20.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಮ್ಮೊಂದಿಗೆ ತಾವು ಕೇಳಿಕೊಳ್ಳಿ, ನಾನು ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೇನೆ, ಎಷ್ಟು ಸಮಯ ದೇಹೀ-ಅಭಿಮಾನಿ ಸ್ಥಿತಿಯಿರುತ್ತದೆ?”

ಪ್ರಶ್ನೆ:
ಅದೃಷ್ಟವಂತ ಮಕ್ಕಳೇ ತಂದೆಯ ಯಾವ ಆದೇಶವನ್ನು ಪಾಲನೆ ಮಾಡುತ್ತಾರೆ?

ಉತ್ತರ:
ತಂದೆಯ ಆದೇಶವಾಗಿದೆ - ಮಧುರ ಮಕ್ಕಳೇ, ಆತ್ಮಾಭಿಮಾನಿಭವ. ನೀವೆಲ್ಲರೂ ಪುರುಷರಾಗಿದ್ದೀರಿ, ಸ್ತ್ರೀ ಅಲ್ಲ. ನೀವಾತ್ಮರಲ್ಲಿಯೇ ಇಡೀ ಪಾತ್ರವು ಅಡಕವಾಗಿದೆ. ಈಗ ಇದೇ ಪರಿಶ್ರಮ ಅಥವಾ ಅಭ್ಯಾಸ ಮಾಡಿ - ನಾವು ಹೇಗೆ ಆತ್ಮಾಭಿಮಾನಿಯಾಗಿರುವುದು? ಇದೇ ಉನ್ನತ ಗುರಿಯಾಗಿದೆ.

ಗೀತೆ:
ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ......

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳು ಅರ್ಥಾತ್ ಜೀವಾತ್ಮರು ಹೇಳಿದರು - ನಾವು ಹೊಸ ಪ್ರಪಂಚದ ಅದೃಷ್ಠವನ್ನು ಅಂದರೆ ಸ್ವರ್ಗದ ಅದೃಷ್ಟವನ್ನು ಬೆಳಗಿಸಿಕೊಂಡು ಆತ್ಮಿಕ ತಂದೆಯ ಬಳಿ ಕುಳಿತಿದ್ದೇವೆ. ಈಗ ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ, ಇದೇ ಅತಿ ದೊಡ್ಡ ಪರಿಶ್ರಮವಾಗಿದೆ. ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ನಾನಾತ್ಮನು 84 ಜನ್ಮಗಳನ್ನು ತೆಗೆದುಕೊಂಡಿದ್ದೇನೆ, ಕೆಲವೊಮ್ಮೆ ವಕೀಲ, ಕೆಲವೊಮ್ಮೆ ವೈದ್ಯ..... ಆಗಿದ್ದೇನೆ ಎಂದು ತಿಳಿದುಕೊಳ್ಳಿ. ಆತ್ಮವು ಪುರುಷನಾಗಿದೆ. ಎಲ್ಲರೂ ಸಹೋದರರೇ ಹೊರತು ಸಹೋದರಿಯರಲ್ಲ. ಇದು ನನ್ನ ಶರೀರವಾಗಿದೆ ಎಂದು ಆತ್ಮವು ಹೇಳುತ್ತದೆ, ಆ ಲೆಕ್ಕದಿಂದ ಆತ್ಮವು ಪುರುಷನಾಯಿತು. ಈ ಶರೀರವು ಸ್ತ್ರೀಯಾಯಿತು. ಪ್ರತಿಯೊಂದು ಮಾತನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ತಂದೆಯು ಬಹಳ ವಿಶಾಲ, ಸೂಕ್ಷ್ಮ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾನಾತ್ಮನು 84 ಜನ್ಮಗಳನ್ನು ತೆಗೆದುಕೊಂಡಿದ್ದೇನೆ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಿರುತ್ತದೆ. ಆ ಸಂಸ್ಕಾರಗಳನುಸಾರ ಶರೀರವೂ ಅದೇರೀತಿ ಸಿಗುತ್ತದೆ. ಎಲ್ಲವೂ ಆತ್ಮದ ಮೇಲೆ ಆಧಾರಿತವಾಗಿದೆ. ಇದು ಬಹಳ ದೊಡ್ಡ ಪರಿಶ್ರಮವಾಗಿದೆ. ಜನ್ಮ-ಜನ್ಮಾಂತರ ಲೌಕಿಕ ತಂದೆಯನ್ನು ನೆನಪು ಮಾಡಿದಿರಿ. ಈಗ ಪಾರಲೌಕಿಕ ತಂದೆಯನ್ನು ನೆನಪು ಮಾಡಬೇಕಾಗಿದೆ. ತಮ್ಮನ್ನು ಪದೇ-ಪದೇ ಆತ್ಮನೆಂದು ತಿಳಿಯಬೇಕಾಗಿದೆ. ನಾವಾತ್ಮರು ಈ ಶರೀರವನ್ನು ತೆಗೆದುಕೊಳ್ಳುತ್ತೇವೆ. ಈಗ ನಾವಾತ್ಮರಿಗೆ ತಂದೆಯು ಓದಿಸುತ್ತಾರೆ. ಇದು ಆತ್ಮಿಕ ಜ್ಞಾನವಾಗಿದೆ ಯಾವುದನ್ನು ಆತ್ಮಿಕ ತಂದೆಯೇ ಕೊಡುತ್ತಾರೆ. ಮೊಟ್ಟ ಮೊದಲ ಮುಖ್ಯ ಮಾತೇನೆಂದರೆ ಮಕ್ಕಳು ಆತ್ಮಾಭಿಮಾನಿಯಾಗಿರಬೇಕಾಗಿದೆ. ಆತ್ಮಾಭಿಮಾನಿಯಾಗಿ ಇರುವುದು ಅತಿ ದೊಡ್ಡ ಉನ್ನತ ಗುರಿಯಾಗಿದೆ. ಜ್ಞಾನವೇನೂ ಕಷ್ಟವಲ್ಲ, ಜ್ಞಾನದಲ್ಲಿ ಪರಿಶ್ರಮವಿಲ್ಲ. ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದು ಚರಿತ್ರೆ-ಭೂಗೋಳವಾಗಿದೆ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ. ನಂತರ ಸೂಕ್ಷ್ಮವತನದ ದೇವತೆಗಳಾಗಿದ್ದಾರೆ. ವಿಶ್ವದ ಚರಿತ್ರೆ-ಭೂಗೋಳವು ಮನುಷ್ಯ ಸೃಷ್ಟಿಯಲ್ಲಿಯೇ ಇರುತ್ತದೆ. ಯಾವುದೇ ಸೂಕ್ಷ್ಮವತನ, ಮೂಲವತನದಲ್ಲಿ ಚರಿತ್ರೆ-ಭೂಗೋಳವಿರುವುದಿಲ್ಲ, ಅದು ಶಾಂತಿಧಾಮವಾಗಿದೆ. ಸತ್ಯಯುಗವು ಸುಖಧಾಮ, ಕಲಿಯುಗವು ದುಃಖಧಾಮವಾಗಿದೆ. ಇಲ್ಲಿ ರಾವಣ ರಾಜ್ಯದಲ್ಲಿ ಯಾರಿಗೂ ಶಾಂತಿಸಿಗಲು ಸಾಧ್ಯವಿಲ್ಲ. ಈಗ ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ. ನಾವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಕರ್ಮ ಮಾಡುವುದಕ್ಕಾಗಿ ಈ ಕರ್ಮೇಂದ್ರಿಯಗಳು ಸಿಕ್ಕಿವೆ. ಕರ್ಮ ಮಾಡಲಿ, ಮಾಡದಿರಲಿ, ನಾವಂತೂ ಆತ್ಮರಾಗಿದ್ದೇವೆ, ನಮ್ಮ ಸ್ವಧರ್ಮವು ಶಾಂತಿಯಾಗಿದೆ. ಕರ್ಮಯೋಗಿಗಳಲ್ಲವೆ. ಕರ್ಮವನ್ನೂ ಅವಶ್ಯವಾಗಿ ಮಾಡಬೇಕಾಗಿದೆ. ಎಂದೂ ಕರ್ಮ ಸನ್ಯಾಸಿಗಳಾಗಲು ಸಾಧ್ಯವಿಲ್ಲ. ಇದೂ ಸಹ ಈ ಸನ್ಯಾಸಿಗಳ ಪಾತ್ರವಾಗಿದೆ. ಮನೆ-ಮಠವನ್ನು ಬಿಟ್ಟು ಹೋಗುತ್ತಾರೆ. ಭೋಜನವನ್ನು ತಯಾರಿಸುವುದಿಲ್ಲ, ಗೃಹಸ್ಥಿಗಳಿಂದ ಭಿಕ್ಷೆ ಬೇಡುತ್ತಾರೆ ಮತ್ತೆ ಆ ಗೃಹಸ್ಥಿಗಳ ಬಳಿಯೇ ತಿನ್ನುತ್ತಾರಲ್ಲವೆ. ಮನೆ-ಮಠವನ್ನು ಬಿಟ್ಟು ಪುನಃ ಕರ್ಮವನ್ನಂತೂ ಮಾಡುತ್ತಾರೆ. ಕರ್ಮ ಸನ್ಯಾಸವಂತೂ ಆಗಲು ಸಾಧ್ಯವಿಲ್ಲ. ಯಾವಾಗ ಆತ್ಮವು ಶಾಂತಿಧಾಮದಲ್ಲಿ ಇರುವುದು ಆಗ ಕರ್ಮ ಸನ್ಯಾಸವಾಗುತ್ತದೆ. ಅಲ್ಲಿ ಕರ್ಮೇಂದ್ರಿಯಗಳೇ ಇಲ್ಲವೆಂದಮೇಲೆ ಕರ್ಮವನ್ನು ಹೇಗೆ ಮಾಡುತ್ತಾರೆ? ಇದಕ್ಕೆ ಕರ್ಮ ಕ್ಷೇತ್ರವೆಂದು ಹೇಳುತ್ತಾರೆ. ಕರ್ಮ ಕ್ಷೇತ್ರದಲ್ಲಿ ಎಲ್ಲರೂ ಬರಬೇಕಾಗುತ್ತದೆ. ಅದು ಶಾಂತಿಧಾಮ ಅಥವಾ ಮೂಲವತನವಾಗಿದೆ. ನಾವಾತ್ಮರು ಬ್ರಹ್ಮತತ್ವದಲ್ಲಿ ಲೀನವಾಗುತ್ತೇವೆ ಎಂದಲ್ಲ. ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಇಲ್ಲಿ ಕರ್ಮ ಕ್ಷೇತ್ರಕ್ಕೆ ಪಾತ್ರವನ್ನಭಿನಯಿಸಲು ಬರುತ್ತೇವೆ, ಇವು ವಿಸ್ತಾರದ ಮಾತುಗಳಾಗಿವೆ. ಸಾರ ರೂಪದಲ್ಲಂತೂ ಹೇಳುತ್ತಾರೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುವುದು. ಇದಕ್ಕೇ ಭಾರತದ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಇದಕ್ಕೆ ಯೋಗವಲ್ಲ, ನೆನಪು ಎಂದು ಹೇಳಬೇಕು. ಇದರಲ್ಲಿ ಪರಿಶ್ರಮವಿದೆ. ಬಹಳ ಕೆಲವರೇ ಯೋಗಿಗಳಾಗುತ್ತಾರೆ. ಯೋಗದ ಶಿಕ್ಷಣವು ಮೊದಲು ಬೇಕು ನಂತರ ಜ್ಞಾನ. ಮೊಟ್ಟ ಮೊದಲು ತಂದೆಯ ನೆನಪಾಗಿದೆ.

ತಂದೆಯು ತಿಳಿಸುತ್ತಾರೆ – ದೇಹಿ ಅಭಿಮಾನಿಯಾಗಿ. ಇದು ಆತ್ಮಿಕ ನೆನಪಿನ ಯಾತ್ರೆಯಾಗಿದೆ. ಜ್ಞಾನದ ಯಾತ್ರೆಯಲ್ಲ. ಇದರಲ್ಲಿ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಯಾರಾದರೂ ಭಲೆ ಬಿ.ಕೆ. ಎಂದು ಕರೆಸಿಕೊಳ್ಳಬಹುದು ಆದರೆ ತಂದೆಯನ್ನು ನೆನಪು ಮಾಡುವುದಿಲ್ಲ. ತಂದೆಯು ಬಂದು ಬ್ರಹ್ಮಾರವರ ಮೂಲಕ ನೀವು ಮಕ್ಕಳನ್ನು ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ. ಇವರು ದೇಹಾಭಿಮಾನಿಯಾಗಿದ್ದರು, ಈಗ ದೇಹೀ-ಅಭಿಮಾನಿಯಾಗುವ ಪುರುಷಾರ್ಥವು ನಡೆಯುತ್ತಿದೆ. ಬ್ರಹ್ಮನು ಭಗವಂತನಲ್ಲ. ಇಲ್ಲಂತೂ ಎಲ್ಲಾ ಮನುಷ್ಯ ಮಾತ್ರರೂ ಪತಿತರಾಗಿದ್ದಾರೆ, ಪಾವನ ಶ್ರೇಷ್ಠಾಚಾರಿಗಳು ಒಬ್ಬರೂ ಇಲ್ಲ. ಆತ್ಮನಿಗಾಗಿಯೇ ಪುಣ್ಯಾತ್ಮ, ಪಾಪಾತ್ಮನೆಂದು ಹೇಳಲಾಗುತ್ತದೆ. ನಾನಾತ್ಮನಿಗೆ ತೊಂದರೆ ಕೊಡಬೇಡಿ ಎಂದು ಮನುಷ್ಯರೂ ಹೇಳುತ್ತಾರೆ ಆದರೆ ನಾನು ಯಾರು? ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಕೇಳಲಾಗುತ್ತದೆ - ಹೇ ಜೀವಾತ್ಮ, ನೀವೇನು ಉದ್ಯೋಗ ಮಾಡುತ್ತೀರಿ? ಆಗ ಹೇಳುತ್ತಾರೆ - ನಾನಾತ್ಮನು ಈ ಶರೀರದ ಮೂಲಕ ಇಂತಹ ಉದ್ಯೋಗ ಮಾಡುತ್ತೇನೆ ಅಂದಾಗ ಮೊಟ್ಟ ಮೊದಲು ಈ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿ. ಈ ಆತ್ಮಿಕ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಬಂದು ದೇಹೀ ಅಭಿಮಾನಿಗಳನ್ನಾಗಿ ಮಾಡುತ್ತಾರೆ. ಯಾರಾದರೂ ಜ್ಞಾನದಲ್ಲಿ ತೀಕ್ಷ್ಣವಾಗಿ ಮುಂದೆ ಹೋದರೆ ಅವರು ಪಕ್ಕಾ ಆತ್ಮಾಭಿಮಾನಿಯಾಗಿದ್ದಾರೆ ಎಂದಲ್ಲ. ಆತ್ಮಾಭಿಮಾನಿಗಳು ಜ್ಞಾನವನ್ನು ಚೆನ್ನಾಗಿ ಧಾರಣೆ ಮಾಡುತ್ತಾರೆ, ಉಳಿದಂತೆ ಅನೇಕರಿದ್ದಾರೆ ಯಾರು ಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಆದರೆ ಶಿವ ತಂದೆಯ ನೆನಪನ್ನು ಮರೆತು ಹೋಗುತ್ತಾರೆ. ಪದೇ-ಪದೇ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿ ಜಿನ್ಹನ ತರಹ ಆಗಬೇಕಾಗಿದೆ. ಜಿನ್ಹನ ಕಥೆಯಿದೆ, ತಂದೆಯು ಈ ಕೆಲಸವನ್ನು ಕೊಡುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಇಲ್ಲದಿದ್ದರೆ ಮಾಯೆಯು ನಿಮ್ಮನ್ನು ತಿಂದುಬಿಡುವುದು. ಮಾಯೆಯು ಜಿನ್ಹ್ ಆಗಿದೆ, ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನಿಮಗೆ ತಂದೆಯ ಆಕರ್ಷಣೆಯಾಗುತ್ತದೆ. ಮಾಯೆಯು ಉಲ್ಟಾ ಮಾಡಿ ನಿಮ್ಮನ್ನು ಬಹಳ ಬಿರುಗಾಳಿಗಳಲ್ಲಿ ತರುತ್ತದೆ. ಬುದ್ಧಿಯಲ್ಲಿ ಇದೇ ನೆನಪಿರಲಿ - ನಾವಾತ್ಮರು ತಂದೆಯ ಮಕ್ಕಳಾಗಿದ್ದೇವೆ - ಇದೇ ಖುಷಿಯಲ್ಲಿ ಇರಬೇಕಾಗಿದೆ.

ದೇಹಾಭಿಮಾನದಲ್ಲಿ ಬರುವುದರಿಂದ ಮಾಯೆಯು ಪೆಟ್ಟು ಕೊಡುತ್ತದೆ. ಹಾತಂ ತಾಯಿಯ ಆಟವನ್ನೂ ತೋರಿಸುತ್ತಾರೆ. ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳುತ್ತಿದ್ದಂತೆಯೇ ಮಾಯವಾಗಿ ಬಿಡುತ್ತಾರೆ. ನಿಮಗೂ ಸಹ ಒಂದುವೇಳೆ ತಂದೆಯ ನೆನಪಿನಲ್ಲಿ ಇದ್ದಿದ್ದೇ ಆದರೆ ಮಾಯೆಯು ತೊಂದರೆ ಕೊಡುವುದಿಲ್ಲ, ಇದರಲ್ಲಿಯೇ ಯುದ್ಧವು ನಡೆಯುತ್ತದೆ. ನೀವು ನೆನಪು ಮಾಡುವ ಪುರುಷಾರ್ಥ ಮಾಡುತ್ತೀರಿ ಆದರೆ ಮಾಯೆಯು ಈ ರೀತಿ ಉಸಿರು ಕಟ್ಟಿಸುತ್ತದೆ ನೆನಪು ಮಾಡುವುದಕ್ಕೇ ಬಿಡುವುದಿಲ್ಲ. ನೀವು ಬೇಸರವಾಗಿ ಮಲಗಿ ಬಿಡುತ್ತೀರಿ. ಮಾಯೆಯೊಂದಿಗೆ ಇಷ್ಟು ಯುದ್ಧವು ನಡೆಯುತ್ತದೆ. ಬಾಕಿ ವಿಶ್ವದ ಚರಿತ್ರೆ, ಭೂಗೋಳವನ್ನು ತಿಳಿದುಕೊಳ್ಳುವುದು ಕಷ್ಟವೇನೂ ಇಲ್ಲ. ನಾವಂತೂ ಬಹಳ ಚೆನ್ನಾಗಿ ತಿಳಿಸಿ ಕೊಡುತ್ತೇವೆ ಎಂದಲ್ಲ. ನೆನಪಿನದೇ ಮೊಟ್ಟ ಮೊದಲ ಮಾತಾಗಿದೆ. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಮೊಟ್ಟ ಮೊದಲು ಈ ಪಾಠವನ್ನು ಕಲಿಸಬೇಕಾಗಿದೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಮೊದಲು ಇದೇ ಪಾಠವನ್ನು ತಿಳಿಸಬೇಕಾಗಿದೆ. ಭಾರತದ ಪ್ರಾಚೀನ ಯೋಗವನ್ನು ಯಾರೂ ಕಲಿಸಲು ಸಾಧ್ಯವಿಲ್ಲ, ತಂದೆಯು ಬಂದು ಕಲಿಸಿದಾಗಲೇ ಕಲಿಯುವರು. ಮನುಷ್ಯರು ಮನುಷ್ಯರಿಗೆ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಇದು ಅಸಾಧ್ಯವಾಗಿದೆ. ಸತ್ಯಯುಗದಲ್ಲಂತೂ ಪಾವನರೇ ಇರುತ್ತಾರೆ, ಅಲ್ಲಂತೂ ಪ್ರಾಲಬ್ಧವನ್ನು ಭೋಗಿಸುತ್ತಾರೆ. ಜ್ಞಾನ-ಅಜ್ಞಾನದ ಮಾತಿರುವುದಿಲ್ಲ. ಭಕ್ತಿ ಮಾರ್ಗದಲ್ಲಿಯೇ ತಂದೆಯನ್ನು ಕರೆಯುತ್ತಾರೆ - ಬಂದು ದುಃಖವನ್ನು ಹರಿಸಿ ಸುಖ ಕೊಡಿ ಎಂದು. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಗುರು-ಗೋಸಾಯಿಗಳು ಇರುವುದಿಲ್ಲ, ಅಲ್ಲಂತೂ ಸದ್ಗತಿ ಪಡೆದಿರುತ್ತಾರೆ. ನೀವು 21 ಜನ್ಮಗಳಿಗಾಗಿ ಸದ್ಗತಿಯನ್ನು ಪಡೆಯುತ್ತೀರಿ 21 ಪೀಳಿಗೆಗಳು. 21 ಜನ್ಮಗಳ ಉದ್ಧಾರ ಮಾಡುವವರೇ ಬ್ರಹ್ಮಾಕುಮಾರಿ ಎಂದು ಹೇಳುತ್ತಾರೆ, ಇದು ಭಾರತದಲ್ಲಿಯೇ ಗಾಯನವಿದೆ. ಭಾರತದಲ್ಲಿಯೇ ನಿಮಗೆ 21 ಜನ್ಮಗಳ ಆಸ್ತಿಯು ಸಿಗುತ್ತದೆ, ಅಲ್ಲಿ ನೀವು ಒಂದೇ ದೇವಿ-ದೇವತಾ ಧರ್ಮದವರು ಇರುತ್ತೀರಿ, ಮತ್ತ್ಯಾವುದೇ ಧರ್ಮವು ಇರುವುದಿಲ್ಲ. ತಂದೆಯು ಬಂದು ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಪವಿತ್ರರಾಗದ ವಿನಃ ನಾವು ಹಿಂತಿರುಗಿ ಹೋಗಲು ಹೇಗೆ ಸಾಧ್ಯ? ಇಲ್ಲಂತೂ ಎಲ್ಲರೂ ವಿಕಾರಿ, ಪತಿತರಾಗಿದ್ದಾರೆ. ಯಾರು-ಯಾರು ಧರ್ಮ ಸ್ಥಾಪಕರಿದ್ದಾರೆಯೋ ಅವರು ಮತ್ತೆ ಪಾಲನೆ ಮಾಡುತ್ತಾರೆ. ಅವರ ಧರ್ಮವು ವೃದ್ಧಿಯಾಗುತ್ತಾ ಹೋಗುತ್ತದೆ. ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಒಬ್ಬ ಪಾತ್ರಧಾರಿಯೂ ಹೋಗಲು ಸಾಧ್ಯವಿಲ್ಲ. ಎಲ್ಲರೂ ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಬ್ರಹ್ಮನಿಗಾಗಿಯೂ ಬ್ರಹ್ಮನ ದಿನ, ಬ್ರಹ್ಮನ ರಾತ್ರಿಯೆಂದು ಹೇಳುತ್ತಾರೆ ಅಂದಾಗ ಸೃಷ್ಟಿಯಲ್ಲಿ ಕೇವಲ ಬ್ರಹ್ಮನೊಬ್ಬರೇ ಇರುವರೇ? ಈಗ ನೀವು ಬ್ರಾಹ್ಮಣ ಕುಲದವರಾಗುತ್ತಿದ್ದೀರಿ, ನೀವು ರಾತ್ರಿಯಲ್ಲಿದ್ದಿರಿ, ಈಗ ದಿನದಲ್ಲಿ ಹೋಗುತ್ತಿದ್ದೀರಿ.

ನಿಮಗೆ ತಿಳಿಸಿದ್ದಾರೆ - ಎಷ್ಟು ಸಮಯ ಪೂಜ್ಯತನದಲ್ಲಿ, ಎಷ್ಟು ಜನ್ಮಗಳು ಪೂಜಾರಿಗಳಾಗುತ್ತೀರಿ? ಎಲ್ಲಿಯವರೆಗೆ ತಂದೆಯು ಬರುವುದಿಲ್ಲವೋ ಅಲ್ಲಿಯವರೆಗೆ ಯಾರೂ ಭ್ರಷ್ಟಾಚಾರಿಗಳಿಂದ ಶ್ರೇಷ್ಠಾಚಾರಿಗಳಾಗಲು ಸಾಧ್ಯವಿಲ್ಲ. ಯಾರು ವಿಕಾರದಿಂದ ಜನ್ಮ ಪಡೆಯುವರೋ ಅವರಿಗೆ ಭ್ರಷ್ಟಾಚಾರಿಗಳೆಂದು ಹೇಳಲಾಗುತ್ತದೆ ಆದ್ದರಿಂದ ಇದಕ್ಕೆ ನರಕವೆಂದು ಹೇಳುವರು. ಸ್ವರ್ಗ ಮತ್ತು ನರಕ ಎರಡರಲ್ಲಿಯೂ ಒಂದುವೇಳೆ ದುಃಖವಿದ್ದರೆ ಅದಕ್ಕೆ ಸ್ವರ್ಗವೆಂದು ಹೇಳಲಾಗುವುದಿಲ್ಲ. ಎಲ್ಲಿಯವರೆಗೆ ಪೂರ್ಣ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಉಲ್ಟಾ-ಸುಲ್ಟಾ ಪ್ರಶ್ನೆ ಮಾಡುತ್ತಾರೆ. ನೀವು ತಿಳಿಸಬೇಕಾಗಿದೆ - ಭಾರತವು ಬಹಳ ಶ್ರೇಷ್ಠವಾಗಿತ್ತು, ಹೇಗೆ ಈಶ್ವರನ ಮಹಿಮೆಯು ಅಪರಂಪಾರವಾಗಿದೆಯೋ ಹಾಗೆಯೇ ಭಾರತದ ಮಹಿಮೆಯೂ ಅಪರಂಪಾರವಾಗಿದೆ. ಭಾರತವು ಹೇಗಿತ್ತು? ಆ ರೀತಿ ಯಾರು ಮಾಡಿದರು? ತಂದೆ. ಅವರದೇ ಮಹಿಮೆಯನ್ನು ಹಾಡುತ್ತಾರೆ. ತಂದೆಯೇ ಬಂದು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಮನುಷ್ಯ ಮಾತ್ರರನ್ನು ದುರ್ಗತಿಯಿಂದ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ, ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಅದಕ್ಕಾಗಿಯೇ ಮನುಷ್ಯರು ಪುರುಷಾರ್ಥ ಮಾಡುತ್ತಾರೆ. ಅದಕ್ಕೆ ಅಟಲ ಸುಖ, ಅಟಲ ಶಾಂತಿ, ಅಟಲ ಪವಿತ್ರತೆಯೆಂದು ಹೇಳಲಾಗುತ್ತದೆ. ಅಲ್ಲಿ ನೀವು ಸುಖದಲ್ಲಿಯೂ ಇರುತ್ತೀರಿ, ಶಾಂತಿಯಲ್ಲಿಯೂ ಇರುತ್ತೀರಿ, ಇನ್ನುಳಿದ ಆತ್ಮರು ಶಾಂತಿಯಲಿ ಇ್ಲರುತ್ತಾರೆ. ಹೆಚ್ಚು ಜನ್ಮಗಳನ್ನು ನೀವೇ ತೆಗೆದುಕೊಳ್ಳುತ್ತೀರಿ. ಕಡಿಮೆ ಜನ್ಮಗಳನ್ನು ತೆಗೆದುಕೊಳ್ಳುವವರು ಅಟಲ ಶಾಂತಿಯಲ್ಲಿರುತ್ತಾರೆ. ಅವರು ಹೇಗೆ ಸೊಳ್ಳೆಗಳಂತೆ ಬಂದರು, ಒಂದು ಅಥವಾ ಅರ್ಧ ಜನ್ಮ ಪಾತ್ರವನ್ನು ಅಭಿನಯಿಸಿದರು, ಅಂತಹವರಿಗೆ ಯಾವುದೇ ಬೆಲೆಯಿಲ್ಲ, ಸೊಳ್ಳೆಗಳಿಗೆ ಏನು ಬೆಲೆಯಿದೆ, ರಾತ್ರಿಯಲ್ಲಿ ಹುಟ್ಟುತ್ತವೆ, ರಾತ್ರಿಯಲ್ಲಿಯೇ ಸತ್ತು ಹೋಗುತ್ತವೆ. ಈ ಸಮಯದಲ್ಲಿ ಬಹಳ ಮಂದಿ ಶಾಂತಿಯನ್ನೇ ಬಯಸುತ್ತಾರೆ ಏಕೆಂದರೆ ಈ ಸಮಯದ ಗುರುಗಳು ಶಾಂತಿಯಲ್ಲಿ ಹೋಗುವವರಾಗಿದ್ದಾರೆ.

ನೀವಿಲ್ಲಿ ಸ್ವರ್ಗವಾಸಿಗಳಾಗಲು ಬಂದಿದ್ದೀರಿ. ಸ್ವರ್ಗವಾಸಿಗಳಿಗೆ ಶಾಂತಿವಾಸಿಗಳು ಎಂದು ಹೇಳುವುದಿಲ್ಲ. ಶಾಂತಿವಾಸಿ ಎಂದು ನಿರಾಕಾರಿ ಪ್ರಪಂಚಕ್ಕೆ ಹೇಳಲಾಗುತ್ತದೆ. ಮುಕ್ತಿ ಶಬ್ಧವನ್ನು ಗುರುಗಳಿಂದ ಕಲಿಯುತ್ತಾರೆ. ಮಾತೆಯರು ವೈಕುಂಠ ಪುರಿಯಲ್ಲಿ ಹೋಗುವುದಕ್ಕಾಗಿ ವ್ರತ-ನಿಯಮಗಳನ್ನು ಇಟ್ಟುಕೊಳ್ಳುತ್ತಾರೆ. ಯಾರಾದರೂ ಮರಣ ಹೊಂದಿದಾಗಲೂ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ, ಯಾರೂ ಆಗುವುದಿಲ್ಲ ಆದರೆ ಭಾರತವಾಸಿಗಳು ಸ್ವರ್ಗವನ್ನೇ ಒಪ್ಪುತ್ತಾರೆ. ಭಾರತವು ಸ್ವರ್ಗವಾಗಿತ್ತು ಎಂದು ತಿಳಿಯುತ್ತಾರೆ. ಶಿವ ತಂದೆಯು ಭಾರತದಲ್ಲಿಯೇ ಬಂದು ಸ್ವರ್ಗದ ರಚನೆ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಇಲ್ಲಿಯೇ ರಚಿಸುತ್ತಾರೆ. ಅವರು ಸ್ವರ್ಗದಲ್ಲಂತೂ ಬರುವುದಿಲ್ಲ. ನಾನು ಬರುವುದೇ ಸ್ವರ್ಗ ಮತ್ತು ನರಕದ ಸಂಗಮದಲ್ಲಿ ಎಂದು ತಂದೆಯು ಹೇಳುತ್ತಾರೆ. ಕಲ್ಪ-ಕಲ್ಪದ ಸಂಗಮದಲ್ಲಿ ಬರುತ್ತಾರೆ. ಇದಕ್ಕೆ ಅವರು ಯುಗೇ ಯುಗೇ ಎಂದು ಬರೆದು ಬಿಟ್ಟಿದ್ದಾರೆ. ಕಲ್ಪದ ಅಕ್ಷರವನ್ನು ಮರೆತು ಹೋಗಿದ್ದಾರೆ. ಇದೂ ಸಹ ಆಟವು ಮಾಡಲ್ಪಟ್ಟಿದೆ, ಮತ್ತೆ ಇದೇ ಪುನರಾವರ್ತನೆ ಆಗುವುದು. ಈ ಅಂತಿಮ ಜನ್ಮದಲ್ಲಿ ನೀವು ತಂದೆಯನ್ನು ಮತ್ತು ಸೃಷ್ಟಿಚಕ್ರವನ್ನು ತಿಳಿದುಕೊಂಡಿದ್ದೀರಿ, ನಂಬರ್ವಾರ್ ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವು ಭಾರತವಾಸಿಗಳ ಮೇಲೆ ಇಡೀ ಆಟವು ಮಾಡಲ್ಪಟ್ಟಿದೆ. ನೀವೀಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತೀರಿ. ತಂದೆಯ ನೆನಪಿನಿಂದಲೇ ರಾಜ್ಯವನ್ನು ಪಡೆಯುತ್ತೀರಿ. ಚಿತ್ರಗಳೂ ಇವೆಯಲ್ಲವೆ. ಇವೆಲ್ಲಾ ಚಿತ್ರಗಳನ್ನು ಯಾರು ಮಾಡಿದರು! ಇವರಿಗೆ ಯಾರೂ ಗುರು-ಗೋಸಾಯಿಗಳಂತೂ ಇಲ್ಲ. ಒಂದುವೇಳೆ ಗುರುವಿದ್ದಿದ್ದರೂ ಸಹ ಗುರುವಿಗೆ ಕೇವಲ ಒಬ್ಬ ಶಿಷ್ಯನೇ ಇರುವರೇ? ಅನೇಕರು ಇರುವರಲ್ಲವೆ. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಮ್ಮ ಚಿತ್ರಗಳನ್ನು ದಾದಾರವರು ಮಾಡಿಸಿದ್ದಾರೆಯೇ ಎಂದು ಅನೇಕರು ಕೇಳುತ್ತಾರೆ. ಇವನ್ನು ತಂದೆಯೇ ದಿವ್ಯ ದೃಷ್ಟಿಯಿಂದ ಸಾಕ್ಷಾತ್ಕಾರ ಮಾಡಿಸಿದ್ದಾರೆ, ವೈಕುಂಠದ ಸಾಕ್ಷಾತ್ಕಾರವನ್ನೂ ಮಾಡಿಸಿದ್ದಾರೆ. ಅಲ್ಲಿ ಹೇಗೆ ಶಾಲೆಯು ನಡೆಯುತ್ತದೆ. ಯಾವ ಭಾಷೆಯಿರುತ್ತದೆ, ಎಲ್ಲವೂ ಸಾಕ್ಷಾತ್ಕಾರ ಮಾಡಿದ್ದಾರೆ. ಮಕ್ಕಳು ಭಟ್ಟಿಯಲ್ಲಿದ್ದಾಗ ತಂದೆಯು ಬಹಳ ಖುಷಿ ಪಡಿಸುತ್ತಿದ್ದರು. ಕರಾಚಿಯಲ್ಲಿ ಕೇವಲ ನೀವೇ ಪ್ರತ್ಯೇಕವಾಗಿ ಇದ್ದಿರಿ, ಹೇಗೆ ಅಲ್ಲಿ ತಮ್ಮದೇ ರಾಜ್ಯವಾಗಿತ್ತು, ತಮ್ಮದೇ ಮಾತು ತಮ್ಮದೇ ರಾಜ್ಯ..... ಅನ್ಯರ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇವರು ಖುದಾಪ್ರಸ್ಥರೆಂದು ತಿಳಿಯುತ್ತಿದ್ದರು. ತಂದೆಯು ತಿಳಿಸಿದ್ದಾರೆ - ನೀವು ಒಬ್ಬ ತಂದೆಯವರಾಗಿದ್ದೀರಿ, ನನ್ ಬಟ್ ಒನ್ (ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡಬಾರದು) ಆ ನನ್ಗಳು ಕ್ರಿಸ್ತನನ್ನೇ ತಿಳಿದುಕೊಂಡಿರುತ್ತಾರೆ, ಅವರ ವಿನಃ ಮತ್ತ್ಯಾರನ್ನೂ ಅಲ್ಲ.

ನೀವು ತಿಳಿದುಕೊಂಡಿದ್ದೀರಿ - ಆಸ್ತಿಯು ಒಬ್ಬ ಶಿವ ತಂದೆಯಿಂದಲೇ ಸಿಗುತ್ತದೆ, ಶಿವ ತಂದೆಯು ಬಿಂದುವಾಗಿದ್ದಾರೆ, ಅವರೂ ಸಹ ಯಾರ ಮೂಲಕವಾದರೂ ತಿಳಿಸುವರಲ್ಲವೆ. ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ ಇರುವರು. ಇವರ ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿ ಪತಿತ ಶರೀರದಲ್ಲಿ ಪ್ರವೇಶ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ-
1. ಜ್ಞಾನವನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ಆತ್ಮಾಭಿಮಾನಿಗಳಾಗಬೇಕಾಗಿದೆ. ಇದೇ ಪರಿಶ್ರಮವಿದೆ. ಇದೇ ಉನ್ನತಗುರಿಯಾಗಿದೆ. ಈ ಪರಿಶ್ರಮದಿಂದ ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ.

2. ಜಿನ್ಹ್ ಆಗಿ ನೆನಪಿನ ಯಾತ್ರೆ ಮಾಡಬೇಕಾಗಿದೆ. ಮಾಯೆಯು ಎಷ್ಟಾದರೂ ವಿಘ್ನಗಳನ್ನು ಹಾಕಲಿ ಆದರೆ ಬಾಯಲ್ಲಿ ಜ್ಞಾನದ ಉಂಗುರವನ್ನು ಹಾಕಿಕೊಳ್ಳಬೇಕಾಗಿದೆ. ಮಾಯೆಯಿಂದ ಬೇಸರವಾಗಬಾರದು. ಒಬ್ಬ ತಂದೆಯ ನೆನಪಿನಲ್ಲಿದ್ದು ಬಿರುಗಾಳಿಗಳನ್ನು ದೂರಸರಿಸಬೇಕಾಗಿದೆ.

ವರದಾನ:
ಸಾಧನಗಳನ್ನು ಉಪಯೋಗಿಸುತ್ತಾ ಸಾಧನವನ್ನೇ ತಮ್ಮ ಆಧಾರವನ್ನಾಗಿ ಮಾಡಿಕೊಳ್ಳುವಂತಹ ಸಿದ್ಧಿ ಸ್ವರೂಪ ಭವ.

ಹಳೆಯ ಪ್ರಪಂಚದ ಆಕರ್ಷಣಮಯ ದೃಶ್ಯ, ಅಲ್ಪಕಾಲದ ಸುಖದ ಸಾಧನಗಳನ್ನು ಉಪಯೋಗಿಸುತ್ತಾ ಅಥವಾ ನೋಡುತ್ತಾ ಇರುತ್ತೀರೆಂದರೆ, ಆ ಸಾಧನಗಳಲ್ಲಿ ವಿವಶರಾಗಿ ಬಿಡುತ್ತೀರಿ. ಸಾಧನಗಳ ಆಧಾರದ ಮೇಲೆ ಸಾಧನೆ ಈ ರೀತಿಯದು - ಹೇಗೆಂದರೆ ಮರಳುಗಾಡಿನ ತಳಪಾಯದಲ್ಲಿ ಕಟ್ಟಡ ಕಟ್ಟುವಂತೆ. ಆದ್ದರಿಂದ ಯಾವುದೇ ವಿನಾಶಿ ಸಾಧನಗಳ ಆಧಾರದ ಮೇಲೆ ಅವಿನಾಶಿ ಸಾಧನೆಯಿರಬಾರದು. ಸಾಧನವು ನಿಮಿತ್ತವಷ್ಟೇ ಮತ್ತು ಸಾಧನವು ನಿರ್ಮಾಣದ ಆಧಾರವಾಗಿದೆ. ಆದ್ದರಿಂದ ಸಾಧನೆಗೆ ಮಹತ್ವ ಕೊಡುತ್ತೀರೆಂದರೆ ಸಾಧನೆಯು ಸಿದ್ಧಿಯನ್ನು ಪ್ರಾಪ್ತಿ ಮಾಡಿಸುತ್ತದೆ.

ಸ್ಲೋಗನ್:
ಯಾವುದೇ ಬಲಹೀನತೆಯ ಅಂಶವಿದ್ದರೆ ವಂಶವೇ ಉತ್ಪನ್ನವಾಗುತ್ತದೆ ಹಾಗೂ ಪರವಶರನ್ನಾಗಿ ಮಾಡಿ ಬಿಡುತ್ತದೆ.

ಅವ್ಯಕ್ತ ಸೂಚನೆ:– “ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ”

ಬುದ್ಧಿಯನ್ನು ಒಂದು ನೆಲೆಯಲ್ಲಿ ಸ್ಥಿರ ಮಾಡುವ ಯಾವ ಯುಕ್ತಿ ಸಿಕ್ಕಿದೆ, ಇದನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿ. ಅಲುಗಾಡಲು ಬಿಡಬೇಡಿ. ದೇಹ ಹಾಗೂ ದೇಹದ ಪ್ರಪಂಚದಿಂದ ಭಿನ್ನರಾಗಿ, ಮನಸ್ಸು ಬುದ್ಧಿಯ ವಿಮಾನದಿಂದ ಸೆಕೆಂಡ್ನಲ್ಲಿ ಅಕಾರಿ ಹಾಗೂ ನಿರಾಕಾರಿ ಸ್ಥಿತಿಯ ಅನುಭವ ಮಾಡಿ. ಬುದ್ಧಿಯನ್ನು ಅಲುಗಾಡಲು ಬಿಡಬೇಡಿ, ಇಲ್ಲವಾದರೆ ಯುದ್ಧದಲ್ಲಿ ಬಹಳ ಸಮಯ ವ್ಯರ್ಥವಾಗುವುದು. ಹೇಗೆ ತಪಸ್ವಿಗಳು ಸದಾ ಆಸನದ ಮೇಲೆ ಕುಳಿತುಕೊಂಡಿದ್ದಾರೆ ಅದೇ ರೀತಿ ತಾವು ತಮ್ಮ ಏಕ ರಸ ಸ್ಥಿತಿಯ ಆಸನದ ಮೇಲೆ ವಿರಾಜಮಾನರಾಗಿ ಇರಿ ಆಗ ಭವಿಷ್ಯ ಸಿಂಹಾಸನ ಸಿಗುವುದು.