05.01.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಶ್ರೀಮತದಿಂದ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ, ಗೀತೆಯ ಜ್ಞಾನ ಮತ್ತು ರಾಜಯೋಗ ನಿಮ್ಮನ್ನು ಸಂಪೂರ್ಣ ಪಾವನರನ್ನಾಗಿ ಮಾಡುತ್ತದೆ”

ಪ್ರಶ್ನೆ:
ಸತ್ಯಯುಗದಲ್ಲಿ ಪ್ರತಿಯೊಂದು ವಸ್ತು ಒಳ್ಳೆಯದಕ್ಕಿಂತ ಒಳ್ಳೆಯ ಸತೋಪ್ರಧಾನವಾಗಿರುತ್ತದೆ ಏಕೆ?

ಉತ್ತರ:
ಏಕೆಂದರೆ ಅಲ್ಲಿ ಮನುಷ್ಯ ಸತೋಪ್ರಧಾನರಾಗಿರುತ್ತಾರೆ, ಯಾವಾಗ ಮನುಷ್ಯ ಒಳ್ಳೆಯವರಾಗಿರುತ್ತಾರೆ ಆಗ ಸಾಮಗ್ರಿಗಳು ಒಳ್ಳೆಯದಾಗಿರುತ್ತದೆ ಮತ್ತು ಮನುಷ್ಯ ಕೆಟ್ಟವರಾಗಿದ್ದಾಗ ಸಾಮಗ್ರಿಗಳು ನಷ್ಟಕರವಾಗಿರುತ್ತವೆ. ಸತೋಪ್ರಧಾನ ಸೃಷ್ಟಿಯಲ್ಲಿ ಯಾವುದೇ ವಸ್ತು ಅಪ್ರಾಪ್ತಿಯಿಲ್ಲ, ಏನೂ ಎಲ್ಲಿಯೂ ಬೇಡಬೇಕಾಗಿಲ್ಲ.

ಓಂ ಶಾಂತಿ.
ತಂದೆಯು ಈ ಶರೀರದ ಮೂಲಕ ತಿಳಿಸುತ್ತಾರೆ, ಇದಕ್ಕೆ ಜೀವ ಎಂದು ಹೇಳಲಾಗುತ್ತದೆ. ಇದರಲ್ಲಿ ಆತ್ಮವೂ ಇದೆ ಮತ್ತು ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಪರಮಪಿತ ಪರಮಾತ್ಮನೂ ಇವರಲ್ಲಿದ್ದಾರೆ. ಇದು ಮೊಟ್ಟ ಮೊದಲು ಪಕ್ಕಾ ಆಗಬೇಕು ಆದ್ದರಿಂದ ಇವರಿಗೆ ದಾದಾ ಎಂತಲೂ ಹೇಳುತ್ತಾರೆ. ಇದಂತೂ ಮಕ್ಕಳಿಗೆ ನಿಶ್ಚಯವಿದೆ. ಈ ನಿಶ್ಚಯದಲ್ಲಿಯೇ ಮನನ ಮಾಡಬೇಕಾಗಿದೆ. ಅವಶ್ಯವಾಗಿ ತಂದೆಯು ಯಾರಲ್ಲಿ ಅವತರಿಸಿದ್ದಾರೆಯೋ ಅವರ ಪ್ರತಿ ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ. ಇದು ಸರ್ವಶಾಸ್ತ್ರ ಶಿರೋಮಣಿ ಗೀತಾ ಜ್ಞಾನವಾಗಿದೆ. ಶ್ರೀಮತ ಎಂದರೆ ಶ್ರೇಷ್ಠ ಮತ. ಶ್ರೇಷ್ಠಾತಿ ಶ್ರೇಷ್ಠ ಭಗವಂತನದು ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ. ಯಾರ ಶ್ರೀಮತದಿಂದ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ನೀವು ಭ್ರಷ್ಟಮನುಷ್ಯರಿಂದ ಶ್ರೇಷ್ಠ ದೇವತೆಗಳಾಗುತ್ತೀರಿ. ನೀವು ಇದಕ್ಕಾಗಿಯೇ ಬರುತ್ತೀರಿ. ತಂದೆಯೂ ಸಹ ಹೇಳುತ್ತಾರೆ - ನಾನು ನಿಮ್ಮನ್ನು ಶ್ರೇಷ್ಠಾಚಾರಿಗಳು, ನಿರ್ವಿಕಾರಿ ಮತದ ದೇವಿ-ದೇವತೆಗಳನ್ನಾಗಿ ಮಾಡಲು ಬರುತ್ತೇನೆ. ಮನುಷ್ಯರಿಂದ ದೇವತೆಗಳಾಗುವ ಅರ್ಥವನ್ನೂ ತಿಳಿಯಬೇಕಾಗಿದೆ. ವಿಕಾರಿ ಮನುಷ್ಯರಿಂದ ನಿರ್ವಿಕಾರಿ ದೇವತೆಗಳನ್ನಾಗಿ ಮಾಡಲು ಬರುತ್ತೇನೆ. ಸತ್ಯಯುಗದಲ್ಲಿಯೂ ಮನುಷ್ಯರಿರುತ್ತಾರೆ ಆದರೆ ದೈವೀ ಗುಣವುಳ್ಳವರು. ಈಗ ಕಲಿಯುಗದಲ್ಲಿ ಆಸುರೀ ಗುಣಗಳನ್ನು ಹೊಂದಿದ ಮನುಷ್ಯರಿದ್ದಾರೆ. ಎಲ್ಲವೂ ಮನುಷ್ಯ ಸೃಷ್ಟಿಯಾಗಿದೆ ಆದರೆ ಅವರು ಈಶ್ವರೀಯ ಬುದ್ಧಿಯವರು, ಇಲ್ಲಿರುವವರು ಆಸುರೀ ಬುದ್ಧಿಯವರಾಗಿದ್ದಾರೆ. ಅಲ್ಲಿ ಜ್ಞಾನ, ಇಲ್ಲಿ ಭಕ್ತಿಯಿದೆ. ಜ್ಞಾನ ಮತ್ತು ಭಕ್ತಿ ಬೇರೆ-ಬೇರೆಯಲ್ಲವೆ. ಜ್ಞಾನದ ಪುಸ್ತಕಗಳು ಎಷ್ಟೊಂದಿವೆ ಮತ್ತು ಭಕ್ತಿಯದು ಎಷ್ಟೊಂದಿದೆ. ಜ್ಞಾನ ಸಾಗರನು ತಂದೆಯಾಗಿದ್ದಾರೆ ಅಂದಮೇಲೆ ಅವರ ಪುಸ್ತಕವೂ ಒಂದೇ ಇರಬೇಕು. ಯಾರೆಲ್ಲಾ ಧರ್ಮ ಸ್ಥಾಪನೆ ಮಾಡುವರೋ ಅವರ ಪುಸ್ತಕವು ಒಂದೇ ಆಗಿರಬೇಕು. ಅದಕ್ಕೆ ಧರ್ಮ ಗ್ರಂಥವೆಂದು ಹೇಳಲಾಗುತ್ತದೆ. ಮೊದಲ ಧರ್ಮ ಗ್ರಂಥವು ಗೀತೆಯಾಗಿದೆ, ಶ್ರೀ ಮತ್ಭಗವದ್ಗೀತೆ. ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ – ಮೊಟ್ಟ ಮೊದಲನೆಯದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಹಿಂದೂ ಧರ್ಮವಲ್ಲ. ಗೀತೆಯಿಂದ ಹಿಂದೂ ಧರ್ಮ ಸ್ಥಾಪನೆಯಾಯಿತು ಮತ್ತು ಕೃಷ್ಣನು ಗೀತೆಯನ್ನು ನುಡಿಸಿದನೆಂದು ಮನುಷ್ಯರು ತಿಳಿಯುತ್ತಾರೆ. ಯಾರೊಂದಿಗೇ ಕೇಳಿದರೂ ಸಹ ಪರಂಪರೆಯಿಂದ ಇದನ್ನು ಕೃಷ್ಣನು ಹೇಳಿದ್ದಾರೆಂದು ಹೇಳುತ್ತಾರೆ. ಯಾವುದೇ ಶಾಸ್ತ್ರದಲ್ಲಿ ಶಿವ ಭಗವಾನುವಾಚವಿಲ್ಲ. ಶ್ರೀಮತ್ ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಯಾರು ಗೀತೆಯನ್ನು ಓದಿರುವರೋ ಅವರಿಗೇ ಸಹಜವಾಗಿ ಅರ್ಥವಾಗುವುದು. ನೀವೀಗ ತಿಳಿದುಕೊಳ್ಳುತ್ತೀರಿ - ಇದೇ ಗೀತಾ ಜ್ಞಾನದಿಂದ ಮನುಷ್ಯರಿಂದ ದೇವತೆಗಳಾಗಿದ್ದಾರೆ. ಯಾವ ಜ್ಞಾನವನ್ನು ಈಗಲೂ ಸಹ ತಂದೆಯು ನಮಗೆ ಕೊಡುತ್ತಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ, ಪವಿತ್ರತೆಯನ್ನೂ ಕಲಿಸುತ್ತಿದ್ದಾರೆ, ಕಾಮ ಮಹಾಶತ್ರುವಾಗಿದೆ. ಇದರ ಮೂಲಕವೇ ನೀವು ಸೋಲನ್ನನುಭವಿಸಿದ್ದೀರಿ. ಈಗ ಮತ್ತೆ ಅದರಮೇಲೆ ಜಯ ಗಳಿಸಿದರೆ ಜಗತ್ಜೀತರು ಅರ್ಥಾತ್ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಇದು ಬಹಳ ಸಹಜವಾಗಿದೆ. ಬೇಹದ್ದಿನ ತಂದೆಯು ಕುಳಿತು ಇವರ (ಬ್ರಹ್ಮಾ) ಮೂಲಕ ನಿಮಗೆ ಓದಿಸುತ್ತಾರೆ. ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಈ ಬ್ರಹ್ಮಾರವರು ಮನುಷ್ಯರ ಬೇಹದ್ದಿನ ತಂದೆಯಾಗಿದ್ದಾರೆ. ಹೆಸರೇ ಆಗಿದೆ - ಪ್ರಜಾಪಿತ ಬ್ರಹ್ಮಾ. ಬ್ರಹ್ಮನ ತಂದೆಯ ಹೆಸರೇನೆಂದು ನೀವು ಯಾರೊಂದಿಗಾದರೂ ಕೇಳಿದರೆ ಅವರು ತಬ್ಬಿಬ್ಬಾಗುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರು ರಚನೆಯಾಗಿದ್ದಾರೆ. ಈ ಮೂವರಿಗೂ ಯಾರೋ ತಂದೆಯಿರಬೇಕಲ್ಲವೆ! ನೀವು ತೋರಿಸುತ್ತೀರಿ - ಈ ಮೂವರಿಗೆ ತಂದೆಯು ನಿರಾಕಾರ ಶಿವನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನು ಸೂಕ್ಷ್ಮವತನದ ದೇವತೆಗಳೆಂದು ತೋರಿಸುತ್ತಾರೆ, ಅವರ ಮೇಲೆ ಶಿವನಿದ್ದಾರೆ. ಮಕ್ಕಳಿಗೆ ಗೊತ್ತಿದೆ, ಶಿವ ತಂದೆಯ ಮಕ್ಕಳು ಯಾರೆಲ್ಲಾ ಆತ್ಮರಿದ್ದಾರೆಯೋ ಅವರಿಗೆ ತಮ್ಮ ಶರೀರವಂತೂ ಇದ್ದೇ ಇರುವುದು. ತಂದೆಯಂತೂ ಸದಾ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ನಿರಾಕಾರ ಪರಮಪಿತ ಪರಮಾತ್ಮನಿಗೆ ನಾವು ಮಕ್ಕಳಾಗಿದ್ದೇವೆಂದು ನಿಮಗೆ ತಿಳಿದಿದೆ. ಪರಮಪಿತ ಪರಮಾತ್ಮನೆಂದು ಆತ್ಮವೇ ಶರೀರದ ಮೂಲಕ ಹೇಳುತ್ತದೆ. ಎಷ್ಟು ಸಹಜ ಮಾತುಗಳಾಗಿವೆ. ಇದಕ್ಕೆ ತಂದೆ ಮತ್ತು ಆಸ್ತಿ ಎಂದು ಹೇಳಲಾಗುತ್ತದೆ. ಯಾರು ಓದಿಸುತ್ತಾರೆ? ಗೀತೆಯ ಜ್ಞಾನವನ್ನು ಯಾರು ತಿಳಿಸಿದರು? ನಿರಾಕಾರ ತಂದೆ. ಅವರಿಗೆ ಯಾವುದೇ ಕಿರೀಟವಿಲ್ಲ, ಅವರು ಜ್ಞಾನ ಸಾಗರ, ಬೀಜ ರೂಪ, ಚೈತನ್ಯನಾಗಿದ್ದಾರೆ. ನೀವೂ ಸಹ ಚೈತನ್ಯ ಆತ್ಮರಾಗಿದ್ದೀರಲ್ಲವೆ. ಎಲ್ಲಾ ವೃಕ್ಷಗಳ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಭಲೆ ನೀವು ಮಾಲಿಗಳಲ್ಲ ಆದರೆ ಹೇಗೆ ಬೀಜವನ್ನು ಹಾಕುತ್ತಾರೆ? ಅದರಿಂದ ಹೇಗೆ ವೃಕ್ಷವು ವೃದ್ಧಿಯಾಗುತ್ತದೆ? ಎಂಬುದನ್ನು ತಿಳಿದುಕೊಳ್ಳಬಲ್ಲಿರಿ. ಅದಂತೂ ಜಡವೃಕ್ಷವಾಗಿದೆ, ಇದು ಚೈತನ್ಯವಾಗಿದೆ. ನೀವಾತ್ಮರಲ್ಲಿ ಜ್ಞಾನವಿದೆ. ಇದು ಮತ್ತ್ಯಾರಲ್ಲಿಯೂ ಇರುವುದಿಲ್ಲ. ತಂದೆಯು ಚೈತನ್ಯ ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ ಅಂದಮೇಲೆ ವೃಕ್ಷವೂ ಮನುಷ್ಯರಿಂದಲೇ ಕೂಡಿರಬೇಕಲ್ಲವೆ. ಇದು ಚೈತನ್ಯ ರಚನೆಯಾಗಿದೆ. ರಚಯಿತ ಮತ್ತು ರಚನೆಯಲ್ಲಿ ಅಂತರವಂತೂ ಇದೆಯಲ್ಲವೆ. ಮಾವಿನ ಬೀಜವನ್ನು ಹಾಕಿದರೆ ಮಾವಿನ ಸಸಿಯೇ ಬರುತ್ತದೆ ಮತ್ತು ವೃಕ್ಷವು ಎಷ್ಟು ದೊಡ್ಡದಾಗುತ್ತಾ ಹೋಗುತ್ತದೆ ಹಾಗೆಯೇ ಮನುಷ್ಯ ರಚನೆಯ ಬೀಜದಿಂದ ಎಷ್ಟೊಂದು ಶಾಖೆಗಳು ಹೊರಡುತ್ತವೆ! ಜಡ ಬೀಜದಲ್ಲಿ ಯಾವುದೇ ಜ್ಞಾನವಿರುವುದಿಲ್ಲ. ಇವರಂತೂ ಚೈತನ್ಯ ಬೀಜ ರೂಪನಾಗಿದ್ದಾರೆ. ಹೇಗೆ ಉತ್ಪತ್ತಿ, ಪಾಲನೆ ಮತ್ತು ವಿನಾಶವಾಗುತ್ತದೆಯೆಂದು ಅವರಲ್ಲಿ ಇಡೀ ಸೃಷ್ಟಿರೂಪಿ ವೃಕ್ಷದ ಜ್ಞಾನವಿದೆ. ಬಹಳ ದೊಡ್ಡ ವೃಕ್ಷವು ಸಮಾಪ್ತಿಯಾಗಿ ಮತ್ತೆ ಇನ್ನೊಂದು ಹೊಸ ವೃಕ್ಷವು ಹೇಗೆ ಎದ್ದುನಿಲ್ಲುತ್ತದೆ ಎಂಬುದು ಗುಪ್ತ ಮಾತಾಗಿದೆ. ನಿಮಗೆ ಜ್ಞಾನವೂ ಗುಪ್ತವಾಗಿಯೇ ಸಿಗುತ್ತದೆ, ತಂದೆಯೂ ಗುಪ್ತವಾಗಿಯೇ ಬಂದಿದ್ದಾರೆ. ಈಗ ಹೊಸ ವೃಕ್ಷದ ನಾಟಿಯಾಗುತ್ತಿದೆ. ಈಗಂತೂ ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ. ಬೀಜದಿಂದ ಮೊಟ್ಟ ಮೊದಲನೆಯದಾಗಿ ಯಾವ ಎಲೆಗಳು ಬಂದವೋ ಅವರು ಯಾರಾಗಿದ್ದರು? ಸತ್ಯಯುಗದ ಮೊದಲ ಎಲೆಯೆಂದು ಕೃಷ್ಣನಿಗೇ ಹೇಳಲಾಗುವುದು, ಲಕ್ಷ್ಮೀ-ನಾರಾಯಣರಿಗಲ್ಲ. ಹೊಸ ಎಲೆಯು ಚಿಕ್ಕದಾಗಿರುತ್ತದೆ ನಂತರ ಅದು ದೊಡ್ಡದಾಗುತ್ತದೆ ಅಂದಾಗ ಈ ಬೀಜಕ್ಕೆ ಎಷ್ಟೊಂದು ಮಹಿಮೆಯಿದೆ! ಇವರಂತೂ ಚೈತನ್ಯನಲ್ಲವೆ. ಮತ್ತೆ ಎಲೆಗಳೂ ಹೊರಡುತ್ತವೆ, ಅವರಿಗೆ ಬಹಳ ಮಹಿಮೆಯಾಗುತ್ತದೆ. ನೀವೀಗ ದೇವಿ-ದೇವತೆಗಳಾಗುತ್ತಿದ್ದೀರಿ, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತಿದ್ದೀರಿ. ಮೂಲ ಮಾತೇ ಇದಾಗಿದೆ – ದೈವೀ ಗುಣಗಳನ್ನು ನಾವು ಧಾರಣೆ ಮಾಡಬೇಕು, ಇವರ ತರಹ ನಾವೂ ಆಗಬೇಕಾಗಿದೆ, ಚಿತ್ರಗಳೂ ಇವೆ. ಚಿತ್ರಗಳು ಇಲ್ಲದೇ ಹೋದರೆ ಬುದ್ಧಿಯಲ್ಲಿ ಜ್ಞಾನವೇ ಬರುವುದಿಲ್ಲ. ಈ ಚಿತ್ರಗಳು ಬಹಳ ಉಪಯೋಗಕ್ಕೆ ಬರುತ್ತವೆ. ಭಕ್ತಿಮಾರ್ಗದಲ್ಲಿ ಈ ಚಿತ್ರಗಳಿಗೂ ಪೂಜೆ ನಡೆಯುತ್ತದೆ ಮತ್ತು ಜ್ಞಾನ ಮಾರ್ಗದಲ್ಲಿ ನಾವೂ ಈ ರೀತಿಯಾಗಬೇಕೆಂದು ಈ ಚಿತ್ರಗಳಿಂದ ನಿಮಗೆ ಜ್ಞಾನ ಸಿಗುತ್ತದೆ. ಭಕ್ತಿ ಮಾರ್ಗದಲ್ಲಿ ನಾವೇ ಈ ರೀತಿಯಾಗಬೇಕೆಂಬುದನ್ನು ಅವರು ತಿಳಿದುಕೊಳ್ಳುವುದಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಮಂದಿರಗಳಾಗುತ್ತವೆ! ಎಲ್ಲರಿಗಿಂತ ಹೆಚ್ಚು ಯಾರ ಮಂದಿರಗಳಾಗುತ್ತವೆ? ಯಾರು ಬೀಜರೂಪನಾಗಿದ್ದಾರೆ, ಆ ಶಿವ ತಂದೆಯ ಮಂದಿರಗಳೇ ಹೆಚ್ಚು ತಯಾರಾಗುತ್ತವೆ. ಅವರನಂತರ ಮೊದಲ ರಚನೆಯ ಮಂದಿರಗಳು ನಿರ್ಮಾಣವಾಗುತ್ತದೆ. ಮೊದಲ ರಚನೆಯು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಶಿವನ ನಂತರ ಎಲ್ಲರಿಗಿಂತ ಹೆಚ್ಚು ಪೂಜೆಯು ಇವರಿಗೇ ನಡೆಯುತ್ತದೆ. ಮಾತೆಯರಂತೂ ಜ್ಞಾನವನ್ನು ತಿಳಿಸುತ್ತೀರಿ, ಅವರ ಪೂಜೆಯಾಗುವುದಿಲ್ಲ, ಓದಿಸುತ್ತೀರಲ್ಲವೆ. ತಂದೆಯು ನಿಮಗೆ ಓದಿಸುತ್ತಾರೆ, ನೀವು ಯಾರದೇ ಪೂಜೆ ಮಾಡುವುದಿಲ್ಲ. ಓದಿಸುವವರಿಗೂ ಈಗ ಪೂಜೆ ಮಾಡುವಂತಿಲ್ಲ. ನೀವು ಯಾವಾಗ ಓದಿ ಮತ್ತೆ ಅವಿದ್ಯಾವಂತರಾಗುವಿರೋ ಆಗ ಪೂಜೆಯಾಗುವುದು. ನೀವೇ ದೇವಿ-ದೇವತೆಗಳಾಗುತ್ತೀರಿ, ನಿಮಗೇ ತಿಳಿದಿದೆ - ಯಾರು ನಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುವರೋ ಅವರ ಪೂಜೆಯೂ ನಡೆಯುವುದು ಮತ್ತು ನಂಬರ್ವಾರ್ ನಮ್ಮ ಪೂಜೆಯೂ ನಡೆಯುತ್ತದೆ. ಕ್ರಮೇಣವಾಗಿ ಪಂಚ ತತ್ವಗಳಿಗೂ ಪೂಜೆ ಮಾಡತೊಡಗುತ್ತಾರೆ. ಶರೀರವು ಪಂಚ ತತ್ವಗಳಿಂದಾಗಿದೆಯಲ್ಲವೆ. ಪಂಚ ತತ್ವಗಳಿಗಾದರೂ ಪೂಜೆ ಮಾಡಿ ಅಥವಾ ಶರೀರದ ಪೂಜೆಯನ್ನಾದರೂ ಮಾಡಿ ಒಂದೇ ಆಗಿಬಿಡುತ್ತದೆ. ಈ ಜ್ಞಾನವಂತೂ ಬುದ್ಧಿಯಲ್ಲಿದೆ. ಈ ಲಕ್ಷ್ಮೀ-ನಾರಾಯಣರು ಇಡೀ ವಿಶ್ವದ ಮಾಲೀಕರಾಗಿದ್ದರು, ಹೊಸ ಸೃಷ್ಟಿಯಲ್ಲಿ ಈ ದೇವಿ-ದೇವತೆಗಳ ರಾಜ್ಯವಿತ್ತು ಆದರೆ ಅವರು ಯಾವಾಗ ಇದ್ದರು ಎಂಬುದನ್ನು ತಿಳಿದುಕೊಂಡಿಲ್ಲ. ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ. ಲಕ್ಷಾಂತರ ವರ್ಷಗಳ ಮಾತು ಯಾರ ಬುದ್ಧಿಯಲ್ಲಿಯೂ ನಿಲ್ಲಲು ಸಾಧ್ಯವಿಲ್ಲ. ಈಗ ನಿಮಗೆ ಸ್ಮೃತಿಯಿದೆ - ನಾವು ಇಂದಿಗೆ 5000 ವರ್ಷಗಳ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ದೇವಿ-ದೇವತಾ ಧರ್ಮದವರು ಮತ್ತೆ ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆ. ಹಿಂದೂ ಧರ್ಮವೆಂದು ಹೇಳುವಂತಿಲ್ಲ, ಆದರೂ ಪತಿತರಾಗಿರುವ ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಹೇಳಿಕೊಳ್ಳುವುದು ಶೋಭಿಸುವುದಿಲ್ಲ. ಅಪವಿತ್ರರಿಗೆ ದೇವಿ-ದೇವತೆಗಳೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯರು ಪವಿತ್ರ ದೇವಿಯರ ಪೂಜೆ ಮಾಡುತ್ತಾರೆ ಅಂದಮೇಲೆ ಸ್ವಯಂ ಅಪವಿತ್ರರಾಗಿದ್ದಾರೆ ಆದ್ದರಿಂದ ಪವಿತ್ರರ ಮುಂದೆ ತಲೆ ಬಾಗಬೇಕಾಗುತ್ತದೆ. ಭಾರತದಲ್ಲಿ ವಿಶೇಷವಾಗಿ ಕನ್ಯೆಯರಿಗೆ ನಮನ ಮಾಡುತ್ತಾರೆ, ಕುಮಾರರಿಗೆ ನಮಿಸುವುದಿಲ್ಲ. ಕನ್ಯೆಯರಿಗೆ ಸ್ತ್ರೀಯರಿಗೆ ನಮಸ್ಕರಿಸುತ್ತಾರೆ. ಪುರುಷರಿಗೆ ಏಕೆ ನಮಿಸುವುದಿಲ್ಲ? ಈ ಸಮಯದಲ್ಲಿ ಜ್ಞಾನವು ಮೊದಲು ಮಾತೆಯರಿಗೆ ಸಿಗುತ್ತದೆ, ತಂದೆಯು ಇವರಲ್ಲಿ ಪ್ರವೇಶ ಮಾಡುತ್ತಾರೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಇವರು ಜ್ಞಾನದ ದೊಡ್ಡ ನದಿಯಾಗಿದ್ದಾರೆ. ಜ್ಞಾನ ನದಿಯೂ ಆಗಿದ್ದಾರೆ ಮತ್ತು ಪುರುಷನೂ ಆಗಿದ್ದಾರೆ. ಇದು ಎಲ್ಲದಕ್ಕಿಂತ ದೊಡ್ಡ ನದಿಯಾಗಿದೆ. ಬ್ರಹ್ಮ ಪುತ್ರ ನದಿಯು ಎಲ್ಲದಕ್ಕಿಂತ ದೊಡ್ಡದಾಗಿದೆ. ಇದು ಕಲ್ಕತ್ತಾದ ಕಡೆ ಸಾಗರದಲ್ಲಿ ಹೋಗಿ ಸೇರುತ್ತದೆ. ಅಲ್ಲಿ ಮೇಳವೂ ಆಗುತ್ತದೆ ಆದರೆ ಇದು ಆತ್ಮರು ಮತ್ತು ಪರಮಾತ್ಮನ ಮೇಳವೆಂದು ಅವರಿಗೆ ಗೊತ್ತಿಲ್ಲ. ಅದಂತೂ ನೀರಿನ ನದಿಯಾಗಿದೆ ಯಾವುದಕ್ಕೆ ಬ್ರಹ್ಮ ಪುತ್ರ ಎಂದು ಹೆಸರನ್ನಿಟ್ಟಿದ್ದಾರೆ. ಅವರಂತೂ ಬ್ರಹ್ಮನೆಂದು ಈಶ್ವರನಿಗೆ ಹೇಳಿದ್ದಾರೆ ಆದ್ದರಿಂದ ಬ್ರಹ್ಮ ಪುತ್ರ ನದಿಯನ್ನು ಬಹಳ ಪಾವನವೆಂದು ತಿಳಿಯುತ್ತಾರೆ. ದೊಡ್ಡ ನದಿಯಾಗಿದ್ದರೆ ಅದು ಪವಿತ್ರವಾಗಿಯೂ ಇರುವುದು, ವಾಸ್ತವದಲ್ಲಿ ಪತಿತ-ಪಾವನಿ ಎಂದು ಗಂಗೆಗೆ ಅಲ್ಲ, ಬ್ರಹ್ಮ ಪುತ್ರ ನದಿಗೆ ಹೇಳಲಾಗುವುದು. ಮೇಳವು ಇಲ್ಲಿಯೇ ಸೇರುತ್ತದೆ ಅಂದರೆ ಇದು ಸಾಗರ ಮತ್ತು ಬ್ರಹ್ಮ ನದಿಯ ಮೇಳವಾಗಿದೆ. ಬ್ರಹ್ಮಾರವರ ಮೂಲಕ ಹೇಗೆ ರಚನೆಯಾಗುತ್ತದೆ ಎಂಬುದು ಗುಹ್ಯ ತಿಳಿದುಕೊಳ್ಳುವ ಮಾತುಗಳಾಗಿವೆ, ಇವು ಪ್ರಾಯಃಲೋಪವಾಗಿ ಬಿಡುತ್ತವೆ. ಇದಂತೂ ಬಹಳ ಸಹಜ ಮಾತಲ್ಲವೆ.

ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ ಮತ್ತೆ ಈ ಪ್ರಪಂಚವೇ ಸಮಾಪ್ತಿಯಾಗಿ ಬಿಡುವುದು. ಶಾಸ್ತ್ರ ಇತ್ಯಾದಿಗಳೇನೂ ಉಳಿಯುವುದಿಲ್ಲ. ಮತ್ತೆ ಭಕ್ತಿಮಾರ್ಗದಲ್ಲಿ ಈ ಶಾಸ್ತ್ರಗಳು ರಚಿಸಲ್ಪಡುತ್ತವೆ, ಜ್ಞಾನ ಮಾರ್ಗದಲ್ಲಿ ಶಾಸ್ತ್ರಗಳಿರುವುದಿಲ್ಲ. ಈ ಶಾಸ್ತ್ರಗಳು ಪರಂಪರೆಯಿಂದ ನಡೆದು ಬರುತ್ತವೆ ಎಂದು ಮನುಷ್ಯರು ತಿಳಿಯುತ್ತಾರೆ, ಸ್ವಲ್ಪವೂ ಜ್ಞಾನವಿಲ್ಲ. ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ ಆದ್ದರಿಂದ ಪರಂಪರೆಯೆಂದು ಹೇಳಿ ಬಿಡುತ್ತಾರೆ. ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳಿಗೆ ಈ ಬೇಹದ್ದಿನ ವಿದ್ಯೆಯು ಸಿಗುತ್ತಿದೆ, ಇದರಿಂದ ನೀವು ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಬಲ್ಲಿರಿ. ನಿಮಗೆ ಈ ದೇವಿ-ದೇವತೆಗಳ ಪೂರ್ಣ ಚರಿತ್ರೆ-ಭೂಗೋಳವು ತಿಳಿದಿದೆ, ಇವರು ಪವಿತ್ರ ಪ್ರವೃತ್ತಿ ಮಾರ್ಗದ ಪೂಜ್ಯರಾಗಿದ್ದಾರೆ, ಈಗ ಪೂಜಾರಿ ಪತಿತರಾಗಿದ್ದಾರೆ. ಸತ್ಯಯುಗದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿರುತ್ತದೆ. ಇಲ್ಲಿ ಕಲಿಯುಗದಲ್ಲಿ ಅಪವಿತ್ರ ಪ್ರವೃತ್ತಿ ಮಾರ್ಗವಿದೆ ನಂತರ ನಿವೃತ್ತಿ ಮಾರ್ಗವಾಗುತ್ತದೆ. ಅದೂ ಸಹ ಡ್ರಾಮಾದಲ್ಲಿದೆ. ಅದಕ್ಕೆ ಸನ್ಯಾಸ ಧರ್ಮವೆಂದು ಹೇಳಲಾಗುತ್ತದೆ. ಗೃಹಸ್ಥದ ಸನ್ಯಾಸ ಮಾಡಿ ಕಾಡಿಗೆ ಹೊರಟು ಹೋಗುತ್ತಾರೆ, ಅದು ಹದ್ದಿನ ಸನ್ಯಾಸವಾಗಿದೆ. ಇರುವುದಂತೂ ಇದೇ ಹಳೆಯ ಪ್ರಪಂಚದಲ್ಲಿಯೇ ಅಲ್ಲವೆ. ನೀವೀಗ ತಿಳಿದುಕೊಳ್ಳುತ್ತೀರಿ - ನಾವು ಸಂಗಮಯುಗದಲ್ಲಿದ್ದೇವೆ, ಮತ್ತೆ ಹೊಸ ಪ್ರಪಂಚದಲ್ಲಿ ಹೋಗುತ್ತೇವೆ. ನಿಮಗೆ ತಿಥಿ-ತಾರೀಖು, ಘಳಿಗೆಯ ಸಹಿತವಾಗಿ ಎಲ್ಲವೂ ತಿಳಿದಿದೆ. ಅವರಂತೂ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷ ಎಂದು ಹೇಳಿ ಬಿಡುತ್ತಾರೆ. ಇದರ ಪೂರ್ಣ ಲೆಕ್ಕವನ್ನು ತೆಗೆಯಬಹುದಾಗಿದೆ. ಲಕ್ಷಾಂತರ ವರ್ಷಗಳ ಮಾತು ನೆನಪು ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಯಾರಾಗಿದ್ದಾರೆ, ಹೇಗೆ ಬರುತ್ತಾರೆ, ಯಾವ ಕರ್ತವ್ಯ ಮಾಡುತ್ತಾರೆ? ನೀವು ಎಲ್ಲರ ಕರ್ತವ್ಯವನ್ನು ಜನ್ಮಪತ್ರಿಯನ್ನು ಅರಿತುಕೊಂಡಿದ್ದೀರಿ ಬಾಕಿ ವೃಕ್ಷದ ಎಲೆಗಳಂತೂ ಬಹಳಷ್ಟಿರುತ್ತವೆ, ಅದನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಈ ಬೇಹದ್ದಿನ ಸೃಷ್ಟಿರೂಪಿ ವೃಕ್ಷದ ಎಲೆಗಳು ಎಷ್ಟಿವೆ? 5000 ವರ್ಷಗಳಲ್ಲಿ ಇಷ್ಟೊಂದು ಕೋಟ್ಯಾಂತರ ಜನಸಂಖ್ಯೆಯಿದೆ ಅಂದಮೇಲೆ ಇನ್ನು ಲಕ್ಷಾಂತರ ವರ್ಷಗಳಲ್ಲಿ ಇನ್ನೆಷ್ಟು ಜನಸಂಖ್ಯೆಯಾಗಬಹುದು! ಭಕ್ತಿಮಾರ್ಗದಲ್ಲಿ ತೋರಿಸುತ್ತಾರೆ - ಸತ್ಯಯುಗವು ಇಷ್ಟು ವರ್ಷಗಳು, ತ್ರೇತಾ ಇಷ್ಟು ವರ್ಷಗಳು, ದ್ವಾಪರ ಯುಗವು ಇಷ್ಟು ವರ್ಷಗಳಿವೆಯೆಂದು ಬರೆಯಲ್ಪಟ್ಟಿದೆ. ತಂದೆಯು ಕುಳಿತು ನೀವು ಮಕ್ಕಳಿಗೆ ಇದೆಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ. ಮಾವಿನ ಬೀಜವನ್ನು ನೋಡಿದಾಗ ಮಾವಿನ ವೃಕ್ಷವೇ ಸನ್ಮುಖದಲ್ಲಿ ಬರುತ್ತದೆಯಲ್ಲವೆ. ಈಗ ಮನುಷ್ಯ ಸೃಷ್ಟಿಯ ಬೀಜರೂಪನು ನಿಮ್ಮ ಸನ್ಮುಖದಲ್ಲಿದ್ದಾರೆ, ನಿಮಗೆ ಅವರೇ ಕುಳಿತು ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ ಏಕೆಂದರೆ ಚೈತನ್ಯನಾಗಿದ್ದಾರೆ. ತಿಳಿಸುತ್ತಾರೆ - ನಮ್ಮದು ಇದು ತಲೆ ಕೆಳಕಾದ ವೃಕ್ಷವಾಗಿದೆ. ನೀವೂ ಸಹ ಇದನ್ನು ತಿಳಿಸಬಹುದು - ಈ ಪ್ರಪಂಚದಲ್ಲಿ ಏನೆಲ್ಲಾ ಜಡ ಹಾಗೂ ಚೈತನ್ಯವಿದೆಯೋ ಎಲ್ಲವೂ ಚಾಚೂ ತಪ್ಪದೆ ಪುನರಾವರ್ತನೆಯಾಗುವುದು. ಈಗ ಎಷ್ಟೊಂದು ವೃದ್ಧಿ ಹೊಂದುತ್ತಿರುತ್ತಾರೆ! ಸತ್ಯಯುಗದಲ್ಲಿ ಇಷ್ಟೊಂದು ಇರಲು ಸಾಧ್ಯವಿಲ್ಲ. ಇಂತಹ ವಸ್ತು ಆಸ್ಟ್ರೇಲಿಯಾದಿಂದ, ಜಪಾನಿನಿಂದ ಬಂದಿತೆಂದು ಹೇಳುತ್ತಾರೆ. ಸತ್ಯಯುಗದಲ್ಲಿ ಜಪಾನ್, ಆಸ್ಟ್ರೇಲಿಯಾ ಮೊದಲಾದುವುಗಳಿರಲಿಲ್ಲ. ಡ್ರಾಮಾನುಸಾರ ಅಲ್ಲಿನ ವಸ್ತುಗಳು ಇಲ್ಲಿಗೆ ಆಮದು ಮಾಡಿಕೊಳ್ಳುತ್ತಾರೆ. ಅಮೇರಿಕಾದಿಂದ ಗೋಧಿಯು ಬರುತ್ತದೆ. ಸತ್ಯಯುಗದಲ್ಲಿ ಎಲ್ಲಿಂದಲೂ ಬರುವುದಿಲ್ಲ. ಅಲ್ಲಂತೂ ಒಂದೇ ಧರ್ಮವಿರುತ್ತದೆ, ಇಲ್ಲಾದರೆ ಧರ್ಮಗಳು ವೃದ್ಧಿಯಾಗುತ್ತಿರುತ್ತದೆ ಆದ್ದರಿಂದ ಅವರಜೊತೆ ಎಲ್ಲಾ ವಸ್ತುಗಳು ತಯಾರಾಗುತ್ತಾ ಇರುತ್ತವೆ. ಸತ್ಯಯುಗದಲ್ಲಿ ಏನನ್ನೂ ಎಲ್ಲಿಂದಲೂ ತರಿಸುವುದಿಲ್ಲ, ಈಗ ನೋಡಿ ಎಲ್ಲೆಲ್ಲಿಂದ ತರಿಸುತ್ತಾರೆ! ಮನುಷ್ಯರು ಕೊನೆಯಲ್ಲಿ ವೃದ್ಧಿ ಹೊಂದುತ್ತಾ ಹೋಗುತ್ತಿದ್ದಾರೆ. ಸತ್ಯಯುಗದಲ್ಲಿ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ. ಅಲ್ಲಿನ ಪ್ರತೀ ವಸ್ತು ಸತೋಪ್ರಧಾನ, ಬಹಳ ಚೆನ್ನಾಗಿರುತ್ತದೆ. ಮನುಷ್ಯರೇ ಸತೋಪ್ರಧಾನರಾಗಿರುತ್ತಾರೆ. ಮನುಷ್ಯರು ಚೆನ್ನಾಗಿದ್ದಾಗ ಸಾಮಗ್ರಿಗಳೂ ಚೆನ್ನಾಗಿರುತ್ತವೆ. ಕೆಟ್ಟ ಮನುಷ್ಯರಾದಾಗ ಸಾಮಗ್ರಿಗಳು ನಷ್ಟದಾಯಕವಾಗುತ್ತದೆ.

ವಿಜ್ಞಾನದ ಮುಖ್ಯವಸ್ತು ಅಣ್ವಸ್ತ್ರಗಳಾಗಿವೆ, ಇದರಿಂದ ಇಡೀ ಪ್ರಪಂಚವೇ ವಿನಾಶವಾಗುತ್ತದೆ. ಅದನ್ನು ಹೇಗೆ ತಯಾರಿಸಬಹುದು! ಅದನ್ನು ತಯಾರಿಸುವ ಆತ್ಮನಲ್ಲಿ ಡ್ರಾಮಾನುಸಾರ ಮೊದಲೇ ಆ ಜ್ಞಾನವಿರುತ್ತದೆ. ಸಮಯಬಂದಾಗ ಆ ಜ್ಞಾನವು ಅವರಲ್ಲಿ ಇಮರ್ಜ್ ಆಗುತ್ತದೆ. ಯಾರಲ್ಲಿ ಆ ಜ್ಞಾನವಿರುವುದೋ ಆಗಲೇ ಕೆಲಸ ಮಾಡುತ್ತಾರೆ ಮತ್ತು ಅನ್ಯರಿಗೆ ಕಲಿಸುತ್ತಾರೆ. ಕಲ್ಪ-ಕಲ್ಪವೂ ಯಾವ ಪಾತ್ರವನ್ನಭಿನಯಿಸಿದ್ದಾರೆಯೋ ಅದೇ ನಡೆಯುತ್ತಿರುತ್ತದೆ. ನೀವೀಗ ಎಷ್ಟೊಂದು ಜ್ಞಾನಪೂರ್ಣರಾಗುತ್ತೀರಿ, ಇದಕ್ಕಿಂತ ಹೆಚ್ಚು ಜ್ಞಾನವು ಮತ್ತ್ಯಾವುದೂ ಇಲ್ಲ. ಈ ಜ್ಞಾನದಿಂದ ನೀವು ದೇವತೆಗಳಾಗಿ ಬಿಡುತ್ತೀರಿ. ಇದಕ್ಕಿಂತ ಶ್ರೇಷ್ಠ ಜ್ಞಾನವು ಮತ್ತ್ಯಾವುದೂ ಇಲ್ಲ. ಅದು ಮಾಯೆಯ ಜ್ಞಾನವಾಗಿದೆ ಅದರಿಂದ ವಿನಾಶವಾಗುತ್ತದೆ. ಆ ವಿಜ್ಞಾನಿಗಳು ಚಂದ್ರ ಗ್ರಹಕ್ಕೆ ಹೋಗಿ ಸಂಶೋಧನೆ ನಡೆಸುತ್ತಾರೆ ಆದರೆ ನಿಮಗಾಗಿ ಯಾವುದೂ ಹೊಸ ಮಾತಲ್ಲ. ಇದೆಲ್ಲವೂ ಮಾಯೆಯ ಆಡಂಬರವಾಗಿದೆ, ಬಹಳ ಶೋ ಮಾಡುತ್ತಾರೆ. ಬಹಳ ಆಳದಲ್ಲಿ ಹೋಗುತ್ತಾರೆ. ಬುದ್ಧಿಯನ್ನು ಬಹಳ ಓಡಿಸುತ್ತಾರೆ. ಏನಾದರೂ ಕಮಾಲ್ ಮಾಡಿ ತೋರಿಸಬೇಕು ಎಂದು. ಬಹಳ ಚಮತ್ಕಾರ ಮಾಡುವುದರಿಂದ ಮತ್ತೆ ಅದು ನಷ್ಟವೇ ಆಗುತ್ತದೆ. ಏನೇನನ್ನೋ ತಯಾರಿಸುತ್ತಾರೆ. ತಯಾರಿಸುವವರಿಗೆ ಗೊತ್ತಿದೆ, ಇದರಿಂದ ಈ ವಿನಾಶವಾಗುವುದು ಎಂದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಗುಪ್ತ ಜ್ಞಾನದ ಸ್ಮರಣೆ ಮಾಡಿ ಹರ್ಷಿತರಾಗಿರಬೇಕಾಗಿದೆ. ದೇವತೆಗಳ ಚಿತ್ರಗಳನ್ನು ಸನ್ಮುಖದಲ್ಲಿ ನೋಡುತ್ತಾ ಅವರಿಗೆ ವಂದನೆ, ನಮಸ್ಕಾರಗಳನ್ನು ಮಾಡುವ ಬದಲು ಅವರಂತೆ ಆಗಲು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು.

2. ಸೃಷ್ಟಿಯ ಬೀಜರೂಪ ತಂದೆ ಮತ್ತು ಅವರ ಚೈತನ್ಯ ರಚನೆಯನ್ನು ತಿಳಿದುಕೊಂಡು ಜ್ಞಾನಪೂರ್ಣರಾಗಬೇಕು, ಈ ಜ್ಞಾನಕ್ಕಿಂತ ಹೆಚ್ಚು ಬೇರೆ ಯಾವ ಜ್ಞಾನವಿರಲು ಸಾಧ್ಯವಿಲ್ಲ, ಈ ನಶೆಯಲ್ಲಿರಬೇಕು.

ವರದಾನ:
“ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ” ಈ ಪಾಠದ ಸ್ಮೃತಿಯಿಂದ ಏಕರಸ ಸ್ಥಿತಿಯನ್ನಾಗಿ ಮಾಡಿಕೊಳ್ಳುವಂತಹ ಶ್ರೇಷ್ಠ ಆತ್ಮ ಭವ.

“ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ” ಈ ಪಾಠವನ್ನು ನಿರಂತರವೂ ನೆನಪಿರಲಿ, ಇದರಿಂದ ಸ್ಥಿತಿಯು ಏಕರಸವಾಗಿ ಆಗಿ ಬಿಡುವುದು ಏಕೆಂದರೆ ಜ್ಞಾನವಂತು ಸಂಪೂರ್ಣ ಸಿಕ್ಕಿದೆ, ಅಪಾರ ಜ್ಞಾನ ರತ್ನಗಳಿವೆ. ಆದರೆ ಜ್ಞಾನ ರತ್ನಗಳಿದ್ದರೂ ಬಿಂದುವಿನ ರೂಪದಲ್ಲಿರಬೇಕು - ಯಾರು ಯಾವುದೇ ಸಮಯದಲ್ಲಿ ಕೆಳಗೆ ಎಳೆಯುತ್ತಿದ್ದರೂ ಬಿಂದುವಿನ ರೂಪದಲ್ಲಿರುವುದು ಆ ಸಮಯದ ಚಮತ್ಕಾರವಾಗಿದೆ. ಕೆಲವೊಮ್ಮೆ ಮಾತುಗಳು ಕೆಳಗೆ ಎಳೆಯುತ್ತವೆ, ಕೆಲವೊಮ್ಮೆ ಯಾವುದಾದರೂ ವ್ಯಕ್ತಿ, ಕೆಲವೊಮ್ಮೆ ಯಾವುದಾದರೂ ವಸ್ತು, ಕೆಲವೊಮ್ಮೆ ವಾಯುಮಂಡಲವೇ..... ಇದಂತು ಅವಶ್ಯವಾಗಿ ಆಗುವುದು ಆದರೆ ಸೆಕೆಂಡಿನಲ್ಲಿ ಈ ವಿಸ್ತಾರವೇ ಸಮಾಪ್ತಿಯಾಗಿ ಏಕರಸ ಸ್ಥಿತಿಯಿರಬೇಕು. ಹೀಗಿದ್ದಾಗ ಶ್ರೇಷ್ಠ ಆತ್ಮ ಭವದ ವರದಾನಿ ಎಂದು ಹೇಳಲಾಗುತ್ತದೆ.

ಸ್ಲೋಗನ್:
ಜ್ಞಾನದ ಶಕ್ತಿಯನ್ನು ಧಾರಣೆ ಮಾಡಿಕೊಳ್ಳುತ್ತೀರೆಂದರೆ, ವಿಘ್ನವು ಯುದ್ಧ ಮಾಡುವುದಕ್ಕೆ ಬದಲು ಸೋಲನ್ನು ಅನುಭವಿಸುತ್ತದೆ.

ಅವ್ಯಕ್ತ ಸೂಚನೆಗಳು:– ಈ ಅವ್ಯಕ್ತ ಮಾಸದಲ್ಲಿ ಬಂಧನಮುಕ್ತರಾಗಿ ಜೀವನಮುಕ್ತ ಸ್ಥಿತಿಯ ಅನುಭವ ಮಾಡಿರಿ.

ಈಗ ನೀವು ಎಲ್ಲರೂ ಈ ರೀತಿ ಮುಕ್ತರಾಗಿ, ಮಾಸ್ಟರ್ ಮುಕ್ತಿದಾತರಾರೆ - ಎಲ್ಲಾ ಆತ್ಮಗಳು, ಪ್ರಕೃತಿ, ಭಕ್ತರು ಬಂಧನಮುಕ್ತರಾಗುವಂತೆ ಮಾಡಿರಿ. ಈಗ ಬ್ರಹ್ಮಾ ತಂದೆಗೆ ಈ ಒಂದೇ ವಿಷಯದ ದಿನಾಂಕದ ಬಗ್ಗೆ ಸದಾ ಚಿಂತೆಯಿರುತ್ತದೆ–“ನನ್ನ ಪ್ರತಿಯೊಬ್ಬ ಮಕ್ಕಳು ಯಾವಾಗ ಜೀವನಮುಕ್ತರಾಗುವರು?” ಎಂದು. ಹೀಗೆ ಅರ್ಥ ಮಾಡಿಕೊಳ್ಳಬಾರದು–ಅಂತಿಮದಲ್ಲಿ ಜೀವನಮುಕ್ತರಾಗುತ್ತೇವೆ ಎಂದು–ಇಲ್ಲ. ಬಹುಕಾಲದಿಂದ ಜೀವನಮುಕ್ತ ಸ್ಥಿತಿಯ ಅಭ್ಯಾಸ ಮಾಡುವುದೇ, ಬಹುಕಾಲ ಜೀವನಮುಕ್ತ ರಾಜ್ಯಭಾಗ್ಯದ ಹಕ್ಕುದಾರರನ್ನಾಗಿ ಮಾಡುತ್ತದೆ.