13.09.26 Avyakt Bapdada
Kannada
Murli 15.11.2011 Om Shanti Madhuban
“ಈಗ ನಿರ್ವಿಘ್ನ ಮತ್ತು
ಎವರೆಡಿಯಾಗಿದ್ದು 108ರ ಮಾಲೆಯನ್ನು ತಯಾರು ಮಾಡಿ, ಬ್ರಹ್ಮಾ ತಂದೆಯ ಸಮಾನ ಸಂಪನ್ನ ಹಾಗೂ
ಸಂಪೂರ್ಣರಾಗಿ”
ಇಂದು ಸರ್ವಶಕ್ತಿವಂತ
ತಂದೆಯು ತನ್ನ ಮಾಸ್ಟರ್ ಸರ್ವಶಕ್ತಿವಂತ ಮಕ್ಕಳಿಗೆ ಸರ್ವಶಕ್ತಿಗಳ ಖಜಾನೆಯನ್ನು ಕೊಡಲು ಬಂದಿದ್ದಾರೆ.
ಸರ್ವಶಕ್ತಿಗಳ ಖಜಾನೆಯು ಎಷ್ಟು ಸಹಜವಾಗಿ ಪ್ರಾಪ್ತಿಯಾಗುತ್ತದೆ! ಒಂದು ಸೆಕೆಂಡಿನಲ್ಲಿ
ತಿಳಿದುಕೊಂಡಿರಿ - ನನ್ನ ಬಾಬಾ, ಬಾಬಾ ಹೇಳಿದರು - ನನ್ನ ಮಕ್ಕಳೇ, ಇಷ್ಟರಲ್ಲಿಯೇ ಖಜಾನೆಗಳ
ಮಾಲೀಕರಾದಿರಿ. ಅಂದಮೇಲೆ ಪ್ರತಿಯೊಂದು ಮಗುವಿನ ಬಳಿ ಸದಾ ಸರ್ವ ಖಜಾನೆಗಳು ಜೊತೆಯಿದೆಯಲ್ಲವೆ!
ತಂದೆಯ ಯಾವ ಖಜಾನೆಯಿದೆಯೋ ಅದು ನನ್ನ ಖಜಾನೆಯೆಂದು ನಶೆಯಿದೆಯೆ. ಈಗ ಪರಿಶೀಲಿಸಿ - ತಂದೆಯಂತು
ಪ್ರತಿಯೊಂದು ಮಕ್ಕಳಿಗೆ ಸರ್ವ ಖಜಾನೆಗಳನ್ನು ಕೊಟ್ಟಿದ್ದಾರೆ. ಒಂದೂ ಸಹ ಕಡಿಮೆಯಿಲ್ಲ ಆದರೆ ಆ
ಸರ್ವ ಖಜಾನೆಗಳು ಪ್ರತಿಯೊಬ್ಬರ ಬಳಿ ಸದಾ ಜೊತೆಯಿರುತ್ತದೆಯೇ ಅಥವಾ ಕೆಲವು ಖಜಾನೆಗಳಿವೆ ಹಾಗೂ
ಕೆಲವು ಖಜಾನೆಗಳು ಕಡಿಮೆಯಿದೆಯೇ? ಬಾಪ್ದಾದಾರವರಂತು ಕೊಟ್ಟಿದ್ದಾರೆ ಆದರೆ ಪ್ರತಿಯೊಬ್ಬರ ಬಳಿ
ಸರ್ವ ಖಜಾನೆಗಳು ಸದಾ ಇರುತ್ತದೆಯೇ ಹಾಗೂ ಸರ್ವ ಖಜಾನೆಗಳು ಸಮಯದಲ್ಲಿ ಕಾರ್ಯದಲ್ಲಿ
ತೊಡಗಿಸುತ್ತಿರುತ್ತೀರಾ? ಮಾಲೀಕರಾಗಿ ಆದೇಶ ಕೊಡಿ ಆಗ ಸಮಯದಲ್ಲಿ ಖಜಾನೆಗಳು ಅನುಭವದಲ್ಲಿ
ಬರುತ್ತದೆಯೇ? ಬಾಪ್ದಾದಾರವರು ನಾಲ್ಕೂ ಕಡೆಯ ಮಕ್ಕಳ ಸೇವೆಯ ಉಮ್ಮಂಗವನ್ನೂ ನೋಡಿದರು, ಕೇಳಿದರು.
ನಾಲ್ಕೂ ಕಡೆ ಒಳ್ಳೆಯ ಉಮ್ಮಂಗ-ಉತ್ಸಾಹದಿಂದ ಈ 90 ವರ್ಷಗಳ ಜಯಂತಿಯನ್ನು ಆಚರಿಸುತ್ತಿದ್ದೀರಿ, ಈಗ
ಪರಿವರ್ತನೆಯಾಯಿತು ಎನ್ನುವ ಚಾಲೆಂಜ್ ಮಾಡುತ್ತಿದ್ದೀರಿ. ಚಾಲೆಂಜ್ ಬಹಳ ಚೆನ್ನಾಗಿ
ಮಾಡುತ್ತಿದ್ದೀರಿ. ಬಾಪ್ದಾದಾರವರು ಮಕ್ಕಳ ಉಮ್ಮಂಗ-ಉತ್ಸಾಹವನ್ನು ನೋಡಿ-ನೋಡಿ ಖುಷಿ ಪಡುತ್ತಾರೆ
ಮತ್ತು ಯಾವ ಗೀತೆ ಹಾಡುತ್ತಾರೆ? ವಾಹ್ ಮಕ್ಕಳೇ ವಾಹ್! ಜೊತೆ ಜೊತೆಯಲ್ಲಿ ಬಾಪ್ದಾದಾರವರು ನೋಡಿದರು
- ಚಾಲೆಂಜ್ ಅಂತು ಬಹಳ ಚೆನ್ನಾಗಿ ಉಮ್ಮಂಗ-ಉತ್ಸಾಹದಿಂದ ಮಾಡುತ್ತಿದ್ದೀರಿ ಆದರೆ ಜೊತೆಯಲ್ಲಿ
ಮಕ್ಕಳಲ್ಲಿ ಸ್ವಯಂನ ಸರ್ವ ಧಾರಣೆಗಳ ಸಫಲತಾ ಸ್ವರೂಪವನ್ನೂ ನೋಡಿದರು. ತಾವೆಲ್ಲರೂ ಸಹ ತಮ್ಮ
ಸಂಪನ್ನ ಹಾಗೂ ಸಫಲತಾ ಸ್ವರೂಪವನ್ನು ತಿಳಿದಿದ್ದೀರಿ ಏಕೆಂದರೆ ಸರ್ವ ನಿಮಿತ್ತರಾಗಿರುವ ಮಕ್ಕಳು ಸದಾ
ಸಂಪನ್ನ ಹಾಗೂ ಸಫಲತಾಮೂರ್ತಿಗಳಾಗಿದ್ದೀರಿ ಅಥವಾ ಆಗಬೇಕಾಗಿದೆಯೇ? ಏಕೆಂದರೆ ಸುಖಮಯ
ಸಂಸಾರ(ಜಗತ್ತು)ದ ಆಧಾರ ಸ್ವರೂಪ ತಾವು ಮಕ್ಕಳಾಗಿದ್ದೀರಿ. ಅಂದಮೇಲೆ ಬಾಪ್ದಾದಾರವರು ಸರ್ವ ಮಕ್ಕಳ
ಫಲಿತಾಂಶವನ್ನು ನೋಡಿದರು. ತಾವು ಯಾರು ಆಧಾರಮೂರ್ತಿಗಳಾಗಿದ್ದೀರಿ, ಕೇವಲ ಸ್ವಲ್ಪ ಮಕ್ಕಳಲ್ಲ,
ಸರ್ವ ಮಕ್ಕಳ ಚಾಲೆಂಜ್ ಆಗಿದೆ - ನಾವು ಸುಖಮಯ ಸಂಸಾರವನ್ನು ತರಲು ನಿಮಿತ್ತರಾಗಿದ್ದೇವೆ.
ಬಾಪ್ದಾದಾರವರು ಎಲ್ಲಾ
ಮಕ್ಕಳೊಂದಿಗೆ ಕೇಳುತ್ತಿದ್ದಾರೆ - ಸುಖಮಯ ಸಂಸಾರವನ್ನು ತರಲು ನಿಮಿತ್ತರಾಗಿರುವ ಮಕ್ಕಳು ಸಂಪೂರ್ಣ
ಸಂಪನ್ನ ಆಧಾರಮೂರ್ತಿಗಳಾಗಿದ್ದೀರಾ? ಮಕ್ಕಳಲ್ಲಿ ಬಾಪ್ದಾದಾರವರ ಆಸೆಯಿದೆ - ಪ್ರತಿಯೊಂದು ಮಗು
ಸಫಲತಾಮೂರ್ತಿಗಳಾಗಿರಲಿ. ಏಕೆಂದರೆ ತಾವು ತಂದೆಯ ಜೊತೆಗಾರರಾಗಿ ಸಂಕಲ್ಪ ಮಾಡಿದಿರಿ ಹಾಗೂ
ಪರಿವರ್ತನೆ ಆಯಿತೆಂದರೆ ಆಯಿತು ಎನ್ನುವ ಚಾಲೆಂಜ್ನ್ನು ಬಹಳ ಖುಷಿಯಿಂದ ಮಾಡಿದ್ದೀರೆಂದರೆ
ತಮ್ಮೊಂದಿಗೆ ಕೇಳಿಕೊಳ್ಳಿ – ವಿಶ್ವ ಪರಿವರ್ತನೆಗೆ ನಿಮಿತ್ತರಾಗಿರುವ ಮಕ್ಕಳು ಎಲ್ಲಿಯವರೆಗೆ
ಸ್ವ-ಸಂಪನ್ನ ಹಾಗೂ ಸಂಪೂರ್ಣರಾಗಿದ್ದೀರಿ? ಏಕೆಂದರೆ ರಾಜ್ಯ ಸ್ಥಾಪನೆಯಾಗುತ್ತಿದೆ ಅಂದಮೇಲೆ ಮೊದಲು
ರಾಜ್ಯದಲ್ಲಿ ನಿಮಿತ್ತರಾಗಿರುವ ಆತ್ಮರು ನಿಮಿತ್ತರಾದ ನಂತರ ಅನ್ಯರು ನಿಮಿತ್ತರಾಗಲು
ಸಾಧ್ಯವಾಗುತ್ತದೆ. ಅಂದಮೇಲೆ ಬಾಪ್ದಾದಾರವರು ನೋಡಿದರು - ಈಗ ಸಂಪೂರ್ಣರಾಗುವುದರಲಿ ಸ್ವಲ್ಪ
ಮಾರ್ಜಿನ್ ಉಳಿದುಕೊಂಡಿದೆ. ಸೇವೆಯಂತು ಮಾಡಿದ್ದೀರಿ ಆದರೆ ಸೇವೆಯ ಫಲಿತಾಂಶದಲ್ಲಿ ಎಷ್ಟು ಮಂದಿ
ತಮ್ಮ ಜೊತೆಗಾರರಾದರು? ಯಾರು ಕೇಳಿದರು ಅವರು ಎಷ್ಟು ಮಂದಿ ಸಮೀಪ ಬರುತ್ತಿದ್ದಾರೆ? ಲೆಕ್ಕ
ತೆಗೆಯಿರಿ. ಬಾಪ್ದಾದಾರವರು ಮಕ್ಕಳ ಸಾಹಸದಲ್ಲಿ ಖುಷಿ ಪಡುತ್ತಿದ್ದಾರೆ ಆದರೆ ಈಗ ಸೇವೆಯ
ಫಲಿತಾಂಶದಲ್ಲಿ ಮತ್ತಷ್ಟು ತೀವ್ರತೆಯನ್ನು ತರಬೇಕಾಗಿದೆ. ಪ್ರತೀ ಸಮಯದಲ್ಲಿ ಆತ್ಮರನ್ನು ಇಷ್ಟೂ
ಸಮೀಪ ಸಂಬಂಧದಲ್ಲಿ ತರಬೇಕಾಗಿದೆ, ಬಹಳ ಖುಷಿ ಪಡುತ್ತಾರೆ - ಈಗ ಬ್ರಹ್ಮಾಕುಮಾರಿಯರ ಕರ್ತವ್ಯವನ್ನು
ತಿಳಿದುಕೊಳ್ಳುವುದರಲ್ಲಿ ಬಹಳ ಸಮೀಪಕ್ಕೆ ಬಂದಿದ್ದಾರೆ ಆದರೆ ಬಾಪ್ದಾದಾರವರು ಮೊದಲೂ ಹೇಳಿದರು -
ಆತ್ಮರಿಗೆ ತಂದೆಯ ಮೂಲಕ ಆಸ್ತಿ ಸಿಗಬೇಕು ಅಂದಮೇಲೆ ತಂದೆಯನ್ನು ತಿಳಿಯಬೇಕು, ಸಮಯವನ್ನು
ತಿಳಿದುಕೊಳ್ಳಬೇಕು, ಸ್ವಮಾನವನ್ನು ತಿಳಿದರೆ ಆಗ ಆಸ್ತಿಗೆ ಅಧಿಕಾರಿಗಳಾಗುತ್ತಾರೆ. ಈಗ ತಂದೆಯು
ಬಂದಿದ್ದಾರೆ, ತಂದೆಯು ಆಸ್ತಿಯನ್ನು ಕೊಡುತ್ತಿದ್ದಾರೆ, ಇದು ತಿಳುವಳಿಕೆಯಲ್ಲಿ ಬಂದರೆ ಆಸ್ತಿಯನ್ನು
ತೆಗೆದುಕೊಂಡು ರಾಜ್ಯಾಧಿಕಾರಿಗಳಾಗುತ್ತಾರೆ.
ಯಾವ ಗೀತೆಯನ್ನು
ಹಾಡುತ್ತೀರಿ - ನಮ್ಮ ಬಾಬಾ ಬಂದು ಬಿಟ್ಟಿದ್ದಾರೆ, ನಾಲ್ಕೂ ಕಡೆ ಈ ಧ್ವನಿ ಮೊಳಗಲಿ. ಈಗ
ಬಾಪ್ದಾದಾರವರು ಈ ಫಲಿತಾಂಶವನ್ನು ನೋಡಲು ಬಯಸುತ್ತಾರೆ. ಪರಿವರ್ತನೆಯಾಗಿದೆ, ಸರ್ವೀಸಿನ ಲಾಭವೂ
ಆಗಿದೆ, ಪರಿಶ್ರಮದ ಫಲವು ಸಿಕ್ಕಿದೆ ಆದರೆ ಈಗ ತಂದೆಯವರೆಗೂ ತಲುಪಿಲ್ಲ, ತಂದೆಯ ಪ್ರತ್ಯಕ್ಷತೆ
ಹೇಗಾಗುವುದು? ಇದಕ್ಕಾಗಿ ಯಾವುದಾದರೂ ಯೋಜನೆ ಮಾಡಿರಿ. ರಾಜಧಾನಿಯಲ್ಲಿ ರಾಜ್ಯಾಡಳಿತ ಮಾಡುವವರೂ ಸಹ
ನಿರ್ವಿಘ್ನರಾಗಿದ್ದೀರಾ? ಈಗ ಪರಿವರ್ತನೆಯ ಡ್ರಾಮಾದ ಬಟನ್ ಒತ್ತುವುದೇ? ಎವರೆಡಿಯೇ?
ಎವರೆಡಿಯಿದ್ದೀರಾ? ಬಟನ್ ಒತ್ತುವುದೇ? ಏನೆಂದು ತಿಳಿಯುತ್ತೀರಿ, ಬಟನ್ ಒತ್ತುವುದೇ?
ಎವರೆಡಿಯಿದ್ದೀರಾ? ಏಕೆಂದರೆ ಎಲ್ಲರೂ ತಯಾರಾಗಬೇಕಾಗಿದೆ, ರಾಜ್ಯಾಧಿಕಾರಿಗಳು, ರಾಯಲ್
ಫ್ಯಾಮಿಲಿಯವರೂ ತಯಾರಾಗಬೇಕು, ರಾಯಲ್ ಪ್ರಜೆಗಳೂ ತಯಾರಾಗಬೇಕು ಹಾಗೂ ಸಾಧಾರಣ ಪ್ರಜೆಗಳಂತು ದೊಡ್ಡ
ಮಾತೇನಿಲ್ಲ. ಅಂದಮೇಲೆ ಇಂದು ಬಾಪ್ದಾದಾರವರು ಮಕ್ಕಳಿಂದ ಫಲಿತಾಂಶವನ್ನು ಕೇಳುತ್ತಿದ್ದಾರೆ. ಏನೆಂದು
ತಿಳಿಯುತ್ತೀರಿ? ಬಾಪ್ದಾದಾರವರು ಬಟನ್ ಒತ್ತುವುದರಲ್ಲಿ ಸಮಯ ಹಿಡಿಸುವುದಿಲ್ಲ ಅಂದಮೇಲೆ ಮೊದಲ
ಸಾಲಿನವರು ಏನೆಂದು ತಿಳಿಯುತ್ತೀರಿ? ಶಕ್ತಿಯರು ಏನೆಂದು ತಿಳಿಯುತ್ತೀರಿ? ಪಾಂಡವರು ಏನೆಂದು
ತಿಳಿಯುತ್ತೀರಿ? ಜವಾಬು ಕೊಡಿ. ಪಾಂಡವರು ಜವಾಬನ್ನು ಕೊಡಿ. ಬಟನ್ ಒತ್ತುವುದೇ? ಎವರೆಡಿಯಿದ್ದೀರಾ?
(ಬಾಬಾ ತಾವು ಮಾಲೀಕನಾಗಿದ್ದೀರಿ, ತಮಗೆ ಬಟನ್ ಒತ್ತಬೇಕೆಂದು ಸಂಕಲ್ಪ ಬಂದಿದೆಯೆಂದರೆ ಮಾಡಿರಿ)
ಬಾಪ್ದಾದಾರವರು ಮಕ್ಕಳೊಂದಿಗೆ ಏಕೆ ಕೇಳುತ್ತಿದ್ದಾರೆ? ಏಕೆಂದರೆ ತಂದೆಯಂತು ರಾಜ್ಯದಲ್ಲಿ ಬರುವುದೇ
ಇಲ್ಲ. ಬ್ರಹ್ಮಾ ತಂದೆಯು ಬರಬೇಕು. (ಇಲ್ಲಿ ಬಾಪ್ದಾದರವರೊಂದಿಗೆ ಮಿಲನ ಮಾಡುತ್ತಾ ಇರುವುದು ಬಹಳ
ಚೆನ್ನಾಗಿದೆಯೆನಿಸುತ್ತದೆ? ಈ ಮಾತಂತು ಚೆನ್ನಾಗಿದೆ ಆದರೆ ತಂದೆಯು ಸಮಾನರಾಗಿ ತಂದೆಯ ಜೊತೆ ಜೀವನದ
ಅನುಭವ ಮಾಡಬೇಕಾಗಿದೆಯಲ್ಲವೆ. ಅಂತಹವರು ಇದ್ದೀರಾ? ತಯಾರಿದ್ದೀರಾ? ಕೇವಲ ತಾವಷ್ಟೇ ಅಲ್ಲ, ರಾಜಧಾನಿ
ತಯಾರಿರಬೇಕಾಗಿದೆ. ತಾವು ಯಾರ ಮೇಲೆ ರಾಜ್ಯಾಡಳಿತ ಮಾಡುವಿರಿ? ರಾಜಧಾನಿಯಂತು ಬೇಕಾಗಿದೆಯಲ್ಲವೆ! (ಜೊತೆಗಾರರಿದ್ದಾರೆ)
ಎಲ್ಲರೂ ತಯಾರಾಗಿದ್ದೀರಾ? (ಖಂಡಿತ ತಯಾರಿದ್ದಾರೆ) ಸಂಪನ್ನರಾಗಿರುವುದರಲ್ಲಿ ತಯಾರಿದ್ದೀರಾ)
ಒಳ್ಳೆಯದು - ಎಲ್ಲರೂ ಯೋಚಿಸುತ್ತಿದ್ದೀರಿ, ಪರವಾಗಿಲ್ಲ.
ಬಾಪ್ದಾದಾರವರು
ತಿಳಿದಿದ್ದಾರೆ - ಈಗಲೂ ರೆಡಿ ಇದ್ದೀರಿ, ಎವರೆಡಿಯಾಗಬೇಕಾಗಿದೆ. ಬಾಪ್ದಾದಾರವರು ಮೊದಲೇ ಯಾವ ಎರಡು
ಮಾತನ್ನು ಹೇಳಿದ್ದರು - ಸೆಕೆಂಡಿನಲ್ಲಿ ಫುಲ್ಸ್ಟಾಪ್ ಇಡುವಂತಹ ಮಕ್ಕಳು ಬೇಕು, ವ್ಯರ್ಥ ಸಂಕಲ್ಪಗಳ
ಹೆಸರು-ಗುರುತೂ ಇರಬಾರದು. ಯಾರಿಗೇ ಸಂದೇಶವನ್ನು ಕೊಡುತ್ತೀರಿ ಅವರು ಸಂದೇಶವನ್ನು ಕೇಳಿ
ಪರಿವರ್ತನೆಯಾಗುವ ಉಮ್ಮಂಗ-ಉತ್ಸಾಹದಲ್ಲಿ ಬಂದು ಬಿಡಬೇಕು. ಈಗ ಬಾಪ್ದಾದಾರವರು ಈ ಫಲಿತಾಂಶವನ್ನು
ಬಯಸುತ್ತಾರೆ ಇದಕ್ಕಾಗಿ ಬಾಪ್ದಾದಾರವರು ಮಕ್ಕಳಿಗೆ ಸಲಹೆ ಕೊಡುತ್ತಾರೆ, ಆಜ್ಞೆಯನ್ನೂ
ಹೊರಡಿಸುತ್ತಾರೆ - ಸೇವೆ ಮಾಡುತ್ತೀರಿ ಆದರೆ ಯಾರ ಸೇವೆ ಮಾಡುತ್ತೀರಿ, ಒಂದೇ ಸಮಯದಲ್ಲಿ ಮೂರೂ
ರೂಪಗಳ ಹಾಗೂ ಮೂರೂ ರೀತಿಯಿಂದ ಸೇವೆ ಮಾಡಿ. ನಾಲೆಡ್ಜ್ಫುಲ್, ಪವರ್ಫುಲ್ ಮತ್ತು ಲವ್ಫುಲ್ - ಈ ಮೂರು
ರೂಪಗಳಿಂದ ಸೇವೆ ಮಾಡಿ ಮತ್ತು ಮೂರೂ ರೀತಿಯಿಂದ ಸೇವೆ ಮಾಡಿ, ಅದಾಗಿದೆ - ಮನಸ್ಸಾ-ವಾಚಾ-ಕರ್ಮಣಾ
ಒಂದೇ ಸಮಯದಲ್ಲಾಗಲಿ, ಕೇವಲ ವಾಣಿಯಿಂದ ಸೇವೆಯಲ್ಲ ಆದರೆ ವಾಣಿಯ ಜೊತೆಗೆ ಮನಸ್ಸಾ ಸೇವೆಯೂ ಜೊತೆ
ಜೊತೆಯಲ್ಲಿ ಮಾಡಬೇಕಾಗಿದೆ. ಶಕ್ತಿಶಾಲಿ ಮನಸ್ಸಿರಬೇಕಾಗಿದೆ ಅದಕ್ಕಾಗಿ ಈಗ ಒಂದೇ ಸಮಯದಲ್ಲಿ ಮನಸ್ಸಾ
ಪವರ್ಫುಲ್ (ಶಕ್ತಿಶಾಲಿ) ಆಗಿರಲಿ. ವಾಣಿಯ ಮೂಲಕ ಪೂರ್ಣ ಜ್ಞಾನವೇ ಸ್ಪಷ್ಟವಾಗಬೇಕು ಮತ್ತು ಕರ್ಮಣಾ
ಮೂಲಕ, ಕರ್ಮದ ಮೂಲಕ ಸೇವೆಯಿಂದ ಆ ಆತ್ಮರು ಅನುಭವ ಮಾಡಲಿ - ಸತ್ಯವಾಗಿಯೂ ನಾವು ನಮ್ಮ ಪರಿವಾರದಲ್ಲಿ
ಬಂದು ತಲುಪಿದ್ದೇವೆ. ಪರಿವಾರದ ಫೀಲಿಂಗ್ ಬರುವುದರಿಂದ ಸಮೀಪದ ಜೊತೆಗಾರರಾಗಿ ಬಿಡುವರು - ಈಗ ಇದರ
ಅವಶ್ಯಕತೆಯಿದೆ. ಅಂದಮೇಲೆ ಈಗ ಬಾಪ್ದಾದಾರವರು ಒಂದೇ ಸಮಯದಲ್ಲಿ ಒಟ್ಟಿಗೆ ಮೂರೂ ರೂಪದ
ಸೇವೆಯಾಗಲೆಂದು ಬಯಸುತ್ತಾರೆ. ಈ ರೀತಿ ಮಾಡಲು ಸಾಧ್ಯವಿದೆಯೇ? ಸಾಧ್ಯವೇ? ಕೈಯನ್ನೆತ್ತಿರಿ,
ಸಾಧ್ಯವಿದೆಯೇ? ಈಗ ಬಾಪ್ದಾದಾರವರು ಫಲಿತಾಂಶದಲ್ಲಿ ನೋಡಿದರು - ವಾಣಿಯ ಮೂಲಕ ಜ್ಞಾನ
ಪೂರ್ಣರಾಗುತ್ತಾರೆ ಆದರೆ ಪರಿವಾರದ ಜೊತೆಗಾರರಾಗುವುದರಲ್ಲಿ ಈಗ ಸ್ವಲ್ಪಸಮಯ ಹಿಡಿಸುತ್ತದೆ.
ಬಾಪ್ದಾದಾ ನೋಡಿದರು - ಈಗ ಸಮಯದ ಚಾಲೆಂಜ್ನ ಜೊತೆಯಲ್ಲಿ, ಸೇವೆಯಲ್ಲಿ ಇಂತಹ ಸೇವೆ ಮಾಡಿ - ಅದು
ಒಂದೇ ಸಮಯದಲ್ಲಿ ಮೂರೂ ಸೇವೆಗಳ ಮೂಲಕ ಪ್ರಾಪ್ತಿಯ ಅನುಭವ ಮಾಡಬೇಕು.
ಎಲ್ಲರೂ ಮಿಲನ
ಮಾಡುವುದಕ್ಕಾಗಿ ಉಮ್ಮಂಗ-ಉತ್ಸಾಹದಿಂದ ತಲುಪಿದ್ದೀರಿ ಅಂದಮೇಲೆ ಬಾಪ್ದಾದಾರವರು ಮಕ್ಕಳ
ಉಮ್ಮಂಗವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಈಗ ಸಂಪನ್ನ ಹಾಗೂ ಸಂಪೂರ್ಣರಾಗುವುದರಲ್ಲಿ ಗಮನ
ಕೊಡಬೇಕಾಗಿದೆ ಏಕೆಂದರೆ ಕೊನೆಪಕ್ಷ 108ರ ಮಾಲೆಯಾದರೂ ತಯಾರಾಗಲಿ, ತಯಾರು ಮಾಡಲು ಸಾಧ್ಯವಿದೆಯೇ?
108ರ ಮಾಲೆಯು ತಯಾರಿದೆಯೇ? ತಯಾರಿದ್ದೀರಾ? ಏಕೆಂದರೆ ರಾಜಧಾನಿಯಲ್ಲಿ ರಾಜ್ಯಾಧಿಕಾರಿಗಳಂತು ಅವರೇ
ಆಗುವರಲ್ಲವೆ. ಈಗ 108 ರತ್ನಗಳ ಮಾಲೆಯ ಲಿಸ್ಟ್ನ್ನು ಮಾಡಲು ಸಾಧ್ಯವಿದೆಯೇ? ಲಿಸ್ಟ್ ತೆಗೆಯಲು
ಸಾಧ್ಯವಿದೆಯೇ? ಹಾಂಜಿ ಎಂದು ಹೇಳುವುದಿಲ್ಲವೇ? 108 ರಾಜ್ಯಾಧಿಕಾರಿಗಳು, ನಂತರ 16ಸಾವಿರ 108
ರಾಜ್ಯಾಧಿಕಾರಿಗಳ ಜೊತೆಗಾರರು, ಅದರ ನಂತರ ನಂಬರ್ವಾರ್ ಆಗಿರುತ್ತಾರೆ. ಅಂದಮೇಲೆ ಈಗ ಸಮಯದನುಸಾರ,
ಸಮಯವನ್ನು ಸಮೀಪ ತರುವಂತಹ ಮಕ್ಕಳಿಂದ ಇದನ್ನೇ ಬಯಸುತ್ತಿದ್ದೇವೆ - 108ರ ಮಾಲೆಯು ಎವರೆಡಿಯಾಗಲಿ,
ತಂದೆಯ ಸಮಾನ ಆಗಿ ಬಿಡಲಿ. ಇಷ್ಟು ಮಂದಿ ಇದ್ದೀರಲ್ಲವೆ, ಮೊದಲ ಸಾಲಿನವರು 108ರ ಲಿಸ್ಟ್
ತೆಗೆಯುತ್ತೀರಾ, ಆಯಿತು ಅಥವಾ ಇಲ್ಲ ಎಂದು ಹೇಳಿರಿ. ಸಾಕಾರದಲ್ಲಿ ಯಾವಾಗ ಬ್ರಹ್ಮಾ ತಂದೆಯಿದ್ದರು
ಆಗ ಕೆಲವೊಮ್ಮೆ ಟ್ರಯಲ್ ಮಾಡಿದರು ಆದರೆ ಫೈನಲ್ ಆಗಲಿಲ್ಲ ಆದರೆ ಈಗಂತೂ 90 ವರ್ಷಗಳು
ಪೂರ್ಣವಾಗುತ್ತಿದೆ, ಅಂದಮೇಲೆ ಈ 90 ವರ್ಷಗಳ ಮಹೋತ್ಸವದಲ್ಲಿ ಏನಾದರೂ ನವೀನತೆ ಮಾಡುತ್ತೀರಲ್ಲವೆ.
ಇದೇ ನವೀನತೆ ಮಾಡಿ - ಪ್ರತಿಯೊಬ್ಬರೂ ತನ್ನನ್ನು 108ರ ಮಾಲೆಯ ಮಣಿಯನ್ನಾಗಿ ಮಾಡುವುದು, ಎಣಿಕೆ
ಮಾಡಿದರೆ 108ರ ಮಾಲೆಯಂತೂ ತಯಾರಾಗಿ ಬಿಟ್ಟಿದೆ ಎನ್ನುವ ನವೀನತೆಯನ್ನು ತರಬೇಕು ಏಕೆಂದರೆ ಯಾವಾಗ
ಮೊದಲು ರಾಜ್ಯಧಾರಿಕಾರಿ ತಯಾರಾಗುತ್ತಾರೆ, ಆಗಲೇ ರಾಜ್ಯದ ಸಂಪರ್ಕದವರು ತಯಾರಾಗುವರು. ಅವರಿಗೂ ಸಹ
ಸ್ಥಾನ ಬೇಕಲ್ಲವೆ. ಅಂದಮೇಲೆ ಬಾಪ್ದಾದಾರವರು ಹೇಳುವ ಸಾರ ಇದೇ ಆಗಿದೆ - ಈಗ ಪ್ರತಿಯೊಬ್ಬರೂ ತಮ್ಮ
ತೀವ್ರ ಪುರುಷಾರ್ಥ ಮಾಡಿ ಮತ್ತು ಧೃಡ ಸಂಕಲ್ಪ ಮಾಡಬೇಕು - ನಾನು ತಂದೆಯ ಸಮಾನ ಆಗಲೇಬೇಕಾಗಿದೆ
ಏಕೆಂದರೆ ಅಚಾನಕ್ ಪರಿವರ್ತನೆಯಾಗುವುದಿದೆ ಬಾಪ್ದಾದಾರವರು ತಿಳಿಸಿ ಬಿಟ್ಟಿದ್ದಾರೆ. ಅದಕ್ಕೆ ಮೊದಲೇ
ಕೊನೆಪಕ್ಷ ಯಾರು ಸೇವೆಗೆ ನಿಮಿತ್ತರಾಗಿದ್ದೀರಿ, ವಲಯ ಸಂಚಾಲಕರ (ಜೋನ್ ಹೆಡ್) ಜೊತೆ ಸೇವಾಕೇಂದ್ರದ
ನಿಮಿತ್ತರು, ಜೊತೆಯಲ್ಲಿ ಅವರ ಸಮೀಪದ ಜೊತೆಗಾರ ಪಾಂಡವರು, ಸೇವಾಕೇಂದ್ರದ ಸಂಚಾಲಕರಲ್ಲ ಆದರೆ
ಯಾವುದೇ ವಿಶೇಷ ಕಾರ್ಯಕ್ಕಾಗಿ ನಿಮಿತ್ತರಾಗಿರುವ ವಿಶೇಷ ಆತ್ಮರು ಎನ್ನುವ ದೃಷ್ಟಿಯಿಂದ ನೋಡುತ್ತೀರಿ,
ಆ ಪಾಂಡವರೂ ಸಹ ಈಗ ತೀವ್ರ ಪುರುಷಾರ್ಥ ಮಾಡಿ ಸ್ವಪರಿವರ್ತನೆಯ ನಶೆಯು ಸ್ಟೇಜಿನ ಮೇಲೆ ತರಬೇಕಾಗಿದೆ.
ಇದಕ್ಕಾಗಿ ಎವರೆಡಿಯಿದ್ದೀರಾ? ಈ ಕಾರ್ಯವನ್ನು ಮಾಡಲೇಬೇಕು ತಮ್ಮನ್ನು ತಂದೆಯ ಸಮಾನ, ಬ್ರಹ್ಮಾ
ತಂದೆಯ ಸಮಾನ ಫಾಲೋ ಫಾದರ್ ಮಾಡಲೇಬೇಕು ಎಂದು ಯಾರು ತಿಳಿಯುತ್ತೀರಿ, ಮಾಡಬೇಕಾಗಿದೆಯೇ? ಕೈಯೆತ್ತಿರಿ.
ಕೈಯನ್ನಂತೂ ಎಲ್ಲರೂ ಎತ್ತುತ್ತೀರಿ ಖುಷಿ ಪಡಿಸಿ ಬಿಡುತ್ತೀರಿ. ಆದರೆ ಕೈಯೆತ್ತುವುದರ ಜೊತೆಯಲ್ಲಿ
ಧೃಡ ಸಂಕಲ್ಪವನ್ನೂ ಮಾಡಿ. ಧೃಡತೆಯ ಶಕ್ತಿಯು ಬಹಳ ಸಹಯೋಗ ಕೊಡುತ್ತದೆ.
ಬಾಪ್ದಾದಾರವರು
ಖುಷಿಯಾಗಿದ್ದಾರೆ, ಕೈಯೆತ್ತುವುದರಲ್ಲಿ ಎಲ್ಲರೂ ಬುದ್ಧಿವಂತರಾಗಿದ್ದೀರಿ ಆದರೆ ಈಗ ಧೃಡತೆಯನ್ನು
ಪ್ರತ್ಯಕ್ಷದಲ್ಲಿ ತರಬೇಕಾಗಿದೆ. ಬುದ್ಧಿವಂತ ಮಕ್ಕಳಲ್ಲವೆ, ಧೃಡತೆಯನ್ನೂ ಮಾಡುತ್ತೀರಿ ಆದರೆ
ಸ್ವಲ್ಪ ಇದಾಯಿತು, ಇದಾಯಿತು, ಈ ರೀತಿಯಾಗದಿದ್ದರೆ ಹೀಗೆ ಆಗುತ್ತಿರಲಿಲ್ಲ - ಹೀಗೆ ಧೃಡತೆಯು
ಭಿನ್ನ-ಭಿನ್ನ ರೂಪಗಳಲ್ಲಿ ಬದಲಾಗಿ ಬಿಡುತ್ತದೆ. ಈ ನೆಪಗಳಲ್ಲಿ ಬಹಳ ಬುದ್ಧಿವಂತರಾಗಿದ್ದೀರಿ
ಅಂದಾಗ ಈಗ ಬಾಪ್ದಾದಾರವರು ಏನು ಬಯಸುತ್ತಾರೆ? ಈಗ ಪ್ರತಿಯೊಬ್ಬರೂ ತಂದೆಯ ಸಮಾನರಾಗಬೇಕು,
ಮನಸ್ಸಾ-ವಾಚಾ-ಕರ್ಮಣಾ, ಸಂಬಂಧ-ಸಂಪರ್ಕದಲ್ಲಿ ತಮ್ಮನ್ನು ಯಾರು ನೋಡುತ್ತಾರೆ, ಯಾರು
ಮಿಲನವಾಗುತ್ತಾರೆಂದರೂ ಸಹ ಇದೇ ಹೇಳಲಿ- ವಾಹ್ ಪರಿವರ್ತನೆ ವಾಹ್! ಎನ್ನುವಂತಿರಬೇಕು.
ಬಾಪ್ದಾದಾರವರಿಗೂ ಚೆನ್ನಾಗಿದೆಯೆನಿಸುತ್ತದೆ. ಯಾವ ಮಕ್ಕಳು ನಿಮಿತ್ತರಾಗಿದ್ದೀರಿ ಅವರನ್ನು ನೋಡಿಯೂ
ಸಹ ಖುಷಿಯಾಗುತ್ತದೆ ಮತ್ತು ಮಿಲನವಾಗಲೂ ಸಹ ಬಹಳ ಖುಷಿಯಾಗುತ್ತದೆ.
ಅಂದಮೇಲೆ ಇಂದು ಯಾವ
ಸಂಕಲ್ಪ ಮಾಡಿದಿರಿ? ಆಗಲೇಬೇಕು. ಬ್ರಹ್ಮಾ ತಂದೆಯ ಸಮಾನ ಆಗಲೇಬೇಕಾಗಿದೆ. ಆಗಬೇಕು ಎಂದಲ್ಲ,
ಆಗಲೇಬೇಕಾಗಿದೆ. ಯಾವುದೇ ಮಾತು ಬರಲಿ, ಬಾತ್(ಮಾತು)ನ ಬದಲಾಗಿ ಬಾಬಾರವರನ್ನು ಮುಂದಿಟ್ಟುಕೊಳ್ಳಿರಿ.
ಅಂದಮೇಲೆ ದೂರ ಕುಳಿತಿರುವ ಮಕ್ಕಳು, ಸಮೀಪ ಸನ್ಮುಖದಲ್ಲಿ ಕುಳಿತಿರುವ ಮಕ್ಕಳು, ಬಾಪ್ದಾದಾರವರು
ಎಲ್ಲರನ್ನೂ ನೋಡಿ-ನೋಡಿ ಖುಷಿ ಪಡುತ್ತಿದ್ದಾರೆ. ಎಲ್ಲಾ ಮಕ್ಕಳು ಬಹಳ ಒಳ್ಳೆಯ ಯೋಜನೆಯನ್ನು ತಯಾರು
ಮಾಡುತ್ತೀರಿ, ಅಮೃತವೇಳೆಯಲ್ಲಿ ಎಲ್ಲರೂ ಬಹಳ ಮಧುರ-ಮಧುರ ಮಾತುಗಳನ್ನು ಮಾತನಾಡುತ್ತೀರಿ. ಮೆಜಾರಿಟಿ
ಮಕ್ಕಳು ಇಷ್ಟೂ ಮಧುರ ಮಾತು ಮಾತನಾಡುತ್ತಾರೆ, ಬಾಬಾರವರೂ ಸಹ ಮಧುರ ಮಾತುಗಳನ್ನು ಕೇಳಿ
ಬಲಿಹಾರಿಯಾಗಿಬಿಡುತ್ತಾರೆ. ಆದರೆ ನಂತರ ಏನಾಗುತ್ತದೆಯೆಂದು ತಿಳಿದಿದೆಯೇ? ಯಾವಾಗ
ಕರ್ಮಕ್ಷೇತ್ರದಲ್ಲಿ ಬರುವರು, ಸಂಬಂಧದಲ್ಲಿ ಬರುತ್ತಾರೆ, ಸೇವೆಯಲ್ಲಿ ಬರುತ್ತಾರೆ ಆಗ ಯಾವ ಮಾತುಗಳು
ಬರುತ್ತದೆಯೋ ಅದರಲ್ಲಿ ಅಲ್ಪ ಸ್ವಲ್ಪ ಬದಲಾಗಿ ಬಿಡುತ್ತದೆ. ಅಮೃತವೇಳೆಯ ಯಾವ ಉಮ್ಮಂಗ-ಉತ್ಸಾಹವಿದೆ
ಅದು ಕರ್ಮ ಮಾಡುತ್ತಾ, ಸಂಬಂಧದಲ್ಲಿ ಬರುತ್ತಾ ಅಲ್ಪ ಸ್ವಲ್ಪ ಬದಲಾಗಿ ಬಿಡುತ್ತದೆ.
ಈಗ ಬಾಪ್ದಾದಾರವರು ಒಂದು
ಕಾರ್ಯವನ್ನು ಕೊಡುತ್ತಾರೆ, ಮಾಡುವುದಕ್ಕಾಗಿ ತಯಾರಿದ್ದೀರಲ್ಲವೆ. ಕತ್ತನ್ನು ಅಲುಗಾಡಿಸಿ.
ಕೈಯೆತ್ತಿರಿ. ಬಾಪ್ದಾದಾರವರ ಸಂಕಲ್ಪವಿದೆ - ಒಂದು ತಿಂಗಳಿಗಾಗಿ ತಮ್ಮನ್ನು ಧೃಡ ಸಂಕಲ್ಪದ
ಆಧಾರದಿಂದ ತಂದೆಯ ಸಮಾನ ಸ್ಥಿತಿಯಲ್ಲಿ ಸ್ಥಿತ ಮಾಡಲು ಸಾಧ್ಯವಿದೆಯೇ? ಒಂದು ತಿಂಗಳು ಮಾಡಲು
ಸಾಧ್ಯವಿದೆಯೇ? ಅಥವಾ ಜಾಸ್ತಿ ಇದೆಯೇ? ಒಂದು ತಿಂಗಳು ಧೃಡತೆಯಿಂದ, ಧೃಡತೆಯನ್ನು ಜೊತೆಗಾರರನ್ನಾಗಿ
ಮಾಡಿಕೊಳ್ಳಬೇಕು, ತಂದೆಯನ್ನು ಸದಾ ಸನ್ಮುಖದಲ್ಲಿ ಇಟ್ಟುಕೊಳ್ಳಿ, ಬ್ರಹ್ಮಾ ತಂದೆಯನ್ನು ನಯನಗಳಲ್ಲಿ
ಸಮಾವೇಶ ಮಾಡಿಟ್ಟುಕೊಳ್ಳಬೇಕು ಮತ್ತು ಬ್ರಹ್ಮಾ ತಂದೆಯು ಮನಸ್ಸಾ-ವಾಚಾ-ಕರ್ಮಣಾ ಏನು ಮಾಡಿದರು
ಅದನ್ನೇ ಮಾಡಬೇಕು. ಭಲೆ ಬ್ರಹ್ಮಾ ತಂದೆಯನ್ನು ಪ್ರತ್ಯಕ್ಷವಾಗಿ ನೋಡಿರಬಹುದು ಅಥವಾ ನೋಡದೇ ಇರಬಹುದು
ಆದರೆ ತಿಳಿದುಕೊಂಡಿದ್ದೀರಲ್ಲವೆ. ಯಾವುದೇ ಕರ್ಮವನ್ನು ಮಾಡುವುದಕ್ಕೆ ಮೊದಲು ಇದನ್ನು ಪರಿಶೀಲಿಸಿ
– ಬ್ರಹ್ಮಾ ತಂದೆಯ ಸಂಕಲ್ಪ ಈ ರೀತಿಯಾಗಿ ಇರುತ್ತಿದ್ದೇವೆಯೇ, ಇಂತಹ ಮಾತುಗಳು ಆಡುತ್ತಿದ್ದೇವೆಯೇ,
ಇಂತಹ ಕರ್ಮ ಮಾಡುತ್ತಿದ್ದೇವೆಯೇ, ಇಂತಹ ಸಂಬಂಧವಿದೆಯೇ, ಇಂತಹವರ ಸಂಪರ್ಕದಲ್ಲಿ ಇರುತ್ತಿದ್ದೇವೆಯೇ?
ಮೊದಲು ಯೇಚಿಸಿ ನಂತರ ಮಾಡಿ. ಮಾಡಲು ಸಾಧ್ಯವಿದೆಯೇ? ಇದರಲ್ಲಿ ಕೈಯನ್ನೆತ್ತಿರಿ. ಮಾಡಲು
ಸಾಧ್ಯವಿದೆಯೇ? ಉದ್ದವಾಗಿ ಕೈಯೆತ್ತಿರಿ. ಮಾತೆಯರು ಕೈಯೆನ್ನೆತ್ತಿರಿ, ಇಲ್ಲಿ ವ್ಯಾಯಾಮ
ಮಾಡುತ್ತೀರಲ್ಲವೆ ಅಂದಮೇಲೆ ಕೈಯೆತ್ತಿರಿ. ಮುಂದೆ ಕುಳಿತಿರುವವರೂ ಕೈ ಎತ್ತುತ್ತಿದ್ದೀರಲ್ಲವೆ?
ಮಧುಬನದವರೆಲ್ಲರೂ ಇದರಲ್ಲಿ ನಂಬರ್ವನ್ ಬರಬೇಕಾಗಿದೆ. ಮುಂದೆ ಮಧುಬನದವರು ಕುಳಿತಿದ್ದೀರಲ್ಲವೆ.
ಮಧುಬನದಲ್ಲಿ ಕೇವಲ ಶಾಂತಿವನ ಅಲ್ಲ, ಯಾರೆಲ್ಲಾ ಇದ್ದೀರಿ ಒಂದು ತಿಂಗಳಿನಲ್ಲಿ ನಿರ್ವಿಘ್ನ,
ಪ್ರತಿಯೊಂದು ಸೇವಾಕೇಂದ್ರವೂ ಸಹ ನಿರ್ವಿಘ್ನವಾಗಿರಬೇಕು, ಗುಜರಾತಿನ ನಿಮಿತ್ತ ಶಿಕ್ಷಕಿಯರು
ಕೈಯನ್ನೆತ್ತಿರಿ. ಇದನ್ನು ಮಾಡಲು ಸಾಧ್ಯವಿದೆಯೇ, ಇದರಲ್ಲಿ ಉದ್ದವಾದ ಕೈಯೆನ್ನೆತ್ತಿರಿ. ಕೈಯನ್ನು
ಹಾಗಿಗೆ ಮಾಡಬೇಡಿ, ಉದ್ದವಾಗಿ ಕೈಯನ್ನೆತ್ತಿರಿ. ಮಾಡಲು ಸಾಧ್ಯವಿದೆಯೇ? ಒಳ್ಳೆಯದು - ಶಾಂತಿವನ
ನಿವಾಸಿಗಳು ಕೈಯೆತ್ತಿರಿ. ಸ್ವಲ್ಪ ಮಂದಿ ಇದ್ದಾರೆ. ಯಾರೆಲ್ಲಾ ಕುಳಿತಿದ್ದೀರಿ, ಹಿಂದೆಯೂ
ಕುಳಿತಿದ್ದಾರೆ. ಅಂದಮೇಲೆ ಮಧುಬನದ 4-5 ಸ್ಥಾನಗಳೆನಿವೆ, ಎಲ್ಲರೂ ಮಾಡುವಿರಾ? ಮಾಡುವಿರಾ
ಕೈಯೆತ್ತಿರಿ? ಮಧುಬನದವರು ಎರಡೆರಡು ಕೈಯೆನ್ನೆತ್ತಿರಿ. ಗುಜರಾತಿನ ಜಿಜ್ಞಾಸುಗಳೂ ಸಹ, ನಿಮಿತ್ತ
ಶಿಕ್ಷಕಿಯರೂ, ನಿಮಿತ್ತ ಸಹೋದರರೂ ಎಲ್ಲರೂ ಮಾಡುತ್ತೀರಾ, ಕೈಯೆತ್ತಿರಿ. ಉದ್ದವಾಗಿ ಕೈಯೆತ್ತಿರಿ.
ಹಿಂದೆ ಇರುವವರ ಕೈ ಕಾಣಿಸುತ್ತಿಲ್ಲ, ಒಳ್ಳೆಯದು - ಗುಜರಾತಿನವರು ಎದ್ದು ನಿಲ್ಲಿರಿ.
ಗುಜರಾತಿನವರಂತು ಬಹಳ ಮಂದಿ ಬಂದಿದ್ದಾರೆ. ಅರ್ಧ ಹಾಲ್ ಗುಜರಾತಿನವರಿದ್ದಾರೆ. (ಗುಜರಾತ್ 15
ಸಾವಿರ ಬಂದಿದ್ದಾರೆ, ಬಾಕಿ 3 ಸಾವಿರ ಮಂದಿಯಿದ್ದಾರೆ) ಗುಜರಾತಿನವರಿಗೆ ಬಾಪ್ದಾದಾ ಹಾಗೂ ಪರಿವಾರದ
ಕಡೆಯಿಂದ ಬಹಳ-ಬಹಳ ಶುಭಾಷಯಗಳು, ಶುಭಾಷಯಗಳು. ಈಗ ಹೇಗೆ ಚಪ್ಪಾಳೆಯನ್ನು ತಟ್ಟಿದಿರಿ, ಹಾಗೆಯೇ ಒಂದು
ತಿಂಗಳ ನಂತರ ಫಲಿತಾಂಶದಲ್ಲಿ ಗುಜರಾತ್ ನಂಬರ್ವನ್ ಬರಬೇಕು. ಒಳ್ಳೆಯದು - ಸಂಖ್ಯೆಯಂತು ಬಹಳ
ಚೆನ್ನಾಗಿದೆ. ಬಾಪ್ದಾದಾರವರಿಗೆ ಖುಷಿಯಾಗುತ್ತದೆ - ಮಕ್ಕಳಿಗೆ ತಂದೆಯೊಂದಿಗೆ ಹಾಗೂ ಮಧುಬನದೊಂದಿಗೆ
ಹೃದಯದ ಪ್ರೀತಿಯಿದೆ. ಬಹಳ ಒಳ್ಳೆಯದು - ಈಗ ಗುಜರಾತ್ ಕಮಾಲ್ ಮಾಡಿ ತೋರಿಸಬೇಕು. ಈ ಒಂದು ತಿಂಗಳಿನ
ಫಲಿತಾಂಶದಲ್ಲಿ ನಂಬರ್ವನ್ನಲ್ಲಿ ಬಂದು ತೋರಿಸಬೇಕು. ಹಾಗೆಯೇ ಎಲ್ಲರೂ ನಂಬರ್ವನ್ ಬರಬೇಕಾಗಿದೆ.
ಮಧುಬನದವರು ನಂಬರ್ವನ್ ಬರುತ್ತೀರಲ್ಲವೆ, ಕೈಯೆತ್ತಿರಿ. ಏನೇ ಆಗಲಿ, ಯಾವುದೇ ಪರಿಸ್ಥಿತಿಗಳು ಬರಲಿ,
ಪರಿಸ್ಥಿತಿಗಳು ಬರುತ್ತವೆ, ಮಾಯೆಯು ಕೇಳಿಸಿಕೊಳ್ಳುತ್ತಿದೆಯಲ್ಲವೆ, ಅಂದಮೇಲೆ ಮಾಯೆಯು ತನ್ನ
ರೂಪವನ್ನಂತು ತೋರಿಸುತ್ತದೆ ಆದರೆ ಮಾಯೆಯ ಕೆಲಸವಾಗಿದೆ - ಬರುವುದು ಮತ್ತು ತಮ್ಮ ಕೆಲಸ-
ವಿಜಯಿಯಾಗುವುದಾಗಿದೆ. ಇದಾಗಿ ಬಿಟ್ಟಿತು, ಅದಾಗಿ ಬಿಟ್ಟಿತು - ಈ ರೀತಿ ಹೇಳಬಾರದು. ಅವಶ್ಯವಾಗಿ
ಬರುತ್ತದೆ, ಆ ರೀತಿ ಆಗುತ್ತದೆ, ಬಾಪ್ದಾದಾರವರು ಇದನ್ನಂತು ಮೊದಲೇ ತಿಳಿಸಿದ್ದಾರೆ ಏಕೆಂದರೆ
ಮಾಯೆಯು ಕೇಳಿಸಿಕೊಳ್ಳುತ್ತಿದೆ, ಅದು ಬಹಳ ಚತುರ ಆದರೆ ತಾವು! ಮಾಯೆ ಎಷ್ಟೇ ಚತುರನಾಗಿರಲಿ ಆದರೆ
ಸರ್ವಶಕ್ತಿವಂತ ತಮ್ಮ ಜೊತೆಗಾರನಾಗಿರುತ್ತಾರೆಂದರೆ ಮಾಯೆಯು ಏನು ಮಾಡುತ್ತದೆ!!
ಬಾಪ್ದಾದಾರವರು
ನೋಡುತ್ತಿದ್ದಾರೆ, ದೂರದರ್ಶನದಲ್ಲಿ ನೋಡುತ್ತಿದ್ದಾರೆ ಅಂದಮೇಲೆ ಎಲ್ಲರೂ ನಂಬರ್ವನ್ನಲ್ಲಿ ಬರಬೇಕು.
ಯಾರೂ ಸಹ ನಂಬರ್ ಟೂನಲ್ಲಿ (ಎರಡನೆ ನಂಬರ್) ಬರಬಾರದು, ವನ್ ನಂಬರ್. ಒಳ್ಳೆಯದು.
ಬಾಪ್ದಾದಾರವರು ಈಗ ಎಲ್ಲಾ
ಮಕ್ಕಳಿಗೆ ಒಂದೇ ಶ್ರೇಷ್ಠ ಸಂಕಲ್ಪವನ್ನು ತಿಳಿಸಲು ಬಯಸುತ್ತಾರೆ - ಈಗ ಸ್ವಯಂ ನಿರ್ವಿಘ್ನರಾಗಿ
ಮತ್ತು ತಮ್ಮ ಜೊತೆಗಾರರನ್ನು, ಸಂಬಂಧದಲ್ಲಿ ಬರುವವರನ್ನೂ ಸಹ ನಿರ್ವಿಘ್ನರನ್ನಾಗಿ ಮಾಡಿ. ಸಮಯವನ್ನು
ಸಮೀಪಕ್ಕೆ ತೆಗೆದುಕೊಂಡು ಬನ್ನಿ. ಮಕ್ಕಳ ದುಃಖ-ಅಶಾಂತಿಯನ್ನು ಬಾಪ್ದಾದಾರವರು ನೋಡಲು ಆಗುವುದಿಲ್ಲ.
ಈಗ ತಮ್ಮ ರಾಜ್ಯವನ್ನು ಬಹಳ ಬೇಗ ಧರಣಿಯ ಮೇಲೆ ತೆಗೆದುಕೊಂಡು ಬನ್ನಿ. ಬಾಪ್ದಾದಾರವರಿಗೆ
ಪ್ರತಿಯೊಬ್ಬ ಮಗು ಪ್ರಿಯವಾಗಿದ್ದಾರೆ, ಲಾಸ್ಟ್ ನಂಬರ್ ಮಗು ಯಾರಿದ್ದಾರೆ ಅವರೂ ಸಹ
ಪ್ರಿಯವಾಗಿದ್ದಾರೆ ಏಕೆಂದರೆ ಬಲಹೀನವಾಗಿದ್ದಾರಲ್ಲವೇ. ಅಂದಾಗ ಬಲಹೀನರ ಮೇಲೆ ಇನ್ನೂ ಹೆಚ್ಚು ದಯೆ
ಬರುತ್ತದೆ. ತಾವೆಲ್ಲಾ ಎಂತಹದ್ದೇ ಸ್ಥಿತಿಯವರಾಗಲಿ, ಸ್ವಭಾದವರಾಗಲಿ ಆದರೆ ನಮ್ಮವರಾಗಿದ್ದೀರಿ,
ಹೇಗೆ ತಂದೆ ನಮ್ಮವರಾಗಿದ್ದಾರೆ ಅದೇ ರೀತಿ ಪರಿವಾರ ನಮ್ಮದಾಗಿದೆ, ಅಂದಾಗ ಸ್ವಭಾವ-ಸಂಸ್ಕಾರಗಳನ್ನು
ನೋಡದೆ ಅವರಿಗೆ ಇನ್ನೂ ಸಹಯೋಗವನ್ನು ಕೊಡಿ, ಸದ್ಭಾವನೆಯನ್ನು ಕೊಡಿ, ಶುಭಭಾವನೆಯನ್ನು ಕೊಡಿ.
ಒಳ್ಳೆಯದು ಒಳ್ಳೆಯದು, ಎದುರಿನಲ್ಲಿ ಕುಳಿತಿರುವ ಮಕ್ಕಳಿಗೆ ಅಥವಾ ದೂರದಲ್ಲಿ ಕುಳಿತು ನೋಡುವ
ಮಕ್ಕಳಿಗೆ ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನು ತನ್ನ ಎದುರಿನಲ್ಲಿ ನೋಡಿ ದೃಷ್ಟಿಯನ್ನೂ
ಕೊಡುತ್ತಿದ್ದಾರೆ ಹಾಗೂ ಶುಭಾಶಯಗಳನ್ನೂ ಸಹ ನೀಡುತ್ತಿದ್ದಾರೆ. ಒಳ್ಳೆಯದು.
ವರದಾನ:
ವಾಚಾದ ಮೂಲಕ
ಜ್ಞಾನ ರತ್ನಗಳ ದಾನ ಮಾಡುವಂತಹ ಮಾಸ್ಟರ್ ಜ್ಞಾನಪೂರ್ಣ ಭವ.
ಯಾರು ವಾಚಾದ ಮೂಲಕ
ಜ್ಞಾನ ರತ್ನಗಳ ದಾನ ಮಾಡುವರು, ಅವರಿಗೆ ಮಾಸ್ಟರ್ ಜ್ಞಾನಪೂರ್ಣನ ವರದಾನವು ಪ್ರಾಪ್ತವಾಗುವುದು.
ಅವರ ಒಂದೊಂದು ಶಬ್ಧಗಳ ಮೌಲ್ಯವು ಬಹಳಷ್ಟಿರುತ್ತದೆ. ಅನೇಕ ಆತ್ಮರು ಅವರ ಒಂದೊಂದು ವಾಕ್ಯವನ್ನು
ಕೇಳುವುದಕ್ಕಾಗಿ ಬಾಯಾರಿರುತ್ತಾರೆ. ಅವರ ಪ್ರತೀ ಶಬ್ಧದಲ್ಲಿ ಸಾರವು ಅಡಗಿರುತ್ತದೆ, ಅವರಿಗೆ
ವಿಶೇಷ ಖುಷಿಯ ಪ್ರಾಪ್ತಿಯಾಗುತ್ತದೆ. ಅವರಬಳಿ ಖಜಾನೆಗಳು ಸಂಪನ್ನವಾಗಿರುತ್ತದೆ ಆದ್ದರಿಂದ ಅವರು
ಸದಾ ಸಂತುಷ್ಟ ಹಾಗೂ ಹರ್ಷಿತವಾಗಿ ಇರುತ್ತಾರೆ. ಅವರ ವಾಕ್ಯಗಳು ಪ್ರಭಾವಶಾಲಿ ಆಗಿರುತ್ತದೆ. ವಾಣಿಯ
ದಾನ ಮಾಡುವುದರಿಂದ ಬಹಳಷ್ಟು ಗುಣಗಳು ಬಂದು ಬಿಡುತ್ತವೆ.
ಸ್ಲೋಗನ್:
ಸ್ವರಾಜ್ಯದ
ಮಾಲೀಕರಾಗುತ್ತೀರೆಂದರೆ, ಸಂಪೂರ್ಣ ಆಸ್ತಿಯ ಅಧಿಕಾರವು ಪ್ರಾಪ್ತಿಯಾಗಿ ಬಿಡುತ್ತದೆ.
ಅವ್ಯಕ್ತ ಸೂಚನೆ:- ಈಗ
ತಮ್ಮ ದಾತಾ ಸ್ವರೂಪವನ್ನು ಪ್ರತ್ಯಕ್ಷ ಮಾಡಿಕೊಳ್ಳಿ.
ತಾವು ಮಾಸ್ಟರ್ ದಾತ
ಪ್ರಾಪ್ತಿ ಸ್ವರೂಪ ಮಕ್ಕಳಿಗೆ ವಿಶ್ವದ ಆತ್ಮರ ಪ್ರತಿ ದಯೆ ಹಾಗೂ ಉಮ್ಮಂಗ ಬರಬೇಕು - ನಮ್ಮ ಸಹೋದರರು
ಅಲ್ಪಕಾಲದ ಇಚ್ಛೆಯಲ್ಲಿ ಎಷ್ಟು ಅಲೆದಾಡುತ್ತಿದ್ದಾರೆ, ದಾತನ ಮಕ್ಕಳು ತಮ್ಮ ಸಹೋದರರ ಮೇಲೆ ದಯೆ
ಹಾಗೂ ಕರುಣೆಯ ದೃಷ್ಟಿಯನ್ನು ಹಾಕಿ. ಮಹಾದಾನಿ, ವರದಾನಿ ಆಗಿ. ಹೊಳೆಯುತ್ತಿರುವ ಸಂತುಷ್ಟ ಮಣಿ ಆಗಿ
ಸರ್ವರಿಗೂ ಸಂತೋಷ ಕೊಡಿ.