31.07.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ನೀವು ಬೆಳಗ್ಗೆ - ಬೆಳಗ್ಗೆ ಎದ್ದು ಬಹಳ ಪ್ರೀತಿಯಿಂದ ಹೇಳಿರಿ ಬಾಬಾ ಗುಡ್ಮಾರ್ನಿಂಗ್, ಈ ನೆನಪಿನಿಂದಲೇ ನೀವು ಸತೋಪ್ರಧಾನರಾಗಿ ಬಿಡುತ್ತೀರಿ."

ಪ್ರಶ್ನೆ:
ಅಕ್ಯುರೇಟ್ ನೆನಪಿನ ಮೂಲಕ ತಂದೆಯ ಕರೆಂಟ್ ತೆಗೆದುಕೊಳ್ಳುವುದಕ್ಕೆ ಮುಖ್ಯ ಯಾವ ಗುಣಗಳ ಅವಶ್ಯಕತೆಯಿದೆ?

ಉತ್ತರ:
ಬಹಳ ಧೈರ್ಯ, ತಿಳುವಳಿಕೆ ಮತ್ತು ಗಂಭೀರತೆಯಿಂದ ತಮ್ಮನ್ನು ಆತ್ಮನೆಂದು ತಿಳಿದುಕೊಂಡು ನೆನೆಪು ಮಾಡುವುದರಿಂದ ತಂದೆಯಿಂದ ಕರೆಂಟ್ ಸಿಗುವುದು ಮತ್ತು ಆತ್ಮ ಸತೋಪ್ರಧಾನವಾಗುತ್ತಾ ಹೋಗುವುದು. ನಿಮಗೆ ಈಗ ತಂದೆಯ ನೆನಪು ಸತಾಯಿಸಬೇಕು ಏಕೆಂದರೆ ತಂದೆಯಿಂದ ಬಹಳ ದೊಡ್ಡ ಆಸ್ತಿ ಸಿಗುತ್ತದೆ, ನೀವು ಮುಳ್ಳಿನಿಂದ ಹೂ ಆಗುತ್ತೀರಿ, ಎಲ್ಲಾ ದೈವೀ ಗುಣಗಳು ಬರುತ್ತವೆ.

ಓಂ ಶಾಂತಿ.
ತಂದೆಯು ಹೇಳುತ್ತಾರೆ ಮಧುರ ಮಕ್ಕಳೇ ತತ್ತ್ವಂ ಅರ್ಥಾತ್ ನೀವು ಆತ್ಮರು ಸಹ ಶಾಂತ ಸ್ವರೂಪರಾಗಿದ್ದೀರಿ. ನೀವು ಸರ್ವ ಆತ್ಮಗಳ ಸ್ವಧರ್ಮ ಶಾಂತಿಯಾಗಿದೆ. ಶಾಂತಿಧಾಮದಿಂದ ಇಲ್ಲಿ ಬಂದು ಟಾಕಿ (ಮಾತನಾಡುವವರು) ಆಗುತ್ತೀರಿ. ಈ ಕರ್ಮೇಂದ್ರಿಯಗಳು ನಿಮಗೆ ಪಾತ್ರವನ್ನು ಅಭಿನಯಿಸಲು ಸಿಕ್ಕಿವೆ. ಆತ್ಮವು ದೊಡ್ಡದು - ಚಿಕ್ಕದು ಇರುವುದಿಲ್ಲ, ಶರೀರವು ದೊಡ್ಡದು-ಚಿಕ್ಕದು ಇರುತ್ತದೆ. ತಂದೆಯು ಹೇಳುತ್ತಾರೆ ನಾನಂತು ಶರೀರಧಾರಿಯಲ್ಲ. ನಾನು ಮಕ್ಕಳನ್ನು ಸನ್ಮುಖದಲ್ಲಿ ಮಿಲನ ಮಾಡಲು ಬರಬೇಕಾಗುತ್ತದೆ. ತಿಳಿದುಕೊಳ್ಳಿ ಹೇಗೆ ತಂದೆಯಿದ್ದಾರೆ, ಅವರಿಂದ ಹುಟ್ಟಿದ ಮಕ್ಕಳು ಈ ರೀತಿ ಹೇಳುವುದಿಲ್ಲ ನಾನು ಪರಮಧಾಮದಿಂದ ಬಂದು ಜನ್ಮ ತೆಗೆದುಕೊಂಡು ತಂದೆ-ತಾಯಿಯನ್ನು ಮಿಲನ ಮಾಡಲು ಬಂದಿದ್ದೇನೆ. ಭಲೇ ಯಾವುದೇ ಹೊಸ ಆತ್ಮ ಯಾರದ್ದೇ ಶರೀರದಲ್ಲಿ ಬರುತ್ತದೆ ಅಥವಾ ಯಾವುದೇ ಹಳೇ ಆತ್ಮ ಯಾರದ್ದೇ ಶರೀರದಲ್ಲಿ ಪ್ರವೇಶ ಮಾಡುತ್ತದೆ ಆದರೆ ನಾನು ತಂದೆ-ತಾಯಿಯ ಮಿಲನ ಮಾಡಲು ಬಂದೆದ್ದೇನೆ ಎಂದು ಹೇಳುವುದಿಲ್ಲ. ಅವರಿಗೆ ಸ್ವತಃವಾಗಿ ತಂದೆ-ತಾಯಿಯು ಸಿಕ್ಕಿ ಬಿಡುವರು. ಇದು ಇಲ್ಲಿ ಹೊಸ ಮಾತಾಗಿದೆ. ತಂದೆಯು ಹೇಳುತ್ತಾರೆ ನಾನು ಪರಮಧಾಮದಿಂದ ಬಂದು ನೀವು ಮಕ್ಕಳ ಸನ್ಮುಖದಲ್ಲಿದ್ದೇನೆ. ನಿಮಗೆ ಜ್ಞಾನವನ್ನು ಕೊಡುತ್ತೇನೆ ಏಕೆಂದರೆ ನಾನು ಜ್ಞಾನಪೂರ್ಣ, ಜ್ಞಾನ ಸಾಗರನಾಗಿದ್ದೇನೆ, ನಾನು ನೀವು ಮಕ್ಕಳಿಗೆ ಓದಿಸಲು, ರಾಜಯೋಗವನ್ನು ಕಲಿಸಲು ಬರುತ್ತೇನೆ.

ನೀವು ಮಕ್ಕಳು ಈಗ ಸಂಗಮದಲ್ಲಿದ್ದೀರಿ, ನಂತರ ತಮ್ಮ ಮನೆಗೆ ಹೋಗಬೇಕು ಅದಕ್ಕಾಗಿ ಅವಶ್ಯ ಪಾವನ ಆಗಬೇಕಾಗಿದೆ. ಒಳಗಡೆ ಬಹಳ ಖುಷಿಯಾಗಬೇಕು. ಓಹೋ! ಬೇಹದ್ದಿನ ತಂದೆಯು ಹೇಳುತ್ತಾರೆ ಮಧುರಾತಿ ಮಧುರ ಮಕ್ಕಳೇ ನನ್ನನ್ನು ನೆನಪು ಮಾಡಿ ಆಗ ನೀವು ಸತೋಪ್ರಧಾನ, ವಿಶ್ವದ ಮಾಲೀಕರಾಗುವಿರಿ. ತಂದೆಯು ಮಕ್ಕಳನ್ನು ಎಷ್ಟು ಪ್ರೀತಿ ಮಾಡುತ್ತಾರೆ. ಈ ರೀತಿಯಲ್ಲ ಕೇವಲ ಶಿಕ್ಷಕನ ರೂಪದಲ್ಲಿ ಓದಿಸಿ ಮನೆಗೆ ಹೋಗಿ ಬಿಡುವರು. ಇವರಂತು ತಂದೆಯು ಹೌದು, ಶಿಕ್ಷಕರು ಹೌದು. ನಿಮಗೆ ಓದಿಸುತ್ತಾರೆ. ನೆನಪಿನ ಯಾತ್ರೆಯನ್ನು ಸಹ ಕಲಿಸುತ್ತಾರೆ. ಅಂದಾಗ ವಿಶ್ವದ ಮಾಲೀಕರನ್ನಾಗಿ ಮಾಡುವಂತಹ, ಪತಿತ ಪಾವನರನ್ನಾಗಿ ಮಾಡುವಂತಹ ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ಬೆಳಗ್ಗೆ-ಬೆಳಗ್ಗೆ ಎದ್ದು ಮೊಟ್ಟ ಮೊದಲು ಶಿವಬಾಬಾರವರಿಗೆ ಗುಡ್ಮಾರ್ನಿಂಗ್ ಮಾಡಬೇಕಾಗಿದೆ. ಮಕ್ಕಳು ತಮ್ಮ ಹೃದಯದೊಂದಿಗೆ ಕೇಳಬೇಕು - ನಾವು ಬೆಳಗ್ಗೆ ಎದ್ದು ಎಷ್ಟು ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೇವೆ. ಬೆಳಗ್ಗೆ ಎದ್ದು ತಂದೆಗೆ ಗುಡ್ಮಾರ್ನಿಂಗ್ ಹೇಳಿ, ಜ್ಞಾನದ ಚಿಂತನೆಯಲ್ಲಿರಿ ಆಗ ಖುಷಿಯ ನಶೆಯೇರುವುದು. ಮುಖ್ಯವಾಗಿದೆ ನೆನಪು, ಇದರಿಂದ ಭವಿಷ್ಯಕ್ಕಾಗಿ ಬಹಳ ದೊಡ್ಡ ಸಂಪಾದನೆ ಆಗುತ್ತದೆ. ಕಲ್ಪ-ಕಲ್ಪಾಂತರ ಈ ಸಂಪಾದನೆ ಕೆಲಸಕ್ಕೆ ಬರುವುದು. ನೀವು ಬಹಳ ಧೈರ್ಯವಂತರಾಗಬೇಕು, ಗಂಭೀರತೆಯಿಂದ ಮತ್ತು ತಿಳಿದು ನೆನಪು ಮಾಡಬೇಕು. ದೊಡ್ಡ ಲೆಕ್ಕದಿಂದ ಹೇಳಿ ಬಿಡುತ್ತೇವೆ ನಾವಂತು ಬಾಬಾರವರನ್ನು ಬಹಳ ನೆನಪು ಮಾಡುತ್ತೇವೆ ಆದರೆ ಅಕ್ಯುರೇಟ್ ನೆನಪಿನಲ್ಲಿ ಪರಿಶ್ರಮವಿದೆ. ಯಾರು ತಂದೆಯನ್ನು ಬಹಳ ಹೆಚ್ಚು ನೆನಪು ಮಾಡುತ್ತಾರೆ ಅವರಿಗೆ ತಂದೆಯಿಂದ ಕರೆಂಟ್ ಹೆಚ್ಚು ಸಿಗುವುದು ಏಕೆಂದರೆ ನೆನೆಪಿನಿಂದ ನೆನಪು ಸಿಗುವುದು. ಯೋಗ ಮತ್ತು ಜ್ಞಾನ ಎರಡು ವಸ್ತುಗಳಾಗಿವೆ. ಯೋಗ ಬಹಳ ದೊಡ್ಡ ಸಬ್ಜೆಕ್ಟ್ ಆಗಿದೆ. ಯೋಗದಿಂದಲೇ ಆತ್ಮವು ಸತೋಪ್ರಧಾನವಾಗುತ್ತದೆ. ಯೋಗವಿಲ್ಲದೆ ಸತೋಪ್ರಧಾನವಾಗುವುದು ಅಸಂಭವವಾಗಿದೆ. ತಂದೆಯನ್ನು ಚೆನ್ನಾಗಿ ನೆನಪು ಮಾಡುವುದರಿಂದ ಸ್ವತಃವಾಗಿ ಕರೆಂಟ್ ಸಿಗುವುದು. ಆರೋಗ್ಯವಂತರಾಗುವಿರಿ. ಕರೆಂಟ್ನಿಂದ ಆಯಸ್ಸು ಹೆಚ್ಚಾಗುವುದು. ಮಕ್ಕಳು ನೆನಪು ಮಾಡಿದರೆ ತಂದೆಯು ಸಹ ಸರ್ಚ್ಲೈಟ್ ಕೊಡುವರು.

ಮಧುರ ಮಕ್ಕಳು ಈ ಪಾಠವನ್ನು ಪಕ್ಕಾ ನೆನಪು ಮಾಡಿಕೊಳ್ಳಬೇಕು. ಶಿವಬಾಬಾ ನಮಗೆ ಓದಿಸುತ್ತಾರೆ. ಶಿವಬಾಬಾ ಪತಿತ ಪಾವನ ಸಹ ಆಗಿದ್ದಾರೆ. ಸದ್ಗತಿದಾತಾ ಆಗಿದ್ದಾರೆ. ಸದ್ಗತಿ ಎಂದರೆ ಸ್ವರ್ಗದ ರಾಜ್ಯಭಾರವಾಗಿದೆ. ಬಾಬಾ ಎಷ್ಟು ಮಧುರವಾಗಿದ್ದಾರೆ. ಎಷ್ಟು ಪ್ರೀತಿಯಿಂದ ಮಕ್ಕಳಿಗೆ ಕುಳಿತು ಓದಿಸುತ್ತಾರೆ. ತಂದೆಯು, ಅಣ್ಣನ ಮೂಲಕ ನಮಗೆ ಓದಿಸುತ್ತಾರೆ. ಬಾಬಾ ಮಕ್ಕಳನ್ನು ಎಷ್ಟು ಪ್ರೀತಿ ಮಾಡುತ್ತಾರೆ, ಯಾವುದೇ ಕಷ್ಟ ಕೊಡುವುದಿಲ್ಲ. ಕೇವಲ ಹೇಳುತ್ತಾರೆ ನನ್ನನ್ನು ನೆನಪು ಮಾಡಿ ಮತ್ತು ಚಕ್ರವನ್ನು ನೆನಪು ಮಾಡಿರಿ. ತಂದೆಯ ನೆನಪಿನಲ್ಲಿ ಹೃದಯವು ಪೂರ್ಣ ರೀತಿಯಲ್ಲಿ ಖುಶಿಯಾಗಿ ಬಿಡಬೇಕು. ಒಬ್ಬ ತಂದೆಯದೇ ನೆನಪು ಸತಾಯಿಸಬೇಕು ಏಕೆಂದರೆ ತಂದೆಯಿಂದ ಬಹಳ ದೊಡ್ಡ ಆಸ್ತಿ ಸಿಗುತ್ತದೆ. ತಮ್ಮನ್ನು ನೋಡಿಕೊಳ್ಳಬೇಕು ತಂದೆಯೊಂದಿಗೆ ನಮ್ಮ ಪ್ರೀತಿ ಎಷ್ಟಿದೆ. ಎಲ್ಲಿಯವರೆಗೆ ನಮ್ಮಲ್ಲಿ ದೈವೀ ಗುಣಗಳಿವೆ. ಏಕೆಂದರೆ ನೀವು ಮಕ್ಕಳೀಗ ಮುಳ್ಳಿನಿಂದ ಹೂ ಆಗುತ್ತಿದ್ದೀರಿ. ಎಷ್ಟೇಷ್ಟು ಯೋಗದಲ್ಲಿರುವಿರಿ ಅಷ್ಟು ಮುಳ್ಳಿನಿಂದ ಹೂ, ಸತೋಪ್ರಧಾನ ಆಗುತ್ತಾ ಹೋಗುವಿರಿ. ಯಾರು ಬಹಳಷ್ಟು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ ಅವರನ್ನೇ ಸತ್ಯ ಪರಿಮಳವುಳ್ಳ ಹೂ ಎಂದು ಹೇಳಲಾಗುವುದು. ಅವರು ಎಂದೂ ಯಾರಿಗೂ ಮುಳ್ಳು ಚುಚ್ಚುವುದಿಲ್ಲ. ಕ್ರೋಧವು ದೊಡ್ಡ ಮುಳ್ಳಾಗಿದೆ. ಅನೇಕರಿಗೆ ದುಃಖ ಕೊಡುತ್ತದೆ. ಈಗ ನೀವು ಮಕ್ಕಳು ಮುಳ್ಳಿನ ಪ್ರಪಂಚದಿಂದ ದಡಕ್ಕೆ ಬಂದಿದ್ದೀರಿ, ನೀವು ಸಂಗಮದಲ್ಲಿದ್ದೀರಿ. ಹೇಗೆ ಮಾಲಿ ಹೂಗಳನ್ನು ಬೇರೆ ಮಡಕೆಯಲ್ಲಿ ಇಡುತ್ತಾರೆ ಹಾಗೆಯೇ ನೀವು ಹೂಗಳು ಸಹ ಈಗ ಸಂಗಮಯುಗೀ ಮಡಕೆಯಲ್ಲಿ ಬೇರೆ ಇಡಲಾಗಿದೆ. ನಂತರ ನೀವು ಹೂವು ಸ್ವರ್ಗದಲ್ಲಿ ಹೋಗಿ ಬಿಡುವಿರಿ. ಕಲಿಯುಗೀ ಮುಳ್ಳುಗಳು ಭಸ್ಮವಾಗಿ ಬಿಡುವುವು.

ತಂದೆಯು ಹೇಳುತ್ತಾರೆ ಮಧುರ ಮಕ್ಕಳೇ ಎಷ್ಟು ನೀವು ಅನೇಕರ ಕಲ್ಯಾಣ ಮಾಡುತ್ತೀರಿ ಅಷ್ಟು ಪ್ರತಿಫಲ ಸಿಗುತ್ತದೆ. ಅನೇಕರಿಗೆ ದಾರಿ ತೋರಿಸುವುದರಿಂದ ಅನೇಕರ ಆಶೀರ್ವಾದ ಸಿಗುವುದು. ಜ್ಞಾನ ರತ್ನದಿಂದ ಜೋಳಿಗೆ ತುಂಬಿಸಿಕೊಂಡು ನಂತರ ದಾನ ಮಾಡಬೇಕು. ಜ್ಞಾನ ಸಾಗರ ನಿಮಗೆ ರತ್ನಗಳ ತಟ್ಟೆ ತುಂಬಿ-ತುಂಬಿ ಕೊಡುತ್ತಾರೆ, ಯಾರು ಅದನ್ನು ದಾನ ಮಾಡುತ್ತಾರೆ ಅವರೇ ಎಲ್ಲರಿಗೆ ಪ್ರಿಯರೆನಿಸುತ್ತಾರೆ. ಮಕ್ಕಳಿಗೆ ಎಷ್ಟು ಖುಷಿಯಾಗಬೇಕು. ಯಾರು ಬುದ್ಧಿವಂತ ಮಕ್ಕಳಿದ್ದಾರೆ ಅವರು ಹೇಳುತ್ತಾರೆ ನಾವು ಬಾಬಾರವರಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಒಮ್ಮೇಲೆ ಅಂಟಿಕೊಂಡು ಬಿಡುತ್ತಾರೆ. ತಂದೆಯೊಂದಿಗೆ ಬಹಳ ಪ್ರೀತಿಯಿರುತ್ತದೆ ಏಕೆಂದರೆ ತಿಳಿದುಕೊಂಡಿದ್ದಾರೆ - ಪ್ರಾಣವನ್ನು ಕೊಡುವಂತಹ ತಂದೆ ಸಿಕ್ಕಿದ್ದಾರೆ. ಜ್ಞಾನದ ವರದಾನವನ್ನು ಕೊಡುತ್ತಾರೆ ಯಾವುದರಿಂದ ನಾವು ಏನಾಗಿರುವಂತಹವರು ಏನಾಗಿ ಬಿಡುತ್ತೇವೆ, ದಿವಾಳಿಯಿಂದ ಸಾಹುಕಾರರಾಗಿ ಬಿಡುತ್ತೇವೆ. ಇಷ್ಟು ಭಂಡಾರ ಭರಪೂರ್ ಮಾಡಿ ಬಿಡುತ್ತಾರೆ. ಎಷ್ಟು ತಂದೆಯನ್ನು ನೆನಪು ಮಾಡುತ್ತೇವೆ ಅಷ್ಟು ಪ್ರೀತಿಯಿರುತ್ತದೆ, ಆಕರ್ಷಣೆಯಾಗುತ್ತದೆ. ಸೂಜಿ ಸ್ವಚ್ಛವಾಗಿದ್ದರೆ ಅಯಸ್ಕಾಂತ ತನ್ನ ಹತ್ತಿರ ಆಕರ್ಷಿಸುತ್ತದೆ. ತಂದೆಯ ನೆನಪಿನಿಂದ ತುಕ್ಕು ಬಿಟ್ಟು ಹೋಗುತ್ತದೆ. ಒಬ್ಬ ತಂದೆಯನ್ನು ಬಿಟ್ಟರೆ ಬೇರೆ ಯಾರ ನೆನಪು ಬರಬಾರದು.

ತಂದೆಯು ತಿಳಿಸುತ್ತಾರೆ ಮಧುರ ಮಕ್ಕಳೇ, ತಪ್ಪನ್ನು ಮಾಡಬೇಡಿರಿ, ಸ್ವದರ್ಶನ ಚಕ್ರಧಾರಿಯಾಗಿರಿ, ಲೈಟ್ ಹೌಸ್ ಆಗಿ, ಸ್ವದರ್ಶನ ಚಕ್ರಧಾರಿಯಾಗುವುದರ ಅಭ್ಯಾಸ ಚೆನ್ನಾಗಿದ್ದರೆ ನಂತರ ನೀವು ಜ್ಞಾನ ಸಾಗರರಾಗಿ ಬಿಡುವಿರಿ. ಹೇಗೆ ವಿದ್ಯಾರ್ಥಿಗಳು ಓದಿ ಟೀಚರ್ ಆಗುತ್ತಾರೆ. ನಿಮ್ಮ ವ್ಯವಹಾರವೇ ಇದಾಗಿದೆ. ಎಲ್ಲರನ್ನೂ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡಿ ಆಗಲೇ ಚಕ್ರವರ್ತಿ ರಾಜಾ-ರಾಣಿ ಆಗುವಿರಿ. ತಂದೆ ಹೇಳುತ್ತಾರೆ ಮಕ್ಕಳೇ ನೀವಿಲ್ಲದೆ ನನಗೂ ಅರಾಮವಿಲ್ಲದಂತಾಗುತ್ತದೆ. ಯಾವಾಗ ಸಮಯವಿರುತ್ತದೆ ಆಗಲೇ ಅರಾಮವಿಲ್ಲದಂತಾಗುತ್ತದೆ. ಈಗ ನಾವು ಹೋಗುವೆವು. ಮಕ್ಕಳು ಬಹಳ ಕರೆಯುತ್ತಾರೆ, ಬಹಳ ದುಃಖಿಯಾಗಿದ್ದಾರೆ. ದಯೆ ಬರುತ್ತದೆ ಅದಕ್ಕಾಗಿ ನಾನು ನೀವು ಮಕ್ಕಳನ್ನು ಎಲ್ಲಾ ದುಃಖದಿಂದ ಬಿಡಿಸಲು ಬರುತ್ತೇನೆ. ಈಗ ನೀವು ಮಕ್ಕಳು ಮನೆಗೆ ಹೋಗಬೇಕಾಗಿದೆ, ನಂತರ ಅಲ್ಲಿಂದ ತಾವು ತಾವೇ ಸುಖಧಾಮಕ್ಕೆ ಹೋಗಿ ಬಿಡುವಿರಿ. ಅಲ್ಲಿ ನಾನು ನಿಮ್ಮ ಜೊತೆಗಾರನಾಗುವುದಿಲ್ಲ. ತಮ್ಮ ಅವಸ್ಥೆಯ ಅನುಸಾರ ನಿಮ್ಮ ಆತ್ಮ ಹೋಗಿ ಬಿಡುತ್ತದೆ. ಓಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಕರೆಂಟ್ ಸ್ವತಃವಾಗಿ ತೆಗೆದುಕೊಳ್ಳಲು ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು. ಈ ನೆನಪೇ ಆರೋಗ್ಯವಂತರನ್ನಾಗಿ ಮಾಡುವುದು. ಕರೆಂಟ್ ತೆಗೆದುಕೊಳ್ಳುವುದರಿಂದ ಆಯಸ್ಸು ಹೆಚ್ಚುತ್ತದೆ. ನೆನಪಿನಿಂದಲೇ ತಂದೆಯ ಸರ್ಚ್ ಲೈಟ್ ಸಿಗುತ್ತದೆ.

2. ತಪ್ಪು ಮಾಡುವುದನ್ನು ಬಿಟ್ಟು ಸ್ವದರ್ಶನ ಚಕ್ರಧಾರಿ, ಲೈಟ್ ಹೌಸ್ ಆಗಬೇಕಾಗಿದೆ, ಇದರಿಂದಲೇ ಜ್ಞಾನಸಾಗರನಾಗಿ ಚಕ್ರವರ್ತಿ ರಾಜಾ ರಾಣಿಯಾಗಿ ಬಿಡುವಿರಿ.

ವರದಾನ:
ಎಲ್ಲರಿಗೂ ಖುಷಿಯ ಸಮಾಚಾರವನ್ನು ತಿಳಿಸುವಂತಹ ಖುಷಿಯ ಖಜಾನೆಯಿಂದ ಸಂಪನ್ನ ಭಂಡಾರ ಭವ.

ಸದಾ ತಮ್ಮ ಈ ಸ್ವರೂಪವನ್ನು ಮುಂದಿಟ್ಟುಕೊಳ್ಳಿರಿ - ನಾವು ಖುಷಿಯ ಖಜಾನೆಯಿಂದ ಸಂಪನ್ನ ಭಂಡಾರವಾಗಿದ್ದೇವೆ. ಅಪರಿಮಿತ ಮತ್ತು ಅವಿನಾಶಿಯಾದ ಏನೆಲ್ಲಾ ಖಜಾನೆಗಳು ಸಿಕ್ಕಿವೆ, ಆ ಖಜಾನೆಗಳನ್ನು ಸ್ಮೃತಿಯಲ್ಲಿ ತಂದುಕೊಳ್ಳಿರಿ. ಖಜಾನೆಗಳನ್ನು ಸ್ಮೃತಿಯಲ್ಲಿ ತಂದುಕೊಳ್ಳುವುದರಿಂದ ಖುಷಿಯಾಗುತ್ತದೆ ಮತ್ತು ಎಲ್ಲಿ ಖುಷಿಯಿದೆ ಅಲ್ಲಿ ಸದಾಕಾಲಕ್ಕಾಗಿ ದುಃಖವು ದೂರವಾಗಿ ಬಿಡುತ್ತದೆ. ಖಜಾನೆಗಳ ಸ್ಮೃತಿಯಿಂದ ಆತ್ಮವು ಸಮರ್ಥವಾಗಿ ಬಿಡುತ್ತದೆ, ವ್ಯರ್ಥವು ಸಮಾಪ್ತಿಯಾಗಿಬಿಡುತ್ತದೆ. ಸಂಪನ್ನ ಆತ್ಮನೆಂದಿಗೂ ಸಹ ಏರುಪೇರಿನಲ್ಲಿ ಬರುವುದಿಲ್ಲ, ಅವರು ಸ್ವಯಂ ಸಹ ಖುಷಿಯಿರುತ್ತಾರೆ ಮತ್ತು ಅನ್ಯರಿಗೂ ಖುಷಿಯ ಸಮಾಚಾರವನ್ನು ತಿಳಿಸುತ್ತಾರೆ.

ಸ್ಲೋಗನ್:
ಯೋಗ್ಯರಾಗಬೇಕೆಂದರೆ ಕರ್ಮ ಮತ್ತು ಯೋಗದ ಬ್ಯಾಲೆನ್ಸ್ ಇಟ್ಟುಕೊಳ್ಳಿರಿ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತವಾಗಿ.

ಸೇವೆಯಲ್ಲಿ ಮುಖದ ಮೂಲಕ ಸಂದೇಶ ಕೊಡುವುದರಲ್ಲಿ ಸಮಯವು ಹಿಡಿಸುತ್ತದೆ, ಸಂಪತ್ತನ್ನು ತೊಡಗಿಸುತ್ತೀರಿ, ಏರುಪೇರಿನಲ್ಲಿಯೂ ಬರುತ್ತೀರಿ, ದಣಿಯುತ್ತೀರಿ. ಆದರೆ ಶ್ರೇಷ್ಠ ಸಂಕಲ್ಪಗಳ ಸೇವೆಯಲ್ಲಿ ಇದೆಲ್ಲವೂ ಬಚಾವಾಗುವುದು. ಅಂದಮೇಲೆ ಈ ಸಂಕಲ್ಪ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ದೃಢತೆ ಸಂಪನ್ನ ಸಂಕಲ್ಪ ಮಾಡಿ ಆಗ ಪ್ರತ್ಯಕ್ಷತೆಯು ಬೇಗ ಆಗುವುದು.

ಡ್ರಾಮಾದ ಕೆಲವು ಗುಹ್ಯ ರಹಸ್ಯ (ಸಂದೇಶ ಪುತ್ರಿಯರ ಮೂಲಕ)

1. ಈ ವಿರಾಟ ಸಿನೆಮಾ (ಡ್ರಾಮಾ)ದಲ್ಲಿ ಪ್ರತಿಯೊಬ್ಬ ಮನುಷ್ಯಾತ್ಮನಲ್ಲಿ ತಮ್ಮ- ತಮ್ಮ ಪೋಜಿಷನ್ ಅನುಸಾರ ಜೀವನದ ಜ್ಞಾನ ಅಥವಾ ಪಾತ್ರ ಮೊದಲೇ ಮರ್ಜ್ ರೂಪದಲ್ಲಿ ಇರುತ್ತದೆ. ಜೀವಾತ್ಮನಲ್ಲಿ ಇಡೀ ಜೀವನದ ಪರಿಚಯ ಮರ್ಜ್ ಆಗಿರುವ ಕಾರಣ ಸಮಯದಲ್ಲಿ ಇಮರ್ಜ್ ಆಗುತ್ತದೆ. ಪ್ರತಿಯೊಬ್ಬರಲ್ಲಿ ತಮ್ಮ-ತಮ್ಮ ಸಂಪೂರ್ಣತೆಯ ಅವಸ್ಥೆಯ ಅನುಸಾರ ತಿಳುವಳಿಕೆ ಅಥವಾ ಪಾತ್ರ ಯಾವುದು ಮರ್ಜ್ ಆಗಿದೆ, ಅದೇ ಸಮಯದಲ್ಲಿ ಇಮರ್ಜ್ ಆಗುತ್ತದೆ ಯಾವುದರಿಂದ ನೀವು ಪ್ರತಿಯೊಬ್ಬರು ತಿಳಿದುಕೊಂಡಿರುವವರಾಗುತ್ತೀರಿ.

2. ಈ ವಿರಾಟ ಸಿನೆಮಾ ಸೆಕೆಂಡ್ ಸೆಕೆಂಡ್ನ ಪಾತ್ರ ಹೊಸದಾಗಿರುವ ಕಾರಣ ನಿಮಗೆ ಈ ರೀತಿ ತಿಳಿಯುತ್ತದೆ ಹೇಗೆ ಈಗೀಗ ಇಲ್ಲಿ ಬಂದಿದ್ದೇನೆ. ಪ್ರತಿ ಸೆಕೆಂಡ್ನ ಪಾತ್ರ ಬೇರೆಯಾಗಿರುತ್ತದೆ, ಕಲ್ಪದ ಮೊದಲಿನ ಕ್ಷಣ ಪುನರಾವರ್ತನೆಯಾಗುತ್ತದೆ ಆದರೆ ಯಾವ ಸಮಯದಲ್ಲಿ ಪ್ರಾಕ್ಟಿಕಲ್ ಜೀವನದಲ್ಲಿ ನಡೆಯುತ್ತೀರಿ, ಆ ಸಮಯದಲ್ಲಿ ಹೊಸದೆಂದು ಅನುಭವವಾಗುತ್ತದೆ. ಇದೇ ತಿಳುವಳಿಕೆಯಿಂದ ಮುಂದುವರೆಯಿರಿ. ಯಾರು ಈ ರೀತಿ ಹೇಳಲು ಸಾಧ್ಯವಿಲ್ಲ - ನಾನಂತು ಜ್ಞಾನ ಪ್ರಾಪ್ತಿ ಮಾಡಿಕೊಂಡಿದ್ದೇನೆ,ಈಗ ನಾನು ಹೋಗುತ್ತೇನೆ. ಎಲ್ಲಿಯವರೆಗೆ ವಿನಾಶವಾಗುತ್ತದೆ ಅಲ್ಲಿಯವರೆಗೆ ಇಡೀ ಪಾತ್ರ ಮತ್ತು ಜ್ಞಾನ ಹೊಸದಾಗಿದೆ.

3. ಈ ವಿರಾಟ ಡ್ರಾಮಾದ ಏನೆಲ್ಲಾ ಮಾಡಲ್ಪಟ್ಟಿದೆ..., ಅದು ನಿಶ್ಚಯದಿಂದ ಮಾಡಲ್ಪಟ್ಟಿದೆ. ಮಾಡಲ್ಪಟ್ಟಿರುವುದನ್ನು ಯಾರು ತಪ್ಪಿಸುತ್ತಾರೆ ಅಥವಾ ಮಾಡುತ್ತಾರೆ ಇದೆಲ್ಲ ತಮ್ಮ-ತಮ್ಮ ಮೇಲೆ ಆಧಾರವಾಗಿದೆ. ಸ್ವಯಂನ ಶತೃ ಅಥವಾ ಸ್ವಯಂನ ಮಿತ್ರರು ನಾನೇ ಆಗಿದ್ದೇನೆ.

4. ಈ ಡ್ರಾಮಾ ಸಿನೆಮಾದಲ್ಲಿ ಈ ಸಹನೆ ಮಾಡುವುದು ಸಹ ನಿಮಗೆ ಕಲ್ಪದ ಮೊದಲಿನ ಒಂದು ಮಧುರ ಸ್ವಪ್ನವಾಗಿದೆ ಏಕೆಂದರೆ ನಿಮಗೆ ಏನು ಆಗುವುದಿಲ್ಲ, ಯಾರು ಸತಾಯಿಸುತ್ತಾರೆ ಅವರು ಸಹ ಹೇಳುತ್ತಾರೆ ನಾನು ಇವರನ್ನು ಎಷ್ಟು ಸತಾಯಿಸಿದ್ದೇನೆ, ದುಃಖಿಯನ್ನಾಗಿ ಮಾಡಿದ್ದೇನೆ, ಆದರು ಇವರು ಡಿವೈನ್ ಯುನಿಟಿ (ದೈವಿಕ ಏಕತೆ), ಸುಪ್ರೀಮ್ ಯುನಿಟಿ (ಸರ್ವೋಚ್ಛ ಏಕತೆ), ವಿಜಯಿ ಪಾಂಡವರಾಗಿದ್ದಾರೆ. ಇದು ಮಾಡಲ್ಪಟಿರುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ.

5. ಈ ವಿರಾಟ ಸಿನೆಮಾದಲ್ಲಿ ನೋಡಿ ಎಷ್ಟು ವಂಡರ್ ಆಗಿದೆಯೆಂದರೆ ನೀವು ಪ್ರತ್ಯಕ್ಷ ಪಾಂಡವರು ಬಂದಿದ್ದೀರಿ ಮತ್ತು ನಿಮ್ಮ ಹಳೆಯ ಚಿತ್ರಗಳು ಮತ್ತು ಲಕ್ಷಣಗಳು ಇಲ್ಲಿಯವರೆಗೆ ಕಾಯಂ ಆಗಿವೆ. ಹೇಗೆ ಹಳೆಯ ಪೇಪರ್, ಹಳೆಯ ಶಾಸ್ತ್ರ, ಗೀತೆ ಪುಸ್ತಕ ಇತ್ಯಾದಿಗಳನ್ನು ಸಂಭಾಲಿಸಿ ಇಟ್ಟುಕೊಳ್ಳುತ್ತಾರೆ. ನಂತರ ಅದರ ಮಾನ್ಯತೆ ಬಹಳಷ್ಟಿರುತ್ತದೆ. ಇಂತಹ ಹಳೆಯ ವಸ್ತುಗಳು ಕಾಯಂವಾಗಿರುತ್ತಾ ಈಗ ಹೊಸ ವಸ್ತುವಿನ ಆವಿಷ್ಕಾರವಾಗುತ್ತದೆ. ಹಳೆಯ ಗೀತೆ ಪ್ರಾಕ್ಟಿಕಲ್ದಲ್ಲಿರುತ್ತಾ, ಹೊಸ ಗೀತೆಯ ಆವಿಷ್ಕಾರವಾಗಿದೆ. ಹೊಸದರ ಸ್ಥಾಪನೆಯಾಗುವಾಗ ಹಳೆಯದರ ಅಂತ್ಯವಾಗುತ್ತದೆ. ಈಗ ನೀವು ಪ್ರಾಕ್ಟಿಕಲ್ನಲ್ಲಿ ಜ್ಞಾನವನ್ನು ಜೀವನದಲ್ಲಿ ಪ್ರತ್ಯಕ್ಷ ಧಾರಣೆ ಮಾಡುವುದರಿಂದ ದುರ್ಗಾ, ಕಾಳಿ ಇತ್ಯಾದಿಗಳಾಗಿದ್ದೀರಿ. ನಂತರ ಹಳೆಯ ಸ್ಥೂಲ ಜಡ ಚಿತ್ರಗಳ ವಿನಾಶವಾಗುತ್ತದೆ ಮತ್ತು ಹೊಸ ಚೈತನ್ಯ ಸ್ವರೂಪದ ಸ್ಥಾಪನೆಯಾಗುತ್ತದೆ.

6. ಈ ವಿರಾಟ ಸೀನೆಮಾ ಪ್ಲಾನ್ ಅನುಸಾರ ಸಂಗಮದ ಮಧುರ ಸಮಯದಲ್ಲಿ ನೀವು ಅನನ್ಯ ದೈವೀ ಮಕ್ಕಳೇ ವಿಕಾರಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿ ವೈಕುಂಠದ ಮಧುರ ಲಾಟರಿಯನ್ನು ಪಡೆಯುತ್ತೀರಿ. ನಿಮ್ಮ ಹಣೆಬರಹ ಎಷ್ಟು ಅದೃಷ್ಟಶಾಲಿಯಾಗಿದೆ. ಈ ಸಮಯ ನೀವು ನರ ಮತ್ತು ನಾರಿ ಅವಿನಾಶಿ ಜ್ಞಾನದಿಂದ ಪೂಜ್ಯ ಯೋಗ್ಯ ದೇವತಾ ಪದವಿ ಪ್ರಾಪ್ತಿ ಮಾಡಿಕೊಳ್ಳುತ್ತೀರಿ, ಇದೇ ಈ ಸಂಗಮದ ಅದ್ಭುತ ಸಮಯದ ಅದ್ಭುತ ಆಗಿದೆ.

7. ಈಶ್ವರ ಸಾಕ್ಷಿಯಾಗಿ ನೋಡುತ್ತಿದ್ದಾರೆ - ನಾನು ಯಾವ ಪಾತ್ರಧಾರಿಗಳಿಗೆ ಅನೇಕ ಆಭರಣಗಳು, ಆಭೂಷಣಗಳಿಂದ ಶೃಂಗಾರ ಮಾಡಿ ಈ ಸೃಷ್ಟಿ ರೂಪಿ ಸ್ಟೇಜ್ನ ಮೇಲೆ ನೃತ್ಯ ಮಾಡಲು ಕಳುಹಿಸಿದ್ದರು, ಅವರು ಎಂತಹ ಪಾತ್ರ ಮಾಡುತ್ತಿದ್ದಾರೆ. ನಾನು ನನ್ನ ದೈವೀ ಮಕ್ಕಳಿಗೆ ಸ್ವರ್ಣ ಮುದ್ರಗಳು, ಬೆಳ್ಳಿ ನಾಣ್ಯಗಳನ್ನು ಕೊಟ್ಟು ಹೇಳಿದ್ದೇ ಈ ಭೂಷಣಗಳು, ಆಭರಣಗಳನ್ನು ತೊಟ್ಟು ಖುಷಿಯ ಅದೃಷ್ಟರಾಗಿ ಸಾಕ್ಷಿಯಾಗಿ ಪಾತ್ರವನ್ನು ಅಭಿನಯಿಸಬೇಕು ಮತ್ತು ಸಾಕ್ಷಿಯಾಗಿ ಈ ಆಟವನ್ನು ಸಹ ನೋಡಬೇಕು. ಸಿಕ್ಕಿ ಹಾಕಿಕೊಳ್ಳಬಾರದು ಆದರೆ ಅರ್ಧಕಲ್ಪ ರಾಜ್ಯ ಭಾಗ್ಯ ಭೋಗಿಸಿ ನಂತರ ಅರ್ಧಕಲ್ಪ ತಾವೇ ರಚಿಸಿರುವ ಮಾಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈಗ ಪುನಃ ನಾನು ನಿಮಗೆ ಹೇಳುತ್ತೇನೆ ಈ ಮಾಯೆಯನ್ನು ಬಿಟ್ಟು ಬಿಡಿ. ಈ ಜ್ಞಾನ ಮಾರ್ಗದಲ್ಲಿ ವಿಕಾರಿ ಕಾರ್ಯಗನ್ನು ಬಿಟ್ಟು ನಿರ್ವಿಕಾರಿಯಾಗುವುದರಿಂದ ಆದಿ ಮಧ್ಯ ಅಂತ್ಯ ದುಃಖದಿಂದ ಬಿಡಿಸಿಕೊಂಡು ಜನ್ಮ-ಜನ್ಮಾಂತರಕ್ಕಾಗಿ ಸುಖ ಪ್ರಾಪ್ತಿ ಮಾಡಿಕೊಳ್ಳುವರು.

8. ತಮ್ಮಗಿಂತಲೂ ಯಾರಾದರೂ ಶ್ರೇಷ್ಠ ಸ್ಥಿತಿಯುಳ್ಳವರ ಮೂಲಕ ಯಾವುದೇ ಎಚ್ಚರಿಕೆ ಸಿಕ್ಕಿತೆಂದರೆ ಅದನ್ನು ರಹಸ್ಯಯುಕ್ತವಾಗಿ ತೆಗೆದುಕೊಳ್ಳುವುದರಲ್ಲಿಯೇ ಕಲ್ಯಾಣವಿದೆ. ಅವರಲ್ಲಿರುವ ರಹಸ್ಯವನ್ನು ತಿಳಿದುಕೊಳ್ಳಬೇಕು ಇದರಲ್ಲಿ ಅವಶ್ಯವಾಗಿ ಯಾವುದೋ ಕಲ್ಯಾಣ ಸಮಾವೇಶವಾಗಿದೆ. ಇವರಿಂದ ನಮಗೆ ಏನೆಲ್ಲಾ ಪಾಯಿಂಟ್ ಸಿಕ್ಕಿದೆಯೋ ಅದು ಯಥಾರ್ಥವಾಗಿದೆ, ಅದನ್ನು ಬಹಳ ಖುಷಿಯಿಂದ ಸ್ವೀಕಾರ ಮಾಡಬೇಕು ಏಕೆಂದರೆ ಒಂದುವೇಳೆ ನನ್ನಿಂದ ಎಂದಾದರೂ ಯಾವುದೋ ತಪ್ಪಾದರೆ ಆ ಪಾಯಿಂಟ್ ನೆನಪು ಬರುವುದರಿಂದ ಸ್ವಯಂನ್ನು ಸರಿಪಡಿಸಿಕೊಳ್ಳಬೇಕು ಅದಕ್ಕಾಗಿ ಯಾವುದೇ ಎಚ್ಚರಿಕೆಯಿದ್ದರೆ ಬಹಳ ವಿಶಾಲ ಬುದ್ಧಿಯಿಂದ ಧಾರಣೆ ಮಾಡುವುದರಿಂದ ತಮ್ಮ ಉನ್ನತಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.

9. ಈಗ ನೀವು ನಿತ್ಯ ಅಂತರ್ಮುಖಿಯಾಗಿ ಯೋಗದಲ್ಲಿರಬೇಕಾಗಿದೆ ಏಕೆಂದರೆ ಅಂತರ್ಮುಖಿಯಾಗುವುದರಿಂದ ಸ್ವಯಂನ್ನು ನೋಡಿಕೊಳ್ಳಬಹುದು. ಕೇವಲ ನೋಡುವುದಲ್ಲ, ಪರಿವರ್ತನೆ ಸಹ ಮಾಡಿಕೊಳ್ಳಬಹುದು. ಇದೇ ಸರ್ವೋತ್ತಮ ಸ್ಥಿತಿ. ಪ್ರತಿಯೊಬ್ಬರು ತಮ್ಮ ಸ್ಥಿತಿಯ ಪ್ರಮಾಣ ಪುರುಷಾರ್ಥಿಯಾಗಿದ್ದಾರೆಂದಾಗ ಯಾರೇ ಪುರುಷಾರ್ಥಿಗಾಗಿ ವಿವಾದ ನಡೆಯಲು ಸಾಧ್ಯವಿಲ್ಲ ಏಕೆಂದರೆ ತಮ್ಮ ಸ್ಟೇಜ್ ಅನುಸಾರ ಪುರುಷಾರ್ಥಿಯಾಗಿದ್ದಾರೆ, ಅವರ ಸ್ಥಿತಿಯನ್ನು ನೋಡಿ ಅವರಿಂದ ಗುಣವನ್ನು ತೆಗೆದುಕೊಳ್ಳಬಹುದು. ಒಂದುವೇಳೆ ಗುಣವನ್ನು ತೆಗೆದುಕೊಳ್ಳುವುದಿಲ್ಲವೆಂದರೆ ಅದನ್ನು ಬಿಟ್ಟು ಬಿಡಿ.

10. ನೀವು ಸದಾ ತಮ್ಮ ಸರ್ವೋತ್ತಮ ಲಕ್ಷ್ಯವನ್ನು ಮುಂದೆ ನೋಡಿ ತಮ್ಮನ್ನು ನೋಡಿಕೊಳ್ಳಿರಿ. ನೀವು ಪ್ರತಿಯೊಬ್ಬರು ವ್ಯಕ್ತಿಗತ ಪುರುಷಾರ್ಥಿಯಾಗಿದ್ದೀರಿ, ನೀವು ತಮ್ಮ ಕಡೆ ದೃಷ್ಟಿಯಿಟ್ಟುಕೊಂಡು ಮುಂದೆ ಓಡುತ್ತಾ ಇರಿ, ಯಾರೇ ಭಲೇ ಏನಾದರೂ ಮಾಡುತ್ತಿರಲಿ ಆದರೆ ನಾನು ನನ್ನ ಸ್ವರೂಪದಲ್ಲಿ ಸ್ಥಿತನಾಗಿದ್ದೇನೆ, ಅನ್ಯ ಯಾರನ್ನೂ ನೋಡಬಾರದು. ತಮ್ಮ ಬುದ್ಧಿ ಯೋಗಬಲದಿಂದ ಅವಸ್ಥೆಯನ್ನು ತಿಳಿದುಕೊಳ್ಳಬೇಕು. ಅಂತರ್ಮುಖಿಯ ಸ್ಥಿತಿಯಿಂದಲೇ ನೀವು ಅನೇಕ ಪರೀಕ್ಷೆಗಳನ್ನು ಪಾಸ್ ಮಾಡಬಹುದು. ಒಳ್ಳೆಯದು. ಓಂ ಶಾಂತಿ.