20.09.26    Avyakt Bapdada     Kannada Murli    30.11.2011     Om Shanti     Madhuban


“ಅಮೃತ ವೇಳೆ ವಿಶೇಷ ಸರ್ವ ಶಕ್ತಿಗಳ ಅನುಭವಿ ಸ್ವರೂಪರಾಗಿ ಯೋಗದ ಸಕಾಶವನ್ನು ವಾಯುಮ0ಡಲದಲ್ಲಿ ಹರಡಿಸಿರಿ, ಮನಸ್ಸನ್ನು ಸದಾ ವ್ಯಸ್ತವಾಗಿಟ್ಟುಕೊಳ್ಳಿ, ಸಮಯದ ಕರೆಯಾಗಿದೆ - ತೀವ್ರ ಪುರುಷಾರ್ಥಿ ಭವ.”


ಇಂದು ಬಾಪ್ದಾದಾ ನಾಲ್ಕೂ ಕಡೆಯ ಮಕ್ಕಳ ಮಸ್ತಕದಲ್ಲಿ ಭಾಗ್ಯದ ನಕ್ಷತ್ರಗಳು ಹೊಳೆಯುತ್ತಿರುವುದನ್ನು ನೋಡುತ್ತಿದ್ದಾರೆ. ಒಂದಾಗಿದೆ ಭಾಗ್ಯದ ನಕ್ಷತ್ರ, ಎರಡನೇಯದು ಸಂಬಂಧದ ಮತ್ತು ಮೂರನೇಯದು ಪ್ರಾಪ್ತಿಗಳ ನಕ್ಷತ್ರ. ಮೂರೂ ಭಾಗ್ಯವನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಜನ್ಮದ ಭಾಗ್ಯವಂತೂ ನಿಮಗೆ ತಿಳಿದಿದೆ ಏನೆಂದರೆ ನಿಮಗೆಲ್ಲರಿಗೂ ಈ ದಿವ್ಯ ಜನ್ಮ, ಬ್ರಾಹ್ಮಣ ಜನ್ಮ ಕೊಡುವವರು ಸ್ವಯಂ ಭಾಗ್ಯವಿಧಾತಾ ಆಗಿದ್ದಾರೆ. ಅಂದಮೇಲೆ ಎಷ್ಟು ದೊಡ್ಡ ಭಾಗ್ಯವಿದೆ! ಜೊತೆ ಜೊತೆಗೆ ಸಂಬಂಧ, ಇದರ ವಿಶೇಷತೆಯನ್ನು ತಿಳಿದಿದ್ದೀರಿ, ತಂದೆ ಶಿಕ್ಷಕ ಮತ್ತು ಸದ್ಗುರು ಮೂರೂ ಸಂಬಂಧ ಒಬ್ಬ ತಂದೆಯ ಜೊತೆಗಿದೆ. ಒಬ್ಬರ ಜೊತೆ ಮೂರೂ ಸಂಬಂಧ ಇದೆ. ಪ್ರಾಪ್ತಿಗಳನ್ನು ತಿಳಿದುಕೊಂಡಿರುವಿರಿ, ಎಲ್ಲಿ ತಂದೆ ಇರುವರು ಅಲ್ಲಿ ಸರ್ವ ಮತ್ತು ಬೇಹದ್ದಿನ ಪ್ರಾಪ್ತಿಗಳು ಇರುತ್ತವೆ. ಒಬ್ಬರಲ್ಲಿ ಮೂರೂ ಸಂಬಂಧಗಳಿವೆ. ಜೀವನದಲ್ಲಿ ಈ ಮೂರು ಸಂಬಂಧಗಳು ಅವಶ್ಯ ಬೇಕು, ಆದರೆ ಜಗತ್ತಿನವರಿಗೆ ಮೂರು ಸಂಬಂಧಗಳು ಬೇರೆ ಬೇರೆಯಾಗಿರುತ್ತವೆ ಮತ್ತು ನಿಮಗೆ ಮೂರೂ ಸಂಬಂಧ ಒಬ್ಬರಲ್ಲಿವೆ. ಒಬ್ಬರಲ್ಲಿ ಮೂರೂ ಸಂಬಂಧ ಇರುವುದರಿಂದ ನೆನೆಪು ಮತ್ತು ಅನುಭವ ಸಹ ಸಹಜ ಆಗುತ್ತದೆ. ಸರ್ವರೂ ಮೂರೂ ಸಂಬಂಧಗಳ ಆನುಭವಿ ಇರುವಿರಲ್ಲವೆ! ತಂದೆಯಿಂದ ಏನು ಸಿಗುತ್ತದೆ? ಆಸ್ತಿ. ಅಸ್ತಿಯೂ ಎಷ್ಟು ಶ್ರೇಷ್ಠವಾದದ್ದು ಸಿಗುತ್ತದೆ ಮತ್ತು ಇದು ಎಷ್ಟು ಸಮಯ ಇರುತ್ತದೆ ಏಕೆಂದರೆ ಇದು ಪರಮಾತ್ಮ ತಂದೆಯಿಂದ ಸಿಗುತ್ತದೆ. ಎರಡನೇಯ ಸಂಬಂಧ ಶಿಕ್ಷಕನದು, ಶಿಕ್ಷಣಕ್ಕೆ ಹೇಳುತ್ತಾರೆ ಸಂಪಾದನೆಯ ಮೂಲ. ಅಂದಮೇಲೆ ನಿಮಗೆ ಶಿಕ್ಷಕನಿಂದ ಎಷ್ಟು ಶ್ರೇಷ್ಠ ಪ್ರಾಪ್ತಿ ಆಗುತ್ತದೆ, ಗೊತ್ತಿದೆ ಅಲ್ಲವೆ! ಇಂತಹ ಶ್ರೇಷ್ಠ ಪ್ರಾಪ್ತಿ ಪರಮಪಿತ ಪರಮಾತ್ಮನ ವಿನಃ ಮತ್ತೆಯಾರಿಂದಲೂ ಆಗಲು ಸಾಧ್ಯವಿಲ್ಲ. ಶಿಕ್ಷಣದಿಂದ ಪದವಿ ಪ್ರಾಪ್ತ ಆಗುತ್ತದೆ ಮತ್ತು ನಿಮಗೆ ಶ್ರೇಷ್ಠ ಪ್ರಾಪ್ತಿ ಇದೆ, ಜಗತ್ತಿನಲ್ಲಿ ಶ್ರೇಷ್ಠ ಪ್ರಾಪ್ತಿ ರಾಜ ಪದವಿಗೆ ಹೇಳುತ್ತಾರೆ. ನಿಮಗೂ ಸಹ ಶಿಕ್ಷಕನಿಂದ ರಾಜ್ಯ ಪದವಿ ಪ್ರಾಪ್ತ ಆಗಿದೆ. ಈಗಲೂ ಸ್ವರಾಜ್ಯದ ರಾಜರಾಗಿರುವಿರಿ ಅಲ್ಲವೇ? ಆತ್ಮ ರಾಜಯೋಗಿ ಆಗಿರುವುದರಿಂದ ಸ್ವರಾಜ್ಯ ಅಧಿಕಾರಿ ಆಗುತ್ತಾನೆ. ಸ್ವಯಂ ಮೇಲೆ ರಾಜ್ಯ ಮಾಡುತ್ತೀರಿ. ಕರ್ಮೇಂದ್ರಿಯ ಗಳಿಗೆ ವಶೀಭೂತ ಆಗುವುದಿಲ್ಲ, ಆತ್ಮ ಮಾಲೀಕನಾಗಿ ಈ ಕರ್ಮೇಂದ್ರಿಯಗಳಿಗೆ ರಾಜನಾಗುತ್ತಾನೆ. ಈಗ ಸ್ವರಾಜ್ಯ ಮತ್ತು ಭವಿಷ್ಯದಲ್ಲಿ ರಾಜ್ಯ ಭಾಗ್ಯ ಪ್ರಾಪ್ತಿ ಆಗುತ್ತದೆ. ಆದ್ದರಿಂದ ಡಬಲ್ ರಾಜ್ಯ, ಈಗಲೂ ಮತ್ತು ಭವಿಷ್ಯದಲ್ಲಿಯೂ ಪದವಿಯ ಪ್ರಾಪ್ತಿ ಆಗುತ್ತದೆ. ಮತ್ತು ಮೂರನೇಯ ಸಂಬಂಧ ಆಗಿದೆ ಸದ್ಗುರುವಿನದು. ಸದ್ಗುರುವಿನ ಮೂಲಕ ಗುರುವಿನ ಶ್ರೀಮತ ಸಿಗುತ್ತದೆ. ಎಷ್ಟು ಶ್ರೇಷ್ಠ ಮತವಾಗಿದೆ? ಆದ್ದರಿಂದ ನಿಮ್ಮನ್ನು ನೀವು ಪರಿಶೀಲನೆ ಮಾಡಿಕೊಳ್ಳಿ ಸದಾ ಶ್ರೀಮತದಂತೆ ನಡೆಯುತ್ತೆನೆಯೇ ಅಥವಾ ಮನಮತ ಪರಮತದ ಕಡೆ ಬುದ್ಧಿ ಹೋಗುವುದಿಲ್ಲ ತಾನೇ? ಚೆಕ್ ಮಾಡಿದಿರಾ? ಸದ್ಗುರುವಿನ ಮೂಲಕ ಸದಾ ಶ್ರೇಷ್ಠ ಮತ ಶ್ರೀಮತದಂತೆ ನಡೆಯುವವರು, ಮನಮತ ಪರಮತದಂತೆ ಸ್ವಪ್ನದಲ್ಲಿಯೂ ನಡೆಯುವುದಿಲ್ಲ, ಎಂದು ತಿಳಿಯುವವರು ಕೈ ಎತ್ತಿರಿ. ಯಾರು ಸದಾ ಶ್ರೀಮತದಂತೆಯೇ ನಡೆಯುತ್ತಾರೆ, ಪರಮತ ಮನಮತದಂತೆ ಅಲ್ಲ? ಅವರು ಕೈ ಎತ್ತಿರಿ.

ನೋಡಿ, ಮಾತೆಯರು ಎತ್ತಿದರು. ಸ್ವಲ್ಪ ಸ್ವಲ್ಪ ಎತ್ತುತ್ತಿದ್ದಾರೆ. ಕೆಲವು ಬಾರಿ ಬುದ್ಧಿ ಹೊಗುತ್ತದೆ ಮತ್ತು ಮನಮತ ಪರಮತ ಮೋಸ ಮಾಡುತ್ತದೆ. ಮತ್ತು ವಿಶೇಷ ಶ್ರೀಮತ ಏನಾಗಿದೆ? ನಿಮ್ಮನ್ನು ಆತ್ಮ ಎಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ಸಹಜ ಇದೆಯೋ ಅಥವಾ ಕಷ್ಟ ಇದೆಯೋ? ಕೆಲವು ಬಾರಿ ಕಠಿಣ ಎನಿಸುತ್ತದೆ! ಆದರೆ ಈ ಮೂರು ಸಂಬಂಧದಿಂದ ಪ್ರತಿಯೊಬ್ಬ ಮಗು ಮುಂದೆ ಮುಂದೆ ಹಾರುತ್ತ ಹೋಗಲಿ ಎನ್ನುವುದು ತಂದೆ ಬಯಸುತ್ತಾರೆ. ಯಾರು ಕೈ ಎತ್ತಿಲ್ಲ ಅವರನ್ನು ಬಾಪ್ದಾದಾ ಕೇಳುತ್ತಿದ್ದಾರೆ, ಇಂದಿನಿಂದ ಮನಮತ ಪರಮತದ ತ್ಯಾಗ ಮಾಡಲು ಸಾಧ್ಯವಿದೆಯೇ? ಮಾಡಲು ಸಾಧ್ಯವೇ? ಅವರು ಕೈ ಎತ್ತಿರಿ. ಒಳ್ಳೆಯದು! ಏಕೆಂದರೆ ಬಾಪ್ದಾದಾ ಸಮಯದ ಸೂಚನೆಯನ್ನು ಕೊಟ್ಟಿದ್ದಾರೆ. ಈಗ ಸಂಗಮದ ಸಮಯ ಬಹಳ ಅಮೂಲ್ಯ ಆಗಿದೆ ಮತ್ತು ಬಾಪ್ದಾದಾ ಇದರ ಸೂಚನೆಯನ್ನೂ ಕೊಟ್ಟಿದ್ದಾರೆ ಈಗ ಸಮಯದ ಅನುಸಾರ ಅಚಾನಕ್ ಆಗಿ ಆಗುವುದಿದೆ. ಆದ್ದರಿಂದ ಸದಾ ಎವರರೆಡಿ ಆಗಿರಬೇಕು ಅಲ್ಲವೇ! ಎಲ್ಲರೂ ಜೊತೆಯಲ್ಲಿ ಬರುತ್ತೀರಲ್ಲವೆ ಅಥವಾ ಹಿಂದೆ ಹಿಂದೆ ಬರುತ್ತೀರೋ? ಬಾಪ್ದಾದಾರವರ ಜೊತೆ ನಿಮ್ಮ ಮನೆಗೆ ಹೋಗಬೇಕಾಗಿದೆ ಅಲ್ಲವೆ! ತಯಾರ ಇರುವಿರಿ ಅಲ್ಲವೆ! ಜೊತೆಯಲ್ಲಿ ಹೋಗಲು ರೆಡಿ ಇರುವಿರಾ? ಎವೆರೆಡಿ. ರೆಡಿ ಸಹ ಅಲ್ಲ ಎವರ್ ರೆಡಿ. ಆದ್ದರಿಂದ ಬಾಪ್ದಾದಾ ಸಮಯದ ಸೂಚನೆಯನ್ನು ಕೊಡುತ್ತಿದ್ದಾರೆ. ಈ ಒಂದು ಜನ್ಮದಲ್ಲಿ 21 ಜನ್ಮಗಳ ಪ್ರಾಲಬ್ಧವನ್ನು ಮಾಡಿಕೊಳ್ಳಬೇಕಾಗಿದೆ. ಅಂದಮೇಲೆ ಎಷ್ಟು ಗಮನ ಕೊಡಬೇಕು ಎನ್ನುವುದನ್ನು ವಿಚಾರ ಮಾಡಿರಿ. ಬಾಬಾ ಅವರಿಗೆ ಎಲ್ಲಾ ಮಕ್ಕಳ ಪ್ರತಿ ಪ್ರೀತಿ ಇದೆ, ಪ್ರತಿ ಮಗುವೂ ತಂದೆಯ ಜೊತೆಯಲ್ಲಿಯೇ ಬರಬೇಕು ಮತ್ತು ಜೊತೆ ಜೊತೆಯಲ್ಲಿಯೇ ರಾಜ್ಯ ಅಧಿಕಾರಿಯಾಗಬೇಕು ಎಂದು ತಂದೆ ಬಯಸುತ್ತಾರೆ. ಆದ್ದರಿಂದ ನೀವು ತಂದೆ ಸಮಾನ ಸಂಪನ್ನ ಮತ್ತು ಸಂಪೂರ್ಣ ಆದಾಗ ಜೊತೆಯಲ್ಲಿ ಹೋಗಲು ಸಾಧ್ಯ ಅಲ್ಲವೇ! ಈ ಸಮಯದಲ್ಲಿ ಈ ಚಿಕ್ಕದಾದ ಯುಗದಲ್ಲಿ 21 ಜನ್ಮಗಳ ಪ್ರಾಪ್ತಿ ನಿಶ್ಚಿತ ಇದೆ. ಆದ್ದರಿಂದ ವಿಚಾರ ಮಾಡಿರಿ ಸಂಗಮದ ಚಿಕ್ಕದಾದ ಜನ್ಮದ ಒಂದೊಂದು ನಿಮಿಷವೂ ಎಷ್ಟು ಮಹಾನವಾಗಿದೆ! ಲೆಕ್ಕ ಮಾಡಿ, ಈ ಜನ್ಮದಿಂದ 21 ಜನ್ಮಗಳ ರಾಜ್ಯ ಭಾಗ್ಯ ಪಡೆಯಬೇಕಾಗಿದೆ ಅಂದ ಮೇಲೆ ಸಂಗಮದ ಒಂದು ನಿಮಿಷವೂ ಎಷ್ಟು ಅಮೂಲ್ಯವಾಗಿದೆ. ಹಾಗಾದರೆ ಈ ಬೆಲೆಯನ್ನು ಅರ್ಥ ಮಾಡಿಕೊಂಡು ಏನು ಮಾಡಬೇಕು?

ಬಾಪ್ದಾದಾ ಮೊದಲೂ ತಿಳಿಸಿದ್ದರು ಎರಡು ಮಾತಿನ ಕಡೆ ವಿಶೇಷ ಗಮನ ಕೊಡಿ. ಎರಡು ಮಾತುಗಳು ಯಾವುದು? ನೆನಪಿದೆ ಅಲ್ಲವೆ? ಒಂದು ಸಮಯ ಮತ್ತು ಇನ್ನೊಂದು ಸಂಕಲ್ಪ. ಸಂಕಲ್ಪ ವ್ಯರ್ಥ ಆಗಬಾರದು ಮತ್ತು ಸಮಯ ವ್ಯರ್ಥ ಹೋಗಬಾರದು. ಒಂದೊಂದು ಸೆಕೆಂಡ್ ಸಫಲ ಆಗಬೇಕು ಅಂದ ಮೇಲೆ ಹೇಳಿ ಇಷ್ಟು ಗಮನ ಕೊಡಬೇಕಾಗುವುದಲ್ಲವೆ! ಬಾಪ್ದಾದಾರವರಿಗೆ ಎಲ್ಲಾ ಮಕ್ಕಳ ಮೇಲೆ ಪ್ರೀತಿ ಇದೆ. ಒಬ್ಬ ಮಗುವೂ ಜೊತೆಯಲ್ಲಿ ಬರದೇ ಉಳಿದುಕೊಳ್ಳಬಾರದು ಎಂದು ಬಾಪ್ದಾದಾ ಇಷ್ಟ ಪಡುತ್ತಾರೆ. ಜೊತೆಯಲ್ಲಿದ್ದೇವೆ, ಜೊತೆಯಲ್ಲಿ ಹೋಗುತ್ತೇವೆ ಮತ್ತು ಜೊತೆಯಲ್ಲಿ ರಾಜ್ಯ ಅಧಿಕಾರಿಯಾಗಿ ಜೀವನದಲ್ಲಿ ಸುಖ ಶಾಂತಿಯ ಅನುಭವ ಮಾಡುತ್ತೇವೆ. ಹಾಗಾದರೆ ಹೇಳಿರಿ ಜೊತೆಯಲ್ಲಿ ಬರುತ್ತೀರಲ್ಲವೇ! ಬರುತ್ತೀರಾ? ಉಳಿದುಕೊಂಡುಬಿಡುವುದಿಲ್ಲ ತಾನೇ? ನೋಡಿ, ಮೂರು ಭಾಗ್ಯವಂತೂ ಎಲ್ಲರ ಮಸ್ತಕದಲ್ಲಿ ಹೊಳೆಯುತ್ತಿದೆ. ನಿಮ್ಮ ಮಸ್ತಕದಲ್ಲಿ ಈ ಮೂರೂ ಭಾಗ್ಯ ಕಾಣಿಸುತ್ತಿದೆಯಲ್ಲವೆ! ಸಂಗಮಯುಗವೇ ಭಾಗ್ಯಶಾಲಿ ಯುಗವಾಗಿದೆ. ಯಾರು ಏಷ್ಟು ಭಾಗ್ಯ ಮಾಡಿಕೊಳ್ಳಲು ಇಷ್ಟ ಪಡುತ್ತಾರೆ ಅಷ್ಟು ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಬಹಳ ಸಮಯ ಗಮನ ಇರಬೇಕು. ಎಲ್ಲಾ ಮಕ್ಕಳು ತಮ್ಮ ತಮ್ಮ ಪುರುಷಾರ್ಥದಲ್ಲಿ ತೀವ್ರತೆಯನ್ನು ತರಬೇಕು. ಪುರುಷಾರ್ಥಿ ಇರುವಿರಿ, ಬಾಪ್ದಾದಾ ನೋಡುತ್ತಿದ್ದಾರೆ ಪುರುಷಾರ್ಥ ಮಾಡುತ್ತಿದ್ದಾರೆ ಆದರೆ ಈಗ ತೀವ್ರತೆಯ ಪುರುಷಾರ್ಥ ಇರಬೇಕು. ಬಾಪ್ದಾದಾ ಎಲ್ಲಾ ಮಕ್ಕಳನ್ನು ಬಾಲಕರಿಂದ ಮಾಲೀಕರಾಗಿ ನೋಡಲು ಇಷ್ಟ ಪಡುತ್ತಾರೆ. ಯಾರ ಮಾಲೀಕ? ಸರ್ವ ಖಜಾನೆಯ ಮಾಲೀಕ. ಕೆಲವು ಬಾರಿ ಮಕ್ಕಳು ಬಾಪ್ದಾದಾರವರಿಗೆ ಹೇಳುತ್ತಾರೆ, ಬಾಬಾ ನೀವು ಶಕ್ತಿಗಳನ್ನು ಕೊಟ್ಟಿರುವಿರಿ ಮತ್ತು ನಾವೂ ನಮ್ಮನ್ನು ಮಾಸ್ಟರ್ ಸರ್ವಶಕ್ತಿವಂತ ಎಂದು ತಿಳಿದುಕೊಳ್ಳುತ್ತೇವೆ ಆದರೆ ಕೆಲವು ಮಕ್ಕಳು ದೂರು ಹೇಳುತ್ತಾರೆ ಏನೆಂದರೆ, ಯಾವ ಸಮಯದಲ್ಲಿ ಶಕ್ತಿಯ ಅವಶ್ಯಕತೆ ಇರುತ್ತದೆ ಅದು ಆ ಸಮಯದಲ್ಲಿ ಬರುವುದಿಲ್ಲ. ಆದರೆ ಇದಕ್ಕೆ ಏನು ಕಾರಣ? ತಂದೆ ಸರ್ವರಿಗೂ ಸರ್ವ ಶಕ್ತಿಗಳನ್ನು ಕೊಟ್ಟಿದ್ದಾರೆ. ಕೊಟ್ಟಿದ್ದೇವೆ ಅಲ್ಲವೆ ಅಥವಾ ಕೆಲವರಿಗೆ ಹೆಚ್ಚು ಮತ್ತು ಕೆಲವರಿಗೆ ಕಡಿಮೆ ಇದೆಯೇ? ಸರ್ವ ಶಕ್ತಿಗಳು ದೊರಕಿವೆ, ಕೈ ಎತ್ತಿರಿ. ಎಲ್ಲರಿಗೂ ದೊರಕಿವೆ ಆದರೆ ಸಮಯದಲ್ಲಿ ಕೆಲಸಕ್ಕೆ ಬರುವುದಿಲ್ಲ ಏಕೆ? ಇದಕ್ಕೆ ಕಾರಣ? ಕಾರಣ ತಿಳಿದುಕೊಂಡಿರುವಿರಿ ಆದರೆ ಆ ಸಮಯದಲ್ಲಿ ಮರೆತು ಬಿಡುತ್ತೀರಿ. ಸರ್ವ ಶಕ್ತಿಗಳ ಖಜಾನೆ ಪ್ರತಿ ಮಗುವಿಗೆ ಆಸ್ತಿಯ ರೂಪದಲ್ಲಿ ದೊರಕಿದೆ. ತಂದೆ ಸರ್ವಶಕ್ತಿಗಳ ಖಜಾನೆಯನ್ನು ಪ್ರತಿ ಮಗುವಿಗೆ ಕೊಟ್ಟಿದ್ದಾರೆ. ಆದರೆ ಸಮಯದಲ್ಲಿ ಶಕ್ತಿ ಬರುವುದಿಲ್ಲ, ನೀವೇ ವಿಚಾರ ಮಾಡಿರಿ ಯಾರಾದರೂ ತಮ್ಮ ಸ್ವಮಾನದ ಸೀಟಿನಲ್ಲಿ ಕುಳಿತುಕೊಳ್ಳದೇ ಆಜ್ಞೆ ಮಾಡಿದರೆ ಯಾರಾದರೂ ಒಪ್ಪಿಕೊಳ್ಳುವರೇ? ಯಾವ ಸಮಯದಲ್ಲಿ ಶಕ್ತಿ ಬರುವುದಿಲ್ಲ ಅಂದರೆ ನೀವು ಆ ಸಮಯದಲ್ಲಿ ನಿಮ್ಮ ಮಾಸ್ಟರ್ ಸರ್ವಶಕ್ತಿವಂತ ಸೀಟನಲ್ಲಿ ಇರುವುದಿಲ್ಲ. ಆದ್ದರಿಂದ ಸದಾ ನಿಮ್ಮ ಸೀಟ್ನಲ್ಲಿ ಸೆಟ್ ಆಗಿರಿ. ಯಾವಾಗ ವ್ಯರ್ಥ ಸಂಕಲ್ಪ ನಡೆಯುತ್ತದೆ, ಅಥವಾ ಟೆನ್ಶನ್ ಬಂದರೆ ಆಗ ಸ್ವಮಾನದ ಸೀಟ್ ಬಿಟ್ಟು ಹೋಗುತ್ತದೆ. ಬಾಪ್ದಾದಾ ಪ್ರತಿಯೊಬ್ಬರಿಗೂ ಎಷ್ಟು ಸ್ವಮಾನಗಳನ್ನು ಕೊಟ್ಟಿರುವರು. ಎಷ್ಟು ದೊಡ್ಡ ಸ್ವಮಾನದ ಸೀಟ್ ಇದೆ, ಎಣಿಕೆ ಮಾಡಿ. ಎಷ್ಟು ಸ್ವಮಾನವನ್ನು ತಂದೆ ಕೊಟ್ಟಿದ್ದಾರೆ? ಸ್ವಮಾನದಲ್ಲಿ ಸೆಟ್ ಆಗುವುದಿಲ್ಲ ಆದ್ದರಿಂದ, ಸ್ವಮಾನ ಎಲ್ಲಿ ಇರುವುದಿಲ್ಲ ಅಲ್ಲಿ ಏನಾಗುತ್ತದೆ? ತಿಳಿದುಕೊಂಡಿರುವಿರಿ ಅಲ್ಲವೆ! ದೇಹ ಭಾನ ಬರುತ್ತದೆ. ಸ್ವಮಾನ ಆದರೂ ಇರುತ್ತದೆ ಇಲ್ಲವೇ ದೇಹ ಭಾನ ಇರುತ್ತದೆ. ದೇಹ ಭಾವದಲ್ಲಿದ್ದು ಆಜ್ಞೆ ಮಾಡಿದರೆ ಶಕ್ತಿಗಳು ಒಪ್ಪುವುದಿಲ್ಲ. ಇಲ್ಲವಾದರೆ ಮಾಸ್ಟರ್ ಸರ್ವಶಕ್ತಿವಂತರ ಆಜ್ಞೆಯನ್ನು ಶಕ್ತಿ ಒಪ್ಪುವುದಿಲ್ಲ ಎಂದು ಆಗಲು ಸಾಧ್ಯವೇ ಇಲ್ಲ. ಸೀಟ್ನಲ್ಲಿ ಸೆಟ್ ಆಗುವ ಅಭ್ಯಾಸ ಸದಾ ಮಾಡಿರಿ. ಪರಿಶೀಲನೆ ಮಾಡಿರಿ, ಕರ್ಮ ಭೋಗವೇ ಇರಲಿ, ಸೇವೆಯೇ ಇರಲಿ, ಅಥವಾ ನಿಮ್ಮ ಮನನ ಮಂಥನದಲ್ಲಿಯೇ ಇರಲಿ, ಆದರೆ ಸೀಟಿನಲ್ಲಿ ಸೆಟ್ ಆಗಿದ್ದರೆ ಸರ್ವ ಶಕ್ತಿಗಳು ಹಾಜಿರ ಆಗುತ್ತವೆ.

ಇಂದು ಬಾಪ್ದಾದಾ ನೋಡಿದರು ಅಮೃತವೇಳೆ ಪರಿಕ್ರಮ ಮಾಡಿದರು, ನಾಲ್ಕೂ ಕಡೆ ಪರಿಕ್ರಮ ಮಾಡಿದರು, ವಿದೇಶ ಮತ್ತು ದೇಶ. ಬಾಪ್ದಾದಾರವರಿಗೆ ಪರಿಕಮ್ರ ಮಾಡಲು ಸಮಯ ಹಿಡಿಯುವುದಿಲ್ಲ. ಆಗ ಏನು ನೋಡಿದರು? ಹೇಳಬೇಕೆ? ಎಲ್ಲರೂ ಹೆಚ್ಚಿನವರು ಕುಳಿತುಕೊಂಡಿದ್ದರು, ಎದ್ದು ತಮ್ಮ ತಮ್ಮ ಸ್ಥಾನದಲ್ಲಿ ಕುಳಿತುಕೊಂಡಿದ್ದರು, ಪೂರ್ಣ ಸಮಯ ತಮ್ಮ ಅನುಭವಿ ಮೂರ್ತಿ ಆಗಿ ಕುಳಿತುಕೊಳ್ಳಬೇಕೆಂದು ಪುರುಷಾರ್ಥವನ್ನೂ ಮಾಡುತ್ತಿದ್ದರು. ಆದರೆ ಏನು ನೋಡಿದೆವು? ಅನುಭವಿ ಮೂರ್ತಿಗಳು ಕೆಲವರಿದ್ದರು. ಏಕೆಂದರೆ ಎಲ್ಲದಕ್ಕಿಂತ ದೊಡ್ಡ ಶಕ್ತಿ ಅನುಭವದ ಶಕ್ತಿ ಆಗಿದೆ. ಅನುಭವಿ ಸ್ವರೂಪ, ಸರ್ವಶಕ್ತಿಗಳ ಅನುಭವಿ ಸ್ವರೂಪ, ಮಾಸ್ಟರ್ ಜ್ಞಾನಪೂರ್ಣ, ಮಾಸ್ಟರ್ ಸರ್ವ ಶಕ್ತಿ ಸ್ವರೂಪ, ಅನುಭವಿ ಸ್ವರೂಪ ಆಗುವುದರಲ್ಲಿ ಸ್ವಲ್ಪ ಕೊರತೆ ಕಂಡು ಬಂದಿತು. ಪುರುಷಾರ್ಥ ಮಾಡುತ್ತಾರೆ. ಬಾಪ್ದಾದಾ ಆದರೂ ಶುಭಾಶಯ ಹೇಳುತ್ತಾರೆ. ಪುರುಷಾರ್ಥ ಮಾಡಿ ಹೆಚ್ಚಿನವರು ಬರುತ್ತಾರೆ, ಅನೇಕರು ಕುಳಿತುಕೊಳ್ಳುತ್ತಾರೆ ಆದರೆ ಬಾಪ್ದಾದಾ ಇದನ್ನೇ ಇಷ್ಟ ಪಡುತ್ತಾರೆ ಲೈಟ್ ಮೈಟ್ ಸ್ವರೂಪದ ಅನುಭವಿ ಮೂರ್ತಿಯಾಗಿ ಕುಳಿತುಕೊಳ್ಳಬೇಕು. ಏಕೆಂದರೆ ಅಮೃತವೇಳೆಯ ಯೋಗದ ಸಕಾಶ ಪೂರ್ಣ ವಾಯುಮಂಡಲದಲ್ಲಿ ಹರಡುತ್ತದೆ. ಈ ಅನುಭವವನ್ನು ಇನ್ನೂ ಮುಂದುವರೆಸಿರಿ. ಯಾವ ರೀತಿ ಬ್ರಹ್ಮಾ ತಂದೆಯನ್ನು ನೋಡಿದಿರಿ, ಎಷ್ಟು ಶಕ್ತಿಶಾಲಿ ಫರಿಶ್ತೆ ಸ್ವರೂಪದ ಸ್ಥಿತಿ ಇತ್ತು, ಅದೇ ರೀತಿ ಅಮೃತವೇಳೆಗೆ ತಮ್ಮ ತಮ್ಮ ರೂಪದಿಂದ ಅಟೆನ್ಷನ್ ಕೊಡಿ ಅವಿಶ್ರಾಂತರಾಗಿ. ಬಾಪ್ದಾದಾ ನೋಡಿದರು ಕೆಲವು ಮಕ್ಕಳು ಲೈಟ್ ಮೈಟ್ ರೂಪದಲ್ಲಿಯೂ ಕುಳೀತುಕೊಳ್ಳುತ್ತಾರೆ. ಇಲ್ಲ ಎಂದಲ್ಲ. ಕೂಡುತ್ತಾರೆ. ಹೌದು ಆದರೆ ಈ ಸಮಯದ ಪುರುಷಾರ್ಥಕ್ಕೆ ಇನ್ನೂ ಹೆಚ್ಚು ಗಮನ ಕೊಡಬೇಕಾಗಿದೆ. ಮತ್ತು ಬಾಪ್ದಾದಾ ಮೊದಲೇ ಸೂಚನೆ ಕೊಟ್ಟಿದ್ದಾರೆ ಏನೆಂದರೆ ನಿಮ್ಮ ಮನಸ್ಸನ್ನು ಸದಾ ವ್ಯಸ್ತವಾಗಿಟ್ಟುಕೊಳ್ಳಿರಿ. ಮನಸಾ ಸೇವೆಯಲ್ಲಾಗಲೀ, ವಾಚಾ ಸೇವೆಯಲ್ಲಾಗಲೀ, ಮನನ ಶಕ್ತಿಯಲ್ಲಿ ವ್ಯಸ್ತವಾಗಿಟ್ಟುಕೊಳ್ಳಿ. ಮನನ ಮಾಡಿರಿ. ಮನನ ಶಕ್ತಿ ಮನಸ್ಸನ್ನು ಏಕಾಗ್ರ ಮಾಡುತ್ತದೆ. ಕೆಲವರು ಚೆನ್ನಾಗಿ ಮನನ ಮಾಡುತ್ತಾರೆ ಆದರೆ ಮನನ ಶಕ್ತಿಯನ್ನು ಇಡೀ ದಿನದಲ್ಲಿ ಹೆಚ್ಚಿಸಿರಿ ಏಕೆಂದರೆ ಬಾಪ್ದಾದಾರವರಿಗೆ ಕೊನೆಯ ಮಕ್ಕಳ ಮೇಲೂ ಪ್ರೀತಿ ಇದೆ. ಕೊನೆಯ ಮಕ್ಕಳೂ ಸಹ ಜೊತೆಯಲ್ಲಿ ಬರಬೇಕು ಎಂದು ಬಾಪ್ದಾದಾ ಇಷ್ಟ ಪಡುತ್ತಾರೆ. ಉಳಿದುಕೊಳ್ಳಬಾರದು. ಹಿಂದೆ ಹಿಂದೆ ಉಳಿಯಬಾರದು. ಹಾಗಾದರೆ ಏನು ಮಾಡುವಿರಿ? ಗಮನ ಇಡಬೇಕು.

ಈ ದಿನ ಬಾಪ್ದಾದಾ ಸಭೆಯನ್ನು ನೋಡಿ ಈಗ ಮಕ್ಕಳ ವೃದ್ಧಿ ಆಗಲೇ ಬೇಕಾಗಿದೆ ಎನ್ನುವುದು ಗೊತ್ತಿದೆ. 75 ವರ್ಷಗಳ ಉತ್ಸವ ಆಚರಿಸಿದಿರಿ. ಅದಕ್ಕಾಗಿ ಬಾಪ್ದಾದಾ ಮಕ್ಕಳಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಬಾಪ್ದಾದಾ ಸೇವೆಯ ಲಗನ್ ಸಹ ನೋಡಿದರು. ಪ್ರತಿಯೊಂದು ಸ್ಥಾನದವರಿಗೆ ಉಮಂಗ ಇದೆ. ಮತ್ತು ಸೇವೆಯ ಫಲ ಮತ್ತು ಸೇವೆಯ ಬಲ ಅದೂ ಸಹ ಕಂಡುಬರುತ್ತಿದೆ. ವಿಶೇಷವಾಗಿ ಬಾಪ್ದಾದಾ ನೋಡೀದ್ದೇನೆಂದರೆ ಎಲ್ಲಿ ಮಕ್ಕಳು ಸೇವೆ ಮಾಡಿದರು ಅಲ್ಲಿ ಈ ಬಾರಿ ಸರ್ಕಾರದ ನಿಮಿತ್ತ ಆಗಿರುವ ಆತ್ಮರು ಹೆಚ್ಚು ಬಂದಿದ್ದಾರೆ. ಮತ್ತು ಪರಿಣಾಮ ಏನೆಂದರೆ ಈಗಿನ ಸಮಯದ ಅನುಸಾರ ಯಾವಾಗ ದುಃಖ ಮತ್ತು ಅಶಾಂತಿ ಹೆಚ್ಚುತ್ತಿದೆ, ಯಾವ ವಿಷಯ ನೀವು ಇಟ್ಟಿರುವಿರಿ ಅದು ಅವಶ್ಯಕ ಇದೆ ಎಂದು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಎಷ್ಟು ಶಾಂತಿಯನ್ನು ಬಯಸುತ್ತಾರೆ ಅಷ್ಟು ಅಶಾಂತಿ ಹೆಚ್ಚುತ್ತಿದೆ. ಒಂದಿಲ್ಲ ಒಂದು ಅಶಾಂತಿಯ ಮಾತು ಬರುತ್ತದೆ. ಅದಕ್ಕಾಗಿ ನಾಲ್ಕೂ ಕಡೆ ಟೆನ್ಶನ್ ಹೆಚ್ಚುತ್ತಿದೆ. ಮತ್ತು ಸರಕಾರವೂ ಭಾರತ ಟೆನ್ಶನ್ನಿಂದ ಮುಕ್ತ ಆಗಬೇಕು ಎಂದು ಇಷ್ಟ ಪಡುತ್ತದೆ. ಆದ್ದರಿಂದ ಎಲ್ಲರೂ ಯಾರು ಸೇವೆ ಮಾಡಿದ್ದಾರೆ ಆ ಎಲ್ಲ ಮಕ್ಕಳಿಗೆ ಬಾಪ್ದಾದಾ ಶುಭಾಶಯ ಹೇಳುತ್ತಿದ್ದಾರೆ. ಮತ್ತು ಯಾರು ಮಾಡುವವರಿದ್ದಾರೆ ಅವರಿಗೂ ಮುಂಚಿತವಾಗಿ ಶುಭಾಶಯ ಹೇಳುತ್ತಿದ್ದೇವೆ.

ಈಗ ಒಂದೊಂದು ಮಗು ತಂದೆಯನ್ನು ಫಾಲೋ ಮಾಡುತ್ತಾ ತಂದೆಯ ಸಮಾನ ಸಂಪನ್ನ ಅವಶ್ಯ ಆಗಬೇಕು ಎಂದು ಬಾಪ್ದಾದಾ ಇಷ್ಟ ಪಡುತ್ತಾರೆ. ಎಲ್ಲ ಮಕ್ಕಳೂ ಪುರುಷಾರ್ಥ ಮಾಡುತ್ತಿರುವುದನ್ನು ಬಾಪ್ದಾದಾ ನೋಡಿದರು. ಪುರುಷಾರ್ಥದ ಲಗನ್ ಸಹ ಇದೆ. ತಮ್ಮೊಂದಿಗೆ ತಾವು ಪ್ರತಿಜ್ಞೆಯನ್ನೂ ಬಹಳ ಮಾಡುತ್ತಾರೆ. ಈಗ ಇನ್ನು ಮಾಡುವುದಿಲ್ಲ, ಮಾಡುವುದಿಲ್ಲ . . . ಈ ಹುಡುಗಾಟಿಕೆ ಪುರುಷಾಥವನ್ನು ಸಡಿಲ ಮಾಡುತ್ತದೆ. ಆದರೆ ಕಾರಣ ಏನಾಗಿರುತ್ತದೆ. ಕಾರಣ ಏನೆಂದರೆ ಪುರುಷಾರ್ಥದಲ್ಲಿ ಧೃಢತೆ ಕಡಿಮೆ ಇದೆ. ಮಧ್ಯ ಮಧ್ಯದಲ್ಲಿ ಹುಡುಗಾಟಿಕೆ ಬರುತ್ತದೆ. ಆಗಿ ಬಿಡುವುದು. . . ಮಾಡಿ ಬಿಡುವೆವು. . . ಈ ಹುಡುಗಾಟಿಕೆ ಪುರುಷಾರ್ಥವನ್ನು ಸಡಿಲ ಮಾಡುತ್ತದೆ. ಹಾಗಾದರೆ ಈಗ ಏನು ಮಾಡುವಿರಿ. ಈಗ ಇದೇ ವಿಶೇಷ ಗಮನ ಕೊಡಿ, ನಿಮ್ಮ ನಿಮ್ಮ ಕಾರ್ಯಕ್ರಮ ನೀವೇ ಮಾಡಿಕೊಳ್ಳಿರಿ. ಮನಸ್ಸನ್ನು ವ್ಯಸ್ತವಾಗಿಟ್ಟುಕೊಳ್ಳಲು ನಿಮ್ಮ ವೇಳಾಪಟ್ಟಿಯನ್ನು ನೀವೇ ತಯಾರು ಮಾಡಿರಿ. ಬೇಕಾದರೆ ಮನನ ಮಾಡಿರಿ, ಇಲ್ಲವೇ ಸೇವೆ ಮಾಡಿರಿ, ಪರಸ್ಪರ ಗಮನ ಸೆಳೆಯಿರಿ ಆದರೆ ವ್ಯಸ್ತವಾಗಿರಿ. ಮನಸ್ಸಿನಿಂದ ವ್ಯಸ್ತವಾಗಿರಿ, ಶರೀರದಿಂದ ವ್ಯಸ್ತವಾಗಿರುತ್ತೀರಿ ಆದರೆ ಮನಸ್ಸಿನಿಂದ ವ್ಯಸ್ತವಾಗಿರಿ. ಮನಸ್ಸಿನಿಂದ ವ್ಯಸ್ತವಾಗಿರುವ ವ್ಯಾಪಾರಿ ಆಗಿರಿ.(ಬಿಜಿ ಆಗಿರುವ ಬಿಜಿನೆಸ್ಸ್ಮೆನ್ ಅಗಿರಿ) ಇದನ್ನು ಮಾಡಲು ಸಾಧ್ಯವಿದೆ ಅಲ್ಲವೆ? ಮಾಡುವಿರಾ? ಮಾಡುವಿರಾ? ಏಕೆಂದರೆ ನಿಮಗೆ ಗೊತ್ತಿದೆ ಸಮಯವನ್ನು ಯಾವಾಗ ಸಮೀಪ ತರುತ್ತಾರೆ ಎಂದು ಬ್ರಹ್ಮಾ ತಂದೆ ಸಹ ನಿಮ್ಮ ನೀರಿಕ್ಷಣೆ ಮಾಡುತ್ತಿದ್ದಾರೆ ಮತ್ತು ನಿಮ್ಮ ಅಡ್ವಾನ್ಸ್ಪಾರ್ಟಿ ಸಹ ನಿಮ್ಮ ನಿರೀಕ್ಷಣೆ ಮಾಡುತ್ತಿದೆ. ಏಕೆಂದರೆ ಸಮಯವನ್ನು ಸಮೀಪ ತರುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ನಿಮ್ಮನ್ನು ನೀವು ಸಂಪನ್ನ ಮಾಡುವುದು ಅರ್ಥಾತ್ ಸಮಯವನ್ನು ಸಮೀಪ ತರುವುದು.

ಬಾಪ್ದಾದಾ ಒಂದು ತಿಂಗಳು ಸಮಯ ಕೊಟ್ಟಿದ್ದಾರೆ. ಈ ಒಂದು ತಿಂಗಳಲ್ಲಿ ಪ್ರತಿಯೊಬ್ಬರೂ ತೀವ್ರ ಪುರುಷಾರ್ಥಿಯಾಗಿ, ಪುರುಷಾರ್ಥಿ ಅಲ್ಲ ತೀವ್ರ ಪುರುಷಾರ್ಥಿ ಆಗಲೇ ಬೇಕು. ಒಪ್ಪಿಗೆಯೇ. ಒಪ್ಪಿಗೆ ಇದೆಯೇ ಕೈ ಎತ್ತಿರಿ. ಒಳ್ಳೆಯದು ಶುಭಾಶಯಗಳು. ಈಗ ಎಲ್ಲರೂ ಧೃಢ ಸಂಕಲ್ಪ ಮಾಡಿ ಪ್ರತಿನಿತ್ಯ ಬಾಪ್ದಾದಾ ಅವರಿಗೆ ನಿಮ್ಮ ಇಡೀ ದಿನದ ರಿಜಲ್ಟ್ನ್ನು ಹೇಗೆ ಕೊಡಬೇಕು? ಪುರುಷಾರ್ಥ ಅಲ್ಲ, ತೀವ್ರ ಪುರುಷಾರ್ಥ. ಅದಕ್ಕಾಗಿ ಸಿದ್ಧ ಇರುವಿರಾ? ಸಿದ್ಧ ಇರುವಿರಾ? ಎರಡು ಕೈ ಎತ್ತಿರಿ. ಬಹಳ ಒಳ್ಳೆಯದು. ಈಗ ಬಾಪ್ದಾದಾ ಅಚಾನಕ್ ಮಧ್ಯದಲ್ಲಿಯೇ ರಿಜಲ್ಟ್ ಕೇಳುವರು. ದಿನಾಂಕ ಹೇಳುವುದಿಲ್ಲ. ಅಚಾನಕವಾಗಿ ಒಂದು ತಿಂಗಳಿನ ಒಳಗೆ ಯಾವುದೇ ದಿನಾಂಕದಂದು ರಿಜಲ್ಟ್ ಕೇಳುವರು. ಮಾಡಲೇ ಬೇಕು. ಈ ಪ್ರತಿಜ್ಞೆಯನ್ನು ನಿಮ್ಮೊಂದಿಗೆ ನೀವು ಮಾಡಿರಿ. ಬಾಪ್ದಾದಾ ಮಾಡಿಸುತ್ತಾರೆ. ಅವರು ಮಾಡಿಯೇ ಮಾಡಿಸುತ್ತಾರೆ. ಆದರೆ ನಿಮ್ಮೊಂದಿಗೆ ನೀವು ಈ ಸಂಕಲ್ಪ ಮಾಡಿರಿ. ಮತ್ತು ಪ್ರಾಕ್ಟಿಕಲ್ ಮಾಡಿ ತೋರಿಸಿರಿ. ಮಾಡಲೇ ಬೇಕು. ಮಾಡೋಣ… ಅಲ್ಲ. ಈಗ ಇದು ಒಳ್ಳೆಯದಲ್ಲ. ಸಮಯ ಮುಂದೆ ಹೋಗುತ್ತಿದೆ, ಅತೀಯಲ್ಲಿ ಹೋಗುತ್ತಿದೆ. ಆದ್ದರಿಂದ ಸಮಯದ ಪರಿವರ್ತನೆ ಮಾಡುವವರು ನೀವು ಪೂರ್ವಜರಿಗೆ ನಿಮ್ಮ ದುಃಖಿ ಪರಿವಾರ ನೋಡಿ ದಯೆ ಬರುವುದಿಲ್ಲವೆ? ದಯಾ ಹೃದಯಿ ಆಗಿರಿ. ಮನಸಾದಿಂದ, ವಾಚಾದಿಂದ, ಸಂಬಂಧ-ಸಂಪರ್ಕದಿಂದ ದುಃಖಿಗಳಿಗೆ ಸುಖದ ದಾರಿ ತೋರಿಸಿರಿ, ಒಳ್ಳೆಯದು.

ಈಗ ಯಾರು ಎಲ್ಲಿಯೇ ಕುಳಿತಿರಲಿ, ಟೀ.ವಿ.ಯಲ್ಲಿ ನೋಡುತ್ತಿರಬಹುದು, ಭಿನ್ನ ಭಿನ್ನ ಸ್ಥಾನದಲ್ಲಿ ಕುಳಿತು ಅಲ್ಲಿಯೂ ಟಿ.ವಿ.ಯಲ್ಲಿ ನೋಡುತ್ತಿರಬಹುದು, ಒಬ್ಬೊಬ್ಬ ಮಗುವಿಗೆ ಬಾಪ್ದಾದಾ ಇಂದು ತೀವ್ರ ಪುರುಷಾರ್ಥದ ಟೈಟಲ್ ಕೊಡುತ್ತಿದ್ದಾರೆ. ಈಗ ಇದೇ ಟೈಟಲ್ನ್ನು ಸದಾ ನೆನಪಿಟ್ಟುಕೊಳ್ಳಿ. ನೀವು ಯಾರು? ಎಂದು ಯಾರಾದರೂ ಕೇಳಿದರೆ ನಾವು ತೀವ್ರ ಪುರುಷಾರ್ತಿ ಎಂದು ಹೇಳಿರಿ. ಸರಿ ಇದೆಯೇ ಎಲ್ಲರಿಗೂ ಒಪ್ಪಿಗೆಯೇ. ಒಪ್ಪಿಗೆಯೇ? ಈಗ ಸಡಿಲ ಪುರುಷಾರ್ಥ ನಡೆಯುವುದಿಲ್ಲ. ಸಮಯ ಮುಂದೆ ಓಡುತ್ತಿದೆ ಆದ್ದರಿಂದ ಈಗ ತೀವ್ರ ಪುರುಷಾರ್ಥಿ ಆಗಲೇ ಬೇಕು, ಸಮಯದ ಕರೆಯಾಗಿದೆ – ತೀವ್ರ ಪುರುಷಾರ್ಥಿ ಭವ. ಆದ್ದರಿಂದ ಸರ್ವ ಮಕ್ಕಳಿಗೆ ಬಾಪ್ದಾದಾ ಅವರ ಬಹಳ ಬಹಳ ನೆನಪು ಪ್ರೀತಿ ಮತ್ತು ತೀವ್ರ ಪುರುಷಾರ್ಥದ ಸೌಗಾತ ಕೊಡುತ್ತಿದ್ದಾರೆ.

ವರದಾನ:
ಮಾಯೆಯ ತಿಳುವಳಿಕೆಯಿಂದ ಮುಗ್ಧರು ಮತ್ತು ಜ್ಞಾನದಲ್ಲಿ ಪರಿಪೂರ್ಣರಾಗುವ ಸಂಪೂರ್ಣ ಪವಿತ್ರ ಭವ.

ಹೇಗೆ ಸತ್ಯಯುಗೀ ಆತ್ಮರು ವಿಕಾರಗಳ ಮಾತುಗಳ ತಿಳುವಳಿಕೆಯಿಂದ ಮುಗ್ಧರಾಗಿರುತ್ತಾರೆಯೋ, ಅದೇ ಸಂಸ್ಕಾರವು ಸ್ಪಷ್ಟವಾಗಿ ಸ್ಮೃತಿಯಲ್ಲಿದ್ದರೆ ಮಾಯೆಯ ತಿಳುವಳಿಕೆಯಿಂದ ಮುಗ್ಧರಾಗಿ ಬಿಡುತ್ತೀರಿ. ಆದರೆ ಭವಿಷ್ಯ ಸಂಸ್ಕಾರವು ಸ್ಮೃತಿಯಲ್ಲಿ ಆಗ ಸ್ಪಷ್ಟವಾಗಿರುತ್ತದೆ ಯಾವಾಗ ಸದಾಕಾಲ ಹಾಗೂ ಸ್ಪಷ್ಟ ರೀತಿಯಿಂದ ಆತ್ಮಿಕ ಸ್ವರೂಪದ ಸ್ಮೃತಿಯಿರುತ್ತದೆ. ಹೇಗೆ ದೇಹವು ಸ್ಪಷ್ಟವಾಗಿ ಕಾಣಿಸುತ್ತದೆಯೋ ಹಾಗೆಯೇ ತಮ್ಮ ಆತ್ಮ ಸ್ವರೂಪವೂ ಸ್ಪಷ್ಟವಾಗಿ ಕಾಣಿಸಲಿ ಅರ್ಥಾತ್ ಅನುಭವದಲ್ಲಿ ಬರುತ್ತೀರೆಂದರೆ ಹೇಳಲಾಗುತ್ತದೆ - ಮಾಯೆಯಿಂದ ಮುಗ್ಧರು ಮತ್ತು ಜ್ಞಾನದಲ್ಲಿ ಪರಿಪೂರ್ಣರು ಅರ್ಥಾತ್ ಸಂಪೂರ್ಣ ಪವಿತ್ರರು.

ಸ್ಲೋಗನ್:
ಆಂತರ್ಯದ ಅಶುದ್ಧಿಯೇ ಸಂಪೂರ್ಣ ಶುದ್ಧವಾಗುವುದರಲ್ಲಿ ವಿಘ್ನ ಹಾಕುತ್ತದೆ.

ಅವ್ಯಕ್ತ ಸೂಚನೆ:- ಈಗ ತಮ್ಮ ದಾತಾ ಸ್ವರೂಪವನ್ನು ಪ್ರತ್ಯಕ್ಷ ಮಾಡಿಕೊಳ್ಳಿ.

ತಾವು ಈಶ್ವರಿಯ ಸೇವೆ ಮಾಡುವಂತಹವರು ಆಗಿದ್ದೀರಿ, ಸೇವೆ ತೆಗೆದುಕೊಳ್ಳುವವರಲ್ಲ. ಒಂದು ವೇಳೆ ಸೇವೆ ತೆಗೆದುಕೊಳ್ಳುವವರಾಗುತ್ತೀರಿ ಎಂದರೆ ಹೆಸರಿನಂತೆ ಕರ್ತವ್ಯ ಇಲ್ಲ. ಈಶ್ವರಿಯ ಸೇವಾಧಾರಿ ಸೇವೆಯನ್ನು ತೆಗೆದುಕೊಳ್ಳುವುದಿಲ್ಲ, ಸೇವೆ ಮಾಡುತ್ತಾರೆ ಏಕೆಂದರೆ ದಾತನ ಮಕ್ಕಳಾಗಿದ್ದಾರೆ. ಹೇಗೆ ತಂದೆ ಏನನ್ನು ಬೇಡುವುದಿಲ್ಲ, ಅವರು ಸದಾ ಕೊಡುತ್ತಾರೆ. ಇದೇ ರೀತಿ ತಾವು ಸಹ ಕೊಡುವವರಾಗಿ. ಒಂದು ವೇಳೆ ಸಮಸ್ಯೆ ರೂಪ ಆಗುತ್ತೀರಿ ಎಂದರೆ - ಸೇವೆ ಪಡೆದುಕೊಳ್ಳುವವರು ಆಗಿದ್ದೀರಿ. ಯಾವುದೇ ಪ್ರಕಾರದ ಎಕ್ಸ್ಟ್ರಾ ಸೇವೆಯನ್ನು ಪಡೆದುಕೊಳ್ಳುವವರಿಗೆ ಎಂದು ನಾವು ದಾತ, ವರದಾತನ ಮಕ್ಕಳಾಗಿದ್ದೇವೆ ಎನ್ನುವ ನಶೆ ಇರುವುದಿಲ್ಲ.