19.04.26    Avyakt Bapdada     Kannada Murli    15.12.2009     Om Shanti     Madhuban


“ಪರಿವಾರದ ಜೊತೆ ಪ್ರೀತಿಯನ್ನು ನಿಭಾಯಿಸಲು ಜ್ಞಾನಪೂರ್ಣರಾಗಿ ತಂದೆಯ ಸಮಾನ ಸಾಕ್ಷಿತನದ ಸ್ಥಿತಿಯಲ್ಲಿರಿ, ತಂದೆ-ಸ್ವಯಂ, ಡ್ರಾಮಾ ಮತ್ತು ಪರಿವಾರ ನಾಲ್ಕರಲ್ಲಿ ನಿಶ್ಚಯ ಬುದ್ಧಿಯವರಾಗಿ ವಿಜಯಿಗಳಾಗಿರಿ.”


ಇಂದು ಸಮರ್ಥ ತಂದೆಯು ತನ್ನ ಸಮರ್ಥ ಮಕ್ಕಳನ್ನು ನೋಡುತ್ತಿದ್ದೇವೆ ಏಕೆಂದರೆ ಪ್ರತಿಯೊಂದು ಮಗು ಸ್ನೇಹದಿಂದ ತಂದೆಯ ಸಮಾನರಾಗುವ ಪುರುಷಾರ್ಥ ಬಹಳ ಲಗನ್ನಿನಿಂದ ಮಾಡುತ್ತಿದ್ದಾರೆ. ಬಾಪ್ದಾದಾರವರು ಮಕ್ಕಳನ್ನು ನೋಡಿ ಖುಷಿ ಪಡುತ್ತೇವೆ ಮತ್ತು ಹೃದಯದಲ್ಲಿ ಮಕ್ಕಳ ಗೀತೆಯನ್ನು ಹಾಡುತ್ತೇವೆ - ವಾಹ್! ಮಕ್ಕಳೇ ವಾಹ್! ಏಕೆಂದರೆ ಮಕ್ಕಳು ತಂದೆಯ ತಲೆಯ ಕಿರೀಟವಾಗಿದ್ದಾರೆ. ನೋಡಿ, ಮಕ್ಕಳ ಪೂಜೆ ಡಬಲ್ ರೂಪದಲ್ಲಿ ಆಗುತ್ತದೆ, ತಂದೆಯ ಪೂಜೆ ಒಂದು ರೂಪದಲ್ಲಿ ಆಗುತ್ತದೆ ಅಂದಾಗ ಮಕ್ಕಳು ತಂದೆಗಿಂತಲೂ ತಂದೆಯ ಮೂಲಕ ಮುಂದೆ ಹೋಗುತ್ತಾರೆ ಆದ್ದರಿಂದ ತಂದೆಯು ಮಕ್ಕಳ ಪುರುಷಾರ್ಥವನ್ನು ನೋಡಿ ಖುಷಿಯಾಗುತ್ತೇವೆ. ನಂಬರ್ವಾರಂತೂ ಇದ್ದೀರಿ ಅದರೆ ಪುರುಷಾರ್ಥದ ಲಕ್ಷ್ಯ ಮುಂದುವರೆಯುತ್ತಿದೆ.

ಇಂದು ಅಮೃತವೇಳೆ ನಾಲ್ಕೂ ಕಡೆಯ ಮಕ್ಕಳಲ್ಲಿ ಒಂದು ಮಾತು ಯಾವುದು ಜ್ಞಾನದ ಫೌಂಡೇಷನ್ ಆಗಿದೆ ಅದನ್ನು ನೋಡಿದೆವು. ಫೌಂಡೇಷನ್ ಆಗಿದೆ - ನಿಶ್ಚಯ. ನಿಶ್ಚಯ ಬುದ್ಧಿ ವಿಜಯಿ ಎಂದು ಹೇಳಲಾಗುತ್ತದೆ. ಅಂದಾಗ ಇಂದು ಎಲ್ಲರ ನಿಶ್ಚಯವನ್ನು ನೋಡಿದೆವು, ಎಲ್ಲರದು ನಂಬರ್ವಾರ್ ತಂದೆಯಲ್ಲಂತೂ ನಿಶ್ಚಯ ಇದ್ದೇ ಇದೆ, ಅದರ ಚಿಹ್ನೆ ಎಲ್ಲರೂ ತಂದೆಯನ್ನು ಗುರುತಿಸಿ ತಂದೆಯ ಮಕ್ಕಳಾಗಿದ್ದೀರಿ ಮತ್ತು ಇಲ್ಲಿಗೂ (ಮಧುಬನ) ತಂದೆಯೊಂದಿಗೆ ಮಿಲನ ಮಾಡಲು ಬಂದಿದ್ದೀರಿ. ತಂದೆಯಲ್ಲಿ ಪ್ರತಿಯೊಂದು ಮಗುವಿಗೆ ಅಟೂಟ (ತುಂಡಾಗದ) ನಿಶ್ಚಯವಿದೆ ಆದರೆ ತಂದೆಯ ಜೊತೆ ಇದೆ, ಅನ್ಯ ನಿಶ್ಚಯವೂ ಪಕ್ಕಾ ಇರಬೇಕಾಗಿದೆ ಅದಾಗಿದೆ ಸ್ವಯಂನ ಪ್ರತಿ ನಿಶ್ಚಯ. ಜೊತೆಯಲ್ಲಿ ಡ್ರಾಮಾದಲ್ಲಿ ನಿಶ್ಚಯ ಮತ್ತು ಪರಿವಾರದಲ್ಲಿ ನಿಶ್ಚಯ. ಈ ನಾಲ್ಕು ಪ್ರಕಾರದ ನಿಶ್ಚಯದಲ್ಲಿ ಪಕ್ಕಾ ಇರಬೇಕು ಅರ್ಥಾತ್ ನಿಶ್ಚಯ ಬುದ್ಧಿ ವಿಜಯಂತಿ ಆಗಬೇಕಾಗಿದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಈ ನಾಲ್ಕು ನಿಶ್ಚಯದಲ್ಲಿ ಪಕ್ಕಾ ಇದ್ದೇವೆಯೇ? ತಂದೆಯಲ್ಲಂತೂ ಎಲ್ಲರೂ ಹೇಳುತ್ತಾರೆ - ಬಾಬಾ ನನ್ನವರು ಮತ್ತು ನಾನು ಬಾಬಾರವನು. ತಂದೆಯನ್ನು ನನ್ನವರು ಎಂದು ಹೇಳಿ ತಂದೆಯ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಂಡಿರಿ. ಸದಾ ತಂದೆಯ ಮೂಲಕ ಅಧಿಕಾರಿಗಳಾಗಿ ಸರ್ವಖಜಾನೆಗಳಿಗೆ ಅಧಿಕಾರಿಗಳಾಗಿ ಬಿಟ್ಟಿರಿ. ಇದರ ಜೊತೆಯಲ್ಲಿ ಸ್ವಯಂನ ಪ್ರತಿಯೂ ಸಹ ನಿಶ್ಚಯದ ಅವಶ್ಯಕತೆಯಿದೆ - ಏಕೆ? ಒಂದುವೇಳೆ ಸ್ವಯಂನಲ್ಲಿ ನಿಶ್ಚಯವಿಲ್ಲದಿದ್ದರೆ ಹೃದಯವಿಧೀರ್ಣರಾಗಿ ಬಿಡುತ್ತೀರಿ. ಸ್ವಯಂನಲ್ಲಿ ನಿಶ್ಚಯ ಇದೇ ಆಗಿದೆ - ನಾನು ತಂದೆಯ ಮೂಲಕ ಸ್ವಮಾನಧಾರಿಯಾಗಿದ್ದೇನೆ, ಸ್ವರಾಜ್ಯ ಅಧಿಕಾರಿಯಾಗಿದ್ದೇನೆ. ಸ್ವಯಂ ತಂದೆಯೇ ನನಗೆ ಎಷ್ಟೊಂದು ಸ್ವಮಾನವನ್ನು ಕೊಟ್ಟಿದ್ದಾರೆ, ಒಂದೊಂದು ಸ್ವಮಾನವನ್ನು ಸ್ಮೃತಿಯಲ್ಲಿ ತಂದಿದ್ದೇ ಆದರೆ ಎಷ್ಟೊಂದು ನಶೆಯೇರುತ್ತದೆ! ಇತ್ತೀಚಿನ ದಿನಗಳಲ್ಲಿ ಯಾರಿಗಾದರೂ ಯಾವುದೇ ಬಿರುದು ಸಿಕ್ಕಿತೆಂದರೆ ಇದು ನನ್ನ ಭಾಗ್ಯವೆಂದು ತಿಳಿಯುತ್ತಾರೆ ಆದರೆ ತಾವು ಮಕ್ಕಳಿಗಂತೂ ಒಂದೊಂದು ಸ್ವಮಾನವನ್ನು ಯಾರು ಕೊಟ್ಟಿದ್ದಾರೆ! ಸ್ವಯಂ ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ಸ್ವಮಾನಧಾರಿಯನ್ನಾಗಿ ಮಾಡಿದ್ದಾರೆ. ಒಂದೊಂದು ಸ್ವಮಾನದ ನೆನಪು ಮಾಡುತ್ತಾ ಖುಷಿಯಲ್ಲಿ ಹಾರುತ್ತೀರಿ. ಅಂದಾಗ ಸ್ವಯಂನಲ್ಲಿಯೂ ಸಹ ಸದಾ ನಿಶ್ಚಯದ ನಶೆಯಿರಬೇಕು. ನಾನು ತಂದೆಯ ಮೂಲಕ ಸ್ವರಾಜ್ಯಾಧಿಕಾರಿ, ಸ್ವಮಾನಧಾರಿ, ಕೋಟಿಯಲ್ಲಿ ಕೆಲವು ಆತ್ಮರಲ್ಲಿ ನಾನಾತ್ಮನಾಗಿದ್ದೇನೆ. ಹೇಗೆ ತಂದೆಯಲ್ಲಿ ನಿಶ್ಚಯವಿದೆ, ಅದರ ಜೊತೆ ಸ್ವಯಂನ ಪ್ರತಿಯೂ ಸಹ ನಿಶ್ಚಯದ ಅವಶ್ಯಕತೆಯಿದೆ ಏಕೆಂದರೆ ಸ್ವಯಂನಲ್ಲಿ ನಿಶ್ಚಯವಿದ್ದಿದ್ದೇ ಆದರೆ ಎಲ್ಲಿ ನಿಶ್ಚಯವಿದೆ ಅಲ್ಲಿ ಪ್ರತಿಯೊಂದು ಕರ್ಮದಲ್ಲಿ ನಿಶ್ಚಯಬುದ್ಧಿ ಅರ್ಥಾತ್ ಸ್ವಮಾನಧಾರಿ ವಿಜಯಿಗಳು. ನಿಶ್ಚಯದ ಅರ್ಥವೇ ಆಗಿದೆ ಸಫಲತೆ. ಈ ರೀತಿಯಿಲ್ಲ ನಮಗೆ ತಂದೆಯ ಮೇಲೆ ನಿಶ್ಚಯವಿದೆ, ಅದಂತೂ ಬಹಳ ಒಳ್ಳೆಯದು ಆದರೆ ಜೊತೆಯಲ್ಲಿ ಸ್ವಯಂನ ನಶೆಯೂ ಸಹ ನಾನು ಯಾರು! ಎಂಬುದರ ಅವಶ್ಯಕತೆಯಿದೆ. ಒಂದೊಂದು ಸ್ವಮಾನವನ್ನು ನೆನಪು ಮಾಡಿದರೆ ನಿಶ್ಚಯ ಹಾಗೂ ನಶೆ ತಮ್ಮ ಚಲನೆ ಮತ್ತು ಚಹರೆಯಲ್ಲಿ ಕಂಡು ಬರುತ್ತಿದೆ ಮತ್ತು ಮುಂದೆಯೂ ಸಹ ಕಂಡು ಬರುತ್ತದೆ. ಇದರ ಜೊತೆಯಲ್ಲಿ ಮೂರನೆಯ ಮಾತು - ಡ್ರಾಮಾದ ಮೇಲೂ ಸಹ ನಿಶ್ಚಯ ಬಹಳ ಅವಶ್ಯಕತೆಯಿದೆ ಏಕೆಂದರೆ ಡ್ರಾಮಾದಲ್ಲಿ ಸಮಸ್ಯೆಗಳೂ ಸಹ ಬರುತ್ತದೆ ಮತ್ತು ಸಫಲತೆಯೂ ಸಹ ಆಗುತ್ತದೆ. ಒಂದುವೇಳೆ ಡ್ರಾಮಾದಲ್ಲಿ ಪಕ್ಕಾ ನಿಶ್ಚಯವಿದ್ದರೆ ಡ್ರಾಮಾದ ನಿಶ್ಚಯದಿಂದ ಯಾರು ನಿಶ್ಚಯಬುದ್ಧಿಯುಳ್ಳವರಾಗಿದ್ದಾರೆ ಅವರು ಸಮಸ್ಯೆಯನ್ನು ಸಮಾಧಾನ ರೂಪದಲ್ಲಿ ಬದಲಾವಣೆ ಮಾಡುತ್ತಾರೆ ಏಕೆಂದರೆ ನಿಶ್ಚಯ ಅರ್ಥಾತ್ ವಿಜಯ. ಅಂದಾಗ ಯಾರ ಮೇಲೆ ವಿಜಯಿಯಾಗುತ್ತಾರೆ? ಪರಿವರ್ತನೆ ಮಾಡುವುದರಲ್ಲಿ. ಒಂದು ಸೆಕೆಂಡಿನಲ್ಲಿ ಸಮಸ್ಯೆಯು ಪರಿವರ್ತನೆಯಾಗಿ ಸಮಾಧಾನ ಸ್ವರೂಪವಾಗಿ ಬಿಡುತ್ತದೆ. ಹಲ್ಚಲ್(ಏರುಪೇರು)ನಲ್ಲಿಯೂ ಬರುವುದಿಲ್ಲ, ಅಚಲರಾಗಿರುತ್ತಾರೆ ಏಕೆಂದರೆ ಡ್ರಾಮಾದ ಜ್ಞಾನದಿಂದ ಅಡೋಲ ಅಚಲರಾಗಿ ಬಿಡುತ್ತಾರೆ. ಈ ನಿಶ್ಚಯವಿರುತ್ತದೆ - ನಾನೇ ಕಲ್ಪದ ಮೊದಲೂ ಸಹ ಸಮಾಧಾನ ಸ್ವರೂಪ ಅರ್ಥಾತ್ ಸಫಲ ಆತ್ಮನಾಗಿದ್ದೆನು, ಆಗಿದ್ದೇನೆ ಮತ್ತು ಕಲ್ಪದ ನಂತರವೂ ಸಹ ನಾನೇ ಆಗುತ್ತೇನೆ. ಅಂದಾಗ ಈ ನಶೆಯು ಡ್ರಾಮಾದ ನಿಶ್ಚಯ ಪಕ್ಕಾ ಮಾಡಿಸುತ್ತದೆ. ಹೆಮ್ಮೆಯಿರುತ್ತದೆ, ನಶೆಯಿರುತ್ತದೆ ನಾನೇ ಆಗಿದ್ದೆನು, ನಾನೇ ಆಗಿದ್ದೇನೆ ಮತ್ತು ನಾನೇ ಆಗುತ್ತೇನೆ ಆದ್ದರಿಂದ ಈ ಪುರುಷಾರ್ಥಿ ಜೀವನದಲ್ಲಿ ಡ್ರಾಮಾದ ನಿಶ್ಚಯವೂ ಅವಶ್ಯಕತೆಯಿದೆ ಮತ್ತು ಜೊತೆಯಲ್ಲಿ ನಾಲ್ಕನೆಯದಾಗಿದೆ - ಪರಿವಾರದ ಮೇಲೆ ನಿಶ್ಚಯ ಏಕೆಂದರೆ ತಂದೆಯು ಬಂದಕೂಡಲೆ ಪರಿವಾರಕ್ಕೆ ಜನ್ಮ ಕೊಟ್ಟರು. ಅಂದಾಗ ಹೇಗೆ ತಂದೆಯಲ್ಲಿ ನಿಶ್ಚಯವಿದೆ ಹಾಗೆಯೇ ಪರಿವಾರದಲ್ಲಿಯೂ ನಿಶ್ಚಯದ ಅವಶ್ಯಕತೆಯಿದೆ ಏಕೆಂದರೆ ಪರಿವಾರ ಯಾರದಾಗಿದೆ? ಮತ್ತು ಇಷ್ಟು ದೊಡ್ಡ ಪರಿವಾರ ಮತ್ತ್ಯಾರದಾಗಲು ಸಾಧ್ಯ! ಅಂದಾಗ ಪರಿವಾರದ ನಿಶ್ಚಯವೂ ಅತಿಅವಶ್ಯಕವಾಗಿದೆ ಏಕೆಂದರೆ ಇಷ್ಟು ದೊಡ್ಡ ಪರಿವಾರ ವಿಶ್ವದಲ್ಲಿ ಯಾರದಿದೆ? ತಾವು ಇಡೀ ವಿಶ್ವದಲ್ಲಿ ಎಷ್ಟೇ ಪರಿವಾರವನ್ನು ಪರಿಶೀಲನೆ ಮಾಡಿ, ಯಾರದಿದೆ? ಪರಿವಾರದ ರೀತಿಯಿಂದ ಯಾವುದೇ ಡಿವೈನ್ ಫಾದರ್ (ಧರ್ಮಾತ್ಮ) ಗಳದೂ ಇಲ್ಲ ಅಲ್ಲಿ ಅನುಯಾಯಿಗಳಿದ್ದಾರೆ, ಇಲ್ಲಿ ಪರಿವಾರ ಇದೆ. ಪರಿವಾರದ ಜೊತೆಯೇ ಸೇವೆಯಲ್ಲಿ, ಸಂಬಂಧದಲ್ಲಿ ಇರುತ್ತೀರಿ. ನಮ್ಮದಂತೂ ತಂದೆಯ ಜೊತೆಯಲ್ಲಿಯೇ ಸಂಬಂಧವಿದೆ, ಪರಿವಾರ ಜೊತೆಯಿಲ್ಲವೆಂದರೆ ಏನಾಯಿತು - ಈ ರೀತಿಯಲ್ಲ. ಪರಿವಾರದ ನಿಶ್ಚಯವಂತೂ ತಮ್ಮದು 21 ಜನ್ಮಗಳು ನಡೆಯಬೇಕು. ತಿಳಿದಿದ್ದೀರಲ್ಲವೆ. ಪರಿವಾರದ ಜೊತೆಯಲ್ಲಿಯೇ ಸಂಬಂಧದಲ್ಲಿ ಬರುವುದರಿಂದ ತಿಳಿಯುತ್ತದೆ - ನಾನು ಇಷ್ಟು ದೊಡ್ಡ ಪರಿವಾರದಲ್ಲಿ ಎಲ್ಲರೊಂದಿಗೆ ನಿಶ್ಚಯಬುದ್ಧಿಯವರಾಗಿ ನಡೆಯುತ್ತಿದ್ದೇವೆ, ಪರಿವಾರದಲ್ಲಿ ನಡೆಯಲು ಈ ಗಮನ ಕೊಡಬೇಕಾಗುತ್ತದೆ - ಪರಿವಾರದಲ್ಲಿ ಪ್ರತಿಯೊಬ್ಬರ ಸಂಸ್ಕಾರ ಭಿನ್ನ-ಭಿನ್ನವಾಗಿದೆ ಮತ್ತು ಭಿನ್ನವಾಗಿರುತ್ತದೆ. ತಮ್ಮ ನೆನಪಾರ್ಥ ಆಗಿದೆ - ಮಾಲೆ, ಮಾಲೆಯಲ್ಲಿ ನೋಡಿ ಮೊದಲನೇ ನಂಬರ್ ಎಲ್ಲಿ! ಮತ್ತು ಎಲ್ಲಿ 108ನೇ ನಂಬರ್! ಏಕೆಂದರೆ ಪರಿವಾರದಲ್ಲಿ ಭಿನ್ನ-ಭಿನ್ನ ಸಂಸ್ಕಾರವಿದೆ ಅಂದಾಗ ಇಷ್ಟು ದೊಡ್ಡ ಪರಿವಾರದಲ್ಲಿ ನಡೆಯುತ್ತಾ ಸಂಸ್ಕಾರಗಳನ್ನು ತಿಳಿದು ಪರಸ್ಪರದಲ್ಲಿ ಒಂದು ಪರಿವಾರ, ಒಬ್ಬ ತಂದೆ, ಒಂದು ರಾಜ್ಯ, ಅಂದಾಗ ಒಂದಾಗಿ ನಡೆಯಬೇಕು. ಪರಿವಾರದಲ್ಲಿ ಹೇಗೆ ದೊಡ್ಡ ಪರಿವಾರವಿದೆ ಹಾಗೆಯೇ ಪರಸ್ಪರದಲ್ಲಿ ದೊಡ್ಡ ಹೃದಯ, ಪ್ರತಿಯೊಬ್ಬರ ಪ್ರತಿ ಶುಭ ಭಾವನೆ, ಶುಭ ಕಾಮನೆಯ ಸ್ಥಿತಿಯಲ್ಲಿ ಸ್ಥಿತರಾಗಿ ನಡೆಯಬೇಕು ಏಕೆಂದರೆ ಪರಿವಾರದ ಮಧ್ಯದಲ್ಲಿಯೇ ಸಂಸ್ಕಾರ ಸ್ವಭಾವ ಬರುತ್ತದೆ ಆದರೆ ಕೆಲವರು ತಿಳಿಯುತ್ತಾರೆ - ಪರಿವಾರದಲ್ಲಿ ಏನಿದೆ, ತಂದೆಯ ಜೊತೆಯಂತೂ ಇದೆ ಆದರೆ ಇಲ್ಲಿ ಧರ್ಮ ಮತ್ತು ರಾಜ್ಯ ಎರಡೂ ಸ್ಥಾಪನೆಯಾಗುತ್ತಿದೆ, ಕೇವಲ ಧರ್ಮವಲ್ಲ, ಬೇರೆ ಯಾರೆಲ್ಲಾ ಧರ್ಮಪಿತರು ಬಂದಿದ್ದಾರೆ ಅವರದು ಕೇವಲ ಧರ್ಮವಿದೆ, ರಾಜ್ಯವಿಲ್ಲ. ಇಲ್ಲಂತೂ ತಾವೆಲ್ಲರೂ ರಾಜ್ಯವನ್ನೂ ಮಾಡಬೇಕು. ಆಗ ರಾಜ್ಯದಲ್ಲಿ ಪರಿವಾರದ ಅವಶ್ಯಕತೆಯಿರುತ್ತದೆ ಮತ್ತು 21 ಜನ್ಮಗಳು ಭಿನ್ನ-ಭಿನ್ನ ರೂಪದಿಂದ ಪರಿವಾರದ ಜೊತೆಯೇ ಇರಬೇಕಾಗಿದೆ, ಪರಿವಾರವನ್ನು ಬಿಟ್ಟು ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ಅಂದಾಗ ಪರಿಶೀಲನೆ ಮಾಡಿ - ತಂದೆಗೆ ಗೊತ್ತಿದೆ, ನನಗೆ ಗೊತ್ತಿದೆ ಎಂದು ತಿಳಿಯಬಾರದು. ತಂದೆಯೊಂದಿಗೇ ಕೆಲಸವಿದೆ ಆದರೆ ಒಂದುವೇಳೆ ಈ ನಾಲ್ಕು ನಿಶ್ಚಯದಲ್ಲಿ ಒಂದು ನಿಶ್ಚಯದ ಕಡಿಮೆಯಿದ್ದರೂ ಹಲ್ಚಲ್ನಲ್ಲಿ ಬಂದು ಬಿಡುತ್ತೀರಿ. ಸೇವೆಯ ಜೊತೆಗಾರರು, ತಂದೆಯಂತೂ ಸಕಾಶ ಕೊಡುವವವರಾಗಿದ್ದಾರೆ ಆದರೆ ಜೊತೆಗಾರರು ಯಾರಾಗಿದ್ದಾರೆ? ಸಾಕಾರದಲ್ಲಿ ಜೊತೆಗಾರರಂತೂ ಪರಿವಾರವಾಗಿದೆ ಅಂದಾಗ ತಂದೆಯು ನೋಡಿದರು - ಮೂರು ನಿಶ್ಚಯದಲ್ಲಿ ಮೆಜಾರಿಟಿ ಸರಿಯಾಗಿ ನಡೆಯುತ್ತಿದ್ದಾರೆ ಆದರೆ ಪರಿವಾರದ ಜೊತೆಯಲ್ಲಿ ನಿಭಾಯಿಸುವುದು ಸಂಸ್ಕಾರದೊಂದಿಗೆ ಹೊಂದಿಕೊಳ್ಳುವುದು, ಒಬ್ಬೊಬ್ಬರನ್ನೂ ಕಲ್ಯಾಣದ ಭಾವನೆಯಿಂದ ನೋಡುವುದು ಮತ್ತು ನಡೆಯುವುದು, ಇದರಲ್ಲಿ ಕೆಲವು ಮಕ್ಕಳು ಯಥಾ ಶಕ್ತಿ ಆಗಿ ಬಿಡುತ್ತಾರೆ ಆದರೆ ತಂದೆಯು ನೋಡಿದ್ದೇವೆ, ಯಾರು ಪರಿವಾರದ ನಿಶ್ಚಯದಲ್ಲಿ ಜ್ಞಾನಪೂರ್ಣರಾಗಿ ಸದಾ ತಂದೆಯ ಸಮಾನ ಸಾಕ್ಷಿತನದ ಸ್ಥಿತಿಯಲ್ಲಿ ಜೊತೆಯಲ್ಲಿ ಬರುತ್ತಾರೆ, ಇರುತ್ತಾರೆ ಅವರೇ ನಂಬರ್ವನ್ ಅಥವಾ ನಂಬರ್ವನ್ ಡಿವಿಜನ್ (ರಾಜ್ಯ) ದಲ್ಲಿ ಬರುತ್ತಾರೆ. ಅಂದಾಗ ಪರಿಶೀಲನೆ ಮಾಡಿ - ಭಾವ-ಸ್ವಭಾವಗಳು ಪರಿವಾರದಲ್ಲಿ ಬರುತ್ತದೆ, ಅಂದಾಗ ಚಿಕ್ಕ ಪುಟ್ಟ ತಪ್ಪುಗಳೂ ಸಹ ಆಗುತ್ತದೆ, ವಿಘ್ನಗಳೂ ಬರುತ್ತವೆ ಅದು ಪರಿವಾರದ ಸಂಬಂಧದಲ್ಲಿಯೇ ಬರುತ್ತದೆ ಅಂದಾಗ ಎಲ್ಲದಕ್ಕಿಂತ ಅವಶ್ಯಕತೆ ಈ ಪರಿವಾರದ ಸಂಬಂಧದಲ್ಲಿಯೇ ಉತ್ತೀರ್ಣರಾಗಬೇಕಾಗಿದೆ. ಒಂದುವೇಳೆ ಪರಿವಾರದಲ್ಲಿ ನಡೆಯುವುದರಲ್ಲಿ, ನಿಭಾಯಿಸುವುದರಲ್ಲಿ ಯಾವುದೇ ಕೊರತೆಯಿದ್ದರೆ ಆ ವಿಘ್ನವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಆದರೆ ಬೇಸರ ಪಡಿಸುತ್ತದೆ. ಇದು ಏಕೆ, ಇದು ಹೇಗೆ, ಪರಿವಾರದ ಸಂಬಂಧದಲ್ಲಿ ಬರುತ್ತದೆ. ಅಂದಾಗ ಏಕೆ ಎಂಬುದಕ್ಕೆ ಬದಲಾಗಿ ಏಕೆ ಎನ್ನಬಾರದು ಆದರೆ ನಾವು ಒಟ್ಟಾಗಿ ನಡೆಯಬೇಕು, ಪರಿವಾರದ ಪ್ರೀತಿಯನ್ನು ನಿಭಾಯಿಸಬೇಕಾಗಿದೆ ಏಕೆಂದರೆ ಇದು ತಂದೆಯ ಪರಿವಾರವಾಗಿದೆ, ಭಗವಂತನ ಪರಿವಾರವಾಗಿದೆ. ಲೌಕಿಕ ಪರಿವಾರವಲ್ಲ. ನಶೆಯಿರಬೇಕು - ವಾಹ್ ಬಾಬಾ, ವಾಹ್ ಡ್ರಾಮಾ, ವಾಹ್ ನಾನು ಮತ್ತು ವಾಹ್ ಪರಿವಾರ! ಸರಿಯೇ? ಪರಿಶೀಲನೆ ಮಾಡುತ್ತೀರಾ? ನಾಲ್ಕರಲ್ಲಿಯೂ ಉತ್ತೀರ್ಣರಾಗಿದ್ದೀರಾ? ಒಂದರಲ್ಲಿಯೂ ಕಡಿಮೆಯಿಲ್ಲ. ಪರಿಶೀಲನೆ ಮಾಡಿಕೊಳ್ಳಿ. ಈಗೀಗ ಪರಿಶೀಲಿಸಿ ಏಕೆಂದರೆ ವಿಜಯಿಗಳಾಗುವ ಸಾಧನವೇ ಇದಾಗಿದೆ. ಪರಿವಾರದ ಮಧ್ಯ ಸಂಸ್ಕಾರಗಳು ಹೊರ ಬರುತ್ತವೆ ಮತ್ತು ಆ ಸಂಸ್ಕಾರಕ್ಕೆ ಹೊಂದಿಕೊಂಡು ತನ್ನನ್ನೂ ಪರಿವರ್ತನೆ ಮಾಡಿಕೊಳ್ಳುವುದು ಮತ್ತು ಪರಿವಾರವನ್ನೂ ಸಹ ಇಷ್ಟು ಶ್ರೇಷ್ಠ ದೃಷ್ಟಿಯಿಂದ ನೋಡಬೇಕು. ಬಾಪ್ದಾದಾರವರು ಮೊದಲೂ ತಿಳಿಸಿದ್ದೇವೆ - ಬಾಪ್ದಾದಾ ಕೊನೆಯ ಮಗುವನ್ನೂ ಸಹ ಅತಿಭಾಗ್ಯಶಾಲಿ ಎಂದು ತಿಳಿಯುತ್ತಾರೆ - ಏಕೆ? ಭಗವಂತನನ್ನು ಗುರುತಿಸುವುದು, ಸಾಧಾರಣ ರೂಪದಲ್ಲಿ ತಂದೆಯನ್ನು ಗುರುತಿಸುವುದು, ಯಾರು ಇಷ್ಟು ದೊಡ್ಡ-ದೊಡ್ಡ ಮಹಾತ್ಮರೂ ಸಹ ಗುರುತಿಸಲು ಸಾಧ್ಯವಿಲ್ಲ ಆದರೆ ಬಾಪ್ದಾದಾರವರ ಕೊನೆಯ ಮಗುವೂ ಸಹ ನನ್ನ ಬಾಬಾ ಹೇಳುತ್ತಾರೆ. ಹೃದಯದಿಂದ ನನ್ನ ಬಾಬಾ ಎಂದು ಹೇಳುತ್ತಾರೆ. ಅಂದಾಗ ಬಾಪ್ದಾದಾರವರು ಹೇಗೆ ಮಗುವಿನ ವಿಶೇಷತೆಯನ್ನೂ ನೋಡಿ ಮಕ್ಕಳಿಗೆ ಬಹಳ ಪ್ರೀತಿ, ನೆನಪು-ಪ್ರೀತಿ ಕೊಡುತ್ತಾರೆ ಹಾಗೆಯೇ ಕೊನೆಯ ಮಗುವಿಗೂ ಸಹ ಕೊಡುತ್ತಾರೆ. ಅಂದಾಗ ಪರಿಶೀಲನೆ ಮಾಡಿ - ಮೂರರಲ್ಲಿ ಸರಿಯಾಗಿದ್ದೀರಾ ಅಥವಾ ನಾಲ್ಕರಲ್ಲಿ ಸರಿಯಿದ್ದೀರಾ ಅಥವಾ ಎರಡರಲ್ಲಿ ಸರಿಯಿದ್ದೀರಾ ಅಥವಾ ಒಂದರಲ್ಲಿ ಸರಿಯಿದ್ದೀರಾ? ಪರಿಶೀಲಿಸಿದಿರಾ? ಪರಿಶೀಲನೆ ಮಾಡಿದಿರಾ? ಯಾರು ತಿಳಿಯುತ್ತೀರಿ - ನಾಲ್ಕರಲ್ಲಿಯೂ ನಾನೇ, ನಾಲ್ಕು ನಿಶ್ಚಯದಲ್ಲಿ ತಂದೆ, ತಾವು, ಡ್ರಾಮಾ ಮತ್ತು ಪರಿವಾರ, ನಾಲ್ಕೂ ನಿಶ್ಚಯದಲ್ಲಿ ಸರಿಯಿದ್ದೇನೆ ಎನ್ನುವವರು ಕೈಯೆತ್ತಿರಿ. ಸರಿಯಾಗಿದ್ದೀರಾ? ಒಳ್ಳೆಯದು ಸರಿಯಿದ್ದೀರಾ? ಪರೀಕ್ಷೆ ತೆಗೆದುಕೊಳ್ಳುವುದೇ? ಆಯಿತು ಕೈಯನ್ನೆತ್ತಿ. ಒಳ್ಳೆಯದು ಪರಿವಾರದಲ್ಲಿ ಉತ್ತೀರ್ಣರಾಗಿದ್ದೀರಾ? ಪರಿವರಾದ ಸಂಬಂಧದಲ್ಲಿ ಬರಬೇಕು ಏಕೆಂದರೆ ಪರಿವಾರವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ, ಇರಲೇಬೇಕು, ನಿಭಾಯಿಸಲೇಬೇಕು. ಅಂದಾಗ ಇದರಲ್ಲಿ ಉತ್ತೀರ್ಣರಾಗಿದ್ದೀರಾ? ಕೆಲವೊಮ್ಮೆ ಈ ರೀತಿ ಬರುತ್ತದೆ - ಈ ರೀತಿ ಆಗದಿದ್ದರೆ ಬಹಳ ಚೆನ್ನಾಗಿರುತ್ತಿತ್ತು, ಈ ರೀತಿ ಏಕೆ ಮಾಡುತ್ತಾರೆ, ಇದು ಏಕೆ ಆಗುತ್ತದೆ, ಈ ಸಂಕಲ್ಪಗಳು ಬರುತ್ತವೆ..... ಕೂಡಲೇ ಪರಿವಾರದ ನಶೆ, ನಾಲ್ಕೂ ನಿಶ್ಚಯವುಳ್ಳವರು ಎಂದೂ ಸಹ ಅಂತಿಂತಹ ಸಂಕಲ್ಪಗಳನ್ನೂ ಮಾಡುವುದಿಲ್ಲ. ಈ ರೀತಿ ಏಕೆ ಆಗುತ್ತದೆ ಎಂದು ಸಂಕಲ್ಪದಲ್ಲಿ ಬಂದರೂ ಸಹ ಅದು ತಮ್ಮನ್ನು ಇದು ಏಕೆ, ಏನು ಎಂದು ಅಲುಗಾಡಿಸಬಾರದು. ಮೂಡ್ ಬದಲಾಗಬಾರದು. ಇದಕ್ಕೆ ನಾಲ್ಕರಲ್ಲಿಯೂ ಉತ್ತೀರ್ಣರಾಗುವುದು ಎಂದು ಹೇಳಲಾಗುತ್ತದೆ. ಕೈಯನ್ನಂತು ಎತ್ತಿದಿರಿ, ಬಾಪ್ದಾದಾರವರಿಗೆ ಖುಷಿ ಪಡಿಸಿದಿರಿ ಆದರೆ ಬಾಪ್ದಾದಾರವರಿಗೆ ಈ ಪರಿವಾರದ ಮಾತೇನಿದೆ ಅದರಲ್ಲಿ ಕೆಲವೊಮ್ಮೆ ಮಾತುಗಳನ್ನು ಕೇಳಬೇಕಾಗುತ್ತದೆ, ನೋಡಬೇಕಾಗುತ್ತದೆ. ಸಂಪೂರ್ಣ ವಿಶಾಲ ಹೃದಯದವರಾಗಿ, ಎಲ್ಲರನ್ನು ಶುಭ ಭಾವನೆ, ಶುಭ ಕಾಮನೆಯಿಂದ ಸರಿ ಪಡಿಸಬೇಕು ಏಕೆಂದರೆ ಪರಿವಾರ ಇರುವುದು ಒಂದೇ. ಒಂದು ಮತದವರಾಗಿ ನಡೆಯಬೇಕು ಮತ್ತು ನಡೆಸಬೇಕು. ಕೇವಲ ನಡೆಯುವುದಲ್ಲ, ನಡೆಸಲೂಬೇಕು ಆದ್ದರಿಂದ ಬಾಪ್ದಾದಾರವರು ಈ ಮಾತಿನ ಪ್ರತಿ ಗಮನ ಸೆಳೆಯುತ್ತಿದ್ದೇವೆ - ಪರಿವಾರದಲ್ಲಿ ಯಾವುದೇ ಏರುಪೇರಿನಲ್ಲಿ ಉತ್ತೀರ್ಣರಾಗುತ್ತೀರಿ, ವ್ಯರ್ಥ ನಡೆಯುವುದಿಲ್ಲ ಎನ್ನುವವರು ಅನ್ಯರನ್ನೂ ಈ ರೀತಿ ಮಾಡಬೇಕಾಗಿದೆ. ಈಗಂತೂ ತಾವು ತಮ್ಮ-ತಮ್ಮ ಸೇವಾಕೇಂದ್ರದಲ್ಲಿ ಎಷ್ಟು ಮಂದಿ ಇರುತ್ತೀರಿ, ಹೆಚ್ಚೆಂದರೆ 25-30 ಇರಬಹುದು, ಇಷ್ಟೇ ಅಲ್ಲ ಆದರೆ ತಿಳಿಯಿರಿ, ದೊಡ್ಡ ಸೇವಾಕೇಂದ್ರವೆಂದರೆ ಅದರಲ್ಲಿಯೂ 50-60, ಒಳ್ಳೆಯದು ಹೆಚ್ಚೆಂದರೆ 100 ಎಂದೂ ತಿಳಿದುಕೊಳ್ಳಿ. ಇಷ್ಟಂತೂ ಇರುವುದಿಲ್ಲ ಆದರೆ ತಿಳಿದುಕೊಳ್ಳಿ. ಅಂದಾಗ ಬಾಪ್ದಾದಾರವರು ಎಲ್ಲಾ ಸೇವಾಕೇಂದ್ರದ ಮಕ್ಕಳಿಗೆ ಕೊನೆಯವರಾಗಿದ್ದರೂ ಸಹ ತನಗೆ ಪ್ರಿಯರೆಂದು ಹೇಳಿ ನಡೆಸಿದರು ಮತ್ತು ಪ್ರೀತಿಗೆ ಗುರುತಾಗಿ ನಿತ್ಯವೂ ಬಾಪ್ದಾದಾರವರು ನೆನಪು-ಪ್ರೀತಿಯನ್ನು ಏನು ಕೊಡುತ್ತಾರೆ? ಮಧುರಾತಿ ಮಧುರ, ಇವರು ಕಹಿಯಾಗಿದ್ದಾರೆ ಎಂದು ಗೊತ್ತಿದೆ ಆದರೆ ಮಧುರರು ಮತ್ತು ಕಹಿಯಾದವರು ಎಂದು ಎಂದಾದರೂ ನೆನಪು-ಪ್ರೀತಿಯಲ್ಲಿ ಕೊಟ್ಟಿದ್ದೇವೆಯೇ? ಅವರನ್ನೂ ಸಹ ಮುದ್ದಾಗಿರುವವರೆಂದು ಹೇಳುತ್ತೇವೆ, ಕೇವಲ ಹೇಳುವುದಲ್ಲ ಆದರೆ ನನ್ನ ಮಗುವಾಗಿದೆ, ನನ್ನದು ಎಂಬ ಭಾವದಿಂದ ನಡೆಸಲಾಗುತ್ತದೆ ಏಕೆಂದರೆ ಡ್ರಾಮಾದಲ್ಲಿ, ಮಾಲೆಯಲ್ಲಿ ಎಲ್ಲರೂ ಒಂದೇ ನಂಬರಿರುವುದಿಲ್ಲ, ಇದು ಫಲಿತಾಂಶವಾಗಿದೆ. ಸಂಸ್ಕಾರಗಳು ಭಿನ್ನ-ಭಿನ್ನವಾಗಿರುತ್ತದೆ, ಆಗಲೇಬೇಕು ಇಲ್ಲದಿದ್ದರೆ ಎಲ್ಲರೂ ರಾಜರಾಗಿ ಬಿಡುತ್ತಾರೆ, ಪ್ರಜೆಗಳು ಯಾರಾಗುವುದು! ರಾಜ್ಯವನ್ನು ಯಾರ ಮೇಲೆ ಮಾಡುವುದು? ಒಳ್ಳೆಯ ಪ್ರಜೆಗಳೂ ಸಹ ಬೇಕು, ರಾಯಲ್ ಪ್ರಜೆ, ರಾಜಧಾನಿಯಲ್ಲವೆ. ಈ ರೀತಿ ಪ್ರತಿಯೊಬ್ಬರು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಿ, ಪರಿವಾರದಲ್ಲಿ ಯಾವುದೇ ಮಾತಿನಲ್ಲಿ ಕೆಟ್ಟ ಸಂಸ್ಕಾರವಿದೆ, ಆದರೆ ನನ್ನ ಸಂಸ್ಕಾರ ಏನಾಗಿದೆ? ಒಂದುವೇಳೆ ಕೆಟ್ಟದ್ದನ್ನು ನೋಡಿ ನನ್ನ ಸಂಸ್ಕಾರವೂ ಹಾಳಾಯಿತೆಂದರೆ ನಾನೂ ಸಹ ಕೆಟ್ಟವನಾಗಿ ಬಿಟ್ಟೆನು. ಕೆಟ್ಟವರು ಒಳ್ಳೆಯವರನ್ನೂ ಕೆಡಿಸಿ ಬಿಡುತ್ತಾರೆ (ಬದಲಾವಣೆ ಮಾಡಿ ಬಿಡುತ್ತಾರೆ).

ತಂದೆಯು ಸ್ಥಾಪನೆಯ ಸಮಯದಲ್ಲಿ 350-400 ಮಂದಿಯನ್ನು ಒಟ್ಟಿಗೆ ಸಂಭಾಲನೆ ಮಾಡಿದರು, ಈಗ ಇಷ್ಟುಮಂದಿ ಒಟ್ಟಿಗೆ ಇರುವಂತಹ ಪರಿವಾರವಂತೂ ಇಲ್ಲ. ಕರ್ತವ್ಯ ಬೇರೆ-ಬೇರೆ ಇದೆ ಆದರೆ ಅದು ಕರ್ತವ್ಯವಾಗಿದೆ ಮತ್ತು ಪರಿವಾರದಲ್ಲಿ ಕರ್ತವ್ಯವಿದೆ. ಲೌಕಿಕ ಪರಿವಾರ, ಲೌಕಿಕ ಕರ್ತವ್ಯ, ಲೌಕಿಕ ರೀತಿಯಿಂದ ದಿನಚರ್ಯವನ್ನು ಕಳೆಯುವುದು ಎನ್ನುವ ರೀತಿಯಲ್ಲ, ಭಿನ್ನ ಮತ್ತು ಪ್ರಿಯ ಪರಿವಾರವಾಗಿದೆ. ಇದರಲ್ಲಿ ಬೇಸರವಾಗುವುದು ನಂತರ ನೆಪಗಳನ್ನು ಕೊಡುತ್ತಾರೆ - ಇವರು ಮಾಡಿದರು ಆಗ ಹೀಗಾಯಿತು. ಹೀಗೆ ಮಾಡಿರುವುದಕ್ಕೆ ಹೀಗೆ ಆಯಿತು ಆದರೆ ತಂದೆಯ ಮುಂದೆಯೂ ಸಹ ಆಗ ವಿರೋಧವಿರಲಿಲ್ಲವೇನು! ತಂದೆಯಿಂದ ದೂರ ಹೋದರಲ್ಲವೆ! ಇದು ವಿರೋಧವಲ್ಲವೇ! ಆದರೂ ತಂದೆಯು ಹೇಳಿದರು, ಯಾರೇ ಹೊರಟು ಹೋಗಿದ್ದರೆಂದರೂ ಟೋಲಿಯನ್ನು ಕಳುಹಿಸಿ ಕೊಡಿ, ಅವರನ್ನು ಕರೆಯಲು ಪ್ರಯತ್ನ ಪಡಿ, ಅವರ ಸೇವೆ ಮಾಡಿ, ನೆನಪನ್ನು ತರಿಸಿ ಎಂದು ಹೇಳುತ್ತಿದ್ದರು. ಈ ರೀತಿ ನಾಲ್ಕೂ ನಿಶ್ಚಯದಲ್ಲಿಯೂ ಉತ್ತೀರ್ಣರಾಗಬೇಕೇ ಅಥವಾ ಮೂರರಲ್ಲಿಯೇ, ಎರಡಲ್ಲಿ ಆಗುವುದೇ? ನಂಬರ್ವನ್ ಆಗಬೇಕು. ಇದಕ್ಕಾಗಿ ವಿನಾಶದ ತಯಾರಿಗಳಾಗುತ್ತಿದ್ದರೂ ಸಹ ಈಗ ವಿನಾಶವನ್ನು ತಡೆಯಲಾಗಿದೆ. ಪ್ರಕೃತಿಯೂ ಸಹ ತಂದೆಯ ಬಳಿ ಬರುತ್ತದೆ, ನನಗೆ ಬಹಳ ಹೊರೆಯಾಗಿ ಬಿಟ್ಟಿದೆ ಎಂದು ಪ್ರಕೃತಿಯೂ ಸಹ ಹೇಳುತ್ತದೆ. ಪ್ರಕೃತಿಯೂ ಸಹ ಹೊರೆಯಿಂದ ಮುಕ್ತವಾಗಲು ಇಷ್ಟ ಪಡುತ್ತದೆ. ಮಾಯೆಯೂ ಸಹ ಹೇಳುತ್ತದೆ - ನನಗೆ ಗೊತ್ತಿದೆ, ನನ್ನ ಪಾತ್ರವು ಈಗ ಹೋಗುವಂತಿದೆ ಆದರೆ ಬ್ರಾಹ್ಮಣ ಪರಿವಾರದಲ್ಲಿ ಇಂತಹ ಮಕ್ಕಳೂ ಸಹ ಇದ್ದಾರೆ ಚಿಕ್ಕ ಮಾತಿನಲ್ಲಿಯೂ ನನ್ನ ಜೊತೆಗಾರರಾಗಿ ಬಿಡುತ್ತಾರೆ. ನನ್ನನ್ನು ಕೂರಿಸಿ ಬಿಡುತ್ತಾರೆ ಅಂದಾಗ ತಮ್ಮ ರಾಜ್ಯವನ್ನು ತರುವುದರಲ್ಲಿ ಈ ನಾಲ್ಕೂ ನಿಶ್ಚಯ ಪರ್ಸೆಂಟ್ನಲ್ಲಿದೆ ಆದ್ದರಿಂದ ಸಮಯವೂ ನಿಂತುಕೊಳ್ಳುತ್ತಿದೆ. ಉಳಿದಂತೆ ಮಾಯೆ ಮತ್ತು ಪ್ರಕೃತಿ ಎರಡೂ ತಯಾರಿದೆ. ಈಗ ಹೇಳಿ ಆದೇಶ ಕೊಡುವುದೇ? ಮಕ್ಕಳು ಒಂದುವೇಳೆ ಎವರೆಡಿಯಾಗಿಲ್ಲವೆಂದರೆ ಮಾಯೆ ಮತ್ತು ಪ್ರಕೃತಿಗೆ ಆದೇಶ ಕೊಡುವುದೇ? ಆದೇಶ ಮಾಡುವುದೇ? ಕೈಯೆತ್ತಿ. ತಯಾರಾಗಿದ್ದೀರಾ? ಹಾಗೆಯೇ ಕೈಯನ್ನು ಎತ್ತಬೇಡಿ. ಪೇಪರ್ ಬರುತ್ತದೆ, ಬಂದೇ ಬರುತ್ತದೆ ಪೇಪರ್. ಎವರೆಡಿ ಆಗಿದ್ದೀರಾ?

ಈಗ ಬಾಪ್ದಾದಾರವರಿಗೆ ಪ್ರತಿಯೊಂದು ಮಗುವಿನ ಮೇಲೆ ಇದೇ ಆಸೆಯಿದೆ - ಹೇಗೆ ಎನ್ನುವುದನ್ನು ಅಳಿಸಿ ಹೀಗೆ ಎಂದು ಮಾಡಿ. ಹೇಗೆ ಮಾಡಲಿ, ಹೇಗಾಗುತ್ತದೆ ಎಂದಲ್ಲ, ಹೀಗೆ ಆಗುತ್ತದೆ. ಏನು ಮಾಡುವುದು ಎಂದಲ್ಲ, ಹೀಗೆ ಮಾಡುವುದು. ಈ ಆಸೆಯನ್ನು ಯಾವಾಗ ಪೂರ್ಣ ಮಾಡುತ್ತೀರಿ? ಎಷ್ಟು ಸಮಯ ಬೇಕು? ಏಕೆಂದರೆ ಎಲ್ಲರೂ ತಯಾರಾಗಬೇಕಾಗಿದೆ. ಒಂದುವೇಳೆ ತಾವು ತಯಾರಾದಿರೆಂದು ಕೈಯೆತ್ತಿದಿರಿ ಅಂದರೆ ಅವರ ಕಾರ್ಯ ಏನಾಗಿದೆ? ಒಬ್ಬರು ಇನ್ನೊಬ್ಬರನ್ನು ತಮ್ಮ ಸಮಾನ ಮಾಡಿಕೊಳ್ಳುವುದು. ಈಗ ಬಾಪ್ದಾದಾರವರೊಂದಿಗೆ ಯಾವ ಪ್ರತಿಜ್ಞೆ ಮಾಡಿದ್ದೀರಿ ಅದನ್ನು ನಿಭಾಯಿಸುತ್ತಾ ಇರಿ. ಸರಿಯೇ ಬಾಪ್ದಾದಾರವರು ಎಲ್ಲಾ ಸಮಾಚಾರಗಳ ಫಲಿತಾಂಶವನ್ನು ಕೇಳಿದ್ದೇವೆ, ಏನೆಲ್ಲಾ ನಡೆದಿದೆ ಚೆನ್ನಾಗಿ ನಡೆದಿದೆ ಮತ್ತು ಫಲಿತಾಂಶವೂ ಸಹ ಬಹಳ ಒಲವು-ಉತ್ಸಾಹಗಳಿಂದ ಕೂಡಿದೆ ಆದ್ದರಿಂದ ಆಗಲೇಬೇಕು, ಮಾಡಲೇಬೇಕು, ಸಮಾಪ್ತಿಯನ್ನು ಸಮೀಪ ತರಬೇಕೆಂದು ಲಕ್ಷ್ಯವನ್ನಿಟ್ಟುಕೊಳ್ಳಿ. ತಾವು ಸ್ವಲ್ಪ ಅಲುಗಾಡುತ್ತೀರಲ್ಲವೆ ಆಗ ಸಮಾಪ್ತಿಯೂ ಸಹ ದೂರವಾಗಿ ಬಿಡುತ್ತದೆ. ತಾವೇ ಸಮಾಪ್ತಿಯನ್ನು ಸಮೀಪ ತರಬೇಕಾಗಿದೆ ಏಕೆಂದರೆ ರಾಜ್ಯ ಮಾಡುವವರು ತಯಾರಿಲ್ಲವೆಂದರೆ ಸಮಯವು ಏನು ಮಾಡುತ್ತದೆ? ಆದ್ದರಿಂದ ಎಲ್ಲಾ ನೆಪಗಳು, ಕಾರಣ, ಕಾರಣ ಶಬ್ಧವನ್ನು ಸಮಾಪ್ತಿ ಮಾಡಿ. ನಿವಾರಣೆಯನ್ನು ಸಮೀಪ ತನ್ನಿ. ಕೈಯನ್ನಂತೂ ಭಲೆ ಕೆಲವರು ಎತ್ತಿದಿರಿ ಆದರೆ ತಮ್ಮೆಲ್ಲರದೂ ಇದೇ ಲಕ್ಷ್ಯವಲ್ಲವೆ - ದುಃಖಿಗಳಿಗೆ ಸಂದೇಶವನ್ನು ಕೊಟ್ಟು ಮುಕ್ತರನ್ನಾಗಿ ಮಾಡುವುದು. ಅವರನ್ನು ಮುಕ್ತರನ್ನಾಗಿ ಮಾಡದೆ ನೀವು ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಅಂದಾಗ ಇವರನ್ನು ಮುಕ್ತರನ್ನಾಗಿ ಮಾಡಿ ಏಕೆಂದರೆ ತಂದೆಯು ಬಂದಿದ್ದಾರಲ್ಲವೆ ಅಂದಾಗ ಇಡೀ ವಿಶ್ವದ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರಲ್ಲವೆ. ತಮಗೆ ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತಾರೆ ಆದರೆ ಎಲ್ಲರೂ ಮಕ್ಕಳಾಗಿದ್ದರಲ್ಲವೆ! ಅವರಿಗೂ ಆಸ್ತಿಯನ್ನಂತೂ ಕೊಡಬೇಕಲ್ಲವೆ! ಅಂದಾಗ ಅವರ ಆಸ್ತಿಯಾಗಿದೆ ಮುಕ್ತಿ, ತಮ್ಮ ಆಸ್ತಿಯಾಗಿದೆ ಜೀವನ್ಮುಕ್ತಿ. ಎಲ್ಲಿಯತನಕ ಮುಕ್ತಿ ಕೊಡುವುದಿಲ್ಲವೆಂದರೆ ತಾವೂ ಸಹ ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ಈ ಡ್ರಿಲ್ ಮಾಡಿ. 24 ಬಾರಿ ಮಾಡಬೇಕು. ರಾತ್ರಿ ಮತ್ತು ಹಗಲು ಸೇರಿ 24 ಗಂಟೆ ಆಗಿದೆ ಮತ್ತು 24 ಬಾರಿ ಮಾಡಬೇಕಾಗಿದೆ, ನಿದ್ರೆಯ ಸಮಯದಲ್ಲಿ ನಿದ್ರೆಯನ್ನು ಭಲೆ ಮಾಡಿ. ನಿದ್ರೆಯನ್ನು ಬಿಟ್ಟು ಮಾಡಿ ಎಂದು ಬಾಪ್ದಾದಾರವರು ಹೇಳುವುದಿಲ್ಲ. ನಿದ್ರೆ ಮಾಡಿ ಆದರೆ ದಿನದಲ್ಲಿ ಹೆಚ್ಚಿಸಿಕೊಳ್ಳಿ. ಯಾವಾಗ ಯಾವುದೇ ಕಾರ್ಯಕ್ರಮವನ್ನು ಮಾಡುತ್ತೀರೆಂದರೆ ಇಡೀ ದಿನ ಕಾರ್ಯವನ್ನು ಮಾಡುತ್ತೀರಲ್ಲವೆ. ಎಚ್ಚರದಿಂದಿರುತ್ತೀರಲ್ಲವೆ. ಹಾಗೆಯೇ ಈ ಡ್ರಿಲ್ಗಾಗಿಯೂ ಸಮಯವನ್ನು ತೆಗೆಯಿರಿ. ಒಳ್ಳೆಯದು.

ನಾಲ್ಕೂ ಕಡೆಯ ತ0ದೆಯ ಸ್ನೇಹಿ, ಯಾರು ಸ್ನೇಹೀ ಆಗಿರುತ್ತಾರೆ ಅವರು ಸಹಯೋಗಿ ಅವಶ್ಯ ಆಗಿರುತ್ತಾರೆ, ಸ್ನೇಹದ ರಿಟರ್ನ್, ಅವರು ಪ್ರತಿ ಕಾರ್ಯದಲ್ಲಿ ತನು-ಮನ-ಧನ-ಜನ ಇದರಲ್ಲಿ ಪರಸ್ಪರ ಸಹಯೋಗಿ ಅವಶ್ಯ ಆಗಿರುತ್ತಾರೆ. ಇ0ತಹ ಸ್ನೇಹಿ ಮತ್ತು ಸಹಯೋಗಿ ಮಕ್ಕಳು, ಯಾರು ಸದಾ ತ0ದೆಯ ಪ್ರೀತಿಯಲ್ಲಿ ಲವಲೀನ ಆಗಿರುತ್ತಾರೆ, ಪ್ರೀತಿಯಲ್ಲಿ ಅಲ್ಲ, ಪ್ರೀತಿಯಲ್ಲಿ ಲೀನ ಆಗಿರುವವರು ಮತ್ತು ಸದಾ ತ0ದೆಯ ಸರ್ವ ಕಾರ್ಯದಲ್ಲಿ ಸಮಯ ಸ0ಕಲ್ಪ ತೊಡಗಿಸುವವರು, ಏಕೆ0ದರೆ ಸ0ಗಮ ಯುಗದಲ್ಲಿ ಸಮಯ ಮತ್ತು ಸ0ಕಲ್ಪದ ಮಹತ್ವ ಬಹಳ ಇದೆ, ಒ0ದು ಜನ್ಮದಲ್ಲಿ ಅನೇಕ ಜನ್ಮಗಳ ಪ್ರಾಲಬ್ಧ ಮಾಡಿಕೊಳ್ಳುವ0ತಹ, ಇ0ತಹ ತೀವ್ರ ಪುರುಷಾರ್ಥಿ ಪ್ರತಿ ಗುಣ, ಪ್ರತಿ ಶಕ್ತಿಯನ್ನು, ಪ್ರತಿ ಸಮಯ ಅನುಸಾರ ಕಾರ್ಯದಲ್ಲಿ ತೊಡಗಿಸುವ0ತಹ ಗುಣ ಸ0ಪನ್ನರಿಗೆ, ಶಕ್ತಿ ಸ0ಪನ್ನ ಮಕ್ಕಳಿಗೆ ಬಹಳ ಬಹಳ ಪದಮಾ ಪದಮದಷ್ಟು ನೆನಪು ಪ್ರೀತಿ ಮತ್ತು ನಮಸ್ತೆ.

ವರದಾನ:
ವಿದಾತನ ಜೊತೆ-ಜೊತೆ ವರದಾತಾ ಆಗಿದ್ದು ಸರ್ವ ಆತ್ಮರುಗಳಲ್ಲಿ ಬಲ ತುಂಬುವಂತಹ ದಯಾಹೃದಯಿ ಭವ.

ಒಂದುವೇಳೆ ಯಾವುದೇ ಆತ್ಮನು ಇಚ್ಛುಕನಾಗಿರುತ್ತಾನೆ ಆದರೆ ಸಾಹಸವಿಲ್ಲದೇ ಇರುವುದರಿಂದ ಬಯಸುತ್ತಿದ್ದರೂ ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದಾಗ ಇಂತಹ ಆತ್ಮರಿಗಾಗಿ ವಿದಾತಾ ಅರ್ಥಾತ್ ಜ್ಞಾನ ದಾತರಾಗುವುದರ ಜೊತೆ-ಜೊತೆ ದಯಾಹೃದಯಿಗಳಾಗಿದ್ದು ವರದಾತಾ ಆಗಿರಿ. ಅವರಿಗೆ ತಮ್ಮ ಶುಭ ಭಾವನೆಯ ವಿಶೇಷ ಬಲವನ್ನು ಕೊಡಿ ಆದರೆ ಯಾವಾಗ ತಮ್ಮ ಪ್ರತೀ ಸಂಕಲ್ಪವು ತಂದೆಗಾಗಿ ಅರ್ಪಣೆಯಾಗಿರುವುದೋ ಆಗಲೇ ಇಂತಹ ವರದಾನಿ ಮೂರ್ತಿಯಾಗಲು ಸಾಧ್ಯವಾಗುವುದು. ಪ್ರತೀ ಸಮಯ, ಪ್ರತೀ ಕರ್ಮದಲ್ಲಿಯೂ ಅರ್ಪಣೆಯಾಗಿರುತ್ತೇನೆ ಎಂಬ ವಚನವನ್ನು ತೆಗೆದುಕೊಳ್ಳಲಾಗಿದೆ, ಅದನ್ನು ಪಾಲನೆ ಮಾಡಿರಿ.

ಸ್ಲೋಗನ್:
ತಮ್ಮ ಸತ್ಯ ಸ್ವರೂಪದ ಸ್ಮೃತಿಯಿದ್ದರೆ ಸತ್ಯತೆಯ ಶಕ್ತಿಯು ಬಂದು ಬಿಡುತ್ತದೆ.

ಅವ್ಯಕ್ತ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಬಾಪ್ದಾದಾ ಈಗ ಒಬ್ಬೊಬ್ಬ ಮಕ್ಕಳ ಮಸ್ತಕದಲ್ಲಿ ಸಂಪೂರ್ಣ ಪವಿತ್ರತೆಯ ಹೊಳೆಯುತ್ತಿರುವ ಮಣಿಯನ್ನು ನೋಡಲು ಬಯಸುತ್ತಾರೆ. ಆತ್ಮೀಯತೆಯಿಂದ ಹೊಳೆಯುತ್ತಿರುವ ನಯನ ನೋಡಲು ಬಯಸುತ್ತಾರೆ, ಮಾತಿನಲ್ಲಿ ಮಧುರತೆ, ವಿಶೇಷತೆ, ಅಮೂಲ್ಯ ಮಾತು ಕೇಳಲು ಬಯಸುತ್ತಾರೆ ಮತ್ತು ಕರ್ಮದಲ್ಲಿ ಸಂತುಷ್ಟತೆ, ನಿರ್ಮಾಣತೆ ಸದಾ ನೋಡಲು ಬಯಸುತ್ತಾರೆ.