05.02.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನಿಮ್ಮನ್ನು ರಾವಣ ರಾಜ್ಯದಿಂದ ಮುಕ್ತ ಮಾಡಿ ಸದ್ಗತಿಯನ್ನು ಕೊಡಲು, ನರಕವಾಸಿಗಳನ್ನು
ಸ್ವರ್ಗವಾಸಿಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ.”
ಪ್ರಶ್ನೆ:
ತಂದೆಯು ನೀವು
ಭಾರತವಾಸಿ ಮಕ್ಕಳಿಗೆ ಯಾವ-ಯಾವ ಸ್ಮೃತಿ ತರಿಸುತ್ತಾರೆ?
ಉತ್ತರ:
ಹೇ ಭಾರತವಾಸಿ
ಮಕ್ಕಳೇ! ನೀವು ಸ್ವರ್ಗವಾಸಿಗಳಾಗಿದ್ದಿರಿ, ಇಂದಿಗೆ 5000 ವರ್ಷಗಳ ಮೊದಲು ಭಾರತವು
ಸ್ವರ್ಗವಾಗಿತ್ತು, ಚಿನ್ನ-ವಜ್ರದ ಮಹಲುಗಳಿತ್ತು. ನೀವು ಇಡೀ ವಿಶ್ವದ ಮಾಲೀಕರಾಗಿದ್ದಿರಿ, ಇಡೀ
ಆಕಾಶ, ಭೂಮಿ ಎಲ್ಲವೂ ನಿಮ್ಮದಾಗಿತ್ತು. ಭಾರತವು ಶಿವ ತಂದೆಯಿಂದ ಸ್ಥಾಪನೆ ಮಾಡಲ್ಪಟ್ಟ
ಶಿವಾಲಯವಾಗಿತ್ತು, ಅಲ್ಲಿ ಪವಿತ್ರತೆಯಿತ್ತು. ಈಗ ಪುನಃ ಭಾರತವು ಆ ರೀತಿ ಆಗಲಿದೆ.
ಗೀತೆ:
ನಯನ ಹೀನರಿಗೆ
ದಾರಿ ತೋರಿಸು ಪ್ರಭು........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಯಾರು ಹೇಳಿದರು? ಆತ್ಮಗಳ ತಂದೆ. ಅಂದಾಗ
ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳು ಹೇಳಿದರು - ಹೇ ತಂದೆಯೇ. ಅವರಿಗೆ ಈಶ್ವರನೆಂದೂ ಹೇಳಲಾಗುತ್ತದೆ,
ಪಿತನೆಂದೂ ಹೇಳಲಾಗುತ್ತದೆ. ಯಾವ ಪಿತ? ಪರಮಪಿತ. ಏಕೆಂದರೆ ಇಬ್ಬರು ತಂದೆಯರಿದ್ದಾರೆ, ಒಬ್ಬರು
ಲೌಕಿಕ, ಇನ್ನೊಬ್ಬರು ಪಾರಲೌಕಿಕ. ಲೌಕಿಕ ತಂದೆಯ ಮಕ್ಕಳು ಪಾರಲೌಕಿಕ ತಂದೆಯನ್ನು ಹೇ ತಂದೆಯೇ ಎಂದು
ಕರೆಯುತ್ತಾರೆ. ಒಳ್ಳೆಯದು, ತಂದೆಯ ಹೆಸರು? ಶಿವ. ಅವರಿಗೆ ನಿರಾಕಾರನೆಂದು ಪೂಜೆ ಮಾಡಲಾಗುತ್ತದೆ.
ಅವರಿಗೆ ಪಾರಲೌಕಿಕ ತಂದೆಯೆಂದು ಹೇಳಲಾಗುತ್ತದೆ. ಲೌಕಿಕ ತಂದೆಗೆ ಸುಪ್ರೀಂ ಎಂದು ಹೇಳಲಾಗುವುದಿಲ್ಲ.
ಎಲ್ಲಾ ಆತ್ಮರ ಶ್ರೇಷ್ಠಾತಿ ಶ್ರೇಷ್ಠ ತಂದೆಯು ಒಬ್ಬರೇ ಆಗಿದ್ದಾರೆ, ಎಲ್ಲಾ ಜೀವಾತ್ಮರು ಆ
ತಂದೆಯನ್ನು ನೆನಪು ಮಾಡುತ್ತಾರೆ. ಆತ್ಮಗಳು ನಮ್ಮ ತಂದೆ ಯಾರೆಂಬುದನ್ನು ಮರೆತು ಹೋಗಿದ್ದಾರೆ. ಓ
ಪರಮಪಿತ ಪರಮಾತ್ಮನೇ, ನಾವು ನಯನ ಹೀನರಿಗೆ ನಯನಗಳನ್ನು ಕೊಡಿ, ಅದರಿಂದ ನಾವು ನಮ್ಮ ತಂದೆಯನ್ನು
ಅರಿತುಕೊಳ್ಳಬೇಕು, ಭಕ್ತಿಮಾರ್ಗದ ಗೊಂದಲಗಳಿಂದ ಬಿಡಿಸಿ ಎಂದು ಕರೆಯುತ್ತಾರೆ. ಸದ್ಗತಿಗಾಗಿ ಮೂರನೇ
ನೇತ್ರವನ್ನು ಪಡೆಯಲು, ತಂದೆಯೊಂದಿಗೆ ಮಿಲನ ಮಾಡಲು ಕರೆಯುತ್ತಾರೆ ಏಕೆಂದರೆ ತಂದೆಯೇ ಕಲ್ಪ-ಕಲ್ಪವೂ
ಭಾರತದಲ್ಲಿ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಈಗ ಕಲಿಯುಗವಿದೆ, ಕಲಿಯುಗದ ನಂತರ
ಸತ್ಯಯುಗ ಬರುವುದು. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಬೇಹದ್ದಿನ ತಂದೆಯು ಬಂದು ಯಾರು ಪತಿತ,
ಭ್ರಷ್ಟಾಚಾರಿಗಳು ಆಗಿ ಬಿಟ್ಟಿದ್ದಾರೆಯೋ ಅವರನ್ನು ಪುರುಷೋತ್ತಮರನ್ನಾಗಿ ಮಾಡುತ್ತಾರೆ. ಈ
ಪುರುಷೋತ್ತಮರು (ಲಕ್ಷ್ಮೀ-ನಾರಾಯಣ) ಭಾರತದಲ್ಲಿದ್ದರು. ಲಕ್ಷ್ಮೀ-ನಾರಾಯಣರ ವಂಶಾವಳಿಯ
ರಾಜ್ಯವಿತ್ತು. ಇಂದಿಗೆ 5000 ವರ್ಷಗಳ ಮೊದಲು ಸತ್ಯಯುಗದಲ್ಲಿ ಶ್ರೀ ಲಕ್ಷ್ಮೀ-ನಾರಾಯಣರ
ರಾಜ್ಯವಿತ್ತು, ಇದನ್ನು ತಂದೆಯು ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ. ನೀವು ಭಾರತವಾಸಿಗಳು ಇಂದಿಗೆ
5000 ವರ್ಷಗಳ ಮೊದಲು ಸ್ವರ್ಗವಾಸಿಗಳಾಗಿದ್ದಿರಿ ಈಗಂತೂ ಎಲ್ಲರೂ ನರಕವಾಸಿಗಳಾಗಿದ್ದಾರೆ. ಇಂದಿಗೆ
5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಭಾರತಕ್ಕೆ ಬಹಳ ಮಹಿಮೆಯಿತ್ತು! ಚಿನ್ನ-ವಜ್ರದ
ಮಹಲುಗಳಿತ್ತು. ಈಗಂತೂ ಯಾವುದೂ ಇಲ್ಲ. ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಕೇವಲ
ಸೂರ್ಯವಂಶಿಯರೇ ಇದ್ದರು, ಚಂದ್ರವಂಶಿಯರೂ ಸಹ ಕೊನೆಯಲ್ಲಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ -
ನೀವು ಸೂರ್ಯವಂಶಿ ಮನೆತನದವರಾಗಿದ್ದಿರಿ, ಇಲ್ಲಿಯವರೆಗೂ ಈ ಲಕ್ಷ್ಮೀ-ನಾರಾಯಣರ ಮಂದಿರಗಳನ್ನು
ಕಟ್ಟಿಸುತ್ತಾ ಇರುತ್ತಾರೆ ಆದರೆ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತು, ಹೇಗೆ ಪಡೆದರು
ಎಂಬುದು ಯಾರಿಗೂ ತಿಳಿದಿಲ್ಲ. ಪೂಜೆ ಮಾಡುತ್ತಾರೆ ಆದರೆ ಅರಿತುಕೊಂಡಿಲ್ಲ ಅಂದಮೇಲೆ
ಅಂದಶ್ರದ್ಧೆಯಾಯಿತಲ್ಲವೆ. ಶಿವನ, ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಾರೆ, ಚರಿತ್ರೆಯನ್ನು
ಅರಿತುಕೊಂಡಿಲ್ಲ. ಈಗ ಭಾರತವಾಸಿಗಳೇ ಸ್ವಯಂ ಹೇಳುತ್ತಾರೆ - ನಾವು ಪತಿತರಾಗಿದ್ದೇವೆ, ನಾವು
ಪತಿತರನ್ನು ಪಾವನರನ್ನಾಗಿ ಮಾಡುವ ತಂದೆಯೇ ಬನ್ನಿ, ಬಂದು ನಮ್ಮನ್ನು ದುಃಖದಿಂದ, ರಾವಣ ರಾಜ್ಯದಿಂದ
ಮುಕ್ತಮಾಡಿ. ತಂದೆಯೇ ಬಂದು ಎಲ್ಲರನ್ನೂ ಮುಕ್ತಗೊಳಿಸುತ್ತಾರೆ. ಮಕ್ಕಳಿಗೆ ತಿಳಿದಿದೆ -
ಸತ್ಯಯುಗದಲ್ಲಿ ಅವಶ್ಯವಾಗಿ ಒಂದುರಾಜ್ಯವಿತ್ತು. ಬಾಪೂಜಿಯೂ ಸಹ ನಮಗೆ ಪುನಃ ರಾಮ ರಾಜ್ಯವು ಬೇಕು
ಎಂದು ಹೇಳುತ್ತಿದ್ದರು. ಗೃಹಸ್ಥ ಧರ್ಮವು ಯಾವುದು ಪತಿತವಾಗಿ ಬಿಟ್ಟಿದೆಯೋ ಅದು ಈಗ ಪಾವನವಾಗಬೇಕು.
ನಾವು ಸ್ವರ್ಗವಾಸಿಗಳಾಗಲು ಇಚ್ಛಿಸುತ್ತೇವೆ. ಈಗ ನರಕವಾಸಿಗಳ ಗತಿಯೇನಾಗಿದೆ! ಎಂಬುದನ್ನೂ ಸಹ
ನೋಡುತ್ತಿದ್ದೀರಲ್ಲವೆ. ಇದಕ್ಕೆ ನರಕ, ಆಸುರೀ ಪ್ರಪಂಚವೆಂದು ಹೇಳಲಾಗುತ್ತದೆ. ಇದೇ ಭಾರತವು ದೈವೀ
ಪ್ರಪಂಚವಾಗಿತ್ತು. ತಂದೆಯು ತಿಳಿಸುತ್ತಾರೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, 84
ಲಕ್ಷ ಜನ್ಮಗಳಲ್ಲ. ನೀವು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೀರಿ. ನೀವಿಲ್ಲಿ
ಪಾತ್ರವನ್ನಭಿನಯಿಸಲು ಬಂದಿದ್ದೀರಿ. 84 ಜನ್ಮಗಳ ಪಾತ್ರವನ್ನು ಅಭಿನಯಿಸಿದ್ದೀರಿ,
ಪುನರ್ಜನ್ಮವನ್ನಂತೂ ಖಂಡಿತ ತೆಗೆದುಕೊಳ್ಳಬೇಕಾಗುತ್ತದೆಯಲ್ಲವೆ. 84 ಪುನರ್ಜನ್ಮಗಳಿರುತ್ತವೆ. ಈಗ
ಬೇಹದ್ದಿನ ತಂದೆಯು ನೀವು ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ತಂದೆಯು ನೀವು
ಮಕ್ಕಳೊಂದಿಗೆ (ಆತ್ಮಗಳೊಂದಿಗೆ) ಮಾತನಾಡುತ್ತಿದ್ದಾರೆ. ಅನ್ಯ ಸತ್ಸಂಗಗಳಲ್ಲಿ ಮನುಷ್ಯರು
ಮನುಷ್ಯರಿಗೆ ಭಕ್ತಿಮಾರ್ಗದ ಮಾತುಗಳನ್ನೇ ತಿಳಿಸುತ್ತಾರೆ. ಅರ್ಧಕಲ್ಪ ಭಾರತವು ಸ್ವರ್ಗವಾಗಿದ್ದಾಗ
ಒಬ್ಬರೂ ಪತಿತರಿರಲಿಲ್ಲ. ಈ ಸಮಯದಲ್ಲಿ ಒಬ್ಬರೂ ಪಾವನರಿಲ್ಲ. ಇದು ಪತಿತ ಪ್ರಪಂಚವಾಗಿದೆ,
ಗೀತೆಯಲ್ಲಿ ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ ಆದರೆ ಕೃಷ್ಣನು ಗೀತೆಯನ್ನು
ತಿಳಿಸಲಿಲ್ಲ. ಅವರು ತಮ್ಮ ಧರ್ಮ ಶಾಸ್ತ್ರವನ್ನೂ ತಿಳಿದುಕೊಂಡಿಲ್ಲ. ತಮ್ಮ ಧರ್ಮವನ್ನೇ ಮರೆತು
ಬಿಟ್ಟಿದ್ದಾರೆ. ಹಿಂದೂ ಎಂಬುದು ಯಾವುದೇ ಧರ್ಮವಲ್ಲ. ಮುಖ್ಯವಾಗಿ ನಾಲ್ಕು ಧರ್ಮಗಳಿವೆ, ಮೊದಲನೆಯದು
– ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಸೂರ್ಯವಂಶಿ ಮತ್ತು ಚಂದ್ರವಂಶಿ ಇಬ್ಬರನ್ನೂ ಸೇರಿಸಿ
ದೇವಿ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ಅಲ್ಲಿ ದುಃಖದ ಹೆಸರಿರುವುದಿಲ್ಲ. 21 ಜನ್ಮಗಳು ನೀವು
ಸುಖಧಾಮದಲ್ಲಿದ್ದಿರಿ ನಂತರ ರಾವಣ ರಾಜ್ಯ, ಭಕ್ತಿಯು ಆರಂಭವಾಗುತ್ತದೆ. ಭಕ್ತಿ ಮಾರ್ಗವು
ಕೆಳಗಿಳಿಯುವ ಮಾರ್ಗವಾಗಿದೆ, ಭಕ್ತಿಯು ರಾತ್ರಿ, ಜ್ಞಾನವು ದಿನವಾಗಿದೆ. ಈಗ ಘೋರ ಅಂಧಕಾರ
ರಾತ್ರಿಯಾಗಿದೆ. ಶಿವ ಜಯಂತಿ ಮತ್ತು ಶಿವರಾತ್ರಿ ಎರಡೂ ಶಬ್ದಗಳನ್ನೂ ಹೇಳುತ್ತಾರೆ. ಶಿವ ತಂದೆಯು
ಯಾವಾಗ ಬರುತ್ತಾರೆ? ರಾತ್ರಿಯಾದಾಗ. ಭಾರತವಾಸಿಗಳು ಘೋರ ಅಂಧಕಾರದಲ್ಲಿ ಬಂದು ಬಿಡುತ್ತಾರೆ ಆಗ
ತಂದೆಯು ಬರುತ್ತಾರೆ. ಗೊಂಬೆಗಳ ಪೂಜೆ ಮಾಡುತ್ತಿರುತ್ತಾರೆ. ಯಾರೊಬ್ಬರ ಚರಿತ್ರೆಯನ್ನೂ
ತಿಳಿದುಕೊಂಡಿಲ್ಲ. ಈ ಭಕ್ತಿಮಾರ್ಗದ ಶಾಸ್ತ್ರಗಳೂ ಸಹ ರಚನೆಯಾಗಲೇಬೇಕಾಗಿದೆ. ಈ ಡ್ರಾಮಾ,
ಸೃಷ್ಟಿಚಕ್ರವನ್ನು ತಿಳಿದುಕೊಳ್ಳಬೇಕಾಗಿದೆ. ಶಾಸ್ತ್ರಗಳಲ್ಲಿ ಈ ಜ್ಞಾನವಿಲ್ಲ, ಅದು ಭಕ್ತಿಯ
ಜ್ಞಾನ, ತತ್ವಜ್ಞಾನವಾಗಿದೆ. ಅದು ಸದ್ಗತಿ ಮಾರ್ಗದ ಜ್ಞಾನವಲ್ಲ, ನಾನು ಬಂದು ನಿಮಗೆ ಬ್ರಹ್ಮಾರವರ
ಮೂಲಕ ಜ್ಞಾನವನ್ನು ತಿಳಿಸುತ್ತೇನೆ. ನಮಗೆ ಸುಖಧಾಮ, ಶಾಂತಿಧಾಮದ ಮಾರ್ಗವನ್ನು ತಿಳಿಸಿ ಎಂದು
ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಇಂದಿಗೆ 5000 ವರ್ಷಗಳ ಮೊದಲು ಸುಖಧಾಮವಿತ್ತು, ಅದರಲ್ಲಿ
ನೀವು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದಿರಿ. ಸೂರ್ಯವಂಶಿ ಮನೆತನದವರ ರಾಜ್ಯವಿತ್ತು,
ಉಳಿದೆಲ್ಲಾ ಆತ್ಮರು ಶಾಂತಿಧಾಮದಲ್ಲಿದ್ದರು. ಅಲ್ಲಿ ಕೇವಲ 9 ಲಕ್ಷ ಜನಸಂಖ್ಯೆಯೆಂದು ಹೇಳುತ್ತಾರೆ.
ನೀವು ಮಕ್ಕಳನ್ನು ಇಂದಿಗೆ 5000 ವರ್ಷಗಳ ಮೊದಲು ಬಹಳ ಸಾಹುಕಾರರನ್ನಾಗಿ ಮಾಡಿದ್ದೆನು. ಇಷ್ಟೊಂದು
ಹಣವನ್ನು ಕೊಟ್ಟೆನು ಮತ್ತೆ ಅದನ್ನು ನೀವು ಎಲ್ಲಿ ಕಳೆದಿರಿ? ನೀವು ಎಷ್ಟೊಂದು ಸಾಹುಕಾರರಾಗಿದ್ದಿರಿ,
ಭಾರತವೇ ಎಲ್ಲದಕ್ಕಿಂತ ಶ್ರೇಷ್ಠಾತಿ ಶ್ರೇಷ್ಠ ಖಂಡವಾಗಿದೆ. ವಾಸ್ತವದಲ್ಲಿ ಇದು ಎಲ್ಲರ ತೀರ್ಥ
ಸ್ಥಾನವಾಗಿದೆ ಏಕೆಂದರೆ ಪತಿತ ಪಾವನ ತಂದೆಯ ಜನ್ಮ ಸ್ಥಾನವಾಗಿದೆ. ಯಾವುದೆಲ್ಲಾ ಧರ್ಮದವರಿದ್ದಾರೆಯೋ
ಎಲ್ಲರ ಸದ್ಗತಿಯನ್ನು ತಂದೆಯು ಮಾಡುತ್ತಾರೆ. ಕೇವಲ ರಾವಣ ರಾಜ್ಯವು ಲಂಕೆಯಲ್ಲಿರಲಿಲ್ಲ. ಈಗ ಇಡೀ
ಸೃಷ್ಟಿಯಲ್ಲಿಯೇ ಇದೆ. ಎಲ್ಲರಲ್ಲಿಯೂ ಪಂಚ ವಿಕಾರಗಳು ಪ್ರವೇಶವಾಗಿವೆ, ಸೂರ್ಯವಂಶಿ ರಾಜ್ಯವಿದ್ದಾಗ
ಈ ವಿಕಾರಗಳೇ ಇರಲಿಲ್ಲ. ಭಾರತವು ನಿರ್ವಿಕಾರಿಯಾಗಿತ್ತು, ಈಗ ವಿಕಾರಿಯಾಗಿದೆ. ಸತ್ಯಯುಗದಲ್ಲಿ ದೈವೀ
ಸಂಪ್ರದಾಯವಿತ್ತು ಮತ್ತೆ ಅವರು 84 ಜನ್ಮಗಳನ್ನು ತೆಗೆದುಕೊಂಡು ಈಗ ಆಸುರೀ ಸಂಪ್ರದಾಯದವರಾಗಿದ್ದಾರೆ.
ಪುನಃ ದೈವೀ ಸಂಪ್ರದಾಯದವರಾಗುತ್ತಾರೆ. ಭಾರತವು ಬಹಳ ಸಾಹುಕಾರನಾಗಿತ್ತು, ಈಗ ಬಡ ಭಾರತವಾಗಿದೆ,
ಆದ್ದರಿಂದ ಭಿಕ್ಷೆ ಬೇಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ಎಷ್ಟೊಂದು
ಸಾಹುಕಾರರಾಗಿದ್ದಿರಿ, ನಿಮ್ಮಂತಹ ಸುಖ ಯಾರಿಗೂ ಸಿಗಲು ಸಾಧ್ಯವಿಲ್ಲ. ನೀವು ಇಡೀ ವಿಶ್ವದ
ಮಾಲೀಕರಾಗಿದ್ದಿರಿ. ಭೂಮಿ, ಆಕಾಶ ಎಲ್ಲವೂ ನಿಮ್ಮದಾಗಿತ್ತು. ತಂದೆಯು ಸ್ಮೃತಿ ತರಿಸುತ್ತಾರೆ,
ಭಾರತವು ಶಿವ ತಂದೆಯಿಂದ ಸ್ಥಾಪನೆ ಮಾಡಲ್ಪಟ್ಟ ಶಿವಾಲಯವಾಗಿತ್ತು. ಅಲ್ಲಿ ಪವಿತ್ರತೆಯಿತ್ತು, ಆ
ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳು ರಾಜ್ಯಮಾಡುತ್ತಿದ್ದರು. ಭಾರತವಾಸಿಗಳು ಇದನ್ನೂ
ತಿಳಿದುಕೊಂಡಿಲ್ಲ, ರಾಧೆ-ಕೃಷ್ಣರಿಗೆ ಪರಸ್ಪರ ಸಂಬಂಧವೇನು? ಇಬ್ಬರೂ ಬೇರೆ-ಬೇರೆ
ರಾಜಧಾನಿಯವರಾಗಿದ್ದರು ಮತ್ತು ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಈ ಜ್ಞಾನವು ಯಾವುದೇ
ಮನುಷ್ಯರಲ್ಲಿಲ್ಲ. ಪರಮಪಿತ ಪರಮಾತ್ಮನೇ ಜ್ಞಾನ ಸಾಗರನಾಗಿದ್ದಾರೆ, ಅವರೇ ನಿಮಗೆ ಈ ಆತ್ಮಿಕ
ಜ್ಞಾನವನ್ನು ಕೊಡುತ್ತಾರೆ. ಈ ಆಧ್ಯಾತ್ಮಿಕ ಜ್ಞಾನವನ್ನು ಒಬ್ಬ ತಂದೆಯೇ ಕೊಡಲು ಸಾಧ್ಯ. ಈಗ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿ. ಪರಮಪಿತ ಪರಮಾತ್ಮನಾದ ನಾನು ಶಿವನನ್ನು ನೆನಪು
ಮಾಡಿ, ನೆನಪಿನಿಂದಲೇ ಸತೋಪ್ರಧಾನರಾಗುತ್ತೀರಿ. ನೀವಿಲ್ಲಿ ಮನುಷ್ಯರಿಂದ ದೇವತೆ ಅಥವಾ ಪತಿತರಿಂದ
ಪಾವನರಾಗುವುದಕ್ಕಾಗಿ ಬರುತ್ತೀರಿ. ಈಗ ಇದು ರಾವಣ ರಾಜ್ಯವಾಗಿದೆ. ಭಕ್ತಿಮಾರ್ಗದಲ್ಲಿ ರಾವಣ
ರಾಜ್ಯವು ಆರಂಭವಾಗುತ್ತದೆ, ರಾವಣನು ಕೇವಲ ಒಬ್ಬ ಸೀತೆಯನ್ನು ಅಪಹರಿಸಲಿಲ್ಲ. ನೀವೆಲ್ಲರೂ ಭಕ್ತಿ
ಮಾಡುವವರು ರಾವಣನ ಮುಷ್ಟಿಯಲ್ಲಿದ್ದೀರಿ, ಇಡೀ ಸೃಷ್ಟಿಯು ಪಂಚ ವಿಕಾರಗಳೆಂಬ ರಾವಣನ ಬಂಧನದಲ್ಲಿದೆ,
ಎಲ್ಲರೂ ಶೋಕವಾಟಿಕೆಯಲ್ಲಿ ದುಃಖಿಯಾಗಿದ್ದಾರೆ. ತಂದೆಯು ಬಂದು ಎಲ್ಲರನ್ನು ಮುಕ್ತಗೊಳಿಸುತ್ತಾರೆ.
ಈಗ ತಂದೆಯು ಪುನಃ ಸ್ವರ್ಗವನ್ನು ಸ್ಥಾಪಿಸುತ್ತಿದ್ದಾರೆ. ಯಾರಿಗೆ ಈಗ ಬಹಳಷ್ಟು ಹಣವಿದೆಯೋ ಅವರು
ಸ್ವರ್ಗದಲ್ಲಿದ್ದಾರೆ ಎಂದಲ್ಲ. ಈಗ ಇರುವುದೇ ನರಕ, ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದ
ಗಂಗೆಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ, ಗಂಗೆಯು ಪತಿತ-ಪಾವನಿಯೆಂದು ತಿಳಿಯುತ್ತಾರೆ ಆದರೆ ಯಾರೂ
ಪಾವನರಾಗುವುದಿಲ್ಲ. ತಂದೆಗೇ ಪತಿತ-ಪಾವನನೆಂದು ಹೇಳಲಾಗುತ್ತದೆ, ನದಿಗಳಿಗಲ್ಲ. ಇದೆಲ್ಲವೂ ಭಕ್ತಿ
ಮಾರ್ಗವಾಗಿದೆ, ತಂದೆಯೇ ಬಂದು ಈ ಮಾತುಗಳನ್ನು ತಿಳಿಸುತ್ತಾರೆ. ಇದನ್ನಂತೂ ನೀವು
ತಿಳಿದುಕೊಂಡಿದ್ದೀರಿ - ಒಬ್ಬರು ಲೌಕಿಕ ತಂದೆಯಾಗಿದ್ದಾರೆ, ಇನ್ನೊಬ್ಬರು ಪ್ರಜಾಪಿತ ಬ್ರಹ್ಮನು
ಅಲೌಕಿಕ ತಂದೆಯಾಗಿದ್ದಾರೆ, ಇವರು ಪಾರಲೌಕಿಕ ತಂದೆಯಾಗಿದ್ದಾರೆ. ಮೂವರು ತಂದೆಯರಿದ್ದಾರೆ,
ಪ್ರಜಾಪಿತ ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ಸ್ಥಾಪನೆ ಮಾಡುತ್ತಾರೆ. ಬ್ರಾಹ್ಮಣರನ್ನು
ದೇವತೆಗಳನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಾರೆ. ತಂದೆಯು ಒಂದೇ ಬಾರಿ ಬಂದು ಆತ್ಮರಿಗೆ
ರಾಜಯೋಗವನ್ನು ಕಲಿಸುತ್ತಾರೆ. ಆತ್ಮಗಳು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ. ನಾನು ಒಂದು
ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವೇ ಹೇಳುತ್ತದೆ. ತಂದೆಯು
ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ ಆಗ ನೀವು
ಪಾವನರಾಗುವಿರಿ. ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ, ಈಗ ಇದು ಮೃತ್ಯುಲೋಕದ ಅಂತ್ಯವಾಗಿದೆ.
ಅಮರಲೋಕದ ಸ್ಥಾಪನೆಯಾಗುತ್ತದೆ. ಉಳಿದೆಲ್ಲಾ ಅನೇಕ ಧರ್ಮಗಳು ಸಮಾಪ್ತಿಯಾಗುತ್ತವೆ, ಸತ್ಯಯುಗದಲ್ಲಿ
ಒಂದೇ ದೇವತಾ ಧರ್ಮವಿತ್ತು ನಂತರ ತ್ರೇತಾಯುಗದಲ್ಲಿ ಚಂದ್ರವಂಶಿ, ರಾಮ-ಸೀತೆಯರಿದ್ದರು. ನೀವು
ಮಕ್ಕಳಿಗೆ ಇಡೀ ಚಕ್ರದ ನೆನಪನ್ನು ತರಿಸುತ್ತಾರೆ. ಶಾಂತಿಧಾಮ, ಸುಖಧಾಮವನ್ನು ತಂದೆಯೇ ಸ್ಥಾಪನೆ
ಮಾಡುತ್ತಾರೆ. ಮನುಷ್ಯರು ಮನುಷ್ಯರಿಗೆ ಸದ್ಗತಿ ನೀಡಲು ಸಾಧ್ಯವಿಲ್ಲ. ಅವರೆಲ್ಲರೂ ಭಕ್ತಿಮಾರ್ಗದ
ಗುರುಗಳಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಅನೇಕ ಪ್ರಕಾರದ ಚಿತ್ರಗಳನ್ನು ಮಾಡಿಸಿ ಪೂಜೆ
ಮಾಡಿ ನಂತರ ತೆಗೆದುಕೊಂಡು ಹೋಗಿ ಮುಳುಗು-ಮುಳುಗು ಎಂದು ಹೇಳುತ್ತಾರೆ, ಬಹಳ ಪೂಜೆ ಮಾಡುತ್ತಾರೆ.
ತಿನ್ನಿಸುತ್ತಾರೆ, ಕುಡಿಸುತ್ತಾರೆ. ತಿನ್ನುವುದಂತೂ ಬ್ರಾಹ್ಮಣರೆ. ಇದಕ್ಕೇ ಗೊಂಬೆ ಪೂಜೆ ಎಂದು
ಹೇಳಲಾಗುತ್ತದೆ. ಎಷ್ಟೊಂದು ಅಂಧಶ್ರದ್ಧೆಯಿದೆ! ಈಗ ಅವರಿಗೆ ತಿಳಿಸುವವರು ಯಾರು! ತಂದೆಯು
ತಿಳಿಸುತ್ತಾರೆ- ನೀವೀಗ ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ತಂದೆಯಿಂದ ರಾಜಯೋಗವನ್ನು
ಕಲಿಯುತ್ತಿದ್ದೀರಿ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಪ್ರಜೆಗಳೂ ಬಹಳ ತಯಾರಾಗುವರು. ಕೋಟಿಯಲ್ಲಿ
ಕೆಲವರೇ ರಾಜರಾಗುತ್ತಾರೆ. ಸತ್ಯಯುಗಕ್ಕೆ ಹೂವಿನ ಉದ್ಯಾನವನವೆಂದು ಹೇಳಲಾಗುತ್ತದೆ. ಈಗ ಮುಳ್ಳಿನ
ಕಾಡಾಗಿದೆ. ಈ ರಾವಣ ರಾಜ್ಯವು ಬದಲಾಗುತ್ತಿದೆ, ವಿನಾಶವಾಗಲೇಬೇಕಾಗಿದೆ. ಈ ಜ್ಞಾನವು ಈಗ ಕೇವಲ ನೀವು
ಬ್ರಾಹ್ಮಣರಿಗೇ ಸಿಗುತ್ತದೆ. ಲಕ್ಷ್ಮೀ-ನಾರಾಯಣರಿಗೂ ಸಹ ಈ ಜ್ಞಾನವಿರುವುದಿಲ್ಲ. ಈ ಜ್ಞಾನವು
ಪ್ರಾಯಃಲೋಪವಾಗಿ ಬಿಡುತ್ತದೆ. ಭಕ್ತಿಮಾರ್ಗದಲ್ಲಿ ಯಾರೂ ತಂದೆಯನ್ನು ಅರಿತುಕೊಂಡಿಲ್ಲ. ತಂದೆಯೇ
ರಚಯಿತನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನು ರಚನೆಯಾಗಿದ್ದಾರೆ. ಪರಮಾತ್ಮನು ಸರ್ವವ್ಯಾಪಿಯೆಂದು
ಹೇಳುವುದಾದರೆ ಎಲ್ಲರೂ ತಂದೆಯರಾಗುತ್ತಾರೆ, ಆಸ್ತಿಯ ಹಕ್ಕು ಇರುವುದಿಲ್ಲ. ತಂದೆಯಂತೂ ಬಂದು ಎಲ್ಲಾ
ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಇದನ್ನೂ
ತಿಳಿಸಿದ್ದಾರೆ - ಯಾರು ಮೊಟ್ಟ ಮೊದಲು ಸತ್ಯಯುಗದಲ್ಲಿ ಬರುವರೋ ಅವರೇ 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾರೆ. ಕ್ರಿಶ್ಚಿಯನ್ನರದು ಎಷ್ಟು ಜನ್ಮಗಳಿರಬಹುದು? ಹೆಚ್ಚೆಂದರೆ 40
ಜನ್ಮಗಳಿರಬಹುದು. ಒಬ್ಬ ಭಗವಂತನನ್ನು ಹುಡುಕುವುದಕ್ಕಾಗಿ ಎಷ್ಟೊಂದು ಅಲೆದಾಡುತ್ತಾರೆ. ನೀವೀಗ
ಅಲೆಯುವುದಿಲ್ಲ, ನೀವು ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದು ನೆನಪಿನ ಯಾತ್ರೆಯಾಗಿದೆ,
ಇದು ಪತಿತ-ಪಾವನ ಈಶ್ವರನ ವಿಶ್ವ ವಿದ್ಯಾಲಯವಾಗಿದೆ. ನಿಮ್ಮ ಆತ್ಮವು ಓದುತ್ತದೆ. ಸಾಧು-ಸಂತರು
ಆತ್ಮ ನಿರ್ಲೇಪವೆಂದು ಹೇಳಿ ಬಿಡುತ್ತಾರೆ. ಅರೆ! ಆತ್ಮವು ಕರ್ಮಗಳನುಸಾರವೇ ಇನ್ನೊಂದು ಜನ್ಮವನ್ನು
ತೆಗೆದುಕೊಳ್ಳಬೇಕಾಗುತ್ತದೆ. ಆತ್ಮವೇ ಒಳ್ಳೆಯ ಅಥವಾ ಕೆಟ್ಟಕರ್ಮ ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ
ಕರ್ಮವು ವಿಕರ್ಮವಾಗುತ್ತದೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ, ಅಲ್ಲಿ
ವಿಕರ್ಮವಾಗುವುದಿಲ್ಲ. ಅದು ಪುಣ್ಯಾತ್ಮರ ಪ್ರಪಂಚವಾಗಿದೆ, ಇವೆಲ್ಲವೂ ತಿಳಿದುಕೊಳ್ಳುವ ಮತ್ತು
ತಿಳಿಸುವ ಮಾತುಗಳಾಗಿವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಮುಳ್ಳುಗಳಿಂದ ಹೂಗಳಾಗಿ ಹೂದೋಟ (ಸತ್ಯಯುಗ) ವನ್ನು ಸ್ಥಾಪನೆ ಮಾಡುವ ಸೇವೆ ಮಾಡಬೇಕಾಗಿದೆ. ಯಾವುದೇ
ಕೆಟ್ಟ ಕರ್ಮ ಮಾಡಬಾರದು.
2. ತಂದೆಯಿಂದ ಯಾವ
ಆತ್ಮಿಕ ಜ್ಞಾನವನ್ನು ಕೇಳಿದ್ದೀರೋ ಅದನ್ನೇ ಎಲ್ಲರಿಗೂ ತಿಳಿಸಬೇಕಾಗಿದೆ. ಆತ್ಮಾಭಿಮಾನಿಯಾಗುವ
ಪರಿಶ್ರಮ ಪಡಬೇಕಾಗಿದೆ. ಒಬ್ಬ ತಂದೆಯನ್ನೇ ನೆನಪು ಮಾಡಬೇಕು, ಯಾವುದೇ ದೇಹಧಾರಿಯನ್ನಲ್ಲ.
ವರದಾನ:
ಹೊಗಳಿಕೆ-ತೆಗಳಿಕೆ, ಜಯ-ಪರಾಜಯದಲ್ಲಿ ಸಮಾನ ಸ್ಥಿತಿಯನ್ನಾಗಿ ಇಟ್ಟುಕೊಳ್ಳುವಂತಹ ತಂದೆಯ ಸಮಾನ
ಸಂಪನ್ನ ಅಥವಾ ಸಂಪೂರ್ಣ ಭವ.
ಯಾವಾಗ ಆತ್ಮನ ಸಂಪೂರ್ಣ
ಅಥವ ಸಂಪನ್ನ ಸ್ಥಿತಿಯಾಗುತ್ತದೆಯೋ ಆಗ ಹೊಗಳಿಕೆ-ತೆಗಳಿಕೆ, ಜಯ-ಪರಾಜಯ, ಸುಖ-ದುಃಖ, ಎಲ್ಲದರಲ್ಲಿಯೂ
ಸಮಾನತೆ ಇರುತ್ತದೆ. ದುಃಖದಲ್ಲಿಯೂ ಚಹರೆ ಅಥವ ಮಸ್ತಕದಲ್ಲಿ ದುಃಖದ ಪ್ರಕಂಪನಗಳ ಬದಲು ಸುಖ ಅಥವಾ
ಹರ್ಷವಾಗಿರುವ ಪ್ರಕಂಪನಗಳು ಕಾಣಿಸಲಿ, ತೆಗಳಿಕೆ ಕೇಳಿಸಿಕೊಳ್ಳುತ್ತಿದ್ದರೂ ಇದು ನಿಂದನೆ ಅಲ್ಲ,
ಸಂಪೂರ್ಣ ಸ್ಥಿತಿಯನ್ನು ಪರಿಪಕ್ವ ಮಾಡುವುದಕ್ಕಾಗಿ ಮಹಿಮಾ ಯೋಗ ಶಬ್ಧವಾಗಿದೆ ಎಂಬ ಅನುಭವವಾಗಲಿ,
ಇಂತಹ ಸಮಾನತೆ ಇದ್ದಾಗಲೇ ತಂದೆಯ ಸಮಾನ ಎಂದು ಹೇಳಲಾಗುವುದು. ವೃತ್ತಿಯಲ್ಲಿ ಸ್ವಲ್ಪವೂ - ಇವರು
ಶತ್ರುವಾಗಿದ್ದಾರೆ, ನಿಂದನೆ ಮಾಡುವವರು ಆಗಿದ್ದಾರೆ ಮತ್ತು ಇವರು ಮಹಿಮೆ ಮಾಡುವವರೆಂದು ಬರಬಾರದು.
ಸ್ಲೋಗನ್:
ನಿರಂತರ
ಯೋಗಾಭ್ಯಾಸದ ಮೇಲೆ ಗಮನ ಕೊಡುತ್ತೀರೆಂದರೆ, ಮೊದಲ ದರ್ಜೆ(ಫಸ್ಟ್ ಡಿವಿಷನ್)ಯಲ್ಲಿ ಅಂಕಗಳು
ಸಿಗುತ್ತವೆ.
ಅವ್ಯಕ್ತ ಸೂಚನೆ:- ಏಕತೆ
ಮತ್ತು ವಿಶ್ವಾಸದ ಗುಣ ಲಕ್ಷಣಗಳ ಮೂಲಕ ಸಫಲತಾ ಸಂಪನ್ನರಾಗಿರಿ.
ಬ್ರಾಹ್ಮಣ ಪರಿವಾರದ
ವಿಶೇಷತೆಯಾಗಿದೆ – ಅನೇಕಯಿದ್ದರು ಒಬ್ಬರೇ. ನಿಮ್ಮ ಎಲ್ಲಾ ಸೇವಾಕೇಂದ್ರಗಳ ವೈಬ್ರೇಷನ್ ಹೀಗಿರಲಿ
ಎಲ್ಲರಿಗೆ ಅನುಭವವಾಗಲಿ ಇವರು ಅನೇಕರಲ್ಲ ಆದರೆ ಒಬ್ಬರೇ ಆಗಿದ್ದಾರೆ. ನಿಮ್ಮ ಏಕತೆಯ ವೈಬ್ರೇಷನ್
ಇಡೀ ವಿಶ್ವದಲ್ಲಿ ಒಂದು ಧರ್ಮ, ಒಂದು ರಾಜ್ಯ ಸ್ಥಾಪನೆ ಮಾಡುತ್ತದೆ. ಅಂದಾಗ ವಿಶೇಷ ಗಮನ ಕೊಟ್ಟು
ಭಿನ್ನತೆಯನ್ನು ಅಳಿಸಿ ಏಕತೆಯನ್ನು ಕಾಯಮ ಮಾಡಿ.