22.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ತಂದೆಯ ನೆನಪಿನಿಂದ ಅಕ್ಯುರೇಟ್ ಆಗಿರಿ ಆಗ ನಿಮ್ಮ ಚಹರೆಯು ಸದಾ ಖುಷಿಯಿಂದ ಮಿಂಚುತ್ತಿರುತ್ತದೆ”
ಪ್ರಶ್ನೆ:
ನೆನಪಿನಲ್ಲಿ
ಕುಳಿತುಕೊಳ್ಳುವ ವಿಧಿ ಯಾವುದು? ಹಾಗೂ ಅದರಿಂದಾಗುವ ಲಾಭವೇನು?
ಉತ್ತರ:
ನೆನಪಿನಲ್ಲಿ
ಕುಳಿತುಕೊಂಡಾಗ ಬುದ್ಧಿಯಿಂದ ಎಲ್ಲಾ ಉದ್ಯೋಗ ವ್ಯವಹಾರಗಳ ಪಂಚಾಯಿತಿಯನ್ನು ಮರೆತು ತನ್ನನ್ನು ದೇಹೀ
ಎಂದು ತಿಳಿದು ದೇಹ ಮತ್ತು ದೇಹದ ಸಂಬಂಧಗಳದು ದೊಡ್ಡ ಜಾಲವಿದೆ, ಆ ಜಾಲವನ್ನು ಪಾರು ಮಾಡಿ
ದೇಹಾಭಿಮಾನದಿಂದ ದೂರ ಹೋಗಿ ಅಂದರೆ ನಾನು ಸತ್ತರೆ ನನ್ನ ಪಾಲಿಗೆ ಜಗತ್ತೇ ಸತ್ತಂತೆ.
ಜೀವಿಸಿದ್ದಂತೆಯೇ ಎಲ್ಲವನ್ನೂ ಮರೆತು ಒಬ್ಬ ತಂದೆಯ ನೆನಪಿರಲಿ. ಇದು ಅಶರೀರಿ ಸ್ಥಿತಿಯಾಗಿದೆ,
ಇದರಿಂದ ಆತ್ಮದ ತುಕ್ಕು ಕಳೆಯುತ್ತಾ ಹೋಗುವುದು.
ಗೀತೆ:
ರಾತ್ರಿಯ
ಪ್ರಯಾಣಿಕನೇ ಸುಸ್ತಾಗಬೇಡ..............
ಓಂ ಶಾಂತಿ.
ಮಕ್ಕಳು ನೆನಪಿನ ಯಾತ್ರೆಯಲ್ಲಿ ಕುಳಿತಿದ್ದೀರಿ. ಇದಕ್ಕೆ ಧ್ಯಾನದಲ್ಲಿ ಅಥವಾ ಶಾಂತಿಯಲ್ಲಿ
ಕುಳಿತುಕೊಳ್ಳುವುದು ಎಂದು ಹೇಳುತ್ತಾರೆ ಕೇವಲ ಶಾಂತಿಯಲ್ಲಿ ಕುಳಿತುಕೊಳ್ಳುವುದಲ್ಲ, ಅನುಭವ
ಮಾಡುತ್ತಿದ್ದೀರಿ, ಸ್ವಧರ್ಮದಲ್ಲಿ ಸ್ಥಿತರಾಗಿದ್ದೀರಿ ಆದರೆ ಯಾತ್ರೆಯಲ್ಲಿಯೂ ಇದ್ದೀರಿ, ಈ
ಯಾತ್ರೆಯನ್ನು ಕಲಿಸುವಂತಹ ತಂದೆಯು ಜೊತೆಯಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ಆ ಬ್ರಾಹ್ಮಣರು
ದೈಹಿಕ ಯಾತ್ರೆಗೆ ಕರೆದುಕೊಂಡು ಹೋಗುವ ಮಾರ್ಗದರ್ಶಕರಾಗಿದ್ದಾರೆ. ನೀವು ಆತ್ಮಿಕ
ಬ್ರಾಹ್ಮಣರಾಗಿದ್ದೀರಿ, ಬ್ರಾಹ್ಮಣ ವರ್ಣ ಅಥವಾ ಕುಲವೆಂದು ಹೇಳುತ್ತಾರೆ. ಈಗ ಮಕ್ಕಳು ನೆನಪಿನ
ಯಾತ್ರೆಯಲ್ಲಿ ಕುಳಿತಿದ್ದೀರಿ, ಅನ್ಯ ಸತ್ಸಂಗಗಳಲ್ಲಿ ಅವರು ಕುಳಿತುಕೊಂಡರೂ ಸಹ ಗುರುವಿನ ನೆನಪು
ಬರುವುದು. ಗುರುಗಳು ಬಂದು ಪ್ರವಚನವನ್ನು ತಿಳಿಸಲಿ ಎಂದು ಬುದ್ಧಿಯಲ್ಲಿರುತ್ತದೆ. ಅದೆಲ್ಲವೂ
ಭಕ್ತಿಮಾರ್ಗವಾಗಿದೆ, ಇದು ನೆನಪಿನ ಯಾತ್ರೆಯಾಗಿದೆ, ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ. ನೀವು
ತುಕ್ಕನ್ನು ಇಳಿಸಿಕೊಳ್ಳಲು ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ. ತಂದೆಯ ಆದೇಶವಾಗಿದೆ -
ನೆನಪಿನಿಂದಲೇ ತುಕ್ಕು ಇಳಿಯುವುದು ಏಕೆಂದರೆ ನಾನೇ ಪತಿತ-ಪಾವನನಾಗಿದ್ದೇನೆ. ನಾನು ಯಾರದೇ
ನೆನಪಿನಿಂದ ಬರುವುದಿಲ್ಲ. ನಾನು ಬರುವ ಸಮಯವೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಯಾವಾಗ ಪತಿತ
ಪ್ರಪಂಚವು ಪರಿವರ್ತನೆಯಾಗಿ ಪಾವನ ಪ್ರಪಂಚವಾಗಬೇಕೋ, ಆದಿ ಸನಾತನ ದೇವಿ-ದೇವತಾ ಧರ್ಮವು ಯಾವುದು
ಪ್ರಾಯಃಲೋಪವಾಗಿದೆಯೋ ಅದನ್ನು ಪುನಃ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತೇನೆ. ಈ
ಬ್ರಹ್ಮಾರವರಿಗಾಗಿಯೇ ತಿಳಿಸಲಾಗಿದೆ - ಬ್ರಹ್ಮಾ ಸೋ ವಿಷ್ಣು, ಸೆಕೆಂಡಿನಲ್ಲಿ ಆಗುತ್ತಾರೆ ಮತ್ತೆ
ವಿಷ್ಣುವಿನಿಂದ ಬ್ರಹ್ಮಾನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತದೆ. ಇವೂ ಸಹ ಬುದ್ಧಿಯಿಂದ
ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಶೂದ್ರರಾಗಿದ್ದವರೇ ಈಗ ಬ್ರಾಹ್ಮಣ ವರ್ಣದಲ್ಲಿ ಬಂದಿದ್ದೀರಿ.
ನೀವು ಬ್ರಾಹ್ಮಣರಾಗುತ್ತೀರಿ, ಆಗ ನಿಮ್ಮಲ್ಲಿರುವ ತುಕ್ಕು ತೆಗೆಯಲು ಶಿವ ತಂದೆಯು ಬ್ರಹ್ಮಾರವರ
ಮೂಲಕ ನಿಮಗೆ ಈ ನೆನಪಿನ ಯಾತ್ರೆಯನ್ನು ಕಲಿಸಿ ಕೊಡುತ್ತಾರೆ. ಈ ರಚನೆಯ ಚಕ್ರವು ಹೇಗೆ ಸುತ್ತುತ್ತದೆ
ಎಂಬುದನ್ನಂತೂ ತಿಳಿದುಕೊಂಡಿರಿ. ಇದರಲ್ಲಿ ನಿಧಾನವಾಗುವುದಿಲ್ಲ. ಈಗ ಇರುವುದೂ ಸಹ ಕಲಿಯುಗವೇ, ಈಗ
ಕಲಿಯುಗದ ಆದಿಯೆಂದು ಅವರು ಕೇವಲ ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇದು ಕಲಿಯುಗದ
ಅಂತ್ಯವಾಗಿದೆ, ಘೋರ ಅಂಧಕಾರವಿದೆ. ನಿಮಗೆ ಇವೆಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ.
ನೀವು ಮಕ್ಕಳು
ಮುಂಜಾನೆಯಲ್ಲಿ ಕುಳಿತುಕೊಳ್ಳುತ್ತೀರೆಂದರೆ ನೆನಪಿನಲ್ಲಿ ಕುಳಿತುಕೊಳ್ಳಿ. ಇಲ್ಲದಿದ್ದರೆ ಮಾಯೆಯ
ಬಿರುಗಾಳಿ ಬರುತ್ತದೆ. ಉದ್ಯೋಗ-ವ್ಯವಹಾರಗಳ ಕಡೆ ಬುದ್ಧಿಯೋಗವು ಹೋಗುತ್ತದೆ. ಇದೆಲ್ಲವೂ ಹೊರಗಿನ
ಪಂಚಾಯಿತಿ ಅಲ್ಲವೆ. ಹೇಗೆ ಜೇಡರ ಹುಳು ಎಷ್ಟೊಂದು ಜಾಲವನ್ನು ಕಟ್ಟುತ್ತದೆ. ಎಲ್ಲವನ್ನೂ
ಆವರಿಸಿಕೊಳ್ಳುತ್ತದೆ. ದೇಹದ ಪ್ರಪಂಚವು ಎಷ್ಟೊಂದಿದೆ, ಚಿಕ್ಕಪ್ಪ, ದೊಡ್ಡಪ್ಪ, ಗುರು-ಗೋಸಾಯಿ.....
ಎಷ್ಟು ದೊಡ್ಡ ಜಾಲವು ಕಂಡುಬರುತ್ತದೆ. ದೇಹಸಹಿತವಾಗಿ ಇದೆಲ್ಲವನ್ನೂ ದೂರಸರಿಸಬೇಕಾಗಿದೆ. ಒಂಟಿ
ದೇಹೀ ಆಗಬೇಕಾಗಿದೆ. ಮನುಷ್ಯರು ಶರೀರವನ್ನು ಬಿಟ್ಟಾಗ ಎಲ್ಲವನ್ನೂ ಮರೆತು ಹೋಗುತ್ತಾರೆ. ತಾವು
ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ. ಈ ಪ್ರಪಂಚವು ಸಮಾಪ್ತಿಯಾಗಲಿದೆ ಎಂಬ ಜ್ಞಾನವು
ಬುದ್ಧಿಯಲ್ಲಿದೆ. ತಂದೆಯು ತಿಳಿಸುತ್ತಾರೆ - ಜ್ಞಾನವನ್ನು ಹೇಳಲು ಬರದಿದ್ದರೆ ಕೇವಲ ನೆನಪು ಮಾಡಿ.
ಹೇಗೆ ಈ ಬ್ರಹ್ಮಾ ತಂದೆಯು ತಂದೆಯನ್ನು ನೆನಪು ಮಾಡುತ್ತಾರೆ ಕನ್ಯೆಯು ಪತಿಯನ್ನು ನೆನಪು
ಮಾಡುತ್ತಾಳೆ ಏಕೆಂದರೆ ಪತಿಯೇ ಪರಮೇಶ್ವರನಾಗಿ ಬಿಡುತ್ತಾರೆ ಆದ್ದರಿಂದ ತಂದೆಯೊಂದಿಗಿನ ಬುದ್ಧಿಯು
ಪತಿಯ ಕಡೆಗೆ ಹೊರಟು ಹೋಗುತ್ತದೆ. ಇಲ್ಲಂತೂ ಇವರು ಪತಿಯರಿಗೂ ಪತಿ ವರನಾಗಿದ್ದಾರಲ್ಲವೆ. ನೀವೆಲ್ಲರೂ
ವಧುಗಳಾಗಿದ್ದೀರಿ, ಎಲ್ಲರೂ ಭಗವಂತನ ಭಕ್ತಿ ಮಾಡುತ್ತಾರೆ. ಎಲ್ಲಾ ಭಕ್ತಿನಿಯರು ರಾವಣನ
ಬಂಧನದಲ್ಲಿದ್ದಾರೆ ಅಂದಾಗ ಅವಶ್ಯವಾಗಿ ತಂದೆಗೆ ದಯೆ ಬರುತ್ತದೆಯಲ್ಲವೆ. ತಂದೆಯು
ದಯಾಹೃದಯಿಯಾಗಿದ್ದಾರೆ, ಅವರಿಗೇ ದಯಾ ಸಾಗರನೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಗುರುಗಳಂತೂ ಅನೇಕ
ಪ್ರಕಾರದವರಿದ್ದಾರೆ. ಯಾರು ಸ್ವಲ್ಪ ಶಿಕ್ಷಣ ಕೊಡುವರೋ ಅವರಿಗೆ ಗುರುವೆಂದು ಹೇಳಿ ಬಿಡುತ್ತಾರೆ.
ಇಲ್ಲಂತೂ ತಂದೆಯು ಸನ್ಮುಖದಲ್ಲಿ ರಾಜಯೋಗವನ್ನು ಕಲಿಸುತ್ತಾರೆ, ಪರಮಾತ್ಮನ ಹೊರತು ಮತ್ತ್ಯಾರಿಗೂ
ರಾಜಯೋಗವನ್ನು ಕಲಿಸುವುದು ಬರುವುದೇ ಇಲ್ಲ. ಪರಮಾತ್ಮನೇ ಬಂದು ರಾಜಯೋಗವನ್ನು ಕಲಿಸಿದ್ದರು ಮತ್ತೆ
ಅದರಿಂದೇನಾಯಿತು? ಇದು ಯಾರಿಗೂ ತಿಳಿದಿಲ್ಲ. ಗೀತೆಯ ಪ್ರಮಾಣವನ್ನು ಅನೇಕರು ಕೊಡುತ್ತಾರೆ.
ಚಿಕ್ಕಕುಮಾರಿಯರೂ ಸಹ ಗೀತೆಯನ್ನು ಕಂಠಪಾಠ ಮಾಡಿಕೊಳ್ಳುತ್ತಾರೆ ಆಗ ಅವರದು ಸ್ವಲ್ಪ
ಮಹಿಮೆಯಾಗುತ್ತದೆ. ಗೀತೆಯೇನೂ ಮರೆಯಾಗಿಲ್ಲ, ಗೀತೆಗೆ ಬಹಳ ಮಹಿಮೆಯಿದೆ. ಗೀತಾ ಜ್ಞಾನದಿಂದಲೇ
ತಂದೆಯು ಇಡೀ ಪ್ರಪಂಚವನ್ನು ಪರಿವರ್ತನೆ ಮಾಡುತ್ತಾರೆ. ನಿಮ್ಮ ಕಾಯವನ್ನು ಕಲ್ಪತರು, ಕಲ್ಪವೃಕ್ಷದ
ಸಮಾನ ಅಥವಾ ಅಮರವನ್ನಾಗಿ ಮಾಡಿ ಬಿಡುತ್ತಾರೆ.
ನೀವು ಮಕ್ಕಳು ತಂದೆಯ
ನೆನಪಿನಲ್ಲಿರುತ್ತೀರಿ, ತಂದೆಯ ಆಹ್ವಾನ ಮಾಡುವುದಿಲ್ಲ. ನೀವು ತಂದೆಯ ನೆನಪಿನಲ್ಲಿದ್ದು ಉನ್ನತಿ
ಮಾಡಿಕೊಳ್ಳುತ್ತಿದ್ದೀರಿ. ತಂದೆಯ ಆದೇಶದಂತೆ ನಡೆಯುವ ಉಮ್ಮಂಗವೂ ಇರಬೇಕು. ನಾವು ಶಿವ ತಂದೆಯನ್ನು
ನೆನಪು ಮಾಡಿಯೇ ಭೋಜನವನ್ನು ಸ್ವೀಕರಿಸುತ್ತೇವೆ ಅಂದರೆ ಶಿವ ತಂದೆಯ ಜೊತೆ ಸೇವಿಸುತ್ತೇವೆ.
ಅಂಗಡಿಯಲ್ಲಿಯೂ ಅಲ್ಪಸ್ವಲ್ಪ ಸಮಯವು ಸಿಕ್ಕಿಯೇ ಸಿಗುತ್ತದೆ. ತಂದೆಗೆ ಪತ್ರ ಬರೆಯುತ್ತಾರೆ,
ಕುರ್ಚಿಯ ಮೇಲೆ ಕುಳಿತುಕೊಂಡಾಗ ನೆನಪಿನಲ್ಲಿ ಕುಳಿತು ಬಿಡುತ್ತೇವೆ. ಅಧಿಕಾರಿಗಳು ಬಂದು
ನೋಡುತ್ತಾರೆ, ಆಗ ಕುಳಿತು-ಕುಳಿತಿದ್ದಂತೆಯೇ ಇವರು ಮಾಯವಾಗಿ ಬಿಡುತ್ತಾರೆ ಅರ್ಥಾತ್ ಅಶರೀರಿಯಾಗಿ
ಬಿಡುತ್ತಾರೆ. ಕೆಲವರ ಕಣ್ಣುಗಳು ಮುಚ್ಚಲ್ಪಡುತ್ತವೆ, ಇನ್ನೂ ಕೆಲವರ ಕಣ್ಣುಗಳು ತೆರೆದಿರುತ್ತವೆ.
ಇನ್ನೂ ಕೆಲವರು ಈ ರೀತಿ ಕುಳಿತಿರುತ್ತಾರೆ, ಅವರಿಗೆ ಏನೂ ಕಾಣುವುದಿಲ್ಲ. ಹೇಗೆ ಮಾಯವಾದಂತೆ
ಇರುತ್ತಾರೆ ಅಂದರೆ ತಂದೆಯು ಅವರ ಬುದ್ಧಿಯ ದಾರವನ್ನು ಸೆಳೆದರು, ಅವರು ಮೋಜಿನಲ್ಲಿ
ಕುಳಿತಿರುತ್ತಾರೆ. ಅವರೊಂದಿಗೆ ನಿಮಗೆ ಏನಾಯಿತೆಂದರೆ ಯಾರಾದರೂ ಕೇಳುತ್ತಾರೆ ಆಗ ನಾವು ತಂದೆಯ
ನೆನಪಿನಲ್ಲಿ ಕುಳಿತಿದ್ದೆವು ಎಂದು ಹೇಳುತ್ತಾರೆ. ನಾವು ತಂದೆಯ ಬಳಿಗೆ ಹೋಗಬೇಕೆಂದು
ಬುದ್ಧಿಯಲ್ಲಿರುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗುವುದರಿಂದ ನೀವು
ನನ್ನ ಬಳಿಗೆ ಬಂದು ಬಿಡುತ್ತೀರಿ. ಪವಿತ್ರರಾಗದೇ ಅಲ್ಲಿ ಹೋಗಲು ಸಾಧ್ಯವಿಲ್ಲ ಅಂದಮೇಲೆ ಈಗ
ಪವಿತ್ರರಾಗುವುದು ಹೇಗೆ? ಅದನ್ನು ತಂದೆಯೇ ತಿಳಿಸುತ್ತಾರೆ, ಮನುಷ್ಯರು ತಿಳಿಸಲು ಸಾಧ್ಯವಿಲ್ಲ.
ನೀವು ಅಲ್ಪಸ್ವಲ್ಪ ತಿಳಿದುಕೊಂಡಿದ್ದರೆ ಅನ್ಯರ ಕಲ್ಯಾಣವನ್ನೂ ಮಾಡುವಿರಿ. ನೀವು ಅನ್ಯರ ಕಲ್ಯಾಣ
ಮಾಡುವ ತಂದೆಯ ಪರಿಚಯವನ್ನು ಕೊಡುವ ಪುರುಷಾರ್ಥವನ್ನು ಅವಶ್ಯವಾಗಿ ಮಾಡಬೇಕಾಗಿದೆ.
ಭಕ್ತಿಮಾರ್ಗದಲ್ಲಿಯೂ ಸಹ ಓ ಗಾಡ್ ಫಾದರ್, ದಯೆ ತೋರಿಸಿ ಎಂದು ಹೇಳಿ ನೆನಪು ಮಾಡುತ್ತಾರೆ. ಹೀಗೆ
ಕೂಗುವುದು ಒಂದು ಹವ್ಯಾಸವಾಗಿ ಬಿಟ್ಟಿದೆ. ತಂದೆಯು ನೀವು ಮಕ್ಕಳನ್ನು ತಮ್ಮ ಸಮಾನ
ಕಲ್ಯಾಣಕಾರಿಗಳನ್ನಾಗಿ ಮಾಡುತ್ತಾರೆ. ಮಾಯೆಯು ಎಲ್ಲರನ್ನೂ ಎಷ್ಟು ಬುದ್ಧಿಹೀನರನ್ನಾಗಿ ಮಾಡಿ
ಬಿಟ್ಟಿದೆ. ಲೌಕಿಕ ತಂದೆಯೂ ಸಹ ಮಕ್ಕಳ ನಡವಳಿಕೆಯು ಸರಿಯಿಲ್ಲದಿರುವುದನ್ನು ನೋಡಿದರೆ ನೀನು
ಬುದ್ಧಿಹೀನನಾಗಿದ್ದೀಯಾ ಎಂದು ಹೇಳುತ್ತಾರೆ. ಒಂದು ವರ್ಷದಲ್ಲಿಯೇ ತಂದೆಯ ಎಲ್ಲಾ ಆಸ್ತಿಯನ್ನು
ಕಳೆದು ಬಿಡುತ್ತಾರೆ. ಅದೇರೀತಿ ಬೇಹದ್ದಿನ ತಂದೆಯೂ ಸಹ ಹೇಳುತ್ತಾರೆ - ನಿಮ್ಮನ್ನು ಎಷ್ಟು
ಶ್ರೇಷ್ಠರನ್ನಾಗಿ ಮಾಡಿದ್ದೆ, ಈಗ ನಿಮ್ಮ ಚಲನೆಯನ್ನಾದರೂ ನೋಡಿಕೊಳ್ಳಿ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಇದು ಎಷ್ಟು ಅದ್ಭುತವಾದ ಆಟವಾಗಿದೆ. ಭಾರತದ ಎಷ್ಟೊಂದು ಅವನತಿಯಾಗಿ
ಬಿಡುತ್ತದೆ. ಇದು ಭಾರತವಾಸಿಗಳ ಅವನತಿಯಾಗಿದೆ. ನಾವು ಬಹಳ ಕೆಳಗಿಳಿದಿದ್ದೇವೆ, ಕಲಿಯುಗೀ
ತಮೋಪ್ರಧಾನರಾಗಿದ್ದೇವೆ ಎಂಬುದನ್ನು ಅವರು ತಿಳಿದುಕೊಳ್ಳುವುದೇ ಇಲ್ಲ. ಭಾರತವು ಸ್ವರ್ಗವಾಗಿತ್ತು
ಅರ್ಥಾತ್ ಮನುಷ್ಯರು ಸ್ವರ್ಗವಾಸಿಗಳಾಗಿದ್ದರು. ಈಗ ಅದೇ ಮನುಷ್ಯರು ನರಕವಾಸಿಗಳಾಗಿದ್ದಾರೆ. ಈ
ಜ್ಞಾನವು ಯಾರಲ್ಲಿಯೂ ಇಲ್ಲ. ಬ್ರಹ್ಮಾ ತಂದೆಗೂ ಸಹ ತಿಳಿದಿರಲಿಲ್ಲ, ಈಗ ಬುದ್ಧಿಯಲ್ಲಿ ಚಮತ್ಕಾರ
ಬಂದಿದೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಏಣಿಯನ್ನು ಅವಶ್ಯವಾಗಿ
ಕೆಳಗಿಳಿಯಬೇಕಾಗುವುದು. ಮೇಲೇರಲು ಸ್ಥಳವು ಇಲ್ಲ, ಇಳಿಯುತ್ತಾ-ಇಳಿಯುತ್ತಾ ಪತಿತರಾಗಬೇಕಾಗಿದೆ. ಈ
ಮಾತು ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆಯು ನೀವು ಮಕ್ಕಳಿಗೆ ತಿಳಿಸಿದ್ದಾರೆ, ಮತ್ತೆ ನೀವು
ಭಾರತವಾಸಿಗಳಿಗೆ ತಿಳಿಸುತ್ತೀರಿ - ನೀವು ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಯಾಗಿದ್ದೀರಿ.
ನಿಮಗೇ 84 ಜನ್ಮಗಳಿದೆ. ಪುನರ್ಜನ್ಮವನ್ನಂತೂ ಎಲ್ಲರೂ ಒಪ್ಪುತ್ತಾರಲ್ಲವೆ ಅಂದಾಗ ಎಲ್ಲರೂ
ಅವಶ್ಯವಾಗಿ ಕೆಳಗಿಳಿಯಬೇಕಾಗಿದೆ. ಎಷ್ಟು ಪುನರ್ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನೂ ಸಹ
ತಂದೆಯು ತಿಳಿಸಿದ್ದಾರೆ. ಈ ಸಮಯದಲ್ಲಿ ನೀವು ಅನುಭವ ಮಾಡುತ್ತೀರಿ - ನಾವು ಪಾವನ
ದೇವಿ-ದೇವತೆಗಳಾಗಿದ್ದೆವು ನಂತರ ರಾವಣನು ಪತಿತರನ್ನಾಗಿ ಮಾಡಿದನು. ಮತ್ತೆ ಶೂದ್ರರಿಂದ
ದೇವತೆಗಳನ್ನಾಗಿ ಮಾಡುವುದಕ್ಕಾಗಿ ತಂದೆಯೇ ಬಂದು ಓದಿಸಬೇಕಾಗುತ್ತದೆ. ತಂದೆಗೆ ಮುಕ್ತಿದಾತ,
ಮಾರ್ಗದರ್ಶಕನೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಈಗ ಆ ಸಮಯವು ಬಹು
ಬೇಗನೆ ಬರಲಿದೆ. ಯಾವಾಗ ಎಲ್ಲರಿಗೂ ಸಹ ಇದು ಅರ್ಥವಾಗುವುದು, ಹೇಗಿದ್ದವರು ಏನಾಗಿ ಬಿಟ್ಟಿದ್ದಾರೆ!
ನಾಟಕವು ಹೇಗೆ ಮಾಡಲ್ಪಟ್ಟಿದೆ. ನಾವು ಲಕ್ಷ್ಮೀ-ನಾರಾಯಣರಂತೆ ಆಗಬಹುದೆಂದು ಯಾರಿಗೂ ಸ್ವಪ್ನದಲ್ಲಿಯೂ
ಇರಲಿಲ್ಲ. ತಂದೆಯು ಎಷ್ಟೊಂದು ಸ್ಮೃತಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ತಂದೆಯಿಂದ ಈಗ
ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ಶ್ರೀಮತದಂತೆ ನಡೆಯಬೇಕಾಗಿದೆ. ನೆನಪಿನ ಯಾತ್ರೆಯ ಅಭ್ಯಾಸ
ಮಾಡಬೇಕಾಗಿದೆ. ನಿಮಗೆ ತಿಳಿದಿದೆ - ಪಾದ್ರಿಗಳು ತಿರುಗಾಡಲು ಹೋಗುತ್ತಾರೆಂದರೆ ಎಷ್ಟೊಂದು
ಶಾಂತಿಯುತವಾಗಿ ನಡೆಯುತ್ತಾರೆ, ಅವರು ಕ್ರಿಸ್ತನ ನೆನಪಿನಲ್ಲಿರುತ್ತಾರೆ. ಕ್ರಿಸ್ತನ ಜೊತೆ ಅವರ
ಪ್ರೀತಿಯಿದೆ. ನೀವು ಆತ್ಮಿಕ ಮಾರ್ಗದರ್ಶಕರ ಪ್ರೀತಿ ಬುದ್ಧಿಯು ಪರಮಪ್ರಿಯ, ಪರಮಪಿತ ಪರಮಾತ್ಮನ
ಜೊತೆ ಇದೆ. ಇದನ್ನೂ ತಿಳಿದುಕೊಂಡಿದ್ದೀರಿ - ನಂಬರ್ವಾರ್ ಪುರುಷಾರ್ಥದನುಸಾರ ಕಲ್ಪದ ಹಿಂದಿನ ತರಹ
ರಾಜಧಾನಿಯು ಅವಶ್ಯವಾಗಿ ಸ್ಥಾಪನೆಯಾಗುವುದು. ಯಾರೆಷ್ಟು ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆಯುವರೋ
ಅವರೇ ಪಡೆಯುವರು. ತಂದೆಯು ಬಹಳ ಒಳ್ಳೊಳ್ಳೆಯ ಮತವನ್ನು ಕೊಡುತ್ತಾರೆ, ಆದರೂ ಸಹ ಗ್ರಹಚಾರವು ಈ ರೀತಿ
ಕುಳಿತುಕೊಳ್ಳುತ್ತದೆ ಶ್ರೀಮತದಂತೆ ನಡೆಯುವುದೇ ಇಲ್ಲ. ನಿಮಗೆ ತಿಳಿದಿದೆ - ಶ್ರೀಮತದಂತೆ
ನಡೆಯುವುದರಲ್ಲಿಯೇ ವಿಜಯವಿದೆ. ನಿಶ್ಚಯದಲ್ಲಿಯೇ ವಿಜಯವಿದೆ. ತಂದೆಯು ತಿಳಿಸುತ್ತಾರೆ - ನೀವು
ನನ್ನ ಮತದಂತೆ ನಡೆಯಿರಿ. ಈ ಬ್ರಹ್ಮಾರವರು ಮತ ಕೊಡುತ್ತಾರೆಂದು ಏಕೆ ತಿಳಿಯುತ್ತೀರಿ? ಯಾವಾಗಲೂ
ಶಿವ ತಂದೆಯು ಸಲಹೆ ನೀಡುತ್ತಾರೆಂದೇ ತಿಳಿಯಿರಿ. ಅವರಂತೂ ಸೇವೆಯ ಮತವನ್ನೇ ಕೊಡುತ್ತಾರೆ. ಬಾಬಾ, ಈ
ವ್ಯಾಪಾರ ಮಾಡುವುದೇ? ಎಂದು ಕೆಲವರು ಕೇಳುತ್ತಾರೆ. ತಂದೆಯು ಈ ಮಾತುಗಳಿಗಾಗಿ ಮತ ಕೊಡುವುದಿಲ್ಲ.
ಹೇ ಪತಿತ-ಪಾವನ, ಬಂದು ನಮ್ಮನ್ನು ಪಾವನ ಮಾಡಿ ಎಂದೇ ನನ್ನನ್ನು ಕರೆಯುತ್ತೀರಿ ಆದ್ದರಿಂದ ನಾನು ಆ
ಯುಕ್ತಿಯನ್ನು ತಿಳಿಸುತ್ತೇನೆ. ಇದು ಬಹಳ ಸಹಜವಾಗಿದೆ. ನಿಮ್ಮ ಹೆಸರೇ ಆಗಿದೆ – ಗುಪ್ತ ಸೇನೆ.
ಇದಕ್ಕೆ ಅವರು ಸ್ಥೂಲ ಬಾಣ ಇತ್ಯಾದಿಗಳನ್ನು ತೋರಿಸಿದ್ದಾರೆ ಆದರೆ ಇದರಲ್ಲಿ ಬಾಣ ಇತ್ಯಾದಿಗಳ
ಮಾತಿಲ್ಲ. ಇದೆಲ್ಲವೂ ಭಕ್ತಿ ಮಾರ್ಗವಾಗಿದೆ.
ತಂದೆಯು ಬಂದು ಸತ್ಯವಾದ
ಮಾರ್ಗವನ್ನು ತಿಳಿಸುತ್ತಾರೆ, ಇದರಿಂದ ನೀವು ಅರ್ಧ ಕಲ್ಪ ಸತ್ಯ ಖಂಡದಲ್ಲಿ ಹೋಗುತ್ತೀರಿ. ಅಲ್ಲಿ
ಮತ್ತ್ಯಾವುದೇ ಖಂಡವಿರುವುದಿಲ್ಲ. ಯಾರಿಗೆ ತಿಳಿಸಿದರೂ ಸಹ ಅವರು ಒಪ್ಪುವುದೇ ಇಲ್ಲ. ಕೇವಲ ಭಾರತವೇ
ಇರಲು ಹೇಗೆ ಸಾಧ್ಯ ಎನ್ನುತ್ತಾರೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು,
ಆಗ ಮತ್ತ್ಯಾವುದೇ ಧರ್ಮಗಳಿರಲಿಲ್ಲ ನಂತರ ವೃಕ್ಷವು ವೃದ್ಧಿ ಹೊಂದುತ್ತಾ ಇರುತ್ತದೆ. ನೀವು ಕೇವಲ
ತಮ್ಮ ತಂದೆಯನ್ನು, ತಮ್ಮ ಧರ್ಮ-ಕರ್ಮವನ್ನು ಮರೆತು ಹೋಗಿದ್ದೀರಿ. ಒಂದುವೇಳೆ ತನ್ನನ್ನು
ದೇವಿ-ದೇವತಾ ಧರ್ಮದವನೆಂದು ತಿಳಿದುಕೊಂಡಿದ್ದೇ ಆದರೆ ಅಶುದ್ಧ ಪದಾರ್ಥಗಳನ್ನು ಸೇವಿಸುವುದೇ ಇಲ್ಲ,
ಆದರೂ ಸೇವಿಸುತ್ತಾರೆ ಏಕೆಂದರೆ ಆ ಗುಣವಿಲ್ಲ. ಆ ಕಾರಣ ತಮ್ಮನ್ನು ಹಿಂದೂಗಳೆಂದು
ಹೇಳಿಕೊಳ್ಳುತ್ತಾರೆ. ಇಲ್ಲವಾದರೆ ನಮ್ಮ ಹಿರಿಯರು ಇಷ್ಟು ಪವಿತ್ರರಾಗಿದ್ದಾರೆ ಮತ್ತು ನಾವು
ಪತಿತರಾಗಿ ಬಿಟ್ಟಿದ್ದೇವೆ ಎಂದು ಸಂಕೋಚವಾಗಬೇಕು ಆದರೆ ತಮ್ಮ ಧರ್ಮವನ್ನೇ ಮರೆತು ಬಿಟ್ಟಿದ್ದಾರೆ.
ನೀವೀಗ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಯಾವುದೇ ಮಾತಿದ್ದರೆ
ನೀವು ಇದನ್ನು ಹೇಳಬಹುದು - ಈ ಮಾತನ್ನು ತಂದೆಯು ನಮಗೆ ಇನ್ನೂ ತಿಳಿಸಿಲ್ಲ. ಇಲ್ಲದಿದ್ದರೆ ವ್ಯರ್ಥ
ಮಾತುಗಳಲ್ಲಿ ತಬ್ಬಿಬ್ಬಾಗುತ್ತಾರೆ ಆದ್ದರಿಂದ ತಿಳಿಸಿ - ನಾವಿನ್ನೂ ಓದುತ್ತಿದ್ದೇವೆ, ಎಲ್ಲವನ್ನೂ
ಈಗಲೇ ಅರಿತುಕೊಂಡರೆ ಮತ್ತೆ ವಿನಾಶವಾಗಿ ಬಿಡುವುದು ಆದರೆ ಇಲ್ಲ ಇನ್ನೂ ಸಮಯವಿದೆ, ನಾವು
ಓದುತ್ತಿದ್ದೇವೆ. ಅಂತಿಮದಲ್ಲಿ ಸಂಪೂರ್ಣ ಪವಿತ್ರರಾಗಿ ಬಿಡುತ್ತೇವೆ. ನಂಬರ್ವಾರ್
ಪುರುಷಾರ್ಥದನುಸಾರ ತುಕ್ಕು ಕಳೆಯುತ್ತಾ ಹೋಗುವುದು, ಸತೋಪ್ರಧಾನರಾಗಿ ಬಿಡುತ್ತೀರಿ ಮತ್ತೆ ಈ ಪತಿತ
ಪ್ರಪಂಚದ ವಿನಾಶವಾಗುವುದು. ಪರಮಾತ್ಮನು ಎಲ್ಲಿಯೋ ಅವಶ್ಯವಾಗಿ ಬಂದಿದ್ದಾರೆ, ಮತ್ತೆ
ಗುಪ್ತವಾಗಿದ್ದಾರೆ ಎಂಬ ಮಾತನ್ನು ಇತ್ತೀಚೆಗೆ ಕೆಲವರು ಹೇಳುತ್ತಾರೆ. ಸಮಯವಂತೂ ಖಂಡಿತವಾಗಿ
ವಿನಾಶದ ಸಮಯವಾಗಿದೆಯಲ್ಲವೆ. ತಂದೆಯು ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಇವರು ಹಿಂತಿರುಗಿ
ಕರೆದುಕೊಂಡು ಹೋಗುತ್ತಾರೆ ಆಗ ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ ಶರೀರವನ್ನು ಬಿಡುತ್ತಾರೆ. ಇದನ್ನೂ
ತಿಳಿದುಕೊಂಡಿದ್ದಾರೆ - ಎಲ್ಲರೂ ಏಕರಸವಾಗಿ ನೆನಪಿನಲ್ಲಿ ಕುಳಿತುಕೊಳ್ಳುವುದಿಲ್ಲ. ಕೆಲವರ ಯೋಗವು
ಅಕ್ಯುರೇಟ್ ಆಗಿ ಇರುತ್ತದೆ. ಕೆಲವರದು ಅರ್ಧ ಗಂಟೆ, ಕೆಲವರದು 15 ನಿಮಿಷ. ಇನ್ನೂ ಕೆಲವರಂತೂ ಒಂದು
ನಿಮಿಷವೂ ನೆನಪಿನಲ್ಲಿರುವುದಿಲ್ಲ. ನಾವು ಇಡೀ ಸಮಯ ತಂದೆಯ ನೆನಪಿನಲ್ಲಿರುತ್ತೇವೆ ಎಂದು ಕೆಲವರು
ಹೇಳುತ್ತಾರೆ ಅಂದಮೇಲೆ ಅವರ ಚಹರೆಯು ಸದಾ ಖುಷಿಯಿಂದ ಹೊಳೆಯುತ್ತಿರುವುದು. ಇಂತಹ ಮಕ್ಕಳಿಗೆ
ಅತೀಂದ್ರಿಯ ಸುಖವಿರುತ್ತದೆ. ಬುದ್ಧಿಯು ಎಲ್ಲಿಯೂ ಅಲೆದಾಡುವುದಿಲ್ಲ. ಅವರು ಸುಖದ ಅನುಭವ
ಮಾಡುತ್ತಾರೆ. ಬುದ್ಧಿಯೂ ಸಹ ಹೇಳುತ್ತದೆ - ಒಬ್ಬ ಪ್ರಿಯತಮನ ನೆನಪಿನಲ್ಲಿ ಕುಳಿತಿದ್ದರೆ ಎಷ್ಟೊಂದು
ತುಕ್ಕು ಕಳೆಯಬಹುದು ಮತ್ತು ಅದೇ ಹವ್ಯಾಸವಾಗಿ ಬಿಡುವುದು. ನೆನಪಿನ ಯಾತ್ರೆಯಿಂದ ನೀವು ಸದಾ
ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ, ಚಕ್ರದ ನೆನಪೂ ಬಂದು ಬಿಡುತ್ತದೆ. ಕೇವಲ
ನೆನಪಿನಲ್ಲಿರುವುದೇ ಪರಿಶ್ರಮವಾಗಿದೆ. ಬುದ್ಧಿಯಲ್ಲಿ ಚಕ್ರವೂ ಸುತ್ತುತ್ತಿರುತ್ತದೆ.
ನೀವೀಗ ಮಾ|| ಬೀಜ
ರೂಪರಾಗಿದ್ದೀರಿ, ನೆನಪಿನ ಜೊತೆಗೆ ಸ್ವದರ್ಶನ ಚಕ್ರವನ್ನೂ ತಿರುಗಿಸಬೇಕಾಗಿದೆ. ನೀವು ಭಾರತವಾಸಿಗಳೇ
ಲೈಟ್ಹೌಸ್ ಆಗಿದ್ದೀರಿ. ಆಧ್ಯಾತ್ಮಿಕ ಲೈಟ್ಹೌಸ್ ಆಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸುತ್ತೀರಿ.
ಅದನ್ನೂ ತಿಳಿಸಬೇಕಲ್ಲವೆ. ನೀವು ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುತ್ತೀರಿ ಆದ್ದರಿಂದ
ನೀವು ಆಧ್ಯಾತ್ಮಿಕ ಲೈಟ್ಹೌಸ್ ಆಗಿದ್ದೀರಿ. ನಿಮ್ಮ ಸ್ವದರ್ಶನ ಚಕ್ರವು ಸುತ್ತುತ್ತಿರುತ್ತದೆ.
ಹೆಸರನ್ನು ಬರೆಯಬೇಕಾಗಿದೆ ಅಂದಮೇಲೆ ತಿಳಿಸಲೂ ಬೇಕಲ್ಲವೆ. ತಂದೆಯು ತಿಳಿಸುತ್ತಿರುತ್ತಾರೆ - ನೀವು
ಸನ್ಮುಖದಲ್ಲಿ ಕುಳಿತಿದ್ದೀರಿ. ಯಾರು ತಂದೆಯ ಜೊತೆಯಿದ್ದಾರೆಯೋ ಅವರಿಗಾಗಿಯೇ ಸನ್ಮುಖದಲ್ಲಿ
ಜ್ಞಾನದ ಮಳೆಯಾಗುವುದು. ಎಲ್ಲದಕ್ಕಿಂತ ಹೆಚ್ಚಿನದಾಗಿ ಸನ್ಮುಖದಲ್ಲಿ ಕೇಳುವಾಗ ಆನಂದವಾಗುತ್ತದೆ,
ಎರಡನೆಯದಾಗಿ ಕ್ಯಾಸೆಟ್ನ ಮೂಲಕ ಕೇಳುವುದು, ಮೂರನೆಯದಾಗಿ ಮುರುಳಿ ಓದುವುದು. ಶಿವ ತಂದೆಯು
ಬ್ರಹ್ಮಾರವರ ಮೂಲಕ ಎಲ್ಲವನ್ನೂ ತಿಳಿಸುತ್ತಾರೆ. ಈ ಬ್ರಹ್ಮಾರವರೂ ಸಹ ತಿಳಿದುಕೊಂಡಿದ್ದಾರಲ್ಲವೆ
ಆದರೂ ಸಹ ನೀವು ಇದನ್ನೇ ತಿಳಿದುಕೊಳ್ಳಿ - ನಮಗೆ “ಶಿವ ತಂದೆಯು ತಿಳಿಸುತ್ತಾರೆ”, ಈ ರೀತಿ
ತಿಳಿದುಕೊಳ್ಳದೇ ಇರುವ ಕಾರಣ ಬಹಳ ಉಲ್ಲಂಘನೆ ಮಾಡುತಾರೆ. ಶಿವ ತಂದೆಯು ಏನು ಹೇಳುವರು ಅದು
ಕಲ್ಯಾಣಕಾರಿಯೇ ಆಗಿದೆ. ಭಲೆ ಅಕಲ್ಯಾಣವಾಗಬಹುದು ಅದೂ ಸಹ ಕಲ್ಯಾಣದ ರೂಪದಲ್ಲಿ ಬದಲಾಗುವುದು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಪ್ರತೀ
ಆದೇಶದಂತೆ ನಡೆದು ತಮ್ಮ ಉನ್ನತಿ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ
ಪ್ರೀತಿಯನ್ನಿಡಬೇಕಾಗಿದೆ. ನೆನಪಿನಲ್ಲಿಯೇ ಭೋಜನವನ್ನು ತಯಾರಿಸಬೇಕು ಹಾಗೂ ಸ್ವೀಕರಿಸಬೇಕಾಗಿದೆ.
2. ಆತ್ಮಿಕ ಲೈಟ್ಹೌಸ್
ಆಗಿ ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಬೇಕಾಗಿದೆ. ಅವಶ್ಯವಾಗಿ ತಂದೆಯ ಸಮಾನ
ಕಲ್ಯಾಣಕಾರಿಗಳಾಗಬೇಕಾಗಿದೆ.
ವರದಾನ:
ಸದಾ ಏಕರಸ
ಸ್ಥಿತಿಯ ಆಸನದಲ್ಲಿ ಕುಳಿತಿರುವಂತಹ ಬಾಪ್ದಾದಾರವರ ಹೃದಯ ಸಿಂಹಾಸನಾಧಾರಿ ಭವ.
ಅತ್ಯಂತ ಶ್ರೇಷ್ಠವಾದ
ಸಿಂಹಾಸನವೆಂದರೆ ಬಾಪ್ದಾದಾರವರ ಹೃದಯ ಸಿಂಹಾಸನಾಧಾರಿ ಆಗುವುದಾಗಿದೆ. ಆದರೆ ಈ ಸಿಂಹಾಸನದಲ್ಲಿ
ಕುಳಿತುಕೊಳ್ಳುವುದಕ್ಕಾಗಿ ಅಚಲ, ಅಡೋಲ, ಏಕರಸ ಸ್ಥಿತಿಯ ಸಿಂಹಾಸನವಿರಬೇಕು. ಒಂದುವೇಳೆ ಈ ಸ್ಥಿತಿಯ
ಸಿಂಹಾಸನದಲ್ಲಿ ಸ್ಥಿತರಾಗದಿದ್ದರೆ ಬಾಪ್ದಾದಾರವರ ಹೃದಯವೆಂಬ ಸಿಂಹಾಸನದಲ್ಲಿಯೂ ಸ್ಥಿತರಾಗಲು
ಸಾಧ್ಯವಿಲ್ಲ. ಇದಕ್ಕಾಗಿ ತಮ್ಮ ಭೃಕುಟಿಯ ಸಿಂಹಾಸನದಲ್ಲಿ ಅಕಾಲಮೂರ್ತಿಯಾಗಿ ಸ್ಥಿತರಾಗಿ ಬಿಡಿ. ಈ
ಸಿಂಹಾಸನದಿಂದ ಮತ್ತೆ-ಮತ್ತೆ ಏರುಪೇರಾಗಬಾರದು, ಇದರಿಂದ ಬಾಪ್ದಾದಾರವರ ಹೃದಯ ಸಿಂಹಾಸನದಲ್ಲಿ
ಕುಳಿತುಕೊಳ್ಳಲು ಸಾಧ್ಯವಾಗುವುದು.
ಸ್ಲೋಗನ್:
ಶುಭ ಚಿಂತನೆಯ
ಮೂಲಕ ನಕಾರಾತ್ಮಕವನ್ನು ಸಕಾರಾತ್ಮಕದಲ್ಲಿ ಪರಿವರ್ತನೆ ಮಾಡಿರಿ.
ಅವ್ಯಕ್ತ ಸೂಚನೆ:–
ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ.
ನಿಮ್ಮ ಪ್ರತಿ ಮಾತಿನಲ್ಲಿ
ಮಧುರತೆ, ಸಂತುಷ್ಟತೆ, ಸರಳತೆಯ ನವೀನತೆಯಿರಲಿ. ಬ್ರಾಹ್ಮಣ ಆತ್ಮರ ಮಾತು ಸಾಧಾರಣ ಮಾತಾಗಬಾರದು. ಇದೇ
ಮಹಾನತೆ ಮತ್ತು ಇದೇ ನವೀನತೆಯಾಗಿದೆ. ಮಧುರ ಮಾತು, ಮಧುರ ಸಂಸ್ಕಾರ, ಮಧುರ ಸ್ವಭಾವದ ಮೂಲಕ
ಅನ್ಯರದ್ದೂ ಸಹ ಮುಖವನ್ನು ಮಧುರ ಮಾಡುತ್ತೀರುತ್ತಿರಿ. “ಸದಾ ಅಥಕ್ (ದಣಿಯದೇ ಇರುವುದು) ಭವ ಮತ್ತು
ಮಧುರ ಭವ”ದ ವರದಾನಗಳಿಂದ ಮುಂದುವರೆಯಿರಿ, ಹಾರುತ್ತ ನಡೆಯಿರಿ.