24.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ತಂದೆಯು
ನಿಮ್ಮ ಬ್ಯಾಟರಿಯನ್ನು ಚಾರ್ಜ್ ಮಾಡಲು ಬಂದಿದ್ದಾರೆ, ನೀವು ಎಷ್ಟು ನೆನಪಿನಲ್ಲಿರುತ್ತೀರಿ ಅಷ್ಟು
ಬ್ಯಾಟರಿ ಚಾರ್ಜ್ ಆಗುತ್ತಿರುವುದು"
ಪ್ರಶ್ನೆ:
ನಿಮ್ಮ ಸತ್ಯದ
ದೋಣಿಗೆ ಬಿರುಗಾಳಿಗಳು ಏಕೆ ಬರುತ್ತವೆ?
ಉತ್ತರ:
ಏಕೆಂದರೆ ಈ
ಸಮಯದಲ್ಲಿ ಕೃತಕವಾದವರು ಬಹಳಷ್ಟು ಮಂದಿ ಇದ್ದಾರೆ. ಕೆಲವರು ತಮ್ಮನ್ನು ಭಗವಂತನೆಂದು
ಹೇಳಿಕೊಳ್ಳುತ್ತಾರೆ, ಕೆಲವರು ರಿದ್ಧಿ-ಸಿದ್ಧಿ ತೋರಿಸುತ್ತಾರೆ, ಆದ್ದರಿಂದ ಮನುಷ್ಯರು ಸತ್ಯವನ್ನು
ಪರೀಕ್ಷಿಸಲು ಸಾಧ್ಯವಿಲ್ಲ. ಸತ್ಯದ ದೋಣಿಯನ್ನು ಅಲುಗಾಡಿಸಲು ಪ್ರಯತ್ನಿಸುತ್ತಾರೆ ಆದರೆ ನಿಮಗೆ
ತಿಳಿದಿದೆ - ನಮ್ಮ ಸತ್ಯದ ದೋಣಿಯು ಎಂದೂ ಮುಳುಗಿ ಹೋಗಲು ಸಾಧ್ಯವಿಲ್ಲ. ಇಂದು ಯಾರು ವಿಘ್ನಗಳನ್ನು
ಹಾಕುತ್ತಾರೆ, ಅವರು ನಾಳೆ ಸದ್ಗತಿಯ ಮಾರ್ಗವು ಇಲ್ಲಿಯೇ ಸಿಗುತ್ತದೆ ಎಂಬುದನ್ನು
ತಿಳಿದುಕೊಳ್ಳುತ್ತಾರೆ. ಎಲ್ಲರಿಗಾಗಿ ಇದೊಂದೇ ಅಂಗಡಿಯಾಗಿದೆ.
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಅಥವಾ ಆತ್ಮಗಳ ಪ್ರತಿ ಏಕೆಂದರೆ ಆತ್ಮವೇ ಕಿವಿಗಳ ಮೂಲಕ ಕೇಳುತ್ತದೆ,
ಧಾರಣೆಯೂ ಆತ್ಮದಲ್ಲಿಯೇ ಆಗುತ್ತದೆ. ತಂದೆಯ ಆತ್ಮನಲ್ಲಿಯೂ ಸಹ ಜ್ಞಾನವು ತುಂಬಲ್ಪಟ್ಟಿದೆ. ಮಕ್ಕಳು
ಈ ಜನ್ಮದಲ್ಲಿ ಆತ್ಮಾಭಿಮಾನಿಗಳಾಗಬೇಕಾಗಿದೆ. ಭಕ್ತಿಮಾರ್ಗದ 63 ಜನ್ಮಗಳಲ್ಲಿ ನೀವು
ದೇಹಾಭಿಮಾನದಲ್ಲಿರುತ್ತೀರಿ. ಆತ್ಮವೆಂದರೇನೆಂಬುದು ತಿಳಿದಿರುವುದಿಲ್ಲ. ಆತ್ಮವು ಅವಶ್ಯವಾಗಿ ಇದೆ,
ಆತ್ಮವೇ ಶರೀರದಲ್ಲಿ ಪ್ರವೇಶ ಮಾಡುತ್ತದೆ, ದುಃಖವೂ ಆತ್ಮಕ್ಕೇ ಆಗುತ್ತದೆ ಆದ್ದರಿಂದಲೇ ಪತಿತ ಆತ್ಮ,
ಪಾವನ ಆತ್ಮವೆಂದು ಹೇಳಲಾಗುತ್ತದೆ. ಪತಿತ ಪರಮಾತ್ಮನೆಂದು ಎಂದೂ ಕೇಳಿಲ್ಲ. ಸರ್ವರಲ್ಲಿ ಒಂದುವೇಳೆ
ಪರಮಾತ್ಮನಿದ್ದಿದ್ದರೆ ಪತಿತ ಪರಮಾತ್ಮನಾಗಿ ಬಿಡುತ್ತಿದ್ದರು. ಅಂದಾಗ ಮುಖ್ಯ ಮಾತು
ಆತ್ಮಾಭಿಮಾನಿಗಳಾಗಬೇಕಾಗಿದೆ. ಆತ್ಮವು ಎಷ್ಟು ಚಿಕ್ಕದಾಗಿದೆ! ಅದರಲ್ಲಿ ಎಷ್ಟೊಂದು ಪಾತ್ರವು ಹೇಗೆ
ಅಡಕವಾಗಿದೆ! ಇದು ಯಾರಿಗೂ ತಿಳಿದಿಲ್ಲ. ನೀವಂತೂ ಹೊಸ ಮಾತನ್ನು ಕೇಳುತ್ತೀರಿ. ಈ ನೆನಪಿನ
ಯಾತ್ರೆಯನ್ನು ತಂದೆಯೇ ಕಲಿಸಿ ಕೊಡುತ್ತಾರೆ, ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಇದರಲ್ಲಿಯೇ
ಪರಿಶ್ರಮವಿದೆ. ಮತ್ತೆ-ಮತ್ತೆ ತನ್ನನ್ನು ಆತ್ಮನೆಂದು ತಿಳಿಯಬೇಕಾಗಿದೆ. ಹೇಗೆ ನೋಡಿ, ಎಮರ್ಜೆನ್ಸಿ
ಲೈಟ್ ಬಂದಿದೆ, ಇದು ಬ್ಯಾಟರಿಯಿಂದ ನಡೆಯುತ್ತದೆ. ಇದನ್ನು ಮತ್ತೆ ಚಾರ್ಜ್ ಮಾಡುತ್ತಾರೆ. ತಂದೆಯು
ಎಲ್ಲದಕ್ಕಿಂತ ದೊಡ್ಡ ಪವರ್ (ಶಕ್ತಿ) ಆಗಿದ್ದಾರೆ. ಎಷ್ಟೊಂದು ಮಂದಿ ಆತ್ಮಗಳಿದ್ದಾರೆ, ಎಲ್ಲರೂ
ತಂದೆಯಿಂದ ಪವರ್ನ್ನು ತುಂಬಿಸಿಕೊಳ್ಳಬೇಕಾಗಿದೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ. ಅವರೊಂದಿಗೆ
ನಮ್ಮ ಯೋಗವಿಲ್ಲವೆಂದರೆ ಬ್ಯಾಟರಿಯು ಹೇಗೆ ಚಾರ್ಜ್ ಆಗುತ್ತದೆ? ಡಿಸ್ಚಾರ್ಜ್ ಆಗುವುದರಲ್ಲಿ ಇಡೀ
ಕಲ್ಪ ಹಿಡಿಸುತ್ತದೆ. ಈಗ ಪುನಃ ಬ್ಯಾಟರಿಯನ್ನು ಚಾರ್ಜ್ ಮಾಡಲಾಗುತ್ತದೆ. ಮಕ್ಕಳಿಗೆ ತಿಳಿದಿದೆ -
ನಮ್ಮ ಬ್ಯಾಟರಿಯು ಈಗ ಡಿಸ್ಚಾರ್ಜ್ ಆಗಿ ಬಿಟ್ಟಿದೆ. ಈಗ ಮತ್ತೆ ಚಾರ್ಜ್ ಮಾಡಬೇಕು - ಅದು ಹೇಗೆ?
ಅದಕ್ಕಾಗಿ ನನ್ನೊಂದಿಗೆ ಯೋಗವನ್ನಿಡಿ ಎಂದು ತಂದೆಯು ತಿಳಿಸುತ್ತಾರೆ. ಇದಂತೂ ತಿಳಿದುಕೊಳ್ಳುವ ಬಹಳ
ಸಹಜವಾದ ಮಾರ್ಗವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನ ಜೊತೆ ಬುದ್ಧಿಯೋಗವನ್ನಿಡಿ ಆಗ
ನೀವಾತ್ಮನಲ್ಲಿ ಶಕ್ತಿಯು ತುಂಬಿ ಸತೋಪ್ರಧಾನರಾಗಿ ಬಿಡುವಿರಿ. ವಿದ್ಯೆಯೇ ಸಂಪಾದನೆಯಾಗಿದೆ.
ನೆನಪಿನಿಂದ ನೀವು ಪಾವನರಾಗುತ್ತೀರಿ. ಧೀರ್ಘಾಯಸ್ಸುಳ್ಳವರಾಗುತ್ತೀರಿ, ಬ್ಯಾಟರಿಯು ಚಾರ್ಜ್
ಆಗುತ್ತದೆ. ಪ್ರತಿಯೊಬ್ಬರೂ ನೋಡಿಕೊಳ್ಳಿ - ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ! ತಂದೆಯನ್ನು
ಮರೆಯುವುದರಿಂದಲೇ ಬ್ಯಾಟರಿಯು ಡಿಸ್ಚಾರ್ಜ್ ಆಗುತ್ತದೆ. ಯಾರದೂ ಈಗ ಸತ್ಯ ಸಂಬಂಧ (ಯೋಗ) ವಿಲ್ಲ.
ನೀವು ಮಕ್ಕಳದೇ ಸತ್ಯವಾದ ಸಂಬಂಧವಿದೆ. ತಂದೆಯನ್ನು ನೆನಪು ಮಾಡದೇ ಜ್ಯೋತಿಯು ಬೆಳಗುವುದಾದರೂ ಹೇಗೆ?
ಜ್ಞಾನವನ್ನು ಕೇವಲ ತಂದೆಯೊಬ್ಬರೇ ಕೊಡುತ್ತಾರೆ.
ಮಕ್ಕಳಿಗೆ ತಿಳಿದಿದೆ -
ಜ್ಞಾನವು ದಿನ, ಭಕ್ತಿಯು ರಾತ್ರಿಯಾಗಿದೆ ಮತ್ತೆ ರಾತ್ರಿಯೊಂದಿಗೆ ವೈರಾಗ್ಯವುಂಟಾಗುತ್ತದೆ, ಹಗಲು
ಆರಂಭವಾಗುತ್ತದೆ. ತಂದೆಯು ತಿಳಿಸುತ್ತಾರೆ - ರಾತ್ರಿಯನ್ನು ಮರೆಯಿರಿ, ಈಗ ದಿನವನ್ನು ನೆನಪು ಮಾಡಿ.
ಸ್ವರ್ಗವು ದಿನ, ನರಕವು ರಾತ್ರಿಯಾಗಿದೆ. ನೀವು ಮಕ್ಕಳು ಈಗ ಚೈತನ್ಯದಲ್ಲಿದ್ದೀರಿ. ಈ ಶರೀರವಂತೂ
ವಿನಾಶಿಯಾಗಿದೆ. ಮಣ್ಣಿನಿಂದ ರಚನೆಯಾಗುತ್ತದೆ ಮತ್ತೆ ಮಣ್ಣಿನಲ್ಲಿಯೇ ಸೇರಿ ಹೋಗುತ್ತಾರೆ. ಆತ್ಮವು
ಅವಿನಾಶಿಯಲ್ಲವೆ ಬಾಕಿ ಬ್ಯಾಟರಿಯು ಡಿಸ್ಚಾರ್ಜ್ ಆಗುತ್ತದೆ. ನೀವೀಗ ಎಷ್ಟೊಂದು
ಬುದ್ಧಿವಂತರಾಗಿದ್ದೀರಿ. ನಿಮ್ಮ ಬುದ್ಧಿಯು ಮನೆಯ ಕಡೆ ಹೋಗುತ್ತದೆ. ಅಲ್ಲಿಂದ ನಾವು ಬಂದಿದ್ದೇವೆ.
ಇಲ್ಲಿ ಸೂಕ್ಷ್ಮವತನದ ಬಗ್ಗೆ ಅರ್ಥವಾಯಿತು. ಅಲ್ಲಿ ವಿಷ್ಣುವಿಗೆ ನಾಲ್ಕು ಭುಜಗಳನ್ನು
ತೋರಿಸುತ್ತಾರೆ ಆದರೆ ಇಲ್ಲಿ ಯಾರಿಗೂ ನಾಲ್ಕು ಭುಜಗಳಿರಲು ಸಾಧ್ಯವಿಲ್ಲ. ಬ್ರಹ್ಮಾ-ಸರಸ್ವತಿಯೇ
ನಂತರ ಲಕ್ಷ್ಮೀ-ನಾರಾಯಣ ಆಗುತ್ತಾರೆ. ನಂತರ ವಿಷ್ಣುವಿಗೆ ನಾಲ್ಕು ಭುಜಗಳನ್ನು ತೋರಿಸಿದ್ದಾರೆಂದು
ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ.
ಆತ್ಮದಲ್ಲಿಯೇ ಸಂಸ್ಕಾರವು ತುಂಬುತ್ತದೆ. ಆತ್ಮವೇ ತಮೋಪ್ರಧಾನದಿಂದ ಸತೋಪ್ರಧಾನವಾಗುತ್ತದೆ. ಓ ಬಾಬಾ,
ನಾವು ಡಿಸ್ಚಾರ್ಜ್ ಆಗಿ ಬಿಟ್ಟಿದ್ದೇವೆ, ಈಗ ತಾವು ಬನ್ನಿ - ನಾವು ಚಾರ್ಜ್ ಆಗಬೇಕಾಗಿದೆಯೆಂದು
ಆತ್ಮಗಳೇ ತಂದೆಯನ್ನು ಕರೆಯುತ್ತೀರಿ ಅಂದಾಗ ತಂದೆಯು ತಿಳಿಸುತ್ತಾರೆ - ನನ್ನನ್ನು ಎಷ್ಟು ನೆನಪು
ಮಾಡುವಿರೋ ಅಷ್ಟು ಶಕ್ತಿಯು ಬರುವುದು. ತಂದೆಯೊಂದಿಗೆ ಪ್ರೀತಿಯಿರಬೇಕು. ಬಾಬಾ, ನಾವು
ತಮ್ಮವರಾಗಿದ್ದೇವೆ, ತಮ್ಮ ಜೊತೆಯೇ ಮನೆಗೆ ನಡೆಯುತ್ತೇವೆ. ಹೇಗೆ ತಂದೆಯ ಮನೆಯಿಂದ ಮಾವನ ಮನೆಯವರು
ಕರೆದುಕೊಂಡು ಹೋಗುತ್ತಾರಲ್ಲವೆ. ಇಲ್ಲಿ ನಿಮಗೆ ಶೃಂಗಾರ ಮಾಡಿಸುವಂತಹ ಇಬ್ಬರು ತಂದೆಯರು
ಸಿಕ್ಕಿದ್ದಾರೆ, ಶೃಂಗಾರವೂ ಚೆನ್ನಾಗಿರಬೇಕು ಅರ್ಥಾತ್ ಸರ್ವಗುಣ ಸಂಪನ್ನರಾಗಬೇಕಾಗಿದೆ.
ತಮ್ಮೊಂದಿಗೆ ಕೇಳಿಕೊಳ್ಳಿ - ನನ್ನಲ್ಲಿ ಯಾವುದೇ ಅವಗುಣವಿಲ್ಲವೆ? ಮನಸ್ಸಿನಲ್ಲಿ ಭಲೆ ಬಿರುಗಾಳಿಗಳು
ಬರುತ್ತವೆ ಆದರೆ ಅದನ್ನು ಕರ್ಮದಲ್ಲಿ ತರುತ್ತಿಲ್ಲ ತಾನೆ? ಯಾರಿಗೂ ದುಃಖವನ್ನು ಕೊಡುತ್ತಿಲ್ಲವೇ?
ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ. ನಾವೂ ಸಹ ಎಲ್ಲರಿಗೆ ಸುಖದ ಮಾರ್ಗವನ್ನು ತಿಳಿಸುತ್ತೇವೆ.
ತಂದೆಯು ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ನೀವಂತೂ ಸೈನಿಕರಲ್ಲವೆ. ನಿಮ್ಮ ಹೆಸರೇ
ಆಗಿದೆ - `ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು' ಯಾರಾದರೂ ಒಳಗೆ ಬರಲಿ ಮೊಟ್ಟ ಮೊದಲಿಗೆ ಇದನ್ನು
ಕೇಳಿರಿ - ಎಲ್ಲಿಂದ ಬಂದಿದ್ದೀರಿ? ಯಾರ ಬಳಿ ಬಂದಿದ್ದೀರಿ? ನಾವು ಬ್ರಹ್ಮಾಕುಮಾರ-ಕುಮಾರಿಯರ ಬಳಿ
ಬಂದಿದ್ದೇವೆಂದು ಹೇಳುತ್ತಾರೆ. ಒಳ್ಳೆಯದು- ಬ್ರಹ್ಮಾನು ಯಾರು? ಪ್ರಜಾಪಿತ ಬ್ರಹ್ಮಾನ ಹೆಸರನ್ನು
ಎಂದಾದರೂ ಕೇಳಿದ್ದೀರಾ? ಹಾ! ಪ್ರಜಾಪಿತನಿಗೆ ನೀವೂ ಸಹ ಮಕ್ಕಳಾಗಿದ್ದೀರಿ. ಪ್ರಜೆಗಳಂತೂ ಎಲ್ಲರೂ
ಆದರಲ್ಲವೆ! ಅವರು ನಿಮ್ಮ ತಂದೆಯೂ ಆಗಿದ್ದಾರೆ, ಕೇವಲ ನೀವು ಅರಿತುಕೊಂಡಿಲ್ಲ. ಬಹ್ಮಾನೂ ಸಹ
ಅವಶ್ಯವಾಗಿ ಯಾರ ಮಗನೋ ಆಗಿರಬೇಕಲ್ಲವೆ. ಅವರ ತಂದೆಗೆ ಯಾವುದೇ ಶರೀರವಂತೂ ಕಾಣುವುದಿಲ್ಲ.
ಬ್ರಹ್ಮಾ-ವಿಷ್ಣು-ಶಂಕರ - ಈ ಮೂವರ ಮೇಲೆ ಶಿವನಿದ್ದಾರೆ. ತ್ರಿಮೂರ್ತಿ ಶಿವನೆಂದು ಹೇಳಲಾಗುತ್ತದೆ
ಅಂದರೆ ಮೂವರ ರಚಯಿತ. ಮೇಲೆ ಒಬ್ಬ ಶಿವ ತಂದೆಯಿದ್ದಾರೆ ನಂತರ ಮೂವರು ತ್ರಿಮೂರ್ತಿಗಳು. ಹೇಗೆ
ವಂಶಾವಳಿಯಿರುತ್ತದೆಯಲ್ಲವೆ. ಬ್ರಹ್ಮಾನ ತಂದೆಯು ಅವಶ್ಯವಾಗಿ ಭಗವಂತನೇ ಆಗಿರುವರು. ಅವರು ಆತ್ಮಗಳ
ಪಿತನಾಗಿದ್ದಾರೆ ಅಂದಮೇಲೆ ಬ್ರಹ್ಮಾನೆಲ್ಲಿಂದ ಬಂದರು? ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ
ಪ್ರವೇಶ ಮಾಡಿ ಇವರಿಗೆ ಬಹ್ಮಾನೆಂದು ಹೆಸರಿಡುತ್ತೇನೆ. ಆ ಯಜ್ಞದ ಆದಿಯಲ್ಲಿ ನೀವು ಮಕ್ಕಳಿಗೂ
ಹೆಸರನ್ನಿಡಲಾಯಿತು. ಹಾಗೆಯೇ ಇವರಿಗೂ ಬ್ರಹ್ಮಾನೆಂದು ಹೆಸರಿಟ್ಟೆವು. ನನ್ನದು ಇದು ದಿವ್ಯ,
ಅಲೌಕಿಕ ಜನ್ಮವಾಗಿದೆ. ನೀವು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತೇನೆ ಬಾಕಿ ಇವರಲ್ಲಿ (ಬ್ರಹ್ಮಾ)
ಪ್ರವೇಶ ಮಾಡುತ್ತೇನೆ ನಂತರ ನಿಮಗೆ ತಿಳಿಸಿಕೊಡುತ್ತೇನೆ ಆದ್ದರಿಂದ ಇಬ್ಬರೂ ಬಾಪ್ದಾದಾ ಆದರು.
ಯಾರಲ್ಲಿ ಪ್ರವೇಶ ಮಾಡಿದರೋ ಆ ಶರೀರದ ಆತ್ಮವು ಇದೆಯಲ್ಲವೆ. ಇವರ ಪಕ್ಕದಲ್ಲಿ ನಾನು ಬಂದು
ಕುಳಿತುಕೊಳ್ಳುತ್ತೇನೆ. ಇಲ್ಲಿ ಎರಡು ಆತ್ಮಗಳ ಪಾತ್ರವು ಬಹಳ ನಡೆಯುತ್ತದೆ. ಆತ್ಮವನ್ನು
ಕರೆಸುತ್ತಾರೆ ಅಂದಾಗ ಆತ್ಮವು ಬಂದು ಎಲ್ಲಿ ಕುಳಿತುಕೊಳ್ಳುವುದು? ಅವಶ್ಯವಾಗಿ ಬ್ರಾಹ್ಮಣನ ಆತ್ಮನ
ಪಕ್ಕದಲ್ಲಿಯೇ ಬಂದು ಕುಳಿತುಕೊಳುತ್ತದೆಯಲ್ಲವೆ. ಹಾಗೆಯೇ ಇಲ್ಲಿಯೂ ಎರಡು ಆತ್ಮಗಳಿದ್ದಾರೆ, ತಂದೆ
ಮತ್ತು ದಾದಾ (ಸಹೋದರ). ತಮ್ಮ ಜನ್ಮಗಳ ಬಗ್ಗೆ ಅರಿತುಕೊಂಡಿಲ್ಲವೆಂದು ತಂದೆಯು ಇವರಿಗಾಗಿಯೇ
ತಿಳಿಸುತ್ತಾರೆ. ನಿಮಗೂ ತಿಳಿಸುತ್ತಾರೆ - ನೀವು ನಿಮ್ಮ ಜನ್ಮಗಳನ್ನು ಅರಿತುಕೊಂಡಿರಲಿಲ್ಲ, ಈಗ
ಸ್ಮೃತಿ ಬಂದಿದೆ - ಕಲ್ಪ-ಕಲ್ಪವೂ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ, ಈಗ ಹಿಂತಿರುಗಿ
ಹೋಗುತ್ತೇವೆ. ಇದು ಸಂಗಮಯುಗವಾಗಿದೆ. ಈಗ ಇಲ್ಲಿಂದ ವರ್ಗಾಯಿತರಾಗುತ್ತೇವೆ. ಯೋಗದಿಂದ ನೀವು
ಸತೋಪ್ರಧಾನರಾಗಿ ಬಿಡುತ್ತೀರಿ. ಬ್ಯಾಟರಿಯು ಚಾರ್ಜ್ ಆಗುವುದು ನಂತರ ಸತ್ಯಯುಗದಲ್ಲಿ ಬರುತ್ತೀರಿ.
ಬುದ್ಧಿಯಲ್ಲಿ ಇಡೀ ಚಕ್ರವು ಸುತ್ತುತ್ತಿರುತ್ತದೆ. ವಿಸ್ತಾರದಲ್ಲಂತೂ ಹೋಗಲು ಸಾಧ್ಯವಿಲ್ಲ. ಹೇಗೆ
ವೃಕ್ಷಕ್ಕೂ ಆಯಸ್ಸು ನಿಗಧಿಯಾಗಿರುತ್ತದೆಯಲ್ಲವೆ ಅದರ ನಂತರ ಒಣಗಿ ಹೋಗುತ್ತದೆ. ಇಲ್ಲಿಯೂ ಎಲ್ಲಾ
ಮನುಷ್ಯರು ಹೇಗೆ ಒಣಗಿದಂತಾಗಿದ್ದಾರೆ. ಎಲ್ಲರೂ ಪರಸ್ಪರ ದುಃಖವನ್ನು ಕೊಡುತ್ತಿರುತ್ತಾರೆ. ಈಗ
ಎಲ್ಲರ ಶರೀರಗಳು ಸಮಾಪ್ತಿಯಾಗುವುದು. ಬಾಕಿ ಆತ್ಮಗಳು ಹೊರಟು ಹೋಗುವಿರಿ. ಈ ಜ್ಞಾನವನ್ನು ತಂದೆಯ
ವಿನಃ ಮತ್ತ್ಯಾರೂ ಕೊಡುವುದಿಲ್ಲ. ತಂದೆಯೇ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದಮೇಲೆ
ಅವರನ್ನು ಎಷ್ಟೊಂದು ನೆನಪು ಮಾಡಬೇಕು! ನೆನಪಿನಲ್ಲಿ ಇಲ್ಲದೇ ಇರುವುದರಿಂದಲೇ ಮಾಯೆಯ ಪೆಟ್ಟು
ಬೀಳುತ್ತದೆ. ಎಲ್ಲದಕ್ಕಿಂತ ದೊಡ್ಡ ಪೆಟ್ಟು - ವಿಕಾರದ್ದಾಗಿದೆ. ಯುದ್ಧದ ಮೈದಾನದಲ್ಲಿ ನೀವು
ಬ್ರಾಹ್ಮಣರೇ ಇದ್ದೀರಲ್ಲವೆ ಆದ್ದರಿಂದ ನಿಮಗೇ ಬಿರುಗಾಳಿಗಳು ಬರುತ್ತವೆ ಆದರೆ ಯಾವುದೇ
ವಿಕರ್ಮವನ್ನು ಮಾಡಬೇಡಿ. ವಿಕರ್ಮ ಮಾಡಿದರೆ ಸೋಲನ್ನನುಭವಿಸುವಿರಿ. ತಂದೆಯೊಂದಿಗೆ ಕೇಳುತ್ತಾರೆ -
ಬಾಬಾ, ಇದನ್ನು ಮಾಡಬೇಕಾಗುತ್ತದೆ. ಮಕ್ಕಳು ತೊಂದರೆ ಕೊಡುತ್ತಾರೆಂದರೆ ಕೋಪ ಬಂದು ಬಿಡುತ್ತದೆ.
ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಸಂಭಾಲನೆ ಮಾಡದಿದ್ದರೆ ಕೆಟ್ಟು ಹೋಗುತ್ತಾರೆ ಎಂದು ಹೇಳುತ್ತಾರೆ.
ತಂದೆಯು ತಿಳಿಸುತ್ತಾರೆ – ಪ್ರಯತ್ನ ಪಟ್ಟು ಸಾಧ್ಯವಾದಷ್ಟು ಏಟು ಕೊಡಬೇಡಿ, ಹೇಗೆ ಹಗ್ಗದಿಂದ ಕಟ್ಟಿ
ಹಾಕಿದರೆಂದು ಕೃಷ್ಣನಿಗಾಗಿ ತೋರಿಸುತ್ತಾರಲ್ಲವೆ. ಭಲೆ ಹಗ್ಗದಿಂದ ಕಟ್ಟಿ, ಭೋಜನವನ್ನು ಕೊಡಬೇಡಿ
ಆಗ ಅಳುತ್ತಾ-ಅಳುತ್ತಾ ಕೊನೆಗೆ ನಾವು ಇದನ್ನು ಮಾಡುವುದಿಲ್ಲವೆಂದು ಹೇಳುತ್ತಾರೆ. ಪುನಃ ತಪ್ಪು
ಮಾಡುವರು ಏಕೆಂದರೆ ಮಕ್ಕಳಲ್ಲವೆ! ಆದ್ದರಿಂದ ಶಿಕ್ಷಣ ಕೊಡಬೇಕಾಗಿದೆ. ತಂದೆಯೂ ಮಕ್ಕಳಿಗೆ ಶಿಕ್ಷಣ
ಕೊಡುತ್ತಾರೆ - ಮಕ್ಕಳೇ, ವಿಕಾರದಲ್ಲಿ ಎಂದೂ ಹೋಗಬೇಡಿ, ಕಳಂಕಿತರಾಗಬೇಡಿ. ಲೌಕಿಕದಲ್ಲಿಯೂ ಯಾರಾದರೂ
ಕುಪುತ್ರ ಮಕ್ಕಳಿದ್ದರೆ ಇದೇನು ಮುಖವನ್ನು ಕಪ್ಪು ಮಾಡಿಕೊಳ್ಳುತ್ತೀಯಾ, ಕುಲಕ್ಕೆ ಕಳಂಕ ತರುತ್ತೀಯಾ
ಎಂದು ಹೇಳುತ್ತಾರಲ್ಲವೆ. ಸೋಲು-ಗೆಲುವು, ಗೆಲುವು-ಸೋಲು ಆಗುತ್ತಾ-ಆಗುತ್ತಾ ಕೊನೆಗೆ ಜಯವಾಗಿ
ಬಿಡುವುದು. ಇದು ಸತ್ಯದ ದೋಣಿಯಾಗಿದೆ. ಬಹಳಷ್ಟು ಬಿರುಗಾಳಿಗಳು ಬರುತ್ತವೆ ಏಕೆಂದರೆ ಇಂದು
ಕೃತಕವಾದವರು ಅನೇಕರು ಬಂದಿದ್ದಾರೆ. ಕೆಲವರು ತಮ್ಮನ್ನು ಭಗವಂತನೆಂದು ಹೇಳಿಕೊಳ್ಳುತ್ತಾರೆ, ಇನ್ನೂ
ಕೆಲವರು ಕೆಲವೊಂದು ರೀತಿಯಲ್ಲಿ ಹೇಳುತ್ತಾರೆ. ಬಹಳ ರಿದ್ಧಿ-ಸಿದ್ಧಿಯನ್ನು ತೋರಿಸುತ್ತಾರೆ.
ಸಾಕ್ಷಾತ್ಕಾರವನ್ನೂ ಮಾಡಿಸುತ್ತಾರೆ. ತಂದೆಯು ಸರ್ವರ ಸದ್ಗತಿ ಮಾಡಲು ಬರುತ್ತಾರೆ ನಂತರ ಈ ಕಾಡೂ
ಇರುವುದಿಲ್ಲ, ಕಾಡಿನಲ್ಲಿರುವವರೂ ಉಳಿಯುವುದಿಲ್ಲ. ನೀವೀಗ ಸಂಗಮಯುಗದಲ್ಲಿದ್ದೀರಿ, ನಿಮಗೆ
ತಿಳಿದಿದೆ - ಈ ಹಳೆಯ ಪ್ರಪಂಚವು ಸ್ಮಶಾನವಾಗಿ ಬಿಟ್ಟಿದೆ. ಯಾರಾದರೂ ಸಾಯುವವರೊಂದಿಗೆ
ಮನಸ್ಸನ್ನಿಡುತ್ತಾರೆಯೇ! ಈ ಪ್ರಪಂಚವಂತೂ ಈಗ ಹೋಯಿತೆಂದರೆ ಹೋಯಿತು. ವಿನಾಶವು ಆಗಿಯೇ ಆಗುವುದು.
ಯಾವಾಗ ಹೊಸ ಪ್ರಪಂಚವು ಹಳೆಯದಾಗುವುದೋ ಆಗಲೇ ತಂದೆಯು ಬರುತ್ತಾರೆ. ತಂದೆಯನ್ನು ಚೆನ್ನಾಗಿ ನೆನಪು
ಮಾಡಿದರೆ ಬ್ಯಾಟರಿಯು ಚಾರ್ಜ್ ಆಗುವುದು. ಭಲೆ ವಾಣಿಯನ್ನಂತೂ ಬಹಳ ಚೆನ್ನಾಗಿ ಓದುತ್ತಾರೆ ಆದರೆ
ನೆನಪಿನ ಹರಿತವಿಲ್ಲದಿದ್ದರೆ ಮಾತಿನಲ್ಲಿ ಶಕ್ತಿಯಿರುವುದಿಲ್ಲ. ಅವರದು ಹರಿತವಾದ ಖಡ್ಗವಲ್ಲ.
ತಂದೆಯು ತಿಳಿಸುತ್ತಾರೆ - ಇದೇನೂ ಹೊಸ ಮಾತಲ್ಲ, 5000 ವರ್ಷಗಳ ಮೊದಲೂ ಬಂದಿದ್ದಿರಿ, ಮೊದಲು
ಎಂದಾದರೂ ಮಿಲನ ಮಾಡಿದ್ದಿರಾ ಎಂದು ತಂದೆಯು ಪ್ರಶ್ನಿಸುತ್ತಾರೆ. ಆಗ ಕಲ್ಪದ ಮೊದಲೂ ಮಿಲನ
ಮಾಡಿದ್ದೆವು ಎಂದು ಕೆಲವರು ಹೇಳುತ್ತಾರೆ. ಕೆಲವರಂತೂ ನಾಟಕವು ತಾನಾಗಿಯೇ ಪುರುಷಾರ್ಥ
ಮಾಡಿಸುವುದೆಂದು ಹೇಳುತ್ತಾರೆ. ಒಳ್ಳೆಯದು - ಈಗ ನಾಟಕವು ಪುರುಷಾರ್ಥ ಮಾಡಿಸುತ್ತಿದೆಯಲ್ಲವೆ
ಅಂದಮೇಲೆ ಮಾಡಿರಿ. ಒಂದುಜಾಗದಲ್ಲಿ ಕುಳಿತು ಬಿಡುವುದಲ್ಲ. ಯಾರು ಕಲ್ಪದ ಹಿಂದೆ ಪುರುಷಾರ್ಥ
ಮಾಡಿದ್ದರೋ ಅವರು ಮಾಡುತ್ತಾರೆ. ಇಲ್ಲಿಯವರೆಗೂ ಯಾರು ಬಂದಿಲ್ಲವೋ ಅವರೂ ಬರುವರು, ಯಾರು
ನಡೆಯುತ್ತಾ-ನಡೆಯುತ್ತಾ ಬಿಟ್ಟು ಹೋದರೋ, ಹೋಗಿ ವಿವಾಹ ಮಾಡಿಕೊಂಡರೋ ಅವರದೂ ಸಹ ನಾಟಕದಲ್ಲಿ
ಪಾತ್ರವಿದ್ದರೆ ಬಂದು ಮತ್ತೆ ಪುರುಷಾರ್ಥ ಮಾಡುತ್ತಾರೆ. ಮತ್ತೆಲ್ಲಿಗೆ ಹೋಗುವರು! ತಂದೆಯ ಬಳಿಯೇ
ಎಲ್ಲರೂ ಬಾಲವನ್ನು ಹಿಡಿದುಕೊಳ್ಳಬೇಕಾಗಿದೆ. ಕೊನೆಯಲ್ಲಿ ಭೀಷ್ಮ ಪಿತಾಮಹ ಮೊದಲಾದವರೂ
ಬರುತ್ತಾರೆಂದು ಬರೆಯಲ್ಪಟ್ಟಿದೆ. ಈಗಂತೂ ಎಷ್ಟೊಂದು ಅಭಿಮಾನವಿದೆ! ನಂತರ ಅವರ ಅಭಿಮಾನವೆಲ್ಲವೂ
ಕಳೆಯುವುದು. ನೀವೂ ಸಹ ಪ್ರತೀ 5000 ವರ್ಷಗಳ ನಂತರ ಪಾತ್ರವನ್ನಭಿನಯಿಸುತ್ತೀರಿ ಮತ್ತೆ ಪಾತ್ರವನ್ನು
ಕಳೆದುಕೊಳ್ಳುತ್ತೀರಿ. ದಿನ-ಪ್ರತಿದಿನ ಸೇವಾಕೇಂದ್ರಗಳು ಹೆಚ್ಚುತ್ತಾ ಹೋಗುತ್ತವೆ. ಭಾರತವಾಸಿಗಳು
ಅದರಲ್ಲಿಯೂ ವಿಶೇಷವಾಗಿ ಯಾರು ದೇವಿ-ದೇವತೆಗಳ ಪೂಜಾರಿಗಳಿದ್ದಾರೆಯೋ ಅವರಿಗೆ ತಿಳಿಸಿಕೊಡಬೇಕು,
ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮವಿತ್ತು ಆದ್ದರಿಂದ ಅವರ ಪೂಜೆ ಮಾಡುತ್ತಾರೆ. ಕ್ರಿಶ್ಚಿಯನ್ನರು
ಕ್ರಿಸ್ತನ ಮಹಿಮೆ ಮಾಡುತ್ತಾರೆ, ನಾವು ಆದಿ ಸನಾತನ ದೇವಿ-ದೇವತಾ ಧರ್ಮದ ಮಹಿಮೆ ಮಾಡುತ್ತೇವೆ.
ಅದನ್ನು ಯಾರು ಸ್ಥಾಪನೆ ಮಾಡಿದರು? ಕೃಷ್ಣನು ಸ್ಥಾಪನೆ ಮಾಡಿದನೆಂದು ಅವರು ತಿಳಿಯುತ್ತಾರೆ
ಆದ್ದರಿಂದ ಕೃಷ್ಣನ ಪೂಜೆ ಮಾಡುತ್ತಿರುತ್ತಾರೆ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರು
ಎಷ್ಟೊಂದು ಪರಿಶ್ರಮ ಪಡುತ್ತಾರೆ, ಕೆಲವರು ಕಡಿಮೆ. ಗೋವರ್ಧನ ಪರ್ವತವನ್ನು ಕಿರು ಬೆರಳಿನ
ಸಹಯೋಗದಿಂದ ಎತ್ತಿದರೆಂದು ತೋರಿಸುತ್ತಾರಲ್ಲವೆ.
ಈಗ ಇದು ಹಳೆಯ
ಪ್ರಪಂಚವಾಗಿದೆ, ಎಲ್ಲಾ ಪದಾರ್ಥಗಳಲ್ಲಿರುವ ಶಕ್ತಿಯು ಹೊರಟು ಹೋಗಿದೆ. ಗಣಿಗಳಿಂದ ಚಿನ್ನವು
ಸಿಗುತ್ತಿಲ್ಲ, ಸ್ವರ್ಗದಲ್ಲಾದರೆ ಚಿನ್ನದ ಮಹಲುಗಳಾಗುತ್ತವೆ. ಈಗಂತೂ ಸರ್ಕಾರವು ನಿರಾಕರಿಸುತ್ತದೆ
ಏಕೆಂದರೆ ಸಾಲ ಕೊಡಬೇಕಾಗುತ್ತದೆ. ಅಲ್ಲಂತೂ ಅಪಾರ ಧನವಿರುತ್ತದೆ! ಗೋಡೆಗಳಿಗೂ ಸಹ ವಜ್ರರತ್ನಗಳನ್ನು
ಪೋಣಿಸಿರುತ್ತಾರೆ. ಅಲ್ಲಿ ಹಣದ ಕೊರತೆಯೇ ಇರುವುದಿಲ್ಲ. ಕುಬೇರನ ಖಜಾನೆಯಿರುತ್ತದೆ.
ಅಲ್ಲಾ-ಅವಲುದ್ದೀನನ ಒಂದು ಆಟವನ್ನೂ ತೋರಿಸುತ್ತಾರೆ. ದೀಪವನ್ನು ಉಜ್ಜಿದರೆ ಸಾಕು ಮಹಲುಗಳು ಬಂದು
ಬಿಡುತ್ತಿದ್ದವು. ಇಲ್ಲಿಯೂ ದಿವ್ಯ ದೃಷ್ಟಿ ಸಿಕ್ಕಿದರೆ ಸ್ವರ್ಗದಲ್ಲಿ ಹೊರಟು ಹೋಗುತ್ತೀರಿ. ಅಲ್ಲಿ
ರಾಜಕುಮಾರ-ಕುಮಾರಿಯರ ಬಳಿ ಮುರುಳಿಯೂ ಸಹ ವಜ್ರಗಳಿಂದ ಮಾಡಲ್ಪಟ್ಟಿರುತ್ತದೆ. ಇಲ್ಲಂತೂ ಅಂತಹ
ಯಾವುದೇ ವಸ್ತುವನ್ನು ಧರಿಸಿ ಕುಳಿತುಕೊಂಡರೆ ಲೂಟಿ ಮಾಡಿಕೊಂಡು ಹೋಗುತ್ತಾರೆ. ಹೊಡೆದು-ಬಡೆದಾದರೂ
ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಈ ಮಾತುಗಳಿರುವುದಿಲ್ಲ. ಈ ಪ್ರಪಂಚವೇ ಬಹಳ ಹಳೆಯದು,
ಕೊಳೆಯಾಗಿದೆ. ಈ ಲಕ್ಷ್ಮೀ-ನಾರಾಯಣರ ಪ್ರಪಂಚವು ವಾಹ್ ವಾಹ್ ಆಗಿತ್ತು, ವಜ್ರ ವೈಡೂರ್ಯಗಳ
ಮಹಲುಗಳಿತ್ತು. ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನಿಮಗೆ ತಿಳಿದಿದೆ - ಅವಶ್ಯವಾಗಿ ನಾವು
ಸ್ವರ್ಗದ ಮಾಲೀಕರಾಗಿದ್ದೆವು, ಈ ಸೋಮನಾಥ ಮಂದಿರವನ್ನು ಕಟ್ಟಿಸಿದ್ದೆವು. ಇವರೂ (ಬ್ರಹ್ಮಾ) ಸಹ
ತಿಳಿಯುತ್ತಾರೆ - ನಾವು ಹೇಗಿದ್ದೆವು ನಂತರ ಭಕ್ತಿಮಾರ್ಗದಲ್ಲಿ ಹೇಗೆ ಮಂದಿರಗಳನ್ನು ಮಾಡಿ ಪೂಜೆ
ಮಾಡಿದೆವು! ಆತ್ಮಕ್ಕೆ ತನ್ನ 84 ಜನ್ಮಗಳ ಜ್ಞಾನವಿದೆ. ಎಷ್ಟೊಂದು ವಜ್ರ ರತ್ನಗಳಿದ್ದವು, ಅವೆಲ್ಲವೂ
ಎಲ್ಲಿಗೆ ಹೋಯಿತು. ಕಳೆಯುತ್ತಾ-ಕಳೆಯುತ್ತಾ ಎಲ್ಲವೂ ಸಮಾಪ್ತಿಯಾಗುತ್ತಾ ಹೋಯಿತು. ಮುಸಲ್ಮಾನರು
ಬಂದರು, ಅವರು ಇಷ್ಟೊಂದು ಲೂಟಿ ಮಾಡಿ ತೆಗೆದುಕೊಂಡು ಹೋದರು, ಅದನ್ನು ಗೋರಿಗಳಲ್ಲಿ ಹಾಕಿಸಿದರು,
ತಾಜ್ಮಹಲನ್ನು ಕಟ್ಟಿಸಿದರು ನಂತರ ಬ್ರಿಟೀಷ್ ಸರ್ಕಾರವು ಅಲ್ಲಿಂದ ಅಗೆದು ತೆಗೆದುಕೊಂಡು ಹೋಯಿತು.
ಈಗಂತೂ ಏನೂ ಉಳಿದಿಲ್ಲ. ಭಾರತವು ಭಿಕಾರಿಯಾಗಿದೆ, ಅನ್ಯರಿಂದ ಸಾಲವನ್ನು ತೆಗೆದುಕೊಳ್ಳುತ್ತಿದೆ.
ಸಕ್ಕರೆ, ದವಸ-ಧಾನ್ಯಗಳು ಏನೂ ಸಿಗುತ್ತಿಲ್ಲ. ಈಗ ವಿಶ್ವವು ಬದಲಾಗುತ್ತಿದೆ ಆದ್ದರಿಂದ ಅದಕ್ಕೆ
ಮೊದಲು ಆತ್ಮದ ಬ್ಯಾಟರಿಯನ್ನು ಸತೋಪ್ರಧಾನವನ್ನಾಗಿ ಮಾಡಿಕೊಳ್ಳಲು ಚಾರ್ಜ್ ಮಾಡಬೇಕಾಗಿದೆ.
ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ. ಬುದ್ಧಿಯೋಗವು ತಂದೆಯ ಜೊತೆಯಿರಲಿ, ಅವರಿಂದಲೇ
ಆಸ್ತಿಯು ಸಿಗುತ್ತದೆ. ಇದರಲ್ಲಿಯೇ ಮಾಯೆಯ ಯುದ್ಧವು ನಡೆಯುತ್ತದೆ. ಮೊದಲು ಈ ಮಾತುಗಳನ್ನು ನೀವು
ತಿಳಿದುಕೊಂಡಿರಲಿಲ್ಲ. ಬೇರೆಯವರಿದ್ದಂತೆ ನೀವೂ ಇದ್ದಿರಿ, ನೀವೀಗ ಸಂಗಮಯುಗಿಗಳು, ಅವರೆಲ್ಲರೂ
ಕಲಿಯುಗಿಗಳಾಗಿದ್ದಾರೆ. ಇವರಿಗೆ ಏನು ಬರುತ್ತದೆಯೋ ಅದನ್ನು ಹೇಳುತ್ತಿರುತ್ತಾರೆ ಎಂದು ಮನುಷ್ಯರು
ಹೇಳುತ್ತಾರೆ ಆದರೆ ತಿಳಿಸಿ ಕೊಡುವ ಯುಕ್ತಿಗಳೂ ಇರುತ್ತದೆಯಲ್ಲವೆ. ನಿಧಾನ-ನಿಧಾನವಾಗಿ ನಿಮ್ಮ
ವೃದ್ಧಿಯಾಗುತ್ತಾ ಹೋಗುತ್ತದೆ. ಈಗ ತಂದೆಯು ದೊಡ್ಡ ವಿಶ್ವ ವಿದ್ಯಾಲಯವನ್ನು ತೆರೆಯುತ್ತಿದ್ದಾರೆ,
ಇದರಲ್ಲಿ ತಿಳಿಸಿಕೊಡಲು ಚಿತ್ರಗಳೂ ಬೇಕಲ್ಲವೆ. ಮುಂದೆ ಹೋದಂತೆ ನಿಮ್ಮ ಬಳಿ ಇವೆಲ್ಲವೂ
ಟ್ರಾನ್ಸ್ಲೇಟ್ನ ಚಿತ್ರಗಳಾಗುತ್ತವೆ ಆಗ ನಿಮಗೆ ತಿಳಿಸುವುದಕ್ಕೂ ಸಹಜವಾಗುತ್ತದೆ.
ಮಕ್ಕಳು
ತಿಳಿದುಕೊಂಡಿದ್ದೀರಿ - ನಾವು ನಮ್ಮ ರಾಜಧಾನಿಯನ್ನು ತಂದೆಯ ನೆನಪು ಮತ್ತು ಜ್ಞಾನದಿಂದ ಪುನಃ
ಸ್ಥಾಪನೆ ಮಾಡುತ್ತಿದ್ದೇವೆ ಮಧ್ಯದಲ್ಲಿ ಮಾಯೆಯು ಬಹಳ ಮೋಸ ಮಾಡುತ್ತದೆ. ತಂದೆಯು ತಿಳಿಸುತ್ತಾರೆ -
ಮೋಸದಿಂದ ಪಾರಾಗುತ್ತಾ ಇರಿ. ಯುಕ್ತಿಗಳನ್ನಂತೂ ಬಹಳ ತಿಳಿಸುತ್ತಿರುತ್ತಾರೆ. ಕೇವಲ ಮುಖದಿಂದ
ಇಷ್ಟನ್ನೇ ಹೇಳಿರಿ - ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು
ನೀವು ಈ ಲಕ್ಷ್ಮೀ-ನಾರಾಯಣರಾಗಿ ಬಿಡುತ್ತೀರಿ. ಈ ಬ್ಯಾಡ್ಜ್ ಇತ್ಯಾದಿಗಳನ್ನು ಸ್ವಯಂ ಭಗವಂತನೇ
ಮಾಡಿಸಿದ್ದಾರೆ ಅಂದಮೇಲೆ ಇದರಪ್ರತಿ ಎಷ್ಟು ಬೆಲೆಯಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸರ್ವ
ಗುಣಗಳಿಂದ ತಮ್ಮ ಶೃಂಗಾರ ಮಾಡಿಕೊಳ್ಳಬೇಕು, ಎಂದೂ ಯಾರಿಗೂ ದುಃಖವನ್ನು ಕೊಡಬಾರದು. ಎಲ್ಲರಿಗೂ
ಸುಖದ ಮಾರ್ಗವನ್ನೇ ತಿಳಿಸಬೇಕಾಗಿದೆ.
2. ಇಡೀ ಪ್ರಪಂಚವು
ಸ್ಮಶಾನವಾಗಿದೆ, ಆದ್ದರಿಂದ ಇದರೊಂದಿಗೆ ಮನಸ್ಸನ್ನಿಡಬಾರದು. ಸ್ಮೃತಿಯಿರಲಿ - ಈಗ ನಾವು
ವರ್ಗಾವಣೆಯಾಗುತ್ತಿದ್ದೇವೆ, ನಾವಂತೂ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ.
ವರದಾನ:
ಮಾಯೆ ಹಾಗೂ
ವಿಘ್ನಗಳಿಂದ ಸುರಕ್ಷಿತರಾಗಿರುವಂತಹ ಬಾಪ್ದಾದಾರವರ ಛತ್ರಛಾಯೆಯ ಅಧಿಕಾರಿ ಭವ.
ಯಾರು ಬಾಪ್ದಾದಾರವರಿಗೆ
ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮುದ್ದಾಗಿರುವಿರಿ ಅವರನ್ನು ಬಾಪ್ದಾದಾರವರ ಛತ್ರಛಾಯೆ ಅಧಿಕಾರದ
ರೂಪದಲ್ಲಿ ಪ್ರಾಪ್ತಿಯಾಗುವುದು. ಯಾವ ಛತ್ರಛಾಯೆಯೊಳಗೆ ಮಾಯೆಗೆ ಬರಲು ಶಕ್ತಿಯಿಲ್ಲ. ಅವರು ಸದಾ
ಮಾಯೆಯ ಮೇಲೆ ವಿಜಯಿಗಳಾಗುತ್ತಾರೆ. ಈ ನೆನಪಿನ ರೂಪಿ ಛತ್ರಛಾಯೆ ಸರ್ವ ವಿಘ್ನಗಳಿಂದ
ಸುರಕ್ಷಿತರನ್ನಾಗಿ ಇಡುವುದು. ಯಾವುದೇ ಪ್ರಕಾರದ ವಿಘ್ನ ಛತ್ರಛಾಯೆಯಲ್ಲಿರುವಂತಹವರ ಬಳಿ ಬರಲು
ಸಾಧ್ಯವಿಲ್ಲ. ಛತ್ರಛಾಯೆಯಲ್ಲಿರುವಂತಹವರಿಗೆ ಕಷ್ಟದಲ್ಲಿ ಕಷ್ಟವಾದ ಮಾತೂ ಸಹಾ ಸಹಜವಾಗಿ ಬಿಡುವುದು.
ಬೆಟ್ಟದಂತಹ ಮಾತೂ ಸಹಾ ಹತ್ತಿಯ ಸಮಾನ ಅನುಭವವಾಗುವುದು.
ಸ್ಲೋಗನ್:
ಪ್ರಭು ಪ್ರೀಯ,
ಲೋಕ ಪ್ರೀಯ ಮತ್ತು ಸ್ವಯಂ ಪ್ರೀಯ ಆಗಲು ಸಂತುಷ್ಠತೆಯ ಗುಣ ಧಾರಣೆ ಮಾಡಿ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ವಿಶೇಷ ನೆನಪಿನ
ಯಾತ್ರೆಯನ್ನು ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಿ, ಜ್ಞಾನ ಸ್ವರೂಪದ ಅನುಭವಿಗಳಾಗಿ. ತಾವು ಶ್ರೇಷ್ಠ
ಆತ್ಮಗಳ ಶುಭ ವೃತ್ತಿ ಅಥವಾ ಕಲ್ಯಾಣದ ವೃತ್ತಿ ಮತ್ತು ಶಕ್ತಿಶಾಲಿ ವಾತಾವರಣದ ಅನೇಕ ಚಡಪಡಿಸುವಂತಹ,
ಅಲೆದಾಡುವಂತಹ, ಕೂಗುವಂತಹ ಆತ್ಮಗಳಿಗೆ ಆನಂದ, ಶಾಂತಿ ಮತ್ತು ಶಕ್ತಿಯ ಅನುಭೂತಿ ಮಾಡಿಸುತ್ತದೆ.