08.06.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇಡೀ
ವಿಶ್ವವೇ ಈಶ್ವರೀಯ ಪರಿವಾರವಾಗಿದೆ, ಆದ್ದರಿಂದ ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು
ಹಾಡುತ್ತಾರೆ, ನೀವೀಗ ಪ್ರತ್ಯಕ್ಷದಲ್ಲಿ ಈಶ್ವರೀಯ ಪರಿವಾರದವರಾಗಿದ್ದೀರಿ”
ಪ್ರಶ್ನೆ:
ತಂದೆಯಿಂದ 21
ಜನ್ಮಗಳ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಸಹಜ ವಿಧಿ ಯಾವುದಾಗಿದೆ?
ಉತ್ತರ:
ಸಂಗಮದಲ್ಲಿ ಶಿವ
ತಂದೆಯನ್ನು ತಮ್ಮ ವಾರಸುಧಾರನನ್ನಾಗಿ ಮಾಡಿಕೊಳ್ಳಿ. ತನು-ಮನ-ಧನದಿಂದ ಬಲಿಹಾರಿಯಾಗಿ ಆಗ 21
ಜನ್ಮಗಳಿಗಾಗಿ ಪೂರ್ಣ ಆಸ್ತಿಯು ಪ್ರಾಪ್ತಿಯಾಗುವುದು. ತಂದೆಯು ಹೇಳುತ್ತಾರೆ - ಯಾವ ಮಕ್ಕಳು
ಸಂಗಮದಲ್ಲಿ ತಮ್ಮ ಹಳೆಯದೆಲ್ಲವನ್ನೂ ಇನ್ಶೂರ್ ಮಾಡುವರೋ ಅವರಿಗೆ ಪ್ರತಿಫಲವಾಗಿ ನಾನು 21
ಜನ್ಮಗಳವರೆಗೆ ಕೊಡುತ್ತೇನೆ.
ಗೀತೆ:
ನಯನ ಹೀನನಿಗೆ
ದಾರಿ ತೋರಿಸು ಪ್ರಭು..............
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಈ ರೀತಿ ಭಕ್ತರು ಭಗವಂತನನ್ನು ಕರೆಯುತ್ತಾರೆ ಆದರೆ ಭಗವಂತನನ್ನು
ಪೂರ್ಣ ರೀತಿಯಲ್ಲಿ ಅರಿತುಕೊಳ್ಳದ ಕಾರಣ ಮನುಷ್ಯರು ಎಷ್ಟೊಂದು ದುಃಖಿಯಾಗಿದ್ದಾರೆ.
ಭಕ್ತಿಮಾರ್ಗದಲ್ಲಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಕೇವಲ ಈ ಜೀವನದ ಮಾತಿಲ್ಲ.
ಯಾವಾಗಿನಿಂದ ಭಕ್ತಿಯು ಆರಂಭವಾಗಿದೆಯೋ ಆಗಿನಿಂದಲೂ ಅಲೆದಾಡುತ್ತಲೇ ಇದ್ದಾರೆ. ಭಾರತದಲ್ಲಿಯೇ
ದೇವಿ-ದೇವತೆಗಳ ರಾಜ್ಯವಿತ್ತು ಯಾವುದಕ್ಕೆ ಸ್ವರ್ಗ, ಸತ್ಯ ಖಂಡವೆಂದು ಹೇಳಲಾಗುತ್ತಿತ್ತು. ಈಗ
ಭಾರತವು ಅಸತ್ಯ ಖಂಡವಾಗಿದೆ. ಭಾರತದ ಮಹಿಮೆಯು ಬಹಳ ಭಾರಿಯಾಗಿದೆ ಏಕೆಂದರೆ ಭಾರತವು ಪರಮಪಿತ
ಪರಮಾತ್ಮನ ಜನ್ಮ ಸ್ಥಳವಾಗಿದೆ. ಅವರ ಮೂಲ ಹೆಸರಾಗಿದೆ, ಶಿವ. ಶಿವ ಜಯಂತಿಯನ್ನು ಆಚರಿಸುತ್ತಾರೆ,
ರುದ್ರ ಅಥವಾ ಸೋಮನಾಥ ಜಯಂತಿಯೆಂದು ಹೇಳಲಾಗುವುದಿಲ್ಲ. ಶಿವ ಜಯಂತಿ ಅಥವಾ ಶಿವ ರಾತ್ರಿ ಎಂದು
ಹೇಳಲಾಗುತ್ತದೆ. ಸ್ವರ್ಗದ ಸ್ಥಾಪನೆ ಮಾಡುವವರು ಒಬ್ಬರೇ ಸ್ವರ್ಗದ ರಚಯಿತನಾಗಿದ್ದಾರೆ. ಎಲ್ಲಾ
ಭಕ್ತರ ಭಗವಂತನಂತೂ ಅವಶ್ಯವಾಗಿ ಒಬ್ಬರೇ ಆಗಿರಬೇಕು. ಎಲ್ಲರೂ ನಯನಹೀನರಾಗಿದ್ದಾರೆ. ಅರ್ಥಾತ್
ಜ್ಞಾನದ ಚಕ್ಷು ಅಥವಾ ಡಿವೈನ್ ಇನ್ಸೈಟ್ ಇಲ್ಲ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು
ಕಲಿಸುತ್ತೇನೆ. ಶ್ರೀ ಮದ್ಭಗವದ್ಗೀತೆಯು ಮುಖ್ಯವಾಗಿದೆ, ಶ್ರೀ ಅರ್ಥಾತ್ ಶ್ರೇಷ್ಠ ಮತ. ಈಗ
ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ದಿವ್ಯ ಚಕ್ಷು ಅರ್ಥಾತ್ ಜ್ಞಾನದ ಮೂರನೇ
ನೇತ್ರವನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಜ್ಞಾನದ ಮೂರನೇ ನೇತ್ರವು ನೀವು ಬ್ರಾಹ್ಮಣರಿಗೆ
ಸಿಗುತ್ತದೆ, ಯಾವುದರಿಂದ ನೀವು ತಂದೆಯನ್ನು ಹಾಗೂ ತಂದೆಯ ರಚನೆಯ ಆದಿ-ಮಧ್ಯ-ಅಂತ್ಯವನ್ನು
ಅರಿತುಕೊಳ್ಳುತ್ತೀರಿ. ಈ ಸಮಯದಲ್ಲಿ ಎಲ್ಲರಲ್ಲಿಯೂ ದೇಹದ ಅಹಂಕಾರ ಅಥವಾ ಪಂಚ ವಿಕಾರಗಳಿವೆ
ಆದ್ದರಿಂದ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳ ಬಳಿ ಪ್ರಕಾಶವಿದೆ, ನೀವಾತ್ಮರು ಇಡೀ ವಿಶ್ವದ
ಚರಿತ್ರೆ-ಭೂಗೋಳವನ್ನು ಅರಿತುಕೊಂಡಿದ್ದೀರಿ, ಮೊದಲು ನೀವೆಲ್ಲರೂ ಅಜ್ಞಾನದಲ್ಲಿದ್ದಿರಿ, ಜ್ಞಾನ
ಅಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು. ಯಾರು ಪೂಜ್ಯರಾಗಿದ್ದರೋ ಅವರೇ
ನಂತರ ಪೂಜಾರಿಗಳಾಗಿ ಬಿಟ್ಟಿದ್ದಾರೆ. ಪೂಜ್ಯರು ಪ್ರಕಾಶತೆಯಲ್ಲಿರುತ್ತಾರೆ, ಪೂಜಾರಿಗಳು
ಅಂಧಕಾರದಲ್ಲಿ ಇದ್ದಾರೆ. ಪರಮಾತ್ಮನಿಗೆ ನೀವೇ ಪೂಜ್ಯ, ನೀವೇ ಪೂಜಾರಿ ಎಂದು ಹೇಳುವಂತಿಲ್ಲ, ಅವರು
ಪರಮ ಪೂಜ್ಯನಾಗಿದ್ದಾರೆ. ಎಲ್ಲರನ್ನೂ ಪೂಜ್ಯರನ್ನಾಗಿ ಮಾಡುವವರಾಗಿದ್ದಾರೆ. ಅವರಿಗೆ ಪರಮ
ಪೂಜ್ಯರೆಂದು ಹೇಳಲಾಗುತ್ತದೆ. ಪರಮಪಿತ ಪರಮಾತ್ಮ ಎಂದರೆ ಪರಮಾತ್ಮ. ಕೃಷ್ಣನಿಗೆ ಈ ರೀತಿ ಹೇಳುವರೇ!
ಕೃಷ್ಣನನ್ನು ಎಲ್ಲರೂ ಪರಮಪಿತನೆಂದು ಹೇಳುವುದಿಲ್ಲ. ನಿರಾಕಾರ ತಂದೆಗೇ ಎಲ್ಲರೂ ಪರಮಪಿತನೆಂದು
ಹೇಳುತ್ತಾರೆ. ಅವರೂ ಆತ್ಮನೇ ಆಗಿದ್ದಾರೆ ಆದರೆ ಪರಮ ಅರ್ಥ ಶ್ರೇಷ್ಠರಾಗಿದ್ದಾರೆ ಆದ್ದರಿಂದ ಅವರಿಗೆ
ಪರಮಾತ್ಮನೆಂದು ಹೇಳಲಾಗುತ್ತದೆ. ಅವರು ಪರಮಆತ್ಮ, ಸದಾ ಪರಮಧಾಮದಲ್ಲಿ ಇರುವವರಾಗಿದ್ದಾರೆ. ಆಂಗ್ಲ
ಭಾಷೆಯಲ್ಲಿ ಅವರಿಗೆ ಸುಪ್ರೀಂ ಸೌಲ್ ಎಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ - ಆತ್ಮಗಳು
ಪರಮಾತ್ಮನಿಂದ ಬಹಳ ಕಾಲ ಅಗಲಿ ಹೋಗಿದ್ದರು ಎಂದು ಹಾಡುತ್ತೀರಿ. ಪರಮಾತ್ಮನು ಪರಮಾತ್ಮನಿಂದ ಬಹುಕಾಲ
ಅಗಲಿದ್ದರು ಎಂದು ಹೇಳುವುದಿಲ್ಲ. ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳುವುದು ಮೊಟ್ಟ
ಮೊದಲನೇ ಅಜ್ಞಾನವಾಗಿದೆ. ಆತ್ಮವಂತೂ ಜನನ-ಮರಣದಲ್ಲಿ ಬರುತ್ತದೆ, ಪರಮಾತ್ಮನು ಪುನರ್ಜನ್ಮದಲ್ಲಿ
ಬರುತ್ತಾರೆಯೇ? ತಂದೆಯು ತಿಳಿಸುತ್ತಾರೆ - ನೀವು ಭಾರತವಾಸಿಗಳು ಸ್ವರ್ಗವಾಸಿ, ಪೂಜ್ಯರಾಗಿದ್ದಿರಿ.
ಎಲ್ಲಾ ದೇವಿ-ದೇವತೆಗಳು ಮಾನವ ಸೃಷ್ಟಿಗೆ ಪೂಜ್ಯರಾಗಿದ್ದರು, ಇದೆಲ್ಲವೂ ಈಶ್ವರೀಯ ಪರಿವಾರವಾಗಿದೆ,
ಈಶ್ವರನು ರಚಯಿತನಾಗಿದ್ದಾರೆ. ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹಾಡುತ್ತಾರೆ ಅಂದಮೇಲೆ
ಇದು ಪರಿವಾರವಾಯಿತಲ್ಲವೆ. ಅಂದಾಗ ತಿಳಿಸಿ, ನೀವು ಮಾತಾಪಿತಾಎಂದು ಯಾರಿಗೆ ಹೇಳುತ್ತೀರಿ? ಇದನ್ನು
ಯಾರು ಹೇಳುತ್ತಾರೆ? ನೀವು ಮಾತಾಪಿತಾ, ನಿಮ್ಮ ಕೃಪೆಯಿಂದ ನಮಗೆ ಸ್ವರ್ಗದಲ್ಲಿ ಅಪಾರ ಸುಖ
ಸಿಕ್ಕಿತ್ತು ಎಂದು ಆತ್ಮವೇ ಹೇಳುತ್ತದೆ. ನೀವು ಮಾತಾಪಿತರು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತೀರಿ
ಆದ್ದರಿಂದ ನಾವು ನಿಮ್ಮ ಮಕ್ಕಳಾಗುತ್ತೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು
ಸಂಗಮದಲ್ಲಿಯೇ ಬಂದು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತೇನೆ. ಮನುಷ್ಯರ ಬುದ್ಧಿಯು
ಸಂಪೂರ್ಣ ಭ್ರಷ್ಟವಾಗಿ ಬಿಟ್ಟಿದೆ, ಸ್ವರ್ಗವನ್ನೇ ನರಕವೆಂದು ತಿಳಿದುಕೊಳ್ಳುತ್ತಾರೆ, ಅಲ್ಲಿಯೂ ಸಹ
ಕಂಸ, ಜರಾಸಂಧ, ಹಿರಣ್ಯ ಕಷ್ಯಪ ಮೊದಲಾದವರಿದ್ದರೆಂದು ಹೇಳುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ
- ಮಕ್ಕಳೇ ನೀವು ಮರೆತು ಹೋಗಿದ್ದೀರಾ? ಭಾರತದಲ್ಲಿಯೇ ನೀವು ನನ್ನ ಶಿವ ಜಯಂತಿಯನ್ನು ಆಚರಿಸುತ್ತೀರಿ,
ಶಿವ ರಾತ್ರಿಯೆಂದೂ ಗಾಯನವಿದೆ ಅಂದಾಗ ಯಾವ ರಾತ್ರಿ? ಇದು ಬ್ರಹ್ಮಾ ಬೇಹದ್ದಿನ ರಾತ್ರಿಯಾಗಿದೆ.
ತಂದೆಯು ಸಂಗಮದಲ್ಲಿ ಬಂದು ರಾತ್ರಿಯಿಂದ ದಿನ ಅರ್ಥಾತ್ ನರಕದಿಂದ ಸ್ವರ್ಗವನ್ನಾಗಿ ಮಾಡುತ್ತಾರೆ.
ಶಿವ ರಾತ್ರಿಯ ಅರ್ಥವು ಯಾರಿಗೂ ತಿಳಿದಿಲ್ಲ, ಭಗವಂತನು ನಿರಾಕಾರನಾಗಿದ್ದಾರೆ. ಮನುಷ್ಯರಿಗಾದರೆ
ಪ್ರತೀ ಜನ್ಮದಲ್ಲಿ ಶರೀರದ ಹೆಸರು ಬದಲಾಗುತ್ತದೆ. ಪರಮಾತ್ಮನು ಹೇಳುತ್ತಾರೆ - ನನಗೆ ಯಾವುದೇ
ಶರೀರದ ಹೆಸರಿಲ್ಲ, ನನ್ನ ಹೆಸರು ಶಿವನೆಂದೇ ಆಗಿದೆ, ನಾನು ಕೇವಲ ವೃದ್ಧ, ವಾನಪ್ರಸ್ಥ ತನುವಿನ
ಆಧಾರ ತೆಗೆದುಕೊಳ್ಳುತ್ತೇನೆ, ಇವರು ಪೂಜ್ಯರಾಗಿದ್ದರು, ಈಗ ಪೂಜಾರಿಯಾಗಿದ್ದಾರೆ. ಶಿವ ತಂದೆಯು
ಬಂದು ಸ್ವರ್ಗವನ್ನು ರಚಿಸುತ್ತಾರೆ, ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಅವಶ್ಯವಾಗಿ ನಾವು
ಸ್ವರ್ಗದ ಮಾಲೀಕರಾಗಬೇಕಲ್ಲವೆ. ಶಿವ ತಂದೆಯು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ.
ಬ್ರಹ್ಮಾ-ವಿಷ್ಣು-ಶಂಕರನದು ತಮ್ಮ ತಮ್ಮದೇ ಪಾತ್ರವಿದೆ. ಪ್ರತಿಯೊಂದು ಆತ್ಮನಲ್ಲಿ ತನ್ನ
ಸುಖ-ದುಃಖದ ಪಾತ್ರವು ನಿಗಧಿಯಾಗಿದೆ. ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಗೆ ನೀವು
ವಾರಸುಧಾರರಾಗಿದ್ದೀರಿ, ಶಿವ ತಂದೆಯು ಸ್ವರ್ಗವಾಸಿಗಳನ್ನಾಗಿ ಮಾಡಿದ್ದರು ಆದ್ದರಿಂದಲೇ ಅವರನ್ನು
ಎಲ್ಲರೂ ನೆನಪು ಮಾಡುತ್ತಾರೆ - ಓ ಭಗವಂತನೇ ದಯೆ ತೋರಿಸಿ ಎಂದು. ಸಾಧುಗಳೂ ಸಹ ಸಾಧನೆ ಮಾಡುತ್ತಾರೆ
ಏಕೆಂದರೆ ಇಲ್ಲಿ ದುಃಖವಿರುವುದರಿಂದ ನಿರ್ವಾಣ ಧಾಮಕ್ಕೆ ಹೋಗಲು ಬಯಸುತ್ತಾರೆ. ಆತ್ಮವು
ಪರಮಾತ್ಮನಲ್ಲಿ ಲೀನವಾಗುತ್ತದೆ ಅಥವಾ ನಾವಾತ್ಮರೇ ಪರಮಾತ್ಮನೆಂದು ತಿಳಿದುಕೊಳ್ಳುವುದು ತಪ್ಪಾಗಿದೆ.
ಈಗ ನೀವು ಹೇಳುತ್ತೀರಿ, ನಾವಾತ್ಮರು ಪರಮಧಾಮ ನಿವಾಸಿಗಳಾಗಿದ್ದೇವೆ, ನಂತರ ದೇವತಾ ಕುಲದಲ್ಲಿ
ಬರುತ್ತೇವೆ, 84 ಜನ್ಮಗಳಲ್ಲಿ ಬರುತ್ತೇವೆ, ನಾವಾತ್ಮರೇ ವರ್ಣಗಳಲ್ಲಿ ಬರುತ್ತೇವೆ. ಶಿವ ತಂದೆಯು
ಜನನ-ಮರಣದಲ್ಲಿ ಬರುವುದಿಲ್ಲ. ಕೇವಲ ನಾರಾಯಣನ ರಾಜಧಾನಿಯಿತ್ತು, ಹೇಗೆ ಕ್ರಿಶ್ಚಿಯನ್ನರ
ವಂಶಾವಳಿಯಲ್ಲಿ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್... ಹೀಗೆ ನಡೆಯುತ್ತದೆ. ಹಾಗೆಯೇ ಅಲ್ಲಿಯೂ ಸಹ
ಲಕ್ಷ್ಮೀ-ನಾರಾಯಣ ದಿ ಫಸ್ಟ್, ಸೆಕೆಂಡ್, ಥರ್ಡ್... ಹೀಗೆ 8 ಪೀಳಿಗೆಗಳು ನಡೆಯುತ್ತವೆ. ಈಗ ನೀವು
ಬ್ರಾಹ್ಮಣರ ಮೂರನೇ ನೇತ್ರವುತೆರೆದಿದೆ. ತಂದೆಯು ಕುಳಿತು ಆತ್ಮಗಳೊಂದಿಗೆ ಮಾತನಾಡುತ್ತಾರೆ - ನೀವು
84 ಜನ್ಮಗಳ ಚಕ್ರವನ್ನು ಸುತ್ತಿ ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದೀರಿ.
ವರ್ಣಗಳ ಒಂದು ಚಿತ್ರವನ್ನೂ ಮಾಡುತ್ತಾರೆ ಅದರಲ್ಲಿ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ,
ಬ್ರಾಹ್ಮಣರನ್ನು ತೋರಿಸುತ್ತಾರೆ. ಈಗ ನೀವು ತಿಳಿದುಕೋಂಡಿದ್ದೀರಿ - ನಾವು ಬ್ರಾಹ್ಮಣರು ಶಿಖೆಗೆ
ಸಮಾನರಾಗಿದ್ದೇವೆ, ಈ ಸಮಯದಲ್ಲಿ ನಾವು ಪ್ರತ್ಯಕ್ಷ ರೂಪದಲ್ಲಿ ಈಶ್ವರೀಯ ಸಂತಾನರಾಗಿದ್ದೇವೆ, ಈ
ಸಹಜ ರಾಜಯೋಗ ಮತ್ತು ಜ್ಞಾನದಿಂದ ನಮಗೆ ಅಪಾರ ಸುಖ ಸಿಗುತ್ತದೆ. ಕೆಲವರು ಸೂರ್ಯವಂಶಿ ರಾಜಧಾನಿಯ
ಆಸ್ತಿ, ಇನ್ನೂ ಕೆಲವರು ಚಂದ್ರವಂಶಿ ರಾಜಧಾನಿಯ ಆಸ್ತಿಯನ್ನು ಪಡೆಯುತ್ತಾರೆ. ಇಡೀ ರಾಜಧಾನಿಯು
ಸ್ಥಾಪನೆಯಾಗುತ್ತಿದೆ, ಪ್ರತಿಯೊಬ್ಬರೂ ತಮ್ಮ ಪುರುಷಾರ್ಥದಿಂದ ಆ ಪದವಿಯನ್ನು ಪಡೆಯುತ್ತಾರೆ. ಈಗ
ಓದುತ್ತಾ-ಓದುತ್ತಾ ನಾವು ಶರೀರ ಬಿಟ್ಟರೆ ಏನು ಪದವಿ ಸಿಗುವುದೆಂದು ಯಾರಾದರೂ ಒಂದುವೇಳೆ ಕೇಳಿದರೆ
ತಂದೆಯು ತಿಳಿಸಬಲ್ಲರು. ಯೋಗದಿಂದಲೇ ಆಯಸ್ಸು ವೃದ್ಧಿಯಾಗುತ್ತದೆ, ವಿಕರ್ಮಗಳು ವಿನಾಶವಾಗುತ್ತದೆ,
ಪತಿತರಿಂದ ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ಎಂದು ಹೇಳುತ್ತಿದ್ದಂತೆಯೇ ಭಗವಂತನ
ನೆನಪು ಬರುತ್ತದೆ ಆದರೆ ಭಗವಂತ ಯಾರೆಂದು ತಿಳಿದುಕೊಂಡಿಲ್ಲ. ತಂದೆಯು ಹೇಳುತ್ತಾರೆ - ನಾನು
ಭಾರತದಲ್ಲಿಯೇ ಬರುತ್ತೇನೆ, ಇದು ನನ್ನ ಜನ್ಮ ಸ್ಥಾನವಾಗಿದೆ. ಸೋಮನಾಥ ಮಂದಿರವು ಎಷ್ಟು
ಸುಂದರವಾಗಿದೆ! ಇದನ್ನು ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಭಕ್ತಿ ಮಾರ್ಗದಲ್ಲಿ
ನೆನಪಾರ್ಥವಾಗಲು ಆರಂಭವಾಗುತ್ತದೆ. ಪೂಜಾರಿಗಳಾದಾಗ ಮೊಟ್ಟ ಮೊದಲಿಗೆ ಸೋಮನಾಥ ಮಂದಿರವನ್ನು
ಕಟ್ಟಿಸುತ್ತಾರೆ. ಭಾರತವು ಸತ್ಯ-ತ್ರೇತಾಯುಗದಲ್ಲಿ ಬಹಳ ಸಾಹುಕಾರನಾಗಿತ್ತು, ಮಂದಿರಗಳಲ್ಲಿಯೂ
ಅಪಾರ ಧನವಿತ್ತು, ಭಾರತವು ವಜ್ರ ಸಮಾನವಾಗಿತ್ತು, ಈಗಂತೂ ಭಾರತವು ಕಂಗಾಲ ಕವಡೆಯ ಸಮಾನವಾಗಿದೆ.
ಮತ್ತೆ ತಂದೆಯು ಬಂದು ಭಾರತವನ್ನು ವಜ್ರ ಸಮಾನವನ್ನಾಗಿ ಮಾಡುತ್ತಾರೆ. ರಚಯಿತ ಯಾರೆಂದು
ಯಾರೊಂದಿಗಾದರೂ ಕೇಳಿರಿ ಅವರು ಪರಮಾತ್ಮನೆಂದು ಹೇಳುತ್ತಾರೆ. ಅವರು ಎಲ್ಲಿದ್ದಾರೆ ಎಂದರೆ
ಸರ್ವವ್ಯಾಪಿ ಆಗಿದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಇಡೀ ವೃಕ್ಷವೇ ಜಡ
ಜಡೀಭೂತ ಸ್ಥಿತಿಯನ್ನು ತಲುಪಿದೆ.
ತಮ್ಮನ್ನು ನೋಡಿಕೊಳ್ಳಿ
- ನಾನು ಮಮ್ಮಾ-ಬಾಬಾರವರ ಸಿಂಹಾಸನಕ್ಕೆ ಅಧಿಕಾರಿಯಾಗಲು ಯೋಗ್ಯನಾಗಿದ್ದೇನೆಯೇ? ಇದರಲ್ಲಿ
ಪವಿತ್ರತೆಯು ಮುಖ್ಯವಾಗಿದೆ, ಈಗಂತೂ ಆರೋಗ್ಯವೂ ಇಲ್ಲ, ಐಶ್ವರ್ಯವೂ ಇಲ್ಲ, ಸಂತೋಷವೂ ಇಲ್ಲ. ಇದು
ಮೃಗತೃಷ್ಣ ಸಮಾನ ರಾಜ್ಯವಾಗಿದೆ. ಇದರ ಮೇಲೆ ದುರ್ಯೋಧನನ ಕಥೆಯನ್ನು ಶಾಸ್ತ್ರಗಳಲ್ಲಿ ಬರೆದಿದ್ದಾರೆ.
ವಿಕಾರಿಗೆ ದುರ್ಯೋಧನನೆಂದು ಹೇಳಲಾಗುತ್ತದೆ. ನಮ್ಮನ್ನು ರಕ್ಷಣೆ ಮಾಡಿಎಂದು ದ್ರೌಪದಿಯರು
ಹೇಳುತ್ತಾರೆ, ಎಲ್ಲರೂ ದ್ರೌಪದಿಯರಲ್ಲವೆ. ಈ ಕನ್ಯೆಯರು ಸ್ವರ್ಗದ ದ್ವಾರವಾಗಿದ್ದಾರೆ, ತಂದೆಯು
ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಯಾರ ಬುದ್ಧಿಯೋಗವು ಪೂರ್ಣ ಜೋಡಿಸಲ್ಪಟ್ಟಿರುವುದೊ ಅವರಿಗೆ
ಧಾರಣೆಯೂ ಆಗುವುದು. ಜ್ಞಾನವನ್ನು ಬ್ರಹ್ಮಚರ್ಯದಲ್ಲಿಯೇ ಓದಲಾಗುತ್ತದೆ. ತಂದೆಯು ಹೇಳುತ್ತಾರೆ –
ಗೃಹಸ್ಥ ವ್ಯವಹಾರದಲ್ಲಿತ್ತಾ ಕಮಲ ಪುಷ್ಪ ಸಮಾನರಾಗಬೇಕಾಗಿದೆ, ಎರಡೂ ಕಡೆ ನಿಭಾಯಿಸಬೇಕಾಗಿದೆ.
ಸಾಯುವುದಂತೂ ಖಂಡಿತ, ಸಾಯುವ ಸಮಯದಲ್ಲಿ ಮನುಷ್ಯರಿಗೆ ಮಂತ್ರವನ್ನು ಕೊಡುತ್ತಾರೆ. ತಂದೆಯು
ಹೇಳುತ್ತಾರೆ - ನೀವೆಲ್ಲರೂ ಶರೀರ ಬಿಡುವವರಾಗಿದ್ದೀರಿ, ನಾನು ಕಾಲರ ಕಾಲ ಮಹಾಕಾಲನು ಮರಳಿ
ಕರೆದುಕೊಂಡು ಹೋಗುವವನಾಗಿದ್ದೇನೆ ಅಂದಮೇಲೆ ಖುಷಿಯಾಗಬೇಕಲ್ಲವೆ. ಯಾರು ಚೆನ್ನಾಗಿ ಓದುವರೋ ಅವರು
ಸ್ವರ್ಗದ ಮಾಲೀಕರಾಗುತ್ತಾರೆ, ಓದಲಿಲ್ಲವೆಂದರೆ ಪ್ರಜಾ ಪದವಿಯನ್ನು ಪಡೆಯುತ್ತಾರೆ. ನೀವಿಲ್ಲಿ
ರಾಜ್ಯ ಪದವಿಯನ್ನು ಪಡೆಯಲು ಬಂದಿದ್ದೀರಿ, ಇದು ವಿದ್ಯೆಯಾಗಿದೆ, ಇದರಲ್ಲಿ ಅಂಧಶ್ರದ್ಧೆಯ ಮಾತಿಲ್ಲ.
ರಾಜ್ಯಭಾಗ್ಯಕ್ಕಾಗಿ ಈ ವಿದ್ಯೆಯಿದೆ. ಹೇಗೆ ವಿದ್ಯೆಯ ಗುರಿ-ಧ್ಯೇಯವಿರುತ್ತದೆ -
ವಕೀಲರಾಗುತ್ತಾರೆಂದರೆ ಅವಶ್ಯವಾಗಿ ಓದಿಸುವ ಶಿಕ್ಷಕರೊಂದಿಗೆ ಯೋಗವನ್ನು ಇಡಬೇಕಾಗುತ್ತದೆ, ಇಲ್ಲಿ
ನಿಮಗೆ ಭಗವಂತನೇ ಓದಿಸುತ್ತಾರೆ ಅಂದಮೇಲೆ ಅವರೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. ತಂದೆಯು
ಹೇಳುತ್ತಾರೆ - ಮಕ್ಕಳೇ, ನಾನು ಪರಮಧಾಮ ಬಹಳ ದೂರದಿಂದ ಬರುತ್ತೇನೆ, ಪರಮಧಾಮವು ಎಷ್ಟು
ಉನ್ನತವಾಗಿದೆ. ಸೂಕ್ಷ್ಮವತನಕ್ಕಿಂತಲೂ ಮೇಲೆ ಅಲ್ಲಿಂದ ಬರುವುದರಿಂದ ನನಗೆ ಒಂದು ಸೆಕೆಂಡ್ ಸಾಕು.
ನನಗಿಂತಲೂ ತೀಕ್ಷ್ಣ ಮತ್ತ್ಯಾರೂ ಇರಲು ಸಾಧ್ಯವಿಲ್ಲ, ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು
ಕೊಡುತ್ತೇನೆ. ಜನಕನ ಉದಾಹರಣೆಯಿದೆಯಲ್ಲವೆ. ಈಗಂತೂ ನರಕ, ಹಳೆಯ ಪ್ರಪಂಚವಾಗಿದೆ, ಸ್ವರ್ಗಕ್ಕೆ ಹೊಸ
ಪ್ರಪಂಚವೆಂದು ಹೇಳಲಾಗುತ್ತದೆ. ತಂದೆಯು ನರಕದ ವಿನಾಶ ಮಾಡಿಸಿ ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತಾರೆ, ಉಳಿದೆಲ್ಲಾ ಆತ್ಮರು ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಆತ್ಮವು ಅವಿನಾಶಿಯಾಗಿದೆ,
ಅದಕ್ಕೆ ಅವಿನಾಶಿ ಪಾತ್ರವು ಸಿಕ್ಕಿದೆ ಅಂದಮೇಲೆ ಆತ್ಮವು ಚಿಕ್ಕದು-ದೊಡ್ಡದಾಗಲು ಹೇಗೆ ಸಾಧ್ಯ!
ಅಥವಾ ಅದು ಸುಡಲು ಹೇಗೆ ಸಾಧ್ಯ? ನಕ್ಷತ್ರ ಮಾದರಿಯಾಗಿದೆ. ಗಾತ್ರದಲ್ಲಿ ಚಿಕ್ಕದು-ದೊಡ್ಡದಾಗಲು
ಸಾಧ್ಯವಿಲ್ಲ, ನೀವೀಗ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ, ಪರಮಾತ್ಮ ಜ್ಞಾನ ಸಾಗರ ಆನಂದ
ಸಾಗರನಾಗಿದ್ದಾರೆ, ಅವರು ನಿಮಗೆ ಓದಿಸುತ್ತಿದ್ದಾರೆ. ಈ ವಿದ್ಯೆಯಿಂದ ನಾವೇ
ದೇವಿ-ದೇವತೆಗಳಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ನೀವು ಭಾರತದ ಸೇವೆ ಮಾಡುತ್ತಿದ್ದೀರಿ.
ಮೊಟ್ಟ ಮೊದಲಿಗೆ ಈ ತಂದೆಗೆ ಮಕ್ಕಳಾಗಬೇಕಾಗಿದೆ, ಅನ್ಯ ಸ್ಥಳಗಳಲ್ಲಂತೂ ಗುರುವಿನ ಬಳಿ ಹೋಗುತ್ತಾರೆ,
ಅವರಿಗೆ ಶಿಷ್ಯರಾಗುತ್ತಾರೆ ಅಥವಾ ಅವರನ್ನು ತಮ್ಮ ಗುರುವನ್ನಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿ ಇವರು
ತಂದೆಯಾಗಿದ್ದಾರೆ, ಅಂದಮೇಲೆ ಮೊದಲು ತಂದೆಗೆ ಮಗುವಾಗಬೇಕಾಗಿದೆ. ತಂದೆಯು ಮಕ್ಕಳಿಗೆ ತಮ್ಮ
ಆಸ್ತಿಯನ್ನು ಕೊಡುತ್ತಾರೆ, ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ನಿಮ್ಮ ಬಳಿ ಇರುವುದೆಲ್ಲವನ್ನೂ
ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಹಳೆಯದೆಲ್ಲವೂ ನನ್ನದು, ನನ್ನದೆಲ್ಲವೂ ನಿಮ್ಮದು. ದೇಹ ಸಹಿತವಾಗಿ
ಏನೆಲ್ಲವೂ ಇದೆಯೋ ಅದನ್ನು ನನಗೆ ಕೊಟ್ಟು ಬಿಡಿ. ನಾನು ನಿಮ್ಮಆತ್ಮ ಮತ್ತು ಶರೀರವೆರಡನ್ನೂ
ಪವಿತ್ರವನ್ನಾಗಿ ಮಾಡುತ್ತೇನೆ, ಮತ್ತು ರಾಜ್ಯ ಪದವಿಯನ್ನೂ ಕೊಡುತ್ತೇನೆ. ನಿಮ್ಮ ಬಳಿ ಏನೆಲ್ಲವೂ
ಇದೆಯೋ ಅದನ್ನು ಬಲಿದಾನವಾಗಿ ಕೊಟ್ಟು ಬಿಡಿ ಆಗ ಜೀವನ್ಮುಕ್ತಿ ಸಿಗುವುದು - ಬಾಬಾ, ಇದೆಲ್ಲವೂ
ತಮ್ಮದಾಗಿದೆ ಎಂದು. ನನ್ನನ್ನು ನಿಮ್ಮ ವಾರಸುಧಾರನನ್ನಾಗಿ ಮಾಡಿಕೊಳ್ಳಿ, ನಾನು ನಿಮಗೆ 21
ಜನ್ಮಗಳವರೆಗೆ ವಾರಸುಧಾರನಾಗುತ್ತೇನೆ, ಕೇವಲ ನನ್ನ ಮತದಂತೆ ನಡೆಯಿರಿ, ಭಲೆ
ಉದ್ಯೋಗ-ವ್ಯವಹಾರಗಳನ್ನೂ ಮಾಡಿ, ವಿದೇಶಕ್ಕೂ ಹೋಗಿ ಏನಾದರೂ ಮಾಡಿ. ಕೇವಲ ನನ್ನ ಮತದಂತೆ ನಡೆಯಿರಿ.
ಮಾಯೆಯು ಪದೇ-ಪದೇ ಹಿಂದೆ ಬೀಳುತ್ತದೆ, ಇದರಲ್ಲಿ ಎಚ್ಚರಿಕೆಯಿಂದಿರಿ, ಇದರಲ್ಲಿ ಯಾವುದೇ ವಿಕರ್ಮ
ಮಾಡಬೇಡಿ. ಶ್ರೀಮತದಂತೆ ನಡೆದಾಗಲೇ ಶ್ರೇಷ್ಠರಾಗುವಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಆತ್ಮ ಮತ್ತು
ಶರೀರ ಎರಡನ್ನೂ ಪಾವನ ಮಾಡಿಕೊಳ್ಳಲು ದೇಹ ಸಹಿತವಾಗಿ ಏನೆಲ್ಲವೂ ಇದೆಯೋ ಎಲ್ಲವನ್ನೂ ತಂದೆಗೆ ಅರ್ಪಣೆ
ಮಾಡಿ ಅವರ ಶ್ರೀಮತದಂತೆ ನಡೆಯಬೇಕಾಗಿದೆ.
2. ಮಾತಾಪಿತರ
ಸಿಂಹಾಸನಕ್ಕೆ ಅಧಿಕಾರಿಗಳಾಗಲು ಸ್ವಯಂನ್ನು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ.
ಯೋಗ್ಯರಾಗುವುದಕ್ಕಾಗಿ ಮುಖ್ಯವಾಗಿ ಪವಿತ್ರತೆಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.
ವರದಾನ:
ಸಂಗಮ ಯುಗದಲ್ಲಿ
ಅತೀಂದ್ರಿಯ ಸುಖದ ಅನುಭವ ಮಾಡುವಂತಹ ಡಬಲ್ ಪ್ರಾಪ್ತಿಯ ಅಧಿಕಾರಿ ಭವ.
ಯಾವ ಮಕ್ಕಳು
ಸಂಗಮಯುಗದಲ್ಲಿ ಅತೀಂದ್ರಿಯ ಸುಖದ ಅನುಭವ ಮಾಡುತ್ತಾರೆಯೋ ಅವರಿಗೆ ಸದಾ ಶಾಂತಿ ಹಾಗೂ ಖುಷಿಯ ಡಬಲ್
ಪ್ರಾಪ್ತಿಯ ನಶೆಯಿರುತ್ತದೆ. ಏಕೆಂದರೆ ಇವೆರಡು ಪ್ರಾಪ್ತಿಗಳು ಅತೀಂದ್ರಿಯ ಸುಖದಲ್ಲಿ
ಸಮಾವೇಶವಾಗಿದೆ. ಈಗ ತಾವು ಮಕ್ಕಳಿಗೇನು ತಂದೆ ಹಾಗೂ ಆಸ್ತಿಯ ಪ್ರಾಪ್ತಿಯಾಗಿದೆಯೋ, ಇದು ಇಡೀ
ಕಲ್ಪದಲ್ಲಿ ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಈ ಸಮಯದ ಪ್ರಾಪ್ತಿಯು ಅತೀಂದ್ರಿಯ ಸುಖ ಹಾಗೂ ಜ್ಞಾನವೂ
ಸಹ ಮತ್ತೆಂದಿಗೂ ಸಿಗಲು ಸಾಧ್ಯವಿಲ್ಲ. ಅಂದಮೇಲೆ ಈ ಡಬಲ್ ಪ್ರಾಪ್ತಿಯ ಅಧಿಕಾರಿಯಾಗಿರಿ.
ಸ್ಲೋಗನ್:
ಒಬ್ಬರಿನ್ನೊಬ್ಬರ ಸಂಸ್ಕಾರಗಳನ್ನು ತಿಳಿದುಕೊಂಡಿದ್ದರೂ, ಅವರೊಂದಿಗೆ ಮಿಲನಸಾರವಾಗಿ ನಡೆಯುವುದೇ
ಉನ್ನತಿಯ ಸಾಧನವಾಗಿದೆ.
ಮಾತೇಶ್ವರಿಯವರ ಅಮೂಲ್ಯ
ಮಹಾವಾಕ್ಯಗಳು:- “ಸತ್ಯ ಸಾಮ್ರಾಟ ತಂದೆಯೊಂದಿಗೆ ಸತ್ಯವಾಗಿರಿ”.
ತಮಗೆ ಇದೇ ಸಮಯದಲ್ಲಿ
ಪರಮಾತ್ಮನ ಮೂಲಕ ಈ ಆದೇಶವು ಸಿಕ್ಕಿರುತ್ತದೆ - ನಿರಂತರವಾಗಿ ನನ್ನ ನೆನಪಿನಲ್ಲಿರಿ. ಯೋಗದ
ಪರಿಭಾಷೆಯಾಗಿದೆ - ಈಶ್ವರೀಯ ನೆನಪಿನಲ್ಲಿರುವುದು. ಯೋಗವೆಂದರೆ ಧ್ಯಾನವಲ್ಲ. ನಮ್ಮ ಈ ಸಹಜ ಯೋಗವು,
ನಡೆಯುತ್ತಾ-ಸುತ್ತಾಡುತ್ತಾ, ಕೆಲಸ ಕಾರ್ಯಗಳನ್ನು ಮಾಡುತ್ತಿರುವಾಗಲೂ ಅವರ ನೆನಪಿನಲ್ಲಿರುವುದು -
ಇದನ್ನೇ ಅಟೂಟ ಅಖಂಡ ಯೋಗವೆಂದು ಹೇಳಲಾಗುತ್ತದೆ. ಆದರೆ ಇದರಲ್ಲಿ ನಿರಂತರವಾಗಿ ಇರುವ ಅಭ್ಯಾಸದ
ಅವಶ್ಯಕತೆಯಿದೆ. ಒಂದುವೇಳೆ ಅವರ ಆದೇಶದಲ್ಲಿ ಆದೇಶ ಪಾಲಕರು ಆಗಿರುವುದಿಲ್ಲ ಅಥವಾ ಯಾವುದಾದರೂ
ಆಜ್ಞೆಯ ಉಲ್ಲಂಘನೆ ಮಾಡಿದರೆ ಅವಶ್ಯವಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಅವರ ಆದೇಶವಿದೆ -
ನಾನು ಎಂತಹ ಕರ್ಮವನ್ನು ಮಾಡುವೆನೋ, ನನ್ನನ್ನು ನೋಡಿ ನೀವೂ ಪ್ರತಿ ಹೆಜ್ಜೆಯನ್ನು ಹಾಕಿರಿ,
ಇಲ್ಲದಿದ್ದರೆ ಮಾಯೆಯ ಪೆಟ್ಟನ್ನು ಅನುಭವಿಸುವಿರಿ. ಸತ್ಯ ಸಾಮ್ರಾಟನೊಂದಿಗೆ ಸತ್ಯವಾಗಿರಿ, ಮಾಯೆಯ
ಯಾವುದೇ ವಿಘ್ನಗಳು ಸತಾಯಿಸುತ್ತದೆಯೆಂದರೆ, ಅದನ್ನೂ ಇವರ ಮುಂದೆ ಇಡಬೇಕಾಗಿದೆ. ಅವರ ಸಹಯೋಗದಿಂದ ಆ
ಮಾಯೆಯೂ ದೂರವಾಗಿ ಬಿಡುತ್ತದೆ ಮತ್ತು ಮಾರ್ಗವೂ ಸ್ಪಷ್ಟವಾಗಿ ಬಿಡುತ್ತದೆ. ಆನಂತರ ಎಲ್ಲಿ
ಕೂರಿಸುತ್ತಾರೆ, ಹೇಗೆ ನಡೆಸುತ್ತಾರೆಯೋ, ಏನು ತಿನ್ನಿಸುವರು.... ಅದರ ಮಾರ್ಗಗಳು ಸ್ಪಷ್ಟವಾಗಿ
ಬಿಡುತ್ತದೆ. ಈ ರೀತಿ ಜೊತೆ ಕೊಡುವ ಸಾಹಸವು ಬಹಳಷ್ಟಿರಬೇಕು. ಇಂತಹ ಮಹಾನ್ ಸೌಭಾಗ್ಯಶಾಲಿಗಳಂತು
ಬಹಳ ಸ್ವಲ್ಪವೇ ಹೊರ ಬರುತ್ತಾರೆ, ಅವರೇ ವಿಜಯ ಮಾಲೆಯಲ್ಲಿ ಹೋಗುವರು. ಉಳಿದವರು
ಭಾಗ್ಯಶಾಲಿಯಾಗಿದ್ದಾರೆ, ಅವರು ಅಲ್ಪ ಸ್ವಲ್ಪ ತೆಗೆದುಕೊಂಡು ಹೋಗಿ ಪ್ರಜೆಗಳಾಗುವರು. ಅಂದಾಗ
ಸ್ವಲ್ಪದರಲ್ಲಿಯೇ ಖುಷಿಯಾಗಬಾರದು, ತಮ್ಮ ಇಚ್ಛೆಯಂತು ಸಂಪೂರ್ಣವಾಗುವುದರಲ್ಲಿ ಇರಲಿ, ಇದರಲ್ಲಿಯೇ
ಮುಂದುವರೆಯಬೇಕು ಎನ್ನುವ ಸಾಹಸವನ್ನಿಡಿ. ಇದರಲ್ಲಿ ಮಾಯೆಯು ವಿಘ್ನಗಳನ್ನು ಹಾಕುತ್ತದೆ ಆದರೆ ಅದರ
ಮೇಲೆ ವಿಜಯವನ್ನು ಸಾಧಿಸಬೇಕಾಗಿದೆ, ಇದರಲ್ಲೇನಾದರೂ ತಪ್ಪಾಯಿತೆಂದರೆ ನಿಶ್ಚಯದ ಕೊರತೆ, ತಮ್ಮ
ಧಾರಣೆಗಳಲ್ಲಿ ಕೊರತೆಯಿದೆ ಎಂದರ್ಥ. ಇದಂತು ತಮ್ಮ ಪ್ರತಿಜ್ಞೆಯಾಗಿದೆ, ಇದರಲ್ಲಿ ಲೋಕ ಮರ್ಯಾದೆ,
ಕುಲ-ಮರ್ಯಾದೆಯನ್ನು ಮುರಿಯಬೇಕಾಗುತ್ತದೆ, ಯಾವಾಗ ಈ ರೀತಿ ಮಾಡುವಿರೋ ಆಗಲೇ ಸತ್ಯ ಪಾರಲೌಕಿಕ ದೈವೀ
ಮರ್ಯಾದೆಗಳನ್ನು ಪಡೆದುಕೊಳ್ಳುವಿರಿ. ಈಗ ಈ ವಿಕಾರಿ ಪ್ರಪಂಚವಂತು ಹೊರಟು ಹೋಗುವುದಿದೆ, ಉದಾ: ಮೀರಾ
ಭಾಯಿಯೂ ಸಹ ಲೋಕ-ಮರ್ಯಾದೆಯನ್ನು ಮುರಿದು ಬಿಟ್ಟಳು, ಅದರಿಂದಲೇ ಗಿರಿಧರನನ್ನು ಪಡೆದಳು. ಒಂದುವೇಳೆ
ಅದೇ ಲೋಕ-ಮರ್ಯಾದೆಗಳನ್ನು ಇಟ್ಟುಕೊಳ್ಳುತ್ತೀರೆಂದರೆ, ಈ ದೈವೀ ಪ್ರಪಂಚದವರಂತೆ ತಯಾರಾಗಲು
ಸಾಧ್ಯವಿಲ್ಲ. ಈಗ ಈಶ್ವರೀಯ ಸಲಹೆಯನ್ನು ಕಲ್ಯಾಣಾರ್ಥವಾಗಿ ಕೊಡಲಾಗುತ್ತದೆ, ಆದರೆ ಈಗ ಏನು ಮಾಡಬೇಕು,
ಯಾವುದು ಅವಶ್ಯಕವಿದೆ ಎನ್ನುವುದರ ಬಗ್ಗೆ ಬುದ್ಧಿಯಿಂದ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.
ಅವ್ಯಕ್ತ ಸೂಚನೆಗಳು:-
ಸದಾ ಹರ್ಷಿತರಾಗಿರಲು ತಮ್ಮ ಸ್ವಭಾವವನ್ನು ಸರಳ ಮಾಡಿಕೊಳ್ಳಿರಿ, ಸಹನಶೀಲರಾಗಿರಿ.
ಯಾರು
ಸರಳಚಿತ್ತರಾಗಿರುತ್ತಾರೆ ಅವರೇ ಸದಾ ಹರ್ಷಿತರಾಗಿರುತ್ತಾರೆ. ಹರ್ಷಿತ ಚಿತ್ತರಂತು ಎಲ್ಲರನ್ನು
ಆಕರ್ಷಿತರನ್ನಾಗಿ ಮಾಡುತ್ತಾರೆ. ಹರ್ಷಿತತೆಯ ಅರ್ಥವೇ ಆಗಿದೆ ಅತೀಂದ್ರಿಯ ಸುಖದಲ್ಲಿ ತೂಗಡುವುದು.
ಜ್ಞಾನದ ಸ್ಮರಣೆ ಮಾಡುತ್ತಾ, ಅವ್ಯಕ್ತ ಸ್ಥಿತಿಯ ಅನುಭವ ಮಾಡುತ್ತ್ತಾ ಅತೀಂದ್ರಿಯ ಸುಖದಲ್ಲಿ
ತೂಗುವುದು, ಇದಕ್ಕೆ ಹರ್ಷಿತವೆಂದು ಹೇಳಲಾಗುತ್ತದೆ. ಇದಕ್ಕಾಗಿ ಸಾಕ್ಷಿತನದ ಆಸನದ ಮೇಲೆ ಸೆಟ್ ಆಗಿ
ಮಾಯೆ ಮತ್ತು ಪ್ರಕೃತಿಯ ಬೊಂಬೆ ಪ್ರದರ್ಶನದ ರೂಪದಿಂದ ನೋಡಿರಿ.