19.05.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ –
ಆತ್ಮಾಭಿಮಾನಿ ಭವ, ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ಇದೇ ಅಭ್ಯಾಸ
ಮಾಡುತ್ತಾ ಇರಿ, ಆಗ ನಿಮ್ಮದು ಬಹಳ ಉನ್ನತಿಯಾಗುತ್ತಿರುವುದು”
ಪ್ರಶ್ನೆ:
ತಂದೆಯ
ಆಕ್ಯುರೇಟ್ ನೆನಪು ಯಾವ ಮಕ್ಕಳ ಬುದ್ಧಿಯಲ್ಲಿರುತ್ತದೆ?
ಉತ್ತರ:
ಯಾವ ಮಕ್ಕಳು
ತಂದೆಯನ್ನು ಆಕ್ಯುರೇಟ್ ತಿಳಿದುಕೊಂಡಿರುತ್ತಾರೆ. ಕೆಲವು ಮಕ್ಕಳು ಹೇಳುತ್ತಾರೆ - ಬಿಂದುವನ್ನು
ಹೇಗೆ ನೆನಪು ಮಾಡುವುದು! ಭಕ್ತಿಯಲ್ಲಂತೂ ಅಖಂಡ ಜ್ಯೋತಿ ಎಂದು ತಿಳಿದು ನೆನಪು ಮಾಡುತ್ತಾ ಬಂದಿರಿ,
ಈಗ ಬಿಂದುವೆಂದು ಹೇಳಿದರೆ ತಬ್ಬಿಬ್ಬಾಗುತ್ತಾರೆ ಆದ್ದರಿಂದ ಮೊಟ್ಟ ಮೊದಲು ಈ ನಿಶ್ಚಯವಿರಲಿ -
ತಂದೆಯು ಅಖಂಡ ಜ್ಯೋತಿಯಲ್ಲ, ಅವರಂತೂ ಅತಿಸೂಕ್ಷ್ಮ ಬಿಂದುವಾಗಿದ್ದಾರೆ ಆಗ ನೆನಪು ಆಕ್ಯುರೇಟ್
ಆಗಿರುತ್ತದೆ.
ಓಂ ಶಾಂತಿ.
ಎಲ್ಲಾ ಮಕ್ಕಳು ನೆನಪಿನಲ್ಲಿ ಕುಳಿತಿದ್ದೀರಿ - ಮನ್ಮನಾಭವ. ಈ ಸಂಸ್ಕೃತ ಅಕ್ಷರವು ವಾಸ್ತವದಲ್ಲಿ
ಇಲ್ಲ. ತಂದೆಯು ಯಾವಾಗ ಸಹಜರಾಜಯೋಗವನ್ನು ಕಲಿಸಿದರೋ ಆಗ ಸಂಸ್ಕೃತ ಶಬ್ಧಗಳನ್ನು ಹೇಳಲಿಲ್ಲ. ಇವರಿಗೆ
ಸಂಸ್ಕೃತವು ಗೊತ್ತೇ ಇಲ್ಲ. ತಂದೆಯಂತೂ ಹಿಂದಿ ಭಾಷೆಯಲ್ಲಿಯೇ ತಿಳಿಸುತ್ತಾರೆ. ಭಲೆ ಈ
ರಥ(ಬ್ರಹ್ಮಾ)ವು ಹಿಂದಿ, ಸಿಂಧಿ ಹಾಗೂ ಆಂಗ್ಲ ಭಾಷೆಯನ್ನು ತಿಳಿದುಕೊಂಡಿದ್ದಾರೆ. ಆದರೆ ತಂದೆಯು
ತಿಳಿಸುವುದೇ ಹಿಂದಿ ಭಾಷೆಯಲ್ಲಿ. ಯಾರು ಯಾವ ಧರ್ಮದವರೋ ಅವರದು ತಮ್ಮದೇ ಆದ ಭಾಷೆಯಿರುತ್ತದೆ.
ಇಲ್ಲಿ ಹಿಂದಿ ಭಾಷೆಯೇ ನಡೆಯುತ್ತದೆ. ಈ ಭಾಷೆಯನ್ನು ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ ಮತ್ತು
ಈ ಶಾಲೆಯೂ ವಿಚಿತ್ರವಾಗಿದೆ, ಇದರಲ್ಲಿ ಯಾವುದೇ ಕಾಗದ, ಪೆನ್ಸಿಲ್, ಪೆನ್ ಇತ್ಯಾದಿಗಳ
ಅವಶ್ಯಕತೆಯಿಲ್ಲ. ಇಲ್ಲಂತೂ ಕೇವಲ ಒಂದು ಶಬ್ಧವನ್ನು ನೆನಪು ಮಾಡಬೇಕಾಗಿದೆ ಅರ್ಥಾತ್ ತಂದೆಯನ್ನು
ನೆನಪು ಮಾಡಿ. ಗಾಡ್ಅನ್ನು ಅಥವಾ ಈಶ್ವರ ಅಥವಾ ಪರಮಪಿತ ಪರಮಾತ್ಮನನ್ನು ಯಾರಾದರೂ ನೆನಪು ಮಾಡದೇ
ಇರುವುದು, ಇದು ವಿರಳವಾಗಿದೆ. ನೆನಪಂತೂ ಎಲ್ಲರೂ ಮಾಡುತ್ತಾರೆ ಆದರೆ ಅವರ ಪರಿಚಯವಿಲ್ಲ. ತಂದೆಯೇ
ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಎಷ್ಟು ಸುದೀರ್ಘವಾಗಿ
ಬರೆದಿದ್ದಾರೆ, ಅದನ್ನು ತಂದೆಯೇ ಬಂದು ಸರಿಪಡಿಸುತ್ತಾರೆ. ಇದು ದೊಡ್ಡ ಮಾತೇನೂ ಅಲ್ಲ.
ಇಲ್ಲದಿದ್ದರೆ ಅಹಲ್ಯೆಯರು, ವೃದ್ಧ ಮಾತೆಯರು ಏನು ತಿಳಿದುಕೊಳ್ಳುವರು! ಇದಂತೂ ಬಹಳ ಸಹಜವಾಗಿದೆ.
ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳಬಹುದಾಗಿದೆ. ಬಾಬಾ ಎಂಬ ಶಬ್ಧವು ಹೊಸದೇನಲ್ಲ, ಶಿವನ ಮಂದಿರದಲ್ಲಿ
ಹೋದಾಗ ಇವರು ಶಿವ ತಂದೆಯಾಗಿದ್ದಾರೆ, ನಿರಾಕಾರನಾಗಿದ್ದಾರೆ ಎಂಬುದು ಬುದ್ಧಿಯಲ್ಲಿ ಬರುತ್ತದೆ.
ಎಲ್ಲಾ ಮನುಷ್ಯ ಮಾತ್ರರು ಬಾಬಾ ಎಂದು ಹೇಳುತ್ತಾರೆ. ನಾವು ಸರ್ವ ಆತ್ಮರ ತಂದೆಯು ಒಬ್ಬರೇ
ಆಗಿದ್ದಾರೆ. ಎಲ್ಲಾ ಜೀವಾತ್ಮರು ಯಾರು ಶರೀರದಲ್ಲಿ ನಿವಾಸ ಮಾಡುವರೋ ಎಲ್ಲರೂ ತಂದೆಯನ್ನು ನೆನಪು
ಮಾಡುತ್ತಾರೆ. ಯಾವುದೆಲ್ಲಾ ಧರ್ಮದವರಿದ್ದಾರೆಯೋ ಎಲ್ಲರೂ ಪರಮಪಿತ ಪರಮಾತ್ಮನನ್ನು ಖಂಡಿತ ನೆನಪು
ಮಾಡುತ್ತಾರೆ. ಅವರು ಪರಮಧಾಮದಲ್ಲಿರುವ ತಂದೆಯಾಗಿದ್ದಾರೆ, ನಾವೂ ಸಹ ಅಲ್ಲಿನ ನಿವಾಸಿಗಳಾಗಿದ್ದೇವೆ
ಅಂದಾಗ ಕೇವಲ ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ, ನಾವು ಪಾವನರಾಗಬೇಕೆಂಬುದು ಎಲ್ಲರಿಗೂ
ಇಷ್ಟವಿದೆ, ಹೇ ಪತಿತರನ್ನು ಪಾವನ ಮಾಡುವವರೇ ಬನ್ನಿ ಎಂದು ಕರೆಯುತ್ತಾರೆ. ಹೊಸ ಪ್ರಪಂಚವು
ಪಾವನವಾಗಿತ್ತು, ಈಗ ಹಳೆಯದಾಗಿ ಬಿಟ್ಟಿದೆ. ಇದಕ್ಕೆ ಯಾರೂ ಹೊಸದೆಂದು ಹೇಳುವುದಿಲ್ಲ.
ಭಾರತವಾಸಿಗಳಿಗೆ ತಿಳಿದಿದೆ - ಹೊಸ ಭಾರತದಲ್ಲಿ ದೇವಿ-ದೇವತೆಗಳು ರಾಜ್ಯ ಮಾಡುತ್ತಿದ್ದರು. ಹೊಸ
ಭಾರತಕ್ಕೆ ಮೊದಲು ಏನಿತ್ತು? ಸಂಗಮ. ಇದಕ್ಕಿಂತಲೂ ಸಹಜವಾಗಿ ಹೇಳಬೇಕು. ಹೊಸದಕ್ಕೆ ಮೊದಲೇ
ಹಳೆಯದಿತ್ತು, ಸಂಗಮವನ್ನು ಮನುಷ್ಯರು ಅಷ್ಟು ಸಹಜವಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಹೊಸ ಪ್ರಪಂಚ,
ಹಳೆಯ ಪ್ರಪಂಚದ ಇದರ ಮಧ್ಯದ ಸಮಯಕ್ಕೆ ಸಂಗಮವೆಂದು ಹೇಳುತ್ತಾರೆ. ತಂದೆಗಾಗಿಯೇ ಹೇಳುತ್ತಾರೆ - ಹೇ
ಪತಿತ ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ, ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು. ಹೊಸ
ಪ್ರಪಂಚದಲ್ಲಿ ಯಾರೂ ಕರೆಯುವುದಿಲ್ಲ, ಈಗ ನಿಮಗೆ ಅರ್ಥವಾಗಿದೆ - ಈ ಭಾರತವೇ ಪಾವನವಾಗಿತ್ತು, ಹೇ
ಪತಿತ-ಪಾವನ ಬನ್ನಿ ಎಂದು ಬಹಳ ಸಮಯದಿಂದಲೂ ಕರೆಯುತ್ತಾ ಬಂದಿದ್ದಾರೆ ಆದರೆ ಪತಿತ ಪ್ರಪಂಚವು ಯಾವಾಗ
ಕೊನೆಯಾಗುವುದು ಎಂಬುದು ಅವರಿಗೆ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಇನ್ನೂ 40 ಸಾವಿರ ವರ್ಷಗಳು
ಪತಿತರಾಗಿಯೇ ಇರುತ್ತೇವೆ ಎಂದು ಬರೆದಿದ್ದಾರೆ ಎಂದು ಹೇಳುತ್ತಾರೆ. ಸಂಪೂರ್ಣ ಘೋರ
ಅಂಧಕಾರದಲ್ಲಿದ್ದಾರೆ. ನೀವೀಗ ಬೆಳಕಿನಲ್ಲಿದ್ದೀರಿ. ತಂದೆಯು ನಿಮ್ಮನ್ನು ಪ್ರಕಾಶತೆಯಲ್ಲಿ
ತಂದಿದ್ದಾರೆ, ಈ 5000 ವರ್ಷಗಳಲ್ಲಿ ಸೃಷ್ಟಿಚಕ್ರವು ಪೂರ್ಣವಾಗುತ್ತದೆ, ನೆನ್ನೆಯ ಮಾತಾಗಿದೆ. ನೀವು
ರಾಜ್ಯ ಮಾಡುತ್ತಿದ್ದಿರಿ, ಅವಶ್ಯವಾಗಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಸ್ವರ್ಗವಿತ್ತು,
ಪಾವನ ಪ್ರಪಂಚದಲ್ಲಿ ಯಾವುದೇ ಉಪದ್ರವಗಳಾಗಲು ಸಾಧ್ಯವಿಲ್ಲ. ಉಪದ್ರವಗಳಾಗುವುದೇ ರಾವಣ ರಾಜ್ಯದಲ್ಲಿ.
ಇಲ್ಲಿ ನಿಮಗೆ ತಂದೆಯು ತಿಳಿಸುತ್ತಾರೆ - ನೀವು ಸನ್ಮುಖದಲ್ಲಿ ಕಿವಿಗಳಿಂದ ಕೇಳುತ್ತೀರಿ, ಕೇಳುವವರು
ಯಾರು? ಆತ್ಮ. ಆತ್ಮಕ್ಕೆ ಬಹಳ ಖುಷಿಯಾಗುತ್ತದೆ, ತಂದೆಯು ಪುನಃ ಬಂದು ನಮ್ಮನ್ನು ಮಿಲನ ಮಾಡಿದ್ದಾರೆ.
ತಂದೆಯಿಂದ ಆಸ್ತಿಯು ಸಿಕ್ಕಿತ್ತು, ಈಗ ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿ, ಇದರಲ್ಲಿ
ಓದುವ-ಬರೆಯುವ ಮಾತಿಲ್ಲ. ಯಾರಾದರೂ ಬಂದಾಗ ಕೇಳಲಾಗುತ್ತದೆ - ತಾವು ಹೇಗೆ ಬಂದಿರಿ ಎಂದು. ಆಗ
ಇಲ್ಲಿನ ಮಹಾತ್ಮರೊಂದಿಗೆ ಮಿಲನ ಮಾಡಲು ಬಂದೆವೆಂದು ಹೇಳುತ್ತಾರೆ. ಏಕೆ ನಿಮಗೆ ಏನು ಬೇಕು? ಯಾವುದೇ
ಭಿಕ್ಷೆಯು ಬೇಕೆ? ಸನ್ಯಾಸಿಗಳಾಗಿದ್ದರೆ ರೊಟ್ಟಿ ತುಂಡು ಬೇಕು, ಸನ್ಯಾಸಿಗಳು ಯಾರ ಬಳಿಯಾದರೂ
ಹೋಗುತ್ತಾರೆ ಅಥವಾ ಮಾರ್ಗ ಮಧ್ಯದಲ್ಲಿ ಸಿಗುತ್ತಾರೆಂದರೆ ಧಾರ್ಮಿಕ ವ್ಯಕ್ತಿಗಳು ಇವರು ಪವಿತ್ರ
ಮನುಷ್ಯರಾಗಿದ್ದಾರೆ, ಇವರಿಗೆ ಭೋಜನವನ್ನು ಕೊಡುವುದು ಬಹಳ ಒಳ್ಳೆಯದು ಎಂದು ತಿಳಿಯುತ್ತಾರೆ. ಈಗಂತೂ
ಸನ್ಯಾಸಿಗಳಲ್ಲಿಯೂ ಪವಿತ್ರತೆಯಿಲ್ಲ, ತಮೋಪ್ರಧಾನ ಪ್ರಪಂಚವಾಗಿದೆ. ಇದರಲ್ಲಿ ಬಹಳ ಕೊಳಕಿದೆ.
ಮನುಷ್ಯರು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಇಲ್ಲಂತೂ ಆ ಮಾತೇ ಇಲ್ಲ. ತಂದೆಯು
ತಿಳಿಸುತ್ತಾರೆ - ಇಲ್ಲಿ ಬರೆಯುವ ಮಾತೂ ಇಲ್ಲ, ಈ ಜ್ಞಾನ ಬಿಂದುಗಳನ್ನು ಧಾರಣೆ
ಮಾಡಿಕೊಳ್ಳುವುದಕ್ಕಾಗಿ ಬರೆಯಬೇಕಾಗುತ್ತದೆ. ಹೇಗೆ ವೈದ್ಯರ ಬಳಿ ಎಷ್ಟೊಂದು ಔಷಧಿಗಳು ಇರುತ್ತವೆಯೋ
ಅಷ್ಟೆಲ್ಲಾ ಔಷಧಿಗಳು ನೆನಪಿರುತ್ತವೆ. ವಕೀಲರ ಬುದ್ಧಿಯಲ್ಲಿ ಎಷ್ಟೊಂದು ಕಾನೂನಿನ ಮಾತುಗಳು
ನೆನಪಿರುತ್ತವೆ. ನೀವು ಏನನ್ನು ನೆನಪು ಮಾಡಿಕೊಳ್ಳಬೇಕು. ಕೇವಲ ಒಂದು ಮಾತು, ಅದೂ ಸಹ ಬಹಳ
ಸಹಜವಾಗಿದೆ. ನೀವು ಹೇಳುತ್ತೀರಿ - ಒಬ್ಬ ಶಿವ ತಂದೆಯನ್ನು ನೆನಪು ಮಾಡಿರಿ. ಶಿವ ತಂದೆಯು ಹೇಗೆ
ಬರುತ್ತಾರೆಂದು ಅವರು ಕೇಳುತ್ತಾರೆ. ಇದನ್ನೂ ಸಹ ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ.
ಈಶ್ವರ ಎಲ್ಲಿದ್ದಾರೆಂದು ಕೇಳಿದರೆ ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ ಮತ್ತು
ಸರ್ವವ್ಯಾಪಿಯೆಂದೂ ಹೇಳಿ ಬಿಡುತ್ತಾರೆ. ಎರಡು ಶಬ್ಧಗಳಲ್ಲಿ ರಾತ್ರಿ-ಹಗಲಿನ ವ್ಯತ್ಯಾಸ ಆಗಿ
ಬಿಡುತ್ತದೆ. ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಪರಮಾತ್ಮನು ನಾಯಿ, ಬೆಕ್ಕು
ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿ ಬಿಡುತ್ತಾರೆ. ಎರಡೂ ಒಂದಕ್ಕೆ ಇನ್ನೊಂದು ವಿರುದ್ಧವಾದ
ಮಾತುಗಳಾಯಿತು ಆದ್ದರಿಂದ ತಂದೆಯು ತಮ್ಮ ಪರಿಚಯ ನೀಡಿ ಹೇಳುತ್ತಾರೆ - ತಂದೆಯಾದ ನನ್ನನ್ನು ನೆನಪು
ಮಾಡಿ, ಸಹಜ ರಾಜಯೋಗ ಎಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯೋಗ ಎಂಬ ಶಬ್ಧವನ್ನೂ
ತೆಗೆದು ಹಾಕಿ. ನೆನಪು ಮಾಡಿ. ಹೇಗೆ ಚಿಕ್ಕ ಮಕ್ಕಳು ತಂದೆ-ತಾಯಿಯನ್ನು ನೋಡುತ್ತಿದ್ದಂತೆಯೇ ಕೂಡಲೇ
ಅವರನ್ನು ಅಪ್ಪಿಕೊಳ್ಳುತ್ತಾರೆ. ಇವರು ನಮ್ಮ ತಂದೆ-ತಾಯಿಯೋ ಅಥವಾ ಅಲ್ಲವೋ ಎಂದು ಆಲೋಚಿಸುತ್ತಾರೆಯೇ?
ಹಾಗೆಯೇ ಇದರಲ್ಲಿಯೂ ಆಲೋಚಿಸುವ ಮಾತಿಲ್ಲ. ನೀವೂ ಸಹ ಕೇವಲ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ.
ಭಕ್ತಿ ಮಾರ್ಗದಲ್ಲಿಯೂ ನೀವು ಶಿವನ ಮೇಲೆ ಹೂಗಳನ್ನು ಹಾಕುತ್ತಾ ಬಂದಿದ್ದೀರಿ. ಸೋಮನಾಥ ಮಂದಿರವನ್ನು
ಎಷ್ಟು ಬೃಹದಾಕಾರವಾಗಿ ಕಟ್ಟಿಸಿದ್ದಾರೆ, ಅದನ್ನು ನಂತರದಲ್ಲಿ ಮಹಮ್ಮದ್ ಘಜ್ನಿಯು ಬಂದು ಲೂಟಿ
ಮಾಡಿದನು. ಭಾರತದಲ್ಲಿ ಸೋಮನಾಥ ಮಂದಿರವು ಸುಪ್ರಸಿದ್ಧವಾಗಿದೆ. ಎಲ್ಲದಕ್ಕಿಂತ ಮೊದಲು ಶಿವನ
ಪೂಜೆಯಾಗಬೇಕು. ಮಕ್ಕಳಿಗೆ ಇದೆಲ್ಲಾ ಜ್ಞಾನದ ಮಾತುಗಳು ಈಗ ಬುದ್ಧಿಯಲ್ಲಿ ಬಂದಿದೆ. ಭಲೆ ಪೂಜೆ
ಇತ್ಯಾದಿಗಳನ್ನು ಮಾಡುತ್ತಾ ಬಂದಿದ್ದೀರಿ ಆದರೆ ಇವು ಜಡ ಚಿತ್ರಗಳೆಂಬುದು ನಿಮಗೆ ತಿಳಿದಿರಲೇ ಇಲ್ಲ.
ಅವಶ್ಯವಾಗಿ ಚೈತನ್ಯದಲ್ಲಿ ಬಂದಿರಬೇಕು ಆದ್ದರಿಂದಲೇ ವರ್ಷ-ವರ್ಷವೂ ಶಿವ ಜಯಂತಿಯನ್ನು
ಆಚರಿಸುತ್ತಾರೆ. ಇದನ್ನೂ ಹೇಳುತ್ತಾರೆ – ಶಿವ ಪರಮಾತ್ಮನು ನಿರಾಕಾರನಾಗಿದ್ದಾರೆ, ನಾವೂ ಸಹ
ನಿರಾಕಾರಿಯಾಗಿದ್ದೇವೆಂದು ಆತ್ಮಕ್ಕೆ ತಿಳಿದಿದೆ. ನೀವೀಗ ಆತ್ಮಾಭಿಮಾನಿಯಾಗುತ್ತೀರಿ. ಬಹಳ
ಸಹಜವಾಗಿದೆ. ಅವರಂತೂ ನಮ್ಮ ತಂದೆಯಾಗಿದ್ದಾರೆ, ಜ್ಞಾನ ಸಾಗರ, ಸುಖದ ಸಾಗರ, ಪತಿತ-ಪಾವನನಾಗಿದ್ದಾರೆ.
ಅವರಿಗೆ ಬಹಳ ಮಹಿಮೆಯಿದೆ. ಬ್ರಹ್ಮಾ-ವಿಷ್ಣು-ಶಂಕರರಿಗೆ ಇಷ್ಟೊಂದು ಮಹಿಮೆಯಿಲ್ಲ. ಒಬ್ಬರ
ಮಹಿಮೆಯನ್ನು ಹಾಡುತ್ತಾರೆ, ಆ ತಂದೆಯೇ ಬಂದು ಆಸ್ತಿಯನ್ನು ಕೊಡುತ್ತಿದ್ದಾರೆಂದು ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ. ಹೇಗೆ ಲೌಕಿಕ ತಂದೆಯು ಮಕ್ಕಳ ಲಾಲನೆ-ಪಾಲನೆ ಮಾಡುತ್ತಾರೆ ಆದರೆ
ಓದಿಸುವುದಿಲ್ಲ. ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗುತ್ತಾರೆ ಮತ್ತೆ ವಾನಪ್ರಸ್ಥದಲ್ಲಿ ಗುರುಗಳನ್ನು
ಮಾಡಿಕೊಳ್ಳುತ್ತಾರೆ ಇತ್ತೀಚೆಗಂತೂ ಹಿರಿಯರು-ಕಿರಿಯರು ಎಲ್ಲರಿಗೂ ಧೀಕ್ಷೆ ಕೊಡಿಸಿ ಬಿಡುತ್ತಾರೆ.
ಇಲ್ಲಂತೂ ನೀವು ಮಕ್ಕಳಿಗೆ ಶಿವ ತಂದೆಯನ್ನು ನೆನಪು ಮಾಡಿ ಎಂದು ಹೇಳಲಾಗುತ್ತದೆ. ಎಲ್ಲರಿಗೂ
ಹಕ್ಕಿದೆ, ಎಲ್ಲರೂ ನನ್ನ ಮಕ್ಕಳಾಗಿದ್ದಾರೆ. ನಿಮ್ಮಲ್ಲಿಯೂ ಕೆಲವರೇ ಬಹಳ ಚೆನ್ನಾಗಿ ನೆನಪು
ಮಾಡುತ್ತಾರೆ. ಇನ್ನೂ ಕೆಲವರಂತೂ ಬಾಬಾ, ಯಾರನ್ನು ನೆನಪು ಮಾಡುವುದು? ಬಿಂದುವನ್ನು ಹೇಗೆ ನೆನಪು
ಮಾಡುವುದು ಎಂದು ಹೇಳುತ್ತಾರೆ. ದೊಡ್ಡ ವಸ್ತುವನ್ನು ನೆನಪು ಮಾಡಲಾಗುತ್ತದೆ. ಪರಮಾತ್ಮ, ಯಾರನ್ನು
ನೀವು ನೆನಪು ಮಾಡುತ್ತೀರೋ ಅವರು ಹೇಗಿದ್ದಾರೆ? ಮನುಷ್ಯರು ಅವರಿಗೆ ಅಖಂಡ ಜ್ಯೋತಿ ಸ್ವರೂಪ ಎಂದು
ಹೇಳಿ ಬಿಡುತ್ತಾರೆ ಆದರೆ ಆ ರೀತಿಯಿಲ್ಲ. ಅಖಂಡ ಜ್ಯೋತಿಯನ್ನು ನೆನಪು ಮಾಡುವುದು ತಪ್ಪಾಗಿ
ಬಿಡುತ್ತದೆ. ನೆನಪಂತೂ ಆಕ್ಯುರೇಟ್ ಆಗಿರಬೇಕು. ತಂದೆಯೇ ಬಂದು ತಮ್ಮ ಪರಿಚಯ ಕೊಡುತ್ತಾರೆ ಮತ್ತೆ
ಮಕ್ಕಳಿಗೆ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸಮಾಚಾರವನ್ನೂ ತಿಳಿಸುತ್ತಾರೆ. ಸಾರ ರೂಪದಲ್ಲಿಯೂ
ಮತ್ತು ವಿವರವಾಗಿಯೂ ತಿಳಿಸುತ್ತಾರೆ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು
ಪಾವನರಾಗಬೇಕೆಂದರೆ ಅದಕ್ಕಾಗಿ ಒಂದೇ ಉಪಾಯವಿದೆ - ನನ್ನನ್ನು ನೆನಪು ಮಾಡಿ, ಪತಿತ-ಪಾವನ ಎಂದು ನನಗೇ
ಹೇಳುತ್ತೀರಿ, ಆತ್ಮವನ್ನು ಈಗ ಪಾವನ ಮಾಡಿಕೊಳ್ಳಬೇಕಾಗಿದೆ. ನಾವು ಪತಿತರಾಗಿ ಬಿಟ್ಟಿದ್ದೇವೆ.
ಪಾವನರಾಗಿದ್ದೆವು, ಈಗ ಪಾವನರಾಗಿದ್ದೇವೆ ಎಂದು ಆತ್ಮವೇ ಹೇಳುತ್ತದೆ. ಎಲ್ಲರೂ
ತಮೋಪ್ರಧಾನರಾಗಿದ್ದಾರೆ. ಪ್ರತಿಯೊಂದು ವಸ್ತುವು ಮೊದಲು ಸತೋಪ್ರಧಾನ ನಂತರ ತಮೋಪ್ರಧಾನವಾಗುತ್ತದೆ.
ಆತ್ಮವೇ ಹೇಳುತ್ತದೆ - ನಾನು ಪತಿತನಾಗಿದ್ದೇನೆ, ನನ್ನನ್ನು ಪಾವನ ಮಾಡಿರಿ. ಶಾಂತಿಧಾಮದಲ್ಲಿ
ಪತಿತರಿರುವುದಿಲ್ಲ. ಇಲ್ಲಿ ಪತಿತರಾಗಿದ್ದಾರೆ ಆದ್ದರಿಂದ ದುಃಖಿಯಾಗಿದ್ದಾರೆ, ಪಾವನರಾಗಿದ್ದಾಗ
ಸುಖಿಯಾಗಿದ್ದಿರಿ ಆದ್ದರಿಂದ ಆತ್ಮವೇ ಹೇಳುತ್ತದೆ - ನಮ್ಮನ್ನು ಪಾವನ ಮಾಡಿರಿ, ಅದರಿಂದ ನಾವು
ಮುಕ್ತರಾಗಬೇಕು ಎಂದು. ನೀವು ತಿಳಿದುಕೊಂಡಿದ್ದೀರಿ - ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಜಡ್ಜ್,
ವಕೀಲ ಇತ್ಯಾದಿ ಆತ್ಮವೇ ಆಗುತ್ತದೆ. ನಾನು ರಾಜನಾಗಿದ್ದೇನೆ, ಇಂತಹವನಾಗಿದ್ದೇನೆ, ಈಗ ಈ ಶರೀರವನ್ನು
ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕು ಎಂದು ಆತ್ಮವೇ ಹೇಳುತ್ತದೆ. ಇದಕ್ಕೇ ಆತ್ಮಾಭಿಮಾನಿ
ಸ್ಥಿತಿಯೆಂದು ಹೇಳಲಾಗುತ್ತದೆ. ದೇಹದಲ್ಲಿದ್ದರೂ ಆತ್ಮ ಅಭಿಮಾನಿ. ರಾವಣ ರಾಜ್ಯದಲ್ಲಿ
ದೇಹಾಭಿಮಾನಿಗಳಿರುತ್ತಾರೆ. ಆತ್ಮಾಭಿಮಾನಿಗಳನ್ನಾಗಿ ತಂದೆಯು ಈಗಲೇ ಮಾಡುತ್ತಾರೆ. ಈ ಸಮಯದಲ್ಲಿ
ಆತ್ಮವು ಪತಿತ, ದುಃಖಿ ಆಗಿರುವುದರಿಂದ ಹೇ ತಂದೆಯೇ ಬನ್ನಿ ಎಂದು ಕರೆಯುತ್ತದೆ, ಇದನ್ನೂ ಸಹ ನೀವು
ತಿಳಿದುಕೊಂಡಿದ್ದೀರಿ - ಡ್ರಾಮಾ ಪ್ಲಾನನುಸಾರ ಪತಿತರಿಂದ ಪಾವನ, ಪಾವನರಿಂದ ಪತಿತರಾಗುತ್ತಾ
ಬಂದಿದ್ದೀರಿ. ಚಕ್ರವು ಸುತ್ತುತ್ತಲೇ ಇರುತ್ತದೆ. ನಮ್ಮದು 84 ಜನ್ಮಗಳು ಹೇಗಾಯಿತು ಎಂಬುದು ಈಗ
ನಿಮ್ಮ ಬುದ್ಧಿಯಲ್ಲಿ ಕುಳಿತಿದೆ. ಈ ಮಾತನ್ನು ಮರೆಯಬೇಡಿ. ಸ್ವದರ್ಶನ ಚಕ್ರಧಾರಿಗಳಾಗಿ ಇರಿ.
ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ನಮಗೆ ಸಂಪೂರ್ಣ
ಜ್ಞಾನವಿದೆ, ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು
ನೀವು ತಿಳಿದುಕೊಂಡಿದ್ದೀರಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನೀವು ಒಬ್ಬ
ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡಿ, ತುಂಡು ರೊಟ್ಟಿಯನ್ನು ತಿನ್ನಿರಿ
ಸಾಕು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ತಂದೆಯು ಮತ್ತೆ-ಮತ್ತೆ ಹೇಳುತ್ತಾರೆ - ಮಕ್ಕಳೇ, ಹೊಟ್ಟೆಗಾಗಿ
ಕೇವಲ ತುಂಡು ರೊಟ್ಟಿಯನ್ನು ತಿಂದರೆ ಸಾಕು, ಹೊಟ್ಟೆಯು ಜಾಸ್ತಿ ಕೇಳುವುದಿಲ್ಲ. ಕೇವಲ ಒಂದು ಪಾವು
ಹಿಟ್ಟು ಸಾಕು. ರೊಟ್ಟಿ-ಪಲ್ಯ ಸಾಕು. 10 ರೂಪಾಯಿಗಳಲ್ಲಿಯೂ ಮನುಷ್ಯರು ಹೊಟ್ಟೆ
ತುಂಬಿಸಿಕೊಳ್ಳುತ್ತಾರೆ, ಇನ್ನೂ ಕೆಲವರು 10 ಸಾವಿರ ರೂಪಾಯಿಗಳಲ್ಲಿಯೂ ಹೊಟ್ಟೆಯನ್ನು
ತುಂಬಿಸಿಕೊಳ್ಳುತ್ತಾರೆ. ಬಡವರು ತಿನ್ನುವುದಾದರೂ ಏನು! ಆದರೂ ಸಹ ಗಟ್ಟಿ ಮುಟ್ಟಾಗಿ ಇರುತ್ತಾರೆ.
ಭಿನ್ನ-ಭಿನ್ನ ಪದಾರ್ಥಗಳನ್ನು ಮನುಷ್ಯರು ತಿನ್ನುವುದರಿಂದ ಇನ್ನೂ ರೋಗಿಯಾಗಿ ಬಿಡುತ್ತಾರೆ.
ವೈದ್ಯರೂ ಸಹ ಇದನ್ನೇ ಹೇಳುತ್ತಾರೆ – ಒಂದು ಪ್ರಕಾರದ ಆಹಾರವನ್ನು ಸೇವಿಸಿ ಆಗ ರೋಗಿಯಾಗುವುದಿಲ್ಲ.
ಇಲ್ಲಿ ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳೇ ತುಂಡು ರೊಟ್ಟಿಯನ್ನು ತಿನ್ನಿರಿ, ಏನು ಸಿಕ್ಕಿದರೆ
ಅದರಲ್ಲಿ ಖುಷಿಯಾಗಿ ಇರಿ. ರೊಟ್ಟಿ-ಪಲ್ಯದಷ್ಟು ಒಳ್ಳೆಯದು ಮತ್ತ್ಯಾವುದೂ ಇಲ್ಲ, ಹೆಚ್ಚು ಲೋಭವೂ
ಇರಬಾರದು. ಸನ್ಯಾಸಿಗಳು ಏನು ಮಾಡುತ್ತಾರೆ? ಮನೆ-ಮಠವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ.
ತತ್ವವನ್ನೇ ಪರಮಾತ್ಮನೆಂದು ತಿಳಿದು ನೆನಪು ಮಾಡುತ್ತಾರೆ. ಬ್ರಹ್ಮತತ್ವದಲ್ಲಿ ಲೀನವಾಗಿ
ಬಿಡುತ್ತೇವೆಂದು ತಿಳಿಯುತ್ತಾರೆ ಆದರೆ ಈ ರೀತಿಯಂತೂ ಇಲ್ಲ. ಆತ್ಮವು ಅಮರನಾಗಿದೆ, ಲೀನವಾಗುವ ಮಾತೇ
ಇಲ್ಲ ಬಾಕಿ ಆತ್ಮವೇ ಪವಿತ್ರ, ಅಪವಿತ್ರನಾಗುತ್ತದೆ, ನಿಮಗೆ ಎಷ್ಟು ಒಳ್ಳೆಯ ಜ್ಞಾನ ಸಿಕ್ಕಿದೆ.
ನೀವೇ ಪ್ರಾಲಬ್ಧವನ್ನು ಭೋಗಿಸುತ್ತೀರಿ ನಂತರ ಈ ಜ್ಞಾನವು ಮರೆತುಹೋಗುತ್ತದೆ ಮತ್ತೆ ಏಣಿಯನ್ನು
ಕೆಳಗಿಳಿಯಲಾಗುತ್ತದೆ. ಈಗ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ - ನಾವು ಹೇಗೆ 84
ಜನ್ಮಗಳನ್ನು ಭೋಗಿಸುತ್ತೇವೆ ಎಂದು. ಈ ಪಾತ್ರವು ಎಂದೂ ಯಾರದೂ ನಿಂತುಹೋಗುವುದಿಲ್ಲ. ಇದು
ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಸುತ್ತುತ್ತಲೇ ಇರುತ್ತದೆ. ಇದನ್ನು ಭಗವಂತನು ಯಾವಾಗ ಹೇಗೆ, ಎಲ್ಲಿ
ಕುಳಿತು ಮಾಡಿದರೋ ಎಂದು ಹೇಳುವಂತಿಲ್ಲ. ಇದಂತೂ ನಡೆಯುತ್ತಲೇ ಬರುತ್ತದೆ. ವಿಶ್ವದ
ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತಲೇ ಇರುತ್ತದೆ. ಈ ಮಾತುಗಳನ್ನು ಯಾರೂ
ತಿಳಿದುಕೊಳ್ಳುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ - ನಾವು ಡ್ರಾಮಾ ಪ್ಲಾನನುಸಾರ ಬಂದಿದ್ದೇವೆ,
ಈಗ ಪುನಃ ಡ್ರಾಮಾ ಅನುಸಾರ ರಾಜ್ಯವನ್ನೂ ಪಡೆಯುತ್ತಿದ್ದೇವೆ, ಈ ಮಾತುಗಳು ಮತ್ತ್ಯಾರಿಗೂ
ಅರ್ಥವಾಗುವುದಿಲ್ಲ. ತಂದೆಯು ಕೇಳುತ್ತಾರೆ - ಡ್ರಾಮಾ ಸರ್ವಶಕ್ತಿವಂತನೋ ಅಥವಾ ಈಶ್ವರನು
ಸರ್ವಶಕ್ತಿವಂತನೋ? ಆಗ ಈಶ್ವರನೇ ಸರ್ವಶಕ್ತಿವಂತನೆಂದು ಹೇಳುತ್ತಾರೆ. ಅವರು ಏನು ಬೇಕಾದರೂ
ಮಾಡಬಲ್ಲರು ಎಂದು ತಿಳಿಯುತ್ತಾರೆ ಆದರೆ ತಂದೆಯು ಹೇಳುತ್ತಾರೆ - ನಾನೂ ಸಹ ಡ್ರಾಮಾದ ಬಂಧನದಲ್ಲಿ
ಬಂಧಿತನಾಗಿದ್ದೇನೆ. ಪತಿತರನ್ನು ಪಾವನ ಮಾಡಲು ನಾನು ಬರಬೇಕಾಗುತ್ತದೆ. ಸತ್ಯಯುಗದಲ್ಲಿ ನೀವು
ಸುಖಿಯಾಗಿ ಬಿಡುತ್ತೀರಿ. ಆಗ ನಾನೂ ಸಹ ಹೋಗಿ ಪರಮಧಾಮದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ.
ನೀವು ತುತ್ತ ತುದಿಯನ್ನು ಏರುತ್ತೀರಿ, ನಿಮ್ಮದು ಸಿಂಹದ ಮೇಲೆ ಸವಾರಿಯಿದೆ.
ನಿಮಗೆ ತಿಳಿದಿದೆ -
ಕ್ಷಣ-ಪ್ರತಿಕ್ಷಣ ಏನೆಲ್ಲವೂ ನಡೆಯುತ್ತದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ. ನೀವು ಮಕ್ಕಳಿಗೆ
ಎಷ್ಟು ಒಳ್ಳೆಯ ಜ್ಞಾನವಿದೆ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿದರೆ ಸಾಕು. ಕಾಗದ,
ಪೆನ್ಸಿಲ್ ಇತ್ಯಾದಿ ಯಾವುದರ ಅವಶ್ಯಕತೆಯೂ ಇಲ್ಲ. ಬ್ರಹ್ಮಾ ತಂದೆಯೂ ಓದುತ್ತಾರೆ, ಇವರು ಏನನ್ನೂ
ಇಟ್ಟುಕೊಳ್ಳುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದು, ಎಷ್ಟು
ಸಹಜವಾಗಿದೆ! ನೆನಪಿನಿಂದ ನೀವು ಸದಾ ಆರೋಗ್ಯವಂತರಾಗುವಿರಿ. ಇದು ಧಾರಣೆಯ ಮಾತಾಗಿದೆ. ಕೇವಲ
ಬರೆದುಕೊಳ್ಳುವುದರಿಂದ ಏನು ಲಾಭ! ಈ ಬರೆದಿರುವುದೆಲ್ಲವೂ ವಿನಾಶವಾಗಿ ಬಿಡುವುದು, ಆದರೆ ಕೆಲವರು
ನೆನಪಿರಲಿ ಎಂದು ಬರೆದಿಟ್ಟುಕೊಳ್ಳುತ್ತಾರೆ. ಹೇಗೆ ಯಾವುದೇ ಮಾತನ್ನು ನೆನಪಿಟ್ಟುಕೊಳ್ಳಬೇಕೆಂದರೆ
ಒಂದು ಕಡೆ ಗಂಟು ಹಾಕಿಕೊಳ್ಳುತ್ತಾರೆ. ನೀವೂ ಸಹ ಗಂಟು ಹಾಕಿಕೊಳ್ಳಿ, ಶಿವ ತಂದೆ ಮತ್ತು
ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ಇದಂತೂ ಬಹಳ ಸಹಜವಾಗಿದೆ - ಯೋಗ ಅರ್ಥಾತ್ ನೆನಪು. ಬಾಬಾ,
ನೆನಪು ನಿಲ್ಲುವುದಿಲ್ಲ, ಯೋಗದಲ್ಲಿ ಹೇಗೆ ಕುಳಿತುಕೊಳ್ಳುವುದು ಎಂದು ಕೆಲವರು ಹೇಳುತ್ತಾರೆ. ಅರೆ!
ಲೌಕಿಕ ತಂದೆಯ ನೆನಪು ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಲೂ ಸಹಜವಾಗಿ
ಇರುತ್ತದೆ. ನೀವೂ ಸಹ ಕೇವಲ ನೆನಪು ಮಾಡಿರಿ. ದೋಣಿಯು ಪಾರಾಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸ್ವದರ್ಶನ
ಚಕ್ರಧಾರಿಗಳಾಗಿ 84 ಜನ್ಮಗಳ ಚಕ್ರವನ್ನು ಬುದ್ಧಿಯಲ್ಲಿ ತಿರುಗಿಸುತ್ತಾ ಇರಬೇಕಾಗಿದೆ. ಬೇಹದ್ದಿನ
ತಂದೆಯನ್ನು ನೆನಪು ಮಾಡಿ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕು, ಪಾವನರಾಗಬೇಕಾಗಿದೆ.
2. ಯಾವುದೇ ಪದಾರ್ಥದ
ಲೋಭವಿರಬಾರದು, ಏನು ಸಿಕ್ಕಿದೆಯೋ ಅದರಲ್ಲಿ ಖುಷಿಯಾಗಿರಬೇಕಾಗಿದೆ. ತುಂಡು ರೊಟ್ಟಿಯನ್ನು
ತಿನ್ನಬೇಕು, ತಂದೆಯ ನೆನಪಿನಲ್ಲಿರಬೇಕಾಗಿದೆ.
ವರದಾನ:
ಸರ್ವರ ಹೃದಯಗಳ
ರಹಸ್ಯವನ್ನು ತಿಳಿದುಕೊಂಡು ಸರ್ವರನ್ನು ಖುಷಿ ಪಡಿಸುವಂತಹ ಸದಾ ವಿಜಯಿ ಭವ.
ವಿಜಯಿಯಾಗುವುದಕ್ಕಾಗಿ
ಪ್ರತಿಯೊಬ್ಬರ ಹೃದಯ ರಹಸ್ಯವನ್ನು ತಿಳಿಯಬೇಕಾಗಿದೆ. ಯಾರದೇ ಮುಖದಿಂದ ಬರುವಂತಹ ಶಬ್ಧದಿಂದ, ಅವರ
ಹೃದಯದ ರಹಸ್ಯವನ್ನು ತಿಳಿದುಕೊಳ್ಳುತ್ತೀರೆಂದರೆ ವಿಜಯಿಗಳಾಗಬಹುದು ಆದರೆ ಹೃದಯದ ರಹಸ್ಯವನ್ನು
ತಿಳಿದುಕೊಳ್ಳುವುದಕ್ಕಾಗಿ ಅಂತರ್ಮುಖತೆ ಇರಬೇಕಾಗಿದೆ. ಎಷ್ಟು ಅಂತರ್ಮುಖಿಯಾಗಿ ಇರುತ್ತೀರಿ ಅಷ್ಟೂ
ಪ್ರತಿಯೊಬ್ಬರ ಹೃದಯದ ರಹಸ್ಯವನ್ನು ತಿಳಿದುಕೊಂಡು ಅವರನ್ನೂ ಖುಷಿ ಪಡಿಸಬಹುದು. ಖುಷಿ ಪಡಿಸುವವರೇ
ವಿಜಯಿಗಳಾಗುವರು.
ಸ್ಲೋಗನ್:
ವೈರಾಗ್ಯವು
ಅಂತಹ ಯೋಗ್ಯ ಧರಣಿಯಾಗಿದೆ, ಅದರಲ್ಲಿ ಯಾವುದೇ ಫಲವನ್ನು ಬಿತ್ತನೆ ಮಾಡುತ್ತೀರಿ, ಅವಶ್ಯವಾಗಿ ಅದು
ಫಲೀಭೂತವಾಗುವುದು.
ಅವ್ಯಕ್ತ ಸೂಚನೆ:– “ಸದಾ
ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”
ಸದಾ ಉಮಂಗ -
ಉಲ್ಲಾಸದಲ್ಲಿ ಏಕರಸ ಆಗಿ ಇರುವುದಕ್ಕಾಗಿ - ಯಾರೆಲ್ಲ ಸಂಬಂಧದಲ್ಲಿ ಬರುತ್ತಾರೆ -
ವಿದ್ಯಾರ್ಥಿಗಳಾಗಿರಲಿ, ಜೊತೆಗಾರರು ಆಗಿರಲಿ ಎಲ್ಲರನ್ನು ಸಂತುಷ್ಟರನ್ನಾಗಿ ಮಾಡುವ ಆಸೆ ಇರಬೇಕು.
ಯಾರನ್ನೇ ನೋಡಿ ಅವರಿಂದ ಪ್ರತಿ ಸಮಯ ಗುಣವನ್ನು ಆರಿಸಿ ಕೊಳ್ಳುತ್ತಾ ಇರಿ. ಸರ್ವರ ಗುಣಗಳ ಬಲ
ಸಿಗುವುದರಿಂದ ಸದಾಕಾಲಕ್ಕಾಗಿ ಉತ್ಸಾಹ ಏಕರಸವಾಗಿರುವುದು. ಗುಣಗ್ರಾಹಿ ಆಗಿ. ಅವಗುಣಗಳನ್ನು
ನೋಡುತ್ತಿದ್ದರು ನೋಡಬೇಡಿ.