿಂದ ಜ್ಞಾನ ನೇತ್ರ ಹೀನ ಎಂದು ಹೇಳಲಾಗುತ್ತದೆ. ಬಾಕಿ ಈ ಕಣ್ಣುಗಳಂತೂ ಎಲ್ಲರಿಗೂ
ಇದೆ. ಇಡೀ ಪ್ರಪಂಚದಲ್ಲಿ ಜ್ಞಾನದ ಮೂರನೆಯ ನೇತ್ರವು ಯಾರಿಗೂ ಇಲ್ಲ. ನೀವು ಸರ್ವೋತ್ತಮ ಬ್ರಾಹ್ಮಣ
ಕುಲದವರಾಗಿದ್ದೀರಿ, ನಿಮಗೆ ತಿಳಿದಿದೆ - ಭಕ್ತಿಮಾರ್ಗ ಮತ್ತು ಜ್ಞಾನ ಮಾರ್ಗದಲ್ಲಿ ಎಷ್ಟೊಂದು
ಅಂತರವಿದೆ! ನೀವು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡು ಚಕ್ರವರ್ತಿ
ರಾಜರಾಗುತ್ತೀರಿ. ಹೇಗೆ ಐ.ಸಿ.ಎಸ್., ನವರೂ ಸಹ ಬಹಳ ಉತ್ತಮ ಪದವಿಯನ್ನು ಪಡೆಯುತ್ತಾರೆ ಆದರೆ ಇಲ್ಲಿ
ಯಾರೂ ಸಹ ವಿದ್ಯೆಯಿಂದ ಪ್ರಧಾನಮಂತ್ರಿ ಇತ್ಯಾದಿಯಾಗುವುದಿಲ್ಲ. ಇಲ್ಲಂತೂ ಆಯ್ಕೆಯಾಗುತ್ತಾರೆ,
ಮತದಾನದಿಂದ ಪ್ರಧಾನ ಮಂತ್ರಿ ಇತ್ಯಾದಿಯಾಗುತ್ತಾರೆ. ನೀವು ಆತ್ಮಗಳಿಗೆ ಈಗ ತಂದೆಯ ಶ್ರೀಮತವು
ಸಿಗುತ್ತದೆ. ನಾನು ಆತ್ಮಕ್ಕೆ ಮತ ಕೊಡುತ್ತೇನೆ ಎಂಬ ಮಾತನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ.
ಅವರೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ, ತಂದೆಯೇ ಬಂದು ಆತ್ಮಾಭಿಮಾನಿಯಾಗುವುದನ್ನು ಕಲಿಸುತ್ತಾರೆ.
ಎಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಮನುಷ್ಯನ ಶರೀರಕ್ಕೆ ಎಷ್ಟೊಂದು ಫ್ಯಾಷನ್ ಮಾಡುತ್ತಾರೆ.
ಇಲ್ಲಂತೂ ತಂದೆಯು ಆತ್ಮಗಳನ್ನೇ ನೋಡುತ್ತಾರೆ. ಶರೀರವಂತೂ ವಿನಾಶಿ, ಬೆಲೆಯಿಲ್ಲದ್ದಾಗಿದೆ.
ಪ್ರಾಣಿಗಳ ಶರೀರವಾದರೂ ಮಾರಾಟವಾಗುತ್ತದೆ, ಆದರೆ ಮನುಷ್ಯನ ಶರೀರವು ಯಾವುದೇ ಕೆಲಸಕ್ಕೆ
ಬರುವುದಿಲ್ಲ. ಈಗ ತಂದೆಯು ಬಂದು ಬೆಲೆಯಿರುವವರನ್ನಾಗಿ ಮಾಡುತ್ತಾರೆ.
ನಾವೀಗ
ದೇವತೆಗಳಾಗುತ್ತಿದ್ದೇವೆಂದು ಮಕ್ಕಳಿಗೆ ತಿಳಿದಿದೆ ಅಂದಮೇಲೆ ಈ ನಶೆಯೇರಿರಬೇಕು ಆದರೆ ಈ ನಶೆಯೂ ಸಹ
ನಂಬರ್ವಾರ್ ಪುರುಷಾರ್ಥದನುಸಾರ ಇರುತ್ತದೆ, ಧನದ ನಶೆಯೂ ಇರುತ್ತದೆಯಲ್ಲವೆ. ನೀವು ಮಕ್ಕಳು ಈಗ ಬಹಳ
ಧನವಂತರಾಗುತ್ತೀರಿ. ನಿಮಗೆ ಬಹಳಷ್ಟು ಸಂಪಾದನೆಯಾಗುತ್ತಿದೆ. ನಿಮ್ಮ ಮಹಿಮೆಯೂ ಅನೇಕ ಪ್ರಕಾರವಾಗಿದೆ.
ನೀವು ಹೂದೋಟವನ್ನು ಸ್ಥಾಪನೆ ಮಾಡುತ್ತೀರಿ, ಸತ್ಯಯುಗಕ್ಕೆ ಭಗವಂತನ ಹೂದೋಟವೆಂದು ಹೇಳಲಾಗುತ್ತದೆ.
ಯಾವಾಗ ಇದರ ನಾಟಿಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ನಿಮಗೆ ತಂದೆಯೇ ತಿಳಿಸುತ್ತಾರೆ. ಹೇ
ಹೂದೋಟದ ಮಾಲೀಕನೇ ಬನ್ನಿ ಎಂದು ಕರೆಯುತ್ತಾರೆ. ಅವರಿಗೆ ಮಾಲಿಯೆಂದು ಹೇಳುವುದಿಲ್ಲ. ಮಾಲಿಗಳು ನೀವು
ಮಕ್ಕಳಾಗಿದ್ದೀರಿ, ಸೇವಾಕೇಂದ್ರಗಳನ್ನು ಸಂಭಾಲನೆ ಮಾಡುತ್ತೀರಿ. ಮಾಲಿಗಳು ಅನೇಕ
ಪ್ರಕಾರದವರಿರುತ್ತಾರೆ, ಮಾಲೀಕನು ಒಬ್ಬರೇ ಆಗಿದ್ದಾರೆ. ಮೊಗಲ್ ಗಾರ್ಡನ್ ಮಾಲಿಗೂ ಸಹ ಅಷ್ಟು
ಒಳ್ಳೆಯ ಸಂಬಳ ಸಿಗುತ್ತದೆಯಲ್ಲವೆ. ಉದ್ಯಾನವನವನ್ನು ಎಷ್ಟು ಸುಂದರವಾಗಿ ಮಾಡುತ್ತಾರೆ! ಅದನ್ನು
ನೋಡಲು ಎಲ್ಲರೂ ಬರುತ್ತಾರೆ. ಮೊಗಲರು ಬಹಳ ಶೋಕಿನವರಾಗಿರುತ್ತಿದ್ದರು. ಅವರ ಪತ್ನಿಯು ಶರೀರ
ಬಿಟ್ಟಿದ್ದರಿಂದ ತಾಜ್ಮಹಲ್ ಅನ್ನು ಕಟ್ಟಿಸಿದರು. ಅವರ ಹೆಸರೂ ನಡೆದು ಬಂದಿದೆ. ಎಷ್ಟು
ಒಳ್ಳೊಳ್ಳೆಯ ಸ್ಮಾರಕಗಳನ್ನು ಮಾಡಿದ್ದಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮನುಷ್ಯರಿಗೆ
ಎಷ್ಟು ಮಹಿಮೆಯಾಗುತ್ತದೆ, ಮನುಷ್ಯರು ಮನುಷ್ಯರೇ ಆಗಿದ್ದಾರೆ. ಯುದ್ಧದಲ್ಲಿ ಅನೇಕ ಮನುಷ್ಯರು
ಸಾಯುತ್ತಾರೆ ನಂತರ ಏನು ಮಾಡುತ್ತಾರೆ! ಸೀಮೆ ಎಣ್ಣೆ ಅಥವಾ ಪೆಟ್ರೋಲ್ ಹಾಕಿ ಸಮಾಪ್ತಿ ಮಾಡಿ
ಬಿಡುತ್ತಾರೆ. ಕೆಲವರಂತೂ ಹಾಗೆಯೇ ಬಿದ್ದಿರುತ್ತಾರೆ, ಯಾರೂ ದಹನ ಕ್ರಿಯೆ ಮಾಡುವುದಿಲ್ಲ. ಸ್ವಲ್ಪವೂ
ಮಾನ್ಯತೆಯೇ ಇಲ್ಲ ಅಂದಾಗ ಈಗ ನೀವು ಮಕ್ಕಳಿಗೆ ಎಷ್ಟೊಂದು ನಾರಾಯಣೀ ನಶೆಯಿರಬೇಕು. ಇದು ವಿಶ್ವದ
ಮಾಲೀಕತ್ವದ ನಶೆಯಾಗಿದೆ. ಸತ್ಯ ನಾರಾಯಣನ ಕಥೆಯಾಗಿದೆ ಅಂದಮೇಲೆ ಅವಶ್ಯವಾಗಿ ನಾರಾಯಣರು ಆಗುವಿರಿ.
ಆತ್ಮಕ್ಕೂ ಜ್ಞಾನದ ಮೂರನೆಯ ನೇತ್ರ ಸಿಗುತ್ತದೆ. ಕೊಡುವವರು ತಂದೆಯಾಗಿದ್ದಾರೆ. ಮೂರನೆಯ ನೇತ್ರದ
ಕಥೆಯೂ ಇದೆ. ಇದೆಲ್ಲದರ ಅರ್ಥವನ್ನು ತಂದೆಯು ತಿಳಿಸುತ್ತಾರೆ. ಕಥೆಯನ್ನು ಹೇಳುವವರು ಏನೂ
ತಿಳಿದುಕೊಂಡಿರುವುದಿಲ್ಲ, ಅಮರಕಥೆಯನ್ನೂ ತಿಳಿಸುತ್ತಾರೆ. ಕಥೆಯನ್ನು ಹೇಳುವವರು ಏನೂ
ತಿಳಿದುಕೊಂಡಿರುವುದಿಲ್ಲ, ಅಮರಕಥೆಯನ್ನೂ ತಿಳಿಸುತ್ತಾರೆ. ಅಮರನಾಥಕ್ಕೆ ಎಷ್ಟು ದೂರ-ದೂರ
ಹೋಗುತ್ತಾರೆ. ತಂದೆಯಂತೂ ಅಮರಕಥೆಯನ್ನು ತಿಳಿಸಿದರೇ? ಯಾವುದೆಲ್ಲಾ ಕಥೆಗಳನ್ನು ಕಟ್ಟಿದ್ದಾರೆಯೋ
ಅದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಇದು ಕಲ್ಪದ ನಂತರವೂ ಆಗುವುದು. ತಂದೆಯು ನೀವು ಮಕ್ಕಳಿಗೆ
ಭಕ್ತಿ ಮತ್ತು ಜ್ಞಾನದ ಅಂತರವನ್ನು ತಿಳಿಸುತ್ತಾರೆ. ಈಗ ನಿಮಗೆ ಜ್ಞಾನದ ಮೂರನೆಯ ನೇತ್ರವು
ಸಿಕ್ಕಿದೆ. ಹೇ ಪ್ರಭು, ಅಂಧರಿಗೆ ದಾರಿ ತೋರಿಸು ಎಂದು ಹೇಳುತ್ತಾರಲ್ಲವೆ. ಭಕ್ತಿಮಾರ್ಗದಲ್ಲಿ
ಕೂಗುತ್ತಾರೆ. ತಂದೆಯು ಬಂದು ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ.ಇದು ನಿಮ್ಮ ವಿನಃ
ಮತ್ತ್ಯಾರಿಗೂ ತಿಳಿದಿಲ್ಲ. ಜ್ಞಾನದ ಮೂರನೆಯ ನೇತ್ರವಿಲ್ಲ ಆದ್ದರಿಂದ ನೆಪ ಹೇಳುತ್ತಾರೆ,
ನಷ್ಟವೆಂದು ಹೇಳುತ್ತಾರೆ. ಕಣ್ಣುಗಳೂ ಸಹ ಕೆಲಕೆಲವರಿಗೆ ಕೆಲವೊಂದು ರೀತಿಯಲ್ಲಿರುತ್ತದೆ. ಕೆಲವರ
ಕಣ್ಣು ಬಹಳ ಶೋಭಾಯಮಾನವಾಗಿರುತ್ತದೆ. ಅಂತಹವರಿಗೆ ಬಹುಮಾನವು ಸಿಗುತ್ತದೆ ಆಗ ಅವರಿಗೆ ಮಿಸ್ ಇಂಡಿಯಾ
ಅಥವಾ ಮಿಸ್ ಯುನಿವರ್ಸ್ ಇತ್ಯಾದಿಯಾಗಿ ಹೆಸರಿಡುತ್ತಾರೆ. ನೀವು ಮಕ್ಕಳನ್ನು ಈಗ ಹೇಗಿದ್ದವರನ್ನು
ಏನು ಮಾಡುತ್ತಾರೆ! ಅಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ, ಕೃಷ್ಣನಿಗೂ ಸಹ ಇಷ್ಟೊಂದು ಮಹಿಮೆ
ಏಕೆ ಇದೆ? ಏಕೆಂದರೆ ಎಲ್ಲರಿಗಿಂತ ಹೆಚ್ಚು ಸುಂದರವಾಗಿರುತ್ತಾನೆ. ನಂಬರ್ವನ್ನಲ್ಲಿ ಕರ್ಮಾತೀತ
ಸ್ಥಿತಿಯನ್ನು ಹೊಂದುತ್ತಾರೆ ಆದ್ದರಿಂದ ನಂಬರ್ವನ್ ಗಾಯನವಿದೆ. ತಂದೆಯು ಮತ್ತೆ ತಿಳಿಸುತ್ತಾರೆ -
ಮಕ್ಕಳೇ, ಮನ್ಮನಾಭವ. ಹೇ ಮಕ್ಕಳೇ, ತಮ್ಮ ತಂದೆಯನ್ನು ನೆನಪು ಮಾಡಿ. ಮಕ್ಕಳಲ್ಲಿ ನಂಬರ್ವಾರ್
ಇರುತ್ತಾರಲ್ಲವೆ. ತಿಳಿದುಕೊಳ್ಳಿ- ಲೌಕಿಕ ತಂದೆಗೂ ಸಹ 5 ಜನ ಮಕ್ಕಳಿದ್ದರೆ ಅವರಲ್ಲಿ ಯಾರು ಬಹಳ
ಬುದ್ಧಿವಂತರಾಗಿರುವರೋ ಅವರನ್ನು ಮುಂದಿಡುತ್ತಾರೆ, ಮಾಲೆಯ ಮಣಿಯಾದರಲ್ಲವೆ. ಇವರು ಎರಡನೆಯವರು,
ಇವರು ಮೂರನೆಯವರು ಎಂದು ಹೇಳುತ್ತಾರಲ್ಲವೆ. ಒಂದೇ ತರಹ ಎಂದಿಗೂ ಇರುವುದಿಲ್ಲ. ತಂದೆಯ ಪ್ರೀತಿಯೂ
ಸಹ ನಂಬರ್ವಾರ್ ಇರುತ್ತದೆ ಆದರೆ ಅದು ಹದ್ದಿನ ಮಾತು, ಇದು ಬೇಹದ್ದಿನ ಮಾತಾಗಿದೆ.
ಯಾವ ಮಕ್ಕಳಿಗೆ ಜ್ಞಾನದ
ಮೂರನೆಯ ನೇತ್ರವು ಸಿಕ್ಕಿದೆಯೋ ಅವರ ಬುದ್ಧಿ ಮತ್ತು ಚಲನೆ ಬಹಳ ಪರಿಶುದ್ಧವಾಗಿರುತ್ತದೆ. ಒಬ್ಬರು
ಹೂಗಳ ರಾಜನಾಗಿದ್ದಾರೆ ಮತ್ತು ಈ ಬ್ರಹ್ಮಾ ಹಾಗೂ ಸರಸ್ವತಿಯು ರಾಜ-ರಾಣಿ ಹೂವಾದರು. ಜ್ಞಾನ ಮತ್ತು
ನೆನಪು ಎರಡರಲ್ಲಿಯೂ ತೀಕ್ಷ್ಣವಾಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ನಾವು
ದೇವತೆಗಳಾಗಿದ್ದೇವೆ, ಅಷ್ಟರತ್ನಗಳಲ್ಲಿ ಬರುತ್ತೇವೆ. ಮಾಲೆಯಲ್ಲಿ ಮೊಟ್ಟ ಮೊದಲನೆಯದು ಹೂ (ಶಿವ
ತಂದೆ) ನಂತರ ಜೋಡಿ ಮಣಿಗಳು ಬ್ರಹ್ಮಾ-ಸರಸ್ವತಿ. ಮಾಲೆಯ ಸ್ಮರಣೆ ಮಾಡುತ್ತಾರಲ್ಲವೆ. ವಾಸ್ತವದಲ್ಲಿ
ನಿಮ್ಮದು ಪೂಜೆಯಲ್ಲ ಸ್ಮರಣೆಯಾಗುತ್ತದೆ. ನಿಮ್ಮ ಮೇಲೆ ಹೂಗಳನ್ನಿಡುವುದಿಲ್ಲ, ಶರೀರವೂ ಸಹ
ಸಂಪೂರ್ಣ ಪವಿತ್ರವಾಗಿದ್ದಾಗಲೇ ಹೂಗಳನ್ನಿಡುತ್ತಾರೆ. ಇಲ್ಲಿ ಯಾರದೇ ಶರೀರವು ಪವಿತ್ರವಿಲ್ಲ,
ಎಲ್ಲರೂ ವಿಕಾರದಿಂದ ಜನ್ಮ ಪಡೆಯುತ್ತಾರೆ ಆದ್ದರಿಂದ ವಿಕಾರಿಗಳೆಂದು ಹೇಳಲಾಗುತ್ತದೆ. ಈ
ಲಕ್ಷ್ಮೀ-ನಾರಾಯಣರಿಗೂ ಸಂಪೂರ್ಣ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ಅಲ್ಲಿ ಮಕ್ಕಳೂ ಸಹ ಜನ್ಮ
ಪಡೆಯುತ್ತಾರಲ್ಲವೆ. ಯಾವುದೇ ಟ್ಯೂಬ್ನಿಂದ ಹೊರ ಬರುವುದಿಲ್ಲ. ಇವೆಲ್ಲವೂ ತಿಳಿದುಕೊಳ್ಳುವ
ಮಾತುಗಳಾಗಿವೆ. ನೀವು ಮಕ್ಕಳನ್ನು ಇಲ್ಲಿ 7 ದಿನಗಳ ಕಾಲ ಕುಳ್ಳರಿಸಲಾಗುತ್ತದೆ. ಭಟ್ಟಿಯಲ್ಲಿ ಕೆಲವು
ಇಟ್ಟಿಗೆಗಳು ಚೆನ್ನಾಗಿ ಸುಡುತ್ತವೆ, ಇನ್ನೂ ಕೆಲವು ಕಚ್ಚಾ ಆಗಿಯೇ ಉಳಿಯುತ್ತದೆ. ತಂದೆಯು ಭಟ್ಟಿಯ
ಉದಾಹರಣೆಯನ್ನು ಕೊಡುತ್ತಾರೆ. ಶಾಸ್ತ್ರಗಳಲ್ಲಿ ಈ ಇಟ್ಟಿಗೆಗಳ ಭಟ್ಟಿಯ ವರ್ಣನೆಯಿರಲು ಸಾಧ್ಯವಿಲ್ಲ
ಮತ್ತು ಅಲ್ಲಿ ಬೆಕ್ಕಿನ ಮಾತಿದೆ, ಗುಲಾಬ್ ಕಾವಲಿಯ ಕಥೆಯಲ್ಲಿಯೂ ಬೆಕ್ಕಿನ ಹೆಸರು ತೋರಿಸಿದ್ದಾರೆ.
ಬೆಕ್ಕು ದೀಪವನ್ನು ನಂದಿಸಿ ಬಿಡುತ್ತಿತು, ನಿಮ್ಮದೂ ಸಹ ಇದೇ ಸ್ಥಿತಿಯಾಗುತ್ತದೆಯಲ್ಲವೆ. ಮಾಯಾ
ಬೆಕ್ಕು ವಿಘ್ನಗಳನ್ನು ಹಾಕುತ್ತದೆ, ನಿಮ್ಮ ಸ್ಥಿತಿಯನ್ನೇ ಬೀಳಿಸಿ ಬಿಡುತ್ತದೆ. ದೇಹಾಭಿಮಾನವು
ಮೊಟ್ಟ ಮೊದಲನೇ ವಿಕಾರ, ಅದರ ನಂತರ ಮತ್ತೆಲ್ಲಾ ವಿಕಾರಗಳು ಬರುತ್ತವೆ, ಮೋಹವು ಬಹಳಷ್ಟಿರುತ್ತದೆ.
ನಾನು ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಆತ್ಮಿಕ ಸೇವೆಯನ್ನು ಮಾಡುತ್ತೇನೆಂದು ಕನ್ಯೆಯು ಹೇಳಿದರೆ
ಮೋಹಕ್ಕೆ ವಶರಾದ ತಂದೆ-ತಾಯಿಯು ನಾವು ಅನುಮತಿ ಕೊಡುವುದಿಲ್ಲವೆಂದು ಹೇಳುತ್ತಾರೆ. ಇದೂ ಸಹ
ಎಷ್ಟೊಂದು ಮೋಹವಾಗಿದೆ. ನೀವಂತೂ ಮೋಹದ ಬೆಕ್ಕುಗಳಾಗಬಾರದು. ನಿಮ್ಮ ಗುರಿ-ಧ್ಯೇಯವೇ ಇದಾಗಿದೆ.
ತಂದೆಯು ಬಂದು ಮನುಷ್ಯರಿಂದ ದೇವತೆ, ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ನಿಮ್ಮ ಕರ್ತವ್ಯವೂ
ಸಹ ತಮ್ಮ ಜೊತೆಗಾರರ ಸೇವೆ ಮಾಡುವುದಾಗಿದೆ. ನಾವು ಹೇಗಿದ್ದೆವು, ಏನಾಗಿ ಬಿಟ್ಟಿದ್ದೇವೆಂದು ನಿಮಗೆ
ತಿಳಿದಿದೆ ಅಂದಮೇಲೆ ಈಗ ರಾಜಾಧಿರಾಜರಾಗುವ ಪುರುಷಾರ್ಥ ಮಾಡಿ. ನಾವು ನಮ್ಮ ರಾಜ್ಯವನ್ನು ಸ್ಥಾಪನೆ
ಮಾಡುತ್ತೇವೆ ಎಂದು ನಿಮಗೆ ತಿಳಿದಿದೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ವಿನಾಶಕ್ಕಾಗಿಯೂ
ಡ್ರಾಮಾದಲ್ಲಿ ಯುಕ್ತಿಯು ರಚಿಸಲ್ಪಟ್ಟಿದೆ. ಕಲ್ಪದ ಮೊದಲೂ ಸಹ ಅಣ್ವಸ್ತ್ರಗಳಿಂದ ಯುದ್ಧವಾಗಿತ್ತು,
ಯಾವಾಗ ನೀವು ಪೂರ್ಣ ತಯಾರಾಗಿ ಬಿಡುವಿರೋ, ಹೂಗಳಾಗಿ ಬಿಡುವಿರೋ ಆಗ ವಿನಾಶವಾಗುವುದು. ಇಲ್ಲಿ
ಕೆಲವರು ರಾಜಾ ಹೂಗಳಿದ್ದಾರೆ, ಕೆಲವರು ಗುಲಾಬಿ, ಕೆಲವರು ಮಲ್ಲಿಗೆಯಾಗಿದ್ದಾರೆ. ಪ್ರತಿಯೊಬ್ಬರೂ
ನಾನು ಎಕ್ಕದ ಹೂವಾಗಿದ್ದೇನೆಯೇ ಅಥವಾ ಸುಗಂಧಭರಿತ ಹೂವಾಗಿದ್ದೇನೆಯೇ ಎಂದು ತಮ್ಮನ್ನು ಚೆನ್ನಾಗಿ
ನೋಡಿಕೊಳ್ಳಬಹುದು. ಅನೇಕ ಮಕ್ಕಳು ಇಂತಹವರೂ ಇದ್ದಾರೆ, ಯಾರಿಗೆ ಜ್ಞಾನವು ಸ್ವಲ್ಪವೂ ಸಹ
ಧಾರಣೆಯಾಗುವುದಿಲ್ಲ. ನಂಬರ್ವಾರಂತೂ ಆಗುತ್ತಾರಲ್ಲವೆ. ಸಂಪೂರ್ಣ ಶ್ರೇಷ್ಠರು ಇಲ್ಲವೆಂದರೆ
ಸಂಪೂರ್ಣ ಕನಿಷ್ಠರು. ರಾಜಧಾನಿಯು ಇಲ್ಲಿಯೇ ಸ್ಥಾಪನೆಯಾಗುತ್ತದೆ. ಪಾಂಡವರು ಪರ್ವತಗಳ ಮೇಲೆ ಕರಗಿ
ಹೋದರೆಂದು ಶಾಸ್ತ್ರಗಳಲ್ಲಿ ತೋರಿಸಿದ್ದಾರೆ, ನಂತರ ಏನಾಯಿತು? ಏನೂ ತಿಳಿದಿಲ್ಲ. ಇಂತಹ ಕಥೆಗಳನ್ನು
ಬಹಳಷ್ಟು ರಚಿಸಿದ್ದಾರೆ ಆದರೆ ಇಂತಹ ಯಾವುದೇ ಮಾತಿಲ್ಲ. ನೀವು ಮಕ್ಕಳೀಗ ಎಷ್ಟೊಂದು ಸ್ವಚ್ಛ
ಬುದ್ಧಿಯವರಾಗುತ್ತೀರಿ. ತಂದೆಯು ನಿಮಗೆ ಅನೇಕ ಪ್ರಕಾರವಾಗಿ ತಿಳಿಸುತ್ತಿರುತ್ತಾರೆ. ಎಷ್ಟೊಂದು
ಸಹಜವೂ ಆಗಿದೆ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ -
ನಾನೇ ಪತಿತ-ಪಾವನನಾಗಿದ್ದೇನೆ, ನಿಮ್ಮ ಆತ್ಮ ಮತ್ತು ಶರೀರವೆರಡೂ ಪತಿತವಾಗಿದೆ. ಈಗ ಆತ್ಮವು
ಪವಿತ್ರವಾದರೆ ಶರೀರವೂ ಪವಿತ್ರವಾಗುತ್ತದೆ. ನೀವೀಗ ಬಹಳ ಪರಿಶ್ರಮ ಪಡಬೇಕಾಗಿದೆ. ತಂದೆಯು
ತಿಳಿಸುತ್ತಾರೆ - ಮಕ್ಕಳು ಬಹಳ ನಿರ್ಬಲರಾಗಿದ್ದಾರೆ, ನೆನಪೇ ಮರೆತು ಹೋಗುತ್ತದೆ. ತಂದೆಯು (ಬ್ರಹ್ಮಾ)
ತಮ್ಮ ಅನುಭವವನ್ನು ತಿಳಿಸುತ್ತಾರೆ- ಭೋಜನದ ಸಮಯದಲ್ಲಿ ಶಿವ ತಂದೆಯು ನನಗೆ ತಿನ್ನಿಸುತ್ತಾರೆಂದು
ನೆನಪು ಮಾಡುತ್ತೇನೆ ಮತ್ತು ಮರೆತು ಬಿಡುತ್ತೇನೆ. ಪುನಃ ಸ್ಮೃತಿಗೆ ಬರುತ್ತದೆ. ನಿಮ್ಮಲ್ಲಿಯೂ
ನಂಬರ್ವಾರ್ ಪುರುಷಾರ್ಥದನುಸಾರ ಇದ್ದಾರೆ. ಕೆಲವರು ಬಂಧನಮುಕ್ತರಾಗಿದ್ದರೂ ಸಹ ತಾವೇ
ಸಿಕ್ಕಿಹಾಕಿಕೊಂಡಿರುತ್ತಾರೆ. ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಇಗ ನೀವು ಮಕ್ಕಳಿಗೆ
ಜ್ಞಾನದ ಮೂರನೆಯ ನೇತ್ರವನ್ನು ಕೊಡುವ ತಂದೆಯು ಸಿಕ್ಕಿದ್ದಾರೆ. ಇದಕ್ಕೆ ಮೂರನೆಯ ನೇತ್ರದ ಕಥೆಯೆಂದು
ಹೆಸರನ್ನಿಟ್ಟಿದ್ದಾರೆ. ನೀವೀಗ ನಾಸ್ತಿಕರಿಂದ ಆಸ್ತಿಕರಾಗುತ್ತೀರಿ. ನಿಮಗೆ ತಿಳಿದಿದೆ- ತಂದೆಯು
ಬಿಂದುವಾಗಿದ್ದಾರೆ, ಜ್ಞಾನ ಸಾಗರನಾಗಿದ್ದಾರೆ. ಭಗವಂತನು ನಾಮ-ರೂಪದಿಂದ ಭಿನ್ನವೆಂದು ಮನುಷ್ಯರು
ಹೇಳಿ ಬಿಡುತ್ತಾರೆ. ಅರೆ! ಜ್ಞಾನ ಸಾಗರನೆಂದರೆ ಅವಶ್ಯವಾಗಿ ಜ್ಞಾನವನ್ನು ತಿಳಿಸುವವರಾಗಿರುವ
ರೂಪದಿಂದ ಭಿನ್ನವೆಂದು ಹೇಗೆ ಹೇಳುತ್ತಾರೆ? ಸಾವಿರಾರು ಹೆಸರುಗಳನ್ನಿಟ್ಟಿದ್ದಾರೆ. ನೀವು
ಮಕ್ಕಳಲ್ಲಂತೂ ಈ ಸಂಪೂರ್ಣ ಜ್ಞಾನವು ಚೆನ್ನಾಗಿ ಇರಬೇಕಾಗಿದೆ. ಪರಮಾತ್ಮನು ಜ್ಞಾನಸಾಗರನೆಂದು
ಹೇಳುತ್ತಾರೆ, ಇಡೀ ಮರಗಿಡಗಳನ್ನೇ ಲೇಖನಿಯನ್ನಾಗಿ ಮಾಡಿಕೊಂಡರೂ ಸಹ ಅವರ ಮಹಿಮೆಯು
ಅಂತ್ಯಗೊಳ್ಳುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನಾವೀಗ
ತಂದೆಯ ಮೂಲಕ ಮೌಲ್ಯವಂತರಾಗುತ್ತಿದ್ದೇವೆ, ನಾವೇ ಸೋ ದೇವತೆಗಳಾಗುವವರಿದ್ದೇವೆ, ಇದೇ ನಾರಾಯಣೀ
ನಶೆಯಿರಬೇಕು. ಬಂಧನಮುಕ್ತರಾಗಿ ಸೇವೆ ಮಾಡಬೇಕಾಗಿದೆ. ಬಂಧನಗಳಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು.
2. ಜ್ಞಾನ-ಯೋಗದಲ್ಲಿ
ತೀಕ್ಷ್ಣರಾಗಿ ಮಾತಾಪಿತರ ಸಮಾನ ರಾಜಾ ಹೂಗಳಾಗಬೇಕಾಗಿದೆ ಮತ್ತು ತಮ್ಮ ಜೊತೆಗಾರರ ಸೇವೆಯನ್ನೂ
ಮಾಡಬೇಕಾಗಿದೆ.
ವರದಾನ:
ತಮ್ಮ ಸರ್ವ
ಖಜಾನೆಗಳನ್ನು ಅನ್ಯ ಆತ್ಮಗಳ ಸೇವೆಯಲ್ಲಿ ತೊಡಗಿಸುತ್ತಾ ಸಹಯೋಗಿಗಳಾಗುವಂತಹ ಸಹಜಯೋಗಿ ಭವ.
ಸಹಜಯೋಗಿಗಳಾಗುವ
ಸಾಧನವಾಗಿದೆ - ಸದಾ ತಮ್ಮನ್ನು ಸಂಕಲ್ಪದ ಮೂಲಕ, ವಾಣಿಯ ಮೂಲಕ ಹಾಗೂ ಪ್ರತಿ ಕಾರ್ಯದ ಮೂಲಕ ವಿಶ್ವದ
ಸರ್ವ ಆತ್ಮಗಳ ಪ್ರತಿ ಸೇವಾಧಾರಿ ಎಂದು ತಿಳಿದು ಸೇವೆಯಲ್ಲಿಯೆ ಎಲ್ಲವನ್ನೂ ತೊಡಗಿಸಿ. ಬ್ರಾಹ್ಮಣ
ಜೀವನದಲ್ಲಿ ಶಕ್ತಿಗಳ, ಗುಣಗಳ, ಜ್ಞಾನದ ಹಾಗೂ ಶ್ರೇಷ್ಠ ಸಂಪಾದನೆಯ ಸಮಯದ ಖಜಾನೆ ತಂದೆಯ ಮೂಲಕ
ಪ್ರಾಪ್ತಿಯಾಗಿದೆ ಅದನ್ನು ಸೇವೆಯಲ್ಲಿ ತೊಡಗಿಸಿ ಅರ್ಥಾತ್ ಸಹಯೋಗಿಗಳಾಗಿ ನಂತರ ಸಹಜಯೋಗಿ ಆಗಿ
ಬಿಡುವಿರಿ. ಆದರೆ ಯಾರು ಸಂಪನ್ನರಾಗಿದ್ದಾರೆ ಅವರೇ ಸಹಯೋಗಿಗಳಾಗಲು ಸಾಧ್ಯ. ಸಹಯೋಗಿಗಳಾಗುವುದು
ಅರ್ಥಾತ್ ಮಹಾದಾನಿಗಳಾಗುವುದು.
ಸ್ಲೋಗನ್:
ಬೇಹದ್ಧಿನ
ವೈರಾಗಿಗಳಾದಾಗ ಆಕರ್ಷಣೆಯ ಎಲ್ಲಾ ಸಂಸ್ಕಾರ ಸಹಜವಾಗಿ ಸಮಾಪ್ತಿಯಾಗಿ ಬಿಡುವುದು.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.
ಹೇಗೆ ತಮ್ಮ ಸ್ಥೂಲ
ಕಾರ್ಯಗಳ ಪ್ರೋಗ್ರಾಮ್ನ್ನು ದಿನಚರಿಯ ಪ್ರಮಾಣ ಸೆಟ್ ಮಾಡುತ್ತೀರಿ ಅದೇ ರೀತಿ ತಮ್ಮ ಮನಸ್ಸಾ ಸಮರ್ಥ
ಸ್ಥಿತಿಯ ಪ್ರೋಗ್ರಾಮ್ ಸೆಟ್ ಮಾಡಿ ಆಗ ಸಂಕಲ್ಪ ಶಕ್ತಿ ಜಮಾ ಆಗುತ್ತಾ ಹೋಗುವುದು. ತಮ್ಮ ಮನಸ್ಸನ್ನು
ಸಮರ್ಥ ಸಂಕಲ್ಪಗಳಲ್ಲಿ ವ್ಯಸ್ತವಾಗಿ ಇಟ್ಟುಕೊಳ್ಳಿ, ಆಗ ಮನಸ್ಸು ಅಪ್ಸೆಟ್ ಆಗಲು ಸಮಯವೇ
ಸಿಗುವುದಿಲ್ಲ. ಮನಸ್ಸು ಸದಾ ಸೆಟ್ ಅರ್ಥಾತ್ ಏಕಾಗ್ರವಾಗಿ ಇದ್ದರೆ ಸ್ವತಃವಾಗಿ ಒಳ್ಳೆಯ ವೈಬ್ರೇಶನ್
ಹರಡುತ್ತದೆ, ಸೇವೆ ಆಗುತ್ತದೆ.