20.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ತಂದೆಯ ಪ್ರೀತಿಯನ್ನು ಪಡೆಯಬೇಕೆಂದರೆ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ, ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂಬ ಖುಷಿಯಲ್ಲಿರಿ”

ಪ್ರಶ್ನೆ:
ಸಂಗಮಯುಗದಲ್ಲಿ ನೀವು ಬ್ರಾಹ್ಮಣರಿಂದ ಫರಿಶ್ತೆಗಳಾಗಲು ಯಾವ ಗುಪ್ತ ಪರಿಶ್ರಮ ಪಡುತ್ತೀರಿ?

ಉತ್ತರ:
ನೀವು ಬ್ರಾಹ್ಮಣರಿಗೆ ಪವಿತ್ರರಾಗುವ ಗುಪ್ತ ಪರಿಶ್ರಮವನ್ನು ಪಡಬೇಕಾಗುತ್ತದೆ. ನೀವು ಮಕ್ಕಳು ಸಂಗಮಯುಗದಲ್ಲಿ ಸಹೋದರ-ಸಹೋದರರಾಗಿದ್ದೀರಿ. ಸಹೋದರ-ಸಹೋದರಿಯರ ನಡುವೆ ಕೆಟ್ಟದೃಷ್ಟಿಯಿರಲು ಸಾಧ್ಯವಿಲ್ಲ. ಸ್ತ್ರೀ-ಪುರುಷರು ಜೊತೆಯಲ್ಲಿರುತ್ತಾ ಇಬ್ಬರೂ ತಮ್ಮನ್ನು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರೆಂದು ತಿಳಿಯುತ್ತೀರಿ. ಈ ಸ್ಮೃತಿಯಿಂದ ಯಾವಾಗ ಸಂಪೂರ್ಣ ಪವಿತ್ರರಾಗುವಿರೋ ಆಗ ಫರಿಶ್ತೆಗಳಾಗುವಿರಿ.

ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದು ಇಲ್ಲಿ ಕುಳಿತುಕೊಳ್ಳಿ. ಈ ರಹಸ್ಯವನ್ನು ನೀವು ಮಕ್ಕಳೂ ಸಹ ತಿಳಿಸಿಕೊಡಬೇಕಾಗಿದೆ. ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳುತ್ತೀರೆಂದರೆ ತಂದೆಯಜೊತೆ ಪ್ರೀತಿಯಿರುವುದು. ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ ಅವರಿಂದ ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇಡೀ ದಿನ ಈ ನೆನಪು ಬುದ್ಧಿಯಲ್ಲಿರಲಿ. ಇದರಲ್ಲಿಯೇ ಪರಿಶ್ರಮವಿದೆ. ಇದನ್ನು ಮತ್ತೆ-ಮತ್ತೆ ಮರೆತುಹೋಗುವ ಕಾರಣ ಖುಷಿಯೂ ಸಹ ಇಳಿದುಹೋಗುತ್ತದೆ. ತಂದೆಯು ಎಚ್ಚರಿಕೆ ಕೊಡುತ್ತಾರೆ- ಮಕ್ಕಳೇ, ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಿ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ಆತ್ಮಗಳು ಮತ್ತು ಪರಮಾತ್ಮನ ಮೇಳವಾಗಿದೆಯಲ್ಲವೆ. ಹಿಂದೆಯೂ ಮೇಳವಾಗಿತ್ತು, ಯಾವಾಗ ಆಗಿತ್ತು? ಅವಶ್ಯವಾಗಿ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮದಲ್ಲಿಯೇ ಆಗಿರಬೇಕು. ಇಂದು ಮಕ್ಕಳಿಗೆ ಒಂದು ವಿಷಯದ ಮೇಲೆ ತಿಳಿಸಿಕೊಡುತ್ತೇನೆ. ಶ್ರೇಷ್ಠಾತಿಶ್ರೇಷ್ಠನು ಭಗವಂತನಾಗಿದ್ದಾರೆ ಮತ್ತೆ ಕೆಳಗೆ ಬಂದಾಗ ಬ್ರಹ್ಮಾ-ವಿಷ್ಣು-ಶಂಕರ. ತಂದೆ ಮತ್ತು ದೇವತೆಗಳು. ಶಿವ ಮತ್ತು ತ್ರಿಮೂರ್ತಿಗಳ ನಡುವಿನ ಸಂಬಂಧವೇನೆಂದು ಮನುಷ್ಯರಿಗೆ ತಿಳಿದಿಲ್ಲ. ಯಾರಿಗೂ ಅವರ ಜೀವನಕಥೆಯು ತಿಳಿದಿಲ್ಲ. ತ್ರಿಮೂರ್ತಿಗಳ ಚಿತ್ರವೂ ಹೆಸರುವಾಸಿಯಾಗಿದೆ. ಈ ಮೂವರು ದೇವತೆಗಳಾಗಿದ್ದಾರೆ ಕೇವಲ ಮೂವರದಷ್ಟೇ ಧರ್ಮವಿರುತ್ತದೆಯೇ? ದೇವತಾಧರ್ಮವಂತೂ ದೊಡ್ಡದಾಗಿರುತ್ತದೆ, ಇವರು ಸೂಕ್ಷ್ಮವತನವಾಸಿಗಳು, ಅವರಿಗಿಂತಲೂ ಮೇಲೆ ಶಿವತಂದೆಯಿದ್ದಾರೆ. ಬ್ರಹ್ಮಾ ಮತ್ತು ವಿಷ್ಣು ಮುಖ್ಯವಾಗಿದ್ದಾರೆ ಅಂದಾಗ ಈಗ ತಂದೆಯು ತಿಳಿಸುತ್ತಾರೆ- ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ ಹೇಗಾಗುತ್ತಾರೆ? ಎಂಬ ವಿಷಯವನ್ನು ನೀವು ಕೊಡಬೇಕಾಗಿದೆ. ಹೇಗೆ ನಾವು ಶೂದ್ರರಿಂದ ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳೆಂದು ನೀವು ಹೇಳುತ್ತೀರೋ ಹಾಗೆಯೇ ಇವರೂ ಸಹ ಬ್ರಹ್ಮಾನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ, ಇದಕ್ಕೆ ಅವರು ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮ ಎಂದು ಹೇಳಿಬಿಡುತ್ತಾರೆ. ಇದು ತಪ್ಪಾಗಿದೆ. ಇದು ಸಾಧ್ಯವೇ ಇಲ್ಲ ಆದ್ದರಿಂದ ಈ ವಿಷಯದ ಮೇಲೆ ಬಹಳ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ಪರಮಾತ್ಮನು ಕೃಷ್ಣನು ತನುವಿನಲ್ಲಿ ಬಂದಿದ್ದಾರೆಂದು ಕೆಲವರು ಹೇಳುತ್ತಾರೆ. ಕೃಷ್ಣನಲ್ಲಿ ಒಂದುವೇಳೆ ಬಂದಿದ್ದರೆ ಬ್ರಹ್ಮನ ಪಾತ್ರವೇ ಅಲ್ಲಿ ಸಮಾಪ್ತಿಯಾಗಿಬಿಡುತ್ತದೆ. ಕೃಷ್ಣನಂತೂ ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ. ತಂದೆಯು ಬಂದು ಪತಿತರನ್ನು ಪಾವನ ಮಾಡಲು ಅಲ್ಲೇನು ಪತಿತರಿರುವರೇನು! ಇದು ಸಂಪೂರ್ಣ ತಪ್ಪಾಗಿದೆ. ಈ ಮಾತುಗಳನ್ನೂ ಸಹ ಮಹಾರಥಿ ಸೇವಾಧಾರಿ ಮಕ್ಕಳೇ ಅರಿತುಕೊಳ್ಳುತ್ತಾರೆ, ಮತ್ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಈ ವಿಷಯವು ಬಹಳ ಫಸ್ಟ್ಕ್ಲಾಸ್ ಆಗಿದೆ. ಬ್ರಹ್ಮಾನಿಂದ ವಿಷ್ಣು, ವಿಷ್ಣುವಿನಿಂದ ಬಹ್ಮಾ ಹೇಗಾಗುತ್ತಾರೆ- ಅವರ ಜೀವನಕಥೆಯನ್ನು ತಿಳಿಸುತ್ತೇವೆ ಏಕೆಂದರೆ ಇವರ ನಡುವೆ ಸಂಬಂಧವಿದೆ. ನೀವು ಈ ವಿಷಯದಿಂದಲೇ ಆರಂಭಿಸಬೇಕಾಗಿದೆ. ಒಂದು ಸೆಕೆಂಡಿನಲ್ಲಿ ಬ್ರಹ್ಮಾನಿಂದ ವಿಷ್ಣುವಾಗುವರು ಆದರೆ ವಿಷ್ಣುವಿನಿಂದ ಬ್ರಹ್ಮಾನಾಗುವುದರಲ್ಲಿ 84 ಜನ್ಮಗಳು ಹಿಡಿಸುತ್ತವೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನೀವೀಗ ಬ್ರಾಹ್ಮಣಕುಲದವರಾಗಿದ್ದೀರಿ. ಪ್ರಜಾಪಿತ ಬ್ರಹ್ಮಾನ ಬ್ರಾಹ್ಮಣಕುಲವು ಎಲ್ಲಿಂದ ಬಂದಿತು? ಪ್ರ್ರಜಾಪಿತ ಬ್ರಹ್ಮಾನಿಂದ ಹೊಸಪ್ರಪಂಚವಾಗಬೇಕಲ್ಲವೆ. ಸತ್ಯಯುಗವು ಹೊಸ ಪ್ರಪಂಚವಾಗಿದೆ, ಅಲ್ಲಿ ಪ್ರಜಾಪಿತ ಬ್ರಹ್ಮಾನಿರುವುದಿಲ್ಲ ಮತ್ತು ಕಲಿಯುಗದಲ್ಲಿಯೂ ಇರುವುದಿಲ್ಲ. ಅವರು ಸಂಗಮಯುಗದಲ್ಲಿರುತ್ತಾರೆ. ನೀವೀಗ ಸಂಗಮಯುಗದಲ್ಲಿದ್ದೀರಿ. ನೀವು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ. ತಂದೆಯು ಬ್ರಹ್ಮಾರವರನ್ನು ದತ್ತು ಮಾಡಿಕೊಂಡಿದ್ದಾರೆ. ಶಿವತಂದೆಯು ಇವರನ್ನು ಹೇಗೆ ರಚಿಸಿದ್ದರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತ್ರಿಮೂರ್ತಿಯಲ್ಲಿ ರಚಯಿತ ಶಿವನ ಚಿತ್ರವೇ ಇಲ್ಲ ಅಂದಮೇಲೆ ಸರ್ವಶ್ರೇಷ್ಠ ಭಗವಂತನಾಗಿದ್ದಾರೆ ಉಳಿದೆಲ್ಲವೂ ಅವರ ರಚನೆಯಾಗಿದೆ ಎಂಬುದು ಹೇಗೆ ತಿಳಿಯುತ್ತದೆ? ಇದು ಬ್ರಾಹ್ಮಣ ಸಂಪ್ರದಾಯವಾಗಿದೆ ಅಂದಾಗ ಅವಶ್ಯವಾಗಿ ಪ್ರಜಾಪಿತನು ಬೇಕು. ಅವರು ಕಲಿಯುಗದಲ್ಲಿರಲು ಸಾಧ್ಯವಿಲ್ಲ, ಸತ್ಯಯುಗದಲ್ಲಿಯೂ ಇರುವುದಿಲ್ಲ. ಬ್ರಾಹ್ಮಣ ದೇವಿ-ದೇವತಾಯನಮಃ ಎಂದು ಗಾಯನ ಮಾಡಲಾಗುತ್ತದೆ ಅಂದಾಗ ಬ್ರಾಹ್ಮಣರು ಎಲ್ಲಿಯವರು ಮತ್ತು ಪ್ರಜಾಪಿತ ಬ್ರಹ್ಮಾನು ಎಲ್ಲಿಯವರಾಗಿದ್ದಾರೆ? ಅವಶ್ಯವಾಗಿ ಸಂಗಮಯುಗದವರೆಂದೇ ಹೇಳಲಾಗುತ್ತದೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈ ಸಂಗಮಯುಗದ ವರ್ಣವು ಯಾವುದೇ ಶಾಸ್ತ್ರಗಳಲ್ಲಿಲ್ಲ. ಕೌರವರು ಮತ್ತು ಪಾಂಡವರು ಸಂಗಮಯುಗದಲ್ಲಿಯೇ ಇದ್ದಾರೆ, ನೀವು ಪಾಂಡವರು ಕಲಿಯುಗದಲ್ಲಿಲ್ಲ. ಕೌರವರು ಮತ್ತು ಪಾಂಡವರು ಸಂಗಮಯುಗದಲ್ಲಿಯೇ ಇದ್ದಾರೆ, ನೀವು ಪಾಂಡವರು ಸಂಗಮಯುಗಿಗಳಾಗಿದ್ದೀರಿ ಮತ್ತು ಕೌರವರು ಕಲಿಯುಗಿಗಳಾಗಿದ್ದಾರೆ. ಗೀತೆಯಲ್ಲಿಯೂ ಭಗವಾನುವಾಚವಿದೆಯಲ್ಲವೆ. ನೀವು ಪಾಂಡವರು ದೈವೀ ಸಂಪ್ರದಾಯದವರಾಗಿದ್ದೀರಿ, ನೀವು ಆತ್ಮೀಯ ಮಾರ್ಗದರ್ಶಕರಾಗಿದ್ದೀರಿ. ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ಇದನ್ನು ನೀವು ಬುದ್ಧಿಯಿಂದ ಮಾಡುತ್ತೀರಿ.

ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮವೆಂದು ತಿಳಿದು ನೆನಪಿನ ಯಾತ್ರೆಯಲ್ಲಿರಿ. ಸ್ಥೂಲಯಾತ್ರೆಯಲ್ಲಿ ತೀರ್ಥಸ್ಥಾನಗಳಿಗೆ ಹೋಗಿ ಮತ್ತೆ ಹಿಂತಿರುಗಿ ಬರುತ್ತಾರೆ ಅದು ಅರ್ಧಕಲ್ಪ ನಡೆಯುತ್ತದೆ. ಈ ಸಂಗಮಯುಗದ ಯಾತ್ರೆಯು ಒಂದೇಬಾರಿಯದ್ದಾಗಿದೆ. ನೀವು ಹೋಗಿ ಮತ್ತೆ ಮೃತ್ಯುಲೋಕಕ್ಕೆ ಹಿಂತಿರುಗಿ ಬರುವುದಿಲ್ಲ. ಪವಿತ್ರರಾಗಿ ನೀವು ಪವಿತ್ರಪ್ರಪಂಚದಲ್ಲಿ ಬರಬೇಕಾಗಿದೆ ಆದ್ದರಿಂದ ನೀವು ಪವಿತ್ರರಾಗುತ್ತಿದ್ದೀರಿ. ನಾವೀಗ ಬ್ರಾಹ್ಮಣ ಸಂಪ್ರದಾಯದವರಾಗಿದ್ದೇವೆ ನಂತರ ದೈವೀ ಸಂಪ್ರದಾಯ, ವಿಷ್ಣುವಿನ ಸಂಪ್ರದಾಯದವರಾಗುತ್ತೇವೆಂದು ನಿಮಗೆ ತಿಳಿದಿದೆ. ಸತ್ಯಯುಗದಲ್ಲಿ ದೇವಿ-ದೇವತೆಗಳು ವಿಷ್ಣು ಸಂಪ್ರದಾಯದವರಾಗುತ್ತೇವೆಂದು ನಿಮಗೆ ತಿಳಿದಿದೆ. ಅಲ್ಲಿ ಚತುರ್ಭುಜ ವಿಷ್ಣುವಿನ ಮಹಿಮೆಯಿರುತ್ತದೆ. ಇದರಿಂದಲೇ ಇವರು ವಿಷ್ಣುವಿನ ಸಂಪ್ರದಾಯದವರೆಂದು ತಿಳಿದುಬರುತ್ತದೆ. ಇಲ್ಲಿ ರಾವಣನ ಪ್ರತಿಮೆಯಿದೆ ಅಂದಮೇಲೆ ರಾವಣ ಸಂಪ್ರದಾಯದವರಾಗಿದ್ದಾರೆ. ಈ ವಿಷಯವನ್ನು ಕುರಿತು ತಿಳಿಸುವುದರಿಂದ ಮನುಷ್ಯರು ಆಶ್ಚರ್ಯಚಕಿತರಾಗುತ್ತಾರೆ. ನಾವೀಗ ದೇವತೆಗಳಾಗಲು ರಾಜಯೋಗವನ್ನು ಕಲಿಯುತ್ತಿದ್ದೀರಿ. ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರು, ನೀವು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ. ತಂದೆಯಿಂದ ದತ್ತು ಮಾಡಲ್ಪಟ್ಟಿದ್ದೀರಿ. ಇಲ್ಲಿಯೇ ಬ್ರಾಹ್ಮಣರಾಗಿದ್ದೀರಿ ಮತ್ತು ಇಲ್ಲಿಯೇ ದೇವತೆಗಳಾಗುತ್ತೀರಿ. ನಿಮ್ಮ ದೈವೀರಾಜಧಾನಿಯೂ ಸಹ ಇಲ್ಲಿಯೇ ಇರುತ್ತದೆ. ದೈವೀ ರಾಜಧಾನಿಗೆ ವಿಷ್ಣುವಿನ ರಾಜಧಾನಿಯೆಂದು ಕರೆಯಲಾಗುತ್ತದೆ, ಬ್ರಾಹ್ಮಣರ ರಾಜಧಾನಿಯೆಂದು ಕರೆಯುವುದಿಲ್ಲ. ರಾಜವಂಶದಲ್ಲಿ ರಾಜ್ಯ ನಡೆಯುತ್ತದೆ. ವಿಷ್ಣುವಿನ ರಾಜವಂಶ, ಬ್ರಾಹ್ಮಣರ ರಾಜವಂಶವಿರುವುದಿಲ್ಲ. ರಾಜವಂಶದಿಂದ ರಾಜ್ಯಭಾರ ನಡೆಯುತ್ತದೆ. ಒಬ್ಬರ ನಂತರ ಮತ್ತೊಬ್ಬರು ನಂತರ ಮೂರನೆಯವರು.... ನಾವು ಬ್ರಾಹ್ಮಣಕುಲಭೂಷಣರಾಗಿದ್ದೇವೆ. ನಂತರ ದೇವತೆಗಳಾಗುತ್ತೇವೆ. ಬ್ರಾಹ್ಮಣರೇ ವಿಷ್ಣುಕುಲದಲ್ಲಿ ಬರುತ್ತೇವೆ. ವಿಷ್ಣುಕುಲದಿಂದ ಕ್ಷತ್ರಿಯ, ಚಂದ್ರವಂಶಿಕುಲದಲ್ಲಿ ಬರುತ್ತೇವೆ ನಂತರ ವೈಶ್ಯವಂಶ, ಶೂದ್ರಕುಲದಲ್ಲಿ ಬರುತ್ತೇವೆ. ಮತ್ತೆ ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ ಅಂದಾಗ ಅರ್ಥ ಎಷ್ಟೊಂದು ಸ್ಪಷ್ಟವಾಗಿದೆ. ಚಿತ್ರದಲ್ಲಿ ಏನೇನೋ ತೋರಿಸುತ್ತಾರೆ. ನಾವು ಬ್ರಾಹ್ಮಣರೇ ವಿಷ್ಣುಪುರಿಗೆ ಮಾಲೀಕರಾಗುತ್ತೇವೆ. ಇದರಲ್ಲಿ ತಬ್ಬಿಬ್ಬಾಗಬಾರದು. ತಂದೆಯು ಯಾವ ನಿಬಂಧನೆಯನ್ನು ಹಾಕುತ್ತಾರೆ ಅದರ ಬಗ್ಗೆ ವಿಚಾರಸಾಗರ ಮಂಥನ ಮಾಡಬೇಕು- ಯಾರಿಗಾದರೂ ಇದನ್ನು ಹೇಗೆ ತಿಳಿಸಿಕೊಡುವುದು, ಇದರಿಂದ ಮನುಷ್ಯರು ಆಶ್ಚರ್ಯಚಕಿತರಾಗಿ ಇವರು ತಿಳಿಸಿಕೊಡುವುದು ಬಹಳ ಚೆನ್ನಾಗಿದೆ. ಇದನ್ನು ಜ್ಞಾನಸಾಗರನ ವಿನಃ ಮತ್ತ್ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ವಿಚಾರಸಾಗರ ಮಂಥನ ಮಾಡಿ ನಂತರ ಕುಳಿತು ಬರೆಯಬೇಕು. ನಂತರ ಓದಿದಾಗ ಇಂತಿಂತಹ ಶಬ್ಧಗಳನ್ನೂ ಸೇರಿಸಬೇಕೆಂದು ವಿಚಾರದಲ್ಲಿ ಬರುತ್ತದೆ. ತಂದೆಯೂ ಸಹ ಮೊದಲು ಮುರುಳಿಯನ್ನು ಬರೆದು ನಿಮ್ಮ ಕೈಗೆ ಕೊಡುತ್ತಿದ್ದರು ನಂತರ ತಿಳಿಸಿಕೊಡುತ್ತಿದ್ದರು. ಇಲ್ಲಂತೂ ನೀವು ತಂದೆಯ ಜೊತೆಯೇ ಮನೆಯಲ್ಲಿರುತ್ತೀರಿ. ಈಗ ನೀವು ಹೊರಗಡೆ ಹೋಗಿ ತಿಳಿಸಿಕೊಡಬೇಕಾಗುತ್ತದೆ. ಈ ವಿಷಯವು ಬಹಳ ಅದ್ಭುತವಾಗಿದೆ. ಬ್ರಹ್ಮಾ ಸೋ ವಿಷ್ಣು, ಇವರನ್ನು ಯಾರೂ ಸಹ ತಿಳಿದುಕೊಂಡಿಲ್ಲ. ವಿಷ್ಣುವಿನ ನಾಭಿಯಿಂದ ಬ್ರಹ್ಮಾನನ್ನು ತೋರಿಸುತ್ತಾರೆ. ಹೇಗೆ ಗಾಂಧಿಯವರ ನಾಭಿಯಿಂದ ನೆಹರು, ಆದರೆ ರಾಜವಂಶವಂತೂ ಬೇಕಲ್ಲವೆ. ಬ್ರಾಹ್ಮಣಕುಲದಲ್ಲಿ ರಾಜ್ಯಭಾರವಿರುವುದಿಲ್ಲ. ಬ್ರಾಹ್ಮಣ ಸಂಪ್ರದಾಯದವರೇ ದೇವತಾ ಸಂಪ್ರದಾಯದವರಾಗಿಬಿಡುತ್ತಾರೆ. ನಂತರ ಚಂದ್ರವಂಶಿ ಮನೆತನದಲ್ಲಿ ನಂತರ ವೈಶ್ಯವಂಶದಲ್ಲಿ... ಹೀಗೆ ಪ್ರತಿಯೊಂದು ವಂಶಗಳು ನಡೆಯುತ್ತದೆಯಲ್ಲವೆ. ಸತ್ಯಯುಗದಲ್ಲಿ ನಿರ್ವಿಕಾರಿ ಪ್ರಪಂಚ, ಕಲಿಯುಗದಲ್ಲಿ ವಿಕಾರಿಪ್ರಪಂಚ- ಇವೆರಡೂ ಅಕ್ಷರವೂ ಸಹ ಯಾರ ಬುದ್ಧಿಯಲ್ಲಿಯೂ ಇಲ್ಲ. ಇಲ್ಲದಿದ್ದರೆ ಅವಶ್ಯವಾಗಿ ವಿಕಾರಿಗಳಿಂದ ನಿರ್ವಿಕಾರಿಗಳು ಹೇಗಾಗುತ್ತೇವೆ ಎಂಬುದು ಬುದ್ಧಿಯಲ್ಲಿರಬೇಕಾಗಿತ್ತು. ಮನುಷ್ಯರು ನಿರ್ವಿಕಾರಿಗಳನ್ನೂ ತಿಳಿದಿಲ್ಲ, ವಿಕಾರಿಗಳನ್ನೂ ತಿಳಿದಿಲ್ಲ. ದೇವತೆಗಳಿಗೆ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ಬ್ರಾಹ್ಮಣರು ನಿರ್ವಿಕಾರಿಗಳೆಂದು ಎಂದೂ ಸಹ ಹೇಳಿಲ್ಲ. ಹೊಸಪ್ರಪಂಚದಲ್ಲಿ ನಿರ್ವಿಕಾರಿಗಳು, ಹಳೆಯ ಪ್ರಪಂಚದಲ್ಲಿ ವಿಕಾರಿಗಳು. ಇದನ್ನು ಅವಶ್ಯವಾಗಿ ಸಂಗಮಯುಗದಲ್ಲಿ ತೋರಿಸಬೇಕು. ಇದರ ಬಗ್ಗೆ ಯಾರಿಗೂ ಸಹ ತಿಳಿದಿಲ್ಲ. ಪುರುಷೋತ್ತಮ ಮಾಸವನ್ನು ಆಚರಿಸುತ್ತಾರಲ್ಲವೆ. ಅದು ಮೂರುವರ್ಷದ ನಂತರ ಒಂದು ತಿಂಗಳು ಆಚರಿಸುತ್ತಾರೆ. ನಿಮ್ಮದು 5000 ವರ್ಷಗಳ ನಂತರ ಒಂದು ಸಂಗಮಯುಗ ಬರುತ್ತದೆ. ಮನುಷ್ಯಾತ್ಮ ಮತ್ತು ಪರಮಾತ್ಮನನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಕೇವಲ ಪ್ರಕಾಶಮಾನವಾಗಿ ಹೊಳೆಯುತ್ತಿರುವ ನಕ್ಷತ್ರವಾಗಿದೆ ಎಂದು ಹೇಳುತ್ತಾರೆ. ರಾಮಕೃಷ್ಣ ಪರಮಹಂಸರ ಶಿಷ್ಯ ವಿವೇಕಾನಂದ ಹೇಳುತ್ತಿದ್ದರು- ನಾನು ಗುರುವಿನ ಮುಂದೆ ಕುಳಿತಿದ್ದೆನು, ಗುರುವಿನ ಧ್ಯಾನವನ್ನು ಮಾಡುತ್ತಾರಲ್ಲವೆ. ಅವನಿಗೆ ಜ್ಯೋತಿಯ ಸಾಕ್ಷಾತ್ಕಾರವಾಯಿತೆಂದು ತೋರಿಸುತ್ತಾರೆ. ಈಗ ತಂದೆಯು ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ, ಧ್ಯಾನದ ಮಾತೇನಿಲ್ಲ. ಗುರುವಿನ ನೆನಪು ಇದ್ದೇ ಇರುತ್ತದೆ. ನೆನಪನ್ನು ಮಾಡುವ ಸಲುವಾಗಿ ಕುಳಿತುಕೊಳ್ಳುವುದರಿಂದ ನೆನಪು ಬರುತ್ತದೆಯೇನು! ಇವರು ಭಗವಂತನಾಗಿದ್ದಾರೆ ಎಂಬುದು ಅವರಿಗೆ ಗುರುವಿನಲ್ಲಿ ಭಾವನೆಯಿತ್ತು. ಅವರ ಆತ್ಮವು ಹೊರಬಂದು ನನ್ನಲ್ಲಿ ಸೇರಿಕೊಂಡಿತು ಎಂಬುದನ್ನು ನೋಡಿದರು. ಅವರ ಆತ್ಮವು ಎಲ್ಲಿ ಹೋಗಿ ಕುಳಿತುಕೊಂಡಿತು ನಂತರ ಏನಾಯಿತು, ಎಲ್ಲಿಯೂ ಸಹ ವರ್ಣನೆಯಿಲ್ಲ. ಕೇವಲ ನನಗೆ ಭಗವಂತನ ಸಾಕ್ಷಾತ್ಕಾರವಾಯಿತೆಂದು ಖುಷಿಯಾಯಿತು. ಭಗವಂತ ಯಾರಾಗಿದ್ದಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಏಣಿಚಿತ್ರದ ಬಗ್ಗೆ ತಿಳಿಸಿಕೊಡಿ ಎಂದು ತಂದೆಯು ತಿಳಿಸುತ್ತಾರೆ. ಇದು ಭಕ್ತಿಮಾರ್ಗವಾಗಿದೆ, ಒಂದು ಭಕ್ತಿಯ ದೋಣಿ ಮತ್ತೊಂದು ಜ್ಞಾನದ ದೋಣಿ ಎಂಬುದು ನಿಮಗೆ ತಿಳಿದಿದೆ. ಜ್ಞಾನವೇ ಬೇರೆ, ಭಕ್ತಿಯೇ ಬೇರೆಯಾಗಿದೆ. ನಾನು ನಿಮಗೆ ಕಲ್ಪದ ಹಿಂದೆ ಜ್ಞಾನವನ್ನು ಕೊಟ್ಟಿದ್ದೆನು, ವಿಶ್ವದ ಮಾಲೀಕರನ್ನಾಗಿ ಮಾಡಿದ್ದೆನು ಎಂದು ತಂದೆಯು ಹೇಳುತ್ತಾರೆ. ಈಗ ನೀವು ಎಲ್ಲಿದ್ದೀರಿ, ಹೇಗೆ ಅನ್ಯವಂಶಗಳು, ವೃಕ್ಷವು ಹೇಗೆ ವೃದ್ಧಿಯಾಯಿತು ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿ ಎಲ್ಲದರ ಜ್ಞಾನವಿದೆ. ಹೇಗೆ ಹೂಗುಚ್ಛವಿರುತ್ತದೆಯಲ್ಲವೆ. ಈ ಸೃಷ್ಟಿರೂಪಿ ವೃಕ್ಷವೂ ಸಹ ಹೂಗುಚ್ಛವಾಗಿದೆ. ಮಧ್ಯದಲ್ಲಿ ನಿಮ್ಮ ಧರ್ಮ, ಇದರ ನಂತರ ಮೂರುಧರ್ಮಗಳು ಹುಟ್ಟಿಕೊಳ್ಳುತ್ತವೆ ನಂತರ ಇದರಿಂದ ವೃದ್ಧಿಯಾಗುತ್ತದೆ. ಈ ವೃಕ್ಷವನ್ನೂ ಸಹ ನೆನಪು ಮಾಡಬೇಕು. ಎಷ್ಟೊಂದು ರೆಂಬೆ-ಕೊಂಬೆಗಳು ಮುಂತಾದವು ಹೊರಬರುತ್ತವೆ! ಕೊನೆಯಲ್ಲಿ ಬರುವವರ ಮಾನ್ಯತೆ ಹೆಚ್ಚಾಗಿರುತ್ತದೆ. ಆಲದಮರಕ್ಕೆ ಮೂಲಬೇರು ಇರುವುದಿಲ್ಲ ಉಳಿದೆಲ್ಲದರ ಮೇಲೆ ವೃಕ್ಷವು ನಿಂತಿರುತ್ತದೆ. ದೇವಿ-ದೇವತಾಧರ್ಮವು ಸಮಾಪ್ತಿಯಾಗಿಬಿಟ್ಟಿದೆ. ಸಂಪೂರ್ಣವಾಗಿ ಕಾಣೆಯಾಗಿದೆ, ಭಾರತವಾಸಿಗಳು ತಮ್ಮ ಧರ್ಮವನ್ನು ತಿಳಿದುಕೊಂಡಿಲ್ಲ ಮತ್ತೆಲ್ಲಾ ಧರ್ಮದವರು ತಮ್ಮ-ತಮ್ಮ ಧರ್ಮವನ್ನು ತಿಳಿದಿದ್ದಾರೆ, ತಮ್ಮ ಧರ್ಮವನ್ನು ಒಪ್ಪುವುದಿಲ್ಲವೆಂದು ಹೇಳುತ್ತಾರೆ. ಮುಖ್ಯವಾಗಿ 4 ಧರ್ಮಗಳಿವೆ, ಉಳಿದೆಲ್ಲವೂ ಚಿಕ್ಕ-ಚಿಕ್ಕದಾದ ಅನೇಕ ಧರ್ಮಗಳಿವೆ. ಈ ವೃಕ್ಷ ಮತ್ತು ಸೃಷ್ಟಿಚಕ್ರವನ್ನು ಈಗ ನೀವು ತಿಳಿದುಕೊಂಡಿದ್ದೀರಿ. ದೇವಿ-ದೇವತಾಧರ್ಮದ ಹೆಸರನ್ನೇ ಇಲ್ಲದಂತೆ ಮಾಡಿಬಿಟ್ಟಿದ್ದಾರೆ. ನಂತರ ತಂದೆಯು ಇದರ ಸ್ಥಾಪನೆಯನ್ನು ಮಾಡಿ ಉಳಿದೆಲ್ಲಾ ಧರ್ಮಗಳ ವಿನಾಶವನ್ನು ಮಾಡಿಸುತ್ತಾರೆ. ಗೋಲದ ಚಿತ್ರದ ಬಳಿ ಅವಶ್ಯವಾಗಿ ಕರೆದುಕೊಂಡು ಹೋಗಿ. ಇದು ಸತ್ಯಯುಗ, ಇದು ಕಲಿಯುಗ. ಕಲಿಯುಗದಲ್ಲಿ ಇಷ್ಟು ಧರ್ಮಗಳಿವೆ, ಸತ್ಯಯುಗದಲ್ಲಿ ಒಂದು ಧರ್ಮವಿದೆ. ಒಂದು ಧರ್ಮದ ಸ್ಥಾಪನೆ, ಅನೇಕ ಧರ್ಮಗಳ ವಿನಾಶವನ್ನು ಯಾರು ಮಾಡಿಸುತ್ತಾರೆ? ಭಗವಂತನೇ ಅವಶ್ಯವಾಗಿ ಯಾರ ಮೂಲಕವಾದರೂ ಮಾಡಿಸುತ್ತಾರಲ್ಲವೆ. ಬ್ರಹ್ಮಾರವರ ಮೂಲಕ ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆಯನ್ನೂ ಮಾಡಿಸುತ್ತೇನೆಂದು ತಂದೆಯು ಹೇಳುತ್ತಾರೆ. ಬ್ರಾಹ್ಮಣರಿಂದ ವಿಷ್ಣುಪುರಿಯ ದೇವತೆಗಳಾಗುತ್ತಾರೆ.

ಸಂಗಮಯುಗದಲ್ಲಿ ಬ್ರಾಹ್ಮಣರು ಪವಿತ್ರರಾಗುವ ಗುಪ್ತ ಪರಿಶ್ರಮವನ್ನು ಪಡಬೇಕಾಗುತ್ತದೆ. ನೀವು ಬ್ರಹ್ಮಾನ ಮಕ್ಕಳು ಸಂಗಮದಲ್ಲಿ ಸಹೋದರ-ಸಹೋದರಿಯಾಗಿದ್ದೀರಿ, ಸಹೋದರ-ಸಹೋದರಿಯರಲ್ಲಿ ಕೆಟ್ಟದೃಷ್ಟಿಯಿರಲು ಸಾಧ್ಯವಿಲ್ಲ. ಸ್ತ್ರೀ-ಪುರುಷರಿಬ್ಬರು ತನ್ನನ್ನು ಬಿ.ಕೆ. ಎಂದು ತಿಳಿದುಕೊಳ್ಳುತ್ತಾರೆ. ಇದರಲ್ಲಿಯೇ ಬಹಳ ಪರಿಶ್ರಮವಿದೆ. ಸ್ತ್ರೀ-ಪುರುಷರಲ್ಲಿ ಇಷ್ಟೊಂದು ಸೆಳೆತವಿರುತ್ತದೆಯೇ! ಪರಸ್ಪರದಲ್ಲಿ ಸ್ಪರ್ಷಮಾಡದೇ ಇರಲು ಸಾಧ್ಯವೇ ಇಲ್ಲ, ಇಲ್ಲಿ ಸಹೋದರ-ಸಹೋದರಿಯರು ಸ್ಪರ್ಷ ಮಾಡಬಾರದು. ಇಲ್ಲವೆಂದರೆ ಪಾಪದ ಅನುಭವವಾಗುತ್ತದೆ. ನಾವು ಬಿ.ಕೆ. ಆಗಿದ್ದೇವೆ ಎಂಬುದು ಮರೆತುಹೋಗುತ್ತದೆಯೆಂದರೆ ನಾಶವಾಗಿಬಿಡುತ್ತಾರೆ. ಇದರಲ್ಲಿ ಬಹಳ ಗುಪ್ತ ಪರಿಶ್ರಮವಿದೆ. ಭಲೆ ಪತಿ-ಪತ್ನಿಯಿರುತ್ತಾರೆ ಅವರು ಹೇಗಿರುತ್ತಾರೆಂಬುದು ಯಾರಿಗೆ ಗೊತ್ತು! ಅವರಿಗೇ ಗೊತ್ತು. ನಾವು ಬಿ.ಕೆ. ಆಗಿದ್ದೇವೆ, ಫರಿಶ್ತೆಗಳಾಗಿದ್ದೇವೆ, ಪರಸ್ಪರ ಸ್ಪರ್ಷಿಸಬಾರದು. ಈ ರೀತಿ ಮಾಡುತ್ತಾ-ಮಾಡುತ್ತಾ ಸೂಕ್ಷ್ಮವತನವಾಸಿ ಫರಿಶ್ತೆಗಳಾಗಿಬಿಡುತ್ತಾರೆ. ಇಲ್ಲವೆಂದರೆ ಫರಿಶ್ತೆಗಳಾಗಲು ಹೇಗೆ ಸಾಧ್ಯ! ಫರಿಶ್ತೆಗಳಾಗಬೇಕೆಂದರೆ ಪವಿತ್ರರಾಗಿರಬೇಕು. ಇಂತಹ ಜೋಡಿ ಇತ್ತೆಂದರೆ ಅವರು ನಂಬರ್ವನ್ ಆಗಿಬಿಡುತ್ತಾರೆ. ಈ ದಾದಾರವರು ಎಲ್ಲವನ್ನೂ ಅನುಭವ ಮಾಡಿದ್ದಾರೆ. ಕೊನೆಯಲ್ಲಿ ಸನ್ಯಾಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಯಾರು ಜೊತೆಯಲ್ಲಿದ್ದಾರೆ ಅವರಿಗೆ ಬಹಳ ಪರಿಶ್ರಮವಿದೆ. ಮತ್ತೆ ಅವರಲ್ಲಿ ಜ್ಞಾನ ಮತ್ತು ಯೋಗವೂ ಸಹ ಇರಬೇಕು. ಅನೇಕರನ್ನು ತನ್ನ ಸಮಾನ ಮಾಡಿಕೊಂಡಾಗ ದೊಡ್ಡ ರಾಜರಾಗುತ್ತಾರೆ. ಕೇವಲ ಒಂದು ಮಾತಲ್ಲ ಅಲ್ಲವೆ. ತಂದೆಯು ತಿಳಿಸುತ್ತಾರೆ- ನೀವು ಶಿವತಂದೆಯನ್ನು ನೆನಪು ಮಾಡಿ, ಇವರು ಪ್ರಜಾಪಿತನಾಗಿದ್ದಾರೆ. ನಮ್ಮ ಕೆಲಸ ಶಿವತಂದೆಯ ಜೊತೆಗಿದೆ ಎಂದು ಹೇಳುತ್ತಾರೆ. ಈ ಬ್ರಹ್ಮಾರವರನ್ನೇಕೆ ನೆನಪು ಮಾಡಬೇಕು, ಇವರಿಗೇಕೆ ಪತ್ರವನ್ನು ಬರೆಯಬೇಕು! ಈ ರೀತಿಯೂ ಸಹ ಇದ್ದಾರೆ. ನೀವು ಶಿವತಂದೆಯನ್ನು ನೆನಪು ಮಾಡಬೇಕು ಆದ್ದರಿಂದ ಬಾಬಾರವರ ಫೋಟೋ ಮುಂತಾದವನ್ನು ಕೊಡುವುದಿಲ್ಲ. ಇದರಲ್ಲಿ (ಬ್ರಹ್ಮಾ) ಶಿವತಂದೆಯು ಬರುತ್ತಾರೆ. ಇವರಾದರೂ ದೇಹಧಾರಿಯಾಗಿದ್ದಾರಲ್ಲವೆ. ನೀವು ಮಕ್ಕಳಿಗೆ ಈಗ ತಂದೆಯಿಂದ ಆಸ್ತಿಯು ಸಿಗುತ್ತದೆ. ಅವರು (ಸನ್ಯಾಸಿಗಳು) ತಮ್ಮನ್ನು ಈಶ್ವರನೆಂದು ಹೇಳುತ್ತಾರೆ ಮತ್ತೆ ಅವರಿಂದ ಏನು ಸಿಗುತ್ತದೆ. ಭಾರತವಾಸಿಗಳಿಗೆ ಎಷ್ಟೊಂದು ಹಾನಿಯಾಗಿದೆ! ಸಂಪೂರ್ಣವಾಗಿ ಭಾರತವಾಸಿಗಳು ದಿವಾಳಿಯಾಗಿಬಿಟ್ಟಿದ್ದಾರೆ. ಪ್ರಜೆಗಳಿಂದ ಭಿಕ್ಷೆ ಬೇಡುತ್ತಾರೆ. 10-20 ವರ್ಷಗಳವರೆಗೆ ಸಾಲವನ್ನು ತೆಗೆದುಕೊಳ್ಳುತ್ತಾರೆ ಮತ್ತೆ ಕೊಡುತ್ತಾರೆಯೇ! ತೆಗೆದುಕೊಳ್ಳುವವರು, ಕೊಡುವವರು ಇಬ್ಬರೂ ಇಲ್ಲದಂತಾಗುತ್ತಾರೆ. ಆಟವೇ ಸಮಾಪ್ತಿಯಾಗುವುದಿದೆ. ಅನೇಕ ಆಪತ್ತುಗಳು ಬರಲಿವೆ, ದಿವಾಳಿಯಾಗುವುದು, ಖಾಯಿಲೆಗಳು ಬಹಳಷ್ಟು ಬರುತ್ತವೆ. ಕೆಲವರು ಸಾಹುಕಾರರ ಬಳಿ ಹಣ ಇಡುತ್ತಾರೆ ನಂತರ ಅವರು ದಿವಾಳಿಯಾಗಿಬಿಡುತ್ತಾರೆಂದರೆ ಬಡವರಿಗೆ ಎಷ್ಟೊಂದು ದುಃಖವಾಗುತ್ತದೆ. ಹೆಜ್ಜೆ-ಹೆಜ್ಜೆಯಲ್ಲಿ ದುಃಖವಿರುತ್ತದೆ. ಆಕಸ್ಮಿಕವಾಗಿ ಕುಳಿತು-ಕುಳಿತಿದ್ದಂತೆಯೇ ಸಾಯುತ್ತಾರೆ. ಇದು ಮೃತ್ಯುಲೋಕವಾಗಿದೆ, ನೀವು ಪಾರ್ವತಿಯರಿಗೆ ಸತ್ಯ-ಸತ್ಯವಾದ ಅಮರ ಕಥೆಯನ್ನು ತಿಳಿಸುತ್ತಾರೆ. ಅಮರ ತಂದೆಯಿಂದ ನಾವು ಅಮರ ಕಥೆಯನ್ನು ಕೇಳುತ್ತಾ ಇದ್ದೇವೆಂಬುದು ನಿಮಗೆ ತಿಳಿದಿದೆ. ಈಗ ನಾವು ಅಮರಲೋಕಕ್ಕೆ ಹೋಗಬೇಕಾಗಿದೆ. ಈ ಸಮಯದಲ್ಲಿ ನೀವು ಸಂಗಮಯುಗದಲ್ಲಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ವಿಚಾರಸಾಗರ ಮಂಥನ ಮಾಡಿ ಬ್ರಹ್ಮಾನಿಂದ ವಿಷ್ಣು ಹೇಗಾಗುತ್ತಾರೆ - ಈ ವಿಷಯದ ಬಗ್ಗೆ ತಿಳಿಸಿಕೊಡಬೇಕು. ಬುದ್ಧಿಯನ್ನು ಜ್ಞಾನದ ಮಂಥನದಲ್ಲಿ ಬ್ಯುಜಿಯಾಗಿಟ್ಟುಕೊಳ್ಳಬೇಕು.

2) ರಾಜ್ಯಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಜ್ಞಾನ ಮತ್ತು ಯೋಗದ ಜೊತೆಜೊತೆಗೆ ತನ್ನ ಸಮಾನ ಮಾಡಿಕೊಳ್ಳುವ ಸೇವೆಯನ್ನೂ ಸಹ ಮಾಡಬೇಕು. ತನ್ನ ದೃಷ್ಟಿಯನ್ನು ಬಹಳ ಶುದ್ಧವಾಗಿಟ್ಟುಕೊಳ್ಳಬೇಕು.

ವರದಾನ:
ಸರ್ವ ಸಂಬಂಧಗಳ ಅನುಭವ ಒಬ್ಬ ತಂದೆಯ ಜೊತೆ ಮಾಡುವಂತಹ ಅಥಕ್ ಮತ್ತು ವಿಘ್ನವಿನಾಶಕ ಭವ

ಯಾವ ಮಕ್ಕಳ ಸರ್ವ ಸಂಬಂಧ ಒಬ್ಬ ತಂದೆಯ ಜೊತೆ ಇದೆ ಅವರಿಗೆ ಬೇರೆ ಎಲ್ಲಾ ಸಂಬಂಧ ನಿಮಿತ್ತಮಾತ್ರದ ಅನುಭವವಾಗುವುದು, ಅವರು ಸದಾ ಖುಶಿಯಲ್ಲಿ ನಾಟ್ಯವಾಡುವವರಾಗಿರುತ್ತಾರೆ, ಎಂದೂ ಆಯಾಸದ ಅನುಭವ ಮಾಡುವುದಿಲ್ಲ, ಅಥಕ್ ಆಗಿರುತ್ತಾರೆ. ತಂದೆ ಮತ್ತು ಸೇವೆ ಇದೇ ಲಗನ್ನಲ್ಲಿ ಮಗ್ನರಾಗಿರುತ್ತರೆ. ವಿಘ್ನಗಳ ಕಾರಣ ನಿಲ್ಲುವ ಬದಲು ಸದಾ ವಿಘ್ನವಿನಾಶಕರಾಗಿರುತ್ತಾರೆ. ಸರ್ವಸಂಬಂಧಗಳ ಅನುಭೂತಿ ಒಬ್ಬ ತಂದೆಯ ಜೊತೆ ಇರುವ ಕಾರಣ ಡಬಲ್ ಲೈಟ್ ಆಗಿರುತ್ತಾರೆ, ಯಾವುದೇ ಹೊರೆ ಇಲ್ಲ. ಸರ್ವ ದೂರುಗಳು ಸಮಾಪ್ತಿಯಾಗಿಬಿಡುತ್ತದೆ. ಕಂಪ್ಲೀಟ್ ಸ್ಥಿತಿಯ ಅನುಭವವಾಗುವುದು. ಸಹಜಯೋಗಿಯಾಗುವರು.

ಸ್ಲೋಗನ್:
ಸಂಕಲ್ಪದಲ್ಲಿಯೂ ಸಹ ಯಾವುದೇ ದೇಹಧಾರಿಯ ಕಡೆ ಆಕರ್ಷಿತವಾಗುವುದು ಅರ್ಥಾತ್ ವಿಶ್ವಾಸಘಾತಕರಾಗುವುದು.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಹೇಗೆ ಅಂತರಿಕ್ಷ ಯಾನಿಗಳು ಮೇಲೆ ಇರುವ ಕಾರಣ ಇಡೀ ಪೃಥ್ವಿಯ ಎಲ್ಲಿಯ ಚಿತ್ರವನ್ನು ತೆಗೆಯಬೇಕು ಎಂದರು ತೆಗೆಯಬಹುದು, ಅದೇ ರೀತಿ ಸೈಲೆನ್ಸ್ ನ ಶಕ್ತಿಯಿಂದ ಅಂತರ್ಮುಖಿ ಯಾನದಿಂದ, ಮನಸಾ ಶಕ್ತಿಗಳ ಮೂಲಕ ಯಾವುದೇ ಆತ್ಮನನ್ನು ಚರಿತ್ರ ವಂತನಾಗುವ, ಶ್ರೇಷ್ಠ ಆತ್ಮನಾಗುವ ಪ್ರೇರಣೆ ಕೊಡಬಹುದು.