20.11.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಮಕ್ಕಳಿಗೆ ಶಾಂತಿ ಮತ್ತು ಸುಖದ ಆಸ್ತಿಯನ್ನು ಕೊಡಲು ತಂದೆಯು ಬಂದಿದ್ದಾರೆ, ನಿಮ್ಮ ಸ್ವಧರ್ಮವೇ ಶಾಂತಿಯಾಗಿದೆ ಆದ್ದರಿಂದ ನೀವು ಶಾಂತಿಗಾಗಿ ಅಲೆದಾಡುವುದಿಲ್ಲ”

ಪ್ರಶ್ನೆ:
ಈಗ ನೀವು ಮಕ್ಕಳು 21 ಜನ್ಮಗಳಿಗಾಗಿ ಅಖೂಟ ಖಜಾನೆಗಳಲ್ಲಿ ತುಲಾಭಾರ ಮಾಡಲು ಯೋಗ್ಯರಾಗುತ್ತೀರಿ - ಏಕೆ?

ಉತ್ತರ:
ಏಕೆಂದರೆ ಯಾವಾಗ ತಂದೆಯು ಹೊಸ ಸೃಷ್ಟಿಯನ್ನು ರಚಿಸುತ್ತಾರೆಯೋ ಆಗ ನೀವು ಮಕ್ಕಳು ಅವರಿಗೆ ಸಹಯೋಗಿಗಳಾಗುತ್ತೀರಿ. ತಮ್ಮದೆಲ್ಲವನ್ನೂ ಅವರ ಕಾರ್ಯದಲ್ಲಿ ಸಫಲ ಮಾಡುತ್ತೀರಿ ಆದ್ದರಿಂದ ಅದಕ್ಕೆ ಪ್ರತಿಫಲವಾಗಿ ತಂದೆಯು 21 ಜನ್ಮಗಳಿಗಾಗಿ ನಿಮ್ಮನ್ನು ಅಕುಟ ಖಜಾನೆಗಳಲ್ಲಿ ಈ ರೀತಿ ತುಲಾಭಾರ ಮಾಡುತ್ತಾರೆ, ನಿಮ್ಮ ಬಳಿ ಎಂದೂ ಧನವು ಖಾಲಿಯಾಗುವುದಿಲ್ಲ, ದುಃಖವೂ ಬರುವುದಿಲ್ಲ, ಅಕಾಲ ಮೃತ್ಯುವೂ ಆಗುವುದಿಲ್ಲ.

ಗೀತೆ:
ನನಗೆ ಆಶ್ರಯ ನೀಡುವವರು..........

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ‘ಓಂ’ನ ಅರ್ಥವನ್ನು ತಿಳಿಸಿದ್ದೇನೆ. ಕೆಲವರು ಕೇವಲ ಓಂ ಎಂದು ಹೇಳುತ್ತಾರೆ ಆದರೆ ವಾಸ್ತವದಲ್ಲಿ ಓಂ ಶಾಂತಿ ಎಂದು ಹೇಳಬೇಕು. ಕೇವಲ ಓಂ ಎಂದರೆ ಓಂ ಭಗವಂತನೆಂದು ಅದರ ಅರ್ಥವಾಗುತ್ತದೆ. ಓಂ ಶಾಂತಿಯ ಅರ್ಥವಾಗಿದೆ - ನಾನಾತ್ಮನು ಶಾಂತ ಸ್ವರೂಪನಾಗಿದ್ದೇನೆ. ನಾವಾತ್ಮರಾಗಿದ್ದೇವೆ, ಇದು ನನ್ನ ಶರೀರವಾಗಿದೆ, ಮೊದಲಿಗೆ ಆತ್ಮ ನಂತರ ಶರೀರ. ಆತ್ಮವು ಶಾಂತ ಸ್ವರೂಪನಾಗಿದೆ, ಅದರ ನಿವಾಸ ಸ್ಥಾನವು ಶಾಂತಿಧಾಮವಾಗಿದೆ ಬಾಕಿ ಯಾವುದೇ ಕಾಡಿನಲ್ಲಿ ಹೋದರೆ ಸತ್ಯ ಶಾಂತಿ ಸಿಗುವುದಿಲ್ಲ. ಯಾವಾಗ ಮನೆಗೆ ಹೋಗುತ್ತೀರೋ ಆಗಲೇ ಸತ್ಯವಾದ ಶಾಂತಿ ಸಿಗುತ್ತದೆ. ಎರಡನೆಯದಾಗಿ ಎಲ್ಲಿ ಅಶಾಂತಿಯಿದೆಯೋ ಅಲ್ಲಿಯೇ ಶಾಂತಿಯನ್ನು ಬಯಸುತ್ತಾರೆ. ಈ ಅಶಾಂತಿಯ ದುಃಖಧಾಮವು ವಿನಾಶವಾದ ಮೇಲೆ ಶಾಂತಿ ಸ್ಥಾಪನೆಯಾಗುವುದು. ನೀವು ಮಕ್ಕಳಿಗೆ ಶಾಂತಿಯ ಆಸ್ತಿಯು ಸಿಗುವುದು. ಅಲ್ಲಿ ಮನೆಯಲ್ಲಾಗಲಿ, ಹೊರಗಡೆ ರಾಜಧಾನಿಯಲ್ಲಾಗಲಿ ಅಶಾಂತಿಯಿರುವುದಿಲ್ಲ, ಅದಕ್ಕೆ ಶಾಂತಿಯ ರಾಜ್ಯವೆಂದು ಹೇಳಲಾಗುತ್ತದೆ. ಇಲ್ಲಿ ಅಶಾಂತಿಯ ರಾಜ್ಯವಾಗಿದೆ ಏಕೆಂದರೆ ರಾವಣ ರಾಜ್ಯವಿದೆ. ಸತ್ಯಯುಗವು ಈಶ್ವರನಿಂದ ಸ್ಥಾಪಿಸಲ್ಪಟ್ಟಿರುವ ರಾಜ್ಯವಾಗಿದೆ ಮತ್ತೆ ದ್ವಾಪರದ ನಂತರ ಆಸುರೀ ರಾಜ್ಯವಾಗುತ್ತದೆ. ಅಸುರರಿಗೆಂದೂ ಶಾಂತಿಯಿರುವುದಿಲ್ಲ. ಮನೆಯಲ್ಲಿ, ಅಂಗಡಿಯಲ್ಲಿ ಎಲ್ಲಿ ನೋಡಿದರೂ ಅಶಾಂತಿಯೇ ಅಶಾಂತಿಯಿರುತ್ತದೆ. ಪಂಚ ವಿಕಾರರೂಪಿ ರಾವಣನು ಅಶಾಂತಿಯನ್ನು ಹರಡುತ್ತಾನೆ. ರಾವಣನೆಂದರೇನು ಎಂದು ಯಾವುದೇ ವಿದ್ವಾಂಸ ಪಂಡಿತ ಮೊದಲಾದವರು ತಿಳಿದುಕೊಂಡಿಲ್ಲ. ನಾವು ವರ್ಷ-ವರ್ಷವು ಏಕೆ ರಾವಣನನ್ನು ಸುಡುತ್ತೇವೆಂದೂ ತಿಳಿದುಕೊಂಡಿಲ್ಲ. ಸತ್ಯ-ತ್ರೇತಾಯುಗದಲ್ಲಿ ಈ ರಾವಣನಿರುವುದೇ ಇಲ್ಲ, ಅದು ದೈವೀ ರಾಜ್ಯವಾಗಿದೆ. ಈಶ್ವರ ತಂದೆಯು ನಿಮ್ಮ ಮೂಲಕ ದೈವೀ ರಾಜ್ಯದ ಸ್ಥಾಪನೆ ಮಾಡುತ್ತಾರೆ. ಅವರೊಬ್ಬರೇ ಮಾಡುವುದಿಲ್ಲ, ನೀವು ಮಧುರಾತಿ ಮಧುರ ಮಕ್ಕಳು ಈಶ್ವರನಿಗೆ ಸಹಯೋಗಿಗಳಾಗುತ್ತೀರಿ. ಮೊದಲು ರಾವಣನಿಗೆ ಸಹಯೋಗಿಗಳಾಗಿದ್ದಿರಿ, ಈಗ ಈಶ್ವರನು ಬಂದು ಸರ್ವರ ಸದ್ಗತಿ ಮಾಡುತ್ತಿದ್ದಾರೆ. ಸುಖ-ಶಾಂತಿ-ಪವಿತ್ರತೆಯನ್ನು ಸ್ಥಾಪನೆ ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ. ಸತ್ಯ-ತ್ರೇತಾಯುಗದಲ್ಲಿ ದುಃಖದ ಮಾತಿರುವುದಿಲ್ಲ, ಅಲ್ಲಿ ಗ್ಲಾನಿಯನ್ನೂ ಮಾಡುವುದಿಲ್ಲ, ಕೆಟ್ಟ ಪದಾರ್ಥಗಳನ್ನೂ ತಿನ್ನುವುದಿಲ್ಲ. ಇಲ್ಲಂತೂ ನೋಡಿ, ಎಷ್ಟೊಂದು ಕೆಟ್ಟ ಪದಾರ್ಥಗಳನ್ನು ತಿನ್ನುತ್ತಾರೆ! ಕೃಷ್ಣನಿಗೆ ಗೋವುಗಳು ಬಹಳ ಪ್ರಿಯವಾಗಿದ್ದವೆಂದು ತೋರಿಸುತ್ತಾರೆ. ಕೃಷ್ಣನು ಗೊಲ್ಲನಾಗಿದ್ದನು, ಗೋವುಗಳ ಪಾಲನೆ ಮಾಡುತ್ತಿದ್ದನೆಂದಲ್ಲ. ಅಲ್ಲಿನ ಗೋವುಗಳು ಮತ್ತು ಇಲ್ಲಿನ ಗೋವುಗಳಲ್ಲಿ ಬಹಳ-ಬಹಳ ಅಂತರವಿದೆ. ಅಲ್ಲಿನ ಹಸುಗಳು ಬಹಳ ಸತೋಪ್ರಧಾನ, ಸುಂದರವಾಗಿರುತ್ತವೆ. ಹೇಗೆ ದೇವತೆಗಳು ಸುಂದರರಾಗಿದ್ದರೋ ಅದೇ ರೀತಿ ಹಸುಗಳು ಸುಂದರವಾಗಿರುತ್ತವೆ. ನೋಡಿದೊಡನೆಯೇ ಬಹಳ ಖುಷಿಯಾಗಿ ಬಿಡುತ್ತದೆ. ಅದು ಸ್ವರ್ಗ, ಇದು ನರಕವಾಗಿದೆ. ಎಲ್ಲರೂ ಸ್ವರ್ಗವನ್ನು ನೆನಪು ಮಾಡುತ್ತಾರೆ. ಸ್ವರ್ಗ ಮತ್ತು ನರಕದಲ್ಲಿ ರಾತ್ರಿ-ಹಗಲಿನ ಅಂತರವಿದೆ. ರಾತ್ರಿಯಲ್ಲಿ ಅಂಧಕಾರವು, ದಿನದಲ್ಲಿ ಪ್ರಕಾಶತೆಯು ಇರುತ್ತದೆ. ಬ್ರಹ್ಮಾನ ದಿನವೆಂದರೆ ಬ್ರಹ್ಮಾವಂಶಿಗಳ ದಿನವಾಯಿತು. ಮೊದಲು ನೀವೂ ಸಹ ಘೋರ ಅಂಧಕಾರ ರಾತ್ರಿಯಲ್ಲಿದ್ದಿರಿ, ಈಗ ಭಕ್ತಿಯ ಪ್ರಭಾವವು ಬಹಳಷ್ಟಿದೆ. ಮಹಾತ್ಮ ಮೊದಲಾದವರನ್ನು ಚಿನ್ನದಲ್ಲಿ ತುಲಾಭಾರ ಮಾಡುತ್ತಾರೆ ಏಕೆಂದರೆ ಶಾಸ್ತ್ರಗಳ ವಿದ್ವಾಂಸರಾಗಿದ್ದಾರೆ. ಅವರಿಗೆ ಏಕೆ ಇಷ್ಟೊಂದು ಪ್ರಭಾವವಿದೆ? ಇದನ್ನೂ ತಂದೆಯು ತಿಳಿಸಿದ್ದಾರೆ. ವೃಕ್ಷದಲ್ಲಿ ಹೊಸ-ಹೊಸ ಎಲೆಗಳು ಬಂದಾಗ ಸತೋಪ್ರಧಾನವಾಗಿರುತ್ತದೆಯೋ ಹಾಗೆಯೇ ಆತ್ಮವು ಹೊಸದಾಗಿ ಮೇಲಿನಿಂದ ಬಂದಾಗ ಅವಶ್ಯವಾಗಿ ಅಲ್ಪಕಾಲಕ್ಕಾಗಿ ಅವರ ಪ್ರಭಾವವಿರುತ್ತದೆ. ಚಿನ್ನ ಅಥವಾ ವಜ್ರಗಳಲ್ಲಿ ಅವರನ್ನು ತುಲಾಭಾರ ಮಾಡುತ್ತಾರೆ ಆದರೆ ಇದೆಲ್ಲವೂ ಸಮಾಪ್ತಿಯಾಗುವುದು. ಮನುಷ್ಯರ ಬಳಿ ಎಷ್ಟೊಂದು ಲಕ್ಷಾಂತರ ಮನೆಗಳಿವೆ, ನಾವಂತೂ ಬಹಳ ಸಾಹುಕಾರರಾಗಿದ್ದೇವೆಂದು ತಿಳಿಯುತ್ತಾರೆ ಆದರೆ ನಿಮಗೆ ತಿಳಿದಿದೆ - ಈ ಸಾಹುಕಾರತನವು ಇನ್ನು ಸ್ವಲ್ಪವೇ ಸಮಯವಿರುವುದು. ಇದೆಲ್ಲವೂ ಮಣ್ಣು ಪಾಲಾಗಲಿದೆ, ಕೆಲವರದು ಮಣ್ಣು ಪಾಲಾಗುವುದು, ಇನ್ನೂ ಕೆಲವರದು ಸುಟ್ಟು ಹೋಗುವುದು..... ತಂದೆಯು ಸ್ವರ್ಗ ಸ್ಥಾಪನೆ ಮಾಡುತ್ತಾರೆ, ಅದರಲ್ಲಿ ಯಾರು ಸಫಲ ಮಾಡಿಕೊಳ್ಳುವರೋ ಅವರಿಗೇ 21 ಜನ್ಮಗಳಿಗಾಗಿ ವಜ್ರ ವೈಡೂರ್ಯಗಳ ಮಹಲುಗಳು ಸಿಗುತ್ತವೆ. ಇಲ್ಲಂತೂ ಒಂದು ಜನ್ಮಕ್ಕಾಗಿ ಸಿಗುತ್ತದೆ. ಅಲ್ಲಿ ನಿಮ್ಮದು 21 ಜನ್ಮಗಳವರೆಗೆ ನಡೆಯುತ್ತದೆ. ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಶರೀರ ಸಹಿತವಾಗಿ ಎಲ್ಲವೂ ಭಸ್ಮವಾಗುವುದು. ನೀವು ಮಕ್ಕಳಿಗೆ ದಿವ್ಯ ದೃಷ್ಟಿಯ ಮೂಲಕ ಸಾಕ್ಷಾತ್ಕಾರವೂ ಆಗುತ್ತದೆ. ವಿನಾಶವಾದ ನಂತರ ಈ ಲಕ್ಷ್ಮೀ-ನಾರಾಯಣರ ರಾಜ್ಯ ಬರುವುದು. ನಾವು ನಮ್ಮ ರಾಜ್ಯಭಾಗ್ಯವನ್ನು ಪುನಃ ಸ್ಥಾಪನೆ ಮಾಡುತ್ತಿದ್ದೇವೆ. 21 ಪೀಳಿಗೆಗಳು ರಾಜ್ಯ ಮಾಡಿದೆವು ನಂತರ ರಾವಣನ ರಾಜ್ಯ ನಡೆಯಿತು, ಈಗ ಪುನಃ ತಂದೆಯು ಬಂದಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಭಕ್ತಿಮಾರ್ಗದಲ್ಲಿ ಎಲ್ಲರೂ ತಂದೆಯನ್ನೇ ನೆನಪು ಮಾಡುತ್ತಾರೆ. ಗಾಯನವೂ ಇದೆ, ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ.... ತಂದೆಯು ಸುಖದ ಆಸ್ತಿಯನ್ನು ಕೊಡುತ್ತಾರೆ ನಂತರ ನೆನಪು ಮಾಡುವ ಅವಶ್ಯಕತೆಯಿರುವುದಿಲ್ಲ. ನೀವು ಮಾತಾಪಿತಾ...... ಹೇಗೆ ತಮ್ಮ ಮಕ್ಕಳಿಗೆ ತಂದೆ-ತಾಯಿಯಾಗಿರುತ್ತಾರೆ ಹಾಗೆಯೇ ಇದು ಪಾರಲೌಕಿಕ ಮಾತಾಪಿತರ ಮಾತಾಗಿದೆ. ಈಗ ನೀವು ಈ ಲಕ್ಷ್ಮೀ-ನಾರಾಯಣರಾಗಲು ಓದುತ್ತೀರಿ. ಶಾಲೆಯಲ್ಲಿ ಮಕ್ಕಳು ಬಹಳ ಚೆನ್ನಾಗಿ ತೇರ್ಗಡೆಯಾದರೆ ಅವರ ಶಿಕ್ಷಕರಿಗೆ ಬಹುಮಾನ ಸಿಗುತ್ತದೆ. ನೀವೀಗ ನಿಮ್ಮ ಶಿಕ್ಷಕರಿಗೆ ಯಾವ ಬಹುಮಾನ ಕೊಡುವಿರಿ! ನೀವಂತೂ ಅವರನ್ನು ಚಮತ್ಕಾರದಿಂದ ತಮ್ಮ ಮಗುವನ್ನಾಗಿ ಮಾಡಿಕೊಳ್ಳುತ್ತೀರಿ. ಕೃಷ್ಣನ ಬಾಯಲ್ಲಿ ಅವರ ತಾಯಿಯು ಬೆಣ್ಣೆಯ ಗೋಲವನ್ನು ನೋಡಿದಳೆಂದು ತೋರಿಸುತ್ತಾರೆ. ಕೃಷ್ಣನಂತೂ ಸತ್ಯಯುಗದಲ್ಲಿ ಜನ್ಮ ಪಡೆದನು. ಕೃಷ್ಣನು ಹಾಗೆ ಬೆಣ್ಣೆ ತಿನ್ನುವ ಮಾತಿಲ್ಲ. ಅವನು ವಿಶ್ವದ ಮಾಲಿಕನಾಗಿದ್ದಾನೆ ಅಂದಮೇಲೆ ಇದು ಯಾವ ಸಮಯದ ಮಾತಾಗಿದೆ? ಇದು ಈಗಿನ ಸಂಗಮದ ಮಾತಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವು ಶರೀರವನ್ನು ಬಿಟ್ಟು ಹೋಗಿ ವಿಶ್ವದ ಮಾಲೀಕರಾಗುತ್ತೇವೆ. ಕ್ರಿಶ್ಚಿಯನ್ನರಿಬ್ಬರೂ ಪರಸ್ಪರ ಹೊಡೆದಾಡುತ್ತಾರೆ ಮತ್ತು ಬೆಣ್ಣೆಯ ಗೋಲವು ನೀವು ಮಕ್ಕಳಿಗೆ ಸಿಗುತ್ತದೆ ಅಂದರೆ ರಾಜ್ಯಭಾಗ್ಯ ಸಿಗುತ್ತದೆಯಲ್ಲವೆ. ಹೇಗೆ ಅವರು ಭಾರತವನ್ನು ಪರಸ್ಪರ ಹೊಡೆದಾಡುವಂತೆ ಮಾಡಿ ತಾವು ರಾಜ್ಯರೂಪಿ ಬೆಣ್ಣೆಯನ್ನು ತಿಂದು ಬಿಟ್ಟರು. ಕ್ರಿಶ್ಚಿಯನ್ನರ ರಾಜಧಾನಿಯು ಮುಕ್ಕಾಲು ಭಾಗದಲ್ಲಿತ್ತು. ಕೊನೆಯಲ್ಲಿ ಕಳೆಯುತ್ತಾ ಹೋದಂತೆ ಎಲ್ಲವೂ ಬಿಟ್ಟು ಹೋಯಿತು. ಇಡೀ ವಿಶ್ವದಲ್ಲಿ ನಿಮ್ಮ ವಿನಃ ಮತ್ತ್ಯಾರೂ ರಾಜ್ಯವನ್ನು ಮಾಡಲು ಸಾಧ್ಯವಿಲ್ಲ. ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ, ನೀವು ಬ್ರಹ್ಮಾಂಡದ ಮಾಲೀಕರು ಮತ್ತು ವಿಶ್ವದ ಮಾಲೀಕರಾಗುತ್ತೀರಿ. ವಿಶ್ವದಲ್ಲಿ ಬ್ರಹ್ಮಾಂಡವು ಬರುವುದಿಲ್ಲ, ಸೂಕ್ಷ್ಮವತನದಲ್ಲಿಯೂ ರಾಜ್ಯಭಾರ ನಡೆಯುವುದಿಲ್ಲ. ಸತ್ಯ, ತ್ರೇತಾಯುಗ..... ಈ ಚಕ್ರವು ಇಲ್ಲಿ ಸ್ಥೂಲವತನದಲ್ಲಿಯೇ ಸುತ್ತುತ್ತದೆ. ಧ್ಯಾನದಲ್ಲಿ ಆತ್ಮವು ಎಲ್ಲಿಯೂ ಹೋಗುವುದಿಲ್ಲ. ಒಂದುವೇಳೆ ಆತ್ಮವು ಹೋಗುವುದಾದರೆ ಶರೀರವು ಸಮಾಪ್ತಿಯಾಗಿ ಬಿಡುವುದು. ಕೇವಲ ಇದೆಲ್ಲವೂ ಸಾಕ್ಷಾತ್ಕಾರವಾಗಿದೆ. ರಿದ್ಧಿ ಸಿದ್ಧಿಯ ಮೂಲಕವೂ ಇಂತಹ ಸಾಕ್ಷಾತ್ಕಾರಗಳಾಗುತ್ತವೆ. ಇಲ್ಲಿ ಕುಳಿತೇ ವಿದೇಶದ ಪಾರ್ಲಿಮೆಂಟನ್ನು ನೋಡಬಲ್ಲರು. ತಂದೆಯ ಕೈಯಲ್ಲಿಯೂ ಸಹ ದಿವ್ಯ ದೃಷ್ಟಿಯ ಚಾಬಿ (ಬೀಗದ ಕೈ) ಯಿದೆ. ನೀವು ಇಲ್ಲಿ ಕುಳಿತೇ ಲಂಡನ್ ನೋಡಬಲ್ಲಿರಿ. ಡ್ರಾಮಾನುಸಾರ ಆ ಸಮಯದಲ್ಲಿ ಅದು ಸಾಕ್ಷಾತ್ಕಾರವಾಗುತ್ತದೆ, ಅದು ಡ್ರಾಮಾದಲ್ಲಿ ಮೊದಲಿನಿಂದಲೇ ನಿಗಧಿಯಾಗಿದೆ. ಹೇಗೆ ಭಗವಂತನು ಅರ್ಜುನನಿಗೆ ಸಾಕ್ಷಾತ್ಕಾರ ಮಾಡಿಸಿದರೆಂದು ಹೇಳುತ್ತಾರೆ. ಡ್ರಾಮಾನುಸಾರ ಅವರಿಗೆ ಸಾಕ್ಷಾತ್ಕಾರವಾಗಬೇಕಿತ್ತು, ಇದೂ ನಿಗಧಿಯಾಗಿದೆ. ಇದರಲ್ಲಿ ಯಾರದೇ ದೊಡ್ಡಸ್ಥಿಕೆಯಿಲ್ಲ. ಇದೆಲ್ಲವೂ ಡ್ರಾಮಾನುಸಾರ ನಡೆಯುತ್ತದೆ. ಕೃಷ್ಣನು ವಿಶ್ವದ ರಾಜಕುಮಾರನಾಗುತ್ತಾನೆ ಅಂದರೆ ರಾಜ್ಯರೂಪಿ ಬೆಣ್ಣೆಯು ಸಿಗುತ್ತದೆ. ಯಾವುದಕ್ಕೆ ವಿಶ್ವ ಮತ್ತು ಬ್ರಹ್ಮಾಂಡವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಬ್ರಹ್ಮಾಂಡದಲ್ಲಿ ನೀವಾತ್ಮಗಳು ವಾಸಿಸುತ್ತೀರಿ, ಸೂಕ್ಷ್ಮವತನಕ್ಕೆ ಬಂದು ಹೋಗುವ ಸಾಕ್ಷಾತ್ಕಾರಗಳು ಈ ಸಮಯದಲ್ಲಿಯೇ ಆಗುತ್ತದೆ. ಇನ್ನು 5000 ವರ್ಷಗಳವರೆಗೆ ಸೂಕ್ಷ್ಮವತನದ ಹೆಸರೇ ಇರುವುದಿಲ್ಲ. ಬ್ರಹ್ಮಾ ದೇವತಾಯ ನಮಃ ಎಂದು ಹೇಳುತ್ತಾರೆ ನಂತರ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆಂದರೆ ಎಲ್ಲರಿಗಿಂತ ಅವರು ಶ್ರೇಷ್ಠನಾದರಲ್ಲವೆ, ಅವರಿಗೆ ಭಗವಂತನೆಂದು ಹೇಳಲಾಗುತ್ತದೆ. ಆ ದೇವತೆಗಳೂ ಮನುಷ್ಯರೇ ಆಗಿದ್ದಾರೆ ಆದರೆ ದೈವೀ ಗುಣವಂತರಾಗಿದ್ದಾರೆ ಬಾಕಿ 4-8 ಭುಜಗಳುಳ್ಳ ಮನುಷ್ಯರಿರುವುದಿಲ್ಲ. ಅಲ್ಲಿಯೂ ಎರಡು ಭುಜದವರೇ ಇರುತ್ತಾರೆ ಆದರೆ ಸಂಪೂರ್ಣ ಪವಿತ್ರರಾಗಿರುತ್ತಾರೆ, ಅಪವಿತ್ರತೆಯ ಮಾತಿರುವುದಿಲ್ಲ, ಎಂದೂ ಅಕಾಲ ಮೃತ್ಯುವಾಗುವುದಿಲ್ಲ ಅಂದಾಗ ನೀವು ಮಕ್ಕಳಿಗೆ ಖುಷಿಯಿರಬೇಕು. ನಾವಾತ್ಮರು ಈ ಶರೀರದ ಮೂಲಕ ತಂದೆಯನ್ನು ನೋಡಲೇಬೇಕು. ಶರೀರವೇ ಕಾಣುತ್ತದೆ, ಪರಮಾತ್ಮ ಅಥವಾ ಆತ್ಮವನ್ನಂತೂ ನೋಡಲು ಸಾಧ್ಯವಿಲ್ಲ. ಆತ್ಮ ಮತ್ತು ಪರಮಾತ್ಮನನ್ನು ಅರಿತುಕೊಳ್ಳಲಾಗುತ್ತದೆ. ನೋಡುವುದಕ್ಕಾಗಿ ಮತ್ತೆ ದಿವ್ಯ ದೃಷ್ಟಿಯೂ ಸಿಗುತ್ತದೆ. ಮತ್ತೆಲ್ಲಾ ವಸ್ತುಗಳು ದಿವ್ಯ ದೃಷ್ಟಿಯಿಂದ ದೊಡ್ಡದಾಗಿ ಕಾಣುತ್ತವೆ. ರಾಜಧಾನಿಯು ದೊಡ್ಡದಾಗಿ ಕಾಣುತ್ತದೆ, ಆತ್ಮವಂತೂ ಚಿಕ್ಕ ಬಿಂದುವಾಗಿದೆ. ಬಿಂದುವನ್ನು ನೋಡುವುದರಿಂದ ನೀವು ಏನೂ ತಿಳಿದುಕೊಳ್ಳುವುದಿಲ್ಲ, ಆತ್ಮವು ಬಹಳ ಸೂಕ್ಷ್ಮವಾಗಿದೆ. ಅನೇಕ ವೈದ್ಯರು ಮೊದಲಾದವರು ಆತ್ಮವನ್ನು ನೋಡುವ ಪ್ರಯತ್ನಪಟ್ಟರು ಆದರೆ ಯಾರಿಗೂ ತಿಳಿಯುವುದಿಲ್ಲ. ಆ ಮನುಷ್ಯರಂತೂ ವಜ್ರರತ್ನಗಳಲ್ಲಿ ತುಲಾಭಾರ ಮಾಡುತ್ತಾರೆ. ನೀವು ಜನ್ಮ-ಜನ್ಮಾಂತರಕ್ಕಾಗಿ ಪದಮಾಪತಿಗಳಾಗುತ್ತೀರಿ. ನಿಮಗೆ ಯಾವುದೇ ಹೊರಗಿನ ಆಡಂಬರವಿಲ್ಲ. ಸಾಧಾರಣ ರೀತಿಯಲ್ಲಿ ಈ ರಥದಲ್ಲಿ ಕುಳಿತು ತಂದೆಯು ಓದಿಸುತ್ತಾರೆ. ಇವರ ಹೆಸರಾಗಿದೆ - ಭಗೀರಥ. ಇದು ಹಳೆಯ, ಪತಿತ ರಥವಾಗಿದ್ದು ಇದರಲ್ಲಿ ತಂದೆಯು ಬಂದು ಶ್ರೇಷ್ಠಾತಿ ಶ್ರೇಷ್ಠ ಸೇವೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನನಗಂತೂ ನನ್ನದೇ ಆದ ಶರೀರವಿಲ್ಲ, ನಾನು ಪ್ರೇಮ ಸಾಗರ........... ಆಗಿದ್ದೇನೆ ಅಂದಮೇಲೆ ನಿಮಗೆ ಆಸ್ತಿಯನ್ನು ಹೇಗೆ ಕೊಡಲಿ! ಮೇಲಿನಿಂದಂತೂ ಕೊಡಲು ಸಾಧ್ಯವಿಲ್ಲ ಅಥವಾ ಪ್ರೇರಣೆಯಿಂದ ಓದಿಸುತ್ತೇನೆಯೇ? ಅವಶ್ಯವಾಗಿ ಇಲ್ಲಿಯೇ ಬರಬೇಕಾಗುತ್ತದೆ. ಭಕ್ತಿಮಾರ್ಗದಲ್ಲಿ ನನ್ನನ್ನು ಪೂಜಿಸುತ್ತಾರೆ, ಎಲ್ಲರಿಗೆ ನಾನು ಪ್ರಿಯನಾಗುತ್ತೇನೆ. ಗಾಂಧಿ, ನೆಹರು ಮೊದಲಾದವರ ಚಿತ್ರಗಳು ಪ್ರಿಯವೆನಿಸುತ್ತವೆ, ಅವರ ಶರೀರವನ್ನು ನೆನಪು ಮಾಡುತ್ತಾರೆ. ಆತ್ಮವು ಅವಿನಾಶಿಯಾಗಿದೆ, ಅದಂತೂ ಹೋಗಿ ಇನ್ನೊಂದು ಜನ್ಮವನ್ನು ಪಡೆದುಕೊಂಡಿತು. ಬಾಕಿ ವಿನಾಶಿ ಚಿತ್ರವನ್ನು ನೆನಪು ಮಾಡುತ್ತಾರೆ ಅಂದಮೇಲೆ ಅದು ಭೂತ ಪೂಜೆಯಾಯಿತಲ್ಲವೆ. ಸಮಾಧಿಯನ್ನು ಮಾಡಿ ಅದರ ಮೇಲೆ ಹೂಗಳನ್ನಾಕುತ್ತಾರೆ, ಇದು ನೆನಪಾರ್ಥವಾಗಿದೆ. ಶಿವನಿಗೆ ಎಷ್ಟೊಂದು ಮಂದಿರಗಳಿವೆ, ಎಲ್ಲದಕ್ಕಿಂತ ಹೆಚ್ಚಿನ ನೆನಪಾರ್ಥವು ತಂದೆಯದಾಗಿದೆಯಲ್ಲವೆ. ಸೋಮನಾಥ ಮಂದಿರದ ಗಾಯನವಿದೆ. ಮಹಮ್ಮದ್ ಘಜ್ನಿಯು ಬಂದು ಲೂಟಿ ಮಾಡಿಕೊಂಡು ಹೋದನು. ನಿಮ್ಮ ಬಳಿ ಬಹಳ ಧನವಿತ್ತು, ತಂದೆಯು ನೀವು ಮಕ್ಕಳನ್ನು ರತ್ನಗಳಲ್ಲಿ ತುಲಾಭಾರ ಮಾಡುತ್ತಾರೆ. ಸ್ವಯಂನ್ನು ತುಲಾಭಾರ ಮಾಡಿಸಿಕೊಳ್ಳುವುದಿಲ್ಲ. ನಾನು ಇಷ್ಟು ಧನವಂತನಾಗುವುದಿಲ್ಲ, ನಿಮ್ಮನ್ನೇ ಮಾಡುತ್ತೇನೆ. ಅವರನ್ನಂತೂ ಇಂದು ತುಲಾಭಾರ ಮಾಡುತ್ತಾರೆ, ನಾಳೆ ಅವರು ಮರಣ ಹೊಂದಲೂಬಹುದು. ಹಣವೇನೂ ಕೆಲಸಕ್ಕೆ ಬರುವುದಿಲ್ಲ ಆದ್ದರಿಂದ ನಿಮ್ಮನ್ನು ತಂದೆಯು ಅಖೂಟ ಖಜಾನೆಗಳಲ್ಲಿ ಈ ರೀತಿ ತುಲಾಭಾರ ಮಾಡುತ್ತಾರೆ ಅದು 21 ಜನ್ಮಗಳವರೆಗೆ ಜೊತೆಯಿರುತ್ತದೆ ಅದೂ ಒಂದುವೇಳೆ ಶ್ರೀಮತದಂತೆ ನಡೆದಾಗ ಮಾತ್ರ. ಅಲ್ಲಿ ದುಃಖದ ಹೆಸರಿರುವುದಿಲ್ಲ, ಎಂದೂ ಅಕಾಲಮೃತ್ಯುವಾಗುವುದಿಲ್ಲ. ಮೃತ್ಯುವಿಗೆ ಹೆದರುವುದಿಲ್ಲ, ಇಲ್ಲಿ ಎಷ್ಟೊಂದು ಹೆದರುತ್ತಾರೆ, ಅಳುತ್ತಾರೆ. ನಾವು ಹೋಗಿ ರಾಜಕುಮಾರರಾಗುತ್ತೇವೆಂದು ನಿಮಗೆ ಎಷ್ಟೊಂದು ಖುಷಿಯಾಗುತ್ತದೆ. ಜಾದೂಗಾರ, ರತ್ನಾಗಾರ, ಸೌಧಾಗಾರನೆಂದು ಶಿವ ಪರಮಾತ್ಮನಿಗೆ ಹೇಳಲಾಗುತ್ತದೆ. ನಿಮಗೂ ಸಾಕ್ಷಾತ್ಕಾರ ಮಾಡಿಸುತ್ತಾರೆ - ಈ ರೀತಿ ರಾಜಕುಮಾರರಾಗುತ್ತೀರಿ ಎಂದು. ಇತ್ತೀಚೆಗೆ ತಂದೆಯು ಸಾಕ್ಷಾತ್ಕಾರದ ಪಾತ್ರವನ್ನೇ ನಿಲ್ಲಿಸಿ ಬಿಟ್ಟಿದ್ದಾರೆ ಏಕೆಂದರೆ ಇದರಿಂದ ನಷ್ಟವಾಗುತ್ತದೆ. ಈಗ ತಂದೆಯು ಜ್ಞಾನದಿಂದ ನಿಮ್ಮ ಸದ್ಗತಿ ಮಾಡುತ್ತಾರೆ. ನೀವು ಮೊದಲು ಸುಖಧಾಮಕ್ಕೆ ಹೋಗುತ್ತೀರಿ, ಈಗಂತೂ ದುಃಖಧಾಮವಿದೆ. ನಿಮಗೆ ತಿಳಿದಿದೆ - ಆತ್ಮವೇ ಜ್ಞಾನ ಧಾರಣೆ ಮಾಡುತ್ತದೆ ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂದು ತಂದೆಯು ತಿಳಿಸುತ್ತಾರೆ. ಆತ್ಮದಲ್ಲಿಯೇ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರಗಳಿರುತ್ತವೆ. ಒಂದುವೇಳೆ ಸಂಸ್ಕಾರವು ಶರೀರದಲ್ಲಿದ್ದಿದ್ದೇ ಆದರೆ ಶರೀರವು ಸುಟ್ಟಾಗ ಸಂಸ್ಕಾರವೂ ಭಸ್ಮವಾಗಿ ಬಿಡುವುದು. ಶಿವ ತಂದೆಯೇ ನಾವಾತ್ಮರು ಈ ಶರೀರದ ಮೂಲಕ ಓದುತ್ತೇವೆಂದು ನೀವು ಹೇಳುತ್ತೀರಿ. ಹೊಸ ಮಾತಲ್ಲವೆ! ನಾವಾತ್ಮಗಳಿಗೆ ಶಿವ ತಂದೆಯು ಓದಿಸುತ್ತಾರೆ, ಇದನ್ನು ಪಕ್ಕಾ-ಪಕ್ಕಾ ನೆನಪು ಮಾಡಿ. ಅವರು ನಾವೆಲ್ಲಾ ಆತ್ಮರಿಗೆ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನನಗೆ ನನ್ನದೇ ಆದ ಶರೀರವಿಲ್ಲ, ನಾನೂ ಸಹ ಆತ್ಮನಾಗಿದ್ದೇನೆ ಆದರೆ ನನಗೆ ಪರಮಾತ್ಮನೆಂದು ಹೇಳಲಾಗುತ್ತದೆ, ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಬಾಕಿ ಶರೀರಗಳ ಹೆಸರುಗಳು ಬದಲಾಗುತ್ತವೆ. ಆತ್ಮವು ಆತ್ಮವೇ ಆಗಿದೆ. ನಾನು ಪರಮ ಆತ್ಮನು ನಿಮ್ಮ ತರಹ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಡ್ರಾಮಾದಲ್ಲಿ ನನ್ನ ಪಾತ್ರವೇ ಹೀಗಿದೆ, ನಾನು ಇವರಲ್ಲಿ ಪ್ರವೇಶ ಮಾಡಿ ತಿಳಿಸುತ್ತಿದ್ದೇನೆ ಆದ್ದರಿಂದ ಇವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ. ಇದಕ್ಕೆ (ಬ್ರಹ್ಮಾ) ಹಳೆಯ ಪಾದರಕ್ಷೆಯೆಂದೂ ಹೇಳುತ್ತಾರೆ. ಶಿವ ತಂದೆಯು ಈ ಹಳೆಯ ಪಾದರಕ್ಷೆಯನ್ನು ಧರಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶಿಸುತ್ತೇನೆ. ಮೊಟ್ಟ ಮೊದಲು ಇವರೇ ಆಗುತ್ತಾರೆ - ತತತ್ವಂ. ತಂದೆಯು ತಿಳಿಸುತ್ತಾರೆ - ನೀವಂತೂ ಯುವಕರಾಗಿದ್ದೀರಿ, ನನಗಿಂತಲೂ ಹೆಚ್ಚಿನದಾಗಿ ಓದಿ ಶ್ರೇಷ್ಠ ಪದವಿಯನ್ನು ಪಡೆಯಿರಿ ಆದರೆ ನನ್ನ ಜೊತೆ ತಂದೆಯಿದ್ದಾರೆ ಆದ್ದರಿಂದ ನನಗೆ ಘಳಿಗೆ-ಘಳಿಗೆಗೂ ಅವರ ನೆನಪು ಬರುತ್ತದೆ. ತಂದೆಯು ನನ್ನ ಜೊತೆಯಲ್ಲಿಯೇ ಮಲಗುತ್ತಾರೆ ಆದರೆ ತಂದೆಯು ನನ್ನನ್ನು ಆಲಿಂಗನ ಮಾಡಲು ಸಾಧ್ಯವಿಲ್ಲ. ನಿಮ್ಮನ್ನು ಆಲಿಂಗನ ಮಾಡಿಕೊಳ್ಳುತ್ತಾರೆ. ನೀವು ಭಾಗ್ಯಶಾಲಿಗಳಲ್ಲವೆ. ಶಿವ ತಂದೆಯು ಯಾವ ಶರೀರವನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆಯೋ ಅವರನ್ನು ನೀವು ಆಲಿಂಗನ ಮಾಡುತ್ತೀರಿ. ನಾನು ಹೇಗೆ ಮಾಡಲಿ! ನನಗಂತೂ ಈ ಅದೃಷ್ಟವೂ ಇಲ್ಲ ಆದ್ದರಿಂದ ನೀವು ಭಾಗ್ಯಶಾಲಿ ನಕ್ಷತ್ರಗಳೆಂದು ಗಾಯನವಿದೆ. ಮಕ್ಕಳು ಯಾವಾಗಲೂ ಅದೃಷ್ಟವಂತರಾಗಿರುತ್ತಾರೆ. ತಂದೆಯು ಹಣವನ್ನು ಮಕ್ಕಳಿಗೆ ಕೊಡುತ್ತಾರೆ ಅಂದಮೇಲೆ ನೀವು ಭಾಗ್ಯಶಾಲಿ ನಕ್ಷತ್ರಗಳಾದಿರಲ್ಲವೆ. ಶಿವ ತಂದೆಯೂ ಹೇಳುತ್ತಾರೆ - ನೀವು ನನಗಿಂತಲೂ ಭಾಗ್ಯಶಾಲಿಗಳಾಗಿದ್ದೀರಿ, ನಿಮಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಆದರೆ ನಾನಾಗುವುದಿಲ್ಲ. ನೀವು ಬ್ರಹ್ಮಾಂಡಕ್ಕೂ ಮಾಲೀಕನಾಗುತ್ತೀರಿ ಆದರೆ ನನ್ನ ಬಳಿ ದಿವ್ಯ ದೃಷ್ಟಿಯ ಬೀಗದ ಕೈ ಇದೆ. ನಾನು ಜ್ಞಾನ ಸಾಗರನಾಗಿದ್ದೇನೆ, ನಿಮ್ಮನ್ನೂ ಮಾ|| ಜ್ಞಾನ ಸಾಗರರನ್ನಾಗಿ ಮಾಡುತ್ತೇನೆ. ನೀವು ಇಡೀ ಚಕ್ರವನ್ನು ಅರಿತು ಚಕ್ರವರ್ತಿ ಮಹಾರಾಜ, ಮಹಾರಾಣಿಯಾಗುತ್ತೀರಿ, ನಾನಾಗುವುದಿಲ್ಲ. ಹೇಗೆ ವೃದ್ಧರಾದಂತೆ ತಮ್ಮ ಮಕ್ಕಳಿಗೆ ಎಲ್ಲವನ್ನೂ ಕೊಟ್ಟು ವಾನಪ್ರಸ್ಥದಲ್ಲಿ ಹೊರಟು ಹೋಗುತ್ತಾರೆ. ಮೊದಲು ಈ ರೀತಿ ನಡೆಯುತ್ತಿತ್ತು, ಈಗಿನ ದಿನಗಳಲ್ಲಂತೂ ಮಕ್ಕಳಲ್ಲಿ ಬಹಳಷ್ಟು ಮೋಹವಿರುತ್ತದೆ. ಪಾರಲೌಕಿಕ ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ ನೀವು ಮಕ್ಕಳನ್ನು ಮುಳ್ಳುಗಳಿಂದ ಹೂಗಳು, ವಿಶ್ವದ ಮಾಲೀಕರನ್ನಾಗಿ ಮಾಡಿ ಅರ್ಧ ಕಲ್ಪಕ್ಕಾಗಿ ಸದಾ ಸುಖಿಗಳನ್ನಾಗಿ ಮಾಡಿ ನಾನು ವಾನಪ್ರಸ್ಥದಲ್ಲಿ ಹೋಗಿ ಕುಳಿತು ಬಿಡುತ್ತೇನೆ. ಇವೆಲ್ಲಾ ಮಾತುಗಳು ಶಾಸ್ತ್ರಗಳಲ್ಲಿಲ್ಲ. ಸಾಧು-ಸಂತರು ಶಾಸ್ತ್ರಗಳ ಮಾತನ್ನೇ ತಿಳಿಸುತ್ತಾರೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರೇ ಸ್ವಯಂ ಹೇಳುತ್ತಾರೆ - ಮಕ್ಕಳೇ, ಈ ವೇದ ಶಾಸ್ತ್ರ ಇತ್ಯಾದಿಗಳೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ಜ್ಞಾನ ಸಾಗರನು ನಾನೊಬ್ಬನೇ ಆಗಿದ್ದೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಕಣ್ಣುಗಳಿಗೆ ಶರೀರ ಸಹಿತವಾಗಿ ಏನೆಲ್ಲವೂ ಕಾಣುತ್ತಿದೆಯೋ ಇದೆಲ್ಲವೂ ಭಸ್ಮವಾಗಲಿದೆ, ಆದ್ದರಿಂದ ತಮ್ಮ ಸರ್ವಸ್ವವನ್ನೂ ಸಫಲ ಮಾಡಿಕೊಳ್ಳಿ.

2. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಲು ವಿದ್ಯೆಯನ್ನು ಓದಬೇಕಾಗಿದೆ. ಸದಾ ತಮ್ಮ ಅದೃಷ್ಟವನ್ನು ಸ್ಮೃತಿಯಲ್ಲಿಟ್ಟುಕೊಂಡು ಬ್ರಹ್ಮಾಂಡ ಹಾಗೂ ವಿಶ್ವದ ಮಾಲೀಕರಾಗಬೇಕಾಗಿದೆ.

ವರದಾನ:
ವಾಹ್ ಡ್ರಾಮಾ ವಾಹ್ನ ಸ್ಮೃತಿಯಿಂದ ಅನೇಕರ ಸೇವೆ ಮಾಡುವಂತಹ ಸದಾ ಖುಷ್ನುಮಃ ಭವ.

ಈ ಡ್ರಾಮಾದ ಯಾವುದೇ ದೃಶ್ಯವನ್ನು ನೋಡುತ್ತಾ ವಾಹ್ ಡ್ರಾಮಾ ವಾಹ್ನ ಸ್ಮೃತಿಯಲ್ಲಿರುತ್ತೀರೆಂದರೆ ಎಂದಿಗೂ ಗಾಬರಿಯಾಗುವುದಿಲ್ಲ, ಏಕೆಂದರೆ ಡ್ರಾಮಾದ ಜ್ಞಾನವು ಸಿಕ್ಕಿದೆ - ವರ್ತಮಾನ ಸಮಯವು ಕಲ್ಯಾಣಕಾರಿ ಯುಗವಾಗಿದೆ, ಇದರಲ್ಲಿ ಏನೆಲ್ಲಾ ದೃಶ್ಯಗಳು ಮುಂದೆ ಬರುತ್ತವೆ, ಅದರಲ್ಲಿ ಕಲ್ಯಾಣವು ಅಡಗಿದೆ. ವರ್ತಮಾನದಲ್ಲಿ ಕಲ್ಯಾಣ ಕಾಣಿಸದಿರಬಹುದು ಆದರೆ ಭವಿಷ್ಯದಲ್ಲಿ ಸಮಾವೇಶವಾಗಿ ಕಲ್ಯಾಣವು ಪ್ರತ್ಯಕ್ಷವಾಗಿ ಬಿಡುತ್ತದೆ - ಅದರಿಂದ ವಾಹ್ ಡ್ರಾಮಾ ವಾಹ್ನ ಸ್ಮೃತಿಯಿಂದ ಸದಾ ಖುಷ್ನುಮಃ ಆಗಿರುತ್ತೀರಿ, ಪುರುಷಾರ್ಥದಲ್ಲಿ ಎಂದಿಗೂ ಆಲಸ್ಯವು ಬರುವುದಿಲ್ಲ. ಸ್ವತಹವಾಗಿಯೇ ತಮ್ಮ ಮೂಲಕ ಅನೇಕರ ಸೇವೆಯಾಗುತ್ತಿರುತ್ತದೆ.

ಸ್ಲೋಗನ್:
ಶಾಂತಿಯ ಶಕ್ತಿಯೇ ಮನಸಾ ಸೇವೆಯ ಸಹಜ ಸಾಧನವಾಗಿದೆ, ಎಲ್ಲಿ ಶಾಂತಿಯ ಶಕ್ತಿಯಿದೆ ಅಲ್ಲಿ ಸಂತುಷ್ಟತೆಯಿದೆ.

ಅವ್ಯಕ್ತ ಸೂಚನೆ:- ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.

ಎಷ್ಟು ಅವ್ಯಕ್ತ ಲೈಟ್ ರೂಪದಲ್ಲಿ ಸ್ಥಿತರಾಗುವಿರಿ, ಅಷ್ಟು ಶರೀರದಿಂದ ಭಿನ್ನತೆಯ ಅಭ್ಯಾಸ ಆಗುವ ಕಾರಣ ಒಂದುವೇಳೆ ಎರಡು-ನಾಲ್ಕು ನಿಮಿಷವು ಅಶರೀರಿ ಆಗುವಿರಿ ಎಂದರೆ, ನಾಲ್ಕು ಗಂಟೆಯ ಕಾಲ ಆರಾಮ ಮಾಡಿದಷ್ಟು ಅನುಭವವಾಗುವುದು. ಇಂತಹ ಸಮಯ ಬರುವುದು ಯಾವಾಗ ನಿದ್ರೆಯ ಬದಲಾಗಿ ನಾಲ್ಕು-ಐದು ನಿಮಿಷ ಅಶರೀರಿ ಆಗಿ ಹೋಗುವಿರಿ ಹಾಗೂ ಶರೀರಕ್ಕೆ ಆರಾಮ ಸಿಕ್ಕೇ ಬಿಡುವುದು. ಲೈಟ್ ಸ್ವರೂಪದ ಸ್ಮೃತಿಯನ್ನು ಶಕ್ತಿಶಾಲಿ ಮಾಡುವುದರಿಂದ ಲೆಕ್ಕಾಚಾರವನ್ನು ಸಮಾಪ್ತಿ ಮಾಡುವುದರಲ್ಲಿಯೂ ಸಹ ಲೈಟ್ ರೂಪವಾಗುವಿರಿ.