22.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಯಾರಿಗಾದರೂ ತಿಳಿಸುತ್ತೀರಿ ಅಥವಾ ಭಾಷಣ ಮಾಡುತ್ತೀರೆಂದರೆ ಬಾಬಾ, ಬಾಬಾ ಎಂದು ಹೇಳುತ್ತಾ ತಿಳಿಸಿ
ತಂದೆಯ ಮಹಿಮೆ ಮಾಡಿ, ಆಗ ಬಾಣವು ನಾಟುವುದು"
ಪ್ರಶ್ನೆ:
ತಂದೆಯು
ಭಾರತವಾಸಿ ಮಕ್ಕಳೊಂದಿಗೆ ವಿಶೇಷವಾಗಿ ಯಾವ ಯನ್ನು ಕೇಳುತ್ತಾರೆ?
ಉತ್ತರ:
ನೀವು ಭಾರತವಾಸಿ
ಮಕ್ಕಳು ಇಷ್ಟು ಸಾಹುಕಾರರಾಗಿದ್ದಿರಿ, ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣ ದೇವತಾ
ಧರ್ಮದವರಾಗಿದ್ದಿರಿ, ನೀವು ಪವಿತ್ರರಾಗಿದ್ದಿರಿ, ಕಾಮ ಕಟಾರಿಯನ್ನು ನಡೆಸುತ್ತಿರಲಿಲ್ಲ, ಬಹಳ
ಧನವಂತರಾಗಿದ್ದಿರಿ ಮತ್ತೆ ನೀವು ಇಷ್ಟು ದಿವಾಳಿಗಳು ಹೇಗಾದಿರಿ - ಇದಕ್ಕೆ ಕಾರಣ ತಿಳಿದಿದೆಯೇ?
ಮಕ್ಕಳೇ, ಹೇಗೆ ಗುಲಾಮರಾಗಿ ಬಿಟ್ಟಿರಿ? ಇಷ್ಟೆಲ್ಲಾ ಹಣ-ಅಂತಸ್ತನ್ನು ಎಲ್ಲಿ ಕಳೆದಿರಿ? ವಿಚಾರ
ಮಾಡಿ - ನೀವು ಪಾವನರಿಂದ ಹೇಗೆ ಪತಿತರಾದಿರಿ? ನೀವು ಮಕ್ಕಳೂ ಸಹ ಇಂತಿಂತಹ ಮಾತುಗಳನ್ನು ಬಾಬಾ,
ಬಾಬಾ ಎಂದು ಹೇಳಿ ಅನ್ಯರಿಗೂ ತಿಳಿಸಿ ಆಗ ಸಹಜವಾಗಿ ಅರ್ಥ ಮಾಡಿಕೊಳ್ಳುವರು.
ಓಂ ಶಾಂತಿ.
ಓಂ ಶಾಂತಿ ಎಂದು ಹೇಳುವಾಗಲೂ ಅವಶ್ಯವಾಗಿ ತಂದೆಯ ನೆನಪು ಬರಬೇಕು. ತಂದೆಯ ಮೊಟ್ಟ ಮೊದಲ
ಹೇಳಿಕೆಯಾಗಿದೆ - ಮನ್ಮನಾಭವ. ಅವಶ್ಯವಾಗಿ ಮೊದಲೂ ಸಹ ಹೇಳಿದ್ದರು, ಈಗಲೂ ಹೇಳುತ್ತಾರಲ್ಲವೆ. ನೀವು
ಮಕ್ಕಳೇ ತಂದೆಯನ್ನು ಅರಿತುಕೊಂಡಿದ್ದೀರಿ, ಎಲ್ಲಿಯಾದರೂ ಸಭೆಯಲ್ಲಿ ಭಾಷಣ ಮಾಡಲು ಹೋಗುತ್ತೀರೆಂದರೆ
ಅವರಂತೂ ತಂದೆಯನ್ನು ಅರಿತುಕೊಂಡಿರುವುದಿಲ್ಲ ಆದ್ದರಿಂದ ಅವರಿಗೂ ಸಹ ಈ ರೀತಿ ಹೇಳಬೇಕು – ಶಿವ
ತಂದೆಯು ತಿಳಿಸುತ್ತಾರೆ, ಅವರೇ ಪತಿತ-ಪಾವನನಾಗಿದ್ದಾರೆ. ಅವಶ್ಯವಾಗಿ ಪಾವನರನ್ನಾಗಿ
ಮಾಡುವುದಕ್ಕಾಗಿಯೇ ಇಲ್ಲಿ ಬಂದು ತಿಳಿಸುತ್ತಾರೆ. ಹೇಗೆ ತಂದೆಯು ಇಲ್ಲಿ ನಿಮಗೆ ಹೇಳುತ್ತಾರೆ - ಹೇ
ಮಕ್ಕಳೇ, ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದೆನು, ನೀವು ಆದಿ ಸನಾತನ ದೇವಿ – ದೇವತಾ
ಧರ್ಮದವರು ವಿಶ್ವದ ಮಾಲೀಕರಾಗಿದ್ದಿರಿ, ಇದೇ ರೀತಿ ತಂದೆಯು ಹೇಳುತ್ತಾರೆ ಎಂದು ನೀವೂ ಸಹ ಹೇಳಬೇಕು.
ಆದರೆ ಈ ರೀತಿ ಯಾರ ಭಾಷಣದ ಸಮಾಚಾರವೂ ಬಂದಿಲ್ಲ. ಶಿವ ತಂದೆಯು ತಿಳಿಸುತ್ತಾರೆ - ನನ್ನನ್ನು
ಸರ್ವಶ್ರೇಷ್ಠನೆಂದು ಒಪ್ಪುತ್ತೀರಿ, ಪತಿತ-ಪಾವನನೆಂದೂ ಹೇಳುತ್ತೀರಿ. ನಾನು ಭಾರತದಲ್ಲಿಯೇ
ಬರುತ್ತೇನೆ ಮತ್ತು ರಾಜಯೋಗವನ್ನು ಕಲಿಸಲು ಬರುತ್ತೇನೆ. ಹೇಳುತ್ತೇನೆ, ಮಕ್ಕಳೇ ನನ್ನೊಬ್ಬನನ್ನೇ
ನೆನಪು ಮಾಡಿ. ನಾನು ಶ್ರೇಷ್ಠ ತಂದೆಯನ್ನು ನೆನಪು ಮಾಡಿ ಏಕೆಂದರೆ ತಂದೆಯು ಕೊಡುವಂತಹ
ದಾತನಾಗಿದ್ದಾರೆ. ಅವಶ್ಯವಾಗಿ ಭಾರತದಲ್ಲಿ ನೀವು ವಿಶ್ವದ ಮಾಲೀಕರಾಗಿದ್ದಿರಲ್ಲವೆ. ಮತ್ತ್ಯಾವುದೇ
ಧರ್ಮವಿರಲಿಲ್ಲ, ಇದನ್ನು ತಂದೆಯು ನಾವು ಮಕ್ಕಳಿಗೆ ತಿಳಿಸುತ್ತಾರೆ ಮತ್ತೆ ನಾವು ತಮಗೆ
ತಿಳಿಸುತ್ತೇವೆ. ತಂದೆಯು ಹೇಳುತ್ತಾರೆ - ನೀವು ಭಾರತವಾಸಿಗಳೇ ಎಷ್ಟು ಸಾಹುಕಾರರಾಗಿದ್ದಿರಿ ಸರ್ವ
ಗುಣ ಸಂಪನ್ನರು, 16 ಕಲಾ ಸಂಪೂರ್ಣರು, ಸಂಪೂರ್ಣ ದೇವತಾ ಧರ್ಮವಿತ್ತು, ನೀವು ಪವಿತ್ರರಾಗಿದ್ದಿರಿ.
ಕಾಮ ಕಟಾರಿ ನಡೆಸುತ್ತಿರಲಿಲ್ಲ, ಬಹಳ ಧನವಂತರಾಗಿದ್ದಿರಿ. ಮತ್ತೆ ತಂದೆಯು ಕೇಳುತ್ತಾರೆ - ಮಕ್ಕಳೇ,
ನೀವು ಇಷ್ಟು ದಿವಾಳಿಗಳು ಹೇಗಾದಿರಿ - ಕಾರಣ ಗೊತ್ತಿದೆಯೇ? ನೀವು ವಿಶ್ವದ ಮಾಲೀಕರಾಗಿದ್ದಿರಿ,
ನೀವೀಗ ವಿಶ್ವದ ಗುಲಾಮರು ಏಕಾದಿರಿ? ಎಲ್ಲರಿಂದ ಸಾಲವನ್ನು ಪಡೆಯುತ್ತಾ ಇರುತ್ತೀರಿ, ಇಷ್ಟೆಲ್ಲಾ
ಹಣವು ಎಲ್ಲಿ ಹೋಯಿತು? ಹೇಗೆ ತಂದೆಯು ಭಾಷಣ ಮಾಡುತ್ತಿದ್ದಾರೆಯೋ ಹಾಗೆಯೇ ನೀವೂ ಸಹ ಭಾಷಣ ಮಾಡಿರಿ
ಆಗ ಅನೇಕರಿಗೆ ಆಕರ್ಷಣೆಯಾಗುವುದು. ನೀವು ತಂದೆಯನ್ನು ನೆನಪು ಮಾಡುವುದಿಲ್ಲ ಆದ್ದರಿಂದ ಯಾರಿಗೂ
ಬಾಣವು ನಾಟುವುದಿಲ್ಲ, ಆ ಶಕ್ತಿಯು ಸಿಗುವುದಿಲ್ಲ. ಇಲ್ಲದಿದ್ದರೆ ನಿಮ್ಮ ಒಂದೇ ಭಾಷಣವನ್ನು
ಕೇಳಿದರೆ ಸಾಕು, ಕಮಾಲ್ ಆಗಿಬಿಡಬೇಕು. ಶಿವ ತಂದೆಯು ತಿಳಿಸುತ್ತಾರೆ - ಭಗವಂತನು ಒಬ್ಬರೇ
ಆಗಿದ್ದಾರೆ, ಅವರು ದುಃಖಹರ್ತ-ಸುಖಕರ್ತನಾಗಿದ್ದಾರೆ. ಹೊಸ ಪ್ರಪಂಚವನ್ನು ಸ್ಥಾಪನೆ
ಮಾಡುವವರಾಗಿದ್ದಾರೆ. ಇದೇ ಭಾರತದಲ್ಲಿ ಸ್ವರ್ಗವಿತ್ತು, ವಜ್ರ ವೈಡೂರ್ಯಗಳ ಮಹಲುಗಳಿತ್ತು, ಒಂದೇ
ರಾಜ್ಯವಿತ್ತು, ಎಲ್ಲರೂ ಕ್ಷೀರ ಖಂಡವಾಗಿದ್ದರು. ಹೇಗೆ ತಂದೆಯ ಮಹಿಮೆಯು ಅಪರಮಪಾರವಾಗಿದೆಯೋ ಹಾಗೆಯೇ
ಭಾರತದ ಮಹಿಮೆಯೂ ಸಹ ಅಪರಮಪಾರವಾಗಿದೆ. ಭಾರತದ ಮಹಿಮೆಯನ್ನು ಕೇಳಿ ಖುಷಿ ಪಡುತ್ತಾರೆ. ತಂದೆಯು
ಮಕ್ಕಳೊಂದಿಗೆ ಕೇಳುತ್ತಾರೆ - ಮಕ್ಕಳೇ, ಇಷ್ಟೊಂದು ಹಣ-ಅಂತಸ್ತನ್ನು ಎಲ್ಲಿ ಕಳೆದಿರಿ?
ಭಕ್ತಿಮಾರ್ಗದಲ್ಲಿ ನೀವು ಎಷ್ಟು ಖರ್ಚು ಮಾಡುತ್ತಾ ಬಂದಿದ್ದೀರಿ, ಎಷ್ಟೊಂದು ಮಂದಿರಗಳನ್ನು
ಕಟ್ಟಿಸುತ್ತಾ ಬಂದಿದ್ದೀರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ವಿಚಾರ ಮಾಡಿ - ನೀವು ಪಾವನರಿಂದ
ಪತಿತರು ಹೇಗಾದಿರಿ? ಬಾಬಾ, ದುಃಖದಲ್ಲಿ ತಮ್ಮ ಸ್ಮರಣೆ ಮಾಡುತ್ತೇವೆ, ಸುಖದಲ್ಲಿ
ಮಾಡುವುದಿಲ್ಲವೆಂದು ಹೇಳುತ್ತೀರಲ್ಲವೆ ಆದರೆ ನಿಮ್ಮನ್ನು ದುಃಖಿಯನ್ನಾಗಿ ಮಾಡುವವರಾದರೂ ಯಾರು?
ಪದೇ-ಪದೇ ತಂದೆಯ ಹೆಸರನ್ನು ತಿಳಿದುಕೊಳ್ಳುತ್ತಾ ಇರಿ. ನೀವು ತಂದೆಯ ಸಂದೇಶ ಕೊಡುತ್ತೀರಿ, ತಂದೆಯು
ತಿಳಿಸುತ್ತಾರೆ - ನಾನಂತೂ ಸ್ವರ್ಗ, ಶಿವಾಲಯವನ್ನು ಸ್ಥಾಪನೆ ಮಾಡಿದೆನು. ಸ್ವರ್ಗದಲ್ಲಿ ಈ
ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ನೀವು ಇದನ್ನೂ ಮರೆತು ಬಿಟ್ಟಿದ್ದೀರಿ. ನಿಮಗೆ ಇದೂ ಸಹ
ತಿಳಿದಿಲ್ಲ - ರಾಧೆ-ಕೃಷ್ಣರೇ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ಯಾವ ಕೃಷ್ಣನು
ವಿಶ್ವದ ಮಾಲೀಕನಾಗಿದ್ದನೋ ಅವರಿಗೆ ನೀವು ಕಳಂಕವನ್ನು ಹಾಕುತ್ತೀರಿ, ನನಗೂ ಕಳಂಕವನ್ನು
ಹೊರಿಸುತ್ತೀರಿ. ನಾನು ನಿಮ್ಮ ಸದ್ಗತಿದಾತನಾಗಿದ್ದೇನೆ ಆದರೆ ನೀವು ನನ್ನನ್ನು ನಾಯಿ, ಬೆಕ್ಕು,
ಕಣ-ಕಣದಲ್ಲಿದ್ದಾರೆಂದು ಹೇಳಿಬಿಡುತ್ತೀರಿ. ಮಕ್ಕಳೇ, ನೀವು ಎಷ್ಟು ಪತಿತರಾಗಿ ಬಿಟ್ಟಿದ್ದೀರಿ!
ಸರ್ವರ ಸದ್ಗತಿದಾತ, ಪತಿತ-ಪಾವನನು ನಾನೇ ಆಗಿದ್ದೇನೆ, ಆದರೆ ನೀವು ಪತಿತ-ಪಾವನಿ ಗಂಗೆಯೆಂದು ಹೇಳಿ
ಬಿಡುತ್ತೀರಿ. ನನ್ನೊಂದಿಗೆ ಯೋಗವಿಲ್ಲದ ಕಾರಣ ನೀವು ಇನ್ನೂ ಪತಿತರಾಗಿ ಬಿಡುತ್ತೀರಿ. ನನ್ನನ್ನು
ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಪದೇ-ಪದೇ ತಂದೆಯ ಹೆಸರನ್ನು
ತೆಗೆದುಕೊಳ್ಳುತ್ತಾ ತಿಳಿಸಿ ಆಗ ಶಿವ ತಂದೆಯ ನೆನಪಿರುವುದು. ಇದನ್ನು ಹೇಳಿರಿ, ನಾವು ತಂದೆಯ ಮಹಿಮೆ
ಮಾಡುತ್ತೇವೆ - ಸ್ವಯಂ ತಂದೆಯೇ ಹೇಳುತ್ತಾರೆ, ನಾನು ಹೇಗೆ ಸಾಧಾರಣ ಪತಿತ ಶರೀರದಲ್ಲಿ, ಬಹಳ
ಜನ್ಮಗಳ ಅಂತಿಮದಲ್ಲಿ ಬರುತ್ತೇನೆ. ಇವರದೇ ಬಹಳ ಜನ್ಮಗಳಿವೆ. ಇವರು ಈಗ ನನ್ನವರಾಗಿದ್ದಾರೆ
ಆದ್ದರಿಂದ ಈ ರಥದ ಮೂಲಕ ನಿಮಗೆ ತಿಳಿಸಿ ಕೊಡುತ್ತೇನೆ. ಇವರು ತನ್ನ ಜನ್ಮಗಳನ್ನು ಅರಿತುಕೊಂಡಿಲ್ಲ.
ಭಗೀರಥನು ಇವರಾಗಿದ್ದಾರೆ. ಇವರ ವಾನಪ್ರಸ್ಥ ಸ್ಥಿತಿಯಲ್ಲಿಯೇ ನಾನು ಬರುತ್ತೇನೆ. ಶಿವ ತಂದೆಯು ಹೀಗೆ
ತಿಳಿಸುತ್ತಾರೆಂದು ಹೇಳಬೇಕು ಆದರೆ ಇಂತಹ ಭಾಷಣ ಯಾರದನ್ನು ಇದುವರೆಗೂ ಕೇಳಿಲ್ಲ. ಭಾಷಣ ಮಾಡುವಾಗ
ತಂದೆಯ ಹೆಸರನ್ನೇ ತೆಗೆದುಕೊಳ್ಳುವುದಿಲ್ಲ, ಇಡೀ ದಿನ ತಂದೆಯನ್ನೇ ನೆನಪು ಮಾಡುವುದಿಲ್ಲ,
ಅಲ್ಲಸಲ್ಲದ ಮಾತುಗಳಲ್ಲಿಯೇ ತೊಡಗಿರುತ್ತಾರೆ ಮತ್ತೆ ಬಾಬಾ ನಾವು ಹೀಗೆ ಭಾಷಣ ಮಾಡಿದೆವು, ನಾವು
ಇದನ್ನು ತಿಳಿಸಿದೆವೆಂದು ಬರೆಯುತ್ತಾರೆ. ತಂದೆಯು ತಿಳಿದುಕೊಳ್ಳುತ್ತಾರೆ - ಈಗಿನ್ನೂ ನೀವು
ಇರುವೆಗಳಾಗಿದ್ದೀರಿ. ನೊಣಗಳಷ್ಟೂ ಆಗಿಲ್ಲ ಆದರೆ ಅಹಂಕಾರವು ಎಷ್ಟೊಂದಿರುತ್ತದೆ. ಶಿವ ತಂದೆಯು
ಬ್ರಹ್ಮಾರವರ ಮೂಲಕ ಹೇಳುತ್ತಾರೆಂಬುದನ್ನೇ ತಿಳಿದುಕೊಳ್ಳುವುದಿಲ್ಲ. ಶಿವ ತಂದೆಯನ್ನೇ ನೀವು ಮರೆತು
ಹೋಗುತ್ತೀರಿ. ಬ್ರಹ್ಮಾರವರೊಂದಿಗೆ ಕೂಡಲೇ ಮುನಿಸಿಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ನೀವು
ನನ್ನನ್ನೇ ನೆನಪು ಮಾಡಿ, ನಿಮ್ಮ ಕೆಲಸವು ನನ್ನೊಂದಿಗಿದೆ. ನೀವು ನನ್ನನ್ನು ನೆನಪು
ಮಾಡುತ್ತೀರಲ್ಲವೆ ಆದರೆ ತಂದೆಯು ಯಾರಾಗಿದ್ದಾರೆ, ಯಾವಾಗ ಬರುತ್ತಾರೆ ಎಂಬುದು ನಿಮಗೂ ತಿಳಿದಿಲ್ಲ.
ಗುರುಗಳು ನಿಮಗೆ ಕಲ್ಪವು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಮತ್ತು ತಂದೆಯು ಕಲ್ಪವು 5000
ವರ್ಷಳೆಂದು ಹೇಳುತ್ತಾರೆ. ಹೊಸ ಪ್ರಪಂಚವೇ ಮತ್ತೆ ಹಳೆಯದಾಗುತ್ತದೆ, ಹಳೆಯದೇ ಹೊಸದಾಗುತ್ತದೆ. ಈಗ
ಹೊಸ ದೆಹಲಿ ಎಲ್ಲಿದೆ? ದೆಹಲಿಯು ಯಾವಾಗ ಸ್ವರ್ಗವಾಗಿತ್ತೋ ಆಗ ಹೊಸ ದೆಹಲಿಯೆಂದು ಹೇಳುತ್ತಾರೆ.
ಹೊಸ ಪ್ರಪಂಚದಲ್ಲಿ ಜಮುನಾ ನದಿಯ ತೀರದಲ್ಲಿ ಹೊಸ ದೆಹಲಿಯಿತ್ತು, ಅಲ್ಲಿ ಲಕ್ಷ್ಮೀ-ನಾರಾಯಣರ
ಮಹಲುಗಳಿತ್ತು, ಸ್ವರ್ಗವಾಗಿತ್ತು, ಈಗ ಸ್ಮಶಾನವಾಗಲಿದೆ. ಎಲ್ಲವೂ ಭಸ್ಮವಾಗಲಿದೆ ಆದ್ದರಿಂದ ತಂದೆಯು
ತಿಳಿಸುತ್ತಾರೆ - ಸರ್ವಶ್ರೇಷ್ಠ ತಂದೆಯಾದ ನನ್ನನ್ನು ನೆನಪು ಮಾಡಿದರೆ ಪಾವನರಾಗುವಿರಿ. ಯಾವಾಗಲೂ
ಹೀಗೆ ಬಾಬಾ, ಬಾಬಾ ಎಂದು ತಿಳಿಸಿ ಕೊಡಿ. ತಂದೆಯ ಹೆಸರನ್ನೇ ತಿಳಿದುಕೊಳ್ಳುವುದಿಲ್ಲ ಆದ್ದರಿಂದಲೇ
ನೀವು ಹೇಳುವುದನ್ನು ಯಾರೂ ಕೇಳುತ್ತಿಲ್ಲ. ತಂದೆಯ ನೆನಪು ಇಲ್ಲದಿರುವ ಕಾರಣ ನಿಮ್ಮಲ್ಲಿ ಆ ಹರಿತವು
ತುಂಬುವುದಿಲ್ಲ, ದೇಹಾಭಿಮಾನದಲ್ಲಿ ಬಂದು ಬಿಡುತ್ತೀರಿ. ಬಂಧನದಲ್ಲಿರುವವರು ಯಾರು ಪೆಟ್ಟು
ತಿನ್ನುತ್ತಾರೆಯೋ ಅವರು ನಿಮಗಿಂತಲೂ ಹೆಚ್ಚು ನೆನಪಿನಲ್ಲಿರುತ್ತಾರೆ, ಎಷ್ಟೊಂದು ಕೂಗುತ್ತಾರೆ.
ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ದ್ರೌಪದಿಯರಾಗಿದ್ದೀರಲ್ಲವೆ. ಈಗ ನಿಮ್ಮನ್ನು
ಅಪವಿತ್ರರಾಗುವುದರಿಂದ ರಕ್ಷಿಸುತ್ತೇನೆ. ಮಾತೆಯರಲ್ಲಿಯೂ ಕೆಲವರು ಇಂತಹವರಿರುತ್ತಾರೆ ಯಾರಿಗೆ
ಕಲ್ಪದ ಹಿಂದೆಯೂ ಸಹ ಪೂತನ ಇತ್ಯಾದಿ ಹೆಸರುಗಳನ್ನು ಕೊಟ್ಟಿದ್ದರು. ನೀವು ಮರೆತು ಹೋಗಿದ್ದೀರಿ.
ತಂದೆಯು ತಿಳಿಸುತ್ತಾರೆ
- ಭಾರತವು ಶಿವಾಲಯವಾಗಿದ್ದಾಗ ಇದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು. ಇಲ್ಲಂತೂ ಯಾರ ಬಳಿ
ಮನೆಗಳು, ವಿಮಾನಗಳು, ಮೊದಲಾದವುಗಳಿವೆಯೋ ಅವರು ನಾವು ಸ್ವರ್ಗದಲ್ಲಿದ್ದೇವೆಂದು ತಿಳಿಯುತ್ತಾರೆ.
ಎಷ್ಟೊಂದು ಮೂಡಮತಿಗಳಾಗಿದ್ದಾರೆ! ಪ್ರತಿಯೊಂದು ಮಾತಿನಲ್ಲಿ ತಂದೆಯು ತಿಳಿಸುತ್ತಾರೆಂದು ಹೇಳಿರಿ.
ಈ ಹಠಯೋಗಿಗಳು ನಿಮಗೆ ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ. ಯಾವಾಗ ಸರ್ವರ ಸದ್ಗತಿದಾತನು ಒಬ್ಬರೇ
ಆಗಿದ್ದಾರೆ ಅಂದಮೇಲೆ ನೀವು ಏತಕ್ಕಾಗಿ ಗುರುಗಳನ್ನು ಮಾಡಿಕೊಳ್ಳುತ್ತೀರಿ? ನೀವು ಸನ್ಯಾಸಿಗಳಾಗಬೇಕೇ
ಅಥವಾ ಹಠಯೋಗವನ್ನು ಕುರಿತು ಬ್ರಹ್ಮತತ್ವದಲ್ಲಿ ಲೀನವಾಗಬೇಕೇ? ಯಾರೂ ಲೀನವಾಗಲು ಸಾಧ್ಯವಿಲ್ಲ
ಎಲ್ಲರೂ ಪಾತ್ರವನ್ನಭಿನಯಿಸಬೇಕು. ಎಲ್ಲಾ ಪಾತ್ರಧಾರಿಗಳು ಅವಿನಾಶಿಯಾಗಿದ್ದಾರೆ, ಇದು ಅನಾದಿ
ಅವಿನಾಶಿ ನಾಟಕವಾಗಿದೆ. ಇಲ್ಲಿ ಯಾರಿಗೂ ಮೋಕ್ಷವು ಸಿಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ -
ನಾನು ಈ ಸಾಧುಗಳನ್ನೂ ಉದ್ದಾರ ಮಾಡಲು ಬರುತ್ತೇನೆ ಅಂದಮೇಲೆ ಪತಿತ-ಪಾವನಿ ಗಂಗೆಯಾಗಲು ಹೇಗೆ ಸಾಧ್ಯ?
ಪತಿತ-ಪಾವನನೆಂದು ನೀವು ನನಗೆ ಹೇಳುತ್ತೀರಲ್ಲವೆ. ನನ್ನೊಂದಿಗೆ ನಿಮ್ಮ ಬುದ್ಧಿಯೋಗವು ದೂರವಾಗಿರುವ
ಕಾರಣ ಈ ಗತಿಯಾಗಿದೆ! ಈಗ ಪುನಃ ನನ್ನೊಂದಿಗೆ ಬುದ್ಧಿಯೋಗವನ್ನಿಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ.
ಮುಕ್ತಿಧಾಮದಲ್ಲಿ ಪವಿತ್ರ ಆತ್ಮರಿರುತ್ತಾರೆ. ಈಗಂತೂ ಇಡೀ ಪ್ರಪಂಚ ಪತಿತವಾಗಿದೆ, ಪಾವನ ಪ್ರಪಂಚದ
ಬಗ್ಗೆ ನಿಮಗೆ ತಿಳಿದೇ ಇಲ್ಲ. ನೀವೆಲ್ಲರೂ ಪೂಜಾರಿಗಳಾಗಿದ್ದೀರಿ. ಪೂಜ್ಯರು ಯಾರೊಬ್ಬರೂ ಇಲ್ಲ.
ಹೀಗೆ ನೀವು ತಂದೆಯ ಹೆಸರಿನಿಂದ ಎಲ್ಲರನ್ನೂ ಜಾಗೃತಗೊಳಿಸಬಹುದು. ಯಾವ ತಂದೆಯು ವಿಶ್ವದ
ಮಾಲೀಕರನ್ನಾಗಿ ಮಾಡುವರೋ ಅವರಿಗೇ ನೀವು ನಿಂದನೆ ಮಾಡುತ್ತೀರಿ. ಶ್ರೀ ಕೃಷ್ಣನು ಚಿಕ್ಕ ಮಗು,
ಸರ್ವಗುಣ ಸಂಪನ್ನ ಅಂದಮೇಲೆ ಅವನು ಈ ಕರ್ತವ್ಯವನ್ನು ಮಾಡಲು ಹೇಗೆ ಸಾಧ್ಯ! ಕೃಷ್ಣನು ಎಲ್ಲರ ತಂದೆ
ಹೇಗಾಗುವನು! ಭಗವಂತನು ಒಬ್ಬರೇ ಇರುತ್ತಾರಲ್ಲವೆ. ಎಲ್ಲಿಯವರೆಗೆ ನನ್ನ ಶ್ರೀಮತದಂತೆ
ನಡೆಯುವುದಿಲ್ಲವೋ ಅಲ್ಲಿಯವರೆಗೆ ತುಕ್ಕು ಹೇಗೆ ಇಳಿಯುತ್ತದೆ? ಯಾವ ಗತಿಯಾಗಿದೆ? ಆದ್ದರಿಂದಲೇ ನಾನು
ಮತ್ತೆ ಬರಬೇಕಾಗುತ್ತದೆ. ನೀವು ಎಷ್ಟೊಂದು ಧರ್ಮ ಭ್ರಷ್ಟರು, ಕರ್ಮ ಭ್ರಷ್ಟರಾಗಿ ಬಿಟ್ಟಿದ್ದೀರಿ.
ತಿಳಿಸಿ - ಹಿಂದೂ ಧರ್ಮವನ್ನು ಯಾರು ಯಾವಾಗ ಸ್ಥಾಪನೆ ಮಾಡಿದರು? ಹೀಗೆ ಚೆನ್ನಾಗಿ ಘಂಟಾಘೋಷವಾಗಿ
ಭಾಷಣ ಮಾಡಿ. ನಿಮಗೆ ಪದೇ-ಪದೇ ತಂದೆಯ ನೆನಪೇ ಬರುವುದಿಲ್ಲ. ನಿಮ್ಮಲ್ಲಿ ಹೇಗೆ ತಂದೆಯೇ ಬಂದು ಭಾಷಣ
ಮಾಡಿದರು, ತಂದೆಯು ಬಹಳ ಸಹಯೋಗ ಕೊಡುತ್ತಿರುತ್ತಾರೆಂದು ಕೆಲವೊಮ್ಮೆ ಕೆಲ ಕೆಲವರು ಬರೆಯುತ್ತಾರೆ.
ನೀವು ನೆನಪಿನ ಯಾತ್ರೆಯಲ್ಲಿರುವುದಿಲ್ಲ ಆದ್ದರಿಂದಲೇ ಇರುವೆ ಮಾರ್ಗದ (ನಿಧಾನವಾಗಿ) ಸರ್ವೀಸ್
ಮಾಡುತ್ತೀರಿ. ತಂದೆಯ ಹೆಸರನ್ನು ತೆಗೆದುಕೊಳ್ಳಿ, ಅನ್ಯರಿಗೆ ಬಾಣವು ನಾಟುವುದು. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನೀವೇ ಆಲ್ರೌಂಡ್ 84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ ಆದ್ದರಿಂದ
ನಾನು ಬಂದು ನಿಮಗೆ ತಿಳಿಸಬೇಕಾಗುವುದು. ನಾನು ಭಾರತದಲ್ಲಿಯೇ ಬರುತ್ತೇನೆ. ಯಾರು ಪೂಜ್ಯರಿದ್ದರೋ
ಅವರು ಪೂಜಾರಿಗಳಾಗುತ್ತಾರೆ, ನಾನಂತೂ ಪೂಜ್ಯನಾಗಲಿ, ಪೂಜಾರಿಯಾಗಲಿ ಆಗುವುದಿಲ್ಲ.
"ತಂದೆಯು ಹೇಳುತ್ತಾರೆ,
ತಂದೆಯು ಹೇಳುತ್ತಾರೆ" ಎಂದು ಇದನ್ನೇ ಹೇಳುತ್ತಿರಬೇಕು. ಯಾವಾಗ ನೀವು ಹೀಗೆ ಭಾಷಣ ಮಾಡುವಿರೋ
ಅದನ್ನು ನಾವು ಕೇಳುವೆವೋ ಆಗ ನೀವು ಇರುವೆಗಳಿಂದ ನೊಣಗಳಂತಾಗಿದ್ದೀರಿ ಎಂದು ತಿಳಿದುಕೊಳ್ಳುತ್ತೇವೆ.
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಓದಿಸುತ್ತೇನೆ, ಕೇವಲ ನೀವು ನನ್ನೊಬ್ಬನನ್ನೇ ನೆನಪು
ಮಾಡಬೇಕು. ಈ ರಥದ ಮೂಲಕ ನಿಮಗೆ ಕೇವಲ ಇಷ್ಟನ್ನೇ ತಿಳಿಸುತ್ತೇನೆ - ಈ ರಥವನ್ನು ನೆನಪು
ಮಾಡುವಂತಿಲ್ಲ. ತಂದೆಯು ಹೀಗೆ ಹೇಳುತ್ತಾರೆ, ತಂದೆಯು ಹೀಗೆ ತಿಳಿಸಿ ಕೊಡುತ್ತಾರೆ ಎಂದು ಹೇಳುತ್ತಾ
ಭಾಷಣ ಮಾಡಿ ನೋಡಿ, ನಿಮ್ಮ ಪ್ರಭಾವವು ಎಷ್ಟೊಂದು ಬೀರುತ್ತದೆ. ತಂದೆಯು ತಿಳಿಸುತ್ತಾರೆ – ದೇಹ
ಸಹಿತವಾಗಿ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆಯಿರಿ, ತನ್ನ ದೇಹವನ್ನೂ ಬಿಟ್ಟರೆ
ಉಳಿಯುವುದು ಕೇವಲ ಆತ್ಮ ಆದ್ದರಿಂದ ತನ್ನನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು
ಮಾಡಿ. "ಅಹಂ ಬ್ರಹ್ಮಾಸ್ಮಿ" ನಾವು ಮಾಯೆಗೆ ಮಾಲೀಕರಾಗಿದ್ದೇವೆಂದು ಕೆಲವರು ಹೇಳುತ್ತಾರೆ. ತಂದೆಯು
ತಿಳಿಸುತ್ತಾರೆ – ಮಾಯೆಯೆಂದು ಯಾವುದಕ್ಕೆ ಹೇಳಲಾಗುತ್ತದೆ? ಸಂಪತ್ತೆಂದು ಯಾವುದಕ್ಕೆ
ಹೇಳಲಾಗುತ್ತದೆ ಎಂಬುದನ್ನೂ ನೀವು ತಿಳಿದುಕೊಂಡಿಲ್ಲ. ನೀವು ಹಣಕ್ಕೆ ಮಾಯೆಯೆಂದು ಹೇಳುತ್ತೀರಿ,
ಹಣದ ಮೇಲಿನ ಮೋಹವು ಮಾಯೆಯಾಗಿದೆ. ಹೀಗೀಗೆ ನೀವು ತಿಳಿಸಬಹುದು - ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ
ಮುರುಳಿಯನ್ನೇ ಓದುವುದಿಲ್ಲ. ತಂದೆಯನ್ನು ನೆನಪು ಮಾಡುವುದಿಲ್ಲ ಆದ್ದರಿಂದ ಬಾಣವು ನಾಟುವುದಿಲ್ಲ
ಏಕೆಂದರೆ ನೆನಪಿನ ಬಲ ಸಿಗುವುದಿಲ್ಲ. ನೆನಪಿನಿಂದಲೇ ಬಲ ಸಿಗುತ್ತದೆ, ಯೋಗಬಲದಿಂದಲೇ ನೀವು ವಿಶ್ವದ
ಮಾಲೀಕರಾಗುತ್ತೀರಿ. ಮಕ್ಕಳೇ, ಪ್ರತೀ ಮಾತಿನಲ್ಲಿ ತಂದೆಯ ಹೆಸರನ್ನು ತೆಗೆದುಕೊಳ್ಳುತ್ತಾ ಇರಿ ಆಗ
ಎಂದೂ ಯಾರೂ ಏನನ್ನೂ ಹೇಳಲು ಸಾಧ್ಯವಿಲ್ಲ. ಸರ್ವರಿಗೆ ಭಗವಂತ ತಂದೆಯು ಒಬ್ಬರಾಗಿದ್ದಾರೆಯೇ ಅಥವಾ
ಎಲ್ಲರೂ ಭಗವಂತರೇ? ನಾವು ಇಂತಹ ಸನ್ಯಾಸಿಯ ಅನುಯಾಯಿಗಳಾಗಿದ್ದೇವೆಂದು ಕೆಲವರು ಹೇಳುತ್ತಾರೆ. ಅವರು
ಸನ್ಯಾಸಿಗಳು, ನೀವು ಗೃಹಸ್ಥಿಗಳಾಗಿದ್ದೀರಿ ಅಂದಮೇಲೆ ನೀವು ಅವರಿಗೆ ಅನುಯಾಯಿಗಳು ಹೇಗಾದಿರಿ?
ಸುಳ್ಳು ಮಾಯೆ, ಸುಳ್ಳು ಕಾಯ, ಎಲ್ಲವೂ ಸುಳ್ಳು ಸಂಸಾರವೆಂದು ಹಾಡುತ್ತಾರೆ. ಸತ್ಯವು ಒಬ್ಬರೇ
ತಂದೆಯಾಗಿದ್ದಾರೆ. ಅವರು ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಸತ್ಯವಂತರಾಗಲು
ಸಾಧ್ಯವಿಲ್ಲ. ಮುಕ್ತಿ-ಜೀವನ್ಮುಕ್ತಿದಾತನೂ ಒಬ್ಬರೇ ಆಗಿದ್ದಾರೆ ಅಂದಮೇಲೆ ನಾವು ಅವರಿಗೆ
ಅನುಯಾಯಿಗಳಾಗಲು ಅವರು ಯಾರಾದರೂ ಮುಕ್ತಿ ಕೊಡುವರೇ? ತಂದೆಯು ತಿಳಿಸುತ್ತಾರೆ - ಇದೂ ಸಹ
ಡ್ರಾಮಾದಲ್ಲಿತ್ತು, ಈಗ ಎಚ್ಚರವಾಗಿ ಕಣ್ಣು ತೆರೆಯಿರಿ. ತಂದೆಯು ಈ ರೀತಿ ಹೇಳುತ್ತಾರೆ ಎಂದು
ಹೇಳುವುದರಿಂದ ನೀವು ಪಾರಾಗುತ್ತೀರಿ. ಯಾರೂ ನಿಮ್ಮ ಬಳಿ ವಾದ ಮಾಡುವುದಿಲ್ಲ. ತ್ರಿಮೂರ್ತಿ ಶಿವ
ತಂದೆಯೆಂದು ಹೇಳಬೇಕು, ಕೇವಲ ಶಿವ ಎಂದಲ್ಲ. ತ್ರಿಮೂರ್ತಿಯನ್ನು ಯಾರು ರಚಿಸಿದರು? ಬ್ರಹ್ಮಾರವರ
ಮೂಲಕ ಸ್ಥಾಪನೆಯನ್ನು ಯಾರು ಮಾಡಿಸುತ್ತಾರೆ? ಬ್ರಹ್ಮನು ರಚಯಿತನೇ? ಹೀಗೆ ನಶೆಯಿಂದ ಹೇಳಿರಿ ಆಗ
ಕೆಲಸ ಮಾಡುತ್ತೀರಿ ಇಲ್ಲವಾದರೆ ದೇಹಾಭಿಮಾನದಲ್ಲಿ ಬಂದು ಭಾಷಣ ಮಾಡುತ್ತೀರಿ.
ತಂದೆಯು ತಿಳಿಸುತ್ತಾರೆ
- ಇದು ಅನೇಕ ಧರ್ಮಗಳ ಕಲ್ಪ ವೃಕ್ಷವಾಗಿದೆ. ಮೊಟ್ಟ ಮೊದಲನೆಯದು ದೇವಿ-ದೇವತಾ ಧರ್ಮವಾಗಿದೆ. ಆ
ದೇವತಾ ಧರ್ಮವು ಈಗ ಎಲ್ಲಿ ಹೋಯಿತು? ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ ಆದರೆ ಇದು 5000
ವರ್ಷಗಳ ಮಾತಾಗಿದೆ. ನೀವು ಅವರ ಮಂದಿರಗಳನ್ನೂ ಕಟ್ಟಿಸುತ್ತಾ ಇರುತ್ತೀರಿ. ಪಾಂಡವರು ಮತ್ತು ಕೌರವರ
ಯುದ್ಧವಾಯಿತೆಂದು ತೋರಿಸುತ್ತಾರೆ. ಪಾಂಡವರು ಪರ್ವತಗಳ ಮೇಲೆ ಕರಗಿಹೋದರು ಮತ್ತೇನಾಯಿತು? ನಾನು
ಹೇಗೆ ಹಿಂಸೆಯನ್ನು ಮಾಡಲಿ? ನಾನಂತೂ ನಿಮ್ಮನ್ನು ಅಹಿಂಸಕ ವೈಷ್ಣವರನ್ನಾಗಿ ಮಾಡುತ್ತೇನೆ, ಕಾಮ
ಕಟಾರಿಯನ್ನು ನಡೆಸದೇ ಇರುವಂತಹವರಿಗೆ ವೈಷ್ಣವರೆಂದು ಹೇಳುತ್ತಾರೆ. ಅವರು ವಿಷ್ಣುವಿನ
ವಂಶಾವಳಿಯಾಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಸರ್ವೀಸಿನಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಲು ಅಹಂಕಾರವನ್ನು ಬಿಟ್ಟು ಪ್ರತೀ ಮಾತಿನಲ್ಲಿ
ತಂದೆಯ ಹೆಸರನ್ನು ತೆಗೆದುಕೊಳ್ಳಬೇಕಾಗಿದೆ. ನೆನಪಿನಲ್ಲಿದ್ದು ಸೇವೆ ಮಾಡಬೇಕಾಗಿದೆ.
ಪರಚಿಂತನೆಯಲ್ಲಿ ತನ್ನ ಸಮಯವನ್ನು ಕಳೆಯಬಾರದು.
2. ಸತ್ಯ-ಸತ್ಯ
ವೈಷ್ಣವರಾಗಬೇಕಾಗಿದೆ. ಯಾವುದೇ ಹಿಂಸೆ ಮಾಡಬಾರದು. ದೇಹ ಸಹಿತ ಎಲ್ಲಾ ಸಂಬಂಧಗಳಿಂದ
ಬುದ್ಧಿಯೋಗವನ್ನು ತೆಗೆಯಬೇಕಾಗಿದೆ.
ವರದಾನ:
ಹಾಂಜೀ! ಯ ಪಾಠದ
ಮೂಲಕ ಸೇವೆಯಲ್ಲಿ ಮಹಾನ್ ಆಗುವಂತಹ ಸರ್ವರಿಂದ ಆಶೀರ್ವಾದಕ್ಕೆ ಪಾತ್ರ ಭವ.
ಯಾವುದೇ ಸೇವೆ ಖುಶಿ
ಮತ್ತು ಒಲವಿನಿಂದ ಮಾಡುತ್ತಾ ಸದಾ ಗಮನವಿರಲಿ ನಾನು ಏನು ಸೇವೆ ಮಾಡುತ್ತಿರುವೆ ಅದರಲ್ಲಿ ಎಲ್ಲರ
ಆಶೀರ್ವಾದ ಪ್ರಾಪ್ತಿ ಯಾಗಲಿ ಎಲ್ಲಿ ಆಶೀರ್ವಾದವಿರುತ್ತೆ ಅಲ್ಲಿ ಪರಿಶ್ರಮವಿರುವುದಿಲ್ಲ. ಈಗ ಇದೇ
ಲಕ್ಷ್ಯಯಿರಲಿ ಯಾರೇ ಸಂಪರ್ಕದಲ್ಲಿ ಬರಲಿ ಅವರಿಂದ ಆಶೀರ್ವಾದ ಪಡೆಯುತ್ತಾ ಹೋಗಿ. ಹಾಂಜೀ! ಎನ್ನುವ
ಪಾಠವೇ ಆಶೀರ್ವಾದ ಪಡೆಯಲು ಸಾಧನವಾಗಿದೆ. ಅವರು ತಪ್ಪನ್ನೇ ಮಾಡಿದರೂ ಆದರೂ ಅವರಿಗೆ ತಪ್ಪು ಎಂದು
ಹೇಳಿ ತಳ್ಳಿ ಬಿಡುವ ಬದಲು ಆಶ್ರಯ ಕೊಟ್ಟು ನಿಲ್ಲಿಸಿ. ಸಹಯೋಗಿಗಳಾಗಿ. ಆಗ ಅವರಿಂದಲೂ ಸಹಾ
ಸಂತುಷ್ಠತೆಯ ಆಶೀರ್ವಾದ ಸಿಕ್ಕುವುದು. ಯಾರು ಆಶೀರ್ವಾದ ತೆಗೆದುಕೊಳ್ಳುವುದರಲ್ಲಿ ಮಹಾನ್
ಆಗುತ್ತಾರೆ ಅವರು ಸ್ವತಃ ಮಹಾನ್ ಆಗುತ್ತಾರೆ.
ಸ್ಲೋಗನ್:
ಹಾರ್ಡ್ವರ್ಕರ್
ಜೊತೆ-ಜೊತೆ ತಮ್ಮ ಸ್ಥಿತಿಯನ್ನೂ ಸಹಾ ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳುವ ಲಕ್ಷ್ಯವನ್ನಿಟ್ಟುಕೊಳ್ಳಿ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಯೋಗದ ಪ್ರಯೋಗ
ಅರ್ಥಾತ್ ತಮ್ಮ ಶುದ್ಧ ಸಂಕಲ್ಪಗಳ ಪ್ರಯೋಗ ತನುವಿನ ಮೇಲೆ, ಮನಸ್ಸಿನ ಮೇಲೆ, ಸಂಸ್ಕಾರಗಳ ಮೇಲೆ
ಅನುಭವ ಮಾಡುತ್ತಾ ಮುಂದುವರೆಯುತ್ತಾ ಹೋಗಿ, ಇದರಲ್ಲಿ ಒಬ್ಬರಿನ್ನೊಬ್ಬರನ್ನು ನೋಡಬೇಡಿ. ಇವರು ಏನು
ಮಾಡುವರು, ಇವರು ಮಾಡುವುದಿಲ್ಲ, ಹಳಬರು ಮಾಡುತ್ತಾರೋ ಅಥವಾ ಇಲ್ಲವೇ, ಇದನ್ನು ನೋಡಬೇಡಿ. ಮೊದಲು
ನಾನು ಈ ಅನುಭವದಲ್ಲಿ ಮುಂದೆ ಬರಬೇಕು ಏಕಂದರೆ ಇದು ತಮ್ಮ ಆಂತರೀಕ ಪುರುಷಾರ್ಥದ ಮಾತಾಗಿದೆ. ಯಾವಾಗ
ಇಂತಹ ವ್ಯಕ್ತಿಗತ ರೂಪದಲ್ಲಿ ಈ ಪ್ರಯೋಗದಲ್ಲಿ ತೊಡಗಿ ಬಿಡುವರು, ವೃದ್ಧಿಯನ್ನು ಪಡೆಯುವರು ಆಗ
ಒಬ್ಬಬ್ಬರ ಶಾಂತಿಯ ಶಕ್ತಿಯ ಸಂಘಟನೆ ರೂಪದಲ್ಲಿ ವಿಶ್ವದ ಮುಂದೆ ಪ್ರಭಾವ ಬೀಳುವುದು.