02.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಎಲ್ಲದಕ್ಕಿಂತ ಮಧುರ ಶಬ್ಧವು "ಬಾಬಾ" ಆಗಿದೆ, ನಿಮ್ಮ ಮುಖದಿಂದ ಸದಾ ಬಾಬಾ-ಬಾಬಾ ಎಂದು ಬರುತ್ತಿರಲಿ,
ಎಲ್ಲರಿಗೆ ಶಿವ ತಂದೆಯ ಪರಿಚಯವನ್ನು ಕೊಡುತ್ತಾ ಇರಿ"
ಪ್ರಶ್ನೆ:
ಸತ್ಯಯುಗದಲ್ಲಿ
ಮನುಷ್ಯರಷ್ಟೆ ಅಲ್ಲ ಯಾವುದೇ ಪ್ರಾಣಿಗಳೂ ಸಹ ರೋಗಿಯಾಗುವುದಿಲ್ಲ - ಏಕೆ?
ಉತ್ತರ:
ಏಕೆಂದರೆ
ಸಂಗಮಯುಗದಲ್ಲಿ ತಂದೆಯು ಎಲ್ಲಾ ಆತ್ಮಗಳು ಹಾಗೂ ಬೇಹದ್ದಿನ ಸೃಷ್ಟಿಯನ್ನು ಈ ರೀತಿ ಆಪರೇಷನ್
ಮಾಡುತ್ತಾರೆ, ಇದರಿಂದ ರೋಗದ ಹೆಸರು-ಗುರುತೂ ಇರುವುದಿಲ್ಲ. ತಂದೆಯು ಅವಿನಾಶಿ ತಜ್ಞನಾಗಿದ್ದಾರೆ.
ಈಗ ಯಾವ ಇಡೀ ಸೃಷ್ಟಿಯು ರೋಗಿಯಾಗಿದೆಯೋ ಈ ಸೃಷ್ಟಿಯಲ್ಲಿ ನಂತರ ದುಃಖದ ಹೆಸರು, ಗುರುತೂ
ಇರುವುದಿಲ್ಲ. ಇಲ್ಲಿನ ದುಃಖಗಳಿಂದ ಪಾರಾಗಲು ಬಹಳ-ಬಹಳ ಬಹದ್ದೂರರಾಗಬೇಕಾಗಿದೆ.
ಗೀತೆ:
ನಿಮ್ಮನ್ನು
ಪಡೆದ ನಾನು ಇಡೀ ಜಗತ್ತನ್ನೇ ಪಡೆದೆನು..............
ಓಂ ಶಾಂತಿ.
ಡಬಲ್ ಓಂ ಶಾಂತಿ ಎಂದು ಹೇಳಬಹುದು. ಆತ್ಮವು ತನ್ನ ಪರಿಚಯವನ್ನು ಕೊಡುತ್ತಿದೆ, ನಾನಾತ್ಮ ಶಾಂತ
ಸ್ವರೂಪನಾಗಿದ್ದೇನೆ. ನನ್ನ ನಿವಾಸ ಸ್ಥಾನವು ಶಾಂತಿಧಾಮದಲ್ಲಿದೆ ಮತ್ತು ನಾವೆಲ್ಲರೂ ತಂದೆಯ
ಸಂತಾನರಾಗಿದ್ದೇವೆ. ಎಲ್ಲಾ ಆತ್ಮಗಳು ಓಂ ಎಂದು ಹೇಳುತ್ತಾರೆ, ಅಲ್ಲಿ ನಾವೆಲ್ಲರೂ
ಸಹೋದರ-ಸಹೋದರರಾಗಿದ್ದೆವು ಮತ್ತೆ ಇಲ್ಲಿ ಬಂದಾಗ ಸಹೋದರ-ಸಹೋದರಿಯರಾಗಿದ್ದೇವೆ. ಈಗ
ಸಹೋದರ-ಸಹೋದರಿಯಿಂದ ಸಂಬಂಧವು ಆರಂಭವಾಗುತ್ತದೆ. ತಂದೆಯು ತಿಳಿಸುತ್ತಾರೆ – ಎಲ್ಲರೂ ನನ್ನ
ಮಕ್ಕಳಾಗಿದ್ದೀರಿ, ಬ್ರಹ್ಮಾನಿಗೂ ನೀವು ಸಂತಾನರಾಗಿದ್ದೀರಿ ಆದ್ದರಿಂದ ಸಹೋದರ-ಸಹೋದರರಾದಿರಿ,
ನಿಮಗೆ ಮತ್ತ್ಯಾವುದೇ ಸಂಬಂಧವಿಲ್ಲ. ಪ್ರಜಾಪಿತನ ಸಂತಾನರು
ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿದ್ದೀರಿ. ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಲು ಈ
ಸಮಯದಲ್ಲಿಯೇ ತಂದೆಯು ಬರುತ್ತಾರೆ. ತಂದೆಯು ಬ್ರಹ್ಮಾರವರ ಮೂಲಕವೇ ಹೊಸ ಸೃಷ್ಟಿಯನ್ನು ರಚಿಸುತ್ತಾರೆ.
ಬ್ರಹ್ಮಾನೊಂದಿಗೂ ಸಂಬಂಧವಿದೆಯಲ್ಲವೆ. ಯುಕ್ತಿಯು ಎಷ್ಟು ಚೆನ್ನಾಗಿದೆ, ಎಲ್ಲರೂ
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕು
ಮತ್ತು ತಮ್ಮನ್ನು ಸಹೋದರ-ಸಹೋದರಿಯರೆಂದು ತಿಳಿಯಬೇಕಾಗಿದೆ. ವಿಕಾರಿ ದೃಷ್ಟಿಯಿರಬಾರದು. ಇಲ್ಲಂತೂ
ಕುಮಾರ-ಕುಮಾರಿಯರು ದೊಡ್ಡವರಾಗುತ್ತಾ ಹೋದಂತೆ ದೃಷ್ಟಿಯು ವಿಕಾರಿಯಾಗುತ್ತಾ ಹೋಗುತ್ತದೆ ಮತ್ತೆ
ಪತಿತ ಕೆಲಸಗಳನ್ನು ಮಾಡಿ ಬಿಡುತ್ತಾರೆ. ರಾವಣ ರಾಜ್ಯದಲ್ಲಿಯೇ ಪತಿತ ಕರ್ಮವಾಗುತ್ತದೆ,
ಸತ್ಯಯುಗದಲ್ಲಿ ಪತಿತ ಕರ್ಮಗಳಾಗುವುದಿಲ್ಲ, ವಿಕಾರಿ ಶಬ್ಧವೇ ಇರುವುದಿಲ್ಲ. ಇಲ್ಲಾದರೆ ಬಹಳಷ್ಟು
ವಿಕಾರಿತನವಿದೆ. ಅದಕ್ಕಾಗಿ ಕೋರ್ಟ್ ಇತ್ಯಾದಿಗಳೂ ಇವೆ, ಆದರೆ ಸತ್ಯಯುಗದಲ್ಲಿ ಈ ಕೋರ್ಟ್
ಇರುವುದಿಲ್ಲ. ಆಶ್ಚರ್ಯವಲ್ಲವೆ! ಜೈಲು, ಕಳ್ಳರು, ಪೋಲಿಸರು ಯಾರೂ ಇರುವುದಿಲ್ಲ. ಇಲ್ಲಿ
ನಡೆಯುತ್ತಿರುವುದೆಲ್ಲವೂ ದುಃಖದ ಮಾತುಗಳಾಗಿವೆ ಆದ್ದರಿಂದ ಮಕ್ಕಳಿಗೆ ತಿಳಿಸಲಾಗಿದೆ - ಇದು
ಸುಖ-ದುಃಖ, ಸೋಲು-ಗೆಲುವಿನ ಆಟವಾಗಿದೆ. ಇದನ್ನೂ ಸಹ ನೀವೆ ತಿಳಿದುಕೊಂಡಿದ್ದೀರಿ. ಮಾಯೆಯಿಂದ ಸೋಲು
ಎಂದು ಗಾಯನವಿದೆ, ಮಾಯೆಯ ಮೇಲೆ ತಂದೆಯು ಬಂದು ಅರ್ಧ ಕಲ್ಪಕ್ಕಾಗಿ ವಿಜಯವನ್ನು ಪ್ರಾಪ್ತಿ
ಮಾಡಿಸುತ್ತಾರೆ ಮತ್ತೆ ಅರ್ಧ ಕಲ್ಪ ಸೋಲಬೇಕಾಗುತ್ತದೆ. ಇದೇನೂ ಹೊಸ ಮಾತಲ್ಲ. ಇದು ಸಾಧಾರಣ,
ನಯಾಪೈಸೆಯ ಆಟವಾಗಿದೆ. ಮತ್ತೆ ನೀವು ನನ್ನನ್ನು ನೆನಪು ಮಾಡುತ್ತೀರೆಂದರೆ ಅರ್ಧಕಲ್ಪಕ್ಕಾಗಿ ತಮ್ಮ
ರಾಜ್ಯವನ್ನು ಪಡೆಯುತ್ತೀರಿ. ರಾವಣ ರಾಜ್ಯದಲ್ಲಿ ನನ್ನನ್ನು ಮರೆತು ಹೋಗುತ್ತೀರಿ. ರಾವಣನು
ಶತ್ರುವಾಗಿದ್ದಾನೆ, ಭಾರತವಾಸಿಗಳೇ ಪ್ರತೀ ವರ್ಷವು ರಾವಣನನ್ನು ಸುಡುತ್ತಾರೆ. ಯಾವ ದೇಶದಲ್ಲಿ ಬಹಳ
ಮಂದಿ ಭಾರತವಾಸಿಗಳಿರುವರು ಅಲ್ಲಿಯೂ ಸುಡುತ್ತಾರೆ. ಆಗ ಅದನ್ನು ನೋಡಿ ಇದು ಭಾರತವಾಸಿಗಳ
ಉತ್ಸವವಾಗಿದೆ ಎಂದು ಹೇಳುತ್ತಾರೆ. ದಶಹರವನ್ನು ಆಚರಿಸುತ್ತಾರೆ, ಅಂದಾಗ ಮಕ್ಕಳು ತಿಳಿಸಬೇಕು -
ಅದಂತೂ ಹದ್ದಿನ ಮಾತಾಗಿದೆ. ರಾವಣ ರಾಜ್ಯವು ಕೇವಲ ಲಂಕೆಯಷ್ಟೇ ಅಲ್ಲ, ಇಡೀ ವಿಶ್ವದಲ್ಲಿಯೇ ಇದೆ.
ವಿಶ್ವವು ಬಹಳ ದೊಡ್ಡದಲ್ಲವೆ. ತಂದೆಯು ತಿಳಿಸಿದ್ದಾರೆ - ಈ ಸೃಷ್ಟಿಯೆಲ್ಲವೂ ಸಾಗರದಲ್ಲಿ ನಿಂತಿದೆ.
ಕೆಳಗೆ ಒಂದು ಎತ್ತು ಹಾಗೂ ಹಸು ಇದೆ, ಅದರ ಕೋಡುಗಳ ಮೇಲೆ ಸೃಷ್ಟಿಯು ನಿಂತಿದೆ ಮತ್ತೆ ಅದಕ್ಕೆ
ಸುಸ್ತಾದಾಗ ಬದಲಾಯಿಸುತ್ತದೆ ಎಂದು ಮನುಷ್ಯರು ಹೇಳುತ್ತಾರೆ ಆದರೆ ಈ ಮಾತಂತೂ ಇಲ್ಲ. ಪೃಥ್ವಿಯು
ನೀರಿನಲ್ಲಿ ನಿಂತಿದೆ, ಪೃಥ್ವಿಯ ನಾಲ್ಕಾರು ಕಡೆ ನೀರಿದೆ ಅಂದಾಗ ಈಗ ಈಡೀ ಪ್ರಪಂಚದಲ್ಲಿ ರಾವಣ
ರಾಜ್ಯವಿದೆ. ಮತ್ತೆ ರಾಮ ರಾಜ್ಯ ಅಥವಾ ಈಶ್ವರೀಯ ರಾಜ್ಯವನ್ನು ಸ್ಥಾಪನೆ ಮಾಡಲು ತಂದೆಯೇ
ಬರಬೇಕಾಗುತ್ತದೆ. ಕೇವಲ ಈಶ್ವರನೆಂದು ಹೇಳಿದಾಗ ಈಶ್ವರನು ಸರ್ವಶಕ್ತಿವಂತನಾಗಿದ್ದಾನೆ, ಏನು
ಬೇಕಾದರೂ ಮಾಡಬಲ್ಲರೆಂದು ಹೇಳುತ್ತಾರೆ. ಅವರದು ವ್ಯರ್ಥ ಮಹಿಮೆಯಾಗುತ್ತದೆ. ಅವರ ಪ್ರತಿ ಅಷ್ಟು
ಪ್ರೀತಿಯಿರುವುದಿಲ್ಲ, ಆದ್ದರಿಂದ ಇಲ್ಲಿ ಈಶ್ವರನಿಗೆ ತಂದೆಯೆಂದು ಹೇಳಲಾಗುತ್ತದೆ. ತಂದೆಯೆಂದು
ಹೇಳಿದಾಗ ಆಸ್ತಿ ಸಿಗುವ ಮಾತು ಬರುತ್ತದೆ. ಶಿವ ತಂದೆಯು ತಿಳಿಸುತ್ತಾರೆ - ಯಾವಾಗಲೂ ಬಾಬಾ-ಬಾಬಾ
ಎಂದು ಹೇಳಬೇಕು. ಈಶ್ವರ, ಪ್ರಭು, ಮುಂತಾದ ಶಬ್ಧಗಳನ್ನು ಮರೆತು ಬಿಡಬೇಕು. ನನ್ನೊಬ್ಬನನ್ನೆ ನೆನಪು
ಮಾಡಿ ಎಂದು ತಂದೆಯು ತಿಳಿಸಿದ್ದಾರೆ. ಪ್ರದರ್ಶನಿ, ಮೊದಲಾದುವುಗಳಲ್ಲಿಯೂ ತಿಳಿಸುವಾಗ ಪುನಃ-ಪುನಃ
ಶಿವ ತಂದೆಯ ಪರಿಚಯ ಕೊಡಿ. ಶಿವ ತಂದೆಯೊಬ್ಬರೇ ಸರ್ವ ಶ್ರೇಷ್ಠನಾಗಿದ್ದಾರೆ, ಅವರಿಗೆ ಪರಮಪಿತ
ಪರಮಾತ್ಮನೆಂದು ಹೇಳುತ್ತಾರೆ. ಮುಸಲ್ಮಾನರು ಅಲ್ಲಾ ಎಂದು ಹೇಳುತ್ತಾರೆ. ಮುಂಜಾನೆಯಲ್ಲಿ 10 ನಿಮಿಷ
ಕುಳಿತು ಖುರಾನನ್ನು ಓದಿ ಅರ್ಥವನ್ನು ತಿಳಿಸುತ್ತಾರೆ - ಅಲ್ಲಾ ಹೇಳಿದ್ದಾರೆ, ಯಾರಿಗೂ ದುಃಖವನ್ನು
ಕೊಡಬಾರದು ಎಂದು. ತಂದೆಯು ತಿಳಿಸಿದ್ದಾರೆಂದು ಹೇಳುವುದಿಲ್ಲ, ಬಾಬಾ ಶಬ್ಧವು ಎಲ್ಲದಕ್ಕಿಂತ
ಮಧುರವಾಗಿದೆ. ಶಿವ ಬಾಬಾ, ಶಿವ ಬಾಬಾ ಎಂದು ಬಾಯಿಂದ ಹೊರಡುತ್ತದೆ. ಮುಖವು ಮನುಷ್ಯನದೇ ಆಗಿರಬೇಕು.
ಗೋಮುಖವಿರಲು ಸಾಧ್ಯವೇ? ನೀವು ಶಿವ ಶಕ್ತಿಯರಾಗಿದ್ದೀರಿ, ನಿಮ್ಮ ಮುಖ ಕಮಲದಿಂದ ಜ್ಞಾನಾಮೃತವು ಹೊರ
ಬರುತ್ತದೆ. ನಿಮ್ಮ ಹೆಸರನ್ನು ಪ್ರಸಿದ್ಧ ಮಾಡಲು ಗೋಮುಖವೆಂದು ಹೇಳಿ ಬಿಡುತ್ತಾರೆ. ನೀರಿಗೆ ಹೀಗೆ
ಹೇಳುವುದಿಲ್ಲ. ಮುಖ ಕಮಲದಿಂದ ಅಮೃತವು ಈಗ ಬರುತ್ತದೆ. ಈ ಜ್ಞಾನಾಮೃತವನ್ನು ಕುಡಿದ ಮೇಲೆ ವಿಷ (ವಿಕಾರ)
ವನ್ನು ಕುಡಿಯುವಂತಿಲ್ಲ. ಅಮೃತ ಕುಡಿಯುವುದರಿಂದ ನೀವು ದೇವತೆಗಳಾಗುತ್ತೀರಿ. ನಾವೀಗ ಅಸುರರನ್ನು
ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ. ನೀವು ದೈವೀ ಸಂಪ್ರದಾಯದವರಾಗುತ್ತಿದ್ದೀರಿ. ಸಂಗಮಯುಗವು
ಯಾವಾಗ ಮತ್ತು ಹೇಗಾಗುತ್ತದೆಯೆಂದು ಯಾರಿಗೂ ತಿಳಿದಿಲ್ಲ. ನಾವು ಬ್ರಹ್ಮಾಕುಮಾರ-ಕುಮಾರಿಯರು
ಪುರುಷೋತ್ತಮ ಸಂಗಮಯುಗಿಗಳಾಗಿದ್ದೇವೆಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ಉಳಿದೆಲ್ಲರೂ
ಕಲಿಯುಗಿಗಳಾಗಿದ್ದಾರೆ. ನೀವು ಸಂಗಮಯುಗದವರು ಕೆಲವರೇ ಇದ್ದೀರಿ, ನಿಮಗೆ ವೃಕ್ಷದ ಜ್ಞಾನವಿದೆ.
ವೃಕ್ಷವು ಮೊದಲು ಚಿಕ್ಕದಾಗಿರುತ್ತದೆ ನಂತರ ವೃದ್ಧಿಯನ್ನು ಹೊಂದುತ್ತದೆ. ಜನಸಂಖ್ಯೆಯನ್ನು ಹೇಗೆ
ಕಡಿಮೆ ಮಾಡುವುದೆಂದು ಎಷ್ಟೊಂದು ಯುಕ್ತಿಗಳನ್ನು ರಚಿಸುತ್ತಾರೆ ಆದರೆ ಮಾನವನು ಬಯಸುವುದೇ ಬೇರೆ,
ವಿಧಿಯು ಆಗುವುದೇ ಬೇರೆ. ಎಲ್ಲರ ಮೃತ್ಯುವಾಗಲೇಬೇಕಾಗಿದೆ. ಈಗೀಗ ನೋಡಿದರೆ ಬಹಳ ಚೆನ್ನಾಗಿ ಬೆಳೆ
ಬರುತ್ತದೆ ಮತ್ತೆ ಅತಿಯಾದ ಮಳೆ ಬಂದಿತೆಂದರೆ ಎಷ್ಟೊಂದು ನಷ್ಟವನ್ನುಂಟು ಮಾಡುತ್ತದೆ. ಪ್ರಾಕೃತಿಕ
ವಿಕೋಪಗಳನ್ನು ಯಾರೂ ತಿಳಿದುಕೊಂಡಿಲ್ಲ. ಯಾವುದೇ ಮಾತಿನ ನಿಯಮವೇ ಇಲ್ಲ. ಎಲ್ಲಿ ಬೆಳೆಯು ಚೆನ್ನಾಗಿ
ಆಗುವುದು ಅಲ್ಲಿ ಮಂಜು ಗಡ್ಡೆಗಳು ಬಿದ್ದಿತೆಂದರೆ ಎಷ್ಟೊಂದು ನಷ್ಟವಾಗುವುದು. ಮಳೆ ಬಾರದಿದ್ದರೂ
ನಷ್ಟವಾಗುವುದು. ಇದಕ್ಕೆ ಪ್ರಾಕೃತಿಕ ವಿಕೋಪಗಳೆಂದು ಹೇಳಲಾಗುತ್ತದೆ, ಇನ್ನು ಮುಂದೆ ಹೀಗೆ ಬಹಳಷ್ಟು
ಆಗುವುದಿದೆ. ಇದರಿಂದ ಪಾರಾಗಲು ಬಹಳ ಸಾಹಸವಂತರಾಗಬೇಕು. ಯಾರಿಗಾದರೂ ಆಪರೇಷನ್ ಆಗುತ್ತದೆ, ಅವರಿಂದ
ಅದನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲವೆಂದರೆ ಮೂರ್ಛಿತಗೊಳಿಸುತ್ತಾರೆ. ಈಗ ಇಡೀ ಪತಿತ
ಸೃಷ್ಟಿಯ ಆಪರೇಷನ್ ಆಗುವುದಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಎಲ್ಲರ ಆಪರೇಷನ್
ಮಾಡುತ್ತೇನೆ, ಇಡೀ ಸೃಷ್ಟಿಯು ರೋಗಿಯಾಗಿದೆ. ಅವಿನಾಶಿ ತಜ್ಞನೆಂಬುದು ತಂದೆಯ ಹೆಸರಾಗಿದೆ, ಇವರು
ಇಡೀ ವಿಶ್ವದ ಆಪರೇಷನ್ ಮಾಡುತ್ತಾರೆ, ಇದರ ನಂತರ ವಿಶ್ವದಲ್ಲಿರುವವರಿಗೂ ಎಂದೂ ದುಃಖವಿರುವುದಿಲ್ಲ.
ಎಷ್ಟು ದೊಡ್ಡ ವೈದ್ಯನಾಗಿದ್ದಾರೆ! ಆತ್ಮಗಳು ಹಾಗೂ ಬೇಹದ್ದಿನ ಸೃಷ್ಟಿಯ ಆಪರೇಷನ್
ಮಾಡುವವರಾಗಿದ್ದಾರೆ. ಅಲ್ಲಿ ಮನುಷ್ಯರೇನು, ಪ್ರಾಣಿಗಳೂ ಸಹ ರೋಗಿಯಾಗುವುದಿಲ್ಲ. ತಮ್ಮದು ಹಾಗೂ
ಮಕ್ಕಳ ಪಾತ್ರವು ಏನಾಗಿದೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ರಚನೆಯ ಆದಿ-ಮಧ್ಯ-ಅಂತ್ಯದ
ಜ್ಞಾನವೆಂದು ಇದಕ್ಕೆ ಹೇಳಲಾಗುತ್ತದೆ. ಇದನ್ನು ನೀವೇ ತೆಗೆದುಕೊಳ್ಳುತ್ತಿದ್ದೀರಿ – ಮಕ್ಕಳಿಗೆ
ಮೊಟ್ಟ ಮೊದಲಿಗೆ ಈ ಖುಷಿಯಿರಬೇಕು.
ಇಂದು ಸದ್ಗುರುವಾರವಾಗಿದೆ,
ಯಾವಾಗಲೂ ಸತ್ಯವನ್ನೇ ಹೇಳಬೇಕು. ವ್ಯಾಪಾರದಲ್ಲಿಯೂ ಸತ್ಯವನ್ನು ಹೇಳಿ, ಸುಳ್ಳು ಮಾತನ್ನು ಹೇಳಬೇಡಿ
ಎಂದು ಹೇಳುತ್ತಾರಲ್ಲವೆ. ಆದರೂ ಸಹ ಲೋಭದಲ್ಲಿ ಬಂದು ಹೆಚ್ಚು ಬೆಲೆಯನ್ನು ಹೇಳಿ ವ್ಯಾಪಾರ
ಮಾಡಿಕೊಳ್ಳುತ್ತಾರೆ. ಯಾರೂ ಸತ್ಯವನ್ನು ಹೇಳುವುದೇ ಇಲ್ಲ, ಸುಳ್ಳನ್ನೇ ಹೇಳುತ್ತಾರೆ ಆದ್ದರಿಂದ
ಸತ್ಯವನ್ನು ನೆನಪು ಮಾಡುತ್ತಾರೆ. ಸತ್ಯ ತಂದೆಯ ಸಂಗ ಮಾಡಿ ಎಂದು ಹೇಳುತ್ತಾರಲ್ಲವೆ. ಈಗ ನೀವು
ತಿಳಿದುಕೊಂಡಿದ್ದೀರಿ - ಯಾವ ತಂದೆಯು ಸತ್ಯವಾಗಿದ್ದಾರೆಯೋ ನಾವಾತ್ಮಗಳು ಅವರ ಸಂಗದಲ್ಲಿಯೇ
ನಡೆಯುತ್ತೇವೆ. ಈಗ ಸತ್ಯ ತಂದೆಯ ಜೊತೆ ನೀವಾತ್ಮಗಳ ಸಂಗವಿದೆ. ನೀವೇ ಜೊತೆಯಲ್ಲಿ ಹೋಗುತ್ತೀರಿ.
ನಿಮಗೆ ತಿಳಿದಿದೆ, ಶಿವ ತಂದೆಯು ಬಂದಿದ್ದಾರೆ, ಅವರಿಗೆ ಸತ್ಯನೆಂದು ಹೇಳಲಾಗುತ್ತದೆ. ಅವರು
ನಾವಾತ್ಮಗಳನ್ನು ಪವಿತ್ರರನ್ನಾಗಿ ಮಾಡಿ ಒಂದೇ ಬಾರಿ ಕರೆದುಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಿ
ಸತ್ಯ ತಂದೆಯ ಸಂಗ ಮಾಡಿ ಎಂದು ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ಈಗ ನಾನು ನೀವು ಮಕ್ಕಳ
ಬಳಿ ಬಂದಿದ್ದೇನೆ, ನಿಮ್ಮನ್ನು ನಯನಗಳ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತೇನೆ. ಈ
ನಯನಗಳಲ್ಲ, ಮೂರನೆಯೇ ನೇತ್ರವಾಗಿದೆ. ಈ ಸಮಯದಲ್ಲಿ ತಂದೆಯು ಬಂದಿದ್ದಾರೆ, ಜೊತೆ ಕರೆದುಕೊಂಡು
ಹೋಗುತ್ತಾರೆಂಬುದು ನಿಮಗೆ ತಿಳಿದಿದೆ. ವಾಸ್ತವದಲ್ಲಿ ಶಂಕರನ ಮೆರವಣಿಗೆಯಿಲ್ಲ. ಇದು ಶಿವನ ಮಕ್ಕಳ
ಮೆರವಣಿಗೆಯಾಗಿದೆ. ಅವರು ಪತಿಯರ ಪತಿಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ
ವಧುಗಳಾಗಿದ್ದೀರಿ ನಾನು ವರನಾಗಿದ್ದೇನೆ. ನೀವೆಲ್ಲರೂ ಪ್ರೇಮಿಕೆಯರು ನಾನು ಪ್ರಿಯತಮನಾಗಿದ್ದೇನೆ.
ಪ್ರಿಯತಮನು ಒಬ್ಬರೇ ಇರುವರಲ್ಲವೆ. ನೀವು ಅರ್ಧ ಕಲ್ಪದಿಂದ ನಾನು ಪ್ರಿಯತಮನಿಗೆ
ಪ್ರಿಯತಮೆಯರಾಗಿದ್ದೀರಿ. ಈಗ ನಾನು ಬಂದಿದ್ದೇನೆ, ಎಲ್ಲರೂ ಭಕ್ತಿನಿಯರಾಗಿದ್ದೀರಿ. ಭಕ್ತರ ರಕ್ಷಣೆ
ಮಾಡುವವರು ಭಗವಂತನಾಗಿದ್ದಾರೆ. ಆತ್ಮವು ಶರೀರದ ಜೊತೆ ಭಕ್ತಿ ಮಾಡುತ್ತದೆ. ಸತ್ಯ-ತ್ರೇತಾಯುಗದಲ್ಲಿ
ಭಕ್ತಿಯಿರುವುದಿಲ್ಲ. ಭಕ್ತಿಯ ಫಲವನ್ನು ಸತ್ಯಯುಗದಲ್ಲಿ ಭೋಗಿಸುತ್ತೀರಿ. ಅದನ್ನು ಈಗ ಮಕ್ಕಳಿಗೆ
ಕೊಡುತ್ತಿದ್ದೇನೆ. ನಾನು ನಿಮ್ಮ ಪ್ರಿಯತಮನಾಗಿದ್ದೇನೆ, ನಿಮ್ಮನ್ನು ಜೊತೆ ಕರೆದುಕೊಂಡು
ಹೋಗುತ್ತೇನೆ, ನಂತರ ನೀವು ತಮ್ಮ ಪುರುಷಾರ್ಥದನುಸಾರ ಹೋಗಿ ರಾಜ್ಯಭಾರವನ್ನು ಪಡೆಯುತ್ತೀರಿ. ಇದನ್ನು
ಎಲ್ಲಿಯೂ ಬರೆದಿಲ್ಲ. ಶಂಕರನು ಪಾರ್ವತಿಗೆ ಅಮರ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ.
ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ನಾನು ಕಥೆಯನ್ನು ತಿಳಿಸುವಂತಹ ಅಮರನಾಥನಾಗಿದ್ದೇನೆ. ಒಬ್ಬರಿಗೇ
ಅಮರನಾಥನೆಂದು ಹೇಳಲಾಗುವುದು. ತಂದೆಯು ಸರ್ವ ಶ್ರೇಷ್ಠನಾಗಿದ್ದಾರೆ ಅವರಿಗೆ ತಮ್ಮದೇ ಆದ ದೇಹವಿಲ್ಲ.
ನಾನು ಅಮರನಾಥನು ನೀವು ಮಕ್ಕಳಿಗೆ ಅಮರ ಕಥೆಯನ್ನು ತಿಳಿಸುತ್ತೇನೆಂದು ಹೇಳುತ್ತಾರೆ.
ಶಂಕರ-ಪಾರ್ವತಿಯು ಇಲ್ಲಿಗೆ ಎಲ್ಲಿಂದ ಬರಬೇಕು? ಅವರಂತೂ ಸೂಕ್ಷ್ಮವತನದಲ್ಲಿರುತ್ತಾರೆ ಎಲ್ಲಿ
ಸೂರ್ಯ-ಚಂದ್ರರ ಬೆಳಕು ತಲುಪುವುದಿಲ್ಲ.
ಸತ್ಯ ತಂದೆಯು ಈಗ ನಿಮಗೆ
ಸತ್ಯ ಕಥೆಯನ್ನು ತಿಳಿಸುತ್ತಾರೆ. ತಂದೆಯ ವಿನಃ ಸತ್ಯ ಕಥೆಯನ್ನು ಯಾರೂ ತಿಳಿಸಲು ಸಾಧ್ಯವಿಲ್ಲ.
ಇದನ್ನೂ ಸಹ ತಿಳಿದುಕೊಂಡಿದ್ದೀರಿ, ವಿನಾಶವಾಗುವುದರಲ್ಲಿ ಸಮಯ ಹಿಡಿಸುತ್ತದೆ. ಎಷ್ಟು ದೊಡ್ಡ
ಪ್ರಪಂಚವಿದೆ, ಎಷ್ಟು ದೊಡ್ಡ-ದೊಡ್ಡ ಮನೆಗಳೆಲ್ಲವೂ ಬಿದ್ದು ಸಮಾಪ್ತಿಯಾಗುತ್ತದೆ. ಭೂಕಂಪದಲ್ಲಿ
ಎಷ್ಟೊಂದು ನಷ್ಟವಾಗುತ್ತದೆ, ಎಷ್ಟೊಂದು ಮಂದಿ ಸಾಯುತ್ತಾರೆ ನಂತರ ನಿಮ್ಮದು ಚಿಕ್ಕ ವೃಕ್ಷವಿರುವುದು.
ದೆಹಲಿಯು ಸ್ವರ್ಗವಾಗಿ ಬಿಡುವುದು. ಒಂದೇ ಸ್ವರ್ಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವು ನಡೆಯುತ್ತದೆ.
ಎಷ್ಟು ದೊಡ್ಡ-ದೊಡ್ಡ ಮಹಲುಗಳು ತಯಾರಾಗುತ್ತವೆ, ಬೇಹದ್ದಿನ ಆಸ್ತಿಯು ಸಿಗುತ್ತದೆ. ನೀವು ಏನನ್ನೂ
ಖರ್ಚು ಮಾಡಬೇಕಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಇವರ (ಬ್ರಹ್ಮಾ) ಜೀವನದಲ್ಲಿಯೇ ಮೊದಲು
ದವಸ-ಧಾನ್ಯಗಳು ಎಷ್ಟು ಸಸ್ತಾ ಆಗಿತ್ತು, ಅಂದಮೇಲೆ ಸತ್ಯಯುಗದಲ್ಲಿ ಇನ್ನೆಷ್ಟು ಹೇರಳವಾಗಿರಬಹುದು!
ಒಬ್ಬೊಬ್ಬರ ಮನೆ ಮಾತ್ತು ಜಮೀನು ದೆಹಲಿಯಷ್ಟಿರುತ್ತದೆ. ಸಿಹಿ ನೀರಿನ ನದಿಗಳ ದಡದಲ್ಲಿ ನಿಮ್ಮ
ರಾಜ್ಯವಿರುತ್ತದೆ. ಒಬ್ಬೊಬ್ಬರಿಗೂ ಏನು ತಾನೆ ಇರುವುದಿಲ್ಲ? ಸದಾ ಯಥೇಚ್ಛವಾಗಿ ಆಹಾರವು
ಸಿಗುತ್ತಿರುತ್ತದೆ, ಅಲ್ಲಿನ ಹೂ-ಹಣ್ಣುಗಳನ್ನು ನೋಡುತ್ತೀರಿ ಎಷ್ಟು ದೊಡ್ಡ-ದೊಡ್ಡದಾಗಿರುತ್ತವೆ.
ನೀವು ಸಾಕ್ಷಾತ್ಕಾರದಲ್ಲಿ ಶೂಬೀ ರಸವನ್ನೂ ಕುಡಿದು ಬರುತ್ತೀರಿ. ಮೊದಲು ಸಾಕ್ಷಾತ್ಕಾರವಾದಾಗ
ಹೇಳುತ್ತಿದ್ದರು, ಅಲ್ಲಿ ಹೂದೋಟದ ಮಾಲಿಯಿದ್ದಾರೆಂದು. ಅಂದಮೇಲೆ ಅವಶ್ಯವಾಗಿ ಮಾಲೆಯು ವೈಕುಂಠದಲ್ಲಿ
ಅಥವಾ ನದಿ ತೀರದಲ್ಲಿ ಇರುವರಲ್ಲವೆ. ಅಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಇಷ್ಟೊಂದು
ಕೋಟ್ಯಾಂತರ ಮಂದಿಯಲ್ಲಿ ಕೇವಲ 9 ಲಕ್ಷವೆಲ್ಲಿ! ಅಲ್ಲಿ ಎಲ್ಲವೂ ನಿಮ್ಮದಾಗಿರುವುದು. ತಂದೆಯು ಈಗ
ಇಂತಹ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅದನ್ನು ನನ್ನಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.
ಆಕಾಶ, ಭೂಮಿ ಎಲ್ಲದಕ್ಕೂ ನೀವು ಮಾಲೀಕರಾಗಿ ಬಿಡುತ್ತೀರಿ. ಮಕ್ಕಳು ಗೀತೆಯನ್ನು ಕೇಳಿದಿರಿ,
ಇಂತಿಂತಹ 6-8 ಒಳ್ಳೊಳ್ಳೆಯ ಗೀತೆಗಳು ನಿಮ್ಮ ಬಳಿ ಇರಲಿ. ಅದನ್ನು ಕೇಳಿದ ಕೂಡಲೇ ಖುಷಿಯಾಗಿ
ಬಿಡುತ್ತದೆ. ಸ್ಥಿತಿಯಲ್ಲಿ ಸ್ವಲ್ಪ ಏರುಪೇರಾದರೂ ಸಹ ಹಾಡುಗಳನ್ನು ಕೇಳಿರಿ. ಇದು ಖುಷಿಯ
ಗೀತೆಯಾಗಿದೆ. ನೀವು ಇದರ ಅರ್ಥವನ್ನೂ ತಿಳಿದುಕೊಂಡಿದ್ದೀರಿ. ತಂದೆಯು ತಮ್ಮನ್ನು
ಹರ್ಷಿತಮುಖಿಯನ್ನಾಗಿ ಮಾಡಿಕೊಳ್ಳಲು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಬಾಬಾ ನಮಗೆ ಇಷ್ಟು
ಖುಷಿಯಿರುವುದಿಲ್ಲ, ಮಾಯೆಯ ಬಿರುಗಾಳಿಗಳು ಬರುತ್ತವೆ ಎಂದು ತಂದೆಗೆ ಬರೆಯುತ್ತಾರೆ. ಅರೆ! ಮಾಯೆಯ
ಬಿರುಗಾಳಿಗಳು ಬಂದರೆ ನೀವು ಹಾಡನ್ನು ಕೇಳುತ್ತಾ ಹೋಗಿ. ಖುಷಿಗಾಗಿ ದೊಡ್ಡ-ದೊಡ್ಡ ಮಂದಿರಗಳಲ್ಲಿಯೂ
ಬಾಗಿಲಿನಲ್ಲಿಯೇ ಯಾವಾಗಲೂ ಹಾಡನ್ನು ಹಾಕಿರುತ್ತಾರೆ. ಬಾಂಬೆಯ ಮಾದವ ಭಾಗ್ನಲ್ಲಿ
ಲಕ್ಷ್ಮೀ-ನಾರಾಯಣರ ಮಂದಿರದ ಬಾಗಿಲಿನಲ್ಲಿಯೇ ಯಾವಾಗಲೂ ಹಾಡುಗಳನ್ನು ಹಾಕಿರುತ್ತಾರೆ. ಕೆಲವರು ನೀವು
ಏಕೆ ಈ ಸಿನಿಮಾದ ಹಾಡುಗಳನ್ನು ಹಾಕುತ್ತೀರೆಂದು ಕೇಳುತ್ತಾರೆ. ಡ್ರಾಮಾನುಸಾರ ಇವೂ ಸಹ ಕೆಲಸಕ್ಕೆ
ಬರುವ ವಸ್ತುಗಳೆಂದು ಅವರಿಗೇನು ಗೊತ್ತು? ಇದರ ಅರ್ಥವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ.
ಇದನ್ನು ಕೇಳುವುದರಿಂದ ಖುಷಿಯಲ್ಲಿ ಬಂದು ಬಿಡುತ್ತೀರಿ. ಆದರೆ ಮಕ್ಕಳು ಮರೆತು ಹೋಗುತ್ತೀರಿ.
ಮನೆಯಲ್ಲಿ ಯಾರಿಗಾದರೂ ಚಿಂತೆಯಿದ್ದರೂ ಸಹ ಹಾಡುಗಳನ್ನು ಕೇಳಿದೊಡನೆಯೇ ಖುಷಿಯಾಗಿ ಬಿಡುತ್ತಾರೆ.
ಇದು ಬಹಳ ಅಮೂಲ್ಯ ವಸ್ತುವಾಗಿದೆ. ಯಾರ ಮನೆಯಲ್ಲಾದರೂ ಕಲಹವಾಯಿತೆಂದರೆ ತಿಳಿಸಿ, ಭಗವಾನುವಾಚ -
ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿದರೆ ನಾವು ವಿಶ್ವದ ಮಾಲೀಕರಾಗುತ್ತೇವೆ ನಂತರ ಪುಷ್ಫ
ವರ್ಷವಾಗುವುದು, ಜಯ ಜಯಕಾರವಾಗುವುದು. ಚಿನ್ನದ ಹೂವಿನ ಮಳೆಯಾಗುತ್ತದೆ. ನೀವೀಗ ಮುಳ್ಳಿನಿಂದ
ಚಿನ್ನದ ಹೂಗಳಾಗುತ್ತಿದ್ದೀರಲ್ಲವೆ. ನಂತರ ನಿಮ್ಮ ಅವತರಣೆಯಾಗುವುದು. ಹೂವಿನ ಮಳೆಯಾಗುವುದಿಲ್ಲ
ಆದರೆ ನೀವೇ ಹೂವಾಗಿ ಬರುತ್ತೀರಿ. ಚಿನ್ನದ ಹೂಗಳೇ ಬೀಳುತ್ತವೆಯೆಂದು ಮನುಷ್ಯರು ತಿಳಿಯುತ್ತಾರೆ.
ಒಬ್ಬ ರಾಜಕುಮಾರನು ವಿದೇಶಕ್ಕೆ ಹೋದರು, ಅಲ್ಲಿ ಪಾರ್ಟಿಯಿತ್ತು, ಅವರಿಗಾಗಿ ಚಿನ್ನದ ಹೂಗಳನ್ನು
ಮಾಡಿಸಿದರು, ಎಲ್ಲರ ಮೇಲೆ ಹಾಕಿದರು. ಖುಷಿಯಿಂದಾಗಿ ಇಷ್ಟು ಕಾತರಿ ಮಾಡಿದರು. ನಿಜವಾಗಿಯೂ ಚಿನ್ನದ
ಹೂಗಳನ್ನು ಮಾಡಿಸಿದರು. ಬ್ರಹ್ಮಾ ತಂದೆಯು ಅವರ ಪ್ರಾಂತ್ಯ ಇತ್ಯಾದಿಗಳನ್ನು ಚೆನ್ನಾಗಿ
ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ನೀವೇ ಹೂವಿನ ಸಮಾನವಾಗಿ ಬರುತ್ತೀರಿ. ಚಿನ್ನದ ಹೂಗಳಾದ ನೀವು
ಮೇಲಿನಿಂದ ಇಳಿಯುತ್ತೀರಿ. ನೀವು ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯದ ಎಷ್ಟು ದೊಡ್ಡ ಲಾಟರಿ
ಸಿಗುತ್ತಿದೆ. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ನಾನು ನಿಮಗಾಗಿ ಇದನ್ನು ತಂದಿದ್ದೇನೆಂದರೆ
ಮಕ್ಕಳಿಗೆ ಎಷ್ಟೊಂದು ಖುಷಿಯಾಗುತ್ತದೆ. ಹಾಗೆಯೇ ತಂದೆಯು ತಿಳಿಸುತ್ತಾರೆ - ನಿಮಗಾಗಿ ಸ್ವರ್ಗವನ್ನು
ತಂದಿದ್ದೇನೆ. ನೀವು ಅಲ್ಲಿ ರಾಜ್ಯಭಾರ ಮಾಡುತ್ತೀರಿ ಅಂದಮೇಲೆ ಎಷ್ಟು ಖುಷಿಯಾಗಬೇಕು! ಯಾರಿಗಾದರೂ
ಚಿಕ್ಕದಾದ ಉಡುಗೊರೆಯನ್ನು ಕೊಡುತ್ತಾರೆಂದರೆ ಹೇಳುತ್ತಾರೆ - ಬಾಬಾ, ತಾವಂತೂ ವಿಶ್ವದ
ರಾಜ್ಯಭಾಗ್ಯವನ್ನೇ ಕೊಡುತ್ತೀರಿ, ಅದರ ಮುಂದೆ ಈ ಉಡುಗೊರೆ ಏತಕ್ಕಾಗಿ ಎಂದು ಹೇಳುತ್ತಾರೆ. ಅರೆ!
ಶಿವ ತಂದೆಯ ನೆನಪಾರ್ಥವು ಜೊತೆಯಿದ್ದರೆ ಶಿವ ತಂದೆಯ ನೆನಪಿರುವುದು ಮತ್ತು ನಿಮಗೆ ಪದುಮದಷ್ಟು
ಪ್ರಾಪ್ತಿಯಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸತ್ಯ ತಂದೆಯ
ಜೊತೆ ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ ಸದಾ ಸತ್ಯವಂತರಾಗಬೇಕಾಗಿದೆ, ಎಂದೂ ಸುಳ್ಳು
ಹೇಳಬಾರದಾಗಿದೆ.
2. ನಾವು ಬ್ರಹ್ಮಾ
ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರಿಯರಾಗಿದ್ದೇವೆ, ಆದ್ದರಿಂದ ಯಾವುದೇ ಪತಿತ ಕರ್ಮ ಮಾಡಬಾರದು.
ಸಹೋದರ-ಸಹೋದರಿ ಮತ್ತು ಸಹೋದರ-ಸಹೋದರರೆಂಬ ಸಂಬಂಧದ ವಿನಃ ಮತ್ತ್ಯಾವುದೇ ಸಂಬಂಧದ ಪರಿವೆಯಿರಬಾರದು.
ವರದಾನ:
ನೆನಪಿನ ಬಲದಿಂದ
ತಮ್ಮ ಅಥವಾ ಅನ್ಯರ ಶ್ರೇಷ್ಠ ಪುರುಷಾರ್ಥದ ಗತಿವಿಧಿಯನ್ನು ತಿಳಿಯುವಂತಹವರು ಮಾಸ್ಟರ್
ತ್ರಿಕಾಲದರ್ಶಿ ಭವ.
ಹೇಗೆ ವಿಜ್ಞಾನದವರು
ಪೃತ್ವಿಯಿಂದ ಅಂತರಿಕ್ಷದಲ್ಲಿ ಹೋಗುವಂತಹವರ ಪ್ರತಿಯೊಂದು ಗತಿ-ವಿಧಿಯನ್ನು ತಿಳಿದುಕೊಳ್ಳಲು ಸಾಧ್ಯ.
ಅದೇರೀತಿ ತಾವು ತ್ರಿಕಾಲದರ್ಶಿ ಮಕ್ಕಳು ಸೈಲೆನ್ಸ್ ಅರ್ಥಾತ್ ನೆನಪಿನ ಬಲದಿಂದ ತಮ್ಮ ಅಥವಾ ಅನ್ಯರ
ಶ್ರೇಷ್ಠ ಪುರುಷಾರ್ಥ ಅಥವಾ ಸ್ಥಿತಿಯ ಗತಿ ವಿಧಿಯನ್ನು ಸ್ಪಷ್ಠವಾಗಿ ತಿಳಿದುಕೊಳ್ಳಬಲ್ಲಿರಿ.
ದಿವ್ಯ ಬುದ್ಧಿಯವರಾಗುವುದರಿಂದ, ನೆನಪಿನ ಶುದ್ಧ ಸಂಕಲ್ಪದಲ್ಲಿ ಸ್ಥಿತರಾಗುವುದರಿಂದ ತ್ರಿಕಾಲದರ್ಶಿ
ಭವದ ವರದಾನ ಪ್ರಾಪ್ತಿಯಾಗಿ ಬಿಡುವುದು ಮತ್ತು ಹೊಸ-ಹೊಸ ಪ್ಲಾನ್ಗಳನ್ನು ಕಾರ್ಯ ರೂಪದಲ್ಲಿ
ತರುವುದಕ್ಕಾಗಿ ಸ್ವತಃವಾಗಿ ಇಮರ್ಜ್ ಆಗುವುದು.
ಸ್ಲೋಗನ್:
ಸರ್ವರ
ಸಹಯೋಗಿಯಾಗಿ ಆಗ ಸ್ನೇಹ ಸ್ವತಃ ಪ್ರಾಪ್ತಿಯಾಗುತ್ತಾ ಹೋಗುವುದು.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ನಮಗೆ ಸೇವೆಯ
ಅವಕಾಶವಿಲ್ಲವೆಂದು ಯಾರೂ ಹೇಳಬಾರದು. ಯಾವುದೇ ವಾಚಾ ಸೇವೆ ಮಾಡಲಾಗುವುದಿಲ್ಲವೆಂದರೆ ಮನಸ್ಸಾ
ವಾಯುಮಂಡಲದಿಂದ ಸುಖದ ವೃತ್ತಿ, ಸುಖಮಯ ಸ್ಥಿತಿಯಿಂದ ಸೇವೆ ಮಾಡಿ. ಆರೋಗ್ಯ ಸರಿಯಿಲ್ಲವೆಂದರೆ
ಮನೆಯಲ್ಲಿ ಕುಳಿತಲ್ಲಿಯೇ ಸಹಯೋಗಿಯಾಗಿರಿ, ಕೇವಲ ಮನಸ್ಸಾದಲ್ಲಿ ಶುದ್ಧ ಸಂಕಲ್ಪಗಳ ಸ್ಟಾಕ್ ಜಮಾ
ಮಾಡಿ, ಶುಭ ಭಾವನೆಗಳಿಂದ ಸಂಪನ್ನರಾಗಿ.