18.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಇದೇ ಆತ್ಮಿಕ ನಶೆಯಲ್ಲಿರಿ, ನಾವು ಈಶ್ವರೀಯ ಪರಿವಾರದವರಾಗಿದ್ದೇವೆ, ನಾವು ನಮ್ಮ ಗುಪ್ತ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ”

ಪ್ರಶ್ನೆ:
ಮಕ್ಕಳಲ್ಲಿ ಯಾವ ಹವ್ಯಾಸವು ಪಕ್ಕಾ ಇದ್ದರೆ ಇಡೀ ದಿನ ಖುಷಿಯು ಸ್ಥಿರವಾಗಿರುವುದು?

ಉತ್ತರ:
ಒಂದುವೇಳೆ ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡುವ ಹವ್ಯಾಸವಿದ್ದರೆ ಇಡೀ ದಿನ ಅಪಾರ ಖುಷಿಯಿರುವುದು. ತಂದೆಯ ಶ್ರೀಮತವಾಗಿದೆ - ಮಕ್ಕಳೇ, ಅಮೃತವೇಳೆ ಎದ್ದು ತಮ್ಮ ತಂದೆಯೊಂದಿಗೆ ಮಧುರಾತಿ ಮಧುರ ಮಾತನಾಡಿ. ವಿಚಾರ ಮಾಡಿ - ನಾವೀಗ ಯಾವ ಪರಿವಾರದವರಾಗಿದ್ದೇವೆ? ನಮ್ಮ ಕರ್ತವ್ಯವೇನು! ಒಂದುವೇಳೆ ನಮ್ಮ ಕರ್ತವ್ಯವೇನು, ನಮ್ಮದು ಇದು ಈಶ್ವರೀಯ ಪರಿವಾರವಾಗಿದೆ. ನಾವು ನಮ್ಮ ಹೊಸ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ಬುದ್ಧಿಯಲ್ಲಿ ಇದ್ದಿದ್ದೇ ಆದರೆ ಇಡೀ ದಿನ ಖುಷಿಯು ಸ್ಥಿರವಾಗಿರುವುದು.

ಓಂ ಶಾಂತಿ.
ಮಕ್ಕಳಿಗೆ ತಿಳಿದಿದೆ - ಇದು ಆತ್ಮಿಕ ಪರಿವಾರವಾಗಿದೆ, ಅವೆಲ್ಲವೂ ದೈಹಿಕ ಪರಿವಾರಗಳಾಗಿವೆ. ಇದು ಆತ್ಮಿಕ ತಂದೆಯ ಪರಿವಾರವಾಗಿದೆ, ಹೇಗೆ ಲೌಕಿಕ ಮನೆಯಲ್ಲಿ ತಂದೆ-ತಾಯಿ, ಮಕ್ಕಳಿರುತ್ತಾರೆ, ಅದು ಹದ್ದಿನ ಪರಿವಾರವಾಯಿತು. ನೀವೀಗ ಬೇಹದ್ದಿನ ಪರಿವಾರದವರಾಗಿದಿರಿ. ನೀವು ಮಾತಾಪಿತಾ..... ಎಂದು ಮಕ್ಕಳು ಹಾಡುತ್ತಾರೆ ಅಂದಮೇಲೆ ಇದೊಂದು ಪರಿವಾರವಾಯಿತು, ರಚಯಿತನ ರಚನೆಯಾಯಿತು. ಹಾಗೆ ನೋಡಿದರೆ ಎಲ್ಲಾ ಮಕ್ಕಳು ಅವರ ರಚನೆಯಾಗಿದ್ದಾರೆ ಆದರೆ ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಇದು ಬೇಹದ್ದಿನ ತಂದೆಯ ಪರಿವಾರವಾಗಿದೆ, ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ವಿನಾಶಕಾಲೇ ಪ್ರೀತಿ ಬುದ್ಧಿ ವಿಜಯಂತಿ ಎಂದು ಇದಕ್ಕಾಗಿಯೇ ಹೇಳಲಾಗಿದೆ. ಇಂತಹ ಪರಿವಾರದ ಗಾಯನವನ್ನು ಎಂದೂ ಗೀತೆಯಲ್ಲಿ ಹಾಡಿಲ್ಲ. ನೀವು ಈಶ್ವರೀಯ ಪರಿವಾರದವರು ಗುಪ್ತ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ಇದು ಯಾರಿಗೂ ಅರ್ಥವಾಗುವುದಿಲ್ಲ, ನಿಮಗೆ ನಶೆಯಿದೆ. ಯಾರು-ಯಾರು ತಂದೆಯನ್ನು ನೆನಪು ಮಾಡುವರೋ ಅವರಿಗೆ ನಶೆಯಿರುವುದು. ದೇಹಾಭಿಮಾನದಲ್ಲಿ ಬರುವುದರಿಂದ ಆ ನಶೆಯು ಇಳಿದು ಹೋಗುವುದು. ಇದು ಈಶ್ವರೀಯ ಪರಿವಾರವಾಗಿದೆ, ನಾವು ಮನೆಗೆ ಹೋಗಿ ನಂತರ ದೈವೀ ರಾಜಧಾನಿಯಲ್ಲಿ ಬರುತ್ತೇವೆ. ಅಲ್ಲಿ ದೈವೀ ಪರಿವಾರವಿರುತ್ತದೆ. ಅವರದು ಆಸುರೀ ಪರಿವಾರವಾಗಿದೆ. ಇಲ್ಲಿ ನಿಮ್ಮದು ಈಶ್ವರೀಯ ಪರಿವಾರವಾಗಿದೆ. ಆತ್ಮಿಕ ಬಾಪ್ದಾದಾರವರ ಮಕ್ಕಳು ಸಹೋದರ -ಸಹೋದರರಾಗಿದ್ದೀರಿ, ಇದು ಆತ್ಮಿಕ ಪ್ರವೃತ್ತಿ ಮಾರ್ಗವಾಗಿದೆ. ಸತ್ಯಯುಗದಲ್ಲಿ ಈಶ್ವರೀಯ ಪರಿವಾರವೆಂದು ಹೇಳುವುದಿಲ್ಲ, ಅಲ್ಲಿ ದೈವೀ ಪರಿವಾರವಾಗುತ್ತದೆ. ಈ ಈಶ್ವರೀಯ ಪರಿವಾರವು ಬಹಳ ಶಕ್ತಿಶಾಲಿಯಾಗಿದೆ. ನಾವೀಗ ಈಶ್ವರೀಯ ಪರಿವಾರದವರು ದೈವೀ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಹೀಗೆ ತಮ್ಮ ಜೊತೆ ಮಾತನಾಡಿಕೊಳ್ಳುತ್ತಾ ವಿಚಾರ ಸಾಗರ ಮಂಥನ ಮಾಡಬೇಕು. ಮುಂಜಾನೆ ಎದ್ದು ನೆನಪಿನಲ್ಲಿ ಕುಳಿತುಕೊಂಡರೆ ವಿಚಾರಸಾಗರ ಮಂಥನ ಮಾಡುವ ಹವ್ಯಾಸವಾಗುವುದು. ಉಮ್ಮಂಗದಲ್ಲಿ ಬರುತ್ತೀರಿ. ಯಾವಾಗ ಎಲ್ಲಾ ಮನುಷ್ಯರು ನಿದ್ರೆಯಲ್ಲಿ ಮಲಗಿರುವರೋ ಆ ಸಮಯದಲ್ಲಿ ನೀವು ಜಾಗೃತರಾಗುತ್ತೀರಿ. ನೀವು ಬೆಳಗ್ಗೆ-ಬೆಳಗ್ಗೆ ಎದ್ದು ಹೀಗೆ ಚಿಂತನೆ ಮಾಡಿರಿ, ಆಗ ನೋಡಿ ನಿಮಗೆ ಎಷ್ಟೊಂದು ಖುಷಿಯಿರುತ್ತದೆ. ಯಾವುದೆಲ್ಲಾ ಶ್ರೀಮತವು ಸಿಗುತ್ತದೆಯೋ ಅದರನುಸಾರ ನಡೆಯುತ್ತದೆ ನಂತರ ನಿಮಗೆ ಬಹಳ ಖುಷಿಯಾಗುವುದು, ಈಶ್ವರೀಯ ಪರಿವಾರದ ನೆನಪು ಬರುವುದು ಮತ್ತು ಆಸುರೀ ಪರಿವಾರದಿಂದ ಮನಸ್ಸು ದೂರ ಸರಿಯುವುದು. ಹೇಗೆ ಹೊಸ ಮನೆಯು ಸಂಪೂರ್ಣ ತಯಾರಾಗಿ ಬಿಟ್ಟರೆ ಮತ್ತೆ ಹಳೆಯದರಿಂದ ಆಸಕ್ತಿಯು ಹೊರಟು ಹೋಗುತ್ತದೆ. ಎಲ್ಲಿಯವರೆಗೆ ಹೊಸದು ತಯಾರಾಗುವುದಿಲ್ಲವೋ ಅಲ್ಲಿಯವರೆಗೆ ಹಳೆಯ ಮನೆಯನ್ನು ಒಂದಲ್ಲ ಒಂದು ರಿಪೇರಿ ಮಾಡುತ್ತಲೇ ಇರುತ್ತಾರೆ. ನಂತರ ಅದರಿಂದ ಮನಸ್ಸು ದೂರ ಸರಿಯುತ್ತದೆ, ಈ ಹಳೆಯ ಪ್ರಪಂಚವೂ ಹಾಗೆಯೇ.

ನೀವೀಗ ತಿಳಿದುಕೊಂಡಿದ್ದೀರಿ - ಇದು ಹಳೆಯ ಮನೆಯಾಗಿದೆ, ನಾವು ಹೊಸ ಮನೆಗೆ ಹೋಗುತ್ತೇವೆ ನಂತರ ಹೊಸ ವಸ್ತ್ರವನ್ನು ಧರಿಸುತ್ತೇವೆ. ಈ ದೇಹವೂ ಹಳೆಯದಾಗಿದೆ, ನೀವೀಗ ಭವಿಷ್ಯ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ಇಲ್ಲಿ ರಾಜ್ಯಭಾರ ಮಾಡುವುದಿಲ್ಲ, ಇಲ್ಲಿ ಸ್ಥಾಪನೆಯಾಗುತ್ತದೆ. ಈ ಮಾತುಗಳನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಇದು ಗೀತೆಯಾಗಿದೆ, ರಾಜಯೋಗವಲ್ಲವೆ. ಇದಕ್ಕೆ ಸಹಜ ರಾಜಯೋಗವೆಂದು ಹೇಳಲಾಗುತ್ತದೆ. ಅನೇಕ ಬಾರಿ ನೀವು ಈ ರಾಜಯೋಗದ ಅಭ್ಯಾಸದ ಮೂಲಕ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೀರಿ, ಅಲ್ಲಿ ಈ ಮಾತುಗಳು ನೆನಪಿರುವುದಿಲ್ಲ. ಒಂದುವೇಳೆ ಅಲ್ಲಿಯೂ ಈ ಮಾತುಗಳು ನೆನಪಿರುವುದಾದರೆ ಅಲ್ಲಿನ ಸುಖವೇ ಭಾಸವಾಗುವುದಿಲ್ಲ, ಚಿಂತೆಯಾಗಿ ಬಿಡುವುದು. ಈ ಸಮಯದಲ್ಲಿ ನಿಮಗೆ ಗುಪ್ತ ನಶೆಯಿದೆ. ಇದು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿವಾರವಾಗಿದೆ, ಇದಕ್ಕೆ ಈಶ್ವರೀಯ ಗುಪ್ತ ಪರಿವಾರವೆಂದು ಹೇಳಲಾಗುವುದು. ಈಶ್ವರೀಯ ವಿಶ್ವ ವಿದ್ಯಾಲಯ, ಈಶ್ವರೀಯ ಯಜ್ಞವೆಂದೂ ಹೇಳಲಾಗುತ್ತದೆ. ಇದು ಪರಿವಾರವಾಗಿದೆ, ನಾವು ಬಹಳ ಪ್ರಿಯರಾಗಬೇಕಾಗಿದೆ. ಭವಿಷ್ಯದಲ್ಲಿ ಬಹಳ ಪ್ರಿಯರಾಗುತ್ತೀರಿ, ನೀವು ರೂಪ ಭಸಂತರಾಗಿದ್ದೀರಿ, ಆತ್ಮವು ರೂಪವೂ ಆಗಿದೆ, ಭಸಂತನೂ ಆಗಿದೆ. ಇಷ್ಟು ಚಿಕ್ಕ ಬಿಂದು ಅವಿನಾಶಿ ಪಾತ್ರವನ್ನು ಅಭಿನಯಿಸುತ್ತದೆ. ಈ ಸಮಯದಲ್ಲಿ ನೀವು ರೂಪ ಭಸಂತರಾಗಿದ್ದೀರಿ, ತಂದೆಯು ಜ್ಞಾನ ಸಾಗರನಾಗಿದ್ದಾರೆ, ಯಾವಾಗ ಈ ಶರೀರದಲ್ಲಿ ಬರುವರೋ ಆಗಲೇ ಅವಶ್ಯವಾಗಿ ಜ್ಞಾನವನ್ನು ಕೊಡುತ್ತಾರೆ. ಜ್ಞಾನದ ಮಳೆ ಸುರಿಸುತ್ತಾರೆ, ಒಂದೊಂದು ರತ್ನವೂ ಲಕ್ಷಾಂತರ ರೂಪಾಯಿಗಳದಾಗಿದೆ. ಈಗ ನೀವಾತ್ಮರಿಗೆ ತಂದೆಯ ಪರಿಚಯ ಸಿಕ್ಕಿದೆ, ತಂದೆಯು ಸ್ಮೃತಿ ತರಿಸಿದ್ದಾರೆ, ಈ 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ ಎಂದು ನಿಮ್ಮ ಬುದ್ಧಿಯಲ್ಲಿದೆ ಆದ್ದರಿಂದ ನಿಮ್ಮ ಹೆಸರೇ ಆಗಿದೆ - ಸ್ವದರ್ಶನ ಚಕ್ರಧಾರಿಗಳು. ವಿಷ್ಣು ಅಥವಾ ಲಕ್ಷ್ಮೀ-ನಾರಾಯಣರು ಸ್ವದರ್ಶನ ಚಕ್ರಧಾರಿಗಳಾಗಿರಲಿಲ್ಲ, ಅವರಲ್ಲಿ ಈ ಜ್ಞಾನವಿರುವುದಿಲ್ಲ. ಈಗ ಆತ್ಮಕ್ಕೆ ಈ ಜ್ಞಾನವು ಸಿಗುತ್ತದೆ, ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ. ಭಲೆ ತ್ರಿಮೂರ್ತಿಯೆಂದು ಹೇಳುತ್ತಾರೆ, ಆದರೂ ಶಿವನನ್ನು ತೋರಿಸುವುದಿಲ್ಲ. ತ್ರಿಮೂರ್ತಿಯ ಚಿತ್ರವನ್ನು ಬಹಳ ನೋಡಿದ್ದೇವೆ ಅದರಲ್ಲಿ ಬಹುತೇಕವಾಗಿ ಬ್ರಹ್ಮನಿಗೆ ದಾಡಿ, ಮೀಸೆ ತೋರಿಸುತ್ತಾರೆ. ಸೂಕ್ಷ್ಮವತನದಲ್ಲಿ ದಾಡಿ, ಮೀಸೆಗಳಿರುವುದಿಲ್ಲ. ಇದು ಕೇವಲ ಬ್ರಹ್ಮನಿಗೇ ತೋರಿಸುತ್ತಾರೆ. ಪ್ರಜಾಪಿತನು ಇಲ್ಲಿಯೇ ಬೇಕಲ್ಲವೆ. ಇವರು ಆದಿ ಪಿತನಾದರು, ಬಹಳ ಹಳಬರಾದರು ಅಂದಾಗ ಇದು ಪ್ರಜಾಪಿತ ಬ್ರಹ್ಮನ ವಂಶಾವಳಿಯಾಯಿತು. ತಂದೆಯು ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆ ಅಂದಮೇಲೆ ಬ್ರಹ್ಮನು ಹಿರಿಯರಾದರಲ್ಲವೆ. ವೃದ್ಧನ ರೂಪದಲ್ಲಿ ತೋರಿಸುತ್ತಾರೆ, ಇವರು 84 ಜನ್ಮಗಳ ಚಕ್ರವನ್ನು ಸುತ್ತಿದ್ದಾರೆ, ನೀವೀಗ ಈ ಮಾತುಗಳನ್ನು ತಿಳಿದುಕೊಂಡಿದ್ದೀರಿ. ಇದೂ ಸಹ ನಿಮಗೆ ತಿಳಿದಿದೆ - ತಂದೆಗೆ ಎಲ್ಲರೂ ಮಕ್ಕಳಾಗಿದ್ದಾರೆ, ಆತ್ಮರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಈಗ ಭಾರತದ ಬಹಳ ದೊಡ್ಡ ಕಲ್ಯಾಣವಾಗುತ್ತಿದೆ, ಎಲ್ಲಾ ಆತ್ಮರು ಪವಿತ್ರರಾಗಿ ಮುಕ್ತಿಧಾಮಕ್ಕೆ ಹೊರಟು ಹೋಗುವರು. ನೀವು ಭಾರತದ ಸೇವೆಯಲ್ಲಿದ್ದೀರಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚ. ನೀವೀಗ ಕೆಲವರೇ ಇದ್ದೀರಿ, ಯಾರು ಈ ಮಾತುಗಳನ್ನು ತಿಳಿದುಕೊಳ್ಳುತ್ತೀರಿ. ಮತ್ತೆ ಸಾರ ರೂಪದಲ್ಲಿ ತಿಳಿಸಲಾಗುತ್ತದೆ, ಮಕ್ಕಳೇ, ಮನ್ಮನಾಭವ. ಏನೆಲ್ಲವೂ ಇದೆಯೋ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ತೊಡಗಿಸಿ. ಗಾಂಧೀಜಿಯೂ ಸಹ ಏನು ಮಾಡುತ್ತಿದರು? ಅವರೂ ಸಹ ಏನನ್ನು ಬಯಸುತ್ತಿದ್ದರು, ಎಂತಹ ವಿಚಿತ್ರ ಆಟವಲ್ಲವೆ! ನೀವೀಗ ಸಾಕ್ಷಿಯಾಗಿ ಆಟವನ್ನು ನೋಡುತ್ತೀರಿ, ನಿಮಗೆ ನಗು ಬರುತ್ತದೆ. ಎಲ್ಲಿಯ ಮಾತುಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ!

ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ ಪ್ರಪಂಚದ ಗತಿಯು ಹಾಳಾಗಿ ಬಿಟ್ಟಿದೆ, ಮತ್ತೆ ತಂದೆಯು ಸದ್ಗತಿ ಮಾಡುತ್ತಾರೆ. ನೀವು ಮಕ್ಕಳಿಗೆ ನಶೆಯೇರಿದೆ. ಇವರು ಇಡೀ ವಿಶ್ವದ ನಿರಾಕಾರ ಬಾಪೂಜಿಯಾಗಿದ್ದಾರೆ. ಈ ಬ್ರಹ್ಮನೂ ಸಹ ಯಾರ ಮಗನಾಗಿದ್ದಾರೆ? ಶಿವ ತಂದೆಯ ಮಗು. ಶಿವ ತಂದೆಯು ಯಾರ ಮಗು? ಶಿವ ತಂದೆಯು ನಮ್ಮ ಮಗುವಾಗಿದ್ದಾರೆಂದು ಮಾತೆಯರು ಹೇಳುತ್ತಾರೆ. ಇದು ಶಿವ ತಂದೆಯ ಆಟ ಪಾಠವಾಗಿದೆ ಬಾಕಿ ಧ್ಯಾನದಲ್ಲಂತೂ ಬಹಳ ಮಾಯೆಯ ಪ್ರವೇಶತೆಯಾಗುತ್ತದೆ. ನಮ್ಮಲ್ಲಿ ಶಿವ ತಂದೆಯು ಬರುತ್ತಾರೆ, ಶಿವ ತಂದೆಯು ಇದನ್ನು ಹೇಳುತ್ತಾರೆ ಎಂದು ಏನೆಲ್ಲವನ್ನೂ ಹೇಳುವರೋ ಇದು ಭೂತ ಪ್ರವೇಶತೆಯಾಗಿದೆ. ಇದರಲ್ಲಿ ನೀವು ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಭೂತದ ರೋಗವು ಇಂತಹದ್ದಾಗಿದೆ ಯಾವುದು ಎರಡೂ ಕಡೆಗಳಿಂದ ಹಾರಿಸಿ ಬಿಡುತ್ತದೆ ಆದ್ದರಿಂದ ನಮಗೆ ಸಾಕ್ಷಾತ್ಕಾರವಾಗಬೇಕು ಎಂಬ ಸಂಕಲ್ಪವು ಎಂದಿಗೂ ಬರಬಾರದು. ಇದೆಲ್ಲವೂ ಭಕ್ತಿಯ ವಿಚಾರವಾಗಿದೆ, ಜ್ಞಾನ ಮಾರ್ಗವನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಮಾಯೆಯು ಅನೇಕ ಪ್ರಕಾರದಿಂದ ಮೋಸ ಮಾಡುತ್ತದೆ. ಸಾಕ್ಷಾತ್ಕಾರ ಮೊದಲಾದುವುಗಳಿಂದ ಯಾವುದೇ ಲಾಭವಿಲ್ಲ. ತಂದೆಯು ತಿಳಿಸುತ್ತಾರೆ - ಇವರ ಮೂಲಕ ನಿಶ್ಚಿತಾರ್ಥ ಮಾಡಿಸುತ್ತೇನೆ. ತಂದೆಯ ಆದೇಶವಾಗಿದೆ, ನೀವು ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ತನ್ನ ಕಲ್ಯಾಣಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದು ತಿಳುವಳಿಕೆಯ ಮಾತಾಗಿದೆ. ತಂದೆಗೆ ಯಾರು ಬೇಕಾದರೂ ಪತ್ರವನ್ನು ಬರೆಯಬಹುದಾಗಿದೆ. ಕೆಲವು ಮಕ್ಕಳಿಗೆ ಇಷ್ಟಾದರೂ ಬುದ್ಧಿಯಿಲ್ಲ, ಬೇಹದ್ದಿನ ತಂದೆಗೆ ಪತ್ರದಲ್ಲಿ ನಮ್ಮ ಕ್ಷೇಮ ಸಮಾಚಾರವನ್ನು ಬರೆಯಬೇಕು ಎಂದು. ಹೇಗೆ ಲೌಕಿಕ ತಂದೆಗೆ ಪತ್ರ ಬರೆಯದಿದ್ದರೆ ಅವರಿಗೆ ಚಿಂತೆಯಾಗಿ ಬಿಡುತ್ತದೆ, ವಿಶ್ರಾಂತಿಯೇ ಸಿಗುವುದಿಲ್ಲ. ಇವರೂ ಸಹ ಬೇಹದ್ದಿನ ತಂದೆಯಾಗಿದ್ದಾರೆ, ಒಂದು, ಒಂದುವರೆ ತಿಂಗಳಿನವರೆಗೆ ಪತ್ರ ಬರಲಿಲ್ಲವೆಂದರೆ ಬಹುಷಃ ಇವರನ್ನು ಮಾಯೆಯು ತಿಂದು ಬಿಟ್ಟಿತು, ಪಾರಲೌಕಿಕ ತಂದೆಗೂ ಪತ್ರ ಬರೆಯುವುದಿಲ್ಲವೆಂದು ತಿಳಿದುಕೊಳ್ಳುತ್ತಾರೆ, ಆದ್ದರಿಂದ ಇಷ್ಟಾದರೂ ಬರೆಯಬೇಕು - ಬಾಬಾ, ನಾವು ನಾರಾಯಣೀ ನಶೆಯಲ್ಲಿ ಸದಾ ಇರುತ್ತೇವೆ. ತಾವು ಕೊಟ್ಟಿರುವ ಯುಕ್ತಿಯಲ್ಲಿಯೇ ನಾವು ತತ್ಪರರಾಗಿದ್ದೇವೆ, ಹೀಗೆ ತಿಳಿಸಿದಾಗ ಮಕ್ಕಳು ಖುಷಿಯಿಂದ ಇದ್ದಾರೆಂದು ತಂದೆಗೆ ಅರ್ಥವಾಗುವುದು. ಪತ್ರ ಬರೆಯದೇ ಇದ್ದರೆ ಇವರು ರೋಗಿಯಾಗಿರಬೇಕು, ನೆನಪಿನಲ್ಲಿಯೇ ಇರುವುದಿಲ್ಲ, ಇಲ್ಲದಿದ್ದರೆ ತಂದೆಗೆ ಸಮಾಚಾರ ತಿಳಿಸಬೇಕಲ್ಲವೆ. ಬಾಬಾ, ನಾವು ಈ ಸರ್ವೀಸ್ ಮಾಡಿದ್ದೇವೆ, ಇವರಿಗೆ ತಿಳಿಸಿದೆವು - ಇಂತಹವರ ಬುದ್ಧಿಯಲ್ಲಿ ಪೂರ್ಣ ಕುಳಿತುಕೊಳ್ಳಲಿಲ್ಲ, ಹೀಗೆ ತಂದೆಗೆ ಸಮಾಚಾರವನ್ನು ತಿಳಿಸಿದಾಗ ಮಕ್ಕಳೇ, ಈ ರೀತಿ ತಿಳಿಸಿಕೊಡಿ ಎಂದು ತಂದೆಯೂ ಹೇಳುವರು.

ಮಕ್ಕಳು ಗೀತೆಯನ್ನು ಕೇಳಿದಿರಿ, ಯಾರು ಈ ಗೀತೆಯನ್ನು ರಚಿಸಿದ್ದಾರೆಯೋ ಅವರು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿಲ್ಲ, ಅದೆಲ್ಲವೂ ಭಕ್ತಿ ಮಾರ್ಗವಾಗಿದೆ. ಏನೆಲ್ಲವನ್ನೂ ಹೇಳುವರೋ ಏನನ್ನೂ ತಿಳಿದುಕೊಂಡಿಲ್ಲ. ಮುಖ್ಯ ಮಾತೇನೆಂದರೆ ತಂದೆಯನ್ನೇ ತಿಳಿದುಕೊಂಡಿಲ್ಲ. ತಂದೆಯನ್ನು ಅರಿತುಕೊಳ್ಳುವುದರಿಂದ ಭಾರತವು ಸದ್ಗತಿಯನ್ನು ಪಡೆಯುತ್ತದೆ. ತಂದೆಯನ್ನು ಅರಿತುಕೊಳ್ಳದ ಕಾರಣ ಭಾರತವು ದುರ್ಗತಿ ಹೊಂದುತ್ತದೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಾನು ನಿಮ್ಮನ್ನು ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತೇನೆ. ಉಳಿದೆಲ್ಲರನ್ನೂ ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತೇನೆ. ಭಾರತವು ಜೀವನ್ಮುಕ್ತಿಯಲ್ಲಿದ್ದಾಗ ಉಳಿದೆಲ್ಲರೂ ಮುಕ್ತಿಯಲ್ಲಿರುತ್ತಾರೆ. ಈ ಪರಿವರ್ತನೆಯನ್ನು ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಸರ್ವರ ಸದ್ಗತಿಯು ಅವಶ್ಯವಾಗಿ ಆಗುತ್ತದೆ. ಕಲ್ಪ-ಕಲ್ಪವೂ ಸಂಗಮದಲ್ಲಿಯೇ ಆಗುವುದು.

ನಾವಾತ್ಮರ ಆತ್ಮಿಕ ತಂದೆಯು ಒಬ್ಬರೇ ಆಗಿದ್ದಾರೆ, ಅವರನ್ನು ಆತ್ಮವೇ ನೆನಪು ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆ - ನಿಮಗೆ ಭಕ್ತಿ ಮಾರ್ಗದಲ್ಲಿ ಇಬ್ಬರು ತಂದೆಯರು ಇರುತ್ತಾರೆ. ಸತ್ಯಯುಗದಲ್ಲಿ ಒಬ್ಬರು ತಂದೆಯಿರುತ್ತಾರೆ, ಸಂಗಮದಲ್ಲಿ ಮೂರು ಜನ ತಂದೆಯರಿದ್ದಾರೆ. ಪ್ರಜಾಪಿತ ಬ್ರಹ್ಮನೂ ಸಹ ತಂದೆಯಾದರಲ್ಲವೆ. ಶಿವನೂ ತಂದೆಯಾಗಿದ್ದಾರೆ, ಅವರು ಸರ್ವ ಆತ್ಮರ ತಂದೆಯಾಗಿದ್ದಾರೆ, ಅವರಿಂದಲೇ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಅವರನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಬ್ರಹ್ಮನನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುವುದಿಲ್ಲ ಆದ್ದರಿಂದ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ನಾವು ಅವರ ಮಕ್ಕಳಾಗಿದ್ದೇವೆ, ಇದು ಸತ್ಯ-ಸತ್ಯವಾದ ಯಥಾರ್ಥ ಜ್ಞಾನವಾಗಿದೆ, ಇದು ಆತ್ಮಿಕ ತಂದೆಯ ಆತ್ಮಿಕ ಮಕ್ಕಳ ಪ್ರತಿ. ಉಳಿದೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ದೇಹಾಭಿಮಾನಿ ಪತಿತ ಮನುಷ್ಯರು ಪತಿತ ಕರ್ತವ್ಯವನ್ನೇ ಮಾಡುತ್ತಾರೆ. ದಾನ-ಪುಣ್ಯ ಇತ್ಯಾದಿಯೇನೆಲ್ಲವನ್ನೂ ಮಾಡುತ್ತಾರೆಯೋ ಅದೆಲ್ಲವನ್ನೂ ಪತಿತವಾದುದನ್ನೇ ಮಾಡುತ್ತಾರೆ. ರಾವಣ ರಾಜ್ಯದಲ್ಲಿ ಇದು ಆಗಿಯೇ ಆಗುತ್ತದೆ. ಈಗ ತಂದೆಯು ಬಂದು ಆದೇಶ ಹೊರಡಿಸುತ್ತಾರೆ, ತಿಳಿಸುತ್ತಾರೆ - ಮಕ್ಕಳೇ, ಎಚ್ಚರಿಕೆಯಿಂದಿರಿ, ವಿಕಾರದಲ್ಲಿ ಹೋಗಬಾರದು. ಕಾಮದ ಮೇಲೆ ಜಯ ಗಳಿಸಬೇಕಾಗಿದೆ. ಬಿರುಗಾಳಿಗಳಂತೂ ಬಹಳ ಬರುತ್ತದೆ, ಇದಕ್ಕೆ ವಶವಾಗಬಾರದು. ಜ್ಞಾನವಿಲ್ಲದ ಸಮಯದಲ್ಲಿಯೂ ಬಂದಿರುವುದಿಲ್ಲ, ಅಷ್ಟು ಮಾಯೆಯ ವಿಕಲ್ಪಗಳು ಬರುತ್ತವೆ. ಆದ್ದರಿಂದ ಬಾಬಾ, ಭಕ್ತಿಮಾರ್ಗದಲ್ಲಿ ಬಹಳ ಖುಷಿಯಿರುತ್ತದೆ, ಈಗ ತಮ್ಮನ್ನು ನೆನಪು ಮಾಡಬೇಕೆಂದರೂ ಸಹ ಮಾಡಲು ಆಗುತ್ತಿಲ್ಲ. ಬಿಂದುವು ನೆನಪಿರುವುದಿಲ್ಲ, ದೊಡ್ಡ ವಸ್ತುವಾಗಿದ್ದರೆ ನೆನಪು ಮಾಡಬಹುದು ಎಂದು ಹೇಳುತ್ತಾರೆ.

ತಂದೆಯು ತಿಳಿಸುತ್ತಾರೆ - ನೀವು ಶಿವ ತಂದೆಯೆಂದು ಹೇಳಿ ನೆನಪು ಮಾಡಿ. ಈ ಹಳೆಯ ಪ್ರಪಂಚವನ್ನು ಮರೆತುಹೋಗಿ ಶಾಂತಿಧಾಮದಲ್ಲಿ ನೆನಪು ಮಾಡಿ. ಕೇವಲ ಶಾಂತಿಧಾಮವನ್ನು ನೆನಪು ಮಾಡಬಾರದು, ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಆತ್ಮಕ್ಕೆ ಮಧುರ ತಂದೆಯೊಂದಿಗೆ ಪ್ರೀತಿಯಿರಬೇಕು. ತಂದೆಯು ಅರ್ಧಕಲ್ಪದ ಪ್ರಿಯತಮನಾಗಿದ್ದಾರೆ, ನಾವು ಅರ್ಧಕಲ್ಪ ತಮ್ಮನ್ನು ಮರೆತು ಹೋಗಿದ್ದೇವೆ ಎಂದು ಆತ್ಮವು ಹೇಳುತ್ತದೆ. ಬ್ರಾಹ್ಮಣಿಯರು ಯಾರನ್ನು ಕರೆ ತರುತ್ತಾರೆಯೋ ಅವರು ಬಹಳ ಎಚ್ಚರವಹಿಸಿ ನಿಶ್ಚಯ ಬುದ್ಧಿಯವರನ್ನೂ ಕರೆತರಬೇಕಾಗಿದೆ. ಒಂದುವೇಳೆ ಇಲ್ಲಿ ಬಂದು ಮತ್ತೆ ಹೋಗಿ ಪತಿತರಾದರೆ ಬ್ರಾಹ್ಮಣಿಯ ಮೇಲೆ ಅದು ಶಿಕ್ಷೆಯಾಗುವುದು ಆದ್ದರಿಂದ ಬ್ರಾಹ್ಮಣಿಯರ ಮೇಲೆ ಬಹಳ ಜವಾಬ್ದಾರಿಯಿರುವುದು. ತಂದೆಯು ಈ ರಥವನ್ನು ತೆಗೆದುಕೊಂಡಿದ್ದಾರೆ, ಇವರು ಎಲ್ಲಾ ಮಾತುಗಳ ಅನುಭವಿಯಾಗಿದ್ದಾರೆ, ಇಲ್ಲಂತೂ ಯಾವುದೇ ಕೊಳಕಿನ ಮಾತಿಲ್ಲ. ಪರಸ್ಪರ ಆಟವಾಡುವುದು, ನಗುವುದು, ಮಾತನಾಡುವುದು ಇದನ್ನು ನಿರಾಕಾರಿಸುವುದಿಲ್ಲ. ಬಾಕಿ ಯಾವುದೇ ಆತ್ಮನೊಂದಿಗೆ ಸ್ವಲ್ಪ ಪ್ರೀತಿಯನ್ನಿಟ್ಟರೂ ಮತ್ತೆ ಅದು ಹೆಚ್ಚು ವೃದ್ಧಿಯಾಗುತ್ತಾ ಹೋಗುವುದು. ಅವರ ನೆನಪು ಬರುತ್ತಾ ಇರುವುದು ಆದ್ದರಿಂದ ಇದರಿಂದಲೂ ದೂರ ಹೋಗಬೇಕಾಗಿದೆ.

ಈಗ ನೀವು ಮನೆಯಲ್ಲಿ ಕುಳಿತಿದ್ದೀರಾ ಅಥವಾ ಸತ್ಯಯುಗದಲ್ಲಿ ಕುಳಿತಿದ್ದೀರಾ? (ಮನೆಯಲ್ಲಿ) ತಂದೆಯು ಮಕ್ಕಳಿಗೆ ಮನೆಯಲ್ಲಿ ಓದಿಸುತ್ತಾರೆ, ಇದು ನಿಮ್ಮೆಲ್ಲರ ಮನೆಯಾಗಿದೆ. ಹೊರಗಡೆ ಹೋಗುತ್ತೀರೆಂದರೆ ಈ ರೀತಿ ಹೇಳುವುದಿಲ್ಲ. ಇಲ್ಲಿ ಬಹಳ ನಶೆಯಿರುತ್ತದೆ, ದೇಹಾಭಿಮಾನವನ್ನು ಬಿಡಬೇಕಾಗಿದೆ. ದೇಹೀ-ಅಭಿಮಾನಿಯಾಗಿರಿ ಆಗ ಜಾತಿ ಪಾತಿಯ ಬೇಧವೆಲ್ಲವೂ ಹೊರಟು ಹೋಗುವುದು. ಹಳೆಯ ಪ್ರಪಂಚವು ತಮೋಪ್ರಧಾನವಾಗಿದೆ, ಅದರಲ್ಲಿ ಭೇದಭಾವವು ಇನ್ನೂ ಹೆಚ್ಚುತ್ತಾ ಹೋಗುವುದು. ಮೊದಲು ಬ್ರಿಟಿಷ್ ಸರ್ಕಾರದ ಸಮಯದಲ್ಲಿ ಭಾಷೆಗಳ ಕಿರಿ ಕಿರಿಯಿರಲಿಲ್ಲ. ಈಗ ದಿನ-ಪ್ರತಿದಿನ ಒಡಕುಂಟಾಗುತ್ತಾ ಇದೆ. ಮತ್ತೆ ಸತ್ಯಯುಗದಲ್ಲಿ ಒಂದೇ ಭಾಷೆಯಿರುವುದು, ಯಾವುದೇ ಭೇದಭಾವವಿರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಯಾವುದೇ ದೇಹಧಾರಿಯ ನೆನಪು ಬರಬಾರದು ಅದಕ್ಕಾಗಿ ಯಾರೊಂದಿಗೂ ಪ್ರೀತಿ ಮಾಡಬಾರದು. ಇದರಿಂದಲೂ ದೂರ ಹೋಗಬೇಕಾಗಿದೆ. ಬಹಳ ಎಚ್ಚರಿಕೆಯನ್ನು ಇಡಬೇಕಾಗಿದೆ. ಮಾಯೆಯ ವಿಕಲ್ಪಗಳಿಗೆ ಗಾಬರಿಯಾಗಬಾರದು. ವಿಜಯಿಗಳಾಗಬೇಕಾಗಿದೆ.

2. ಧ್ಯಾನದಲ್ಲಿ ಮಾಯೆಯ ಬಹಳ ಪ್ರವೇಶತೆಯಾಗುತ್ತದೆ, ಈ ಭೂತ ಪ್ರವೇಶತೆಯಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ತಂದೆಗೆ ತನ್ನ ಸತ್ಯ-ಸತ್ಯ ಸಮಾಚಾರವನ್ನು ತಿಳಿಸಬೇಕಾಗಿದೆ.

ವರದಾನ:
ಪ್ರತೀ ಮಾತಿನಲ್ಲಿ ಸಾರವನ್ನು ಗ್ರಹಿಸುತ್ತಾ ಆಲ್ರೌಂಡರ್ ಆಗುವಂತಹ ಸರಳ ಪುರುಷಾರ್ಥಿ ಭವ.

ಯಾವುದೇ ಮಾತನ್ನು ನೋಡುತ್ತೀರಿ, ಕೇಳುತ್ತೀರಿ, ಅದರ ಸಾರವನ್ನು ತಿಳಿದುಕೊಳ್ಳಿರಿ ಮತ್ತು ಯಾವ ಮಾತನ್ನು ಆಡುವಿರಿ, ಯಾವ ಕರ್ಮವನ್ನು ಮಾಡುವಿರಿ, ಅದರಲ್ಲಿ ಸಾರವು ಅಡಗಿರಲಿ, ಇದರಿಂದ ಪುರುಷಾರ್ಥವು ಸರಳವಾಗುವುದು. ಇಂತಹ ಸರಳ ಪುರುಷಾರ್ಥಿಯು ಸರ್ವ ಮಾತುಗಳಲ್ಲಿಯೂ ಆಲ್ರೌಂಡ್ ಆಗಿರುತ್ತಾರೆ. ಅವರಲ್ಲಿ ಯಾವುದೇ ಕೊರತೆಗಳೂ ಕಾಣಿಸುವುದಿಲ್ಲ. ಯಾವುದೇ ಮಾತಿನಲ್ಲಿ ಸಾಹಸವು ಕಡಿಮೆಯಾಗುವುದಿಲ್ಲ, ಮುಖದಿಂದ ನಾವು ಇದನ್ನು ಮಾಡಲು ಸಾಧ್ಯವಿಲ್ಲ ಎಂಬ ಮಾತು ಬರುವುದಿಲ್ಲ. ಇಂತಹ ಸರಳ ಪುರುಷಾರ್ಥಿಗಳು ಸ್ವಯಂ ಸಹ ಸರಳಚಿತ್ತವಾಗಿ ಇರುತ್ತಾರೆ ಹಾಗೂ ಅನ್ಯರನ್ನೂ ಸರಳಚಿತ್ತರನ್ನಾಗಿ ಮಾಡಿ ಬಿಡುತ್ತಾರೆ.

ಸ್ಲೋಗನ್:
ಸಾಧನವನ್ನು ಉಪಯೋಗಿಸುತ್ತಾ, ಅದರ ಪ್ರಭಾವದಿಂದ ಭಿನ್ನ ಹಾಗೂ ತಂದೆಯ ಪ್ರಿಯರಾಗಿರಿ.

ಅವ್ಯಕ್ತ ಸೂಚನೆ:– “ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”

ಏಕರಸ ಸ್ಥಿತಿ ಮಾಡಿಕೊಳ್ಳುವುದಕ್ಕಾಗಿ ಒಬ್ಬರನ್ನು ಬಿಟ್ಟರೆ ಬೇರೆ ಏನನ್ನು ನೋಡುತ್ತಿದ್ದರು ನೋಡಬೇಡಿ. ಏನೆಲ್ಲವನ್ನು ನೋಡುತ್ತೀರಿ, ಯಾವ ವಸ್ತುವು ಇರುವುದಿಲ್ಲ. ಯಾವಾಗ ಯಾವುದೇ ದೃಶ್ಯವನ್ನು ನೋಡುತ್ತೀರಿ ಎಂದರೆ ಏಕೆ, ಏನು ಈ ಪ್ರಶ್ನೆಗಳು ಉತ್ಪನ್ನ ಅಗದಿರಲಿ ಆಗ ಏಕ ರಸ, ಸ್ಥಿರ ಸ್ಥಿತಿ ಆಗುವುದು, ಈ ವ್ಯರ್ಥ ಸಂಕಲ್ಪಗಳು ಏರುಪೇರಿನ ಕಾರಣವಾಗಿದೆ. ಈ ಕ್ಯೂನ ಸಮಾಪ್ತಿಯ ನಂತರ ಸಂಪೂರ್ಣತೆ ಬರುವುದು.