16.11.25    Avyakt Bapdada     Kannada Murli    15.12.2007     Om Shanti     Madhuban


“ಸಮಯದ ಮಹತ್ವವನ್ನು ತಿಳಿದು, ಕರ್ಮದ ಗುಹ್ಯ ಗತಿಯ ಕಡೆ ಗಮನವನ್ನಿಡಿ, ನಷ್ಟಮೋಹ ಎವರೆಡಿ ಆಗಿ”


ಇಂದು ಸರ್ವ ಖಜಾನೆಗಳ ದಾತ, ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಸರ್ವ ಗುಣಗಳ ಖಜಾನೆ, ಶ್ರೇಷ್ಟ ಸಂಕಲ್ಪಗಳ ಖಜಾನೆಯನ್ನು ಕೊಡುವಂತಹ ಬಾಪ್ದಾದಾರವರು ತನ್ನ ನಾಲ್ಕೂ ಕಡೆಯ ಖಜಾನೆಯ ಬಾಲಕ ಸೋ ಮಾಲೀಕ ಅಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಅಖಂಡ ಖಜಾನೆಗಳ ಮಾಲೀಕ ತಂದೆ ಎಲ್ಲಾ ಮಕ್ಕಳಿಗೆ ಸರ್ವ ಖಜಾನೆಗಳಿಂದ ಸಂಪನ್ನ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಸರ್ವ ಖಜಾನೆಗಳನ್ನು ಕೊಡುತ್ತಾರೆ. ಕೆಲವರಿಗೆ ಕಡಿಮೆ, ಕೆಲವರಿಗೆ ಜಾಸ್ತಿ ಕೊಡುವುದಿಲ್ಲ ಏಕೆಂದರೆ ಅಖಂಡ ಖಜಾನೆಯಾಗಿದೆ. ನಾಲ್ಕೂ ಕಡೆಯ ಮಕ್ಕಳು ಬಾಪ್ದಾದಾರವರ ನಯನಗಳಲ್ಲಿ ಸಮಾವೇಶವಾಗಿದ್ದಾರೆ. ಎಲ್ಲಾ ಖಜಾನೆಗಳಿಂದ ಸಂಪನ್ನ, ಹರ್ಷಿತರಾಗುತ್ತಿದ್ದಾರೆ.

ವರ್ತಮಾನ ಸಮಯಾನುಸಾರ ಎಲ್ಲದಕ್ಕಿಂತ ಅಮೂಲ್ಯವಾದ ಶ್ರೇಷ್ಟ ಖಜಾನೆಯಾಗಿದೆ- ಪುರುಷೋತ್ತಮ ಸಂಗಮದ ಸಮಯ. ಏಕೆಂದರೆ ಈ ಸಮಯದಲ್ಲಿಯೇ ಇಡೀ ಕಲ್ಪದ ಪ್ರಾಪ್ತಿ ಮಾಡಿಕೊಳ್ಳಬಹುದಾಗಿದೆ. ಈ ಚಿಕ್ಕದಾದ ಯುಗದ ಒಂದು ಸೆಕೆಂಡಿನ ಪ್ರಾಪ್ತಿಗಳು ಮತ್ತು ಪ್ರಾಲಬ್ಧದ ಅನುಸಾರ ಒಂದು ಸೆಕೆಂಡಿನ ಬೆಲೆ ಒಂದು ವರ್ಷದ ಸಮಾನ ಆಗಿದೆ. ಈ ಸಮಯವು ಇಷ್ಟು ಅಮೂಲ್ಯವಾಗಿದೆ. ಗಾಯನ ಮಾಡಲಾಗಿದೆ - ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ ಏಕೆಂದರೆ ಈ ಸಮಯದಲ್ಲಿ ಪರಮಾತ್ಮನ ಪಾತ್ರವು ನೋಂದಣಿಯಾಗಿದೆ. ಆದರಿಂದ ಈ ಸಮಯವನ್ನು ವಜ್ರ ಸಮಾನ ಎನ್ನಲಾಗುತ್ತದೆ. ಸತ್ಯಯುಗವನ್ನು ಚಿನ್ನದ ಯುಗವೆನ್ನುತ್ತಾರೆ ಆದರೆ ಈ ಸಮಯದಲ್ಲಿ - ಸಮಯವೂ ವಜ್ರ ಸಮಾನವಾಗಿದೆ. ಹಾಗು ತಾವೆಲ್ಲಾ ಮಕ್ಕಳು ಸಹ ವಜ್ರ ಸಮಾನ ಜೀವನದ ಅನುಭವಿ ಆತ್ಮಗಳಾಗಿದ್ದೀರಿ. ಈ ಸಮಯದಲ್ಲಿಯೇ ಬಹಳಕಾಲದಿಂದ ಅಗಲಿಹೋದ ಆತ್ಮಗಳು ಪರಮಾತ್ಮನ ಮಿಲನ, ಪರಮಾತ್ಮನ ಪ್ರೀತಿ, ಪರಮಾತ್ಮನ ಜ್ಞಾನ, ಪರಮಾತ್ಮನ ಖಜಾನೆಗಳ ಪ್ರಾಪ್ತಿಯ ಅಧಿಕಾರಿಯಾಗಿದ್ದೀರಿ. ಇಡೀ ಕಲ್ಪದಲ್ಲಿ ದೇವಾತ್ಮರು, ಮಾಹಾತ್ಮರು ಆಗಿದ್ದೀರಿ. ಆದರೆ ಈ ಸಮಯದಲ್ಲಿ ಪರಮಾತ್ಮ ಈಶ್ವರೀಯ ಪರಿವಾರವಾಗಿದೆ. ಆದ್ದರಿಂದ ವರ್ತಮಾನ ಸಮಯದ ಮಹತ್ವ ಎಷ್ಟಿದೆಯೋ, ಈ ಮಹತ್ವವನ್ನರಿತು ತಮ್ಮನ್ನು ಎಷ್ಟು ಶ್ರೇಷ್ಠ ಮಾಡಿಕೊಳ್ಳಬೇಕೋ ಅಷ್ಟು ಮಾಡಿಕೊಳ್ಳಬಹುದು. ತಾವೆಲ್ಲರೂ ಈ ಮಹಾನ್ ಯುಗದ ಪರಮಾತ್ಮ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪದಮಾ-ಪದಮಾ ಭಾಗ್ಯವಂತರಾಗಿದ್ದೀರಲ್ಲವೇ? ಹಾಗೆಯೇ ತಮ್ಮ ಶ್ರೇಷ್ಠ ಭಾಗ್ಯದ ಆತ್ಮಿಕ ನಶೆ ಹಾಗೂ ಭಾಗ್ಯವನ್ನರಿತು ಇದರ ಅನುಭವ ಮಾಡುತ್ತಿದ್ದೀರಾ! ಸಂತೋಷವಾಗುತ್ತದೆಯಲ್ಲವೇ? ಹೃದಯದಲ್ಲಿ ಯಾವ ಗೀತೆ ಹಾಡುತ್ತೀರಿ? ವಾಹ್ ನನ್ನ ಬಾಗ್ಯ ವಾಹ್! ಏಕೆಂದರೆ ಈ ಸಮಯದ ಶ್ರೇಷ್ಠ ಭಾಗ್ಯದ ಮುಂದೆ ಮತ್ತ್ಯಾವ ಯುಗದಲ್ಲೂ ಇಂತಹ ಶ್ರೇಷ್ಠ ಭಾಗ್ಯವು ಪ್ರಾಪ್ತಿಯಾಗಲು ಸಾಧ್ಯವಿಲ್ಲ.

ಸದಾ ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಂಡು ಹರ್ಷಿತರಾಗುತ್ತೀರಲ್ಲವೇ! ಆಗುತ್ತೀರಲ್ಲವೇ? ಯಾರು ಸದಾ ಹರ್ಷಿತರಾಗಿರುತ್ತೇವೆ, ಕೆಲವೊಮ್ಮ ಅಲ್ಲ ಎಂದು ತಿಳಿಯುತ್ತೀರೋ, ಯಾರು ಸದಾ ಹರ್ಷಿತರಾಗಿರುತ್ತೀರೋ ಅವರು ಕೈ ಎತ್ತಿ. ಸದಾ, ಸದಾ....ಸದಾ ಎನ್ನುವುದನ್ನು ಅಂಡರ್ಲೈನ್ ಮಾಡಿ. ಈಗ ಟಿ.ವಿ.,ಯಲ್ಲಿ ತಮ್ಮ ಚಿತ್ರ ಬರುತ್ತಿದೆ. ಸದಾ ಆಗಿರುವಂತಹವರ ಚಿತ್ರ ಬರುತ್ತಿದೆ. ಶುಭಾಶಯಗಳು. ಮಾತೆಯರು ಕೈ ಎತ್ತಿ, ಶಕ್ತಿಯರು ಕೈ ಎತ್ತಿ, ಡಬಲ್ ವಿದೇಶಿ.... ಯಾವ ಶಬ್ಧವನ್ನಿಟ್ಟುಕೊಳ್ಳುತ್ತೀರಿ? ಸದಾ. ಕೆಲವೊಮ್ಮೆ ಎನ್ನುವವರಂತೂ ಹಿಂದೆ ಬರುತ್ತಾರೆ.

ಬಾಪ್ದಾದಾರವರು ಮೊದಲೂ ಸಹ ತಿಳಿಸಿದ್ದೆವು - ಸಮಯದ ವೇಗ ಬಹಳ ತೀವ್ರ ಗತಿಯಿಂದ ಮುಂದುವರಿಯುತ್ತಿದೆ. ಸಮಯದ ಗತಿಯನ್ನು ತಿಳಿದಿರುವಂತಹ ತಾವು ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ- ಮಾ|| ಸರ್ವಶಕ್ತಿವಂತನಾದ ನಮ್ಮ ವೇಗ ತೀವ್ರವಾಗಿದೆಯೇ? ಪುರುಷಾರ್ಥವಂತೂ ಎಲ್ಲರೂ ಮಾಡುತ್ತಿದ್ದಾರೆ, ಆದರೆ ಬಾಪ್ದಾದಾರವರು ಏನನ್ನು ನೋಡಲು ಬಯಸುತ್ತಾರೆ? ಪ್ರತಿಯೊಬ್ಬ ಮಗು ತೀವ್ರ ಪುರುಷಾರ್ಥಿ, ಪ್ರತಿಯೊಂದು ಸಬ್ಜೆಕ್ಟ್ನಲ್ಲಿ ಪಾಸ್-ವಿತ್-ಆನರ್ ಆಗಿದ್ದೀರಾ? ಅಥವಾ ಕೇವಲ ಪಾಸ್ ಆಗಿದ್ದೀರಾ? ತೀವ್ರ ಪುರುಷಾರ್ಥಿಯ ಲಕ್ಷಣಗಳು ವಿಶೇಷವಾಗಿ ಎರಡು ಇದೆ - ಒಂದು ನಷ್ಟಮೋಹ, ಮತ್ತೊಂದು ಎವರೆಡಿ. ಎಲ್ಲದಕ್ಕಿಂತ ಮೊದಲು ನಷ್ಟಮೋಹ, ಈ ದೇಹಭಾನವು ದೇಹಾಭಿಮಾನದಿಂದ ಇದೆ ಹಾಗಾದರೆ ಮತ್ತ್ಯಾವುದೇ ಮಾತುಗಳಿಂದ ನಷ್ಟ ಮೋಹವಾಗುವುದರಲ್ಲಿ ಕಷ್ಟವೇನೂ ಇಲ್ಲ. ದೇಹಭಾನದ ಚಿಹ್ನೆಯಾಗಿದೆ - ವ್ಯರ್ಥ, ವ್ಯರ್ಥ ಸಂಕಲ್ಪ, ವ್ಯರ್ಥ ಸಮಯ. ಇದರ ಪರಿಶೀಲನೆಯನ್ನು ತಾವು ಸ್ವಯಂ ಮಾಡಿಕೊಳ್ಳಬಹುದು. ಸಾಧಾರಣ ಸಮಯವೂ ಸಹ ನಷ್ಟಮೋಹಿಯಾಗಲು ಬಿಡುವುದಿಲ್ಲ ಆದ್ದರಿಂದ ಪ್ರತಿಯೊಂದು ಸೆಕೆಂಡ್, ಪ್ರತಿಯೊಂದು ಸಂಕಲ್ಪ, ಪ್ರತಿಯೊಂದು ಕರ್ಮವು ಸಫಲವಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಸಂಗಮ ಯುಗದಲ್ಲಿ ಸಫಲತೆ ತಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ ಎಂಬ ತಂದೆಯ ವಿಶೇಷ ವರದಾನವಿದೆ ಆದ್ದರಿಂದ ಅಧಿಕಾರವು ಸಹಜತೆಯ ಅನುಭೂತಿ ಮಾಡಿಸುತ್ತದೆ ಹಾಗೂ ಎವರೆಡಿ, ಎವರೆಡಿಯ ಅರ್ಥವಾಗಿದೆ - ಮನ-ವಚನ-ಕರ್ಮ, ಸಂಬಂಧ-ಸಂಪರ್ಕದಲ್ಲಿ ಸಮಯದ ಆರ್ಡರ್ ಅಚಾನಕ್ ಆದಾಗ ಎವರೆಡಿ ಆಗಿರುವುದು. ಹಾಗೂ ಅಚಾನಕ್ ಆಗಲೇಬೇಕು. ಹೇಗೆ ತಮ್ಮ ದಾದಿಯವರು ಅಚಾನಕ್ ಎವರೆಡಿಯಾಗಿರುವುದನ್ನು ನೋಡಿದಿರಿ. ಪ್ರತಿಯೊಂದು ಸ್ವಭಾವದಲ್ಲಿ, ಪ್ರತಿಯೊಂದು ಕಾರ್ಯದಲ್ಲಿ ಸಹಜವಾಗಿ ಇದ್ದರು. ಸಂಪರ್ಕದಲ್ಲಿ ಸಹಜತೆ, ಸ್ವಭಾವದಲ್ಲಿ ಸಹಜತೆ, ಸೇವೆಯಲ್ಲಿ ಸಹಜ, ಸಂತುಷ್ಟಗೊಳಿಸುವುದರಲ್ಲಿ ಸಹಜತೆ, ಸಂತುಷ್ಟವಾಗಿರುವುದರಲ್ಲಿ ಸಹಜ ಆದ್ದರಿಂದ ಬಾಪ್ದಾದಾರವರು ಸಮಯದ ಸಮೀಪತೆಯ ಸೂಚನೆಯನ್ನು ಮತ್ತೆ-ಮತ್ತೆ ನೀಡುತ್ತಿದ್ದಾರೆ. ಸ್ವ-ಪುರುಷಾರ್ಥದ ಸಮಯ ಬಹಳ ಕಡಿಮೆಯಿದೆ ಆದ್ದರಿಂದ ತಮ್ಮ ಜಮಾದ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಮೂರು ವಿಧಿಗಳಿಂದ ಖಜಾನೆಗಳನ್ನು ಜಮಾ ಮಾಡಿಕೊಳ್ಳುವುದರ ಬಗ್ಗೆ ಮೊದಲೂ ತಿಳಿಸಿದ್ದೆವು, ಮತ್ತೆ ತಿಳಿಸುತ್ತಿದ್ದೇವೆ. ಈ ಮೂರೂ ವಿಧಿಗಳನ್ನು ಸ್ವಯಂನಲ್ಲಿ ಪರಿಶೀಲನೆ ಮಾಡಿಕೊಳ್ಳಿ. ಒಂದು- ಸ್ವಯಂನ ಪುರುಷಾರ್ಥದಿಂದ ಪ್ರಾಲಬ್ಧದ ಖಜಾನೆಯನ್ನು ಜಮಾ ಮಾಡಿಕೊಳ್ಳುವುದು. ಪ್ರಾಪ್ತಿಗಳ ಖಜಾನೆಯನ್ನು ಜಮಾ ಮಾಡಿಕೊಳ್ಳುವುದು. ಎರಡನೆಯದು - ಸಂತುಷ್ಟವಾಗಿರುವುದು, ಇದರಲ್ಲಿಯೂ ಸದಾ ಶಬ್ಧವನ್ನು ಸೇರ್ಪಡೆ ಮಾಡಿ ಹಾಗೂ ಸರ್ವರನ್ನು ಸಂತುಷ್ಟಗೊಳಿಸುವುದರಲ್ಲಿಯೇ ಪುಣ್ಯದ ಖಾತೆಯು ಜಮಾ ಆಗುತ್ತದೆ ಹಾಗೂ ಈ ಪುಣ್ಯದ ಖಾತೆಯು ಅನೇಕ ಜನ್ಮಗಳ ಪ್ರಾಲಬ್ಧದ ಆಧಾರವಾಗಿರುತ್ತದೆ. ಮೂರನೆಯದು - ಸದಾ ಸೇವೆಯಲ್ಲಿ ಅವಿಶ್ರಾಂತ, ನಿಸ್ವಾರ್ಥ ಹಾಗೂ ವಿಶಾಲ ಹೃದಯದಿಂದ ಸೇವೆ ಮಾಡುವುದು, ಇದರಿಂದ ಯಾರ ಸೇವೆ ಮಾಡುತ್ತೀರೋ ಅವರಿಂದ ಸ್ವತಹ ಆಶೀರ್ವಾದಗಳು ಸಿಗುತ್ತವೆ. ಸ್ವಯಂನ ಪುರುಷಾರ್ಥ, ಪುಣ್ಯ ಹಾಗೂ ಆಶೀರ್ವಾದ - ಈ ಮೂರು ವಿಧಿಗಳಾಗಿವೆ. ಈ ಮೂರೂ ಖಾತೆಗಳು ಜಮಾ ಆಗಿದೆಯೇ? ಒಂದುವೇಳೆ ಅಚಾನಕ್ ಯಾವುದೇ ಪೇಪರ್ ಬಂದಲ್ಲಿ ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ವರ್ತಮಾನ ಸಮಯದನುಸಾರ ಪ್ರಕೃತಿಯ ಏರುಪೇರಿನ ಸಣ್ಣ-ಸಣ್ಣ ಮಾತುಗಳು ಎಂದಾದರೂ ಬರಬಹುದು ಆದ್ದರಿಂದ ಕರ್ಮದ ಗತಿಯ ಜ್ಞಾನದ ಕಡೆ ವಿಶೇಷ ಗಮನವಿರಲಿ. ಕರ್ಮಗಳ ಗತಿ ಬಹಳ ಗುಹ್ಯವಾಗಿದೆ. ಹೇಗೆ ಡ್ರಾಮಾದ ಬಗ್ಗೆ ಅಟೇಂಷನ್ ಇರುತ್ತದೆಯೋ, ಆತ್ಮಿಕ ಸ್ವರೂಪದ ಗಮನವಿರುತ್ತದೆ, ಧಾರಣೆಗಳ ಅಟೇಂಷನ್ ಇರುತ್ತದೆಯೋ ಹಾಗೆಯೇ ಕರ್ಮದ ಗುಹ್ಯಗತಿಯ ಅಟೇಂಷನ್ ಸಹ ಅವಶ್ಯಕವಾಗಿದೆ. ಸಾಧಾರಣ ಕರ್ಮ, ಸಾಧಾರಣ ಸಮಯ, ಸಾಧಾರಣ ಸಂಕಲ್ಪ, ಇದರಿಂದಲೂ ಪ್ರಾಲಬ್ಧದಲ್ಲಿ ವ್ಯತ್ಯಾಸವಾಗುತ್ತದೆ. ಈ ಸಮಯ ತಾವೆಲ್ಲರೂ ಏನು ಪುರುಷಾರ್ಥ ಮಾಡುತ್ತಿದ್ದೀರೋ ಅವರು ಶ್ರೇಷ್ಠ ವಿಶೇಷ ಆತ್ಮಗಳಾಗಿದ್ದೀರಿ, ಸಾಧಾರಣ ಆತ್ಮರಲ್ಲ. ವಿಶ್ವ ಕಲ್ಯಾಣದ ನಿಮಿತ್ತ, ವಿಶ್ವ ಪರಿವರ್ತನೆಗೆ ನಿಮಿತ್ತರಾಗಿರುವ ಆತ್ಮರಾಗಿದ್ದೀರಿ. ತಮ್ಮನ್ನು ಪರಿವರ್ತನೆ ಮಾಡಿಕೊಳ್ಳುವುದೇ ಅಲ್ಲ, ವಿಶ್ವದ ಪರಿವರ್ತನೆಯ ಜವಾಬ್ದಾರರಾಗಿದ್ದೀರಿ ಆದ್ದರಿಂದ ತಮ್ಮ ಶ್ರೇಷ್ಠ ಸ್ವಮಾನದ ಸ್ಮೃತಿ ಸ್ವರೂಪರಾಗಲೇಬೇಕು.

ಬಾಪ್ದಾದಾ ಹಾಗೂ ಸೇವೆಯ ಬಗ್ಗೆ ಬಹಳ ಒಳ್ಳೆಯ ಪ್ರೀತಿಯಿದೆಯೆಂದು ಬಾಪ್ದಾದಾರವರು ನೋಡಿದರು. ಸೇವೆಯ ವಾತಾವರಣ ನಾಲ್ಕಾರು ಕಡೆ ಯಾವುದಾದರೂ ಯೋಜನೆಯ ಪ್ರಮಾಣ ನಡೆಯುತ್ತಾ ಇದೆ. ಜೊತೆ ಜೊತೆಗೆ ಈಗ ಸಮಯದ ಪ್ರಮಾಣ ವಿಶ್ವದ ಆತ್ಮರು ಯಾರೆಲ್ಲಾ ದುಃಖಿ-ಅಶಾಂತರಾಗಿದ್ದರೋ ಆ ಆತ್ಮಗಳನ್ನು ದುಃಖ-ಅಶಾಂತಿಯಿಂದ ಮುಕ್ತ ಮಾಡುವುದಕ್ಕೋಸ್ಕರ ತಮ್ಮ ಶಕ್ತಿಗಳ ಮುಖಾಂತರ ಸಕಾಶವನ್ನು ನೀಡಿ. ಹೇಗೆ ಸೂರ್ಯನ ಪ್ರಕಾಶತೆಯಿಂದ ಅಂಧಕಾರವನ್ನು ದೂರ ಮಾಡಿ ಬೆಳಕನ್ನು ತರುತ್ತದೆ. ತನ್ನ ಕಿರಣಗಳ ಬಲದಿಂದ ಅನೇಕ ವಸ್ತುಗಳನ್ನು ಪರಿವರ್ತನೆ ಮಾಡುತ್ತದೆ ಹಾಗೆಯೇ ತಾವು ಮಾ|| ಜ್ಞಾನ ಸೂರ್ಯರಿಗೆ ಪ್ರಾಪ್ತವಾಗಿರುವ ಸುಖ-ಶಾಂತಿಯ ಕಿರಣಗಳಿಂದ, ಸಕಾಶದಿಂದ ದುಃಖ-ಅಶಾಂತಿಯನ್ನು ಮುಕ್ತ ಮಾಡಿ. ಮನಸಾ ಸೇವೆಯಿಂದ, ಶಕ್ತಿಶಾಲಿ ವೃತ್ತಿಯಿಂದ ವಾಯುಮಂಡಲವನ್ನು ಪರಿವರ್ತನೆ ಮಾಡಿ ಅಂದಾಗ ಮನಸಾ ಸೇವೆ ಮಾಡಿ. ಹೇಗೆ ವಾಚಾ ಸೇವೆಯ ವಿಸ್ತಾರ ಮಾಡಿದ್ದೀರೋ ಹಾಗೆಯೇ ಮನಸ್ಸಿನಿಂದ ಸಕಾಶದ ಮುಖಾಂತರ ಆತ್ಮರಲ್ಲಿ ‘ಸಂತೋಷ ಮತ್ತು ಭರವಸೆ’ ಎಂಬ ವಿಷಯವನ್ನು ಹರಡಿಸಿ. ಧೈರ್ಯ ಕೊಡಿ, ಒಲವು-ಉತ್ಸಾಹವನ್ನು ಹೆಚ್ಚಿಸಿ. ಈ ಮಾತಿನಿಂದ ತಂದೆಯ ಆಸ್ತಿಯಾದ ಮುಕ್ತಿಯನ್ನು ನೀಡಿರಿ. ಈಗ ಸಕಾಶವನ್ನು ನೀಡುವ ಅವಶ್ಯಕತೆ ಬಹಳಷ್ಟಿದೆ, ಈ ಸೇವೆಯಲ್ಲಿ ಮನಸ್ಸನ್ನು ಬ್ಯುಜಿಯಾಗಿ ಇಟ್ಟುಕೊಂಡಿದ್ದೇ ಆದರೆ ಮಾಯಾಜೀತ್, ವಿಜಯಿ ಆತ್ಮರು ಸ್ವತಹವಾಗಿ ಆಗುತ್ತೀರಿ. ಬಾಕಿ ಚಿಕ್ಕ ಪುಟ್ಟ ಮಾತುಗಳ ಸೈಡ್ಸೀನ್ಗಳಲ್ಲಿ ಕೆಲವು ಒಳ್ಳೆಯದು ಬರುತ್ತದೆ, ಕೆಲವು ಕೆಟ್ಟ ಸೈಡ್ಸೀನ್ ಸಹ ಬರುತ್ತದೆ. ಸೈಡ್ಸೀನ್ನ್ನು ದಾಟಿ ಗುರಿಯನ್ನು ತಲುಪಬೇಕಾಗುತ್ತದೆ. ಸೈಡ್ಸೀನ್ ನೋಡಲು ಸಾಕ್ಷಿದೃಷ್ಟ ಸೀಟ್ನಲ್ಲಿ ಸೆಟ್ ಆಗಿ, ಆಗ ಸೈಡ್ಸೀನ್ ಮನೋರಂಜನೆ ಆಗಿ ಬಿಡುತ್ತದೆ. ಅಂದಾಗ ತಾವು ಸದಾ ಸಿದ್ಧರಾಗಿದ್ದೀರಲ್ಲವೆ? ಏನೇ ಆಗಲಿ ಮೊದಲನೇ ಸಾಲಿನವರು ಎವರೆಡಿಯಾಗಿದ್ದೀರಾ? ನಾಳೆಯೇ ಆಗಿ ಬಿಟ್ಟರೆ ನಿಮಿತ್ತ ಶಿಕ್ಷಕಿಯರು ತಯಾರಾಗಿದ್ದರೆ ಒಳ್ಳೆಯದು. ಈ ವರ್ಗದವರೂ ತಯಾರಾಗಿದ್ದಾರೆ, ಎಷ್ಟೆಲ್ಲಾ ವರ್ಗಗಳಿದೆಯೋ ಎಲ್ಲರೂ ಎವರೆಡಿ ಇದ್ದೀರಾ, ಯೋಚಿಸಿ. ದಾದಿಯರು ನೋಡಿ, ಎಲ್ಲರೂ ಕೈ ಅಲುಗಾಡಿಸುತ್ತಿದ್ದಾರೆ ನೋಡಿದಿರಾ. ಒಳ್ಳೆಯದು - ಶುಭಾಷಯಗಳು. ಒಂದುವೇಳೆ ಸದಾ ಸಿದ್ಧರಾಗಿರದಿದ್ದರೆ ಇಡೀ ರಾತ್ರಿಯಲ್ಲಿ ಆಗಿ ಬಿಡಿ. ಏಕೆಂದರೆ ಸಮಯವು ತಮ್ಮನ್ನು ನಿರೀಕ್ಷಿಸುತ್ತಿದೆ. ಬಾಪ್ದಾದಾ ಮುಕ್ತಿಯ ಗೇಟ್ನ್ನು ತೆರೆಯಲು ನಿರೀಕ್ಷೆ ಮಾಡುತ್ತಿದ್ದೇವೆ. ಅಡ್ವಾನ್ಸ್ ಪಾರ್ಟಿಯವರು ತಮ್ಮನ್ನು ಆಹ್ವಾನ ಮಾಡುತ್ತಿದ್ದಾರೆ, ಏನು ತಾನೆ ಮಾಡಲು ಸಾಧ್ಯವಿಲ್ಲ? ಮಾ|| ಸರ್ವಶಕ್ತಿವಂತರಂತೂ ಆಗಿಯೇ ಇದ್ದೀರಿ. ಧೃಡ ಸಂಕಲ್ಪ ಮಾಡಿ - ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂದು. ಅಂದಾಗ ಧೃಡ ಸಂಕಲ್ಪದಿಂದ ಇಲ್ಲವೆಂದರೆ ಇಲ್ಲ, ಈ ರೀತಿ ಮಾಡಿ ತೋರಿಸಿ. ಮಾಸ್ಟರ್ ಆಗಿಯೇ ಇದ್ದೀರಿ! ಒಳ್ಳೆಯದು.

ಈಗ ಮೊದಲನೆ ಬಾರಿ ಯಾರು ಬಂದಿದ್ದೀರಿ? ಮೊದಲ ಬಾರಿ ಬಂದವರು ಕೈಯನ್ನೆತ್ತಿರಿ. ಉದ್ದವಾಗಿ ಎತ್ತಿರಿ, ಅಲುಗಾಡಿಸಿ. ಇಷ್ಟೇಲ್ಲಾ ಬಂದಿದ್ದೀರಿ. ಒಳ್ಳೆಯದು - ಯಾರೆಲ್ಲಾ ಮೊದಲ ಬಾರಿ ಬಂದಿದ್ದಾರೆ ಅವರಿಗೆ ಪದಮದಷ್ಟು ಶುಭಾಷಾಯಗಳು, ಶುಭಾಷಾಯಗಳು. ಕಲ್ಪದ ಮೊದಲಿನ ಮಕ್ಕಳು ಮತ್ತೆ ತಮ್ಮ ಪರಿವಾರವನ್ನು ತಲುಪಿ ಬಿಟ್ಟಿದ್ದಾರೆ ಬಾಪ್ದಾದಾರವರಿಗೆ ಸಂತೋಷವಾಗುತ್ತದೆ ಆದ್ದರಿಂದ ಹಿಂದೆ ಬರುವವರು ಕಮಾಲ್ ಮಾಡಿ ತೋರಿಸಬೇಕು, ಹಿಂದುಳಿಯಬಾರದು. ಹಿಂದೆ ಬಂದಿದ್ದೀರಿ ಆದರೆ ಹಿಂದುಳಿಯಬಾರದು. ಎಲ್ಲರಕ್ಕಿಂತ ಮುಂದೆ ಇರಬೇಕು. ಇದಕ್ಕಾಗಿ ತೀವ್ರ ಪುರುಷಾರ್ಥವನ್ನು ಮಾಡಬೇಕು. ಸಾಹಸವಿದೆಯಲ್ಲವೆ! ಸಾಹಸವಿದೆಯೇ? ಒಳ್ಳೆಯದು - ಮಕ್ಕಳ ಸಾಹಸವಿದ್ದರೆ ಬಾಪ್ದಾದಾ ಮತ್ತು ಪರಿವಾರವಿದೆ. ಒಳ್ಳೆಯದು - ಏಕೆಂದರೆ ಮಕ್ಕಳು ಮನೆಗೆ ಶೃಂಗಾರವಾಗಿದ್ದೀರಿ. ಯಾರೆಲ್ಲರೂ ಬಂದಿದ್ದೀರಿ ಅವರೆಲ್ಲರೂ ಮಧುಬನದ ಶೃಂಗಾರವಾಗಿದ್ದೀರಿ. ಒಳ್ಳೆಯದು.

ಸೇವಾ ಸರದಿ ಭೂಪಾಲ್ ಜೋನ್ದಾಗಿದೆ:- ಒಳ್ಳೆಯದು - ಬಹಳಷ್ಟು ಮಂದಿ ಬಂದಿದ್ದಾರೆ, ಬಾವುಟವನ್ನು ಅಲುಗಾಡಿಸುತ್ತಿದ್ದಾರೆ. ಒಳ್ಳೆಯದು - ಸುವರ್ಣಾವಕಾಶ ಸಿಕ್ಕಿದೆಯಲ್ಲವೆ. ಯಾರೆಲ್ಲಾ ಸೇವೆಗೆ ನಿಮಿತ್ತರಾಗಿ ಬಂದಿದ್ದೀರಿ ಅವರಲ್ಲಿ ಎಲ್ಲರೂ ಸೇವೆಯ ಬಲ ಮತ್ತು ಫಲವನ್ನು, ಅತೀಂದ್ರಿಯ ಸುಖದ ಅನುಭೂತಿಯ ಅನುಭವವನ್ನು ಮಾಡಿದಿರಾ? ಮಾಡಿದಿರಾ? ಈಗ ನಿಮ್ಮ ಬಾವುಟವನ್ನು ಅಲುಗಾಡಿಸಿ. ಯಾರೆಲ್ಲಾ ಮಾಡಿದ್ದೀರಿ ಅವರೆಲ್ಲರೂ ನಿಮ್ಮ ಬಾವುಟವನ್ನು ಅಲುಗಾಡಿಸಿ. ಈಗ ಅತೀಂದ್ರಿಯ ಸುಖದ ಅನುಭವ ಮಾಡಿದಿರಿ, ಇದು ಸದಾಕಾಲ ಇರುತ್ತದೆಯೇ? ಅಥವಾ ಸ್ವಲ್ಪ ಸಮಯ ಇರುತ್ತದೆಯೋ? ಯಾರು ಹೃದಯದಿಂದ ಪ್ರತಿಜ್ಞೆ ಮಾಡುತ್ತಾರೆ, ಅಕ್ಕ ಪಕ್ಕ ನೋಡಿ ಕೈಯೆತ್ತಬಾರದು. ನಾನು ಈ ಪ್ರಾಪ್ತಿಯನ್ನು ಸದಾ ಖಾಯಂ ಆಗಿಟ್ಟುಕೊಳ್ಳುತ್ತೇನೆ, ವಿಘ್ನ ವಿನಾಶಕನಾಗುತ್ತೇನೆಂದು ಯಾರು ಮನಃಪೂರ್ವಕವಾಗಿ ತಿಳಿಯುತ್ತೀರಿ ಅವರು ಬಾವುಟವನ್ನು ಭಲೆ ಅಲುಗಾಡಿಸಿ. ಒಳ್ಳೆಯದು - ನೋಡಿ, ತಾವೆಲ್ಲಾ ಟಿ.ವಿ.ಯಲ್ಲಿ ಬರುತ್ತಿದ್ದೀರಿ, ಮತ್ತೆ ಈ ಟಿ.ವಿ.,ಯ ಭಾವ ಚಿತ್ರವನ್ನು ಕಳುಹಿಸುತ್ತೇವೆ. ಒಳ್ಳೆಯದು - ಈ ಅವಕಾಶವನ್ನು ಕೊಡಲಾಗಿದೆ, ಇದು ಬಹಳ ಚೆನ್ನಾಗಿದೆ. ಖುಷಿಯಿಂದ ಅವಕಾಶವನ್ನು ತೆಗೆದುಕೊಳ್ಳುತ್ತೀರಿ ಮತ್ತು ಸರದಿಯ ಪ್ರಕಾರ ಎಲ್ಲರೂ ತೆರೆದ ಹೃದಯದಿಂದ ಬರಲು ಅವಕಾಶ ಸಿಗುತ್ತಿದೆ. ಒಳ್ಳೆಯದು - ಯಾವ ಅದ್ಭುತವನ್ನು ಮಾಡುತ್ತೀರಿ? (2008ರಲ್ಲಿ ತಮ್ಮನ್ನು ಪ್ರತ್ಯಕ್ಷ ಮಾಡಿ ತೋರಿಸುತ್ತೇವೆ) ಒಳ್ಳೆಯದು - ಪರಸ್ಪರದಲ್ಲಿ ಸಹಯೋಗ ಕೊಟ್ಟು ಈ ಪ್ರತಿಜ್ಞೆಯನ್ನು ಪೂರ್ಣ ಮಾಡಿ. ಅವಶ್ಯವಾಗಿ ಮಾಡುತ್ತೀರಿ, ಮಾ|| ಸರ್ವಶಕ್ತಿವಂತರ ಪ್ರತಿಜ್ಞೆಯನ್ನು ನಿಭಾಯಿಸುವುದು ಯಾವುದೇ ದೊಡ್ಡ ಮಾತಲ್ಲ. ಕೇವಲ ಧೃಡತೆಯನ್ನು ಜೊತೆಯಲ್ಲಿಟ್ಟುಕೊಳ್ಳಿ, ಧೃಡತೆಯನ್ನು ಬಿಡಬೇಡಿ ಏಕೆಂದರೆ ಧೃಡತೆಯು ಸಫಲತೆಯ ಬೀಗದ ಕೈ ಆಗಿದೆ. ಎಲ್ಲಿ ಧೃಡತೆಯಿದೆಯೋ ಅಲ್ಲಿ ಸಫಲತೆ ಇದ್ದೇ ಇದೆ. ಈ ರೀತಿ ಅಲ್ಲವೇ? ಮಾಡಿ ತೋರಿಸುತ್ತೀರಿ, ಬಾಪ್ದಾದಾರವರಿಗೂ ಸಹ ಖುಷಿಯಿದೆ, ಒಳ್ಳೆಯದು - ಎಷ್ಟು ಜನರಿಗೆ ಅವಕಾಶ ಸಿಗುತ್ತದೆ ನೋಡಿ. ಅರ್ಧ ಕ್ಲಾಸಂತೂ ಸೇವೆ ಮಾಡುವವರ ಕಡೆಯಿರುತ್ತದೆ. ಒಳ್ಳೆಯದು - ಸಾಕಾರ ತಂದೆಯಿದ್ದಾಗಲೂ ಬಹಳ ಒಳ್ಳೆಯ ಪಾತ್ರವನ್ನಭಿನಯಿಸಿದರು. ಮೊದಲು ಮೊದಲು ಮ್ಯೂಸಿಯಂ (ಮಹೇಂದ್ರ ಅಣ್ಣವರು) ನ್ನು ಮಾಡಿದರು. ಸಾಕಾರ ತಂದೆಯ ಆಶೀರ್ವಾದಗಳು ಪೂರ್ಣ ಜೋನ್ಗೆ ಇದೆ. ಈಗ ಯಾವುದಾದರೂ ನವೀನತೆಯನ್ನು ಮಾಡಿ ತೋರಿಸಿ. ಈಗ ಬಹಳ ಸಮಯವಾಗಿ ಬಿಟ್ಟಿದೆ, ಈಗ ಯಾವುದೇ ಹೊಸ ಅನ್ವೇಷಣೆ ಮಾಡಿಲ್ಲ. ವರ್ಗೀಕರಣವೂ ಸಹ ಈಗ ಹಳೆಯದಾಗಿ ಬಿಟ್ಟಿದೆ, ಪ್ರದರ್ಶನಿ, ಮೇಳ, ಸಮ್ಮೇಳನ, ಸ್ನೇಹ ಮಿಲನ ಇದೆಲ್ಲವೂ ಆಗಿ ಹೋಯಿತು. ಈಗ ಯಾವುದಾದರೂ ಹೊಸ ಮಾತನ್ನು ಕಾರ್ಯದಲ್ಲಿ ತನ್ನಿ. ಶಾರ್ಟ್ ಮತ್ತು ಸ್ವೀಟ್ ಆಗಿರಲಿ. ಕಡಿಮೆ ಖರ್ಚು ಮತ್ತು ಹೆಚ್ಚಿನ ಸೇವೆ ಆಗಲಿ. ತಾವು ರಾಯ ಬಹದ್ದೂರ್ ಆಗಿದ್ದೀರಲ್ಲವೆ! ಅಂದಾಗ ತಾವು ರಾಯ ಬಹದ್ದೂರರು ಹೊಸ ಸಲಹೆಯನ್ನು ಕಂಡು ಹಿಡಿಯಿರಿ. ಹೇಗೆ ಪ್ರದರ್ಶನಿಯನ್ನು ಮಾಡಿದಿರಿ, ಮೇಳ ಮಾಡಿದಿರಿ, ವರ್ಗೀಕರಣದ ಕಾರ್ಯವನ್ನು ಮಾಡಿದಿರಿ, ಹಾಗೆಯೇ ಒಂದಲ್ಲ ಒಂದು ಹೊಸ ಸಂಶೋಧನೆಯನ್ನು ಮಾಡಿರಿ. ಯಾರು ನಿಮಿತ್ತರಾಗುತ್ತೀರೆಂದು ನೋಡುತ್ತೇವೆ. ಒಳ್ಳೆಯದು - ಸಾಹಸವಂತರು ಆಗಿದ್ದೀರಿ ಆದ್ದರಿಂದ ಬಾಪ್ದಾದಾರವರು ಧೈರ್ಯವನ್ನಿಡುವವರಿಗೆ ಮುಂಚಿತವಾಗಿಯೇ ಶುಭಾಷಯಗಳನ್ನು ನೀಡುತ್ತಿದ್ದೇವೆ. ಒಳ್ಳೆಯದು.

ಈಗ ಒಂದು ಸೆಕೆಂಡಿನಲ್ಲಿ ಎಲ್ಲರೂ ಬಹಳ ಮಧುರ ಶಾಂತಿಯ ಸ್ಥಿತಿಯ ಅನುಭವದಲ್ಲಿ ಮುಳುಗಿ ಬಿಡಿ. (ಬಾಪ್ದಾದಾರವರು ಡ್ರಿಲ್ ಮಾಡಿಸಿದರು) ಒಳ್ಳೆಯದು.

ನಾಲ್ಕೂ ಕಡೆಯ ಸರ್ವ ತೀವ್ರ ಪುರುಷಾರ್ಥಿ, ಸದಾ ಧೃಡ ಸಂಕಲ್ಪದ ಮೂಲಕ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ, ಸದಾ ವಿಜಯದ ತಿಲಕಧಾರಿಗಳು, ಬಾಪ್ದಾದಾರವರ ಹೃದಯ ಸಿಂಹಾಸನಾಧೀಶರು, ಡಬಲ್ ಕಿರೀಟಧಾರಿಗಳು, ವಿಶ್ವ ಕಲ್ಯಾಣಕಾರಿ, ಸದಾ ಲಕ್ಷ್ಯ ಮತ್ತು ಲಕ್ಷಣವನ್ನು ಸಮಾನ ಮಾಡಿಕೊಳ್ಳುವಂತಹ ಪರಮಾತ್ಮನ ಪ್ರೀತಿಯಲ್ಲಿ ಬೆಳೆಯುವವರು ಇಂತಹ ಸರ್ವ ಶ್ರೇಷ್ಠ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ, ಹೃದಯದ ಆಶೀರ್ವಾದ ಮತ್ತು ನಮಸ್ತೆ.

ದಾದಿಯರೊಂದಿಗೆ:- ಮಕ್ಕಳು ಹಾಜರಿದ್ದಾರೆಂದರೆ ಬಾಪ್ದಾದಾರವರೂ ಹಾಜರಾಗಿರುತ್ತೇವೆ. ತಂದೆ ಮಕ್ಕಳಿಂದ ದೂರವಿರಲು ಸಾಧ್ಯವಿಲ್ಲ, ಮಕ್ಕಳು ತಂದೆಯಿಂದ ದೂರವಿರಲು ಸಾಧ್ಯವಿಲ್ಲ. ಜೊತೆಯಲ್ಲಿ ಹೋಗುತ್ತೀರಿ, ಅರ್ಧಕಲ್ಪ ಬ್ರಹ್ಮಾ ತಂದೆಯ ಜೊತೆಯಲ್ಲಿರುತ್ತೀರಿ (ದಾದಿ ಜಾನಕಿಯವರು ಹೇಳಿದರು - ಬಾಬಾರವರಂತೂ ಜೊತೆಯಲ್ಲಿಯೇ ಸಮಾವೇಶವಾಗಿದ್ದಾರೆ) ನಿಮ್ಮ ಅನುಭೂತಿ ಚೆನ್ನಾಗಿದೆ. ಈಗಂತೂ ಗ್ಯಾರಂಟಿಯಿದೆ ಆದರೆ ಯಾವಾಗ ರಾಜ್ಯ ಮಾಡುತ್ತೀರಿ ಆಗ ಬರುವುದಿಲ್ಲ. ಯಾರಾದರೂ ನೋಡುವವರು ಬೇಕಲ್ಲವೆ. (ಮೇಲಿರಲು ಹೇಗೆ ಮನಸ್ಸಾಗುತ್ತದೆ) ಡ್ರಾಮಾದಲ್ಲಿ ಪಾತ್ರವಿದೆ. ಬ್ರಹ್ಮಾ ತಂದೆಯಂತೂ ಜೊತೆಯಲ್ಲಿರುತ್ತಾರೆ ಅಲ್ಲವೆ. ನೋಡಿ, ಡ್ರಾಮಾ ಏನು ಮಾಡುತ್ತದೆ?

ವರದಾನ:
ನಿಜ ಸ್ಥಿತಿಯ ಮುಖಾಂತರ ಕರ್ಮ ಮತ್ತು ಮಾತಿನಲ್ಲಿ ಘನತೆಯನ್ನು ತೋರುವಂತಹ ಫಸ್ಟ್ ಡಿವಿಷನ್ ನ ಅಧಿಕಾರಿ ಭವ.

ನಿಜ ಸ್ಥಿತಿ ಅರ್ಥಾತ್ ತಮ್ಮ ನಿಜವಾದ ಸ್ವರೂಪದ ಸದಾ ಸ್ಮತಿ, ಯಾವುದರಿಂದ ಸ್ಥೂಲ ಮುಖ ಲಕ್ಷಣದಲ್ಲಿಯೂ ಸಹಾ ಘನತೆ ಕಂಡು ಬರುವುದು. ನಿಜ ಸ್ಥಿತಿ ಅರ್ಥಾತ್ ಒಬ್ಬ ತಂದೆಯ ವಿನಹ ಬೇರೊಬ್ಬರಿಲ್ಲ. ಈ ಸ್ಮತಿಯಿಂದ ಪ್ರತಿ ಕರ್ಮ ಅಥವಾ ಮಾತಿನಲ್ಲಿ ಘನತೆಯು ಕಂಡು ಬರುವುದು. ಯಾರೇ ಸಂಪರ್ಕದಲ್ಲಿ ಬಂದರೂ ಸಹ ಅವರಿಗೆ ಪ್ರತಿ ಕರ್ಮದಲ್ಲಿಯೂ ತಂದೆಯ ಸಮಾನದ ಚರಿತ್ರೆಯ ಅನುಭವವಾಗುವುದು, ಪ್ರತಿ ಮಾತಿನಲ್ಲಿ ತಂದೆಯ ಸಮಾನದ ಅಧಿಕಾರ ಮತ್ತು ಪ್ರಾಪ್ತಿಯ ಅನುಭೂತಿಯಾಗುವುದು. ಅವರ ಸಂಗ ಸತ್ಯವಾಗಿರುವ ಕಾರಣ ಪಾರಸದ ಕೆಲಸ ಮಾಡುವುದು. ಈ ರೀತಿಯ ವಾಸ್ತವಿಕತೆಯುಳ್ಳ ರಾಯಲ್ ಆತ್ಮಗಳೇ ಫಸ್ಟ್ ಡಿವಿಷನ್ ನ ಅಧಿಕಾರಿಗಳಾಗುತ್ತಾರೆ.

ಸ್ಲೋಗನ್:
ಶ್ರೇಷ್ಠ ಕರ್ಮದ ಖಾತೆಯನ್ನು ಹೆಚ್ಚಿಸಿಕೊಂಡಾಗ ವಿಕರ್ಮದ ಖಾತೆ ಸಮಾಪ್ತಿಯಾಗಿ ಬಿಡುವುದು.

ಅವ್ಯಕ್ತ ಸೂಚನೆ:- ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.

ನಾಲ್ಕಾರು ಕಡೆ ಏರುಪೇರು ಇದೆ, ವ್ಯಕ್ತಿಯರ, ಪ್ರಕೃತಿಯ ಏರುಪೇರು ಹೆಚ್ಚುತ್ತಾ ಇದೆ, ಇಂತಹ ಸಮಯದಲ್ಲಿ ಸುರಕ್ಷತೆಯ ಸಾಧನವಾಗಿದೆ - ಒಂದು ಕ್ಷಣದಲ್ಲಿ ತಮ್ಮನ್ನು ತಾವು ವಿದೇಹಿ, ಅಶರೀರಿ ಅಥವಾ ಆತ್ಮ ಅಭಿಮಾನಿ ಮಾಡಿಕೊಳ್ಳುವುದು. ಎಂದ ಮೇಲೆ ಮಧ್ಯ ಮಧ್ಯದಲ್ಲಿ ಅಭ್ಯಾಸ ಮಾಡಿ ಒಂದು ಸೆಕೆಂಡಿನಲ್ಲಿ ಮನಸ್ಸು ಬುದ್ಧಿಯನ್ನು ಎಲ್ಲಿ ಬೇಕು ಅಲ್ಲಿ ಸ್ಥಿತ ಮಾಡಲು ಸಾಧ್ಯವೇ! ಇದಕ್ಕೆ ಸಾಧನೆ ಎನ್ನಲಾಗುವುದು.

ಸೂಚನೆ:- ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ ಸಹೋದರಿಯರು ಸಂಜೆ 6.30ರಿಂದ 7.30ರವರೆಗೆ ವಿಶೇಷ ಯೋಗದ ಅಭ್ಯಾಸದ ಸಮಯದಲ್ಲಿ ತಮ್ಮ ಶುಭ ಭಾವನೆಗಳ ಶ್ರೇಷ್ಠ ವೃತ್ತಿ ಮೂಲಕ ಮನಸ್ಸಾ ಮಹದಾನಿಯಾಗಿ ಎಲ್ಲರನ್ನೂ ನಿರ್ಭಯತೆಯ ವರದಾನ ಕೊಡುವ ಸೇವೆ ಮಾಡಿರಿ.