25.10.26    Avyakt Bapdada     Kannada Murli    19.02.2012     Om Shanti     Madhuban


“ಮನೆಯ ಗೇಟ್(ದ್ವಾರ)ನ್ನು ತೆರೆಯಲು ಬೇಹದ್ದಿನ ವೈರಾಗ್ಯ ವೃತ್ತಿಯ ಮೂಲಕ ದೇಹಾಭಿಮಾನದ ನಾನು ಎಂಬುದರ ತ್ಯಾಗ ಮಾಡಿ, ಬರ್ಥ್ಡೇಯಲ್ಲಿ ಧೃಡತೆಯ ಮೂಲಕ ಹೇಳುವುದು ಮತ್ತು ಮಾಡುವುದನ್ನು ಒಂದನ್ನಾಗಿ ಮಾಡಿ ಸಫಲತಾಮೂರ್ತಿಗಳಾಗಿರಿ”


ಇಂದು ಬಾಪ್ದಾದಾರವರು ನಾಲ್ಕೂ ಕಡೆಯ ಮಕ್ಕಳನ್ನು ನೋಡಿ ಖುಷಿ ಪಡುತ್ತಿದ್ದಾರೆ. ನಾಲ್ಕೂ ಕಡೆಯಿಂದ ಹೃದಯದ ಇದೇ ಶಬ್ಧಗಳು ಬರುತ್ತಿದೆ - ವಾಹ್ ಬಾಬಾ ವಾಹ್! ಮತ್ತು ತಂದೆಯ ಹೃದಯದಿಂದ ಇದೇ ಶಬ್ಧವಿದೆ - ವಾಹ್ ಮಕ್ಕಳೇ ವಾಹ್! ಇಂದು ಎಲ್ಲರೂ ಉಮ್ಮಂಗ-ಉತ್ಸಾಹದಿಂದ ದಿವ್ಯ ಜನ್ಮದ ಖುಷಿಯನ್ನಾಚರಿಸುತ್ತಿದ್ದೀರಿ. ಇಂದು ಖುಷಿಯನ್ನೂ ಆಚರಿಸುತ್ತಿದ್ದೀರಿ ಮತ್ತು ಜೊತೆಯಲ್ಲಿ ತಂದೆಯೂ ಸಹ ಮಕ್ಕಳ ಖುಷಿಯನ್ನಾಚರಿಸುತ್ತಿದ್ದಾರೆ. ಇಂದಿನ ದಿನವು ವಿಚಿತ್ರ ಜಯಂತಿಯಾಗಿದೆ - ತಂದೆ ಮತ್ತು ಮಕ್ಕಳ ಜನ್ಮ ದಿನ ಒಟ್ಟಿಗೆ ಇಬ್ಬರ ದಿವ್ಯ ಜನ್ಮ ದಿನವಾಗಿದೆ. ಅಂದಮೇಲೆ ತಾವೆಲ್ಲರೂ ಸಹ ಶುಭಾಷಯಗಳನ್ನೂ ಕೊಡುತ್ತಿದ್ದೀರಿ ಮತ್ತು ತೆಗೆದುಕೊಳ್ಳುತ್ತಿದ್ದೀರಿ ಏಕೆ ಒಂದು ತಂದೆಯ ಜನ್ಮವಾಗಿರುವುದೇ ಯಜ್ಞವನ್ನು ರಚಿಸುವುದಕ್ಕಾಗಿ, ಆದ್ದರಿಂದ ಯಜ್ಞದಲ್ಲಿ ಬ್ರಾಹ್ಮಣ ಮಕ್ಕಳೇ ಬೇಕಾಗಿದೆ. ಅಂದಮೇಲೆ ಇದೊಂದೇ ಜಯಂತಿಯಾಗಿದೆ ಯಾವುದರಲ್ಲಿ ತಂದೆ ಮತ್ತು ಮಕ್ಕಳ ಇಬ್ಬರ ಜಯಂತಿಯಾಗಿದೆ. ಆದ್ದರಿಂದ ಈ ಶಿವ ಜಯಂತಿಯನ್ನು ವಜ್ರ ಸಮಾನ ಜಯಂತಿಯೆಂದು ಹೇಳಲಾಗುತ್ತದೆ ಅಂದಮೇಲೆ ತಂದೆಯು ನೋಡುತ್ತಿದ್ದಾರೆ - ಒಂದೊಂದು ಮಗು ಎಷ್ಟು ಸ್ನೇಹದಿಂದ ಶುಭಾಷಯಗಳನ್ನು ಕೊಡುವುದಕ್ಕಾಗಿ ಬಂದಿದ್ದಾರೆ ಮತ್ತು ತಂದೆಯೂ ಸಹ ಶುಭಾಷಯಗಳನ್ನು ಕೊಡುವುದಕ್ಕಾಗಿ ಬಂದಿದ್ದಾರೆ. ಈ ಜಯಂತಿಯು ಅತಿ ಸ್ನೇಹಿ ಜಯಂತಿಯಾಗಿದೆ. ಸ್ನೇಹಿ ಮಕ್ಕಳು, ಸ್ನೇಹಿ ತಂದೆ ಮತ್ತು ಸ್ನೇಹಿ ಜಯಂತಿಯಾಗಿದೆ.

ಬಾಪ್ದಾದಾರವರ ಬಳಿ ನಾಲ್ಕೂ ಕಡೆಯ ದೇಶದ-ವಿದೇಶದ ಎಲ್ಲಾ ಮಕ್ಕಳ ಸ್ನೇಹವು ತಲುಪುತ್ತಾ ಇದೆ. ತಂದೆಯು ಒಬ್ಬೊಬ್ಬರು ಸ್ನೇಹಿ ಮಕ್ಕಳಿಗೆ ಪದಮಗುಣದಷ್ಟು ಸ್ನೇಹ ತುಂಬಿದ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಈ ಸ್ನೇಹವು ಪ್ರತಿಯೊಬ್ಬರನ್ನು ಸಹಜವಾಗಿ ಕರ್ಮಯೋಗಿಯನ್ನಾಗಿ ಮಾಡುವಂತದ್ದಾಗಿದೆ. ಈ ಸ್ನೇಹವು ಸದಾ ಸಹಜವನ್ನಾಗಿ ಮಾಡುವಂತದ್ದಾಗಿದೆ. ಶಕ್ತಿಶಾಲಿಯನ್ನಾಗಿ ಮಾಡುವಂತದ್ದಾಗಿದೆ. ಕೇವಲ ಬಾಪ್ದಾದಾರವರ ಒಬ್ಬರ ಜನ್ಮದಿನವಲ್ಲ ಏಕೆಂದರೆ ತಂದೆಯು ಸದಾ ಮಕ್ಕಳ ಜೊತೆಯಿರುವವರಾಗಿದ್ದಾರೆ. ಜೊತೆಯಿರುತ್ತೇವೆ, ಜೊತೆಯಲ್ಲಿ ನಡೆಯುತ್ತೇವೆ, ಜೊತೆಯಲ್ಲಿ ರಾಜ್ಯ ಮಾಡುತ್ತೇವೆ. ತಮ್ಮೆಲ್ಲರ ಪ್ರತಿಜ್ಞೆಯೂ ಇದೇ ಆಗಿದೆಯಲ್ಲವೆ! ಜೊತೆಯಿರಬೇಕು, ಜೊತೆಯಲ್ಲಿ ಹಾರಬೇಕು ಮತ್ತು ಜೊತೆಯಲ್ಲಿ ರಾಜ್ಯ ಮಾಡಬೇಕು!

ಬಾಪ್ದಾದಾರವರಿಗೆ ಇಂದು ವಿಶೇಷವಾಗಿ ತಮ್ಮ ಭಕ್ತರ ನೆನಪೂ ಸಹ ಬರುತ್ತಿದೆ ಏಕೆಂದರೆ ತಾವು ಏನು ಮಾಡಿದಿರಿ ಅದನ್ನು ತಮ್ಮ ಭಕ್ತರು ಬಹಳ ಚೆನ್ನಾಗಿ ಕಾಪಿ ಮಾಡಿದ್ದಾರೆ ಏಕೆಂದರೆ ದ್ವಾಪರದಲ್ಲಿ ಪರಮಧಾಮದಿಂದ ಮೊಟ್ಟ ಮೊದಲು ಬರುತ್ತಾರೆಂದರೆ ಮೊದಲ ಜನ್ಮವು ಸದಾ ಸತೋಪ್ರಧಾನವಾಗಿರುತ್ತದೆ ಆದ್ದರಿಂದ ಅವರು ಬಹಳ ಚೆನ್ನಾಗಿ ಕಾಪಿ ಮಾಡಿದ್ದಾರೆ ಅಂದಮೇಲೆ ಇಂದು ಮಕ್ಕಳ ಜೊತೆ ತಮ್ಮ ಭಕ್ತರ ನೆನಪೂ ಸಹ ಬರುತ್ತಿದೆ. ವತನದಲ್ಲಂತು ಇಂದು ಅಮೃತವೇಳೆಯಿಂದ ಮಕ್ಕಳ ಬಹಳ ಒಳ್ಳೆಯ ಶೋಭೆಯಿತ್ತು. ಪ್ರತಿಯೊಂದು ಮಕ್ಕಳು ತಿಳಿದುಕೊಳ್ಳುತ್ತಿದ್ದರು - ನಾನು ಬಾಪ್ದಾದಾರವರಿಗೆ ನನ್ನ ಶುಭಾಷಯಗಳು ಕೊಡೋಣ ಮತ್ತು ಬಾಪ್ದಾದಾರವರೂ ಸಹ ಪ್ರತಿಯೊಂದು ಮಗುವಿನ ಶುಭಾಷಯಗಳನ್ನು ಅತಿ ಸ್ನೇಹದಿಂದ ಸ್ವೀಕಾರ ಮಾಡಿದರು. ಅಂದಮೇಲೆ ಇಂದು ವತನದಲ್ಲಿ ಮಿಲನದಲ್ಲಿ ತೊಡಗಲಾಗಿತ್ತು. ಒಂದು ಕಡೆ ತಾವು ಮಕ್ಕಳು, ಇನ್ನೊಂದು ಕಡೆ ಅಡ್ವಾನ್ಸ್ನಲ್ಲಿ ಹೋಗಿರುವಂತ ತಮ್ಮ ಜೊತೆಗಾರರು ಜೊತೆಯಲ್ಲಿ ಬಂದಿದ್ದರು. ಬಾಪ್ದಾದಾರವರು ನೋಡಿದರು - ತಮ್ಮ ದಾದಿಯರು ಮತ್ತು ಅನನ್ಯ ಸಹೋದರರ ಲಿಸ್ಟ್ ಬಹಳ ದೊಡ್ಡದಾಗಿತ್ತು. ದಾದಿಯರು ಒಬ್ಬೊಬ್ಬರಾಗಿ ಬಾಪ್ದಾದಾರವರಿಗೆ ಶುಭಾಷಯಗಳನ್ನು ಕೊಡುತ್ತಿದ್ದರು ಆದರೆ ಜೊತೆಯಲ್ಲಿ ತಾವೆಲ್ಲರೂ ಭಾಗ್ಯವಂತ ಮಕ್ಕಳಿಗೂ ಶುಭಾಷಯಗಳನ್ನು ಕೊಡುತ್ತಿದ್ದರು. ಅಂದಮೇಲೆ ವತನದಲ್ಲಿ ಇಂದು ಶುಭಾಷಯಗಳ ಮೇಳ ಆಗಿತ್ತು. ಎಲ್ಲರೂ ಹೃದಯದಿಂದ ಶುಭಾಷಯಗಳನ್ನು ಕೊಡ್ತುತಿದ್ದರು. ಇಂದು ಬಾಪ್ದಾದಾರವರು ಎಲ್ಲರ ಕಡೆಯಿಂದ ಬಾಪ್ದಾದಾರವರೂ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಸ್ವೀಕಾರ ಮಾಡಿದಿರಾ?

ಎಲ್ಲರ ವಿಶೇಷವಾದ ಸಹೋದರ ಮತ್ತು ಸಹೋದರಿಯರೆಲ್ಲರ ಒಂದೇ ಶಬ್ಧವಿತ್ತು - ಈಗ ಮನೆ ಗೇಟ್ ಯಾವಾಗ ತೆರೆಯುತ್ತದೆ! ಅಂದಮೇಲೆ ವಿಶೇಷವಾಗಿ ದೀದಿ ದಾದಿಯವರು ಹೇಳುತ್ತಿದ್ದರು - ನಮ್ಮ ಸಖಿಯರಿಗೆ, ಸಹೋದರರಿಗೆ ನಮ್ಮಕಡೆಯಿಂದ ಇದನ್ನೇ ಹೇಳಿ - ಮನೆಗೆ ಹೋಗಲು ಯಾವ ದಿನಾಂಕವನ್ನು ನಿಗಧಿ ಪಡಿಸಿದ್ದಾರೆ? ಎಲ್ಲರೂ ಒಟ್ಟಿಗೆ ನಡೆಯುತ್ತೀರಲ್ಲವೇ! ಬೇರೆ-ಬೇರೆಯಾಗಿ ಹೋಗುವುದಿಲ್ಲ ತಾನೆ? ದ್ವಾರವನ್ನು ತೆಗೆಯುವುದಕ್ಕಾಗಿ ಎಲ್ಲರೂ ಒಟ್ಟಿಗೆ ಹಾಜಿರ್ ಆಗಿ ಬಿಡುತ್ತಾರೆ. ಅಂದಮೇಲೆ ಅವರು ದಿನಾಂಕವನ್ನು ಕೇಳುತ್ತಿದ್ದಾರೆ. ಬಾಪ್ದಾದಾರವರು ಮುಗುಳ್ನಗುತ್ತಿದ್ದರು ಏಕೆಂದರೆ ತಂದೆಯೂ ಸಹ ಈಗ ದ್ವಾರವನ್ನು ತೆರೆಯುವುದಕ್ಕಾಗಿ ಬಯಸುತ್ತಾರೆ - ಎಲ್ಲಾ ಮಕ್ಕಳಲ್ಲಿ ಬೇಹದ್ದಿನ ವೈರಾಗ್ಯ ವೃತ್ತಿಯಿರಬೇಕಾಗಿದೆ. ದ್ವಾರವನ್ನು ತೆರೆಯಲು ಇದೇ ಬೀಗದ ಕೈ ಆಗಿದೆ. ಬಾಪ್ದಾದಾರವರಂತು ಸದಾ ಹೇಳುತ್ತಿರುತ್ತಾರೆ - ಬೇಹದ್ದಿನ ವೈರಾಗಿಗಳಾಗಿ ವ್ಯರ್ಥ ಸಂಕಲ್ಪ ಮತ್ತು ವ್ಯರ್ಥ ಸಮಯ ಎರಡನ್ನು ಬಹಳ ಬೇಗನೆ ತ್ಯಾಗ ಮಾಡುವುದು ಅರ್ಥಾತ್ ಬೇಹದ್ದಿನ ವೈರಾಗಿಗಳಾಗುವುದು ಏಕೆಂದರೆ ಬಾಪ್ದಾದಾರವರು ನೋಡಿದರು - ಎಲ್ಲದಕ್ಕಿಂತ ದೊಡ್ಡ ವಿಘ್ನವಾಗಿದೆ- ದೇಹಾಭಿಮಾನ. ಈ ದೇಹಾಭಿಮಾನವನ್ನು ತ್ಯಾಗ ಮಾಡುವುದು, ನಡೆಯುತ್ತಾ-ತಿರುಗಾಡುತ್ತಾ ದೇಹೀ-ಅಭಿಮಾನಿಯಾಗಿರುವುದೇ ಬೇಹದ್ದಿನ ವೈರಾಗ್ಯವಾಗಿದೆ.

ಅಂದಮೇಲೆ ಎಲ್ಲರೂ ಹೇಳುವುದಂತು ಮೇರಾ ಬಾಬಾ, ಮೀಠಾ ಬಾಬಾ, ಪ್ಯಾರಾ ಬಾಬಾ ಎಂದು. ಯಾವಾಗ ಹೃದಯದಿಂದ ಹೇಳುತ್ತೀರಿ - ನನ್ನದು ಎನ್ನುವುದಂತು ಈ ಯಾವ ದೇಹಾಭಿಮಾನದ ‘ನಾನು’ ಎನ್ನುವುದರ ರೂಪದಲ್ಲಿ ಬರುತ್ತದೆ, ಬಾಬಾರವರು ಸದಾ ಹೇಳುತ್ತಾರೆ - ಈ ‘ನಾನು’ ಎನ್ನುವುದರ ಭಾನ ಯಾವುದು ಬರುತ್ತದೆ - ನಾನು ಏನು ಮಾಡುತ್ತೇನೆ, ನಾನು ಏನನ್ನು ಹೇಳುತ್ತೇನೆ, ಅದೇ ಸರಿಯಾಗಿದೆ. ಒಂದು ನಾನು ಎಂಬುದು ಸಾಮಾನ್ಯವಾಗಿರುವುದಾಗಿದೆ, ನಾನು ಆತ್ಮನಾಗಿದ್ದೇನೆ ಮತ್ತು ಇದು ನನ್ನ ಶರೀರವಾಗಿದೆ. ಮತ್ತೊಂದು ಸೂಕ್ಷ್ಮವಾದ ‘ನಾನು’ ಯಾವುದನ್ನು ತಿಳಿಸಿದ್ದೇವೆ - ನಾನು ಇದನ್ನು ಮಾಡಿದೆನು, ನಾನು ಇದನ್ನು ಮಾಡಬಲ್ಲೆನು, ನಾನೇ ಸರಿಯಾಗಿದ್ದೇನೆ, ಈ ಸೂಕ್ಷ್ಮವಾದ ನಾನು ಎಂಬುದನ್ನು ಸಮಾಪ್ತಿ ಮಾಡಬೇಕಾಗಿದೆ. ಈ ದೇಹಾಭಿಮಾನವು ಈ ರೂಪದಲ್ಲಿ ಬರುತ್ತದೆ ಆದ್ದರಿಂದ ಇಂದು ಬಾಪ್ದಾದಾರವರು ಈ ಸೂಕ್ಷ್ಮ ನಾನು ಯಾವುದು ಕೆಲವೊಮ್ಮೆ ತಂದೆಯ ವಿಶೇಷತೆಯನ್ನೂ ಸಹ ನನ್ನದು ಎಂದು ಒಪ್ಪಿಕೊಂಡು ‘ನಾನು’ ಎಂಬುದರ ಭಾನವನ್ನಿಡುತ್ತೀರಿ ಅದನ್ನು ಸಮಾಪ್ತಿ ಮಾಡಬೇಕಾಗಿದೆ. ನೋಡಿ, ನೆನಪಾರ್ಥವನ್ನೇನು ಮಾಡುತ್ತಾರೆ ಅದರಲ್ಲಿಯೂ ಸಹ ಯಾವಾಗ ಬಲಿ ಕೊಡುತ್ತಾರೆ ಆಗ ಸ್ವಯಂನ್ನು ಬಲಿ ಕೊಡುವುದಿಲ್ಲ ಆದರೆ ಏನನ್ನು ಬಲಿ ಕೊಡುತ್ತಾರೆ? ಕುರಿಯನ್ನು. ಕುರಿಯನ್ನು ಏಕೆ ಹುಡುಕಿದರು? ಏಕೆಂದರೆ ಕುರಿ ಮೇ, ಮೇ ಎನ್ನುತ್ತಿರುತ್ತದೆ. ಭಕ್ತರು ಬಹಳ ಚೆನ್ನಾಗಿ ಕಾಪಿ ಮಾಡಿದ್ದಾರೆ ಅಂದಮೇಲೆ ಇಂದು ಈ ದೇಹಾಭಿಮಾನದ ನಾನು ಎಂಬುದನ್ನು ಯಾವ ಪುರುಷಾರ್ಥ ಮಾಡಿ ಸಮಾಪ್ತಿ ಮಾಡಬಲ್ಲಿರಿ? ತಂದೆಯ ಬರ್ಥ್ಡೇಯಲ್ಲಿ ಬಂದಿದ್ದೀರಿ ಅಂದಮೇಲೆ ಏನಾದರೂ ಉಡುಗೊರೆಯನ್ನಂತು ಕೊಡುತ್ತೀರಲ್ಲವೆ! ತಂದೆ ಮತ್ತ್ಯಾವುದೇ ಉಡುಗೊರೆ ಬೇಕಾಗಿಲ್ಲ, ಈ ಸೂಕ್ಷ್ಮವಾದ ‘ನಾನು’ ಎಂಬುದನ್ನೇ ತಂದೆಯು ಹೇಳುತ್ತಾರೆ - ಇಂದು ಜನ್ಮ ದಿನದಂದು ತಂದೆಗೆ ಉಡುಗೊರೆಯಾಗಿ ಕೊಡಿ. ಕೊಡಬಲ್ಲಿರಾ? ಕೊಡಬೇಕಾಗಿದೆಯೇ? ಧೈರ್ಯವಿದೆಯೇ? ಧೈರ್ಯವಿದೆಯೇ? ಕೈಯೆತ್ತಿರಿ. ಕೈಯನ್ನೆತ್ತಿ ಖುಷಿ ಪಡಿಸಿ ಬಿಟ್ಟಿರಿ. ಅಂದಮೇಲೆ ಕೈಯೆತ್ತಿದ್ದೀರಿ ಅಂದರೆ ಉಡುಗೊರೆಯನ್ನು ಕೊಟ್ಟಿದ್ದೀರಲ್ಲವೆ. ಕೊಟ್ಟಿರುವ ವಸ್ತುವನ್ನು ಮತ್ತೆ ಹಿಂತಿರುಗಿ ತೆಗೆದುಕೊಳ್ಳುತ್ತಾರೆಯೇ? ಕೆಲವು ಮಕ್ಕಳು ಹೇಳುತ್ತಾರೆ - ಬಾಬಾ ನಾವು ಬಯಸುವುದಿಲ್ಲ ಆದರೆ ಬಂದು ಬಿಡುತ್ತದೆ. ಇದರ ಕಾರಣವೇನಾಗಿದೆ? ಕಾರಣವನ್ನು ಒಂದುವೇಳೆ ಕೇಳಿದರೆ ಬಹಳ ಒಳ್ಳೆಯ ಪ್ರತ್ಯುತ್ತರ ಕೊಡುತ್ತಾರೆ. ಅದು ಗೊತ್ತಿದೆ, ಒಪ್ಪಿಕೊಳ್ಳುತ್ತೇವೆ ಆದರೆ ಏನು ಮಾಡುವುದು ಹಿಂತಿರುಗಿ ಬಂದು ಬಿಡುತ್ತದೆ ಎಂದು ಹೇಳುತ್ತಾರೆ. ಯೋಚಿಸಿ! ಕೊಟ್ಟಿರುವ ವಸ್ತು ಒಂದುವೇಳೆ ತಮ್ಮಬಳಿ ಬಂದು ಬಿಟ್ಟಿತೆಂದರೆ ಕೊಟ್ಟಿರುವ ವಸ್ತುವನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತೀರಾ? ಒಂದುವೇಳೆ ತಾವು ಹೃದಯಪೂರ್ವಕವಾಗಿ ತಾವು ಕೊಟ್ಟಿದ್ದೀರಿ, ಅದು ಒಂದುವೇಳೆ ಹಿಂತಿರುಗಿ ಬಂದು ಬಿಟ್ಟಿತೆಂದರೆ ತಮ್ಮ ಬಳಿ ಇಟ್ಟುಕೊಳ್ಳುತ್ತೀರಾ? ಕಾರಣವೇನು? ತಂದೆಯೊಂದಿಗೆ ಪ್ರೀತಿಯಿದೆಯಲ್ಲವೆ ಆದ್ದರಿಂದ ಪ್ರೀತಿಯ ಕಾರಣವಾಗಿ ಬಾಬಾರವರು ಏನು ಹೇಳುತ್ತಾರೆ ಅದನ್ನು ಮಾಡಲು ಬಯಸುತ್ತೀರಿ, ಇದರ ಫಲಿತಾಂಶವು ತಂದೆಯಬಳಿ ಬರುತ್ತದೆ ಆದರೆ ಏನಾಗಿದೆ, ಧೃಡತೆಯ ಕೊರತೆಯಿದೆ. ಧೃಡತೆಯನ್ನು ಉಪಯೋಗಿಸಿ. ಸಂಕಲ್ಪ ಮಾಡುತ್ತೀರಿ ಆದರೆ ಒಂದಾಗಿದೆ - ಸಂಕಲ್ಪ ಮಾಡುವುದು, ಮತ್ತೊಂದು – ಧೃಡ ಸಂಕಲ್ಪ ಮಾಡುವುದು. ಮತ್ತೆ-ಮತ್ತೆ ಮಾಡಿರುವ ಸಂಕಲ್ಪದಲ್ಲಿ ಧೃಡತೆಯನ್ನು ತರುವುದರಲ್ಲಿ ಗಮನ ಕಡಿಮೆಯಿದೆ. ಧೃಡತೆಯು ಸಫಲತೆಯ ಬೀಗದ ಕೈ ಆಗಿದೆ. ಅಂದಮೇಲೆ ಇಂದು ಏನು ಮಾಡುವಿರಿ? ಸಂಕಲ್ಪ ಮಾಡುವಿರಾ ಅಥವಾ ಧೃಡ ಸಂಕಲ್ಪ ಮಾಡುವಿರಾ? ಒಂದುವೇಳೆ ತಮ್ಮಲ್ಲಿ ಧೃಡ ಸಂಕಲ್ಪವಿದೆಯೆಂದರೆ ಅದರ ಚಿಹ್ನೆಯಾಗಿದೆ - ಧೃಡತೆಯು ಸಫಲತೆಯ ಬೀಗದ ಕೈಯಾಗಿದೆ. ಆದ್ದರಿಂದ ಬೀಗದ ಕೈ ಉಪಯೋಗಿಸುವುದರಲ್ಲಿ ಸ್ವಲ್ಪ ಕೊರತೆ ಉಳಿದುಕೊಳ್ಳುತ್ತದೆ ಆದ್ದರಿಂದ ಸಂಪೂರ್ಣ ಸಫಲತೆ ಸಿಗುವುದಿಲ್ಲ.

ಅಂದಮೇಲೆ ಇಂದು ಬಾಪ್ದಾದಾರವರು ಮಕ್ಕಳ ಬರ್ಥಡೆಯೂ ಆಗಿದೆ, ತಂದೆಯ ಬರ್ಥ್ಡೆಯೂ ಆಗಿದೆ. ಅಂದಮೇಲೆ ಇದಂತು ವಿಶೇಷ ದಿನವಾಗಿದೆಯಲ್ಲವೆ! ಇಡೀ ಕಲ್ಪದಲ್ಲಿ ತಂದೆ - ಮಕ್ಕಳ ಒಂದೇ ಸಮಯದಲ್ಲಿ ಜನ್ಮವಾಗುವುದು ಇದೇ ಬರ್ಥ್ಡೇಯ ವಿಶೇಷತೆಯಾಗಿದೆ. ಇಂದು ತಂದೆಯು ಇದನ್ನೇ ಬಯಸುತ್ತಾರೆ - ಪ್ರತಿಯೊಂದು ಮಗು ಇಂದು ತನ್ನ ಹೃದಯದಲ್ಲಿ ಧೃಡತೆಯನ್ನು ತರುತ್ತಾ ಈ ಧೃಡ ಸಂಕಲ್ಪ ಮಾಡಲಿ - ನಾವು ವ್ಯರ್ಥ ಸಂಕಲ್ಪ ಮತ್ತು ವ್ಯರ್ಥ ಸಮಯ, ಏಕೆಂದರೆ ಒಂದುವೇಳೆ ಇಡೀ ದಿನದಲ್ಲಿ ಗಮನಕೊಟ್ಟು ಪರಿಶೀಲತೆ ಮಾಡಿದರೆ ಮಧ್ಯ-ಮಧ್ಯದಲ್ಲಿ ಸಮಯ ಮತ್ತು ಸಂಕಲ್ಪ ವ್ಯರ್ಥವಾಗಿ ಬಿಡುತ್ತದೆ. ಬಾಪ್ದಾದಾರವರಂತು ಎಲ್ಲರ ರಿಜಿಸ್ಟರ್ ನೋಡುತ್ತಾರಲ್ಲವೆ! ಅದನ್ನು ಉಳಿತಾಯ ಮಾಡುವುದು ಅರ್ಥಾತ್ ಸಮಾಪ್ತಿಯ ಸಮಯವನ್ನು ಸಮೀಪಕ್ಕೆ ತರುವುದು. ತಯಾರಿದ್ದೀರಾ? ಈಗಲೂ ಹೇಳುತ್ತೀರಾ - ಏನು ಮಾಡುವುದು ಬಂದು ಬಿಡುತ್ತದೆ? ವ್ಯರ್ಥದ ಕೆಲಸವಾಗಿದೆ - ಬರುವುದು, ತಮ್ಮ ಕಾರ್ಯ ಏನಾಗಿದೆ, ಕೂರಿಸುವುದೇ? ಕೂರಿಸುತ್ತೀರಿ ಆಗ ತಾನೆ ಅದೂ ಸಹ ಮನೆ ಮಾಡಿಕೊಂಡು ಬಿಡುತ್ತದೆ. ಅದೂ ಸಹ ತಿಳಿದುಕೊಂಡಿದೆ - ಇವರಲ್ಲಿ ಧೃಡತೆಯಿಲ್ಲ ಆದ್ದರಿಂದ ಇಂದು ಸ್ನೇಹದ ದಿನದಂದು ಎಲ್ಲರ ಹೃದಯದಲ್ಲಿ ಏನಿದೆ? ಅಮೃತವೇಳೆಯಿಂದ ಇಂದು ಹೃದಯದಲ್ಲಿ ಮತ್ತೆ-ಮತ್ತೆ ಏನು ಬರುತ್ತಿದೆ? ಮೇರಾಬಾಬಾ, ಮೇರಾಬಾಬಾ, ಮೇರಾಬಾಬಾ. ಬಾಬಾರವರ ಹೃದಯದಲ್ಲಿಯೂ ಸಹ ಇದೆ- ಮೇರಾ ಬಚ್ಚೆ, ಮೇರಾ ಬಚ್ಚೆ, ಮೇರೆ ಬಚ್ಚೆ...... ಅಂದಮೇಲೆ ಹೇಗೆ ಮೆಜಾರಿಟಿ ತಂದೆಯ ನೆನಪಿನಲ್ಲಿದ್ದಿರಿ. ದಿನದ ಪ್ರಭಾವವೂ ಇದೆ, ಬಾಪ್ದಾದಾರವರು ನೋಟ್ ಮಾಡಿದರು. ಸ್ನೇಹದ ದಿನವಾಗಿರುವ ಕಾರಣದಿಂದ ಎಲ್ಲರಿಗೂ ಪದೇ-ಪದೇ ಮೇರಾ ಬಾಬಾ, ಮೇರಾ ಬಾಬಾ ಎಂದು ಬಹಳ ಸಮಯ ನೆನಪು ಇದೆ. ಈ ರೀತಿಯಿದೆಯೇ? ಇದರಲ್ಲಿ ಕೈಯೆತ್ತಿರಿ. ಇವತ್ತಿನ ದಿನದ ಮಾತಾಗಿದೆ. ಮೇರಾ ಬಾಬಾ ನೆನಪಿತ್ತೇ? ಮತ್ತೇನಾದರೂ ನೆನಪಿತ್ತೇ? ಇಲ್ಲ. ಹೀಗೀಗೆ ಕೈ ಮಾಡುತ್ತಿದ್ದಾರೆ. ಬಹಳ ಒಳ್ಳೆಯದು - ಒಂದುವೇಳೆ ಪ್ರತಿನಿತ್ಯ ಮತ್ತೆ-ಮತ್ತೆ ಪರಿಶೀಲನೆ ಮಾಡಿ - ಸಂಗಮದ ಪ್ರತಿಯೊಂದು ದಿನ ಬಾಬಾರವರ ಸ್ನೇಹದ ದಿನವಾಗಿದೆ. ಹೇಗೆ ಇಂದು ವಿಶೇಷದಿನವಾಗಿರುವ ಕಾರಣ ಹೆಚ್ಚಿನದಾಗಿ ನೆನಪಿದೆಯಲ್ಲವೆ! ಹಾಗೆಯೇ ಸದಾ ಅಮೃತವೇಳೆ ಈ ಸ್ಮೃತಿಯನ್ನಿಡಿ - ಈ ಸಂಗಮದ ಒಂದೊಂದು ದಿನ ಎಷ್ಟೊಂದು ಮಹಾನ್ ಆಗಿದೆ. ಒಂದು ಚಿಕ್ಕದಾದ ಜನ್ಮದಲ್ಲಿ 21 ಜನ್ಮಗಳ ಪ್ರಾಪ್ತಿ ಗ್ಯಾರಂಟಿಯಿದೆ. ಅಂದಮೇಲೆ ಒಂದೊಂದು ದಿನವು ಎಷ್ಟೊಂಡು ಮಹತ್ವಿಕೆಯಿಂದ ಕೂಡಿದೆ. 21 ಜನ್ಮವೆಲ್ಲಿ! ಮತ್ತು ಈ ಚಿಕ್ಕದಾದ ಒಂದು ಜನ್ಮವೆಲ್ಲಿ!

ಬಾಪ್ದಾದಾರವರು ಇಂದು ತಾವು ಮಕ್ಕಳಿಂದ ಬರ್ಥ್ಡೆಯ ಇದೇ ಉಡುಗೊರೆಯನ್ನು ಬಯಸುತ್ತಾರೆ. ಉಡುಗೊರೆ ಕೊಡುತ್ತೀರಲ್ಲವೆ? ಕೊಡುತ್ತೀರಲ್ಲವೆ? ಕೈಯನ್ನೆತ್ತಿರಿ. ಧೃಡ ನಿಶ್ಚಯದ ಕೈ. ನೋಡೊಣ, ಮಾಡೋಣ ಎನ್ನುವಂತಿಲ್ಲ. ಏನೇ ಆದರೂ ತ್ಯಾಗವೆಂದರೆ ತ್ಯಾಗ. ಇದು ತ್ಯಾಗವಲ್ಲ ಆದರೆ ಭಾಗ್ಯವಾಗಿದೆ. ಅಂದಮೇಲೆ ಇಂದು ಒಂದುವೇಳೆ ಕೈಯನ್ನೆತ್ತುತ್ತಿದಿರೆಂದರೆ ಮಹತ್ವದ ದಿನವಲ್ಲವೆ. ಈಗಿನಿಂದ ತಮ್ಮ ಚಹರೆಯಲ್ಲಿ ವ್ಯರ್ಥ ಸಮಾಪ್ತಿ ಮತ್ತು ಸದಾ ಸ್ಮೃತಿಸ್ವರೂಪದ ಹೊಳಪು ಚಹರೆ ಮತ್ತು ಚಲನೆಯಲ್ಲಿ ಬರಬೇಕಾಗಿದೆ. ಈ ಮಾಯೆಯ ಶಬ್ಧಗಳು ಏನಿದೆಯಲ್ಲವೆ - ಏಕೆ, ಏನು, ಯಾವಾಗ, ಹೇಗೆ...... ಇದು ಸಮಾಪ್ತಿಯಾಗಬೇಕು ಆಗ ಚಹರೆ ಮತ್ತು ಚಲನೆಯು ಸೇವೆ ಮಾಡುತ್ತದೆ. ಈಗ ಹೆಚ್ಚಿನದಾಗಿ ಭಾಷಣದಲ್ಲಿ ಪ್ರಭಾವ ಬೀರುತ್ತದೆ. ಬಾಪ್ದಾದಾರವರು ಖುಷಿಯಾಗಿದ್ದಾರೆ - ಭಾಷಣವನ್ನಂತು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ ಆದರೆ ದಿನ-ಪ್ರತಿದಿನ ಈಗ ಹೇಗೆ ಭಾಷಣಗಳ ಮೂಲಕ, ವಾಣಿಯ ಮೂಲಕ ಸೇವೆಯ ಉಮ್ಮಂಗ ಬಹಳ ಚೆನ್ನಾಗಿ ಇಟ್ಟುಕೊಂಡಿದ್ದೀರಿ ಮತ್ತು ಸಫಲತೆಯನ್ನು ಪಡೆಯುತ್ತೀರಿ. ಹಾಗೆಯೇ ಈಗ ಸಮಯದನುಸಾರ ತಮ್ಮ ಹೆಚ್ಚಿನ ಸೇವೆ ಚಹರೆ ಮತ್ತು ಚಲನೆಯಿಂದ ಆಗುವುದು. ಅದರ ಅಭ್ಯಾಸವನ್ನು, ಹೇಗೆ ಭಾಷಣಗಳ ಅಭ್ಯಾಸ ಮಾಡುತ್ತಾ-ಮಾಡುತ್ತಾ ಬುದ್ಧಿವಂತರಾಗಿದ್ದೀರಲ್ಲವೆ! ಹಾಗೆಯೇ ಈಗ ಚಹರೆ ಮತ್ತು ಚಲನೆಯಿಂದ ಯಾರಿಗೇ ಆದರೂ ಖುಷಿಯ ವರದಾನ ಕೊಡಿ, ಇದರ ಅಭ್ಯಾಸ ಮಾಡಿ ಏಕೆಂದರೆ ಸಮಯ ಕಡಿಮೆ ಸಿಗುತ್ತದೆ. ಆದ್ದರಿಂದ ಸಮಯ ಮತ್ತು ಸಂಕಲ್ಪದ ಮಹತ್ವಿಕೆಯನ್ನಿಡುತ್ತಾ ಮುಂದುವರೆಯುತ್ತಾ ಸಾಗಿರಿ. ಎಲ್ಲವೂ ಅಚಾನಕ್ ಆಗುತ್ತದೆ, ಆದ್ದರಿಂದ ಬರ್ಥಡೇಯಂತು ನೆನಪಿರುತ್ತದೆಯಲ್ಲವೆ! ಬರ್ಥ್ಡೇ ಬರಬೇಕು, ಬರಬೇಕು ಎಂದು ಎಷ್ಟು ಸಮಯ ನೆನಪಿಗೆ ಬಂದಿತು? ಬಾಪ್ದಾದಾ ಬರುತ್ತಾರೆ, ಬರುತ್ತಾರೆ, ಮಿಲನ ಮಾಡಬೇಕು ಇದು ಎಷ್ಟು ಸಮಯದಿಂದ ನೆನಪಿಟ್ಟುಕೊಂಡಿರಿ? ಈಗ ಈ ಸಂಕಲ್ಪ ಮಾಡಿ, ಧೃಡತೆಯಿಂದ ವ್ಯರ್ಥ ಸಮಯ ಮತ್ತು ಸಂಕಲ್ಪವನ್ನು ಸಮಾಪ್ತಿ ಮಾಡಬೇಕಾಗಿದೆ. ಮೇರಾ ಬಾಬಾ, ಮೇರಾ ಬಾಬಾ ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳಬೇಕು, ಹೇಳುವುದು ಬೇರೆ ಮಾತಾಗಿದೆ ಆದರೆ ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳಬೇಕು, ಹೃದಯದ ಮಾತು ಎಂದಿಗೂ ಮರೆತು ಹೋಗುವುದಿಲ್ಲ. ಬಾಯಿಂದ ಮಾತಾಡಿರುವ ಮಾತು ಮರೆತು ಹೋಗಬಹುದು ಆದರೆ ಹೃದಯದ ಮಾತು ಒಳ್ಳೆಯದು ಅಥವಾ ವ್ಯರ್ಥಮಾತು ಮರೆಯುವುದಿಲ್ಲ. ಅಂದಮೇಲೆ ಇಂದು ಬಾಪ್ದಾದಾರವರಿಗೆ ಉಡುಗೊರೆಯನ್ನಂತು ಕೊಟ್ಟಿದ್ದೀರಲ್ಲವೆ. ಎರಡೆರಡು ಕೈಯನ್ನೆತ್ತಿರಿ. ಅರೆ ವಾಹ್! ಈ ಫೋಟೊ ತೆಗೆದುಕೊಳ್ಳಿ. ಬಾಪ್ದಾದಾರವರು ಕೇವಲ ಕೈಯನ್ನಷ್ಟೇ ನೋಡುತ್ತಿಲ್ಲ, ಬಾಪ್ದಾದಾರವರು ತಮ್ಮ ಹೃದಯವನ್ನು ನೋಡುತ್ತಿದ್ದಾರೆ.

ಅಂದಮೇಲೆ ಇಂದು ತಾವು ಉಡುಗೊರೆಯನ್ನು ತಮಗೆ ತಾವೂ ಕೊಟ್ಟಿದ್ದೀರಿ ಮತ್ತು ತಂದೆಗೂ ಕೊಟ್ಟಿರಿ. ಒಂದುವೇಳೆ ತಮ್ಮ ವ್ಯರ್ಥ ಸಮಯ ಮತ್ತು ಸಂಕಲ್ಪದ ಉಳಿತಾಯ ಆಯಿತೆಂದರೆ ತಮ್ಮ ದಿನಗಳು ಹೇಗೆ ವ್ಯತೀತವಾಗುವುದು? ಸದಾ ಭಾಗ್ಯಾಶಾಲಿ ಮತ್ತು ಪ್ರಸನ್ನಚಿತ್ತರಾಗಿ ಬಿಡುತ್ತೀರಿ. ಅಂದಮೇಲೆ ಈಗ ಸಂಕಲ್ಪವನ್ನು ಅಮೃತವೇಳೆ ಬಾಪ್ದಾದಾರವರೊಂದಿಗೆ ಮಿಲನ ಮಾಡಿದ ನಂತರ ಇದನ್ನು ಪ್ರತಿನಿತ್ಯ ಸ್ಮೃತಿಯಲ್ಲಿ ತನ್ನಿರಿ ಮತ್ತು ಇಡೀ ದಿನದಲ್ಲಿ ಮಧ್ಯ-ಮಧ್ಯದಲ್ಲಿ ಪರಿಶೀಲನೆ ಮಾಡುತ್ತೀರೆಂದರೆ ಬಾಪ್ದಾದಾರ್ವರ ಮುಂದೆ ಬರ್ಥ್ಡೆಯಲ್ಲಿ ಯಾವ ಪ್ರತಿಜ್ಞೆ ಮಾಡಿದೆನು ಅದನ್ನು ನಿಭಾಯಿಸುತ್ತಿದ್ದೇನೆಯೇ? ತಮ್ಮೊಂದಿಗೆ ತಾವು ಪರಿಶೀಲನೆ ಮಾಡಿಕೊಳ್ಳಿ. ಎಲ್ಲರೂ ಬಯಸುತ್ತಾರೆ. ಬಾಪ್ದಾದಾರವರು ಇಂದು ಮುಖವನ್ನು ನೋಡುತ್ತಿದ್ದಾರೆ - ಬಯಸುತ್ತಾರೆ ಆಯಿತು, ಆಯಿತು ಎಂದು ಹೇಳುತ್ತೀರಿ ಆದರೆ ಈ ವ್ಯರ್ಥವು ಬಂದು ಬಿಡುತ್ತದೆಯಲ್ಲವೆ ಆದ್ದರಿಂದ ಬಾಬಾರವರೊಂದಿಗೆ ಮಾಡಿರುವ ಪ್ರತಿಜ್ಞೆಯು ಮರೆತು ಹೋಗುತ್ತದೆ. ಆದ್ದರಿಂದ ವ್ಯರ್ಥ ಸಮಾಪ್ತಿ. ಒಂದು ನಿಮಿಷ ಈಗಲೂ ಒಂದು ನಿಮಿಷ ಶಕ್ತಿಶಾಲಿ ಆತ್ಮರಾಗಿ ಸಂಕಲ್ಪ ಮಾಡಿ- ವ್ಯರ್ಥವನ್ನು ಸಮಾಪ್ತಿ ಮಾಡಲೇಬೇಕು. ಒಳ್ಳೆಯದು.

ಬಾಪ್ದಾದಾರವರು ಒಂದು ಮಗುವನ್ನೂ ಸಹ ತನ್ನ ಸಮಾನ ಮಾಡದೇ ಇರುವುದಕ್ಕೆ ಬಯಸುವುದಿಲ್ಲ. ಪ್ರೀತಿಯಿದೆಯಲ್ಲವೆ. ನೋಡಿ, ಪ್ರೀತಿಯ ಚಿಹ್ನೆಯಾಗಿ ಇಂದಿನ ದಿನವಿದೆ. ತಂದೆ ಮತ್ತು ಮಕ್ಕಳು ಇಡೀ ಕಲ್ಪದಲ್ಲಿ ಇಂತಹ ದಿನವಾಗುವುದಿಲ್ಲ ಯಾವುದರಲ್ಲಿ ತಂದೆ ಮತ್ತು ಮಕ್ಕಲ ಜನ್ಮವೇ ಒಂದು ದಿನವಾಗುತ್ತದೆ. ತಂದೆಗೆ ಒಂದೊಂದು ಮಗುವಿನೊಂದಿಗೆ ಹೃದಯದ ಪ್ರೀತಿಯಿದೆ - ನನ್ನ ಮಗು, ಪರಮಾತ್ಮನ ಮಗು, ಯಾವ ಸಂಕಲ್ಪ ಮಾಡುತ್ತೀರಿ ಆ ಸಂಕಲ್ಪವು ಸಫಲವಾಗಲಿ. ಒಂದೊಂದು ಸಂಕಲ್ಪದಲ್ಲಿ ಶಕ್ತಿಯಿರಲಿ, ಹೇಳುವುದು ಮತ್ತು ಮಾಡುವುದು ಒಂದಾಗಿರಲಿ. ಹೇಳುವುದು ಅರ್ಥಾತ್ ಆಯಿತು ಎಂದು. ಶುದ್ಧಸಂಕಲ್ಪವಿರಲಿ. ಆಗ ಸ್ವತಹವಾಗಿ ವ್ಯರ್ಥವು ಸಮಾಪ್ತಿಯಾಗುತ್ತದೆ ಏಕೆಂದರೆ ಅಡ್ವಾನ್ಸ್ ಪಾರ್ಟಿಯವರು ದಿನಾಂಕವನ್ನು ಬಯಸುತ್ತಾರೆ. ಅಂದಮೇಲೆ ತಮ್ಮ ಹಿರಿಯ ದಾದಿಯರಿದ್ದಾರೆ, ಹಿರಿಯ ಸಹೋದರರಿದ್ದಾರೆ, ಅವರೊಂದಿಗೆ ಪ್ರೀತಿಯಂತು ಇದೆಯಲ್ಲವೆ. ಎಷ್ಟು ನೆನಪು ಮಾಡುತ್ತೀರಿ? ದಾದಿಯನ್ನು, ದೀದಿಯವರನ್ನು, ಚಂದ್ರಮಣಿಯವರನ್ನು, ಎಲ್ಲರ ಹೆಸರು ತೆಗೆದುಕೊಳ್ಳುತ್ತಿರಿ. ಎಲ್ಲರನ್ನು ನೆನಪು ಮಾಡುತ್ತೀರಿ. ಅಂದಮೇಲೆ ಅವರು ಏನು ಬಯಸುತ್ತಾರೆ ಅದನ್ನು ಮಾಡಿ ತಿಳಿಸಬೇಕಲ್ಲವೆ. ಅಂದಮೇಲೆ ಇಂದು ಯಾವ ಸಂಕಲ್ಪ ಇತ್ತು? ಹೇಳುವುದು ಮತ್ತು ಮಾಡುವುದು ಒಂದಾಗಲಿ. ಸರಿಯೇ! ಇಂದು ನಾಲ್ಕೂಕಡೆಯ ಮಕ್ಕಳಿಗೆ ಬಾಪ್ದಾದಾರವರು ಬರ್ಥ್ಡೇಯ ಉಡುಗೊರೆಯನ್ನಾಗಿ ಇದನ್ನೇ ಕೊಡುತ್ತಿದ್ದಾರೆ - “ಹೇಳುವುದು ಮತ್ತು ಮಾಡುವುದು” ಒಂದು ಮಾಡಿ. ಧೃಡತೆಯ ಉಡುಗೊರೆಯನ್ನು ಬಾಪ್ದಾದಾರವರು ಇಂದು ಪ್ರತಿಯೊಂದು ಮಕ್ಕಳಿಗೆ ಕೊಡುತ್ತಿದ್ದಾರೆ. ಶುಭ ಕಾರ್ಯವನ್ನು ಧೃಡತೆಯಿಂದ ಸಫಲ ಮಾಡಿ.

ಉಳಿದಂತೆ ಯಾರೆಲ್ಲಾ ಇಂದು ಮೊದಲ ಬಾರಿ ಬಂದಿದ್ದೀರಿ. ಅವರು ಎದ್ದೇಳಿ. ಕೈಯನ್ನು ಅಲುಗಾಡಿಸಿ. ಬಾಪ್ದಾದಾರವರು ಬಂದಿರುವಂತಹ ಮಕ್ಕಳಿಗೆ ಬಂದಿದ್ದೀರಿ, ನನ್ನ ಬಾಬಾ ಎಂದು ತಿಳಿದಿದ್ದೀರಿ ಇದಕ್ಕಾಗಿ ಬಹಳ-ಬಹಳ ಶುಭಾಷಯಗಳನ್ನು ಕೊಡುತ್ತಿದ್ದೇವೆ. ಬಾಪ್ದಾದಾರವರಿಗೆ ಖುಷಿಯಿದೆ ಆದರೂ ಸಹ ಏರುಪೇರು ಏನಾಗುವುದಿದೆ ಅದಕ್ಕೆ ಮೊದಲೇ ತಲುಪಿದ್ದೀರಿ, ಇದಕ್ಕಾಗಿ ಶುಭಾಷಯಗಳು. ಈಗ ಬಂದಿರುವಂತಹ ಪ್ರತಿಯೊಬ್ಬರೂ ಈ ಸಂಕಲ್ಪ ಮಾಡಿ - ಧೃಡವಾಗಿರಬೇಕು, ಸಾಧಾರಣ ಸಂಕಲ್ಪವಲ್ಲ, ಧೃಡ ಸಂಕಲ್ಪ ಮಾಡಿ- ತೀರ್ವ ಪುರುಷಾರ್ಥಿಯಾಗಲೇಬೇಕು. ತೀವ್ರ, ಸಾಧಾರಣವಲ್ಲ. ಅಂದಾಗ ಬರುವಂತಹ ತಮ್ಮ ರಾಜ್ಯದಲ್ಲಿ ಬಂದು ಬಿಡುತ್ತೀರಿ. ಆದ್ದರಿಂದ ಸಾಧಾರಣ ಸಂಕಲ್ಪದ ಸಮಯ ಪೂರ್ಣವಾಯಿತು. ಈಗ ತೀವ್ರ ಪುರುಷಾರ್ಥದ ಸಮಯವಾಗಿದೆ, ಅವಕಾಶವಿದೆ ಆದರೂ ಆವಕಾಶವನ್ನು ಯಾರು ತೆಗೆದುಕೊಳ್ಳುವಂತಹವರು ಚಾನ್ಸ್ಲರ್ ಆಗಿ ಬಿಡುತ್ತೀರಿ. ಅಂದಮೇಲೆ ಬಾಪ್ದಾದಾರವರು ಪ್ರತಿಯೊಂದು ಮಕ್ಕಳನ್ನು ನೋಡಿ ಖುಷಿ ಪಡುತ್ತಾರೆ ಮತ್ತು ಪ್ರತಿಯೊಂದು ಮಕ್ಕಳಿಗೆ ತಿಳಿಸುತ್ತಿದ್ದಾರೆ – ತೀವ್ರ ಪುರುಷಾರ್ಥ ಮಾಡುತ್ತೀರೆಂದರೆ ಜೊತೆಯಲ್ಲಿ ಹೋಗುವಿರಿ, ಜೊತೆಯಿರುತ್ತೀರಿ ಅಂದಮೇಲೆ ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು.

ಬಾಪ್ದಾದಾರವರು ಹೃದಯದಿಂದ ಬಯಸುತ್ತಾರೆ – ಒಂದು ಮಗುವೂ ಸಹ ಹಿಂದುಳಿಯಬಾರದು. ಜೊತೆಯಲ್ಲಿ ನಡೆಯಬೇಕು. ಹಿಂದೆ-ಹಿಂದೆ ಬರುವುದು ಚೆನ್ನಾಗಿದೆಯೆನಿಸುವುದಿಲ್ಲ. ಜೊತೆಯಿರಬೇಕು, ಕೈಯಲ್ಲಿ ಕೈಯಿರಬೇಕು, ಮನೆಗೆ ನಡೆಯಬೇಕಲ್ಲವೆ. ರಿಟರ್ನ್ ಜರ್ನಿಯಾಗಿದೆ. ಅದಕ್ಕಾಗಿ ಹೇಗೆ ಬ್ರಹ್ಮಾ ತಂದೆ ಫರಿಶ್ತೆಯಾದರು, ಹಾಗೆಯೇ ಫಾಲೋ ಫಾದರ್. ಸಾಕಾರದಲ್ಲಿರುತ್ತಾ ಫರಿಶ್ತಾ, ಯಾರನ್ನೇ ನೋಡಿದರು ಫರಿಶ್ತಾ, ಫರಿಶ್ತಾ ಆಗಿರಬೇಕು, ಆಗ ಗೇಟ್ ತೆರೆಯುವುದು. ಒಳ್ಳೆಯದು- ಎಲ್ಲಾ ಮಕ್ಕಳಿಗೆ ಸದಾ ಅದೃಷ್ಟವಂತ, ಪ್ರಸನ್ನಚಿತ್ತ ಸ್ವರೂಪದ ನೆನಪು-ಪ್ರೀತಿ.

ವರದಾನ:
ತಮ್ಮ ಏಕಾಗ್ರ ಸ್ವರೂಪದ ಮೂಲಕ ಸೂಕ್ಷ್ಮ ಶಕ್ತಿಯ ಲೀಲೆಗಳ ಅನುಭವ ಮಾಡುವಂತಹ ಅಂತರ್ಮುಖಿ ಭವ.

ಏಕಾಗ್ರತೆಯ ಆಧಾರ ಅಂತರ್ಮುಖತೆಯಾಗಿದೆ. ಯಾರು ಅಂತರ್ಮುಖಿಗಳಾಗಿರುತ್ತಾರೆ ಅವರು ಒಳಗೊಳಗೆ ಸೂಕ್ಷ್ಮ ಶಕ್ತಿಯ ಲೀಲೆಗಳ ಅನುಭವ ಮಾಡುತ್ತಾರೆ. ಆತ್ಮಗಳ ಆಹ್ವಾನ ಮಾಡುವುದು, ಆತ್ಮಗಳ ಜೊತೆ ಆತ್ಮಿಕ ಸಂಭಾಷಣೆ ಮಾಡುವುದು, ಆತ್ಮಗಳ ಸಂಸ್ಕಾರ ಸ್ವಭಾವವನ್ನು ಪರಿವರ್ತನೆ ಮಾಡುವುದು, ತಂದೆಯ ಜೊತೆ ಸಂಬಂಧವನ್ನು ಜೋಡಿಸುವುದು - ಈ ರೀತಿಯ ಆತ್ಮಗಳ ಲೋಕದಲ್ಲಿ ಆತ್ಮೀಯ ಸೇವೆ ಮಾಡುವುದಕ್ಕೋಸ್ಕರ ಏಕಾಗ್ರತೆಯ ಶಕ್ತಿಯನ್ನು ಎಚ್ಚಿಸಿಕೊಳ್ಳಿ, ಇದರಿಂದ ಸರ್ವಪ್ರಕಾರದ ವಿಘ್ನಗಳು ಸ್ವತಃವಾಗಿ ಸಮಾಪ್ತಿಯಾಗಿ ಬಿಡುವುದು.

ಸ್ಲೋಗನ್:
ಸರ್ವ ಪ್ರಾಪ್ತಿಗಳನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ವಿಶ್ವದ ಸ್ಟೇಜ್ ಮೇಲೆ ಪ್ರತ್ಯಕ್ಷ ಆಗುವುದೇ ಪ್ರತ್ಯಕ್ಷತೆಗೆ ಆಧಾರವಾಗಿದೆ.

ಅವ್ಯಕ್ತ ಸೂಚನೆ:- ಪರೋಪಕಾರದ ಭಾವನೆಯಿಂದ ಸಂಪನ್ನರಾಗಿ ಅಪಕಾರಿ ಮೇಲೆಯೂ ಉಪಕಾರ ಮಾಡಿ.

ಯಾರಾದರೂ ಪ್ರತಿದಿನ ನಿಮ್ಮ ನಿಂದನೆ ಮಾಡಲಿ, ಅವರು ಸದಾ ಅಕಲ್ಯಾಣ ಮಾಡಲಿ, ನೀವು ಅವರಿಂದ ದೂರ ಹೋಗುವುದರ ಬದಲಾಗಿ ಅವರದ್ದು ಕಲ್ಯಾಣ ಮಾಡುತ್ತಾ ಇರಿ, ಇದೇ ನೀವು ಜ್ಞಾನಿ ತ್ವ ಆತ್ಮರ ಕರ್ತವ್ಯವಾಗಿದೆ. ಹೇಗೆ ತಂದೆಯ ಮಹಿಮೆಯಲ್ಲಿ ವಿಶೇಷ ದಯಾಹೃದಯದ ಗುಣ ಗಾಯನ ಮಾಡಲಾಗುತ್ತದೆ. ಅವರು ದೇಶದವರಿರಲಿ, ವಿದೇಶದವರಿರಲಿ ತಂದೆಯ ಮುಂದೆ ಹೋದರೆ ದಯಾಹೃದಯು ಹೇಳುವುದು. ನಿವೆಲ್ಲರೂ ಮಾಸ್ಟರ್ ದಯಾಹೃದಯಿಗಳಾಗಿರಿ. ಇಂತಹ ದಯಾಹೃದಯಿಗಳಾಗಿ ಎಲ್ಲರ ಮೇಲೆ ಉಪಕಾರ ಮಾಡಿರಿ.