25.11.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳುವ ಚಿಂತೆಯಿರಲಿ, ಯಾವುದೇ ನಿರ್ಬಲತೆ ಉಳಿಯಬಾರದು, ಮಾಯೆಯು
ತಪ್ಪು ಮಾಡಿಸದಿರಲಿ”
ಪ್ರಶ್ನೆ:
ನೀವು ಮಕ್ಕಳ
ಬಾಯಿಂದ ಸದಾ ಯಾವ ಶುಭ ಮಾತುಗಳು ಹೊರಡಬೇಕು?
ಉತ್ತರ:
ಬಾಯಿಂದ ಸದಾ ಇದೇ
ಶುಭ ಮಾತುಗಳನ್ನು ಮಾತನಾಡಿ - ನಾವು ನರನಿಂದ ನಾರಾಯಣರು ಆಗುತ್ತೇವೆ, ಕಡಿಮೆ ಪದವಿ ಪಡೆಯುವುದಿಲ್ಲ.
ನಾವೇ ವಿಶ್ವದ ಮಾಲೀಕರಾಗಿದ್ದೆವು, ಈಗ ಪುನಃ ಆಗುತ್ತೇವೆ ಆದರೆ ಈ ಗುರಿಯು ಉನ್ನತವಾಗಿದೆ
ಆದ್ದರಿಂದ ಬಹಳ-ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ತಮ್ಮ ಲೆಕ್ಕ ಪತ್ರವನ್ನೂ ನೋಡಿಕೊಂಡು,
ಗುರಿ-ಧ್ಯೇಯವನ್ನು ಸನ್ಮುಖದಲ್ಲಿಟ್ಟುಕೊಂಡು ಪುರುಷಾರ್ಥ ಮಾಡಬೇಕು, ಇದರಲ್ಲಿ ಹೃದಯಾಘಾತವಾಗಬಾರದು.
ಓಂ ಶಾಂತಿ.
ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ನೀವಿಲ್ಲಿ ನೆನಪಿನ ಯಾತ್ರೆಯಲ್ಲಿ
ಕುಳಿತುಕೊಂಡಾಗ ಸಹೋದರ-ಸಹೋದರಿಯರಿಗೆ ಇದನ್ನು ತಿಳಿಸಿ - ತಾವು ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ
ಮತ್ತು ತಂದೆಯನ್ನು ನೆನಪು ಮಾಡಿ. ಈ ಸ್ಮೃತಿ ತರಿಸಬೇಕು, ನಿಮಗೀಗ ಈ ಸ್ಮೃತಿಯು ಸಿಗುತ್ತಿದೆ -
ನಾವಾತ್ಮರಾಗಿದ್ದೇವೆ, ನಮಗೆ ಓದಿಸಲು ನಮ್ಮ ತಂದೆಯು ಬರುತ್ತಾರೆ. ನಾವೂ ಸಹ ಕರ್ಮೇಂದ್ರಿಯಗಳ ಮೂಲಕ
ಓದುತ್ತೇವೆ. ತಂದೆಯೂ ಕರ್ಮೇಂದ್ರಿಯಗಳ ಆಧಾರವನ್ನು ತೆಗೆದುಕೊಂಡು ಇವರ (ಬ್ರಹ್ಮಾ) ಮೂಲಕ ಮೊಟ್ಟ
ಮೊದಲಿಗೆ ಇದನ್ನೇ ಹೇಳುತ್ತಾರೆ - ತಂದೆಯನ್ನು ನೆನಪು ಮಾಡಿ. ಮಕ್ಕಳಿಗೆ ತಿಳಿಸಿದ್ದಾರೆ - ಇದು
ಜ್ಞಾನ ಮಾರ್ಗವಾಗಿದೆ, ಇದಕ್ಕೆ ಭಕ್ತಿಮಾರ್ಗವೆಂದು ಹೇಳುವುದಿಲ್ಲ. ಜ್ಞಾನವನ್ನು ಕೇವಲ ಒಬ್ಬ
ಜ್ಞಾನ ಸಾಗರ, ಪತಿತ-ಪಾವನನೇ ಕೊಡುತ್ತಾರೆ. ನಿಮಗೆ ಮೊದಲನೆಯದಾಗಿ ಇದೇ ಪಾಠವು ಸಿಗುತ್ತದೆ -
ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಇದು ಬಹಳ ಅವಶ್ಯವಾಗಿದೆ. ಮತ್ತ್ಯಾವುದೇ
ಸತ್ಸಂಗದಲ್ಲಿ ಯಾರೂ ಈ ರೀತಿ ಹೇಳುವುದಿಲ್ಲ. ಭಲೆ ಇತ್ತೀಚೆಗೆ ಅನೇಕ ಸಂಸ್ಥೆಗಳಾಗಿವೆ. ನಿಮ್ಮಿಂದ
ಕೇಳಿ ಯಾರಾದರೂ ಅದನ್ನು ಅನ್ಯರಿಗೆ ಹೇಳಿದರೂ ಸಹ ಅದರ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.
ಅವರಿಗೆ ತಿಳಿಸಿ ಕೊಡುವ ಶೈಲಿಯು ಬರುವುದಿಲ್ಲ. ಇದನ್ನು ನಿಮಗೇ ತಂದೆಯು ತಿಳಿಸುತ್ತಾರೆ.
ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವವು. ವಿವೇಕವು ಹೇಳುತ್ತದೆ - ಇದು
ಹಳೆಯ ಪ್ರಪಂಚವಾಗಿದೆ, ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚದಲ್ಲಿ ಬಹಳ ಅಂತರವಿದೆ. ಅದು ಪಾವನ
ಪ್ರಪಂಚ, ಇದು ಪತಿತ ಪ್ರಪಂಚವಾಗಿದೆ. ಹೇ ಪತಿತ-ಪಾವನ ಬನ್ನಿ, ಬಂದು ಪಾವನರನ್ನಾಗಿ ಮಾಡಿ ಎಂದು
ಕರೆಯುತ್ತಾರೆ. ಗೀತೆಯಲ್ಲಿಯೂ ಸಹ ನನ್ನೊಬ್ಬನನ್ನೆ ನೆನಪು ಮಾಡಿ ಎಂಬ ಶಬ್ಧವಿದೆ. ದೇಹದ ಸರ್ವ
ಸಂಬಂಧಗಳನ್ನು ತ್ಯಾಗ ಮಾಡಿ ತನ್ನನ್ನು ಆತ್ಮನೆಂದು ತಿಳಿಯಿರಿ. ಈ ದೇಹದ ಸಂಬಂಧಗಳು ಮೊದಲು
ಇರಲಿಲ್ಲ, ನೀವಾತ್ಮಗಳು ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೀರಿ. ಒಂಟಿಯಾಗಿ ಬಂದೆವು,
ಒಂಟಿಯಾಗಿ0ಯೇ ಹೋಗಬೇಕೆಂಬ ಗಾಯನವಿದೆ, ಇದರ ಅರ್ಥವನ್ನು ಮನುಷ್ಯರು ತಿಳಿದುಕೊಂಡಿಲ್ಲ. ನೀವೀಗ ಇದರ
ಅರ್ಥವನ್ನು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ. ನಾವೀಗ ನೆನಪಿನ ಯಾತ್ರೆಯಿಂದ ಅಥವಾ ನೆನಪಿನ
ಬಲದಿಂದ ಪಾವನರಾಗುತ್ತಿದ್ದೇವೆ. ಇದೇ ರಾಜಯೋಗ ಬಲವಾಗಿದೆ. ಅವರದು ಹಠಯೋಗವಾಗಿದೆ, ಅದರಿಂದ
ಮನುಷ್ಯರು ಸ್ವಲ್ಪ ಸಮಯಕ್ಕಾಗಿ ಆರೋಗ್ಯವಾಗಿ ಇರುತ್ತಾರೆ. ಸತ್ಯಯುಗದಲ್ಲಿ ನೀವು ಎಷ್ಟು
ಆರೋಗ್ಯವಂತರಾಗಿರುತ್ತೀರೋ ಹಠಯೋಗದ ಅವಶ್ಯಕತೆಯೇ ಇರುವುದಿಲ್ಲ. ಇವೆಲ್ಲವನ್ನೂ ಇಲ್ಲಿ ಈ ಛೀ ಛೀ
ಪ್ರಪಂಚದಲ್ಲಿ ಮಾಡುತ್ತಾರೆ. ಇದು ಹಳೆಯ ಪ್ರಪಂಚವಾಗಿದೆ. ಸತ್ಯಯುಗ ಹೊಸ ಪ್ರಪಂಚವು ಯಾವುದು ಮೊದಲು
ಇತ್ತೋ ಅದರಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದು ಯಾರಿಗೂ ತಿಳಿದಿಲ್ಲ. ಅಲ್ಲಿ ಪ್ರತಿಯೊಂದು
ವಸ್ತು ಹೊಸದಾಗಿರುತ್ತದೆ. ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ ಎಂದು ಗೀತೆಯೂ ಇದೆಯಲ್ಲವೆ.
ನವಯುಗವೆಂದರೆ ಸತ್ಯಯುಗವಾಗಿದೆ, ಹಳೆಯ ಯುಗವು ಕಲಿಯುಗವಾಗಿದೆ. ಈಗ ಇದಕ್ಕೆ ಯಾರೂ ಸತ್ಸಂಗವೆಂದು
ಹೇಳುವುದಿಲ್ಲ. ತಂದೆಯು ಸ್ಮೃತಿಗೆ ತರಿಸಿದ್ದಾರೆ - ಈಗ ಕಲಿಯುಗವಾಗಿದೆ, ನೀವು ಸತ್ಯಯುಗಕ್ಕಾಗಿ
ಓದುತ್ತೀರಿ. ಈ ವಿದ್ಯೆಯಿಂದ ನಿಮಗೆ ಹೊಸ ಪ್ರಪಂಚದಲ್ಲಿ ರಾಜ್ಯ ಪದವಿ ಸಿಗುತ್ತದೆಯೆಂದು ಹೇಳುವ
ಅಥವಾ ಇಂತಹ ವಿದ್ಯೆಯನ್ನು ಓದಿಸುವವರು ಮತ್ತ್ಯಾರೂ ಇರುವುದಿಲ್ಲ. ನೀವು ಮಕ್ಕಳಿಗೆ ಪ್ರತಿಯೊಂದು
ಮಾತಿನ ಸ್ಮೃತಿ ತರಿಸಲಾಗುತ್ತದೆ ಆದ್ದರಿಂದ ಹುಡುಗಾಟಿಕೆ ಮಾಡಬೇಡಿ. ತಂದೆಯು ಎಲ್ಲರಿಗೆ
ತಿಳಿಸುತ್ತಿರುತ್ತಾರೆ - ಎಲ್ಲಿಯಾದರೂ ಕುಳಿತುಕೊಳ್ಳಿ, ಉದ್ಯೋಗ-ವ್ಯವಹಾರಗಳನ್ನು ಮಾಡಿ ಆದರೆ
ತನ್ನನ್ನು ಆತ್ಮನೆಂದು ತಿಳಿದು ಮಾಡಿ. ಉದ್ಯೋಗ-ವ್ಯವಹಾರಗಳಲ್ಲಿ ಏನೇ ಕಷ್ಟವಿದ್ದರೂ ಸಹ ಎಷ್ಟು
ಸಾಧ್ಯವೋ ಸಮಯವನ್ನು ತೆಗೆದು ನೆನಪಿನಲ್ಲಿ ಕುಳಿತುಕೊಳ್ಳಿ ಆಗಲೇ ಆತ್ಮವು ಪವಿತ್ರವಾಗುವುದು.
ಮತ್ತ್ಯಾವುದೇ ಉಪಾಯವಿಲ್ಲ. ನೀವು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಪತಿತ
ಆತ್ಮರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಮಾಯೆಯು ಆತ್ಮನ ರೆಕ್ಕೆಗಳನ್ನು ಕತ್ತರಿಸಿ ಹಾಕಿದೆ.
ಆತ್ಮವೇ ಹಾರುತ್ತದೆಯಲ್ಲವೆ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ.
ಆತ್ಮವು ಎಲ್ಲದಕ್ಕಿಂತ ತೀಕ್ಷ್ಣ ರಾಕೆಟ್ ಆಗಿದೆ. ನೀವು ಮಕ್ಕಳಿಗೆ ಈ ಹೊಸ-ಹೊಸ ಮಾತುಗಳನ್ನು ಕೇಳಿ
ಆಶ್ಚರ್ಯವೆನಿಸುತ್ತದೆ. ಆತ್ಮವು ಎಷ್ಟು ಚಿಕ್ಕ ರಾಕೆಟ್ ಆಗಿದೆ ಆದರೆ ಅದರಲ್ಲಿ 84 ಜನ್ಮಗಳ
ಪಾತ್ರವು ಅಡಕವಾಗಿದೆ. ಇಂತಹ ಮಾತುಗಳನ್ನು ನೆನಪಿಟ್ಟುಕೊಂಡಾಗ ಉಮ್ಮಂಗ ಬರುವುದು. ಶಾಲೆಯಲ್ಲಿ
ವಿದ್ಯಾರ್ಥಿಗಳ ಬುದ್ಧಿಯಲ್ಲಿ ವಿದ್ಯೆಯು ನೆನಪಿರುತ್ತದೆಯಲ್ಲವೆ. ಈಗ ನಿಮ್ಮ ಬುದ್ಧಿಯಲ್ಲಿ ಏನಿದೆ?
ಬುದ್ಧಿಯು ಶರೀರದಲ್ಲಿಲ್ಲ, ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆ. ಆತ್ಮವೇ ಓದುತ್ತದೆ, ನೌಕರಿ
ಇತ್ಯಾದಿಗಳೆಲ್ಲವನ್ನೂ ಆತ್ಮವೇ ಮಾಡುತ್ತದೆ. ಶಿವ ತಂದೆಯೂ ಸಹ ಆತ್ಮನಾಗಿದ್ದಾರೆ ಆದರೆ ಅವರಿಗೆ
ಪರಮ ಆತ್ಮನೆಂದು ಹೇಳುತ್ತಾರೆ. ಅವರು ಜ್ಞಾನ ಸಾಗರನಾಗಿದ್ದಾರೆ, ಅತಿ ಚಿಕ್ಕ ಬಿಂದುವಾಗಿದ್ದಾರೆ.
ಆ ತಂದೆಯಲ್ಲಿ ಯಾವ ಸಂಸ್ಕಾರವಿದೆಯೋ ಅದನ್ನೇ ನೀವು ಮಕ್ಕಳಲ್ಲಿ ತುಂಬುತ್ತಾರೆ. ಇದೂ ಸಹ ಯಾರಿಗೂ
ತಿಳಿದಿಲ್ಲ. ನೀವೀಗ ಯೋಗಬಲದಿಂದ ಪಾವನರಾಗುತ್ತಿದ್ದೀರಿ, ಅದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ.
ಎಲ್ಲಿ ಅನುತ್ತೀರ್ಣರಾಗಿ ಬಿಡುತ್ತೇವೆಯೋ ಎಂದು ವಿದ್ಯೆಯಲ್ಲಿ ಚಿಂತೆಯಿರುತ್ತದೆ. ಇಲ್ಲಿ ಮೊಟ್ಟ
ಮೊದಲನೆಯ ವಿಷಯವೇ ಆಗಿದೆ - ನಾವಾತ್ಮರು ಸತೋಪ್ರಧಾನವಾಗಬೇಕು. ಯಾವ ನಿರ್ಬಲತೆಯೂ ಉಳಿಯಬಾರದು,
ಇಲ್ಲವಾದರೆ ಅನುತ್ತೀರ್ಣರಾಗಿ ಬಿಡುತ್ತೇವೆ. ಮಾಯೆಯು ನಿಮಗೆ ಪ್ರತೀ ಮಾತಿನಲ್ಲಿ ಮರೆಸುತ್ತದೆ.
ಚಾರ್ಟ್ ಇಡಬೇಕೆಂದು ಆತ್ಮವೂ ಬಯಸುತ್ತದೆ. ಇಡೀ ದಿನದಲ್ಲಿ ಯಾವುದೇ ಆಸುರೀ ಕೆಲಸ ಮಾಡಬಾರದು ಎಂಬ
ಸಂಕಲ್ಪವೂ ಇರುತ್ತದೆ ಆದರೆ ಮಾಯೆಯು ಚಾರ್ಟ್ ಇಡಲು ಬಿಡುವುದಿಲ್ಲ. ನೀವು ಮಾಯೆಯ ವಶದಲ್ಲಿ ಬಂದು
ಬಿಡುತ್ತೀರಿ, ಚಾರ್ಟ್ ಇಡಬೇಕೆಂದು ಮನಸ್ಸು ಹೇಳುತ್ತದೆ. ವ್ಯಾಪಾರಿಗಳು ಯಾವಾಗಲೂ ಲಾಭ-ನಷ್ಟದ
ಲೆಕ್ಕವನ್ನಿಡುತ್ತಾರೆ. ನಿಮ್ಮದೂ ಸಹ ಇದು ದೊಡ್ಡ ಲೆಕ್ಕಾಚಾರವಾಗಿದೆ. 21 ಜನ್ಮಗಳ ಸಂಪಾದನೆಯಾಗಿದೆ
ಅಂದಾಗ ಇದರಲ್ಲಿ ಹುಡುಗಾಟಿಕೆ ಮಾಡಬಾರದು. ಮಕ್ಕಳು ಬಹಳ ಹುಡುಗಾಟಿಕೆ ಮಾಡುತ್ತಾರೆ. ಈ ತಂದೆ (ಬ್ರಹ್ಮಾ)
ಯನ್ನಂತೂ ನೀವು ಸೂಕ್ಷ್ಮವತನದಲ್ಲಿ ಹಾಗೂ ಸ್ವರ್ಗದಲ್ಲಿಯೂ ನೋಡುತ್ತೀರಿ. ಇವರು ಬಹಳ ಪುರುಷಾರ್ಥ
ಮಾಡುತ್ತಾರೆ. ಇವರಿಗೂ ಆಶ್ಚರ್ಯವೆನಿಸುತ್ತದೆ - ತಂದೆಯ ನೆನಪಿನಲ್ಲಿ ಸ್ನಾನ ಮಾಡುತ್ತೇನೆ, ಭೋಜನ
ಸ್ವೀಕರಿಸುತ್ತೇನೆ ಆದರೂ ಸಹ ಮರೆತು ಹೋಗುತ್ತೇನೆ ಮತ್ತೆ ನೆನಪು ಮಾಡಬೇಕಾಗುತ್ತದೆ. ಇದೇ ಅತಿ
ದೊಡ್ಡ ಸಬ್ಜೆಕ್ಟ್ ಆಗಿದೆ. ಈ ಮಾತಿನಲ್ಲಿ ಯಾವುದೇ ಮತ ಭೇದ ಬರಲು ಸಾಧ್ಯವಿಲ್ಲ. ಗೀತೆಯಲ್ಲಿಯೂ ಇದೆ
– ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಡಿ ಎಂದು. ಅಂದಮೇಲೆ ಇನ್ನು ಉಳಿಯುವುದು ಆತ್ಮ ಮಾತ್ರ.
ದೇಹವನ್ನು ಮರೆತು ತನ್ನನ್ನು ಆತ್ಮನೆಂದು ತಿಳಿಯಿರಿ, ಆತ್ಮವೇ ಪತಿತ-ತಮೋಪ್ರಧಾನವಾಗಿದೆ ಆದರೆ
ಮನುಷ್ಯರು ಆತ್ಮವು ನಿರ್ಲೇಪವಾಗಿದೆ, ಆತ್ಮನೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳಿ
ಬಿಡುತ್ತಾರೆ ಆದ್ದರಿಂದ ಆತ್ಮದಲ್ಲಿ ಯಾವುದೇ ಲೇಪ ಚೇಪವು ಅಂಟುವುದಿಲ್ಲವೆಂದು ತಿಳಿಯುತ್ತಾರೆ.
ತಮೋಗುಣಿ ಮನುಷ್ಯರಾಗಿರುವ ಕಾರಣ ತಮೋಗುಣಿ ಶಿಕ್ಷಣವನ್ನೇ ಕೊಡುತ್ತಾರೆ. ಸತೋಗುಣಿಗಳನ್ನಾಗಿ ಮಾಡಲು
ಅವರಿಂದ ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ತಮೋಪ್ರಧಾನರಾಗಲೇಬೇಕಾಗಿದೆ. ಪ್ರತೀ ವಸ್ತು ಮೊದಲು
ಸತೋಪ್ರಧಾನ, ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ. ಸ್ಥಾಪನೆ ಮತ್ತು ವಿನಾಶವಾಗುತ್ತದೆ. ತಂದೆಯು
ಹೊಸ ಪ್ರಪಂಚದ ಸ್ಥಾಪನೆ ಮಾಡಿಸುತ್ತಾರೆ ನಂತರ ಈ ಹಳೆಯ ಪ್ರಪಂಚದ ವಿನಾಶವಾಗಿ ಬಿಡುತ್ತದೆ.
ಭಗವಂತನಂತೂ ಹೊಸ ಪ್ರಪಂಚವನ್ನು ರಚಿಸುವವರಾಗಿದ್ದಾರೆ, ಈ ಹಳೆಯ ಪ್ರಪಂಚವು ಬದಲಾಗಿ ಹೊಸದಾಗುವುದು.
ಹೊಸ ಪ್ರಪಂಚದ ಚಿಹ್ನೆಯಾಗಿ ಈ ಲಕ್ಷ್ಮೀ-ನಾರಾಯಣರಿದ್ದಾರಲ್ಲವೆ. ಇವರು ಹೊಸ ಪ್ರಪಂಚದ
ಮಾಲೀಕರಾಗಿದ್ದಾರೆ, ತ್ರೇತಾಯುಗಕ್ಕೂ ಹೊಸ ಪ್ರಪಂಚವೆಂದು ಹೇಳುವುದಿಲ್ಲ. ಕಲಿಯುಗಕ್ಕೆ ಹಳೆಯದು,
ಸತ್ಯಯುಗಕ್ಕೆ ಹೊಸದೆಂದು ಹೇಳಲಾಗುವುದು. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಇದು
ಸಂಗಮಯುಗವಾಗಿದೆ. ಯಾರಾದರೂ ಎಂ.ಎ., ಬಿ.ಎ ಓದುತ್ತಾರೆಂದರೆ ಉನ್ನತ ಪದವಿಯನ್ನು ಪಡೆಯುತ್ತಾರಲ್ಲವೆ.
ನೀವು ಈ ವಿದ್ಯೆಯಿಂದ ಎಷ್ಟು ಶ್ರೇಷ್ಠರಾಗುತ್ತೀರಿ! ಇವರನ್ನು ಇಷ್ಟು ಶ್ರೇಷ್ಠರನ್ನಾಗಿ ಯಾರು
ಮಾಡಿದರು? ಎಂಬ ಮಾತು ಪ್ರಪಂಚದವರಿಗೂ ತಿಳಿದಿಲ್ಲ. ನೀವೀಗ ಆದಿ-ಮಧ್ಯ-ಅಂತ್ಯವನ್ನು
ಅರಿತುಕೊಂಡಿದ್ದೀರಿ. ಎಲ್ಲರ ಜೀವನ ಚರಿತ್ರೆಯನ್ನು ನೀವು ತಿಳಿದುಕೊಂಡಿದ್ದೀರಿ. ಇದೇ ಜ್ಞಾನವಾಗಿದೆ.
ಭಕ್ತಿಯಲ್ಲಿ ಜ್ಞಾನವಿಲ್ಲ, ಕೇವಲ ಕರ್ಮ ಕಾಂಡವನ್ನು ಕಲಿಸುತ್ತಾರೆ. ಭಕ್ತಿಯು ವಿಸ್ತಾರವಾಗಿದೆ,
ಎಷ್ಟೊಂದು ವರ್ಣನೆ ಮಾಡುತ್ತಾರೆ! ಭಕ್ತಿಯು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಬೀಜದಲ್ಲಿ
ಸೌಂದರ್ಯವಿರುವುದಿಲ್ಲ, ಇಷ್ಟು ಚಿಕ್ಕ ಬೀಜದಿಂದ ಎಷ್ಟು ದೊಡ್ಡ ವೃಕ್ಷವಾಗಿ ಬಿಡುತ್ತದೆ. ಇದು
ಭಕ್ತಿಯ ವೃಕ್ಷವಾಗಿದೆ, ಬಹಳಷ್ಟು ಕರ್ಮ ಕಾಂಡವಿದೆ. ಜ್ಞಾನದ ಗುಟುಕು ಒಂದೇ ಆಗಿದೆ - ಮನ್ಮನಾಭವ.
ತಂದೆಯು ತಿಳಿಸುತ್ತಾರೆ - ತಮೋಪ್ರಧಾನರಿಂದ ಸತೋಪ್ರಧಾನರಾಗಲು ನನ್ನನ್ನು ನೆನಪು ಮಾಡಿ. ಹೇ
ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿ ಎಂದು ನೀವೇ ಹೇಳುತ್ತೀರಿ ಏಕೆಂದರೆ ರಾವಣ ರಾಜ್ಯದಲ್ಲಿ
ಎಲ್ಲರೂ ಪತಿತ, ದುಃಖಿಯಾಗಿದ್ದಾರೆ. ರಾಮ ರಾಜ್ಯದಲ್ಲಿ ಎಲ್ಲರೂ ಪಾವನ, ಸುಖಿಯಾಗಿರುತ್ತಾರೆ. ರಾಮ
ರಾಜ್ಯ, ರಾವಣ ರಾಜ್ಯ ಎಂಬ ಹೆಸರಂತೂ ಇದೆ ಆದರೆ ರಾಮ ರಾಜ್ಯವನ್ನು ಕುರಿತು ನೀವು ಮಕ್ಕಳವಿನಃ
ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ. 84 ಜನ್ಮಗಳ ರಹಸ್ಯವು
ನಿಮ್ಮ ವಿನಃ ಯಾರಿಗೂ ತಿಳಿದಿಲ್ಲ. ಭಲೆ ಭಗವಾನುವಾಚ - ಮನ್ಮನಾಭವ ಎಂದು ಹೇಳುತ್ತಾರೆ. ಈಗ ಈ
ಚಕ್ರವು ಮುಕ್ತಾಯವಾಗುತ್ತದೆ, ಆದರೆ ನಿಮ್ಮ 84 ಜನ್ಮಗಳು ಹೇಗೆ ಪೂರ್ಣವಾಗುತ್ತದೆ ಎಂಬ ಮಾತನ್ನು
ಯಾರೂ ತಿಳಿಸುವುದಿಲ್ಲ. ಗೀತೆಯನ್ನು ಓದಿ ತಿಳಿಸುವವರ ಬಳಿ ಹೋಗಿ ಕೇಳಿರಿ - ಗೀತೆಯಲ್ಲಿ ಏನು
ಹೇಳುತ್ತಾರೆ. ನಿಮ್ಮ ಬುದ್ಧಿಯಲ್ಲಂತೂ ಈಗ ಇಡೀ ಜ್ಞಾನವು ಹನಿಯುತ್ತಿರುತ್ತದೆ. ತಂದೆಯು
ಕೇಳುತ್ತಾರೆ - ಮಕ್ಕಳೇ, ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ಹೌದು ಬಾಬಾ, ಕಲ್ಪದ ಮೊದಲೂ ಮಿಲನ
ಮಾಡಿದ್ದೆವು ಎಂದು ಹೇಳುತ್ತಾರೆ. ತಂದೆಯು ಕೇಳುತ್ತಾರೆ ಮತ್ತು ನೀವು ಅರ್ಥ ಸಹಿತವಾಗಿ ಉತ್ತರ
ಕೊಡುತ್ತೀರಿ. ಕೇವಲ ಗಿಳಿಯ ತರಹ ಹೇಳಿ ಬಿಡುವುದಲ್ಲ. ಮತ್ತೆ ತಂದೆಯೂ ಕೇಳುತ್ತಾರೆ - ಒಳ್ಳೆಯದು,
ಏಕೆ ಮಿಲನ ಮಾಡಿದ್ದಿರಿ, ಏನನ್ನು ಪ್ರಾಪ್ತಿ ಮಾಡಿಕೊಂಡಿದ್ದಿರಿ. ಆಗ ನೀವು ಹೇಳಿ - ನಾವು ವಿಶ್ವದ
ರಾಜ್ಯವನ್ನು ಪಡೆದಿದ್ದೆವು, ಅದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ನರನಿಂದ ನಾರಾಯಣನಾಗಿದ್ದೆವು
ಎಂದು ಭಲೆ ನೀವು ಹೇಳುತ್ತೀರಿ ಆದರೆ ವಿಶ್ವದ ಮಾಲೀಕರಾಗುವುದು ಎಂದರೆ ಅದರಲ್ಲಿ ರಾಜ-ರಾಣಿ ಮತ್ತು
ದೈವೀ ರಾಜಧಾನಿಯೆಲ್ಲವೂ ಇರುತ್ತದೆ. ರಾಜ-ರಾಣಿ, ಪ್ರಜೆಗಳು ಎಲ್ಲವೂ ಬಂದು ಬಿಡುತ್ತದೆ. ಇದಕ್ಕೆ
ಶುಭ ನುಡಿಯುವುದು ಎಂದು ಹೇಳಲಾಗುತ್ತದೆ. ನಾವಂತೂ ನರನಿಂದ ನಾರಾಯಣನೇ ಆಗುತ್ತೇನೆ. ಕಡಿಮೆ
ಪದವಿಯನ್ನಲ್ಲ ಎಂದು ಮಕ್ಕಳು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಹೌದು ಮಕ್ಕಳೆ
ಪೂರ್ಣ ಪುರುಷಾರ್ಥ ಮಾಡಿ. ಈಗಿನ ಪುರುಷಾರ್ಥದನುಸಾರ ನಾವು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಯೇ
ಅಥವಾ ಇಲ್ಲವೆ? ಎಷ್ಟು ಮಂದಿಗೆ ಮಾರ್ಗವನ್ನು ತಿಳಿಸಿದ್ದೇನೆ? ಎಷ್ಟು ಜನ ಅಂಧರಿಗೆ
ಊರುಗೋಲಾಗಿದ್ದೇನೆ? ಎಂದು ತಮ್ಮ ಲೆಕ್ಕಪತ್ರವನ್ನು ನೋಡಿಕೊಳ್ಳಿ. ಒಂದುವೇಳೆ ಸರ್ವೀಸ್
ಮಾಡಲಿಲ್ಲವೆಂದರೆ ನಾವು ಪ್ರಜೆಗಳಲ್ಲಿ ಹೋಗುತ್ತೇವೆಂದು ತಿಳಿಯಿರಿ. ತಮ್ಮೊಂದಿಗೆ ಕೇಳಿಕೊಳ್ಳಿ -
ಒಂದುವೇಳೆ ನಾವೀಗ ಶರೀರವನ್ನು ಬಿಟ್ಟರೆ ಯಾವ ಪದವಿಯನ್ನು ಪಡೆಯುತ್ತೇವೆ? ಬಹಳ ದೊಡ್ಡ ಗುರಿಯಾಗಿದೆ
ಆದ್ದರಿಂದ ಎಚ್ಚರಿಕೆಯಿಂದಿರಿ. ನಾವಂತೂ ನೆನಪೇ ಮಾಡುವುದಿಲ್ಲ ಅಂದಮೇಲೆ ಚಾರ್ಟನ್ನೇಕೆ ಇಡುವುದೆಂದು
ಕೆಲವು ಮಕ್ಕಳು ತಿಳಿಯುತ್ತಾರೆ. ಅದಕ್ಕೆ ಹೃದಯಾಘಾತವಾಗುವುದೆಂದು ಹೇಳಲಾಗುತ್ತದೆ. ಅಂತಹವರು
ಗಮನವನ್ನೂ ಕೊಡುವುದಿಲ್ಲ, ಓದುವುದೂ ಇಲ್ಲ. ಎಲ್ಲವನ್ನು ಅರಿತವನೆಂದು ತಿಳಿದು ಕುಳಿತುಕೊಂಡರೆ
ಅಂತಿಮದಲ್ಲಿ ಅನುತ್ತೀರ್ಣರಾಗುವಿರಿ. ತಮ್ಮ ಕಲ್ಯಾಣ ಮಾಡಿಕೊಳ್ಳಬೇಕು. ಗುರಿ-ಧ್ಯೇಯವಂತೂ
ಸನ್ಮುಖದಲ್ಲಿದೆ, ನಾವು ಓದಿ ಈ ರೀತಿಯಾಗಬೇಕು. ಇದೂ ಸಹ ಆಶ್ಚರ್ಯವಲ್ಲವೆ. ಕಲಿಯುಗದಲ್ಲಿ
ರಾಜಧಾನಿಯಿಲ್ಲ ಅಂದಮೇಲೆ ಇವರಿಗೆ ಸತ್ಯಯುಗದಲ್ಲಿ ಈ ರಾಜ್ಯಭಾಗ್ಯವು ಎಲ್ಲಿಂದ ಬಂದಿತು? ಅಂದರೆ
ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ದೇವತೆಗಳು ಮತ್ತು ಅಸುರರ ಯುದ್ಧವಾಯಿತು, ದೇವತೆಗಳು
ಜಯಗಳಿಸಿ ರಾಜ್ಯಪಡೆದರು ಎಂದಲ್ಲ. ಅಸುರರು ಮತ್ತು ದೇವತೆಗಳ ಯುದ್ಧವಾಗಲು ಹೇಗೆ ಸಾಧ್ಯ? ಕೌರವರು
ಮತ್ತು ಪಾಂಡವರ ಯುದ್ಧವೂ ಆಗಲಿಲ್ಲ. ಯುದ್ಧದ ಮಾತೇ ನಿಷೇಧವಾಗಿ ಬಿಡುತ್ತದೆ. ಮೊದಲಿಗೆ ಈ ಮಾತನ್ನು
ತಿಳಿಸಿ, ತಂದೆಯು ಹೇಳುತ್ತಾರೆ - ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು
ತಿಳಿಯಿರಿ. ನೀವಾತ್ಮಗಳು ಅಶರೀರಿಯಾಗಿ ಬಂದಿದ್ದೀರಿ ಮತ್ತೆ ಈಗ ಹಿಂತಿರುಗಿ ಹೋಗಬೇಕಾಗಿದೆ ಆದರೆ
ಪವಿತ್ರ ಆತ್ಮಗಳೇ ಹಿಂತಿರುಗಿ ಹೋಗಲು ಸಾಧ್ಯ. ತಮೋಪ್ರಧಾನ ಆತ್ಮಗಳು ಹೋಗಲು ಸಾಧ್ಯವಿಲ್ಲ. ಆತ್ಮದ
ರೆಕ್ಕೆಗಳಂತೂ ತುಂಡರಿಸಲ್ಪಟ್ಟಿದೆ, ಮಾಯೆಯು ಪತಿತರನ್ನಾಗಿ ಮಾಡಿದೆ. ತಮೋಪ್ರಧಾನರಾಗಿರುವ ಕಾರಣ
ಅಷ್ಟು ದೂರ ಪವಿತ್ರ ಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಈಗ ನಿಮ್ಮ ಆತ್ಮವು ಹೇಳುತ್ತದೆ - ನಾವು
ಮೂಲತಃ ಪರಮಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿ ಪಾತ್ರವನ್ನಭಿನಯಿಸಲು ಈ ಪಂಚ ತತ್ವಗಳ ಗೊಂಬೆ (ಶರೀರ)
ಯನ್ನು ತೆಗೆದುಕೊಂಡಿದ್ದೀರಿ. ಯಾರಾದರೂ ಮರಣ ಹೊಂದಿದಾಗ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ,
ಆದದ್ದು ಯಾರು? ಅಲ್ಲಿ ಶರೀರವು ಹೋಯಿತೋ, ಆತ್ಮವು ಹೋಯಿತೋ? ಶರೀರವಂತೂ ಇಲ್ಲಿ ಸುಟ್ಟು ಹೋಯಿತು
ಆದರೆ ಆತ್ಮವೇ ಉಳಿಯಿತು. ಅದು ಸ್ವರ್ಗದಲ್ಲಂತೂ ಹೋಗಲು ಸಾಧ್ಯವಿಲ್ಲ. ಮನುಷ್ಯರಂತೂ ಯಾರೇನು
ತಿಳಿಸುವರೋ ಅದನ್ನು ಹೇಳುತ್ತಿರುತ್ತಾರೆ. ಭಕ್ತಿಮಾರ್ಗದವರು ಭಕ್ತಿಯನ್ನೇ ಕಲಿಸಿದ್ದಾರೆ. ಯಾರ
ಯಥಾರ್ಥ ಪರಿಚಯವೂ ಗೊತ್ತಿಲ್ಲ. ಶಿವನ ಪೂಜೆಯು ಎಲ್ಲದಕ್ಕಿಂತ ಶ್ರೇಷ್ಠವೆಂದು ಹೇಳುತ್ತಾರೆ. ಶಿವನೇ
ಸರ್ವ ಶ್ರೇಷ್ಠನಾಗಿದ್ದಾನೆ, ಅವನನ್ನೇ ನೆನಪು ಮಾಡಿ, ಸ್ಮರಣೆ ಮಾಡಿ ಎಂದು ಮಾಲೆಯನ್ನು ಕೊಡುತ್ತಾರೆ.
ಶಿವ, ಶಿವ ಎಂದು ಹೇಳಿ ಮಾಲೆಯನ್ನು ಜಪಿಸುತ್ತಾ ಇರಿ ಎಂದು ಹೇಳುತ್ತಾರೆ. ಅರ್ಥವಿಲ್ಲದೆ ಮಾಲೆಯನ್ನು
ಹಿಡಿದುಕೊಂಡು ಶಿವ, ಶಿವ ಎನ್ನುತ್ತಿರುತ್ತಾರೆ. ಹೀಗೆ ಗುರುಗಳು ಅನೇಕ ಪ್ರಕಾರದ ಶಿಕ್ಷಣಗಳನ್ನು
ಕೊಡುತ್ತಾರೆ. ಆದರೆ ಇಲ್ಲಿ ಒಂದೇ ಮಾತಾಗಿದೆ - ಸ್ವಯಂ ತಂದೆಯೇ ತಿಳಿಸುತ್ತಾರೆ, ನನ್ನನ್ನು ನೆನಪು
ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಬಾಯಿಂದ ಶಿವ, ಶಿವ ಎಂದು ಹೇಳಬೇಕಾಗಿಲ್ಲ. ಮಕ್ಕಳು
ತಂದೆಯ ನಾಮಸ್ಮರಣೆ ಮಾಡುತ್ತಾರೆಯೇ ! ಇದೆಲ್ಲವೂ ಗುಪ್ತವಾಗಿದೆ. ನೀವು ಏನು ಮಾಡುತ್ತಿದ್ದೀರಿ
ಎಂಬುದು ಯಾರಿಗೂ ಗೊತ್ತಿಲ್ಲ. ಕಲ್ಪದ ಹಿಂದೆ ಯಾರು ತಿಳಿದುಕೊಂಡಿದ್ದರೋ ಅವರೇ ಬಂದು
ತಿಳಿದುಕೊಳ್ಳುತ್ತಾರೆ. ಹೊಸ-ಹೊಸ ಮಕ್ಕಳು ಬರುತ್ತಾ ವೃದ್ಧಿ ಹೊಂದುತ್ತಿರುತ್ತಾರೆ. ಮುಂದೆ ಹೋದಂತೆ
ಡ್ರಾಮಾ ಏನೇನು ತೋರಿಸುತ್ತದೆ ಎಂಬುದನ್ನು ಸಾಕ್ಷಿಯಾಗಿ ನೋಡಬೇಕಾಗಿದೆ. ತಂದೆಯು ಹೀಗೀಗೆ ಆಗುತ್ತದೆ
ಎಂದು ಮೊದಲೇ ಸಾಕ್ಷಾತ್ಕಾರ ಮಾಡಿಸುವುದಿಲ್ಲ. ಒಂದುವೇಳೆ ಹಾಗೆ ಮಾಡಿಸಿದರೆ ಅದು ಆರ್ಟಿಫಿಷಿಯಲ್
ಆಗಿ ಬಿಡುತ್ತದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನಿಮಗೆ ತಿಳುವಳಿಕೆ ಸಿಗುತ್ತದೆ.
ಭಕ್ತಿ ಮಾರ್ಗದಲ್ಲಿ ತಿಳುವಳಿಕೆಹೀನರಾಗಿದ್ದಿರಿ, ಈಗ ನಿಮಗೆ ತಿಳಿದಿದೆ - ಭಕ್ತಿಯೂ ಸಹ
ಡ್ರಾಮಾದಲ್ಲಿ ನಿಗಧಿಯಾಗಿದೆ.
ಈಗ ನೀವು ಮಕ್ಕಳು
ತಿಳಿದುಕೊಳ್ಳುತ್ತೀರಿ - ನಾವು ಈ ಹಳೆಯ ಪ್ರಪಂಚದಲ್ಲಿ ಇನ್ನು ಇರುವುದಿಲ್ಲ. ವಿದ್ಯಾರ್ಥಿಗೆ
ವಿದ್ಯೆಯೇ ಬುದ್ಧಿಯಲ್ಲಿರುತ್ತದೆ. ನೀವೂ ಸಹ ಈ ಮುಖ್ಯ-ಮುಖ್ಯ ಮಾತುಗಳನ್ನು ಬುದ್ಧಿಯಲ್ಲಿ ಧಾರಣೆ
ಮಾಡಿಕೊಳ್ಳಬೇಕಾಗಿದೆ. ಮೊಟ್ಟ ಮೊದಲನೆಯ ಮಾತು – ತಂದೆಯ ಪ್ರತಿ ಪಕ್ಕಾ ಮಾಡಿ ನಂತರ ಮುಂದೆ ಹೋಗಿ
ಇಲ್ಲವಾದರೆ ವ್ಯರ್ಥವಾಗಿ ಏನೇನನ್ನೋ ಕೇಳುತ್ತಿರುತ್ತಾರೆ. ಮಕ್ಕಳು ಕೆಲವರು ಬರೆಯುತ್ತಾರೆ - ಬಾಬಾ,
ಗೀತೆಯ ಭಗವಂತನು ಶಿವನಾಗಿದ್ದಾರೆ, ಇದಂತೂ ಸಂಪೂರ್ಣ ಸರಿಯಾಗಿದೆ ಎಂದು ಬರೆದು ಕೊಟ್ಟಿದ್ದಾರೆ ಎಂದು
ಹೇಳುತ್ತಾರೆ. ಭಲೆ ಈ ರೀತಿ ಹೇಳುತ್ತಾರೆ, ಅವರಿಗೆ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ.
ಒಂದುವೇಳೆ ಅವರಿಗೆ ತಂದೆಯು ಬಂದಿದ್ದಾರೆಂಬುದು ಅರ್ಥವಾಗಿರುವುದಾದರೆ ನಾವು ಹೋಗಿ ತಂದೆಯೊಂದಿಗೆ
ಮಿಲನ ಮಾಡಬೇಕು, ಆಸ್ತಿಯನ್ನು ತೆಗೆದುಕೊಳ್ಳಬೇಕೆಂದು ಹೇಳುವರು ಆದರೆ ಒಬ್ಬರಿಗೂ ನಿಶ್ಚಯ
ಕುಳಿತುಕೊಳ್ಳುವುದಿಲ್ಲ. ಅಂತಹ ಪತ್ರಗಳೇ ಬರುವುದಿಲ್ಲ. ಭಲೆ ಜ್ಞಾನವು ಚೆನ್ನಾಗಿದೆ ಎಂದು
ಬರೆಯುತ್ತಾರೆ ಆದರೆ ಅಂತಹ ತಂದೆಯು ಯಾರಿಂದ ನಾವು ಇಷ್ಟು ಸಮಯ ದೂರ ಉಳಿದಿದ್ದೆವು,
ಭಕ್ತಿಮಾರ್ಗದಲ್ಲಿ ಎಷ್ಟು ಅಲೆದಾಡಿದೆವು. ಈಗ ಆ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡಲು
ಬಂದಿದ್ದಾರೆ, ನಾವು ಅವರ ಬಳಿ ಹೋಗಲೇಬೇಕು ಎನ್ನುವ ಧೈರ್ಯವು ಯಾರಿಗೂ ಇಲ್ಲ. ಮುಂದೆ ಹೋದಂತೆ
ಅವಶ್ಯವಾಗಿ ಬರುತ್ತಾರೆ, ಒಂದುವೇಳೆ ತಂದೆಯನ್ನು ಅರಿತುಕೊಂಡಿದ್ದೀರಿ, ಅವರೇ ಸರ್ವ ಶ್ರೇಷ್ಠ
ಭಗವಂತನಾಗಿದ್ದಾರೆ ಎಂಬುದು ಅರ್ಥವಾಗಿದೆ ಎನ್ನುವುದಾದರೆ ಅವರ ಮಕ್ಕಳಾಗಬೇಕಲ್ಲವೆ. ಅವರ ಬುದ್ಧಿಯ
ಬೀಗವು ತೆರೆಯುವಂತೆ ತಿಳುವಳಿಕೆ ಕೊಡಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ಆತ್ಮವನ್ನು ಪಾವನ ಮಾಡಿಕೊಳ್ಳುವುದಕ್ಕಾಗಿ ಸಮಯ ತೆಗೆದು
ನೆನಪಿನ ಪರಿಶ್ರಮ ಪಡಬೇಕಾಗಿದೆ. ಎಂದೂ ಯಾವುದೇ ಆಸುರೀ ಕರ್ಮ ಮಾಡಬಾರದು.
2. ತನ್ನ ಮತ್ತು ಅನ್ಯರ
ಕಲ್ಯಾಣ ಮಾಡಬೇಕಾಗಿದೆ. ವಿದ್ಯೆಯನ್ನು ಓದಬೇಕು ಮತ್ತು ಓದಿಸಬೇಕಾಗಿದೆ. ನಾನೇ ಎಲ್ಲಾ ಅರಿತವನೆಂದು
ತಿಳಿಯಬಾರದು. ನೆನಪಿನ ಬಲವನ್ನು ಜಮಾ ಮಾಡಿಕೊಳ್ಳಬೇಕಾಗಿದೆ.
ವರದಾನ:
ಹೆಸರು ಮತ್ತು
ಮಾನ ತ್ಯಾಗದ ಮುಖಾಂತರ ಸರ್ವರಿಂದ ಪ್ರೀತಿಯನ್ನು ಗಳಿಸುವಂತಹ ವಿಶ್ವದ ಭಾಗ್ಯವಿಧಾತ ಭವ.
ಹೇಗೆ ತಂದೆಯನ್ನು ನಾಮ
ರೂಪದಿಂದ ನ್ಯಾರಾ ಎಂದು ಹೇಳುವಿರಿ ಆದರೆ ಎಲ್ಲರಿಗಿಂತಲೂ ಅಧಿಕ ಹೆಸರಿನ ಗಾಯನ ತಂದೆಯದಿದೆ, ಅದೇ
ರೀತಿ ನೀವೂ ಸಹಾ ಅಲ್ಪಕಾಲದ ನಾಮ ಮತ್ತು ಮಾನದಿಂದ ನ್ಯಾರಾ ಆಗಿ ಆಗ ಸದಾ ಕಾಲಕ್ಕಾಗಿ ಸರ್ವರಿಗೆ
ಪ್ರಿಯ ಸ್ವತಃವಾಗಿ ಆಗಿ ಬಿಡುವಿರಿ. ಯಾರು ನಾಮ-ಮಾನದ ಭಿಕಾರಿತನದ ತ್ಯಾಗ ಮಾಡುತ್ತಾರೆ ಅವರು
ವಿಶ್ವದ ಭಾಗ್ಯವಿಧಾತ ಆಗಿ ಬಿಡುತ್ತಾರೆ. ಕರ್ಮದ ಫಲವಂತೂ ಸ್ವತಃ ನಿಮ್ಮ ಮುಂದೆ ಸಂಪನ್ನ
ಸ್ವರೂಪದಲ್ಲಿ ಬರುತ್ತದೆ ಆದ್ದರಿಂದ ಅಲ್ಪಕಾಲದ ಇಚ್ಛಾ ಮಾತ್ರಂ ಅವಿದ್ಯೆ ಆಗಿ. ಕಚ್ಚಾ ಫಲ ತಿನ್ನ
ಬೇಡಿ, ಅದರ ತ್ಯಾಗ ಮಾಡಿದ್ದೇ ಆದರೆ ಭಾಗ್ಯ ನಿಮ್ಮ ಹಿಂದೆ ಬರುತ್ತದೆ.
ಸ್ಲೋಗನ್:
ಪರಮಾತ್ಮ ತಂದೆಯ
ಮಕ್ಕಳಾಗಿರುವಿರಿ ಅಂದಾಗ ಬುದ್ಧಿರೂಪಿ ಕಾಲು ಸದಾ ಸಿಂಹಾಸನಾಧಿಕಾರಿಯಾಗಿರುತ್ತದೆ.
ಅವ್ಯಕ್ತ ಸೂಚನೆ:-
ಅಶರೀರಿ ಅಥವಾ ವಿದೇಹಿ ಸ್ಥಿತಿಯ ಅಭ್ಯಾಸ ಹೆಚ್ಚಿಸಿ.
ಯಾವುದೇ ಸೇವೆಯ ಪ್ಲಾನ್
ಮಾಡುತ್ತೀರಿ, ಭಲೇ ಮಾಡಿ, ಬಲೆ ಯೋಚಿಸಿ, ಆದರೆ ಏನಾಗುವುದು!... ಆಶ್ಚರ್ಯವಂತರಾಗಿ ಅಲ್ಲ. ವಿದೇಹಿ,
ಸಾಕ್ಷಿಯಾಗಿ ಯೋಚಿಸಿ. ಯೋಚಿಸಿದ್ದೀರಿ, ಪ್ಲಾನ್ ತಯಾರು ಮಾಡಿದ್ದೀರಿ ಹಾಗೂ ಸೆಕೆಂಡ್ ನಲ್ಲಿ
ಪ್ಲೇನ್ ಸ್ಥಿತಿ ಆಗುತ್ತಾ ಹೋಗಿ. ಈಗ ಈ ಸ್ಥಿತಿ ಯ ಅವಶ್ಯಕತೆ ಇದೆ. ಈ ವಿದೇಹಿ ಸ್ಥಿತಿ
ಪರಿಸ್ಥಿತಿಯನ್ನು ಸಹಜವಾಗಿ ಪಾರು ಮಾಡಿ ಬಿಡುವುದು. ಹೇಗೆಂದರೆ - ಮೋಡಗಳು ಬರುತ್ತದೆ, ಹೊರಟು
ಹೋಗುತ್ತದೆ. ವಿದೇಹಿ, ಅಚಲ ಅಡೋಲ ಆಗಿ ಆಟವನ್ನು ನೋಡುತ್ತಿರುತ್ತಾರೆ.