22.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ತಮ್ಮ
ಹೃದಯದ ಮೇಲೆ ಕೈಯನ್ನಿಟ್ಟು ಕೇಳಿಕೊಳ್ಳಿ - ತಂದೆಯು ಏನನ್ನು ತಿಳಿಸುತ್ತಾರೆಯೋ ಅದೆಲ್ಲವೂ ಮೊದಲು
ನಾವು ತಿಳಿದಿದ್ದೇವೆ, ಏನೆಲ್ಲವನ್ನೂ ಕೇಳಿದ್ದೀರಿ ಅದನ್ನು ಅರ್ಥ ಸಹಿತವಾಗಿ ತಿಳಿದುಕೊಂಡು
ಖುಷಿಯಲ್ಲಿರಿ"
ಪ್ರಶ್ನೆ:
ನಿಮ್ಮ ಈ
ಬ್ರಾಹ್ಮಣ ಧರ್ಮದಲ್ಲಿ ಎಲ್ಲದಕ್ಕಿಂತ ಹೆಚ್ಚು ಶಕ್ತಿಯಿದೆ - ಯಾವುದು ಮತ್ತು ಹೇಗೆ?
ಉತ್ತರ:
ನಿಮ್ಮ ಈ
ಬ್ರಾಹ್ಮಣ ಧರ್ಮದಲ್ಲಿ ಇಡೀ ವಿಶ್ವದ ಸದ್ಗತಿಯನ್ನು ಶ್ರೀಮತದಂತೆ ಮಾಡುವ ಶಕ್ತಿಯಿದೆ. ಬ್ರಾಹ್ಮಣರೇ
ಇಡೀ ವಿಶ್ವವನ್ನು ಶಾಂತವನ್ನಾಗಿ ಮಾಡುತ್ತಾರೆ. ತಾವು ಬ್ರಾಹ್ಮಣ ಕುಲಭೂಷಣರು ದೇವತೆಗಳಿಗಿಂತಲೂ ಸಹ
ಶ್ರೇಷ್ಠವಾಗಿದ್ದೀರಿ. ನಿಮಗೆ ತಂದೆಯ ಮೂಲಕ ಈ ಶಕ್ತಿಯು ಸಿಗುತ್ತದೆ. ನೀವು ಬ್ರಾಹ್ಮಣರು ತಂದೆಗೆ
ಸಹಯೋಗಿಗಳಾಗುತ್ತೀರಿ. ನಿಮಗೆ ಎಲ್ಲದಕ್ಕಿಂತ ದೊಡ್ಡ ಬಹುಮಾನ ಸಿಗುತ್ತದೆ. ನೀವು ಬ್ರಹ್ಮಾಂಡದ
ಮಾಲೀಕರು ಮತ್ತು ಇಡೀ ವಿಶ್ವದ ಮಾಲೀಕರೂ ಸಹ ಆಗುತ್ತೀರಿ.
ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಬಹಳ ಕಾಲ ಅಗಲಿ ಹೋಗಿ ಮತ್ತೆ ಸಿಕ್ಕಿರುವಂತಹ ಮಕ್ಕಳ ಪ್ರತಿ ಆತ್ಮೀಯ
ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ಆತ್ಮೀಯ ತಂದೆಯು ಪ್ರತೀ 5000 ವರ್ಷದಲ್ಲಿ ಒಮ್ಮೆಯೇ
ಬರುತ್ತಾರೆ ಎಂಬುದನ್ನು ಆತ್ಮೀಯ ಮಕ್ಕಳು ತಿಳಿದಿದ್ದೀರಿ. `ಕಲ್ಪ' ಎಂಬ ಹೆಸರನ್ನಿಡಲಾಗಿದೆ,
ಅದನ್ನು ಹೇಳಬೇಕಾಗುತ್ತದೆ. ಈ ಡ್ರಾಮಾದ ಅಥವಾ ಸೃಷ್ಟಿಯ ಆಯಸ್ಸು 5000 ವರ್ಷಗಳಾಗಿದೆ. ಈ ಮಾತನ್ನು
ಒಬ್ಬ ತಂದೆಯೇ ಕುಳಿತು ತಿಳಿಸಿ ಕೊಡುತ್ತಾರೆ. ಇದು ಎಂದೂ ಸಹ ಯಾವುದೇ ಮನುಷ್ಯರ ಬಾಯಿಂದ ಕೇಳಲು
ಸಾಧ್ಯವಿಲ್ಲ. ತಾವು ಆತ್ಮೀಯ ಮಕ್ಕಳು ಕುಳಿತಿದ್ದೀರಿ, ನಾವೆಲ್ಲಾ ಆತ್ಮಗಳ ತಂದೆಯು
ಒಬ್ಬರಾಗಿದ್ದಾರೆ ಎಂಬುದನ್ನು ತಿಳಿದಿದ್ದೀರಿ. ತಂದೆಯೇ ಮಕ್ಕಳಿಗೆ ಕುಳಿತು ತನ್ನ ಪರಿಚಯವನ್ನು
ಕೊಡುತ್ತಾರೆ. ಯಾವುದನ್ನು ಯಾವ ಮನುಷ್ಯ ಮಾತ್ರರೂ ತಿಳಿದುಕೊಂಡಿಲ್ಲ ಪರಮಾತ್ಮ ಅಥವಾ ಭಗವಂತ ಎಂತಹ
ವಸ್ತುವಾಗಿದ್ದಾರೆಂದು ಯಾರೂ ತಿಳಿದುಕೊಂಡಿಲ್ಲ. ಅವರನ್ನು ಪರಮಪಿತ ಎಂದು ಹೇಳುತ್ತಾರೆಂದರೆ ಅವರ
ಬಗ್ಗೆ ಬಹಳ ಪ್ರೀತಿಯಿರಬೇಕು. ಬೇಹದ್ದಿನ ತಂದೆಯಿದ್ದಾರೆಂದರೆ ಅವರಿಂದ ಆಸ್ತಿಯೂ ಸಹ ಸಿಗಬಹುದು. `ಹೆವೆನ್ಲೀ
ಗಾಡ್ಫಾದರ್' (ಸ್ವರ್ಗದ ರಚಯಿತ ಪರಮಪಿತ ಪರಮಾತ್ಮ) ಇಂಗ್ಲೀಷ್ನ ಅಕ್ಷರ ಚೆನ್ನಾಗಿದೆ. ಹೊಸ
ಜಗತ್ತಿಗೆ ಸ್ವರ್ಗವೆಂದು, ಹಳೆಯ ಜಗತ್ತಿಗೆ ನರಕವೆಂದು ಕರೆಯಲಾಗುತ್ತದೆ. ಸ್ವರ್ಗವನ್ನು ಯಾರೂ
ತಿಳಿದುಕೊಂಡಿಲ್ಲ. ಸನ್ಯಾಸಿಗಳಂತು ಒಪ್ಪುವುದೇ ಇಲ್ಲ. ತಂದೆಯು ಸ್ವರ್ಗದ ರಚಯಿತನೆಂದು ಅವರೆಂದೂ
ಹೇಳುವುದಿಲ್ಲ. ಸ್ವರ್ಗದ ರಚಯಿತ ಪರಮಪಿತ ಪರಮಾತ್ಮ ಎಂಬ ಅಕ್ಷರವು ಬಹಳ ಮಧುರವಾಗಿದೆ ಮತ್ತು `ಸ್ವರ್ಗ'
ಎಂಬುದು ಪ್ರಸಿದ್ಧವಾಗಿದೆ. ನೀವು ಮಕ್ಕಳ ಬುದ್ಧಿಯಲ್ಲಿ ಸ್ವರ್ಗ ಮತ್ತು ನರಕದ ಚಕ್ರವು, ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ಚಕ್ರವು ಸುತ್ತುತ್ತಿರುತ್ತದೆ. ಯಾರ್ಯಾರು ಸೇವಾಧಾರಿಗಳಿದ್ದಾರೆ, ಎಲ್ಲರೂ
ಏಕರಸವಾದ ಸೇವಾಧಾರಿಗಳಾಗುವುದಿಲ್ಲ.
ನೀವು ನಿಮ್ಮ
ರಾಜಧಾನಿಯನ್ನು ಮತ್ತೆ ಸ್ಥಾಪನೆ ಮಾಡುತ್ತಿದ್ದೀರಿ, ನಾವು ಆತ್ಮೀಯ ಮಕ್ಕಳ ತಂದೆಯ ಶ್ರೇಷ್ಠಾತಿ
ಶ್ರೇಷ್ಠ ಮತದಂತೆ ನಡೆಯುತ್ತಿದ್ದೇವೆಂದು ಹೇಳುತ್ತೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯ
ಶ್ರೀಮತವಾಗಿದೆ - ಶ್ರೀಮಧ್ ಭಗವದ್ಗೀತೆಯೂ ಸಹ ಗಾಯನ ಮಾಡಲ್ಪಟ್ಟಿದೆ. ಇದು ಮೊದಲನೆಯ ನಂಬರಿನ
ಶಾಸ್ತ್ರವಾಗಿದೆ. ತಂದೆಯ ಹೆಸರನ್ನು ಕೇಳುವುದರಿಂದಲೇ ತಕ್ಷಣ ಆಸ್ತಿಯ ನೆನಪಾಗುತ್ತದೆ.
ಪರಮಪಿತನಿಂದ ಏನು ಸಿಗುತ್ತದೆ ಎಂಬುದನ್ನು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಪ್ರಾಚೀನ ಯೋಗವೆಂದು
ಹೇಳಲಾಗುತ್ತದೆ ಆದರೆ ಪ್ರಾಚೀನ ಯೋಗವನ್ನು ಯಾರು ಕಲಿಸಿದರು? ಅವರಾದರೂ ಕೃಷ್ಣನೆಂದು ಹೇಳುತ್ತಾರೆ
ಏಕೆಂದರೆ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ತಂದೆಯೇ ರಾಜಯೋಗವನ್ನು ಕಲಿಸಿದ್ದರು,
ಇದರಿಂದ ಎಲ್ಲರೂ ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುತ್ತಾರೆಂಬುದನ್ನು ತಿಳಿದುಕೊಂಡಿದ್ದೀರಿ.
ಭಾರತದಲ್ಲಿಯೇ ಶಿವ ತಂದೆಯು ಬಂದಿದ್ದರು, ಅವರ ಜಯಂತಿಯನ್ನೂ ಸಹ ಆಚರಿಸುತ್ತಾರೆ ಆದರೆ ಗೀತೆಯಲ್ಲಿ
ಹೆಸರು ಇಲ್ಲದೇ ಇರುವುದರಿಂದ ಮಹಿಮೆಯೂ ಇಲ್ಲದಂತಾಗಿದೆ. ಯಾರಿಂದ ಇಡೀ ಜಗತ್ತಿಗೆ ಸುಖ-ಶಾಂತಿ
ಸಿಗುತ್ತದೆ, ಆ ತಂದೆಯನ್ನು ಮರೆತು ಬಿಟ್ಟಿದ್ದಾರೆ. ಇದಕ್ಕೆ ಒಂದು ತಪ್ಪಿನ ನಾಟಕವೆಂದು
ಹೇಳಲಾಗುತ್ತದೆ. ತಂದೆಯನ್ನು ತಿಳಿಯದೇ ಇರುವುದೇ ಎಲ್ಲದಕ್ಕಿಂತ ದೊಡ್ಡ ತಪ್ಪಾಗಿದೆ. ಕೆಲವೊಮ್ಮೆ
ನಾನು ರೂಪದಿಂದ ಭಿನ್ನನಾಗಿದ್ದೇನೆಂದು ಹೇಳುತ್ತಾರೆ ಮತ್ತೆ ಕೆಲವು ಕಡೆ ಮತ್ಸ್ಯಾವತಾರ,
ಕೂರ್ಮಾವತಾರ ಎಂದು ಹೇಳುತ್ತಾರೆ, ಕಲ್ಲು-ಮಣ್ಣಿನಲ್ಲಿಯೂ ಇದ್ದಾರೆಂದು ಹೇಳುತ್ತಾರೆ. ತಪ್ಪಿನಲ್ಲಿ
ತಪ್ಪುಗಳಾಗುತ್ತಾ ಹೋಗುತ್ತದೆ, ಕೆಳಗಿಳಿಯುತ್ತಾ ಬರುತ್ತಾರೆ, ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ,
ತಮೋಪ್ರಧಾನರಾಗುತ್ತಾ ಹೋಗುತ್ತಾರೆ. ಡ್ರಾಮಾದ ಪ್ಲಾನನುಸಾರ ತಂದೆಯು ಸ್ವರ್ಗದ ರಚಯಿತ, ಯಾರು
ಭಾರತವನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದರು ಅವರನ್ನು ಕಲ್ಲು-ಮಣ್ಣಿನಲ್ಲಿ ಇದ್ದಾರೆಂದು ಹೇಳಿ
ಬಿಡುತ್ತಾರೆ. ನೀವು ಏಣಿಯನ್ನು ಹೇಗೆ ಇಳಿಯುತ್ತಾ ಬಂದಿದ್ದೀರಿ ಎಂಬುದು ಯಾರಿಗೂ ಸಹ ತಿಳಿದಿಲ್ಲ.
ಡ್ರಾಮಾ ಎಂದರೇನು ಎಂದು ಕೇಳುತ್ತಿರುತ್ತಾರೆ. ಈ ಪ್ರಪಂಚವು ಯಾವಾಗಿನಿಂದ ಮಾಡಲ್ಪಟ್ಟಿದೆ, ಹೊಸ
ಸೃಷ್ಟಿಯು ಯಾವಾಗಿತ್ತು ಎಂದರೆ ಲಕ್ಷಾಂತರ ವರ್ಷಗಳ ಹಿಂದೆ ಇತ್ತೆಂದು ಹೇಳುತ್ತಾರೆ. ಹಳೆಯ ಪ್ರಪಂಚ
ಇನ್ನೂ ಬಹಳ ವರ್ಷಗಳಿರುತ್ತದೆ ಎಂದು ತಿಳಿದಿದ್ದಾರೆ, ಇದಕ್ಕೆ ಅಜ್ಞಾನದ ಅಂಧಕಾರವೆಂದು
ಹೇಳಲಾಗುತ್ತದೆ. ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತೆಂದೂ
ಗಾಯನವಿದೆ. ರಚಯಿತ ತಂದೆಯು ಅವಶ್ಯವಾಗಿ ಸ್ವರ್ಗವನ್ನು ರಚಿಸುತ್ತಾರೆ ಎಂಬುದು ನೀವು ತಿಳಿದಿದ್ದೀರಿ.
ತಂದೆಯೇ ಬಂದು ನರಕವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ರಚಯಿತ ತಂದೆಯೇ ಬಂದು ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ, ಬರುವುದೂ ಸಹ ಅಂತ್ಯದಲ್ಲಿ, ಸಮಯ
ಹಿಡಿಸುತ್ತದೆಯಲ್ಲವೆ. ನೆನಪಿನ ಯಾತ್ರೆಯಲ್ಲಿ ಎಷ್ಟು ಸಮಯ ಹಿಡಿಸುತ್ತದೆಯೋ ಅಷ್ಟು ಜ್ಞಾನದಲ್ಲಿ
ಸಮಯ ಹಿಡಿಸುವುದಿಲ್ಲ. 84 ಜನ್ಮಗಳ ಕಥೆಯು ಒಂದು ಕಥೆಯಾಗಿದೆ. ಹೇಗೆ ಒಂದು ಕಥೆಯಿದೆ - ಇಲ್ಲಿಗೆ
5000 ವರ್ಷದ ಮೊದಲು ಯಾರ ರಾಜ್ಯವಿತ್ತು, ಆ ರಾಜ್ಯವು ಎಲ್ಲಿಗೆ ಹೋಯಿತು?
ನೀವು ಮಕ್ಕಳಿಗೆ ಎಲ್ಲದರ
ಜ್ಞಾನವಿದೆ. ನೀವು ಎಷ್ಟು ಸಾಧಾರಣರು, ಅಜಾಮಿಳರಂತಹ ಪಾಪಿ, ಅಹಲ್ಯೆಯರು, ಕುಬ್ಜೆಯರು,
ಬಿಲ್ಲಿನಿಯರು - ಅವರನ್ನೂ ಸಹ ಎಷ್ಟೊಂದು ಶ್ರೇಷ್ಠರನ್ನಾಗಿ ಮಾಡುತ್ತೀರಿ. ನೀವು ಎಂತಹವರಿಂದ
ಎಂತಹವರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಹಳೆಯ ಪ್ರಪಂಚದ ಸ್ಥಿತಿ ನೋಡಿ ಏನಾಗಿದೆ!
ಮನುಷ್ಯರು ಏನನ್ನೂ ಸಹ ತಿಳಿದುಕೊಂಡಿಲ್ಲ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ? ತಂದೆಯು
ತಿಳಿಸುತ್ತಾರೆ - ನೀವು ತಮ್ಮ ಹೃದಯದ ಮೇಲೆ ಕೈಯಿಟ್ಟು ಕೇಳಿಕೊಳ್ಳಿ - ಮೊದಲು ಇದು ತಿಳಿದಿತ್ತೆ?
ಏನೂ ಇಲ್ಲ. ಈಗ ತಿಳಿದಿದೆ - ತಂದೆಯು ಪುನಃ ಬಂದು ನಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ.
ವಿಶ್ವದ ರಾಜ್ಯಭಾಗ್ಯವು ಹೇಗಿರುತ್ತದೆ? ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ವಿಶ್ವವೆಂದರೆ
ಇಡೀ ಪ್ರಪಂಚ. ತಂದೆಯು ನಮಗೆ ಇಂತಹ ರಾಜ್ಯವನ್ನು ಕೊಡುತ್ತಾರೆ ಅದನ್ನು ಅರ್ಧ ಕಲ್ಪದವರೆಗೆ
ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು!
ತಂದೆಯಿಂದ ಎಷ್ಟು ಬಾರಿ ರಾಜ್ಯವನ್ನು ತೆಗೆದುಕೊಂಡಿದ್ದೀರಿ? ತಂದೆಯು ಸತ್ಯ ಆಗಿದ್ದಾರೆ, ಸತ್ಯ
ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಎಂದೂ ಕೇಳಿರುವುದೇ ಇಲ್ಲ. ಈಗ ಅರ್ಥ ಸಹಿತವಾಗಿ
ನೀವು ತಿಳಿದುಕೊಳ್ಳುತ್ತೀರಿ. ನೀವು ಮಕ್ಕಳಾಗಿದ್ದೀರಿ ಅಂದಮೇಲೆ ತಂದೆಯನ್ನು ಸಹಜವಾಗಿ ನೆನಪು
ಮಾಡಬಹುದು. ಈಗಂತೂ ಬಾಲ್ಯದಲ್ಲಿಯೇ ಗುರುಗಳನ್ನು ಮಾಡಿಕೊಳ್ಳುತ್ತಾರೆ. ಗುರುಗಳ ಚಿತ್ರಗಳನ್ನು ಮಾಡಿ
ಕೊರಳಲ್ಲಿ ಹಾಕಿಕೊಳ್ಳುತ್ತಾರೆ ಮತ್ತು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಇಲ್ಲಿ ಆಶ್ಚರ್ಯವೇನೆಂದರೆ
ತಂದೆ, ಶಿಕ್ಷಕ, ಸದ್ಗುರು ಎಲ್ಲವೂ ಒಬ್ಬರೇ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಜೊತೆ
ಕರೆದುಕೊಂಡು ಹೋಗುತ್ತೇನೆ. ನೀವು ಏನು ಓದುತ್ತೀರೆಂದು ಯಾರಾದರೂ ಪ್ರಶ್ನೆ ಮಾಡಿದರೆ ತಿಳಿಸಿ, ನಾವು
ಹೊಸ ಪ್ರಪಂಚದಲ್ಲಿ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ರಾಜಯೋಗವನ್ನು ಓದುತ್ತೇವೆ. ಇದು
ರಾಜಯೋಗವಾಗಿದೆ. ಹೇಗೆ ಬ್ಯಾರಿಸ್ಟರಿ ಓದುವವರ ಬುದ್ಧಿಯೋಗವು ಅವಶ್ಯವಾಗಿ ಬ್ಯಾರಿಸ್ಟರ್ ಕಡೆಯೇ
ಹೋಗುತ್ತದೆ. ಶಿಕ್ಷಕರನ್ನು ಅವಶ್ಯವಾಗಿ ವಿದ್ಯಾರ್ಥಿಗಳು ನೆನಪು ಮಾಡುತ್ತಾರಲ್ಲವೆ. ನಾವು
ಸ್ವರ್ಗದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿಯೇ ಓದುತ್ತೇವೆಂದು ನೀವು
ಹೇಳುತ್ತೀರಿ ಅಂದಾಗ ಯಾರು ಓದಿಸುತ್ತಾರೆ? ಶಿವ ಭಗವಂತ. ಅವರ ಹೆಸರು ಒಂದೇ ಆಗಿದೆ, ಅದೇ
ನಡೆದುಬಂದಿದೆ. ರಥಕ್ಕಂತೂ ಹೆಸರಿಲ್ಲ. ನನ್ನ ಹೆಸರಾಗಿದೆ ಶಿವ. ತಂದೆಯು ಶಿವ ಮತ್ತು ರಥವು
ಬಹ್ಮಾನೆಂದು ಹೇಳುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ, ಇದು ಎಷ್ಟು ವಿಚಿತ್ರವಾಗಿದೆ! ಶರೀವು
ಒಂದೇ ಆಗಿದೆ. ಇದಕ್ಕೆ ಭಾಗ್ಯಶಾಲಿ ರಥವೆಂದು ಏಕೆ ಹೇಳುತ್ತಾರೆ? ಏಕೆಂದರೆ ಶಿವ ತಂದೆಯ
ಪ್ರವೇಶತೆಯಾಗಿದೆ ಅಂದಮೇಲೆ ಅವಶ್ಯವಾಗಿ ಎರಡು ಆತ್ಮಗಳಾದವಲ್ಲವೆ. ಇದು ನಿಮಗೇ ತಿಳಿದಿದೆ,
ಮತ್ತ್ಯಾರಿಗೂ ಇದು ಸಂಕಲ್ಪದಲ್ಲಿಯೂ ಬರುವುದಿಲ್ಲ. ಭಗೀರಥನು ಗಂಗೆಯನ್ನು ಕರೆ ತಂದನೆಂದು
ತೋರಿಸುತ್ತಾರೆ. ಯಾವ ನೀರನ್ನು ತಂದನು? ಏನನ್ನು ತಂದರು? ಯಾರು ತಂದರು? ಯಾರು ಪ್ರವೇಶ ಮಾಡಿದ್ದಾರೆ?
ಇದೆಲ್ಲವನ್ನೂ ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ. ತಂದೆಯು ಪ್ರವೇಶ ಮಾಡಿದರಲ್ಲವೆ.
ಮನುಷ್ಯನಲ್ಲಿ ನೀರು ಪ್ರವೇಶವಾಗಲು ಸಾಧ್ಯವೇ? ಜಡೆಯಿಂದ ನೀರು ಬರುವುದಕ್ಕೂ ಸಾಧ್ಯವಿಲ್ಲ. ಈ
ಮಾತುಗಳನ್ನು ಕುರಿತು ಮನುಷ್ಯರು ಎಂದೂ ಆಲೋಚನೆಯನ್ನೇ ಮಾಡುವುದಿಲ್ಲ. ಧರ್ಮವೇ ಶಕ್ತಿಯೆಂದು
ಹೇಳಲಾಗುತ್ತದೆ, ಧರ್ಮದಲ್ಲಿ ಶಕ್ತಿಯಿದೆ ಅಂದಾಗ ತಿಳಿಸಿ, ಎಲ್ಲದಕ್ಕಿಂತ ಹೆಚ್ಚು ಶಕ್ತಿಯು ಯಾವ
ಧರ್ಮದಲ್ಲಿದೆ? (ಬ್ರಾಹ್ಮಣ ಧರ್ಮದಲ್ಲಿ) ಹಾ, ಇದು ಸರಿಯಾಗಿದೆ. ಏನೆಲ್ಲಾ ಶಕ್ತಿಗಳಿವೆಯೋ ಅದು
ಬ್ರಾಹ್ಮಣ ಧರ್ಮದಲ್ಲಿದೆ. ಮತ್ತ್ಯಾವುದೇ ಧರ್ಮದಲ್ಲಿ ಶಕ್ತಿಯಿಲ್ಲ. ನೀವೀಗ ಬ್ರಾಹ್ಮಣರಾಗಿದ್ದೀರಿ.
ಬ್ರಾಹ್ಮಣರಿಗೆ ತಂದೆಯಿಂದ ಶಕ್ತಿಯು ಸಿಗುತ್ತದೆ, ಇದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ.
ನಿಮ್ಮಲ್ಲಿ ಎಷ್ಟು ದೊಡ್ಡ ಶಕ್ತಿಯಿದೆ, ನಾವು ಬ್ರಾಹ್ಮಣ ಧರ್ಮದವರೆಂದು ನೀವು ಹೇಳುತ್ತೀರಿ ಆದರೆ
ಇದು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಭಲೆ ವಿರಾಟ ರೂಪದ ಚಿತ್ರವನ್ನು ಮಾಡಿದ್ದಾರೆ
ಆದರೆ ಅದು ಅರ್ಧವಾಗಿದೆ. ಮುಖ್ಯ ರಚಯಿತ ಮತ್ತು ಅವರ ಮೊದಲ ರಚನೆಯನ್ನೂ ಯಾರೂ ತಿಳಿದುಕೊಂಡಿಲ್ಲ.
ತಂದೆಯು ರಚಯಿತನಾಗಿದ್ದಾರೆ ಮತ್ತೆ ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಇವರಲ್ಲಿ
ಶಕ್ತಿಯಿಲ್ಲ. ಕೇವಲ ತಂದೆಯನ್ನು ನೆನಪು ಮಾಡುವುದರಿಂದ ಶಕ್ತಿಯು ಸಿಗುತ್ತದೆ. ಮಕ್ಕಳಂತೂ
ಅವಶ್ಯವಾಗಿ ನಂಬರ್ವಾರ್ ಆಗುತ್ತೀರಲ್ಲವೆ. ನೀವು ಈ ಪ್ರಪಂಚದಲ್ಲಿ ಸರ್ವೋತ್ತಮ ಬ್ರಾಹ್ಮಣ ಕುಲ
ಭೂಷಣರಾಗಿದ್ದೀರಿ, ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೀರಿ. ಈಗ ನಿಮಗೆ ಶಕ್ತಿಯು ಸಿಗುತ್ತದೆ,
ಎಲ್ಲದಕ್ಕಿಂತ ಹೆಚ್ಚಿನ ಶಕ್ತಿಯು ಬ್ರಾಹ್ಮಣರಿಗಿದೆ. ಬ್ರಾಹ್ಮಣರು ಏನು ಮಾಡುತ್ತಾರೆ? ಇಡೀ
ವಿಶ್ವವನ್ನು ಶಾಂತವನ್ನಾಗಿ ಮಾಡಿ ಬಿಡುತ್ತೀರಿ. ನಿಮ್ಮ ಧರ್ಮವೂ ಹೀಗಿದೆ ಶ್ರೀಮತದ ಮೂಲಕ ಸರ್ವರ
ಸದ್ಗತಿ ಮಾಡುತ್ತೀರಿ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ನಿಮ್ಮನ್ನು ತನಗಿಂತಲೂ
ಶ್ರೇಷ್ಠರನ್ನಾಗಿ ಮಾಡುತ್ತೇನೆ, ನೀವು ಬ್ರಹ್ಮಾಂಡಕ್ಕೂ ಮಾಲೀಕರು, ವಿಶ್ವಕ್ಕೂ ಮಾಲೀಕರಾಗುತ್ತೀರಿ.
ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡುತ್ತೀರಿ. ಭಾರತ ನಮ್ಮ ದೇಶವಾಗಿದೆಯೆಂದು ಹಾಡುತ್ತಾರಲ್ಲವೆ.
ಕೆಲವೊಮ್ಮೆ ಮಹಿಮೆಯ ಗೀತೆಯನ್ನು ಹಾಡುತ್ತಾರೆ, ಇನ್ನೂ ಕೆಲವೊಮ್ಮೆ ಭಾರತದ ಸ್ಥಿತಿ ಏನಾಗಿದೆ.........!
ಎಂದು ಹೇಳುತ್ತಾರೆ. ಭಾರತವು ಯಾವಾಗ ಇಷ್ಟು ಶ್ರೇಷ್ಠವಾಗಿತ್ತು ಎಂಬುದನ್ನು ತಿಳಿದುಕೊಂಡಿಲ್ಲ.
ಸ್ವರ್ಗ ಅಥವಾ ನರಕವು ಇಲ್ಲಿದೆಯೆಂದು ಮನುಷ್ಯರು ತಿಳಿಯುತ್ತಾರೆ. ಯಾರಿಗೆ ವಾಹನ, ಹಣ
ಇತ್ಯಾದಿಯಿದೆಯೆಂದರೆ ಅವರು ಸ್ವರ್ಗದಲ್ಲಿದ್ದಾರೆಂದು ಹೇಳುತ್ತಾರೆ ಆದರೆ ಹೊಸ ಪ್ರಪಂಚಕ್ಕೆ
ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ಇಲ್ಲಿ ಎಲ್ಲವನ್ನೂ ಕಲಿಯಬೇಕಾಗಿದೆ.
ವಿಜ್ಞಾನದ ಕಲೆಯೂ ಸಹ ಸತ್ಯಯುಗದಲ್ಲಿ ಕೆಲಸಕ್ಕೆ ಬರುತ್ತದೆ, ಈ ವಿಜ್ಞಾನವೂ ಅಲ್ಲಿ ಸುಖ ಕೊಡುತ್ತದೆ.
ಇಲ್ಲಾದರೆ ಇವೆಲ್ಲದರಿಂದ ಅಲ್ಪಕಾಲದ ಸುಖವಿದೆ. ಅಲ್ಲಿ ನೀವು ಮಕ್ಕಳಿಗಾಗಿ ಸ್ಥಿರವಾದ ಸುಖವು
ಪ್ರಾಪ್ತಿಯಾಗುವುದು. ಇಲ್ಲಿಂದಲೇ ಎಲ್ಲವನ್ನೂ ಕಲಿಯಬೇಕಾಗಿದೆ. ಇದನ್ನು ಮತ್ತೆ ಸಂಸ್ಕಾರದಲ್ಲಿ
ತೆಗೆದುಕೊಂಡು ಹೋಗುತ್ತೀರಿ. ಯಾವುದೇ ಹೊಸ ಆತ್ಮಗಳು ಬರುವುದಿಲ್ಲ. ಇಲ್ಲಿನ ಮಕ್ಕಳೇ ವಿಜ್ಞಾನದ
ಕಲೆಯನ್ನು ಕಲಿತು ಅಲ್ಲಿಗೆ ಹೋಗುತ್ತೀರಿ, ಬಹಳ ಬುದ್ಧಿವಂತರಾಗಿ ಬಿಡುತ್ತೀರಿ. ಎಲ್ಲಾ
ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ ಮತ್ತೆ ಅಲ್ಲಿ ಕೆಲಸಕ್ಕೆ ಬರುವುದು. ಈಗ ಅಲ್ಪಕಾಲದ
ಸುಖವಿದೆ ಮತ್ತೆ ಈ ಬಾಂಬು ಇತ್ಯಾದಿಗಳೇ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಡುತ್ತದೆ. ಎಲ್ಲರ
ಮೃತ್ಯುವಾಗದೇ ಶಾಂತಿಯ ರಾಜ್ಯವು ಹೇಗಾಗುವುದು! ಇಲ್ಲಂತೂ ಅಶಾಂತಿಯ ರಾಜ್ಯವಾಗಿದೆ. ಇದೂ ಸಹ ನಿಮ್ಮ
ಬುದ್ಧಿಯಲ್ಲಿ ನಂಬರ್ವಾರ್ ಇದೆ. ಅವರೇ ಮೊಟ್ಟ ಮೊದಲು ನಮ್ಮ ಮನೆಗೆ ಹೋಗುತ್ತೇವೆ ಮತ್ತು
ಸುಖಧಾಮದಲ್ಲಿ ಬರುತ್ತೇವೆಂದು ತಿಳಿದುಕೊಳ್ಳುತ್ತಾರೆ. ಸುಖದಲ್ಲಿ ತಂದೆಯಂತು ಬರುವುದಿಲ್ಲ, ತಂದೆಯು
ತಿಳಿಸುತ್ತಾರೆ - ನನಗೂ ವಾನಪ್ರಸ್ಥ ರಥವು ಬೇಕಲ್ಲವೆ. ಭಕ್ತಿಮಾರ್ಗದಲ್ಲಿಯೂ ಸಹ ನಾನು ಎಲ್ಲರ
ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾ ಬಂದಿದ್ದೇನೆ. ಸಂದೇಶಿಗಳಿಗೂ ತೋರಿಸಿದ್ದಾರೆ - ಹೇಗೆ ಭಕ್ತರು
ಪೂಜೆ, ತಪಸ್ಸು ಇತ್ಯಾದಿಗಳನ್ನು ಮಾಡುತ್ತಾರೆ. ದೇವಿಯರನ್ನು ಶೃಂಗಾರಗೊಳಿಸಿ, ಪೂಜೆ ಮಾಡಿ ನಂತರ
ಸಮುದ್ರದಲ್ಲಿ ಮುಳುಗಿಸಿ ಬಿಡುತ್ತಾರೆ, ಎಷ್ಟೊಂದು ಖರ್ಚಾಗುತ್ತದೆ! ಇದೆಲ್ಲವೂ ಯಾವಾಗಿನಿಂದ
ಆರಂಭವಾಗಿದೆ ಎಂಬುದನ್ನು ಕೇಳಿರಿ ಆಗ ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ.
ಎಷ್ಟೊಂದು ಅಲೆದಾಡುತ್ತಿರುತ್ತಾರೆ. ಇದೆಲ್ಲವೂ ನಾಟಕವಾಗಿದೆ.
ತಂದೆಯು ಪದೇ-ಪದೇ
ಮಕ್ಕಳಿಗೆ ತಿಳಿಸುತ್ತಾರೆ - ನಾನು ನಿಮ್ಮನ್ನು ಬಹಳ ಮಧುರರನ್ನಾಗಿ ಮಾಡಲು ಬಂದಿದ್ದೇನೆ. ಈ
ದೇವತೆಗಳು ಎಷ್ಟು ಮಧುರರಾಗಿದ್ದಾರೆ, ಈಗಂತೂ ಮನುಷ್ಯರು ಬಹಳ ಕಹಿ (ಕಠಿಣ ಸ್ವಭಾವ) ಯಾಗಿದ್ದಾರೆ.
ಯಾರು ತಂದೆಗೆ ಬಹಳ ಸಹಯೋಗ ನೀಡಿದ್ದರೋ ಅವರ ಪೂಜೆ ಮಾಡುತ್ತಿರುತ್ತಾರೆ. ನಿಮಗೂ ಪೂಜೆಯು
ನಡೆಯುತ್ತದೆ. ನೀವು ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ನಾನು ನಿಮ್ಮನ್ನು
ನನಗಿಂತಲೂ ಶ್ರೇಷ್ಠರನ್ನಾಗಿ ಮಾಡುತ್ತೇನೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಶ್ರೀಮತವಾಗಿದೆ,
ಕೃಷ್ಣನದೆಂದು ಹೇಳುವುದಿಲ್ಲ. ಗೀತೆಯಲ್ಲಿಯೂ ಶ್ರೀಮತವು ಪ್ರಸಿದ್ಧವಾಗಿದೆ. ಕೃಷ್ಣನ ಆತ್ಮನೂ ಸಹ ಈ
ಸಮಯದಲ್ಲಿ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದಾರೆ. ಕೃಷ್ಣನ ಆತ್ಮನ ರಥದಲ್ಲಿಯೇ ತಂದೆಯು
ಪ್ರವೇಶ ಮಾಡಿದ್ದಾರೆ. ಇದು ಎಷ್ಟು ಅದ್ಭುತವಾದ ಮಾತಾಗಿದೆ! ಇದು ಎಂದೂ ಯಾರ ಬುದ್ಧಿಯಲ್ಲಿಯೂ
ಬರುವುದಿಲ್ಲ. ತಿಳಿದುಕೊಳ್ಳುವವರಿಗೂ ಸಹ ತಿಳಿಸುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ತಂದೆಯು
ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ. ಸರ್ವೋತ್ತಮ ಬ್ರಹ್ಮಾ ಮುಖವಂಶಾವಳಿ
ಬ್ರಾಹ್ಮಣರೆಂದು ತಂದೆಯು ಬರೆಯುತ್ತಾರೆ. ನೀವು ಅಷ್ಟು ಶ್ರೇಷ್ಠ ಸೇವೆ ಮಾಡುತ್ತೀರಿ ಆದ್ದರಿಂದ ಈ
ಬಹುಮಾನವು ಸಿಗುತ್ತದೆ. ತಂದೆಗೆ ನೀವು ಸಹಯೋಗಿಗಳಾಗುತ್ತೀರಿ ಆದ್ದರಿಂದ ನಂಬರ್ವಾರ್
ಪುರುಷಾರ್ಥದನುಸಾರ ಎಲ್ಲರಿಗೆ ಬಹುಮಾನ ಸಿಗುತ್ತದೆ. ನಿಮ್ಮಲ್ಲಿಯೂ ಬಹಳ ಶಕ್ತಿಯಿದೆ, ನೀವು
ಮನುಷ್ಯರನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೀರಿ. ನೀವು ಆತ್ಮಿಕ ಸೈನಿಕರಾಗಿದ್ದೀರಿ. ನೀವು ಈ
ಬ್ಯಾಡ್ಜ್ನ್ನೇ ಹಾಕಿಕೊಳ್ಳದಿದ್ದರೆ ಇವರು ಆತ್ಮಿಕ ಸೈನಿಕರಾಗಿದ್ದಾರೆಂದು ಮನುಷ್ಯರು ಹೇಗೆ
ತಿಳಿದುಕೊಳ್ಳುವುದು? ಮಿಲಿಟರಿಯವರಿಗೂ ಯಾವಾಗಲೂ ಬ್ಯಾಡ್ಜ್ ಇರುತ್ತದೆ. ಶಿವ ತಂದೆಯು ಹೊಸ
ಪ್ರಪಂಚದ ರಚಯಿತನಾಗಿದ್ದಾರೆ. ಅಲ್ಲಿ ಈ ದೇವತೆಗಳ ರಾಜ್ಯವಿತ್ತು, ಈಗಿಲ್ಲ ಮತ್ತೆ ತಂದೆಯು
ತಿಳಿಸುತ್ತಾರೆ - ಮನ್ಮನಾಭವ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ನನ್ನೊಬ್ಬನನ್ನೇ
ನೆನಪು ಮಾಡಿ, ಇದರಿಂದ ಕೃಷ್ಣನ ರಾಜಧಾನಿಯಲ್ಲಿ ಬಂದು ಬಿಡುತ್ತೀರಿ. ಇದರಲ್ಲಿ ನಾಚಿಕೆಯ ಮಾತಿಲ್ಲ.
ತಂದೆಯ ನೆನಪಿರುವುದು. ತಂದೆಯು ಇವರ ಬಗ್ಗೆಯೂ ಸಹ ತಿಳಿಸುತ್ತಾರೆ, ಇವರು (ಬ್ರಹ್ಮಾ) ನಾರಾಯಣನ
ಪೂಜೆ ಮಾಡುತ್ತಿದ್ದರು, ನಾರಾಯಣನ ಮೂರ್ತಿಯು ಜೊತೆಯಲ್ಲಿರುತ್ತಿತ್ತು, ನಡೆಯುತ್ತಾ-ತಿರುಗಾಡುತ್ತಾ
ಅದನ್ನು ನೋಡುತ್ತಿದ್ದರು. ಈಗ ನೀವು ಮಕ್ಕಳಿಗೆ ಜ್ಞಾನವಿದೆ ಅಂದಮೇಲೆ ಅವಶ್ಯವಾಗಿ ಬ್ಯಾಡ್ಜ್ನ್ನು
ಹಾಕಿಕೊಂಡಿರಬೇಕು. ನೀವು ನರನನ್ನು ನಾರಾಯಣನನ್ನಾಗಿ ಮಾಡುವವರಾಗಿದ್ದೀರಿ. ರಾಜಯೋಗವನ್ನು ನೀವೇ
ಕಲಿಸುತ್ತೀರಿ. ನರನಿಂದ ನಾರಾಯಣರನ್ನಾಗಿ ಮಾಡುವ ಸೇವೆ ಮಾಡುತ್ತೀರಿ. ತಮ್ಮನ್ನು ನೋಡಿಕೊಳ್ಳಿ -
ನನ್ನಲ್ಲಿ ಯಾವುದೇ ಅವಗುಣವಿಲ್ಲವೇ?
ನೀವು ಮಕ್ಕಳು
ಬಾಪ್ದಾದಾರವರ ಬಳಿ ಬರುತ್ತೀರಿ. ತಂದೆಯು ಶಿವನಾಗಿದ್ದಾರೆ, ದಾದಾರವರು ಇವರ ರಥವಾಗಿದ್ದಾರೆ.
ಅಂದಮೇಲೆ ತಂದೆಯು ಅವಶ್ಯವಾಗಿ ರಥದ ಮೂಲಕವೇ ಮಿಲನ ಮಾಡುತ್ತಾರಲ್ಲವೆ? ತಂದೆಯ ಬಳಿ ರಿಫ್ರೆಷ್ ಆಗಲು
ಬರುತ್ತೀರಿ. ಸನ್ಮುಖದಲ್ಲಿ ಕುಳಿತುಕೊಂಡಾಗ ನೆನಪಿರುತ್ತದೆ. ತಂದೆಯು ಕರೆದುಕೊಂಡು ಹೋಗಲು
ಬಂದಿದ್ದಾರೆ, ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ ಅಂದಮೇಲೆ ಹೆಚ್ಚು ನೆನಪು ಬರಬೇಕು. ತಮ್ಮ
ನೆನಪಿನ ಯಾತ್ರೆಯನ್ನು ನೀವು ನಿಮ್ಮ ಸೇವಾಸ್ಥಾನಗಳಲ್ಲಿಯೂ ನಿತ್ಯವೂ ಹೆಚ್ಚಿಸಿಕೊಳ್ಳಬಹುದು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮನ್ನು
ನೋಡಿಕೊಳ್ಳಿ - ನನ್ನಲ್ಲಿ ಯಾವುದೇ ಅವಗುಣವಿಲ್ಲವೆ! ಹೇಗೆ ದೇವತೆಗಳು ಮಧುರರಾಗಿದ್ದಾರೆ, ಅದೇರೀತಿ
ಮಧುರನಾಗಿದ್ದೇನೆಯೇ?
2. ತಂದೆಯ ಶ್ರೇಷ್ಠಾತಿ
ಶ್ರೇಷ್ಠ ಮತದಂತೆ ನಡೆದು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ. ಸರ್ವೀಸೇಬಲ್ ಆಗಲು
ಸೃಷ್ಟಿಯ ಆದಿ-ಮಧ್ಯ-ಅಂತ್ಯದ, ಸ್ವರ್ಗ ಮತ್ತು ನರಕದ ಜ್ಞಾನವನ್ನು ಬುದ್ಧಿಯಲ್ಲಿ ತಿರುಗಿಸಬೇಕಾಗಿದೆ.
ವರದಾನ:
ಈಶ್ವರೀಯ
ಸೇವಾಧಾರಿಯ ಸ್ಮತಿಯ ಮೂಲಕ ಸಹಜ ನೆನಪಿನ ಅನುಭವ ಮಾಡುವಂತಹ ಸಹಜಯೋಗಿ ಭವ.
ಈಶ್ವರೀಯ ಸೇವಾಧಾರಿ
ಅರ್ಥಾತ್ ಖೂದಾ (ತಂದೆ) ಏನು ಕಿದ್ಮತ್ (ಸೇವೆ) ಕೊಟ್ಟಿದ್ದಾರೆ, ಆ ಸೇವೆಯಲ್ಲಿ ಸದಾ
ತತ್ಪರರಾಗಿರುವಂತಹವರು. ಸದಾ ಇದೇ ನಶೆಯಿರಲಿ ನನಗೆ ಸ್ವಯಂ ಖುದಾ ಕಿದ್ಮತ್ (ಸೇವೆ) ಕೊಟ್ಟಿದ್ದಾರೆ.
ಕಾರ್ಯ ಮಾಡುತ್ತಾ, ಯಾರು ಕಾರ್ಯ ಕೊಟ್ಟಿದ್ದಾರೆ ಅದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಮತ್ತು
ಕರ್ಮಣಾ ಸೇವೆಯಲ್ಲಿಯೂ ಸಹಾ ಇದೇ ಸ್ಮತಿಯಿರಲಿ ತಂದೆಯ ಸೂಚನೆಯ ಮೇರೆಗೆ ಮಾಡುತ್ತಿದ್ದೇನೆ ಆಗ ಸಹಜ
ನೆನಪಿನ ಅನುಭವ ಮಾಡುತ್ತಾ ಸಹಜಯೋಗಿಗಳಾಗಿ ಬಿಡುವರು.
ಸ್ಲೋಗನ್:
ಸದಾ ಈಶ್ವರೀಯ
ವಿಧ್ಯಾರ್ಥಿ ಜೀವನದ ಸ್ಮತಿ ಇದ್ದಾಗ ಮಾಯೆ ಸಮೀಪ ಬರಲು ಸಾಧ್ಯವಿಲ್ಲ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಎಷ್ಟು ಸ್ಥಾಪನೆಗೆ
ನಿಮಿತ್ತರಾಗಿರುವಂತಹವರು ಜ್ವಾಲಾ ರೂಪರಾಗುತ್ತಾರೆ ಅಷ್ಟೇ ವಿನಾಶದ ಜ್ವಾಲೆ ಪ್ರತ್ಯಕ್ಷವಾಗುತ್ತದೆ.
ಸಂಘಟನೆಯ ರೂಪದಲ್ಲಿ ಜ್ವಾಲಾ ರೂಪದ ನೆನಪು ವಿಶ್ವದ ವಿನಾಶದ ಕಾರ್ಯವನ್ನು ಸಂಪನ್ನ ಮಾಡುತ್ತದೆ,
ಅದಕ್ಕೋಸ್ಕರ ಪ್ರತಿ ಸೇವಾಕೇಂದ್ರಗಳಲ್ಲಿ ವಿಶೇಷ ಯೋಗದ ಕಾರ್ಯಕ್ರಮ ನಡೆಯುತ್ತಿದ್ದಾಗ ವಿನಾಶದ
ಜ್ವಾಲೆಗೆ ರೆಕ್ಕೆ ಸಿಗುವುದು. ಯೋಗದ ಅಗ್ನಿಯಿಂದ ವಿನಾಶದ ಅಗ್ನಿಯು ಸುಡುತ್ತದೆ, ಜ್ವಾಲೆಯಿಂದ
ಜ್ವಾಲೆ ಪ್ರಜ್ವಲಿತವಾಗುತ್ತದೆ.