13.07.25    Avyakt Bapdada     Kannada Murli    03.02.2006     Om Shanti     Madhuban


"ಪರಮಾತ್ಮನ ಪ್ರೀತಿಯಲ್ಲಿ ಇಂತಹ ಸಂಪೂರ್ಣ ಪವಿತ್ರತೆಯ ಸ್ಥಿತಿಯನ್ನು ರೂಪಿಸಿಕೊಳ್ಳಿ, ಅದರಲ್ಲಿ ವ್ಯರ್ಥದ ಹೆಸರು-ಗುರುತೂ ಇರಬಾರದು"


ಇಂದು ಬಾಪ್ದಾದಾ ನಾಲ್ಕಾರೂ ಕಡೆಯ ತನ್ನ ಪ್ರಭುಪ್ರಿಯ ಮಕ್ಕಳನ್ನು ನೋಡುತ್ತಿದ್ದಾರೆ. ಇಡೀ ವಿಶ್ವದಲ್ಲಿ ಆ0iÉ್ಕುಯಾಗಿರುವ ಕೋಟಿಯಲ್ಲಿ ಕೆಲವರೇ ಈ ಪರಮಾತ್ಮನ ಪ್ರೀತಿಗೆ ಅಧಿಕಾರಿಗಳಾಗುತ್ತಾರೆ. ಪರಮಾತ್ಮನ ಪ್ರೀತಿಯು ತಾವು ಮಕ್ಕಳನ್ನು ಇಲ್ಲಿಗೆ ಕರೆತಂದಿದೆ. ಈ ಪರಮಾತ್ಮನ ಪ್ರೀತಿಯನ್ನು ಇಡೀ ಕಲ್ಪದಲ್ಲಿ ಈ ಸಮಯದಲ್ಲಿ0iÉುೀ ಅನುಭವ ಮಾಡುತ್ತೀರಿ ಮತ್ತೆಲ್ಲಾ ಸಮಯದಲ್ಲಿ ಆತ್ಮಗಳ ಪ್ರೀತಿ, ಮಹಾನ್ ಆತ್ಮರ ಪ್ರೀತಿ, ಧರ್ಮಾತ್ಮರ ಪ್ರೀತಿಯನ್ನು ಅನುಭವ ಮಾಡಿದಿರಿ ಆದರೆ ಈಗ ಪರಮಾತ್ಮನ ಪ್ರೀತಿಗೆ ಪಾತ್ರರಾಗಿಬಿಟ್ಟಿರಿ. ಪರಮಾತ್ಮನು ಎಲ್ಲಿದ್ದಾರೆ ಎಂದು ಯಾರಾದರೂ ತಮ್ಮೊಂದಿಗೆ ಕೇಳಿದರೆ ಏನು ಹೇಳುವಿರಿ? ಪರಮಾತ್ಮ ತಂದೆಯಂತೂ ನಮ್ಮ ಜೊತೆಯಲ್ಲಿಯೇ ಇದ್ದಾರೆ. ನಾವು ಅವರಜೊತೆ ಇರುತ್ತೇವೆ. ಪರಮಾತ್ಮನೂ ನಮ್ಮನ್ನು ಬಿಟ್ಟಿರಲು ಸಾಧ್ಯವಿಲ್ಲ ಮತ್ತು ನಾವೂ ಸಹ ಪರಮಾತ್ಮನನ್ನು ಅಗಲಿರಲು ಸಾಧ್ಯವಿಲ್ಲ. ಇಷ್ಟೊಂದು ಪ್ರೀತಿಯ ಅನುಭವ ಮಾಡುತ್ತಿದ್ದೀರಿ. ನಾವು ಅವರ ಹೃದಯದಲ್ಲಿರುತ್ತೇವೆ, ಅವರು ನಮ್ಮ ಹೃದಯದಲ್ಲಿರುತ್ತಾರೆ ಎಂದು ನಶೆಯಿಂದ ಹೇಳುತ್ತೀರಿ. ಇದರ ಅನುಭವಿಗಳಲ್ಲವೇ! ಅನುಭವಿಗಳಾಗಿದ್ದೀರಾ? ಹೃದಯದಲ್ಲಿ ಏನು ಬರುತ್ತದೆ? ಒಂದುವೇಳೆ ನಾವು ಅನುಭವಿಗಳಾಗದಿದ್ದರೆ ಇನ್ನ್ಯಾರು ಆಗುವರು! ತಂದೆಯೂ ಸಹ ಇಂತಹ ಪ್ರೀತಿಗೆ ಅಧಿಕಾರಿಗಳನ್ನು ನೋಡಿ ಹರ್ಷಿತರಾಗುತ್ತಾರೆ.

ಪರಮಾತ್ಮನ ಪ್ರೀತಿಯ ಚಿಹ್ನೆಯೇನೆಂದರೆ ಯಾರೊಂದಿಗೆ ಪ್ರೀತಿಯಿರುವುದೋ ಅವರಹಿಂದೆ ಎಲ್ಲವನ್ನೂ ಬಲಿಹಾರಿ ಮಾಡಲು ಸಹಜವಾಗಿ ತಯಾರಾಗಿಬಿಡುತ್ತಾರೆ ಅಂದಾಗ ತಾವೆಲ್ಲರೂ ಸಹ ತಂದೆಯ ಪ್ರತಿಯೊಬ್ಬ ಮಗುವು ತಂದೆಯ ಸಮಾನನಾಗಲಿ, ಪ್ರತಿಯೊಬ್ಬರ ಚಹರೆಯಿಂದ ತಂದೆಯು ಪ್ರತ್ಯಕ್ಷವಾಗಿ ಕಾಣಲಿ ಎಂದು ಯಾವುದನ್ನು ಬಯಸುತ್ತಾರೆಯೋ ಆ ರೀತಿ ಆಗಿದ್ದೀರಲ್ಲವೆ? ತಂದೆಗೆ ಅತಿಪ್ರಿಯವಾದ ಸ್ಥಿತಿಯನ್ನು ಅರಿತುಕೊಂಡಿದ್ದೀರಲ್ಲವೆ! ತಂದೆಗೆ ಅತಿಪ್ರಿಯವಾದ ಸ್ಥಿತಿಯಾಗಿದೆ - ಸಂಪೂರ್ಣ ಪವಿತ್ರತೆ. ಈ ಬ್ರಾಹ್ಮಣ ಜನ್ಮದ ತಳಹದಿಯೂ ಸಹ ಸಂಪೂರ್ಣ ಪವಿತ್ರತೆಯಾಗಿದೆ. ಸಂಪೂರ್ಣ ಪವಿತ್ರತೆಯ ಗುಹ್ಯತೆಯನ್ನು ತಿಳಿದುಕೊಂಡಿದ್ದೀರಾ? ಸಂಕಲ್ಪ ಮತ್ತು ಸ್ವಪ್ನದಲ್ಲಿಯೂ ಅಂಶಮಾತ್ರವೂ ಅಪವಿತ್ರತೆಯ ಹೆಸರು, ಗುರುತೂ ಇರಬಾರದು. ಬಾಪ್ದಾದಾ ಈಗಿನ ಸಮಯದ ಸಮೀಪತೆಯ ಪ್ರಮಾಣ ಪದೇ-ಪದೇ ಗಮನ ತರಿಸುತ್ತಿದ್ದಾರೆ - ಸಂಪೂರ್ಣ ಪವಿತ್ರತೆಯ ಲೆಕ್ಕದಿಂದ ನೋಡಿದಾಗ ವ್ಯರ್ಥಸಂಕಲ್ಪವೂ ಸಹ ಸಂಪೂರ್ಣತೆಯಲ್ಲ ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ವ್ಯರ್ಥಸಂಕಲ್ಪಗಳು ನಡೆಯುತ್ತವೆಯೇ? ಯಾವುದೇ ಪ್ರಕಾರದ ವ್ಯರ್ಥಸಂಕಲ್ಪವು ಸಂಪೂರ್ಣತೆಯಿಂದ ದೂರ ಮಾಡುತ್ತಿಲ್ಲವೆ? ಪುರುಷಾರ್ಥದಲ್ಲಿ ಎಷ್ಟೆಷ್ಟು ಮುಂದುವರೆಯುತ್ತಾ ಹೋಗುತ್ತೀರಿ ಅಷ್ಟು ರಾಯಲ್ರೂಪದ ವ್ಯರ್ಥ ಸಂಕಲ್ಪವು ಸಮಯವನ್ನು ವ್ಯರ್ಥವಾಗಿ ಸಮಾಪ್ತಿ ಮಾಡುತ್ತಿಲ್ಲವೆ? ರಾಯಲ್ರೂಪದಲ್ಲಿ ಅಭಿಮಾನ ಮತ್ತು ಅಪಮಾನವು ವ್ಯರ್ಥಸಂಕಲ್ಪದ ರೂಪದಲ್ಲಿ ಯುದ್ಧ ಮಾಡುತ್ತಿಲ್ಲವೆ? ಒಂದುವೇಳೆ ಅಭಿಮಾನದ ರೂಪದಲ್ಲಿ ಯಾವುದೇ ಪರಮಾತ್ಮನ ಕೊಡುಗೆಯನ್ನು ತನ್ನ ವಿಶೇಷತೆ0iÉುಂದು ತಿಳಿದುಕೊಳ್ಳುತ್ತೀರೆಂದರೆ ಆ ವಿಶೇಷತೆಯ ಅಭಿಮಾನವೂ ಸಹ ನಿಮ್ಮನ್ನು ಕೆಳಗೆ ತರುತ್ತದೆ. ವಿಘ್ನರೂಪವಾಗುತ್ತದೆ ಮತ್ತು ಅಭಿಮಾನವೂ ಸಹ ಸೂಕ್ಷ್ಮರೂಪದಲ್ಲಿ ಇದೇ ಬರುತ್ತದೆ, ಅದನ್ನು ನೀವೂ ಸಹ ತಿಳಿದುಕೊಂಡಿದ್ದೀರಿ - ನನ್ನತನವು ಬಂದಿತು ಅಥವಾ ನನ್ನ ಹೆಸರು, ನನಗೆ ಸ್ಥಾನಮಾನ ಇರಬೇಕು. ಈ ನನ್ನತನವು ಅಭಿಮಾನದ ರೂಪವನ್ನು ತೆಗೆದುಕೊಂಡುಬಿಡುತ್ತದೆ. ಈ ವ್ಯರ್ಥಸಂಕಲ್ಪವೂ ಸಹ ಸಂಪೂರ್ಣತೆಯಿಂದ ದೂರ ಮಾಡಿಬಿಡುತ್ತದೆ ಏಕೆಂದರೆ ಬಾಪ್ದಾದಾ ಇದನ್ನೇ ಬಯಸುತ್ತಾರೆ - `ಸ್ವ-ಮಾನ' ದಲ್ಲಿರಿ, ಅಭಿಮಾನವೂ ಬೇಡ, ಅಪಮಾನವೂ ಬೇಡ. ವ್ಯರ್ಥಸಂಕಲ್ಪಗಳು ಬರಲು ಇದೇ ಕಾರಣವಾಗುತ್ತದೆ.

ಬಾಪ್ದಾದಾ ಪ್ರತಿಯೊಬ್ಬ ಮಗುವನ್ನು ಡಬಲ್ ಮಾಲೀಕತ್ವದ ನಿಶ್ಚಯ ಮತ್ತು ನಶೆಯಲ್ಲಿ ನೋಡಲು ಬಯಸುತ್ತಾರೆ. ಡಬಲ್ ಮಾಲೀಕತ್ವವು ಏನಾಗಿದೆ? ಒಂದನೆಯದಾಗಿ ತಂದೆಯ ಖಜಾನೆಗಳಿಗೆ ಮಾಲೀಕರು ಮತ್ತು ಎರಡನೆಯದು ಸ್ವರಾಜ್ಯದ ಮಾಲೀಕರು. ಎರಡೂ ಪ್ರಕಾರದ ಮಾಲೀಕತ್ವವೂ ಬೇಕು ಏಕೆಂದರೆ ಎಲ್ಲರೂ ಬಾಲಕರೂ ಆಗಿದ್ದೀರಿ ಮತ್ತು ಮಾಲೀಕರೂ ಆಗಿದ್ದೀರಿ ಆದರೆ ಬಾಪ್ದಾದಾ ನೋಡಿದರು - ಬಾಲಕರಂತೂ ಎಲ್ಲರೂ ಆಗಿದ್ದೀರಿ ಏಕೆಂದರೆ ನನ್ನಬಾಬಾ ಎಂದು ಎಲ್ಲರೂ ಹೇಳುತ್ತೀರಿ. ನನ್ನಬಾಬಾ ಎಂದು ಹೇಳುವುದು ಅರ್ಥಾತ್ ಬಾಲಕರಾಗುವುದು ಆದರೆ ಬಾಲಕರ ಜೊತೆಜೊತೆಗೆ ಎರಡೂಪ್ರಕಾರದ ಮಾಲೀಕರಾಗಬೇಕು ಆದರೆ ಈ ಮಾಲೀಕತ್ವದಲ್ಲಿ ನಂಬರ್ವಾರ್ ಆಗಿಬಿಡುತ್ತೀರಿ. ನಾನು ಬಾಲಕ ಹಾಗೂ ಮಾಲೀಕನೂ ಆಗಿದ್ದೇನೆ. ಆಸ್ತಿಯ ಖಜಾನೆಯು ಪ್ರಾಪ್ತಿಯಾಗಿದೆ ಆದ್ದರಿಂದ ಬಾಲಕತನದ ನಿಶ್ಚಯ ಮತ್ತು ನಶೆಯಿರುತ್ತದೆ ಆದರೆ ಪ್ರಾಕ್ಟಿಕಲ್ನಲ್ಲಿ ಮಾಲೀಕತನದ ನಿಶ್ಚಯದ ನಶೆಯಲ್ಲಿ ನಂಬರ್ವಾರ್ ಆಗಿಬಿಡುತ್ತೀರಿ. ಸ್ವರಾಜ್ಯಾಧಿಕಾರಿ ಮಾಲೀಕರಾಗುವುದರಲ್ಲಿ ವಿಶೇಷವಾಗಿ ಮನಸ್ಸು ವಿಘ್ನ ಹಾಕುತ್ತದೆ. ಮನಸ್ಸಿನ ಮಾಲೀಕರಾಗಿ, ಎಂದಿಗೂ ಮನಸ್ಸಿಗೆ ಪರವಶರಾಗಬೇಡಿ. ಸ್ವರಾಜ್ಯ ಅಧಿಕಾರಿಗಳಾಗುತ್ತೇವೆಂದು ಹೇಳುತ್ತೀರಿ ಅಂದಮೇಲೆ ಸ್ವರಾಜ್ಯ ಅಧಿಕಾರಿ ಅರ್ಥಾತ್ ರಾಜರಾಗಿದ್ದೀರಿ. ಹೇಗೆ ಬ್ರಹ್ಮಾತಂದೆಯು ಪ್ರತಿನಿತ್ಯ ಪರಿಶೀಲನೆ ಮಾಡಿಕೊಂಡು ಮನಸ್ಸಿನ ಮಾಲೀಕನಾಗಿ ವಿಶ್ವದ ಮಾಲೀಕನ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಂಡರು ಹಾಗೆಯೇ ಈ ಮನಸ್ಸು-ಬುದ್ಧಿಯು ರಾಜನ ಲೆಕ್ಕದಲ್ಲಿ ಮಂತ್ರಿಗಳಾಗಿದ್ದಾರೆ. ಈ ವ್ಯರ್ಥಸಂಕಲ್ಪವೂ ಸಹ ಮನಸ್ಸಿನಲ್ಲಿಯೇ ಉತ್ಪನ್ನವಾಗುತ್ತದೆ ಅಂದಾಗ ಮನಸ್ಸು ವ್ಯರ್ಥಸಂಕಲ್ಪಕ್ಕೆ ವಶ ಮಾಡಿಬಿಡುತ್ತದೆ. ಒಂದುವೇಳೆ ಆಜ್ಞೆಯಪ್ರಮಾಣ ನಡೆಸುವುದಿಲ್ಲವೆಂದರೆ ಮನಸ್ಸು ಚಂಚಲವಾಗುವಕಾರಣ ಪರವಶ ಮಾಡಿಬಿಡುತ್ತದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ. ಹಾಗೆ ನೋಡಿದರೆ ಮನಸ್ಸನ್ನು ಕುದುರೆಯೆಂದು ಹೇಳುತ್ತಾರೆ ಏಕೆಂದರೆ ಚಂಚಲವಾಗುತ್ತದೆಯಲ್ಲವೆ ಮತ್ತು ತಮ್ಮಬಳಿ ಶ್ರೀಮತವೆಂಬ ಲಗಾಮು ಇದೆ. ಒಂದುವೇಳೆ ಶ್ರೀಮತದ ಲಗಾಮು ಸ್ವಲ್ಪ ಸಡಿಲವಾದರೂ ಸಹ ಮನಸ್ಸು ಚಂಚಲವಾಗಿಬಿಡುತ್ತದೆ. ಲಗಾಮು ಏಕೆ ಸಡಿಲವಾಗುತ್ತದೆ? ಏಕೆಂದರೆ ಅಲ್ಲಲ್ಲಿ ಬದಿಯ ದೃಶ್ಯಗಳನ್ನು ನೋಡತೊಡಗುತ್ತೀರಿ ಮತ್ತು ಲಗಾಮು ಸಡಿಲವಾದರೆ ಮನಸ್ಸಿಗೆ ಅವಕಾಶ ಸಿಗುತ್ತದೆ ಆದ್ದರಿಂದ ಸದಾ ನಾನು ಬಾಲಕ ಹಾಗೂ ಮಾಲೀಕನಾಗಿದ್ದೇನೆ ಎಂಬ ಸ್ಮೃತಿಯಲ್ಲಿರಿ, ಪರಿಶೀಲನೆ ಮಾಡಿಕೊಳ್ಳಿ. ಖಜಾನೆಗಳಿಗೆ ಮಾಲೀಕನಾಗಿದ್ದೇನೆ ಅಂದಮೇಲೆ ಸ್ವರಾಜ್ಯಕ್ಕೂ ಮಾಲೀಕ, ಡಬಲ್ ಮಾಲೀಕನಾಗಿದ್ದೇನೆಯೇ? ಒಂದುವೇಳೆ ಮಾಲೀಕತ್ವವು ಕಡಿಮೆಯಿದ್ದರೆ ನಿರ್ಬಲ ಸಂಸ್ಕಾರವು ಇಮರ್ಜ್ ಆಗಿಬಿಡುತ್ತದೆ ಮತ್ತು ಸಂಸ್ಕಾರಕ್ಕೆ ಏನು ಹೇಳುತ್ತೀರಿ? ನನ್ನ ಸಂಸ್ಕಾರವೇ ಹೀಗಿದೆ, ನನ್ನ ಸ್ವಭಾವವೇ ಹೀಗಿದೆ ಎಂದು. ಆದರೆ ಇದು ನನ್ನದಾಗಿದೆಯೇ? ಹೇಳುವಾಗ ಮಾತ್ರ ನನ್ನ ಸಂಸ್ಕಾರವೆಂದು ಹೇಳುತ್ತೀರಿ ಅಂದಮೇಲೆ ಇದು ನನ್ನದಾಗಿದೆಯೇ? ನನ್ನ ಸಂಸ್ಕಾರವೆಂದು ಹೇಳುವುದು ಸರಿಯೇ? ನನ್ನದಾಗಿದೆಯೇ ಅಥವಾ ರಾವಣನ ಆಸ್ತಿಯಾಗಿದೆಯೇ? ನಿರ್ಬಲ ಸಂಸ್ಕಾರವು ರಾವಣನ ಸಂಪತ್ತಾಗಿದೆ ಅದಕ್ಕೆ ನನ್ನದೆಂದು ಹೇಗೆ ಹೇಳುವಿರಿ? ನನ್ನಸಂಸ್ಕಾರವು ಯಾವುದಾಗಿದೆ? ಯಾವುದು ತಂದೆಯ ಸಂಸ್ಕಾರವಾಗಿದೆಯೋ ಅದು ನನ್ನಸಂಸ್ಕಾರವಾಗಿದೆ ಅಂದಾಗ ತಂದೆಯ ಸಂಸ್ಕಾರ ಯಾವುದು? ವಿಶ್ವಕಲ್ಯಾಣದ ಸಂಸ್ಕಾರ ಶುಭಭಾವನೆ-ಶುಭಕಾಮನೆಯ ಸಂಸ್ಕಾರವಾಗಿದೆ ಆದ್ದರಿಂದ ಯಾವುದೇ ನಿರ್ಬಲಸಂಸ್ಕಾರವನ್ನು ನನ್ನ ಸಂಸ್ಕಾರವೆಂದು ಹೇಳುವುದೇ ತಪ್ಪಾಗಿದೆ. ನನ್ನ ಸಂಸ್ಕಾರವನ್ನು ಒಂದುವೇಳೆ ತಮ್ಮ ಹೃದಯದಲ್ಲಿ ಕೂರಿಸಿಕೊಂಡಿದ್ದೀರಿ ಎಂದರೆ ಅಶುದ್ಧ ವಸ್ತುವನ್ನು ಹೃದಯದಲ್ಲಿ ಕೂರಿಸಿಕೊಂಡಿದ್ದೀರೆಂದರ್ಥ. ನನ್ನವಸ್ತುವಿನೊಂದಿಗೆ ಪ್ರೀತಿಯಿರುತ್ತದೆಯಲ್ಲವೆ ಅಂದಮೇಲೆ ಒಂದುವೇಳೆ ನಿರ್ಬಲಸಂಸ್ಕಾರವನ್ನು ನನ್ನದೆಂದು ತಿಳಿಯುವುದು ಎಂದರೆ ತನ್ನಹೃದಯದಲ್ಲಿ ಅದಕ್ಕೆ ಸ್ಥಾನವನ್ನು ಕೊಡುವುದಾಗಿದೆ ಆದ್ದರಿಂದ ಕೆಲವುಬಾರಿ ಮಕ್ಕಳಿಗೆ ಯುದ್ಧ ಮಾಡಬೇಕಾಗುತ್ತದೆ ಏಕೆಂದರೆ ಶುಭ ಮತ್ತು ಅಶುಭ ಎರಡನ್ನೂ ಹೃದಯದಲ್ಲಿ ಕೂರಿಸಿಕೊಂಡರೆ ಎರಡೂ ಏನು ಮಾಡುತ್ತವೆ? ಯುದ್ಧವನ್ನೇ ಮಾಡುತ್ತದೆಯಲ್ಲವೆ. ಯಾವಾಗ ನನ್ನಸಂಸ್ಕಾರ ಎಂಬುದು ಸಂಕಲ್ಪ, ವಾಣಿಯಲ್ಲಿ ಬರುವುದೋ ಆಗ ಪರಿಶೀಲನೆ ಮಾಡಿಕೊಳ್ಳಿ - ಈ ಅಶುಭ ಸಂಸ್ಕಾರವು ನನ್ನದಲ್ಲ ಅಂದಮೇಲೆ ಸಂಸ್ಕಾರಪರಿವರ್ತನೆ ಮಾಡಿಕೊಳ್ಳಬೇಕಾಗಿದೆ.

ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನೂ ಪದುಮ-ಪದುಮಾದಷ್ಟು ಭಾಗ್ಯವಂತ ಚಲನೆ ಮತ್ತು ಚಹರೆಯಲ್ಲಿ ನೋಡಲು ಬಯಸುತ್ತಾರೆ. ಕೆಲವು ಮಕ್ಕಳು ಹೇಳುತ್ತಾರೆ - ಭಾಗ್ಯವಂತರಂತೂ ಆಗಿದ್ದೇವೆ ಆದರೆ ನಡೆಯುತ್ತಾ ತಿರುಗಾಡುತ್ತಾ ಯಾವ ಭಾಗ್ಯವು ಸ್ಮೃತಿಗೆ ಬರಬೇಕೋ ಅದು ವಿಸ್ಮೃತಿಯಾಗಿಬಿಡುತ್ತದೆ ಮತ್ತು ಬಾಪ್ದಾದಾ ಪ್ರತೀ ಸಮಯ, ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರವನ್ನು ನೋಡಲು ಬಯಸುತ್ತಾರೆ. ಯಾರಾದರೂ ತಮ್ಮನ್ನು ನೋಡಿದರೆ ಚಹರೆ, ಚಲನೆಯಿಂದ ಭಾಗ್ಯಶಾಲಿಗಳಂತೆ ಕಾಣಬೇಕು. ಆಗ ತಾವು ಮಕ್ಕಳ ಮೂಲಕ ತಂದೆಯ ಪ್ರತ್ಯಕ್ಷತೆಯಾಗುವುದು ಏಕೆಂದರೆ ವರ್ತಮಾನ ಸಮಯದಲ್ಲಿ ಮೆಜಾರಿಟಿ ಅನುಭವ ಮಾಡಲು ಬಯಸುತ್ತಾರೆ. ಹೇಗೆ ಇತ್ತೀಚಿನ ವಿಜ್ಞಾನವು ಪ್ರತ್ಯಕ್ಷರೂಪದಲ್ಲಿ ತೋರಿಸುತ್ತದೆಯಲ್ಲವೆ! ಅನುಭವ ಮಾಡಿಸುತ್ತದೆಯಲ್ಲವೆ! ಬಿಸಿಯ ಅನುಭವವನ್ನೂ ಮಾಡಿಸುತ್ತದೆ, ತಣ್ಣನೆಯ ಅನುಭವವನ್ನೂ ಮಾಡಿಸುತ್ತದೆ. ಅಂದಮೇಲೆ ಶಾಂತಿಯ ಶಕ್ತಿಯಿಂದಲೂ ಸಹ ಅನುಭವ ಮಾಡಲು ಬಯಸುತ್ತಾರೆ. ಎಷ್ಟೆಷ್ಟು ಸ್ವಯಂ ಅನುಭವದಲ್ಲಿರುತ್ತೀರೋ ಆಗ ಅನ್ಯರಿಗೂ ಅನುಭವ ಮಾಡಿಸಬಲ್ಲಿರಿ. ಬಾಪ್ದಾದಾ ಇದೇ ಸೂಚನೆ ನೀಡಿದ್ದಾರೆ - ಈಗ ಕಂಬೈಂಡ್ ಸೇವೆ ಮಾಡಿ, ಕೇವಲ ಮುಖದಿಂದಲ್ಲ ಆದರೆ ವಾಣಿಯ ಜೊತೆಗೆ ಅನುಭವೀಮೂರ್ತಿಯಾಗಿ ಅನುಭವ ಮಾಡಿಸುವ ಸೇವೆಯನ್ನೂ ಮಾಡಿ. ಯಾವುದಾದರೊಂದು ಶಾಂತಿಯ ಅನುಭವ, ಖುಷಿಯ ಅನುಭವ, ಆತ್ಮಿಕ ಪ್ರೀತಿಯ ಅನುಭವ..... ಆಗಲಿ. ಅನುಭವವು ಇಂತಹ ವಸ್ತುವಾಗಿದೆ ಅದು ಒಂದುಬಾರಿ ಅನುಭವವಾದರೂ ಸಹ ಮತ್ತೆ ಬಿಡುವುದಿಲ್ಲ. ಕೇಳಿರುವುದು ಮರೆತುಹೋಗಬಹುದು ಆದರೆ ಅನುಭವ ಮಾಡಿರುವುದನ್ನು ಮರೆಯವುದಿಲ್ಲ. ಅದು ಅನುಭವ ಮಾಡಿಸುವವರ ಸಮೀಪ ಕರೆತರುತ್ತದೆ.

ಮುಂದೆ ಏನು ನವೀನತೆಯನ್ನು ಮಾಡಬೇಕೆಂದು ಎಲ್ಲರೂ ಕೇಳುತ್ತೀರಿ. ಬಾಪ್ದಾದಾ ನೋಡಿದರು, ಸೇವೆಯನ್ನಂತೂ ಎಲ್ಲರೂ ಉಮ್ಮಂಗ-ಉತ್ಸಾಹದಿಂದ ಮಾಡುತ್ತಿದ್ದೀರಿ. ಪ್ರತಿಯೊಂದು ವರ್ಗವೂ ಮಾಡುತ್ತಿದೆ. ಇಂದೂ ಕೂಡ ಅನೇಕ ವರ್ಗಗಳು ಸೇರಿದ್ದೀರಲ್ಲವೆ. ಮೆಗಾ ಕಾರ್ಯಕ್ರಮಗಳನ್ನು ಮಾಡಿದಿರಿ, ಸಂದೇಶವನ್ನು ಕೊಟ್ಟಿದ್ದೀರಿ, ದೂರು ಕೇಳುವುದರಿಂದಂತೂ ಮುಕ್ತರಾದಿರಿ. ಇದಕ್ಕಾಗಿ ಶುಭಾಷಯಗಳು ಆದರೆ ಇಲ್ಲಿಯವರೆಗೂ ಸಹ ಇದು ಪರಮಾತ್ಮನ ಜ್ಞಾನವಾಗಿದೆ ಎಂಬ ಸುದ್ಧಿಯು ಹರಡಿಲ್ಲ. ಬ್ರಹ್ಮಾಕುಮಾರಿಯರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಬ್ರಹ್ಮಾಕುಮಾರಿಯರದು ಬಹಳ ಒಳ್ಳೆಯ ಜ್ಞಾನವಾಗಿದೆ ಎಂದು ಹೇಳುತ್ತಿದ್ದಾರೆ ಆದರೆ ಇದೇ ಪರಮಾತ್ಮನ ಜ್ಞಾನವಾಗಿದೆ, ಪರಮಾತ್ಮನ ಜ್ಞಾನವು ನಡೆಯುತ್ತಿದೆ ಎಂಬ ಶಬ್ಧವು ಹರಡಲಿ. ರಾಜಯೋಗದ ಕೋರ್ಸನ್ನೂ ಕೊಡುತ್ತೀರಿ, ಪರಮಾತ್ಮನೊಂದಿಗೆ ಆತ್ಮನ ಜೋಡಣೆ ಮಾಡಿಸುತ್ತೀರಿ ಆದರೆ ಈಗ ಪರಮಾತ್ಮನ ಕಾರ್ಯವನ್ನು ಸ್ವಯಂ ಪರಮಾತ್ಮನೇ ಮಾಡಿಸುತ್ತಿದ್ದಾರೆ ಎಂಬುದನ್ನು ಬಹಳ ಕಡಿಮೆ ಮಂದಿ ಅನುಭವ ಮಾಡುತ್ತಿದ್ದಾರೆ. ಆತ್ಮ ಮತ್ತು ಧಾರಣೆಗಳು ಈಗ ಪ್ರತ್ಯಕ್ಷವಾಗುತ್ತಿವೆ. ಒಳ್ಳೆಯಕಾರ್ಯವನ್ನು ಮಾಡುತ್ತಿದ್ದಾರೆ, ಚೆನ್ನಾಗಿ ಕಲಿಸುತ್ತಿದ್ದಾರೆ, ಚೆನ್ನಾಗಿ ಮಾತನಾಡುತ್ತಾರೆ - ಇಲ್ಲಿಯತನಕ ಸರಿಯಾಗಿದೆ. ಜ್ಞಾನವು ಚೆನ್ನಾಗಿದೆ ಎಂಬುದನ್ನೂ ಹೇಳುತ್ತಾರೆ ಆದರೆ ಇದು ಪರಮಾತ್ಮನ ಜ್ಞಾನವಾಗಿದೆ ಎಂಬ ಶಬ್ಧವೇ ತಂದೆಯ ಸಮೀಪ ಕರೆತರುವುದು ಮತ್ತು ಎಷ್ಟು ತಂದೆಗೆ ಸಮೀಪ ತರುವರೋ ಅಷ್ಟು ಸ್ವತಃ ಅನುಭವ ಮಾಡುತ್ತಾ ಇರುತ್ತಾರೆ. ಅಂದಾಗ ಇಂತಹ ಪ್ಲಾನ್ ಮತ್ತು ಭಾಷಣಗಳಲ್ಲಿ ಇಂತಹ ಹೊಳಪನ್ನು ತುಂಬಿ ಅದರಲ್ಲಿ ಆತ್ಮರು ಪರಮಾತ್ಮನ ಸಮೀಪ ಬಂದುಬಿಡಲಿ. ದಿವ್ಯಗುಣಗಳ ಧಾರಣೆಯಲ್ಲಿ ಎಲ್ಲರ ಗಮನ ಹರಿದಿದೆ. ಆತ್ಮದ ಜ್ಞಾನ ಕೊಡುತ್ತಾರೆ, ಪರಮಾತ್ಮನ ಜ್ಞಾನವನ್ನು ಕೊಡುತ್ತಾರೆಂದು ಹೇಳುತ್ತಾರೆ ಆದರೆ ಪರಮಾತ್ಮನು ಬಂದುಬಿಟ್ಟಿದ್ದಾರೆ, ಪರಮಾತ್ಮನ ಕಾರ್ಯವನ್ನು ಸ್ವಯಂ ಪರಮಾತ್ಮನೇ ನಡೆಸುತ್ತಿದ್ದಾರೆ - ಈ ಪ್ರತ್ಯಕ್ಷವು ಅಯಸ್ಕಾಂತದಂತೆ ಸಮೀಪ ಕರೆತರುವುದು. ತಾವೆಲ್ಲರೂ ಸಹ ಯಾವಾಗ ತಂದೆಯು ಸಿಕ್ಕಿದ್ದಾರೆ, ತಂದೆಯೊಂದಿಗೆ ಮಿಲನ ಮಾಡಬೇಕೆಂದು ತಿಳಿದುಕೊಂಡಿರೋ ಆಗಲೇ ಸಮೀಪ ಬಂದಿರಿ. ಬಹುತೇಕಮಂದಿ ಸ್ನೇಹಿಗಳಾಗುತ್ತಾರೆ, ಅವರು ಏನನ್ನು ತಿಳಿದುಕೊಂಡು ಆಗುತ್ತಾರೆ? ಕಾರ್ಯವು ಬಹಳ ಚೆನ್ನಾಗಿದೆ, ಬ್ರಹ್ಮಾಕುಮಾರಿಯರು ಯಾವ ಕಾರ್ಯವನ್ನು ಮಾಡುತ್ತಿದ್ದಾರೆ, ಪರಿವರ್ತನೆ ಮಾಡಿಸುತ್ತಿದ್ದಾರೆ, ಅದನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡು ಸ್ನೇಹಿಗಳಾಗುತ್ತಾರೆ ಆದರೆ ಪರಮಾತ್ಮನೇ ಹೇಳುತ್ತಿದ್ದಾರೆ, ಪರಮಾತ್ಮನಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಎಂಬುವಷ್ಟು ಸಮೀಪಕ್ಕೆ ಬರುತ್ತಿಲ್ಲ ಏಕೆಂದರೆ ಬ್ರಹ್ಮಾಕುಮಾರಿಯರು ಏನು ಮಾಡುತ್ತಾರೆ? ಇವರ ಜ್ಞಾನವೇನು? ಎಂಬುದನ್ನು ಮೊದಲು ತಿಳಿದುಕೊಂಡಿರಲಿಲ್ಲವೋ ಅದನ್ನು ಈಗ ತಿಳಿದುಕೊಳ್ಳುತ್ತಿದ್ದಾರೆ ಆದರೆ ಪರಮಾತ್ಮನ ಪ್ರತ್ಯಕ್ಷತೆ, ಒಂದುವೇಳೆ ಇದು ಪರಮಾತ್ಮನ ಜ್ಞಾನವಾಗಿದೆ ಎಂಬುದು ಅರ್ಥವಾಗಿಬಿಟ್ಟರೆ ಅವರು ನಿಲ್ಲುವರೇ? ಹೇಗೆ ತಾವು ಓಡಿಕೊಂಡು ಬಂದಿದ್ದೀರಲ್ಲವೆ ಹಾಗೆಯೇ ಎಲ್ಲರೂ ಓಡಿಬರುತ್ತಾರೆ ಆದ್ದರಿಂದ ಈಗ ಇಂತಹ ಪ್ಲಾನ್ ಮಾಡಿ. ಇಂತಹ ಭಾಷಣಗಳನ್ನು ತಯಾರು ಮಾಡಿ. ಪರಮಾತ್ಮಾನುಭೂತಿಯ ಪ್ರಾಕ್ಟಿಕಲ್ ಮಾದರಿಯಾಗಿರಿ. ಆಗ ತಂದೆಯ ಪ್ರತ್ಯಕ್ಷತೆಯು ಪ್ರತ್ಯಕ್ಷದಲ್ಲಿ ಕಾಣುವುದು. ಈಗಿನ್ನೂ ಚೆನ್ನಾಗಿದೆ ಎಂಬುದವರೆಗೆ ತಲುಪಿದ್ದಾರೆ. ನಾವೂ ಒಳ್ಳೆಯವರಾಗಬೇಕು - ಆ ಅಲೆಯು ಪರಮಾತ್ಮಪ್ರೀತಿಯ ಅನುಭೂತಿಯಿಂದಲೇ ಹರಡುವುದು ಆದ್ದರಿಂದ ಅನುಭವೀಮೂರ್ತಿಗಳಾಗಿ ಅನುಭವ ಮಾಡಿಸಿ. ಒಳ್ಳೆಯದು. ಈಗ ಡಬಲ್ ಮಾಲೀಕತ್ವದ ಸ್ಮೃತಿಯಿಂದ ಸಮರ್ಥರಾಗಿ, ಸಮರ್ಥರನ್ನಾಗಿ ಮಾಡಿ. ಒಳ್ಳೆಯದು

ಸೇವಾಟರ್ನ್ ಪಂಜಾಬ್ನದಾಗಿದೆ:- ಕೈಗಳನ್ನು ಅಲುಗಾಡಿಸಿ. ಒಳ್ಳೆಯದು. ಯಾವುದೆಲ್ಲಾ ಜೋನ್ಗೆ ಸೇವೆಯ ಸರದಿ ಸಿಗುವುದೋ ಅವರು ತೆರೆದ ಹೃದಯದಿಂದ ಬಂದುಬಿಡುತ್ತಾರೆ, ಒಳ್ಳೆಯ ಅವಕಾಶವನ್ನು ತೆಗೆದುಕೊಳ್ಳುತ್ತಾರೆ. (ಪಂಜಾಬ್ ಜೋನ್ನಿಂದ 4000 ಬಂದಿದ್ದಾರೆ) ಬಾಪ್ದಾದಾರವರಿಗೂ ಸಹ ಖುಷಿಯಾಗುತ್ತದೆ - ಪ್ರತಿಯೊಂದು ಜೋನಿನವರು ಸೇವೆಯ ಅವಕಾಶವನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತೀರಿ. ಎಲ್ಲರೂ ಸಹ ಪಂಜಾಬಿಗೆ ಸಾಮಾನ್ಯರೀತಿಯಿಂದ ಸಿಂಹವೆಂದು ಹೇಳುತ್ತಾರೆ ಮತ್ತು ಬಾಪ್ದಾದಾ ಹೇಳುತ್ತಾರೆ - ಸಿಂಹ ಅರ್ಥಾತ್ ವಿಜಯೀ ಅಂದಾಗ ಪಂಜಾಬಿನವರು ಸದಾ ತಮ್ಮ ಮಸ್ತಕದ ಮಧ್ಯೆ ವಿಜಯದ ತಿಲಕದ ಅನುಭವ ಮಾಡಬೇಕಾಗಿದೆ, ವಿಜಯದ ತಿಲಕ ಸಿಕ್ಕಿದೆ, ಸದಾ ಇದೇ ಸ್ಮೃತಿಯಿರಲಿ - ನಾವೇ ಕಲ್ಪ-ಕಲ್ಪದ ವಿಜಯಿಗಳಾಗಿದ್ದೇವೆ, ನಾವೇ ಆಗಿದ್ದೆವು, ಆಗಿದ್ದೇವೆ ಮತ್ತು ಕಲ್ಪ-ಕಲ್ಪವೂ ಆಗುತ್ತೇವೆ. ಒಳ್ಳೆಯದು. ಪಂಜಾಬಿನವರು ವಾರಸುಧಾರರನ್ನು ತಂದೆಯ ಮುಂದೆ ಕರೆದುಕೊಂಡು ಬರುವ ಕಾರ್ಯಕ್ರಮವನ್ನು ಮಾಡುತ್ತಿದ್ದೀರಲ್ಲವೆ. ಬಾಪ್ದಾದಾರವರ ಮುಂದೆ ಇನ್ನೂ ವಾರಸುಧಾರರನ್ನು ಕರೆತಂದಿಲ್ಲ. ಸ್ನೇಹಿಗಳನ್ನು ಕರೆತಂದಿದ್ದೀರಿ, ಎಲ್ಲಾ ಜೋನಿನವರು ಸ್ನೇಹಿ, ಸಹಯೋಗಿಗಳನ್ನು ಕರೆತಂದಿದ್ದೀರಿ ಆದರೆ ವಾರಸುಧಾರರನ್ನು ಕರೆತಂದಿಲ್ಲ. ತಯಾರು ಮಾಡುತ್ತಿದ್ದೀರಲ್ಲವೆ. ಎಲ್ಲಾ ಪ್ರಕಾರದವರೂ ಬೇಕಲ್ಲವೆ. ಸ್ನೇಹಿಗಳೂ ಬೇಕು, ಸಹಯೋಗಿಗಳೂ ಬೇಕು, ವಾರಸುಧಾರರೂ ಬೇಕು, ಮೈಟ್ ಮತ್ತು ಮೈಕ್ ಆತ್ಮಗಳೂ ಬೇಕು. ಎಲ್ಲಾ ಪ್ರಕಾರದವರೂ ಬೇಕಾಗಿದೆ. ಚೆನ್ನಾಗಿದೆ, ಸೇವಾಕೇಂದ್ರಗಳ ವೃದ್ಧಿಯಂತೂ ಆಗುತ್ತಿದೆ, ಎಲ್ಲರೂ ಉಮ್ಮಂಗ-ಉತ್ಸಾಹದಿಂದ ಸೇವೆಯಲ್ಲಿ ವೃದ್ಧಿಯನ್ನು ತರುತ್ತಿದ್ದೀರಿ. ಈಗ ಇದನ್ನು ನೋಡುತ್ತೇವೆ - ಪರಮಾತ್ಮನು ಬಂದುಬಿಟ್ಟಿದ್ದಾರೆ ಎಂದು ಯಾವ ಜೋನಿನಲ್ಲಿ ಪ್ರತ್ಯಕ್ಷವಾಗುತ್ತದೆ? ತಂದೆಯನ್ನು ಯಾವ ಜೋನಿನವರು ಪ್ರತ್ಯಕ್ಷ ಮಾಡುತ್ತೀರಿ ಎಂಬುದನ್ನು ಬಾಪ್ದಾದಾ ನೋಡುತ್ತಿದ್ದಾರೆ. ವಿದೇಶದವರು ಮಾಡುವಿರಾ? ವಿದೇಶದವರು ಮಾಡಬಹುದು. ಪಂಜಾಬಿನವರು ನಂಬರನ್ನು ತೆಗೆದುಕೊಳ್ಳಿ. ಎಲ್ಲರೂ ತಮಗೆ ಸಹಯೋಗ ಕೊಡುವರು. ಇದೇ ಆಗಿದೆ, ಇದೇ ಆಗಿದೆ, ಇದೇ ಆಗಿದೆ ಎಂಬ ಶಬ್ಧವನ್ನು ಹರಡಲಿ - ಇದಕ್ಕೆ ಬಹಳ ಸಮಯದಿಂದ ಪ್ರಯತ್ನಪಡುತ್ತಿದ್ದೀರಿ. ಇವರೂ ಇದ್ದಾರೆ ಎಂಬುದು ಇಲ್ಲಿಯವರೆಗೂ ಬಂದಿದೆ ಆದರೆ ಇದೇ ಪರಮಾತ್ಮನಕಾರ್ಯ ಎಂಬುದು ಆಗಿಲ್ಲ ಅಂದಾಗ ಪಂಜಾಬಿನವರು ಏನು ಮಾಡುವಿರಿ? ಇದೇ ಶಬ್ಧವು ಹರಡಲಿ, ಇದೇ ಪರಮಾತ್ಮನ ಕಾರ್ಯವಾಗಿದೆ, ಇದೇ ಆಗಿದೆ. ಟೀಚರ್ಸ್ ಸಮ್ಮತವೇ? ಯಾವಾಗ ಮಾಡುವಿರಿ? ಈ ವರ್ಷದಲ್ಲಿ ಮಾಡುವಿರಾ? ಹೊಸವರ್ಷವು ಆರಂಭವಾಯಿತಲ್ಲವೆ. ಅಂದಮೇಲೆ ಹೊಸವರ್ಷದಲ್ಲಿ ಯಾವುದಾದರೂ ನವೀನತೆ ತರಬೇಕಲ್ಲವೆ. ಇದು ಒಂದು ಸಂಸ್ಥೆಯಿದೆ ಎಂಬುದನ್ನು ಬಹಳ ಕೇಳಿದ್ದಾರೆ. ಹೇಗೆ ತಮ್ಮ ಮನಸ್ಸಿನಲ್ಲಿ ಸ್ವತಃವಾಗಿ ಬಾಬಾ, ಬಾಬಾ, ಬಾಬಾ ಎಂದು ನೆನಪಿರುತ್ತದೆಯೋ ಹಾಗೆ0iÉುೀ ಅವರ ಬಾಯಿಂದ ನಮ್ಮ ತಂದೆಯು ಬಂದುಬಿಟ್ಟರು ಎಂಬ ಶಬ್ಧವು ಹೊರಡಲಿ. ನನ್ನಬಾಬಾ, ನನ್ನಬಾಬಾ ಎಂಬ ಕೂಗು ನಾಲ್ಕಾರು ಮೂಲೆಗಳಿಂದ ಕೇಳಿಬರಲಿ ಆದರೆ ಆರಂಭವಂತೂ ಒಂದುಮೂಲೆಯಿಂದಲೇ ಆಗಬೇಕಲ್ಲವೆ ಅಂದಾಗ ಪಂಜಾಬ್ ಕಮಾಲ್ ಮಾಡುವಿರಾ? ಏಕೆ ಮಾಡುವುದಿಲ್ಲ? ಮಾಡಲೇಬೇಕಾಗಿದೆ. ಬಹಳ ಒಳ್ಳೆಯದು- ಮುಂಚಿತವಾಗಿಯೇ ಶುಭಾಷಯಗಳು. ಒಳ್ಳೆಯದು.

ನಾಲ್ಕಾರುಕಡೆಯ ಸರ್ವಆತ್ಮಿಕ ಗುಲಾಬಿ ಮಕ್ಕಳಿಗೆ, ಸದಾ ತಂದೆಗೆ ಅತೀಪ್ರಿಯ ಮತ್ತು ದೇಹಭಾನದಿಂದ ಅತೀಭಿನ್ನ, ಬಾಪ್ದಾದಾರವರ ಹೃದಯದ ಪ್ರಿಯ ಮಕ್ಕಳಿಗೆ, ಸದಾ ಒಬ್ಬ ತಂದೆ, ಏಕಾಗ್ರ ಮನಸ್ಸು ಮತ್ತು ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿರುವ ಮಕ್ಕಳಿಗೆ, ನಾಲ್ಕಾರುಕಡೆಯ ಭಿನ್ನ-ಭಿನ್ನ ಸಮಯದಲ್ಲಿ, ಭಿನ್ನ-ಭಿನ್ನ ಸ್ಥಾನದಲ್ಲಿದ್ದರೂ ಸಹ ವಿಜ್ಞಾನದ ಸಾಧನಗಳಿಂದ ಮಧುಬನದಲ್ಲಿ ತಲುಪುವವರು, ಸನ್ಮುಖದಲ್ಲಿ ನೋಡುವವರು, ಎಲ್ಲಾ ಅಗಲಿಹೋಗಿ ಮರಳಿಸಿಕ್ಕಿದೆ ಮುದ್ದುಮಕ್ಕಳು, ಕಲ್ಪ-ಕಲ್ಪದ ಪರಮಾತ್ಮಪ್ರೀತಿಗೆ ಪಾತ್ರರಾದ ಅಧಿಕಾರಿ ಮಕ್ಕಳಿಗೆ, ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಹೃದಯಪೂರ್ವಕ ಶುಭಾಷಯಗಳನ್ನು ಪದಮಾಪದಮದಷ್ಟನ್ನು ಸ್ವೀಕಾರ ಮಾಡಿರಿ ಮತ್ತು ಜೊತೆಯಲ್ಲಿ ಡಬಲ್ ಮಾಲೀಕ ಮಕ್ಕಳಿಗೆ ಬಾಪ್ದಾದಾರವರ ನಮಸ್ತೆ.

ದಾದೀಜಿಯವರೊಂದಿಗೆ:- ಮಧುಬನದ ಹೀರೋ ಪಾತ್ರಧಾರಿಯಾಗಿದ್ದೀರಿ, ಸದಾ ಜಿûೀರೋ ತಂದೆಯ ನೆನಪಿದೆ, ಭಲೆ ಶರೀರ ನಡೆಯುವುದಿಲ್ಲ, ಸ್ವಲ್ಪ ನಿಧಾನ-ನಿಧಾನವಾಗಿ ನಡೆಯುತ್ತದೆ ಆದರೆ ಎಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ನಿಮ್ಮನ್ನು ನಡೆಸುತ್ತಿವೆ. ತಂದೆಯ ಆಶೀರ್ವಾದವಂತೂ ಇದ್ದೇ ಇದೆ. ಜೊತೆಗೆ ಎಲ್ಲರ ಆಶೀರ್ವಾದಗಳೂ ಇವೆ. ಎಲ್ಲರೂ ದಾದಿಯನ್ನು ಬಹಳ ಪ್ರೀತಿ ಮಾಡುತ್ತೀರಲ್ಲವೆ. ನೋಡಿ, ಎಲ್ಲರೂ ಇದನ್ನೇ ಹೇಳುತ್ತಾರೆ - ದಾದಿಯರು ಬೇಕು, ದಾದಿಯರು ಬೇಕು, ದಾದಿಯರು ಬೇಕು.... ಅಂದಮೇಲೆ ದಾದಿಯರ ವಿಶೇಷತೆಯೇನು? ದಾದಿಯರ ವಿಶೇಷತೆಯೇನೆಂದರೆ ತಂದೆಯ ಶ್ರೀಮತದಂತೆ ಪ್ರತೀ ಹೆಜ್ಜೆಯನ್ನಿಡುವುದು. ಮನಸ್ಸನ್ನೂ ಸಹ ತಂದೆಯ ನೆನಪು ಮತ್ತು ಸೇವೆಯಲ್ಲಿ ಸಮರ್ಪಣೆ ಮಾಡುವುದು. ತಾವೆಲ್ಲರೂ ಇದೇ ರೀತಿ ಮಾಡುತ್ತಿದ್ದೀರಲ್ಲವೆ. ಮನಸ್ಸನ್ನು ಸಮರ್ಪಣೆ ಮಾಡಿ, ಬಾಪ್ದಾದಾ ನೋಡಿದರು, ಮನಸ್ಸು ಬಹಳ ಕಮಾಲ್ ಮಾಡಿ ತೋರಿಸುತ್ತದೆ. ಏನು ಕಮಾಲ್ ಮಾಡುತ್ತದೆ? ಚಂಚಲತೆ ಮಾಡುತ್ತದೆ. ಮನಸ್ಸು ಏಕಾಗ್ರವಾಗಲಿ. ಹೇಗೆ ಧ್ವಜವನ್ನು ಮೇಲೆ ಹಾರಿಸುತ್ತೀರಲ್ಲವೆ, ಹಾಗೆಯೇ ಮನಸ್ಸಿನ ಧ್ವಜವು ಶಿವಬಾಬಾ, ಶಿವಬಾಬಾರವರಲ್ಲಿ ಏಕಾಗ್ರವಾಗಲಿ. ಸಮಯ ಸಮೀಪ ಬರುತ್ತಿದೆ. ಕೆಲಕೆಲವೊಮ್ಮೆ ಬಾಪ್ದಾದಾ ಮಕ್ಕಳ ಬಹಳ ಒಳ್ಳೊಳ್ಳೆಯ ಸಂಕಲ್ಪವನ್ನು ಕೇಳುತ್ತಾರೆ. ಎಲ್ಲರ ಲಕ್ಷ್ಯವು ಬಹಳ ಚೆನ್ನಾಗಿದೆ. ಒಳ್ಳೆಯದು- ದಾದಿಯರು ಬಹಳ ಕೆಲವರೇ ಉಳಿದುಕೊಂಡಿದ್ದೀರಿ. ಎಣಿಸುವಷ್ಟು ದಾದಿಯರು ಉಳಿದುಕೊಂಡಿದ್ದೀರಿ. ಎಲ್ಲರಿಗೂ ದಾದಿಯರೊಂದಿಗೆ ಪ್ರೀತಿಯಿದೆಯಲ್ಲವೆ. (ಎಲ್ಲಾ ದಾದಿಯರು ಇದೇರೀತಿ ನಡೆಯುತ್ತಿರಲಿ) ಈಗಂತೂ ಇದ್ದೇ ಇರುವರಲ್ಲವೆ, ಈಗಂತೂ ಪ್ರಶ್ನೆಯೇ ಇಲ್ಲ. ಒಳ್ಳೆಯದು. ನೋಡಿ, ಹಾಲ್ನ ಶೋಭೆಯು ಎಷ್ಟು ಚೆನ್ನಾಗಿದೆ! ಮಾಲೆಯಂತೆ ಕಾಣುತ್ತಿದೆಯಲ್ಲವೆ ಮತ್ತು ಮಾಲೆಯ ಮಧ್ಯದಲ್ಲಿ ಮಣಿಗಳು ಕುಳಿತಿದ್ದೀರಿ.

ವರದಾನ:
ಸೈಲೆನ್ಸ್ ನ ಶಕ್ತಿಯ ಮೂಲಕ ಸೆಕೆಂಡ್ ನಲ್ಲಿ ಮುಕ್ತಿ ಮತ್ತು ಜೀವನ್ ಮುಕ್ತಿಯ ಅನುಭವ ಮಾಡಿಸುವಂತಹ ವಿಶೇಷ ಆತ್ಮ ಭವ

ವಿಶೇಷ ಆತ್ಮಗಳ ಕೊನೆಯ ವಿಶೇಷತೆಯಾಗಿದೆ-ಸೆಕೆಂಡ್ ನಲ್ಲಿ ಯಾವುದೇ ಆತ್ಮಕ್ಕೆ ಮುಕ್ತಿ ಮತ್ತು ಜೀವನ್ ಮುಕ್ತಿಯ ಅನುಭವಿಯನ್ನಾಗಿ ಮಾಡಿಬಿಡುವುದು. ಕೇವಲ ರಸ್ತೆಯನ್ನು ತೊರಿಸುವುದಲ್ಲ ಆದರೆ ಒಂದು ಸೆಕೆಂಡ್ ನಲ್ಲಿ ಶಾಂತಿಯ ಹಾಗೂ ಅತೀಂದ್ರಿಯ ಸುಖದ ಅನುಭವವನ್ನು ಮಾಡಿಸುತ್ತಾರೆ. ಜೀವನ್ಮುಕ್ತಿಯ ಅನುಭವವಾಗಿದೆ ಸುಖ ಮತ್ತು ಮುಕ್ತಿಯ ಅನುಭವವಾಗಿದೆ ಶಾಂತಿ. ಆಗ ಯಾರೇ ಎದುರಿಗೆ ಬಂದರೂ ಅವರು ಸೆಕೆಂಡ್ನಲ್ಲಿ ಇದರ ಅನುಭವ ಮಾಡಬೇಕು-ಯಾವಾಗ ಈ ರೀತಿಯಲ್ಲಿ ಸ್ಪೀಡ್ ಆಗುತ್ತೆ ಆಗ ಸೈನ್ಸ್ ನ ಮೇಲೆ ಸೈಲೆನ್ಸ್ ನ ವಿಜಯವನ್ನು ನೋಡುತ್ತಾ ಎಲ್ಲರ ಮುಖದಿಂದ ವ್ಹಾ-ವ್ಹಾ ಎಂಬ ಮಾತು ಹೊರಡುತ್ತದೆ ಮತ್ತು ಪ್ರತ್ಯಕ್ಷತೆಯ ದೃಷ್ಯ ಎದುರಿಗೆ ಬರುವುದು.

ಸ್ಲೋಗನ್:
ತಂದೆಯ ಎಲ್ಲಾ ಆಜ್ಞೆಗಳ ಮೇಲೆ ಬಲಿಹಾರಿ ಆಗುವಂತಹ ಸತ್ಯ ಪತಂಗಗಳಾಗಿ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ

ಈಗ ಹೇಗೆ ವಾಚಾದಿಂದ ಡೈರೆಕ್ಷನ್ ಕೊಡಬೇಕಾಗಿ ಬರುತ್ತದೆ, ಇದೇ ರೀತಿ ಶ್ರೇಷ್ಠ ಸಂಕಲ್ಪಗಳಿಂದ ಇಡೀ ಕಾರೋಬಾರು ನಡೆಸಬಹುದು. ವಿಜ್ಞಾನದವರು ಪೃಥ್ವಿಯ ಕೆಳಗಿನಿಂದ-ಮೇಲಿನವರೆಗು ಡೈರೆಕ್ಷನ್ ಪಡೆದುಕೊಳ್ಳುತ್ತ ಇರುತ್ತಾರೆ, ಅಂದಮೇಲೆ ತಾವು ಶ್ರೇಷ್ಠ ಸಂಕಲ್ಪಗಳ ಶಕ್ತಿಯ ಮೂಲಕ ಇಡೀ ಕಾರೋಬಾರನ್ನು ನಡೆಸಲು ಸಾಧ್ಯವಿಲ್ಲವೇ. ಹೇಗೆ ಮಾತನಾಡಿ ವಿಚಾರವನ್ನು ಸ್ಪಷ್ಟ ಮಾಡುತ್ತೀರಿ ಅದೇ ರೀತಿ ಮುಂದೆ ಹೋಗಿ ಸಂಕಲ್ಪಗಳಿಂದ ಇಡೀ ಕಾರೋಬಾರು ನಡೆಯುವುದು, ಆದ್ದರಿಂದ ಶ್ರೇಷ್ಠ ಸಂಕಲ್ಪಗಳ ಸ್ಟಾಕ್ ಜಮಾ ಮಾಡಿ.