07.06.26 Avyakt Bapdada
Kannada
Murli 31.03.2010 Om Shanti Madhuban
“ಪೂರ್ವಜ ಮತ್ತು ಪೂಜ್ಯದ
ಸ್ವಮಾನದಲ್ಲಿದ್ದು ಮನಸಾ ಮೂಲಕ ಸರ್ವರ ಪಾಲನೆ ಮಾಡಿ ಇಡೀ ವೃಕ್ಷಕ್ಕೆ ಸಕಾಶವನ್ನು ನೀಡಿ”
ಈ ದಿನ ಬಾಪ್ದಾದಾರವರು
ಎಲ್ಲಾ ಕಡೆ ತನ್ನ ಪೂರ್ವಜ ಮತ್ತು ಪೂಜ್ಯ ಆತ್ಮಗಳನ್ನು ನೋಡುತ್ತಿದ್ದಾರೆ, ತಮ್ಮನ್ನು ತಾವು
ಪೂರ್ವಜ ಆತ್ಮಗಳೆಂದು ತಿಳಿದಿದ್ದೀರಲ್ಲವೇ, ಪೂಜ್ಯ ಆತ್ಮಗಳ ನಿವಾಸ ಯಾವುದು? ತಮ್ಮ ವೃಕ್ಷವನ್ನು
ಎದುರಿನಲ್ಲಿ ತೆಗೆದುಕೊಂಡು ಬಂದು ನೋಡಿ ತಮ್ಮ ಸ್ಥಾನ ಎಲ್ಲಿದೆ? ತಾವು ಪೂರ್ವಜರ ಸ್ಥಾನ ಕೆಳಗಿದೆ
ಎಂದು ತಿಳಿದಿದೆ, ವೃಕ್ಷದ ಮೊದಲಿನಲ್ಲೂ ಇದೆ ಮತ್ತು ಬೇರಿನಲ್ಲೂ ಇದೆ, ಬೇರಿಂದಲೇ ಇಡೀ ವೃಕ್ಷಕ್ಕೆ
ಪಾಲನೆ ಸಿಗುತ್ತದೆ ಅಂದಾಗ ತಾವು ಇಡೀ ವೃಕ್ಷದ ಕೊಂದೆ-ರೆಂಬೆಗಳು, ಎಲೆಗಳ ಪಾಲನೆ ಮಾಡುವವರು ಸಕಾಶ
ಕೊಡುವ ಪೂರ್ವಜರಾಗಿದ್ದೀರಿ. ಪೂರ್ವಜರ ಜೊತೆ ಪೂಜ್ಯರೂ ಸಹ ಆಗಿದ್ದೀರಿ, ಬೇರು ಮೂಲಕ ಕೊನೆಯ ಎಲೆಗೂ
ಸಹ ಸಕಾಶ (ಶಕ್ತಿ) ಸಿಗುತ್ತದೆ. ತಮ್ಮನ್ನು ತಾವು ಇಡೀ ವೃಕ್ಷಕ್ಕೆ ಶಕ್ತಿ ಕೊಡುವವರು ಎಂದು ಅನುಭವ
ಮಾಡುತ್ತೀರಾ? ನಾವು ಪೂರ್ವಜರು ಆತ್ಮ ರೂಪಿ ಕೊಂಬೆ-ರೆಂಬೆಗಳಿಗೆ ಮತ್ತು ಎಲೆಗಳಿಗೆ ಶಕ್ತಿ
ಕೊಡುತ್ತಿದ್ದೇವೆ ಎಂಬ ನಶೆ ಇರುತ್ತದೆಯೇ? ಹೇಗೆ ಬ್ರಹ್ಮಾ ತಂದೆಗೆ ಗ್ರೇಟ್, ಗ್ರೇಟ್ ಗ್ರಾಂಡ್
ಫಾದರ್ ಎಂದು ಹೇಳಿದಾಗ ತಾವು ಅವರ ಮಕ್ಕಳು ಜೊತೆಗಾರರೂ ಸಹ ಮಾಸ್ಟರ್ ಗ್ರೇಟ್-ಗ್ರೇಟ್ ಗ್ರಾಂಡ್
ಫಾದರ್ ಆಗಿದ್ದೀರಿ. ಇಡೀ ವೃಕ್ಷದ ಆತ್ಮಗಳ ತಾವು ಪೂರ್ವಜ ಆತ್ಮರ ಕಡೆ ಆಕರ್ಷಣೆ ಇದೆ. ತಾವು
ಪೂರ್ವಜ ಆತ್ಮರು ಅವರ ಪಾಲನೆ ಶಕ್ತಿಗಳ ಮೂಲಕ ಮಾಡುತ್ತೀರಿ. ಹೇಗೆ ತಾವೆಲ್ಲಾ ಪೂರ್ವಜ ಆತ್ಮರ ತಂದೆ
ಮಾಡಿದ್ದಾರೆ ಅಂದಾಗ ತಂದೆ ಹೇಗೆ ಮಾಡಿದ್ದಾರೆ? ಶಕ್ತಿಗಳ ಮೂಲಕ ಮಾಡಿದ್ದಾರೆ. ಅದೇ ರೀತಿ ತಾವು ಸಹ
ಪೂರ್ವಜರ ಸಂಬಂಧದಿಂದ ಶಕ್ತಿಗಳ ಮೂಲಕ ಅವರ ಪಾಲನೆ ಮಾಡುವವರು. ವರ್ತಮಾನ ಸಮಯದಲ್ಲಿ ಎಲ್ಲಾ ಆತ್ಮರು
ದುಃಖಿ ಆಗಿ ಕೂಗುತ್ತಿರುವುದನ್ನು ನೋಡಿದ್ದೀರಿ. ತಮ್ಮ-ತಮ್ಮ ದೇವಿ-ದೇವತೆಗಳನ್ನು ಬನ್ನಿ ನಮ್ಮ
ರಕ್ಷಣೆ ಮಾಡಿ, ನಮಗೆ ಶಾಂತಿ ಕೊಡಿ, ನಮಗೆ ಶಕ್ತಿ ಕೊಡಿ, ಓ ಕ್ಷಮಾ ಸಾಗರ ಪೂರ್ವಜರು ನಮಗೆ ಪಾಲನೆ
ಕೊಡಿ ಎಂದು ಕೂಗುತ್ತಿದ್ದಾರೆ, ಅಂದಾಗ ಈ ಶಬ್ದ ತಾವು ಪೂರ್ವಜ ಆತ್ಮಗಳ ಕಿವಿಗೆ ಕೇಳಿಸುತ್ತಿದೆಯೇ?
ನಾವೇ ಪೂರ್ವಜರು ಎಂಬ ಅನುಭವ ಮಾಡುತ್ತೀರಾ? ಇಡೀ ವೃಕ್ಷದಲ್ಲಿ ನೋಡಿ ಅನ್ಯ ಧರ್ಮ ಆತ್ಮಗಳೂ ಸಹ
ಇದ್ದಾರೆ ಅಂದಾಗ ವೃಕ್ಷದಲ್ಲಿ ಕೊಂಬೆ-ರೆಂಬೆಗಳು ಇರುವ ಕಾರಣ ಅವರೂ ತಮ್ಮನ್ನು ಅದೇ ದೃಷ್ಟಿಯಿಂದ
ನೋಡುತ್ತಾರೆ. ಅವರ ಪೂರ್ವಜರು ತಾವೇ ಆಗಿದ್ದೀರಿ. ಯಾವುದೇ ಧರ್ಮದ ಆತ್ಮಗಳ ಜೊತೆ ತಾವು ಮಿಲನ
ಮಾಡಿದಾಗ ಇವರೂ ನಮ್ಮ ವೃಕ್ಷದ ಕೊಂಬೆ-ರೆಂಬೆಗಳಾಗಿದ್ದಾರೆ ಎಂದು ತಿಳಿಯುತ್ತೀರಾ? ಅವರೂ ತಮ್ಮನ್ನು
ಮಿಲನ ಮಾಡಿದಾಗ ನಮ್ಮವರು ಎಂದು ತಿಳಿಯುತ್ತಾರೆ. ನಮ್ಮತನದ ಅನುಭವ ಆ ಆತ್ಮಗಳಿಗೂ ಸಹ ಆಗುತ್ತಿದೆ
ಮತ್ತು ಆಗಲೇಬೇಕು, ಅಂದಾಗ ಇಷ್ಟು ನಶೆ, ಇಷ್ಟು ಒಳಗಿನಿಂದ ದಯೆ ತಮಗೆ ಬರುತ್ತಿದೆಯೇ? ದಯೆ ಮಾಡಿ
ಎಂದು ಅವರು ಕೂಗುತ್ತಿದ್ದಾರೆ, ಈಗ ಸಮಯದನುಸಾರ ತಾವೆಲ್ಲಾ ಪೂರ್ವಜ ಆತ್ಮರು ಆತ್ಮಗಳು ಶಕ್ತಿಗಳ
ಮೂಲಕ ಪಾಲನೆ ಮಾಡಬೇಕಾಗಿದೆ, ಅವರಿಗೆ ಅವಶ್ಯಕತೆ ಇದೆ ಅಂದಾಗ ತಾವು ಎಷ್ಟು ಪೂರ್ವಜರು ಎಂಬ
ನಶೆಯಲ್ಲಿ ಇರುತ್ತೀರಿ ಅಷ್ಟೇ ತಮ್ಮ ಮೂಲಕ ಅವರ ಪಾಲನೆ ಆಗುತ್ತದೆ. ಲೌಕಿಕದಲ್ಲಿ ಯಾರದ್ದಾದರೂ
ಪಾಲನೆ ದೊಡ್ಡವರ ಮೂಲಕ ಆಗುತ್ತದೆ. ಅವರೇ ತಮ್ಮ ಶರೀರದ ತಿನ್ನುವುದು, ಕುಡಿಯುವುದು ಮತ್ತು ವಿದ್ಯೆ
ಯಾವುದು ಸಂಪಾದನೆಗೆ ಆಧಾರವಾಗಿದೆ ಅದರ ತಯಾರಿ ಮಾಡುತ್ತಾರೆ. ಹೇಗೆ ತಂದೆ ತಾವು ಮಕ್ಕಳಿಗೆ
ಭಿನ್ನ-ಭಿನ್ನ ಶಕ್ತಿಗಳ ಮೂಲಕ ಪಾಲನೆ ಮಾಡಿದ್ದಾರೆ, ಅದೇ ರೀತಿ ಇಡೀ ವೃಕ್ಷದ ಕೊಂಬೆ-ರೆಂಬೆಗಳ,
ಎಲೆಗಳ ಪಾಲನೆ ಮಾಡುವುದು ಈಗ ತಮ್ಮ ಕಾರ್ಯವಾಗಿದೆ. ಈ ರೀತಿ ಉತ್ಸಾಹ ತಾವು ಪೂರ್ವಜ ಆತ್ಮರಿಗೆ
ಬರುತ್ತದೆಯೇ? ಪೂಜ್ಯರೂ ಆಗಿದ್ದೇವೆ ಎಂಬ ನಶೆ ಇದೆಯೇ? ನೋಡಿ ಇಡೀ ಡ್ರಾಮಾದಲ್ಲಿ ಎಷ್ಟು ತಾವು
ಆತ್ಮಗಳಿಗೆ ಕಾಯಿದೆ ಪ್ರಮಾಣ ಪೂಜೆ ಆಗುತ್ತದೆ ಅಷ್ಟು ಯಾವುದೇ ಮಹಾತ್ಮ, ಧರ್ಮಪಿತರಿಗೆ
ಆಗುವುದಿಲ್ಲ. ತಮ್ಮ ಪೂಜೆ ನಿಯಮ ಪ್ರಮಾಣ ಆರತಿ, ಭೋಗ ಇಡುವುದು ಈ ರೀತಿ ಯಾರಿಗೂ ಆಗುವುದಿಲ್ಲ.
ಗಾಯನ ನೋಡಿ ತಮಗೆ ಕಾಯಿದೆ ಪ್ರಮಾಣ ಕೀರ್ತನೆ ಆಗುತ್ತದೆ, ಯಾರದ್ದೂ ಈ ರೀತಿ ಗಾಯನ ಆಗುವುದಿಲ್ಲ.
ಅಂದಾಗ ತಾವು ಪೂರ್ವಜರ ಜೊತೆ ಪೂಜ್ಯರೂ ಆಗಿದ್ದೀರಿ. ಡ್ರಾಮಾದಲ್ಲಿ ತಮ್ಮ ಹಾಗೆ ಪೂಜೆ ಮತ್ತು ಗಾಯನ
ಯಾರದ್ದೂ ಆಗುವುದಿಲ್ಲ.
ಬಾಪ್ದಾದಾ ಅಂತಹ ತಾವು
ಪೂಜ್ಯ ಮತ್ತು ಪೂರ್ವಜ ಆತ್ಮಗಳನ್ನು ನೋಡಿ ಎಷ್ಟು ಖುಷಿ ಆಗುತ್ತಾರೆ. ತಂದೆ ಹೃದಯದಿಂದ ಪದೇ-ಪದೇ
ವಾಹ್! ನನ್ನ ಸರ್ವ ವೃಕ್ಷದ ಪೂರ್ವಜ ಮತ್ತು ಪೂಜ್ಯ ಆತ್ಮಗಳೇ ವಾಹ್! ಹಾಡು ಬರುತ್ತದೆ.
ವರ್ತಮಾನದಲ್ಲಿ ಬಾಪ್ದಾದಾ ತಾವು ಮಕ್ಕಳೆಲ್ಲರಿಗೆ ತಮ್ಮ ಸ್ವಮಾನ ತಂದೆಯ ಸಮಾನ ಸಂಪನ್ನ ಮತ್ತು
ಸಂಪೂರ್ಣ ಆಗುವುದು ಯಾವುದಿದೆ ಅದೇ ರೂಪವನ್ನು ನೋಡಲು ಬಯಸುತ್ತಾರೆ. ಅದಕ್ಕಾಗಿ ಒಂದು ಮಾತು ಮಕ್ಕಳು
ಗಮನದಲ್ಲಿ ಇಟ್ಟುಕೊಳ್ಳಬೇಕು. ಎಲ್ಲಾ ಮಕ್ಕಳು ಪುರುಷಾರ್ಥ ಬಹಳ ಚೆನ್ನಾಗಿ ಮಾಡುವುದು
ಬಾಪ್ದಾದಾರವರು ನೋಡಿದ್ದಾರೆ ಆದರೆ ಸದಾ ಎಂಬ ಶಬ್ದ ಪ್ರತಿಯೊಬ್ಬರು ತಮ್ಮ ಪುರುಷಾರ್ಥದಲ್ಲಿ
ಸೇರಿಸಿಕೊಳ್ಳಬೇಕು, ಅಟೆನ್ಷನ್ ಕೊಡಬೇಕು. ಬಾಪ್ದಾದಾ ಮಕ್ಕಳನ್ನು ಕೇಳುತ್ತಾರೆ - ಹೇಗೆ ತಂದೆ ತಾವು
ಎಲ್ಲಾ ಮಕ್ಕಳನ್ನು ಶ್ರೇಷ್ಠ ಸ್ವಮಾನಧಾರಿ ಆತ್ಮಗಳ ರೂಪದಲ್ಲಿ ನೋಡುತ್ತಾರೆ, ಅದೇ ರೀತಿ ತಾವು
ತಮ್ಮನ್ನೂ ಸಹ ಸ್ವಮಾನಧಾರಿ ಎಂದು ತಿಳಿದಿದ್ದೀರಾ?
ನಾವೂ ಸಹ ನಮ್ಮ
ರಾಜ್ಯಕ್ಕೆ ಹೋಗೋಣ ಎಂದು ಮಕ್ಕಳು ಬಯಸುವುದು ಬಾಪ್ದಾದಾರವರೂ ನೋಡಿದ್ದಾರೆ. ಈಗ ಮನೆಗೆ ಹೋಗಬೇಕು
ಎಂಬ ಹಾಡನ್ನು ಹೃದಯದಲ್ಲಿ ಹಾಡುತ್ತಿರುತ್ತಾರೆ. ಈಗ ಮನೆಗೆ ಹೋಗಬೇಕು, ರಿಟರ್ನ್ ಜರ್ನೀ ಮಾಡಬೇಕು,
ಇದಕ್ಕಾಗಿ ಬಾಪ್ದಾದಾರವರು ಇಡೀ ಸಮಯ ತಮ್ಮನ್ನು ತಾವು ಯಾವುದಾದರೂ ಸೇವೆಯಲ್ಲಿ ಬಿಜಿಯಾಗಿ
ಇಟ್ಟುಕೊಳ್ಳಿ ಎಂದು ಮೊದಲೇ ಹೇಳಿದರು. ಬಾಪ್ದಾದಾರವರು ನೋಡಿದರು ಸೇವೆಯ ರುಚಿ, ಸೇವೆಯ
ಉಮಂಗ-ಉತ್ಸಾಹ ಈಗಲೂ ಮಕ್ಕಳಲ್ಲಿದೆ. ಒಳ್ಳೆಯ ಸೇವೆಯ ಸಮಾಚಾರವೂ ಸಹ ಬಾಪ್ದಾದಾರವರು ಕೇಳುತ್ತಾರೆ.
ಆದರೆ ಬಾಪ್ದಾದಾ ತೀವ್ರ ಗತಿಯಲ್ಲಿ ಮುಂದುವರೆಯಲು ಮಕ್ಕಳಿಗೆ ವಿಶೇಷ ಅಟೆನ್ಷನ್ ಕೊಡಿಸುತ್ತಾರೆ.
ಕೇವಲ ವಾಚಾ ಸೇವೆ ಅಲ್ಲ, ಸೇವೆ ಮಾಡುತ್ತೀರಿ ಅಂದಾಗ ಒಂದೇ ಸಮಯದಲ್ಲಿ ಮೂರು ಸೇವೆಗಳನ್ನು ಒಟ್ಟಿಗೆ
ಮಾಡಿ. ಮನಸಾ ಮೂಲಕ ಸಕಾಶ ಕೊಡಿ, ವಾಚಾ ಮೂಲಕ ಜ್ಞಾನವನ್ನು ಕೊಡಿ ಮತ್ತು ಕರ್ಮಣಾ ಅರ್ಥಾತ್ ತಮ್ಮ
ಸಂಪರ್ಕದ ಮೂಲಕ ಸಂಬಂಧದ ಮೂಲಕ, ಚೆಹರೆಯ ಮೂಲಕ ಈ ರೀತಿ ಸೇವೆ ಮಾಡಿ ಅದರ ಪ್ರಭಾವವೂ ಜೊತೆ-ಜೊತೆಗೆ
ಸೇವೆಯಲ್ಲಿ ಇರಲಿ. ಒಂದೇ ಸಮಯದಲ್ಲಿ ಮೂರು ಸೇವೆಗಳನ್ನು ಒಟ್ಟಿಗೆ ಮಾಡಿ ಏಕೆಂದರೆ ಈಗ ಆತ್ಮಗಳು
ಸೇವೆಗಾಗಿ ಸ್ವಲ್ಪ ವ್ಯತ್ಯಾಸವಿರಲಿ, ಸ್ವಲ್ಪ ಬದಲಾವಣೆ ಆಗಬೇಕು ಎಂದು ಬಯಸುತ್ತಾರೆ. ಒಂದೇ
ಸಮಯದಲ್ಲಿ ಮೂರು ಸೇವೆಗಳನ್ನು ಮಾಡಲು ಸಾಧ್ಯವೇ? ಮಾಡಲು ಸಾಧ್ಯವೇ? ಯಾವ ಸಮಯದಲ್ಲಿ ವಾಚಾ ಮೂಲಕ
ಸೇವೆ ಮಾಡುತ್ತಾ ಆ ಸಮಯದಲ್ಲಿ ಮನಸಾ ಮೂಲಕ ಮತ್ತು ಕರ್ಮಣಾ ಅರ್ಥಾತ್ ಸಂಪರ್ಕ-ಸಂಬಂಧದ ಮೂಲಕವೂ ಸೇವೆ
ಆಗುತ್ತಿದೆ ಎಂದು ಚೆಕ್ ಮಾಡಿಕೊಳ್ಳುತ್ತೀರಾ? ಜೊತೆ-ಜೊತೆಗೆ ಆಗುತ್ತದೆ. ಯಾರು ನಾವು ಒಂದೇ
ಸಮಯದಲ್ಲಿ ಮೂರು ಸೇವೆಗಳನ್ನು ಮಾಡುತ್ತಿದ್ದೇವೆ ಎಂದು ತಿಳಿದಿದ್ದೀರೋ ಅವರು ಕೈ ಎತ್ತಿ. ಮೂರು
ಸೇವೆಗಳನ್ನು ಮಾಡುತ್ತೀರಾ? ಒಳ್ಳೆಯದು ಮೊದಲನೇ ಲೈನ್ ಕಡಿಮೆ ಕೈ ಏಕೆ ಎತ್ತುತ್ತಿದ್ದೀರಾ? ಏಕೆ?
ಮೊದಲನೇ ಲೈನ್ ಯೋಚನೆ ಮಾಡುತ್ತಿದ್ದೀರಾ? ಮಧುಬನದವರು ಮಾಡುತ್ತಿದ್ದೀರಾ? ಮಧುಬನದವರು ಕೈ ಎತ್ತಿ,
ಮಾಡುತ್ತಿದ್ದರೆ ಕೈ ಎತ್ತಿ. ಒಂದೇ ಸಮಯದಲ್ಲಿ ಮೂರು ಸೇವೆಗಳು ಅಂದಾಗ ಈಗ ಅಟೆನ್ಷನ್ ಪ್ಲೀಸ್
ಕೆಲವೊಮ್ಮೆ ಅಲ್ಲ, ಏನಾಗುತ್ತದೆ? ಸೇವೆಯಂತೂ ಮಾಡುತ್ತೀರಿ ಆದರೆ ಸೇವೆಯಲ್ಲಿ ತಮಗೆ ಮತ್ತು
ಜೊತೆಗಾರರ ಸಂತುಷ್ಟತೆ ಇರಬೇಕು ಏಕೆಂದರೆ ಸೇವೆಯ ಫಲ ಸಂತುಷ್ಟತೆ ಮತ್ತು ಖುಷಿಯಾಗಿದೆ. ಸೇವೆಯಂತೂ
ಮಾಡಿದ್ದೇವೆ ಆದರೆ ಯಾವಾಗ ಸ್ವಯಂ ಜೊತೆಗಾರರು, ವಾಯುಮಂಡಲ ಎಲ್ಲರೂ ಸಂತುಷ್ಟತೆಯ ವೈಬ್ರೇಷನ್ನಲ್ಲಿ
ಇದ್ದಾಗ ಸೇವೆಯ ಖುಷಿ ಆಗುತ್ತದೆ ಎಂದು ತಿಳಿಸಿದ್ದೇವೆ. ಸೇವೆಯ ಸಫಲತೆಗಾಗಿ ಮೂರು ಮಾತುಗಳನ್ನು
ವಿಶೇಷವಾಗಿ ತಿಳಿಸಿದ್ದೇವೆ ನೆನಪಿರಬೇಕು. ಮೊದಲನೇ ನಂಬರ್ ಸೇವೆ ಅರ್ಥಾತ್ ನಿಮಿತ್ತ ಭಾವ,
ಇನ್ನೊಂದು ನಿರ್ಮಾಣ ಭಾವನೆ, ಮೂರನೆಯದು ನಿರ್ಮಲ ವಾಣಿ, ಭಾವ, ಭಾವನೆ ಮತ್ತು ಸ್ವಭಾವ ಇವೆಲ್ಲಾ
ಸೇವೆಯಲ್ಲಿ ಜೊತೆ-ಜೊತೆ ಇದ್ದಾಗ ಸ್ವಯಂ ಸಂತುಷ್ಟವಾಗಿರುತ್ತಾರೆ ಮತ್ತು ಜೊತೆಗಾರರೂ
ಸಂತುಷ್ಟವಾಗಿರುತ್ತಾರೆ ಮತ್ತು ಯಾರ ಸೇವೆ ಮಾಡಿದಿರಿ ಅವರೂ ಮುಂದುವರೆಯುತ್ತಾರೆ. ನಿಮಿತ್ತ
ಭಾವದವರು ತಂದೆಯ ಕಡೆ ಸಂಬಂಧವನ್ನು ಜೋಡಿಸುತ್ತಾರೆ. ಒಂದುವೇಳೆ ನಿಮಿತ್ತ ಭಾವ ಇಲ್ಲವೆಂದರೆ ತಂದೆಗೆ
ಇಷ್ಟು ಸಮೀಪ ಬರಲು ಸಾಧ್ಯವಿಲ್ಲ. ಯಾವಾಗ ಸೇವೆ ಮಾಡುತ್ತೀರೋ ಆಗ ಭಾವ, ಭಾವನೆ ಮತ್ತು ಸ್ವಭಾವ
ಚೆನ್ನಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ವರ್ತಮಾನದಲ್ಲಿ ಬಾಪ್ದಾದಾರವರು ನೋಡಿದ್ದಾರೆ - ಯಾವುದು
ಬಾಪ್ದಾದಾರವರ ಮೂಲ ಮಾತಾಗಿದೆ, ಪ್ರತಿಯೊಬ್ಬರು ಮತ್ತು ತಾವು ಎಲ್ಲೇ ಸೇವೆಗೆ ಹೋಗುತ್ತೀರಾ ಅಂದಾಗ
ಜೊತೆಗಾರರು ಸಂತುಷ್ಟವಾಗಿದ್ದಾರೆಯೇ? ಎಂದು ಚೆಕ್ ಮಾಡಿಕೊಳ್ಳಿ ಏಕೆಂದರೆ ಸೆವೆಯ ಸಫಲತೆಯಾಗಿದೆ
ಸಂತುಷ್ಟತೆಯ ಫಲ ಪ್ರಾಪ್ತಿ ಆಗಲಿ, ಖುಷಿ ಪ್ರಾಪ್ತಿ ಆಗಲಿ, ಜೊತೆ-ಜೊತೆಗೆ ಒಂದು ಮಾತು ಬಾಪ್ದಾದಾ
ಸೊಚನೆ ಕೊಡುತ್ತಾರೆ - ನಡೆಯುತ್ತಾ, ಓಡಾಡುತ್ತಾ ಸಂಘಟನೆಯಲ್ಲೂ ಇರುತ್ತೀರಿ, ಯಾರಾದರೂ ಸೇವೆಯಲ್ಲಿ
ಜೊತೆ ಇರುತ್ತಾರೆ ಅಂದಾಗ ಒಬ್ಬರಿಗೊಬ್ಬರನ್ನು ಆತ್ಮದ ರೂಪದಲ್ಲಿ ನೋಡಿ. ಆತ್ಮದ ರೂಪದಲ್ಲಿ
ನೋಡುತ್ತಲೂ ಇದ್ದಾರೆ, ಅಭ್ಯಾಸವೂ ಮಾಡುತ್ತಾರೆ ಆದರೆ ಆತ್ಮನನ್ನು ನೋಡಿದಾಗ ಆತ್ಮನ ನಿಜ ಸಂಸ್ಕಾರದ
ರೂಪದಲ್ಲಿ ನೋಡುತ್ತೀರಾ? ಅಥವಾ ಯಾವುದು ಮಿಕ್ಸ್ ಸಂಸ್ಕಾರ ಇದೆಯೋ ಅದೂ ಕಂಡು ಬರುತ್ತದೋ? ಆತ್ಮ
ಇದರಲ್ಲಿ ಪಾಸ್ ಆಗಿದೆ ಆದರೆ ಯಾವ ಸಂಸ್ಕಾರದಿಂದ ನೋಡುತ್ತೀರಿ? ಆತ್ಮನ ನಿಜ ಸಂಸ್ಕಾರದ ಜೊತೆ
ಸಂಬಂಧದಲ್ಲಿ ಬರುತ್ತೀರಾ? ಅಥವಾ ವರ್ತಮಾನ ಸಂಸ್ಕಾರವೂ ಎದುರಿನಲ್ಲಿ ಬರುತದೆಯೋ? ಅಂದಾಗ ಈ
ದಿನದಿಂದ ಯಾರನ್ನಾದರೂ ಆತ್ಮನ ರೂಪದಲ್ಲಿ ನೋಡಿ ಆದರೆ ಆತ್ಮನ ಯಾವ ನಿಜ ಸಂಸ್ಕಾರ ಇದೆ ಆ ರೂಪದಲ್ಲಿ
ನೋಡಿ ಎಂದು ಬಾಪ್ದಾದಾರವರು ಹೇಳುತ್ತಾರೆ. ಪರಸ್ಪರ ಕೆಲವೊಮ್ಮೆ ಯಾವ ಮಾತುಗಳು ನಡೆಯುತ್ತಿದೆ ಅದು
ಆಗುವುದಿಲ್ಲ. ಈಗ ಆತ್ಮನ ರೂಪದಲ್ಲಿ ನೋಡುತ್ತೀರಿ ಆದರೆ ಜೊತೆಯಲ್ಲಿ ವರ್ತಮಾನ ಸಂಸ್ಕಾರವು
ಬಂದುಬಿಡುತ್ತದೆ. ಪರಸ್ಪರ ಸಂಪೂರ್ಣ ಸ್ಥಿತಿ ಯಾವುದಾಗಬೇಕೋ ಅದರಲ್ಲಿ ಕೊರತೆ ಆಗಿ ಬಿಡುತ್ತದೆ.
ಅಂದಾಗ ನಿಜ ಸಂಸ್ಕಾರವುಳ್ಳ ಆತ್ಮನನ್ನು ನೋಡಿ, ಈಗ ಸಂಘಟನೆಯಲ್ಲಿ ಯಾವ ಅಡಚಣೆ ಬರುತ್ತಿದೆ ಅದು
ಸಮಾಪ್ತಿ ಆಗಿ ಬಿಡುತ್ತದೆ.
ಈ ಬ್ರಾಹ್ಮಣ ಪರಿವಾರ
ಶ್ರೇಷ್ಠ ಪರಿವಾರವಾಗಿದೆ. ಪರಿವಾರದ್ದು ಬಹಳ ಮಹಿಮೆ ಇದೆ. ಈ ಈಶ್ವರೀಯ ಪರಿವಾರ ಪದೇ-ಪದೇ
ಸಿಗುವುದಿಲ್ಲ. ಕಲ್ಪದಲ್ಲಿ ಒಂದೇ ಬಾರಿ ಈಶ್ವರೀಯ ಪರಿವಾರ ಸಿಕ್ಕಿದೆ, ಇಷ್ಟು ದೊಡ್ಡ ಪರಿವಾರ ಇಡೀ
ಕಲ್ಪದಲ್ಲಿ ಎಂದೂ ಸಿಗುವುದಿಲ್ಲ. ಪರಿವಾರದ ವಿಶೇಷತೆಯನ್ನು ತಿಳಿಯುವುದು ಮತ್ತು ಪರಿವಾರದಲ್ಲಿ
ನಡೆಯುವುದು ಒಂದು ಮಹಾನ್ ಸಬ್ಜೆಕ್ಟ್ ಆಗಿದೆ. ಮೊದಲೂ ತಿಳಿಸಿದ್ದೇವೆ - ಈ ಜ್ಞಾನದ ತಳಪಾಯ ನಿಶ್ಚಯ
ಆಗಿದೆ ಮತ್ತು ನಿಶ್ಚಯದಲ್ಲಿ ನಾಲ್ಕು ಮಾತುಗಳಿವೆ. ಬಾಪ್ ಮತ್ತು ದಾದಾ ಜೊತೆಯಲ್ಲಿಯೇ ಇದ್ದಾರೆ
ಮತ್ತು ನಾಲೆಜ್ನ ಮೇಲೆ, ಡ್ರಾಮದ ಮೇಲೆ, ಪರಿವಾರದ ಮೇಲೆ ಎಲ್ಲರಲ್ಲೂ ನಿಶ್ಚಯವಿದೆ ಅಂದಾಗ ನಿಶ್ಚಯ
ಬುದ್ಧಿವುಳ್ಳವರು ಸಹಜ ಪುರುಷಾರ್ಥಿ ಆಗಿ ಬಿಡುತ್ತಾರೆ. ಹೇಗೆ ಬಾಪ್ದಾದಾರವರ ಮೇಲೆ ನಿಶ್ಚಯವಿದೆ
ಅದೇ ರೀತಿ ಪರಿವಾರದ ಮೇಲೂ ಅವಶ್ಯವಾಗಿ ನಿಶ್ಚಯ ಇರಬೇಕು. ಹೇಗೆ ನೋಡಿ ಯಾವುದಾದರೂ ಮಾತಿನ ಪೇಕಿಂಗ್
ಮಾಡಿದರೆ ಏನು ಮಾಡುತ್ತೀರಿ? ನಾಲ್ಕೂ ಕಡೆ ರೈಟ್ ಮಾಡುತ್ತೀರಲ್ಲವೇ. ಒಂದು ಕಡೆಯಾದರೂ ರೈಟ್
ಮಾಡಿಲ್ಲವೆಂದರೆ ಏರು-ಪೇರಾಗುತ್ತದೆ, ಅದೇ ರೀತಿ ತಂದೆ, ಜ್ಞಾನ, ಜ್ಞಾನದಲ್ಲೂ ವಿಶೇಷವಾಗಿ ಡ್ರಾಮಾ
ಮತ್ತು ಪರಿವಾರ. ಒಂದುವೇಳೆ ನಾಲ್ಕು ಮಾತುಗಳು ಶಕ್ತಿಶಾಲಿ ಆಗಿಲ್ಲವೆಂದರೆ ವಿಘ್ನಗಳು ಬರುತ್ತವೆ.
ವಿಘ್ನಗಳನ್ನು ಪಾರು ಮಾಡುವುದರಲ್ಲಿ ಅಟೆನ್ಷನ್ ಕೊಡಬೇಕು, ಅದರಿಂದ ಪರಿವಾರವನ್ನು ತಿಳಿದು,
ಪರಿವಾರದ ಜೊತೆ ಪ್ರೀತಿ, ಒಬ್ಬರಿಗೊಬ್ಬರು ತಿಳಿಯುವುದು ಬಹಳ ಅವಶ್ಯಕತೆ ಇದೆ.
ಅಂದಾಗ
ಪೂರ್ವಜರಾಗಿದ್ದೀರಾ, ಪೂಜ್ಯರಾಗಿದ್ದೀರಾ ಅಂದಾಗ ಈ ಮಾತುಗಳನ್ನು ತಮ್ಮಲ್ಲಿ ಮತ್ತು ತಮ್ಮ
ಜೊತೆಗಾರರಲ್ಲಿ ತೆಗೆದುಕೊಂಡು ಬರಬೇಕು. ಏನೇ ಆಗಲಿ ನಂಬರ್ವಾರಂತೂ ಇದ್ದೀರಲ್ಲವೇ, ಆದರೆ ಬ್ರಾಹ್ಮಣ
ಪರಿವಾರದ ವಿಶೇಷ ಕಾರ್ಯ ಆಶೀರ್ವಾದವನ್ನು ಕೊಡುವುದು ಮತ್ತು ಆಶೀರ್ವಾದವನ್ನು ತೆಗೆದುಕೊಳ್ಳುವುದು.
ಕೆಲವು ಮಕ್ಕಳು ಹೇಳುತ್ತಾರೆ - ಬೇರೆಯವರು ಕ್ರೋಧ ಮಾಡಿಕೊಂಡಾಗ ಆಶೀರ್ವಾದ ಹೇಗೆ
ತೆಗೆದುಕೊಳ್ಳುವುದು? ಆಶೀರ್ವಾದವಂತೂ ತೆಗೆದುಕೊಳ್ಳುವುದಿಲ್ಲ, ಕೋಪ ಮಾಡಿಕೊಳ್ಳುತ್ತಾರೆ.
ಒಳ್ಳೆಯದು ಅವರು ಸಂಸ್ಕಾರಕ್ಕೆ ವಶರಾಗಿ ಶ್ರಾಪ ಕೊಟ್ಟರೆ, ತಾವು ಆಶೀರ್ವಾದವನ್ನು ಕೊಡಲು
ಬಯಸುತ್ತೀರಿ ಆದರೆ ಅವರು ಶ್ರಾಪವನ್ನೇ ಕೊಡುತ್ತಾರೆ, ಆದರೆ ಶ್ರಾಪ ಕೊಟ್ಟರೆ ತೆಗೆದುಕೊಳ್ಳುವವರು
ಯಾರಾಗಿದ್ದಾರೆ? ಎಂದು ಬಾಪ್ದಾದಾರವರು ಕೇಳುತ್ತಾರೆ. ತೆಗೆದುಕೊಳ್ಳುವವರು ನೀವೋ ಅಥವಾ ಅವರೋ? ಅವರು
ಕೊಡುವವರಾಗಿದ್ದಾರೆ, ತಾವು ತೆಗೆದುಕೊಳ್ಳುವವರಾಗಿದ್ದೀರಿ ಅಂದಾಗ ಅವರ ಶ್ರಾಪ ತಾವು ಏಕೆ
ತೆಗೆದುಕೊಂಡಿದ್ದೀರಿ? ಒಂದುವೇಳೆ ಆತ್ಮನನ್ನು ನಿಜ ಸಂಸ್ಕಾರದಿಂದ ನೋಡಿದಾಗ ತಮಗೆ ದಯೆ ಬರುತ್ತದೆ.
ಸ್ವಯಂ ಸಹ ಸುರಕ್ಷಿತವಾಗಿರಿ. ಶ್ರಾಪ ತೆಗೆದುಕೊಳ್ಳಬೇಡಿ, ತೆಗೆದುಕೊಳ್ಳುವವರು ನೀವಾಗಿದ್ದೀರಿ,
ತೆಗೆದುಕೊಳ್ಳಬೇಡಿ, ಕೊಡಬೇಡಿ.
ಅಂದಾಗ ಈಗ ಬಾಪ್ದಾದಾ ಈ
ದಿನದ ಅಥವಾ ಬರುವವರೆಗೆ ಹೋಂವರ್ಕ್ ಕೊಡುತ್ತಾರೆ. ಎಂದಾದರೂ ಯಾರನ್ನಾದರೂ ಆತ್ಮನ ರೂಪದಲ್ಲಿ
ನೋಡಿದ್ದಾಗ ವರ್ತಮಾನ ಸಂಸ್ಕಾರ ರೂಪದಲ್ಲಿ ನೋಡಬೇಡಿ. ಆತ್ಮ ಎಂದು ಹೇಳಿದಾಗ ಆತ್ಮನ ನಿಜ ಸಂಸ್ಕಾರ
ಯಾವುದಿದೆ ಆ ವಾಸ್ತವ ಸಂಸ್ಕಾರ ರೂಪದಲ್ಲಿ ಸಂಬಂಧದಲ್ಲೂ ಬನ್ನಿ ಮತ್ತು ದೃಷ್ಟಿಯಲ್ಲೂ ಆ
ದೃಷ್ಟಿಯಿಂದ ನೋಡಿದಾಗ ಯಾವ ವಿಘ್ನ ಬರುತ್ತದೆ ಯಾವುದರ ಕಾರಣ ಪುರುಷಾರ್ಥದಲ್ಲಿ ತೀವ್ರತೆ
ಬರುವುದಿಲ್ಲ, ಅಂದಾಗ ಈಗ ವೃತ್ತಿ ಬದಲಾವಣೆ ಆದಾಗ, ದೃಷ್ಟಿ ಬದಲಾವಣೆ ಆದಾಗ ಮಾತುಗಳು ಸಮಾಪ್ತಿ ಆಗಿ
ಬಿಡುತ್ತವೆ. ಯಾರದ್ದಾದರೂ ಯಾವುದೇ ಮಾತುಗಳನ್ನು ನೋಡಿದಾಗ ಬಾಪ್ದಾದಾರವರು ಮೊದಲೂ ಹೇಳಿದ್ದಾರೆ -
ಸದಾ ತಾವು ಬ್ರಾಹ್ಮಣ ಪರಿವಾರದ ಒಬ್ಬೊಬ್ಬರ ಕರ್ತವ್ಯ ಶುಭ ಭಾವನೆ ಮತ್ತು ಶುಭ ಕಾಮನೆ ಕೊಡುವುದು
ಮತ್ತು ತೆಗೆದುಕೊಳ್ಳುವುದು. ಆ ಸಂಸ್ಕಾರದಿಂದ ನೋಡಿ ಮತ್ತು ನಡೆಯಿರಿ. ಮತ್ತೊಂದು ಮಾತನ್ನು
ಹೇಳುತ್ತೇವೆ, ಮೊದಲೂ ಹೇಳಿದ್ದೇವೆ ಕೆಲವೊಮ್ಮೆ ಸಂಘಟನೆಯಲ್ಲಿ, ಪರದರ್ಶನ, ಪರಚಿಂತನೆ ಮತ್ತು
ಪರಮತದ ಕಡೆ ಆಕರ್ಷಿತರಾಗಿ ಬಿಡುತ್ತೀರಿ. ಈಗ ಈ ಮೂರು ಪರಗಳನ್ನು ತೆಗೆದು ಹಾಕಿ ಒಂದು ಪರವನ್ನು
ಇಟ್ಟುಕೊಳ್ಳಿ ಆ ಒಂದು ಪರ ಪರೋಪಕಾರ ಆಗಿದೆ. ಪರೋಪಕಾರ ಮಾಡಬೇಕು ಮತ್ತು ಪರೋಪಕಾರಿ ಆಗಬೇಕು.
ಬ್ರಾಹ್ಮಣರ ಸ್ವಭಾವ ಪರೋಪಕಾರಿ. ಪರದರ್ಶನ ಅಲ್ಲ ಈ ಪರವನ್ನು ತೆಗೆದು ಹಾಕಿ. ಈ ಮೂರು ಬಹಳ ನಷ್ಟ
ಮಾಡುತ್ತದೆ, ಆದ್ದರಿಂದ ತಮ್ಮ ಸ್ವಮಾನ ನಾನು ಬ್ರಾಹ್ಮಣ ಆತ್ಮನ ಸ್ವಮಾನವೇ ಆಗಿದೆ ಪರೋಪಕಾರ ಎಂದು
ನೆನಪಿಟ್ಟುಕೊಳ್ಳಿ. ಮತ್ತೊಂದು ಸೀಜನ್ನಲ್ಲಿ ಬಾಪ್ದಾದಾರವರು ಪ್ರತಿಯೊಬ್ಬರಲ್ಲಿ ಈ ಪರಿವರ್ತನೆ
ನೋಡಲು ಬಯಸುತ್ತಾರೆ ಆಗುತ್ತದೆಯೇ? ಆಗುತ್ತದೆಯೇ? ಕೈ ಎತ್ತಿ. ಕೈ ಎತ್ತುವುದರಲ್ಲಿ
ಚೆನ್ನಾಗಿದ್ದೀರಿ ಆದರೆ ಏನು ಮಾಡಬೇಕು? ಒಳ್ಳೆಯದು ಬಾಪ್ದಾದಾರವರು ಶುಭಾಶಯಗಳನ್ನು
ನೀಡುತ್ತಿದ್ದಾರೆ. ಒಬ್ಬರಿಗೊಬ್ಬರು ಅಟೆನ್ಷನ್ ಕೊಡಿಸುತ್ತಿರಬೇಕು, ಏನು ಮಾಡಬೇಕು? ಪ್ರತಿನಿತ್ಯ
ರಾತ್ರಿ ನಿದ್ರೆ ಮಾಡುವ ಮೊದಲು ಬಾಪ್ದಾದಾರವರಿಗೆ ಗುಡ್ನೈಟ್ ಹೇಳುವುದರ ಮೊದಲು ತಮ್ಮ ಪೂರ್ತಿ
ಲೆಕ್ಕವನ್ನು ಕೊಡಬೇಕು. ಒಳ್ಳೆದನ್ನು ಮಾಡಲಿ ಅಥವಾ ಕೆಟ್ಟದ್ದನ್ನು ಮಾಡಲಿ, ಯಾವುದು ಮಾಡಿದ್ದೀರೋ
ಅದರ ಲೆಕ್ಕವನ್ನು ಕೊಟ್ಟು ಮತ್ತು ಬುದ್ಧಿಯನ್ನು ಖಾಲಿ ಮಾಡಿ ಗುಡ್ನೈಟ್ ಹೇಳಬೇಕು. ತಂದೆಯ ಜೊತೆ
ಮತ್ತು ತಂದೆಯ ನೆನಪಿನಲ್ಲೇ ತಾವು ಮಲಗಬೇಕು. ತಮ್ಮ ನಿದ್ರೆ ಬಹಳ ಚೆನ್ನಾಗಿರುತ್ತದೆ. ಮೊದಲು
ತಮ್ಮನ್ನು ಖಾಲಿ ಮಾಡಿಕೊಳ್ಳಬೇಕು, ಬುದ್ಧಿಯಲ್ಲಿ ಯಾವುದೇ ಮಾತನ್ನು ಇಟ್ಟುಕೊಳ್ಳಬಾರದು. ತಂದೆಯ
ರೂಪದಲ್ಲಿ ಪೂರ್ತಿ ಲೆಕ್ಕವನ್ನು ಸತ್ಯ ಹೃದಯದಿಂದ ಕೊಟ್ಟಿದ್ದೇ ಆದರೆ ತಾವು ಧರ್ಮರಾಜನ ಪುರಿಯಲ್ಲಿ
ಹೋಗುವ ಅವಶ್ಯಕತೆ ಇಲ್ಲ. ಸತ್ಯ ಹೃದಯಕ್ಕೆ ಸಾಹೆಬ್ ರಾಜಿ ಆಗಿ ಬಿಡುತ್ತಾರೆ ಅಂದಾಗ ಹೋಂವರ್ಕ್
ಸಿಕ್ಕಿದೆಯೇ? ಒಂದು ತಮ್ಮ ಪೂರ್ವಜ ಮತ್ತು ಪೂಜ್ಯ ರೂಪದ ಸೇವೆ ನಡೆಯುತ್ತಾ ಓಡಾಡುತ್ತಾ ಮಾಡಬಹುದು.
ತಂದೆ ನೋಡಿದರು ಈ ಜನಕ್ ಮಗು ಆರೋಗ್ಯ ಚೆನ್ನಾಗಿಲ್ಲವೆಂದರೂ ವಿಶೇಷವಾಗಿ ಕರಾಚಿಯಲ್ಲಿ ಮನಸಾ
ಸಕಾಶವನ್ನು ಕೊಟ್ಟರು, ಯಾರೇ ನಿಮಿತ್ತವಾಗಿರಲಿ ಆದರೆ ಇವರು ಪ್ರತ್ಯಕ್ಷ ರೂಪದಲ್ಲಿ ಮಾಡಿದರು.
ಅಲ್ಲಿನ ಆತ್ಮಗಳಿಗೆ ಸಕಾಶ ಸಿಕ್ಕಿದೆ ಮತ್ತು ಉತ್ಸಾಹದಿಂದ ಮುಂದುವರೆಯುತ್ತಿದ್ದರು. ಈ ರೀತಿ
ಬಾಪ್ದಾದಾರವರು ಪ್ರತ್ಯಕ್ಷ ರೂಪದಲ್ಲಿ ಉದಾಹರಣೆ ನೋಡಿದರು ಅಂದಾಗ ತಾವೆಲ್ಲರೂ ಮಾಡಬಹುದು.
ದುಃಖಿಗಳಿಗೆ ಖುಷಿಯ ಅಲೆಗಳನ್ನು ತಲುಪಿಸಲು ಆಗುತ್ತದೆಯೇ? ಕೂಗುವವರಿಗೆ ತಮ್ಮ ಭಕ್ತರೇ ತಮ್ಮನ್ನೇ
ಕೂಗುತ್ತಿದ್ದಾರೆ. ನಮ್ಮ ದೇವಿ ಅಥವಾ ನಮ್ಮ ದೇವತೆ ಯಾವಾಗ ಬಂದು ದಯೆ ತೋರಿಸುತ್ತಾರೆ? ಎಂದು
ನೋಡುತ್ತಿದ್ದಾರೆ. ತಮಗೆ ಕೇಳಿಸುವುದಿಲ್ಲ ಆದರೆ ತಂದೆಗೆ ಬಹಳ ಕೇಳಿಸುತ್ತದೆ. ಪ್ರತಿಯೊಬ್ಬರ ತಮ್ಮ
ಭಕ್ತರನ್ನು ತಾವು ತಿಳಿದುಕೊಂಡಿಲ್ಲವೇ ಆದರೆ ಭಕ್ತರು ತಮ್ಮ ಇಷ್ಟ ದೇವತೆಯನ್ನು
ತಿಳಿದುಕೊಂಡಿದ್ದಾರೆ. ಅವರಂತೂ ಕೂಗುತ್ತಾರೆ ಮತ್ತು ತಾವು ಪ್ರತಿಯೊಬ್ಬರ ಬ್ರಾಹ್ಮಣ ಆತ್ಮರ
ಭಕ್ತರಾಗಿದ್ದಾರೆ. ಬುದ್ಧಿ ಹೀನರಾಗಿರಲಿ ಅಥವಾ ಬುದ್ಧಿವಂತರಾಗಿರಲಿ ತಮ್ಮ ಭಕ್ತರೇ ಆಗಿದ್ದಾರೆ
ಏಕೆಂದರೆ ಬೇರಿನಲ್ಲಿ ಕುಳಿತಿದ್ದೀರಲ್ಲವೇ ತಮ್ಮದು ಶಕ್ತಿ ಕೊಡುವ ಪಾರ್ಟ್ ಆಗಿದೆ. ಈಗ ಮನಸಾ
ಸೇವೆಯನ್ನು ವೃದ್ಧಿ ಮಾಡಿ ಮತ್ತು ಎಷ್ಟು ಬಿಜಿಯಾಗಿರುತ್ತೀರೋ ಅಷ್ಟು ನಿರ್ವಿಘ್ನ ಆಗಿರುತ್ತೀರಿ.
ಮಾಡಲು ಸಾಧ್ಯವೇ? ಮನಸಾ ಸೇವೆಯನ್ನು ಮಾಡಲು ಗೊತ್ತಿದೆಯಲ್ಲವೇ? ಗೊತ್ತಿದೆಯೇ? ಯಾರಿಗೆ ಗೊತ್ತಿದೆಯೋ
ಅವರು ಕೈ ಎತ್ತಿ. ಒಳ್ಳೆಯದು ಕೈ ಕೆಳಗೆ ಮಾಡಿ. ಗೊತ್ತಿದೆಯೇ? ಒಳ್ಳೆಯದು ಯಾರು ಮಾಡುತ್ತಿರುತ್ತಾರೆ
ಮಧ್ಯ-ಮಧ್ಯದಲ್ಲಿ ಅವರು ಕೈ ಎತ್ತಿ. ಮಾಡುತ್ತಿರುತ್ತೀರಾ? ಒಳ್ಳೆಯದು. ನಿಯಮಪೂರ್ವಕವಾಗಿ
ಮಾಡುತ್ತೀರೋ ಅಥವಾ ಕೆಲವೊಮ್ಮೆ ಮಾಡುತ್ತೀರೋ? ಒಂದುವೇಳೆ ಕೆಲವೊಮ್ಮೆ ಮಾಡುವುದಾದರೆ ರೆಗ್ಯುಲರ್ (ನಿಯಮಿತವಾಗಿ)
ಮಾಡಿ. ಒಂದುವೇಳೆ ಸ್ವಲ್ಪ ಮಾಡಿದರೆ ಅದನ್ನು ಹೆಚ್ಚಿಸಿ ಏಕೆಂದರೆ ಇಡೀ ಕಲ್ಪದ ಆಧಾರ ಈಗಿನ ಸೇವೆಯ
ಫಲವಾಗಿದೆ. ಪೂಜಾರಿ ಆಗಲು ಅಥವಾ ರಾಜ್ಯಾಧಿಕಾರಿ ಆಗಲು ಎರಡಕ್ಕೂ ಆಧಾರ ಈಗಿನ ಸೇವೆಯಾಗಿದೆ. ಈಗಿನ
ಅವಸ್ಥೆ, ಈಗಿನ ಮಾತು, ಈಗಿನ ಸಂಬಂಧ-ಸಂಪರ್ಕ ಆಧಾರವಾಗಿದೆ. ಆದ್ದರಿಂದ ಬಾಪ್ದಾದಾ ಇದನ್ನೇ
ಬಯಸುತ್ತಾರೆ ಮುಂದಿನ ಬಾರಿ ಯಾವಾಗ ಮೊದಲು ಬರುತ್ತೀರಿ, ತಂದೆಯಂತೂ ಎಲ್ಲಿಯವರೆಗೆ ನಡೆಯುತ್ತದೆ
ಎಂದು ಹೇಳಿದ್ದಾರೆ ಎಂದು ತಾವು ಯೋಚನೆ ಮಾಡುತ್ತಿರಬಹುದು, ಇದರ ಅರ್ಥ ತಾವು ಎವರ್ರಡಿ ಆಗಿರಿ.
ಆದ್ದರಿಂದ ಮೊದಲನೇ ಬಾರಿ ಎಲ್ಲರ ಫಲಿತಾಂಶವನ್ನು ನೋಡುತ್ತೇವೆ. ಎಷ್ಟು % ಇದೆ ಅದರಿಂದ
ಹೆಚ್ಚಿಸಬೇಕು. ಬಾಪ್ದಾದಾರವರಂತೂ ಮೊದಲಿಂದಲೂ ಹೇಳುತ್ತಿದ್ದಾರೆ, ಮಾಡಬೇಕೆಂದರೆ ಈಗ ಮಾಡಿ, ಎಂದೋ
ಮಾಡುವುದಲ್ಲ, ಬಾಪ್ದಾದಾರವರಿಗೆ ಕೆಲವೊಮ್ಮೆ ಹಾಡನ್ನು ಕೇಳಿಸುತ್ತಾರೆ, ಬಹಳ ಚೆನ್ನಾಗಿ
ಕೇಳಿಸುತ್ತಾರೆ ಆದರೆ ಬಾಪ್ದಾದಾರವರಿಗೆ ಕೆಲವೊಮ್ಮೆಯ ಹಾಡು ಇಷ್ಟ ಆಗುವುದಿಲ್ಲ. ಈಗೀಗ ಎಂಬ ಹಾಡು
ಇಷ್ಟ ಆಗುತ್ತದೆ, ತುರಂತ್ (ತಕ್ಷಣ) ದಾನ ಮಹಾಪುಣ್ಯ ಆಗಿದೆ. ತಿಳಿಯಿತೇ ಏನು ಮಾಡಬೇಕೆಂದು?
ಒಳ್ಳೆಯದು.
ಎಲ್ಲಾ ಕಡೆಯ ಮಕ್ಕಳನ್ನು
ಬಾಪ್ದಾದಾರವರು ನೋಡಿ, ಸನ್ಮುಖದಲ್ಲಿ ಕುಳಿತಿರಲಿ, ಎಲ್ಲಾದರೂ ಕುಳಿತಿರಲಿ ಆದರೆ ಎಲ್ಲರಿಗೆ ತಂದೆಯ
ನೆನಪಿದೆ ಮತ್ತು ತಂದೆಗೂ ಯಾರ ನೆನಪಿದೆ? ಎಲ್ಲಾ ಕಡೆಯ ಮಕ್ಕಳು ನೆನಪಿದ್ದಾರೆ ಏಕೆಂದರೆ ತಂದೆ
ಪ್ರತಿಯೊಬ್ಬ ಮಕ್ಕಳಿಗಾಗಿ ಪ್ರತಿಯೊಬ್ಬ ಮಕ್ಕಳು ತಂದೆಯ ಸಮಾನ ಆಗಲೇಬೇಕು ಎಂಬ ಆಸೆ
ಇಟ್ಟುಕೊಳ್ಳುತ್ತಾರೆ. ತಂದೆಯ ಪ್ರತಿಯೊಬ್ಬ ಮಕ್ಕಳ ಮೇಲೆ ಯಾವ ಆಸೆಗಳಿದೆ ಅದನ್ನು ನಂಬರ್ವಾರ್
ತಿಳಿದುಕೊಂಡಿದ್ದೀರಿ ಆದರೆ ಅವರ ನಂಬರ್ ಅನುಸಾರವಾಗಿ ಆದರೂ ಸಂಪನ್ನರಂತೂ ಆಗಬೇಕಲ್ಲವೇ. ಏನೇನು
ಮಾಡುತ್ತಿದ್ದಾರೆ ಎಂದು ಪ್ರತಿಯೊಬ್ಬರ ಪುರುಷಾರ್ಥವನ್ನೂ ಸಹ ನೋಡುತ್ತಿದ್ದೇವೆ. ತಂದೆಗೆ ಬಹಳ
ಪ್ರೀತಿ ಬರುತ್ತದೆ. ಪರಿಶ್ರಮ ಮಾಡಿದಾಗ ಬಹಳ ಪ್ರೀತಿ ಬರುತ್ತದೆ, ಪರಿಶ್ರಮದಿಂದ ಬಿಡುಗಡೆ ಆಗಲಿ,
ಪ್ರೀತಿಯಲ್ಲಿ ತಲ್ಲೀನರಾಗಲಿ, ಎಷ್ಟು ಪ್ರೀತಿಯಲ್ಲಿ ತಲ್ಲೀನರಾಗುತ್ತೀರಿ ಅಷ್ಟು ಪರಿಶ್ರಮ ಕಡಿಮೆ
ಮತ್ತು ಬಾಪ್ದಾದಾರವರು ಕೈ ಎತ್ತಿಸುತ್ತಾರೆ ತಂದೆಯೊಂದಿಗೆ ಪ್ರೀತಿ ಇದ್ದರೆ ದೊಡ್ಡ ದಾದಿ ಎಲ್ಲರೂ
ಕೈ ಎತ್ತುತ್ತಾರೆ. ತಂದೆಯೂ ಒಪ್ಪಿಕೊಳ್ಳುತ್ತಾರೆ - ತಂದೆಯೊಂದಿಗೆ ಪ್ರೀತಿ ಇದೆ, ಪ್ರೀತಿಯಲ್ಲಿ
ಎಲ್ಲರೂ ಪಾಸ್ ಆಗಿದ್ದಾರೆ ಆದರೆ ಮಾತಿನಲ್ಲಿ ಬಂದಾಗ ತಂದೆಯನ್ನು ಮರೆತು ಬಿಡುತ್ತಾರೆ.
ಎಲ್ಲಾ ಕಡೆಯ ಮಕ್ಕಳಿಗೆ
ಬಾಪ್ದಾದಾರವರ ಪದಮಾ ಪದಮಷ್ಟು ಪ್ರೀತಿ ಮತ್ತು ಹೃದಯದ ಪ್ರೀತಿಯನ್ನು ಸ್ವೀಕಾರ ಮಾಡಿ. ಎಲ್ಲಾ
ಮಾಲಿಕ ಮಕ್ಕಳಿಗೆ ತಂದೆ ಲಕ್ಷದಷ್ಟು ಶುಭಾಶಯಗಳನ್ನು ನೀಡುತ್ತಿದ್ದಾರೆ. ಹಾರುತ್ತಿರಿ ಮತ್ತು
ಹಾರಿಸುತ್ತಿರಿ. ಒಳ್ಳೆಯದು.
ವರದಾನ:
ಸ್ವ-ಸ್ಥಿತಿಯ
ಮೂಲಕ ಸರ್ವ ಪರಿಸ್ಥಿತಿಗಳನ್ನು ಪಾರು ಮಾಡುವಂತಹ ನಿರಾಕಾರಿ, ಅಲಂಕಾರಿ ಭವ.
ಯಾರು ಅಲಂಕಾರಿ
ಆಗಿದ್ದಾರೆಯೋ ಅವರೆಂದಿಗೂ ದೇಹ-ಅಹಂಕಾರಿ ಆಗಲು ಸಾಧ್ಯವಿಲ್ಲ. ನಿರಾಕಾರಿ ಹಾಗೂ ಅಲಂಕಾರಿ
ಆಗಿರುವುದೇ ಮನ್ಮಾನಭವ, ಮಧ್ಯಾಜೀಭವ ಆಗಿದೆ. ಯಾವಾಗ ಸದಾ ಇಂತಹ ಸ್ವ-ಸ್ಥಿತಿಯಲ್ಲಿ ಸ್ಥಿತರಾಗಿ
ಇರುತ್ತೀರೆಂದರೆ ಸರ್ವ ಪರಿಸ್ಥಿತಿಗಳನ್ನು ಸಹಜವಾಗಿಯೇ ಪಾರು ಮಾಡಿ ಬಿಡುತ್ತೀರಿ. ಇದರಿಂದ ಅನೇಕ
ಹಳೆಯ ಸ್ವಭಾವಗಳು ಸಮಾಪ್ತಿ ಆಗಿ ಬಿಡುತ್ತವೆ. ಸ್ವಯಂನಲ್ಲಿ ಆತ್ಮಿಕ ಭಾವದಿಂದ ನೋಡುವುದರಿಂದ
ಭಾವ-ಸ್ವಭಾವಗಳ ಮಾತುಗಳು ಸಮಾಪ್ತಿ ಆಗಿ ಬಿಡುತ್ತವೆ ಹಾಗೂ ಎದುರಿಸುವ ಸರ್ವ ಶಕ್ತಿಗಳೆಲ್ಲವೂ
ತಮ್ಮಲ್ಲಿ ಬಂದು ಬಿಡುತ್ತದೆ.
ಸ್ಲೋಗನ್:
ಸಂಕಲ್ಪದ ಒಂದು
ಹೆಜ್ಜೆ ತಮ್ಮದಿದ್ದರೆ ಸಹಯೋಗದ ಸಾವಿರ ಹೆಜ್ಜೆಗಳು ತಂದೆಯದಾಗಿರುತ್ತದೆ.
ಅವ್ಯಕ್ತ ಸೂಚನೆಗಳು:-
ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.
ಯಾರು ತಮ್ಮ ಮತ್ತು
ಅನ್ಯರ ಕಳೆದುದ್ದನ್ನು ನೋಡುವುದಿಲ್ಲ, ಸೆಕೆಂಡಿನಲ್ಲಿ ಫುಲ್ಸ್ಟಾಪ್ ಇಡುತ್ತಾರೆ ಅವರು ಸರಳ
ಚಿತ್ತರಾಗಿರುತ್ತಾರೆ ಮತ್ತು ಯಾರು ಸರಳ ಚಿತ್ತರಾಗಿರುತ್ತಾರೆ ಅವರ ನಯನಗಳಿಂದ, ಮುಖದಿಂದ,
ಚಲನೆಯಿಂದ ಮಧುರತೆ ಅಥವಾ ಹರ್ಷಿತಮುಖತೆ ಪ್ರತ್ಯಕ್ಷ ರೂಪದಲ್ಲಿ ನೋಡಲು ಬರುತ್ತದೆ. ಇಂತಹ ಸರಳ
ಚಿತ್ತ ಸ್ಥಿತಿಯುಳ್ಳವರು ಅನ್ಯರನ್ನು ಸಹ ಸರಳ ಚಿತ್ತರನ್ನಾಗಿ ಮಾಡುತ್ತಾರೆ. ಸರಳ ಚಿತ್ತ ಅಂದರೆ
ಯಾವ ಮಾತು ಕೇಳುತ್ತಾರೆ, ನೋಡುತ್ತಾರೆ, ಮಾಡುತ್ತಾರೆ ಅದು ಸಾರ ಯುಕ್ತವಾಗಿರುತ್ತದೆ ಮತ್ತು
ಸಾರವನ್ನೇ ತೆಗೆದುಕೊಳ್ಳುತ್ತಾರೆ.