23.11.25    Avyakt Bapdada     Kannada Murli    31.12.2007     Om Shanti     Madhuban


“ಹೊಸ ವರ್ಷದಲ್ಲಿ ಅಖಂಡ ಮಹಾದಾನಿ, ಅಖಂಡ ನಿರ್ವಿಘ್ನ, ಅಖಂಡ ಯೋಗಿ ಹಾಗೂ ಸದಾ ಸಫಲತಾಮೂರ್ತಿ ಆಗಬೇಕು”


ಇಂದು ಬಾಪ್ದಾದಾರವರು ತನ್ನ ಎದುರಿನಲ್ಲಿ ಡಬಲ್ ಸಭೆಯನ್ನು ನೋಡುತ್ತಿದ್ದೇವೆ. ಒಂದಂತೂ ಸಾಕಾರದಲ್ಲಿ ಸನ್ಮುಖದಲ್ಲಿ ಕುಳಿತಿದ್ದೀರಿ ಹಾಗೂ ಮತ್ತೊಂದು ದೂರದಲ್ಲಿ ಕುಳಿತಿದ್ದರೂ ಹೃದಯದಿಂದ ಸಮೀಪವಾಗಿ ಕಾಣಿಸುತ್ತಿದೆ. ಎರಡು ಸಭೆಗಳ ಶ್ರೇಷ್ಠ ಆತ್ಮರ ಮಸ್ತಕದಲ್ಲಿ ಆತ್ಮ ದೀಪ ಹೊಳೆಯುತ್ತಿದೆ. ಎಷ್ಟು ಸುಂದರವಾಗಿ ಹೊಳೆಯುತ್ತಿರುವುದು ಕಾಣಿಸುತ್ತಿದೆ. ಎಲ್ಲರೂ ಒಂದೇ ಸಂಕಲ್ಪ, ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿ ಪರಮಾತ್ಮನ ಪ್ರೀತಿಯಲ್ಲಿ ಲವಲೀನವಾಗಿ ಏಕಾಗ್ರ ಬುದ್ಧಿಯಿಂದ ಸ್ನೇಹದಲ್ಲಿ ಸಮಾವೇಶವಾಗಿರುವುದು ಎಷ್ಟು ಪ್ರಿಯವಾಗಿದೆ. ತಾವೂ ಸಹ ಇಂದು ವಿಶೇಷವಾಗಿ ಹೊಸ ವರ್ಷವನ್ನು ಆಚರಣೆ ಮಾಡಲು ತಲುಪಿ ಬಿಟ್ಟಿದ್ದೀರಿ. ಬಾಪ್ದಾದಾರವರೂ ಸಹ ಎಲ್ಲಾ ಮಕ್ಕಳ ಉಮ್ಮಸ್ಸು-ಉತ್ಸಾಹವನ್ನು ನೋಡಿ ಹೊಳೆಯುತ್ತಿರುವ ಆತ್ಮ ದೀಪವನ್ನು ನೋಡಿ ಹರ್ಷಿತರಾಗುತ್ತಿದ್ದೇವೆ.

ಈ ದಿನ ಸಂಗಮದ ದಿನವಾಗಿದೆ. ಒಂದು ಹಳೆಯ ವರ್ಷದ ವಿದಾಯಿ ಹಾಗೂ ಹೊಸ ವರ್ಷದ ಶುಭಾಶಯಗಳು ಆಗುವುದಿದೆ. ಹೊಸ ವರ್ಷ ಅರ್ಥಾತ್ ಹೊಸ ಉಮಂಗ ಹಾಗೂ ಉತ್ಸಾಹ, ಸ್ವ ಪರಿವರ್ತನೆಯ ಉಮಂಗವಿದೆ, ಸರ್ವ ಪ್ರಾಪ್ತಿಗಳನ್ನು ಸ್ವಯಂನಲ್ಲಿ ಪ್ರಾಪ್ತಿ ಮಾಡಿಕೊಂಡಿರುವುದನ್ನು ನೋಡಿ ಮನಸ್ಸಿನಲ್ಲಿ ಉತ್ಸಾಹವಿದೆ. ಪ್ರಪಂಚದವರೂ ಸಹ ಈ ಉತ್ಸವವನ್ನು ಆಚರಣೆ ಮಾಡುತ್ತಾರೆ, ಅವರಿಗೆ ಒಂದು ದಿನದ ಉತ್ಸವವಾಗಿದೆ ಮತ್ತೆ ತಾವು ಅದೃಷ್ಟ ಪ್ರಿಯ ಮಕ್ಕಳಿಗೆ ಸಂಗಮಯುಗದ ಪ್ರತಿದಿನ ಉತ್ಸವವಾಗಿದೆ ಏಕೆಂದರೆ ಖುಷಿಯ ಉತ್ಸಾಹ ಇದೆ. ಪ್ರಪಂಚದವರಾದರೆ ನಂದಿ ಹೋಗಿರುವ ದೀಪವನ್ನು ಬೆಳಗಿಸಿ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ ಮತ್ತೆ ಬಾಪ್ದಾದಾ ಹಾಗೂ ತಾವು ನಾಲ್ಕಾರು ಕಡೆ ಜಾಗೃತರಾಗಿರುವ ದೀಪಗಳ ಜೊತೆ ಹೊಸ ವರ್ಷದ ಉತ್ಸವವನ್ನು ಆಚರಣೆ ಮಾಡಲು ಬಂದಿದ್ದೀರಿ. ಅವರಾದರೆ ಪದ್ದತಿಯನ್ನು ಆಚರಣೆ ಮಾಡುವ ಸಲುವಾಗಿ ನಿಮಿತ್ತ ಮಾತ್ರವಾಗಿ ಮಾಡುತ್ತಾರೆ ಆದರೆ ತಾವೆಲ್ಲಾ ಜಾಗೃತವಾಗಿರುವ ದೀಪಗಳಾಗಿದ್ದೀರಿ. ತಮ್ಮ ಹೊಳೆಯುತ್ತಿರುವ ದೀಪ ಕಂಡು ಬರುತ್ತಿದೆಯಲ್ಲವೇ! ಇದು ಅವಿನಾಶಿ ದೀಪವಾಗಿದೆ.

ಹೊಸ ವರ್ಷದಲ್ಲಿ ಪ್ರತಿಯೊಬ್ಬರು ಮನಸ್ಸಿನಲ್ಲಿ ಸ್ವಯಂ ಪ್ರತಿ, ವಿಶ್ವದ ಆತ್ಮರ ಪ್ರತಿ ಯಾವುದಾದರೂ ಹೊಸ ಪ್ಲಾನ್ ಮಾಡಿದ್ದೀರಾ? 12 ಗಂಟೆಯ ನಂತರ ಹೊಸ ವರ್ಷ ಆರಂಭವಾಗಿ ಬಿಡುತ್ತದೆ ಅಂದಾಗ ಈ ಹೊಸ ವರ್ಷವನ್ನು ವಿಶೇಷವಾಗಿ ಯಾವ ರೂಪದಲ್ಲಿ ಆಚರಣೆ ಮಾಡುತ್ತೀರಿ? ಹೇಗೆ ಹಳೆಯ ವರ್ಷ ವಿದಾಯಿ ತೆಗೆದುಕೊಂಡಾಗ ತಾವೆಲ್ಲರೂ ಸಹ ಹಳೆಯ ಸಂಕಲ್ಪ, ಹಳೆಯ ಸಂಸ್ಕಾರಗಳಿಗೆ ವಿದಾಯಿ ಕೊಡುವ ಸಂಕಲ್ಪವನ್ನು ಮಾಡಿದ್ದೀರಾ? ಹಳೆಯ ವರ್ಷದ ಜೊತೆ-ಜೊತೆ ತಾವೂ ಸಹ ಹಳೆಯದಕ್ಕೆ ವಿದಾಯಿ ಕೊಟ್ಟು ಹೊಸ ಒಲವು-ಉತ್ಸಾಹದ ಸಂಕಲ್ಪಗಳನ್ನು ಪ್ರತ್ಯಕ್ಷ ರೂಪದಲ್ಲಿ ತರುತ್ತೀರಲ್ಲವೇ? ಅಂದಾಗ ತಮ್ಮಲ್ಲಿ ಏನು ನವೀನತೆಯನ್ನು ತರುತ್ತೀರಿ? ಯೋಚನೆ ಮಾಡಿ. ಯಾವ ಹೊಸ ಒಲವು-ಉತ್ಸಾದ ಅಲೆಯನ್ನು ಹರಡುತ್ತೀರಾ? ಯೋಚಿಸಿದ್ದೀರಾ? ಏಕೆಂದರೆ ತಾವೆಲ್ಲಾ ಬ್ರಾಹ್ಮಣರು ಪೂರ್ಣ ವಿಶ್ವದ ಆತ್ಮಗಳ ಪರಿವರ್ತನೆಗೆ ನಿಮಿತ್ತರಾಗಿದ್ದೀರಿ. ವಿಶ್ವದ ಆತ್ಮಗಳ ಪರಿವರ್ತನೆಗೆ ನಿಮಿತ್ತರಾಗಿದ್ದೀರಿ. ವಿಶ್ವದ ತಳಪಾಯ ಆಗಿದ್ದೀರಿ. ಪೂರ್ವಜರಾಗಿದ್ದೀರಿ. ಪೂಜ್ಯರಾಗಿದ್ದೀರಿ. ಹೇಗೆ ಪ್ರಕೃತಿ ನಾಲ್ಕೂ ಕಡೆ ಕೆಲವೊಮ್ಮೆ ಬಿಸಿಲಿನ, ಕೆಲವೊಮ್ಮೆ ಚಳಿಯ, ಕೆಲವೊಮ್ಮೆ ವಸಂತದ ವೈಬ್ರೇಶನ್ ಹರಡಿಸುತ್ತದೆ. ಅಂದಾಗ ಈ ವರ್ಷ ತಮ್ಮ ಶ್ರೇಷ್ಠ ವೃತ್ತಿಯ ಮುಖಾಂತರ ಯಾವ ವೈಬ್ರೇಶನ್ ಹರಡಿಸುತ್ತೀರಿ? ಅಂದಾಗ ತಾವು ಪ್ರಕೃತಿ ಮಾಲಿಕ, ಪ್ರಕೃತಿಜೀತರು ಯಾವ ವೈಬ್ರೇಶನ್ ಹರಡಿಸುತ್ತೀರಿ? ಯಾವುದರಿಂದ ಆತ್ಮಗಳಿಗೆ ಸ್ವಲ್ಪ ಸಮಯದಲ್ಲಿಯೇ ಸುಖ-ಶಾಂತಿಯ ಅನುಭವ ಆಗಲಿ. ಇದಕ್ಕಾಗಿ ಬಾಪ್ದಾದಾ ಯಾವುದೆಲ್ಲಾ ಖಜಾನೆಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದೀರೋ ಆ ಖಜಾನೆಗಳನ್ನು ಸಫಲ ಮಾಡಿ ಮತ್ತು ಸಫಲತಾ ಸ್ವರೂಪರಾಗಿ ಎಂದು ಸೂಚನೆ ಕೊಡುತ್ತಾರೆ. ವಿಶೇಷವಾಗಿ ಸಮಯದ ಖಜಾನೆ ಎಂದೂ ವ್ಯರ್ಥವಾಗದಿರಲಿ. ಒಂದು ಸೆಕೆಂಡ್ ವ್ಯರ್ಥವನ್ನೂ ಸಹ ಕಾರ್ಯದಲ್ಲಿ ಉಪಯೋಗಿಸಿರಿ. ಸಮಯವನ್ನು ಸಫಲ ಮಾಡಿ, ಪ್ರತಿಯೊಂದು ಶ್ವಾಸವನ್ನು ಸಫಲ ಮಾಡಿ, ಪ್ರತಿ ಸಂಕಲ್ಪವನ್ನು ಸಫಲ ಮಾಡಿ. ಪ್ರತಿ ಶಕ್ತಿಯನ್ನು ಸಫಲ ಮಾಡಿ, ಪ್ರತಿ ಗುಣವನ್ನು ಸಫಲ ಮಾಡಿ. ಸಫಲತಾಮೂರ್ತಿ ಆಗುವಂತೆ ಈ ವಿಶೇಷ ವರ್ಷವನ್ನು ಆಚರಿಸಿ. ಏಕೆಂದರೆ ಸಫಲತೆ ನಿಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ. ಆ ಅಧಿಕಾರವನ್ನು ನಿಮ್ಮ ಕಾರ್ಯದಲ್ಲಿ ಉಪಯೋಗಿಸಿ ಸಫಲತಾಮೂರ್ತಿಗಳಾಗಿ. ಏಕೆಂದರೆ ಈಗಿನ ಸಫಲತೆ ನಿಮ್ಮ ಅನೇಕ ಜನ್ಮಗಳು ಜೊತೆ ಇರುವಂತಹದ್ದಾಗಿದೆ. ನಿಮ್ಮ ಸಮಯ ಸಫಲತೆಯ ಪ್ರಾಲಬ್ಧವನ್ನು ಪೂರ್ಣ ಅರ್ಧಕಲ್ಪ ಸಫಲತೆಯ ಫಲ ಪ್ರಾಪ್ತಿ ಆಗುತ್ತದೆ. ಈಗಿನ ಸಮಯದ ಸಫಲತೆಯ ಪ್ರಾಲಬ್ಧ ಪೂರ್ಣ ಸಮಯ ಪ್ರಾಪ್ತಿ ಆಗುತ್ತದೆ. ಶ್ವಾಸವನ್ನೂ ಸಫಲ ಮಾಡುವುದರಿಂದ ಭವಿಷ್ಯದಲ್ಲಿ ನೋಡಿ ನಿಮ್ಮ ಶ್ವಾಸ ಸಫಲತೆಯ ಪರಿಣಾಮವಾಗಿ ಭವಿಷ್ಯದಲ್ಲಿ ಎಲ್ಲಾ ಆತ್ಮಗಳು ಪೂರ್ಣ ಸಮಯ ಆರೋಗ್ಯವಾಗಿರುತ್ತಾರೆ. ಕಾಯಿಲೆಯ ಹೆಸರೇ ಇಲ್ಲ. ಡಾಕ್ಟರ್ಗಳ ಡಿಪಾಟ್ಮೆರ್ಂಟೇ ಇರುವುದಿಲ್ಲ ಏಕೆಂದರೆ ಡಾಕ್ಟರ್ಗಳೆಲ್ಲಾ ಏನಾಗುತ್ತೀರಿ? ರಾಜಾ ಆಗಿ ಬಿಡುತ್ತೀರಲ್ಲವೇ! ವಿಶ್ವದ ಮಾಲೀಕರಾಗುತ್ತೀರಿ. ಆದರೆ ಈ ಸಮಯ ನಿಮ್ಮ ಶ್ವಾಸವನ್ನು ಸಫಲ ಮಾಡುತ್ತೀರಿ ಮತ್ತು ಸರ್ವ ಆತ್ಮಗಳಿಗೂ ಸ್ವಸ್ತರಾಗಿರುವ ಪ್ರಾಲಬ್ಧ ಪ್ರಾಪ್ತಿಯಾಗುತ್ತದೆ. ಹಾಗೆಯೇ ಜ್ಞಾನದ ಖಜಾನೆ. ಅದರ ಫಲ ಸ್ವರೂಪ ಸ್ವರ್ಗದಲ್ಲಿ ನಿಮ್ಮ ರಾಜ್ಯದಲ್ಲಿ ಯಾವುದೇ ಮಂತ್ರಿಯಿಂದ ಸಲಹೆ ಪಡೆಯುವ ಅವಶ್ಯಕತೆ ಇಲ್ಲ, ತಾವೇ ಬುದ್ಧಿವಂತರಾಗಿ ಬಿಡುತ್ತೀರಿ ಅಷ್ಟೊಂದು ಬುದ್ಧಿವಂತ, ಶಕ್ತಿವಂತರಾಗಿ ಬಿಡುತ್ತೀರಿ. ಶಕ್ತಿಗಳನ್ನು ಸಫಲ ಮಾಡುತ್ತೀರಿ, ಅದರ ಪ್ರಾಲಬ್ಧವಾಗಿ ಅಲ್ಲಿ ಎಲ್ಲಾ ಶಕ್ತಿಗಳು ವಿಶೇಷವಾಗಿ ಧರ್ಮ ಸತ್ತಾ, ರಾಜ್ಯ ಸತ್ತಾ ಎರಡೂ ಸಹ ವಿಶೇಷ ಶಕ್ತಿಗಳೇ, ಶಕ್ತಿಗಳು ಅಲ್ಲಿ ಪ್ರಾಪ್ತಿ ಆಗುತ್ತದೆ. ಗುಣಗಳ ಖಜಾನೆ ಸಫಲ ಮಾಡುತ್ತೀರೆಂದಾಗ ಅದರ ಪ್ರಾಲಬ್ಧವಾಗಿ ದೇವತಾ ಪದವಿಯ ಅರ್ಥವೇ ಆಗಿದೆ ದಿವ್ಯ ಗುಣದಾರಿ ಮತ್ತು ಜೊತೆ-ಜೊತೆಗೆ ಈಗ ಕೊನೆಯ ಜನ್ಮದಲ್ಲಿ ತಮ್ಮ ಜಡ ಮೂರ್ತಿಯ ಪೂಜೆ ಮಾಡುತ್ತಾರೆ ಅಂದಾಗ ಯಾವ ಮಹಿಮೆ ಹಾಡುತ್ತಾರೆ? ಸರ್ವ ಗುಣ ಸಂಪನ್ನ. ಅಂದಾಗ ಈ ಸಮಯದ ಸಫಲತೆಯ ಪ್ರಾಲಬ್ಧ ಸ್ವತಃವಾಗಿಯೇ ಪ್ರಾಪ್ತಿ ಆಗುತ್ತದೆ. ಅದಕ್ಕಾಗಿ ಖಜಾನೆಗಳು ಸಿಕ್ಕಿದೆ, ಖಜಾನೆಗಳಿಂದ ಸಂಪನ್ನರಾಗಿದ್ದೇವೆ ಆದರೆ ಸ್ವ ಪ್ರತಿ ಅಥವಾ ವಿಶ್ವದ ಪ್ರತಿ ಎಷ್ಟು ಸಫಲತೆ ಮಾಡಿದ್ದೇವೆ ಎಂದು ಪರಿಶೀಲಿಸಿಕೊಳ್ಳಿ. ಹಳೆಯವರ್ಷಕ್ಕೆ ಬೀಳ್ಕೊಡಿಗೆ ಕೊಡುತ್ತೀರೆಂದಾಗ ಹಳೆಯ ವರ್ಷದಲ್ಲಿ ಯಾವ ಜಮಾದ ಖಜಾನೆ ಸಫಲ ಮಾಡಿದೆವು, ಎಷ್ಟು ಮಾಡಿದೆವು? ಇದನ್ನು ಪರಿಶೀಲಿಸಿಕೊಳ್ಳಿ ಮತ್ತು ಬರುವಂತಹ ವರ್ಷದಲ್ಲಿ ಈ ಖಜಾನೆಗಳನ್ನು ವ್ಯರ್ಥದ ಹೊರತಾಗಿ ಸಫಲ ಮಾಡಲೇಬೇಕು. ಒಂದು ಸೆಕೆಂಡೂ ಸಹ ಮತ್ತು ಯಾವುದೇ ಖಜಾನೆಯೂ ಸಹ ವ್ಯರ್ಥ ಆಗದಿರಲಿ. ಮೊದಲೇ ಹೇಳಿದ್ದೇವೆ ಅಲ್ಲವೇ. ಸಂಗಮಯುಗದ ಒಂದು ಸೆಕೆಂಡಿನ ಸಮಯ ಸೆಕೆಂಡ್ ಅಲ್ಲ, ವರ್ಷಕ್ಕೆ ಸರಿಸಮವಾದದ್ದು. ಈ ರೀತಿ ತಿಳಿಯಬೇಡಿ - ಒಂದು ಸೆಕೆಂಡ್, ಒಂದು ನಿಮಿಷ ಹೋಯಿತು ಎಂದು. ವ್ಯರ್ಥವಾಗಿ ಹೋಗುವುದು ಇದಕ್ಕೆ ಹುಡುಗಾಟಿಕೆ ಎಂದು ಹೇಳಲಾಗುತ್ತದೆ. ತಮ್ಮೆಲ್ಲರ ಲಕ್ಷ್ಯವಾಗಿದೆ - ನಾವು ಬ್ರಹ್ಮಾ ತಂದೆಯ ಸಮಾನ ಸಂಪನ್ನ ಮತ್ತು ಸಂಪೂರ್ಣರಾಗಬೇಕೆಂದು. ಅಂದಾಗ ಬ್ರಹ್ಮಾ ತಂದೆಯು ಸರ್ವಖಜಾನೆಗಳನ್ನು ಆದಿಯಿಂದ ಅಂತಿಮ ದಿನದವರೆಗೆ ಸಫಲ ಮಾಡಿದರು ಇದರ ಪ್ರತ್ಯಕ್ಷ ಪ್ರಮಾಣ ನೋಡಿದ್ದೀರಲ್ಲವೇ. ಸಂಪೂರ್ಣ ಫರಿಸ್ಥೆ ಆದರು. ತಮ್ಮ ಪ್ರಿಯದಾದಿಯನ್ನೂ ನೋಡಿದಿರಿ ಅವರೂ ಸಹ ಸಫಲ ಮಾಡಿದರು ಮತ್ತು ಸಫಲ ಮಾಡುವ ಒಲವು-ಉತ್ಸಾಹವನ್ನು ಸದಾ ಹೆಚ್ಚಿಸಿದರು ಅಂದಾಗ ಡ್ರಾಮಾನುಸಾರ ವಿಶೇಷ ವಿಶ್ವದ ಸೇವೆಯ ಅಲೌಕಿಕ ಪಾತ್ರಕ್ಕೆ ನಿಮಿತ್ತರಾದರು.

ಈ ವರ್ಷ ನಾಳೆಯಿಂದ ಪ್ರತಿದಿನ ಸಫಲ ಆಗಿದೆಯೋ ಅಥವಾ ವ್ಯರ್ಥವಾಗಿದೆಯೋ ಏನಾಯಿತು ಎಷ್ಟು ಆಯಿತು ಎಂದು ತಮ್ಮ ಚಾರ್ಟನ್ನು ಇಟ್ಟುಕೊಳ್ಳಬೇಕು. ಅಮೃತವೇಳೆಯಿಂದಲೇ ದೃಢ ಸಂಕಲ್ಪವನ್ನು ಮಾಡಿ, ಸಫಲತೆ ನನ್ನ ಜನ್ಮ ಸಿದ್ಧ ಅಧಿಕಾರವಾಗಿದೆ ಎಂದು ಸ್ಮೃತಿ ಸ್ವರೂಪರಾಗಬೇಕು. ಸಫಲತೆ ನನ್ನ ಕೊರಳಿನ ಹಾರವಾಗಿದೆ. ಸಫಲತೆಯ ಸ್ವರೂಪವೇ ಸಮಾನರಾಗುವುದು. ಬ್ರಹ್ಮಾ ತಂದೆಯ ಜೊತೆ ಪ್ರೀತಿ ಇದೆಯಲ್ಲವೇ. ಅಂದಾಗ ಬ್ರಹ್ಮಾ ತಂದೆಗೆ ಎಲ್ಲರಿಗಿಂತ ಜಾಸ್ತಿ ಪ್ರೀತಿ ಯಾವುದರ ಜೊತೆ ಇದೆ? ಗೊತ್ತಿದೆಯೇ? ಯಾವುದರ ಜೊತೆ ಪ್ರೀತಿ ಇತ್ತು? ಮುರಳಿಯ ಜೊತೆ ಪ್ರೀತಿ ಇತ್ತು. ಕೊನೆಯ ದಿನದಲ್ಲೂ ಸಹ ಮುರಳಿಯ ಪಾಠವನ್ನು ಮಿಸ್ ಮಾಡಲಿಲ್ಲ. ಬ್ರಹ್ಮಾ ತಂದೆಯ ಜೊತೆ ಯಾರಿಗೆ ಪ್ರೀತಿ ಇದೆಯೋ ಆ ಪ್ರೀತಿಯ ಮರುಪಾವತಿ ಬ್ರಹ್ಮಾ ತಂದೆಗೆ ಯಾವುದರ ಜೊತೆ ಪ್ರೀತಿ ಇದೆಯೋ ಅದರ ಜೊತೆ ನನ್ನ ಪ್ರೀತಿ ಸ್ವತಃವಾಗಿ ಸಹಜವಾಗಿ ಇರಬೇಕು - ಸಮಾನರಾಗುವುದರಲ್ಲಿ ಇದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಬ್ರಹ್ಮಾ ತಂದೆಯ ಇನ್ನೊಂದು ವಿಶೇಷತೆ ಏನಾಗಿದೆ? ಸದಾ ಅಲರ್ಟ್, ಹುಡುಗಾಟಿಕೆ ಅಲ್ಲ. ಕೊನೆಯ ದಿನದಲ್ಲೂ ಸಹ ಎಷ್ಟು ಅಲರ್ಟ್ ರೂಪದಲ್ಲಿ ತನ್ನ ಸೇವೆಯ ಪಾರ್ಟ್ನ್ನು ಮಾಡಿದರು. ಶರೀರ ಬಲಹೀನವಾಗಿದ್ದರೂ ಹೇಗೆ ಅಲರ್ಟ್ ಆಗಿದ್ದರು, ಯಾವುದೇ ಆಧಾರವನ್ನು ತೆಗೆದುಕೊಳ್ಳಲಿಲ್ಲ, ಅಲರ್ಟ್ ಮಾಡಿ ಹೋದರು. ಮೂರು ಮಾತುಗಳ ಮಂತ್ರವನ್ನು ಕೊಟ್ಟು ಹೋದರು. ಎಲ್ಲರಿಗೆ ನೆನಪಿದೆಯೇ? ಎಷ್ಟು ಅಲರ್ಟ್ (ಎಚ್ಚರಿಕೆಯಿಂದ) ಆಗಿರುತ್ತೀರಿ, ಫಾಲೋ ಮಾಡುತ್ತೀರಿ ಹುಡುಗಾಟಿಕೆ ಸಮಾಪ್ತಿ ಆಗಿ ಬಿಡುತ್ತದೆ. ಹುಡುಗಾಟಿಕೆಯ ವಿಶೇಷ ಮಾತುಗಳನ್ನು ಬಾಪ್ದಾದಾರವರು ಬಹಳ ಕೇಳುತ್ತಿರುತ್ತಾರೆ. ಗೊತ್ತಿದೆಯಲ್ಲವೇ! ಒಂದುವೇಳೆ ಈ ಮೂರು ಶಬ್ದಗಳು (ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ) ಸದಾ ತಮ್ಮ ಮನಸ್ಸಿನಲ್ಲಿ ರಿವೈಜ್ ಹಾಗೂ ರಿಯಲೈಜ್ (ಅನುಭೂತಿ) ಮಾಡುತ್ತಿದ್ದರೇ ಸಹಜವಾಗಿ ಸ್ವತಃವಾಗಿ ಸಮಾನವಾಗಿ ಆಗಿಯೇ ಬಿಡುತ್ತೀರಿ. ಅಂದಾಗ ಒಂದು ಮಾತನ್ನು ಸಫಲ ಮಾಡಿ ಸಫಲತಾಮೂರ್ತಿ ಆಗಿ.

ಇನ್ನೊಂದು ವಿಷಯ - ಬಾಪ್ದಾದಾರವರು ಮಕ್ಕಳ ವರ್ಷದ ರಿಜಲ್ಟ್ ನೋಡಿದ್ದಾರೆ. ಏನು ನೋಡಿದರು? ಮಹಾದಾನಿ ಆಗಿದ್ದೀರಿ ಆದರೆ ಅಖಂಡ ಮಹಾದಾನಿ, ಅಖಂಡ ಅಂಡರ್ಲೈನ್ ಮಾಡಿಕೊಳ್ಳಬೇಕು. ಅಖಂಡ ಮಹಾದಾನಿ, ಅಖಂಡ ಯೋಗಿ, ಅಖಂಡ ನಿರ್ವಿಘ್ನ ಈಗ ಇದರ ಅವಶ್ಯಕತೆ ಇದೆ. ಅಖಂಡ ಆಗುತ್ತೀರಾ? ಆಗುತ್ತೀರಾ? ಮೊದಲನೇ ಲೈನ್ನವರು ಅಖಂಡ ಆಗಬಹುದೇನು? ಒಂದುವೇಳೆ ಆಗಬಹುದು ಎಂದರೆ ಕೈ ಎತ್ತಿ. ಯಾರಿಗೆ ಮಾಡಲು ಆಗುತ್ತದೆಯೋ ಅವರು ಮಾಡುತ್ತೀರಾ? ಮಧುಬನದವರೂ ಸಹ ಕೈ ಎತ್ತುತ್ತಿದ್ದಾರೆ. ಬಾಪ್ದಾದಾರವರು ಮಧುಬನದವರನ್ನು ಮೊದಲು ನೋಡುತ್ತೇವೆ. ಮಧುಬನ ಮೇಲೆ ಪ್ರೀತಿ ಇದೆ. ಶಾಂತಿವನ, ಪಾಂಡವ ಭವನ ಯಾರು ದಾದಿಗೆ ಭುಜದಾರಿ ಆಗಿದ್ದಾರೋ ಎಲ್ಲರನ್ನು ಗಮನದಿಂದ ನೋಡುತ್ತೇವೆ. ಒಂದುವೇಳೆ ಅಖಂಡವಾಗಿದ್ದರೇ ಮನಸಿಂದ ಶಕ್ತಿಯನ್ನು ಹರಡುವುದರಲ್ಲಿ ಬಿಜಿಯಾಗಿರಿ. ಮಾತಿನಿಂದ ಜ್ಞಾನದ ಸೇವೆ ಮತ್ತು ಕರ್ಮದಿಂದ ಗುಣ ದಾನ ಅಥವಾ ಗುಣದ ಸಹಯೋಗವನ್ನು ಕೊಡುವಂತಹ ಸೇವೆ ಮಾಡಬೇಕು.

ಇತ್ತೀಚಿನ ದಿನಗಳಲ್ಲಿ ಅಜ್ಞಾನಿ ಆತ್ಮರು ಇರಲಿ, ಬ್ರಾಹ್ಮಣ ಆತ್ಮರಾಗಲಿ, ಎಲ್ಲರಿಗೂ ಗುಣದ ದಾನ, ಗುಣಗಳ ಸಹಯೋಗವನ್ನು ಕೊಡುವ ಅವಶ್ಯಕತೆ ಇದೆ. ಒಂದುವೇಳೆ ಸ್ವಯಂ ಸಹಜ, ಸರಳ ರೂಪದಿಂದ ಸ್ಯಾಂಪಲ್ (ಉದಾಹರಣೆ) ಆಗಿದ್ದೇ ಆದರೆ ತಾನಾಗಿಯೇ ಅನ್ಯರಿಗೆ ತಮ್ಮ ಗುಣಮೂರ್ತಿಯ ಸಹಯೋಗ ಸ್ವತಃವಾಗಿಯೇ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಆತ್ಮರೂ ಸಹ ಪ್ರತ್ಯಕ್ಷ ಪ್ರಮಾಣ ರೂಪದಲ್ಲಿ ನೋಡಲು ಬಯಸುತ್ತಾರೆ. ಕೇಳಲು ಬಯಸುವುದಿಲ್ಲ. ಪರಸ್ಪರ ಏನನ್ನು ಹೇಳುತ್ತೀರಿ? ಯಾರಾಗಿದ್ದಾರೆ? ಪ್ರತ್ಯಕ್ಷ ರೂಪದಲ್ಲಿ ಇವರೂ ಸಹ ಗುಣಮೂರ್ತಿ ಆಗಿ ನೋಡಲು ಬಯಸುತ್ತಾರೆ. ಕರ್ಮದಿಂದ ವಿಶೇಷ ಗುಣದ ಸಹಯೋಗ, ಗುಣಗಳ ದಾನ ನೀಡುವ ಅವಶ್ಯಕತೆ ಇದೆ. ಕೇಳಲು ಯಾರೂ ಇಷ್ಟ ಪಡುವುದಿಲ್ಲ, ನೋಡಲು ಇಷ್ಟ ಪಡುತ್ತಾರೆ. ಅಂದಾಗ ನಾನು ಜ್ಞಾನದಿಂದ, ಮಾತಿನಿಂದಂತೂ ಸೇವೆಯನ್ನು ಮಾಡುತ್ತಿದ್ದೇನೆಯೋ ವಿಶೇಷವಾಗಿ ಗಮನದಲ್ಲಿ ಇಡಬೇಕು. ಮುಂದೆಯೂ ಸಹ ಮಾಡಲೇಬೇಕು, ಬಿಡುವುದಲ್ಲ ಆದರೆ ಈಗ ಮನಸಾ ಮತ್ತು ಕರ್ಮ, ಮನಸ್ಸಿನ ಮೂಲಕ ವೈಬ್ರೇಶನ್ನ್ನು ಹರಡಿ. ಸಕಾಶವನ್ನು ಹರಡಿ, ವೈಬ್ರೇಶನ್ ಅಥವಾ ಸಕಾಶ ಕೊಡಬಹುದು. ಈ ವರ್ಷ ಒಂದು ಮನಸಾ ಶಕ್ತಿಗಳ ವೈಬ್ರೇಶನ್, ಶಕ್ತಿಗಳ ಮೂಲಕ ಸಕಾಶ ಹಾಗೂ ಕರ್ಮದ ಮೂಲಕ ಗುಣದ ಸಹಯೋಗ ಅಥವಾ ಅಜ್ಞಾನಿ ಆತ್ಮರಿಗೆ ಗುಣ ದಾನ ಕೊಡಿ.

ಹೊಸ ವರ್ಷದಲ್ಲಿ ಊಡುಗೊರೆಯನ್ನೂ ಸಹ ಕೊಡುತ್ತೀರಲ್ಲವೇ. ಅಂದಾಗ ಈ ವರ್ಷ ಸ್ವಯಂ ಗುಣಮೂರ್ತಿ ಆಗಿ ಗುಣಗಳ ಉಡುಗೊರೆಯನ್ನು ಕೊಡಬೇಕು. ಗುಣಗಳ ಟೋಲಿಯನ್ನು ತಿನ್ನಿಸುತ್ತೀರಲ್ಲವೇ. ಸಿಕ್ಕಿದಾಗ ಟೋಲಿಯನ್ನು ತಿನ್ನಿಸುತ್ತೀರಲ್ಲವೇ. ಟೋಲಿ ತಿನ್ನಿಸುವುದರಲ್ಲಿ ಖುಷಿ ಆಗಿಬಿಡುತ್ತೀರಲ್ಲವೇ. ಜ್ಞಾನವನ್ನು ಬಿಟ್ಟು ಹೋಗಿರುವಂತಹ ಕೆಲವು ಆತ್ಮರು ಟೋಲಿಯನ್ನು ನೆನಪು ಮಾಡಿಕೊಳ್ಳುತ್ತಾರೆ. ಬೇರೆ ಎಲ್ಲವನ್ನೂ ಮರೆಯುತ್ತಾರೆ ಆದರೆ ಟೋಲಿ ನೆನಪಿಗೆ ಬರುತ್ತದೆ. ಅಂದಾಗ ಈ ವರ್ಷ ಯಾವ ಟೋಲಿಯನ್ನು ಹಂಚುತ್ತೀರಿ? ಗುಣಗಳ ಟೋಲಿಯನ್ನು ಹಂಚಿರಿ. ಗುಣಗಳ ಪಿಕ್ನಿಕ್ ಮಾಡಿ ಏಕೆಂದರೆ ತಂದೆಯ ಸಮಾನ ಸಮಯದ ಸಮೀಪತೆಯ ಪ್ರಮಾಣ ಮತ್ತು ದಾದಿಯವರ ಸೂಚನೆಯ ಪ್ರಮಾಣ ಸಮಯದ ಸಂಪನ್ನತೆ ಅಚಾನಕ್ (ಇದ್ದಕ್ಕಿದ್ದಂತೆಯೇ) ಯಾವಾಗಲಾದರೂ ಸಹ ಆಗಲು ಸಾಧ್ಯತೆ ಇದೆ. ಆದ್ದರಿಂದ ತಂದೆಯ ಸಮಾನರಾಗಬೇಕು. ಅಥವಾ ದಾದೀಜಿಯವರ ಪ್ರೀತಿಗೆ ಮರುಪಾವತಿಯನ್ನು ನೀಡಲು ಯಾವ ಅವಶ್ಯಕತೆ ಇದೆ - ಮನಸ್ಸಿನ ಮತ್ತು ಕರ್ಮದ ಮೂಲಕ ಸಹಯೋಗಿ ಆಗುವಂತಹದ್ದು, ಯಾರು ಹೇಗೆ ಇರಲಿ, ಇವರು ಆದರೆ ನಾನು ಆಗುತ್ತೇನೆ ಎಂದು ಈ ರೀತಿ ಯೋಚಿಸಬೇಡಿ. ನಂಬರ್ವನ್ ಆಗಬೇಕೆಂದರೆ ಇವರು ಆದರೆ ನಾನು ಆಗುತ್ತೇನೆ ಎಂದರೆ ಯಾರು ಮಾಡುತಾರೋ ಅವರು ಮೊದಲನೇ ನಂಬರಿನಲ್ಲಿ ಹೋಗಿ ಬಿಡುತ್ತಾರೆ. ನಿಮ್ಮದು ಎರಡನೇ ನಂಬರ್ ಆಗಿ ಬಿಡುತ್ತದೆ. ನೀವು ಎರಡನೇ ನಂಬರಿನವರು ಆಗಲು ಬಯಸುತ್ತೀರೇನು? ಅಥವಾ ಮೊದಲನೇ ನಂಬರಿನವರು ಆಗಲು ಬಯಸುತ್ತೀರೋ? ಒಂದುವೇಳೆ ಯಾರಿಗಾದರೂ ನೀವು ಎರಡನೇ ನಂಬರ್ನ್ನು ತೆಗೆದುಕೊಳ್ಳಿ ಎಂದರೆ ತೆಗೆದುಕೊಳ್ಳುತ್ತೀರಾ? ಎಲ್ಲರೂ ಮೊದಲನೇ ನಂಬರ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಮೊದಲನೇ ನಂಬರಿನವರು ಆಗಬೇಕು. ಅನ್ಯರನ್ನು ಏಕೆ ನಿಮಿತ್ತರನ್ನಾಗಿ ಮಾಡುತ್ತೀರಿ. ತಮ್ಮನ್ನು ನಿಮಿತ್ತರನ್ನಾಗಿ ಮಾಡಿಕೊಳ್ಳಿರಿ. ಬ್ರಹ್ಮಾ ತಂದೆಯವರು ಏನು ಹೇಳಿದರು? ಪ್ರತಿಯೊಂದು ಮಾತಿನಲ್ಲಿ ತಾವು ನಿಮಿತ್ತರಾಗಿ ನಿಮಿತ್ತರನ್ನಾಗಿ ಮಾಡಿದರು. (ಹೇ ಅರ್ಜುನ) ನಾನೇ ಆ ಅರ್ಜುನ ಎಂದು ಪಾತ್ರ ಮಾಡಿದರು. ನಾನೇ ನಿಮಿತ್ತನಾಗಬೇಕು. ನಾನೇ ಮಾಡಬೇಕು. ಅನ್ಯರೂ ಮಾಡುತ್ತಾರೆ, ನನ್ನನ್ನು ನೋಡಿ ಅನ್ಯರು ಮಾಡುತ್ತಾರೆ. ಅನ್ಯರನ್ನು ನೋಡಿ ನಾನು ಮಾಡುವುದಲ್ಲ. ನನ್ನನ್ನು ನೋಡಿ ಅನ್ಯರು ಮಾಡಲಿ ಇದು ಬ್ರಹ್ಮಾ ತಂದೆಯ ಮೊದಲನೇ ಪಾಠವಾಗಿದೆ. ಏನು ಮಾಡಬೇಕೆಂದು ಕೇಳಿದಿರಾ? ಸಫಲತಾಮೂರ್ತಿ, ಸಫಲತಾಮೂರ್ತಿ, ಅಖಂಡ ದಾನಿಗಳಾಗಿ ಆಗ ಮಾಯೆಗೆ ನಿಮ್ಮ ಬಳಿ ಬರಲು ಧೈರ್ಯ ಇರುವುದಿಲ್ಲ. ಯಾವಾಗ ಅಖಂಡ ಮಹಾದಾನಿಗಳಾಗಿ ಬಿಡುತ್ತೀರಿ, ನಿರಂತರ ಸೇವಾಧಾರಿಯಾಗಿರುತ್ತೀರಿ, ಬಿಜಿಯಾಗಿರುತ್ತೀರಿ, ಮನಸ್ಸು, ಬುದ್ಧಿ, ಸೇವಾಧಾರಿಯಾಗಿದ್ದಾಗ ಮಾಯೆ ಎಲ್ಲಿ ಬರುತ್ತದೆ. ಅಂದಾಗ ಈ ವರ್ಷ ಏನಾಗಬೇಕಾಗಿದೆ? ಎಲ್ಲರ ಹೃದಯದಿಂದ ಒಂದೇ ಧ್ವನಿ ಬರಬೇಕು ಅದನ್ನು ಬಾಪ್ದಾದಾ ಬಯಸುತ್ತಾರೆ, ಅದು ಯಾವ ಧ್ವನಿ? ನೋ ಪ್ರಾಬ್ಲೆಮ್ (ಸಮಸ್ಯೆಯೇನೂ ಇಲ್ಲ) ಕಂಪ್ಲೀಟ್ (ಸಂಪೂರ್ಣ). ಪ್ರಾಬ್ಲೆಮ್ ಅಲ್ಲ ಆದರೆ ಸಂಪೂರ್ಣರಾಗಲೇಬೇಕು. ದೃಢ ನಿಶ್ಚಯ ಬುದ್ಧಿ, ವಿಜಯ ಮಾಲೆಯಲ್ಲಿ ಹತ್ತಿರ ಮಣಿ ಆಗಲೇಬೇಕು. ಸರಿಯಲ್ಲವೇ! ಆಗಬೇಕಲ್ಲವೇ! ಮಧುಬನದವರು ಆಗುತ್ತೀರಾ? ನೋ ಕಂಪ್ಲೇಂಟ್ (ದೂರಿಲ್ಲ). ಸಾಹಸವನ್ನು ಇಡುವಂತಹವರು ಕೈ ಎತ್ತಿ. ನೋ ಪ್ರಾಬ್ಲೆಮ್ (ಸಮಸ್ಯೆ ಇಲ್ಲ). ವಾಹ್! ಶುಭಾಶಯಗಳು, ಶುಭಾಶಯಗಳು, ಶುಭಾಶಯಗಳು.

ನೋಡಿ ನಿಶ್ಚಯದ ಪ್ರತ್ಯಕ್ಷ ಪ್ರಮಾಣ ಆತ್ಮಿಕ ನಶೆ. ಒಂದುವೇಳೆ ಆತ್ಮಿಕ ನಶೆ ಇಲ್ಲವೆಂದರೆ ನಿಶ್ಚಯವೂ ಸಹ ಇಲ್ಲ. ಪೂರ್ಣ ನಿಶ್ಚಯ ಇಲ್ಲ, ಸ್ವಲ್ಪ ನಿಶ್ಚಯವಿದೆ. ನಶೆಯನ್ನು ಇಟ್ಟುಕೊಳ್ಳಿ, ದೊಡ್ಡ ಮಾತೇನಲ್ಲ. ಎಷ್ಟು ಕಲ್ಪಗಳು ತಾವೇ ತಂದೆಯ ಸಮಾನರಾಗಿದ್ದೀರಿ, ನೆನಪಿದೆಯೇ? ಲೆಕ್ಕವಿಲ್ಲದಷ್ಟು ಬಾರಿ ತಂದೆಯ ಸಮಾನರಾಗಿದ್ದೀರಿ ಅಂದಾಗ ನಾವೇ ಆಗಿದ್ದೇವೆ, ನಾವೇ ಆಗಿದ್ದು ಹಾಗೂ ನಾವೇ ಅನೇಕ ಬಾರಿ ಆಗುತ್ತೇವೆ ಎಂದು ಈ ನಶೆ ಇಟ್ಟುಕೊಳ್ಳಿ. ಈ ನಶೆ ಸದಾ ಕರ್ಮದಲ್ಲಿ ಕಾಣಿಸಬೇಕು. ಸಂಕಲ್ಪದಲ್ಲಿ ಅಲ್ಲ, ಮಾತಿನಲ್ಲಿ ಅಲ್ಲ ಆದರೆ ಕರ್ಮದಲ್ಲಿ ಕಾಣಿಸಬೇಕು. ಕರ್ಮದ ಅರ್ಥವಾಗಿದೆ ಚಲನೆಯಲ್ಲಿ, ಚೆಹರೆಯಲ್ಲಿ ಕಾಣಿಸಬೇಕು. ಈಗ ಹೋಂವರ್ಕ್ ಸಿಕ್ಕಿದೆಯೇ? ಸಿಕ್ಕಿದೆಯಲ್ಲವೇ. ನಂಬರ್ವಾರಾಗಿ ಬರುತ್ತೀರೋ ಅಥವಾ ನಂಬರ್ವನ್ ಆಗುತ್ತೀರೋ ಈಗ ನೋಡುತ್ತೇವೆ. ಒಳ್ಳೆಯದು.

ಬಾಪ್ದಾದಾರವರ ಬಳಿ ಕಾರ್ಡ್, ಪತ್ರ, ಈ-ಮೇಲ್, ನೆನಪು-ಪ್ರೀತಿ, ಕಂಪ್ಯೂಟರ್ ಮೂಲಕವೂ ಸಹ ಬಹಳ ಸಿಕ್ಕಿದೆ. ಮತ್ತೆ ಬಾಪ್ದಾದಾ ದೂರ ಇದ್ದರೂ ಹೃದಯ ಸಿಂಹಾಸನಾಧಿಕಾರಿ ಮಕ್ಕಳಿಗೆ, ಪ್ರತಿಯೊಬ್ಬರಿಗೆ ಹೆಸರು ಸಹಿತವಾಗಿ, ವಿಶೇಷ ಸಹಿತವಾಗಿ ನೆನಪು, ಪ್ರೀತಿ ಹಾಗೂ ಹೃದಯದ ಆಶೀರ್ವಾದಗಳನ್ನು ಸನ್ಮುಖದಲ್ಲಿ ಸಮಾವೇಶ ಮಾಡಿಕೊಳ್ಳುತ್ತಿದ್ದಾರೆ. ಬಾಪ್ದಾದಾರವರಿಗೆ ಗೊತ್ತಿದೆ ನೆನಪು-ಪ್ರೀತಿ, ಪ್ರೀತಿಯಂತೂ ಎಲ್ಲರಿಗೂ ಇರುತ್ತದೆ ಮತ್ತೆ ಬಾಪ್ದಾದಾ ಸದಾ ಅಮೃತವೇಳೆ ವಿಶೇಷ ಬ್ರಾಹ್ಮಣ ಆತ್ಮರಿಗೆ ನೆನಪು-ಪ್ರೀತಿಯ ರೆಸ್ಪಾಂಡ್ ವಿಶೇಷವಾಗಿ ಮಾಡುತ್ತಾರೆ. ಆದ್ದರಿಂದ ಕಾಡ್ರ್ಗಳೂ ಸಹ ಒಳ್ಳೊಳ್ಳೆಯದು ಮಾಡಿದ್ದಾರೆ. ಕಾಡ್ರ್ಗಳು ಇಲ್ಲಿ ಇಡುತ್ತಾರೆ ಆದರೆ ಬಾಪ್ದಾದಾರವರ ಬಳಿಯಂತೂ ವತನಕ್ಕೆ ಮೊದಲು ತಲುಪಿ ಬಿಡುತ್ತದೆ. ಒಳ್ಳೆಯದು.

ನಾಲ್ಕಾರು ಕಡೆಯ ಹೊಳೆಯುತ್ತಿರುವ ಆತ್ಮಾ ದೀಪ ಮಕ್ಕಳಿಗೆ, ಸದಾ ಸಫಲ ಮಾಡುವಂತಹ, ಸಫಲತಾ ಸ್ವರೂಪ ಮಕ್ಕಳಿಗೆ, ಸದಾ ಅಖಂಡ ಮಹಾದಾನಿ, ಅಖಂಡ ನಿರ್ವಿಘ್ನ, ಅಖಂಡ ಜ್ಞಾನ ಮತ್ತು ಯೋಗಯುಕ್ತ, ಸದಾ ಒಂದೇ ಸಮಯದಲ್ಲಿ ಮೂರು ಸೇವೆಗಳನ್ನು ಮಾಡುವಂತಹ, ಮನಸ್ಸಿನ ವೈಬ್ರೇಶನ್ ಮೂಲಕ ವಾಯುಮಂಡಲದ ಮೂಲಕ, ವಾಚಾ, ವಾಣಿಯ ಮೂಲಕ ಹಾಗೂ ಚಲನೆ, ಚೆಹರೆ, ಕರ್ಮದ ಮೂಲಕ ಮೂರೂ ಸೇವೆಗಳು ಒಂದೇ ಸಮಯದಲ್ಲಿ ಒಟ್ಟಿಗೆ ಇರಬೇಕು ಆಗ ತಮ್ಮ ಪ್ರಭಾವ ಚೆನ್ನಾಗಿ ಹೇಳುವವರ ಮೇಲೆ ಅಲ್ಲ ಆದರೆ ಚೆನ್ನಾಗಿ ಆಗುವವರ ಮೇಲೆ ಆಗುತ್ತದೆ. ಅಂತಹ ಅನುಭವಿಮೂರ್ತಿ ಮುಖಾಂತರ ಅನುಭವ ಮಾಡಿಸುವ ಮಕ್ಕಳಿಗೆ ಬಾಪ್ದಾದಾರವರು ಹೊಸ ವರ್ಷಕ್ಕೆ ಪದಮಾ-ಪದಮಾ ಗುಣ ನೆನಪು, ಪ್ರೀತಿ, ಆಶೀರ್ವಾದಗಳು ಹಾಗೂ ಹೃದಯ ಸಿಂಹಾಸನಾಧಿಕಾರಿಯನ್ನಾಗಿ ಮಾಡುವಂತಹವರು, ಆದ್ದರಿಂದ ನಾಲ್ಕಾರೂ ಕಡೆಯ ಮಕ್ಕಳಿಗೆ, ಯಾರು ಸನ್ಮುಖದಲ್ಲಿ ಇದ್ದಾರೆ, ದೂರದಲ್ಲಿ ಕುಳಿತಿದ್ದರೂ ಹೃದಯ ಸಿಂಹಾಸನಾದ ಮೇಲೆ ಇದ್ದಾರೆ, ಎಲ್ಲರಿಗೆ ಹೆಸರು ಹಾಗೂ ವಿಶೇಷತೆ ಸಹಿತವಾಗಿ ನೆನಪು ಪ್ರೀತಿ ಹಾಗೂ ನಮಸ್ತೆ.

ಒಳ್ಳೆಯದು - ಯಾರು ಮೊದಲನೇ ಬಾರಿ ಬಂದಿದ್ದೀರಿ ಅವರು ಎದ್ದು ನಿಂತುಕೊಳ್ಳಿ. ಕೈಯನ್ನು ಅಲುಗಾಡಿಸಿ. ನೋಡಿ ಅರ್ಧ ಕ್ಲಾಸ್ ಮೊದಲನೇ ಬಾರಿ ಬಂದಿದ್ದಾರೆ. ಹಿಂದಿನವರು ಕೈಯನ್ನು ಅಲುಗಾಡಿಸಿ. ಟಿ.ವಿ.ಯಲ್ಲಿ ಕಾಣಿಸುತ್ತಿದೆ. ಬಹಳ ಜನ ಇದ್ದಾರೆ. ಒಳ್ಳೆಯದು ಮೊದಲನೇ ಬಾರಿ ಬಂದಿರುವವರಿಗೆ ಬಾಪ್ದಾದಾರವರ ಬಹಳ-ಬಹಳ ಹೃದಯದ ಶುಭಾಷಯಗಳು ಹಾಗೂ ಹೃದಯದ ನೆನಪು ಪ್ರೀತಿಯೂ ಸಹ ಇದೆ. ಈಗ ಬಂದಿದ್ದೀರಿ, ಈಗ ಬಂದಿರುವವರಿಗೆ ಬಾಪ್ದಾದಾರವರ ವರದಾನವಿದೆ - “ಅಮರ ಭವ”.

ವರದಾನ:
ಕಿರುಕುಳ ಕೊಡುವಂತಹವರಿಗೂ ಗುಣ ಮಾಲೆಯನ್ನು ತೊಡಿಸುವಂತಹವರು ಇಷ್ಟ ದೇವ, ಮಹಾನ್ ಆತ್ಮ ಭವ.

ಹೇಗೆ ಇತ್ತೀಚಿನ ದಿನಗಳಲ್ಲಿ ತಾವು ವಿಶೇಷ ಆತ್ಮರ ಸ್ವಾಗತ ಮಾಡುವ ಸಮಯದಲ್ಲಿ ಕೊರಳಿಗೆ ಸ್ಥೂಲ ಮಾಲೆ ಹಾಕುತ್ತಾರೆ ಆಗ ನೀವು ಹಾಕಿದವರ ಕೊರಳಿಗೆ ವಾಪಸ್ಸು ಆ ಮಾಲೆಯನ್ನು ಹಾಕುವಿರಿ, ಅದೇ ರೀತಿ ಕಿರುಕುಳ ಕೊಡುವವರಿಗೂ ಸಹಾ ನೀವು ಗುಣ ಮಾಲೆಯನ್ನು ತೊಡಿಸಿದಾಗ ಅವರು ಸ್ವತಃವಾಗಿ ನಿಮಗೆ ಗುಣ ಮಾಲೆಯನ್ನು ವಾಪಸ್ಸು ಮಾಡುತ್ತಾರೆ ಏಕೆಂದರೆ ಕಿರುಕುಳ ಕೊಡುವವರಿಗೆ ಗುಣ ಮಾಲೆಯನ್ನು ತೊಡಿಸುವುದು ಅರ್ಥಾತ್ ಜನ್ಮ-ಜನ್ಮಾಂತರಕ್ಕಾಗಿ ಭಕ್ತರಾಗಿ ನಿಶ್ಚಿತ ಮಾಡಿಕೊಳ್ಳುವುದಾಗಿದೆ. ಇಲ್ಲಿ ಕೊಡುವುದೇ ಅನೇಕ ಬಾರಿ ತೆಗೆದುಕೊಳ್ಳುವುದಾಗಿ ಬಿಡುವುದು. ಇದೇ ವಿಶೇಷತೆ ಇಷ್ಟ ದೇವ, ಮಹಾನ್ ಆತ್ಮರನ್ನಾಗಿ ಮಾಡಿ ಬಿಡುವುದು.

ಸ್ಲೋಗನ್:
ತಮ್ಮ ಮನಸಾ ವೃತ್ತಿ ಸದಾ ಒಳ್ಳೆಯ ಶಕ್ತಿಶಾಲಿಯನ್ನಾಗಿ ಮಾಡಿಕೊಂಡಾಗ ಕೆಟ್ಟಿರುವುದೂ ಸಹಾ ಒಳ್ಳೆಯದಾಗಿ ಬಿಡುತ್ತದೆ.

ಅವ್ಯಕ್ತ ಸೂಚನೆ:- ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.

ಎಷ್ಟೇ ಕಾರ್ಯಗಳ ನಾಲ್ಕಾರು ಕಡೆ ಸೆಳೆತವಿರಲಿ, ಬುದ್ದಿ ಸೇವೆಯ ಕಾರ್ಯದಲ್ಲಿ ಅತೀ ಬ್ಯುಸಿಯಾಗಿರಲಿ - ಇಂತಹ ಸಮಯದಲ್ಲಿ ಅಶರೀರಿ ಆಗುವ ಅಭ್ಯಾಸ ಮಾಡಿ ನೋಡಿ. ಎಂದೂ ಸಹ ಯಥಾರ್ಥ ಸೇವೆಯ ಬಂಧನ ಇರುವುದಿಲ್ಲ ಏಕೆಂದರೆ ಯೋಗಯುಕ್ತ, ಯುಕ್ತಿ ಯುಕ್ತ ಸೇವಾಧಾರಿ ಸದಾ ಸೇವೆ ಮಾಡುತ್ತಲು ಸಹ ಉಪರಾಮ ಆಗಿರುತ್ತಾರೆ. ಹೀಗಲ್ಲ – ಸೇವೆ ಬಹಳ ಇದೆ ಆದ್ದರಿಂದ ಅಶರೀರಿ ಆಗಲು ಸಾಧ್ಯವಾಗಲಿಲ್ಲ. ನೆನಪಿಟ್ಟುಕೊಳ್ಳಿ ನನ್ನ ಸೇವೆ ಅಲ್ಲ, ಬಾಬಾರವರು ಕೊಟ್ಟಿದ್ದಾರೆ ಎಂದರೆ ನಿಬರ್ಂಧನವಾಗಿರುವಿರಿ.