23.08.26    Avyakt Bapdada     Kannada Murli    31.03.2011     Om Shanti     Madhuban


“ದೃಢ ಸಂಕಲ್ಪದ ಮೂಲಕ ಟೆನ್ಷನ್ ಫ್ರೀಯ ಉದಾಹರಣೆ ಆಗಿ ಎಲ್ಲರಿಗೆ ಆಧಾರಮೂರ್ತಿ ಆಗಿ, ಮನಸ್ಸಾ ಶಕ್ತಿಯ ಮೂಲಕ ದುಃಖಿ ಆತ್ಮರಿಗೆ ಖುಷಿಯ ವರದಾನವನ್ನು ಕೊಡಿ”


ಈ ದಿನ ಗ್ರೇಟ್-ಗ್ರೇಟ್ ಗ್ರಾಂಡ್ ಫಾದರ್ ತನ್ನ ಕೋಟಿಯಲ್ಲಿ ಕೆಲವರು, ಕೆಲವರಲ್ಲಿ ಕೆಲವು ಮಕ್ಕಳ ಭಾಗ್ಯದ ರೇಖೆಗಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬರ ಮಸ್ತಕದಿಂದ ಹೊಳೆಯುತ್ತಿರುವ, ದಿವ್ಯ ಹೊಳೆಯುತ್ತಿರುವ ನಕ್ಷತ್ರದ ಹೊಳಪನ್ನು ನೋಡುತ್ತಿದ್ದಾರೆ. ನಯನಗಳಿಂದ ಸ್ನೇಹದ ರೇಖೆಯನ್ನು ನೋಡುತ್ತಿದ್ದಾರೆ. ಮುಖದಿಂದ ಜ್ಞಾನದ ರೇಖೆಯನ್ನು ನೋಡುತ್ತಿದ್ದಾರೆ. ಹೃದಯದಲ್ಲಿ ಹೃದಯ ರಾಮನ ಲವಲೀನ ರೇಖೆಯನ್ನು ನೋಡುತ್ತಿದ್ದಾರೆ. ಕೈಗಳಲ್ಲಿ ಜ್ಞಾನದ ಖಜಾನೆಗಳ ರೇಖೆಯನ್ನು ನೋಡುತ್ತಿದ್ದಾರೆ. ಪಾದಗಳಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿ ಪದಮದ ರೇಖೆಯನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗು ಈ ರೇಖೆಗಳಲ್ಲಿ ನಂಬರ್ವಾರಾಗಿ ಸಂಪನ್ನರಾಗಿದ್ದಾರೆ. ಇಂತಹ ಭಾಗ್ಯ ತಮ್ಮ ವಿನಃ ಯಾರಿಗೂ ಇಲ್ಲ. ತಮ್ಮ ಇಷ್ಟು ಶ್ರೇಷ್ಠ ಭಾಗ್ಯ ಪ್ರತಿಯೊಬ್ಬ ಮಗುವಿನಿಂದ ಹೊಳೆಯುತ್ತಿರುವುದು ಕಂಡು ಬರುತ್ತಿದೆ. ಮತ್ತೆ ಈ ಭಾಗ್ಯ ಅವಿನಾಶಿ ಆಗಿ ಬಿಡುತ್ತದೆ ಏಕೆ? ಏಕೆಂದರೆ ಕೊಡುವವರು ಅವಿನಾಶಿ ತಂದೆ ಆಗಿದ್ದಾರೆ. ಈ ಸಂಗಮಯುಗದಲ್ಲೇ ಇಂತಹ ಶ್ರೇಷ್ಠ ಭಾಗ್ಯ ಪ್ರಾಪ್ತಿ ಆಗುತ್ತದೆ, ಯಾವುದು ಭವಿಷ್ಯದಲ್ಲೂ ನಡೆಯುತ್ತಿರುತ್ತದೆ. ಈ ಸಂಗಮಯುಗ ಸರ್ವ ಪ್ರಾಪ್ತಿಗಳಯುಗವಾಗಿದೆ, ಯಾರು ಎಷ್ಟು ತನ್ನ ಭಾಗ್ಯವನ್ನು ಜಮಾ ಮಾಡಿಕೊಳ್ಳುತ್ತಾರೆ ಅಷ್ಟು ಅನೇಕ ಜನ್ಮಗಳಿಗೆ ಭಾಗ್ಯದ ಫಲ ಸಿಗುತ್ತಿರುತ್ತದೆ. ಈ ಸಂಗಮಯುಗದ ಮಹಿಮೆ ತಾವು ಮಕ್ಕಳಿಗಷ್ಟೇ ಗೊತ್ತಿದೆ. ಸಂಗಮಯುಗದ ಪ್ರಾಪ್ತಿಗಳು ಇಡೀ ಕಲ್ಪದಲ್ಲಿ ಶ್ರೇಷ್ಠಾತಿ ಶ್ರೇಷ್ಠ ಆಗಿದೆ.

ಪ್ರತಿಯೊಬ್ಬ ಮಗು ಈ ಸಂಗಮಯುಗದ ಪ್ರಾಪ್ತಿಗಳಿಂದ ಎಷ್ಟು ಸಂಪನ್ನರಾಗಿದ್ದಾರೆ ಎಂದು ಬಾಪ್ದಾದಾರವರು ನೋಡುತ್ತಿದ್ದಾರೆ. ತಾವೆಲ್ಲರೂ ಸಹ ಸರ್ವ ಪ್ರಾಪ್ತಿಗಳ ಅನುಭವದಲ್ಲಿ ಸದಾ ಇರುತ್ತೀರೋ ಅಥವಾ ಕೆಲವೊಮ್ಮೆ ಇರುತ್ತೀರೋ? ಅವಿನಾಶಿ ತಂದೆ ಅಂದಾಗ ಪ್ರಾಪ್ತಿಗಳೂ ಸಹ ಅವಿನಾಶಿಯಾಗಿದೆ, ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನು ಯಾವ ರೂಪದಲ್ಲಿ ನೋಡಲು ಬಯಸುತ್ತಾರೆ, ಗೊತ್ತಿದೆಯಲ್ಲವೇ! ಪ್ರತಿಯೊಬ್ಬ ಮಗು ಸ್ವರಾಜ್ಯಾಧಿಕಾರಿ ರಾಜಾ ಆಗಲಿ ಎಂದು ಬಾಪ್ದಾದಾರವರು ಇದನ್ನೇ ಬಯಸುತ್ತಾರೆ. ಸ್ವಯಂನ ಮೇಲೆ ಅರ್ಥಾತ್ ಕರ್ಮೇಂದ್ರಿಯಗಳ ಮೇಲೆ ಮನಸ್ಸು-ಬುದ್ಧಿ-ಸಂಸ್ಕಾರಗಳ ಮೇಲೆ ರಾಜರಾಗಿ ರಾಜ್ಯ ಮಾಡಲಿ. ಭವಿಷ್ಯದಲ್ಲಂತೂ ರಾಜ್ಯಾಧಿಕಾರಿ ಆಗುತ್ತೀರಿ ಆದರೆ ಈಗ ಸ್ವರಾಜ್ಯಾಧಿಕಾರಿ ರಾಜಾ ಆಗಲಿ. ಯಾವುದೇ ಕರ್ಮೇಂದ್ರಿಯಗಳು ತನ್ನ ಕಂಟ್ರೋಲ್ನಲ್ಲಿ ಇರಬೇಕು ಏಕೆಂದರೆ ತಂದೆಯ ಮೂಲಕ ಸರ್ವ ಶಕ್ತಿಗಳ ಖಜಾನೆ ಪ್ರಾಪ್ತಿ ಆಗಿದೆ. ಅಂದಾಗ ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನು ಸ್ವರಾಜ್ಯಾಧಿಕಾರಿ ರಾಜ ರೂಪದಲ್ಲಿ ನೋಡಲು ಬಯಸುತ್ತಾರೆ. ತಾವೆಲ್ಲರೂ ಸ್ವರಾಜ್ಯಾಧಿಕಾರಿ ಆಗಿದ್ದೀರಾ? ಮನಸ್ಸು-ಬುದ್ಧಿಯ ಮೇಲೆ ರೂಲಿಂಗ್ ಪವರ್ (ಶಕ್ತಿ), ಕಂಟ್ರೋಲಿಂಗ್ ಪವರ್ (ನಿಯಂತ್ರಣ ಮಾಡುವ ಶಕ್ತಿ) ಬಂದಿದೆಯೇ? ಅಧೀನತೆ ಇಲ್ಲ ತಾನೆ? ಅಧಿಕಾರಿ ಆಗಿದ್ದೀರಿ. ಬಾಪ್ದಾದಾರವರನ್ನು ಜೊತೆಯಲ್ಲಿ ಇಟ್ಟುಕೊಂಡಾಗ ಒಂಟಿ ಆಗುವುದಿಲ್ಲ, ತಂದೆಯ ಸದಾ ಜೊತೆಗಾರರನ್ನಾಗಿ ಮಾಡಿಕೊಂಡಾಗ ಮನಸ್ಸು-ಬುದ್ಧಿ-ಸಂಸ್ಕಾರಗಳು ವಶದಲ್ಲಿ ಇಲ್ಲದೆ ಇರುವ ಯಾವುದೇ ಶಕ್ತಿ ಇರುವುದಿಲ್ಲ. ಆದ್ದರಿಂದ ಬಾಪ್ದಾದಾ ಶಕ್ತಿಯರಿಗೆ ಸದಾ ಹೇಳುತ್ತಾರೆ - ತಮ್ಮ ಯಾವ ಸ್ವರೂಪ ನೆನಪು ಇಟ್ಟುಕೊಂಡಾಗ ಎಂದೂ ತಂದೆಯ ಜೊತೆಯನ್ನು ಮರೆಯುವುದಿಲ್ಲ? ನಾವು ಶಿವ ಶಕ್ತಿಯರಾಗಿದ್ದೇವೆ ಎಂಬ ಸ್ವರೂಪ ನೆನಪು ಇಟ್ಟುಕೊಳ್ಳಬೇಕು. ಶಿವ ಮತ್ತು ಶಕ್ತಿ ಜೊತೆಯಲ್ಲಿ ಇದ್ದಾರೆ. ಈ ಸ್ಮೃತಿ ಮಾಯಾಜೀತರು ಮತ್ತು ಪ್ರಕೃತಿ ಜೀತರನ್ನಾಗಿ ಸ್ವತಃವಾಗಿ ಮಾಡಿ ಬಿಡುತ್ತದೆ ಏಕೆಂದರೆ ಬಾಪ್ದಾದಾರವರು ತಿಳಿಸಿದರು - ವರ್ತಮಾನ ಸಮಯ ಪ್ರಕೃತಿ ತನ್ನ ಕಾರ್ಯವನ್ನು ಮಾಡುತ್ತಿರುತ್ತದೆ ಏಕೆಂದರೆ ಪ್ರಕೃತಿಗೂ ಸಹ ಮನುಷ್ಯಾತ್ಮರು ತೊಂದರೆ ಕೊಡುತ್ತಾರೆ ಅಂದಾಗ ಪ್ರಕೃತಿಯೂ ಸಹ ತೊಂದರೆ ಕೊಡುತ್ತದೆ. ಈಗಿನ ಸಮಯದಲ್ಲಿ ನೋಡುತ್ತಿದ್ದೀರಿ ಪ್ರಕೃತಿ ಎಲ್ಲಾದರೂ ತನ್ನ ಕಾರ್ಯವನ್ನು ಮಾಡುತ್ತಿರುತ್ತದೆ ಆದರೆ ತಾವು ಪ್ರಕೃತಿಜೀತರಾಗಿ ಪ್ರಕೃತಿಯನ್ನೂ ಸಹ ಸತೋಪ್ರಧಾನವನ್ನಾಗಿ ಮಾಡುತ್ತಿದ್ದೀರಿ. ಮನುಷ್ಯರಂತೂ ಪ್ರಕೃತಿಯ ಏರುಪೇರನ್ನು ನೋಡಿ ನಾಳೆ ಏನಾಗುತ್ತದೋ ಎಂದು ಭಯ ಪಡುತ್ತಾರೆ. ಆದರೆ ಒಳ್ಳೆಯದರಲ್ಲಿ ಒಳ್ಳೆಯದು ಆಗುತ್ತದೆ ಎಂದು ತಮಗೆ ಗೊತ್ತಿದೆ ಏಕೆಂದರೆ ಈಗ ಈ ಸಂಗಮ ಯುಗ ಸೃಷ್ಟಿಚಕ್ರದ ಅಮೃತವೇಳೆ ನಡೆಯುತ್ತಿದೆ. ಅಮೃತವೇಳೆಯ ನಂತರ ಏನಾಗುತ್ತದೆ? ಬೆಳಗಿನ ಸಮಯ ಇರುತ್ತದೆ. ಅಂಧಕಾರ ಸಮಾಪ್ತಿ ಆಗಿ ಬೆಳಕು ಬಂದು ಬಿಡುತ್ತದೆ ಅಂದಾಗ ಈಗ ನಮ್ಮ ರಾಜ್ಯ ಸುಖಮಯ ಸಂಸಾರ ಎಲ್ಲಿ ಪ್ರಕೃತಿಯೂ ಸಹ ಸುಖಮಯವಾಗಿರುತ್ತದೆ, ಅಂತಹ ರಾಜ್ಯ ಬಂದು ಬಿಟ್ಟಿದೆ ಎಂದು ತಮಗೆ ಖುಷಿ ಇದೆ. ಖುಷಿ ಇದೆಯಲ್ಲವೇ! ಯಾವ ರಾಜ್ಯದಲ್ಲಿ ದುಃಖ-ಅಶಾಂತಿಯ ಹೆಸರು-ಗುರುತು ಇರುವುದಿಲ್ಲ ಏಕೆಂದರೆ ಈಗ ಸಂಗಮಯುಗದಲ್ಲಿ ತಾವು ಪ್ರಕೃತಿಜೀತರಾಗುತ್ತಿದ್ದೀರಿ. ಅಂದಾಗ ಎಲ್ಲರಿಗೆ ಖುಷಿ ಇದೆಯಲ್ಲವೇ, ಯಾವುದಕ್ಕೆ ಖುಷಿ ಇದೆ? ಹೇಳಿ, ನಮ್ಮ ರಾಜ್ಯ ಬರುವುದಿದೆ. ಈ ಖುಷಿ ಇದೆಯೇ? ಯಾರು ಈ ಖುಷಿಯಲ್ಲಿ ಇರುತ್ತಾರೆ ಅವರು ಕೈ ಎತ್ತಿ. ಬಹಳ ಒಳ್ಳೆಯದು. ತಾವಂತೂ ಖುಷಿಯಾಗಿರುತ್ತೀರಿ ಇದಕ್ಕಾಗಿ ಶುಭಾಶಯಗಳು ಆದರೆ ಈ ಖುಷಿ ತಮ್ಮ ಖುಷಿ ತಮ್ಮ ಸಹೋದರ-ಸಹೋದರಿ ಯಾರು ದುಃಖಿ-ಅಶಾಂತರಾಗಿದ್ದಾರೆ ಅವರಿಗೆ ತಮ್ಮ ತಂದೆಯ ಮೂಲಕ ತೆಗೆದುಕೊಂಡಿರುವ ಕಿರಣಗಳ ಮೂಲಕ ಖುಷಿಯ ಕಿರಣಗಳನ್ನು ತಲುಪಿಸುತ್ತೀರಾ? ಬಾಪ್ದಾದಾರವರು ತಿಳಿಸಿದರು - ಅಂತಹ ಮನಸ್ಸಾ ಸೇವೆ ಮಾಡಲು ಸಮಯವನ್ನು ಪ್ರತಿಯೊಬ್ಬರು ತಮ್ಮ ದಿನಚರಿಯಲ್ಲಿ ಫಿಕ್ಸ್ ಮಾಡಿಕೊಳ್ಳಬೇಕು. ಹೇಗೆ ಬೇರೆ ಕಾರ್ಯಗಳಿಗಾಗಿ ಸಮಯವನ್ನು ಫಿಕ್ಸ್ ಮಾಡಿಕೊಳ್ಳುತ್ತೀರಿ ಅದೇ ರೀತಿ ತಮ್ಮ ಖುಷಿಯ ಔಷಧಿಯ ಮೂಲಕ ದುಃಖಿ ಆತ್ಮರಿಗೆ ಮನಸ್ಸಾ ಶಕ್ತಿಯ ಮೂಲಕ ಸ್ವಲ್ಪ ವರದಾನವನ್ನು ಕೊಟ್ಟು ಅವರನ್ನೂ ಸಹ ಖುಷಿ ಪಡಿಸಿ, ಅಂದಾಗ ಯಾರು ತಮ್ಮ ಸಮಯವನ್ನು ಮನಸ್ಸಾ ಸೇವೆಗಾಗಿ ಫಿಕ್ಸ್ ಮಾಡಿದ್ದಾರೆ, ಅವರು ಕೈ ಎತ್ತಿ. ಒಳ್ಳೆಯದು, ಯಾರು ಮಾಡಿಲ್ಲವೋ ಅವರು ಸ್ವಲ್ಪ ಇದ್ದಾರೆ ಆದರೆ ಮನಸಾ ಸೇವೆಗಾಗಿ ಸಮಯವನ್ನು ಫಿಕ್ಸ್ ಮಾಡಬೇಕು ಏಕೆಂದರೆ ತಮ್ಮ ಸಹೋದರ-ಸಹೋದರಿಯರೇ ಆಗಿದ್ದಾರಲ್ಲವೇ. ಅಂದಾಗ ದಯೆ ಬರುತ್ತದೆಯಲ್ಲವೇ! ಅಥವಾ ದಯೆ ಬರುವುದಿಲ್ಲವೋ? ದಯೆ ಬರುತ್ತದೆಯಲ್ಲವೇ! ಮತ್ತೆ ಸಂಗಮ ಯುಗದ ಯಾವುದು ಎರಡು ವಿಶೇಷ ಮಾತುಗಳಿವೆ ಯಾವುದು ಅಮೂಲವಾಗಿದೆ ಒಂದು ಸಂಕಲ್ಪ ಮತ್ತು ಎರಡನೆಯದು ಸಂಗಮದ ಸಮಯ ಏಕೆಂದರೆ ಸಂಗಮದ ಸಮಯದಲ್ಲಿ ಒಂದು ಜನ್ಮದಲ್ಲಿ ಅನೇಕ ಜನ್ಮಗಳ ಪ್ರಾಲಬ್ದವನ್ನು ಮಾಡಿಕೊಳ್ಳುವುದನ್ನು ಬಾಪ್ದಾದಾರವರು ಎಲ್ಲರನ್ನು ನೋಡಲು ಬಯಸುತ್ತಾರೆ. ಈಗಿನ ಸಮಯದಲ್ಲಿ ಅನೇಕರಿಗೆ ಅಶುದ್ಧ ಸಂಕಲ್ಪ ಕಡಿಮೆ ನಡೆಯುತ್ತದೆ ಆದರೆ ವ್ಯರ್ಥ ಸಂಕಲ್ಪ ಬರುತ್ತಾ ಹೋಗುವುದನ್ನು ಬಾಪ್ದಾದಾರವರು ನೋಡಿದ್ದಾರೆ. ಈ ಒಂದು ಜನ್ಮದ ಮೂಲ್ಯದನುಸಾರವಾಗಿ ಈಗ ವ್ಯರ್ಥ ಸಂಕಲ್ಪ ಸಮಾಪ್ತಿ ಆಗಬೇಕಾಗಿದೆ ಏಕೆಂದರೆ ಸಂಗಮ ಯುಗದ ಮಹತ್ವದ ಲೆಕ್ಕದಲ್ಲಿ ಒಂದು ಸೆಕೆಂದ ಹೆಚ್ಚು ಅಮೂಲ್ಯ ಸಮಯದ ಅಧಿಕಾರವನ್ನು ಕೊಡಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಎರಡು ಮಾತುಗಳ ಸಮಯ ಮತ್ತು ಸಂಕಲ್ಪದ ಮೂಲ್ಯವನ್ನು ತಿಳಿದು ಸಮಯವನ್ನು ಮತ್ತು ಸಂಕಲ್ಪವನ್ನು ಸಫಲ ಮಾಡಿ. ಹೇಗೆ ಸ್ಥೂಲ ಖಜಾನೆಯನ್ನು ಸಫಲ ಮಾಡುತ್ತೀರಿ, ಒಂದು ಜನ್ಮದಲ್ಲಿ ಸಫಲ ಮಾಡುವುದರಿಂದ ಅನೇಕ ಜನ್ಮಗಳು ಅದರ ಪ್ರಾಲಬ್ದ ಜಮಾ ಆಗುತ್ತದೆ ಎಂದು ಗೊತ್ತಿದೆ. ಹಾಗೆ ಈ ಎರಡು ಮಾತುಗಳ ಮೇಲೆ ಅಟೆನ್ಷನ್ ಕೊಟ್ಟು ಸಫಲ ಮಾಡಿ ಸಫಲತಾಮೂರ್ತಿಗಳಾಗಿ.

ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ಈ ದಿನ ವಿಶೇಷವಾಗಿ ಒಂದು ವರದಾನವನ್ನು ಕೊಡುತ್ತಿದ್ದಾರೆ - ಪ್ರತಿಯೊಬ್ಬ ಮಗು ಇಂದಿನಿಂದ ತಮ್ಮನ್ನು ಟೆನ್ಷನ್ ಫ್ರೀ ಮಾಡಿಕೊಳ್ಳಲು ಸಾಧ್ಯವೇ? ಇಂದಿನಿಂದ ಅಟೆನ್ಷನ್ ನೋ ಟೆನ್ಷನ್ ಎಂಬ ದೃಢ ಸಂಕಲ್ಪ ಮಾಡಿ. ಬಾಪ್ದಾದಾ ಮಕ್ಕಳನ್ನು ಟೆನ್ಷನ್ನಲ್ಲಿ ನೋಡಿದಾಗ ಯೋಚನೆ ಮಾಡುತ್ತಾರೆ ಈಗೀಗ ಈ ಮಗುವಿನ ಫೋಟೋ ತೆಗೆದು ಕಳಿಸಿದಾಗ ಸ್ವಯಂ ನಾನು ಏನಾಗಿ ಬಿಟ್ಟಿದ್ದೇನೆ ಎಂದು ತಿಳಿದುಕೊಳ್ಳುತ್ತಾರೆ. ಬಾಪ್ದಾದಾ ಮನ್ಜೀತರು, ಜಗತ್ಜೀತರನ್ನಾಗಿ ಮಾಡಲು ಬಯಸುತ್ತಾರೆ. ಟೆನ್ಷನ್ ಯಾವುದರಲ್ಲಿದೆ? ಮನಸ್ಸಿನಲ್ಲಿಯೇ ಬರುತ್ತದೆಯಲ್ಲವೇ. ತಾವಂತೂ ರಾಜರಾಗಿದ್ದೀರಿ, ಸ್ವರಾಜ್ಯಾಧಿಕಾರಿ ಆಗಿದ್ದೀರಿ! ಮನಸ್ಸು ತಮ್ಮದೋ ಅಥವಾ ಮನಸ್ಸು ಮಾಲೀಕ ಆಗಿದೆಯೋ? ತಾವು ಏನು ಹೇಳುತ್ತೀರಿ? ಇಡೀ ದಿನ ನನ್ನ ಮನಸ್ಸು ಎಂದು ಹೇಳುತ್ತೀರಲ್ಲವೇ! ಮಾಲೀಕರಾಗಿಲ್ಲ ತಾನೇ! ಯಾರು ಸಾಹಸ ಇಟ್ಟುಕೊಳ್ಳುತ್ತಾರೆ ಬಾಪ್ದಾದಾರವರ ವರದಾನ ಸಹಜವಾಗಿ ಸಿಗುತ್ತದೆ ಆದರೆ ಸ್ವಲ್ಪ ಅಟೆನ್ಷನ್ ಕೊಡಬೇಕಾಗುತ್ತದೆ. ಬಾಪ್ದಾದಾರವರ ವರದಾನದ ಸಹಯೋಗವನ್ನು ಅನುಭವ ಮಾಡಿ ನೋಡಬೇಕು. ಎಲ್ಲರ ಚೆಹರೆ ಯಾವಾಗ ನೋಡಿದರೂ ಹೇಗೆ ಕಾಣಿಸುತ್ತದೆ? ಟೆನ್ಷನ್ ಫ್ರೀ, ಕಮಲ ಪುಷ್ಪದ ಸಮಾನ ಅಥವಾ ಹರಳಿರುವ ಗುಲಾಬಿ ಪುಷ್ಪ ಸಮಾನ ಇರಬೇಕು.

ಬಾಪ್ದಾದಾರವರು ನೋಡಿದರು - ಮೊದಲು ಪರ್ಸೆಂಟೇಜ್ ಬರೆಯುವ ಕೆಲಸವನ್ನು ಕೊಟ್ಟಿದರು. ಎಲ್ಲಾ ಸ್ಥಾನಗಳಿಂದ ಸ್ವಲ್ಪ-ಸ್ವಲ್ಪ ಸಮಾಚಾರ ಬಂದಿದೆ. ಇದರದೂ ರಿಜಲ್ಟ್ ತೆಗೆದಿದ್ದಾರೆ. ಅಟೆನ್ಷನ್ ಕೊಟ್ಟಿರುವುದಕ್ಕೆ ಶುಭಾಶಯಗಳನ್ನು ಬಾಪ್ದಾದಾರವರು ಕೊಡುತ್ತಿದ್ದಾರೆ. ಆದರೆ ಬಾಪ್ದಾದಾ ಇದನ್ನೇ ಬಯಸುತ್ತಾರೆ ಸಮಯ ಪ್ರಮಾಣ ಈಗ ವಾಣಿ ಮೂಲಕ ಕೇಳುವ ಸಮಯ ಕಡಿಮೆ ಸಿಗುತ್ತದೆ ಆದ್ದರಿಂದ ಮನಸ್ಸಾ ಮೂಲಕ, ಚೆಹರೆ ಮತ್ತು ಚಲನೆ ಮೂಲಕ ಸೇವೆ ಮಾಡಿ. ಈಗಿನ ಅಭ್ಯಾಸ ಮುಂಬರುವ ಸಮಯದಲ್ಲಿ ಕಾರ್ಯದಲ್ಲಿ ಉಪಯೋಗ ಆಗುತ್ತದೆ. ಅಂದಾಗ ಇಂದಿನಿಂದ ಟೆನ್ಷನ್ ಫ್ರೀ ಸಂಕಲ್ಪ ಮಾಡುವುದಕ್ಕೆ ಸಾಧ್ಯವೇ? ಮಾಡಲು ಸಾಧ್ಯವೇ? ಮಾಡಲು ಸಾಧ್ಯವೇ? ಮಾಡಲು ಸಾಧ್ಯವೇ? ಕೈ ಎತ್ತಿ. ಟೆನ್ಷನ್ ಫ್ರೀ ಆಗಬೇಕು. ಒಳ್ಳೆಯದು. ಎಲ್ಲರ ಫೋಟೋ ತೆಗೆಯಿರಿ. ಯಾವ ಆತ್ಮರು ಪರಿಸ್ಥಿತಿಯ ಪ್ರಮಾಣ ಬಹಳ ಟೆನ್ಷನ್ನಲ್ಲಿ ಇರುತ್ತಾರೆ. ಈಗಿನ ಸಮಯದಲ್ಲಿ ಪ್ರಪಂಚದಲ್ಲಿ ಟೆನ್ಷನ್ (ಒತ್ತಡ) ಬಹಳ ವೃದ್ಧಿ ಆಗುತ್ತಿದೆ. ಅಂದಾಗ ತಮ್ಮ ಟೆನ್ಷನ್ ಫ್ರೀನ ಅನುಭವ ಮತ್ತು ಟೆನ್ಷನ್ ಫ್ರೀಯ ಚಲನೆ ಮತ್ತು ಚೆಹರೆ ಅವರ ಮುಂದೆ ಒಂದು ಆಧಾರಮೂರ್ತಿ ಆಗಿ ಬಿಡುತ್ತದೆ. ಒಂದುವೇಳೆ ಈಗ ಪ್ರಪಂಚವನ್ನು ಸುತ್ತಾಡಿದರೆ ಅಥವಾ ಸಮಾಚಾರ ಕೇಳಿದರೆ ಏನು ಕಾಣಿಸುತ್ತದೆ? ಅಲ್ಪಕಾಲಕ್ಕಾಗಿ ತಮ್ಮನ್ನು ತಾವು ಖುಷಿ ಮಾಡಿಕೊಳ್ಳುವ ಸಾಧನವನ್ನು ಮಾಡುತ್ತಿರುತ್ತಾರೆ ಅಂದಾಗ ಟೆನ್ಷನ್ ಇರುವವರಿಗೆ ಟೆನ್ಷನ್ ಫ್ರೀಯ ಉದಾಹರಣೆ ತೋರಿಸಿದಾಗ ಅವರಿಗೂ ಆಶ್ರಯ ಕಂಡು ಬರಬೇಕು. ಅಂದಾಗ ಸಂಕಲ್ಪ ಮಾಡಿದಿರಾ, ತಮ್ಮ ಮನಸ್ಸಿನಲ್ಲಿ ಟೆನ್ಷನ್ ಫ್ರೀ ಆಗಿರುತ್ತೇವೆ ಎಂದು ಸಂಕಲ್ಪ ಮಾಡಿದಿರಾ? ದೃಢ ಸಂಕಲ್ಪ ಮಾಡಿದ್ದೀರಾ ಅಥವಾ ಸಾಧಾರಣ ಸಂಕಲ್ಪ ಮಾಡಿದ್ದೀರಾ? ಎಲ್ಲಿ ದೃಢತೆ ಇದೆ ಅಲ್ಲಿ ಸಫಲತೆ ಇದ್ದೇ ಇದೆ. ಮಾಡುತ್ತೇವೆ ಅಲ್ಲ ಮಾಡಲೇಬೇಕು. ಇಷ್ಟ ಇದೆಯೇ? ಇದರಲ್ಲಿ ಕೈ ಎತ್ತಿ.

ಬಾಪ್ದಾದಾರವರು ಒಂದು ಮಾತನ್ನು ನೋಡಿದರು - ಕೈ ಎತ್ತಿ ಬಹಳ ಖುಷಿ ಪಡಿಸುತ್ತಾರೆ. ಕೈ ಎತ್ತಿ ಖುಷಿಪಡಿಸಿದ್ದೀರಿ ಆದರೆ ಈಗ ಏನು ಮಾಡುತ್ತೀರಿ? ದೃಢ ಸಂಕಲ್ಪ, ಸಾಧಾರಣ ಸಂಕಲ್ಪದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಮಾಡುತ್ತೇವೆ ಮತ್ತು ಮಾಡಲೇಬೇಕು ಇದರಲ್ಲಿ ಅಂತರವಿದೆ. ಈ ವರ್ಷದ ಸೀಜನ್ನಲ್ಲಿ ಇದು ಕೊನೆಯ ದಿನವಾಗಿದೆ ಆದರೆ ಮುಂದಿನ ಸೀಜನ್ನಲ್ಲಿ ಬಾಪ್ದಾದಾ ಪ್ರತಿಯೊಂದು ಚಿಕ್ಕ-ದೊಡ್ಡ ಸೇವಾಕೇಂದ್ರ, ಹೆಚ್ಚು ಸಮಯ ಮಧ್ಯದಲ್ಲಿದೆ. ಮುಂದಿನ ವರ್ಷದ ಸೀಜನ್ನಲ್ಲಿ ಕಾರಣ ಅಲ್ಲ ಆದರೆ ನಿವಾರಣಾ ಸ್ವರೂಪವನ್ನು ನೋಡಲು ಬಯಸುತ್ತೇವೆ. ಅಂದಾಗ ಬ್ರಾಹ್ಮಣ ಪರಿವಾರದಲ್ಲಿ ಟೆನ್ಷನ್ನ ಹೆಸರು ಗುರುತು ಇರಬಾರದು ಎಂದು ಎಷ್ಟು ಸಾಹಸ ಮತ್ತು ಉಮ್ಮಂಗವಿದೆ? ಆಗಲು ಸಾಧ್ಯವೇ? ಪ್ರತಿಯೊಬ್ಬರು ತಮ್ಮೊಂದಿಗೆ ತಾವೇ ಕೇಳಿಕೊಳ್ಳಿ ಆಗಲು ಸಾಧ್ಯವೇ? ಈ ಶುಭ ಸಮಾಚಾರವನ್ನು ಬಾಪ್ದಾದಾ ಕೇಳಲು ಬಯಸುತ್ತಾರೆ.

ಬಾಪ್ದಾದಾರವರು ನೋಡಿದರು ಎಲ್ಲರೂ ಮಾಡಲು ಬಯಸುತ್ತಾರೆ ಆದರೆ ಸಮಸ್ಯೆ ಬಂದಾಗ ಸಮಸ್ಯೆಯನ್ನು ತನ್ನದನ್ನಾಗಿ ಮಾಡಿಕೊಂಡಿ ಬಿಡುತ್ತಾರೆ. ನಂತರ ಬಹಳ ಮಧುರವಾಗಿ ಮಾತನಾಡುತ್ತಾರೆ. ಇದಂತೂ ಆಗಿ ಬಿಡುತ್ತದೆಯಲ್ಲವೇ. ಇದಂತೂ ಆಗುತ್ತದೆಯಲ್ಲವೇ! ಇದಂತೂ ನಡೆಯುತ್ತದೆಯಲ್ಲವೇ! ಬಾಪ್ದಾದಾರವರಿಗೆ ಬಹಳ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ. ರಾಜರಾಗಿ ಬಿಡಿ ಸಾಕು. ಸ್ವರಾಜ್ಯಾಧಿಕಾರಿ ಆಗಿ ಬಿಡಿ. ಈ ದಿನ ಬಾಪ್ದಾದಾ ಎಲ್ಲಾ ಮಕ್ಕಳು ಎದುರಿನಲ್ಲಿ ಕುಳಿತಿರಬಹುದು, ದೂರದಲ್ಲಿ ಕುಳಿತಿರಬಹುದು ಆದರೆ ಹೃದಯದಲ್ಲಿ ಕುಳಿತಿದ್ದಾರೆ. ತಾವಂತೂ ಕಣ್ಣುಗಳ ಎದುರಿನಲ್ಲಿದ್ದೀರಿ ಆದರೆ ಬಾಪ್ದಾದಾ ದೂರದಲ್ಲಿ ಕುಳಿತಿರುವವರನ್ನು ಹೃದಯದಲ್ಲಿ ನೋಡುತ್ತಿದ್ದಾರೆ.

ಬಾಪ್ದಾದಾರವರಿಗೆ ಗೊತ್ತಿದೆ - ಈ ದಿನ ಮಧುಬನದಲ್ಲಿ ಚಿಕ್ಕ-ಚಿಕ್ಕ ಗೀತಾ ಪಾಠಶಾಲೆಗಳಾಗಿವೆ. ಮಕ್ಕಳು ಬಂದಿದ್ದಾರೆ ಬಾಪ್ದಾದಾ ಬಹಳ-ಬಹಳ-ಬಹಳ ಕೆಳಗೆ ಕುಳಿತಿರುವವರಿಗೆ, ಎಲ್ಲೆಲ್ಲೋ ಕುಳಿತಿರುವವರಿಗೆ ಎಲ್ಲರಿಗಿಂತ ಮೊದಲು ಹೃದಯದ ಪ್ರೀತಿ ಮತ್ತು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. (ಈ ದಿನ ಶಾಂತಿವನದಲ್ಲಿ 28000ಗಿಂತ ಹೆಚ್ಚು ಸಹೋದರ-ಸಹೋದರಿಯರು ತಲುಪಿದ್ದಾರೆ) ಬಾಪ್ದಾದಾರವರು ನೋಡಿದರು ಮಕ್ಕಳು ಸ್ವಲ್ಪ ಕಷ್ಟವನ್ನು ನೋಡಬೇಕಾಗಿತ್ತು ಆದರೆ ಈ ಕಷ್ಟವನ್ನು ಖುಷಿಯಲ್ಲಿ ಅನುಭವ ಮಾಡುವುದಿಲ್ಲ. ಆದರೂ ಸಹ ಆರಾಮವಾಗಿ ಮಲುಗಲು 3 ಹೆಜ್ಜೆಯಷ್ಟು ಜಾಗ ಸಿಕ್ಕಿದೆಯಲ್ಲವೇ. ಯಾರು ಪಟ್ರಾಣಿ ಆಗಿದ್ದಾರೆ ಅವರಿಗೆ ಬಾಪ್ದಾದಾರವರು ವಿಶೇಷವಾಗಿ ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಒಳ್ಳೆಯದು, ಯಾರು ಇಂದು ಮೊದಲನೇ ಬಾರಿ ಮಧುಬನದಲ್ಲಿ ಬಂದಿದ್ದಾರೆ, ಬಾಪ್ದಾದಾರವರ ಜೊತೆ ಮಿಲನ ಮಾಡಲು ಬಂದಿದ್ದಾರೆ ಅವರು ಎದ್ದು ನಿಲ್ಲಿ. ಈ ದಿನ ಮೊದಲನೇ ಬಾರಿ ಬಂದಿರುವ ಮಕ್ಕಳಿಗೆ ಬಾಪ್ದಾದಾ ಹೊಸ ಬ್ರಾಹ್ಮಣ ಪರಿವಾರದಲ್ಲಿ ಬಂದಿರುವ ತನ್ನ ಕಡೆಯಿಂದ ಮತ್ತು ಬ್ರಾಹ್ಮಣ ಪರಿವಾರದ ಕಡೆಯಿಂದ ಬಹಳ-ಬಹಳ ಶುಭಾಶಯಗಳು ಕೊಡುತ್ತಿದ್ದಾರೆ ಏಕೆಂದರೆ ಟೂ ಲೇಟ್ ಆಗಿ ಬಂದಿದ್ದರೂ ಬಂದುಬಿಟ್ಟಿದ್ದಾರೆ. ಬಾಪ್ದಾದಾ ಮತ್ತು ಪರಿವಾರವನ್ನು ನೋಡಿದ್ದಾರೆ. ಬಾಪ್ದಾದಾರವರು ತಿಳಿದುಕೊಳ್ಳುತ್ತಾರೆ - ಇಂದು ಬಂದಿರುವವರರಿಗೆ ವಿಶೇಷ ವರದಾನವಿದೆ ಒಂದುವೇಳೆ ಹೃದಯದಿಂದ ಬಯಸಿದರೆ ಲಾಸ್ಟ್ ಸೋ ಫಾಸ್ಟ್, (ಕೊನೆಯಲ್ಲಿ ಬಂದಿದ್ದರೂ ವೇಗವಾಗಿ ಮುಂದುವರೆಯಬಹುದು) ವೇಗವಾಗಿ ಮುಂದೆಬರಬಹುದು. ಬಾಪ್ದಾದಾ ಮತ್ತು ಪರಿವಾರಕ್ಕೆ ತಾವು ಆತ್ಮಗಳ ಜೊತೆ ಪ್ರೀತಿ ಇದೆ. ಸಹಯೋಗಿ ಆಗುತ್ತಾರೆ, ಸ್ನೇಹ ಕೊಡುತ್ತಾರೆ ಮತ್ತು ತಮ್ಮನ್ನು ಮುಂದುವರೆಸುತ್ತಾರೆ. ಅವಕಾಶ ಕೊಡುತ್ತಾರೆ. ಆದ್ದರಿಂದ ಈ ದಿನ ಬರುವವರಿಗೆ ಮುಂದುವರೆಯಲು ಬಹಳ ಒಳ್ಳೆಯ ಅವಕಾಶ ಡ್ರಾಮಾದಲ್ಲಿ ಸಿಗಬಹುದು. ಪೂರ್ತಿ ಪರಿವಾರ ಎಲ್ಲಿಂದಲಾದರೂ ಬರಲಿ ಪರಿವಾರ ತಮ್ಮ ಸಹಯೋಗಿ ಆಗಿ ಬಿಡುತ್ತದೆ. ತಾವು ಸಹಜಯೋಗಿ ಆಗಬೇಕು. ಒಳ್ಳೆಯದು.

ಸೇವೆಯ ಟರ್ನ್ ರಾಜಸ್ಥಾನ ಮತ್ತು ಬೋಪಾಲ್ನವರದ್ದಾಗಿದೆ : ಒಳ್ಳೆಯದು. ಬಾಪ್ದಾದಾ ನೋಡಿದರು - ಯಾವ ಜೋನ್ ಸೇವೆಗೆ ಬಂದಿದ್ದಾರೆ ಅವರ ಕಡೆಯಿಂದಲೇ ಹೆಚ್ಚು ಹೊಸ ಆತ್ಮಗಳೂ ಸಹ ಬಂದಿದ್ದಾರೆ. ಒಳ್ಳೆಯದು. ರಾಜಸ್ಥಾನದವರಂತೂ ಅರ್ಧ ಕ್ಲಾಸ್ ಇದ್ದಾರೆ. ರಾಜಸ್ಥಾನದ ಧರಣಿ ಬ್ರಹ್ಮಾತಂದೆಗೆ ಬಹಳ ಇಷ್ಟ ಆಯಿತು. ಅದಕ್ಕಾಗಿ ರಾಜಸ್ಥಾನದಲ್ಲಿಯೇ ಮಧುಬನವನ್ನು ಮಾಡಿದ್ದಾರೆ. ರಾಜಸ್ಥಾನದ ಸೇವೆಯನ್ನು ಬಾಪ್ದಾದಾರವರು ನೋಡಿದರು ಪ್ರತಿಯೊಂದು ಸ್ಥಾನದಲ್ಲಿ ಈಗ ಚೆನ್ನಾಗಿ ವೃದ್ಧಿ ಆಗಿದೆ. ಹೊಸ-ಹೊಸ ಆತ್ಮಗಳಿಗೆ ತಂದೆಯ ಸಂದೇಶ ಕೊಡುವ ಕಾರ್ಯಕ್ರಮಗಳು ಬಹಳ ಚೆನ್ನಾಗಿ ಆಗುತ್ತಿದೆ. ಆದರೆ ಬಾಪ್ದಾದಾ ಎಲ್ಲರಿಗೆ ಇದನ್ನೇ ತಿಳಿಸುತ್ತಾರೆ - ಪ್ರತಿಯೊಂದು ಸೇವಾಕೇಂದ್ರ ಯಜ್ಞ ಸ್ನೇಹಿ ವಾರಸುಧಾರರ ಗ್ರೂಪ್ನ್ನು ಮಾಡಿ ಯಾವುದರಿಂದ ಸ್ವಯಂ ಸಹ ಮುಂದುವರೆಯುತ್ತಿರಲಿ, ಅನ್ಯರನ್ನೂ ಸಹ ಯಜ್ಞ ಸ್ನೇಹಿಯನ್ನಾಗಿ ಮಾಡಲಿ. ಮುಂಚೆಯೂ ಸಹ ಬಾಪ್ದಾದಾರವರು ಇದನ್ನು ತಿಳಿಸಿದರು ಯಜ್ಞ ಸ್ನೇಹಿ, ಸೇವಾಸ್ನೇಹಿ ಮತ್ತು ಸಫಲ ಮಾಡುವುದರಲ್ಲಿ ಮುಂದುವರೆಯುವವರು, ವೃದ್ಧಿ ಆಗುತ್ತಿದೆ, ಒಳ್ಳೆಯದು. ಸಂದೇಶ ಕೊಡುವ ಕಾರ್ಯವೂ ಸಹ, ಕೊಡುವುದರಲ್ಲಿ ಪ್ರತಿಯೊಬ್ಬರು ಉಮ್ಮಂಗ-ಉತ್ಸಾಹದಲ್ಲಿ ಇದ್ದಾರೆ. ಈಗ ಬಾಪ್ದಾದಾ ಇದನ್ನೇ ನೋಡಲು ಬಯಸುತ್ತಾರೆ - ಸ್ವಯಂ ಮತ್ತು ಸೇವೆಯನ್ನು ಎರಡರನ್ನು ಬ್ಯಾಲೆನ್ಸ್ ಮಾಡಬೇಕು. ಪ್ರತಿಯೊಂದು ಸೇವಾಕೇಂದ್ರದಿಂದ ಹೆಚ್ಚು ಮುಂದೆ ಬರಬೇಕು. ಕೇವಲ ಸೇವೆ ಅಲ್ಲ ಆದರೆ ಸ್ವಯಂ ಮತ್ತು ಸೇವೆ. ಏಕೆಂದರೆ ಈಗ ಸ್ವಯಂ ಪರಿವರ್ತನೆಯ ಸಮಯ ಇಷ್ಟು ಹೆಚ್ಚು ಇಲ್ಲ ಆದ್ದರಿಂದ ಮೊದಲು ಸ್ವಯಂ ಜೊತೆಯಲ್ಲಿ ಸೇವೆ. ಪ್ರತಿಯೊಂದು ಸೇವಾಕೇಂದ್ರ ನಿರ್ವಿಘ್ನ, ಎಲ್ಲಾ ಜೊತೆಗಾರರು ನಿರ್ವಿಘ್ನ, ಕೇವಲ ಟೀಚರ್ ಅಲ್ಲ ಆದರೆ ಪೂರ್ತಿ ಕ್ಲಾಸ್ ನಿರ್ವಿಘ್ನವಾಗಿರಬೇಕು. ನಿರ್ವಿಘ್ನ ಮತ್ತು ಸ್ವಯಂನ ಮೇಲೆ ಅಟೆನ್ಷನ್ ಇಟ್ಟುಕೊಳ್ಳುವವರು. ಇದನ್ನು ವೃದ್ಧಿ ಮಾಡಿ. ಪ್ರತಿಯೊಬ್ಬರ ಮಾತನ್ನು ಕೇಳಿ ಮತ್ತು ಅವರಿಗೆ ಉಮ್ಮಂಗ-ಉತ್ಸಾಹದ ರೆಕ್ಕೆಗಳನ್ನು ಕೊಡಿ ಯಾವುದರಿಂದ ಬಾಪ್ದಾದಾರವರಿಗೆ ನಿರ್ವಿಘ್ನ ಸೇವಾಕೇಂದ್ರದ ಸಮಾಚಾರವನ್ನು ಕೊಡಬಹುದು. ಬಾಕಿ ಬಾಪ್ದಾದಾರವರು ನೋಡಿದರು - ರಾಜಸ್ಥಾನವೂ ಸಹ ಮುಂದುವರೆಯುತ್ತಿದೆ, ಮುಂದುವರೆಯುತ್ತಿರುತ್ತದೆ. ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ಮುಂದುವರೆಯಲು ಶುಭಾಶಯಗಳನ್ನು ಕೊಡುತ್ತಿದ್ದಾರೆ. ಒಳ್ಳೆಯದು.

ಭೋಪಾಲ್ ಜೋನ್: ಒಳ್ಳೆಯದು. ಈ ಜೋನ್ ಸಹ ತಮ್ಮ ಪರಿವರ್ತನೆ ಮತ್ತು ಸೇವೆಯ ವೃದ್ಧಿಯಲ್ಲಿ ಚೆನ್ನಾಗಿ ಮುಂದುವರೆಯುತ್ತಿದ್ದಾರೆ. ಬಾಪ್ದಾದಾರವರಿಗೆ ಖುಷಿ ಇದೆ, ಪ್ರತಿಯೊಬ್ಬ ಮಗು ಸ್ವಯಂ ಪ್ರತಿಯೂ ಪ್ಲಾನ್ ಮಾಡುತ್ತಿದ್ದಾರೆ ಮತ್ತು ಪ್ರತ್ಯಕ್ಷವಾಗಿಯೂ ತರುತ್ತಿದ್ದಾರೆ. ಮತ್ತೆ ತಂದೆಯ ಶುಭ ಆಸೆ ಇದೆ - ಸದಾ ಮುಂದುವರೆಯುತ್ತಿರುತ್ತಾರೆ. ಪ್ರತಿಯೊಂದು ಜೋನ್ನಲ್ಲಿ ನೋಡಲಾಗುತ್ತದೆ - ಈಗ ಉಮ್ಮಂಗ-ಉತ್ಸಾಹವಿದೆ. ಆದ್ದರಿಂದ ಸೇವೆಯಲ್ಲಿ ತಮ್ಮ-ತಮ್ಮ ಸ್ಥಾನಗಳಲ್ಲಿ ವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಬಾಪ್ದಾದಾರವರು ಮುಂದುಕ್ಕೂ ಸಹ ಶುಭಾಶಯಗಾಳನ್ನು ನೀಡುತ್ತಿದ್ದಾರೆ. ಮುಂದುವರೆಯುತ್ತಿರಿ, ಹಾರುತ್ತಿರಿ ಮತ್ತು ಹಾರಿಸುತ್ತಿರಿ. ಒಳ್ಳೆಯದು.

ಡಬಲ್ ವಿದೇಶಿ ಸಹೋದರ-ಸಹೋದರಿಯರು: ವಿದೇಶದವರಿಗೆ ಟೈಟಲ್ ಕೊಟ್ಟು ಬಿಟ್ಟಿದ್ದಾರೆ ಡಬಲ್ ವಿದೇಶಿಯರು. ವಿದೇಶಿಯರಲ್ಲ ಡಬಲ್ ವಿದೇಶಿಯರು ಅಂದಾಗ ಪ್ರಾಕ್ಟಿಕಲ್ನಲ್ಲಿ ನೋಡಲಾಗುತ್ತದೆ - ಹೇಗೆ ಡಬಲ್ವಿದೇಶಿಯರು ಎಂದು ಟೈಟಲ್ ಕೊಟ್ಟಿದ್ದಾರೆ ಅದೇ ರೀತಿ ಮೆಜಾರಿಟಿ ಡಬಲ್ ನಶೆ ಇರುತ್ತದೆ. ಯಾವ ಡಬಲ್ ನಶೆ ಇರುತ್ತದೆ? ನಾವು ಡಬಲ್ ಉಮ್ಮಂಗ-ಉತ್ಸಾಹದಲ್ಲಿ ಇರುವವರು ಎಂದು ಡಬಲ್ ನಶೆ ಇರುತ್ತದೆ. ಬಾಪ್ದಾದಾ ನೋಡುತ್ತಾರೆ - ಉಮ್ಮಂಗ-ಉತ್ಸಾಹ ಚೆನ್ನಾಗಿರುತ್ತದೆ. ಒಂದು ಲಂಡನ್ನಲ್ಲಿ ಸ್ಥಾಪನೆ ಆಯಿತು ಮತ್ತು ಇಂದು ಹೆಚ್ಚು ಸ್ಥಾನಗಳಲ್ಲಿ ಸೇವೆ ಮಾಡಿ ಎಲ್ಲರಿಗೆ ಬಾಪ್ದಾದಾರವರ ಅಥವಾ ಬ್ರಾಹ್ಮಣ ಪರಿವಾರದವರನ್ನಾಗಿ ಮಾಡಿದ್ದಾರೆ ಇದನ್ನು ನೋಡಿ ಬಾಪ್ದಾದಾ ಖುಷಿ ಆಗಿದ್ದಾರೆ. ಮತ್ತು ಮಾಡುವ ಲಕ್ಷ್ಯ ಬಹಳ ಚೆನ್ನಾಗಿದೆ ಆದ್ದರಿಂದ ಪ್ರೂಫ್ ಆಗಿದ್ದಾರೆ. ಮೊದಲು ತಮ್ಮ ಟರ್ನ್ನಲ್ಲಿ ಬರುತ್ತಿದ್ದರು ಆದರೆ ಈಗ ಮೆಜಾರಿಟಿ ಪ್ರತಿಯೊಂದು ಟರ್ನ್ನಲ್ಲಿ ತಲುಪುತ್ತಾರೆ. ಮತ್ತು ಬಾಪ್ದಾದಾರವರಿಗೆ ಖುಷಿ ಇದೆ - ವಿದೇಶದ ಮಕ್ಕಳನ್ನು ನೋಡಿ ಭಾರತವಾಸಿಗಳಿಗೆ ಉಮ್ಮಂಗ ಬರುತ್ತದೆ ಏನೆಂದರೆ ಇವರು ಭಾರತವಾಸಿಗಳಿಗಿಂತಲೂ ಮುಂದುವರೆಯುತ್ತಿದ್ದಾರೆ. ವಿದೇಶದವರು ಮುಂದುವರೆಯುತ್ತಿದ್ದಾರೆ ಮತ್ತೆ ನಾವು ಹಿಂದೆ ಉಳಿದುಕೊಳ್ಳಬಾರದು ಎಂದು ಭಾರತವಾಸಿಗಳಿಗೂ ಉಮ್ಮಂಗ ಬರುತ್ತದೆ ಮತ್ತೆ ಪುರುಷಾರ್ಥದಲ್ಲೂ ನೋಡಿದರೆ ಪರೀಕ್ಷೆಗಳಂತೂ ಬರುತ್ತದೆ ವಿದೇಶದವರಿಗೆ ಆದರೆ ಒಂದು ವಿಶೇಷತೆ ಇದೆ ಅವರು ಸತ್ಯ ಹೃದಯದಿಂದ ಹೇಳಿಬಿಡುತ್ತಾರೆ. ಒಳಗೆ ಇಟ್ಟುಕೊಳ್ಳುವುದಿಲ್ಲ ಮತ್ತು ಅದಕ್ಕೆ ಸಮಾದಾನ ಸತ್ಯ ಹೃದಯದಿಂದ ಮಾಡುತ್ತಿರುತ್ತಾರೆ. ಬಾಪ್ದಾದಾರವರಿಗೆ ಖುಷಿ ಇದೆ ಸ್ವಚ್ಛ ಹೃದಯ ಇದ್ದರೆ ಪ್ರಭು ಹಾಜರಾಗುತ್ತಾರೆ. ಒಳ್ಳೆಯ ಫಲಿತಾಂಶವನ್ನು ನೋಡಿ ಬಾಪ್ದಾದಾರವರು ಶುಭಾಶಯಗಳನ್ನೂ ಕೊಡುತ್ತಿದ್ದಾರೆ ಮತ್ತು ವರದಾನವನ್ನೂ ಕೊಡುತ್ತಿದ್ದಾರೆ - ಸದಾ ಮುಂದುವರೆಯುತ್ತಿರುತ್ತಾರೆ. ಶಿಕ್ಷಕಿಯರೂ ಸಹ ಬಹಳ ಚೆನ್ನಾಗಿ ಪರಿಶ್ರಮ ಮಾಡುತ್ತಿದ್ದಾರೆ. ಬಾಪ್ದಾದಾರವರಿಗೆ ಖುಷಿ ಆಗುತ್ತದೆ - ಎಲ್ಲರಿಗಿಂತ ಹೆಚ್ಚು ಮಧುಬನದ ಲಾಭ ವಿದೇಶದವರು ತೆಗೆದುಕೊಳ್ಳುತ್ತಿದ್ದಾರೆ. ಬಾಪ್ದಾದಾರವರು ನೋಡುತ್ತಾರೆ - ವಿದೇಶದ ಚಿಕ್ಕ-ಚಿಕ್ಕ ಸ್ಥಾನಗಳಲ್ಲೂ ಸಹ ಜೋರಾಗಿ ಸಂದೇಶ ಕೊಡುವ ಸೇವೆಯನ್ನು ಆರಭಿಸಿದ್ದಾರೆ ಅಂದಾಗ ಸೇವೆಯ ಶುಭಾಶಯಗಳು. ಸ್ವಯಂ ಪರಿವರ್ತನೆಯ ಶುಭಾಶಯಗಳು. ಹಾರುತ್ತಿರಿ ಮತ್ತು ಹಾರಿಸುತ್ತಿರಿ. ಒಳ್ಳೆಯದು.

ಎಲ್ಲಾ ಕಡೆಯ ದೇಶ ಮತ್ತು ವಿದೇಶದ ಮಕ್ಕಳಿಗೆ ಬಾಪ್ದಾದಾ ಪುರುಷಾರ್ಥದಲ್ಲಿ ಸಹಜವಾಗಿ ಮುಂದುವರೆಯಲು ಮತ್ತು ಮುಂದುವರೆಸಲು ಮುಖ್ಯವಾಗಿ ಶುಭಾಶಯಗಳನ್ನು ನೀಡುತ್ತಿದ್ದಾರೆ. ಈಗ ಬರುವಂತಹ ಸಮಯಕ್ಕಾಗಿ ಬಾಪ್ದಾದಾರವರು ಡೈರೆಕ್ಷನ್ (ಸೂಚನೆ) ಕೊಟ್ಟು ಬಿಟ್ಟಿದ್ದಾರೆ - ತೀವ್ರ ಪುರುಷಾರ್ಥಿ ಆಗಿ ಸೆಕೆಂಡಿನಲ್ಲಿ ಬಿಂದು ಹಾಕುವ, ಫುಲ್ಸ್ಟಾಪ್ ಹಾಕುವ ಅಭ್ಯಾಸ ಬಹಳ ಅವಶ್ಯಕವಾಗಿದೆ. ಈ ಮಾತನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಅಚಾನಕ್ ಯಾವುದಾದರೂ ಆಗಲೇಬೇಕು. ಆದ್ದರಿಂದ ತಂದೆಯ ಶುಭ ಆಸೆ ಇದೆ ಪ್ರತಿಯೊಬ್ಬ ಮಗು ಜೊತೆ ಇದ್ದಾರೆ ಮತ್ತು ಜೊತೆ ನಡೆಯುತ್ತಾರೆ, ಜೊತೆಯಲ್ಲಿ ಬ್ರಹ್ಮಾ ತಂದೆಯ ಜೊತೆ ರಾಜ್ಯ ಮಾಡುತ್ತಾರೆ. ಶಿವಬಾಬಾ ಸಾಕ್ಷಿ ಆಗಿಬಿಡುತ್ತಾರೆ. ಜೊತೆಗಾರರಾಗುವವರಾದರೆ ಬಾಪ್ದಾದಾ ಸಮಾನ ಆಗಲೇಬೇಕು. ಒಳ್ಳೆಯದು. ಪ್ರತಿಯೊಬ್ಬ ಮಗುವಿಗೆ ಬಾಪ್ದಾದಾರವರ ಕಡೆಯಿಂದ ಈ ವರ್ಷದ ಶುಭಾಶಯಗಳು ಮತ್ತೆ ಮುಂದಿನ ವರ್ಷದ ಶುಭಾಶಯಗಳು. ಸದಾ ತಂದೆಯ ಸಮಾನ ಆಗಲೇಬೇಕು. ಒಳ್ಳೆಯದು.

ವರದಾನ:
ಮನನ ಶಕ್ತಿಯ ಮೂಲಕ ಶಕ್ತಿಶಾಲಿಯಾಗಿ ವಿಘ್ನಗಳ ಶಕ್ತಿಯನ್ನು ಸಮಾಪ್ತಿಗೊಳಿಸುವ ಸರ್ವ ಆಕರ್ಷಣೆಗಳಿಂದ ಮುಕ್ತ ಭವ.

ವರ್ತಮಾನ ಸಮಯದಲ್ಲಿ ಮನನ ಶಕ್ತಿಯ ಮೂಲಕ ಆತ್ಮನಲ್ಲಿ ಸರ್ವ ಶಕ್ತಿಗಳನ್ನು ತುಂಬಿಕೊಳ್ಳುವ ಅವಶ್ಯಕತೆಯಿದೆ. ಇದಕ್ಕಾಗಿ ಅಂತರ್ಮುಖಿಯಾಗಿದ್ದು ಪ್ರತಿಯೊಂದು ಅಮೃತ ಬಿಂದುಗಳ ಬಗ್ಗೆ ಮನನ ಮಾಡುತ್ತೀರೆಂದರೆ ಬೆಣ್ಣೆ (ಶಕ್ತಿ) ಯು ಬರುತ್ತದೆ ಮತ್ತು ಶಕ್ತಿಶಾಲಿ ಆಗಿ ಬಿಡುತ್ತೀರಿ. ಇಂತಹ ಶಕ್ತಿಶಾಲಿ ಆತ್ಮರು ಅತೀಂದ್ರಿಯ ಸುಖದ ಪ್ರಾಪ್ತಿಯ ಅನುಭವ ಮಾಡುತ್ತಾರೆ, ಅವರನ್ನು ಅಲ್ಪಕಾಲದ ಯಾವುದೇ ವಸ್ತುವು ತನ್ನ ಕಡೆಗೆ ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಅವರ ಮಗ್ನಾವಸ್ಥೆಯ ಮೂಲಕ ಆತ್ಮೀಯತೆಯ ಶಕ್ತಿಶಾಲಿ ಸ್ಥಿತಿಯೇನು ತಯಾರಾಗುವುದು, ಅದರಿಂದ ವಿಘ್ನಗಳ ಶಕ್ತಿಗಳು ಸಮಾಪ್ತಿ ಆಗಿ ಬಿಡುತ್ತದೆ.

ಸ್ಲೋಗನ್:
ಬ್ರಾಹ್ಮಣ ಸಂಸಾರ (ಜಗತ್ತು) ದಲ್ಲಿ ಸರ್ವರ ಗೌರವವನ್ನು ಪ್ರಾಪ್ತಿ ಮಾಡಿಕೊಳ್ಳುವವರೇ ಸಿಂಹಾಸನಾಧಿಕಾರಿ ಆಗುತ್ತಾರೆ.

ಅವ್ಯಕ್ತ ಸೂಚನೆಗಳು:- ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.

ಬ್ರಹ್ಮಾ ತಂದೆ ಹಾಗೂ ಶಿವ ತಂದೆಯ ವಿಶೇಷ ಪವಿತ್ರತೆ ಇಷ್ಟವಾಗಿದೆ. ಆದರೆ ಪವಿತ್ರತೆಯ ಪರಿಭಾಷೆ ಬಹಳ ಶ್ರೇಷ್ಠ ಹಾಗೂ ಗುಹ್ಯವಾಗಿದೆ. ಪವಿತ್ರತೆ ಎಲ್ಲಿ ಇರುವುದು ಅಲ್ಲಿ ನಿಶ್ಚಯ, ಸತ್ಯತೆ - ಸ್ವಚ್ಛತೆ, ಇದೆಲ್ಲವೂ ಬಂದು ಬಿಡುತ್ತದೆ. ಸಂಪೂರ್ಣ ಪವಿತ್ರತೆಯ ಅರ್ಥವೇ ಆಗಿದೆ - ಸ್ವಪ್ನ ಮಾತ್ರದಲ್ಲಿಯೂ ಅಪವಿತ್ರತೆ ಮನಸ್ಸು ಹಾಗೂ ಬುದ್ಧಿಯನ್ನು ಟಚ್ ಮಾಡದಿರಲಿ, ಅವರನ್ನೇ ಹೇಳಲಾಗುತ್ತದೆ ಸತ್ಯ ವೈಷ್ಣವರು.