25.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಮಕ್ಕಳಿಗಾಗಿ ಹೊಸ ರಾಜ್ಯವನ್ನು ಸ್ಥಾಪನೆ ಮಾಡಲು ತಂದೆಯು ದೂರ ದೇಶದಿಂದ ಬಂದಿದ್ದಾರೆ, ನೀವೀಗ
ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ”
ಪ್ರಶ್ನೆ:
ಯಾವ ಮಕ್ಕಳಿಗೆ
ತಂದೆಯಲ್ಲಿ ಅಟೂಟ ನಿಶ್ಚಯವಿದೆಯೋ ಅವರ ಚಿಹ್ನೆಗಳೇನು?
ಉತ್ತರ:
ತಂದೆಯಿಂದ
ಯಾವುದೇ ಆಜ್ಞೆ ಸಿಗಲಿ ಅವರು ಕಣ್ಣು ಮುಚ್ಚಿಕೊಂಡು ತಂದೆಯ ಶ್ರೀಮತದಂತೆ ನಡೆಯುತ್ತಿರುತ್ತಾರೆ.
ಇದರಲ್ಲಿ ನಷ್ಟವಾಗುವುದೇನೋ ಎಂಬ ಸಂಕಲ್ಪವೂ ಸಹ ಬರುವುದಿಲ್ಲ, ಏಕೆಂದರೆ ಇಂತಹ ನಿಶ್ಚಯ ಬುದ್ಧಿ
ಮಕ್ಕಳಿಗೆ ಸ್ವಯಂ ತಂದೆಯೇ ಜವಾಬ್ದಾರನಾಗಿದ್ದಾರೆ. ಅವರಿಗೆ ನಿಶ್ಚಯದ ಬಲ ಸಿಗುತ್ತದೆ, ಸ್ಥಿತಿಯು
ಅಡೋಲ ಮತ್ತು ಅಚಲವಾಗಿ ಬಿಡುತ್ತದೆ.
ಗೀತೆ:
ನೀವೇ ಮಾತಾ ಪಿತಾ
ಆಗಿದ್ದೀರಿ.........
ಓಂ ಶಾಂತಿ.
ಈಗ ಯಾರ ಮಹಿಮೆಯನ್ನು ಕೇಳಿದಿರಿ? ಯಾರನ್ನು ನೀವು ಮಕ್ಕಳ ವಿನಃ ಪ್ರಪಂಚದಲ್ಲಿ ಮತ್ತ್ಯಾರೂ
ತಿಳಿದುಕೊಂಡಿಲ್ಲ. ಇದು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಹಿಮೆಯಾಗಿದೆ. ಉಳಿದಂತೆ ಮತ್ತ್ಯಾರದೇ
ಮಹಿಮೆ ಮಾಡಿದರೂ ಸಹ ಅದು ವ್ಯರ್ಥವಾಗಿ ಬಿಡುತ್ತದೆ. ಶ್ರೇಷ್ಠಾತಿ ಶ್ರೇಷ್ಠನು ಒಬ್ಬರೇ
ತಂದೆಯಾಗಿದ್ದಾರೆ, ಆದರೆ ತಂದೆಯ ಪರಿಚಯವನ್ನು ಯಾರು ಕೊಡುವರು? ಸ್ವಯಂ ತಂದೆಯೇ ಬಂದು ತನ್ನ ಮತ್ತು
ಆತ್ಮದ ಪರಿಚಯವನ್ನು ಕೊಡುತ್ತಾರೆ. ಯಾವುದೇ ಮನುಷ್ಯರಿಗೆ ಆತ್ಮನ ಪರಿಚಯವೂ ಇಲ್ಲ. ಭಲೆ ಮಹಾನ್
ಆತ್ಮ, ಜೀವಾತ್ಮನೆಂದು ಹೇಳುತ್ತಾರೆ. ಶರೀರವನ್ನು ಬಿಡುವಾಗ ಆತ್ಮ ಹೊರಟು ಹೋಗುತ್ತದೆ ಎಂದು
ಹೇಳುತ್ತಾರೆ. ಶರೀರವು ಜಡವಾಗಿ ಬಿಡುತ್ತದೆ, ಆತ್ಮವು ಅವಿನಾಶಿಯಾಗಿದೆ, ಅದೆಂದೂ ಸಮಾಪ್ತಿ
ಆಗುವುದಿಲ್ಲ. ಆತ್ಮವು ಯಾವುದು ನಕ್ಷತ್ರ ಮಾದರಿಯಾಗಿದೆಯೋ ಅದು ಅತಿ ಸೂಕ್ಷ್ಮವಾಗಿದೆ. ಈ
ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಎಲ್ಲಾ ಕರ್ತವ್ಯಗಳನ್ನು ಆತ್ಮವೇ ಮಾಡುತ್ತದೆ ಆದರೆ ಪದೇ-ಪದೇ
ದೇಹಾಭಿಮಾನದಲ್ಲಿ ಬರುವ ಕಾರಣ ನಾನು ಇಂತಹವನಾಗಿದ್ದೇನೆ, ನಾನು ಇದನ್ನು ಮಾಡುತ್ತೇನೆಂದು
ಹೇಳುತ್ತಾರೆ. ವಾಸ್ತವದಲ್ಲಿ ಮಾಡುವುದೆಲ್ಲವೂ ಆತ್ಮವೇ ಆಗಿದೆ. ಶರೀರವಂತೂ ಇದಕ್ಕೆ ಇಂದ್ರಿಯವಾಗಿದೆ.
ಇದನ್ನು ಸಾಧು-ಸಂತರೂ ಸಹ ತಿಳಿದುಕೊಂಡಿದ್ದಾರೆ - ಆತ್ಮವು ಬಹಳ ಸೂಕ್ಷ್ಮವಾಗಿದೆ, ಅದು ಭೃಕುಟಿಯ
ಮಧ್ಯದಲ್ಲಿರುತ್ತದೆ ಆದರೆ ಅವರಿಗೆ ಆತ್ಮದಲ್ಲಿ ಈ ಪಾತ್ರವನ್ನು ಅಭಿನಯಿಸುವ ಸಂಸ್ಕಾರವಿದೆಯೆಂಬ
ಜ್ಞಾನವಿಲ್ಲ. ಆತ್ಮದಲ್ಲಿ ಸಂಸ್ಕಾರವಿರುವುದಿಲ್ಲ, ಆತ್ಮವು ನಿರ್ಲೇಪವಾಗಿದೆಯೆಂದು ಕೆಲವರು
ಹೇಳುತ್ತಾರೆ. ಇನ್ನೂ ಕೆಲವರು ಸಂಸ್ಕಾರಗಳನುಸಾರ ಜನ್ಮ ಸಿಗುತ್ತದೆ ಎಂದು ಹೇಳುತ್ತಾರೆ. ಬಹಳಷ್ಟು
ಮತ-ಭೇದವಿದೆ. ಯಾವ ಆತ್ಮರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ,
ನಿಮಗೆ ತಿಳಿದಿದೆ - ಸೂರ್ಯವಂಶಿಯರೇ 84 ಜನ್ಮಗಳ ಚಕ್ರವನ್ನು ಸುತ್ತಬೇಕಾಗುತ್ತದೆ. ಆತ್ಮವೇ 84
ಜನ್ಮಗಳ ಚಕ್ರವನ್ನು ಸುತ್ತಿ ಪತಿತನಾಗುತ್ತದೆ ಅದನ್ನು ಈಗ ಪಾವನವನ್ನಾಗಿ ಯಾರು ಮಾಡುವರು?
ಪತಿತ-ಪಾವನ, ಶ್ರೇಷ್ಠಾತಿ ಶ್ರೇಷ್ಠ ತಂದೆಯು ಒಬ್ಬರೇ ಆಗಿದ್ದಾರೆ, ಅವರ ಮಹಿಮೆಯು ಎಲ್ಲರಿಗಿಂತ
ಶ್ರೇಷ್ಠವಾಗಿದೆ. ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಕೊನೆಯಲ್ಲಿ ಬರುವವರು 84
ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಿಗೆ ಬರುವುದಿಲ್ಲ. ಯಾರು ಮೊಟ್ಟ ಮೊದಲು
ಸತ್ಯಯುಗದಲ್ಲಿ ಬರುವರೋ, ಸೂರ್ಯವಂಶಿ ರಾಜರು ಮತ್ತು ಪ್ರಜೆಗಳು - ಇವರದೇ 84 ಜನ್ಮಗಳಿರುತ್ತವೆ
ನಂತರ ಮನುಷ್ಯರದು ಬಹಳ ವೃದ್ಧಿಯಾಗುತ್ತದೆಯಲ್ಲವೆ. ಕೆಲವರದು 83, ಕೆಲವರದು 80 ಜನ್ಮಗಳಿರುತ್ತವೆ.
ಸತ್ಯಯುಗದಲ್ಲಿ ಪೂರ್ಣ 150 ವರ್ಷ ಆಯಸ್ಸಿರುತ್ತದೆ. ಯಾರೂ ಬೇಗನೆ ಮರಣ ಹೊಂದುವುದಿಲ್ಲ, ಈ
ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಈಗ ಯಾರೂ ಪರಮಪಿತ ಪರಮಾತ್ಮನನ್ನು ಅರಿತುಕೊಂಡಿಲ್ಲ. ತಂದೆಯು
ತಿಳಿಸುತ್ತಾರೆ - ಹೇಗೆ ನೀವಾತ್ಮರಿದ್ದೀರೋ ಹಾಗೆಯೇ ನಾನೂ ಇದ್ದೇನೆ, ಕೇವಲ ನೀವು ಜನನ-ಮರಣದಲ್ಲಿ
ಬರುತ್ತೀರಿ, ನಾನು ಬರುವುದಿಲ್ಲ. ಯಾವಾಗ ಪತಿತರಾಗುವರೋ ಆಗ ನನ್ನನ್ನು ಕರೆಯುತ್ತಾರೆ. ಯಾವಾಗ ಬಹಳ
ದುಃಖಿಯಾಗಿ ಬಿಡುವರೋ ಆಗ ಕರೆಯುತ್ತಾರೆ. ಈ ಸಮಯದಲ್ಲಿ ನೀವು ಮಕ್ಕಳಿಗೆ ಶಿವ ತಂದೆಯು
ಓದಿಸುತ್ತಿದ್ದಾರೆ.
ಪರಮಾತ್ಮನು
ಬರುತ್ತಾರೆಂಬುದನ್ನು ಹೇಗೆ ಒಪ್ಪುವುದೆಂದು ಕೆಲವರು ಕೇಳುತ್ತಾರೆ. ಆಗ ಅವರಿಗೆ ತಿಳಿಸಿ - ಹೇ
ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಅವರು ನಿರಾಕಾರನಾಗಿದ್ದಾರೆ. ಅವರಿಗೆ ತಮ್ಮದೇ
ಆದ ಶರೀರವಿಲ್ಲ ಅಂದಮೇಲೆ ಪತಿತ ಪ್ರಪಂಚದಲ್ಲಿಯೇ ಬರಬೇಕಾಗಿದೆ. ಪಾವನ ಪ್ರಪಂಚದಲ್ಲಂತೂ
ಬರುವುದಿಲ್ಲ. ಇದನ್ನೂ ಸಹ ತಿಳಿಸಬೇಕಾಗಿದೆ - ಪರಮಾತ್ಮನು ಹೇಗೆ ಆತ್ಮದಂತೆ ಇಷ್ಟು ಚಿಕ್ಕ
ಬಿಂದುವಾಗಿದ್ದಾರೆ ಆದರೆ ಅವರು ಮನುಷ್ಯ ಸೃಷ್ಟಿಯ ಬೀಜ ರೂಪ, ಜ್ಞಾನ ಪೂರ್ಣನಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ನೀವು ನನ್ನನ್ನು ಪರಮಪಿತ ಪರಮಾತ್ಮನೆಂದು ಹೇಳುತ್ತೀರಿ. ಕರೆಯುತ್ತೀರೆಂದರೆ
ಅವಶ್ಯವಾಗಿ ಬರಬೇಕಲ್ಲವೆ. ದೂರ ದೇಶದಲ್ಲಿರುವವರು ಪರದೇಶದಲ್ಲಿ ಬಂದರೆಂದು ಗಾಯನವೂ ಇದೆ. ಈಗ ನಾವು
ಪರದೇಶ ಅರ್ಥಾತ್ ರಾವಣನ ದೇಶದಲ್ಲಿ ಬಂದಿದ್ದೇವೆಂದು ತಂದೆಯ ಮೂಲಕ ಈಗ ಅರ್ಥವಾಗಿದೆ.
ಸತ್ಯ-ತ್ರೇತಾಯುಗದಲ್ಲಿ ನಾವು ಈಶ್ವರೀಯ ದೇಶ ಅರ್ಥಾತ್ ನಮ್ಮ ದೇಶದಲ್ಲಿದ್ದೆವು ನಂತರ ದ್ವಾಪರದಿಂದ
ಹಿಡಿದು ನಾವು ಪರ ದೇಶ, ಪರ ರಾಜ್ಯದಲ್ಲಿ ಬಂದು ಬಿಡುತ್ತೇವೆ, ವಾಮ ಮಾರ್ಗದಲ್ಲಿ ಬರುತ್ತೇವೆ ನಂತರ
ಭಕ್ತಿ ಆರಂಭವಾಗುತ್ತದೆ. ಮೊಟ್ಟ ಮೊದಲು ಶಿವ ತಂದೆಯ ಭಕ್ತಿ ಮಾಡತೊಡಗುತ್ತಾರೆ, ಅವರು ಶಿವನ ಇಷ್ಟು
ದೊಡ್ಡ ಲಿಂಗವನ್ನು ಮಾಡಿಸುತ್ತಾರೆ ಆದರೆ ತಂದೆಯು ಇಷ್ಟು ದೊಡ್ಡ ಗಾತ್ರದಲ್ಲಿಲ್ಲ. ನೀವೀಗ
ತಿಳಿದುಕೊಂಡಿದ್ದೀರಿ - ಆತ್ಮ ಪರಮಾತ್ಮನಲ್ಲಿ ಏನು ಅಂತರವಿದೆ? ಅವರು ಜ್ಞಾನಪೂರ್ಣ, ಸದಾ ಪಾವನ,
ಸುಖದ ಸಾಗರ, ಆನಂದ ಸಾಗರನಾಗಿದ್ದಾರೆ, ಇದು ಪರಮಾತ್ಮನ ಮಹಿಮೆಯಲ್ಲವೆ. ಹೇ ಪತಿತ-ಪಾವನ ಬನ್ನಿ ಎಂದು
ಕರೆಯುತ್ತಾರೆ. ಆ ಪರಮಪಿತನು ಕಲ್ಪ-ಕಲ್ಪವೂ ಬರುತ್ತಾರೆ, ದೂರ ದೇಶದ ಯಾತ್ರಿಕನನ್ನು ಕರೆಯುತ್ತಾರೆ,
ಅವರ ಮಹಿಮೆ ಹಾಡುತ್ತಾರೆ. ಬ್ರಹ್ಮಾ-ಸರಸ್ವತಿಯನ್ನಂತೂ ಕರೆಯುವುದಿಲ್ಲ, ನಿರಾಕಾರ ಪರಮಾತ್ಮನನ್ನೇ
ಕರೆಯುತ್ತಾರೆ – ದೂರ ದೇಶದಲ್ಲಿರುವ ತಂದೆಯೇ ಪರ ದೇಶದಲ್ಲಿ ಬನ್ನಿ ಏಕೆಂದರೆ ನಾವೆಲ್ಲರೂ ಪತಿತರಾಗಿ
ಬಿಟ್ಟಿದ್ದೇವೆಂದು ಆತ್ಮವು ಕರೆಯುತ್ತದೆ. ಯಾವಾಗ ರಾವಣ ರಾಜ್ಯವು ಸಮಾಪ್ತಿ ಆಗಬೇಕಾಗಿದೆಯೋ ಆಗಲೇ
ನಾನು ಬರುತ್ತೇನೆ. ನಾನು ಸಂಗಮಯುಗದಲ್ಲಿ ಬರುತ್ತೇನೆ, ಇದು ಯಾರಿಗೂ ತಿಳಿದಿಲ್ಲ. ಅವರು ಪರಮ ಆತ್ಮ,
ಬಿಂದುವಾಗಿದ್ದಾರೆಂದು ಹೇಳುತ್ತಾರೆ. ಇತ್ತೀಚೆಗೆ ಮನುಷ್ಯರು ಆತ್ಮವೇ ಪರಮಾತ್ಮ, ಪರಮಾತ್ಮನೇ
ಆತ್ಮವೆಂದು ಹೇಳಿ ಬಿಡುತ್ತಾರೆ ಆದರೆ ಆತ್ಮವೇ ಪರಮಾತ್ಮನಾಗಲು ಸಾಧ್ಯವಿಲ್ಲ. ಆತ್ಮ-ಪರಮಾತ್ಮ
ಇಬ್ಬರೂ ಬೇರೆ-ಬೇರೆಯಾಗಿದ್ದಾರೆ. ಇಬ್ಬರ ರೂಪವೂ ಒಂದೇ ಆಗಿದೆ ಆದರೆ ಆತ್ಮವು ಪತಿತನಾಗುತ್ತದೆ, 84
ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಪರಮಾತ್ಮನು ಜನನ-ಮರಣ ರಹಿತನಾಗಿದ್ದಾರೆ. ಒಂದುವೇಳೆ
ಆತ್ಮವೇ ಪರಮಾತ್ಮನೆಂದು ಹೇಳುವುದಾದರೆ ಸತೋಪ್ರಧಾನ ಪರಮಾತ್ಮನು ತಮೋಪ್ರಧಾನತೆಯಲ್ಲಿ ಬರುವರೇ! ಇದು
ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸರ್ವ ಆತ್ಮರ ಸೇವೆ ಮಾಡಲು ಬರುತ್ತೇನೆ, ನನ್ನ
ಜನ್ಮವೆಂದೂ ಹೇಳಲಾಗುವುದಿಲ್ಲ. ನಾನು ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವುದಕ್ಕಾಗಿಯೇ
ಬರುತ್ತೇನೆ, ಪರದೇಶದಲ್ಲಿ ತಮ್ಮ ಸ್ವರ್ಗ ಸ್ಥಾಪನೆ ಮಾಡಲು ತಂದೆಯು ಬಂದಿದ್ದಾರೆ. ತಂದೆಯೇ ಬಂದು
ನಮ್ಮನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ. ತಂದೆಯು ಇದನ್ನೂ ತಿಳಿಸಿದ್ದಾರೆ - ಎಲ್ಲಾ
ಆತ್ಮರ ಪಾತ್ರವು ಬೇರೆ-ಬೇರೆಯಾಗಿದೆ, ಪರಮಾತ್ಮನು ಜನನ-ಮರಣ ರಹಿತನಾಗಿದ್ದಾರೆ, ಅವರು ಅವಶ್ಯವಾಗಿ
ಬರುತ್ತಾರೆ ಆದ್ದರಿಂದಲೇ ಶಿವ ರಾತ್ರಿಯನ್ನು ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದರು ಎಂಬುದನ್ನು
ತಿಳಿದುಕೊಂಡಿಲ್ಲ. ಹಾಗೆಯೇ ಶಿವ ಜಯಂತಿಯನ್ನು ಆಚರಿಸುತ್ತಾ ಬಂದಿದ್ದಾರೆ. ಅವಶ್ಯವಾಗಿ ಸ್ವರ್ಗ
ಸ್ಥಾಪನೆ ಮಾಡಲು ಸಂಗಮ ಯುಗದಲ್ಲಿಯೇ ಬಂದಿರಬೇಕು. ಪತಿತರನ್ನು ಪಾವನ ಮಾಡಲು ಅವಶ್ಯವಾಗಿ ಸಂಗಮ
ಯುಗದಲ್ಲಿಯೇ ಬರುತ್ತಾರಲ್ಲವೆ. ಪಾವನ ಸೃಷ್ಟಿಯು ಸ್ವರ್ಗವಾಗಿದೆ, ಪತಿತ-ಪಾವನ ಬನ್ನಿ ಎಂದು
ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತ ಪ್ರಪಂಚದ ವಿನಾಶದ ಸಮಯವಾಗಿರಬೇಕು ಆಗಲೇ ಪಾವನ
ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಯುಗ-ಯುಗಗಳಲ್ಲಿ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ -
ನಾನು ಸಂಗಮದಲ್ಲಿಯೇ ಬಂದು ಪತಿತ ಪ್ರಪಂಚವನ್ನು ಪಾವನ ಮಾಡಬೇಕಾಗಿದೆ. ಇದು ಪರದೇಶ, ರಾವಣನ
ರಾಜ್ಯವಾಗಿದೆ ಆದರೆ ಈಗ ರಾವಣ ರಾಜ್ಯವು ನಡೆಯುತ್ತಿದೆ ಎಂಬುದನ್ನು ಯಾವುದೇ ಮನುಷ್ಯರು
ತಿಳಿದುಕೊಂಡಿಲ್ಲ. ಯಾವಾಗಿನಿಂದ ಈ ರಾವಣ ರಾಜ್ಯವು ಆರಂಭವಾಯಿತು ಎಂಬುದನ್ನೂ ತಿಳಿದುಕೊಂಡಿಲ್ಲ.
ಮೊಟ್ಟ ಮೊದಲು ಮುಖ್ಯ ಮಾತೇನೆಂದರೆ ಆತ್ಮ ಮತ್ತು ಪರಮಾತ್ಮನ ರಹಸ್ಯವನ್ನು ತಿಳಿಸಬೇಕಾಗಿದೆ ನಂತರ
ಅವರು ಕಲ್ಪದ ಸಂಗಮ ಯುಗದಲ್ಲಿ ಪಾವನ ಮಾಡಲು ಬರುತ್ತಾರೆ ಎಂಬುದನ್ನು ತಿಳಿಸಬೇಕಾಗಿದೆ. ಈ ಕೆಲಸವು
ಅವರದೇ ಆಗಿದೆ, ಶ್ರೀಕೃಷ್ಣನದಲ್ಲ. ಶ್ರೀಕೃಷ್ಣನಂತೂ ಸ್ವಯಂ 84 ಜನ್ಮಗಳನ್ನು ತೆಗೆದುಕೊಂಡು
ಕೆಳಗಿಳಿಯುತ್ತಾನೆ. ಸೂರ್ಯವಂಶಿಯರೆಲ್ಲರೂ ಕೆಳಗಿಳಿಯುತ್ತಾರೆ, ವೃಕ್ಷವು ಅರ್ಧ ತಾಜಾ, ಅರ್ಧ
ಹಳೆಯದಿರುವುದಿಲ್ಲ. ಎಲ್ಲದರ ಜಡ ಜಡೀಭೂತ ಸ್ಥಿತಿಯಾಗುತ್ತದೆ. ಮನುಷ್ಯರಿಗೆ ಕಲ್ಪದ ಆಯಸ್ಸಿನ
ಬಗ್ಗೆಯೂ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಆಯಸ್ಸನ್ನು ಬಹಳ ಉದ್ದಗಲವಾಗಿ ಬರೆದು ಬಿಟ್ಟಿದ್ದಾರೆ,
ಇದನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ಇದರಲ್ಲಿ ಮತ್ತ್ಯಾವುದೇ ಪ್ರಶ್ನೆ ಬರಲು ಸಾಧ್ಯವಿಲ್ಲ.
ರಚಯಿತ ತಂದೆಯು ಸತ್ಯವನ್ನು ತಿಳಿಸುತ್ತಾರೆ. ನಾವು ಇಷ್ಟೊಂದು ಮಂದಿ ಬಿ.ಕೆ.ಗಳಿದ್ದೇವೆ. ಎಲ್ಲರೂ
ಒಪ್ಪುತ್ತಾರೆ ಅಂದಮೇಲೆ ಅವಶ್ಯವಾಗಿ ಇದ್ದೀರಿ ಅಂದಮೇಲೆ ಒಪ್ಪುತ್ತಾರೆ. ಮುಂದೆ ಹೋದಂತೆ ಯಾವಾಗ
ನಿಶ್ಚಯವಾಗುವುದೋ ಆಗ ಅರ್ಥವೂ ಆಗುತ್ತದೆ. ಮೊಟ್ಟ ಮೊದಲು ಮನುಷ್ಯರಿಗೆ ಇದನ್ನು ತಿಳಿಸಬೇಕಾಗಿದೆ -
ಪರಮಪಿತ ಪರಮಾತ್ಮನು ನಿರಾಕಾರನು ದೂರ ದೇಶದಿಂದ ಬಂದಿದ್ದಾರೆ ಆದರೆ ಯಾರ ಶರೀರದಲ್ಲಿ ಬರುವರು?
ಸೂಕ್ಷ್ಮವತನದಲ್ಲಿ ಬಂದು ಏನು ಮಾಡುವರು? ಅವಶ್ಯವಾಗಿ ಇಲ್ಲಿಯೇ ಬರಬೇಕಾಗುವುದು. ಪ್ರಜಾಪಿತ
ಬ್ರಹ್ಮಾನೂ ಇಲ್ಲಿಯೇ ಬೇಕು. ಬ್ರಹ್ಮಾನು ಯಾರೆಂಬುದನ್ನೂ ಸಹ ತಂದೆಯು ತಿಳಿಸುತ್ತಾರೆ. ಯಾರಲ್ಲಿ
ನಾನು ಪ್ರವೇಶ ಮಾಡಿದ್ದೇನೆಯೋ ಅವರೂ ಸಹ ತಮ್ಮ ಜನ್ಮಗಳನ್ನು ತಿಳಿದುಕೊಂಡಿರಲಿಲ್ಲ ಆದ್ದರಿಂದ
ಮಕ್ಕಳು ತಿಳಿದುಕೊಂಡಿದ್ದೀರಿ - ಯಾವಾಗ ನಾನು ದತ್ತು ಮಾಡಿಕೊಳ್ಳುತ್ತೇನೆಯೋ ಆಗ ಮಕ್ಕಳಾಗುತ್ತೀರಿ.
ನಾನು ಈ ಸಾಕಾರತಂದೆಯ ಸಹಿತವಾಗಿ ಮಕ್ಕಳಿಗೆ ತಿಳಿಸುತ್ತೇನೆ - ನೀವು ತಮ್ಮ ಜನ್ಮಗಳನ್ನೇ ಮರೆತು
ಬಿಟ್ಟಿದ್ದೀರಿ! ಈಗ ಸೃಷ್ಟಿಚಕ್ರವು ಮುಕ್ತಾಯವಾಗುತ್ತದೆ. ಪುನಃ ಪುನರಾವರ್ತನೆಯಾಗುತ್ತದೆ. ನಾನು
ರಾಜಯೋಗವನ್ನು ಕಲಿಸಲು, ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಪಾವನರಾಗಲು ಮತ್ತ್ಯಾವುದೇ
ಮಾರ್ಗವಿಲ್ಲ. ಒಂದುವೇಳೆ ಮನುಷ್ಯರು ಈ ರಹಸ್ಯವನ್ನು ತಿಳಿದುಕೊಂಡಿದ್ದರೆ ಗಂಗೆ, ಮೇಳ
ಇತ್ಯಾದಿಗಳಲ್ಲಿ ಸ್ನಾನ ಮಾಡಲು ಹೋಗುತ್ತಿರಲಿಲ್ಲ, ಈ ನೀರಿನ ನದಿಗಳಲ್ಲಿ ಸದಾ ಸ್ನಾನ ಮಾಡುತ್ತಲೇ
ಇರುತ್ತಾರೆ. ದ್ವಾಪರದಿಂದ ಹಿಡಿದು ಮಾಡುತ್ತಲೇ ಬಂದಿದ್ದಾರೆ. ಗಂಗೆಯಲ್ಲಿ ಮುಳುಗುವುದರಿಂದ ಪಾಪ
ನಾಶವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಯಾರದೂ ಪಾಪನಾಶವಾಗುವುದಿಲ್ಲ. ಮೊಟ್ಟ ಮೊದಲು
ಆತ್ಮ ಮತ್ತು ಪರಮಾತ್ಮನ ರಹಸ್ಯವನ್ನು ತಿಳಿಸಿ, ಆತ್ಮರೇ ಪರಮಾತ್ಮ ತಂದೆಯನ್ನು ಕರೆಯುತ್ತಾರೆ, ಅವರು
ನಿರಾಕಾರನಾಗಿದ್ದಾರೆ. ಆತ್ಮವೂ ನಿರಾಕಾರಿಯಾಗಿದೆ, ಈ ಕರ್ಮೇಂದ್ರಿಯಗಳ ಮೂಲಕ ಆತ್ಮವು ಕರೆಯುತ್ತದೆ.
ಭಕ್ತಿಯ ನಂತರ ಭಗವಂತನು ಬರಬೇಕಾಗಿದೆ, ಇದೂ ಸಹ ಡ್ರಾಮಾದಲ್ಲಿ ಪಾತ್ರವಿದೆ.
ತಂದೆಯು ತಿಳಿಸುತ್ತಾರೆ
- ನಾನು ಹೊಸ ಪ್ರಪಂಚದ ಸ್ಥಾಪನೆ ಮಾಡಲು ಬರಬೇಕಾಗುತ್ತದೆ. ಶಾಸ್ತ್ರಗಳಲ್ಲಿಯೂ ಇದೆ, ಭಗವಂತನಿಗೆ
ಸಂಕಲ್ಪ ಬಂದಿತು ಎಂದು. ಅಂದಮೇಲೆ ಅವಶ್ಯವಾಗಿ ಡ್ರಾಮಾ ಪ್ಲಾನನುಸಾರ ಸಂಕಲ್ಪ ಬಂದಿರಬೇಕು. ಮೊದಲು
ಈ ಮಾತುಗಳನ್ನು ತಿಳಿದುಕೊಳ್ಳುತ್ತಿರಲಿಲ್ಲ. ದಿನ-ಪ್ರತಿದಿನ ತಿಳಿದುಕೊಳ್ಳುತ್ತಾ ಹೋಗುತ್ತೀರಿ.
ನಾನು ನಿಮಗೆ ಹೊಸ-ಹೊಸ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಕೇಳುತ್ತಾ-ಕೇಳುತ್ತಾ
ತಿಳಿದುಕೊಳ್ಳುತ್ತಾ ಹೋಗುತ್ತೀರಿ. ಶಿವ ತಂದೆಯು ಓದಿಸುತ್ತಾರೆಂದು ಮೊದಲು ಹೇಳುತ್ತಿರಲಿಲ್ಲ.
ಈಗಂತೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ, ಇನ್ನೂ ತಿಳಿದುಕೊಳ್ಳುವುದು ಬಹಳಷ್ಟಿದೆ. ಯಾರಿಗೆ
ಹೇಗೆ ತಿಳಿಸಬೇಕೆಂಬುದನ್ನು ತಂದೆಯು ನಿತ್ಯವೂ ತಿಳಿಸುತ್ತಿರುತ್ತಾರೆ. ಮೊದಲು ಬೇಹದ್ದಿನ ತಂದೆಯು
ತಿಳಿಸುತ್ತಾರೆಂದರೆ ಅವರು ಅವಶ್ಯವಾಗಿ ಸತ್ಯವನ್ನೇ ತಿಳಿಸುತ್ತಾರೆಂದು ನಿಶ್ಚಯವಿರಲಿ, ಇದರಲ್ಲಿ
ತಬ್ಬಿಬ್ಬಾಗುವ ಮಾತಿಲ್ಲ. ಕೆಲವು ಮಕ್ಕಳು ಪಕ್ಕಾ ಇದ್ದಾರೆ, ಕೆಲವರು ಕಚ್ಚಾ ಇದ್ದಾರೆ. ಕಚ್ಚಾ
ಆಗಿದ್ದರೆ ಅವರು ಯಾರಿಗೂ ತಿಳಿಸಲು ಸಾಧ್ಯವಿಲ್ಲ. ಶಾಲೆಯಲ್ಲಿಯೂ ನಂಬರ್ವಾರ್ ಇರುತ್ತಾರೆ, ಇಲ್ಲಿ
ಅನೇಕರಿಗೆ ಈ ಸಂಶಯ ಬರುತ್ತದೆ - ಪರಮಪಿತ ಪರಮಾತ್ಮನೇ ಬಂದು ಓದಿಸುತ್ತಾರೆಂದು ನಾವು ಹೇಗೆ
ತಿಳಿದುಕೊಳ್ಳುವುದು! ಏಕೆಂದರೆ ಶ್ರೀಕೃಷ್ಣನು ಜ್ಞಾನವನ್ನು ತಿಳಿಸಿದನೆಂದು ಅವರ ಬುದ್ಧಿಯಲ್ಲಿದೆ
ಆದರೆ ಪತಿತ ಪ್ರಪಂಚದಲ್ಲಂತೂ ಕೃಷ್ಣನು ಬರಲು ಸಾಧ್ಯವಿಲ್ಲ ಆದ್ದರಿಂದ ಅವರಿಗೆ ಇದನ್ನು ಸಿದ್ಧ ಮಾಡಿ
ತಿಳಿಸಿ – ಪತಿತ ಪ್ರಪಂಚ ಮತ್ತು ಪತಿತ ಶರೀರದಲ್ಲಿಯೇ ಪರಮಾತ್ಮನು ಬರಬೇಕಾಗುತ್ತದೆ. ತಂದೆಯು
ಇದನ್ನೂ ತಿಳಿದುಕೊಳ್ಳುತ್ತಾರೆ - ಪ್ರತಿಯೊಬ್ಬರ ಬುದ್ಧಿಯೂ ತಮ್ಮತಮ್ಮದೇ ಆಗಿದೆ. ಕೆಲವರಂತೂ ಬಹು
ಬೇಗನೆ ತಿಳಿದುಕೊಳ್ಳುತ್ತಾರೆ, ಎಷ್ಟು ಸಾಧ್ಯವೋ ಅಷ್ಟು ತಿಳಿಸಿಕೊಡಬೇಕಾಗಿದೆ. ಬ್ರಾಹ್ಮಣರೆಲ್ಲರೂ
ಒಂದೇ ರೀತಿ ಇರುವುದಿಲ್ಲ ಆದರೆ ಮಕ್ಕಳಲ್ಲಿ ಬಹಳ ದೇಹಾಭಿಮಾನವಿದೆ. ತಂದೆಯೂ ಸಹ
ತಿಳಿದುಕೊಂಡಿದ್ದಾರೆ - ಮಕ್ಕಳಲ್ಲಿ ನಂಬರ್ವಾರ್ ಇದ್ದಾರೆ. ತಂದೆಯ ಆದೇಶದಂತೆ ಮಕ್ಕಳು
ನಡೆಯಬೇಕಾಗಿದೆ. ದೊಡ್ಡ ತಂದೆಯು ಏನು ಹೇಳುವರೋ ಅದನ್ನು ಪಾಲಿಸಬೇಕಲ್ಲವೆ. ಗುರುಗಳ ಮತವನ್ನಂತೂ
ಪಾಲಿಸುತ್ತಾ ಬಂದಿದ್ದೀರಿ, ಈಗ ಯಾವ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗುವವರಿದ್ದಾರೆ ಅವರ
ಮಾತನ್ನಂತೂ ಕಣ್ಣು ಮುಚ್ಚಿ ಒಪ್ಪಿಕೊಳ್ಳಬೇಕಲ್ಲವೆ ಆದರೆ ಇಷ್ಟು ನಿಶ್ಚಯ ಬುದ್ಧಿಯವರಿಲ್ಲ. ಭಲೆ
ಅದರಲ್ಲಿ ಲಾಭವಾಗಲಿ, ನಷ್ಟವಾಗಲಿ ಆದರೆ ಒಪ್ಪಿಕೊಳ್ಳಬೇಕು. ತಿಳಿದುಕೊಳ್ಳಿ, ಭಲೆ ಅದರಲ್ಲಿ
ನಷ್ಟವಾಗಲೂಬಹುದು ಆದರೂ ಸಹ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಮಗೆ ಶಿವ ತಂದೆಯೇ
ಹೇಳುತ್ತಾರೆಂದು ತಿಳಿದುಕೊಳ್ಳಿ, ಬ್ರಹ್ಮಾನೆಂದು ತಿಳಿಯಬೇಡಿ. ಶಿವ ತಂದೆಯೇ ಜವಾಬ್ದಾರನಾಗುವರು.
ಶಿವ ತಂದೆಗೆ ಇದು ರಥವಾಗಿದೆ ಅಂದಮೇಲೆ ಅವರು ಸರಿ ಪಡಿಸುತ್ತಾರೆ. ಮಕ್ಕಳೇ, ನಾನು ಕುಳಿತಿದ್ದೇನೆ
ಆದ್ದರಿಂದ ಸದಾ ಶಿವ ತಂದೆಯೇ ತಿಳಿಸುತ್ತಾರೆ, ಇವರಿಗೇನೂ ಗೊತ್ತಿಲ್ಲವೆಂದೇ ತಿಳಿದುಕೊಳ್ಳಿ. ಒಂದು
ಕಡೆ ನಿಶ್ಚಯವನ್ನಿಡಬೇಕು, ನನ್ನ ಮಾತನ್ನು ನೀವು ಪಾಲಿಸುತ್ತಾ ಇದ್ದರೆ ನಿಮ್ಮ ಕಲ್ಯಾಣವಾಗುತ್ತಾ
ಇರುವುದು. ಒಂದುವೇಳೆ ಈ ಬ್ರಹ್ಮಾರವರು ಏನಾದರೂ ತಿಳಿಸಿದರೂ ಸಹ ಅದಕ್ಕೆ ನಾನು
ಜವಾಬ್ದಾರನಾಗಿದ್ದೇನೆ, ನೀವು ಮಕ್ಕಳು ಚಿಂತೆ ಮಾಡಬೇಡಿ. ಶಿವ ತಂದೆಯನ್ನು ನೆನಪು ಮಾಡುವುದರಿಂದ
ಸ್ಥಿತಿಯು ಇನ್ನೂ ಪಕ್ಕಾ ಆಗಿ ಬಿಡುವುದು. ನಿಶ್ಚಯದಲ್ಲಿ ವಿಕರ್ಮಗಳೂ ವಿನಾಶವಾಗುತ್ತದೆ, ಬಲವೂ
ಸಿಗುತ್ತದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಹೆಚ್ಚು ಬಲ ಸಿಗುವುದು. ಯಾರು
ಶ್ರೀಮತದಂತೆ ನಡೆದು ಸರ್ವೀಸ್ ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ಅನೇಕರಲ್ಲಿ ಬಹಳ
ದೇಹಾಭಿಮಾನವಿರುತ್ತದೆ, ತಂದೆಯನ್ನು ನೋಡಿ ಎಲ್ಲಾ ಮಕ್ಕಳೊಂದಿಗೆ ಎಷ್ಟು ಪ್ರೀತಿಯಿಂದ ನಡೆಯುತ್ತಾರೆ,
ಎಲ್ಲರೊಂದಿಗೆ ಮಾತನಾಡುತ್ತಿರುತ್ತಾರೆ. ಮಕ್ಕಳೊಂದಿಗೆ ಕೇಳುತ್ತಾರೆ - ಆರಾಮವಾಗಿ ಕುಳಿತಿದ್ದೀರಾ!
ಯಾವುದೇ ತೊಂದರೆಯಿಲ್ಲವೆ! ಮಕ್ಕಳ ಮೇಲೆ ಪ್ರೀತಿಯಿರುತ್ತದೆ. ಬೇಹದ್ದಿನ ತಂದೆಗೆ ಮಕ್ಕಳಪ್ರತಿ
ಬಹಳ-ಬಹಳ ಪ್ರೀತಿಯಿರುತ್ತದೆ. ಯಾರೆಷ್ಟು ಶ್ರೀಮತದಂತೆ ಸರ್ವೀಸ್ ಮಾಡುವರೋ ಅದರನುಸಾರ
ಪ್ರೀತಿಯಿರುತ್ತದೆ, ಸೇವೆಯಲ್ಲಿಯೇ ಲಾಭವಿದೆ. ಸೇವೆಗಾಗಿ ತಮ್ಮ ಮೂಳೆ-ಮೂಳೆಗಳನ್ನು
ಉಪಯೋಗಿಸಬೇಕಾಗಿದೆ. ಯಾವುದೇ ಸೇವೆಯನ್ನು ಮಾಡುತ್ತಾ ಇದ್ದರೆ ಇವರು ಬಹಳ ಒಳ್ಳೆಯ ಮಗುವೆಂದು,
ಅಂತಹವರು ತಂದೆಯ ಹೃದಯದಲ್ಲಿಯೂ ಇರುತ್ತಾರೆ ಆದರೆ ನಡೆಯುತ್ತಾ-ನಡೆಯುತ್ತಾ ಕೆಲವರ ಮೇಲೆ ಗ್ರಹಚಾರ
ಕುಳಿತುಕೊಳ್ಳುತ್ತದೆ. ಮಾಯೆಯ ಹೋರಾಟ ನಡೆಯುತ್ತಲೇ ಇರುವುದು. ಗ್ರಹಚಾರದ ಕಾರಣ ಮತ್ತೆ ಜ್ಞಾನವನ್ನು
ತೆಗೆದುಕೊಳ್ಳುವುದಿಲ್ಲ. ಕೆಲವರಂತೂ ಕರ್ಮಣಾ ಸೇವೆಯನ್ನು ಅವಿಶ್ರಾಂತರಾಗಿ ಮಾಡುತ್ತಾರೆ.
ಎಲ್ಲರನ್ನೂ ಸುಖಧಾಮದ
ಮಾಲೀಕರನ್ನಾಗಿ ಮಾಡುವುದು ನಿಮ್ಮ ಕರ್ತವ್ಯವಾಗಿದೆ, ಯಾರಿಗೂ ದುಃಖವನ್ನು ಕೊಡಬಾರದು.
ಜ್ಞಾನವಿಲ್ಲದಿದ್ದರೆ ಬಹಳ ದುಃಖ ಕೊಡುತ್ತಾರೆ ನಂತರ ಎಷ್ಟಾದರೂ ತಿಳಿಸಿ ಅವರು
ತಿಳಿದುಕೊಳ್ಳುವುದಿಲ್ಲ. ಮೊಟ್ಟ ಮೊದಲು ಆತ್ಮ ಮತ್ತು ಪರಮಾತ್ಮನ ತಿಳುವಳಿಕೆ ನೀಡಬೇಕಾಗಿದೆ. ಹೇಗೆ
ಆತ್ಮದಲ್ಲಿ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ ಅದು ಅವಿನಾಶಿ ಪಾತ್ರವಾಗಿದೆ, ಅದೆಂದೂ
ಬದಲಾಗುವುದಿಲ್ಲ, ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ನಿಶ್ಚಯವಿರುವವರು ಎಂದೂ ಅಲುಗಾಡುವುದಿಲ್ಲ.
ಅನೇಕ ಮಕ್ಕಳು ಅಲುಗಾಡುತ್ತಾರೆ, ಅಂತಿಮದಲ್ಲಿ ಯಾವಾಗ ಬಿದಿರಿನ ಕಾಡಿಗೆ ಬೆಂಕಿ ಬೀಳುವುದೋ ಆಗ
ಅಚಲರಾಗಿ ಬಿಡುತ್ತಾರೆ. ಈಗಂತೂ ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ. ಒಳ್ಳೊಳ್ಳೆಯ ಮಕ್ಕಳು
ಸೇವೆಯಲ್ಲಿ ತತ್ಫರರಾಗಿರುತ್ತಾರೆ, ತಂದೆಯ ಹೃದಯದಲ್ಲಿರುತ್ತಾರೆ, ಬಹಳ ತೀಕ್ಷ್ಣವಾಗಿ ಮುಂದೆ
ಹೋಗುತ್ತಿರುತ್ತಾರೆ, ಬಹಳ ಪರಿಶ್ರಮ ಪಡುತ್ತಾರೆ. ಅವರಿಗೆ ಸರ್ವೀಸಿನ ಬಹಳ ಉಮ್ಮಂಗವಿರುತ್ತದೆ.
ಯಾರಲ್ಲಿ ಯಾವ ಗುಣವಿದೆಯೋ ಅದನ್ನು ತಂದೆಯು ವರ್ಣನೆ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸೇವೆಯಲ್ಲಿ
ಮೂಳೆ-ಮೂಳೆಗಳನ್ನು ಉಪಯೋಗಿಸಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಎಲ್ಲರಿಗೆ
ಸೇವೆಯಿಂದ ಸುಖವನ್ನೇ ಕೊಡಬೇಕಾಗಿದೆ, ದುಃಖವನ್ನಲ್ಲ.
2. ನಿಶ್ಚಯದ ಬಲದಿಂದ
ತಮ್ಮ ಸ್ಥಿತಿಯನ್ನು ಅಡೋಲ ಮಾಡಿಕೊಳ್ಳಬೇಕಾಗಿದೆ, ಯಾವ ಶ್ರೀಮತ ಸಿಗುತ್ತದೆಯೋ ಅದರಲ್ಲಿ ಕಲ್ಯಾಣವು
ಸಮಾವೇಶವಾಗಿದೆ ಏಕೆಂದರೆ ತಂದೆಯು ಜವಾಬ್ದಾರನಾಗಿದ್ದಾರೆ ಆದುದರಿಂದ ಯಾವುದೇ ಮಾತಿನಲ್ಲಿ ಚಿಂತೆ
ಮಾಡಬಾರದು.
ವರದಾನ:
ಯೋಗಯುಕ್ತ
ಸ್ಥಿತಿಯ ಮೂಲಕ ಸೂಕ್ಷ್ಮ ಅಥವಾ ಕಠಿಣವಾದ ಬಂಧನಗಳನ್ನು ಎದುರಿಸುತ್ತಾ ಬಂಧನ ಮುಕ್ತ ಭವ.
ಯೋಗಯುಕ್ತವಾಗಿ ಇರುವುದರ
ಚಿಹ್ನೆಯಾಗಿದೆ - ಬಂಧನ ಮುಕ್ತರಾಗಿರುವುದು. ಯೋಗಯುಕ್ತರು ಆಗುವುದರಲ್ಲಿ ಅತಿ ದೊಡ್ಡ ಅಂತಿಮ
ಬಂಧನವೆಂದರೆ - ಸ್ವಯಂನ್ನು ಬುದ್ಧಿವಂತನೆಂದು ತಿಳಿದುಕೊಂಡು, ಶ್ರೀಮತವನ್ನು ತಮ್ಮ ಬುದ್ಧಿಯ
ಚಮತ್ಕಾರವೆಂದು ತಿಳಿಯುವುದು ಅರ್ಥಾತ್ ಶ್ರೀಮತದಲ್ಲಿ ತಮ್ಮ ಬುದ್ಧಿಯನ್ನು ಸೇರ್ಪಡೆ ಮಾಡುವುದು.
ಇದಕ್ಕೆ ಬುದ್ಧಿಯ ಅಭಿಮಾನವೆಂದು ಹೇಳಲಾಗುತ್ತದೆ. 2. ಯಾವಾಗ ಯಾರೇ ಬಲಹೀನತೆಯ ಸನ್ನೆ ಮಾಡುತ್ತಾರೆ
ಅಥವಾ ಕೆಟ್ಟದ್ದನ್ನು ಮಾಡುತ್ತಾರೆ - ಒಂದುವೇಳೆ ಆ ಸಮಯದಲ್ಲಿ ಸ್ವಲ್ಪ ವ್ಯರ್ಥ ಸಂಕಲ್ಪವೇ
ನಡೆಯುತ್ತದೆ ಎಂದರೂ ಸಹ ಬಂಧನವಾಗಿದೆ. ಯಾವಾಗ ಇವೆಲ್ಲಾ ಬಂಧನಗಳನ್ನು ಎದುರಿಸುತ್ತಾ ಸೋಲು-ಗೆಲುವು,
ನಿಂದಾ-ಸ್ತುತಿಯಲ್ಲಿ ಸಮಾನ ಸ್ಥಿತಿಯನ್ನಾಗಿ ಮಾಡಿಕೊಳ್ಳುತ್ತೀರಿ ಆಗ ಸಂಪೂರ್ಣ ಬಂಧನಮುಕ್ತರು ಎಂದು
ಹೇಳಲಾಗುವುದು.
ಸ್ಲೋಗನ್:
ಮೊದಲು ಯೋಚಿಸಿ
ನಂತರ ಮಾಡುವುದೇ ಜ್ಞಾನಿ ಆತ್ಮನ ಗುಣವಾಗಿದೆ.
ಅವ್ಯಕ್ತ ಸೂಚನೆ:–
“ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”
ಹೇಗೆ ಅಪರಿಚಿತ ಮಗು
ಹಾನಿಯುಂಟಾಗುವ ವಸ್ತುವನ್ನು ಆಟಿಕೆ ಗೊಂಬೆ ಎಂದು ತಿಳಿಯುವುದರಿಂದ ಅದಕ್ಕೆ ಏನಾದರೂ ಕೊಟ್ಟು
ಬಿಡಿಸಬೇಕಾಗುತ್ತದೆ, ಇಂತಹ ಅಲ್ಪಕಾಲದ ಮಾನ, ಮರ್ಯಾದೆ ಅಥವಾ ಅಲ್ಪಕಾಲದ ಇಚ್ಛೆ
ಇಟ್ಟುಕೊಳ್ಳುತ್ತಾರೆ, ಅವರಿಗೆ ಮಾನ್ಯ ಕೊಟ್ಟು ಸ್ವಯಂ ನಿರ್ಮಾನರಾಗಿ ಬಿಡಿ. ಆ ಸಮಯ ಒಂದುವೇಳೆ
ಅವರಿಗೆ ಶಿಕ್ಷಣ ಕೊಟ್ಟರೆ ಘರ್ಷಣೆಯಾಗುವುದು ಅದಕ್ಕಾಗಿ ಇಂತಹ ಸಮಯದಲ್ಲಿ ಯುಕ್ತಿ ಯುಕ್ತ
ನಡತೆಯಿಂದ, ಪರೋಪಕಾರಿಯಾಗಿ ಕ್ಷಮಾ ಭಾವದಿಂದ ಸನ್ಮಾನ ಕೊಟ್ಟು ಮೊದಲು ಅವರನ್ನು
ತಿಳಿವಳಿಕೆಯುಳ್ಳರನ್ನಾಗಿ ಮಾಡಿ, ಯಾವುದರಿಂದ ಅವರು ಸ್ವಯಂ ಅನುಭವ ಮಾಡಲಿ ಇದು ಹಾನಿಕರವಾಗಿದೆ.