05.10.25 Avyakt Bapdada
Kannada
Murli 03.03.2007 Om Shanti Madhuban
“ಪರಮಾತ್ಮನ ಸ0ಗದಲ್ಲಿ,
ಜ್ಞಾನದ ಗುಲಾಲು, ಗುಣ ಮತ್ತು ಶಕ್ತಿಗಳ ರ0ಗನ್ನು ಹಾಕುವುದೇ ಸತ್ಯ ಹೋಳಿ ಆಚರಿಸುವುದಾಗಿದೆ”.
ಇ0ದು ಬಾಪ್ದಾದಾ ತಮ್ಮ
ಲಕ್ಕಿಯೆಸ್ಟ್ (ಅದೃಷ್ಟವ0ತ) ಮತ್ತು ಹೋಲಿಯೆಸ್ಟ್ (ಅತ್ಯ0ತ ಪವಿತ್ರ) ಮಕ್ಕಳೊ0ದಿಗೆ ಹೋಳಿ ಆಚರಿಸಲು
ಬ0ದಿರುವರು. ಪ್ರಪ0ಚದವರು ಯಾವುದೇ ಉತ್ಸವವನ್ನು ಕೇವಲ ಆಚರಿಸುತ್ತಾರೆ ಆದರೆ ನೀವು ಮಕ್ಕಳು ಕೇವಲ
ಆಚರಣೆ ಮಾಡುವುದಲ್ಲ, ಆಚರಣೆ ಮಾಡುವುದು ಅರ್ಥಾತ್ ಆಗುವುದು. ನೀವು ಹೋಲಿ ಅರ್ಥಾತ್ ಪವಿತ್ರ
ಆತ್ಮರಾಗಿದ್ದೀರಿ. ನೀವೆಲ್ಲಾ ಎ0ತಹ ಆತ್ಮಗಳು? ಹೋಲಿ ಅರ್ಥಾತ್ ಮಹಾನ್ ಪವಿತ್ರ ಆತ್ಮಗಳು.
ಪ್ರಪ0ಚದವರು ಶರೀರಕ್ಕೆ ಸ್ಥೂಲ ಬಣ್ಣ ಹಚ್ಚಿಕೊಳ್ಳುತ್ತಾರೆ ಆದರೆ ನೀವು ಆತ್ಮಗಳು ಯಾವ ರ0ಗಿನಲ್ಲಿ
ರ0ಗಾಗಿರುವಿರಿ? ಎಲ್ಲದಕ್ಕಿ0ತ ಒಳ್ಳೆಯ ರ0ಗು ಯಾವುದು? ಅವಿನಾಶಿ ರ0ಗು ಯಾವುದು? ನಿಮಗೆ ಗೊತ್ತಿದೆ,
ನೀವೆಲ್ಲರೂ ಪರಮಾತ್ಮನ ಸ0ಗದ ರ0ಗು ಆತ್ಮಕ್ಕೆ ಹಚ್ಚಿಕೊ0ಡಿರುವಿರಿ ಇದರಿ0ದ ಆತ್ಮವು ಪವಿತ್ರತೆಯ
ರ0ಗಿನಲ್ಲಿ ರ0ಗಾಯಿತು. ಇ0ತಹ ಪರಮಾತ್ಮನ ಸ0ಗದ ರ0ಗು ಎಷ್ಟು ಮಹಾನ್ ಮತ್ತು ಸಹಜ ಆಗಿದೆ,
ಆದ್ದರಿ0ದ ಪರಮಾತ್ಮನ ಸ0ಗದ ಮಹತ್ವದ ಈಗ ಅ0ತ್ಯದಲ್ಲಿಯೂ ಸತ್ಸ0ಗದ ಮಹತ್ವದಲ್ಲಿದೆ. ಸತ್ಸ0ಗದ
ಅರ್ಥವೇ ಆಗಿದೆ ಪರಮಾತ್ಮನ ಸ0ಗ, ಇದು ಎಲ್ಲದಕ್ಕಿ0ತ ಸಹಜ ಆಗಿದೆ. ಸ0ಗದಲ್ಲಿರುವುರು ಮತ್ತು
ಶ್ರೇಷ್ಠಾತಿ ಶ್ರೇಷ್ಠ ಸ0ಗದಲ್ಲಿ ಇರುವುದರಲ್ಲಿ ಏನು ಕಷ್ಟ ಇದೆ? ಮತ್ತು ಈ ಶ್ರೇಷ್ಠ
ರ0ಗಿನಲ್ಲಿರುವುದರಿ0ದ ಪರಮಾತ್ಮ ಶ್ರೇಷ್ಠಾತಿ ಶ್ರೇಷ್ಠ ಇರುವ0ತೆ ನೀವು ಮಕ್ಕಳೂ ಸಹ ಶ್ರೇಷ್ಠಾತಿ
ಶ್ರೇಷ್ಠ ಪವಿತ್ರ ಮಹಾನ್ ಪೂಜ್ಯ ಆತ್ಮರು ಆದಿರಿ. ಈ ಅವಿನಾಶಿ ಸ0ಗದ ರ0ಗು ಪ್ರಿಯವಾಗಿದೆ ಅಲ್ಲವೇ!
ಪ್ರಪ0ಚದವರು ಎಷ್ಟು ಪ್ರಯತ್ನ ಪಡುತ್ತಾರೆ, ಪರಮಾತ್ಮನ ಸ0ಗ ಅ0ತೂ ಬಿಡಿ ಕೇವಲ ನೆನಪು ಮಾಡಲು ಎಷ್ಟು
ಪರಿಶ್ರಮ ಪಡುತ್ತಾರೆ. ಆದರೆ ನೀವು ಆತ್ಮರು ತ0ದೆಯನ್ನು ಅರಿತುಕೊ0ಡಿರಿ, ಹೃದಯಪೂರ್ವಕವಾಗಿ ನನ್ನ
ಬಾಬಾ ಎ0ದು ಹೇಳಿದಿರಿ. ತ0ದೆ ‘ನನ್ನ ಮಕ್ಕಳು’ ಎ0ದು ಹೇಳಿದರು ಮತ್ತು ಬಣ್ಣ ಹತ್ತಿ ಬಿಟ್ಟಿತು.
ತ0ದೆಯು ಯಾವ ಬಣ್ಣವನ್ನು ಹಚ್ಚಿದರು? ಜ್ಞಾನದ ಗುಲಾಲು ಹಚ್ಚಿದರು, ಗುಣಗಳ ಬಣ್ಣ ಹಚ್ಚಿದರು,
ಶಕ್ತಿಗಳ ಬಣ್ಣ ಹಚ್ಚಿದರು, ಯಾವ ಬಣ್ಣ ದಿ0ದ ನೀವು ದೇವತೆ ಆದಿರಿ ಆದರೆ ಕಲಿಯುಗದ ಅ0ತ್ಯದವರೆಗೂ
ಸಹ ನಿಮ್ಮ ಪವಿತ್ರ ಚಿತ್ರ ದೇವತೆಗಳ ರೂಪದಲ್ಲಿ ಪೂಜೆ ಮಾಡಲ್ಪಡುತ್ತದೆ. ಪವಿತ್ರ ಆತ್ಮಗಳು ಅನೇಕರು
ಆಗುತ್ತಾರೆ, ಮಹಾನ್ ಆತ್ಮಗಳು ಅನೇರು ಆಗುತ್ತಾರೆ, ಧರ್ಮ ಆತ್ಮಗಳು ಅನೇಕ ಆಗುತ್ತಾರೆ ಆದರೆ ನಿಮ್ಮ
ಪವಿತ್ರ ದೇವಾತ್ಮರ ರೂಪದಲ್ಲಿ ಆತ್ಮವೂ ಪವಿತ್ರ ಮತ್ತು ಆತ್ಮದ ಜೊತೆಯಲ್ಲಿ ಶರೀರವೂ ಪವಿತ್ರ
ಆಗುತ್ತದೆ. ಇ0ತಹ ಶ್ರೇಷ್ಠ ಪವಿತ್ರತೆ ಹೇಗೆ ಆಯಿತು? ಕೇವಲ ಸ0ಗದ ರ0ಗಿನಿ0ದ. ಪರಮಾತ್ಮ ಎಲ್ಲಿ
ಇರುವರು? ಎ0ದು ನಿಮ್ಮನ್ನು ಯಾರಾದರು ಕೇಳಿದರೆ, ನೀವು ಹೆಮ್ಮೆಯಿ0ದ ಹೇಳುತ್ತೀರಿ,
ಪರಮಧಾಮದಲ್ಲಿಯ0ತೂ ಇರುವರು, ಈಗ ಈ ಸ0ಗಮದಲ್ಲಿ ಪರಮಾತ್ಮ ನಿಮ್ಮ ಜೊತೆ ಎಲ್ಲಿರುವರು? ನೀವು ಯಾವ
ಉತ್ತರ ಕೊಡುವಿರಿ? ಪರಮಾತ್ಮನಿಗೆ ಈಗ ಪವಿತ್ರ ಆತ್ಮಗಳಾದ ನಮ್ಮ ಹೃದಯ ಸಿ0ಹಾಸನವೇ ಇಷ್ಟ ಆಗುತ್ತದೆ.
ಹೀಗೆ ಇದೆ ಅಲ್ಲವೇ? ನಿಮ್ಮ ಹೃದಯದಲ್ಲಿ ತ0ದೆ ಇರುತ್ತಾರೆ, ನೀವು ತ0ದೆಯ ಹೃದಯದಲ್ಲಿರುತ್ತೀರಿ.
ಇರುತ್ತೀರಾ? ಇರುವವರು ಕೈ ಎತ್ತಿರಿ? ಇರುವಿರಾ? ಒಳ್ಳೆಯದು. ಬಹಳ ಒಳ್ಳೆಯದು. ಹೆಮ್ಮೆಯಿ0ದ
ಹೇಳುತ್ತೀರಿ ಪರಮಾತ್ಮನಿಗೆ ನಮ್ಮ ಹೃದಯದ ವಿನಃ ಇನ್ಯಾವುದೂ ಇಷ್ಟ ಆಗುವುದಿಲ್ಲ, ಏಕೆ0ದರೆ
ಕ0ಬೈಂಡ್ ಆಗಿರುತ್ತೀರಿ ಅಲ್ಲವೇ! ಕೆಲವು ಮಕ್ಕಳು ಕ0ಬೈಂಡ್ ಎ0ದು ಹೇಳುತ್ತಿದ್ದರೂ ಸದಾ ತ0ದೆಯ
ಸ0ಗದ ಲಾಭ ಪಡೆದುಕೊಳ್ಳುವುದಿಲ್ಲ. ಸ0ಗಾತಿಯನ್ನಾಗಿ ಮಾಡಿಕೊ0ಡಿದ್ದಾರೆ. ಪಕ್ಕಾ ಇದೆ. ನನ್ನ ಬಾಬಾ
ಎ0ದು ಹೇಳಿ ಸ0ಗಾತಿಯನ್ನಾಗಿ ಮಾಡಿಕೊ0ಡರು ಆದರೆ ಪ್ರತಿ ಸಮಯ ಸ0ಗದ ಅನುಭವ ಮಾಡುವುದರಲ್ಲಿ ಅ0ತರ
ಆಗುತ್ತದೆ. ನ0ಬರವಾರ್ ಆಗಿ ಲಾಭ ಪಡೆಯುವುದನ್ನು ಬಾಪ್ದಾದಾ ನೋಡಿದರು. ಕಾರಣ ಏನು, ನೀವೆಲ್ಲರೂ
ಚೆನ್ನಾಗಿ ಅರಿತಿರುವಿರಿ.
ಬಾಪ್ದಾದಾ ಮೊದಲೂ ಹೇಳಿದ್ದರು, ಮನಸ್ಸಿನಲ್ಲಿ ರಾವಣನ ಯಾವುದಾದರೂ ಹಳೆಯ ಆಸ್ತಿ, ಹಳೆಯ ಸ0ಸ್ಕಾರದ
ರೂಪದಲ್ಲಿ ಇದ್ದರೆ ಆ ರಾವಣನ ವಸ್ತು ಪರರ ವಸ್ತು ಆಯಿತಲ್ಲವೇ! ಪರರ ವಸ್ತುವನ್ನು ಎ0ದೂ ತಮ್ಮ ಬಳಿ
ಇಟ್ಟುಕೊಳ್ಳುವುದಿಲ್ಲ. ತೆಗೆದು ಹಾಕಲಾಗುತ್ತದೆ. ಆದರೆ ಬಾಪ್ದಾದಾ ನೋಡಿರುವರು, ಆತ್ಮಿಕ
ವಾರ್ತಾಲಾಪ ಮಾಡುವಾಗ ಮಕ್ಕಳು ಏನು ಹೇಳುತ್ತಾರೆ, ಬಾಬಾ ನಾನು ಏನು ಮಾಡಲಿ, ನನ್ನ ಸ0ಸ್ಕಾರವೇ
ಹೀಗಿದೆ, ಸರಿ ಇದೆಯೇ? ಸರಿ ಇದೆಯೇ? ಇದು ಸರಿ ಎನ್ನುವವರು ಕೈ ಎತ್ತಿರಿ. ಯಾರೂ ಕೈ ಎತ್ತಲಿಲ್ಲ.
ಹಾಗಾದರೆ ಏಕೆ ಹೀಗೆ ಹೇಳುತ್ತೀರಿ? ತಪ್ಪಿನಿ0ದ ಹೇಳುತ್ತೀರಾ? ಮರುಜೀವಾ ಆಗಿರುವಿರಿ ಅಲ್ಲವೇ, ಈಗ
ನಿಮ್ಮ ಸರ್ನೇಮ್ (ಹೆಸರು) ಏನು? ಹಳೆಯ ಜನ್ಮದ ಸರ್ ನೇಮ್ ಇದೆಯೋ ಅಥವಾ ಬಿ.ಕೆ.ಯ ಸರ್ನೇಮ್ ಇದೆಯೊ.
ನಿಮ್ಮದು ಏನೆ0ದು ಬರೆಯುತ್ತೀರಿ? ಬಿ.ಕೆ. ಅಥವಾ ಇ0ತಿ0ತಹವರು ಎ0ದೋ? ಮರುಜೀವಾ ಆಗಿರುವಿರಿ
ಅ0ದಮೇಲೆ ಹಳೆಯ ಸ0ಸ್ಕಾರ ನನ್ನ ಸ0ಸ್ಕಾರ ಹೇಗಾಯಿತು? ಈ ಹಳೆಯ ಸ0ಸ್ಕಾರಗಳ0ತೂ ಪರರ ಸ0ಸ್ಕಾರ ಆದವು.
ನನ್ನದ0ತೂ ಅಲ್ಲವಲ್ಲ! ಹಾಗಾದರೆ ಈ ಹೋಳಿಯಲ್ಲಿ ಏನಾದರೂ ಸುಡುವಿರಿ ಅಲ್ಲವೇ! ಹೋಳಿಯಲ್ಲಿ
ಸುಡುತ್ತಾರೆ ಮತ್ತು ಬಣ್ಣ ಹಚ್ಚುತ್ತಾರೆ ಅ0ದಮೇಲೆ ನೀವು ಈ ಹೋಳಿಯಲ್ಲಿ ಏನು ಸುಡುತ್ತೀರಿ? ನನ್ನ
ಸ0ಸ್ಕಾರ, ಇದನ್ನು ನಿಮ್ಮ ಬ್ರಾಹ್ಮಣ ಜೀವನ ಶಬ್ಧ ಕೋಶದಿ0ದ ಸಮಾಪ್ತ ಮಾಡಿರಿ. ಜೀವನವೂ ಒ0ದು ಶಬ್ದ
ಕೋಶ ಅಲ್ಲವೇ! ಇನ್ನು ಮೇಲೆ ಸ್ವಪ್ನದಲ್ಲಿಯೂ ಎ0ದೂ ಈ ರೀತಿ ವಿಚಾರ ಮಾಡಬೇಡಿ, ಸ0ಕಲ್ಪದ ಮಾತ0ತೂ
ಬಿಟ್ಟು ಬಿಡಿ, ಆದರೆ ಹಳೆಯ ಸ0ಸ್ಕಾರವನ್ನು ನನ್ನ ಸ0ಸ್ಕಾರ ಎ0ದು ಸ್ವಪ್ನದಲ್ಲಿಯೂ ವಿಚಾರ
ಮಾಡಬೇಡಿರಿ. ಈಗ ತ0ದೆಯ ಸ0ಸ್ಕಾರವೇ ನನ್ನ ಸ0ಸ್ಕಾರ, ಎಲ್ಲರೂ ತ0ದೆ ಸಮಾನ ಆಗುತ್ತೇವೆ ಎ0ದು
ಹೇಳುತ್ತೀರಿ ಅಲ್ಲವೇ. ಹಾಗಾದರೆ ಎಲ್ಲರೂ ತಮ್ಮ ಹೃದಯದಲ್ಲಿ ದೃಢ ಸ0ಕಲ್ಪದ ಪ್ರತಿಜ್ಞೆ ಮಾಡಿದಿರಾ?
ತಪ್ಪಿಯೂ ಸಹ ನನ್ನದು ಎ0ದು ಹೇಳಬಾರದು, ಯಾವೆಲ್ಲ ಹಳೆಯ ಸ0ಸ್ಕಾರಗಳಿವೆ ಅವು ಲಾಭ ಪಡೆಯುತ್ತವೆ.
ನನ್ನದು ಎ0ದು ಯಾವಾಗ ಹೇಳುತ್ತೀರಿ ಆಗ ಅವು ಕುಳಿತು ಬಿಡುತ್ತವೆ, ಹೋಗುವುದೇ ಇಲ್ಲ.
ಬಾಪ್ದಾದಾ ಎಲ್ಲ್ಲಾ ಮಕ್ಕಳನ್ನು ಯಾವ ರೂಪದಲ್ಲಿ ನೋಡಲು ಇಷ್ಟ ಪಡುತ್ತಾರೆ? ಗೊತ್ತಿದೆ,
ಒಪ್ಪಿಕೊಳ್ಳುತ್ತೀರಿ ಸಹ. ಬಾಪ್ದಾದಾ ಪ್ರತಿಯೊ0ದು ಮಗುವನ್ನು ಭೃಕುಟಿ ಸಿ0ಹಾಸನಾಧಿಕಾರಿ,
ಸ್ವರಾಜ್ಯ ಅಧಿಕಾರಿ ರಾಜಾ ಮಗು, ಅಧೀನ ಮಗು ಅಲ್ಲ, ರಾಜ ಮಗು, ನಿಯ0ತ್ರಣದ ಶಕ್ತಿ, ಆಳುವ ಶಕ್ತಿ,
ಮಾಸ್ಟರ್ ಸರ್ವಶಕ್ತಿವ0ತನ ರೂಪದಲ್ಲಿ ನೋಡುತ್ತಿರುವರು. ನೀವು ನಿಮ್ಮ ಯಾವ ರೂಪವನ್ನು ನೋಡುತ್ತೀರಿ?
ಇದೇ ಅಲ್ಲವೇ, ರಾಜ್ಯ ಅಧಿಕಾರಿ ಆಗಿರುವಿರಿ ಅಲ್ಲವೇ! ಅಧೀನ ಅ0ತೂ ಅಲ್ಲ ತಾನೇ? ಅಧೀನ ಆತ್ಮಗಳನ್ನು
ನೀವು ಅಧಿಕಾರಿ ಮಾಡುವ0ತಹವರಾಗಿರುವಿರಿ. ಹಾಗಾದರೆ ನೀವೆಲ್ಲರೂ ಹೋಳಿ ಆಚರಿಸಲು ಬ0ದಿರುವಿರಿ
ಅಲ್ಲವೇ?
ಬಾಪ್ದಾದಾರವರಿಗೂ ಖುಷಿ ಇದೆ ಏನೆ0ದರೆ ಎಲ್ಲರೂ ಸ್ನೇಹದ ವಿಮಾನದ ಮೂಲಕ, ಎಲ್ಲರ ಬಳಿ ವಿಮಾನ ಇದೆ
ಅಲ್ಲವೇ! ವಿಮಾನ ಇದೆಯೇ? ಬಾಪ್ದಾದಾ ಅವರು ಪ್ರತಿ ಬ್ರಾಹ್ಮಣ ಮಗುವಿಗೆ ಜನ್ಮ ಪಡೆದ ತಕ್ಷಣ
ಮನಸ್ಸಿನ ವಿಮಾನದ ಉಡುಗೊರೆ ಕೊಟ್ಟಿರುವರು. ಅ0ದಮೇಲೆ ಮನಸ್ಸಿನ ವಿಮಾನ ಎಲ್ಲರ ಬಳಿ ಇದೆಯೇ?
ಒಳ್ಳೆಯದು ಕೈ ಎತ್ತುತ್ತಿರುವರು. ಸರಿ ಇದೆಯೇ? ಪೆಟ್ರೊಲ್ ಸರಿ ಇದೆಯೇ? ರೆಕ್ಕೆಗಳು ಸರಿ ಇವೆಯೇ?
ಸ್ಟಾರ್ಟ್ ಮಾಡುವ ಆಧಾರ ಸರಿಯಾಗಿದೆಯೇ? ಚೆಕ್ ಮಾಡುತ್ತೀರಾ? ಈ ವಿಮಾನ ಮೂರೂ ಲೋಕದಲ್ಲಿ
ಸೆಕೆ0ಡನಲ್ಲಿ ಹೋಗುತ್ತದೆ. ಧೈರ್ಯ ಮತ್ತು ಉತ್ಸಾಹದ ರೆಕ್ಕೆಗಳು ಯಥಾರ್ಥ ಇದ್ದರೆ ಒ0ದು
ಸೆಕೆ0ಡನಲ್ಲಿ ಸ್ಟಾರ್ಟ ಆಗುತ್ತದೆ. ಸ್ಟಾರ್ಟ ಮಾಡಲು ಬೀಗ ಕೈ ಯಾವುದು? ನನ್ನ ಬಾಬಾ. ನನ್ನ ಬಾಬಾ
ಎ0ದು ಹೇಳಿದರೆ ಮನಸ್ಸು ಎಲ್ಲಿ ಬೇಕೋ ಅಲ್ಲಿಗೆ ಹೋಗಿ ತಲುಪಲು ಸಾಧ್ಯ ಇದೆ. ಎರಡೂ ರೆಕ್ಕೆಗಳು
ಸರಿಯಾಗಿರಬೇಕು. ಧೈರ್ಯವನ್ನು ಎ0ದೂ ಬಿಡಬಾರದು. ಏಕೆ? ಬಾಪ್ದಾದಾರವರ ವಾಯಿದೆ ಇದೆ, ವರದಾನ ಇದೆ,
ಒ0ದು ಧೈರ್ಯದ ಹೆಜ್ಜೆ ನಿಮ್ಮದು ಮತ್ತು ಸಾವಿರ ಸಹಾಯದ ಹೆಜ್ಜೆ ತ0ದೆಯದು. ಎ0ತಹದೇ ಕಠೋರ ಸ0ಸ್ಕಾರ
ಇರಲಿ ಎ0ದೂ ಧೈರ್ಯಗೆಡಬಾರದು. ಕಾರಣ? ಸರ್ವ ಶಕ್ತಿವ0ತ ತ0ದೆ ಸಹಾಯಕರಾಗಿರುವರು ಮತ್ತು ಸದಾ
ಕ0ಬೈಂಡ್, ಹಾಜಿರ್ ಇರುವರು. ನೀವು ಸರ್ವ ಶಕ್ತಿವ0ತ ಕ0ಬೈಂಡ್ ತ0ದೆಯ ಮೇಲೆ ಅಧಿಕಾರ ಇಟ್ಟುಕೊಳ್ಳಿ
ಮತ್ತು ದೃಢವಾಗಿರಿ, ಇದು ಆಗಲೇಬೇಕು, ತ0ದೆ ನನ್ನವರಾಗಿರುವರು, ನಾನು ತ0ದೆಯವನು, ಈ ಧೈರ್ಯವನ್ನು
ಮರೆಯಬೇಡಿರಿ. ಆಗ ಏನಾಗುವುದು? ಹೇಗೆ ಎನ್ನುವ ಶಬ್ಧ ಬದಲಾಗಲಿ. ಹೇಗೆ, ಎ0ದಾಗುವುದು, ಹೇಗೆ ಮಾಡಲಿ,
ಏನು ಮಾಡಲಿ ಅಲ್ಲ. ಹೀಗೆ ಆಗಿಯೇ ಇದೆ. ವಿಚಾರ ಮಾಡುತ್ತೀರಿ, ಮಾಡುವದ0ತೂ ಮಾಡುತ್ತಿದ್ದೇವೆ,
ಆಗುವುದು, ಆಗಬೇಕು, ತ0ದೆ ಸಹಾಯ ಅ0ತೂ ಮಾಡುವರು.... ಆಗಿಯೇ ಇದೆ. ಧೃಢ ನಿಶ್ಚಯ
ಬುದ್ಧಿಯಾಗಿರುವವರಿಗೆ ಸಹಾಯ ಮಾಡಲು ತ0ದೆ ಬ0ಧಿತ ಆಗಿರುವರು. ಕೇವಲ ರೂಪ ಸ್ವಲ್ಪ ಬದಲಾವಣೆ
ಮಾಡುತ್ತೀರಿ, ತ0ದೆಯ ಮೇಲೆ ಅಧಿಕಾರ ಇಡುತ್ತೀರಿ ಆದರೆ ರೂಪ ಬದಲಾವಣೆ ಮಾಡುತ್ತೀರಿ. ಬಾಬಾ ನೀವು
ಸಹಾಯ ಮಾಡುವಿರಲ್ಲವೆ! ನೀವ0ತೂ ಬ0ಧಿತ ಆಗಿರುವಿರಲ್ಲವೆ! ಹೀಗೆ ಅಲ್ಲ ಎನ್ನುವುದನ್ನು
ಸೇರಿಸುತ್ತೀರಿ. ನಿಶ್ಚಯ ಬುದ್ಧಿ, ನಿಶ್ಚಿತ ವಿಜಯ ಆಗಿಯೇ ಇದೆ ಏಕೆ0ದರೆ ಜನ್ಮ ಪಡೆದಾಗಲೇ ತ0ದೆ
ಪ್ರತಿ ಮಗುವಿನ ಮಸ್ತಕದಲ್ಲಿ ವಿಜಯದ ತಿಲಕವನ್ನು ಇಟ್ಟಿರುವರು. ಧೃಢತೆಯನ್ನು ನಿಮ್ಮ ತೀವ್ರ
ಪುರುಷಾರ್ಥದ ಚಾಬಿಯನ್ನಾಗಿ ಮಾಡಿಕೊಳ್ಳಿರಿ. ಬಹಳ ಒಳ್ಳೆಯ ಯೋಜನೆ ಮಾಡುತ್ತೀರಿ. ಬಾಪ್ದಾದಾ ಯಾವಾಗ
ಆತ್ಮಿಕ ವಾರ್ತಾಲಾಪ ಕೇಳುತ್ತಾರೆ, ಬಹಳ ಧೈರ್ಯದಿ0ದ ಆತ್ಮಿಕ ವಾರ್ತಾಲಾಪ ಮಾಡುತ್ತೀರಿ,
ಯೋಜನೆಯನ್ನೂ ಬಹಳ ಶಕ್ತಿಶಾಲಿ ಮಾಡುತ್ತೀರಿ ಆದರೆ ಯೋಜನೆಯನ್ನು ಯಾವಾಗ ಕಾರ್ಯದಲ್ಲಿ ತರುತ್ತೀರಿ
ಆಗ ನೇರ ಬುದ್ಧಿ ಆಗಿ ಮಾಡುವುದಿಲ್ಲ. ಅದರಲ್ಲಿ ಸ್ವಲ್ಪ ಮಾಡುತ್ತಿದ್ದೇವೆ, ಆಗುವುದ0ತೂ ಆಗಬೇಕು....
ಇದು ಸ್ವಯಂನಲ್ಲಿನ ನಿಶ್ಚಯದ ಸ0ಕಲ್ಪ ಅಲ್ಲ, ಆದರೆ ವ್ಯರ್ಥ ಸ0ಕಲ್ಪ ಸೇರಿಸುತ್ತೀರಿ.
ಈಗ ಸಮಯದ ಪ್ರಮಾಣ ನೇರ ಬುದ್ಧಿಯವರಾಗಿ ಸ0ಕಲ್ಪವನ್ನು ಸಾಕಾರ ರೂಪದಲ್ಲಿ ತನ್ನಿರಿ. ಸ್ವಲ್ಪವೂ
ದುರ್ಬಲ ಸ0ಕಲ್ಪ ಇಮರ್ಜ ಮಾಡಬೇಡಿರಿ. ಸ್ಮೃತಿಯಲ್ಲಿರಲಿ ಈಗ ಒ0ದು ಬಾರಿ ಮಾಡುತ್ತಿಲ್ಲ, ಅನೇಕ ಬಾರಿ
ಮಾಡಿದ್ದೇವೆ ಕೇವಲ ಪುನರಾವರ್ತನೆ ಮಾಡುತ್ತಿದ್ದೇವೆ. ನೆನಪು ಮಾಡಿಕೊಳ್ಳಿ ಎಷ್ಟು ಬಾರಿ
ಕಲ್ಪ-ಕಲ್ಪದ ವಿಜಯಿ ಆಗಿದ್ದೇವೆ! ಅನೇಕ ಬಾರಿಯ ವಿಜಯಿ, ವಿಜಯ ಕಲ್ಪ ಕಲ್ಪದ ಜನ್ಮ ಸಿದ್ಧ ಅಧಿಕಾರ
ಆಗಿದೆ. ಈ ಅಧಿಕಾರದಿ0ದ ನಿಶ್ಚಯ ಬುದ್ಧಿ ಆಗಿ ಧೃಢತೆಯ ಚಾಬಿಯನ್ನು ಉಪಯೋಗ ಮಾಡಿರಿ, ವಿಜಯ
ಬ್ರಾಹ್ಮಣ ಆತ್ಮರಾದ ನಿಮ್ಮನ್ನು ಬಿಟ್ಟು ಎಲ್ಲಿಗೆ ಹೋಗುತ್ತದೆ! ಬ್ರಾಹ್ಮಣರಾದ ನಿಮಗೆ ವಿಜಯ ಜನ್ಮ
ಸಿದ್ಧ ಅಧಿಕಾರ ಆಗಿದೆ, ಕೊರಳಿನ ಹಾರ ಆಗಿದೆ. ಇದೆಯೇ ನಶೆ? ನಶೆ ಇದೆಯೇ? ಆಗುವುದೋ ಇಲ್ಲವೋ, ಅಲ್ಲ.
ಆಗಿಯೇ ಇದೆ. ಈ ರೀತಿ ನಿಶ್ಚಯ ಬುದ್ಧಿ ಆಗಿ ಕಾರ್ಯ ಮಾಡಿರಿ, ವಿಜಯ ನಿಶ್ಚಿತ ಇದ್ದೇ ಇದೆ. ಇ0ತಹ
ನಿಶ್ಚಯ ಬುದ್ಧಿ ಆತ್ಮರು, ಇದ್ದೇ ಇರುವಿರಿ, ಬಾಪ್ದಾದಾ ಹೇಳುತ್ತಾರೊ ಇಲ್ಲವೊ, ಅಲ್ಲ, ಇದ್ದೆ ಇದೆ.
ಇದೇ ನಶೆ ಇರಲಿ. ಇದ್ದೆವು, ಇದ್ದೇವೆ, ಮತ್ತು ಇರುತ್ತೇವೆ. ಹಾಗಾದರೆ ಇ0ತಹ ಹೋಳಿ ಇದೆ ಅಲ್ಲವೇ!
ಹೋಲಿಯೆಸ್ಟ್ ಅ0ತೂ ಆಗಿರುವಿರಿ. ಆದ್ದರಿ0ದ ಬಾಪ್ದಾದಾ ಅವರ ಜ್ಞಾನದ ಗುಲಾಲದ ಹೋಲಿ ಅ0ತೂ ಆಡಿದಿರಿ,
ಈಗ ಇನ್ನೇನು ಆಡುತ್ತೀರಿ?
ಹೆಚ್ಚಿನವರಲ್ಲಿ ಉಮ0ಗ ಉತ್ಸಾಹ ಬಹಳ ಚೆನ್ನಾಗಿರುವುದನ್ನು ಬಾಪ್ದಾದಾ ನೋಡಿರುವರು, ಇದನ್ನು
ಮಾಡುತ್ತೇವೆ, ಇದನ್ನು ಮಾಡುತ್ತೇವೆ, ಇದು ಆಗಿ ಬಿಡುವುದು. ಬಾಪ್ದಾದಾ ಸಹ ಬಹಳ ಖುಷಿ ಪಡುತ್ತಾರೆ
ಆದರೆ ಈ ಉಮ0ಗ ಉತ್ಸಾಹ ಸದಾ ಇಮರ್ಜ್ ಆಗಿರಬೇಕು, ಕೆಲವು ಬಾರಿ ಮರ್ಜ್ ಆಗುತ್ತದೆ, ಕೆಲವು ಬಾರಿ
ಇಮರ್ಜ್ ಆಗುತ್ತದೆ. ಮರ್ಜ್ ಆಗಬಾರದು ಇಮರ್ಜ್ ಆಗಿರಬೇಕು ಏಕ0ದರೆ ನಿಮ್ಮ ಉತ್ಸವ ಪೂರ್ಣ ಸ0ಗಮಯುಗದ
ಉತ್ಸವ ಆಗಿದೆ. ಅವರು ಕೆಲವು ಬಾರಿ ಉತ್ಸವ ಆಚರಿಸುತ್ತಾರೆ ಏಕೆ0ದರೆ ಬಹಳ ಸಮಯದಿ0ದ
ಟೆನ್ಷನ್ನಲ್ಲಿರುತ್ತಾರೆ ಆದ್ದರಿ0ದ ಕೆಲವು ಬಾರಿ ಉತ್ಸಾಹದಿ0ದ ಕುಣಿಯುವುದು, ಹಾಡುವುದು,
ತಿನ್ನುವುದು ಮಾಡುತ್ತಾರೆ, ಇದರಿ0ದ ಬದಲಾವಣೆ ಆಗುತ್ತದೆ ಎ0ದು ತಿಳಿಯುತ್ತಾರೆ. ಆದರೆ ನೀವು ಪ್ರತಿ
ಕ್ಷಣಕ್ಕೂ ಹಾಡುವುದು, ನರ್ತನ ಮಾಡುವುದು ಮಾಡಿಯೇ ಮಾಡುತ್ತೀರಿ. ನೀವು ಸದಾ ಮನಸ್ಸಿನಲ್ಲಿ
ಖುಷಿಯಿ0ದ ನರ್ತನ ಮಾಡುತ್ತೀರಿ ಅಲ್ಲವೇ! ಅಥವಾ ಇಲ್ಲವೊ! ನರ್ತನ ಮಾಡುತ್ತೀರಿ, ಖುಷಿಯಿ0ದ ನರ್ತನ
ಮಾಡಲು ಬರುತ್ತದೆಯೇ? ನರ್ತನ ಮಾಡಲು ಬರುತ್ತದೆ! ಯಾರಿಗೆ ಬರುತ್ತದೆ ಅವರು ಕೈ ಎತ್ತಿರಿ. ನರ್ತನ
ಮಾಡಲು ಬರುತ್ತದೆ, ಒಳ್ಳೆಯದು, ಬರುತ್ತಿದ್ದರೆ ಶುಭಾಶಯಗಳು. ಸದಾ ನರ್ತನ ಮಾಡುತ್ತೀರೊ ಅಥವಾ ಕೆಲವು
ಬಾರಿ ಮಾತ್ರವೊ?
ಬಾಪ್ದಾದಾ ಈ ವರ್ಷ ಹೋಮ್ ವರ್ಕ್ ಕೊಟ್ಟಿದ್ದರು, ಎರಡು ಶಬ್ಧವನ್ನು ಎ0ದೂ ಯೋಚಿಸಬೇಡಿ, ಕೆಲವು ಬಾರಿ
(ಸಮ್ಟೈಮ್), ಸ್ವಲ್ಪ (ಸಮ್ಥಿ0ಗ್). ಅದನ್ನು ಮಾಡಿರುವಿರಾ? ಈಗಲೂ ಕೆಲವು ಬಾರಿ ಇದೆಯೇ? ಕೆಲವು
ಬಾರಿ, ಸ್ವಲ್ಪ ಎನ್ನುವುದು ಸಮಾಪ್ತಿ. ಇ0ತಹ ನರ್ತನ ಮಾಡುವುದರಲ್ಲಿ ಆಯಾಸ ಅ0ತೂ ಆಗುವುದಿಲ್ಲ.
ಮಲಗಿರಲಿ, ಕೆಲಸ ಮಾಡುತ್ತಿರಲಿ, ನಡೆಯುತ್ತಿರಲಿ, ಕುಳಿತುಕೊ0ಡಿರಲಿ, ಖುಷಿಯ ನರ್ತನ ಅ0ತೂ ಮಾಡಲು
ಸಾಧ್ಯವಿದೆ, ಮತ್ತು ತ0ದೆಯ ಪ್ರಾಪ್ತಿಯ ಗೀತೆಯನ್ನು ಹಾಡಲು ಸಾಧ್ಯವಿದೆ. ಹಾಡಲು ಬರುತ್ತದೆ ಅಲ್ಲವೇ,
ಈ ಹಾಡು ಎಲ್ಲರಿಗೂ ಬರುತ್ತದೆ, ಮುಖದ ಹಾಡು ಕೆಲವರಿಗೆ ಬರಬಹುದು ಕೆಲವರಿಗೆ ಬರುವುದಿಲ್ಲ ಆದರೆ
ತ0ದೆಯ ಪ್ರಾಪ್ತಿಯ ಗೀತೆ, ಗುಣಗಳ ಗೀತೆ ಅದ0ತೂ ಎಲ್ಲರಿಗೂ ಬರುತ್ತದೆ. ಪ್ರತಿ ದಿನವೂ ಉತ್ಸವ ಇದೆ,
ಪ್ರತಿ ಕ್ಷಣವೂ ಉತ್ಸವ ಇದೆ, ಮತ್ತು ಸದಾ ನರ್ತನ ಮಾಡಿರಿ ಮತ್ತು ಹಾಡಿರಿ ಇನ್ನು ಬೇರೆ ಯಾವ ಕೆಲಸ
ಕೊಟ್ಟಿಲ್ಲ. ಇವೇ ಎರಡು ಕೆಲಸ ಇವೆ ಆಲವೇ, ನರ್ತನ ಮಾಡಿರಿ ಮತ್ತು ಹಾಡಿರಿ. ಆದ್ದರಿ0ದ ಆನ0ದ
ಪಡೆಯಿರಿ. ಹೊರೆ ಏಕೆ ಹೊರುತ್ತೀರಿ, ನರ್ತನ ಮಾಡಿರಿ ಹಾಡಿರಿ ಸಾಕು. ಒಳ್ಳೆಯದು.
ಇ0ದು ಅನೇಕ ಮಕ್ಕಳ ಇಮೇಲ್ ಸಹ ಬ0ದಿವೆ, ಪತ್ರವೂ ಬ0ದಿವೆ, ಪೋನ್ ಸಹ ಬ0ದಿವೆ. ಇರುವ ಎಲ್ಲ ಸಾಧನಗಳ
ಮೂಲಕ ಹೋಳಿ ಹಬ್ಬದ ಶುಭಾಶಯ ತಿಳಿಸಿರುವರು. ನೀವು ಸ0ಕಲ್ಪ ಮಾಡಿದಾಗಲೇ ಬಾಪ್ದಾದಾ ಅವರ ಬಳಿ ಬ0ದು
ತಲುಪುತ್ತದೆ. ಆದರೆ ನಾಲ್ಕೂ ಕಡೆಯ ಮಕ್ಕಳು ವಿಶೇಷ ನೆನಪು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ,
ಬಾಪ್ದಾದಾ ಅವರು ಪ್ರತಿ ಮಗುವಿಗೆ ಪದ್ಮಾ ಪದಮದಷ್ಟು ಆಶೀರ್ವಾದಗಳನ್ನು ಮತ್ತು ಪದುಮಾ ಪಟ್ಟು
ಹೃತ್ಪೂರ್ವಕ ನೆನಪು ಪ್ರೀತಿಯನ್ನು ರಿಟರ್ನ ರೂಪದಲ್ಲಿ ಪ್ರತಿಯೊಬ್ಬರಿಗೂ ಹೆಸರು ಸಹಿತ ಮತ್ತು
ವಿಶೇಷತೆಯ ಸಹಿತವಾಗಿ ಕೊಡುತ್ತಿರುವರು. ಸ0ದೇಶಿಗಳು ಬ0ದಾಗ ಪ್ರತಿಯೊಬ್ಬರೂ ತಮ್ಮ ತಮ್ಮ ಕಡೆಯ
ನೆನಪನ್ನು ಕೊಡುತ್ತಾರೆ. ಯಾರಾದರೂ ಕೊಡದಿದ್ದರೂ ಸಹ ಬಾಪ್ದಾದಾ ಅವರ ಬಳಿ ತಲುಪಿದೆ. ಇದೇ
ಪರಮಾತ್ಮನ ಪ್ರೀತಿಯ ವಿಶೇಷತೆ ಆಗಿದೆ. ಈ ಒ0ದೊ0ದು ದಿನವೂ ಎಷ್ಟು ಪ್ರಿಯವಾಗಿದೆ. ಹಳ್ಳಿಯೇ ಇರಲಿ,
ದೊಡ್ಡ ನಗರಗಳೇ ಇರಲಿ, ಹಳ್ಳಿಗಳಲ್ಲಿ ಯಾವ ಸಾಧನಗಳು ಇಲ್ಲದಿದ್ದರೂ ತ0ದೆಯ ಬಳಿ ತಲುಪಿ ಬಿಡುತ್ತದೆ
ಏಕೆ0ದರೆ ತ0ದೆಯ ಬಳಿ ಆತ್ಮಿಕ ಸಾಧನಗಳು ಬಹಳ ಇವೆ ಅಲ್ಲವೇ!
ಇತ್ತೀಚಿನ ದಿನಗಳಲ್ಲಿ ಡಾಕ್ಟರ್ಸ್ ಔಷಧಿಯನ್ನು ಬಿಟ್ಟು ವ್ಯಾಯಾಮವನ್ನು ಮಾಡಿ ಎಂದು ಹೇಳುತ್ತಾರೆ.
ಬಾಪ್ದಾದಾರವರೂ ಸಹ ಯುದ್ಧವನ್ನು ಮಾಡುವುದು ಬಿಡಿ, ಪರಿಶ್ರಮವನ್ನು ಮಾಡುವುದು ಬಿಡಿ, ಇಡೀ ದಿನ
5-5 ನಿಮಿಷ ಮನಸ್ಸಿನ ವ್ಯಾಯಾಮವನ್ನು ಮಾಡಿ ಎಂದು ಹೇಳುತ್ತೇವೆ. ಒಂದು ನಿಮಿಷ, ನಿರಾಕಾರಿ, ಒಂದು
ನಿಮಿಷದಲ್ಲಿ ಆಕಾರಿ, ಒಂದು ನಿಮಿಷದಲ್ಲಿ ಎಲ್ಲಾ ಕಡೆಯ ಸೇವಾಧಾರಿಗಳು ಈ ಮನಸ್ಸಿನ ವ್ಯಾಯಾಮ 5
ನಿಮಿಷ ಇಡೀ ದಿನದಲ್ಲಿ ಬೇರೆ-ಬೇರೆ ಸಮಯದಲ್ಲಿ ಮಾಡಿ. ಅಂದಾಗ ಸದಾ ಆರೋಗ್ಯವಂತಹವರಾಗಿರುತ್ತೀರಿ,
ಪರಿಶ್ರಮದಿಂದ ಮುಕ್ತರಾಗುತ್ತೀರಿ. ಆಗುತ್ತದೆವಲ್ಲವೇ. ಆಗುತ್ತದಲ್ಲವೇ? ಮಧುಬನದವರು, ಮಧುಬನ
ತಳಪಾಯವಾಗಿದೆ, ಮಧುಬನದ ವೈಬ್ರೇಶನ್ ನಾಲ್ಕಾರು ಕಡೆ ತಲುಪಿ ಬಿಡುತ್ತದೆ. ಮಧುಬನದಲ್ಲಿ ಒಂದು ದಿನ
ಯಾವುದಾದರು ವಿಷಯ ಆದರೆ, ಇನ್ನೊಂದು ದಿನ ಇಡೀ ಭಾರತದಲ್ಲಿ ಮೂಲೆ-ಮೂಲೆಯಲ್ಲೂ ಹೋಗಿ ತಲುಪಿ
ಬಿಡುತ್ತದೆ. ಮಧುಬನದಲ್ಲಿ ಎಷ್ಟೊಂದು ಸಾಧನೆಗಳಿದೆ ಯಾವುದೇ ಮಾತು ಮುಚ್ಚಿಡಲು ಸಾಧ್ಯವಿಲ್ಲ.
ಒಳ್ಳೆಯ ಮಾತು ಮತ್ತು ಪುರುಷಾರ್ಥದ ಮಾತು. ಮಧುಬನದಲ್ಲಿ ಏನೆಲ್ಲಾ ಮಾಡುತ್ತೀರಾ ಅದರ ವೈಬ್ರೇಷನ್
ಸ್ವತಹವಾಗಿ ಸಹಜವಾಗಿ ತಲುಪಿ ಬಿಡುತ್ತದೆ. ಮೊದಲು ಮಧುಬನ ನಿವಾಸಿಗಳು ವ್ಯರ್ಥ ವಿಚಾರವನ್ನು
ಸಮಾಪ್ತಿ ಮಾಡಿ. ಸಾಧ್ಯವಿದೆಯೇ? ಸಾಧ್ಯವಿದೆಯೇ? ಇವರು ಮುಂದೆ-ಮುಂದೆ ಕುಳಿತಿದ್ದಾರಲ್ಲವೇ? ಮಧುಬನ
ನಿವಾಸಿಗಳು ಕೈ ಎತ್ತಿ. ಮಧುಬನ ನಿವಾಸಿಗಳು ಪರಸ್ಪರ ಸೇರಿ ವ್ಯರ್ಥವನ್ನು ಸಮಾಪ್ತಿ ಮಾಡುವಂತಹ
ಯಾವುದಾದರು ಪ್ಲಾನ್ನ್ನು ಮಾಡಿ. ಬಾಪ್ದಾದಾರವರು ಸಂಕಲ್ಪವನ್ನೇ ಬಂದ್ ಮಾಡಿ ಎಂದು ಹೇಳುವುದಿಲ್ಲ.
ವ್ಯರ್ಥ ಸಂಕಲ್ಪ ಸಮಾಪ್ತಿ. ಏಕೆಂದರೆ ಅದರಲ್ಲಿ ಲಾಭವಿಲ್ಲ. ಅದರಲ್ಲಿ ವ್ಯಾಕುಲತೆಯಿದೆ. ವ್ಯರ್ಥ
ಸಂಕಲ್ಪವನ್ನು ನಿಲ್ಲಿಸಲು ಸಾಧ್ಯವಿದೆಯೇ? ಮಧುಬನ ನಿವಾಸಿಗಳು ಪರಸ್ಪರದಲ್ಲಿ ಮೀಟಿಂಗ್ ಮಾಡಿ,
ಇದನ್ನು ಮಾಡುತ್ತೇವೆ ಎನ್ನುವವರು ಕೈ ಎತ್ತಿರಿ. ಉದ್ದನೇದಾಗಿ ಕೈ ಎತ್ತಿರಿ. ಎರಡೆರಡು ಕೈ ಎತ್ತಿರಿ.
ಅಭಿನಂದನೆಗಳು. ಬಾಪ್ದಾದಾರವರು ಹೃದಯ ತುಂಬಿರುವ ಆಶೀರ್ವಾದಗಳನ್ನು ನೀಡುತ್ತೇವೆ. ಮಧುಬನದಲ್ಲಿ
ಸಾಹಸವಿದೆ. ಏನು ಬೇಕೋ ಅದನ್ನು ಮಾಡಲು ಸಾಧ್ಯವಿದೆ. ಮಾಡಿಸಲು ಸಾಧ್ಯವಿದೆ. ಮಧುಬನದಲ್ಲಿ ಅಕ್ಕಂದರೂ
ಸಹ ಇದ್ದಾರೆ, ಅಕ್ಕಂದಿರು ಕೈ ಎತ್ತಿರಿ, ಉದ್ದನೆಯದಾಗಿ ಕೈ ಎತ್ತಿರಿ. ಮೀಟಿಂಗ್ ಮಾಡಬೇಕು.
ದಾದಿಯರು ತಾವು ಮೀಟಿಂಗ್ ಮಾಡಿಸಿ. ನೋಡಿ ಎಲ್ಲರೂ ಕೈ ಎತ್ತುತ್ತಿದ್ದಾರೆ. ಈಗ ಕೈಯದು ಮರ್ಯಾದೆ
ಉಳಿಸಿ. ಒಳ್ಳೆಯದು. ಈಗೀಗ ಸೆಕೆಂಡಿನಲ್ಲಿ ಯಾವುದನ್ನು ಬ್ರಹ್ಮಾ ತಂದೆ ಕೊನೆಯಲ್ಲಿ ವರದಾನವನ್ನು
ಕೊಟ್ಟರು ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ ಇದು ಬ್ರಹ್ಮಾ ತಂದೆಯ ಕೊನೆಯ ವರದಾನ. ಇದು ಬಹಳ
ದೊಡ್ಡ ಉಡುಗೊರೆ ಮಕ್ಕಳ ಪ್ರತಿ ಆಗಿದೆ. ಅಂದಾಗ ಸೆಕೆಂಡಿನಲ್ಲಿ ಬ್ರಹ್ಮಾ ತಂದೆಯ ಉಡುಗೊರೆಯನ್ನು
ಮನಸ್ಸಿನಲ್ಲಿ ಸ್ವೀಕಾರ ಮಾಡಲು ಸಾಧ್ಯವಿದೆಯೇನು? ತಂದೆಯ ಊಡುಗೊರೆಯನ್ನು ಸದಾ ಪ್ರಾಕ್ಟಿಕಲ್
ಜೀವನದಲ್ಲಿ ತರುತ್ತೇವೆಂದು ದೃಢ ಸಂಕಲ್ಪ ಮಾಡಲು ಸಾಧ್ಯವಿದೆಯೇ? ಏಕೆಂದರೆ ಆದಿ ದೇವನ ಊಡುಗೊರೆ
ಕಡಿಮೆಯಲ್ಲ. ಅಂದಾಗ ತಮ್ಮ-ತಮ್ಮ ಪುರುಷಾರ್ಥದನುಸಾರವಾಗಿ ಸಂಕಲ್ಪವನ್ನು ಮಾಡಿ, ಇಂದು ಹೋಲಿ
ಅರ್ಥಾತ್ ಕಳೆದದ್ದು ಕಳೆದು ಹೋಯಿತು ಅರ್ಥಾತ್ ಇಂದು ಊಡುಗೊರೆಯನ್ನು ಮತ್ತೆ-ಮತ್ತೆ ಸ್ಮೃತಿಯಲ್ಲಿ
ತಂದು ಬ್ರಹ್ಮಾ ತಂದೆಯ ಸೇವೆಯ ಮರುಪಾವತಿ ಕೊಡುತ್ತೀರಿ. ನೋಡಿ ಬ್ರಹ್ಮಾ ತಂದೆ ಅಂತಿಮ ದಿನ ಅಂತಿಮ
ಸಮಯದವರೆಗೂ ಸೇವೆ ಮಾಡಿದರು. ಇದು ಬ್ರಹ್ಮಾ ತಂದೆಯ ಮಕ್ಕಳ ಪ್ರತಿ ಪ್ರೀತಿ, ಸೇವೆಯ ಜೊತೆ ಪ್ರೀತಿಯ
ಗುರುತಾಗಿದೆ ಎಂದರೆ ಬ್ರಹ್ಮಾ ತಂದೆಗೆ ರಿಟರ್ನ್ ಕೊಡುವುದು ಎಂದರೆ ಜೀವನದಲ್ಲಿ ಕೊಟ್ಟಿರುವಂತಹ
ಊಡುಗೊರೆಯನ್ನು ರಿವ್ಶೆಜ್ ಮಾಡಿ. ಪ್ರತ್ಯಕ್ಷದಲ್ಲಿ ತರುವುದು. ಎಲ್ಲರೂ ತನ್ನ ಹೃದಯದಲ್ಲಿ ಬ್ರಹ್ಮಾ
ತಂದೆಯ ಸ್ನೇಹದ ಮರುಪಾವತಿಯಲ್ಲಿ ದೃಢ ಸಂಕಲ್ಪ ಮಾಡಿ. ಇದಾಗಿದೆ ಬ್ರಹ್ಮಾ ತಂದೆಯ ಸ್ನೇಹದ
ಊಡುಗೊರೆಯ ರಿಟರ್ನ್. ಒಳ್ಳೆಯದು.
ನಾಲ್ಕಾರು ಕಡೆಯ ಅದೃಷ್ಟವಂತರು, ಪವಿತ್ರರಾದ ಮಕ್ಕಳಿಗೆ ಸದಾ ದೃಢ ಸಂಕಲ್ಪದ ಬೀಗದ ಕೈಯನ್ನು
ಪ್ರತ್ಯಕ್ಷದಲ್ಲಿ ತರುವಂತಹ ಸಾಹಸವಂತಹ ಮಕ್ಕಳಿಗೆ ಸದಾ ತನ್ನ ಮನಸ್ಸನ್ನು ಭಿನ್ನ-ಭಿನ್ನ ಪ್ರಕಾರದ
ಸೇವೆಯಲ್ಲಿ ನಿರತಗೊಳಿಸಿರುವಂತಹ, ಹೆಜ್ಜೆಯಲ್ಲಿ ಪದಮದಷ್ಟು ಸಂಪಾದನೆ ಜಮಾ ಮಾಡಿಕೊಳ್ಳುವಂತಹ
ಮಕ್ಕಳಿಗೆ, ಸದಾ ಪ್ರತಿ ದಿನ ಉತ್ಸಾಹದಲ್ಲಿ ಇರುವಂತಹ, ಪ್ರತಿ ದಿನ ಉತ್ಸವ ಎಂದು ತಿಳಿದು ಆಚರಣೆ
ಮಾಡುವಂತಹ, ಸದಾ ಅದೃಷ್ಟವಂತ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ವರದಾನ:
ಪ್ರೀತಿ ಮತ್ತು
ಲವಲೀನ ಸ್ಥಿತಿಯ ಅನುಭವದ ಮೂಲಕ ಎಲ್ಲವನ್ನೂ ಮರೆಯುವಂತಹ ಸದಾ ದೇಹಿ ಅಭಿಮಾನಿ ಭವ.
ಕರ್ಮದಲ್ಲಿ ವಾಣಿಯಲ್ಲಿ
ಸಂಪರ್ಕದಲ್ಲಿ ಹಾಗೂ ಸಂಬಂಧದಲ್ಲಿ ಪ್ರೀತಿ ಮತ್ತು ಸ್ಮತಿಯಲ್ಲಿ ಲವಲೀನರಾಗಿದ್ದಲ್ಲಿ ಎಲ್ಲವನ್ನೂ
ಮರೆತು ದೇಹಿ-ಅಭಿಮಾನಿಯಾಗಿ ಬಿಡುವಿರಿ. ಪ್ರೀತಿಯೇ ತಂದೆಯ ಸಮೀಪ ಸಂಬಂಧದಲ್ಲಿ ತರುವುದು, ಸರ್ವಸ್ವ
ತ್ಯಾಗಿಗಳನ್ನಾಗಿ ಮಾಡುತ್ತದೆ. ಈ ಪ್ರೀತಿಯ ವಿಶೇಷತೆಯಿಂದ ಹಾಗೂ ಲವಲೀನ ಸ್ಥಿತಿಯಲ್ಲಿರುವುದರಿಂದಲೇ
ಸರ್ವ ಆತ್ಮಗಳ ಭಾಗ್ಯ ಅಥವಾ ಅದೃಷ್ಟವನ್ನು ಜಾಗೃತಗೊಳಿಸಬಹುದು. ಈ ಪ್ರೀತಿಯೇ ಅದೃಷ್ಟವನ್ನು ಲಾಕ್
ಮಾಡುವ ಕೀಲಿ ಕೈ ಆಗಿದೆ. ಇದು ಮಾಸ್ಟರ್-ಕೀ ಆಗಿದೆ. ಇದರಿಂದ ಎಷ್ಟೇ ದುರ್ಭಾಗ್ಯಶಾಲಿ ಆತ್ಮಕ್ಕೆ
ಭಾಗ್ಯಶಾಲಿಯನ್ನಾಗಿ ಮಾಡಲು ಸಾಧ್ಯ.
ಸ್ಲೋಗನ್:
ಸ್ವಯಂನ
ಪರಿವರ್ತನೆಯ ಘಳಿಗೆ ನಿಶ್ಚಿತ ಮಾಡಿದಾಗ ವಿಶ್ವ ಪರಿವರ್ತನೆ ಸ್ವತಃ ಆಗಿ ಬಿಡುವುದು.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಮನಸ್ಸಾ ಶಕ್ತಿಯ
ದರ್ಪಣವಾಗಿದೆ – ಮಾತು ಮತ್ತು ಕರ್ಮ. ಅಜ್ಞಾನಿ ಆತ್ಮಗಳಿರಬಹುದು, ಜ್ಞಾನಿ ಆತ್ಮಗಳಿರಬಹುದು –
ಇಬ್ಬರ ಸಂಬಂಧ-ಸಂಪರ್ಕದಲ್ಲಿ ಮಾತು ಮತ್ತು ಕರ್ಮ ಶುಭ-ಭಾವನೆ, ಶುಭ ಕಾಮನೆಯುಳ್ಳವಿರಬಹುದು. ಯಾರ
ಮನಸ್ಸು ಶಕ್ತಿಶಾಲಿ ಅಥವಾ ಶುಭವಾಗಿರುತ್ತದೆ ಅವರ ವಾಚಾ ಮತ್ತು ಕರ್ಮಣಾ ಸ್ವತಃವೇ ಶಕ್ತಿಶಾಲಿ
ಶುದ್ಧವಾಗಿರುತ್ತದೆ, ಶುಭ ಭಾವನೆಯುಳ್ಳದ್ದಾಗಿರುತ್ತದೆ. ಮನಸ್ಸಾ ಶಕ್ತಿಶಾಲಿ ಅರ್ಥಾತ್ ನೆನಪಿನ
ಶಕ್ತಿ ಶ್ರೇಷ್ಠವಾಗಿರುತ್ತದೆ, ಶಕ್ತಿಶಾಲಿಯಾಗಿರಲಿ, ಸಹಜಯೋಗಿಯಾಗಿರುತ್ತಾರೆ.