04.10.25         Morning Kannada Murli       Om Shanti           BapDada Madhuban


"ಮಧುರ ಮಕ್ಕಳೇ – ಶ್ರೇಷ್ಠಾತಿ ಶ್ರೇಷ್ಠರಾಗಲು ಸ್ವಯಂ ಭಗವಂತನು ನಿಮಗೆ ಶ್ರೇಷ್ಠ ಮತವನ್ನು ಕೊಡುತ್ತಿದ್ದಾರೆ, ಇದರಿಂದ ನೀವು ನರಕವಾಸಿಗಳಿಂದ ಸ್ವರ್ಗವಾಸಿಗಳಾಗಿ ಬಿಡುತ್ತೀರಿ"

ಪ್ರಶ್ನೆ:
ದೇವತೆಗಳಾಗುವಂತಹ ಮಕ್ಕಳು ವಿಶೇಷವಾಗಿ ಯಾವ ಮಾತುಗಳ ಮೇಲೆ ಗಮನವಿಡಬೇಕಾಗಿದೆ?

ಉತ್ತರ:
ಎಂದೂ ಯಾವುದೇ ಮಾತಿನಲ್ಲಿ ಮುನಿಸಿಕೊಳ್ಳಬಾರದು, ಚಹರೆಯನ್ನು ಶವದಂತೆ ಮಾಡಿಕೊಳ್ಳಬಾರದು, ಯಾರಿಗೂ ದುಃಖವನ್ನು ಕೊಡಬಾರದು, ದೇವತೆಗಳಾಗಬೇಕೆಂದರೆ ಬಾಯಿಂದ ಸದಾ ಹೂಗಳೇ ಹೊರ ಬರಲಿ. ಒಂದುವೇಳೆ ಮುಳ್ಳುಗಳು ಅಥವಾ ಕಲ್ಲುಗಳಂತಹ ಮಾತುಗಳು ಬರುತ್ತವೆಯೆಂದರೆ ಕಲ್ಲಿಗೆ ಕಲ್ಲಾಗಿಯೇ ಉಳಿಯುವರು. ಬಹಳ ಒಳ್ಳೆಯ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕಾಗಿದೆ. ಶಿಕ್ಷೆಗಳನ್ನನುಭವಿಸಿದರೆ ಮತ್ತೆ ಒಳ್ಳೆಯ ಪದವಿ ಸಿಗುವುದಿಲ್ಲ.

ಓಂ ಶಾಂತಿ.
ಹೊಸ ವಿಶ್ವ ಅಥವಾ ಹೊಸ ಪ್ರಪಂಚದ ಮಾಲೀಕರಾಗಲಿರುವ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಾರೆ - ಇದಂತೂ ಮಕ್ಕಳಿಗೆ ತಿಳಿದಿದೆ, ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನಾವು ಯೋಗ್ಯರಿರಲಿಲ್ಲ. ಹೇ ಪ್ರಭು ನಾನು ಯೋಗ್ಯನಿಲ್ಲ, ನನ್ನನ್ನು ಯೋಗ್ಯನನ್ನಾಗಿ ಮಾಡಿ ಎಂದು ಹೇಳುತ್ತಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವೂ ಮನುಷ್ಯರಾಗಿದ್ದೀರಿ, ಈ ದೇವತೆಗಳೂ ಮನುಷ್ಯರಾಗಿದ್ದಾರೆ ಆದರೆ ಇವರಲ್ಲಿ ದೈವೀ ಗುಣಗಳಿವೆ. ಇವರಿಗೆ ಸತ್ಯ-ಸತ್ಯವಾದ ಮನುಷ್ಯರೆಂದು ಹೇಳುತ್ತಾರೆ. ಮನುಷ್ಯರಲ್ಲಿ ಆಸುರೀ ಗುಣಗಳಿದ್ದರೆ ಅವರಿಗೆ ಅಸುರರೆಂದು ಹೇಳಲಾಗುತ್ತದೆ. ಚಲನೆಯು ಪ್ರಾಣಿಗಳಂತಿರುತ್ತದೆ. ದೈವೀ ಗುಣಗಳಿಲ್ಲವೆಂದರೆ ಅದಕ್ಕೆ ಆಸುರೀ ಗುಣವೆಂದು ಹೇಳುತ್ತಾರೆ. ಈಗ ಮತ್ತೆ ತಂದೆಯು ಬಂದು ನಿಮ್ಮನ್ನು ಶ್ರೇಷ್ಠ ದೇವತೆಗಳನ್ನಾಗಿ ಮಾಡುತ್ತಾರೆ. ಸತ್ಯ ಖಂಡದಲ್ಲಿರುವ ಸತ್ಯ-ಸತ್ಯ ಮನುಷ್ಯರು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಇವರಿಗೆ ದೇವತೆಗಳೆಂದು ಹೇಳಲಾಗುವುದು. ಇವರಲ್ಲಿ ದೈವೀ ಗುಣಗಳಿವೆ. ಹೇ ಪತಿತ-ಪಾವನ ಬನ್ನಿ ಎಂದು ಭಲೆ ಹಾಡುತ್ತಾರೆ ಆದರೆ ಪಾವನ ರಾಜರು ಹೇಗಾಗುತ್ತಾರೆ ಮತ್ತೆ ಪತಿತ ರಾಜರು ಹೇಗಾಗುತ್ತಾರೆ ಎಂಬ ರಹಸ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಅದು ಭಕ್ತಿಮಾರ್ಗವಾಗಿದೆ, ಜ್ಞಾನವನ್ನಂತೂ ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ ಮತ್ತು ಇಂತಹ ದೇವತೆಗಳನ್ನಾಗಿ ಮಾಡುತ್ತಾರೆ. ಕರ್ಮವನ್ನಂತೂ ಸತ್ಯಯುಗದಲ್ಲಿ ಈ ದೇವತೆಗಳು ಮಾಡುತ್ತಾರೆ ಆದರೆ ಪತಿತ ಕರ್ಮ ಮಾಡುವುದಿಲ್ಲ. ಅವರಲ್ಲಿ ದೈವೀ ಗುಣಗಳಿವೆ. ಪತಿತ ಕರ್ಮ ಮಾಡದೇ ಇರುವವರೇ ಸ್ವರ್ಗವಾಸಿಗಳಾಗುತ್ತಾರೆ. ನರಕವಾಸಿಗಳಿಂದ ಮಾಯೆಯು ಪತಿತ ಕರ್ಮವನ್ನು ಮಾಡಿಸುತ್ತದೆ. ಭಗವಂತನೇ ಕುಳಿತು ಶ್ರೇಷ್ಠ ಕರ್ಮ ಮಾಡಿಸುತ್ತಾರೆ ಮತ್ತು ಶ್ರೇಷ್ಠ ಮತ ಕೊಡುತ್ತಾರೆ - ಮಕ್ಕಳೇ, ಇಂತಹ ಪತಿತ ಕರ್ಮ ಮಾಡಬೇಡಿ ಎಂದು ಶ್ರೇಷ್ಠಾತಿ ಶ್ರೇಷ್ಠರಾಗಲು ಶ್ರೇಷ್ಠಾತಿ ಶ್ರೇಷ್ಠ ಮತವನ್ನು ಕೊಡುತ್ತಾರೆ. ದೇವತೆಗಳು ಶ್ರೇಷ್ಠರಲ್ಲವೆ. ಹೊಸ ಪ್ರಪಂಚ ಸ್ವರ್ಗದಲ್ಲಿಯೇ ಇರುತ್ತೇವೆ, ಇದನ್ನು ನಿಮ್ಮಲ್ಲಿ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ ಆದ್ದರಿಂದ ಮಾಲೆಯಾಗುತ್ತದೆ - 8ರದು ಹಾಗೂ 108ರ ಮಾಲೆ, 16,108ರ ಮಾಲೆಯೆಂದು ಹೇಳಬಹುದು ಅದೂ ಏನಾಯಿತು? ಇಷ್ಟು ಕೋಟಿ ಮನುಷ್ಯರಿದ್ದಾರೆ, ಇವರಲ್ಲಿ ಕೇವಲ 16000 ಮಂದಿ ಹೊರಬಂದರೆ ಏನಾಯಿತು? ಕಾಲು ಭಾಗವೂ ಆಗಲಿಲ್ಲ. ತಂದೆಯು ಮಕ್ಕಳನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ಪ್ರತಿನಿತ್ಯವೂ ಯಾವುದೇ ವಿಕರ್ಮ ಮಾಡಬೇಡಿ ಎಂದು ಮಕ್ಕಳಿಗೆ ತಿಳಿಸುತ್ತಾರೆ. ನಿಮಗೆ ಇಂತಹ ತಂದೆಯು ಸಿಕ್ಕಿದ್ದಾರೆ ಅಂದಾಗ ಬಹಳ ಖುಷಿಯಿರಬೇಕು. ನಿಮಗೆ ತಂದೆಯು ತಿಳಿಸುತ್ತಾರೆ - ಬೇಹದ್ದಿನ ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಇಂತಹ ಸ್ವರ್ಗದ ಮಾಲೀಕರಾಗಲು ಯೋಗ್ಯರು, ಸರ್ವಗುಣ ಸಂಪನ್ನರಾಗಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರು ಸರ್ವಗುಣ ಸಂಪನ್ನರಾಗಿದ್ದರು, ಇವರ ಯೋಗ್ಯತೆಗಳ ಮಹಿಮೆ ಮಾಡಲಾಗುತ್ತದೆ ಮತ್ತೆ 84 ಜನ್ಮಗಳ ನಂತರ ಅನರ್ಹರಾಗಿ ಬಿಡುತ್ತಾರೆ. ಒಂದು ಜನ್ಮ ಕೆಳಗಿಳಿದರೂ ಸಹ ಸ್ವಲ್ಪ ಕಲೆಗಳು ಕಡಿಮೆಯಾಗುವುದು. ಹೀಗೆ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಹೇಗೆ ನಾಟಕವೂ ಸಹ ನಿಧಾನವಾಗಿ ನಡೆಯುತ್ತದೆಯಲ್ಲವೆ. ನೀವೂ ಸಹ ನಿಧಾನವಾಗಿ ಕೆಳಗಿಳಿಯುತ್ತೀರಿ ಆದ್ದರಿಂದ 1250 ವರ್ಷಗಳಲ್ಲಿ ಎರಡು ಕಲೆಗಳು ಕಡಿಮೆಯಾಗುತ್ತದೆ. ನಂತರ ರಾವಣ ರಾಜ್ಯದಲ್ಲಿ ಬಹುಬೇಗ-ಬೇಗನೆ ಕಲೆಗಳು ಕಡಿಮೆಯಾಗುತ್ತದೆ, ಗ್ರಹಣ ಹಿಡಿಯುತ್ತದೆ. ಹೇಗೆ ಸೂರ್ಯ-ಚಂದ್ರರಿಗೂ ಸಹ ಗ್ರಹಣ ಹಿಡಿಯುತ್ತದೆಯಲ್ಲವೆ. ಚಂದ್ರ-ನಕ್ಷತ್ರಗಳಿಗೆ ಗ್ರಹಣ ಹಿಡಿಯುವುದಿಲ್ಲವೆಂದಲ್ಲ. ಎಲ್ಲರಿಗೆ ಪೂರ್ಣ ಗ್ರಹಣ ಹಿಡಿದಿದೆ. ಈಗ ತಂದೆಯು ತಿಳಿಸುತ್ತಾರೆ - ನೆನಪಿನಿಂದಲೇ ಗ್ರಹಣವು ಇಳಿಯುವುದು, ಯಾವುದೇ ಪಾಪ ಮಾಡಬೇಡಿ. ಮೊದಲನೇ ಪಾಪವಾಗಿದೆ - ದೇಹಾಭಿಮಾನದಲ್ಲಿ ಬರುವುದು. ಇದು ಕಠಿಣ ಪಾಪವಾಗಿದೆ. ಮಕ್ಕಳಿಗೆ ಇದೊಂದು ಜನ್ಮಕ್ಕಾಗಿಯೇ ಶಿಕ್ಷಣ ಸಿಗುತ್ತದೆ ಏಕೆಂದರೆ ಈಗ ಪ್ರಪಂಚವು ಪರಿವರ್ತನೆಯಾಗಲಿದೆ, ಈ ಶಿಕ್ಷಣವು ಮತ್ತೆಂದೂ ಇಲ್ಲ. ಬ್ಯಾರಿಸ್ಟರಿ ಮೊದಲಾದ ಶಿಕ್ಷಣವನ್ನು ನೀವು ಜನ್ಮ-ಜನ್ಮಾಂತರದಿಂದಲೂ ತೆಗೆದುಕೊಳ್ಳುತ್ತಾ ಬಂದಿದ್ದೀರಿ. ಶಾಲೆ ಇತ್ಯಾದಿಗಳು ಸದಾ ಇದ್ದೇ ಇರುತ್ತವೆ ಆದರೆ ಈ ಜ್ಞಾನವು ಒಂದೇ ಬಾರಿ ಸಿಗುತ್ತದೆ. ಜ್ಞಾನ ಸಾಗರ ತಂದೆಯು ಒಂದೇ ಬಾರಿ ಬರುತ್ತಾರೆ. ಅವರು ತಮ್ಮ ಮತ್ತು ತಮ್ಮ ರಚನೆಯ ಆದಿ-ಮಧ್ಯ-ಅಂತ್ಯದ ಸಂಪೂರ್ಣ ಜ್ಞಾನವನ್ನು ತಿಳಿಸುತ್ತಾರೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ - ನೀವಾತ್ಮರು ಪಾತ್ರಧಾರಿಗಳಾಗಿದ್ದೀರಿ. ಆತ್ಮಗಳು ತಮ್ಮ ಮನೆಯಿಂದ ಬಂದು ಇಲ್ಲಿ ಪಾತ್ರವನ್ನಭಿನಯಿಸುತ್ತೀರಿ ಅದಕ್ಕೆ ಮುಕ್ತಿಧಾಮವೆಂದು ಹೇಳಲಾಗುವುದು. ಸ್ವರ್ಗವು ಜೀವನ್ಮುಕ್ತಿಧಾಮವಾಗಿದೆ. ಇಲ್ಲಂತೂ ಜೀವನ ಬಂಧನವಿದೆ. ಈ ಶಬ್ಧವನ್ನು ಯಥಾರ್ಥ ರೀತಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಮೋಕ್ಷವೆಂದೂ ಆಗುವುದಿಲ್ಲ. ಮೋಕ್ಷ ಸಿಗಬೇಕು ಅರ್ಥಾತ್ ಜನನ-ಮರಣ ಚಕ್ರದಿಂದ ಮುಕ್ತರಾಗಬೇಕೆಂದು ಮನುಷ್ಯರು ಹೇಳುತ್ತಾರೆ ಆದರೆ ಪಾತ್ರದಿಂದ ಹೊರಬರಲು ಸಾಧ್ಯವೇ? ಇದು ಅನಾದಿ ಮಾಡಿ-ಮಾಡಲ್ಪಟ್ಟ ಆಟವಾಗಿದೆ. ವಿಶ್ವದ ಇತಿಹಾಸ-ಭೂಗೋಳವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ. ಸತ್ಯಯುಗದಲ್ಲಿ ಅದೇ ದೇವತೆಗಳು ಬರುತ್ತಾರೆ ನಂತರ ಕೊನೆಯಲ್ಲಿ ಇಸ್ಲಾಮಿಗಳು, ಬೌದ್ಧರು ಮೊದಾಲದವರೆಲ್ಲರೂ ಬರುತ್ತಾರೆ. ಈ ಮಾನವ ವಂಶ ವೃಕ್ಷವಾಗಿ ಬಿಡುತ್ತದೆ. ಇದರ ಬೀಜವು ಮೇಲಿದ್ದಾರೆ. ತಂದೆಯು ಮನುಷ್ಯ ಸೃಷ್ಟಿಯ ಬೀಜರೂಪವಾಗಿದ್ದಾರೆ. ಮನುಷ್ಯ ಸೃಷ್ಟಿಯಂತೂ ಇದ್ದೇ ಇರುತ್ತದೆ ಆದರೆ ಸತ್ಯಯುಗದಲ್ಲಿ ಬಹಳ ಚಿಕ್ಕದಾಗಿರುತ್ತದೆ. ನಂತರ ನಿಧಾನ-ನಿಧಾನವಾಗಿ ಬಹಳ ವೃದ್ಧಿಯಾಗುತ್ತಾ ಹೋಗುತ್ತದೆ. ಒಳ್ಳೆಯದು, ಮತ್ತೆ ಚಿಕ್ಕದು ಹೇಗಾಗುವುದು? ತಂದೆಯು ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ, ಬಹಳ ಕೆಲವರೇ ಪಾವನರಾಗುತ್ತಾರೆ. ಕೋಟಿಯಲ್ಲಿ ಕೆಲವರೇ ಬರುತ್ತಾರೆ. ಅರ್ಧಕಲ್ಪ ಬಹಳ ಕೆಲವರೇ ಇರುತ್ತಾರೆ. ಇನ್ನರ್ಧ ಕಲ್ಪದಲ್ಲಿ ಇನ್ನೆಷ್ಟೋ ವೃದ್ಧಿಯಾಗುತ್ತದೆ ಅಂದಾಗ ಎಲ್ಲರಿಗಿಂತ ಹೆಚ್ಚು ಸಂಪ್ರದಾಯವು ಆ ದೇವತೆಗಳದಿರಬೇಕು ಏಕೆಂದರೆ ಇವರೇ ಮೊಟ್ಟ ಮೊದಲಿಗೆ ಬರುತ್ತಾರೆ ಆದರೆ ಬೇರೆ-ಬೇರೆ ಧರ್ಮಗಳಲ್ಲಿ ಹೊರಟು ಹೋಗುತ್ತಾರೆ ಏಕೆಂದರೆ ತಂದೆಯನ್ನೇ ಮರೆತು ಹೋಗಿದ್ದಾರೆ. ಇದು ನಂಬರ್ವನ್ ವಿಸ್ಮೃತಿಯ ಆಟವಾಗಿದೆ. ಮರೆಯುವುದರಿಂದಲೇ ಕಂಗಾಲಾಗಿ ಬಿಡುತ್ತೀರಿ. ಮರೆಯುತ್ತಾ-ಮರೆಯುತ್ತಾ ಒಮ್ಮೆಲೆ ಮರೆತು ಹೋಗುತ್ತೀರಿ. ಭಕ್ತಿಯನ್ನೂ ಸಹ ಮೊದಲು ಒಬ್ಬರದನ್ನು ಮಾಡುತ್ತಾರೆ ಏಕೆಂದರೆ ಸರ್ವರ ಸದ್ಗತಿ ಮಾಡುವವರು ಒಬ್ಬರೇ ಆಗಿದ್ದಾರೆ ಅಂದಮೇಲೆ ಮತ್ತ್ಯಾರಿಗಾದರೂ ಭಕ್ತಿಯನ್ನೇಕೆ ಮಾಡಬೇಕು! ಈ ಲಕ್ಷ್ಮೀ-ನಾರಾಯಣರನ್ನೂ ಸಹ ಹೀಗೆ ಮಾಡುವವರು ಶಿವನಲ್ಲವೆ. ಕೃಷ್ಣನು ಹೇಗಾಗುವರು? ಇದು ಸಾಧ್ಯವೇ ಇಲ್ಲ. ಕೃಷ್ಣನು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಅವನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಎಷ್ಟೊಂದು ತಪ್ಪು ಮಾಡಿ ಬಿಟ್ಟಿದ್ದಾರೆ, ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ದೈವೀ ಗುಣಗಳನ್ನು ಧಾರಣೆ ಮಾಡಿ, ಯಾವುದೇ ಆಸ್ತಿಯ ಜಗಳ ಇತ್ಯಾದಿಗಳಿದ್ದರೆ ಅದನ್ನು ತೀರ್ಮಾನ ಮಾಡಿಕೊಳ್ಳಿ. ಜಗಳ ಮಾಡುತ್ತಾ-ಮಾಡುತ್ತಾ ಪ್ರಾಣವೂ ಹೊರಟು ಹೋಗಬಹುದು, ಆದ್ದರಿಂದ ತಂದೆಯು ತಿಳಿಸುತ್ತಾರೆ - ಇವರೂ ಸಹ ಎಲ್ಲವನ್ನು ಬಿಟ್ಟಾಗ ಯಾವುದೇ ಜಗಳ ಮಾಡಿದರೆ? ಕಡಿಮೆ ಸಿಕ್ಕಿದರೂ ಪರವಾಗಿಲ್ಲ ಅದಕ್ಕೆ ಬದಲಾಗಿ ಎಷ್ಟೊಂದು ರಾಜ್ಯಭಾಗ್ಯವು ಸಿಕ್ಕಿತು? ತಂದೆಯು (ಬ್ರಹ್ಮಾ) ತಿಳಿಸುತ್ತಾರೆ - ನನಗೆ ವಿನಾಶ ಮತ್ತು ರಾಜಧಾನಿಯ ಸಾಕ್ಷಾತ್ಕಾರವಾಯಿತು, ಆಗ ಎಷ್ಟು ಖುಷಿಯಾಯಿತು! ನಮಗೆ ವಿಶ್ವದ ರಾಜ್ಯಭಾಗ್ಯ ಸಿಗಲಿದೆ ಅಂದಮೇಲೆ ಇದೆಲ್ಲಾ ಏನು ಎಂದೆನಿಸಿತು. ಯಾರೂ ಹಸಿವಿನಿಂದೇನೂ ಸಾಯುವುದಿಲ್ಲ. ಹಣವಿಲ್ಲದವರೂ ಸಹ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಾರಲ್ಲವೆ. ಮಮ್ಮಾರವರು ಏನಾದರೂ ತಂದರೆ! ಆದರೆ ಮಮ್ಮಾರವರನ್ನು ಎಷ್ಟೊಂದು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನೆನಪು ಮಾಡುತ್ತೀರಿ, ಇದಂತೂ ಸರಿಯಾಗಿದೆ ಆದರೆ ಈಗ ಮಮ್ಮಾರವರ ನಾಮ-ರೂಪವನ್ನು ನೆನಪು ಮಾಡಬಾರದು. ನಾವೂ ಸಹ ಅವರ ತರಹ ಧಾರಣೆ ಮಾಡಬೇಕಾಗಿದೆ. ನಾವೂ ಸಹ ಮಮ್ಮಾರವರ ತರಹ ಒಳ್ಳೆಯವರಾಗಿ ಗದ್ದಿಗೆಗೆ ಯೋಗ್ಯರಾಗಬೇಕು. ಕೇವಲ ಮಮ್ಮಾರವರ ಮಹಿಮೆ ಮಾಡುವುದರಿಂದ ಆ ರೀತಿ ಆಗಿ ಬಿಡುವುದಿಲ್ಲ. ತಂದೆಯಂತೂ ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ನೆನಪಿನ ಯಾತ್ರೆಯಲ್ಲಿರಿ. ಮಮ್ಮಾನ ತರಹ ಜ್ಞಾನವನ್ನು ತಿಳಿಸಬೇಕು. ಯಾವಾಗ ನೀವೂ ಸಹ ಅವರ ತರಹ ಮಹಿಮಾಯೋಗ್ಯರಾಗಿ ತೋರಿಸುವಿರೋ ಆಗ ಮಮ್ಮಾರವರ ಮಹಿಮೆಗೆ ಸಾಕ್ಷಿಯಾಗುವುದು. ಕೇವಲ ಮಮ್ಮಾ, ಮಮ್ಮಾ ಎಂದು ಹೇಳುವುದರಿಂದ ಹೊಟ್ಟೆ ತುಂಬುವುದಿಲ್ಲ. ಇನ್ನೂ ಹೊಟ್ಟೆಯು ಬೆನ್ನಿಗೆ ತಾಗುತ್ತದೆ. ಶಿವ ತಂದೆಯನ್ನು ನೆನಪು ಮಾಡುವುದರಿಂದಲೇ ಹೊಟ್ಟೆ ತುಂಬುವುದು. ಈ ದಾದಾರವರನ್ನು ನೆನಪು ಮಾಡುವುದರಿಂದಲೂ ಹೊಟ್ಟೆಯು ತುಂಬುವುದಿಲ್ಲ. ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಬಲಿಹಾರಿಯು ಅವರೊಬ್ಬರದೇ ಆಗಿದೆ. ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು. ಸದಾ ಮುಖದಿಂದ ಹೂಗಳೇ ಬರಲಿ. ಒಂದುವೇಳೆ ಮುಳ್ಳುಗಳು ಕಲ್ಲುಗಳು ಹೊರ ಬರುತ್ತವೆಯೆಂದರೆ ಕಲ್ಲಾಗಿಯೇ ಉಳಿಯುವರು. ಬಹಳ ಒಳ್ಳೆಯ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನೀವಿಲ್ಲಿ ಸರ್ವಗುಣ ಸಂಪನ್ನರಾಗಬೇಕಾಗಿದೆ. ಶಿಕ್ಷೆಗಳನ್ನನುಭವಿಸಿದರೆ ಒಳ್ಳೆಯ ಪದವಿ ಸಿಗುವುದಿಲ್ಲ. ಇಲ್ಲಿಗೆ ಮಕ್ಕಳು ತಂದೆಯಿಂದ ಡೈರೆಕ್ಟ್ ಕೇಳಲು ಬರುತ್ತಾರೆ. ಇಲ್ಲಿ ತಂದೆಯು ತಾಜಾ-ತಾಜಾ ನಶೆಯನ್ನೇರಿಸುತ್ತಾರೆ. ಸೇವಾಕೇಂದ್ರದಲ್ಲಿ ನಶೆಯಿರುತ್ತದೆ ಮತ್ತೆ ಮನೆಗೆ ಹೋಗಿ ಸಂಬಂಧಿ ಮೊದಲಾದವರನ್ನು ನೋಡಿದೊಡನೆಯೇ ಸಮಾಪ್ತಿ. ನಾವಿಲ್ಲಿ ತಂದೆಯ ಪರಿವಾರದಲ್ಲಿ ಕುಳಿತಿದ್ದೇವೆಂದು ನೀವು ತಿಳಿದುಕೊಳ್ಳುತ್ತೀರಿ. ಅಲ್ಲಿ ಆಸುರೀ ಪರಿವಾರವಿರುತ್ತದೆ. ಎಷ್ಟೊಂದು ಕಲಹಗಳಿರುತ್ತವೆ. ಅಲ್ಲಿಗೆ ಹೋದೋಡನೆಯೇ ಕೆಸರಿನಲ್ಲಿ ಹೋಗಿ ಬೀಳುತ್ತಾರೆ. ಇಲ್ಲಾದರೆ ನೀವು ತಂದೆಯನ್ನು ಮರೆಯಬಾರದು. ಪ್ರಪಂಚದಲ್ಲಿ ಸತ್ಯವಾದ ಶಾಂತಿಯು ಯಾರಿಗೂ ಸಿಗುವುದಿಲ್ಲ. ಪವಿತ್ರತೆ, ಸುಖ-ಶಾಂತಿ, ಸಂಪತ್ತನ್ನು ತಂದೆಯ ವಿನಃ ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಆಯುಷ್ಯವಾನ್ ಭವ, ಪುತ್ರವಾನ್ ಭವ ಎಂದು ಆಶೀರ್ವಾದ ಮಾಡುವುದಿಲ್ಲ. ಆಶೀರ್ವಾದದಿಂದ ಏನೂ ಸಿಗುವುದಿಲ್ಲ. ಇದು ಮನುಷ್ಯರ ತಪ್ಪಾಗಿದೆ. ಸನ್ಯಾಸಿ ಮೊದಲಾದವರೂ ಸಹ ಆಶೀರ್ವಾದ ಕೊಡಲು ಸಾಧ್ಯವಿಲ್ಲ. ಇಂದು ಆಶೀರ್ವಾದ ಕೊಡುತ್ತಾರೆ ನಾಳೆ ತಾವೇ ಮರಣ ಹೊಂದುತ್ತಾರೆ. ಪೋಪರೂ ಸಹ ನೋಡಿ, ಎಷ್ಟೊಂದು ಮಂದಿ ಬಂದು ಹೋಗಿದ್ದಾರೆ. ಗುರುಗಳ ಗದ್ದುಗೆಯು ನಡೆಯುತ್ತದೆ. ಬಾಲ್ಯದಲ್ಲಿಯೂ ಸಹ ಗುರುಗಳು ಸಾವನ್ನಪ್ಪಿದರೆ ಮತ್ತೆ ಬೇರೆಯವರನ್ನು ಮಾಡುತ್ತಾರೆ ಅಥವಾ ಅವರ ಚಿಕ್ಕ ಶಿಷ್ಯರನ್ನು ಗುರುಗಳನ್ನಾಗಿ ಮಾಡಿ ಬಿಡುತ್ತಾರೆ. ಈ ಬಾಪ್ದಾದಾರವರು ನೀಡುವವರಾಗಿದ್ದಾರೆ ಅಂದಮೇಲೆ ಅವರು ತೆಗೆದುಕೊಂಡು ಏನು ಮಾಡುವರು? ತಂದೆಯು ನಿರಾಕಾರನಲ್ಲವೆ. ತೆಗೆದುಕೊಳ್ಳುವುದು ಸಾಕಾರತಂದೆ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ನಾವು ಶಿವ ತಂದೆಗೆ ಕೊಡುತ್ತೇವೆ ಎಂಬ ಮಾತನ್ನು ಎಂದೂ ಹೇಳಬಾರದು. ನಾವು ಶಿವ ತಂದೆಯಿಂದ ಪದುಮದಷ್ಟು ತೆಗೆದುಕೊಂಡರೂ ಕೊಟ್ಟಂತಾಗಲಿಲ್ಲ. ತಂದೆಯಂತೂ ನಿಮಗೆ ಅಪಾರವಾಗಿ ಕೊಡುತ್ತಾರೆ. ಶಿವ ತಂದೆಯು ದಾತನಾಗಿದ್ದಾರೆ, ನೀವು ಅವರಿಗೆ ಹೇಗೆ ಕೊಡುತ್ತೀರಿ? ನಾನು ಕೊಟ್ಟೆನೆಂದು ತಿಳಿದುಕೊಳ್ಳುವುದರಿಂದ ದೇಹಾಭಿಮಾನವು ಬಂದು ಬಿಡುತ್ತದೆ. ನಾವು ಶಿವ ತಂದೆಯಿಂದ ಪಡೆಯುತ್ತಿದ್ದೇವೆ, ತಂದೆಯ ಬಳಿ ಎಷ್ಟೊಂದು ಮಂದಿ ಮಕ್ಕಳು ಬಂದಿರುತ್ತಾರೆ ಅಂದಮೇಲೆ ಅವರಿಗಾಗಿ ಪ್ರಬಂಧವು ಬೇಕಲ್ಲವೆ ಅಂದರೆ ನೀವು ತಮಗಾಗಿಯೇ ಕೊಡುತ್ತೀರಿ. ತಂದೆಯು ತನಗಾಗಿ ಏನನ್ನೂ ಮಾಡಿಕೊಳ್ಳಬೇಕಾಗಿಲ್ಲ. ರಾಜಧಾನಿಯನ್ನೂ ನಿಮಗೇ ಕೊಡುತ್ತಾರೆ ಆದ್ದರಿಂದ ನೀವೇ ಮಾಡಿಕೊಳ್ಳುತ್ತೀರಿ. ನಿಮ್ಮನ್ನು ನನಗಿಂತಲೂ ಶ್ರೇಷ್ಠರನ್ನಾಗಿ ಮಾಡುತ್ತೇನೆ. ಇಂತಹ ತಂದೆಯನ್ನೇ ನೀವು ಮರೆತು ಹೋಗುತ್ತೀರಿ! ಅರ್ಧಕಲ್ಪ ಪೂಜ್ಯ, ಅರ್ಧಕಲ್ಪ ಪೂಜಾರಿ. ಪೂಜ್ಯರಾಗುವುದರಿಂದ ನೀವು ಸುಖಧಾಮದ ಮಾಲೀಕರಾಗುತ್ತೀರಿ ಮತ್ತೆ ಪೂಜಾರಿಗಳಾದಾಗ ದುಃಖಧಾಮದ ಮಾಲೀಕರಾಗುತ್ತೀರಿ. ತಂದೆಯು ಯಾವಾಗ ಬಂದು ಸ್ವರ್ಗ ಸ್ಥಾಪನೆ ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ಈ ಮಾತುಗಳನ್ನು ನೀವು ಸಂಗಮಯುಗೀ ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ತಂದೆಯು ಎಷ್ಟು ಚೆನ್ನಾಗಿ ತಿಳಿಸಿ ಕೊಡುತ್ತಾರೆ ಆದರೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಹೇಗೆ ತಂದೆಯು ಯುಕ್ತಿಯಿಂದ ತಿಳಿಸುತ್ತಾರೆಯೋ ಅದೇರೀತಿ ತಿಳಿಸಿ ಕೊಡಬೇಕು. ಪುರುಷಾರ್ಥ ಮಾಡಿ ಇಷ್ಟು ಶ್ರೇಷ್ಠರಾಗಬೇಕು. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳಲ್ಲಿ ಬಹಳ ಒಳ್ಳೆಯ ದೈವೀ ಗುಣಗಳಿರಬೇಕು. ಯಾವುದೇ ಮಾತಿನಲ್ಲಿ ಮುನಿಸಿಕೊಳ್ಳಬಾರದು, ಚಹರೆಯೂ ಶವದಂತಾಗಬಾರದು. ತಂದೆಯು ತಿಳಿಸುತ್ತಾರೆ - ಇಂತಹ ಯಾವುದೇ ಕೆಲಸವನ್ನು ಈಗ ಮಾಡಬೇಡಿ. ಚಂಡಿಕಾ ದೇವಿಯ ಮೇಳವೂ ಆಗುತ್ತದೆ, ಯಾರು ತಂದೆಯ ಮತದಂತೆ ನಡೆಯುವುದಿಲ್ಲವೋ, ಯಾರು ದುಃಖವನ್ನು ಕೊಡುವರೋ ಅಂತಹವರಿಗೆ ಚಂಡಿಕಾ ಎಂದು ಹೇಳುತ್ತಾರೆ. ಇಂತಹವರಿಗೂ ಮೇಳವು ನಡೆಯುತ್ತದೆ. ಮನುಷ್ಯರು ಅಜ್ಞಾನಿಗಳಲ್ಲವೆ ಅರ್ಥವನ್ನು ತಿಳಿದುಕೊಂಡಿಲ್ಲ. ಯಾರಲ್ಲಿಯೂ ಶಕ್ತಿಯಿಲ್ಲ ಅವರು ಕೇವಲ ಕೋಗಿಲೆಯಿದ್ದಂತೆ. ನೀವು ತಂದೆಯನ್ನು ಚೆನ್ನಾಗಿ ನೆನಪು ಮಾಡುತ್ತೀರಿ ಆದ್ದರಿಂದ ನಿಮಗೆ ತಂದೆಯ ಮೂಲಕ ಶಕ್ತಿ ಸಿಗುತ್ತದೆ. ಆದರೆ ಇಲ್ಲಿದ್ದರೂ ಸಹ ಅನೇಕರ ಬುದ್ಧಿಯು ಹೊರಗೆ ಅಲೆದಾಡುತ್ತಿರುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಇಲ್ಲಿ ಚಿತ್ರಗಳ ಮುಂದೆ ಕುಳಿತುಕೊಳ್ಳಿ ಆಗ ನಿಮ್ಮ ಬುದ್ಧಿಯು ಇದರಲ್ಲಿ ಬ್ಯುಸಿಯಾಗಿರುವುದು. ಗೋಲ ಮತ್ತು ಏಣಿಯ ಚಿತ್ರದಲ್ಲಿ ತಿಳಿಸಿಕೊಡಿ - ಸತ್ಯಯುಗದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ. ಈಗಂತೂ ಅನೇಕ ಮನುಷ್ಯರಿದ್ದಾರೆ, ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತೇನೆ. ಹಳೆಯ ಪ್ರಪಂಚದ ವಿನಾಶ ಮಾಡಿಸುತ್ತೇನೆ. ಹೀಗೀಗೆ ಕುಳಿತು ಅಭ್ಯಾಸ ಮಾಡಬೇಕಾಗಿದೆ. ತಮ್ಮ ಬಾಯನ್ನು ತಾವೇ ತೆರೆಸಬಹುದು, ಒಳಗೆ ಏನಾದರೂ ಚಿಂತನೆ ನಡೆಯುತ್ತದೆಯೋ ಅದು ಹೊರಬರಬೇಕು. ನೀವು ಮೂಕರಂತೂ ಅಲ್ಲ ಅಲ್ಲವೆ. ಮನೆಯಲ್ಲಿ ಕೂಗಾಡಲು ಬಾಯಿ ಇರುತ್ತದೆ, ಜ್ಞಾನವನ್ನು ತಿಳಿಸಲು ಬಾಯಿ ತೆರೆಯುವುದಿಲ್ಲವೆ? ಚಿತ್ರಗಳು ಎಲ್ಲರಿಗೂ ಸಿಗುತ್ತವೆ, ತಮ್ಮ ಮನೆಯ ಕಲ್ಯಾಣ ಮಾಡಬೇಕೆಂಬ ಸಾಹಸವನ್ನಿಡಬೇಕು. ತಮ್ಮ ಕೋಣೆಯನ್ನು ಚಿತ್ರಗಳಿಂದ ಶೃಂಗರಿಸಿ ಆಗ ನೀವು ಬ್ಯುಸಿಯಾಗಿ ಬಿಡುತ್ತೀರಿ. ಇದು ಹೇಗೆ ನಿಮ್ಮ ಗ್ರಂಥಾಲಯವಾಗಿ ಬಿಡುವುದು. ಅನ್ಯರ ಕಲ್ಯಾಣ ಮಾಡಲು ಚಿತ್ರಗಳನ್ನು ಹಾಕಬೇಕು. ಯಾರೇ ಬಂದರೂ ಸಹ ಅವರಿಗೆ ತಿಳಿಸಿಕೊಡಿ. ನೀವು ಬಹಳ ಸರ್ವೀಸ್ ಮಾಡಬಹುದು. ಸ್ವಲ್ಪ ಕೇಳಿದರೂ ಸಹ ಪ್ರಜೆಗಳಾಗಿ ಬಿಡುತ್ತಾರೆ. ತಂದೆಯು ಉನ್ನತಿಯ ಇಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಬಾಕಿ ಗಂಗೆಯಲ್ಲಿ ಒಮ್ಮೆಲೆ ಮುಳುಗಿ ಹೋದರೂ ಸಹ ವಿಕರ್ಮಗಳು ವಿನಾಶವಾಗುವುದಿಲ್ಲ. ಇದೆಲ್ಲವೂ ಅಂಧಶ್ರದ್ಧೆಯಾಗಿದೆ. ಹರಿದ್ವಾರದಲ್ಲಂತೂ ಇಡೀ ನಗರದ ಕಸವೆಲ್ಲವೂ ಬಂದು ನೀರಿನಲ್ಲಿ ಬೀಳುತ್ತದೆ. ಸಾಗರದಲ್ಲಿ ಎಷ್ಟೊಂದು ಕೊಳಕು ಬೀಳುತ್ತದೆ. ನದಿಗಳಲ್ಲಿಯೂ ಸೇರುತ್ತಿರುತ್ತವೆ ಅಂದಮೇಲೆ ಅದರಿಂದ ಪಾವನರಾಗಲು ಹೇಗೆ ಸಾಧ್ಯ! ಮಾಯೆಯು ಎಲ್ಲರನ್ನೂ ಬುದ್ಧಿಹೀನರನ್ನಾಗಿ ಮಾಡಿ ಬಿಟ್ಟಿದೆ.

ನನ್ನನ್ನು ನೆನಪು ಮಾಡಿ ಎಂದು ತಂದೆಯು ಮಕ್ಕಳಿಗೇ ತಿಳಿಸುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ನಿಮ್ಮ ಆತ್ಮವೇ ಕರೆಯುತ್ತದೆಯಲ್ಲವೆ. ಆ ನಿಮ್ಮ ಶರೀರದ ಲೌಕಿಕ ತಂದೆಯಂತೂ ಇದ್ದಾರೆ, ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಈಗ ನಾವು ಆ ಪಾವನರನ್ನಾಗಿ ಮಾಡುವ ತಂದೆಯನ್ನು ನೆನಪು ಮಾಡುತ್ತೇವೆ. ಜೀವನ್ಮುಕ್ತಿದಾತನು ಅವರೊಬ್ಬರೇ ಆಗಿದ್ದಾರೆ, ಅನ್ಯರು ಯಾರೂ ಇಲ್ಲ. ಸಹಜವಾದ ಮಾತಿನ ಅರ್ಥವನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಬಾಯಿಂದ ಜ್ಞಾನ ರತ್ನಗಳನ್ನು ಮಾತನಾಡುವ ಅಭ್ಯಾಸ ಮಾಡಬೇಕಾಗಿದೆ. ಎಂದೂ ಮುಖದಿಂದ ಕಲ್ಲುಗಳು ಅಥವಾ ಮುಳ್ಳುಗಳಂತಹ ಮಾತುಗಳು ಬರಬಾರದು. ತನ್ನ ಹಾಗೂ ಮನೆಯ ಕಲ್ಯಾಣ ಮಾಡಲು ಮನೆಯಲ್ಲಿ ಚಿತ್ರಗಳನ್ನು ಹಾಕಬೇಕು. ಅದರ ಬಗ್ಗೆ ವಿಚಾರ ಸಾಗರ ಮಂಥನ ಮಾಡಿ ಅನ್ಯರಿಗೆ ತಿಳಿಸಬೇಕು. ಬ್ಯುಸಿಯಾಗಿರಬೇಕಾಗಿದೆ.

2. ತಂದೆಯಿಂದ ಆಶೀರ್ವಾದವನ್ನು ಬೇಡುವ ಬದಲು ಅವರ ಶ್ರೇಷ್ಠ ಮತದಂತೆ ನಡೆಯಬೇಕಾಗಿದೆ. ಬಲಿಹಾರಿಯು ಶಿವ ತಂದೆಯದಾಗಿದೆ ಅದಕ್ಕೆ ಅವರನ್ನೇ ನೆನಪು ಮಾಡಬೇಕಾಗಿದೆ. ನಾವು ತಂದೆಗೆ ಇಷ್ಟು ಕೊಟ್ಟೆವೆಂಬ ಅಭಿಮಾನವು ಬರಬಾರದು.

ವರದಾನ:
ತಂದೆ ಸಮಾನ ಸ್ಥಿತಿಯ ಮೂಲಕ ಸಮಯವನ್ನು ಸಮೀಪ ತರುವಂತಹ ತತತ್ವಂನ ಿ ಭವ.

ತನ್ನತನವನ್ನು ಅಳಿಸಿ ಹಾಕುವುದು ಅರ್ಥಾತ್ ತಂದೆ ಸಮಾನ ಸ್ಥಿತಿಯಲ್ಲಿ ಸ್ಥಿತರಾಗಿ ಸಮಯವನ್ನು ಸಮೀಪ ತರುವುದು. ಎಲ್ಲಿ ನನ್ನತನ ದೇಹದಲ್ಲಿ ಅಥವಾ ತನ್ನ ಯಾವುದೇ ವಸ್ತುವಿನಲ್ಲಿ ತನ್ನತನ ಇದೆ ಅಲ್ಲಿ ಸಮಾನತೆಯಲ್ಲಿ ಪರ್ಸೆಂಟ್ ಇದೆ. ಪರ್ಸೆಂಟೇಜ್ ಎಂದರೆ ಡಿಫೆಕ್ಟ್, ಈ ರೀತಿ ಡಿಫೆಕ್ಟ್ ಉಳ್ಳವರು ಎಂದೂ ಪರ್ಫೆಕ್ಟ್ ಆಗಲು ಸಾಧ್ಯವಿಲ್ಲ. ಪರ್ಫೆಕ್ಟ್ ಆಗಬೇಕಾದರೆ ತಂದೆಯ ಪ್ರೀತಿಯಲ್ಲಿ ಲವಲೀನರಾಗಿರಿ. ಸದಾ ಪ್ರೀತಿಯಲ್ಲಿ ಲವಲೀನರಾಗಿರುವುದರಿಂದ ಸಹಜವಾಗಿ ಅನ್ಯರನ್ನೂ ಸಹಾ ತಮ್ಮ ಸಮಾನ ಅಥವಾ ತಂದೆ-ಸಮಾನ ಮಾಡಲು ಸಾಧ್ಯ. ಬಾಪ್ದಾದಾ ತಮ್ಮ ಪ್ರೀತಿಯ ಮತ್ತು ಲವಲೀನರಾಗಿರುವಂತಹ ಮಕ್ಕಳಿಗೆ ಸದಾ ತತತ್ವಂನ ವರದಾನ ಕೊಡುತ್ತಾರೆ.

ಸ್ಲೋಗನ್:
ಪರಸ್ಪರ ಒಬ್ಬರಿಗೊಬ್ಬರ ವಿಚಾರಗಳಿಗೆ ಗೌರವ ಕೊಟ್ಟಾಗ ಸ್ವಯಂನ ರಿಕಾರ್ಡ್ ಒಳ್ಳೆಯದಾಗಿ ಬಿಡುವುದು.

ಅವ್ಯಕ್ತ ಸೂಚನೆ:- ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.

ಮನಸ್ಸಾ ಸೇವೆಗಾಗಿ ಮನಸ್ಸು, ಬುದ್ಧಿ ವ್ಯರ್ಥ ಯೋಚಿಸುವುದರಿಂದ ಮುಕ್ತರಾಗಬೇಕಾಗಿದೆ. ಮನ್ಮನಾಭವದ ಮಂತ್ರದ ಸಹಜ ಸ್ವರೂಪವಾಗಬೇಕಾಗಿದೆ, ಯಾವ ಶ್ರೇಷ್ಠ ಆತ್ಮಗಳ ಮನಸ್ಸಾ ಅರ್ಥಾತ್ ಸಂಕಲ್ಪ ಶ್ರೇಷ್ಠ ಮತ್ತು ಶಕ್ತಿಶಾಲಿಯಾಗಿದೆ, ಶುಭ ಭಾವನೆ, ಶುಭ ಕಾಮನೆಯುಳ್ಳದಾಗಿದೆ ಅವರು ಮನಸ್ಸಾ ಮೂಲಕ ಶಕ್ತಿಗಳ ದಾನ ಕೊಡುವಂತಹವರಾಗಿದ್ದಾರೆ.