01.11.26 Avyakt Bapdada
Kannada
Murli 05.03.2012 Om Shanti Madhuban
“ಈಗ ನಾಲ್ಕಾರು ಕಡೆ
ದುಃಖ-ಅಶಾಂತಿ ಹೆಚ್ಚಾಗುತ್ತಿದೆ, ಆದ್ದರಿಂದ ತಮ್ಮ ವಿಶ್ವ ಕಲ್ಯಾಣಿ ಸ್ವರೂಪವನ್ನು
ಪ್ರತ್ಯಕ್ಷಗೊಳಿಸಿ, ಮನಸ್ಸಾ ಸೇವೆ ಹೆಚ್ಚಿಸಿರಿ, ತಂದೆಯ ಸಂಗದ ರಂಗಿನಿಂದ ಡಬಲ್ ಹೋಲಿ ಆಗಿರಿ”
ಇಂದು ಬಾಪ್ದಾದಾರವರು
ಪ್ರತಿಯೊಂದು ಮಗುವಿನ ಭಾಗ್ಯದ ರೇಖೆಗಳನ್ನು ನೋಡುತ್ತಿದ್ದಾರೆ. ಮಸ್ತಕದಲ್ಲಿ ಹೊಳೆಯುತ್ತಿರುವ
ನಕ್ಷತ್ರದ ರೇಖೆ, ನಯನಗಳಲ್ಲಿ ಸ್ನೇಹ ಮತ್ತು ಶಕ್ತಿಯ ರೇಖೆ, ತುಟಿಗಳಲ್ಲಿ ಮುಗುಳ್ನಗೆಯ ರೇಖೆ,
ಪಾದಗಳಲ್ಲಿ ಪ್ರತೀ ಹೆಜ್ಜೆಯಲ್ಲಿ ಪದಮದ ರೇಖೆಯನ್ನು ನೋಡುತ್ತಿದ್ದಾರೆ. ತಾವೆಲ್ಲರೂ ಸಹ ತಮ್ಮ
ಭಾಗ್ಯದ ರೇಖೆಗಳನ್ನು ನೋಡಿ ಹರ್ಷಿತರಾಗುತ್ತಿದ್ದೀರಲ್ಲವೆ! ಹೃದಯದಲ್ಲಿ ಇದನ್ನೇ ಹಾಡುತ್ತೀರಿ -
ವಾಹ್ ನನ್ನ ಭಾಗ್ಯವೇ! ಪ್ರತಿಯೊಬ್ಬರ ಮಸ್ತಕವು ಆ ದಿವ್ಯನಕ್ಷತ್ರದಿಂದ ಹೊಳೆಯುತ್ತಿರುವುದನ್ನು
ನೋಡಿ ಬಾಪ್ದಾದಾರವರೂ ಸಹ ಖುಷಿ ಪಡುತ್ತಿದ್ದಾರೆ ಮತ್ತು ಇದೇ ಗೀತೆಯನ್ನು ಹೃದಯದಿಂದ ಹಾಡುತ್ತಾರೆ
- ವಾಹ್ ಮಕ್ಕಳೇ ವಾಹ್! ಮಕ್ಕಳ ಹೃದಯದಿಂದ ಯಾವ ಗೀತೆ ಕೇಳಿ ಬರುತ್ತಿದೆ? ವಾಹ್ ಬಾಬಾ ವಾಹ್!
ಅಂದಮೇಲೆ ಮಕ್ಕಳೂ ಸಹ ವಾಹ್! ಬಾಬಾ ವಾಹ್! ಈ ಇಡೀ ಸಭೆಯು ಏನಾಯಿತು? ವಾಹ್! ವಾಹ್! ವಾಹ್! ಅಂದಮೇಲೆ
ತಮ್ಮ ಭಾಗ್ಯವನ್ನು ನೋಡಿ ಸದಾ ಹೀಗೆಯೇ ಹರ್ಷಿತವಾಗಿರಿ. ಹೇಗೆ ಈಗ ಎಲ್ಲರೂ ಹರ್ಷಿತವಾಗುತ್ತಿದ್ದೀರಿ
ಹಾಗೆಯೇ ಹರ್ಷಿತವಾಗಿ ಇರಬೇಕು. ಈ ಭಾಗ್ಯವು ಈಗ ಸಂಗಮದಲ್ಲಿಯೇ ಸಿಗುತ್ತದೆ. ಸಂಗಮಯುಗದ ಪ್ರತೀ
ಕ್ಷಣದ ಬೆಲೆ ಬಹಳ ಅಮೂಲ್ಯವಾಗಿದೆ. ಸಂಗಮದ ಒಂದು ಕ್ಷಣವೂ ಅವಿನಾಶಿಯಾಗಿ ಬಿಡುತ್ತದೆ ಏಕೆಂದರೆ
ಪ್ರತೀಕ್ಷಣವು 21 ಜನ್ಮಗಳ ಜೊತೆ ಸಂಬಂಧವಿದೆ. ಈಗಿನ ಒಂದು ಕ್ಷಣದ ಸಂಬಂಧವು 21 ಜನ್ಮಗಳ ಜೊತೆಯಿದೆ.
ಅಂದಮೇಲೆ ಪರಿಶೀಲನೆ ಮಾಡಿ - ಒಂದು ಕ್ಷಣವನ್ನು ಒಂದುವೇಳೆ ವ್ಯರ್ಥವಾಗಿ ಕಳೆದರೆ ಒಂದು ಜನ್ಮದ
ಮಾತಲ್ಲ, 21 ಜನ್ಮಕ್ಕೆ ಸಂಬಂಧ ಪಟ್ಟಿರುವ ಮಾತಾಗಿದೆ ಆದ್ದರಿಂದ ಬಾಪ್ದಾದಾರವರು ಮಕ್ಕಳಿಗೆ
ಸಮಯದನುಸಾರ ಗಮನ ತರಿಸುತ್ತಿದ್ದಾರೆ – ಸಂಗಮ ಯುಗದ ಒಂದು ಕ್ಷಣವನ್ನೂ, ಒಂದು ಸಂಕಲ್ಪವನ್ನೂ ಸಹ
ವ್ಯರ್ಥವಾಗಿ ಕಳೆಯಬಾರದು ಏಕೆಂದರೆ ಒಂದು ಜನ್ಮವಷ್ಟೇ ವ್ಯರ್ಥವಾಗಿ ಕಳೆಯಲಿಲ್ಲ ಆದರೆ 21 ಜನ್ಮಗಳು
ವ್ಯರ್ಥವಾಯಿತು. ಸಂಗಮಯುಗದ ಮಹತ್ವವನ್ನು ಪ್ರತೀ ಸಮಯದಲ್ಲಿ ನೆನಪಿಟ್ಟುಕೊಳ್ಳಬೇಕಾಗಿದೆ.
ಬಾಪ್ದಾದಾರವರು ವ್ಯರ್ಥ
ಸಮಯ ಮತ್ತು ವ್ಯರ್ಥ ಸಂಕಲ್ಪದ ಪ್ರತಿ ಹೋಮ್ವರ್ಕ್ನ್ನು ಎಲ್ಲರಿಗೂ ಕೊಟ್ಟಿದ್ದರು. ಅಂದಮೇಲೆ ಎಲ್ಲರೂ
ಹೋಮ್ವರ್ಕ್ ಮಾಡಿದಿರಾ? ಯಾರು ತಿಳಿಯುತ್ತೀರಿ - ನಮಗೆ ಗಮನವಿತ್ತು ಮತ್ತು ಬಹಳಷ್ಟು ಸಫಲತೆಯೂ
ಪ್ರಾಪ್ತಿಯಾಯಿತು, ಲಕ್ಷ್ಯವು ಲಕ್ಷಣದವರೆಗೆ ಪರಿಣಾಮ ಬೀರಿದೆ ಎಂದು ತಿಳಿಯುವವರು ಕೈಯನ್ನೆತ್ತಿರಿ.
ಒಳ್ಳೆಯದು - ಪಾಂಡವರು ಕೈಯನ್ನೆತ್ತಿದ್ದೀರಾ? ಉದ್ದವಾಗಿ ಕೈಯೆತ್ತಿರಿ. ಈಗ ಎಲ್ಲರೂ ಈ ಕೆಲಸವನ್ನು
ಮಾಡಿಲ್ಲ. ಸಂಗಮದ ಮಹತ್ವಿಕೆಯನ್ನು ಸದಾ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕು - ಅವಿನಾಶಿ ತಂದೆಯ ಮೂಲಕ
ಈ ಕಾರ್ಯವು ಸಿಕ್ಕಿದೆ. ಪ್ರತೀ ಕ್ಷಣ ಅವಿನಾಶಿಯನ್ನಾಗಿ ಮಾಡುವಂತದ್ದಾಗಿದೆ ಏಕೆಂದರೆ ಅವಿನಾಶಿ
ತಂದೆಯ ಮೂಲಕ ಈ ವರದಾನವು ಸಿಕ್ಕಿದೆ ಆದ್ದರಿಂದ ಸಹಜವಾಗಿ ಆಗಿ ಬಿಡುತ್ತದೆ.
ತಂದೆಯು ತಿಳಿಸಿದರು -
ಪ್ರತಿಯೊಬ್ಬ ಬ್ರಾಹ್ಮಣ ಮಕ್ಕಳ ಹೆಜ್ಜೆಯಲ್ಲಿ ಪದಮದ ರೇಖೆಗಳಿದೆ. ಹೆಜ್ಜೆಯಲ್ಲಿ ಪದಮದ
ರೇಖೆಗಳಿದೆಯೆಂದರೆ ಯೋಚಿಸಿ, ಸಂಗಮಯುಗದಲ್ಲಿ ಎಷ್ಟು ಪದಮಗಳಿಗಾಗಿ ಗೋಲ್ಡನ್ ಚಾನ್ಸ್ ಇದೆ!
ಪ್ರತಿಯೊಬ್ಬರಲ್ಲಿಯೂ ಈ ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಕೆಲಮಕ್ಕಳು
ಯೋಚಿಸುತ್ತಾರೆ - ಬಾಪ್ದಾದಾರವರು ಏನು ಬಯಸುತ್ತಿದ್ದಾರೆ? ಬಾಪ್ದಾದಾ ಇದನ್ನೇ ಬಯಸುತ್ತಾರೆ -
ಒಂದೊಂದು ಮಗು ಡಬಲ್ ರಾಜಾ ಆಗಲಿ ಎಂದು. ಈಗ ಸ್ವರಾಜ್ಯ ಅಧಿಕಾರಿ ಮತ್ತು ಭವಿಷ್ಯದಲ್ಲಿ ವಿಶ್ವ
ರಾಜ್ಯ ಅಧಿಕಾರಿ. ಯಾವುದೇ ಮಗು ಡಬಲ್ ರಾಜಾ ಆಗುವುದರಲ್ಲಿ ಕಡಿಮೆಯೇನೂ ಇಲ್ಲ. ಅಂದಮೇಲೆ
ಪ್ರತಿಯೊಂದು ಮಗು ಡಬಲ್ ರಾಜ್ಯ ಅಧಿಕಾರಿಯಲ್ಲವೆ! ಕತ್ತನ್ನು ಅಲುಗಾಡಿಸಿ. ಹಾಗಾದರೆ ಪ್ರತಿಯೊಂದು
ಮಗು ಡಬಲ್ ರಾಜ್ಯ ಅಧಿಕಾರಿಯಾಗಿದ್ದಾರೆ, ಅಂಗೀಕರಿಸಿರಿ. ಅಂದಾಗ ತಂದೆಗೆ ಎಷ್ಟೊಂದು
ಖುಷಿಯಾಗುತ್ತದೆ.
ಬಾಪ್ದಾದಾರವರು
ಪ್ರತಿಯೊಬ್ಬರ ರೆಕಾರ್ಡ್ನ್ನು ಪ್ರತಿನಿತ್ಯ ನೋಡುತ್ತಾರೆ. ಆಗ ಏನು ನೋಡುವರು? ತಾವು ಪ್ರತಿಯೊಬ್ಬರ
ಹೃದಯದಲ್ಲಂತು ತಿಳಿದಿರಬಹುದು. ರಾಜ್ಯ ಅಧಿಕಾರಿಯಂತು ಆಗಿದ್ದೀರಿ ಆದರೆ ಈಗ ಯಾರು ಸ್ವರಾಜ್ಯ
ಅಧಿಕಾರಿ ಆಗಿದ್ದೀರಿ, ಸ್ವರಾಜ್ಯ ಅಧಿಕಾರಿ ಅರ್ಥಾತ್ ಮನಸ್ಸು-ಬುದ್ಧಿ-ಸಂಸ್ಕಾರವನ್ನು ತಮ್ಮ
ನಿಯಂತ್ರಣದಲ್ಲಿ ನಡೆಸುವಂತಹವರು. ಯಾವಾಗ ಬೇಕು, ಹೇಗೆ ಬೇಕು ಹಾಗೆಯೇ ಅಧಿಕಾರದಲ್ಲಿರಬೇಕು. ಹೇಗೆ
ಕೈ, ಕಾಲು ಸ್ಥೂಲ ಕರ್ಮೇಂದ್ರಿಯವಿದೆ ಅದು ತಮ್ಮ ನಿಯಂತ್ರಣದಲ್ಲಿರುತ್ತದೆ ಹಾಗೆಯೇ
ಮನಸ್ಸು-ಬುದ್ಧಿ-ಸಂಸ್ಕಾರವೂ ಸಹ ಯಾವಾಗ ಬೇಕು, ಹೇಗೆ ಬೇಕು ರೂಲಿಂಗ್ ಫವರ್ ಮತ್ತು ಕಂಟ್ರೋಲಿಂಗ್
ಪವರ್ ಇರಲಿ. ಈಗ ಬಹಳಷ್ಟು ನಂಬರ್ವಾರ್ ಆಗಿ ಕಂಡುಬರುತ್ತಿದೆ. ಇದೆಲ್ಲವೂ ನನ್ನದೇ ಆಗಿದೆ. ಮನಸ್ಸು
ನಾನು ಅಲ್ಲ, ನನ್ನದಾಗಿದೆ. ಸಂಸ್ಕಾರವು ನನ್ನದು ಆಗಿದೆ, ಬುದ್ಧಿ ನನ್ನದಾಗಿದೆ ಅಂದಮೇಲೆ
ಕಂಟ್ರೋಲಿಂಗ್ ಪವರ್, ರೂಲಿಂಗ್ ಪವರ್ ನಂಬರ್ವಾರ್ ಇದೆ. ಬಾಪ್ದಾದಾರವರು ಸಮಯದ ಸೂಚನೆಯನ್ನೂ ಸಹ
ಸಮಯದನುಸಾರ ಕೊಡುತ್ತಾ ಇದ್ದಾರೆ, ಆ ಸಮಯದನುಸರ ತಾವು ಒಬ್ಬೊಬ್ಬರ ಸ್ವಮಾನವಾಗಿದೆ – ವಿಶ್ವ
ಕಲ್ಯಾಣಕಾರಿ. ಈಗ ಸಮಯ ಪ್ರಮಾಣ ಎಲ್ಲಾ ಮಕ್ಕಳು ವಿಶ್ವ ಕಲ್ಯಾಣಿ ಸ್ವರೂಪವನ್ನು ಪ್ರತ್ಯಕ್ಷ ಮಾಡುವ
ಸಮಯವಾಗಿದೆ. ನಾಲ್ಕೂ ಕಡೆ ದುಃಖ-ಅಶಾಂತಿ ಹೆಚ್ಚಾಗುತ್ತಿದೆ. ತಮ್ಮ ಸಹೋದರ, ತಮ್ಮ ಸಹೋದರಿ,
ಪರಿವಾರವು ದುಃಖಿಯಾಗುತ್ತಿದೆ ಅಂದಮೇಲೆ ತಮಗೆ ತಮ್ಮ ಪರಿವಾರದ ಪ್ರತಿ ದಯೆ ಬರುತ್ತಿಲ್ಲವೇ!
ಈಗ ಬಾಪ್ದಾದಾರವರು ಇದೇ
ಸೂಚನೆ ಕೊಡುತ್ತಿದ್ದಾರೆ – ಸ್ವ ಪುರುಷಾರ್ಥದ ಜೊತೆ ವಿಶ್ವ ಸೇವೆಯನ್ನು, ಹೇಗೆ ವರ್ತಮಾನದಲ್ಲಿ
ವಾಚಾ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಬಾಪ್ದಾದಾ ಖುಷಿಯಾಗಿದ್ದಾರೆ, ಈ 75 ವರ್ಷದ
ಮಹೋತ್ಸವವು ಎಲ್ಲರ ಮನಸ್ಸಿನಲ್ಲಿ ಮೆಜಾರಿಟಿಯಲ್ಲಿ ಸೇವೆಯ ಉಮ್ಮಂಗ ತಂದಿದೆ. ಬಾಪ್ದಾದಾರವರು ನೋಡಿ
ಖುಷಿ ಪಡುತ್ತಿದ್ದಾರೆ ಆದರೆ ಈಗ ಮನಸ್ಸಾ ಸೇವೆಯ ಅವಶ್ಯಕತೆಯೂ ಇದೆ ಏಕೆಂದರೆ ಎಲ್ಲಾ ಕಡೆ ವಿಶ್ವ
ಕಲ್ಯಾಣಕಾರಿ ಆಗಬೇಕಾಗಿದೆ ಅದರಲ್ಲಿ ಮನಸ್ಸಾ-ವಾಚಾ ಮತ್ತು ಕರ್ಮಣಾ ಅರ್ಥಾತ್ ಚಲನೆ ಮತ್ತು
ಚಹರೆಯಿಂದ ಮೂರು ಸೇವೆಯ ಅವಶ್ಯಕತೆಯೂ ಸಹ ವರ್ತಮಾನದಲ್ಲಿ ಮಾಡಬೇಕಾಗಿದೆ. ಪ್ರತಿನಿತ್ಯ ಪರಿಶೀಲನೆ
ಮಾಡಿ – ಮೂರು ಸೇವೆಗಳಲ್ಲಿ ಎಷ್ಟು ಪರ್ಸೆಂಟ್ ಸೇವೆ ಮಾಡಿದೆನು? ವಾಚಾದಲ್ಲಂತು ಬಾಪ್ದಾದಾರವರೂ ಸಹ
ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಆದರೆ ಈಗ ಮನಸ್ಸಾ ಸೂಕ್ಷ್ಮ ಪ್ರಕಂಪನಗಳಿಂದ ಆತ್ಮಗಳ
ದುಃಖ-ಅಶಾಂತಿಯಲ್ಲಿ ಆಶ್ರಯವಾಗಬೇಕಾಗುವುದು. ತಮಗೆ ದಯೆ ಬರುತ್ತಿಲ್ಲವೇ? ಬಾಪ್ದಾದಾರವರಿಗಂತು
ಮಕ್ಕಳಪ್ರತಿ ಭಲೆ ಹೇಗೇ ಇರಬಹುದು ಆದರೆ ಆದರೂ ಸಹ ಮಕ್ಕಳಾಗಿದ್ದರಲ್ಲವೆ, ದಯೆ ಬರುತ್ತದೆ. ಅಂದಮೇಲೆ
ಈಗ ಎಲ್ಲಾ ಮಕ್ಕಳು ಕೇವಲ ಸೇವಾಕೇಂದ್ರದ ಕಲ್ಯಾಣಿ ಅಲ್ಲ, ಜೋನ್ನ ಕಲ್ಯಾಣ ಆಗಿರುವುದಲ್ಲ, ವಿಶ್ವ
ಕಲ್ಯಾಣಿ ಆಗಬೇಕಾಗಿದೆ. ಆದ್ದರಿಂದ ಈಗ ಬಾಪ್ದಾದಾರವರು ಇದೇ ಗಮನ ತರಿಸುತ್ತಿದ್ದಾರೆ - ತಮ್ಮ
ಭಕ್ತರ ಕಲ್ಯಾಣಕಾರಿ ಆಗಿರಿ ಏಕೆಂದರೆ ಈ ಸಂಗಮದ ಮಹತ್ವಿಕೆ ಬಹಳಷ್ಟಿದೆ. ಈಗ ಸಂಗಮಯುಗದಲ್ಲಿ ಏನು
ಬೇಕು, ಎಷ್ಟು ಬೇಕು ಅಷ್ಟು ತಂದೆಯಿಂದ ಸಹಯೋಗ ಸಿಗುತ್ತದೆ. ಅಂದಮೇಲೆ ಏನು ಮಾಡಬೇಕೆಂದು ಈಗ
ಕೇಳಿಸಿಕೊಂಡಿರಾ? ಮನಸ್ಸಾ ಸೇವೆಯನ್ನು ಹೆಚ್ಚಿಸಬೇಕಾಗಿದೆ. ತಮ್ಮ ಕಾರ್ಯದನುಸಾರ ಹೇಗೆ ಟ್ರಾಫಿಕ್
ಕಂಟ್ರೋಲ್ನ ಸಮಯವನ್ನು ನೊಂದಾಯಿಸಿದ್ದೀರಿ ಹಾಗೆಯೇ ಪ್ರತಿಯೊಬ್ಬರಿಗೂ ಮನಸ್ಸಾ ಸೇವೆಯ ಸಮಯವನ್ನೂ
ನೊಂದಣಿ ಮಾಡಬೇಕಾಗಿದೆ. ಯಾವಾಗ ಹೆಚ್ಚು ದುಃಖವಾಗುವುದು ಆ ಸಮಯದಲ್ಲಿ ಎಲ್ಲರ ಗಮನವು ಆ
ಏರುಪೇರಿನಲ್ಲಿರುತ್ತದೆ ಆದರೆ ಈಗ ಮನಸ್ಸಾ ಸೇವೆಯ ಸಮಯವಾಗಿದೆ ಆದ್ದರಿಂದ ತಾವು ಮಕ್ಕಳು
ಪ್ರತಿಯೊಬ್ಬರೂ ತಮ್ಮ ವಿಶ್ವ ಕಲ್ಯಾಣಿಯ ಸ್ವರೂಪವನ್ನು ಇಮರ್ಜ್ ಮಾಡಿಕೊಳ್ಳಬೇಕಾಗಿದೆ. ವಿಶ್ವ
ಕಲ್ಯಾಣದಲ್ಲಿ ಸ್ವ-ಕಲ್ಯಾಣವು ಸ್ವತಹ ಹಾಗೂ ಸಹಜವಾಗುವುದು ಏಕೆಂದರೆ ಒಂದುವೇಳೆ ಮನಸ್ಸೇನಾದರೂ ಫ್ರೀ
ಇದೆಯೆಂದರೆ ವ್ಯರ್ಥ ಬರುವುದು ಆದರೆ ಮನಸ್ಸು ಬ್ಯುಜಿಯಾಗಿರುತ್ತದೆಯೆಂದರೆ ವ್ಯರ್ಥವು ಸಹಜವಾಗಿಯೇ
ಸಮಾಪ್ತಿಯಾಗುವುದು. ಬಾಪ್ದಾದಾರವರು ಯಾವಾಗ ನಾಲ್ಕೂ ಕಡೆ ಪರಿಕ್ರಮಣ ಮಾಡಿ ದೇಶ-ವಿದೇಶದ ಅಜ್ಞಾನಿ
ಮಕ್ಕಳನ್ನು ನೋಡುತ್ತಾರೆ ಆಗ ದಯೆಬರುತ್ತದೆ ಆದ್ದರಿಂದ ತಾವೆಲ್ಲರೂ ಈಗ ದುಃಖಹರ್ತ-ಸುಖಕರ್ತ
ಆಗಬೇಕಾಗಿದೆ.
ಇಂದು ತಾವೆಲ್ಲರೂ ಹೋಲಿ
ಆಚರಿಸಲು ಬಂದಿದ್ದೀರಿ. ಪ್ರಪಂಚದವರು ಹೋಲಿ ಮತ್ತು ತಮ್ಮ ಹೋಲಿಯಲ್ಲಿ ಎಷ್ಟು ಅಂತರವಿದೆ. ಆದರೆ
ಬಾಪ್ದಾದಾರವರು ಮೊದಲೇ ಹೇಳಿದರು - ತಮ್ಮ ಭಕ್ತರು ತಾವು ಮಾಡಿರುವಂತಹ ಕಾರ್ಯವನ್ನು ಕಾಪಿ
ಮಾಡುವುದರಲ್ಲಿ ಬುದ್ಧಿವಂತರಾಗಿದ್ದಾರೆ ಏಕೆಂದರೆ ಈ ಎಲ್ಲಾ ವಿಧಿಗಳನ್ನು ದ್ವಾಪರದಲ್ಲಿ ಬರುವಂತಹ
ಆತ್ಮರು ಮಾಡಿದ್ದಾರೆ. ಅಂದಮೇಲೆ ಮೊಟ್ಟ ಮೊದಲ ಜನ್ಮವಾಗಿರುತ್ತದೆಯಲ್ಲವೆ ಆದ್ದರಿಂದ ಅವರ ಬುದ್ಧಿಯೂ
ಸಹ ಹೇಗೆ ನಿಯಮದಂತೆ ಮೊದಲು ಸತೋಪ್ರಧಾನವಾಗಿರುತ್ತಾರೆ ನಂತರ ರಜೋ, ತಮೋದಲ್ಲಿ ಬರುತ್ತಾರೆ ಅಂದಮೇಲೆ
ಆ ಸಮಯದಲ್ಲಿ ಅವರ ಬುದ್ಧಿಯನುಸಾರ ಸತೋ ಆಗಿತ್ತು ಆದರಿಂದ ತಮ್ಮ ಒಂದೊಂದು ವಿಶೇಷತೆಯನ್ನು ತಾವು ಸದಾ
ಉತ್ಸಾಹದಲ್ಲಿ ಖುಷಿಯಲ್ಲಿರುತ್ತೀರಿ, ಅದನ್ನು ಉತ್ಸವದ ರೂಪದಲ್ಲಿ ಆಚರಿಸುವುದನ್ನು
ಪ್ರಾರಂಭಿಸಿದ್ದಾರೆ. ಹೇಗೆ ಶಿವರಾತ್ರಿಯಲ್ಲಿಯೂ ತಿಳಿಸಿದೆವಲ್ಲವೆ - ಕಾಪಿ ಮಾಡುವುದರಲ್ಲಿ ಎಷ್ಟು
ಬುದ್ಧಿವಂತರಾಗಿದ್ದಾರೆ. ಹಾಗೆಯೇ ಈಗಲೂ ಸಹ ತಾವು ಸದಾ ಸಂಗಮದಲ್ಲಿ ಉತ್ಸಾಹದಲ್ಲಿರುತ್ತೀರಿ
ಆದ್ದರಿಂದ ತಮ್ಮ ಉತ್ಸಾಹವನ್ನು ಅವರು ಉತ್ಸವದ ರೂಪದಲ್ಲಿ ನೆನಪಾರ್ಥವಾಗಿ ಮಾಡಿದ್ದಾರೆ. ಅಂದಮೇಲೆ
ಹೋಲಿಯಲ್ಲಿ ಏನು ಮಾಡುತ್ತಾರೆ? ತಾವೂ ಸಹ ತಮ್ಮ ಜೀವನವನ್ನು ರಂಗಿತ ಮಾಡಿಕೊಂಡಿದ್ದೀರಿ ಆದರೆ ತಮ್ಮ
ರಂಗು ಯಾವುದಾಗಿದೆ? ತಮ್ಮೆಲ್ಲರ ರಂಗಾಗಿದೆ - ತಂದೆಯ ಸಂಗದ ರಂಗು ಅಂದಮೇಲೆ ಇಡೀ ಸಮಯ ತಂದೆಯ ಸಂಗದ
ರಂಗಿನಲ್ಲಿ ಇರುತ್ತೀರಲ್ಲವೆ! ಅಂದಮೇಲೆ ಅವರೂ ಸಹ ರಂಗನ್ನಾಗಿ ಮಾಡಿದರು ಆದರೆ
ದೇಹಾಭಿಮಾನವಿದೆಯಲ್ಲವೆ! ಆದ್ದರಿಂದ ಸ್ಥೂಲ ರಂಗನ್ನಾಗಿ ಮಾಡಿದ್ದಾರೆ ಆದರೆ ತಾವೆಲ್ಲರೂ ಸದಾ ಈ
ಕಲ್ಯಾಣಕಾರಿ ಸಂಗಮದಲ್ಲಿ ಈ ರಂಗಿನಲ್ಲಿ, ಸಂಗದ ರಂಗಿನಲ್ಲಿ ಇರುತ್ತೀರಲ್ಲವೆ! ರಂಗನ್ನು
ಹಾಕಿಕೊಂಡಿದ್ದೀರಲ್ಲವೆ! ಸಂಗದ ರಂಗಿನಿಂದ ರಂಗಿತರಾದಿರಿ ಮತ್ತು ಹೋಲಿ ಎನ್ನುವುದನ್ನು ಆಂಗ್ಲ
ಭಾಷೆಯಲ್ಲಿ ಪವಿತ್ರತೆ ಎಂದು ಹೇಳಲಾಗುತ್ತದೆ. ಅಂದಮೇಲೆ ಸಂಗದ ರಂಗಿನಲ್ಲಿ ತಾವು ಹೋಲಿ ಅರ್ಥಾತ್
ಪವಿತ್ರರಾಗುತ್ತೀರಿ. ಪವಿತ್ರರಾಗಿದ್ದೀರಲ್ಲವೇ! ಪವಿತ್ರತೆಯ ವ್ರತವನ್ನು ಎಲ್ಲರೂ ಪಕ್ಕಾ
ತೆಗೆದುಕೊಂಡಿದ್ದೀರಲ್ಲವೆ. ಭಲೆ ನಂಬರ್ವಾರ್ ಇರಬಹುದು ಆದರೆ ಬ್ರಾಹ್ಮಣರಾಗುವುದು ಎಂದರೆ
ಪವಿತ್ರತೆಯ ವ್ರತವನ್ನು ತೆಗೆದುಕೊಳ್ಳುವುದಾಗಿದೆ ಏಕೆಂದರೆ ತಂದೆಯು ಸದಾ ಪವಿತ್ರವಾಗಿದ್ದಾರೆ.
ಆಗಿರುವುದೇ ಪವಿತ್ರ ಸ್ವರೂಪ. ಆಗಬೇಕಾಗುವುದಿಲ್ಲ. ಸ್ವರೂಪವೇ ಪವಿತ್ರತೆಯಾಗಿದೆ ಅಂದಮೇಲೆ ಹೋಲಿಯ
ವಿಶೇಷತೆಯನ್ನು ತಿಳಿದಿದ್ದೀರಾ? ತಾವು ಪವಿತ್ರರಾಗುತ್ತೀರಿ ಆದರೆ ತಾವು ಸಂಗದ ರಂಗಿನಲ್ಲಿ ಡಬಲ್
ಪವಿತ್ರರಾಗುತ್ತೀರಿ. ಪವಿತ್ರ ಧರ್ಮಪಿತರು, ಮಹಾನ್ ಆತ್ಮರು ಆಗುತ್ತಾರೆ ಆದರೆ ಅವರು ಕೇವಲ
ಆತ್ಮವನ್ನು ಪವಿತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ಶರೀರ ಮತ್ತು ಆತ್ಮ ಎರಡೂ
ಪವಿತ್ರವಾಗಿರುವುದನ್ನು ತಾವು ಭವಿಷ್ಯದಲ್ಲಿ ಆಗುತ್ತೀರಿ. ಪ್ರಾರಂಭದಿಂದ ನೋಡಿ - ದ್ವಾಪರದಿಂದ
ಯಾರೆಲ್ಲರೂ ಬರುತ್ತಾರೆ ಪವಿತ್ರರಾಗಿ ಇದ್ದಾರೆ ಆದರೆ ಡಬಲ್ ಪವಿತ್ರರಾಗಿ ಯಾರೂ ಆಗಿರುವುದಿಲ್ಲ.
ಶರೀರವೂ ಪವಿತ್ರ, ಆತ್ಮವೂ ಪವಿತ್ರ. ತಾವು ಯಾವಾಗ ಭವಿಷ್ಯದಲ್ಲಿ ರಾಜ್ಯ ಅಧಿಕಾರಿಯಾಗುತ್ತೀರಿ ಆಗ
ಆತ್ಮ ಮತ್ತು ಶರೀರ ಎರಡೂ ಸಹ ಪವಿತ್ರವಾಗಿರುತ್ತದೆ. ಸೃಷ್ಟಿಚಕ್ರವನ್ನು ತಿರುಗಿಸಿ, ದ್ವಾಪರದಿಂದ
ಬಂದಿದ್ದಾರೆ, ದ್ವಾಪರದಿಂದ ಈಗಿನವರೆಗೂ ನೋಡಿ, ಯಾರಾದರೂ ಡಬಲ್ ಪವಿತ್ರರಾಗಿದ್ದಾರೆಯೇ! ಅಂದಮೇಲೆ
ತಾವೇಕೆ ಡಬಲ್ ಪವಿತ್ರ, ಇಷ್ಟು ಮಹಾನ್ ಆಗಿದ್ದೀರಿ? ಏಕೆಂದರೆ ತಮಗೆ ಯಾವ ರಂಗು ರಂಗಿತ ಮಾಡಿದೆ?
ಪರಮಾತ್ಮನ ಸಂಗದ ರಂಗು ಹರಡಿದೆ. ಅಂದಮೇಲೆ ಹೇಗೆ ಪರಮ ಆತ್ಮ ಪವಿತ್ರವಾಗಿದ್ದಾರೆ ಹಾಗೆಯೇ ತಾವೂ ಸಹ
21 ಜನ್ಮಗಳು ಡಬಲ್ ಪವಿತ್ರರಾಗಿರುತ್ತೀರಿ. ಸಂಗದ ರಂಗು ಇಷ್ಟು ಪಕ್ಕಾ ಇರುತ್ತದೆ ಅದರಿಂದ ಡಬಲ್
ಪವಿತ್ರರಾಗಿ ಬಿಡುತ್ತೀರಿ. ಮತ್ತು ಹೋಲಿಯ ಇನ್ನೊಂದು ಅರ್ಥವಾಗಿದೆ - ಹೋ-ಲಿ. ಆಗಿ ಹೋಯಿತು, ಏನು
ಕಳೆಯಿತು ಅದು ಕಳೆಯಿತು. ಹೋ ಲಿ. ಅಂದಮೇಲೆ ಹೋ ಲಿ ಮಾಡಲು ಬರುತ್ತದೆಯೇ? ಏನು ಆಗಿಹೋಗಿದೆ ಅದು ಆಗಿ
ಹೋಗಿದೆ. ಹೋ ಲಿ ಶಬ್ಧದ ಅರ್ಥವೇನಾಯಿತು? ಕಳೆದದ್ದು ಕಳೆಯಿತು. ಇದರಿಂದ ತಾವು 21 ಜನ್ಮಗಳಿಗಾಗಿ
ಡಬಲ್ ಹೋಲಿ ಆಗಿರುತ್ತೀರಿ. ಒಂದು ಜನ್ಮವಲ್ಲ ಏಕೆಂದರೆ ಸಂಗಮದ ಒಂದೊಂದು ಕ್ಷಣದ ಸಂಬಂಧವು 21
ಜನ್ಮಗಳ ಜೊತೆಯಿದೆ. ಇಲ್ಲಿ ತಾವೇನಾದರೂ ಒಂದುವೇಳೆ ಒಂದು ಸೆಕೆಂಡ್ ಅಥವ ಒಂದು ನಿಮಿಷವನ್ನು ಸಫಲ
ಮಾಡಿದಿರೆಂದರೆ ತಮ್ಮ 21 ಜನ್ಮಗಳು ಸಫಲವಾಗಿರುತ್ತದೆ. ಗ್ಯಾರಂಟಿ ಇದೆ. ಅಂದಮೇಲೆ ಇಂತಹ ಹೋಲಿ
ಆಚರಿಸಿದ್ದೀರಾ? ಹೋಲಿ ಆಚರಿಸಲು ಬರುತ್ತದೆಯೇ? ಏನು ಕಳೆಯಿತು ಅದು ಕಳೆದು ಹೋಯಿತು, ಹೋ ಲಿ. ಮತ್ತು
ಮೂರನೆಯ ರೂಪ ರೇಖೆಯಾಗಿ ಏನು ಮಾಡುವರು? ಮೊದಲು ಸುಡುತ್ತಾರೆ ನಂತರ ಆಚರಿಸುತ್ತಾರೆ. ಅಂದಮೇಲೆ
ತಾವೇನು ಮಾಡಿದಿರಿ? ಯೋಗಾಗ್ನಿಯಿಂದ ತಮ ಬಲಹೀನತೆಗಳನ್ನು, ಸಂಸ್ಕಾರಗಳನ್ನು ಅನೇಕ ಜನ್ಮಗಳಿಂದ ಯಾವ
ಉಲ್ಟಾ ಸಂಸ್ಕಾರವಿದೆ ಅದನ್ನು ಯೋಗಾಗ್ನಿಯಿಂದ ಸುಟ್ಟಿದ್ದೀರಲ್ಲವೆ! ಸುಟ್ಟಿದ್ದೀರಾ ಅಥವ ಈಗಲೂ
ಸುಡುತ್ತಿದ್ದೀರಾ? ಸುಟ್ಟಿದ್ದೀರಾ? ನಾವು ಯೋಗಾಗ್ನಿಯಿಂದ ನಮ್ಮ ಮೊದಲ ಸಂಸ್ಕಾರವನ್ನು
ಸುಟ್ಟಿದ್ದೇವೆ, ಸುಟ್ಟುಹೋಗಿದೆ ಎಂದು ಯಾರು ತಿಳಿಯುತ್ತೀರಿ ಅವರು ಕೈಯೆತ್ತಿರಿ. ಸುಟ್ಟು
ಹೋಗಿದೆಯೋ ಅಥವಾ ಈಗಲೂ ಬರುತ್ತದೆಯೋ? ಸ್ವಲ್ಪ ಸ್ವಲ್ಪ ಬರುತ್ತದೆಯೇ? ಯಾವಾಗ ತಮ್ಮ ಚಾರ್ಟನ್ನು
ಬಾಪ್ದಾದಾರವರಿಗೆ ಕಳುಹಿಸುತ್ತಾರೆ ಆಗ ಹೇಳುತ್ತಾರೆ-ಬಹಳಷ್ಟು ಹೊರಟುಹೋಗಿದೆ, ಹೇಳುವುದರಲ್ಲಿ
ಚತುರರಲ್ಲವೆ! ಹೇಳುತ್ತಾರೆ - ಬಹಳಷ್ಟು ಸಮಾಪ್ತಿಯಾಗಿದೆ, ಕೆಲವೊಮ್ಮೆ ಸ್ವಲ್ಪ ಇಮರ್ಜ್ ಆಗಿ
ಬಿಡುತ್ತದೆ. ಆದರೆ ಸುಡುವುದು ಎಂದರೆ ಸುಡುವುದು. ಸುಟ್ಟ ನಂತರ ಹೆಸರು-ಚಿಹ್ನೆಯೇ ಇರುವುದಿಲ್ಲ.
ಸಾಯಿಸಿದ ನಂತರ ಶರೀರದ ನೆನಪಾರ್ಥವಂತು ಕಂಡುಬರುತ್ತದೆ ಆದರೆ ಸುಟ್ಟ ನಂತರ ಸಮಾಪ್ತಿಯಾಗಿ
ಬಿಡುತ್ತದೆ. ಹೇಗೆ ರಾವಣನನ್ನೂ ನೋಡಿ, ಕೇವಲ ಸಾಯಿಸುವುದಿಲ್ಲ, ಅವಶ್ಯವಾಗಿ ಸುಟ್ಟರು. ಅದರ
ಹೆಸರು-ಚಿಹ್ನೆಯೇ ಸಮಾಪ್ತಿ ಮಾಡಿದರು ಅಂದಮೇಲೆ ತಾವೆಲ್ಲರೂ ಸಹ ತಮ್ಮನ್ನು ನೋಟ್ ಮಾಡಿ-
ಸಂಸ್ಕಾರಗಳನ್ನು ಸಾಯಿಸಿದಿರಾ ಅಥವಾ ಸುಟ್ಟಿದ್ದೀರಾ? ಭಸ್ಮ ಮಾಡಿದಿರಾ? ಹಳೆಯ
ಸಂಸ್ಕಾರಗಳನ್ನೇನಾದರೂ ಒಂದುವೇಳೆ ಸುಡಲಿಲ್ಲವೆಂದರೆ ಮಧ್ಯ-ಮಧ್ಯದಲ್ಲಿ ಇಮರ್ಜ್ ಆಗಿ ಬಿಡುತ್ತದೆ.
ಆದರೆ ಭಕ್ತರು ಇದೆಲ್ಲವನ್ನೂ ಕಾಪಿ ಮಾಡಿದ್ದಾರೆ. ತಾವು ಸುಡುತ್ತೀರಿ ಅವರೂ ಸುಡುತ್ತಾರೆ, ನಂತರ
ಆಚರಿಸುತ್ತಾರೆ. ಸುಡದೆ ಆಚರಿಸುವುದಿಲ್ಲ. ಅಂದಮೇಲೆ ತಾವಂತು ಸಂಸ್ಕಾರಗಳನ್ನು ಸುಡುತ್ತಾ ಹೋಲಿ ಆಗಿ
ಬಿಡುತ್ತೀರಿ. ಕೆಲವರು ಆಗುತ್ತಿದ್ದಾರೆ, ಕೆಲವರು ಆಗಿದ್ದಾರೆ. ಅಂದಮೇಲೆ ತಾವು ಹೋಲಿ ಆಚರಿಸಿದಿರಾ?
ತಂದೆಯ ಸಂಗದ ರಂಗಿನ ಹೋಲಿ ಆಚರಿಸಿದಿರಾ. ಈಗ ಸಂಗದಲ್ಲಿ ಕುಳಿತ್ತಿದ್ದೀರಲ್ಲವೆ ಅಂದಮೇಲೆ ಸಂಗದ
ರಂಗಿನ ಹೋಲಿ ಆಚರಿಸಿದಿರಲ್ಲವೆ. ಆಚರಿಸಿದಿರಾ? ಕೈಯೆತ್ತಿರಿ. ಆಚರಿಸಿದಿರಿ. ಹೋಲಿ ಆಚರಿಸುವುದು
ಎಂದರೆ ಹೋಲಿ ಆಗುವುದಾಗಿದೆ, ಪವಿತ್ರರಾಗುವುದಾಗಿದೆ. ಹೇಗೆ ತಂದೆಯಿದ್ದಾರೆ ಹಾಗೆಯೇ ಮಕ್ಕಳು
ಇದ್ದೀರಿ. ಒಂದುವೇಳೆ ತಮ್ಮ ಯಾವ ಸಂಸ್ಕಾರವೇನಾದರೂ ಪೂರ್ಣ ಸುಟ್ಟಿಲ್ಲ, ಇಮರ್ಜ್ ಆಗಿ
ಬಿಡುತ್ತದೆಯೆಂದರೆ ಚೆನ್ನಾಗಿರುತ್ತದೆಯೇ? ಸಂಕಲ್ಪ ಬರುತ್ತದೆಯಲ್ಲವೆ - ಈಗ ತೀವ್ರ
ಪುರುಷಾರ್ಥದಿಂದ ಇದನ್ನು ಸುಡಲೇಬೇಕು. ಸಾಯಿಸಬಾರದು, ಏನಾಗುತ್ತದೆ! ಕೆಲ ಕೆಲವು ಸಂಸ್ಕಾರಗಳನ್ನು
ಸಾಯಿಸಿದ್ದೀರಿ ಅಂದಮೇಲೆ ಸತ್ತು ಹೋಗಿರುವುದರಲ್ಲಿ ಕೆಲವೊಮ್ಮೆ ಮತ್ತೆ ಪ್ರಾಣ ಬಂದು ಬಿಡುತ್ತದೆ.
ಒಂದುವೇಳೆ ಸುಟ್ಟು ಬಿಡುತ್ತೀರೆಂದರೆ ಮತ್ತೆಂದಿಗೂ ಬರುವುದಿಲ್ಲ.
ಅಂದಮೇಲೆ ಇಂದು
ಸುಟ್ಟಿದ್ದೀರಾ ಅಥವಾ ಸಾಯಿಸಿರುವುದೇ ಸರಿಯಿದೆಯೇ? ಸುಡಲು ಶಕ್ತಿಯಿದೆಯೇ? ಶಕ್ತಿಯಿದೆಯೇ? ಸಂಕಲ್ಪ
ಮಾಡಬಲ್ಲಿರಾ? ಕೆಲವರು ಹೇಳುತ್ತಾರೆ - ಬಾಪ್ದಾದಾರವರೊಂದಿಗೆ ವಾರ್ತಾಲಾಪ ಮಾಡುತ್ತಾರಲ್ಲವೆ. ಬಹಳ
ಮಧುರಾತಿ ಮಧುರ ವಾರ್ತಾಲಾಪ ಮಾಡುತ್ತಾರೆ, ಹೇಳುತ್ತಾರೆ - ಬಾಬಾ, ನಾವಂತು ಬಹಳ ಪ್ರಯತ್ನ ಪಟ್ಟೆವು
ಆದರೂ ಆದರೂ ಬಂದು ಬಿಡುತ್ತದೆ. ಬಯಸುವುದಿಲ್ಲ ಆದರೆ ಬಂದು ಬಿಡುತ್ತದೆ. ಅದಕ್ಕೆ ಕಾರಣವೇನೆಂದು
ತಿಳಿದಿದೆಯೇ? ಸುಡುತ್ತೀರಿ, ಬಾಪ್ದಾದಾರವರು ನೋಡುತ್ತಾರೆ - ಬಹಳ ಪುರುಷಾರ್ಥ ಮಾಡುತ್ತಾರೆ ಆದರೆ
ಪುರುಷಾರ್ಥದ ಜೊತೆಯಲ್ಲಿ ಧೃಡಸಂಕಲ್ಪದ ಅವಶ್ಯಕತೆಯಿದೆ. ಧೃಡತೆಯು ಸಫಲತೆಯ ಬೀಗದ ಕೈ ಆಗಿದೆ.
ಧೃಡಸಂಕಲ್ಪ ಯಾವುದರಲ್ಲಿ ಮಾಡುತ್ತೀರಿ, ಧೃಡ ಎಂದರೆ ಅರ್ಥವೇ ಆಗಿದೆ - ಮತ್ತೆ ಹಿಂತಿರುಗುವುದಿಲ್ಲ
ಬರುವುದಿಲ್ಲ ಎಂದಾಗಿದೆ. ನಂತರ ತಿಳಿದಿದೆಯೇ - ಬಹಳ ಮಧುರಾತಿ ಮಧುರ ಮಾತುಗಳನ್ನಾಡುತ್ತಾರೆ -
ಬಯಸುವುದಿಲ್ಲ, ಬಂದುಬಿಡುತ್ತದೆ ಅಂದಮೇಲೆ ಶಕ್ತಿಯು ಕಡಿಮೆಯಿದೆಯಲ್ಲವೆ! ಧೃಡತೆಯು
ಕಡಿಮೆಯಿದೆಯಲ್ಲವೆ! ಧೃಡ ಸಂಕಲ್ಪಧಾರಿ ಆಗಿರಿ. ಮಾಡಲೇಬೇಕು. ಮತ್ತು ಆ ಧೃಡ ಸಂಕಲ್ಪವನ್ನು
ಪ್ರತಿದಿನ ಚೆಕ್ ಮಾಡಿ - ಯಾವ ಕಾರಣದಿಂದ ಮತ್ತೆ ಧೃಡತೆಯಲ್ಲಿ ಬಲಹೀನತೆ ಬಂದಿತು? ಮತ್ತು ಆ
ಪರಿಸ್ಥಿತಿಯ ಪ್ರತಿ ಗಮನ ಕೊಡಿ - ಇದು ಮತ್ತೆ ಬರಬಾರದು ಎಂದು ವಿಶೇಷ ಗಮನವಿರಲಿ. ಮಾಸ್ಟರ್
ಸರ್ವಶಕ್ತಿವಂತನ ಸೀಟಿನಲ್ಲಿ ಕುಳಿತು ಆ ಸಂಕಲ್ಪವನ್ನು, ಸಂಸ್ಕಾರವನ್ನು ಸಮಾಪ್ತಿ ಮಾಡಿ.
ಕೆಲಮಕ್ಕಳು ಹೇಳುತ್ತಾರೆ - ನಾವು ಕೆಲವೊಮ್ಮೆ ಅನುಭವ ಮಾಡುತ್ತೇವೆ, ಕೆಲವೊಮ್ಮೆ ಯಾವಾಗ ಯಾವುದೇ
ಶಕ್ತಿ ಬೇಕಾಗುತ್ತದೆಯಲ್ಲವೆ ಆಗ ಆ ಸಮಯದಲ್ಲಿ ಶಕ್ತಿ ಬರುವುದಿಲ್ಲ. ಹಾಗೆ ನೋಡಿದರೆ ಶಕ್ತಿಯಿದೆ
ಆದರೆ ಸಮಯದಲ್ಲಿ ಕೆಲವೊಮ್ಮೆ ಶಕ್ತಿಯನ್ನು ಇಮರ್ಜ್ ಮಾಡುತ್ತೀರಲ್ಲವೆ ಆಗಲೂ ಬರುವುದಿಲ್ಲ. ಮಾಸ್ಟರ್
ಶಕ್ತಿವಂತರೇ ಆಗಿದ್ದೀರಿ. ತಮ್ಮ ಟೈಟಲ್ ಏನಾಗಿದೆ? ಮಾಸ್ಟರ್ ಸರ್ವಶಕ್ತಿವಂತ ಮತ್ತೇನು ಹೇಳುತ್ತಾರೆ?
ಶಕ್ತಿಯು ಸಮಯದಲ್ಲಿ ಬರುವುದಿಲ್ಲ. ಕಾರಣ? ತಮ್ಮ ಮಾಸ್ಟರ್ ಸರ್ವಶಕ್ತಿವಂತನ ಸೀಟಿನಲ್ಲಿ ಸೆಟ್
ಆಗಿರುವುದಿಲ್ಲ. ಈಗ ಕಚೇರಿಯಲ್ಲಿಯೂ ಹೋಗಿ ಆಗ ಯಾರು ಕಾರ್ಯ ಮಾಡುವಂತಹವರಿಗೆ ಅಧಿಕಾರವಿರುತ್ತದೆ
ಅವರು ಆದೇಶ ಮಾಡುತ್ತಾರೆಂದರೆ ಒಪ್ಪಿಕೊಳ್ಳುತ್ತಾರಲ್ಲವೆ. ಹಾಗೆಯೇ ಬೇರೆಯವರು ಹೇಳಿದರೆ
ಒಪ್ಪಿಕೊಳ್ಳುತ್ತಾರೆಯೇ? ಅಂದಮೇಲೆ ತಮ್ಮ ಸೀಟ್ ಆಗಿದೆ - ಮಾಸ್ಟರ್ ಸರ್ವಶಕ್ತಿವಂತ. ಆ ಸೀಟಿನಲ್ಲಿ
ಸೆಟ್ ಆಗಿರುವುದಿಲ್ಲ, ಆಗ ಆಹ್ವಾನ ಮಾಡಿದರೂ ಸಹ ಸಮಯದಲ್ಲಿ ಶಕ್ತಿ ಬರುವುದಿಲ್ಲ, ಇದಕ್ಕಾಗಿ
ಬಾಪ್ದಾದಾರಾರು ಮತ್ತೆ-ಮತ್ತೆ ಹೇಳಿದ್ದಾರೆ - ತಮ್ಮ ಮನಸ್ಸನ್ನು ಬ್ಯುಜಿûಯಾಗಿ ಇಟ್ಟುಕೊಳ್ಳಿ.
ಕೆಲವೊಮ್ಮೆ ಕೆಲವು ಶಕ್ತಿಯನ್ನು ಇಡೀದಿನಲ್ಲಿ ಇಮರ್ಜ್ ಆಗಿಟ್ಟುಕೊಳ್ಳಿ, ಕೆಲವೊಮ್ಮೆ ಕೆಲವು
ಶಕ್ತಿಯನ್ನು ಇಮರ್ಜ್ ಇಟ್ಟುಕೊಂಡು ನೋಡಿ - ಅದರ ಶಕ್ತಿಯೇನಾಗಿದೆ? ಹೀಗೆ ಅನುಭವ ಮಾಡುತ್ತಿರಿ,
ತಮ್ಮ ಸೀಟಿನಲ್ಲಿ ಸೆಟ್ ಆಗಿರುತ್ತೀರೆಂದರೆ ಶಕ್ತಿಯು ತಮ್ಮಮುಂದೆ ಸದಾ ಜೀ ಹಾಜಿರ್ (ಆಯಿತು ಪ್ರಭು)
ಆಗಿರುತ್ತದೆ. ತಮ್ಮ ಶಕ್ತಿಯಾಗಿದೆಯಲ್ಲವೆ. ಅಂದಮೇಲೆ ಹೋಲಿ ಆಚರಿಸಿದಿರಾ? ತಾವಂತು ಸದಾ ಹೋಲಿ
ಆಚರಿಸುತ್ತಾ ಇರುತ್ತೀರಿ. ಸದಾ ತಂದೆಯ ಸಂಗದ ರಂಗನ್ನು ಹಾಕಿಕೊಳ್ಳುತ್ತಲೇ ಇರುತ್ತೀರಿ, ರಂಗಿನಲ್ಲಿ
ರಂಗಿತರಾಗಿದ್ದೀರಲ್ಲವೆ? ಒಳ್ಳೆಯದು.
ಬಾಪ್ದಾದಾರವರು
ಪ್ರತಿಯೊಬ್ಬ ಮಕ್ಕಳಿಗೂ ಒಂದು ಸ್ವಮಾನ ಕೊಡುತ್ತಾರೆ - ಪ್ರತಿಯೊಂದು ಮಗು ಧೃಡ ಸಂಕಲ್ಪಧಾರಿ ವಿಶೇಷ
ಆತ್ಮರಾಗಿರಿ. ಸಂಕಲ್ಪ ಮಾಡಿದಿರಿ ಮತ್ತು ಆಯಿತು, ಇದಕ್ಕೆ ಧೃಡ ಸಂಕಲ್ಪ ಎಂದು ಹೇಳಲಾಗುವುದು.
ಧೃಡಸಂಕಲ್ಪ ಮಾಡಿದ್ದೇವೆ ಎಂದು ಹೇಳುತ್ತೀರಿ ಆದರೆ ಧೃಡತೆಯ ಅರ್ಥವೇ ಆಗಿದೆ - ಸಫಲತೆ. ಒಂದುವೇಳೆ
ಸಫಲತೆಯಿಲ್ಲವೆಂದರೆ ಧೃಡತೆಯಿಲ್ಲವೆಂದು ಹೇಳಲಾಗುತ್ತದೆ. ಅಂದಮೇಲೆ ಈಗ ಧೃಡತಾ ಭವ! ಈ ತಮ್ಮ
ವಿಶೇಷವಾದ ಸ್ವಮಾನವನ್ನು ಪ್ರತಿನಿತ್ಯ ಅಮೃತವೇಳೆ ಸ್ಮೃತಿಯಲ್ಲಿ ತಂದುಕೊಳ್ಳಿ ಮತ್ತು
ವಿಧಿಪೂರ್ವಕವಾಗಿ ಮುಂದುವರೆಯಬೇಕಾಗಿದೆ. ಸಂಗಮಯುಗದ ಸಮಯವು ಬಹಳ ಪ್ರಿಯವಾಗಿದೆ, ಒಂದು ಸೆಕೆಂಡ್
ಅಲ್ಲ, ಒಂದು ಸೆಕೆಂಡ್ ಒಂದು ವರ್ಷದ ಪ್ರಾಪ್ತಿಗೆ ಸಮಾನವಾಗಿದೆ ಆದ್ದರಿಂದ ಬಾಪ್ದಾದಾರವರು
ಹೇಳುತ್ತಲೇ ಇರುತ್ತಾರೆ - ಒಂದು ಸೆಕೆಂಡ್ ಸಹ ವ್ಯರ್ಥವಾಗಿ ಕಳೆದು ಹೋಗಬಾರದು. ಒಂದು ಸಂಕಲ್ಪವೂ
ಸಹ ವ್ಯರ್ಥವಾಗಿ ಹೋಗಬಾರದು. ಸಮರ್ಥರಾಗಿರಿ ಮತ್ತು ಅನ್ಯರನ್ನು ಸಮರ್ಥರನ್ನಾಗಿ ಮಾಡಬೇಕಾಗಿದೆ.
ಸರಿಯಲ್ಲವೆ! ಒಳ್ಳೆಯದು.
ನಾಲ್ಕೂಕಡೆಯ ಹೋಲಿಯೆಸ್ಟ್
ಮಕ್ಕಳಿಗೆ ಯಾರು ಪ್ರತೀ ಹೆಜ್ಜೆಯಲ್ಲಿ ನನ್ನಬಾಬಾ ನನ್ನ ಬಾಬಾ ಎಂದು ಹೇಳುತ್ತಾ ಹಾರುತ್ತಿದ್ದೀರಿ,
ಮತ್ತು ಸದಾ ತಮ್ಮ ತೀವ್ರ ಪುರುಷಾರ್ಥದ ಮೂಲಕ ಮುಂದುವರೆಯುತ್ತಿದ್ದೀರಿ ಮತ್ತು ಮುಂದುವರೆಸುತ್ತಾ
ಇರುತ್ತೀರಿ ಇಂತಹ ಬಾಪ್ದಾದಾರವರ ಹೃದಯದ ಕಣ್ಮಣಿಗಳಿಗೆ ಬಾಪ್ದಾದಾರವರ ಬಹಳ ಬಹಳ ಬಹಳ ಬಹಳ ಹೃದಯದ
ಪ್ರೀತಿ ಕೊಡುತ್ತಿದ್ದಾರೆ. ಜೊತೆಯಲ್ಲಿ ಹೋಲಿಯ ಶುಭಾಷಯಗಳನ್ನು ಕೊಡುತ್ತಿದ್ದಾರೆ ಏಕೆಂದರೆ
ವಾಸ್ತವದಲ್ಲಿ ತಾವೇ ಹೋಲಿಯಾಗಿದ್ದೀರಿ ಮತ್ತು ಕೆಲವರಂತು ಡಬಲ್ ಹೋಲಿಯಂತು ಆಗುವುದಿಲ್ಲ. ತಾವೇ
ಡಬಲ್ ಹೋಲಿಯಾಗುತ್ತೀರಿ ಆದ್ದರಿಂದ ಪದಮಗುಣದ ಶುಭಾಷಯಗಳು, ಶುಭಾಷಯಗಳು.
ವರದಾನ:
ಸ್ವ ಯಂನ ಮೇಲೆ
ಬಾಪ್ದಾದಾರವರನ್ನು ಬಲಿಹಾರಿ ಮಾಡಿಸುವಂತಹ ತ್ಯಾಗ ಮೂರ್ತಿ, ನಿಶ್ಚಯ ಬುದ್ಧಿ ಭವ.
“ತಂದೆ ಸಿಕ್ಕಿದರು
ಎಲ್ಲವೂ ಸಿಕ್ಕಿತು” ಈ ನಶೆಯಲ್ಲಿ ಎಲ್ಲವನ್ನೂ ತ್ಯಾಗ ಮಾಡುವಂತಹ ಜ್ಞಾನ ಸ್ವರೂಪ, ನಿಶ್ಚಯ ಬುದ್ಧಿ
ಮಕ್ಕಳು ತಂದೆಯ ಮೂಲಕ ಯಾವಾಗ ಖುಷಿ, ಶಾಂತಿ, ಶಕ್ತಿ ಹಾಗೂ ಸುಖದ ಅನುಭೂತಿ ಮಾಡುತ್ತಾರೆ ಅಂದಾಗ
ಲೋಕ ಮರ್ಯಾದೆಯ ಬಗ್ಗೆಯೂ ಸಹ ಚಿಂತೆ ಮಾಡದೆ, ಸದಾ ಮುನ್ನಡೆಯುತ್ತಿರುತ್ತಾರೆ. ಅವರಿಗೆ ಈ
ಜಗತ್ತಿನದೆಲ್ಲವೂ ತುಚ್ಛ, ಸಾರವಿಲ್ಲದ್ದು ಎಂದು ಅನುಭವವಾಗುತ್ತದೆ. ಈ ರೀತಿಯ ತ್ಯಾಗ ಮೂರ್ತಿ,
ನಿಶ್ಚಯ ಬುದ್ಧಿ ಮಕ್ಕಳ ಮೇಲೆ ಬಾಪ್ದಾದಾ ತಮ್ಮ ಸರ್ವ ಸಂಪತ್ತಿನ ಸಹಿತ ಬಲಿಹಾರಿಯಾಗಿ ಬಿಡುತ್ತಾರೆ.
ಹೇಗೆ ಮಕ್ಕಳು ಸಂಕಲ್ಪ ಮಾಡುತ್ತಾರೆ ಬಾಬಾ ನಾವು ನಿಮ್ಮವರು ಎಂದು ಹಾಗೆಯೇ ಬಾಬಾರವರೂ ಸಹ
ಹೇಳುತ್ತಾರೆ ತಂದೆಯದೇನೆಲ್ಲ ಇದೆ ಅದು ನಿಮ್ಮದು ಎಂದು.
ಸ್ಲೋಗನ್:
ಯಾರು ತಮ್ಮ
ಎಲ್ಲಾ ಸಂಕಲ್ಪ ಹಾಗೂ ಕರ್ಮದಿಂದ ತಂದೆಯ ಸ್ನೇಹದ ಪ್ರಕಂಪನಗಳು (ವೈಬ್ರೇಷನ್) ಹರಡುತ್ತಿರುತ್ತಾರೆ,
ಅವರೇ ಸಹಜಯೋಗಿ ಆಗಿದ್ದಾರೆ.
ಅವ್ಯಕ್ತ ಸೂಚನೆ:-
ಬ್ರಹ್ಮಾ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯ ಅನುಭವ ಮಾಡಿ.
ನೀವೆಲ್ಲರೂ ಬ್ರಾಹ್ಮಣ
ಆತ್ಮರು ಜನ್ಮ ತೆಗೆದುಕೊಂಡಲೇ ಈ ವ್ರತ ತೆಗೆದುಕೊಂಡಿದ್ದೀರಿ ನಾವು ತಂದೆಯ ಸಮಾನ ಸಂಪನ್ನ ಮತ್ತು
ಸಂಪೂರ್ಣರಾಗಬೇಕು. ಹೇಗೆ ಎಲ್ಲರೂ ಎವರರೆಡಿ ಶಬ್ಧವನ್ನು ಹೇಳುತ್ತೀರಿ ಹಾಗೆಯೇ ಸಂಪನ್ನ ಮತ್ತು
ಸಂಪೂರ್ಣರಾಗುವುದರಲ್ಲಿ ಎವರರೆಡಿಯಾಗಿರಿ, ಇದರಲ್ಲಿ ಹುಡುಗಾಟಿಕೆ ಬರಬಾರದು.