10.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಯಾವ
ತಂದೆಯು ನಿಮ್ಮನ್ನು ವಜ್ರ ಸಮಾನರನ್ನಾಗಿ ಮಾಡುತ್ತಾರೆಯೋ ಅವರಲ್ಲಿ ಎಂದಿಗೂ ಸಂಶಯ ಬರಬಾರದು, ಸಂಶಯ
ಬುದ್ಧಿಯವರಾಗುವುದು ಎಂದರೆ ತಮಗೆ ನಷ್ಟ ಮಾಡಿಕೊಳ್ಳುವುದು".
ಪ್ರಶ್ನೆ:
ಮನುಷ್ಯರಿಂದ
ದೇವತೆಗಳಾಗುವ ವಿದ್ಯೆಯಲ್ಲಿ ಉತ್ತೀರ್ಣರಾಗುವ ಮುಖ್ಯ ಆಧಾರವೇನು?
ಉತ್ತರ:
ನಿಶ್ಚಯ.
ನಿಶ್ಚಯ ಬುದ್ಧಿಯವರಾಗುವ ಸಾಹಸ ಬೇಕು. ಮಾಯೆಯು ಈ ಸಾಹಸವನ್ನು ತುಂಡರಿಸುತ್ತದೆ, ಸಂಶಯ
ಬುದ್ಧಿಯವರನ್ನಾಗಿ ಮಾಡಿ ಬಿಡುತ್ತದೆ. ನಡೆಯುತ್ತಾ-ನಡೆಯುತ್ತಾ ಒಂದುವೇಳೆ ವಿದ್ಯೆಯಲ್ಲಿ ಹಾಗೂ
ಓದಿಸುವಂತಹ ಪರಮ ಶಿಕ್ಷಕನಲ್ಲಿ ಸಂಶಯ ಬಂದಿತೆಂದರೆ ತನಗೆ ಹಾಗೂ ಅನ್ಯರಿಗೂ ಬಹಳ ನಷ್ಟ
ಮಾಡಿಕೊಳ್ಳುತ್ತಾರೆ.
ಗೀತೆ:
ನೀವು ಪ್ರೀತಿಯ
ಸಾಗರನಾಗಿದ್ದೀರಿ.........
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಶಿವ ತಂದೆಯು ತಿಳಿಸುತ್ತಿದ್ದಾರೆ, ನೀವು ಪ್ರೀತಿಯ ಸಾಗರನಾಗಿದ್ದೀರೆಂದು
ನೀವು ಮಕ್ಕಳು ತಂದೆಯ ಮಹಿಮೆ ಮಾಡುತ್ತೀರಿ, ಅವರಿಗೆ ಜ್ಞಾನ ಸಾಗರನೆಂದೂ ಹೇಳಲಾಗುತ್ತದೆ. ಯಾವಾಗ
ಜ್ಞಾನ ಸಾಗರನು ಒಬ್ಬರೇ, ಅಂದಮೇಲೆ ಉಳಿದುದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ ಏಕೆಂದರೆ ಜ್ಞಾನ
ಮತ್ತು ಅಜ್ಞಾನದ ಆಟವಾಗಿದೆ. ಜ್ಞಾನವಿರುವುದೇ ಪರಮಪಿತ ಪರಮಾತ್ಮನ ಬಳಿ. ಈ ಜ್ಞಾನದಿಂದ ಹೊಸ
ಪ್ರಪಂಚದ ಸ್ಥಾಪನೆಯಾಗುತ್ತದೆ ಅಂದರೆ ತಂದೆಯು ಹೊಸ ಪ್ರಪಂಚವನ್ನು ರಚಿಸುತ್ತಾರೆಂದಲ್ಲ.
ಪ್ರಪಂಚವಂತೂ ಅವಿನಾಶಿಯಾಗಿ ಇದ್ದೇ ಇದೆ. ಕೇವಲ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸದನ್ನಾಗಿ
ಮಾಡುತ್ತಾರೆ. ಪ್ರಳಯವಾಗಿ ಬಿಡುವುದಿಲ್ಲ, ಇಡೀ ಪ್ರಪಂಚವು ಎಂದೂ ವಿನಾಶವಾಗುವುದಿಲ್ಲ. ಹಳೆಯದು
ಪರಿವರ್ತನೆಯಾಗಿ ಹೊಸದಾಗುತ್ತದೆ. ತಂದೆಯು ತಿಳಿಸುತ್ತಾರೆ - ಇದು ಹಳೆಯ ಮನೆಯಾಗಿದೆ, ಯಾವುದರಲ್ಲಿ
ನೀವು ಕುಳಿತಿದ್ದೀರಿ. ನಾವೀಗ ನಮ್ಮ ಹೊಸ ಮನೆಗೆ ಹೋಗುತ್ತೇವೆಂದು ನಿಮಗೆ ತಿಳಿದಿದೆ. ಹೇಗೆ ಹಳೆಯ
ದೆಹಲಿಯಿದೆ, ಈಗ ಹಳೆಯ ದೆಹಲಿಯು ಬದಲಾಗಿ ಹೊಸದಾಗುವುದು. ಹೇಗೆ ಹೊಸದಾಗುತ್ತದೆ? ಮೊದಲು
ಅದರಲ್ಲಿರುವವರು ಯೋಗ್ಯರಾಗಬೇಕು. ಹೊಸ ಪ್ರಪಂಚದಲ್ಲಿ ಸರ್ವಗುಣ ಸಂಪನ್ನರಿರುತ್ತಾರೆ, ನೀವು
ಮಕ್ಕಳಿಗೆ ಈ ಲಕ್ಷ್ಯವೂ ಇದೆ, ಪಾಠಶಾಲೆಯಲ್ಲಿ ಯಾವಾಗಲೂ ಗುರಿ-ಧ್ಯೇಯವಿರುತ್ತದೆಯಲ್ಲವೆ.
ಓದುವವರಿಗೆ ಗೊತ್ತಿರುವುದು ನಾನು ಸರ್ಜನ್ ಆಗುವೆನು, ಬ್ಯಾರಿಸ್ಟರ್ ಆಗುವೆನು ಎಂದು. ನೀವಿಲ್ಲಿ
ತಿಳಿದುಕೊಂಡಿದ್ದೀರಿ - ನಾವು ಮನುಷ್ಯರಿಂದ ದೇವತೆಗಳಾಗಲು ಬಂದಿದ್ದೇವೆ. ಪಾಠಶಾಲೆಯಲ್ಲಿ
ಗುರಿ-ಧ್ಯೇಯವಿಲ್ಲದೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಆದರೆ ಇದು ಇಂತಹ ಅದ್ಭುತ ಪಾಠಶಾಲೆಯಾಗಿದೆ
ಇಲ್ಲಿ ಗುರಿ-ಧ್ಯೇಯವನ್ನು ತಿಳಿದುಕೊಂಡಿದ್ದರೂ ಓದುತ್ತಿದ್ದರೂ ಸಹ ಮತ್ತೆ ಆ ವಿದ್ಯೆಯನ್ನು ಬಿಟ್ಟು
ಬಿಡುತ್ತಾರೆ. ಇದು ತಪ್ಪು ವಿದ್ಯೆಯಾಗಿದೆ, ಇದರಲ್ಲಿ ಗುರಿ-ಧ್ಯೇಯವಿಲ್ಲವೆಂದು ತಿಳಿಯುತ್ತಾರೆ
ಆದರೆ ಈ ರೀತಿ ಎಂದೂ ಆಗಲು ಸಾಧ್ಯವಿಲ್ಲ. ಓದಿಸುವವರಲ್ಲಿಯೇ ಸಂಶಯ ಬಂದು ಬಿಡುತ್ತದೆ. ಆ ಲೌಕಿಕ
ವಿದ್ಯೆಯಲ್ಲಿ ಒಂದುವೇಳೆ ಓದಲು ಆಗಲಿಲ್ಲ ಅಥವಾ ಹಣವಿಲ್ಲ ಅಥವಾ ಸಾಹಸವಿಲ್ಲವೆಂದರೆ ಓದುವುದನ್ನು
ಬಿಟ್ಟು ಬಿಡುತ್ತಾರೆ ಆದರೆ ಈ ಬ್ಯಾರಿಸ್ಟರಿ ಜ್ಞಾನವೇ ತಪ್ಪಾಗಿದೆ, ಓದಿಸುವವರು ಸರಿಯಿಲ್ಲವೆಂದು
ಹೇಳುವುದಿಲ್ಲ. ಇಲ್ಲಾದರೆ ಮನುಷ್ಯರ ಬುದ್ಧಿಯು ವಿಚಿತ್ರವಾಗಿದೆ. ಒಂದುವೇಳೆ ಈ ವಿದ್ಯೆಯಲ್ಲಿ
ಸಂಶಯ ಬಂದಿತೆಂದರೆ ಈ ವಿದ್ಯೆಯು ಸರಿಯಿಲ್ಲ. ಭಗವಂತನು ಓದಿಸುವುದೇ ಇಲ್ಲ, ರಾಜ್ಯ ಪದವಿ...
ಇತ್ಯಾದಿಯೇನೂ ಸಿಗುವುದಿಲ್ಲ. ಇದೆಲ್ಲವೂ ಸುಳ್ಳೆಂದು ಹೇಳಿ ಬಿಡುತ್ತಾರೆ. ಹೀಗೆ ಬಹಳ ಮಕ್ಕಳು
ಓದುತ್ತಾ-ಓದುತ್ತಾ ಬಿಟ್ಟು ಬಿಡುತ್ತಾರೆ. ನಮಗೆ ಭಗವಂತನೇ ಓದಿಸುತ್ತಾರೆ, ಅದರಿಂದ ನಾವು
ಮನುಷ್ಯರಿಂದ ದೇವತೆಗಳಾಗುತ್ತೇವೆ ಎಂದು ನೀವು ಹೇಳುತ್ತಿದ್ದಿರಿ. ಮತ್ತೇನಾಯಿತು ಎಂದು ಯಾರಾದರೂ
ಕೇಳುತ್ತಾರೆ, ಆಗ ಇಲ್ಲ ಇಲ್ಲ ಅದೆಲ್ಲವೂ ಸುಳ್ಳು, ಆ ಗುರಿ-ಧ್ಯೇಯವು ನಮಗೆ
ಅರ್ಥವಾಗುವುದಿಲ್ಲವೆಂದು ಹೇಳುತ್ತಾರೆ. ಕೆಲವರು ಯಾರು ನಿಶ್ಚಯದಿಂದ ಓದುತ್ತಿದ್ದರೋ ಅವರೂ ಸಹ
ಸಂಶಯ ಬರುವ ಕಾರಣ ಬಿಟ್ಟು ಬಿಟ್ಟರು. ನಿಶ್ಚಯ ಹೇಗಾಯಿತು ಮತ್ತು ಸಂಶಯ ಬುದ್ಧಿಯವರನ್ನಾಗಿ ಯಾರು
ಮಾಡಿದರು? ಒಂದುವೇಳೆ ಇವರು ಓದಿದ್ದರೆ ಬಹಳ ಶ್ರೇಷ್ಠ ಪದವಿಯನ್ನು ಪಡೆಯುತ್ತಿದ್ದರೆಂದು ನೀವು
ಹೇಳುತ್ತೀರಿ. ಬಹಳಷ್ಟು ಓದುತ್ತಿರುತ್ತಾರೆ. ಬ್ಯಾರಿಸ್ಟರಿ ಓದುತ್ತಾ-ಓದುತ್ತಾ ಅರ್ಧದಲ್ಲಿಯೇ
ಬಿಟ್ಟು ಬಿಡುತ್ತಾರೆ. ಉಳಿದವರು ಓದಿ ಬ್ಯಾರಿಸ್ಟರ್ ಆಗಿ ಬಿಡುತ್ತಾರೆ, ಕೆಲವರು ಓದಿ
ಉತ್ತೀರ್ಣರಾಗುತ್ತಾರೆ, ಕೆಲವರು ಅನುತ್ತೀರ್ಣರಾಗುತ್ತಾರೆ. ಇಂತಹವರು ಯಾವುದಾದರೂ ಕಡಿಮೆ
ಪದವಿಯನ್ನು ಪಡೆಯುತ್ತಾರೆ. ಇದೂ ಸಹ ಬಹಳ ದೊಡ್ಡ ಪರೀಕ್ಷೆಯಾಗಿದೆ. ಇದರಲ್ಲಿ ಬಹಳ ಸಾಹಸ ಬೇಕು.
ಮೊದಲನೆಯದಾಗಿ ನಿಶ್ಚಯ ಬುದ್ಧಿಯ ಸಾಹಸವಿರಲಿ. ಮಾಯೆಯಂತೂ ಈಗೀಗ ನಿಶ್ಚಯ, ಈಗೀಗ ಸಂಶಯ
ಬುದ್ಧಿಯವರನ್ನಾಗಿ ಮಾಡಿ ಬಿಡುತ್ತದೆ. ಓದಲು ಅನೇಕರು ಬರುತ್ತಾರೆ, ಆದರೆ ಕೆಲವರು ಮಂಧ
ಬುದ್ಧಿಯವರಿರುತ್ತಾರೆ, ನಂಬರ್ವಾರ್ ಉತ್ತೀರ್ಣರಾಗುತ್ತಾರೆ. ಪತ್ರಿಕೆಗಳಲ್ಲಿಯೂ ಅವರ ಪಟ್ಟಿಯು
ಬರುತ್ತದೆ. ಇಲ್ಲಿಯೂ ಸಹ ಹಾಗೆಯೇ ಓದಲು ಬಹಳ ಮಂದಿ ಬರುತ್ತಾರೆ. ಕೆಲವರು ಬುದ್ಧಿವಂತರಿದ್ದಾರೆ,
ಕೆಲವರು ಮಂಧ ಬುದ್ಧಿಯವರಿದ್ದಾರೆ. ಮಂಧ ಬುದ್ಧಿಯವರಾಗುತ್ತಾ-ಆಗುತ್ತಾ ಮತ್ತೆ ಯಾವುದಾದರೊಂದು
ಸಂಶಯದಲ್ಲಿ ಬಂದು ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ ಮತ್ತು ಅನ್ಯರಿಗೂ ನಷ್ಟವನ್ನುಂಟು
ಮಾಡಿಸುತ್ತಾರೆ. ಸಂಶಯ ಬುದ್ಧಿ ವಿನಃಶ್ಯಂತಿಯೆಂದು ಹೇಳಲಾಗುತ್ತದೆ ಅಂತಹವರು ಶ್ರೇಷ್ಠ ಪದವಿಯನ್ನು
ಪಡೆಯಲು ಸಾಧ್ಯವಿಲ್ಲ. ನಿಶ್ಚಯವೂ ಇದೆ ಆದರೆ ಪೂರ್ಣ ರೀತಿಯಲ್ಲಿ ಓದಲಿಲ್ಲವೆಂದರೆ ತೇರ್ಗಡೆಯಾಗುವರೇ?
ಏಕೆಂದರೆ ಬುದ್ಧಿಯು ಪ್ರಯೋಜನಕ್ಕೆ ಬರುತ್ತಿಲ್ಲ, ಧಾರಣೆಯಾಗುವುದಿಲ್ಲ. ನಾವಾತ್ಮರಾಗಿದ್ದೇವೆ
ಎಂಬುದನ್ನೇ ಮರೆತು ಹೋಗುತ್ತಾರೆ. ತಂದೆ ಹೇಳುತ್ತಾರೆ ನಾನು ನೀವಾತ್ಮಗಳ ಪರಮಪಿತನಾಗಿದ್ದೇನೆ.
ತಂದೆಯು ಬಂದಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಯಾರಿಗಾದರೂ ಬಹಳ ವಿಘ್ನಗಳು ಬಂದರೆ
ಅವರಿಗೆ ಸಂಶಯ ಬಂದು ಬಿಡುತ್ತದೆ. ನಮಗೆ ಇಂತಹ ಬ್ರಾಹ್ಮಣಿಯೊಂದಿಗೆ ನಿಶ್ಚಯವಿಲ್ಲವೆಂದು ಹೇಳಿ
ಬಿಡುತ್ತಾರೆ. ಅರೆ! ಬ್ರಾಹ್ಮಣಿ ಹೇಗಾದರೂ ಇರಲಿ, ನೀವು ಓದಬೇಕಲ್ಲವೆ. ಶಿಕ್ಷಕರು ಚೆನ್ನಾಗಿ
ಓದಿಸಲಿಲ್ಲವೆಂದರೆ ಇವರನ್ನು ಓದಿಸುವುದರಿಂದ ಬಿಡಿಸೋಣವೆಂದು ಯೋಚಿಸುತ್ತಾರೆ ಆದರೆ ನೀವಂತೂ
ಓದಬೇಕಲ್ಲವೆ. ಈ ವಿದ್ಯೆಯು ತಂದೆಯದಾಗಿದೆ, ಓದಿಸುವವರು ಆ ಪರಮ ಶಿಕ್ಷಕನಾಗಿದ್ದಾರೆ,
ಬ್ರಾಹ್ಮಣಿಯರೂ ಸಹ ತಂದೆಯ ಜ್ಞಾನವನ್ನು ತಿಳಿಸುತ್ತಾರೆಂದ ಮೇಲೆ ಗಮನವೆಲ್ಲವೂ ವಿದ್ಯೆಯ
ಮೇಲಿರಬೇಕಲ್ಲವೆ. ವಿದ್ಯೆಯನ್ನು ಓದದೇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಾಧ್ಯವಿಲ್ಲ ಆದರೆ
ತಂದೆಯೊಂದಿಗೆ ನಿಶ್ಚಯವೇ ತುಂಡಾಗಿ ಬಿಡುತ್ತದೆಯೆಂದರೆ ಮತ್ತೆ ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ.
ಓದುತ್ತಾ-ಓದುತ್ತಾ ಇವರಿಂದ ಈ ಪದವಿಯು ಸಿಗುತ್ತದೆಯೋ, ಇಲ್ಲವೋ ಎಂದು ಶಿಕ್ಷಕರಲ್ಲಿ ಸಂಶಯವು ಬಂದು
ವಿದ್ಯೆಯನ್ನು ಬಿಟ್ಟು ಬಿಡುತ್ತಾರೆ. ಅನ್ಯರನ್ನೂ ಕೆಡಿಸಿ ಬಿಡುತ್ತಾರೆ. ನಿಂದನೆ ಮಾಡುವುದರಿಂದ
ಇನ್ನೂ ನಷ್ಟವನ್ನಂಟುಮಾಡಿಕೊಳ್ಳುತ್ತಾರೆ. ಒಂದುವೇಳೆ ಯಾವುದೇ ಪಾಪ ಕೃತ್ಯ ಮಾಡಿದರೆ ಅದಕ್ಕೆ
ನೂರುಪಟ್ಟು ಶಿಕ್ಷೆಯಾಗುತ್ತದೆ. ಅನೇಕರನ್ನು ಕೆಡಿಸಲು ಒಬ್ಬರು ನಿಮಿತ್ತರಾಗುತ್ತಾರೆ ಆದ್ದರಿಂದ
ಎಷ್ಟು ಪುಣ್ಯಾತ್ಮರಾದರೋ ಅಷ್ಟೇ ಮತ್ತೆ ಪಾಪಾತ್ಮರಾಗಿ ಬಿಡುತ್ತಾರೆ. ಈ ವಿದ್ಯೆಯಿಂದಲೇ
ಪುಣ್ಯಾತ್ಮರಾಗುತ್ತೀರಿ ಮತ್ತು ಪುಣ್ಯಾತ್ಮರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ.
ಒಂದುವೇಳೆ ಯಾರಾದರೂ ಓದುತ್ತಿಲ್ಲವೆಂದರೆ ಅವಶ್ಯವಾಗಿ ಏನೋ ವಿಕಾರವಿದೆ ಎಂದರ್ಥ ಆದ್ದರಿಂದ ನಮ್ಮ
ಅದೃಷ್ಟವೇ ಹೀಗಿದೆ, ನಾವು ಏನು ಮಾಡುವುದು? ಎಂದು ಹೇಳುತ್ತಾರೆ, ಹೃದಯವಿಧೀರ್ಣರಾಗುತ್ತಾರೆ.
ಇದರಿಂದ ಯಾರು ಇಲ್ಲಿ ಬಂದು ಮರುಜೀವಿಗಳಾಗುವರೋ ಅವರು ಮತ್ತೆ ರಾವಣ ರಾಜ್ಯದಲ್ಲಿ ಹೋಗಿ
ಮರುಜೀವಿಗಳಾಗುತ್ತಾರೆ. ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೇಗೆ ಮನುಷ್ಯರಿಗೆ
ಹೃದಯಾಘಾತವಾದರೆ ಹೋಗಿ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳುತ್ತಾರೆ ಹಾಗೆಯೇ ಇಲ್ಲಿ
ಹೃದಯಾಘಾತವಾದರೆ ಆಸುರೀ ಸಂಪ್ರದಾಯಕ್ಕೆ ಹೊರಟು ಹೋಗುತ್ತಾರೆ. ಇದು ಮರುಜೀವ ಜನ್ಮವಾಗಿದೆ. ಹೊಸ
ಪ್ರಪಂಚಕ್ಕೆ ಹೋಗುವುದರಿಂದ ತಂದೆಯವರಾಗುತ್ತೀರಿ, ಆತ್ಮಗಳೇ ಹೋಗುತ್ತೀರಲ್ಲವೆ. ನಾವಾತ್ಮರು ಈ
ಶರೀರದ ಪರಿವೆಯನ್ನು ಬಿಡುತ್ತೇವೆಂದರೆ ಇವರು ದೇಹೀ-ಅಭಿಮಾನಿಯೆಂದು ಹೇಳುತ್ತಾರೆ. ನಾವೇ ಬೇರೆ,
ಶರೀರವೇ ಬೇರೆಯಾಗಿದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡರೆ ಅದು ಬೇರೆ
ವಸ್ತುವಾಯಿತಲ್ಲವೆ. ನೀವೀಗ ತಿಳಿದುಕೊಂಡಿದ್ದೀರಿ, ನಾವಾತ್ಮಗಳು ಶ್ರೀಮತದಂತೆ ಸ್ವರ್ಗದ ಸ್ಥಾಪನೆ
ಮಾಡುತ್ತಿದ್ದೇವೆ. ಇಲ್ಲಿ ಮನುಷ್ಯರಿಗೆ ದೇವತೆಗಳಾಗುವ ಕಲೆಯನ್ನು ಕಲಿಯ ಬೇಕಾಗುವುದು. ಇದನ್ನೂ ಸಹ
ಮಕ್ಕಳಿಗೆ ತಿಳಿಸಿದ್ದೇನೆ, ಮತ್ತ್ಯಾವುದೂ ಸತ್ಸಂಗವಿಲ್ಲ. ಸತ್ಯವೆಂದು ಒಬ್ಬ ಪರಮಾತ್ಮನಿಗೇ
ಹೇಳಲಾಗುತ್ತದೆ. ಅವರ ಹೆಸರು ಶಿವನೆಂದಾಗಿದೆ, ಅವರೇ ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಕಲಿಯುಗದ
ಆಯಸ್ಸು ಖಂಡಿತವಾಗಿಯೂ ಪೂರ್ತಿಯಾಗಬೇಕಾಗಿದೆ. ಇಡೀ ಪ್ರಪಂಚದ ಚಕ್ರವು ಹೇಗೆ ಸುತ್ತುತ್ತದೆಯೆಂಬುದು
ಗೋಲದ ಚಿತ್ರದಲ್ಲಿ ಸ್ಪಷ್ಟವಾಗಿದೆ. ದೇವತೆಗಳಾಗಲು ಸಂಗಮಯುಗದಲ್ಲಿ ತಂದೆಯ ಮಕ್ಕಳಾಗುತ್ತೀರಿ.
ತಂದೆಯನ್ನು ಬಿಟ್ಟರೆ ಮತ್ತೆ ಕಲಿಯುಗಕ್ಕೆ ಹೊರಟು ಹೋಗುತ್ತೀರಿ. ಬ್ರಾಹ್ಮಣತನದಲ್ಲಿ ಸಂಶಯ ಬಂದು
ಬಿಟ್ಟರೆ ಮತ್ತೆ ಶೂದ್ರ ಮನೆತನದಲ್ಲಿ ಹೋಗಿ ಬೀಳುವಿರಿ, ಮತ್ತೆ ದೇವತೆಗಳಾಗಲು ಸಾಧ್ಯವಿಲ್ಲ.
ತಂದೆಯು ಇದನ್ನೂ
ತಿಳಿಸುತ್ತಾರೆ - ಹೇಗೆ ಈಗ ಸ್ವರ್ಗದ ಸ್ಥಾಪನೆಯ ತಳಹದಿಯು ಹಾಕಲ್ಪಡುತ್ತಿದೆ. ತಳಪಾಯದ ಸಮಾರಂಭ
ಮತ್ತು ಉದ್ಘಾಟನಾ ಸಮಾರಂಭವೂ ಆಗುತ್ತದೆ ಆದರೆ ಇಲ್ಲಂತೂ ಗುಪ್ತವಾಗಿದೆ. ಇದನ್ನು ನೀವು
ತಿಳಿದುಕೊಂಡಿದ್ದೀರಿ, ನಾವು ಸ್ವರ್ಗಕ್ಕಾಗಿ ತಯಾರಾಗುತ್ತಿದ್ದೇವೆ, ಮತ್ತೆ ನರಕದ ಹೆಸರೂ
ಇರುವುದಿಲ್ಲ, ಎಲ್ಲಿಯವರೆಗೆ ಜೀವಿಸಿರಬೇಕಾಗಿದೆಯೋ ಅಂತ್ಯದವರೆಗೆ ಈ ವಿದ್ಯೆಯನ್ನು ಅವಶ್ಯವಾಗಿ
ಓದಬೇಕಾಗಿದೆ. ಪತಿತ-ಪಾವನ ತಂದೆಯು ಒಬ್ಬರೇ ಆಗಿದ್ದಾರೆ, ಯಾರು ಪಾವನರನ್ನಾಗಿ ಮಾಡುತ್ತಾರೆ.
ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ, ಇದು ಸಂಗಮಯುಗವಾಗಿದೆ ಯಾವಾಗ ತಂದೆಯು ಪಾವನರನ್ನಾಗಿ ಮಾಡಲು ಬರುತ್ತಾರೆ.
ಇದನ್ನೂ ಬರೆಯಬೇಕಾಗಿದೆ, ಪುರುಷೋತ್ತಮ ಸಂಗಮಯುಗದಲ್ಲಿ ಮನುಷ್ಯರು ನರನಿಂದ ನಾರಾಯಣರಾಗುತ್ತಾರೆ
ಇದನ್ನೂ ಸಹ ಬರೆಯಲ್ಪಟ್ಟಿದೆ. ಇದು ನಿಮ್ಮ ಈಶ್ವರೀಯ ಜನ್ಮಸಿದ್ಧ ಅಧಿಕಾರವಾಗಿದೆ, ಈಗ ತಂದೆಯು
ನಿಮಗೆ ದಿವ್ಯ ದೃಷ್ಟಿಯನ್ನು ಕೊಡುತ್ತಾರೆ. ಈಗ ನಮ್ಮದು 84 ಜನ್ಮಗಳ ಚಕ್ರವು ಪೂರ್ಣವಾಗಿದೆ ಎಂದು
ಆತ್ಮಕ್ಕೆ ಅರ್ಥವಾಗಿದೆ. ತಂದೆಯೂ ಆತ್ಮಗಳಿಗೇ ತಿಳಿಸಿಕೊಡುತ್ತಾರೆ. ಆತ್ಮವೇ ಓದುತ್ತದೆ. ಭಲೆ
ದೇಹಾಭಿಮಾನವು ಪದೇ-ಪದೇ ಬಂದು ಬಿಡುತ್ತದೆ ಏಕೆಂದರೆ ಅರ್ಧಕಲ್ಪ ದೇಹಾಭಿಮಾನವಲ್ಲವೇ. ಆದ್ದರಿಂದ
ಆತ್ಮಾಭಿಮಾನಿಗಳಾಗುವುದರಲ್ಲಿ ಸಮಯ ಹಿಡಿಸುತ್ತದೆ. ತಂದೆಯು ಕುಳಿತಿದ್ದಾರೆ, ಸಮಯವೂ ಸಿಕ್ಕಿದೆ,
ಭಲೆ ಬ್ರಹ್ಮಾನ ಆಯಸ್ಸು 100 ವರ್ಷಗಳೆಂದು ಹೇಳುತ್ತಾರೆ ಅಥವಾ ಕಡಿಮೆಯೂ ಇರಬಹುದು. ತಿಳಿದುಕೊಳ್ಳಿ,
ಬ್ರಹ್ಮಾನು ಹೊರಟು ಹೋದರೆ ಸ್ಥಾಪನೆಯಾಗುವುದಿಲ್ಲ ಎಂದಲ್ಲ. ನೀವು ಸೈನಿಕರು ಕುಳಿತಿದ್ದೀರಲ್ಲವೆ,
ತಂದೆಯು ಮಂತ್ರವನ್ನು ಕೊಟ್ಟಿದ್ದಾರೆ, ಓದಬೇಕಾಗಿದೆ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದೂ
ಸಹ ಬುದ್ಧಿಯಲ್ಲಿದೆ. ನೆನಪಿನ ಯಾತ್ರೆಯಲ್ಲಿರಬೇಕಾಗಿದೆ, ನೆನಪಿನಿಂದಲೇ ವಿಕರ್ಮಗಳು
ವಿನಾಶವಾಗುತ್ತದೆ. ಭಕ್ತಿಮಾರ್ಗದಲ್ಲಿ ಎಲ್ಲರಿಂದ ವಿಕರ್ಮಗಳಾಗಿವೆ. ಹಳೆಯ ಪ್ರಪಂಚ ಮತ್ತು ಹೊಸ
ಪ್ರಪಂಚ ಎರಡು ಗೋಲಗಳು ನಿಮ್ಮ ಮುಂದಿವೆ ಅಂದಾಗ ನೀವು ಇದನ್ನು ಬರೆಯಬಹುದು - ಹಳೆಯ ಪ್ರಪಂಚ, ರಾವಣ
ರಾಜ್ಯದ ವಿನಾಶ, ಹೊಸ ಪ್ರಪಂಚ ಜ್ಞಾನ ಮಾರ್ಗ ರಾಮ ರಾಜ್ಯದ ಸ್ಥಾಪನೆ. ಯಾರು ಪೂಜ್ಯರಾಗಿದ್ದರೋ ಅವರೆ
ಪೂಜಾರಿಗಳಾಗಿದ್ದಾರೆ. ಕೃಷ್ಣನೂ ಸಹ ಪೂಜ್ಯ, ಸುಂದರನಾಗಿದ್ದನು, ಮತ್ತೆ ರಾವಣ ರಾಜ್ಯದಲ್ಲಿ ಪೂಜಾರಿ,
ಶ್ಯಾಮನಾಗಿ ಬಿಡುತ್ತಾನೆ. ಇದನ್ನು ತಿಳಿಸುವುದು ಸಹಜವಾಗಿದೆ. ಮೊಟ್ಟ ಮೊದಲಿಗೆ ಪೂಜೆಯು
ಆರಂಭವಾದಾಗ ದೊಡ್ಡ-ದೊಡ್ಡ ವಜ್ರಗಳಿಂದ ಲಿಂಗವನ್ನು ಮಾಡುತ್ತಾರೆ, ಅದು ಬಹಳ ಅಮೂಲ್ಯವಾಗಿರುತ್ತದೆ
ಏಕೆಂದರೆ ತಂದೆಯು ಇಷ್ಟು ಸಾಹುಕಾರರನ್ನಾಗಿ ಮಾಡಿದ್ದಾರಲ್ಲವೆ. ಅವರೇ ಸ್ವತಃ ಸತ್ಯ
ವಜ್ರವಾಗಿದ್ದಾರೆ ಆದ್ದರಿಂದ ಆತ್ಮಗಳನ್ನು ವಜ್ರ ಸಮಾನರನ್ನಾಗಿ ಮಾಡುತ್ತಾರೆ. ಅಂದಮೇಲೆ ಅವರನ್ನು
ವಜ್ರದಿಂದ ಮಾಡಿ ಇಡಬೇಕಲ್ಲವೆ. ವಜ್ರವನ್ನು ಯಾವಾಗಲೂ ಮಧ್ಯ ಭಾಗದಲ್ಲಿಡುತ್ತಾರೆ. ಪುಖರಾಜ ಮಣಿಯ
ಜೊತೆ ಅಷ್ಟು ಶೋಭಿಸುವುದಿಲ್ಲ ಆದ್ದರಿಂದ ಮಧ್ಯದಲ್ಲಿ ವಜ್ರವನ್ನಿಡುತ್ತಾರೆ. ಇವರ ಮೂಲಕವೇ
ಅಷ್ಟರತ್ನಗಳು ವಿಜಯಮಾಲೆಯ ಮಣಿಯಾಗುತ್ತಾರೆ. ಎಲ್ಲದಕ್ಕಿಂತ ಹೆಚ್ಚಿನ ಮೌಲ್ಯವು ವಜ್ರಕ್ಕಿರುತ್ತದೆ.
ಉಳಿದವರು ನಂಬರ್ವಾರ್ ಆಗುತ್ತಾರೆ, ಮಾಡುವವರು ಶಿವ ತಂದೆಯಾಗಿದ್ದಾರೆ. ಇವೆಲ್ಲಾ ಮಾತುಗಳನ್ನು
ತಂದೆಯ ವಿನಃ ಮತ್ತ್ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ಓದುತ್ತಾ-ಓದುತ್ತಾ ಆಶ್ಚರ್ಯವೆನಿಸುವಂತೆ
ಬಾಬಾ, ಬಾಬಾ ಎನ್ನುತ್ತಾರೆ ಮತ್ತೆ ಬಿಟ್ಟು ಹೊರಟು ಹೋಗುತ್ತಾರೆ. ಶಿವ ತಂದೆಗೆ ಬಾಬಾ ಎಂದು
ಹೇಳುತ್ತೀರಿ ಅಂದಮೇಲೆ ಅವರನ್ನೆಂದೂ ಬಿಡಬಾರದು. ಒಂದುವೇಳೆ ಬಿಟ್ಟರೆ ಅದು ಅವರ ಅದೃಷ್ಟವೆಂದು
ಹೇಳಲಾಗುತ್ತದೆ. ಯಾರ ಅದೃಷ್ಟದಲ್ಲಿಲ್ಲವೋ ಅವರು ಮತ್ತೆ ಕರ್ಮವನ್ನೂ ಅದೇರೀತಿ ಮಾಡುತ್ತಾರೆ.
ಅದರಿಂದ ಶಿಕ್ಷೆಯು ಇನ್ನೂ ನೂರುಪಟ್ಟು ಹೆಚ್ಚಾಗುತ್ತದೆ. ಪುಣ್ಯಾತ್ಮರಾಗಲು ಪುರುಷಾರ್ಥ ಮಾಡಿ
ಮತ್ತೆ ಪಾಪ ಮಾಡುವುದರಿಂದ ನೂರುಪಟ್ಟು ಪಾಪವಾಗಿ ಬಿಡುತ್ತದೆ ಅಂತಹವರು ಕುಂಟಿತವಾಗಿ ಬಿಡುತ್ತಾರೆ.
ವೃದ್ಧಿ ಹೊಂದಲು ಸಾಧ್ಯವಿಲ್ಲ. ನೂರುಪಟ್ಟು ಶಿಕ್ಷೆಯು ಹೆಚ್ಚಾಗುವುದರಿಂದ ಸ್ಥಿತಿಯು
ಶಕ್ತಿಶಾಲಿಯಾಗಿರುವುದಿಲ್ಲ ಯಾವ ತಂದೆಯಿಂದ ನೀವು ವಜ್ರ ಸಮಾನರಾಗುತ್ತೀರೋ ಅವರಲ್ಲೇಕೆ ಸಂಶಯ
ಬರಬೇಕು? ಯಾವುದೇ ಕಾರಣದಿಂದ ತಂದೆಯನ್ನು ಬಿಟ್ಟರೆ ಅವರನ್ನು ಮೂರ್ಖರೆಂದು ಹೇಳುತ್ತಾರೆ.
ಎಲ್ಲಿಯಾದರೂ ಇದ್ದು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದರಿಂದ ಶಿಕ್ಷೆಗಳಿಂದ ಬಿಡುಗಡೆಯಾಗುವಿರಿ.
ಇಲ್ಲಿ ನೀವು ಪತಿತರಿಂದ ಪಾವನರಾಗುವುದಕ್ಕಾಗಿಯೇ ಬರುತ್ತೀರಿ. ಹಿಂದೆ ಇಂತಹ ಯಾವುದಾದರೂ
ಕರ್ಮಗಳನ್ನು ಮಾಡಿದ್ದರೆ ಅದರಿಂದ ಶರೀರದ ಎಷ್ಟೊಂದು ಕರ್ಮ ಭೋಗವು ನಡೆಯುತ್ತದೆ. ನೀವಂತೂ ಅರ್ಧ
ಕಲ್ಪಕ್ಕಾಗಿ ಇವೆಲ್ಲದರಿಂದ ಈಗ ಮುಕ್ತರಾಗುತ್ತೀರಿ ಅಂದಾಗ ತಮ್ಮನ್ನು ನೋಡಿಕೊಳ್ಳಿ, ನಾವು ಎಷ್ಟು
ನಮ್ಮ ಉನ್ನತಿ ಮಾಡಿಕೊಳ್ಳುತ್ತೇವೆ? ಅನ್ಯರ ಸೇವೆ ಮಾಡುತ್ತೇವೆ? ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿಯೂ
ಮೇಲೆ ಬರೆಯಬಹುದು - ಇದಾಗಿದೆ ವಿಶ್ವದಲ್ಲಿ ಶಾಂತಿಯ ರಾಜಧಾನಿಯಾವುದು ಈಗ ಸ್ಥಾಪನೆಯಾಗುತ್ತಿದೆ,
ಇದು ಗುರಿ-ಧ್ಯೇಯವಾಗಿದೆ. ಸ್ವರ್ಗದಲ್ಲಿ 100% ಸುಖ, ಶಾಂತಿ, ಪವಿತ್ರತೆಯಿರುವುದು. ಇವರ
ರಾಜ್ಯದಲ್ಲಿ ಮತ್ತ್ಯಾವ ಧರ್ಮವೂ ಇರುವುದಿಲ್ಲ. ಅಂದಾಗ ಈಗಿರುವ ಇಷ್ಟೊಂದು ಧರ್ಮಗಳೆಲ್ಲವೂ
ಅವಶ್ಯವಾಗಿ ವಿನಾಶವಾಗಬೇಕಲ್ಲವೆ. ತಿಳಿಸುವುದರಲ್ಲಿ ಬಹಳ ಬುದ್ಧಿಯಿರಬೇಕು ಇಲ್ಲವೆಂದರೆ ತಮ್ಮ
ಸ್ಥಿತಿಯನುಸಾರವೇ ತಿಳಿಸುತ್ತಾರೆ. ಚಿತ್ರಗಳ ಮುಂದೆ ಕುಳಿತು ವಿಚಾರ ಮಾಡಬೇಕು, ಇವೆಲ್ಲದರ
ತಿಳುವಳಿಕೆಯಂತೂ ನಿಮಗೆ ಸಿಕ್ಕಿದೆ, ನೀವು ತಿಳಿದುಕೊಂಡಿದ್ದೀರೆಂದರೆ ತಿಳಿಸಲೂಬೇಕಾಗಿದೆ
ಆದ್ದರಿಂದ ತಂದೆಯು ಮ್ಯೂಸಿಯಂ ಅನ್ನು ತೆರೆಯುತ್ತಿರುತ್ತಾರೆ. ಗೇಟ್ ವೇ ಟು ಹೆವೆನ್, ಈ ಹೆಸರು ಸಹ
ಚೆನ್ನಾಗಿದೆ. ಅದು ದೆಹಲಿ ಗೇಟ್, ಇಂಡಿಯಾ ಗೇಟ್ ಆದರೆ ಇದು ಸ್ವರ್ಗದ ಗೇಟ್ ಆಗಿದೆ. ನೀವೀಗ
ಸ್ವರ್ಗದ ಗೇಟ್ನ್ನು ತೆರೆಯುತ್ತಿದ್ದೀರಿ. ಹೇಗೆ ಚಕ್ರವ್ಯೂಹದಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ
ಭಕ್ತಿಮಾರ್ಗದಲ್ಲಿ ಸಿಕ್ಕಿಕೊಳ್ಳುತ್ತಾರೆ. ಮಾರ್ಗವು ಯಾರಿಗೂ ಸಿಗುವುದಿಲ್ಲ. ಎಲ್ಲರೂ ಮಾಯೆಯ
ರಾಜ್ಯದಲ್ಲಿ ಎಲ್ಲರೂ ಸಿಕ್ಕಿ ಹಾಕಿಕೊಳ್ಳುತ್ತಾರೆ ಮತ್ತೆ ತಂದೆಯು ಬಂದು ಹೊರ ತೆಗೆಯುತ್ತಾರೆ.
ಯಾರಿಗೆ ಹೊರ ಬರುವುದಕ್ಕೆ ಇಷ್ಟವಿಲ್ಲವೋ ಅವರಿಗೆ ತಂದೆಯು ತಾನೆ ಏನು ಮಾಡುವರು! ಆದ್ದರಿಂದಲೇ
ತಂದೆಯು ಹೇಳುತ್ತಾರೆ - ಮಹಾಮೂರ್ಖರನ್ನೂ ಇಲ್ಲಿಯೇ ನೋಡಿ, ಯಾರು ವಿದ್ಯೆಯನ್ನು ಬಿಟ್ಟು
ಬಿಡುತ್ತಾರೆ. ಸಂಶಯ ಬುದ್ಧಿಯವರಾಗಿ ಜನ್ಮ-ಜನ್ಮಾಂತರಕ್ಕೆ ತಮ್ಮ ಅದೃಷ್ಟವನ್ನು ಕೊಲೆ
ಮಾಡಿಕೊಳ್ಳುತ್ತಾರೆ. ಅದೃಷ್ಟವು ಕೆಡುತ್ತದೆಯೆಂದರೆ ಇದೇ ರೀತಿ ಆಗುತ್ತದೆ. ಗ್ರಹಚಾರಿಯು
ಕುಳಿತುಕೊಳ್ಳುವುದರಿಂದ ಪವಿತ್ರರಾಗುವ ಬದಲು ಅಪವಿತ್ರರಾಗಿ ಬಿಡುತ್ತಾರೆ. ಆತ್ಮವು ಗುಪ್ತವಾಗಿ
ಓದುತ್ತದೆ, ಆತ್ಮವೇ ಶರೀರದಿಂದ ಎಲ್ಲವನ್ನೂ ಮಾಡುತ್ತದೆ. ಶರೀರವಿಲ್ಲದೆ ಆತ್ಮವು ಏನನ್ನೂ ಮಾಡಲು
ಸಾಧ್ಯವಿಲ್ಲ ಆದರೆ ಆತ್ಮವೆಂದು ತಿಳಿಯುವುದೇ? ಪರಿಶ್ರಮದ ಕೆಲಸವಾಗಿದೆ. ಆತ್ಮ ನಿಶ್ಚಯ
ಮಾಡಿಕೊಳ್ಳದಿದ್ದರೆ ಮತ್ತೆ ದೇಹಾಭಿಮಾನದಲ್ಲಿ ಬಂದುಬಿಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಪರಮ
ಶಿಕ್ಷಕನ ವಿದ್ಯೆಯು ನಮ್ಮನ್ನು ನರನಿಂದ ನಾರಾಯಣನನ್ನಾಗಿ ಮಾಡುವಂತದ್ದಾಗಿದೆ, ಇದೇ ನಿಶ್ಚಯದಿಂದ
ಗಮನವಿಟ್ಟು ಓದಬೇಕಾಗಿದೆ, ಓದಿಸುವಂತಹ ಶಿಕ್ಷಕರನ್ನು ನೋಡಬಾರದು.
2. ಆತ್ಮಾಭಿಮಾನಿಗಳಾಗುವ
ಪುರುಷಾರ್ಥ ಮಾಡಬೇಕಾಗಿದೆ. ಮರುಜೀವಿಗಳಾಗಿದ್ದೀರಿ ಆದ್ದರಿಂದ ಈ ಶರೀರದ ಭಾನವನ್ನು ಬಿಡಬೇಕಾಗಿದೆ.
ಪುಣ್ಯಾತ್ಮರಾಗಬೇಕು, ಯಾವುದೇ ಪಾಪ ಕರ್ಮವನ್ನು ಮಾಡಬಾರದು.
ವರದಾನ:
ಸ್ವದರ್ಶನ
ಚಕ್ರದ ಸ್ಮತಿಯಿಂದ ಸದಾ ಸಂಪನ್ನ ಸ್ಥಿತಿಯ ಅನುಭವ ಮಾಡುವಂತಹ ಮಾಲಮಾಲ್ ಭವ.
ಯಾರು ಸದರ್ಶನ
ಚಕ್ರಧಾರಿಯಾಗಿರುತ್ತಾರೆ ಅವರು ಮಾಯೆಯ ಅನೇಕ ಪ್ರಕಾರದ ಚಕ್ರಗಳಿಂದ ಮುಕ್ತರಾಗಿರುತ್ತಾರೆ. ಒಂದು
ಸ್ವದರ್ಶನ ಚಕ್ರ ಅನೇಕ ವ್ಯರ್ಥ ಚಕ್ರಗಳನ್ನು ಸಮಾಪ್ತಿ ಮಾಡುವಂತಹದಾಗಿದೆ, ಮಾಯೆಯನ್ನು
ಓಡಿಸುವಂತಹದಾಗಿದೆ. ಅದರ ಮುಂದೆ ಮಾಯೆ ನಿಲ್ಲಲು ಸಾಧ್ಯವಿಲ್ಲ. ಸ್ವದರ್ಶನ ಚಕ್ರಧಾರಿ ಮಕ್ಕಳು ಸದಾ
ಸಂಪನ್ನರಾಗಿರುವ ಕಾರಣ ಅಚಲರಾಗಿರುತ್ತಾರೆ. ಸ್ವಯಂನ್ನು ಮಾಲಾಮಾಲ್ ಎಂದು ಅನುಭವ ಮಾಡುತ್ತಾರೆ.
ಮಾಯೆ ಖಾಲಿ ಮಾಡಲು ಪ್ರಯತ್ನ ಮಾಡುತ್ತೆ ಆದರೆ ಇವರು ಸದಾ ಎಚ್ಚರಿಕೆ, ಬುದ್ಧಿವಂತಿಕೆ, ಜಾಗೃತ
ಜ್ಯೋತಿಯಾಗಿರುತ್ತಾರೆ ಆದ್ದರಿಂದ ಮಾಯೆ ಏನೂ ಮಾಡಲು ಆಗುವುದಿಲ್ಲ. ಯಾರ ಬಳಿ ಅಟೆನ್ಷನ್ ರೂಪಿ
ಕಾವಲುಗಾರ ಎಚ್ಚರಿಕೆಯಿಂದಿರುತ್ತಾನೆ ಅವರು ಸದಾ ಸುರಕ್ಷಿತರಾಗಿರುತ್ತಾರೆ.
ಸ್ಲೋಗನ್:
ನಿಮ್ಮ ಮಾತು ಈ
ರೀತಿ ಸಮರ್ಥವಾಗಿರಲಿ ಅದರಲ್ಲಿ ಶುಭ ಹಾಗೂ ಶ್ರೇಷ್ಠ ಭಾವನೆ ಸಮಾವೇಶವಾಗಿರಲಿ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಶಕ್ತಿಶಾಲಿಯಾದ ನೆನಪಿಗೆ
ಸತ್ಯ ಹೃದಯದ ಪ್ರೀತಿಯಿರಬೇಕು. ಸತ್ಯ ಹೃದಯದವರು ಸೆಕೆಂಡಿನಲ್ಲಿ ಬಿಂದುವಾಗಿ ಬಿಂದು ಸ್ವರೂಪ
ತಂದೆಯನ್ನು ನೆನಪು ಮಾಡಬಹುದು. ಸತ್ಯ ಹೃದಯದವರು ಸತ್ಯ ಸಾಹೇಬ್ನನ್ನು ರಾಜಿ ಮಾಡಿಕೊಳ್ಳುವ ಕಾರಣ,
ತಂದೆಯ ವಿಶೇಷ ಆಶೀರ್ವಾದಗಳು ಪ್ರಾಪ್ತಿಯಾಗುತ್ತದೆ, ಯಾವುದರಿಂದ ಸಹಜವಾಗಿ ಒಂದು ಸಂಕಲ್ಪದಲ್ಲಿ
ಸ್ಥಿತವಾಗಿ ಜ್ವಾಲಾ ರೂಪದ ನೆನಪಿನ ಅನುಭವ ಮಾಡಬಹುದು, ಶಕ್ತಿಶಾಲಿ ಪ್ರಕಂಪನಗಳನ್ನು ಹರಡಿಸಬಹುದು.