19.07.26    Avyakt Bapdada     Kannada Murli    18.01.2011     Om Shanti     Madhuban


“ಬ್ರಹ್ಮಾ ತಂದೆಯ ಸಮಾನ ಜೀವನದಲ್ಲಿರುತ್ತಾ ಜೀವನ್ಮುಕ್ತ ಸ್ಥಿತಿಯ ಮಜಾ ತೆಗೆದುಕೊಳ್ಳಿ, ಸ್ನೇಹದ ಉಡುಗೊರೆ ಮನಜೀತ್ ಜಗತ್ಜೀತ್ ಆಗಿ ಕೊಡಿ”


ಇಂದಿನ ದಿನ ವಿಶೇಷವಾಗಿ ಬ್ರಹ್ಮಾ ತಂದೆಯ ಅವ್ಯಕ್ತರಾಗಿರುವ ಸ್ಮೃತಿ ದಿನವಾಗಿದೆ. ಎಲ್ಲಾ ಮಕ್ಕಳ ನಯನಗಳಲ್ಲಿ ಬ್ರಹ್ಮಾ ತಂದೆಯ ಸ್ನೇಹ ಸಮಾವೇಶವಾಗಿದೆ. ಇಂದು ನಾಲ್ಕು ಗಂಟೆಗಿಂತಲೂ ಮೊದಲು ಮಕ್ಕಳ ಸ್ನೇಹ ವತನದಲ್ಲಿ ತಲುಪಿತು. ಬ್ರಹ್ಮಾ ತಂದೆಯೊಂದಿಗೆ ಮಿಲನ ಮಾಡಲು ಮತ್ತು ಸ್ನೇಹದ, ತಮ್ಮ ಹೃದಯದ ಸ್ನೇಹದ ಚಿಹ್ನೆಗಳು, ಮಾಲೆಗಳು ಬ್ರಹ್ಮಾ ತಂದೆಯ ಬಳಿ ತಲುಪಿ ಬಿಟ್ಟಿತು. ಪ್ರತಿಯೊಂದು ಮಾಲೆಯ ಸುಗಂಧದಲ್ಲಿ ಮಕ್ಕಳ ಸ್ನೇಹ ಸಮಾವೇಶವಾಗಿತ್ತು. ಪ್ರತಿಯೊಂದು ಮಗುವಿನ ನಯನ ಮತ್ತು ಮುಗುಳ್ನಗೆ, ಹೃದಯದ ಮಾತುಗಳನ್ನು ಹೇಳುತ್ತಿದ್ದವು. ಬ್ರಹ್ಮಾ ತಂದೆಯೂ ಸಹ ಪ್ರತಿಯೊಬ್ಬರಿಗೆ ಸ್ನೇಹದ ರಿಟರ್ನ್ ಕೊಡುತ್ತಿದ್ದರು. ತಂದೆಯು ನೋಡುತ್ತಿದ್ದಾರೆ - ಈಗಲೂ ಸಹ ಪ್ರತಿಯೊಂದು ಮಗು ನಯನಗಳ ಭಾಷೆಯಲ್ಲಿ ತಮ್ಮ ಹೃದಯದ ಸ್ನೇಹ ಕೊಡುತ್ತಿದ್ದಾರೆ ಏಕೆಂದರೆ ಈ ಪರಮಾತ್ಮನ ಸ್ನೇಹ ಪ್ರತಿಯೊಂದು ಮಗುವನ್ನು ಸಹಜವಾಗಿ ತಂದೆಯ ಮಕ್ಕಳನ್ನಾಗಿ ಮಾಡುವಂತದ್ದಾಗಿದೆ. ಈ ಅಲೌಕಿಕ ಸ್ನೇಹ ನನ್ನ ಬಾಬಾನ ಅನುಭವದಿಂದ ತನ್ನವರನ್ನಾಗಿ ಮಾಡಿಕೊಳ್ಳುವುದಾಗಿದೆ. ಈ ಸ್ನೇಹ ತಂದೆಯ ಖಜಾನೆಗಳಿಗೆ ಮಾಲೀಕರನ್ನಾಗಿ ಮಾಡುವುದಾಗಿದೆ ಏಕೆಂದರೆ ಮಕ್ಕಳು ನನ್ನ ಬಾಬಾ ಎಂದು ಹೇಳಿದರು, ಅಂದಮೇಲೆ ನನ್ನ ಬಾಬಾ ಹೇಳುವುದು ಮತ್ತು ಸರ್ವ ಖಜಾನೆಗಳ ಮಾಲೀಕರಾಗುವುದು. ಈ ಸ್ನೇಹ ದೇಹದ ಭಾನವನ್ನು ಸೆಕೆಂಡಿನಲ್ಲಿ ಮರೆಸಿ ದೇಹೀ-ಅಭಿಮಾನಿಯನ್ನಾಗಿ ಮಾಡಿ ಬಿಡುತ್ತದೆ. ಆತ್ಮನಿಗೆ ತಂದೆಯ ವಿನಃ ಮತ್ತೇನೂ ಆಕರ್ಷಣೆ ಮಾಡುವುದಿಲ್ಲ. ಈ ದಿನದ ಬಹಳ ಮಹತ್ವಿಕೆಯಿದೆ. ಕೇವಲ ಸ್ಮೃತಿ ದಿವಸವೇ ಅಲ್ಲ ಆದರೆ ಸಮರ್ಥಿ ದಿವಸವಾಗಿದೆ. ಏಕೆಂದರೆ ಈ ದಿನ ಬಾಬಾರವರು ಮಕ್ಕಳಿಗೆ ವಿಶ್ವ ಸೇವೆಗಾಗಿ ಸ್ವಯಂ ಮಾಡಿಸುವಂತಹವರಾಗಿ ಮಕ್ಕಳನ್ನು ಮಾಡುವವರನ್ನಾಗಿ ಮಾಡುವ ತಿಲಕವನ್ನು ಕೊಟ್ಟರು. ತಂದೆಯನ್ನು ಮಕ್ಕಳು ಪ್ರತ್ಯಕ್ಷ (ಸನ್ ಶೋಜ್ ಫಾದರ್) ಮಾಡುವ (ಕರನ್ಹಾರ್) ನಿಮಿತ್ತ ಮಾಡಿದರು. ಸೇವೆಯಲ್ಲಿ ಸಫಲತೆಯ ಸಾಧನವಾಗಿ ಸ್ವಯಂ ಮಾಡಿಸುವವರಾದರು ಮತ್ತು ಮಕ್ಕಳನ್ನು ಮಾಡುವವರನ್ನಾಗಿ ಮಾಡಿದರು ಏಕೆಂದರೆ ಸೇವೆಯಲ್ಲಿ ಸಫಲತೆಯ ಸಾಧನವಾಗಿದೆ - ನಾನು ಮಾಡುವವನಾಗಿದ್ದೇನೆ. ಮಾಡಿಸುವವರು ಮಾಡಿಸುತ್ತಿದ್ದಾರೆ - ಈ ಸ್ಮೃತಿ ಅಥವಾ ಈ ಸ್ಥಿತಿಯು ಬಹಳ ಅವಶ್ಯಕತೆಯಿದೆ ಏಕೆಂದರೆ 63 ಜನ್ಮಗಳ ಸ್ಮೃತಿ ‘ನಾನು’ ಎಂಬುದು ದೇಹಾಭಿಮಾನದಲ್ಲಿ ತೆಗೆದುಕೊಂಡು ಬರುತ್ತದೆ. ಮಾಡಿಸುವವರು ಮಾಡಿಸುತ್ತಿದ್ದಾರೆ, ನಾನು ನಿಮಿತ್ತ ಮಾಡುವವನಾಗಿದ್ದೇನೆ, ಈ ಸ್ಮೃತಿಯಿಂದಲೇ ತಮ್ಮನ್ನು ನಿಮಿತ್ತರೆಂದು ತಿಳಿಯುವುದರಿಂದ ದೇಹಾಭಿಮಾನ ಸಮಾಪ್ತಿಯಾಗುತ್ತದೆ. ಮಕ್ಕಳನ್ನು ಇದಕ್ಕಾಗಿಯೇ ಮಾಡುವವರನ್ನಾಗಿ ಮಾಡಿದರು, ಸ್ವಯಂ ಮಾಡಿಸುವವರಾದರು. ಮಾಡುವುದರಲ್ಲಿ ಸ್ವತಹವಾಗಿಯೇ ನಿಮಿತ್ತರಾಗಿದ್ದೀರಿ, ನಿರ್ಮಾಣ ಆಗಿ ಬಿಡುತ್ತೀರಿ. ಈಗಲೂ ಸಹ ಬಾಪ್ದಾದಾ ಮಕ್ಕಳನ್ನು ಸೇವೆಯಲ್ಲಿ ನಿಮಿತ್ತರಾಗಿ ಮಾಡುವ ಕಾರಣ ತಂದೆಯು ನೋಡಿದರು - ಯಾರು ಸೇವಾಧಾರಿಗಳಾಗಿದ್ದಾರೆ ಅವರ ಮಸ್ತಕದಲ್ಲಿ ಸೇವೆಯ ಫಲವಾಗಿ ನಕ್ಷತ್ರ ಹೊಳೆಯುತ್ತಾ ಇದೆ. ಮೆಜಾರಿಟಿ ಮಕ್ಕಳ ಸೇವೆಯನ್ನು ನೋಡಿ ಬಾಪ್ದಾದಾ ಖುಷಿಯಾಗಿದ್ದಾರೆ ಆದ್ದರಿಂದ ಇಂತಹ ಮಕ್ಕಳಿಗೆ ವಿಶೇಷವಾಗಿ ಬ್ರಹ್ಮಾ ತಂದೆ ವಾಹ್! ಮಕ್ಕಳೇ ವಾಹ್! ಎಂದು ಹೇಳಿ ಶುಭಾಷಯಗಳನ್ನು ಕೊಡುತ್ತಿದ್ದಾರೆ.

ಬ್ರಹ್ಮಾ ತಂದೆಗೆ ವಿಶೇಷವಾಗಿ ಖುಷಿಯೂ ಆಗುತ್ತಾ ಇದೆ ಮತ್ತು ಮುಂದೆಯೂ ಸಹ ಸೇವೆಗೆ ನಿಮಿತ್ತರಾಗಿ ಮುಂದುವರೆಸುವುದಕ್ಕಾಗಿ ಶುಭಾಷಯಗಳನ್ನು ಕೊಡುತ್ತಾ ಇದ್ದೇವೆ. ಈಗಲೂ ಸಹ ಬ್ರಹ್ಮಾ ತಂದೆ ಮಕ್ಕಳನ್ನು ತನ್ನ ಸಮಾನ ಫರಿಶ್ತಾ ಸ್ಥಿತಿಯಲ್ಲಿ ಇರುವುದಕ್ಕಾಗಿ ಸೂಚನೆ ಕೊಡುತ್ತಾ ಇದ್ದಾರೆ. ಬಾಪ್ದಾದಾರವರು ನೋಡಿದ್ದಾರೆ - ಮಕ್ಕಳ ಅಟೆನ್ಶನ್ ಇದೆ ಏನೆಂದರೆ ಸದಾ ಹೇಗೆ ಬ್ರಹ್ಮಾ ತಂದೆ ಜೀವನದಲ್ಲಿರುತ್ತಾ ಜೀವನಮುಕ್ತರಾಗಿದ್ದರು. ಇಷ್ಟು ಜವಾಬ್ದಾರಿಯಿದ್ದರೂ, ಇಷ್ಟು ದೊಡ್ಡ ಪರಿವಾರವನ್ನು ಸಂಭಾಲನೆ ಮಾಡುವುದು, ಎಲ್ಲರನ್ನೂ ಯೋಗಿ ಜೀವನದವರನ್ನಾಗಿ ಮಾಡುವುದು, ಇಷ್ಟು ಸೇವೆಯ ಜವಾಬ್ದಾರಿಯನ್ನು ಸಂಭಾಲನೆ ಮಾಡುವುದು, ಸೇವೆಯಲ್ಲಿ ಸದಾ ಮುಂದುವರೆಸುವುದು, ಎಲ್ಲಾ ಜವಾಬ್ದಾರಿಗಳಿದ್ದರೂ ಸಹ ಜೀವನ್ಮುಕ್ತದ ಮಜಾ(ಖುಷಿ)ದಲ್ಲಿದ್ದರು ಆದ್ದರಿಂದ ಭಕ್ತಿ ಮಾರ್ಗದಲ್ಲಿ ಬ್ರಹ್ಮನ ಆಸನವಾಗಿ ಕಮಲಾಸನವನ್ನು ತೋರಿಸಲಾಗಿದೆ. ಜೀವನ್ಮುಕ್ತರಾಗಿ ಈಗ ಜೀವನ್ಮುಕ್ತದ ಮಜಾ ಪಡೆದುಕೊಂಡರು ಮತ್ತು ತಾವೆಲ್ಲಾ ಮಕ್ಕಳನ್ನೂ ಸಹ ಅದೇರೀತಿ ಮಾಡಿದರು. ಈಗಲೂ ಸಹ ತಾವು ಮಕ್ಕಳಿಗೆ ಫರಿಶ್ತಾ ಆಗುವುದಕ್ಕೆ ಭಿನ್ನ-ಭಿನ್ನ ಯುಕ್ತಿಗಳನ್ನು ತಿಳಿಸಿ ತಮ್ಮ ಸಮಾನ ಮಾಡಿಕೊಳ್ಳಲು ಬಯಸುತ್ತಿದ್ದಾರೆ.

ಬಾಪ್ದಾದಾರವರು ನೋಡಿದರು - ಪ್ರತಿಯೊಂದು ಮಗುವಿನ ಲಕ್ಷ್ಯ ಚೆನ್ನಾಗಿದೆ, ಯಾರೊಂದಿಗಾದರೂ ತಮ್ಮ ಲಕ್ಷ್ಯವೇನು ಎಂದು ಕೇಳಿದರೆ ಏನು ಹೇಳುತ್ತೀರಿ? ನೆನಪಿದೆಯೇ, ಏನು ಹೇಳುತ್ತೀರಿ? ತಂದೆಯ ಸಮಾನರಾಗಲೇಬೇಕು. ಅಂದಮೇಲೆ ತಂದೆಯ ಸಮಾನ ಏನಾಗುತ್ತೀರಿ? ಇದೇ ಜೀವನದಲ್ಲಿ ಜೀವನ್ಮುಕ್ತ ಜೀವನದ ಸ್ಯಾಂಪಲ್ ಆಗುತ್ತೇವೆ. ಬಾಪ್ದಾದಾರವರು ನೋಡಿದ್ದಾರೆ - ಯಾವ ಹೋಮ್ವರ್ಕ್ ಕೊಡುತ್ತಾರೆ, ಅದರಲ್ಲಿ ಅಟೆನ್ಶನ್ ಅಂತು ಕೊಡುತ್ತೀರಿ, ಅನುಭವವನ್ನೂ ಮಾಡುತ್ತೀರಿ, ಸದಾ ಮಾಡುವುದಿಲ್ಲ. ಈಗಲೂ ಸಹ ಯಾವ ಕಾರ್ಯವನ್ನು ಕೊಡಲಾಗಿತ್ತು, ಕೆಲವು ಮಕ್ಕಳು ಪುರುಷಾರ್ಥ ಮಾಡಿ ಒಂದೊಂದು ತಿಂಗಳು ಅಟೆನ್ಶನ್ ಕೊಟ್ಟಿದ್ದಾರೆ, ಕೆಲವು ಜೋನ್ ರಿಪೋರ್ಟ್ ಒಂದು ತಿಂಗಳಿನ ಫಲಿತಾಂಶದಲ್ಲಿ ಬಹಳ ಚೆನ್ನಾಗಿ ಬಂದಿದೆ. ಯಾರೆಲ್ಲಾ ರಿಪೋರ್ಟ್ ಕಳುಹಿಸಿದ್ದೀರಿ, ಯಾವ ಜೊನ್ನವರು ಕಳುಹಿಸಿದ್ದೀರಿ ಅವರಿಗೆ ಬಾಪ್ದಾದಾರವರು ವಾಹ್! ಮಕ್ಕಳೇ ವಾಹ್! ಎಂದು ಹೇಳಿ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಆದರೆ ಬಾಪ್ದಾದಾರವರು ಈಗ ಏನು ಬಯಸುತ್ತಿದ್ದಾರೆ? ಈಗ ಬಾಪ್ದಾದಾರವರು ಪ್ರತೀ ಮಗುವಿನಿಂದ ಇದನ್ನೇ ಬಯಸುತ್ತಿದ್ದಾರೆ - ಈಗ ಕೆಲವೊಮ್ಮೆ ಸರಿಯಿರುತ್ತದೆ ಆದರೆ ಬಾಬಾ ಸದಾಕಾಲದ್ದನ್ನು ಬಯಸುತ್ತಾರೆ. ಯೋಗಿಯೂ ಸಹ ಚೆನ್ನಾಗಿ ಆಗಿದ್ದೀರಿ ಆದರೆ ಸದಾಯೋಗಿಗಳನ್ನಾಗಿ ಮಾಡಲು ಬಯಸುತ್ತಿದ್ದಾರೆ. ಇತ್ತೀಚೆಗೆ ಬಾಪ್ದಾದಾರವರು ಮಕ್ಕಳಿಗೆ ಕಾರ್ಯವನ್ನೂ ಕೊಟ್ಟಿದ್ದರು - ಸದಾ ಇರುವುದಕ್ಕಾಗಿ ಪ್ರತೀ ಗಂಟೆ ತಮ್ಮ ಮೇಲೆ ಯಾವುದಾದರೂ ಯುಕ್ತಿಯನ್ನಿಟ್ಟುಕೊಳ್ಳಿ, ಅದರಿಂದ ಕೆಲವೊಮ್ಮೆ ಎನ್ನುವ ಶಬ್ದ ಪರಿವರ್ತನೆಯಾಗಿ ಸದಾ ಎಂಬ ಶಬ್ಧ ಬಂದು ಬಿಡಲಿ. ಈಗ ಬಾಪ್ದಾದಾ ಇದನ್ನೇ ಬಯಸುತ್ತಾರೆ - ಹೇಗೆ ಹೇಳಿಕೆಯಿದೆ - ಮನಜೀತೆ ಜಗತ್ಜೀತ್ (ಮನಸ್ಸನ್ನು ಗೆಲ್ಲುವಂತಹವರೇ ಜಗತ್ತನ್ನು ಗೆಲ್ಲುತ್ತಾರೆ). ಮನಸ್ಸಿಗೆ ಏನು ಸಂಕಲ್ಪ ಕೊಡುತ್ತೀರೋ ಅದನ್ನೇ ಮಾಡಬೇಕು. ಏಕೆ? ಹೇಗೆ ಮತ್ತೆಲ್ಲಾ ಕರ್ಮೇಂದ್ರಿಯಗಳು ಯಾವಾಗ ಬೇಕೋ, ಹೇಗೆ ಬೇಕೋ ಹಾಗೆಯೇ ಮಾಡುತ್ತದೆಯಲ್ಲವೆ! ಹಾಗೆಯೇ ಮನಸ್ಸಿಗೂ ಸಹ ಏನನ್ನು ಆರ್ಡರ್ ಮಾಡುತ್ತೀರೋ ಅದನ್ನೇ ಮಾಡಲಿ. ಅಭ್ಯಾಸ ಮಾಡುತ್ತೀರಿ ಆದರೆ ಕೆಲವೊಮ್ಮೆ ಮಾಡುವುದೂ ಇಲ್ಲ. ಬಾಪ್ದಾದಾರವರು ಈಗ ಇದನ್ನೇ ಬಯಸುತ್ತಾರೆ - ಮನಸ್ಸನ್ನು ಶಕ್ತಿಗಳ ಲಗಾಮಿನಿಂದ ಹೇಗೆ ನಡೆಸಬೇಕೆಂದು ಬಯಸುತ್ತೀರಿ ಹಾಗೆಯೇ ನಡೆಸಿರಿ. ಮನಜೀತೇ ಜಗತ್ಜೀತ್ ಎಂಬ ಯಾವ ಗಾಯನವಿದೆ, ಅದು ಯಾರ ಗಾಯನವಾಗಿದೆ? ತಾವು ಮಕ್ಕಳದೇ ಗಾಯನವಲ್ಲವೆ. ಪ್ರತೀ ಕಲ್ಪದಲ್ಲಿಯೂ ನೀವು ಮಾಡಿದ್ದೀರಿ ಆಕಾರಣದಿಂದಲೇ ಗಾಯನವಿದೆ. ಹೇಗೆ ಬೇರೆ ಕರ್ಮೇಂದ್ರಿಯಗಳನ್ನು ನನ್ನದು ಎಂದು ಹೇಳುತ್ತೀರಿ ಹಾಗೆಯೇ ಮನಸ್ಸನ್ನೂ ಸಹ ನನ್ನದು ಎಂದು ಹೇಳುತ್ತೀರಿ. ನನ್ನದು ಎಂದು ಹೇಳುವುದು ಅರ್ಥಾತ್ ಮಾಲೀಕರಾಗುವುದು. ಮನಸ್ಸಿನಲ್ಲಿ ಯಾವ ಸಂಕಲ್ಪ ಮಾಡಲು ಇಷ್ಟ ಪಡುತ್ತೀರೋ, ಎಷ್ಟು ಸಮಯ ಮಾಡಲು ಇಷ್ಟ ಪಡುತ್ತೀರೋ ಅದು ಬಂಧಿಸಲ್ಪಟ್ಟಿದೆ ಏಕೆಂದರೆ ಅದು ನನ್ನದಾಗಿದೆ. ಅಂದಮೇಲೆ ಬಾಪ್ದಾದಾರವರು ಇಂದು ಸ್ನೇಹದ ದಿನ ಇದೇ ಹೋಮ್ವರ್ಕ್ನ್ನು ಕೊಡಲು ಬಯಸುತ್ತಾರೆ - ಯಾವ ಸಂಕಲ್ಪವನ್ನು ಮಾಡಲು ಬಯಸುತ್ತೀರೋ ಅದೇ ನಡೆಯಲಿ, ಒಂದುವೇಳೆ ತಾವು ಶುದ್ಧ ಸಂಕಲ್ಪ ಮಾಡಲು ಬಯಸುವುದಾದರೆ ವ್ಯರ್ಥ ಸಂಕಲ್ಪ, ಶುದ್ಧ ಸಂಕಲ್ಪ ವ್ಯರ್ಥ ಸಂಕಲ್ಪವನ್ನು ಸಮಾಪ್ತಿ ಮಾಡಲಿ. ಭಲೆ ಯೋಗ ಮಾಡಲು ಬಯಸುತ್ತೀರಿ ನಂತರ ಸಂಸ್ಕಾರದ ಕಾರಣ ವ್ಯರ್ಥ ಸಂಕಲ್ಪ ನಡೆಯಿತು ಅಥವಾ ಯೋಗದ ಸಿದ್ಧಿಯು ಸಿಗಲಿಲ್ಲ - ಇದರದು ಈಗ ನಿಯಂತ್ರಣವಿರಬೇಕು. ಒಂದುವೇಳೆ ಒಂದು ಗಂಟೆ ಯೋಗವನ್ನಿಡಲು ಬಯಸುತ್ತೀರೆಂದರೆ ಆಗ ಮನಸ್ಸು ತೊಂದರೆ ಮಾಡಬಾರದು. ಆತ್ಮ ಮಾಲೀಕನಾಗಿದೆ, ಮನಸ್ಸು ಮಾಲೀಕನಲ್ಲ. ಮನಸ್ಸಂತು ಆತ್ಮನ ಜೊತೆಗಾರನಾಗಿದೆ. ಅಂದಮೇಲೆ ಜೊತೆಗಾರನಿಗೆ ಪ್ರೀತಿಯಿಂದ ಆರ್ಡರ್ ಮಾಡಿ - ಮನಜೀತ್ ಆಗಿ ಎಂದು. ಏಕೆಂದರೆ ಬಾಪ್ದಾದಾರವರ ಬಳಿ ಬಹಳ ಮಕ್ಕಳ ಸಮಾಚಾರ ಬರುತ್ತದೆ – ವ್ಯರ್ಥ ಸಂಕಲ್ಪ ಸಮಯ-ಪ್ರತಿ ಸಮಯ ಬರುತ್ತದೆ. ಇಷ್ಟ ಪಡುವುದಿಲ್ಲವೆಂದರೂ ಬರುತ್ತದೆಯೆಂದರೆ ಆಗ ಇವರು ಮಾಲೀಕರೆಂದು ಹೇಳಬಹುದೇ! ಅಂದಮೇಲೆ ಬ್ರಹ್ಮಾ ತಂದೆಯ ಜೊತೆ ಸ್ನೇಹವಿದೆಯಲ್ಲವೆ. ಆದ್ದರಿಂದ ತಂದೆಯು ಇಂದು ಸ್ನೇಹದಲ್ಲಿ ತನ್ನ ಹೃದಯದ ಬಯಕೆಯನ್ನು ತಿಳಿಸುತ್ತಾ ಇದ್ದಾರೆ - ಈಗ ಮನಜೀತ್ ಜಗತ್ಜೀತ್ ಆಗಲೇಬೇಕು. ಅಂದಮೇಲೆ ಬ್ರಹ್ಮಾ ತಂದೆಯವರಿಗೆ ಈ ಸ್ನೇಹದ ಉಡುಗೊರೆಯನ್ನು ಕೊಡುತ್ತೀರಾ? ಸ್ನೇಹದಲ್ಲಿ ಏನು ಕೊಡಲಾಗುತ್ತದೆ? ಉಡುಗೊರೆಯನ್ನು ಕೊಡುತ್ತಾರಲ್ಲವೆ ಅಂದಮೇಲೆ ಇಂದು ಬ್ರಹ್ಮಾ ತಂದೆ ಮಕ್ಕಳಿಂದ ಈ ಉಡುಗೊರೆಯನ್ನು ಕೊಡಲು ಹೇಳುತ್ತಿದ್ದಾರೆ. ತಯಾರಾಗಿದ್ದೀರಾ? ತಯಾರಾಗಿದ್ದೀರಾ? ಕೈಯೆತ್ತಿರಿ. ಒಳ್ಳೆಯದು - ಉದ್ದವಾಗಿ ಎತ್ತಿರಿ. ಅಂದಾಗ ಈಗ ಯಾವಾಗ ಆರ್ಡರ್ ಕೊಡುತ್ತಾರೆಂದರೂ ಇಂದಿನಿಂದ ವ್ಯರ್ಥ ಸಂಕಲ್ಪ ಬರಲು ಬಿಡಬಾರದು. ಮಾಡಲು ಸಾಧ್ಯವೇ? ಇಂದು 2 ಗಂಟೆ, 4 ಗಂಟೆ ಯೋಗದ ಸ್ಥಿತಿಯಲ್ಲಿ ಕರ್ಮವನ್ನೂ ಮಾಡಿ. ಯೋಗವನ್ನೂ ಮಾಡಿ, ಮಾಡಲು ಸಾಧ್ಯವೇ? ಮಾಡಲು ಸಾಧ್ಯವೇ? ಆಯಿತು, ಈಗ ಕಳೆದದ್ದು ಕಳೆಯಿತು ಆದರೆ ಈಗ ಆದೇಶ ಕೊಡುವುದೇ - ಇಂದು ವ್ಯರ್ಥ ಸಂಕಲ್ಪಕ್ಕೆ ಫುಲ್ಸ್ಟಾಪ್. ಮಾಡಬೇಕಾಗುತ್ತದೆಯಲ್ಲವೆ.

ಇಂದು ಯೋಗದಲ್ಲಿ ಇದೇ ಲಕ್ಷ್ಯವನ್ನಿಟ್ಟುಕೊಳ್ಳಿ, ಅದರಂತೆಯೇ ಇಡೀ ದಿನ ಪುರುಷಾರ್ಥ ಮಾಡಬೇಕಾಗುತ್ತದೆಯಲ್ಲವೆ! ತಂದೆಯೊಂದಿಗಿನ ಸ್ನೇಹದಲ್ಲಿ ಏನನ್ನು ತಂದೆಯು ಹೇಳುತ್ತಾರೆ ಅದನ್ನು ಮಾಡಲೇಬೇಕಾಗಿದೆ. ಸಂಕಲ್ಪ ವ್ಯರ್ಥ ಬಂಧ್, ಅದಕ್ಕೆ ಯುಕ್ತಿಯಾಗಿದೆ – ಬ್ರಹ್ಮಾ ತಂದೆಯ ಸ್ನೇಹವನ್ನು ಹೃದಯದಿಂದ ನೆನಪು ಮಾಡಿ. ಭಲೆ ಸಾಕಾರದಲ್ಲಿ ನೋಡಿರಬಹುದು, ನೋಡದೇ ಇರಬಹುದು ಆದರೆ ಬುದ್ಧಿ ಬಲದ ಮುಖಾಂತರವಂತು ಎಲ್ಲರೂ ನೋಡಿದ್ದೀರಲ್ಲವೆ. ನೋಡಿದ್ದೀರಾ ಅಥವಾ ಇಲ್ಲವೆ? ಯಾರು ಹೇಳುತ್ತೀರಾ- ನಾನು ತಂದೆಯ ಪ್ರೀತಿಯನ್ನು ನೋಡಿದ್ದೇನೆ, ನಾನು ಬ್ರಹ್ಮಾ ತಂದೆಯ ಪಾಲನೆಯನ್ನು ನೋಡುವುದೇನು, ಅದರಿಂದಲೇ ನಡೆಯುತ್ತಿದ್ದೇನೆ ಎಂದು ಹೇಳುವವರು ಕೈಯೆತ್ತಿರಿ. ಒಳ್ಳೆಯದು - ಕೈಯನ್ನೆತ್ತಿ ಖುಷಿ ಪಡಿಸುತ್ತೀರಿ. ಬಾಪ್ದಾದಾರವರಿಗೆ ಖುಷಿಯಿದೆ, ಧೈರ್ಯವನ್ನಂತು ಇಟ್ಟಿದ್ದೀರಲ್ಲವೆ. ಆದರೆ ಯಾವಾಗ ಯಾವುದೇ ಶಕ್ತಿ ಕಡಿಮೆಯಾಗುತ್ತದೆಯಲ್ಲವೆ ಆಗ ಸದಾ ತಂದೆಯ ಸಂಬಂಧ, ಎಷ್ಟೊಂದು ಸಂಬಂಧಗಳಿವೆ, ಕೆಲವೊಮ್ಮೆ ತಂದೆ, ಕೆಲವೊಮ್ಮೆ ಮಗನೂ ಆಗಿ ಬಿಡುತ್ತಾರೆ. ಕೆಲವೊಮ್ಮೆ ತಂದೆಯೆಂದರೆ ಕೆಲವೊಮ್ಮೆ ಸಖನಾಗಿಯೂ ಆಗಿ ಬಿಡುತ್ತಾರೆ ಆದ್ದರಿಂದ ಈ ಸಂಬಂಧವನ್ನು ನೆನಪು ಮಾಡಿ ಅಥವಾ ಪ್ರಾಪ್ತಿಯನ್ನು ನೆನಪು ಮಾಡಿ. ಪ್ರಾಪ್ತಿಗಳು ಮತ್ತು ಸಂಬಂಧಗಳನ್ನು ಹೇಗೆ ಇಂದು ಹೃದಯಪೂರ್ವಕವಾಗಿ ನೆನಪು ಮಾಡುತ್ತಿದ್ದೀರಲ್ಲವೆ ಹಾಗೆಯೇ ನೆನಪು ಮಾಡುವುದರಿಂದ ಪ್ರೀತಿ ಉತ್ಪನ್ನವಾಗುತ್ತದೆ. ಇಂದು ಎಲ್ಲರ ಹೃದಯದಲ್ಲಿ ಬ್ರಹ್ಮಾ ತಂದೆಯ ಪ್ರೀತಿ ಬರುತ್ತಿದೆಯಲ್ಲವೆ! ಯಾವಾಗ ಏನೇ ಹೆಚ್ಚು ಕಡಿಮೆಯಾದರೆ ಆಗ ಸಂಬಂಧ ಹಾಗೂ ಪ್ರಾಪ್ತಿಗಳನ್ನು ನೆನಪು ಮಾಡಿರಿ. ಬಾಬಾ ಪ್ರತಿಯೊಂದು ಮಗುವಿನ ಜೊತೆ ಸಹಯೋಗಿಯಾಗಿದ್ದಾರೆ, ಕೇವಲ ನೆನಪು ಮಾಡಬೇಕು. ಅಂದಾಗ ಏನು ಮಾಡಬೇಕು ಎಂದು ತಿಳಿಯಿತೆ? ಮನಜೀತ್ ಜಗತ್ಜೀತ್ ಯಾವ ಗಾಯನವಿದೆ ಆ ಸ್ವರೂಪವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಆದೇಶದಂತೆ ನಡೆಸಿ. ಈಗ ಸ್ವಲ್ಪ ಫ್ರೀ ಬಿಟ್ಟಿದ್ದೀರಲ್ಲವೆ ಆದ್ದರಿಂದ ಅದು ತನ್ನ ಕೆಲಸ ಮಾಡುತ್ತದೆ. ಈಗ ಗಮನ ಕೊಡಿ. ಮನಸ್ಸು ನನ್ನ ಆರ್ಡರ್ನಂತೆ ನಡೆಯಲಿ, ಆದರೆ ತಾವು ಮನಸ್ಸಿನ ಆರ್ಡರ್ನಂತೆ ನಡೆಯುವುದಲ್ಲ. ಜ್ಞಾನದ ಮಾತುಗಳನ್ನು ಸ್ಮರಣೆ ಮಾಡಲು ಬಯಸುತ್ತೀರಿ ಮತ್ತೆ ವ್ಯರ್ಥ ಮಾತುಗಳು ಬಂದು ಬಿಡುತ್ತವೆ ಅಂದಮೇಲೆ ಏನಾಯಿತು? ಮನಸ್ಸು ಮಾಲೀಕನಾಯಿತೇ ಅಥವಾ ತಾವು ಮಾಲೀಕರಾದಿರೆ? ಅಂದಾಗ ಎಲ್ಲರಿಗೂ ಈ ಹೋಮ್ವರ್ಕ್ ತಿಳಿಯಿತೆ! ಮನಜೀತ್ ಆಗಬೇಕು. ಏನು ಆರ್ಡರ್ ಮಾಡಿದಿರಿ, ಮನಸ್ಸು ಪಾಲಿಸುತ್ತದೆ, ಅವಶ್ಯವಾಗಿ ಪಾಲಿಸುತ್ತದೆ. ಕೇವಲ ಅಟೆನ್ಶನ್ ಕೊಡಬೇಕಾಗುತ್ತದೆ. ಮಾತೆಯರು ಅಥವಾ ಟೀಚರ್ಸ್, ಆಗುತ್ತದೆಯೇ? ಆಗುತ್ತದೆಯೇ? ಟೀಚರ್ಸ್ ಕೈಯನ್ನೆತ್ತಿರಿ. ಟೀಚರ್ಸ್ ಕೈಯೆತ್ತುತ್ತಿದ್ದಾರೆ. ಒಂದುವೇಳೆ ಆಗುತ್ತದೆಯೆಂದು ತಿಳಿಯುತ್ತೀರೆಂದರೆ ಕೈಯನ್ನು ಅಲುಗಾಡಿಸಿ. ಮೊದಲ ಸಾಲಿನವರು ಕೈಯನ್ನು ಅಲುಗಾಡಿಸಿ. ಸಹೋದರರು ಕೈಯನ್ನು ಅಲುಗಾಡಿಸಿ? ವಾಹ್! ಅಂದಾಗ ಬ್ರಹ್ಮಾ ತಂದೆಗೆ ಸ್ನೇಹದ ಉಡುಗೊರೆಯನ್ನು ಕೊಟ್ಟಿರಿ. ಇದಕ್ಕಾಗಿ ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು.

ಒಳ್ಳೆಯದು - ಬಾಪ್ದಾದಾರವರೊಂದಿಗಿನ ಸ್ನೇಹ ಬಹಳ ಸಹಯೋಗ ಕೊಡುತ್ತದೆ. ಹೃದಯದಿಂದ ನನ್ನಬಾಬಾ ಹೇಳಿದಿರಿ, ನನ್ನ ಬಾಬಾ ಎಂದು ಹೇಳಿದಿರೆಂದರೆ ನಾನು ಯಾರು? ತಂದೆಯ ಅಗಲಿ ಮರಳಿ ಸಿಕ್ಕಿರುವ ಮಗು. ಎಲ್ಲರೂ ಎಷ್ಟು ಬಾರಿ ಹೇಳುತ್ತೀರಿ ನನ್ನ ಬಾಬಾ, ನನ್ನ ಬಾಬಾ, ಎಷ್ಟು ಬಾರಿ ಹೇಳುತ್ತೀರಿ? ತಂದೆಯು ಕೇಳಿಸಿಕೊಳ್ಳುತ್ತಾರಲ್ಲವೆ ಎಲ್ಲವನ್ನೂ ನೋಟ್ ಮಾಡುತ್ತಾ ಇರುತ್ತಾರೆ. ಡಬಲ್ ವಿದೇಶಿಗಳೂ ಸಹ ಕೇಳಿಸಿಕೊಳ್ಳುದ್ದೀರಲ್ಲವೆ! ಬಾಪ್ದಾದಾರವರು ನೋಡಿದರು - ಪೂರ್ಣ ಸೀಜನ್ನಲ್ಲಿ ಡಬಲ್ ವಿದೇಶಿಗಳದು ಹಾಜರಾತಿಯಿರುತ್ತದೆ. ಮಧುಬನದಲ್ಲಿ ಪ್ರತೀ ಬಾರಿ ಹಾಜರಾತಿಯಿರುತ್ತದೆ. ಈಗಲೂ ಸಹ 350 ಮಂದಿಯಿದ್ದಾರೆ. ತಮ್ಮ ಟರ್ನ್ನಲ್ಲಿಯೂ ಬರುತ್ತಾರೆ ಆದರೆ ಪ್ರತೀ ಟರ್ನ್ನಲ್ಲಿಯೂ ಸಹ ಸ್ವಲ್ಪ-ಸ್ವಲ್ಪ ಮಂದಿ ಎಲ್ಲಿಂದಲಾದರೂ ಬರುತ್ತಾರೆ. ಅಂದಮೇಲೆ ಈಗ ಈ ಫಲಿತಾಂಶವನ್ನೂ ಬಾಪ್ದಾದಾರವರೂ ಸಹ ನೋಡುತ್ತಾ ಇರುತ್ತಾರೆ ಮತ್ತು ತಾವೆಲ್ಲರೂ ಸಹ ಸಾಕ್ಷಿಯಾಗಿದ್ದು ತಮ್ಮತಮ್ಮ ಫಲಿತಾಂಶವನ್ನು ನೋಡುತ್ತಾ ಇರಿ. ಇದನ್ನೇ ನೆನಪಿಟ್ಟುಕೊಳ್ಳಿ- ಮಾಲೀಕರಾಗುವ ಪ್ರತಿಜ್ಞೆಯನ್ನು ಬಾಪ್ದಾದಾರವರ ಬಳಿ ಮಾಡಿದ್ದೀರಿ. ಬಾಪ್ದಾದಾರವರು ಈಗ ಮಕ್ಕಳಿಗೆ ಕೊನೆಪಕ್ಷ ಒಂದೊಂದು ಜೋನ್ಗೂ ಈ ಕಾರ್ಯವನ್ನು ಕೊಡಲು ಆಗುತ್ತದೆಯೇ - ಈ ಜೋನ್ ಸಪ್ತಾಹ ಅಥವಾ 15 ದಿನಗಳಲ್ಲಿ ಫಲಿತಾಂಶ ಕೊಡಲಿ – ವ್ಯರ್ಥ ಸಂಕಲ್ಪ ಇಲ್ಲ ಎಂದಲ್ಲ ಆದರೆ ಯಾವ ವಿಷಯವನ್ನು ಮನಸ್ಸಿಗೆ ಕೊಟ್ಟಿದ್ದಾರೆ, ಅದನ್ನು ಮಾಡಿದಿರಾ ಅಥವಾ ಇಲ್ಲವೆ? ಇದು ಒಪ್ಪಿಗೆಯಿದೆಯಲ್ಲವೆ ಟೀಚರ್ಸ್? ಒಪ್ಪಿಗೆಯಿದೆಯೇ? ಜೋನ್ಗೆ ಕಾರ್ಯವನ್ನು ಕೊಡುವುದೇ? ಕೈಯೆತ್ತಿರಿ. ಟೀಚರ್ಸ್.

ಮಹಾರಾಷ್ಟ್ರ ಅಲ್ಲವೆ. ಅಂದಾಗ ಮಹಾರಾಷ್ಟ್ರಕ್ಕೆ ಮಹಾನ್ ಕಾರ್ಯ ಕೊಡುತ್ತಾರಲ್ಲವೆ. ಬಾಪ್ದಾದಾರವರಿಗೆ ಪ್ರತಿಯೊಂದು ಜೋನ್ನ ಜೊತೆ ಪ್ರೀತಿಯಿದೆ ಮತ್ತು ಸದಾ ಇದೇ ನಿಶ್ಚಯ ಇಡುತ್ತಾರೆ - ತಂದೆಯು ಹೇಳಿದರು, ಮಕ್ಕಳು ಮಾಡಿದರು ಎನ್ನುವಂತೆ. ಈ ರೀತಿಯೇ? ಮಹಾರಾಷ್ಟ್ರ, ಏನನ್ನು ತಂದೆಯು ಹೇಳಿದರು ಅದನ್ನು ಮಾಡಿದಿರಿ, ಈ ರೀತಿಯಿದ್ದೀರಾ? ಮಹಾರಾಷ್ಟ್ರದವರು ಕೈಯೆನ್ನಿತ್ತಿರಿ. ಬಹಳ ಮಂದಿ ಇದ್ದೀರಿ. ಮುಕ್ಕಾಲು ಕ್ಲಾಸ್ ಇದ್ದೀರಿ. ಅಂದಮೇಲೆ ಪ್ರತಿಯೊಂದು ಜೋನ್ ತಂದೆಯ ಆಜ್ಞಾಕಾರಿಗಳಾಗಿದ್ದೀರಿ, ಎಲ್ಲರೂ ಕತ್ತನ್ನು ಅಲುಗಾಡಿಸುತ್ತಿದ್ದಾರೆ. ತಂದೆಗೂ ನಿಶ್ಚಯವಿದೆ - ಈ ನನ್ನ ಮಕ್ಕಳಂತು ನಿಶ್ಚಯ ಬುದ್ಧಿಯವರೇ ಆಗಿದ್ದಾರೆ.

ಬಾಪ್ದಾದಾರವರು ಇದನ್ನೇ ಇಷ್ಟ ಪಡುತ್ತಾರೆ - ಪ್ರತೀದಿನದ ಮಹಾವಾಕ್ಯವನ್ನು ಕೇಳುತ್ತೀರಿ, ಅದು ಹೋಮ್ವರ್ಕ್ ಆಗಿದೆ. ಒಂದುವೇಳೆ ದಿನ ನಿತ್ಯದ ಮುರುಳಿ ಏನನ್ನು ಬಾಬಾ ಹೇಳಿದರು ಮತ್ತು ಮಕ್ಕಳು ಮಾಡಿದಿರೆಂದರೆ ಅವರಿಗೇ ಹೇಳಲಾಗುತ್ತದೆ - ತಂದೆಯ ಅಗಲಿ ಮರಳಿ ಸಿಕ್ಕಿರುವ ಮಕ್ಕಳು, ಆಜ್ಞಾಕಾರಿ ಮಕ್ಕಳು ಎಂದು. ಏನು ಮಾಡಬೇಕು ಅದಕ್ಕೆ ಪ್ರತಿನಿತ್ಯದ ಮುರುಳಿಯಲ್ಲಿ ಓದಿರಿ ಏಕೆಂದರೆ ಬಾಪ್ದಾದಾರವರು ನೋಡಿದರು - ಮೆಜಾರಿಟಿ ಮಕ್ಕಳು ಮುರುಳಿಯೊಂದಿಗೆ ಪ್ರೀತಿಯನ್ನಿಡುತ್ತಾರೆ. ಒಂದುವೇಳೆ ಪ್ರೀತಿಯಿಡಲಿಲ್ಲವೆಂದರೂ ಬಾಪ್ದಾದಾರವರಿಗೆ ಹೇಳುತ್ತಾರೆ - ಬಾಬಾ ನಿಮ್ಮ ಮೇಲೆ ಬಹಳ ಪ್ರೀತಿಯಿದೆ. ಆದರೆ ಬಾಬಾರವರದು ಯಾವುದರೊಂದಿಗೆ ಪ್ರೀತಿಯಿದೆ? ಮುರುಳಿಯೊಂದಿಗೆ. ಮುರುಳಿಗಾಗಿ ಎಷ್ಟು ದೂರದಿಂದ ಬರುತ್ತಾರೆ. ಇಂತಹ ಟೀಚರ್ ಇರುತ್ತಾರೆಯೇ, ಯಾರು ಇಷ್ಟು ಬಹಳ ದೂರದಿಂದ ವಿದ್ಯೆಯನ್ನು ಓದಿಸಲು ಬರುತ್ತಾರೆ! ಅಂದಮೇಲೆ ತಂದೆಗೆ ಮುರುಳಿಯ ಮೇಲೆ ಪ್ರೀತಿಯಿದೆಯಿದೆ ಅಂದಾಗ ಯಾರು ನನ್ನ ಬಾಬಾ ಎಂದು ಹೇಳುತ್ತೀರಿ ಅವರ ಮೊದಲ ಪ್ರೀತಿ ತಂದೆಯ ಜೊತೆ ತಂದೆಯ ಮುರುಳಿಯ ಜೊತೆಯಲ್ಲಿರುತ್ತದೆ. ನೋಡಿ, ಬ್ರಹ್ಮಾ ತಂದೆಯು ಒಂದು ದಿನವೂ ಸಹ ಮುರುಳಿಯನ್ನು ತಪ್ಪಿಸಿರಲಿಲ್ಲ. ಭಲೆ ಬಾಂಬೆಗೂ ಹೋಗುತ್ತಿದ್ದರು, ಕಾರಣ-ಅಕಾರಣದಿಂದ ಹೋಗುತ್ತಿದ್ದರು ಆಗಲೂ ಮುರುಳಿಯನ್ನು ಬರೆಯುತ್ತಿದ್ದರು ಮತ್ತು ಮಾತೇಶ್ವರಿ ಆ ಮುರುಳಿಯನ್ನು ತಿಳಿಸುತ್ತಿದ್ದರು. ಅಂತಿಮ ದಿನದಂದು ಸ್ವಲ್ಪ ಆರೋಗ್ಯ ಸರಿಯಾಗಿರಲಿಲ್ಲ, ಬೆಳಗಿನ ಕ್ಲಾಸ್ ಮಾಡಲಿಲ್ಲ ಆದರೆ ಸಂಜೆ ಕ್ಲಾಸ್ ಮಾಡಿದ ನಂತರವೇ ಅವ್ಯಕ್ತರಾದರು. ಅಂದಮೇಲೆ ಬ್ರಹ್ಮಾ ತಂದೆಗೆ ಯಾವುದರೊಂದಿಗೆ ಪ್ರೀತಿಯಿತ್ತು? ಮುರುಳಿಯೊಂದಿಗೆ. ಯಾರಾದರೂ ತಿಳಿಯುತ್ತೀರಾ - ನನ್ನ ಬಾಬಾರವರೊಂದಿಗೆ ಪ್ರೀತಿಯಿದೆ ಎಂದರೆ ತಂದೆಯ ಪ್ರೀತಿ ಯಾವುದರೊಂದಿಗೆ ಇತ್ತು, ಮಕ್ಕಳಿಗೂ ಇರಬೇಕಲ್ಲವೆ. ಆದ್ದರಿಂದ ಯಾರು ಮುರುಳಿಯೊಂದಿಗೆ ಇಷ್ಟು ಮಹತ್ವಿಕೆಯಿಡುತ್ತೇನೆಂದು ತಿಳಿಯುತ್ತೀರಿ ಅವರು ಕೈಯೆತ್ತಿರಿ. ಒಳ್ಳೆಯದು - ಇಲ್ಲಂತೂ ಎಲ್ಲವೂ ಕಾಣಿಸುತ್ತಿದೆ, ತಂದೆಯು ಹಿಂದೆಯಿರುವವರನ್ನೂ ನೋಡುತ್ತಿದ್ದಾರೆ. ಒಳ್ಳೆಯದು - ಬಹಳ ಒಳ್ಳೆಯದು - ತಂದೆಯು ಮಧ್ಯ-ಮಧ್ಯದಲ್ಲಿ ಪೇಪರ್ ತೆಗೆದುಕೊಳ್ಳುತ್ತಾರೆ. ಇಂದು ಯಾರು ಮುರುಳಿಯನ್ನು ಕೇಳಿಲ್ಲ, ಅದನ್ನು ಟೀಚರ್ ಬರೆದು ಕಳುಹಿಸಿ ಕೊಡಿ. ಇಷ್ಟವಂತು ಇದೆಯಲ್ಲವೆ. ಒಳ್ಳೆಯದು - ಇಂದು ಬ್ರಹ್ಮಾ ತಂದೆ ಪ್ರತಿಯೊಂದು ಮಗುವಿನೊಂದಿಗೆ ಸೇರಿ ಬಹಳ ಬಹಳ ನಯನಗಳ ಮೂಲಕ ಪ್ರತಿಯೊಂದು ಮಗುವಿಗೆ ಸ್ನೇಹದಿಂದ, ನಯನಗಳ ಮೂಲಕ ಸ್ನೇಹ ಕೊಡುತ್ತಿದ್ದಾರೆ. ಒಳ್ಳೆಯದು.

ಡಬಲ್ ವಿದೇಶಿ ಸಹೋದರ-ಸಹೋದರಿಯರೊಂದಿಗೆ:- ವಿದೇಶದವರಿಗೂ ಸೇವೆಯ ಉಮ್ಮಂಗ-ಉತ್ಸಾಹವಿದೆ, ಇದು ದಿನ-ಪ್ರತಿದಿನ ಕಾಣಿಸುತ್ತಿದೆ. ಆದರೆ ಯಾರೇ ಹಳ್ಳಿಯಿಂದ ಬಂದಿದ್ದೀರಿ, ಭಲೆ ವಿದೇಶದಿಂದ, ಭಲೆ ಎಲ್ಲಿಂದಲಾದರೂ ಬಂದಿದ್ದೀರಿ ತಂದೆಯು ಎಲ್ಲರಿಗೂ ಇದನ್ನೇ ಹೇಳುತ್ತಾರೆ - ಸೇವೆಯನ್ನು ಚೆನ್ನಾಗಿ ಮಾಡಿ. ಯಾವಾಗಲಾದರೂ ಸಮಯ ಬದಲಾಗಬಹುದು. ಯಾವ ಸೇವೆ ಮಾಡಬೇಕೆಂದು ಬಯಸುತ್ತೀರಿ ಆದರೆ ಮಾಡಲು ಆಗುವುದೇ ಇಲ್ಲ ಎನ್ನುವ ಸಮಯವೂ ಬರುವುದಿದೆ. ಆದ್ದರಿಂದ ಏನು ಮಾಡಬೇಕು ಅದನ್ನು ಈಗ ಮಾಡಿ. ಯಾವಾಗಲೋ ಅಲ್ಲ, ಈಗ. ಬಾಪ್ದಾದಾರವರು ಸದಾ ಹೇಳುತ್ತಾರೆ - ನಾಳೆಯ ಮೇಲೆ ಬಿಡಬೇಡಿ. ಇವತ್ತೂ ಅಲ್ಲ, ಈಗ. ಏಕೆಂದರೆ ಸಮಯ, ಪಂಚತತ್ವ ತಂದೆಯ ಬಳಿ ಬರುತ್ತವೆ, ನಮಗೆ ಹೇಳಿ-ಎಲ್ಲಿಯವರೆಗೆ ದುಃಖ ನಡೆಯುತ್ತದೆ ಎಂದು. ಸ್ವಯಂ ದುಃಖಿಯಾಗುತ್ತಿದ್ದಾರೆಂದರೆ ಏನು ಮಾಡುವುದು? ಮನುಷ್ಯಾತ್ಮರಿಗೂ ಸಹ ದುಃಖ ಮಾಡುತ್ತವೆಯಲ್ಲವೆ. ಆದ್ದರಿಂದ ಯಾರೆಲ್ಲಾ ಬಂದಿದ್ದೀರಿ ಅವರೆಲ್ಲರೂ ಸಂಕಲ್ಪ ಮಾಡಿ - ಹೇಗೆ ಬ್ರಾಹ್ಮಣ ಜೀವನ ಅವಶ್ಯಕತೆಯಿದೆ ಹಾಗೆಯೇ ಈಗಿನ ಸಮಯದನುಸಾರ ಪ್ರತಿಯೊಬ್ಬರಿಗೂ ಸೇವೆಯೂ ಸಹ ಅವಶ್ಯಕತೆಯಿದೆ. ಮಾಡಿ ಅಥವಾ ಮಾಡಿಸಿ. ಆದರೆ ಡಬಲ್ ವಿದೇಶಿಯರನ್ನು ನೋಡಿ ಇಡೀ ಪರಿವಾರವೂ ಖುಷಿ ಮತ್ತು ಸ್ವಯಂ ಸಹ ಖುಷಿ ಹಾಗೂ ಬಾಪ್ದಾದಾರವರೂ ಖುಷಿಯಾಗುತ್ತಾರೆ. ಉಳಿದಂತೆ ಬಾಪ್ದಾದಾರವರು ಯಾವ ಹೋಮ್ವರ್ಕ್ ಕೊಟ್ಟಿದ್ದಾರೆ, ಮನಜೀತ್ ಜಗತ್ಜೀತ್ ಆಗಲೇಬೇಕಾಗಿದೆ. ತಮ್ಮದೇ ಗಾಯನವಿದೆ, ಅದನ್ನು ರಿಪೀಟ್ ಮಾಡಬೇಕು. ಒಳ್ಳೆಯದು.

ನಾಲ್ಕಾರು ಕಡೆಯಿಂದ ಮಕ್ಕಳ ಮೂಲಕ ಸಂದೇಶ ಬಂದಿದೆ. ನಾಲ್ಕೂ ಕಡೆಯ ಬಂದಿರುವ ಪ್ರೀತಿಯ ಮಧುರಾತಿ ಮಧುರ ಭಾವ ಅಥವಾ ಭಿನ್ನ-ಭಿನ್ನ ಶಬ್ಧಗಳ ನೆನಪು ನಾಲ್ಕೂ ಕಡೆಯಿಂದ ಭಿನ್ನ-ಭಿನ್ನ ಪತ್ರಗಳು ಬಂದಿವೆ, ಎಲ್ಲರಿಗೂ ಬಾಪ್ದಾದಾರವರು ಪ್ರತ್ಯುತ್ತರ ಕೊಡುತ್ತಿದ್ದಾರೆ - ಪ್ರತಿಯೊಂದು ಮಗು ಸ್ನೇಹದಲ್ಲಿ ತಂದೆಯ ಹೃದಯದಲ್ಲಿ ಸಮಾವೇಶವಾಗಿದ್ದಾರೆ ಮತ್ತು ಈ ಅವಿನಾಶಿ ಸ್ನೇಹ ಸದಾ ತಂದೆಯ ಮತ್ತು ಮಕ್ಕಳ ಅನಾದಿ ಅವಿನಾಶಿಯಾಗಿದೆ ಮತ್ತು ಪೂರ್ಣ ಸಂಗಮ ಯುಗ ಈ ತಂದೆ-ಮಕ್ಕಳ ಮಿಲನ ನಿಶ್ಚಿತವಾಗಿಯೇ ಇದೆ. ಒಳ್ಳೆಯದು.

ಈಗ ಯಾವ ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ ಅಥವಾ ದೂರ ಕುಳಿತಿದ್ದರೂ ನೋಡುತ್ತಿದ್ದಾರೆ, ಬಾಪ್ದಾದಾ ಕೇಳಿದರು- ಈಗಂತು ನಾಲ್ಕೂ ಕಡೆ ಈ ಪ್ರಯತ್ನ ಪಟ್ಟಿದ್ದೀರಿ - ಪ್ರತಿಯೊಂದು ದೇಶದಲ್ಲಿ ಸೇವಾಕೇಂದ್ರದಲ್ಲಿಯೂ ಸಹ ಹೋಗಿ ನೋಡುತ್ತಾರೆ, ಕೇಳುತ್ತಾರೆ, ಭಲೆ ರಾತ್ರಿಯಲ್ಲಿ ಎಷ್ಟೇ ಸಮಯದಲ್ಲಿ ನುಡಿಸಲಾಗುತ್ತಿದೆ ಆದರೂ ನೋಡುತ್ತಾರೆ, ಇದೂ ಸಹ ವಿಜ್ಞಾನದ ಸಾಧನಗಳು ತಮಗಾಗಿಯೇ ಹೊರಬಂದಿದೆ ಮತ್ತು ತಮಗೇ ಲಾಭವಾಗುತ್ತಿದೆ. ಒಂದುವೇಳೆ ವಿಜ್ಞಾನದ ಮೂಲಕ ವಿನಾಶವಾಗುತ್ತದೆಯೆಂದರೆ ಅದೂ ಸಹ ತಮ್ಮ ರಾಜ್ಯಕ್ಕಾಗಿ ಮಾಡುತ್ತಿದ್ದಾರೆ. ಅಂದಮೇಲೆ ನಾಲ್ಕೂ ಕಡೆಯ ಮಕ್ಕಳಿಗೆ ವಿಶೇಷವಾಗಿ ಬ್ರಹ್ಮಾ ತಂದೆಯ ನೆನಪು-ಪ್ರೀತಿ, ಹೃದಯದ ಪ್ರೀತಿ ಸ್ವೀಕಾರ ಮಾಡಿರಿ.

ವರದಾನ:
ಸತ್ಯತೆ-ಸ್ವಚ್ಛತೆಯ ಧಾರಣೆಯ ಮೂಲಕ ಸಮೀಪತೆಯ ಅನುಭವ ಮಾಡುವಂತಹ ಸಂಪೂರ್ಣ ಮೂರ್ತಿ ಭವ.

ಸರ್ವ ಧಾರಣೆಗಳಲ್ಲಿ ಮುಖ್ಯ ಧಾರಣೆಯಾಗಿದೆ - ಸತ್ಯತೆ ಹಾಗೂ ಸ್ವಚ್ಛತೆ. ಹೃದಯದಲ್ಲಿ ಒಬ್ಬರಿನ್ನೊಬ್ಬರ ಬಗ್ಗೆ ಸಂಪೂರ್ಣ ಸ್ವಚ್ಛತೆಯಿರಲಿ. ಹೇಗೆ ಸ್ವಚ್ಛವಾದ ವಸ್ತುವಿನಲ್ಲಿ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತದೆಯೋ ಹಾಗೆಯೇ ಒಬ್ಬರಿನ್ನೊಬ್ಬರ ಭಾವನೆ, ಭಾವ-ಸ್ವಭಾವವು ಸ್ಪಷ್ಟವಾಗಿ ಕಾಣಿಸಲಿ. ಎಲ್ಲಿ ಸತ್ಯತೆ-ಸ್ವಚ್ಛತೆಯಿದೆಯೋ ಅಲ್ಲಿ ಸಮೀಪತೆ ಇದೆ. ಹೇಗೆ ಬಾಪ್ದಾದಾರವರ ಸಮೀಪವಿದ್ದೀರಿ ಹಾಗೆಯೇ ಪರಸ್ಪರದಲ್ಲಿಯೂ ಹೃದಯದ ಸಮೀಪತೆ ಇರಲಿ. ಸ್ವಭಾವದ ಭಿನ್ನತೆಗಳು ಸಮಾಪ್ತಿಯಾಗಿ ಬಿಡಲಿ. ಇದಕ್ಕಾಗಿ ಮನಸ್ಸಿನ ಭಾವ ಹಾಗೂ ಸ್ವಭಾವಗಳನ್ನು ಒಟ್ಟುಗೂಡಿಸಬೇಕಾಗಿದೆ. ಯಾವಾಗ ಸ್ವಭಾವದಲ್ಲಿ ಅಂತರವು ಕಾಣಿಸುವುದಿಲ್ಲವೋ ಆಗ ಸಂಪೂರ್ಣ ಮೂರ್ತಿಯೆಂದು ಹೇಳಲಾಗುವುದು.

ಸ್ಲೋಗನ್:
ಹಾಳಾಗಿರುವವರನ್ನು ಸುಧಾರಣೆ ಮಾಡುವುದು – ಅತಿ ಶ್ರೇಷ್ಠವಾದ ಸೇವೆ ಆಗಿದೆ.

ಅವ್ಯಕ್ತ ಸೂಚನೆ:- ಜ್ವಾಲಾ ಸ್ವರೂಪ ಸ್ಥಿತಿಯಲ್ಲಿರುತ್ತ ಶಕ್ತಿಶಾಲಿ ನೆನಪಿನ ಅನುಭವ ಮಾಡಿ.

ಯೋಗವನ್ನು ಜ್ವಾಲಾ ರೂಪವನ್ನಾಗಿ ಮಾಡಿಕೊಳ್ಳಲು ಸೆಕೆಂಡಿನಲ್ಲಿ ಬಿಂದು ಸ್ವರೂಪರಾಗಿ ಮನಸ್ಸು-ಬುದ್ಧಿಯನ್ನು ಏಕಾಗ್ರ ಮಾಡುವ ಅಭ್ಯಾಸ ಪದೇ-ಪದೇ ಮಾಡಿರಿ. ನಿಲ್ಲು ಹೇಳಿದಿರಿ ಮತ್ತು ಸೆಕೆಂಡಿನಲ್ಲಿ ವ್ಯರ್ಥ ದೇಹಭಾನದಿಂದ ಮನಸ್ಸು-ಬುದ್ಧಿ ಏಕಾಗ್ರವಾಗಲಿ. ಇಂತಹ ನಿಯಂತ್ರಣ ಶಕ್ತಿ ಇಡೀದಿನದಲ್ಲಿ ಉಪಯೋಗಿಸಿರಿ. ಶಕ್ತಿಶಾಲಿ ಬ್ರೆಕ್ ಮೂಲಕ ಮನಸ್ಸು-ಬುದ್ಧಿಯನ್ನು ನಿಯಂತ್ರಣ ಮಾಡಿ, ಎಲ್ಲಿ ಮನಸ್ಸು-ಬುದ್ಧಿಯನ್ನು ಜೋಡಿಸಬೇಕೋ ಅಲ್ಲಿ ಸೆಕೆಂಡಿನಲ್ಲಿ ಜೋಡಣೆಯಾಗಲಿ.

ವಿಶೇಷ ಸೂಚನೆ:– ತಿಂಗಳೀನ ಮೂರನೇ ರವಿವಾರದ ಯೋಗ ಅಭ್ಯಾಸ.

ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ಸಹೋದರ ಸಹೋದರಿಯರು ಸಂಘಟಿತ ರೂಪದಲ್ಲಿ ಒಟ್ಟಿಗೆ ಸಂಜೆ 6.30ಯಿಂದ 7.30ಯವರೆಗೆ ತಮ್ಮ ಫರಿಶ್ತಾ ಸ್ವರೂಪದ ಮೊಲಕ ಅಲೆದಾಡುತ್ತಿರುವ ದುಃಖಿ ಅಶಾಂತ ಆತ್ಮರಿಗೆ ಸುಖ ಶಾಂತಿಯ ಪವಿತ್ರ ಕಿರಣಗಳನ್ನು ಕೊಟ್ಟು ಅವರಿಗೆ ಆಶ್ರಯದಾತಾ ಪರಮಾತ್ಮ ತಂದೆಯ ಸ್ಮೃತಿ ತರಿಸುವ ಸೇವೆಯನ್ನು ಮಾಡಿರಿ.