07.07.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ- ನೀವು
ಬಹಳ ರಾಯಲ್ ವಿದ್ಯಾರ್ಥಿಗಳಾಗಿದ್ದೀರಿ, ನೀವು ತಂದೆ-ಶಿಕ್ಷಕ ಮತ್ತು ಸದ್ಗುರುವಿನ
ನೆನಪಿನಲ್ಲಿರಬೇಕಾಗಿದೆ, ಅಲೌಕಿಕ ಸೇವೆ ಮಾಡಬೇಕಾಗಿದೆ
ಪ್ರಶ್ನೆ:
ಯಾರು ತಮ್ಮನ್ನು
ತಾವು ಬೇಹದ್ದಿನ ಪಾತ್ರಧಾರಿಯೆಂದು ತಿಳಿದು ನಡೆಯುವರೋ ಅವರ ಲಕ್ಷಣಗಳನ್ನು ತಿಳಿಸಿ.
ಉತ್ತರ:
ಅವರ
ಬುದ್ಧಿಯಲ್ಲಿ ಯಾವುದೇ ಸ್ಥೂಲ, ಸೂಕ್ಷ್ಮ ದೇಹಧಾರಿಗಳ ನೆನಪಿರುವುದಿಲ್ಲ. ಅವರು ಒಬ್ಬ ತಂದೆಯನ್ನು
ಮತ್ತು ಶಾಂತಿಧಾಮ ಮನೆಯನ್ನು ನೆನಪು ಮಾಡುತ್ತಾ ಇರುತ್ತಾರೆ ಏಕೆಂದರೆ ಬಲಿಹಾರಿಯು ಒಬ್ಬ
ತಂದೆಯದಾಗಿದೆ. ಹೇಗೆ ತಂದೆಯು ಇಡೀ ಪ್ರಪಂಚದ ಸೇವೆ ಮಾಡುತ್ತಾರೆ ಪತಿತರನ್ನು ಪಾವನ ಮಾಡುತ್ತಾರೆಯೋ
ಹಾಗೆಯೇ ಮಕ್ಕಳೂ ಸಹ ತಂದೆಯ ಸಮಾನ ಸೇವಾಧಾರಿಗಳಾಗಿಬಿಡುತ್ತಾರೆ.
ಓಂ ಶಾಂತಿ.
ಮೊಟ್ಟಮೊದಲಿಗೆ ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಾರೆ. ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ
ತಮ್ಮನ್ನು ಆತ್ಮವೆಂದು ತಿಳಿದು ತಂದೆಯ ಮುಂದೆ ಕುಳಿತಿದ್ದೀರಾ? ಇದನ್ನೂ ಸಹ ಬುದ್ಧಿಯಲ್ಲಿ
ತಂದುಕೊಳ್ಳಿ- ನಾನು ತಂದೆಯ ಮುಂದೆಯೂ ಕುಳಿತಿದ್ದೇವೆ, ಶಿಕ್ಷಕನ ಮುಂದೆಯೂ ಕುಳಿತಿದ್ದೇವೆ.
ನಂಬರ್ವನ್ ಮಾತಾಗಿದೆ- ನಾವು ಆತ್ಮರಾಗಿದ್ದೇವೆ, ತಂದೆಯೂ ಆತ್ಮನಾಗಿದ್ದಾರೆ, ಶಿಕ್ಷಕನೂ
ಆತ್ಮನಾಗಿದ್ದಾರೆ, ಒಬ್ಬರೇ ಆಗಿದ್ದಾರಲ್ಲವೆ. ಈ ಹೊಸಮಾತನ್ನು ನೀವು ಕೇಳುತ್ತೀರಿ. ಬಾಬಾ, ನಾವಂತೂ
ಕಲ್ಪ-ಕಲ್ಪವೂ ಇದನ್ನು ಕೇಳುತ್ತೇವೆಂದು ಹೇಳುತ್ತೀರಿ ಅಂದಾಗ ಬುದ್ಧಿಯಲ್ಲಿ ಇದು ನೆನಪಿರಲಿ,
ತಂದೆಯು ಓದಿಸುತ್ತಾರೆ- ನಾನಾತ್ಮನು ಈ ಕರ್ಮೇಂದ್ರಿಯಗಳ ಮೂಲಕ ಕೇಳಿಸಿಕೊಳ್ಳುತ್ತೇನೆ, ಈ ಜ್ಞಾನವು
ನೀವು ಮಕ್ಕಳಿಗೆ ಶ್ರೇಷ್ಠಾತಿಶ್ರೇಷ್ಠ ಭಗವಂತನ ಮೂಲಕ ಈ ಸಮಯದಲ್ಲಿಯೇ ಸಿಗುತ್ತದೆ. ಅವರು ಎಲ್ಲಾ
ಆತ್ಮಗಳ ತಂದೆಯಾಗಿದ್ದಾರೆ, ಆಸ್ತಿಯನ್ನು ಕೊಡುತ್ತಾರೆ. ಯಾವ ಜ್ಞಾನವನ್ನು ಕೊಡುತ್ತಾರೆ? ಎಲ್ಲರ
ಸದ್ಗತಿ ಮಾಡುತ್ತಾರೆ ಅಂದರೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಷ್ಟು ಮಂದಿಯನ್ನು ಕರೆದುಕೊಂಡು
ಹೋಗುತ್ತಾರೆ? ಇದೆಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ. ಸೊಳ್ಳೆಗಳೋಪಾದಿಯಲ್ಲಿ ಎಲ್ಲರೂ ಸಹ
ಹೋಗಬೇಕಾಗಿದೆ. ಸತ್ಯಯುಗದಲ್ಲಿ ಒಂದೇ ಧರ್ಮ, ಪವಿತ್ರತೆ, ಸುಖ, ಶಾಂತಿ ಎಲ್ಲವೂ ಇರುತ್ತದೆ. ಈ
ಚಿತ್ರಗಳನ್ನು ಕುರಿತು ತಿಳಿಸಿಕೊಡುವುದು ನೀವು ಮಕ್ಕಳಿಗೆ ಬಹಳ ಸಹಜವಾಗುತ್ತದೆ. ಹೇಗೆ ಮಕ್ಕಳೂ ಸಹ
ನಕ್ಷೆಯಿಂದ ತಿಳಿದುಕೊಳ್ಳುತ್ತಾರಲ್ಲವೆ. ಇದು ಇಂಗ್ಲೇಂಡ್ ಆಗಿದೆ, ಇದು..... ಎಂದು ಹೇಳಿದಾಗ ಅದು
ನೆನಪಿಗೆ ಬಂದುಬಿಡುತ್ತದೆ. ಇಲ್ಲಿಯೂ ಹಾಗೆಯೇ ಒಬ್ಬೊಬ್ಬ ವಿದ್ಯಾರ್ಥಿಗೂ ತಿಳಿಸಲಾಗುತ್ತದೆ.
ಮಹಿಮೆಯೂ ಒಬ್ಬರದೇ ಆಗಿದೆ, ಶಿವಾಯನಮಃ ಶ್ರೇಷ್ಠಾತಿಶ್ರೇಷ್ಠ ಭಗವಂತ, ರಚಯಿತ ತಂದೆಯು ಮನೆಗೆ
ಹಿರಿಯರಾಗಿರುತ್ತಾರಲ್ಲವೆ. ಅದು ಹದ್ದಿನ ಮಾತು, ಇವರಂತೂ ಇಡೀ ಬೇಹದ್ದಿನ ಮನೆಗೆ ತಂದೆಯಾಗಿದ್ದಾರೆ.
ಮತ್ತೆ ಶಿಕ್ಷಕರೂ ಆಗಿದ್ದಾರೆ, ನಿಮಗೆ ಓದಿಸುತ್ತಾರೆ ಅಂದಾಗ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು.
ನೀವು ವಿದ್ಯಾರ್ಥಿಗಳು ರಾಯಲ್ ಆಗಿದ್ದೀರಿ. ತಂದೆಯು ತಿಳಿಸುತ್ತಾರೆ- ನಾನು ಸಾಧಾರಣ ತನುವಿನಲ್ಲಿ
ಬರುತ್ತೇನೆ, ಪ್ರಜಾಪಿತ ಬ್ರಹ್ಮಾನು ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ. ಅವರಿಲ್ಲದೆ ಕೆಲಸವು ಹೇಗೆ
ನಡೆಯುತ್ತದೆ? ಮತ್ತು ಅವಶ್ಯವಾಗಿ ವೃದ್ಧನ ಶರೀರವೇ ಬೇಕು ಏಕೆಂದರೆ ದತ್ತು
ಮಾಡಿಕೊಳ್ಳಲಾಗುತ್ತದೆಯಲ್ಲವೆ. ಕೃಷ್ಣನಂತೂ ಮಕ್ಕಳೇ, ಮಕ್ಕಳೇ ಎಂದು ಮಾತನಾಡಲು ಸಾಧ್ಯವಿಲ್ಲ
ಆದ್ದರಿಂದ ಇಲ್ಲಿ ವೃದ್ಧನೇ ಶೋಭಿಸುತ್ತಾರೆ. ಮಕ್ಕಳನ್ನು ಯಾರೂ ಸಹ ತಂದೆಯೆಂದು ಹೇಳುವುದಿಲ್ಲ
ಅಂದಾಗ ನೀವು ಮಕ್ಕಳಿಗೂ ಸಹ ಬುದ್ಧಿಯಲ್ಲಿ ಬರಬೇಕು- ನಾವು ಯಾರ ಮುಂದೆ ಕುಳಿತಿದ್ದೇವೆ,
ಆಂತರ್ಯದಲ್ಲಿ ಖುಷಿಯಿರಬೇಕು. ವಿದ್ಯಾರ್ಥಿಗಳು ಎಲ್ಲಿಯಾದರೂ ಕುಳಿತಿರಲಿ ಅವರ ಬುದ್ಧಿಯಲ್ಲಿ
ತಂದೆಯ ನೆನಪೂ ಬರುತ್ತದೆ, ಶಿಕ್ಷಕರ ನೆನಪೂ ಬರುತ್ತದೆ. ಅವರಿಗಾದರೆ ತಂದೆಯು ಬೇರೆ, ಶಿಕ್ಷಕನು
ಬೇರೆಯಿರುತ್ತಾರೆ. ನಿಮಗಂತೂ ಒಬ್ಬರೇ ತಂದೆ, ಶಿಕ್ಷಕ, ಗುರುವಾಗಿದ್ದಾರೆ. ಈ ತಂದೆಯೂ (ಬ್ರಹ್ಮಾ)
ಸಹ ವಿದ್ಯಾರ್ಥಿಯಾಗಿದ್ದಾರೆ, ಸ್ವಯಂ ಓದುತ್ತಿದ್ದಾರೆ. ಕೇವಲ ಇವರ ರಥವನ್ನು ಆಧಾರವಾಗಿ
ತೆಗೆದುಕೊಳ್ಳಲಾಗಿದೆ ಮತ್ತ್ಯಾವುದೇ ವ್ಯತ್ಯಾಸವಿಲ್ಲ. ಇವರು ನಿಮ್ಮ ತರಹವೇ ಇದ್ದಾರೆ, ನೀವೇನನ್ನು
ತಿಳಿದುಕೊಳ್ಳುವಿರೋ ಇವರ ಆತ್ಮವೂ ಸಹ ಅದನ್ನೇ ತಿಳಿದುಕೊಳ್ಳುತ್ತದೆ. ಬಲಿಹಾರಿಯೆಲ್ಲವೂ ಒಬ್ಬ
ತಂದೆಯದಾಗಿದೆ, ಅವರನ್ನೇ ಪ್ರಭು, ಈಶ್ವರನೆಂದು ಹೇಳುತ್ತಾರೆ. ತಂದೆಯು ಇದನ್ನೂ ತಿಳಿಸುತ್ತಾರೆ-
ತಮ್ಮನ್ನು ಆತ್ಮನೆಂದು ತಿಳಿದು ಒಬ್ಬ ಪರಮಾತ್ಮನನ್ನು ನೆನಪು ಮಾಡಿ. ಎಲ್ಲಾ ಸ್ಥೂಲ, ಸೂಕ್ಷ್ಮ
ದೇಹಧಾರಿಗಳನ್ನು ಮರೆತುಬಿಡಿ. ನೀವು ಶಾಂತಿಧಾಮದ ನಿವಾಸಿಗಳಾಗಿದ್ದೀರಿ, ಬೇಹದ್ದಿನ
ಪಾತ್ರಧಾರಿಗಳಾಗಿದ್ದೀರಿ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಇಡೀ ಪ್ರಪಂಚದಲ್ಲಿ
ಯಾರಿಗೂ ತಿಳಿದಿಲ್ಲ. ಯಾರು ಇಲ್ಲಿಗೆ ಬರುವರೋ ಅವರು ತಿಳಿದುಕೊಳ್ಳುತ್ತಾ ಹೋಗುವರು ಮತ್ತು ತಂದೆಯ
ಸೇವೆಯಲ್ಲಿ ಬರುತ್ತಾಹೋಗುತ್ತಾರೆ. ಈಶ್ವರೀಯ ಸೇವಾಧಾರಿಗಳಾಗಿದ್ದಾರಲ್ಲವೆ. ತಂದೆಯೂ ಸಹ ಸೇವೆ
ಮಾಡಲು ಬಂದಿದ್ದಾರೆ, ಪತಿತರನ್ನು ಪಾವನಗೊಳಿಸುವ ಸೇವೆ ಮಾಡುತ್ತಾರೆ. ರಾಜ್ಯವನ್ನು ಕಳೆದುಕೊಂಡು
ದುಃಖಿಯಾದಾಗ ಮತ್ತೆ ತಂದೆಯನ್ನು ಕರೆಯುತ್ತಾರೆ. ಯಾರು ರಾಜ್ಯವನ್ನು ಕೊಟ್ಟಿದ್ದರೋ ಅವರನ್ನೇ
ಕರೆಯುತ್ತಾರೆ.
ತಂದೆಯು ಸುಖಧಾಮದ
ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ಪ್ರಪಂಚದಲ್ಲಿ ನಿಮ್ಮ ವಿನಃ ಇದು ಮತ್ತ್ಯಾರಿಗೂ ತಿಳಿದಿಲ್ಲ.
ಎಲ್ಲಾ ಭಾರತವಾಸಿ ಒಂದು ಧರ್ಮದವರೇ ಆಗಿದ್ದಾರೆ, ಇದೇ ಮುಖ್ಯವಾದ ಧರ್ಮವಾಗಿದೆ ಅಂದಮೇಲೆ ಅದು
ಯಾವಾಗ ಇರುವುದಿಲ್ಲವೋ ಆಗಲೇ ತಂದೆಯು ಬಂದು ಸ್ಥಾಪನೆ ಮಾಡುತ್ತಾರಲ್ಲವೆ. ಮಕ್ಕಳಿಗೆ ತಿಳಿದಿದೆ-
ಭಗವಂತ ಯಾರನ್ನು ಇಡೀ ಪ್ರಪಂಚದವು ಅಲ್ಲಾ, ಗಾಡ್ ಎಂದು ಕರೆಯುವರೋ ಅವರೇ ನಾಟಕದನುಸಾರ ಕಲ್ಪದ
ಹಿಂದಿನಂತೆ ಬಂದಿದ್ದಾರೆ. ಇದು ಗೀತೆಯ ಎಪಿಸೋಡ್ ಆಗಿದೆ. ಇದರಲ್ಲಿ ತಂದೆಯು ಬಂದು ಸ್ಥಾಪನೆ
ಮಾಡುತ್ತಾರೆ. ಬ್ರಾಹ್ಮಣ ಮತ್ತು ದೇವಿ-ದೇವತಾನಮಃ ಎಂದೇ ಗಾಯನವಿದೆ, ಕ್ಷತ್ರಿಯನಮಃ ಎಂದು
ಹೇಳುವುದಿಲ್ಲ ಏಕೆಂದರೆ ಕ್ಷತ್ರಿಯರಲ್ಲಿ ಎರಡು ಕಲೆಗಳು ಕಡಿಮೆಯಾಯಿತಲ್ಲವೆ. ಹೊಸಪ್ರಪಂಚಕ್ಕೆ
ಸ್ವರ್ಗವೆಂದೇ ಹೇಳಲಾಗುತ್ತದೆ. ತ್ರೇತಾಯುಗಕ್ಕೆ ಹೊಸಪ್ರಪಂಚವೆಂದು ಹೇಳುವುದಿಲ್ಲ. ಮೊಟ್ಟಮೊದಲು
ಸತ್ಯಯುಗದಲ್ಲಿ ಸಂಪೂರ್ಣ ಹೊಸಪ್ರಪಂಚವಿರುತ್ತದೆ. ಇದು ಹಳೆಯದಕ್ಕಿಂತ ಹಳೆಯ ಪ್ರಪಂಚವಾಗಿದೆ. ನೀವು
ಪುನಃ ಹೊಸಪ್ರಪಂಚದಲ್ಲಿ ಹೋಗುವಿರಿ. ಆ ಪ್ರಪಂಚದಲ್ಲಿ ಹೋಗುವಕಾರಣವೇ ನಾವು ನರನಿಂದ
ನಾರಾಯಣರಾಗುತ್ತೇವೆಂದು ಹೇಳುತ್ತೀರಿ. ಸತ್ಯನಾರಾಯಣನ ಕಥೆಯನ್ನು ಕೇಳುತ್ತೇವೆ ಎಂದು ಹೇಳುತ್ತೀರಿ.
ರಾಜಕುಮಾರರಾಗುವ ಕಥೆಯೆಂದು ಹೇಳುವುದಿಲ್ಲ. ಇದು ಸತ್ಯನಾರಾಯಣನ ಕಥೆಯಾಗಿದೆ. ಅವರು ನಾರಾಯಣನನ್ನು
ಬೇರೆ ಎಂದು ತಿಳಿಯುತ್ತಾರೆ ಆದರೆ ನಾರಾಯಣನ ಯಾವುದೇ ಜೀವನಕಥೆಯಂತೂ ಇಲ್ಲ. ಜ್ಞಾನದ ಮಾತುಗಳು
ಬಹಳಷ್ಟಿವೆಯಲ್ಲವೆ ಆದ್ದರಿಂದಲೇ 7 ದಿನಗಳ ಸಮಯವನ್ನು ಕೊಡಲಾಗುತ್ತದೆ. ಈ 7 ದಿನಗಳು
ಭಟ್ಟಿಯಲ್ಲಿರಬೇಕಾಗುವುದು ಅಂದರೆ ಇಲ್ಲಿಯೇ ಕುಳಿತುಬಿಡುವುದಲ್ಲ. ಹೀಗೆ ಮಾಡಿದರೆ ಭಟ್ಟಿಯ ನೆಪ
ಮಾಡಿಕೊಂಡು ಅನೇಕರು ಬಂದುಬಿಡುವರು. ವಿದ್ಯಾಭ್ಯಾಸವು ಬೆಳಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ
ನಡೆಯುತ್ತದೆ. ಮಧ್ಯಾಹ್ನದಲ್ಲಿ ವಾಯುಮಂಡಲವು ಸರಿಯಾಗಿರುವುದಿಲ್ಲ. ರಾತ್ರಿಯಲ್ಲಿಯೂ 10ರಿಂದ 12
ಗಂಟೆಯವರೆಗೆ ಬಹಳ ಕೆಟ್ಟಸಮಯವಾಗಿದೆ. ಇಲ್ಲಿ ನೀವು ಮಕ್ಕಳೂ ಸಹ ನೆನಪಿನಲ್ಲಿದ್ದು
ಸತೋಪ್ರಧಾನರಾಗುವ ಪರಿಶ್ರಮಪಡಬೇಕಾಗಿದೆ. ಇಡೀ ದಿನವಂತೂ ಉದ್ಯೋಗ-ವ್ಯವಹಾರಗಳಲ್ಲಿ ಇರುತ್ತೀರಿ,
ಇಂತಹವರು ಅನೇಕರಿದ್ದಾರೆ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಲೂ ಇನ್ನೂ ಹೆಚ್ಚಿನ ನೌಕರಿಗಾಗಿ
ಓದುತ್ತಾರೆ. ಇಲ್ಲಿಯೂ ನೀವು ಓದುತ್ತೀರೆಂದರೆ ಯಾರು ಓದಿಸುವರೋ ಆ ಶಿಕ್ಷಕರನ್ನು ನೆನಪು
ಮಾಡಬೇಕಾಗಿದೆ. ಒಳ್ಳೆಯದು- ಶಿಕ್ಷಕನೆಂದೇ ತಿಳಿದು ನೆನಪು ಮಾಡಿ ಆಗ ತಂದೆ, ಶಿಕ್ಷಕ, ಸದ್ಗುರು
ಮೂರೂ ಸಂಬಂಧಗಳು ಒಟ್ಟಿಗೆ ನೆನಪಿಗೆ ಬರುತ್ತದೆ. ನಿಮಗಾಗಿ ಇದು ಬಹಳ ಸಹಜವಾಗಿದೆ ಅಂದಮೇಲೆ ಬಹಳ
ಬೇಗನೆ ನೆನಪು ಬಂದುಬಿಡಬೇಕು- ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ
ಆಗಿದ್ದಾರೆ. ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ, ಅವರಿಂದ ನಾವು ಸ್ವರ್ಗದ ಆಸ್ತಿಯನ್ನು
ಪಡೆಯುತ್ತಿದ್ದೇವೆ. ನಾವು ಸ್ವರ್ಗದಲ್ಲಿ ಅವಶ್ಯವಾಗಿ ಹೋಗುತ್ತೇವೆ, ಸ್ವರ್ಗದ ಸ್ಥಾಪನೆಯು ಖಂಡಿತ
ಆಗಬೇಕಾಗಿದೆ. ನೀವು ಕೇವಲ ಶ್ರೇಷ್ಠಪದವಿಗಾಗಿ ಪುರುಷಾರ್ಥ ಮಾಡುತ್ತೀರಿ. ಇದನ್ನೂ ಸಹ ನೀವು
ತಿಳಿದುಕೊಂಡಿದ್ದೀರಿ. ಕೊನೆಗೆ ನಿಮ್ಮ ಜ್ಞಾನವು ಹರಡುತ್ತಾ ಹೋಗುವುದು. ಮನುಷ್ಯರಿಗೆ ಇದು
ಅರ್ಥವಾಗುವುದು. ನೀವು ಬ್ರಾಹ್ಮಣರ ಅಲೌಕಿಕ ಧರ್ಮವಾಗಿದೆ- ಶ್ರೀಮತದಂತೆ ಅಲೌಕಿಕ ಸೇವೆಯಲ್ಲಿ
ತತ್ಫರರಾಗಿರುವುದು. ನೀವು ಶ್ರೀಮತದನುಸಾರ ಎಷ್ಟು ಶ್ರೇಷ್ಠಕಾರ್ಯವನ್ನು ಮಾಡುತ್ತಿದ್ದೀರಿ ಎಂಬುದೂ
ಸಹ ಮನುಷ್ಯರಿಗೂ ಸಹ ಅರ್ಥವಾಗುತ್ತಾ ಹೋಗುವುದು. ನಿಮ್ಮಂತಹ ಅಲೌಕಿಕ ಸೇವೆಯನ್ನು ಯಾರೂ ಮಾಡಲು
ಸಾಧ್ಯವಿಲ್ಲ. ನೀವು ಬ್ರಾಹ್ಮಣ ಧರ್ಮದವರೇ ಇಂತಹ ಕಾರ್ಯವನ್ನು ಮಾಡುತ್ತೀರಿ ಅಂದಮೇಲೆ ಇಂತಹ
ಕಾರ್ಯದಲ್ಲಿ ತೊಡಗಬೇಕು ಮತ್ತು ಇದರಲ್ಲಿಯೇ ಬ್ಯುಜಿಯಾಗಿರಬೇಕು. ತಂದೆಯೂ ಸಹ
ಬ್ಯುಜಿûಯಾಗಿರುತ್ತಾರಲ್ಲವೆ. ನೀವು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ಅವರಂತೂ
ಪಂಚಾಯಿತಿ ಸೇರಿ ಕೇವಲ ಪಾಲನೆ ಮಾಡುತ್ತಿರುತ್ತಾರೆ ಆದರೆ ನೀವಿಲ್ಲಿ ಗುಪ್ತವೇಷದಲ್ಲಿ ಏನು
ಮಾಡುತ್ತಿದ್ದೀರಿ? ನೀವು ಗುಪ್ತಸೈನಿಕರು, ಅಹಿಂಸಕರಾಗಿದ್ದೀರಿ. ಇದರ ಅರ್ಥವನ್ನು ಯಾರೂ
ತಿಳಿದುಕೊಂಡಿಲ್ಲ. ನೀವು ಡಬಲ್ ಅಹಿಂಸಕ ಸೇನೆಯಾಗಿದ್ದೀರಿ. ಬಹಳ ದೊಡ್ಡ ಹಿಂಸೆಯು ಈ
ವಿಕಾರದ್ದಾಗಿದೆ, ಇದೇ ಪತಿತರನ್ನಾಗಿ ಮಾಡುತ್ತದೆ ಆದ್ದರಿಂದ ಇದರಮೇಲೆ ವಿಜಯಿಗಳಾಗಬೇಕಾಗಿದೆ.
ಭಗವಾನುವಾಚ- ಕಾಮ ಮಹಾಶತ್ರುವಾಗಿದೆ, ಇದರಮೇಲೆ ಜಯಗಳಿಸುವುದರಿಂದಲೇ ನೀವು ಜಗಜ್ಜೀತರಾಗುತ್ತೀರಿ.
ಈ ಲಕ್ಷ್ಮೀ-ನಾರಾಯಣರು ಜಗಜ್ಜೀತರಲ್ಲವೆ. ಭಾರತವು ಜಗಜ್ಜೀತನಾಗಿತ್ತು, ಇವರು ವಿಶ್ವದ ಮಾಲೀಕ
ಹೇಗಾದರು? ಇದನ್ನೂ ಸಹ ಹೊರಗಿನವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದನ್ನು ತಿಳಿದುಕೊಳ್ಳಲು ಬಹಳ
ವಿಶಾಲ ಬುದ್ಧಿಯಿರಬೇಕು. ದೊಡ್ಡ-ದೊಡ್ಡ ವಿದ್ಯೆಯನ್ನು ಓದುವವರ ಬುದ್ಧಿಯು
ವಿಶಾಲವಾಗಿರುತ್ತದೆಯಲ್ಲವೆ. ನೀವು ಶ್ರೀಮತದನುಸಾರ ತಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತೀರಿ.
ನೀವು ಯಾರಿಗೆ ಬೇಕಾದರೂ ತಿಳಿಸಬಲ್ಲಿರಿ- ವಿಶ್ವದಲ್ಲಿ ಶಾಂತಿಯಿತ್ತು ಆಗ ಮತ್ತ್ಯಾವುದೇ
ರಾಜ್ಯವಿರಲಿಲ್ಲ, ಸ್ವರ್ಗದಲ್ಲಿ ಅಶಾಂತಿಯಿರಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಭಗವಂತನ ಹೂದೋಟವೆಂದು
ಹೇಳುತ್ತಾರೆ, ಕೇವಲ ಹೂದೋಟವೇ ಇರುವುದಿಲ್ಲ, ಮನುಷ್ಯರೂ ಬೇಕಲ್ಲವೆ. ನಾವು ಅಂತಹ ಸ್ವರ್ಗದ
ಮಾಲೀಕರಾಗುತ್ತಿದ್ದೇವೆ ಎಂದು ಮಕ್ಕಳಿಗೆ ತಿಳಿದಿದೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ಮತ್ತು
ವಿಚಾರಗಳು ಶ್ರೇಷ್ಠವಾಗಿರಬೇಕು. ನೀವು ಹೊರಗಿನ ಯಾವುದೇ ಸುಖವನ್ನು ಬಯಸುವುದಿಲ್ಲ. ಈ ಸಮಯದಲ್ಲಿ
ನೀವು ಬಹಳ ಸರಳವಾಗಿರಬೇಕಾಗಿದೆ. ನೀವೀಗ ಮಾವನಮನೆಗೆ (ಸ್ವರ್ಗ) ಹೋಗುತ್ತೀರಿ, ಇದು ತಂದೆಯ
ಮನೆಯಾಗಿದೆ. ಇಲ್ಲಿ ನಿಮಗೆ ಡಬಲ್ ತಂದೆಯು ಸಿಕ್ಕಿದ್ದಾರೆ. ಒಬ್ಬರು ನಿರಾಕಾರ,
ಶ್ರೇಷ್ಠಾತಿಶ್ರೇಷ್ಠ ತಂದೆ, ಇನ್ನೊಬ್ಬರು ಸಾಕಾರತಂದೆ. ಅವರೂ ಸಹ ಶ್ರೇಷ್ಠಾತಿಶ್ರೇಷ್ಠರಾಗಿದ್ದಾರೆ.
ನೀವೀಗ ಮಾವನ ಮನೆಯಾದ ವಿಷ್ಣುಪುರಿಗೆ ಹೋಗುತ್ತೀರಿ, ಅದಕ್ಕೆ ಕೃಷ್ಣಪುರಿಯೆಂದು ಹೇಳುವುದಿಲ್ಲ.
ಮಕ್ಕಳಪುರಿ (ಧಾಮ) ಯಿರುವುದಿಲ್ಲ. ವಿಷ್ಣುಪುರಿ ಅರ್ಥಾತ್ ಲಕ್ಷ್ಮೀ-ನಾರಾಯಣರ ಪುರಿ (ಧಾಮ).
ನಿಮ್ಮದು ರಾಜಯೋಗವಾಗಿದೆ ಅಂದಮೇಲೆ ಅವಶ್ಯವಾಗಿ ನರನಿಂದ ನಾರಾಯಣರಾಗುತ್ತೀರಿ.
ನೀವು ಮಕ್ಕಳು
ಸತ್ಯ-ಸತ್ಯವಾದ ಈಶ್ವರೀಯ ಸೇವಾಧಾರಿಗಳಾಗಿದ್ದೀರಿ. ಯಾರು ಕೊನೆಪಕ್ಷ 8 ಗಂಟೆಗಳಕಾಲ
ಆತ್ಮಾಭಿಮಾನಿಯಾಗಿರುವ ಪುರುಷಾರ್ಥ ಮಾಡುವರೋ ಅವರಿಗೆ ತಂದೆಯು ಸತ್ಯವಾದ ಈಶ್ವರೀಯ ಸೇವಾಧಾರಿಗಳೆಂದು
ಹೇಳುತ್ತಾರೆ. ಯಾವುದೇ ಕರ್ಮಬಂಧನವಿರಬಾರದು ಆಗಲೇ ಸೇವಾಧಾರಿಗಳಾಗುತ್ತೀರಿ ಮತ್ತು ಕರ್ಮಾತೀತ
ಸ್ಥಿತಿಯಾಗುವುದು. ನರನಿಂದ ನಾರಾಯಣನಾಗಬೇಕೆಂದರೆ ಕರ್ಮಾತೀತ ಸ್ಥಿತಿಯು ಖಂಡಿತ ಬೇಕು.
ಕರ್ಮಬಂಧನವಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಮಕ್ಕಳೂ ಸಹ ಇದನ್ನು
ತಿಳಿದುಕೊಳ್ಳುತ್ತಾರೆ- ನೆನಪಿನ ಪರಿಶ್ರಮವು ಬಹಳ ಕಠಿಣವಾಗಿದೆ, ಯುಕ್ತಿಯು ಬಹಳ ಸಹಜವಾಗಿದೆ.
ಕೇವಲ ತಂದೆಯನ್ನು ನೆನಪು ಮಾಡಬೇಕು. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ಯೋಗಕ್ಕಾಗಿಯೇ ಈ
ಜ್ಞಾನವಿದೆ, ಇದನ್ನು ತಂದೆಯು ಬಂದು ಕಲಿಸುತ್ತಾರೆ. ಕೃಷ್ಣನೇನು ಯೋಗವನ್ನು ಕಲಿಸುವುದಿಲ್ಲ ಆದರೆ
ಕೃಷ್ಣನಿಗೆ ಸ್ವದರ್ಶನ ಚಕ್ರವನ್ನು ತೋರಿಸಿದ್ದಾರೆ. ಈ ಚಿತ್ರವು ಎಷ್ಟೊಂದು ತಪ್ಪಾಗಿದೆ! ನೀವೀಗ
ಯಾವುದೇ ಚಿತ್ರ ಇತ್ಯಾದಿಗಳನ್ನು ನೆನಪು ಮಾಡಬಾರದು. ಎಲ್ಲವನ್ನೂ ಮರೆಯಿರಿ, ಯಾರಲ್ಲಿಯೂ ಬುದ್ಧಿಯು
ಹೋಗದಿರಲಿ, ಬುದ್ಧಿಯೋಗವು ಸ್ಪಷ್ಟವಾಗಿರಲಿ. ಇದು ವಿದ್ಯಾಭ್ಯಾಸದ ಸಮಯವಾಗಿದೆ ಆದ್ದರಿಂದ ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ ಆಗಲೇ ಪಾಪಗಳು ನಾಶವಾಗುತ್ತದೆ. ತಂದೆಯು
ತಿಳಿಸುತ್ತಾರೆ- ಮೊಟ್ಟಮೊದಲಿಗೆ ನೀವು ಅಶರೀರಿಯಾಗಿ ಬಂದಿದ್ದೀರಿ, ಈಗ ಪುನಃ ಆಗಬೇಕಾಗಿದೆ. ನೀವು
ಆಲ್ರೌಂಡರ್ ಆಗಿದ್ದೀರಿ. ಅವರು ಹದ್ದಿನ ಪಾತ್ರಧಾರಿಗಳು, ನೀವು ಬೇಹದ್ದಿನ ಪಾತ್ರಧಾರಿಗಳಾಗಿದ್ದೀರಿ.
ನಾವು ಅನೇಕಬಾರಿ ಪಾತ್ರವನ್ನಭಿನಯಿಸಿದ್ದೇವೆಂದು ನೀವು ಈಗ ತಿಳಿದುಕೊಳ್ಳುತ್ತೀರಿ. ಅನೇಕಬಾರಿ ನೀವು
ಬೇಹದ್ದಿನ ಮಾಲೀಕರಾಗುತ್ತೀರಿ, ಈ ಬೇಹದ್ದಿನ ನಾಟಕದಲ್ಲಿ ಚಿಕ್ಕ-ಚಿಕ್ಕ ನಾಟಕಗಳು ಅನೇಕಬಾರಿ
ನಡೆಯುತ್ತಿರುತ್ತವೆ. ಸತ್ಯಯುಗದಿಂದ ಕಲಿಯುಗದವರೆಗೆ ಏನೆಲ್ಲವೂ ನಡೆದಿದೆಯೋ ಅದು
ಪುನರಾವರ್ತನೆಯಾಗುತ್ತಾ ಇರುತ್ತದೆ. ಮೇಲಿನಿಂದ ಹಿಡಿದು ಅಂತ್ಯದವರೆಗೆ ಎಲ್ಲವೂ ನಿಮ್ಮ
ಬುದ್ಧಿಯಲ್ಲಿದೆ. ಮೂಲವತನ, ಸೂಕ್ಷ್ಮವತನ ಮತ್ತು ಸೃಷ್ಟಿಚಕ್ರ- ಅಷ್ಟೇ, ಮತ್ತ್ಯಾವುದೇ ಧಾಮದೊಂದಿಗೆ
ನಿಮ್ಮ ಕೆಲಸವಿಲ್ಲ. ನಿಮ್ಮ ಧರ್ಮವು ಬಹಳ ಸುಖ ಕೊಡುವಂತಹದ್ದಾಗಿದೆ. ಯಾವಾಗ ಅವರ ಸಮಯವು ಬರುವುದೋ
ಆಗ ಅವರೆಲ್ಲರೂ ಬರುತ್ತಾರೆ. ನಂಬರ್ವಾರ್ ಹೇಗೇಗೆ ಬಂದಿದ್ದಾರೆಯೋ ಹಾಗೆಯೇ ಹಿಂತಿರುಗಿ ಹೋಗುತ್ತಾರೆ.
ನಾವು ಅನ್ಯಧರ್ಮದ ವರ್ಣನೆಯನ್ನೇನು ಮಾಡುವುದು! ಕೇವಲ ನೀವು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ.
ಚಿತ್ರ ಇತ್ಯಾದಿಗಳೆಲ್ಲವನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ,
ಬ್ರಹ್ಮಾ-ವಿಷ್ಣು-ಶಂಕರನನ್ನಲ್ಲ. ಕೇವಲ ಒಬ್ಬರನ್ನು ನೆನಪು ಮಾಡಿ. ಪರಮಾತ್ಮನು
ಲಿಂಗರೂಪವಾಗಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ ಆದರೆ ಲಿಂಗಸಮಾನವಾದ ವಸ್ತುವಿರಲು ಹೇಗೆ
ಸಾಧ್ಯ! ಆ ರೂಪದಲ್ಲಿ ಜ್ಞಾನವನ್ನು ತಿಳಿಸಲು ಹೇಗೆ ಸಾಧ್ಯ! ನೀವು ಕೇಳಲು ಯಾವುದೇ ಪ್ರೇರಣೆಯಿಂದ
ಯಾವುದಾದರೂ ಸ್ಪೀಕರ್ ಇಡುವರೇ? ಪ್ರೇರಣೆಯಿಂದ ಏನೂ ಆಗುವುದಿಲ್ಲ. ಶಂಕರನು ಪ್ರೇರಣೆ
ಕೊಡುತ್ತಾನೆಂದಲ್ಲ. ಇದೆಲ್ಲವೂ ನಾಟಕದಲ್ಲಿ ಮೊದಲಿನಿಂದ ನಿಗಧಿಯಾಗಿರುತ್ತದೆ. ವಿನಾಶವೂ ಸಹ
ಆಗಲೇಬೇಕಾಗಿದೆ. ಹೇಗೆ ನೀವಾತ್ಮರು ಶರೀರದ ಮೂಲಕ ಮಾತನಾಡುತ್ತೀರೋ ಹಾಗೆಯೇ ಪರಮಾತ್ಮನೂ ಸಹ ನೀವು
ಮಕ್ಕಳೊಂದಿಗೆ ಮಾತನಾಡುತ್ತಾರೆ. ಅವರ ಪಾತ್ರವೇ ದಿವ್ಯ-ಅಲೌಕಿಕವಾಗಿದೆ. ಪತಿತರನ್ನು ಪಾವನ
ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ನನ್ನ ಪಾತ್ರವು ಎಲ್ಲರಿಗಿಂತ
ಭಿನ್ನವಾಗಿದೆ. ಕಲ್ಪದ ಹಿಂದೆ ಯಾರು ಬಂದಿರುವರೋ ಈಗಲೂ ಅವರೇ ಬರುತ್ತಾರೆ. ಏನೆಲ್ಲವೂ ಕಳೆದುಹೋಯಿತೋ
ಅದು ಡ್ರಾಮಾದಲ್ಲಿದೆ. ಇದರಲ್ಲಿ ಸ್ವಲ್ಪವೂ ಅಂತರವಿಲ್ಲ ಆದ್ದರಿಂದ ಪುರುಷಾರ್ಥ ವಿಚಾರವನ್ನು
ಇಟ್ಟುಕೊಳ್ಳಬೇಕಾಗಿದೆ. ಡ್ರಾಮಾನುಸಾರ ನಮ್ಮದು ಕಡಿಮೆ ಪುರುಷಾರ್ಥವಾಗಿದೆ ಎಂದಲ್ಲ, ಇದರಿಂದ
ಪದವಿಯೂ ಬಹಳ ಕಡಿಮೆಯಾಗಿಹೋಗುವುದು. ಪುರುಷಾರ್ಥವು ತೀವ್ರವಾಗಿ ಮಾಡಬೇಕು, ಡ್ರಾಮಾದ ಮೇಲೆ
ಬಿಡುವಂತಿಲ್ಲ ಆದ್ದರಿಂದ ತಮ್ಮ ಚಾರ್ಟನ್ನು ನೋಡಿಕೊಳ್ಳುತ್ತಾ ಇರಿ, ಹೆಚ್ಚಿಸಿಕೊಳ್ಳುತ್ತಾ ಇರಿ.
ನನ್ನ ಚಾರ್ಟ್ ಹೆಚ್ಚುತ್ತಾ ಹೋಗುತ್ತಿದೆಯೇ, ಕಡಿಮೆಯಾಗುತ್ತಿಲ್ಲವೆ ಎಂದು ಬರೆದಿಟ್ಟುಕೊಳ್ಳಿ.
ಬಹಳ ಎಚ್ಚರಿಕೆಯಿಂದಿರಬೇಕು. ಇಲ್ಲಿ ನಿಮ್ಮದು ಬ್ರಾಹ್ಮಣರ ಸಂಗವಾಗಿದೆ. ಹೊರಗಡೆ ಎಲ್ಲವೂ
ಕೆಟ್ಟಸಂಗವೇ ಇದೆ, ಅಲ್ಲಿ ಮನುಷ್ಯರು ಕೆಟ್ಟಮಾತುಗಳನ್ನೇ ತಿಳಿಸುತ್ತಾರೆ. ಈಗ ತಂದೆಯು ನಿಮ್ಮನ್ನು
ಕೆಟ್ಟಸಂಗದಿಂದ ಬಿಡಿಸುತ್ತಾರೆ.
ಮನುಷ್ಯರು
ಕೆಟ್ಟಸಂಗದಲ್ಲಿ ಬಂದು ತಮ್ಮ ರೀತಿ-ನೀತಿ, ವೇಷಭೂಷಣ ಇತ್ಯಾದಿಯೆಲ್ಲವನ್ನು ಬದಲಾಯಿಸಿಬಿಟ್ಟಿದ್ದಾರೆ.
ದೇಶ-ದೇಶವನ್ನೇ ಬದಲಾಯಿಸಿದ್ದಾರೆ. ಇದೂ ಸಹ ತಮ್ಮ ಧರ್ಮದ ನಿಂದನೆ ಮಾಡುವುದಾಗಿದೆ. ನೋಡಿ, ಹೇಗೇಗೆ
ಜಡೆಗಳನ್ನು ಹಾಕುತ್ತಾರೆ! ದೇಹಾಭಿಮಾನವಾಗಿಬಿಡುತ್ತದೆ. ಕೇವಲ ಕೂದಲಿನ ಸೌಂದರ್ಯಕ್ಕಾಗಿ 100-150
ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ಇದಕ್ಕೆ ಅತಿಯಾದ ದೇಹಾಭಿಮಾನವೆಂದು ಹೇಳಲಾಗುತ್ತದೆ, ಅಂತಹವರು
ಎಂದೂ ಜ್ಞಾನವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಬಹಳ
ಸಾಧಾರಣವಾಗಿ ಇರಿ, ತುಂಬಾ ಒಳ್ಳೊಳ್ಳೆಯ ಸೀರೆಯನ್ನು ಧರಿಸುವುದರಿಂದಲೂ ದೇಹಾಭಿಮಾನವು ಬರುತ್ತದೆ.
ದೇಹಾಭಿಮಾನವನ್ನು ಬಿಡುವುದಕ್ಕಾಗಿ ಎಲ್ಲವನ್ನೂ ಸಾಧಾರಣ ಮಾಡಿಕೊಳ್ಳಬೇಕು. ಒಳ್ಳೆಯ ವಸ್ತು
ದೇಹಾಭಿಮಾನದಲ್ಲಿ ತರುತ್ತದೆ. ಈಗ ನೀವು ಈ ಸಮಯದಲ್ಲಿ ವನವಾಸದಲ್ಲಿದ್ದೀರಲ್ಲವೆ. ಪ್ರತಿಯೊಂದು
ವಸ್ತುವಿನಿಂದ ಮೋಹವನ್ನು ತೆಗೆಯಬೇಕು. ಬಹಳ ಸಾಧಾರಣವಾಗಿರಬೇಕಾಗಿದೆ. ವಿವಾಹ ಮೊದಲಾದಕಡೆ ಬಣ್ಣದ
ವಸ್ತ್ರಗಳನ್ನು ಧರಿಸಿ ಹೋಗಿ ಸಂಬಂಧವನ್ನು ನಿಭಾಯಿಸುವ ಅರ್ಥವಾಗಿ ಧರಿಸಿರಿ ಮತ್ತೆ ಮನೆಗೆ ಬಂದು
ಬದಲಾಯಿಸಿಕೊಳ್ಳಿ. ನೀವಂತೂ ವಾಣಿಯಿಂದ ದೂರ ಹೋಗಬೇಕಾಗಿದೆ. ವಾನಪ್ರಸ್ಥಿಗಳು
ಶ್ವೇತವಸ್ತ್ರದಲ್ಲಿರುತ್ತಾರೆ, ನೀವು ಒಬ್ಬೊಬ್ಬರೂ ಹಿರಿಯರು, ಕಿರಿಯರು ಎಲ್ಲರೂ
ವಾನಪ್ರಸ್ಥಿಗಳಾಗಿದ್ದೀರಿ. ಚಿಕ್ಕಮಕ್ಕಳೂ ಸಹ ತಂದೆಯ ನೆನಪು ತರಿಸಬೇಕಾಗಿದೆ, ಇದರಲ್ಲಿಯೇ
ಕಲ್ಯಾಣವಿದೆ. ನೀವೀಗ ಶಿವತಂದೆಯ ಬಳಿ ಹೋಗಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸದಾ
ಗಮನವಿರಲಿ- ನಮ್ಮ ಯಾವುದೇ ಚಲನೆಯು ದೇಹಾಭಿಮಾನದ್ದಾಗಿರಬಾರದು. ಬಹಳ ಸಾಧಾರಣವಾಗಿರಬೇಕಾಗಿದೆ.
ಯಾವುದೇ ವಸ್ತುವಿನಲ್ಲಿ ಮಮತ್ವವನ್ನಿಡಬಾರದು. ಕೆಟ್ಟಸಂಗದಿಂದ ತಮ್ಮನ್ನು ಸಂಭಾಲನೆ
ಮಾಡಿಕೊಳ್ಳಬೇಕಾಗಿದೆ.
2. ನೆನಪಿನ
ಪರಿಶ್ರಮದಿಂದ ಸರ್ವ ಕರ್ಮಬಂಧನಗಳನ್ನು ತುಂಡುಮಾಡಿ ಕರ್ಮಾತೀತರಾಗಬೇಕಾಗಿದೆ. ಕೊನೆಪಕ್ಷ 8 ಗಂಟೆಗಳ
ಕಾಲ ಆತ್ಮಾಭಿಮಾನಿಯಾಗಿದ್ದು ಸತ್ಯ-ಸತ್ಯವಾದ ಈಶ್ವರೀಯ ಸೇವಾಧಾರಿಗಳಾಗಬೇಕಾಗಿದೆ.
ವರದಾನ:
ವಿಶಾಲ ಬುದ್ಧಿ,
ವಿಶಾಲ ಹೃದಯದಿಂದ ನಮ್ಮ ತನದ ಅನುಭೂತಿ ಮಾಡಿಸುವಂತಹ ಮಾಸ್ಟರ್ ರಚೈತ ಭವ
ಮಾಸ್ಟರ್ ರಚೈತನ ಮೊದಲ
ರಚನೆ-ಈ ದೇಹವಾಗಿದೆ.ಯಾರು ಈ ದೇಹದ ಮಾಲೀಕತನದಲ್ಲಿ ಸಂಪೂರ್ಣ ಸಫಲತೆ ಪ್ರಾಪ್ತಿ ಮಾಡಿಕೊಳ್ಳುತ್ತಾರೆ,
ಅವರು ತಮ್ಮ ಸ್ನೇಹ ಹಾಗೂ ಸಂಪರ್ಕದ ಮೂಲಕ ಎಲ್ಲರಿಗೆ ನಮ್ಮ ತನದ ಅನುಭವವನ್ನು ಮಾಡಿಸುತ್ತಾರೆ. ಆ
ಆತ್ಮದ ಸಂಪರ್ಕದಿಂದ ಸುಖದ, ದಾತಾತನದ, ಶಾಂತಿ, ಪ್ರೇಮ, ಆನಂದ, ಸಹಯೋಗ, ಸಾಹಸ, ಉತ್ಸಾಹ, ಉಮಂಗ
ಯಾವುದಾದರೂ ಒಂದು ವಿಶೇಷತೆ ಅನುಭೂತಿಯಾಗುವುದು. ಅವರನ್ನೇ ಹೇಳಲಾಗುವುದು ವಿಶಾಲ ಬುದ್ಧಿ, ವಿಶಾಲ
ಹೃದಯ ಉಳ್ಳವರು.
ಸ್ಲೋಗನ್:
ಉಮಂಗ-ಉತ್ಸಾಹದ
ರೆಕ್ಕೆಯ ಮೂಲಕ ಸದಾ ಹಾರುವ ಕಲೆಯ ಅನುಭೂತಿ ಮಾಡಿಸುತ್ತಾ ಹೋಗಿ.
ಅವ್ಯಕ್ತ ಸೂಚನೆ:
ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ
ಸ್ವಯಂ ಅನ್ನು ಶ್ರೇಷ್ಠ
ಸಂಕಲ್ಪಗಳಿಂದ ಸಂಪನ್ನ ರನ್ನಾಗಿ ಮಾಡಿಕೊಳ್ಳುವುದಕ್ಕಾಗಿ ಟ್ರಸ್ಟಿ ಆಗಿ ಇರಿ, ಟ್ರಸ್ಟಿ ಆಗುವುದು
ಎಂದರೆ ಡಬಲ್ ಲೈಟ್ ಫರಿಶ್ತಾ ಆಗುವುದು. ಇಂತಹ ಮಕ್ಕಳ ಪ್ರತಿಯೊಂದು ಶ್ರೇಷ್ಠ ಸಂಕಲ್ಪ ಸಫಲವಾಗುವುದು.
ಒಂದು ಶ್ರೇಷ್ಠ ಸಂಕಲ್ಪ ಮಕ್ಕಳದ್ದು ಹಾಗೂ ಸಾವಿರ ಶ್ರೇಷ್ಠ ಸಂಕಲ್ಪದ ಫಲ ತಂದೆಯ ಮೂಲಕ
ಪ್ರಾಪ್ತಿಯಾಗುತ್ತದೆ. ಒಂದಕ್ಕೆ ಸಾವಿರದಷ್ಟು ಸಿಗುತ್ತದೆ.