21.04.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ – ಜ್ಞಾನ ಸಾಗರ ತಂದೆಯು ನೀವು ಮಕ್ಕಳ ಸಮ್ಮುಖದಲ್ಲಿ ಜ್ಞಾನದ ನರ್ತನ ಮಾಡಲು ಬಂದಿದ್ದಾರೆ, ನೀವು ಬುದ್ಧಿವಂತ ಸೇವಾಧಾರಿಗಳಾಗಿರಿ ಆಗ ಜ್ಞಾನದ ನೃತ್ಯವೂ ಚೆನ್ನಾಗಿರುವುದು”

ಪ್ರಶ್ನೆ:
ಸಂಗಮ ಯುಗದಲ್ಲಿ ನೀವು ಮಕ್ಕಳು ಯಾವ ಹವ್ಯಾಸವನ್ನು ಮಾಡಿಕೊಳ್ಳುತ್ತೀರಿ?

ಉತ್ತರ:
ನೆನಪಿನಲ್ಲಿರುವ ಹವ್ಯಾಸ. ಇದೇ ಆತ್ಮಿಕ ಹವ್ಯಾಸವಾಗಿದೆ. ಈ ಹವ್ಯಾಸದ ಜೊತೆ ಜೊತೆಗೆ ನೀವು ದಿವ್ಯ ಮತ್ತು ಅಲೌಕಿಕ ಕರ್ಮವನ್ನೂ ಮಾಡಬೇಕಾಗಿದೆ. ನೀವು ಬ್ರಾಹ್ಮಣರಾಗಿದ್ದೀರಿ, ಎಲ್ಲರಿಗೆ ನೀವು ಸತ್ಯ-ಸತ್ಯವಾದ ಕಥೆಯನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ನೀವು ಮಕ್ಕಳಲ್ಲಿ ಸರ್ವೀಸಿನ ಹವ್ಯಾಸವೂ ಇರಬೇಕು.

ಗೀತೆ:
ಧೈರ್ಯ ತಾಳು ಮಾನವನೇ.............

ಓಂ ಶಾಂತಿ.
ಹೇಗೆ ಯಾರಾದರೂ ರೋಗಿಯಾಗಿದ್ದರೆ ಆ ರೋಗಿಯು ದುಃಖದಿಂದ ಬೇಗನೆ ಮುಕ್ತನಾಗುವ ಆಸೆಯನ್ನಿಟ್ಟುಕೊಳ್ಳುತ್ತಾರೆ, ವೈದ್ಯರೊಂದಿಗೆ ಕೇಳುತ್ತಾರೆ - ಈ ಖಾಯಿಲೆಯು ಯಾವಾಗ ಕಳೆಯುವುದು ಎಂದು. ಅವು ಹದ್ದಿನ ಮಾತುಗಳಾಗಿವೆ, ಇದು ಬೇಹದ್ದಿನ ಮಾತಾಗಿದೆ. ತಂದೆಯೇ ಬಂದು ಮಕ್ಕಳಿಗೆ ಸಲಹೆ ನೀಡುತ್ತಾರೆ. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಇದು ಸುಖ ಮತ್ತು ದುಃಖದ ಆಟವಾಗಿದೆ. ಹಾಗೆ ಹೇಳುವುದಾದರೆ ನೀವು ಮಕ್ಕಳಿಗೆ ಸತ್ಯಯುಗದಲ್ಲಿ ಹೋಗುವುದಕ್ಕಿಂತಲೂ ಹೆಚ್ಚು ಲಾಭವು ಇಲ್ಲಿದೆ. ನೀವು ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ನಾವು ಈಶ್ವರನ ಮಡಿಲಿನಲ್ಲಿದ್ದೇವೆ, ಈಶ್ವರೀಯ ಸಂತಾನರಾಗಿದ್ದೇವೆ. ಈ ಸಮಯದಲ್ಲಿ ನಮ್ಮದು ಬಹಳ ಶ್ರೇಷ್ಠಾತಿ ಶ್ರೇಷ್ಠ ಗುಪ್ತ ಮಹಿಮೆ ಆಗಿದೆ. ಮನುಷ್ಯ ಮಾತ್ರರು ತಂದೆಯನ್ನು ಶಿವ, ಈಶ್ವರ, ಭಗವಂತನೆಂದೂ ಹೇಳುತ್ತಾರೆ ಆದರೆ ಅರಿತುಕೊಂಡಿಲ್ಲ, ಕೇವಲ ಕರೆಯುತ್ತಿರುತ್ತಾರೆ. ಡ್ರಾಮಾನುಸಾರವೇ ಈ ರೀತಿಯಾಗಿದೆ, ಜ್ಞಾನ ಮತ್ತು ಅಜ್ಞಾನ, ದಿನ ಮತ್ತು ರಾತ್ರಿ. ಹಾಡುತ್ತಾ ಬರುತ್ತಾರೆ ಆದರೆ ತಮೋಪ್ರಧಾನ ಬುದ್ಧಿಯವರು ಈ ರೀತಿಯಾಗಿ ಬಿಟ್ಟಿದ್ದಾರೆ ತಮ್ಮನ್ನು ತಮೋಪ್ರಧಾನರೆಂದು ತಿಳಿದುಕೊಳ್ಳುವುದೇ ಇಲ್ಲ. ಯಾರ ಅದೃಷ್ಟದಲ್ಲಿ ತಂದೆಯ ಆಸ್ತಿಯಿದೆಯೋ ಅವರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುವುದು. ಮಕ್ಕಳಿಗೆ ತಿಳಿದಿದೆ - ನಾವು ಸಂಪೂರ್ಣ ಘೋರ ಅಂಧಕಾರದಲ್ಲಿದ್ದೆವು, ಈಗ ತಂದೆಯು ಬಂದಿದ್ದಾರೆ ಆದ್ದರಿಂದ ಎಷ್ಟು ಬೆಳಕು ಸಿಕ್ಕಿದೆ! ತಂದೆಯು ಯಾವ ಜ್ಞಾನವನ್ನು ತಿಳಿಸುತ್ತಾರೆಯೋ ಅದು ಯಾವುದೇ ವೇದ, ಶಾಸ್ತ್ರ ಇತ್ಯಾದಿಗಳಲ್ಲಿ ಇಲ್ಲ. ಅದನ್ನೂ ಸಹ ತಂದೆಯು ಸಿದ್ಧ ಮಾಡಿ ತಿಳಿಸುತ್ತಾರೆ. ನೀವು ಮಕ್ಕಳಿಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಬೆಳಕನ್ನು ಕೊಡುತ್ತೇನೆ ಅದು ನಂತರ ಪ್ರಾಯಾಲೋಪವಾಗಿ ಬಿಡುತ್ತದೆ. ನನ್ನ ವಿನಃ ಮತ್ತ್ಯಾರಿಗೂ ಜ್ಞಾನ ಸಿಗಲು ಸಾಧ್ಯವಿಲ್ಲ. ಈ ಜ್ಞಾನವು ಮತ್ತೆ ಪ್ರಾಯಾಲೋಪವಾಗಿ ಬಿಡುತ್ತದೆ. ಬುದ್ಧಿಯಲ್ಲಿ ಬರುತ್ತದೆ - ಕಲಿಯುಗವು ಕಳೆದು ಪುನಃ 5000 ವರ್ಷಗಳ ನಂತರ ಪುನರಾವರ್ತನೆಯಾಗುವುದು, ಇದು ಹೊಸ ಮಾತಾಗಿದೆ, ಶಾಸ್ತ್ರಗಳಲ್ಲಿಲ್ಲ.

ತಂದೆಯು ಈ ಜ್ಞಾನವನ್ನು ಎಲ್ಲರಿಗೂ ಒಂದೇ ಸಮನಾಗಿ ಓದಿಸುತ್ತಾರೆ ಆದರೆ ಧಾರಣೆಯಲ್ಲಿ ನಂಬರ್ವಾರ್ ಇದೆ. ಕೆಲವರು ಒಳ್ಳೆಯ ಸೇವಾಧಾರಿ ಮಕ್ಕಳು ಬರುತ್ತಾರೆ ಆಗ ತಂದೆಯ ನರ್ತನವೂ ಸಹ ಅದೇರೀತಿ ನಡೆಯುತ್ತದೆ. ನೃತ್ಯ ಮಾಡುವವರನ್ನು ನೋಡುವವರು ಬಹಳ ಉಮ್ಮಂಗದಲ್ಲಿದ್ದಾಗ ನರ್ತನ ಮಾಡುವವರೂ ಸಹ ಬಹಳ ಚೆನ್ನಾಗಿ ನರ್ತಿಸುತ್ತಾರೆ. ಕೆಲವರೇ ಕುಳಿತಿದ್ದರೆ ಸಾಮಾನ್ಯ ರೀತಿಯಿಂದ ಜ್ಞಾನ ನರ್ತನ ನಡೆಯುತ್ತದೆ. ವಾಹ್! ವಾಹ್! ಎನ್ನುವವರು ಅನೇಕರಿದ್ದರೆ ಅವರ ಉಲ್ಲಾಸವು ಹೆಚ್ಚುವುದು. ಇಲ್ಲಿಯೂ ಸಹ ಹಾಗೆಯೇ, ಮುರುಳಿಯನ್ನಂತೂ ಎಲ್ಲಾ ಮಕ್ಕಳು ಕುಳಿತು ಕೇಳಿಸಿಕೊಳ್ಳುತ್ತಾರೆ ಆದರೆ ಸನ್ಮುಖದಲ್ಲಿ ಕೇಳುವ ಮಾತೇ ಬೇರೆಯಿರುತ್ತದೆಯಲ್ಲವೆ. ಕೃಷ್ಣನು ನರ್ತನ ಮಾಡುತ್ತಿದ್ದನೆಂದು ತೋರಿಸುತ್ತಾರೆ ಆದರೆ ಅದು ನರ್ತನವಲ್ಲ. ವಾಸ್ತವದಲ್ಲಿ ಜ್ಞಾನದ ನರ್ತನವಾಗಿದೆ, ಶಿವ ತಂದೆಯು ಸ್ವಯಂ ತಿಳಿಸುತ್ತಾರೆ - ನಾನು ಜ್ಞಾನ ನರ್ತನ ಮಾಡಲು ಬರುತ್ತೇನೆ. ನಾನು ಜ್ಞಾನ ಸಾಗರನಾಗಿದ್ದೇನೆ ಅಂದಾಗ ಒಳ್ಳೊಳ್ಳೆಯ ಮಾತುಗಳು ಹೊರ ಬರುತ್ತವೆ. ಇದು ಜ್ಞಾನದ ಮುರುಳಿಯಾಗಿದೆ, ಯಾವುದೇ ಕಟ್ಟಿಗೆಯ ಮುರುಳಿಯಲ್ಲ. ಪತಿತ-ಪಾವನನು ಬಂದು ಸ್ವಯಂ ರಾಜಯೋಗವನ್ನು ಕಲಿಸುವರೋ ಅಥವಾ ಕೇವಲ ಕಟ್ಟಿಗೆಯ ಮುರುಳಿಯನ್ನು ನುಡಿಸುವರೋ? ತಂದೆಯು ಬಂದು ಈ ರೀತಿ ರಾಜಯೋಗವನ್ನು ಕಲಿಸುತ್ತಾರೆಂಬುದು ಯಾರ ವಿಚಾರದಲ್ಲಿಯೂ ಇರುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಉಳಿದ ಯಾವುದೇ ಮನುಷ್ಯ ಮಾತ್ರರಿಗೆ ಇದು ಬುದ್ಧಿಯಲ್ಲಿ ಬರಲು ಸಾಧ್ಯವಿಲ್ಲ. ಬರುವವರಲ್ಲಿಯೂ ನಂಬರ್ವಾರ್ ಪದವಿಯನ್ನು ಪಡೆಯುತ್ತಾರೆ. ಕಲ್ಪದ ಮೊದಲು ಹೇಗೆ ಮಾಡಿದ್ದಾರೆಯೋ ಅದರನುಸಾರವೇ ಪುರುಷಾರ್ಥ ಮಾಡುತ್ತಾ ಇರುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲಿನ ತರಹ ತಂದೆಯು ಬಂದು ಎಲ್ಲಾ ರಹಸ್ಯಗಳನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ನಾನೂ ಸಹ ಬಂಧನದಲ್ಲಿ ಬಂಧಿತನಾಗಿದ್ದೇನೆ. ಪ್ರತಿಯೊಬ್ಬರೂ ಈ ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ. ಸತ್ಯಯುಗದಲ್ಲಿ ಏನೆಲ್ಲವೂ ಆಗಿತ್ತೋ ಅದೇ ಆಗುವುದು. ಎಷ್ಟು ಪ್ರಕಾರದ ಯೋನಿಗಳಿವೆ? ಸತ್ಯಯುಗದಲ್ಲಿ ಇಷ್ಟೊಂದು ಯೋನಿಗಳಿರುವುದಿಲ್ಲ, ಅಲ್ಲಿ ವಿಭಿನ್ನತೆಯಿರುತ್ತದೆ ನಂತರ ವೃದ್ಧಿ ಹೊಂದುತ್ತಾ ಇರುತ್ತಾರೆ. ಹೇಗೆ ಧರ್ಮಗಳೂ ಸಹ ಹೆಚ್ಚುತ್ತಾ ಹೋಗುತ್ತವೆಯಲ್ಲವೆ. ಸತ್ಯಯುಗದಲ್ಲಂತೂ ಇರಲಿಲ್ಲ, ಯಾವುದು ಸತ್ಯಯುಗದಲ್ಲಿತ್ತೋ ಅದನ್ನು ಪುನಃ ಸತ್ಯಯುಗದಲ್ಲಿಯೇ ಮಾಡುವರು. ಸತ್ಯಯುಗದಲ್ಲಿ ಯಾವುದೇ ಕೊಳಕು ಮಾಡುವಂತಹ ವಸ್ತುಗಳಿರುವುದಿಲ್ಲ. ಆ ದೇವಿ-ದೇವತೆಗಳಿಗೆ ಭಗವಾನ್-ಭಗವತಿಯೆಂದು ಹೇಳುತ್ತಾರೆ, ಮತ್ತ್ಯಾವುದೇ ಖಂಡದಲ್ಲಿ ಎಂದೂ ಯಾರಿಗೂ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ಆ ದೇವತೆಗಳು ಅವಶ್ಯವಾಗಿ ಸ್ವರ್ಗದಲ್ಲಿ ರಾಜ್ಯ ಮಾಡುತ್ತಿದ್ದರು. ನೋಡಿ ಅವರಿಗೆ ಎಷ್ಟು ಗಾಯನವಿದೆ!

ನೀವು ಮಕ್ಕಳಿಗೆ ಈಗ ಧೈರ್ಯವು ಬಂದು ಬಿಟ್ಟಿದೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ಪದವಿಯು ಎಷ್ಟು ಶ್ರೇಷ್ಠವಾಗಿದೆ ಅಥವಾ ಕನಿಷ್ಠವಾಗಿದೆಯೇ? ನಾವು ಎಷ್ಟು ಅಂಕಗಳಿಂದ ತೇರ್ಗಡೆಯಾಗಬಹುದು. ಪ್ರತಿಯೊಬ್ಬರೂ ತಮ್ಮನ್ನು ತಿಳಿದುಕೊಳ್ಳಬಹುದು - ಇಂತಹವರು ಚೆನ್ನಾಗಿ ಸರ್ವೀಸ್ ಮಾಡುತ್ತಿದ್ದಾರೆ. ಹಾ! ನಡೆಯುತ್ತಾ-ನಡೆಯುತ್ತಾ ಕೆಲವೊಮ್ಮೆ ಬಿರುಗಾಳಿಗಳೂ ಬಂದು ಬಿಡುತ್ತವೆ. ತಂದೆಯಂತೂ ತಿಳಿಸುತ್ತಾರೆ - ಮಕ್ಕಳಿಗೆ ಯಾವುದೇ ಗ್ರಹಚಾರ, ಬಿರುಗಾಳಿ ಇತ್ಯಾದಿ ಬರದಿರಲಿ ಎಂದು. ಮಾಯೆಯು ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಬೀಳಿಸಿ ಬಿಡುತ್ತದೆ ಆದ್ದರಿಂದ ತಂದೆಯು ಧೈರ್ಯ ತರಿಸುತ್ತಾ ಇರುತ್ತಾರೆ - ಮಕ್ಕಳೇ, ಇನ್ನು ಸ್ವಲ್ಪವೇ ಸಮಯವಿದೆ, ನೀವು ಬಹಳ ಸೇವೆಯನ್ನು ಮಾಡಬೇಕಾಗಿದೆ. ಪೂರ್ಣ ಸ್ಥಾಪನೆಯಾಗಿ ಬಿಟ್ಟರೆ ಮತ್ತೆ ಹೊರಟು ಹೋಗಲೇಬೇಕಾಗಿದೆ. ಇದರಲ್ಲಿ ಒಂದು ಕ್ಷಣವೂ ಹಿಂದೆ-ಮುಂದೆ ಆಗಲು ಸಾಧ್ಯವಿಲ್ಲ. ಈ ರಹಸ್ಯವನ್ನು ಮಕ್ಕಳೇ ತಿಳಿದುಕೊಳ್ಳುತ್ತೀರಿ, ನಾವು ಸೃಷ್ಟಿ ನಾಟಕದ ಪಾತ್ರಧಾರಿಗಳಾಗಿದ್ದೇವೆ, ಇದರಲ್ಲಿ ನಮ್ಮದು ಮುಖ್ಯ ಪಾತ್ರವಾಗಿದೆ. ಭಾರತದ ಮೇಲೆ ಸೋಲು ಮತ್ತು ಗೆಲುವಿನ ಆಟವು ಮಾಡಲ್ಪಟ್ಟಿದೆ. ಭಾರತವೇ ಪಾವನವಾಗಿತ್ತು, ಎಷ್ಟೊಂದು ಶಾಂತಿ, ಪವಿತ್ರತೆಯಿತ್ತು. ಇದು ಕೇವಲ ನೆನ್ನೆಯ ಮಾತಾಗಿದೆ. ನೆನ್ನೆ ನಾವೇ ಪಾತ್ರವನ್ನಭಿನಯಿಸಿದ್ದೇವೆ. 5000 ವರ್ಷಗಳ ಪಾತ್ರವೆಲ್ಲವೂ ನಿಗಧಿಯಾಗಿದೆ. ನಾವು ಚಕ್ರವನ್ನು ಸುತ್ತಿಬಂದಿದ್ದೇವೆ. ಈಗ ಪುನಃ ತಂದೆಯೊಂದಿಗೆ ಬುದ್ಧಿಯೋಗವನ್ನಿಡುತ್ತೇವೆ. ಇದರಿಂದಲೇ ತುಕ್ಕು ಕಳೆಯುತ್ತದೆ. ತಂದೆಯ ನೆನಪು ಬರುವುದು ಮತ್ತು ಆಸ್ತಿಯು ಅವಶ್ಯವಾಗಿ ನೆನಪಿಗೆ ಬರುವುದು. ಮೊಟ್ಟ ಮೊದಲು ತಂದೆಯನ್ನು ಅರಿತುಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಅರಿತುಕೊಳ್ಳುವುದರಿಂದ ಎಲ್ಲವನ್ನೂ ಅರಿತುಕೊಳ್ಳುವಿರಿ. ಜ್ಞಾನವು ಬಹಳ ಸಹಜವಾಗಿದೆ, ಒಂದು ಸೆಕೆಂಡಿನದ್ದಾಗಿದೆ, ಆದರೂ ಸಹ ತಂದೆಯು ತಿಳಿಸುತ್ತಲೇ ಇರುತ್ತಾರೆ. ಜ್ಞಾನದ ಅಂಶಗಳನ್ನೂ ಕೊಡುತ್ತಲೇ ಇರುತ್ತಾರೆ. ಮುಖ್ಯ ಮಾತಾಗಿದೆ - ಮನ್ಮನಾಭವ. ಇದರಲ್ಲಿಯೂ ವಿಘ್ನಗಳು ಬರುತ್ತವೆ. ದೇಹಾಭಿಮಾನವು ಬರುವುದರಿಂದ ಮತ್ತೆ ಅನೇಕ ಪ್ರಕಾರದ ತೊಂದರೆಗಳು ಬಂದು ಬಿಡುತ್ತವೆ, ಯೋಗದಲ್ಲಿರುವುದಕ್ಕೂ ಬಿಡುವುದಿಲ್ಲ. ಹೇಗೆ ಭಕ್ತಿ ಮಾರ್ಗದಲ್ಲಿ ಕೃಷ್ಣನ ನೆನಪಿನಲ್ಲಿ ಕುಳಿತುಕೊಂಡಾಗ ಬುದ್ಧಿಯು ಎಲ್ಲೆಲ್ಲಿಯೋ ಓಡಿ ಹೋಗುತ್ತದೆ. ಭಕ್ತಿಯ ಅನುಭವವಂತೂ ಎಲ್ಲರಿಗೂ ಇದೆ. ಈ ಜನ್ಮದ ಮಾತಾಗಿದೆ. ಈ ಜನ್ಮವನ್ನು ಅರಿತುಕೊಂಡಾಗ ಹಿಂದಿನ ಜನ್ಮಗಳನ್ನೂ ಅಲ್ಪಸ್ವಲ್ಪ ಅರಿತುಕೊಳ್ಳಬಹುದು. ಮಕ್ಕಳಿಗೆ ತಂದೆಯನ್ನು ನೆನಪು ಮಾಡುವುದು ಹವ್ಯಾಸವಾಗಿ ಬಿಟ್ಟಿದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯು ಹೆಚ್ಚುತ್ತದೆ. ಜೊತೆ ಜೊತೆಗೆ ದಿವ್ಯ ಅಲೌಕಿಕ ಕರ್ಮವನ್ನೂ ಮಾಡಬೇಕಾಗಿದೆ. ನೀವು ಬ್ರಾಹ್ಮಣರಾಗಿದ್ದೀರಿ. ಸತ್ಯ ನಾರಾಯಣನ ಕಥೆಯನ್ನು, ಅಮರ ಕಥೆಯನ್ನು ನೀವು ತಿಳಿಸುತ್ತೀರಿ. ಮೂಲ ಮಾತು ಒಂದೇ ಆಗಿದೆ, ಅದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಇದೊಂದೇ ಆತ್ಮಿಕ ಹವ್ಯಾಸವಾಗಿದೆ. ತಂದೆಯು ತಿಳಿಸುತ್ತಾರೆ - ಜ್ಞಾನವು ಬಹಳ ಸಹಜವಾಗಿದೆ. ಕನ್ಯೆಯರ ಹೆಸರಿನ ಗಾಯನವಿದೆ. ಅಧರ್ ಕುಮಾರಿ, ಕನ್ಯೆ. ಕುಮಾರಿಯ ಹೆಸರು ಎಲ್ಲದಕ್ಕಿಂತ ಹೆಚ್ಚು ಪ್ರಸಿದ್ಧವಾಗಿದೆ. ಅವರಿಗೆ ಯಾವುದೇ ಬಂಧನವಿರುವುದಿಲ್ಲ. ಆ ಪತಿಯಂತೂ ವಿಕಾರಿಯನ್ನಾಗಿ ಮಾಡಿ ಬಿಡುತ್ತಾರೆ ಆದರೆ ಈ ತಂದೆಯು ಸ್ವರ್ಗದಲ್ಲಿ ಹೋಗುವುದಕ್ಕಾಗಿ ಶೃಂಗರಿಸುತ್ತಾರೆ. ಮಧುರ ಸಾಗರದಲ್ಲಿ ಕರೆದುಕೊಂಡು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚವನ್ನು ಹಳೆಯ ದೇಹ ಸಹಿತವಾಗಿ ಸಂಪೂರ್ಣ ಮರೆತು ಬಿಡಿ. ಆತ್ಮವು ಹೇಳುತ್ತದೆ - ನಾವು 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ. ಈಗ ಪುನಃ ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಸಾಹಸವನ್ನೂ ಇಡುತ್ತೇವೆ. ಆದರೂ ಮಾಯೆಯೊಂದಿಗೆ ಯುದ್ಧವಂತೂ ಇದೆ. ಮೊಟ್ಟ ಮೊದಲಿಗೆ ಈ ಬ್ರಹ್ಮಾ ತಂದೆಯಿದ್ದಾರೆ, ಇವರ ಬಳಿ ಮಾಯೆಯ ಹೆಚ್ಚು ಬಿರುಗಾಳಿಗಳು ಬರುತ್ತವೆ. ಅನೇಕರು ಹೋಗಿ ಬಾಬಾ, ನಮಗೆ ಈ ರೀತಿ ಆಗುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೌದು ಮಕ್ಕಳೇ ಈ ಬಿರುಗಾಳಿಗಳಂತೂ ಬಂದೇ ಬರುತ್ತವೆ. ಇವೆಲ್ಲವೂ ಮೊದಲು ನನ್ನ ಬಳಿ ಬರುತ್ತವೆ. ಎಲ್ಲರೂ ಅಂತಿಮದಲ್ಲಿಯೇ ಕರ್ಮಾತೀತ ಸ್ಥಿತಿಯನ್ನು ಹೊಂದುವರು. ಇದೇನೂ ಹೊಸ ಮಾತಲ್ಲ. ಕಲ್ಪದ ಮೊದಲೂ ಆಗಿತ್ತು. ನಾಟಕದಲ್ಲಿ ಪಾತ್ರವನ್ನಭಿನಯಿಸಿದಿರಿ. ಈಗ ಹಿಂತಿರುಗಿ ಮನೆಗೆ ಹೋಗುತ್ತೀರಿ. ಇದು ಚೈತನ್ಯ ನಾಟಕವಾಗಿದೆ. ಮಕ್ಕಳಿಗೆ ತಿಳಿದಿದೆ - ಈ ಹಳೆಯ ಪ್ರಪಂಚವು ನರಕವಾಗಿದೆ. ಈ ಲಕ್ಷ್ಮೀ-ನಾರಾಯಣರು ಕ್ಷೀರ ಸಾಗರದಲ್ಲಿದ್ದರು ಎಂದು ಹೇಳಿ ಇವರಿಗೆ ಎಷ್ಟು ಒಳ್ಳೊಳ್ಳೆಯ ಮಂದಿರಗಳನ್ನು ಕಟ್ಟಿಸುತ್ತಾರೆ. ಮೊಟ್ಟ ಮೊದಲು ಮಂದಿರವನ್ನು ಕಟ್ಟಿಸುವಾಗ ಕ್ಷೀರ ಸರೋವರನ್ನು ಮಾಡಿ ವಿಷ್ಣುವಿನ ಮೂರ್ತಿಯನ್ನು ಕೂರಿಸಿರಬೇಕು. ಬಹಳ ಒಳ್ಳೊಳ್ಳೆಯ ಚಿತ್ರಗಳನ್ನು ಮಾಡಿ ಪೂಜೆ ಮಾಡುತ್ತಿದ್ದರು. ಆ ಸಮಯದಲ್ಲಂತೂ ಎಲ್ಲವೂ ಬಹಳ ಅಗ್ಗವಾಗಿತ್ತು. ಈ ಬಾಬಾರವರು ಎಲ್ಲವನ್ನೂ ನೋಡಿದ್ದಾರೆ. ಅವಶ್ಯವಾಗಿ ಈ ಭಾರತವು ಎಷ್ಟೊಂದು ಪವಿತ್ರ, ಕ್ಷೀರ ಸಾಗರವಾಗಿತ್ತು! ಹಾಲು, ತುಪ್ಪದ ನದಿಗಳು ಹರಿಯುತ್ತಿತ್ತು ಅಂದರೆ ಅಲ್ಲಿನ ಸಮೃದ್ಧಿಯನ್ನು ಮಹಿಮೆ ಮಾಡಿದ್ದಾರೆ. ಸ್ವರ್ಗದ ಹೆಸರು ಹೇಳುತ್ತಿದ್ದಂತೆಯೇ ಬಾಯಲ್ಲಿ ನೀರು ಬರುತ್ತದೆ. ನೀವು ಮಕ್ಕಳಿಗೆ ಈಗ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ ಆದ್ದರಿಂದ ಅರಿವು ಮೂಡಿದೆ. ಬುದ್ಧಿಯು ತನ್ನ ಮನೆಗೆ ಹೊರಟು ಹೋಗುತ್ತದೆ ನಂತರ ಸ್ವರ್ಗದಲ್ಲಿ ಬರುತ್ತೇವೆ. ಅಲ್ಲಿ ಎಲ್ಲವೂ ಹೊಸದೇ ಹೊಸದಾಗಿರುವುದು. ಈ ಬಾಬಾರವರು ಶ್ರೀನಾರಾಯಣನ ಮೂರ್ತಿಯನ್ನು ನೋಡಿ ಬಹಳ ಖುಷಿ ಪಡುತ್ತಿದ್ದರು, ಬಹಳ ಪ್ರೀತಿಯಿಂದ ಇಟ್ಟುಕೊಳ್ಳುತ್ತಿದ್ದರು. ನಾನೇ ಈ ರೀತಿಯಾಗುತ್ತೇನೆ ಎಂಬುದು ಇವರಿಗೆ ತಿಳಿದಿರಲಿಲ್ಲ. ಈ ಜ್ಞಾನವಂತೂ ಈಗ ತಂದೆಯಿಂದ ಸಿಕ್ಕಿದೆ. ನಿಮಗೆ ಬ್ರಹ್ಮಾಂಡ ಮತ್ತು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ನಾವು ಹೇಗೆ ಚಕ್ರವನ್ನು ಸುತ್ತುತ್ತೇವೆ, ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂಬುದೆಲ್ಲವನ್ನೂ ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಇನ್ನು ಸ್ವಲ್ಪವೇ ಸಮಯವಿದೆ, ಶರೀರಕ್ಕೆ ಒಂದಲ್ಲ ಒಂದು ಆಗುತ್ತಿರುತ್ತದೆ. ನಿಮ್ಮದು ಇದು ಅಂತಿಮ ಜನ್ಮವಾಗಿದೆ. ಡ್ರಾಮಾ ಪ್ಲಾನನುಸಾರ ಈಗ ನಿಮ್ಮ ಸುಖದ ದಿನಗಳು ಬರುತ್ತಿದೆ. ನೀವು ನೋಡುತ್ತಿದ್ದೀರಿ, ವಿನಾಶವು ಸಮ್ಮುಖದಲ್ಲಿ ನಿಂತಿದೆ. ನಿಮಗೆ ಮೂರನೇ ನೇತ್ರ ಸಿಕ್ಕಿದೆ. ಮೂಲವತನ, ಸೂಕ್ಷ್ಮ ವತನ, ಸ್ಥೂಲ ವತನವನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ. ಈ ಸ್ವದರ್ಶನ ಚಕ್ರವು ನಿಮ್ಮ ಬುದ್ಧಿಯಲ್ಲಿ ಸುತ್ತುತ್ತಿರುತ್ತದೆ, ಖುಷಿಯಾಗುತ್ತದೆ. ಈ ಸಮಯದಲ್ಲಿ ನಮಗೆ ಬೇಹದ್ದಿನ ತಂದೆಯು ಶಿಕ್ಷಕನಾಗಿ ಓದಿಸುತ್ತಾರೆ ಆದರೆ ಹೊಸ ಮಾತಾಗಿರುವ ಕಾರಣ ಪದೇ-ಪದೇ ಮರೆತು ಹೋಗುತ್ತೀರಿ, ಇಲ್ಲವಾದರೆ ಬಾಬಾ ಎಂದು ಹೇಳಿದೊಡನೆಯೇ ಖುಷಿಯ ನಶೆಯೇರಿಬಿಡಬೇಕು. ರಾಮ ತೀರ್ಥರು ಶ್ರೀಕೃಷ್ಣನ ಭಕ್ತರಾಗಿದ್ದರು. ಕೃಷ್ಣನ ದರ್ಶನಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಿದ್ದರು. ಅವರಿಗೆ ಸಾಕ್ಷಾತ್ಕಾರವಾಯಿತು ಮತ್ತು ಖುಷಿಯಾಯಿತು ಆದರೆ ಅದರಿಂದೇನಾಯಿತು? ಏನೂ ಸಿಗಲಿಲ್ಲ. ಇಲ್ಲಂತೂ ನೀವು ಮಕ್ಕಳಿಗೆ ಖುಷಿಯೂ ಇದೆ ಏಕೆಂದರೆ 21 ಜನ್ಮಗಳಿಗಾಗಿ ನಾವು ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ಮುಕ್ಕಾಲು ಭಾಗ ನೀವು ಸುಖಿಯಾಗಿರುತ್ತೀರಿ, ಒಂದುವೇಳೆ ಸುಖ-ದುಃಖವು ಸರಾಸರಿ ಇದ್ದರೂ ಸಹ ಲಾಭವಿಲ್ಲ. ನೀವು ಮೂರು ಭಾಗ ಸುಖದಲ್ಲಿರುತ್ತೀರಿ, ನಿಮ್ಮಂತಹ ಸುಖವನ್ನು ಮತ್ತ್ಯಾರೂ ನೋಡಲು ಸಾಧ್ಯವಿಲ್ಲ. ನಿಮಗಾಗಿ ಅಪಾರ ಸುಖವಿದೆ. ಮಹಾನ್ ಸುಖದಲ್ಲಿ ದುಃಖದ ಬಗ್ಗೆ ತಿಳಿಯುವುದೇ ಇಲ್ಲ. ಸಂಗಮದಲ್ಲಿ ನೀವು ಎರಡನ್ನೂ ತಿಳಿದುಕೊಳ್ಳುತ್ತೀರಿ - ನಾವೀಗ ದುಃಖದಿಂದ ಸುಖದಲ್ಲಿ ಹೋಗುತ್ತಿದ್ದೇವೆ. ಮುಖವು ದಿನದ ಕಡೆಯೂ ಮತ್ತು ಕಾಲು ರಾತ್ರಿಯ ಕಡೆಯೂ ಇದೆ. ಈ ಪ್ರಪಂಚವನ್ನು ಕಾಲಿನಿಂದ ಒದೆಯಬೇಕು ಅರ್ಥಾತ್ ಬುದ್ಧಿಯಿಂದ ಮರೆಯಬೇಕಾಗಿದೆ. ಆತ್ಮಕ್ಕೆ ಗೊತ್ತಿದೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಬಹಳ ಪಾತ್ರವನ್ನಭಿನಯಿಸಿದ್ದೀರಿ. ಹೀಗೆ ತನ್ನ ಜೊತೆ ಮಾತನಾಡಿಕೊಳ್ಳಬೇಕಾಗಿದೆ. ಈಗ ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟೇ ತುಕ್ಕು ಕಳೆಯುವುದು. ಎಷ್ಟು ತಂದೆಯ ಸೇವೆಯಲ್ಲಿದ್ದು ಸಮಾನರನ್ನಾಗಿ ಮಾಡಿಕೊಳ್ಳುವಿರೋ ಅಷ್ಟೇ ತಂದೆಯನ್ನು ಪ್ರತ್ಯಕ್ಷ ಮಾಡುತ್ತೀರಿ. ಈಗ ಮನೆಗೆ ಹೋಗಬೇಕಾಗಿದೆ ಎಂಬುದು ಬುದ್ಧಿಯಲ್ಲಿದೆ. ಆದ್ದರಿಂದ ಮನೆಯನ್ನೇ ನೆನಪು ಮಾಡಬೇಕು. ಹಳೆಯ ಮನೆಯು ಬೀಳುತ್ತಿರುತ್ತದೆ. ಈಗ ಹೊಸ ಮನೆಯೆಲ್ಲಿ! ಹಳೆಯ ಮನೆಯೆಲ್ಲಿ! ಇದು ವಿಷಯ ವೈತರಣೀ ನದಿಯಾಗಿದೆ. ಒಬ್ಬರು ಇನ್ನೊಬ್ಬರನ್ನು ಹೊಡೆಯುತ್ತಾ, ಜಗಳವಾಡುತ್ತಾ ಇರುತ್ತಾರೆ. ಅದರಲ್ಲಿ ತಂದೆಯು ಬಂದಾಗಿನಿಂದ ಯುದ್ಧವು ಬಹಳ ಆರಂಭವಾಗಿ ಬಿಟ್ಟಿದೆ. ಒಂದುವೇಳೆ ಸ್ತ್ರೀಯು ವಿಕಾರದಲ್ಲಿ ಭಾಗಿಯಾಗದಿದ್ದರೆ ಎಷ್ಟೊಂದು ತೊಂದರೆ ಕೊಡುತ್ತಾರೆ, ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಕಲ್ಪದ ಮೊದಲೂ ಅತ್ಯಾಚಾರವಾಗಿತ್ತು, ಅದು ಈಗಿನ ಮಾತು ಗಾಯನ ಮಾಡಲ್ಪಟ್ಟಿದೆ. ನೋಡುತ್ತೀರಿ - ಎಷ್ಟೊಂದು ಕೂಗುತ್ತಾರೆ, ಸೃಷ್ಟಿನಾಟಕದ ಅದೇ ಪಾತ್ರವು ಅಭಿನಯಿಸಲ್ಪಡುತ್ತಿದೆ. ಇದು ತಂದೆಗೆ ಗೊತ್ತು ಮತ್ತು ಮಕ್ಕಳಿಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ. ಮುಂದೆ ಹೋದಂತೆ ಎಲ್ಲರೂ ತಿಳಿದುಕೊಳ್ಳುವರು. ಪತಿತ-ಪಾವನ, ಸರ್ವರ ಸದ್ಗತಿದಾತನು ತಂದೆಯಾಗಿದ್ದಾರೆಂದು ಹಾಡುತ್ತಾರೆ. ನೀವು ಇದನ್ನು ಯಾರಿಗೆ ಬೇಕಾದರೂ ತಿಳಿಸಬಲ್ಲಿರಿ. ಭಾರತವು ಸ್ವರ್ಗ ಮತ್ತು ನರಕ ಹೇಗಾಗುತ್ತದೆ ಎಂಬುದನ್ನು ತಾವು ಬಂದರೆ ನಿಮಗೆ ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ನಾವು ತಿಳಿಸುತ್ತೇವೆ. ಈ ಬೇಹದ್ದಿನ ಚರಿತ್ರೆ-ಭೂಗೋಳವು ಈಶ್ವರನಿಗೇ ಗೊತ್ತು ಮತ್ತು ಈಶ್ವರನ ಮಕ್ಕಳಾದ ನಿಮಗೇ ಗೊತ್ತು. ಪವಿತ್ರತೆ, ಸುಖ-ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬ ಚರಿತ್ರೆ-ಭೂಗೋಳವನ್ನು ಅರಿತುಕೊಳ್ಳುವುದರಿಂದ ನೀವು ಮತ್ತೆಲ್ಲವನ್ನೂ ಅರಿತುಕೊಳ್ಳುವಿರಿ. ಬೇಹದ್ದಿನ ತಂದೆಯಿಂದ ನೀವು ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುವಿರಿ, ಇದನ್ನು ಬಂದು ತಿಳಿದುಕೊಳ್ಳಿ. ಭಾಷಣದ ವಿಷಯಗಳು ಬಹಳಷ್ಟಿವೆ. ನೀವು ಮಕ್ಕಳ ಬುದ್ಧಿಯೇ ಈಗ ಸಂಪನ್ನವಾಗಿ ಬಿಟ್ಟಿದೆ. ಎಷ್ಟೊಂದು ಖುಷಿಯ ನಶೆಯೇರುತ್ತದೆ! ಸಂಪೂರ್ಣ ಜ್ಞಾನವು ನೀವು ಮಕ್ಕಳ ಬಳಿ ಇದೆ. ಜ್ಞಾನ ಪೂರ್ಣ ತಂದೆಯಿಂದ ಜ್ಞಾನವು ಸಿಗುತ್ತಿದೆ, ಮತ್ತೆ ನಾವೇ ಹೋಗಿ ಲಕ್ಷ್ಮೀ-ನಾರಾಯಣರಾಗುತ್ತೇವೆ. ನಂತರ ಸತ್ಯಯುಗದಲ್ಲಿ ಈ ಜ್ಞಾನವೇನೂ ಇರುವುದಿಲ್ಲ. ತಿಳಿದುಕೊಳ್ಳುವ ಎಷ್ಟೊಂದು ಗುಹ್ಯ ಮಾತುಗಳಿವೆ. ಮಕ್ಕಳು ಏಣಿಯನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ ಅಂದಾಗ ಈ ಚಕ್ರವು 84 ಜನ್ಮಗಳದಾಗಿದೆ. ಈಗ ಮನುಷ್ಯರಿಗೂ ಸಹ ಸ್ಪಷ್ಟ ಮಾಡಿ ತಿಳಿಸಬೇಕಾಗಿದೆ. ಈಗ ಇದಕ್ಕೆ ಸ್ವರ್ಗ ಅಥವಾ ಪಾವನ ಪ್ರಪಂಚವೆಂದು ಹೇಳುವುದಿಲ್ಲ. ಸತ್ಯಯುಗವೇ ಬೇರೆ, ಕಲಿಯುಗವೇ ಬೇರೆಯಾಗಿದೆ. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಿಳಿಸಲು ಬಹಳ ಸಹಜವಾಗಿದೆ! ತಿಳುವಳಿಕೆಯು ಬಹಳ ಚೆನ್ನಾಗಿದೆ ಆದರೆ ಪುರುಷಾರ್ಥ ಮಾಡಿ ನೆನಪಿನ ಯಾತ್ರೆಯಲ್ಲಿ ಇರಬೇಕು - ಇದು ಬಹಳ ಮಕ್ಕಳಿಂದ ಆಗುತ್ತಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ ದೇಹ ಮತ್ತು ಪ್ರಪಂಚವನ್ನು ಬುದ್ಧಿಯಿಂದ ಮರೆತು ತಂದೆ ಮತ್ತು ಮನೆಯನ್ನು ನೆನಪು ಮಾಡಬೇಕಾಗಿದೆ. ಸದಾ ಇದೇ ಖುಷಿಯಲ್ಲಿರಿ - ಈಗ ನಮ್ಮ ಸುಖದ ದಿನಗಳು ಬಂದಿತೆಂದರೆ ಬಂದಿತು.

2. ಜ್ಞಾನ ಪೂರ್ಣ ತಂದೆಯಿಂದ ಸಿಕ್ಕಿರುವ ಜ್ಞಾನವನ್ನು ಸ್ಮರಣೆ ಮಾಡಿ. ಬುದ್ಧಿಯನ್ನು ಸಂಪನ್ನವನ್ನಾಗಿ ಇಟ್ಟುಕೊಳ್ಳಬೇಕಾಗಿದೆ. ದೇಹಾಭಿಮಾನದಲ್ಲಿ ಬಂದು ಎಂದೂ ಯಾವುದೇ ಪ್ರಕಾರದ ಗುಟುಕರಿಸಬಾರದು.

ವರದಾನ:
ಸದಾ ಏಕರಸ ಸ್ಥಿತಿಯ ಆಸನದಲ್ಲಿ ಕುಳಿತಿರುವಂತಹ ಬಾಪ್ದಾದಾರವರ ಹೃದಯ ಸಿಂಹಾಸನಾಧಾರಿ ಭವ.

ಅತ್ಯಂತ ಶ್ರೇಷ್ಠವಾದ ಸಿಂಹಾಸನವೆಂದರೆ ಬಾಪ್ದಾದಾರವರ ಹೃದಯ ಸಿಂಹಾಸನಾಧಾರಿ ಆಗುವುದಾಗಿದೆ. ಆದರೆ ಈ ಸಿಂಹಾಸನದಲ್ಲಿ ಕುಳಿತುಕೊಳ್ಳುವುದಕ್ಕಾಗಿ ಅಚಲ, ಅಡೋಲ, ಏಕರಸ ಸ್ಥಿತಿಯ ಸಿಂಹಾಸನವಿರಬೇಕು. ಒಂದುವೇಳೆ ಈ ಸ್ಥಿತಿಯ ಸಿಂಹಾಸನದಲ್ಲಿ ಸ್ಥಿತರಾಗದಿದ್ದರೆ ಬಾಪ್ದಾದಾರವರ ಹೃದಯವೆಂಬ ಸಿಂಹಾಸನದಲ್ಲಿಯೂ ಸ್ಥಿತರಾಗಲು ಸಾಧ್ಯವಿಲ್ಲ. ಇದಕ್ಕಾಗಿ ತಮ್ಮ ಭೃಕುಟಿಯ ಸಿಂಹಾಸನದಲ್ಲಿ ಅಕಾಲಮೂರ್ತಿಯಾಗಿ ಸ್ಥಿತರಾಗಿ ಬಿಡಿ. ಈ ಸಿಂಹಾಸನದಿಂದ ಮತ್ತೆ-ಮತ್ತೆ ಏರುಪೇರಾಗಬಾರದು, ಇದರಿಂದ ಬಾಪ್ದಾದಾರವರ ಹೃದಯ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದು.

ಸ್ಲೋಗನ್:
ಶುಭ ಚಿಂತನೆಯ ಮೂಲಕ ನಕಾರಾತ್ಮಕವನ್ನು ಸಕಾರಾತ್ಮಕದಲ್ಲಿ ಪರಿವರ್ತನೆ ಮಾಡಿರಿ.

ಅವ್ಯಕ್ತ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಬ್ರಹ್ಮಾ ತಂದೆ ತಮ್ಮ ಪ್ರತಿ ಮಗುವಿನ ಚಹರೆಯಲ್ಲಿ, ಒಂದು ಸದಾ ಆತ್ಮೀಯತೆಯ ಮುಗುಳ್ನಗೆಯನ್ನು ನೋಡಲು ಬಯಸುತ್ತಾರೆ ಮತ್ತು ಇನ್ನೊಂದು ಮುಖದಿಂದ ಸದಾ ಮಧುರ ಮಾತುಗಳನ್ನು ಕೇಳಲು ಬಯಸುತ್ತಾರೆ. ಒಂದು ಶಬ್ಧವು ಮಧುರತೆಯಿಲ್ಲದೇ ಇರಬಾರದು. ಚಹರೆಯಲ್ಲಿ ಆತ್ಮೀಯತೆಯಿರಲಿ, ಮುಖದಲ್ಲಿ ಮಧುರತೆಯಿರಲಿ ಮತ್ತು ಮನಸ್ಸು-ಬುದ್ಧಿಯಲ್ಲಿ ಶುಭ ಭಾವನೆ, ದಯಾಹೃದಯದ ಭಾವನೆ, ದಾತಾತನದ ಭಾವನೆ. ಪ್ರತಿ ಹೆಜ್ಜೆಯಲ್ಲಿ ಫಾಲೋ ಫಾದರ್ ಇರಲಿ, ಇದೇ ಪಾಲನೆಯ ರಿಟರ್ನ್ ಆಗಿದೆ.