09.08.26    Avyakt Bapdada     Kannada Murli    02.03.2011     Om Shanti     Madhuban


“ಈ ಬರ್ಥ್ ಡೇಯಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಉಮ್ಮಂಗ-ಉತ್ಸಾಹ ಕೊಡುತ್ತಾ, ಸಹಯೋಗಿಯಾಗುತ್ತಾ ವ್ಯರ್ಥ ಸಂಕಲ್ಪದ ಎಕ್ಕದ ಹೂವನ್ನು ಅರ್ಪಣೆ ಮಾಡಿ, ಮಾ|| ಸರ್ವಶಕ್ತಿವಂತನ ಸ್ವಮಾನದ ಸೀಟ್ನ ಮೇಲಿದ್ದು ಇದರಲ್ಲಿ ನಂಬರ್ವನ್ನ ಬಹುಮಾನವನ್ನು ತೆಗೆದುಕೊಳ್ಳಿ”


ಇಂದು ತಾವೆಲ್ಲರೂ ಮತ್ತು ಜೊತೆಯಲ್ಲಿ ನಾಲ್ಕೂ ಕಡೆಯ ಸರ್ವ ಮಕ್ಕಳು ಅಮೃತವೇಳೆಯಿಂದ ಹಿಡಿದು ತನ್ನ ಬಹಳ ಸ್ನೇಹ ತುಂಬಿದ ತನ್ನ ಪ್ರೇಮ ಮತ್ತು ಖುಷಿಯ ಶುಭಾಷಯಗಳನ್ನು ಕೊಡುತ್ತಿದ್ದರು. ಅಂದಾಗ ತಂದೆಯೂ ಸಹ ತಾವೆಲ್ಲಾ ಅಗಲಿ ಮರಳಿ ಸಿಕ್ಕಿರುವ ಮಕ್ಕಳಿಗೆ ಈ ಜಯಂತಿಯ ಶುಭಾಷಯಗಳನ್ನು ಕೊಡುವುದಕ್ಕಾಗಿ ಬಂದಿದ್ದಾರೆ. ತಂದೆಗಾಗಿ ಒಂದೊಂದು ಮಗುವೂ ಅತಿ ಪ್ರಿಯ ಹೃದಯ ಪ್ರಿಯರಾಗಿದ್ದಾರೆ ಅಂದಮೇಲೆ ಬಾಪ್ದಾದಾರವರು ತನ್ನ ಬಾಹುಗಳ ಮಾಲೆಯಿಂದ ತಮ್ಮೆಲ್ಲರಿಗೂ ಶುಭಾಷಯಗಳನ್ನು ಕೊಡುತ್ತಿದ್ದಾರೆ.

ಬಾಪ್ದಾದಾ ನೋಡುತ್ತಿದ್ದಾರೆ - ತಾವಂತು ಸನ್ಮುಖದಲ್ಲಿ ಶುಭಾಷಯಗಳನ್ನೂ ಕೊಡುತ್ತಿದ್ದೀರಿ, ತೆಗೆದುಕೊಳ್ಳುತ್ತಲೂ ಇದ್ದೀರಿ. ಆದರೆ ನಾಲ್ಕೂ ಕಡೆಯ ಮಕ್ಕಳು ಕೆಲ ಸ್ಥಾನಗಳಲ್ಲಿ ಶುಭಾಷಯಗಳನ್ನು ಕೊಡುತ್ತಿದ್ದಾರೆ ಮತ್ತು ತಂದೆಯೂ ಸಹ ದೇಶ-ವಿದೇಶದ ಎಲ್ಲಾ ಕಡೆಯ ಮಕ್ಕಳಿಗೆ ಅತಿ ಸ್ನೇಹಪೂರ್ವಕವಾದ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಬಾಪ್ದಾದಾರವರು ನೋಡುತ್ತಿದ್ದಾರೆ - ಪ್ರತಿಯೊಂದು ಮಗು ಖುಷಿಯ ಚಹರೆಯಿಂದ ಪ್ರೀತಿಯ ಸಾಗರದಲ್ಲಿ ತೇಲುತ್ತಿದ್ದಾರೆ. ತಂದೆಗೂ ಖುಷಿಯಿದೆ - ಒಂಟಿಯಾಗಿ ತಂದೆಯು ಬರುವುದಿಲ್ಲ, ಮಕ್ಕಳ ಜೊತೆಯಲ್ಲಿಯೇ ಬರುತ್ತಾರೆ ಏಕೆಂದರೆ ತಂದೆಯು ಬರುವುದೇ ಯಜ್ಞ ರಚನೆ ಮಾಡುವುದಕ್ಕಾಗಿ ಅಂದಮೇಲೆ ಯಜ್ಞದಲ್ಲಿ ಯಾರಿರುತ್ತಾರೆ? ಬ್ರಾಹ್ಮಣರು. ಆದ್ದರಿಂದ ತಂದೆಯು ಒಂಟಿಯಾಗಿ ಬರುವುದಿಲ್ಲ ಆದರೆ ಜೊತೆಯಲ್ಲಿ ಮಕ್ಕಳೂ ಬರುತ್ತಾರೆ ಏಕೆಂದರೆ ಇದೇ ಜಯಂತಿ ಎಲ್ಲಾ ಜಯಂತಿಗಳಿಗಿಂತಲೂ ಅದ್ಭುತವಾಗಿದೆ. ಇಡೀ ಕಲ್ಪದಲ್ಲಿ ಇದೊಂದೇ ಜಯಂತಿಯಾಗಿದೆ ಯಾವುದರಲ್ಲಿ ತಂದೆ ಮತ್ತು ಮಕ್ಕಳದು ಜೊತೆಯಲ್ಲಿ ಜನ್ಮವಾಗುತ್ತದೆ ಆದ್ದರಿಂದ ಈ ಜಯಂತಿಯನ್ನು ಹೇಳಲಾಗುತ್ತದೆ – ವಜ್ರ ಸಮಾನ ಜಯಂತಿ ಎಂದು. ತಂದೆಯೂ ಸಹ ವಿಶೇಷ ಆದಿ ರತ್ನ ಮಕ್ಕಳಿಗೆ ವಿಶೇಷ ಶುಭಾಷಯಗಳನ್ನು ಕೊಡುತ್ತಿದ್ದಾರೆ ಅಂದಾಗ ತಾವೆಲ್ಲರೂ ಇಂದು ಶುಭಾಷಯಗಳನ್ನು ಕೊಡುವುದಕ್ಕಾಗಿ ಬಂದಿದ್ದೀರಿ ಹಾಗೂ ತೆಗೆದುಕೊಳ್ಳಲೂ ಬಂದಿದ್ದೀರಿ. ತಂದೆಯು ಹೇಳುವುದು ಇದೇ ಆಗಿದೆ - ಜೊತೆಯಿರುತ್ತೇವೆ, ಜೊತೆಯಲ್ಲಿ ಹಾರುತ್ತೇವೆ, ಜೊತೆಯಲ್ಲಿ ಬರುತ್ತೇವೆ ಮತ್ತು ಬ್ರಹ್ಮಾ ತಂದೆಯ ಜೊತೆ ರಾಜ್ಯ ಮಾಡುತ್ತೇವೆ. ಜೊತೆಯಲ್ಲಿರುವ ಪ್ರತಿಜ್ಞೆಯಿದೆ. ತಾವೂ ಸಹ ಏನು ಹೇಳುತ್ತೀರಿ? ನಾವೂ ಸಹ ಎಲ್ಲಿ ತಂದೆಯೋ ಅಲ್ಲಿ ಜೊತೆಜೊತೆಯಲ್ಲಿರುತ್ತೇವೆ. ಇದಾಗಿದೆ- ತಂದೆಯೊಂದಿಗೆ ಮಕ್ಕಳದು, ಮಕ್ಕಳೊಂದಿಗೆ ತಂದೆಯ ಪ್ರತಿಜ್ಞೆಯಾಗಿದೆ. ಶರೀರದ ಮೂಲಕ ಎಲ್ಲಿಯೇ ಇರಬಹುದು ಆದರೆ ಹೃದಯದಲ್ಲಿ ಸದಾ ತಂದೆಯು ಜೊತೆಯಿದ್ದಾರೆ ಆದ್ದರಿಂದ ತಂದೆಯನ್ನು ಹೃದಯರಾಮ ಎಂದು ಹೇಳುತ್ತಾರೆ. ಇಲ್ಲಿ ನೆನಪಾರ್ಥವೂ ಸಹ ದಿಲ್ವಾಲಾ ಮಂದಿರವಿದೆಯೆಂದರೆ ಎಲ್ಲರ ಹೃದಯದಲ್ಲಿ ಜೊತೆಯಲ್ಲಿ ದಿಲಾರಾಮ್ ಇದ್ದಾರಲ್ಲವೆ. ಮತ್ತು ತಂದೆಯು ಮಕ್ಕಳಿಗೆ ಸದಾ ಹೇಳುತ್ತಾರೆ - ಎಂದೂ ಸಹ ಒಂಟಿಯಾಗಬೇಡಿ. ಸದಾ ಜೊತೆಯಲ್ಲಿದ್ದೀರಿ, ಜೊತೆಯಲ್ಲಿ ಇರಲೇಬೇಕು. ಒಂಟಿಯಾಗುತ್ತೀರೆಂದರೆ ಮಾಯೆಯು ತನ್ನ ಚಾನ್ಸ್ ತೆಗೆದುಕೊಳ್ಳುತ್ತದೆ ಮತ್ತು ಜೊತೆಯಲ್ಲಿರುತ್ತೀರೆಂದರೆ ಸ್ವಯಂ ಲೈಟ್ಹೌಸ್ ಜೊತೆಯಿದ್ದಾರೆ, ಅಂತಹವರ ಮುಂದೆ ಮಾಯೆಯು ದೂರದಿಂದಲೇ ಓಡಿ ಬಿಡುತ್ತದೆ, ಸಮೀಪ ಬರಲೂ ಸಾಧ್ಯವಿಲ್ಲ ಆದ್ದರಿಂದ ತಂದೆಯೊಂದಿಗೆ ಮಕ್ಕಳು, ಮಕ್ಕಳೊಂದಿಗೆ ತಂದೆಯದು ಸದಾ ಜೊತೆಯಲ್ಲಿರುವ ಪ್ರತಿಜ್ಞೆಯಿದೆ. ತಮ್ಮೆಲ್ಲರದೂ ಸಹ ಪ್ರತಿಜ್ಞೆಯಿದೆಯಲ್ಲವೆ! ಜೊತೆಯಲ್ಲಿದ್ದೇವೆ, ಜೊತೆಯಲ್ಲಿರುತ್ತೇವೆ. ಜೊತೆಯಲ್ಲಿರುವುದು ಚೆನ್ನಾಗಿರುತ್ತದೆಯಲ್ಲವೆ. ಹಾ! ಭಲೆ ಕೈಯನ್ನೆತ್ತಿರಿ.

ಬಾಪ್ದಾದಾರವರು ನೋಡಿದರು - ಪ್ರತಿಯೊಂದು ಮಗು ಅಮೃತವೇಳೆ ತಂದೆಯೊಂದಿಗೆ ಬಹಳ ಹೃದಯದ ಮಾತುಗಳನ್ನು ಮಾತನಾಡುತ್ತಾರೆ. ಹಾಗೆ ನೋಡಿದರೆ ಸಮಯ ಸಿಗುವುದಿಲ್ಲ ಆದರೆ ಅಮೃತವೇಳೆ ಪ್ರತಿಯೊಬ್ಬರೂ ಬಹಳ ಮಧುರಾತಿ ಮಧುರ ಹೃದಯದ ಮಾತುಗಳನ್ನು ಮಾತನಾಡುತ್ತಾರೆ ಮತ್ತು ತಂದೆಯೂ ಸಹ ಪ್ರತಿಯೊಬ್ಬ ಮಗುವಿನ ಹೃದಯದ ಮಾತುಗಳನ್ನು ಕೇಳಿಸಿಕೊಂಡು ಎಲ್ಲಾ ಮಾತುಗಳ ಉತ್ತರವನ್ನೂ ಕೊಡುತ್ತಾರೆ. ಎಲ್ಲರಿಗೆ ಒಂದು ಮಾತಿನದು ಬಹಳ ಖುಷಿಯಿದೆ - ನಾವು ಹೃದಯದಿಂದ ನನ್ನ ಬಾಬಾ ಎಂದು ಹೇಳುತ್ತೇವೆಂದರೆ ತಂದೆಯು ಹಾಜಿರ್ ಆಗಿ ಬಿಡುತ್ತಾರೆ. ಹಜೂರ್ ಹಾಜಿರ್ ಆಗಿ ಬಿಡುತ್ತಾರೆ. ಇದರಲ್ಲಿ ಕೇವಲ ಹೃದಯದ ಮಾತಿದೆ, ಮತ್ತೇನೂ ಮಾಡುವ ಅವಶ್ಯಕತೆಯಿಲ್ಲ, ಹೃದಯದಿಂದ ನನ್ನ ಬಾಬಾ ಎಂದು ಹೇಳಿದಿರಿ, ಹಜೂರ್ ಹಾಜಿರ್ ಆಗಿ ಬಿಡುತ್ತಾರೆ.

ಅಂದಮೇಲೆ ಇಂದು ನಾಲ್ಕೂ ಕಡೆಯಿಂದ ಬಾಪ್ದಾದಾರವರ ಕಿವಿಗಳಲ್ಲಿ ಮಧುರ ಗೀತೆ ಮೊಳಗುತ್ತಿತ್ತು. ಯಾವ ಗೀತೆಯಾಗಿದೆ? ಮೇರಾ ಬಾಬಾ, ಪ್ಯಾರಾ ಬಾಬಾ, ಮೀಠಾ ಬಾಬಾ. ಮತ್ತು ಬಾಪ್ದಾದಾರವರೂ ಸಹ ಮಕ್ಕಳ ಸ್ನೇಹದಲ್ಲಿ ಸಮಾವೇಶವಾಗಿದ್ದರು, ಸಮಾವೇಶವಾಗಿದ್ದಾರೆ. ಈಗ ಬಾಪ್ದಾದಾರವರು ತಮ್ಮ ಸ್ನೇಹದ ದಿವ್ಯ ಕರ್ತವ್ಯವನ್ನು ನೋಡಿ ತಮ್ಮ ಭಕ್ತರು ಅವರೇನು ಕಡಿಮೆ ಬುದ್ಧಿಯವರಲ್ಲ. ಅವರೂ ಸಹ ಬಹಳ ಚೆನ್ನಾಗಿ ತಮ್ಮ ನೆನಪಾರ್ಥದ ಕಾಪಿ ಮಾಡಿದ್ದಾರೆ. ದ್ವಾಪರದಲ್ಲಿ ಬಂದರು, ಹಾಗೆ ನೋಡಿದರೆ ಮೊಟ್ಟ ಮೊದಲ ಜನ್ಮವೂ ಸಹ ಸತೋಪ್ರಧಾನವಾಗಿರುತ್ತದೆ ಏಕೆಂದರೆ ಪರಮಧಾಮದಿಂದ ಆತ್ಮವು ಬರುತ್ತದೆ. ಭಕ್ತರ ಕಡೆಯೂ ಸಹ ಇಂದು ದೃಷ್ಟಿ ಹೋಯಿತು. ಬಹಳ ಯುಕ್ತಿಯುಕ್ತವಾದ ಕಾಪಿ ಮಾಡಿದ್ದಾರೆ ಏಕೆಂದರೆ ತಮ್ಮ ಪ್ರಾರಂಭದ ವಿಶೇಷ ಭಕ್ತರಂತೆ ತಮ್ಮ ಪ್ರತ್ಯಕ್ಷ ಕರ್ಮವಿದೆ ಹಾಗೆಯೇ ಅವರೂ ಸಹ ನೆನಪಾರ್ಥದ ಕಾಪಿ ಚೆನ್ನಾಗಿ ಮಾಡಿದ್ದಾರೆ ಆದರೆ ತಮ್ಮದು ಪ್ರಾಕ್ಟಿಕಲ್ ಆಗಿದೆ, ಅವರದು ನೆನಪಾರ್ಥವಾಗಿದೆ. ಹೇಗೆ ತಾವು ವ್ರತವನ್ನು ತೆಗೆದುಕೊಂಡಿರಿ, ಯಾವ ವ್ರತವನ್ನು ತೆಗೆದುಕೊಂಡಿರಿ? ಪವಿತ್ರತೆಯ ವ್ರತ. ಅಂದಾಗ ಅವರೂ ಸಹ ವ್ರತ ತೆಗೆದುಕೊಳ್ಳುತ್ತಾರೆ, ವ್ರತದ ಕಾಪಿ ಮಾಡಿದ್ದಾರೆ ಆದರೆ ತಮ್ಮ ವ್ರತ ಒಂದು ಜನ್ಮದಲ್ಲಿ ತೆಗೆದುಕೊಳ್ಳುವುದರಿಂದ ಅನೇಕ ಜನ್ಮಗಳು ಆ ವ್ರತ ನಡೆಯುತ್ತದೆ. ಅವರು ಒಂದು ದಿನಕ್ಕಾಗಿ ಪವಿತ್ರವಾಗಿಯೂ ಇರುತ್ತಾರೆ ಮತ್ತು ಆಹಾರ-ಪಾನೀಯಗಳ ಶುದ್ಧತೆಯನ್ನೂ ಇಡುತ್ತಾರೆ. ತಮ್ಮ 21 ಜನ್ಮಗಳ ವ್ರತ, ಅವರದು ಅಲ್ಪಕಾಲಕ್ಕಾಗಿ ಇದೆ. ಹಾಗೆಯೇ ಜಾಗರಣೆ, ತಾವು ಪ್ರಕಾಶತೆಯಲ್ಲಿ ಬಂದಿದ್ದೀರೆಂದರೆ ಇಡೀ ವಿಶ್ವದಲ್ಲಿ ಅಂಧಕಾರವು ಸಮಾಪ್ತಿ ಮಾಡಿದಿರಿ. ಅರ್ಧ ಕಲ್ಪ ಅಂಧಕಾರವು ಬರಲು ಸಾಧ್ಯವಿಲ್ಲ. ಮನಸ್ಸಿನ ಅಂಧಕಾರ ಸಮಾಪ್ತಿ ಮಾಡಿದಿರಿ ಮತ್ತು ಹೊರಗಿನ ಪ್ರಕೃತಿಯ ದುಃಖ ಅಂಧಕಾರವನ್ನು ಸಮಾಪ್ತಿ ಮಾಡಿದಿರಿ. ಅವರೂ ಸಹ ಕಾಪಿ ಮಾಡಿದ್ದಾರೆ, ಜಾಗರಣೆ ಮಾಡುತ್ತಾರೆ. ಮತ್ತೊಂದು ಮಾತು, ತಾವು ತಂದೆಯ ಮೇಲೆ ಬಲಿಹಾರಿಯಾಗಿ ಬಿಟ್ಟಿರಿ, ಅರ್ಪಣೆಯಾದಿರಿ. ಪೂರ್ಣ ಸಮರ್ಪಣೆಯಾಗಿ ಬಿಟ್ಟಿರಿ ಅಂದಮೇಲೆ ಅವರೂ ಕಾಪಿ ಮಾಡಿದ್ದಾರೆ ಆದರೆ ತನ್ನನ್ನು ಮಾಡುವುದಿಲ್ಲ, ತನ್ನನ್ನು ಬಲಿ ಕೊಡುವುದಿಲ್ಲ, ಯಾರನ್ನು ಕೊಡುತ್ತಾರೆ? ಗೊತ್ತಿದೆಯಲ್ಲವೆ. ಕುರಿಯನ್ನು ಬಲಿ ಕೊಡುತ್ತಾರೆ. ಕುರಿಯನ್ನೇ ಏಕೆ ಹುಡುಕಿದರು ಮತ್ತ್ಯಾರನ್ನೂ ಹುಡುಕಲಿಲ್ಲ. ಎಲ್ಲರೂ ನಗುತ್ತಿದ್ದೀರಿ, ಗೊತ್ತಿದೆಯಲ್ಲವೆ. ತಂದೆಯು ತಾವು ಮಕ್ಕಳಿಗೆ ಮತ್ತೆ-ಮತ್ತೆ ಸೂಚನೆಯನ್ನು ಕೊಡುತ್ತಿದ್ದಾರೆ - ನಾನು ಎಂಬುದನ್ನು ಬಿಟ್ಟು ನಿಮಿತ್ತ ಭಾವವನ್ನು ಧಾರಣೆ ಮಾಡುತ್ತೀರೆಂದರೆ ಅವರೂ ಸಹ ಕುರಿಯನ್ನು ಹುಡುಕಿದರು ಏಕೆಂದರೆ ಅದೂ ಸಹ ಮೇ, ಮೇ ಎನ್ನುತ್ತಿರುತ್ತದೆ. ಅಂದಾಗ ಭಕ್ತರ ಬುದ್ಧಿಯಂತು ಕಮಾಲ್ ಆಗಿದೆಯಲ್ಲವೆ. ತಮ್ಮ ಭಕ್ತರಲ್ಲವೆ. ತಂದೆಯ, ತಮ್ಮ ಭಕ್ತರಾಗಿದ್ದಾರೆ ಆದ್ದರಿಂದ ತಂದೆಯು ತಮ್ಮ ಭಕ್ತರಿಗೂ ಸಹ ಯಾರು ಸತ್ಯ ಹೃದಯದಿಂದ ಮಾಡುತ್ತಾರೆ ಅವರಿಗೂ ಏನಾದರೊಂದು ಫಲ ಕೊಡುತ್ತಾರೆ. ಭಕ್ತಿಯ ಫಲವಾಗಿ - ಅವರೂ ಸಹ ಸದಾ ಸತ್ಯ ಮತ್ತು ಸಾತ್ವಿಕವಾಗಿರುತ್ತಾರೆ, ಖುಷಿಯಾಗಿರುತ್ತಾರೆ. ದುಃಖದಲ್ಲಿ ದುಃಖಿಯಾಗುವುದಿಲ್ಲ ಏಕೆಂದರೆ ಭಕ್ತಿಯನ್ನು ಸತ್ಯ ಹೃದಯದಿಂದ ಮಾಡುತ್ತಾರೆ ಅಂದಾಗ ತಂದೆಯೂ ಸಹ ಇತ್ತೀಚೆಗೆ ತಾವು ಮಕ್ಕಳಿಗೆ ಇದೇ ಸೂಚನೆಯನ್ನು ಕೊಡುತ್ತಾರೆ - ನಾನು ಎನ್ನುವುದನ್ನು ತರಬಾರದು. ನಾನು ಏನನ್ನು ಹೇಳುತ್ತೇವೆ ಅದೇ ಆಗಲಿ, ನಾನೇ ಸರಿಯಾಗಿ ಹೇಳುತ್ತೇನೆ, ಅದೇ ಆಗಬೇಕು. ಈ ನಾನು ನಾನು, ಒಂದು ಸಾಧಾರಣವಾಗಿದೆ - ನಾನು ಶರೀರಧಾರಿಯಾಗಿದ್ದೇನೆ, ದೇಹಧಾರಿಯಾಗಿದ್ದೇನೆ ಆದರೆ ಒಂದಾಗಿದೆ - ಸಾಧಾರಣ ನಾನು ಮತ್ತೊಂದಾಗಿದೆ-ಸೂಕ್ಷ್ಮವಾದ ನಾನು, ಅದರಲ್ಲಿ ತಂದೆಯ ಉಡುಗೊರೆಯನ್ನೂ ಸಹ ನಾನು ಮಾಡಿದೆನು, ನಾನು ಹೇಳಿದೆನು, ನಾನು ಮಾಡುತ್ತೇನೆ, ತಂದೆಯ ವಿಶೇಷತೆಗಳಲ್ಲಿಯೂ ಸಹ ನಾನು ಎಂದು ಬಂದು ಬಿಡುತ್ತದೆ. ಜ್ಞಾನದ ತಿಳುವಳಿಕೆ, ವಿಶೇಷತೆಗಳ ತಿಳುವಳಿಕೆಯಲ್ಲಿಯೂ ಸಹ ಸೂಕ್ಷವಾಗಿ ನಾನು ಎಂದು ಬಂದು ಬಿಡುತ್ತದೆ. ಅಂದಮೇಲೆ ತಂದೆಯು ಸೂಚನೆ ಕೊಡುತ್ತಿರುತ್ತಾರೆ - ನಾನು ಮತ್ತು ನನ್ನದು, ಸದಾ ನನ್ನಬಾಬಾ, ಅದರ ಕಡೆಯೇ ಹೃದಯದ ಸೆಳೆತವಿರಲಿ. ಅಲ್ಪಕಾಲದ ನನ್ನದು, ನನ್ನ ಹೆಸರು, ನನ್ನ ಸ್ಥಾನ, ಇದನ್ನು ಸಮಾಪ್ತಿ ಮಾಡಿ. ನಾನು ಬಾಬಾರವರವನು, ಬಾಬಾ ನನ್ನವರು, ಎಷ್ಟು ಖುಷಿಯಾಗುತ್ತದೆ! ಭಗವಂತ ನನ್ನವರಾಗಿ ಬಿಟ್ಟರು, ಇನ್ನೇನು ಬೇಕಾಗಿದೆ! ಅಂದಮೇಲೆ ಒಂದು ಸಾಧಾರಣ ನನ್ನದು, ಒಂದಾಗಿದೆ ಸೂಕ್ಷವಾದ ನನ್ನದು. ಈ ಸೂಕ್ಷವಾದ ನನ್ನದು ಮೈಲಿಗೆ ಮಾಡಿ ಬಿಡುತ್ತದೆ, ಮತ್ತು ನನ್ನಬಾಬಾ ಸಂಪನ್ನರನ್ನಾಗಿ ಮಾಡಿ ಬಿಡುತ್ತದೆ.

ಅಂದಾಗ ಇಂದು ಬರ್ಥ್ ಡೇ ಆಚರಿಸಲು ಬಂದಿದ್ದೀರಿ. ತಮ್ಮದೂ ಬರ್ಥ ಡೇ ಆಚರಿಸಲು ಬಂದಿದ್ದೀರಲ್ಲವೆ. ತಂದೆಯು ಮಕ್ಕಳಿಲ್ಲದೆ ಏನೂ ಮಾಡುವುದಿಲ್ಲ ಆದ್ದರಿಂದ ಇಂದು ತಂದೆಯು ಮಕ್ಕಳ ಜನ್ಮೋತ್ಸವದ ಶುಭಾಷಯಗಳನ್ನು ಕೊಡಲು ಬಂದಿದ್ದಾರೆ, ವಾಹ್ ನನ್ನ ಮಕ್ಕಳೇ ವಾಹ್! ಈಗ ಒಂದು ಮಾತು ಹೇಳುವುದೇ, ತಯಾರಾಗಿದ್ದೀರಾ! ಹೇಳುವುದೇ? ಮಾಡಬೇಕಾಗುತ್ತದೆ. ಕೈಯನ್ನೆತ್ತಿ, ಮಾಡುತ್ತೀರಾ? ಡಬಲ್ ವಿದೇಶಿಯರು ಮಾಡುತ್ತೀರಾ? ಟೀಚರ್ಸ್ ಮಾಡುತ್ತೀರಾ? ಒಳ್ಳೆಯದು - ಹೇಗೆ ನೆನಪಾರ್ಥದಲ್ಲಿ ಶಿವ ಪರಮಾತ್ಮನ ನೆನಪಾರ್ಥದಲ್ಲಿ ಎಕ್ಕದ ಹೂವನ್ನು ಅರ್ಪಿಸುತ್ತಾರೆ, ಗುಲಾಬಿಯಲ್ಲ ಮತ್ತ್ಯಾವ ಹೂವನ್ನೂ ಅರ್ಪಿಸುವುದಿಲ್ಲ. ಎಕ್ಕದ ಹೂವನ್ನು ಅರ್ಪಿಸುತ್ತಾರೆ. ಅಂದಾಗ ಇಂದು ಬಾಪ್ದಾದಾರವರು ತಮ್ಮ ಯಾವ ಮಾತಿನ ಅರ್ಪಣೆ ಮಾಡಬೇಕು ಅದನ್ನು ಹೋಮ್ವರ್ಕ್ ಕೊಡಲು ಬಯಸುತ್ತಾರೆ. ತಯಾರಿದ್ದೀರಲ್ಲವೆ. ಒಳ್ಳೆಯದು.

ಮಕ್ಕಳದಂತು ತಂದೆಗೆ ಬಹಳ ಚೆನ್ನಾಗಿ ಅನಿಸುತ್ತದೆ, ಎಲ್ಲರೂ ಹಾಂಜಿ ಮಾಡುತ್ತಾರೆ. ಅಂದಾಗ ಇಂದು ಬರ್ಥ್ ಡೇಯಲ್ಲಿ ತಂದೆಯ ಈ ಸಂಕಲ್ಪವಿದೆ - ಎಲ್ಲರೂ ಒಬ್ಬರಿಗೊಬ್ಬರು ಉಮ್ಮಂಗ-ಉತ್ಸಾಹ ಕೊಡುತ್ತಾ, ಒಬ್ಬರಿಗೊಬ್ಬರು ಸಹಯೋಗಿಗಳಾಗುತ್ತಾ ವ್ಯರ್ಥ ಸಂಕಲ್ಪದ ಎಕ್ಕದ ಹೂವನ್ನು ಅರ್ಪಣೆ ಮಾಡಿ. ವ್ಯರ್ಥ ಸಂಕಲ್ಪ ಮಾಡಬಾರದು, ಕೇಳಬಾರದು ಮತ್ತು ಸಂಗದಲ್ಲಿ ಬಂದು ವ್ಯರ್ಥ ಸಂಕಲ್ಪಗಳ ರಂಗಿನಲ್ಲಿ ಬರಬಾರದು. ಏಕೆಂದರೆ ಎಲ್ಲಿ ವ್ಯರ್ಥ ಸಂಕಲ್ಪಗಳಿರುತ್ತವೆ ಅಲ್ಲಿ ನೆನಪಿನ ಸಂಕಲ್ಪ, ಜ್ಞಾನದ ಮಧುರ ನುಡಿ, ಯಾವುದಕ್ಕೆ ಮುರುಳಿ ಎಂದು ಹೇಳುತ್ತೀರಿ ಆ ಶುದ್ಧ ಸಂಕಲ್ಪದ ಸ್ಮೃತಿಯಲ್ಲಿರುವುದಿಲ್ಲ. ಭಲೆ ಮುರುಳಿ ಕೇಳುತ್ತಲೂ ಇರಬಹುದು, ಓದುತ್ತಲೂ ಇರಬಹುದು ಅದಂತು ಅವಶ್ಯಕತೆಯಿದೆ. ಬ್ರಾಹ್ಮಣರ ನಿಯಮವಾಗಿದೆ ಆದರೆ ಕೇಳುವುದರವರೆಗೆ ಇರುತ್ತದೆ. ಮನಸ್ಸಿನಲ್ಲಿ ಮನನ ನಡೆಯುವುದಿಲ್ಲ. ಯೋಚಿಸುತ್ತಾರೆ, ಹೇಳುತ್ತಾರೆ - ಇಂದು ಮುರುಳಿಯು ಬಹಳ ಚೆನ್ನಾಗಿತ್ತು, ಏನಿತ್ತೆಂದು ಯೋಚಿಸುತ್ತಿದ್ದೇನೆ. ವರದಾನವೂ ಸಹ ಬಹಳ ಚೆನ್ನಾಗಿತ್ತು ಆದರೆ ನೆನಪು ಬಂದು ಬಿಡುತ್ತದೆ...... ವ್ಯರ್ಥ ಸಂಕಲ್ಪವು ಮನಸ್ಸು-ಬುದ್ಧಿಯನ್ನು ತನ್ನ ಕಡೆ ಆಕರ್ಷಣೆ ಮಾಡುವಂತದ್ದಾಗಿದೆ. ತಮಗೆ ಏನು ಹೇಳುತ್ತಾರೆಂದು ಗೊತ್ತಿದೆ, ತಂದೆಯ ಮುಂದೆ? ಬಾಬಾ ಆಸಕ್ತಿಯಿರುವ ವಿಚಾರಗಳನ್ನಂತು ಕೇಳಬೇಕಲ್ಲವೆ. ಜ್ಞಾನ ಪೂರ್ಣರಾಗಬೇಕಾಗುತ್ತದೆ ಆದರೆ ವ್ಯರ್ಥ ಮಾತುಗಳು ಪದವಿ ಪ್ರಾಪ್ತಿಯಲ್ಲಿ ನಷ್ಟ ಮಾಡಿ ಬಿಡುತ್ತದೆ ಅಂದಮೇಲೆ ತಂದೆಯೊಂದಿಗೆ ತಾವೆಲ್ಲರೂ ವ್ಯರ್ಥ ಸಂಕಲ್ಪಗಳ ಪ್ರತಿಜ್ಞೆ ಮಾಡುತ್ತೀರಾ? ತಾವು ಹೇಳುತ್ತೀರಿ - ನಾವಂತು ಇಷ್ಟ ಪಡುವುದಿಲ್ಲ ಆದರೆ ಅದು ಬಂದು ಬಿಡುತ್ತದೆ. ಇಷ್ಟ ಪಡುವುದಿಲ್ಲ ಆದರೆ ಬಂದು ಬಿಡುತ್ತದೆ ಅಂದಾಗ ತಂದೆಯು ಧೃಡ ಸಂಕಲ್ಪದಿಂದ ಕೊಡುವುದರಿಂದ, ಮೊದಲು ಕೊಡಲು ಬರುತ್ತದೆಯೇ? ತಂದೆಗೆ ಕೊಟ್ಟು ಬಿಟ್ಟಿದ್ದೀರಿ. ಒಂದುವೇಳೆ ಕೊಟ್ಟಿರುವಂತಹ ವಸ್ತು ತಾವು ತಮ್ಮ ಬಳಿ ಇಟ್ಟುಕೊಳ್ಳುತ್ತೀರೆಂದರೆ ತಮ್ಮ ಟೈಟಲ್ ಏನಾಗುತ್ತದೆ? ಒಂದು ಬಾರಿ ತಂದೆಗೆ ತಮ್ಮ ರುಚಿಯಿಂದ ಧೃಡತೆಯಿಂದ ಕೊಟ್ಟು ಬಿಡಿ. ಮತ್ತು ಪರಿಶೀಲಿಸಿ - ಕೊಟ್ಟಿರುವ ವಸ್ತು ತಮ್ಮ ಬಳಿ ಮತ್ತೆ-ಮತ್ತೆ ಹಿಂತಿರುಗಿ ಬರುತ್ತಿಲ್ಲ ತಾನೆ! ಅನ್ಯರ ವಸ್ತುವನ್ನು ತನ್ನದನ್ನಾಗಿ ಮಾಡಿಕೊಳ್ಳುವುದು, ಇದನ್ನು ಒಳ್ಳೆಯದೆಂದು ಒಪ್ಪುವುದಿಲ್ಲ. ಪ್ರತೀ ದಿನ ವಿಶ್ರಾಂತಿಗೆ ಮೊದಲು, ವಿಶ್ರಾಂತಿಯ ನಂತರದಲ್ಲಿ ಮಾಡುವ ಮೊದಲು ಪರಿಶೀಲಿಸಿ - ಇಂದು ಇಡೀ ದಿನದಲ್ಲಿ ಯಾವುದೇ ವ್ಯರ್ಥ ಸಂಕಲ್ಪಗಳಂತು ಬರಲಿಲ್ಲವಲ್ಲವೆ? ಮಾಡಿಲ್ಲ ತಾನೇ? ಕೊಟ್ಟಿರುವ ವಸ್ತು ಹಿಂತಿರುಗಿ ತೆಗೆದುಕೊಳ್ಳಲಿಲ್ಲವೇ?

ಅಂದಮೇಲೆ ಇಂದು ಬರ್ಥ್ ಡೇಯಲ್ಲಿ ಉಡುಗೊರೆಯನ್ನು ಕೊಡುವ ಸಾಹಸವಿದೆಯಲ್ಲವೆ. ಸಾಹಸವಿದೆಯೇ? ಕೈಯನ್ನೆತ್ತಿರಿ, ಸಾಹಸವಿದೆ ಅಂದಮೇಲೆ ಎಲ್ಲಿ ಸಾಹಸವಿದೆ ಅಲ್ಲಿ ಬಾಪ್ದಾದಾರವರೂ ಸಹ ತಮಗೆ ಉಡುಗೊರೆಯನ್ನು ಕೊಡುತ್ತಾರೆ. ತಾವು ಹೃದಯದಿಂದ ನನ್ನ ಬಾಬಾ, ದಯಾಲು ಕೃಪಾಲು ಬಾಬಾ, ತಾವು ಈ ವಸ್ತುವನ್ನು ತೆಗೆದುಕೊಳ್ಳಿ. ಒಂದುವೇಳೆ ಹೃದಯದಿಂದ ಹೇಳುತ್ತೀರೆಂದರೆ ತಂದೆಯು ವಿಶೇಷವಾದ ಗಿಫ್ಟು ಕೊಡುತ್ತಾರೆ. ಏಕೆಂದರೆ ಸಾಹಸ ತಮ್ಮದು, ವಿಶೇಷ ಸಹಯೋಗವನ್ನು ತಂದೆಯು ಕೊಡುತ್ತಾರೆ. ಎಲ್ಲಿ ಸಾಹಸವಿದೆ ಅಲ್ಲಿ ತಂದೆಯ ಸಹಯೋಗವು ಅವಶ್ಯವಾಗಿ ಇದ್ದೇ ಇದೆ, ಇದಂತು ಅನುಭವ ಮಾಡಿದ್ದೀರಲ್ಲವೆ ಏಕೆಂದರೆ ಬಾಪ್ದಾದಾರವರು ಬಹಳ ಸಮಯದಿಂದ ಸೂಚನೆ ಕೊಡುತ್ತಿದ್ದಾರೆ - ಈಗ ತೀವ್ರ ಪುರುಷಾರ್ಥದ ಮಾರ್ಗವಾಗಿದೆ - ಮೂರು ಬಿಂದುಗಳನ್ನಿಡುವುದು. ಬಿಂದುವಾಗಿದ್ದೇನೆ, ತಂದೆ ಬಿಂದುವನ್ನು ನೆನಪು ಮಾಡಬೇಕು ಮತ್ತು ಕಳೆದು ಹೋಗಿರುವುದಕ್ಕೆ ಬಿಂದುವನ್ನಿಡಿ, ಫುಲ್ಸ್ಟಾಪ್ ಬಿಂದು ಆಗಿದೆ. ಮನನ ಮಾಡಿ, ಬಿಂದುವಾಗಬೇಕು, ಬಿಂದುವನ್ನು ನೋಡಬೇಕು ಮತ್ತು ಬಿಂದುವನ್ನಿಡಬೇಕು ಎಂದು ಬಾಪ್ದಾದಾರವರು ಹೇಳುತ್ತಾರೆ, ಇದರಿಂದ ಬಿಂದುವಿನ ಬಹಳ ಮಹತ್ವಿಕೆಯಿದೆ. ವರ್ತಮಾನದ ಜಮಾನಾದಲ್ಲಿಯೂ ಸಹ ಬಿಂದುವಿನ ಮಹತ್ವವಿದೆ. ನೋಡಿ, ಹಣವನ್ನು ಎಣಿಕೆ ಮಾಡುತ್ತಾರಲ್ಲವೆ. ಇತ್ತೀಚೆಗೆ ಎಲ್ಲರ ಪ್ರೀತಿ, ಎಲ್ಲದಕ್ಕಿಂತ ಹೆಚ್ಚಿನದಾಗಿ ಯಾವುದರೊಂದಿಗಿದೆ? ಪೈಸೆಯ ಜೊತೆ. ಪೈಸೆ ಹೇಗೆ ಹೆಚ್ಚಾಗುತ್ತದೆ? ಬಿಂದುವನ್ನಿಡುತ್ತಾ ಹೋಗಿ, 10ಕ್ಕೆ ಬಿಂದುವನ್ನಿಡಿ 100 ಆಗಿ ಬಿಡುತ್ತದೆ. ಇನ್ನೊಂದು ಬಿಂದುವನ್ನಿಡುತ್ತೀರೆಂದರೆ 1000 ಆಗಿ ಬಿಡುತ್ತದೆ ಅಂದಮೇಲೆ ಬಿಂದುವಿನ ಮಹತ್ವವಿದೆ ಆದರೆ ಅಸಲೀ ಬಿಂದು ಯಾವುದಾಗಿದೆ ಅದನ್ನು ಮರೆತು ಹೋಗಿದ್ದಾರೆ. ಅಂದಮೇಲೆ ಇಂದು ತಂದೆಯ ಜನ್ಮ ದಿನದ ಉಡುಗೊರೆಯನ್ನು ಕೊಟ್ಟಿದ್ದೀರಾ? ಕೊಟ್ಟಿದ್ದೀರಾ? ಹೃದಯದಿಂದ ಕೊಟ್ಟಿದ್ದೀರಾ? ಏಕೆ ಏನು ಎಂದು ಕೇಳುವುದಿಲ್ಲವೇ. ಹೇಗೆ ಮಾಡುವುದು, ಏಕೆ ಮಾಡುವುದು? ಈ ಕೇ ಕೇ ಎಂಬ ಭಾಷೆ ಕೆಟ್ಟದ್ದಾಗಿದೆ. ಏಕೆ ಮಾಡಲಿ, ಹೇಗೆ ಮಾಡಲಿ, ಏಕೆ ಏಕೆ, ಕೇ ಕೇ ಮಾಡಬಾರದು. ಉಡುಗೊರೆಯನ್ನು ಕೊಡಲು ಖುಷಿ-ಖುಷಿಯಾಗಿ ಕೈಯೆತ್ತಿದ್ದೀರಾ ಅಥವಾ ಸಂಘಟನೆಯಲ್ಲಿ ಬಲವಂತವಾಗಿಯೋ? ಏಕೆಂದರೆ ಬಲವಂತವಾಗಿ ಮಾಡುವಂತಹವರಿಗೆ ಸದಾಕಾಲ ಆಗುವುದಿಲ್ಲ, ಕೆಲಕೆಲವೊಮ್ಮೆ ಆಗುತ್ತದೆ. ಹೃದಯದಿಂದ ಮಾಡುವಂತಹವರು ಮಾಡಲೇಬೇಕು, ಆಗಲೇಕು. ಉಡುಗೊರೆಯನ್ನು ಕೊಟ್ಟಿದ್ದೀರಿ, ಕೊಡಲೇಬೇಕು. ಈ ರೀತಿ ಖುಷಿ-ಖುಷಿಯಿಂದ ಸಂಕಲ್ಪ ಮಾಡುತ್ತೀರೆಂದರೆ ತಾವು ಸರ್ವಶಕ್ತಿವಂತನ ಮಕ್ಕಳು ಮಾ|| ಸರ್ವಶಕ್ತಿವಂತರಿಗಾಗಿ ಏನು ದೊಡ್ಡ ಮಾತಾಗಿದೆ! ಸೀಟ್ನಲ್ಲಿ ಇರಬೇಕು, ಮಾ|| ಸರ್ವಶಕ್ತಿವಂತನ ಸೀಟ್ನಲ್ಲಿ ಸದಾ ಸೆಟ್ ಆಗಿ ಇರಿ. ಮರೆಯಬೇಡಿ. ಇದು ಸ್ವಮಾನವಿದೆಯಲ್ಲವೆ. ತನ್ನ ಸ್ವಮಾನವನ್ನು ಬಿಡುವುದಿಲ್ಲ. ಸ್ವಮಾನದ ಹಿಂದೆ ಜಗಳವಾಡುತ್ತಾರೆ ಆದ್ದರಿಂದ ಇಂದು ಪ್ರೀತಿ ಬಂದಿತು - ಚಿಕ್ಕದಾದ ತಮ್ಮ ಸ್ವಮಾನ, ಪರಮಾತ್ಮನ ಮೂಲಕ ಸಿಕ್ಕಿರುವ ಸ್ವಮಾನ. ಜನರ ಮೂಲಕ ಸಿಕ್ಕಿರುವ ಸ್ವಮಾನದಲ್ಲಿಯೂ ಸಹ ಎಷ್ಟು ನಶೆಯಿರುತ್ತದೆ, ಇದು ಪರಮಾತ್ಮನ ಮೂಲಕ ಮಾ|| ಸರ್ವಶಕ್ತಿವಂತ ಎಂದ ಸ್ವಮಾನ ಸಿಕ್ಕಿದೆ. ಏನು ಬೇಕು ಅದನ್ನು ಮಾಡಬಹುದು. ಸಾಹಸವಿದೆಯಲ್ಲವೆ? ಕತ್ತನ್ನು ಅಲುಗಾಡಿಸಿ. ಕೈಯನ್ನು ಅಲುಗಾಡಿಸಬೇಡಿ, ಕತ್ತನ್ನು ಅಲುಗಾಡಿಸಿ. ಸಾಹಸವಿದೆಯಲ್ಲವೆ? ಟೀಚರ್ಸ್. ತಾವು ಮಾಡಿಸಬೇಕಾಗುತ್ತದೆ, ಗಮನ ಕೊಡಬೇಕಾಗುತ್ತದೆ. ತಾವು ಮಾಡುತ್ತೀರಿ ಮತ್ತು ಗಮನ ತರಿಸುತ್ತಾ ಮಾಡಿಸುತ್ತೀರಿ. ನಿಮಿತ್ತರಲ್ಲವೆ. ನಂತರ ಯಾವ ಕ್ಲಾಸ್ ಎಂದು ನೋಡುತ್ತೇವೆ, ಯಾರ ಕ್ಲಾಸ್ ನಂಬರ್ ತೆಗೆದುಕೊಳ್ಳುತ್ತದೆ? ನಂತರ ಒಳ್ಳೆಯ ಉಡುಗೊರೆಯನ್ನು ಕೊಡುತ್ತೇವೆ. ಯಾವ ಉಡುಗೊರೆಯನ್ನು ಕೊಡುತ್ತೇವೆಂದು ಹೇಳುವುದಿಲ್ಲ. ಶ್ರೇಷ್ಠವಾದ ಉಡುಗೊರೆಯನ್ನು ಕೊಡುತ್ತೇವೆ. ಪೂರ್ಣ ಕ್ಲಾಸ್ನವರು ಪ್ರಯತ್ನ ಪಡಿ. ಒಬ್ಬರು ಮಾಡಿದರು ಎಂಬಂತೆ ಆಗಬಾರದು. ಮೆಜಾರಿಟಿ ಮಾಡಿ.

ಅಂದಮೇಲೆ ಇಂದು ಬಾಪ್ದಾದಾರವರು ಒಂದೊಂದು ಮಗುವಿನ ಪ್ರತಿ ಪ್ರೀತಿ ಬರುತ್ತಾ ಇದೆ - ನಂಬರ್ವನ್ನಲ್ಲಿ ಬರಲಿ ಎಂದು. ಟೂ ನಲ್ಲಿಯೂ ಅಲ್ಲ. ಮೊದಲ ರಾಜ ಗದ್ದುಗೆಯ ಮೇಲೆ ಕುಳಿತುಕೊಳ್ಳುವುದಿಲ್ಲ, ಸಿಂಹಾಸನದ ಮೇಲಂತು ಇಬ್ಬರು ಕುಳಿತಿರುತ್ತಾರೆ ಆದರೆ ಮೊದಲ ರಾಜಧಾನಿ, ಮೊದಲ ರಾಜ ಮನೆತನದ ಸಂಬಂಧದಲ್ಲಿ ಬನ್ನಿ. ಎರಡು ನಂಬರಂತು ಆಗಿ ಹೋಯಿತು ಆದರೆ ರಾಜ್ಯ ಮಾಡುವುದು, ರಾಜ್ಯಾಧಿಕಾರಿಗಳಾಗಬೇಕೆಂದರೆ ಮೊದಲು ರಾಜ್ಯದಲ್ಲಿ ಬರಬೇಕು. ಅಂದಮೇಲೆ ಬಾಪ್ದಾದಾರವರಿಗೆ ಒಂದೊಂದು ಮಗುವಿನೊಂದಿಗೆ ಇದೇ ಪ್ರೀತಿಯಿದೆ - ಏನಾದರೊಂದು ವಿಶೇಷತೆಯಲ್ಲಿ ನಂಬರ್ವನ್ನಲ್ಲಿ ಬರಲಿ. ನಂಬರ್ವಾರ್ ಅಲ್ಲ, ನಂಬರ್ವನ್. ಉಮ್ಮಂಗವಿದೆಯೇ? ನಂಬರ್ವನ್ನಲ್ಲಿ ಬರಬೇಕು - ಏನು ಸಿಗುತ್ತದೆಯೋ ಅದೇ ಚೆನ್ನಾಗಿದೆಯೇ? ಚೆನ್ನಾಗಿದೆ, ಚೆನ್ನಾಗಿದೆ ಎಂದು ಮಾಡಬಾರದು. ತಂದೆಯ ಆಶೆಯಿದೆ - ಒಂದೊಂದು ಮಗು ಏನಾದರೊಂದು ಕಮಾಲ್ನಲ್ಲಿ ನಂಬರ್ವನ್ನಲ್ಲಿ ಬರಲಿ. ನಾಲ್ಕು ಸಬ್ಜೆಕ್ಟ್ಗಳು ಇದೆ, ಯಾವುದಾದರೂ ಸಬ್ಜೆಕ್ಟ್ನಲ್ಲಿ ನಂಬರ್ವನ್ ಆಗಲೇಬೇಕು. ಆಗಲೇಬೇಕು, ಇದನ್ನು ಅಂಡರ್ಲೈನ್ ಮಾಡಿಕೊಳ್ಳಿರಿ. ಹೆಚ್ಚಿನ ಕಷ್ಟ ಕೊಡುವುದಿಲ್ಲ, ಯಾವುದಾದರೊಂದು ಸಬ್ಜೆಕ್ಟ್ನಲ್ಲಿ ನಂಬರ್ವನ್. ಇದು ಸಹಜವಾಗಿದೆಯಲ್ಲವೆ. ಉಳಿದಂತೆ ಇಂದು ಒಂದೊಂದು ಮಗು ಅಮೃತವೇಳೆ ಯಾರೆಲ್ಲಾ ಮಿಲನವನ್ನಾಚರಿಸುತ್ತಿದ್ದರು, ಬಹಳ ಖುಷಿಯಿಂದ, ಖುಷಿಯಲ್ಲಿ ನಗುತ್ತಾ, ಖುಷಿಯಾಗಿರುವುದು ಕಂಡು ಬರುತ್ತಿತ್ತು. ಮತ್ತು ತಂದೆಯೂ ಸಹ ಪ್ರತಿಯೊಂದು ಮಗುವಿಗೆ ಸದಾ ಹಾರುವ ಕಲೆಯ ವರದಾನ ಕೊಟ್ಟರು. ನಡೆಯುವ ಕಲೆಯಲ್ಲ, ಹಾರುವ ಕಲೆ. ಅಂದಮೇಲೆ ಬಾಪ್ದಾದಾರವರ ಈ ವರದಾನವನ್ನು ನೆನಪಿಟ್ಟುಕೊಳ್ಳಿರಿ. ಬಾಪ್ದಾದಾರವರು ತನ್ನ ಹಾಗೂ ತಮ್ಮ ಜಯಂತಿಯಂದು ವರದಾನ ಏನು ಕೊಟ್ಟರು? ಹಾರುವ ಕಲೆಯವರಾಗಿ. ತಾವೂ ಸಹ ಇಡೀ ದಿನ ಉತ್ಸವ, ಶಿವರಾತ್ರಿಯ ಉತ್ಸವವನ್ನು ಹೃದಯದಲ್ಲಿ ಆಚರಿಸಿದರಲ್ಲವೆ. ಅಂದಾಗ ಎಲ್ಲರೂ ಚೆನ್ನಾಗಿದ್ದೀರಿ, ಚೆನ್ನಾಗಿರುತ್ತೀರಿ, ಒಳ್ಳೆಯದಕ್ಕಿಂತ ಒಳ್ಳೆಯ ರಾಜ್ಯ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಎಲ್ಲರೂ ಚೆನ್ನಾಗಿದ್ದೀರಲ್ಲವೆ. ತಂದೆಯಂತು ಒಳ್ಳೆಯದನ್ನೇ ನೋಡುತ್ತಿರುತ್ತಾರೆ. ಒಳ್ಳೆಯದು.

ನಾಲ್ಕೂ ಕಡೆಯ ಭಲೆ ಸನ್ಮುಖದಲ್ಲಿ ಕುಳಿತಿರಬಹುದು, ಭಲೆ ತಮ್ಮ-ತಮ್ಮ ಸ್ಥಾನಗಳಲ್ಲಿ ಕುಳಿತು ಆಚರಿಸುತ್ತಿರಬಹುದು, ಬಾಪ್ದಾದಾರವರು ಎಲ್ಲರನ್ನು ನೋಡಿ ಹರ್ಷಿತರಾಗುತ್ತಿದ್ದಾರೆ ಮತ್ತು ಮಕ್ಕಳೂ ಸಹ ತಂದೆಯ ಮಿಲನವನ್ನು ನೋಡಿ ಖುಷಿಯಾಗುತ್ತಿದ್ದೀರಿ. ಆದರೆ ಇಂದು ಸದಾ ಖುಷಿಯಾಗಿರುವ ಸಂಕಲ್ಪವನ್ನಿಡಿ. ಕೆಲವೊಮ್ಮೆ ಅಲ್ಲ, ಸದಾ ಖುಷಿ. ಯಾರೇ ನೋಡುತ್ತಾರೆ, ತಮ್ಮ ಚಹರೆಯನ್ನು ನೋಡಿ ಯೋಚಿಸಲಿ - ಇವರು ಬಹಳ ಭಾಗ್ಯವಂತ ಆತ್ಮರಾಗಿದ್ದಾರೆ ಎಂಬುದು ಕಾಣಿಸುತ್ತಿದೆ. ತಮ್ಮ ಭಾಗ್ಯವು ಚಲನೆ ಮತ್ತು ಚಹರೆಯಿಂದ ಕಾಣಿಸಲಿ. ಕೇವಲ ಮನಸ್ಸಿನಲ್ಲಿ ಬಹಳ ಇದೆ ಎನ್ನುವಂತೆ ಅಲ್ಲ. ತಮ್ಮ ಭಾಗ್ಯದ ಚಹರೆ, ಖುಷಿಯಾಗಿರುವ ಚಹರೆ ಅನ್ಯರಿಗೆ ಪರಿಚಯ ಮಾಡಿಸಲಿ. ಚಹರೆ ಹೇಳುತ್ತದೆ, ಏನೋ ಇದೆ. ತಮ್ಮ ಚಹರೆ ಸೇವೆ ಮಾಡಲಿ. ತಂದೆಯವರೆಗೆ ತರಲಿ. ಖುಷಿಯಾಗಿರುವುದು, ಇದೂ ಸಹ ಸೇವೆಯ ಸಾಧನವಾಗಿದೆ ಅಂದಮೇಲೆ ನಾಲ್ಕೂ ಕಡೆಯ ಮಕ್ಕಳಿಗೆ ತಮಗೂ ಬರ್ಥ್ ಡೇಯ ಪದಮಗುಣದಷ್ಟು ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು. ಒಳ್ಳೆಯದು.

ವರದಾನ:
ಸಂಶಯದ ಸಂಕಲ್ಪಗಳನ್ನು ಸಮಾಪ್ತಿಗೊಳಿಸಿ ಮಾಯಾಜೀತರಾಗುವ ವಿಜಯಿ ರತ್ನ ಭವ.

ಆರಂಭದಿಂದಲೇ ಎಂದಿಗೂ ಸಂಶಯದ ಸಂಕಲ್ಪವು ಉತ್ಪನ್ನವಾಗಬಾರದು - ನಾವು ಅನುತ್ತೀರ್ಣರಾಗಿ ಬಿಡುತ್ತೇವೆಯೋ ಏನೋ ಗೊತ್ತಿಲ್ಲ, ಈ ರೀತಿ ಸಂಶಯ ಬುದ್ಧಿಯವರು ಆಗುವುದರಿಂದಲೇ ಸೋಲುಂಟಾಗುತ್ತದೆ ಆದ್ದರಿಂದ ಸದಾ ಇದೇ ಸಂಕಲ್ಪವಿರಲಿ - ನಾವು ಅವಶ್ಯವಾಗಿ ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ತೋರಿಸುತ್ತೇವೆ. ವಿಜಯವಂತು ನಮ್ಮ ಜನ್ಮ-ಸಿದ್ಧ ಅಧಿಕಾರವಾಗಿದೆ, ಇಂತಹ ಅಧಿಕಾರಿಯಾಗಿದ್ದು ಕರ್ಮವನ್ನು ಮಾಡುವುದರಿಂದ ಅವಶ್ಯವಾಗಿ ವಿಜಯ ಅರ್ಥಾತ್ ಸಫಲತೆಯ ಅಧಿಕಾರವು ಪ್ರಾಪ್ತವಾಗುತ್ತದೆ, ಇದರಿಂದ ವಿಜಯಿ ರತ್ನವಾಗಿ ಬಿಡುತ್ತೀರಿ, ಆದ್ದರಿಂದ ಮಾಸ್ಟರ್ ಜ್ಞಾನ ಸಾಗರನ ಮುಖದಿಂದ ಗೊತ್ತಿಲ್ಲ ಎಂಬ ಶಬ್ಧವೆಂದಿಗೂ ಬರಬಾರದು.

ಸ್ಲೋಗನ್:
ದಯಾ ಭಾವನೆಯು ಸಹಜವಾಗಿಯೇ ನಿಮಿತ್ತ ಭಾವವನ್ನು ಇಮರ್ಜ್ ಮಾಡಿಸಿ ಬಿಡುತ್ತದೆ.

ಅವ್ಯಕ್ತ ಸೂಚನೆಗಳು:- ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.

ಹೇಗೆ ಮುಟ್ಟಿದರೆ ಮುನಿ ಗಿಡವು ಸ್ವಲ್ಪ ಮುಟ್ಟುವುದರಿಂದ ಶಕ್ತಿಹೀನ ಆಗಿ ಹೋಗುತ್ತದೆ, ಅದರಲ್ಲಿ ಸಮಯ ಹಿಡಿಸುವುದಿಲ್ಲ. ಇದೇ ರೀತಿ ತಾವು ಒಂದು ಸೆಕೆಂಡಿನಲ್ಲಿ ಶುದ್ಧ ಸಂಕಲ್ಪದ ಶಕ್ತಿಯಿಂದ ಮಾಯೆಯನ್ನು, ಮುಟ್ಟಿದರೆ ಮುನಿಯಂತೆ ಮೂರ್ಛಿತ ಮಾಡಿ ಬಿಡಿ. ತಮ್ಮ ನಿಜ ಸ್ವರೂಪ, ವರದಾನಿ ಸ್ವರೂಪ, ಸದಾಕಾಲಕ್ಕಾಗಿ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತೀರಿ ಎಂದರೆ ಅಪವಿತ್ರತೆಯ ಅಥವಾ ವಿಸ್ಮೃತಿಯ ಹೆಸರು ಚಿಹ್ನೆಯೂ ಸಹ ಇರುವುದಿಲ್ಲ.