26.04.26    Avyakt Bapdada     Kannada Murli    31.12.2009     Om Shanti     Madhuban


“ಹೊಸ ವರ್ಷದಲ್ಲಿ ಎಲ್ಲಾ ಆತ್ಮರಿಗೆ ಸಂದೇಶವನ್ನು ಕೊಟ್ಟು ಗೋಲ್ಡನ್ ಪ್ರಪಂಚದ ಉಡುಗೊರೆ ಕೊಡಿ, ತಂದೆಯ ಸಮಾನರಾಗಲು ಆತ್ಮಾಭಿಮಾನಿ ಆಗುವ ಸ್ವಭಾವವನ್ನು ಸ್ವಾಭಾವಿಕವಾಗಿ ಮಾಡಿಕೊಳ್ಳಿ”


ಈ ದಿನ ಬಾಪ್ದಾದಾರವರು ಪ್ರತಿಯೊಬ್ಬ ಮಗುವನ್ನು ಸ್ನೇಹ ಮತ್ತು ಬಾಪ್ದಾದಾರವರ ಪ್ರೀತಿಯಲ್ಲಿ ಲವಲೀನರಾಗಿರುವ ಸ್ವರೂಪದಲ್ಲಿ ನೋಡುತ್ತಿದ್ದೇವೆ. ಒಬ್ಬೊಬ್ಬ ಮಗು ಪರಮಾತ್ಮನ ಪ್ರೀತಿಯಲ್ಲಿ ಹೊಳೆಯುತ್ತಿದ್ದಾರೆ. ಎಲ್ಲಾ ಮಕ್ಕಳು ಪ್ರೀತಿಯ ವಿಮಾನದಲ್ಲಿ ತಲುಪಿ ಬಿಟ್ಟಿದ್ದಾರೆ. ಹಾಗೆ ನೋಡುವುದಾದರೆ ಹೊಸ ವರ್ಷವನ್ನು ಆಚರಿಸಲು ಬಂದಿದ್ದೀರಿ ಆದರೆ ಎಲ್ಲರ ಕಣ್ಣುಗಳಲ್ಲಿ ಏನು ಕಂಡು ಬರುತ್ತಿದೆ? ಹೊಸ ವರ್ಷ ನಿಮಿತ್ತ ಮಾತ್ರವಾಗಿದೆ ಆದರೆ ತಮ್ಮೆಲ್ಲರ ನಯನಗಳಲ್ಲಿ (ಕಣ್ಣುಗಳಲ್ಲಿ) ಯಾವ ಉತ್ಸಾಹವಿದೆ? ಮೂರು ಅಭಿನಂದನೆಗಳನ್ನು ನೀಡುತ್ತಿದ್ದೀರಿ, ಮೊದಲನೆಯದು ತಮ್ಮ ಹೊಸ ಜೀವನದ ಅಭಿನಂದನೆ ಮತ್ತು ಎರಡನೆಯದು ಹೊಸ ಯುಗದ ಅಭಿನಂದನೆ ಮತ್ತು ಮೂರನೆಯದು ಪರಿವಾರ ಮತ್ತು ತಂದೆಯ ಮಿಲನದ ಅಭಿನಂದನೆ. ತಮ್ಮ ಕಣ್ಣುಗಳಲ್ಲಿ ಏನು ಕಾಣುತ್ತಿದೆ? ತಮ್ಮ ನವ ಯುಗ ಮುಂದೆ ಬರುತ್ತಿದೆಯಲ್ಲವೇ. ಹೃದಯದಲ್ಲಿ ಉತ್ಸಾಹ ಬರುತ್ತಿದೆ, ನವಯುಗ ಬಂದೇ ಬಿಟ್ಟಿತು ಎಂಬ ಒಲವು ಬರುತ್ತಿದೆ. ಹೊಸ ಯುಗದ ಹೊಳೆಯುತ್ತಿರುವ ಡ್ರೆಸ್ ಎಷ್ಟೊಂದು ಎದುರಿನಲ್ಲಿ ಸ್ಪಷ್ಟವಾಗಿದೆ, ಈ ದಿನ ಸಂಗಮದಲ್ಲಿದ್ದೀರಿ ಮತ್ತು ಆದಷ್ಟು ಬೇಗ ಈ ಹೊಳೆಯುವ ಡ್ರೆಸ್ನ್ನು ಧರಿಸಬೇಕಾಗಿದೆ. ಸನ್ಮುಖದಲ್ಲಿ ನೋಡಿ-ನೋಡಿ ಸಂತೋಷ ಪಡುತ್ತಿದ್ದೀರಿ, ಬೀಳ್ಕೊಡಿಗೆಯನ್ನೂ ಕೊಡುತ್ತಿದ್ದೀರಿ ಮತ್ತು ಅಭಿನಂದನೆಯನ್ನೂ ಪಡೆಯುತ್ತಿದ್ದೀರಿ. ಹೇಗೆ ಹಳೆಯ ವರ್ಷಕ್ಕೆ ಬೀಳ್ಕೊಡಿಗೆಯನ್ನು ಕೊಡುತ್ತೀರಿ ನಂತರ ಆ ವರ್ಷ ಮರೆತು ಹೋಗುತ್ತದೆ. ಹೊಸ ವರ್ಷವೇ ಎದುರಿನಲ್ಲಿ ಬರುತ್ತದೆ. ಹಾಗೆಯೇ ತಮ್ಮ ಮುಂದೆ ಹಳೆಯ ಜಗತ್ತಿಗೆ ಅಭಿನಂದನೆ ಇಲ್ಲ ಆದರೆ ಹೊಸ ಜಗತ್ತಿನ ಅಭಿನಂದನೆಯನ್ನು ನೀಡುತ್ತಿದ್ದೀರಿ. ಹಳೆಯ ಜಗತ್ತಿಗೆ ಬೀಳ್ಕೊಡುಗೆಯನ್ನು ಕೊಡುತ್ತಿದ್ದೀರಿ ಅಂದಾಗ ಈ ದಿನ ಎಲ್ಲರಿಗೂ ಹೊಸ ಯುಗದ ಒಲವು-ಉತ್ಸಾಹವಿದೆ, ಜನರೂ ಸಹ ಹೊಸ ವರ್ಷದ ಶುಭಾಶಯಗಳನ್ನು ನೀಡುತ್ತಾರೆ ಮತ್ತು ಜೊತೆ-ಜೊತೆಗೆ ಉಡುಗೊರೆಯನ್ನೂ ಕೊಡುತ್ತಾರೆ ಅಂದಾಗ ಬಾಪ್ದಾದಾರವರೂ ಸಹ ಎಲ್ಲಾ ಮಕ್ಕಳಿಗೆ ಹಳೆಯ ಸ್ವಭಾವ-ಸಂಸ್ಕಾರದ ವಿದಾಯಿಯನ್ನು ಕೊಟ್ಟು ಹೊಸ ಜಗತ್ತಿನಲ್ಲಿ ಹೋಗುವ ಉಡುಗೊರೆಯನ್ನು ನೀಡುತ್ತಿದ್ದಾರೆ. ಯಾವ ಹೊಸ ಜಗತ್ತಿನಲ್ಲಿ ಪ್ರಾಪ್ತಿಯೇ ಪ್ರಾಪ್ತಿ ಇದೆ, ಸರಳವಾಗಿ ಹೇಳುವುದಾದರೆ ಅಪ್ರಾಪ್ತವಾದಂತಹ ಯಾವುದೇ ವಸ್ತು ಹೊಸ ಜಗತ್ತಿನಲ್ಲಿ ಇಲ್ಲ. ಇಂತಹ ಹೊಸ ಜಗತ್ತಿನ ಉಡುಗೊರೆಯನ್ನು ಬಾಪ್ದಾದಾರವರು ತಾವು ಪ್ರತಿಯೊಬ್ಬ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಿದ್ದೇವೆ. ತಮಗೂ ಸಹ ನಶೆ ಇದೆಯಲ್ಲವೇ, ನಾವು ಸ್ವರ್ಣಿಮ ಜಗತ್ತಿಗೆ ಅಧಿಕಾರಿಗಳಾಗುತ್ತಿದ್ದೇವೆ ಎಂಬ ನಶೆ ತಮಗೂ ಸಹ ಇದೆಯಲ್ಲವೇ. ಇಂತಹ ಉಡುಗೊರೆಯನ್ನು ಮತ್ತೆ ಯಾರೂ ಕೊಡಲು ಸಾಧ್ಯವಿಲ್ಲ. ತಂದೆ ಪ್ರತಿಯೊಬ್ಬ ಮಗುವಿಗೆ ಇದೇ ಸಲಹೆಯನ್ನು ನೀಡಿದ್ದಾರೆ, ಎಲ್ಲಾ ಆತ್ಮರಿಗೆ ತಂದೆಯ ಆಸ್ತಿ ಹೊಸ ಜಗತ್ತಿನ ಸಂದೇಶವನ್ನು ಕೊಟ್ಟು ಅವರಿಗೂ ಸಹ ಉಡುಗೊರೆಯನ್ನು ಕೊಡಿ ತಮ್ಮ ಬಳಿ ಯಾವ ಉಡುಗೊರೆ ಇದೆ? ಒಂದು ಹೊಸ ಜಗತ್ತಿನ ಉಡುಗೊರೆಯನ್ನು ಕೊಡಿ ಮತ್ತೊಂದು ತಮ್ಮ ಬಳಿ ಬಹಳಷ್ಟು ಖಜಾನೆ ಇದೆ. ಗುಣದ ಖಜಾನೆ, ಶಕ್ತಿಯ ಖಜಾನೆ, ಸ್ವಮಾನದ ಖಜಾನೆ ಎಷ್ಟೊಂದು ಖಜಾನೆ ಇದೆ ಅಂದಾಗ ಎಲ್ಲರಿಗೂ ಒಂದಲ್ಲ ಒಂದು ಗುಣ, ಶಕ್ತಿಯನ್ನು ಉಡುಗೊರೆಯಾಗಿ ಕೊಡಿ. ಈ ಉಡುಗೊರೆಯಿಂದ ಅವರ ಜೀವನ ಪರಿವರ್ತನೆ ಆಗಲಿ ಮತ್ತು ಸ್ವರ್ಣಿಮ ಪ್ರಪಂಚಕ್ಕೆ ಅಧಿಕಾರಿಗಳಾಗಲಿ ಏಕೆಂದರೆ ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೀರಿ ನಾಲ್ಕೂ ಕಡೆ ದುಃಖ-ಅಶಾಂತಿ ಹೆಚ್ಚುತ್ತಿದೆ, ನಾಲ್ಕೂ ಕಡೆ ಭಯ ಮತ್ತು ಅಶಾಂತಿ ಪ್ರತಿಯೊಬ್ಬರಲ್ಲಿ ಇದೆ. ಇಂತಹ ದುಃಖಿ-ಅಶಾಂತಿ ಆತ್ಮರಿಗೆ ಕೊನೆ ಪಕ್ಷ ಸಂದೇಶವನ್ನಂತೂ ನೀಡಿ. ಈಗ ತಂದೆ ಬಂದಿದ್ದಾರೆ, ಈಗಿನಿಂದಲೇ ತಂದೆಯ ಅವಿನಾಶಿ ಆಸ್ತಿಗೆ ಅಧಿಕಾರಿ ಆಗಿ. ಈ ಸಂದೇಶವನ್ನು ಪ್ರತಿಯೊಬ್ಬ ಆತ್ಮನಿಗೆ ನೀಡುತ್ತಲೂ ಇದ್ದೀರಿ ಆದರೆ ಈಗಲೂ ಸಹ ಕೆಲವು ತಂದೆಯ ಮಕ್ಕಳು ಸಂದೇಶದಿಂದಲೂ ಸಹ ವಂಚಿತರಾಗಿ ಉಳಿದಿದ್ದಾರೆ. ಆದರೂ ಸಹ ಒಬ್ಬ ತಂದೆಯ ಮಕ್ಕಳಲ್ಲವೇ. ತಮ್ಮ ಸಹೋದರ-ಸಹೋದರಿಯರಿಗೆ ಈ ಸಂದೇಶದ ಉಡುಗೊರೆಯನ್ನು ಅವಶ್ಯವಾಗಿ ನೀಡಿ. ಯಾರೂ ಉಳಿದುಕೊಳ್ಳಬಾರದು. ಸೇವೆಯನ್ನು ಮಾಡುತ್ತಿದ್ದೀರಿ, ಬಾಪ್ದಾದಾರವರಿಗೆ ಮಕ್ಕಳ ಸೇವೆಯನ್ನು ನೋಡಿ ಸಂತೋಷವಿದೆ ಆದರೆ ತಂದೆಯ ಆಸೆ ಇದೆ ಆಗಿದೆ - ನನ್ನ ಯಾವುದೇ ಮಗೂ ಸಹ ಸಂದೇಶದಿಂದ ವಂಚಿತರಾಗಬಾರದಾಗಿದೆ, ತಮಗೆ ಸ್ವರ್ಣಿಮ ಯುಗದ ಉಡುಗೊರೆ ಸಿಕ್ಕಿತು ನಮಗೆ ಇದು ತಿಳಿಯಲೇ ಇಲ್ಲ, ನಮ್ಮ ತಂದೆ ಬಂದಿದ್ದರೂ ನಮಗೆ ಸಂದೇಶ ಸಿಗಲೇ ಇಲ್ಲ ಎಂಬ ದೂರನ್ನು ಹೇಳಬಾರದು, ಆದ್ದರಿಂದ ಈ ಹೊಸ ವರ್ಷದಲ್ಲಿ ಇದೇ ಪ್ರಯತ್ನವನ್ನು ಮಾಡಿ, ಯಾವುದೇ ಮೂಲೆ ಉಳಿದುಕೊಳ್ಳಬಾರದು ಎಂದು ಪರಸ್ಪರ ಪ್ಲಾನ್ ಮಾಡಿಕೊಳ್ಳಿ, ದೂರು ಹೇಳಬಾರದು ಮತ್ತು ಖುಷಿಯಾಗಿರಬೇಕು. ನಮ್ಮ ತಂದೆ ಬಂದಿದ್ದಾರೆ ಎಂಬುದು ಗೊತ್ತಾಗಬೇಕು. ವಂಚಿತರಾಗಿ ಉಳಿಯಬಾರದು ಅಂದಾಗ ಈ ಹೊಸ ವರ್ಷದಲ್ಲಿ ಏನು ಮಾಡುತ್ತೀರಿ? ಪರಸ್ಪರ ಸೇರಿ ಪ್ಲಾನ್ ಮಾಡಿ. ಬಾಪ್ದಾದಾರವರಿಗೆ ಪ್ರತಿಯೊಬ್ಬ ಮಗುವಿನ ಮೇಲೆ ದಯೆ ಬರುತ್ತದೆ, ನಿಮಗೂ ಸಹ ತಮ್ಮ ಸಹೋದರ-ಸಹೋದರಿಯರ ಮೇಲೆ ಈಗ ವಿಶೇಷ ದಯಾಹೃದಯಿ ಆಗಿ ಕಲ್ಯಾಣಕಾರಿ ಸ್ವರೂಪದ ಧಾರಣೆ ಮಾಡಿಕೊಂಡು ಎಲ್ಲರಿಗೆ ಸಂದೇಶವನ್ನು ಕೊಡಬೇಕು. ಕೊನೆಯ ಪಕ್ಷ ಇಂತಹ ದೂರನ್ನು ಹೇಳದಂತಿರಲಿ.

ಈ ದಿನ ಎಲ್ಲಾ ಮಕ್ಕಳು ಹೊಸ ವರ್ಷವನ್ನು ಆಚರಿಸಲು ಬಹಳ ಒಲವು-ಉತ್ಸಾಹದಿಂದ ತಲುಪಿದ್ದೀರಿ. ಬಾಪ್ದಾದಾರವರು ಒಬ್ಬೊಬ್ಬ ಮಗುವನ್ನು ನೋಡಿ ಯಾವ ಗೀತೆಯನ್ನು ಹಾಡುತ್ತಾರೆ? ತಿಳಿದಿದ್ದೀರಲ್ಲವೇ! ವಾಹ್! ಭಲೆ ಮಕ್ಕಳೇ ಭಲೆ, ಯಾರು ಮೊದಲನೆಯ ಬಾರಿ ಬಂದಿದ್ದಾರೆ ಅವರಿಗೂ ಸಹ ಬಾಪ್ದಾದಾ ಅದೃಷ್ಟವಂತರು ಎಂದು ಹೇಳುತ್ತಿದ್ದೇವೆ. ಸಮಯ ಸಮಾಪ್ತಿಗೆ ಮೊದಲೇ ಬಾಪ್ದಾದಾರವರ ಮಗು ಆಗಿರುವಿರಿ. ಹೊಸ ಮಕ್ಕಳಿಗೆ ಬಾಪ್ದಾದಾ ಪದಮಾಪದಮ ಗುಣದಷ್ಟು ಅದೃಷ್ಟವಂತರಾಗುವ ಶುಭಾಶಯಗಳನ್ನು ನೀಡುತ್ತಿದ್ದೇವೆ. ಇತ್ತೀಚಿಗೆ ಬಾಪ್ದಾದಾರವರು ಪ್ರತಿಯೊಬ್ಬ ಮಗುವಿನಲ್ಲಿ ನೋಡಲು ಬಯಸುತ್ತೇವೆ ಅದು ಯಾವುದು ಎಂದು ತಿಳಿದಿದ್ದೀರಾ? ಹೇಗೆ ಪ್ರತಿಯೊಬ್ಬರ ಹೃದಯದಲ್ಲಿ ಉತ್ಸಾಹವಿದೆ, ಲಕ್ಷ್ಯವಿದೆ, ಗುರಿ ಇದೆ, ನಾವು ತಂದೆಯ ಸಮಾನ ಆಗಲೇಬೇಕಾಗಿದೆ, ಆಗುತ್ತೇವೆ, ಆಗುವವರಿದ್ದೇವೆ, ಅಂದಾಗ ಎಂತಹ ಲಕ್ಷ್ಯವೋ, ಲಕ್ಷ್ಯದ ಜೊತೆ ಲಕ್ಷಣಗಳನ್ನೂ ನೋಡಲು ಬಾಪ್ದಾದಾರವರು ಬಯಸುತ್ತಾರೆ. ಹೇಗೆ ಸಮಾನರಾಗುವ ಲಕ್ಷ್ಯವಿದೆ ಹಾಗೆಯೇ ಸಮಾನರಾಗುವ ಲಕ್ಷಣಗಳೂ ಸಹ ಇರಬೇಕು. ಈಗ ಲಕ್ಷ್ಯ ಬಹಳ ಶ್ರೇಷ್ಠವಾಗಿದೆ ಆದರೆ ಲಕ್ಷಣಗಳ ಮೇಲೆ ವಿಶೇಷ ಅಟೆನ್ಷನ್ ಕೊಡಬೇಕು. ತಂದೆಯ ಸಮಾನರಾಗುವ, ಎಷ್ಟು ಶ್ರೇಷ್ಠ ಲಕ್ಷ್ಯವಿದೆಯೋ ಅಷ್ಟೇ ಶ್ರೇಷ್ಠ ಲಕ್ಷಣಗಳಿರಬೇಕು. ಈಗಂತೂ ಕೆಲವು ಮಕ್ಕಳು ಲಕ್ಷಣಗಳನ್ನು ಧಾರಣೆ ಮಾಡಲು ಬಯಸುತ್ತಾರೆ ಆದರೆ ಮಧ್ಯ-ಮಧ್ಯದಲ್ಲಿ ಬಹಳ ಬಯಸುತ್ತೇವೆ ಆದರೆ... ಎಂದು ಹೇಳುತ್ತಾರೆ. ಆದರೆ ಈ ಆದರೆ ಎನ್ನುವುದು ಇರಬಾರದು. ತಮ್ಮ ಚಲನೆ ಮತ್ತು ಚೆಹರೆಯಿಂದ ದೂರದಿಂದಲೇ ಎಷ್ಟು ದೊಡ್ಡ ಲಕ್ಷ್ಯವೋ, ಅಷ್ಟು ಲಕ್ಷಣಗಳು ಚೆಹರೆಯಿಂದ ಕಂಡು ಬರಬೇಕು. ಹೇಗೆ ತಾವು ಮೊದಲು ದೇಹಾಭಿಮಾನದಲ್ಲಿ ಇದ್ದಿರಿ ಆದರೆ ಯಾವಾಗ ದೇಹಾಭಿಮಾನದಲ್ಲಿ ಇದ್ದಾಗ ದೇಹಾಭಿಮಾನದ ಸ್ವಭಾವ ಸ್ವಾಭಾವಿಕವಾಗಿತ್ತು, ಎಂದಾದರು ದೇಹಾಭಿಮಾನ ಬರಲಿ ಎಂದು ಪುರುಷಾರ್ಥ ಮಾಡಿದ್ದೀರೇನು? ಸ್ವಾಭಾವಿಕವಾಗಿ ದೇಹಾಭಿಮಾನದ ಸ್ವಭಾವ ಇತ್ತು. ಅರ್ಧಕಲ್ಪ ಪುರುಷಾರ್ಥ ಮಾಡಿಲ್ಲ, ಅದೇ ರೀತಿ ಈಗ ದೇಹಿ-ಅಭಿಮಾನಿ ಆಗುವ ಸ್ವಭಾವ ಸ್ವಾಭಾವಿಕವಿದೆಯೇ? ದೇಹಾಭಿಮಾನದ ಸ್ವಭಾವ ಸ್ವಾಭಾವಿಕವಾಗಿತ್ತು, ಕೆಲವೊಮ್ಮೆ ದೇಹಾಭಿಮಾನದಲ್ಲಿ ಬರುವ ನೆನಪು ಬರುತ್ತಿದೆಯೇ, ಅದಕ್ಕಾಗಿ ಪುರುಷಾರ್ಥ ಮಾಡಿದ್ದೀರಾ? ಈಗಲೂ ದೇಹಾಭಿಮಾನ ಮತ್ತು ದೇಹಿ-ಅಭಿಮಾನ ಇದೆ, ಅಂದಾಗ ದೇಹಿ-ಅಭಿಮಾನಿ ಆಗುವುದರಲ್ಲಿ ಪರಿಶ್ರಮ ಏಕೆ? ಏಕೆಂದರೆ ಬಾಪ್ದಾದಾರವರ ಬಳಿ ಕೆಲವೊಮ್ಮೆ ದೇಹಾಭಿಮಾನವನ್ನು ತೆಗೆಯುವ ಪರಿಶ್ರಮ ಪಡಬೇಕಾಗುತ್ತದೆ ಎಂದು ಸಮಾಚಾರ ಬರುತ್ತದೆ. ದೇಹಾಭಿಮಾನ ಸ್ವಾಭಾವಿಕವಾಗಿದಾಗ ದೇಹೀ-ಅಭಿಮಾನಿ ಆಗುವುದರಲ್ಲಿ ಪರಿಶ್ರಮ ಏಕೆ? ಬಾಪ್ದಾದಾರವರಿಗೆ ಪರಿಶ್ರಮ ಪಡುವ ಮಕ್ಕಳು ಇಷ್ಟ ಆಗುವುದಿಲ್ಲ. ಪರಿಶ್ರಮ ಮುಕ್ತರಾಗಿ ಮತ್ತು ಸ್ವಾಭಾವಿಕ ಸ್ವಭಾವ ಆಗಬೇಕು, ಇದನ್ನೇ ಲಕ್ಷ್ಯ ಮತ್ತು ಲಕ್ಷಣ ಸಮಾನ ಎಂದು ಹೇಳಲಾಗುತ್ತದೆ. ನಂತರ ನೀವು ನೋಡಿ - ತಂದೆಯ ಸಮಾನರಾಗುವುದು ಬಹಳ ಸಹಜ ಮತ್ತು ಸ್ವಾಭಾವಿಕವಾಗಿರುತ್ತದೆ. ಹೇಗೆ ಬ್ರಹ್ಮಾತಂದೆಯನ್ನು ನೋಡಿದಿರಿ, ಇಷ್ಟು ದೊಡ್ಡ ಪರಿವಾರದ ಜವಾಬ್ದಾರಿ ಇದ್ದರೂ ಸಹ ದೇಹೀ-ಅಭಿಮಾನದ ಸ್ವಾಭಾವ್ವಿಕವಾದ ಸ್ವಭಾವವಾಗಿತ್ತು. ಮಕ್ಕಳ ಮೇಲೂ ಜವಾಬ್ದಾರಿ ಇದೆ ಆದರೂ ಬ್ರಹ್ಮಾ ತಂದೆಗೆ ಆ ಜವಾಬ್ದಾರಿ ಹೇಗನಿಸುತಿತ್ತು? ಯಾವುದೇ ಜವಾಬ್ದಾರಿ ಇರಲಿ, ಜೋನಿನ ಜವಾಬ್ದಾರಿ ಇರಬಹುದು ಅಥವಾ ಯಜ್ಞದ ಅಫಿಷಿಯಲ್ ಜವಾಬ್ದಾರಿ ಇರಬಹುದು ಆದರೆ ಆ ಜವಾಬ್ದಾರಿ ಬ್ರಹ್ಮಾಬಾಬಾರವರ ಮುಂದೆ ಏನಾಗಿತ್ತು? ಬ್ರಹ್ಮಾಬಾಬಾ ಶಿವಬಾಬಾರವರ ಸಹಯೋಗದಿಂದ ಪ್ರತ್ಯಕ್ಷ ರೂಪದಲ್ಲಿ ಮಾಡಿ-ಮಾಡಿಸುವವರು ಮಾಡಿಸುತ್ತಿದ್ದಾರೆ, ನಾವು ಮಾಡುವವರಾಗಿ ತಂದೆಯ ಸಮಾನ ಭಿನ್ನ ಹಾಗೂ ಪ್ರಿಯರಾಗಿದ್ದೇವೆ ಎಂದು ತೋರಿಸದರು. ತಂದೆಯ ಸಮಾನರಾಗಬೇಕೆಂದರೆ ಏನೇ ಆಗಲಿ, ಮನಸಾ-ವಾಚಾ-ಕರ್ಮಣಾ ಕರ್ತವ್ಯಗಳಿರಲಿ ಆದರೆ ನಾನು ಮಾಡುವವನಾಗಿದ್ದೇನೆ, ಟ್ರಸ್ಟಿ ಆಗಿದ್ದೇನೆ, ಮಾಡಿಸುವ ಮಾಲೀಕ ಶಿವಬಾಬಾ ಆಗಿದ್ದಾರೆ. ಆದರೆ ಮಾಡಿಸುವಂತಹ ಪಾರ್ಟ್ ನಡೆಯುತ್ತಾ-ನಡೆಯುತ್ತಾ ಮರೆತು ಹೋಗುತ್ತದೆ, ಅಂದಾಗ ಲಕ್ಷ್ಯ ಮತ್ತು ಲಕ್ಷಣಗಳನ್ನು ಸಮಾನ ಮಾಡಬೇಕು. ಈಗ ಹಳೆಯ ವರ್ಷಕ್ಕೆ ವಿದಾಯಿ ಕೊಡುವುದರ ಜೊತೆ ಈ ಲಕ್ಷ್ಯವನ್ನು ಲಕ್ಷಣದಲ್ಲಿ ತರಬೇಕು. ಹೊಸ ವರ್ಷವಂತೂ ಹೊಸ ಮಾತಾಗಿದೆ. ಏನು ಮಾಡಲಿ ಮಾಯೆ ಬಂದು ಬಿಡುತ್ತದೆ. ಬಯಸುವುದಿಲ್ಲ ಆದರೆ ಬಂದು ಬಿಡುತ್ತದೆ, ಈ ಶಬ್ದ ಮತ್ತು ಸಂಕಲ್ಪ ಹಳೆಯ ವರ್ಷದ ಜೊತೆ ಇದಕ್ಕೂ ವಿದಾಯಿ ಕೊಟ್ಟು ಬಿಡಿ. ಕೇವಲ ವರ್ಷಕ್ಕೆ ವಿದಾಯಿ ಕೊಡುವುದಲ್ಲ ಮಾಯೆ ಬಾಪ್ದಾದಾರವರ ಬಳಿ ಬರುತ್ತದೆ ಮತ್ತೆ ಏನು ಹೇಳುತ್ತದೆ? ಎಂಬುದು ಬಾಪ್ದಾದಾರವರು ತಿಳಿಸಿದರು. ನಾನಂತೂ ತಿಳಿದುಕೊಳ್ಳುತ್ತೇನೆ ನನಗೆ ಹೋಗುವ ಸಮಯ ಆಗಿದೆ ಆದರೆ ಕೆಲವು ಮಕ್ಕಳು ಆಹ್ವಾನ ಮಾಡುತ್ತಾರೆ, ನಾನು ಏನು ಮಾಡಲಿ? ಇಂದು ಬೀಳ್ಕೊಡಿಗೆ ಜೊತೆ ಮಾಯೆಯ ಭಿನ್ನ-ಭಿನ್ನ ರೂಪಕ್ಕೂ ಸಹ ಬೀಳ್ಕೊಡಿಗೆ ಕೊಡಬೇಕು. ಸಾಹಸವಿದೆಯೇ? ಸಾಹಸವಿದೆಯೇ? ಕೈ ಎತ್ತಿ. ಬೀಳ್ಕೊಡಿಗೆ ಕೊಡುವ ಸಾಹಸವಿದೆಯೇ? ಹಿಂದೆ ಇರುವವರಿಗೆ ಸಾಹಸವಿದೆಯೇ? ಯಾರಲ್ಲಿ ಸಾಹಸವಿದೆಯೋ ಅವರು ಕೈ ಎತ್ತಿ. ತಂದೆ ಈ ಸಾಹಸದ ಬಹಳ ಪದಮಾ ಪದಮದಷ್ಟು ಶುಭಾಶಯಗಳನ್ನು ಕೊಡುತ್ತಿದ್ದಾರೆ. ಏಕೆ? ಬಾಪ್ದಾದಾರವರು ಏಕೆ ಇದರ ಮೇಲೆ ಗಮನ ಸೆಳೆಯುತ್ತಿದ್ದಾರೆ? ಏಕೆಂದರೆ ಪ್ರಪಂಚದ ಪರಿಸ್ಥಿತಿಗಳು ತುಂಬಾ ಜೋರಾಗಿ ಕೆಡುತ್ತಿರುವುದು ತಾವೆಲ್ಲರೂ ನೋಡುತ್ತಿದ್ದೀರಿ. ಮತ್ತು ಬಾಪ್ದಾದಾರವರ ಮಹಾವಾಕ್ಯ ಅಚಾನಕ್ ಆಗುವುದಿದೆ ಎಂದು ಸ್ವಲ್ಪ ಸಮಯದಿಂದ ನಡೆಯುತ್ತಿದೆ. ಅಚಾನಕ್ ಆಗುವುದಿದೆ ಮತ್ತು ಬಹಳ ಸಮಯದ ಅಭ್ಯಾಸವಿಲ್ಲವೆಂದರೆ ಅಚಾನಕ್ ಸಮಯದ ಅಭ್ಯಾಸದ ಅವಶ್ಯಕತೆ ಇದೆಯಲ್ಲವೇ ಹೇಳಿ. ಈಗೀಗ ನೋಡಿ ಬಾಪ್ದಾದಾರವರು ಹೋಂವರ್ಕ್ ಕೊಟ್ಟಿದ್ದಾರೆ, 10 ನಿಮಿಷ ಒಟ್ಟು 24 ಬಾರಿ 10-10 ನಿಮಿಷದ ಹೋಂವರ್ಕ್ ಕೊಟ್ಟಿದ್ದೇವೆ, ಕೆಲವು ಮಕ್ಕಳಿಗೆ ಕಷ್ಟ ಆಗುತ್ತಿದೆ, ಅಂದಾಗ ಯೋಚನೆ ಮಾಡಿ ಒಂದುವೇಳೆ 10 ನಿಮಿಷದ ಅಭ್ಯಾಸ ಆಗಲಿಲ್ಲವೆಂದರೆ ಅಚಾನಕ್ ಸಮಯದಲ್ಲಿ ಏನು ಮಾಡುತ್ತೀರಿ? ಬಾಪ್ದಾದಾರವರಿಗೆ ಗೊತ್ತಿದೆ - 24 ಬಾರಿ ಮಾಡುವುದರಲ್ಲಿ ಕೆಲವರಿಗೆ ಸಮಯ ಬಹಳ ಕಡಿಮೆ ಸಿಗುತ್ತದೆ ಆದರೆ ಬಾಪ್ದಾದಾರವರು 10 ನಿಮಿಷ ಒಂದೇ ಸ್ಮೃತಿಯಲ್ಲಿ ಯಾವಾಗ ಬೇಕೋ, ಹೇಗೆ ಬೇಕೋ ಹಾಗೆಯೇ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಟ್ರೈಯಲ್ ಮಾಡಿದರು. ಬಾಪ್ದಾದಾರವರು ಈಗಲೂ 10 ನಿಮಿಷ ಮಾಡಿ ಎಂದು ಹೇಳುವುದಿಲ್ಲ. ಮಾಡಲು ಆಗಲಿಲ್ಲವೆಂದರೆ, ಯಾರಿಗೆ ಆಗುತ್ತದೆಯೋ ಅವರು ಮಾಡಲಿ, ಒಂದುವೇಳೆ ಮಾಡಲು ಆಗುವುದಿಲ್ಲವೆಂದರೆ 5 ನಿಮಿಷ ಮಾಡಿ. 5 ನಿಮಿಷದಿಂದ 7 ನಿಮಿಷ, 6 ನಿಮಿಷ ಎಷ್ಟು ಹೆಚ್ಚಿಸಲು ಸಾಧ್ಯವಾಗುತ್ತದೋ ಅಷ್ಟು ಪ್ರಯತ್ನ ಮಾಡಿ. ಬಾಪ್ದಾದಾರವರು ಸ್ವಯಂ ಹೇಳುತ್ತಿದ್ದಾರೆ - ಇದರಲ್ಲಿ ಅಂತಹ ಮಾತು ಇಲ್ಲ. ಒಂದುವೇಳೆ 10 ನಿಮಿಷ ಹೆಚ್ಚು ಸಮಯ ಎನಿಸಿದರೆ 8 ನಿಮಿಷ ಮಾಡಿ, 9 ನಿಮಿಷ ಮಾಡಿ. ಎಷ್ಟು ಹೆಚ್ಚಿಸಲು ಸಾಧ್ಯ ಆಗುತ್ತದೋ ಅಷ್ಟು ಅಭ್ಯಾಸ ಮಾಡಿಕೊಳ್ಳಿ ಏಕೆಂದರೆ ಬಹಳ ಕಾಲದ ವರದಾನ ಪ್ರತ್ಯಕ್ಷವಾಗಿ ಈಗ ಮಾಡಲು ಆಗುತ್ತದೆ. ಒಂದುವೇಳೆ ಈಗ ಬಹಳಕಾಲದ ಅಭ್ಯಾಸ ಇಲ್ಲವೆಂದರೆ ಈಗಿನ ಬಹಳ ಕಾಲದ ಪುರುಷಾರ್ಥದ ಯಾವ ಪ್ರಾಪ್ತಿ ಇದೆಯೋ, ಅರ್ಧಕಲ್ಪದ ಪ್ರಾಲಬ್ದದಲ್ಲಿ ಬಹಳ ಕಾಲದ ಅಭ್ಯಾಸದಲ್ಲಿ ಅಂತರ ಬರುತ್ತದೆ.... ಒಂದುವೇಳೆ ಈಗ ಕಡಿಮೆ ಸಮಯ ಕೊಟ್ಟರೆ, ಆದ್ದರಿಂದ ಎಷ್ಟು ಸಾಧ್ಯ ಆಗುತ್ತದೋ ಅಷ್ಟು ಮಾಡಲು ಬಾಪ್ದಾದಾರವರು ಹೇಳಿದ್ದಾರೆ. ಒಂದುವೇಳೆ 10 ನಿಮಿಷ ಮಾಡಲು ಆಗಲಿಲ್ಲವೆಂದರೆ 5 ನಿಮಿಷಕ್ಕಿಂತಲೂ ಹೆಚ್ಚು ಮಾಡಿ, 7 ನಿಮಿಷವಾದರೂ ಮಾಡಿ, 8 ನಿಮಿಷವಾದರೂ ಮಾಡಿ, 5 ನಿಮಿಷ ಆದರೂ ಮಾಡಬಹುದು, ಆದರೆ ಒಮ್ಮೊಮ್ಮೆ 10 ನಿಮಿಷಗಳ ಅಭ್ಯಾಸವಿದ್ದರೆ ಒಳ್ಳೆಯದು. ಏಕೆಂದರೆ ಮುಂದೆ ಇಂತಹ ಸಮಯ ಬರುತ್ತದೆ.. ಆಗ ಸ್ವಯಂಗಾಗಿ ಹಾಗೂ ವಿಶ್ವಕ್ಕಾಗಿ ಕಿರಣಗಳನ್ನು ಕೊಡಬೇಕಾಗುತ್ತದೆ. ಆದ್ದರಿಂದ ಬಾಪ್ದಾದಾರವರು ಎಷ್ಟು ಹೆಚ್ಚಿನ ಸಮಯ ಮಾಡಲು ಆಗುತ್ತದೆಯೋ ಅಷ್ಟು ಅಭ್ಯಾಸ ಮಾಡಿ ಎಂದು ಹೇಳುತ್ತಾರೆ ಏಕೆಂದರೆ ಈಗಿನ ಬಹಳ ಸಮಯದ ಅಭ್ಯಾಸ ಭವಿಷ್ಯಕ್ಕೆ ಆಧಾರವಾಗಿದೆ. ಸರಿಯೇ? ಕಷ್ಟ ಅನಿಸುತ್ತದೆಯೇ, ಈಗಂತೂ ಪರವಾಗಿಲ್ಲ, ತಂದೆಗೆ ತಿಳಿಸಿ ಬಹಳ ಒಳ್ಳೆಯ ಕೆಲಸ ಮಾಡಿದಿರಿ ಏಕೆಂದರೆ 10 ನಿಮಿಷ ಕುಳಿತುಕೊಳ್ಳಲು ಆಗಲಿಲ್ಲವೆಂದರೆ ಯೋಚನೆಯಲ್ಲೇ ಕಳೆದುಹೋದರೆ 5 ನಿಮಿಷವೂ ಹೋಯಿತು, ಆದ್ದರಿಂದ 5 ನಿಮಿಷಕ್ಕಿಂತಲೂ ಕಡಿಮೆ ಮಾಡಬೇಡಿ ಎಂದು ಹೇಳುತ್ತಾರೆ. ಎಷ್ಟು ಹೆಚ್ಚಿಸಲು ಸಾಧ್ಯ ಆಗುತ್ತದೆಯೋ ಅಷ್ಟು ಹೆಚ್ಚಿಸಿ. ಸರಿಯೇ, ಸ್ಪಷ್ಟವಾಗಿದೆಯೇ? ಏಕೆಂದರೆ ಬಾಪ್ದಾದಾರವರು ಪ್ರತಿಯೊಬ್ಬರನ್ನು ಬಹಳ ಶ್ರೇಷ್ಠ ಸ್ವರೂಪದಲ್ಲಿ ನೋಡುತ್ತಾರೆ. ಸ್ವರೂಪದ ಗುರುತಾಗಿ ಬಾಪ್ದಾದಾರವರು ಪ್ರತಿಯೊಬ್ಬ ಮಗುವಿಗೆ ಎಷ್ಟು ಸ್ವಮಾನಗಳನ್ನು ಕೊಟ್ಟಿದ್ದಾರೆ. ಒಂದುವೇಳೆ ಸ್ವಮಾನದ ಲಿಸ್ಟ್ ತೆಗೆದರೆ ಎಷ್ಟು ದೊಡ್ಡದಾಗಿದೆ.

ಇಂದು ಬಾಪ್ದಾದಾರವರು ಚಕ್ಕರ್ ಹಾಕಲು ಹೋಗಿದರು, ಏನನ್ನು ನೋಡಲು ಹೋಗಿದ್ದರು? ಬಾಪ್ದಾದಾರವರು ಸ್ವಮಾನದ ಬಹಳ ದೊಡ್ಡ ಮಾಲೆಯನ್ನು ಕೊಟ್ಟಿದ್ದಾರೆ. ಒಂದುವೇಳೆ ಒಂದೊಂದು ಸ್ವಮಾನದಲ್ಲಿ ಸ್ಥಿತರಾಗಿ ಆ ಸ್ಥಿತಿಯಲ್ಲಿ ಕುಳಿತುಕೊಳ್ಳಿ, ನಡೆಯುತ್ತಾ ಸ್ವಮಾನವನ್ನು ಹೇಳುತ್ತಾ ಹೋಗಿದರೆ, ಮಾಲೆಯನ್ನು ನೆನಪು ಮಾಡುತ್ತಾ ಇದ್ದರೆ ಬಹಳ ಆನಂದವಾಗಿರುತ್ತದೆ. ಸ್ವಮಾನದ ಲಿಸ್ಟ್ ಇಟ್ಟುಕೊಂಡಿದ್ದೀರಿ ಆದರೆ ಒಂದೊಂದು ಸ್ವಮಾನ ಎಷ್ಟು ದೊಡ್ಡದಾಗಿದೆ ಮತ್ತು ಅದನ್ನು ಯಾರು ಕೊಟ್ಟಿದ್ದಾರೆ? ಪ್ರಪಂಚದ ಆಲ್ಮೈಟಿ ಅಥಾರಿಟಿ ಒಬ್ಬೊಬ್ಬ ಮಗುವಿಗೆ ಅನೇಕ ಸ್ವಮಾನಗಳ ಲಿಸ್ಟ್ ಕೊಟ್ಟಿದ್ದಾರೆ. ಅದನ್ನು ಉಪಯೋಗಿಸಿ, ಏಕೆಂದರೆ ನಿಮ್ಮ ಸ್ವಮಾನವನ್ನು ಕಡಿಮೆ ಮಾಡುವ ಶಕ್ತಿ ಯಾರಿಗೂ ಇಲ್ಲ ಹಾಗೂ ಅನ್ಯ ಯಾರಿಗೂ ಇಷ್ಟೊಂದು ಸ್ವಮಾನಗಳ ಮಾಲೆ ಪಾಪ್ತಿಯಾಗಿಲ್ಲ ಏಕೆಂದರೆ ಸತ್ಯಯುಗದಲ್ಲಿ ರಾಜ್ಯಭಾಗ್ಯ ಸಿಗುತ್ತದೆ ಆದರೆ ಈ ಸ್ವಮಾನಗಳ ಮಾಲೆ ಸಂಗಮಯುಗದ ಕೊಡಿಗೆಯಾಗಿದೆ ಎಂಬುದನ್ನು ಬಾಪ್ದಾದಾರವರು ನೋಡಿದರು. ಬಾಪ್ದಾದಾರವರು ಮಕ್ಕಳನ್ನು ನೋಡಿದಾಗ ಪ್ರತಿಯೊಬ್ಬ ಮಗುವನ್ನು ಸ್ವಮಾನ ಸ್ಥಿತಿಯಿಂದ ನೋಡುತ್ತಾರೆ. ವಾಹ್! ಮಕ್ಕಳೇ ವಾಹ್! ಅಂದಾಗ ಸ್ವಮಾನದ ಅಥಾರಿಟಿಯಲ್ಲಿರಿ ನಾನು ಯಾರಾಗಿದ್ದೇನೆ, ಒಮ್ಮೊಮ್ಮೆ ಒಂದೊಂದು ಸ್ವಮಾನವನ್ನು ಮುಂದಿಟ್ಟುಕೊಳ್ಳಬೇಕು, ಇಂದು ಅಮೃತವೇಳೆ ವಿಶೇಷವಾಗಿ ಯಾವ ಸ್ವಮಾನ ಬುದ್ಧಿಯಲ್ಲಿ ಇತ್ತು ಎಂದು ಚೆಕ್ ಮಾಡಿಕೊಳ್ಳಬೇಕು. ಆ ಸ್ವಮಾನ ಖಜಾನೆ ಆಗಿದೆಯಲ್ಲವೇ. ಇದನ್ನು ಉಪಯೋಗಿಸಿದ್ದೀರಾ? ಏಕೆಂದರೆ ಖಜಾನೆ ಹೆಚ್ಚಿಸುವ ಸಾಧನೆಯಾಗಿದೆ ಎಷ್ಟು ಖಜಾನೆಯನ್ನು ಕಾರ್ಯದಲ್ಲಿ ತೊಡಗಿಸುತ್ತೀರೋ ಅಷ್ಟು ಖಜಾನೆ ಹೆಚ್ಚುತ್ತದೆ. ಅಂದಾಗ ಇಂದು ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ನೋಡಿದಾಗ ಕೆಲವರ ಬಳಿ ಸ್ವಮಾನದ ಮಾಲೆ ದೊಡ್ಡದಾಗಿತ್ತು, ಕೆಲವರ ಬಳಿ ಚಿಕ್ಕದಾಗಿರುವುದನ್ನು ನೋಡುತ್ತಿದ್ದೇವೆ. ಎಲ್ಲಿ ಸ್ವಮಾನ ಇರುತ್ತದೆ ಅಲ್ಲಿ ದೇಹಬಾನ ಸಮಾಪ್ತಿ ಆಗಿ ಬಿಡುತ್ತದೆ ಅಂದಾಗ ಇಂದು ಬಾಪ್ದಾದಾರವರು ಚಕ್ಕರ್ ಹಾಕಿದರು ಮತ್ತು ನೋಡಿದರು ಹೇಗೆ ಸ್ವಮಾನದ ಖಜಾನೆ ಇದೆಯೋ ಹಾಗೆಯೇ ಒಂದೊಂದು ಶಕ್ತಿ ಒಂದೊಂದು ಗುಣ ಉಪಯೋಗಿಸಿ, ಅದನ್ನು ಕಾರ್ಯದಲ್ಲಿ ತೊಡಗಿಸಿ ಆಗ ಮಾಯೆ ಬರುತ್ತದೆ ಎಂಬ ಯಾವ ಸಮಸ್ಯೆ ಇದೆಯೋ, ಆಗ ಮಾಯೆ ಬರಲು ಸಾಧ್ಯವಿಲ್ಲ ಆದರೆ ಮಾಯೆಯು ನನ್ನನ್ನು ಆಹ್ವಾನ ಮಾಡುತ್ತಾರೆ ಆಗ ಹೋಗುತ್ತೇನೆ, ಹಾಗೆಯೇ ಹೋಗುವುದಿಲ್ಲ ಎಂದು ಮಾಯೆ ಹೇಳುತ್ತದೆ, ಇದನ್ನು ಬಾಬಾ ತಿಳಿಸಿದರು. ಯಾವುದೇ ಹಗುರ ಸಂಕಲ್ಪ ಮಾಡುವುದು ಎಂದರೆ ಮಾಯೆಯನ್ನು ಆಹ್ವಾನ ಮಾಡುವುದು, ಶಕ್ತಿಗಳನ್ನು ಬಿಡುವುದು ಅರ್ಥಾತ್ ಮಾಯೆಯನ್ನು ಆಹ್ವಾನ ಮಾಡುವುದು. ಬಯಸುವುದಿಲ್ಲ ಆದರೆ ಬಂದು ಬಿಡುತ್ತದೆ. ಶಕ್ತಿಶಾಲಿ ಯಾರಾಗಿದ್ದಾರೆ? ಬಯಸುವುದಿಲ್ಲ ಆದರೆ ಬಂದು ಬಿಡುತ್ತದೆ. ಅಂದಾಗ ಮಾಯೆ ಶಕ್ತಿಶಾಲಿ ಆಗಿದೆಯೋ ಅಥವಾ ತಾವು ಶಕ್ತಿಶಾಲಿ ಆಗಿದ್ದೀರೋ? ಇಂದು ಹಳೆಯ ವರ್ಷ ಪೂರ್ಣ ಆಗುತ್ತಿದೆ, ಹೊಸ ವರ್ಷದಲ್ಲಿ ಹೊಸ ಉಮ್ಮಂಗ, ಹೊಸ ಉತ್ಸಾಹ ಏಕೆಂದರೆ ಸಂಗಮ ಯುಗದ ಗಾಯನವಿದೆ, ಒಂದೊಂದು ದಿನ ಉತ್ಸಾಹ ತುಂಬಿರುವುದಾಗಿದೆ ಅರ್ಥಾತ್ ಉತ್ಸವವಾಗಿದೆ. ಅಂದಾಗ ಉಮ್ಮಂಗ-ಉತ್ಸಾಹವಿದ್ದರೆ ಪ್ರತಿಯೊಂದು ದಿನ ಉತ್ಸವವಾಗಿರುತ್ತದೆ. ಆದ್ದರಿಂದ ಪ್ರತಿ ದಿನ ನಡೆಯುತ್ತಾ-ಓಡಾಡುತ್ತಾ ಚಾರ್ಟ್ ನೋಡಿಕೊಳ್ಳುವುದು ಪಕ್ಕಾ ಮಾಡಿಕೊಳ್ಳಬೇಕು. ಚೆಕ್ ಮಾಡಿಕೊಳ್ಳಬೇಕು, ಚೆಕ್ ಮಾಡಿಕೊಂಡರೆ ಚೇಂಜ್ ಆಗುತ್ತೀರಲ್ಲವೇ. ಚೆಕ್ ಮಾಡಿಕೊಂಡಿಲ್ಲವೆಂದರೆ ಹೇಗೆ ಚೇಂಜ್ ಆಗುತ್ತೀರಿ?

ಇಂದು ಹೊಸವರ್ಷಕ್ಕಾಗಿ ಬಾಪ್ದಾದಾರವರಿಗೆ ವಿಶೇಷವಾಗಿ ಪ್ರತಿಯೊಬ್ಬ ಮಗುವಿನ ಪ್ರತಿ ವಿಶೇಷ ಸಂಕಲ್ಪವಿದೆ. ಹೇಗೆ ಹಳೆಯ ವರ್ಷಕ್ಕೆ ಬೀಳ್ಕೊಡಿಗೆ ಕೊಡುತ್ತಾರೆ ಅದೇ ರೀತಿ ಮಾಯೆಗೆ ಬೀಳ್ಕೊಡಿಗೆ ಕೊಡಲಿ ಎಂದು ಸಂಕಲ್ಪವಿದೆ. ವ್ಯರ್ಥ ಸಂಕಲ್ಪಗಳಿಗೆ ಬೀಳ್ಕೊಡಿಗೆ ಕೊಡಿ ಏಕೆಂದರೆ ಮೆಜಾರಿಟಿ ಇದನ್ನೇ ನೋಡಲಾಗಿದೆ ವ್ಯರ್ಥ ಸಂಕಲ್ಪ ಬಹಳ ಬರುತ್ತದೆ, ವಿಕಾರಿ ಸಂಕಲ್ಪಗಳು ಕಡಿಮೆ ಬರುತ್ತದೆ, ಆದರೆ ವ್ಯರ್ಥ ಯಾವುದಿದೆ ಅದರ ಹೆಸರು-ಗುರುತು ಸಮಾಪ್ತಿ ಆಗಿ ಬಿಡಬೇಕು. ಪ್ರತಿಯೊಂದು ಸಂಕಲ್ಪ ಸಮರ್ಥವಾಗಿರಲಿ, ವ್ಯರ್ಥವಾಗಿ ಇರಬಾರದು ಏಕೆಂದರೆ ವ್ಯರ್ಥ ಸಂಕಲ್ಪದಲ್ಲಿ ಕೇವಲ ಸಂಕಲ್ಪ ನಡೆಯುವುದಿಲ್ಲ ಆದರೆ ವ್ಯರ್ಥವಾಗಿ ಸಮಯವೂ ಹೋಗುತ್ತದೆ ಮತ್ತು ತಂದೆಯ ಸಮಾನರಾಗುವುದರಲ್ಲಿ ದೂರ ಆಗಿ ಬಿಡುತ್ತೀರಿ. ಸಮಾನರಾಗಲು ತಮ್ಮ ಇಚ್ಛೆಯಂತೂ ಇದೆ, ಕೈಯಂತೂ ಎತ್ತಿದ್ದೀರಿ, ಆದರೆ ಬಾಪ್ದಾದಾರವರು ಸದಾ ಹೇಳುತ್ತಾರೆ, ಮನಸ್ಸಿನ ಕೈ ಎತ್ತಿ, ಈ ಕೈ ಎತ್ತುವುದು ಬಹಳ ಸಹಜ ಆಗಿದೆ ಅಂದಾಗ ಬೀಳ್ಕೊಡಿಗೆ ಕೊಡುವ ಸಾಹಸವಿದೆಯೇ? ಸಾಹಸವಿದೆಯೇ? ಕೈ ಎತ್ತಿ. ಸಾಹಸವುಳ್ಳವರಾಗಿದ್ದೀರಿ ಆದರೆ ಸಾಹಸವನ್ನು ಕಾಯಂ ಆಗಿ ಇಟ್ಟುಕೊಳ್ಳಬೇಕು. ಒಂದುವೇಳೆ ಸಾಹಸವಿದ್ದರೆ ಯಾವ ಲಕ್ಷ್ಯ ಇಟ್ಟುಕೊಂಡಿದ್ದೀರಿ, ಅದು ಆಗಿಯೇ ಆಗುತ್ತದೆ ಏಕೆಂದರೆ ಬಾಪ್ದಾದಾರವರೂ ಜೊತೆ ಇದ್ದಾರೆ. ಬಾಪ್ದಾದಾರವರು ನನ್ನ ಯಾವುದೇ ಮಗು ಹಿಂದೆ ಇರಬಾರದು ಎಂದು ಬಯಸುತ್ತಾರೆ ಹಾಗೂ ನನ್ನ ಪ್ರತಿ ಮಗು ಕೈಯಲ್ಲಿ ಕೈ ಕೊಟ್ಟು ನಡೆಯಬೇಕೆಂದು ಇಷ್ಟಪಡುತ್ತೇವೆ. ಶಿವಬಾಬಾ ನಿರಾಕಾರ ಆಗಿದ್ದಾರೆ, ಕೈ ಅಂತೂ ಇಲ್ಲ, ಆದರೆ ಶ್ರೀಮತವೇ ಅವರ ಕೈ ಆಗಿದೆ. ಹೆಜ್ಜೆ-ಹೆಜ್ಜೆಗೂ ಶ್ರೀಮತದ ಮೇಲೆ ನಡೆಯುವುದು ಅರ್ಥಾತ್ ಕೈಯಲ್ಲಿ ಕೈ ಕೊಟ್ಟು ನಡೆಯುವುದು. ಎಲ್ಲರಿಗೂ ಹೊಸ ವರ್ಷದ, ಹೊಸ ಜೀವನದ, ಹೊಸ ಯುಗದ ಮೂರರ ಪದಮಾ ಪದಮದಷ್ಟು ಶುಭಾಶಯಗಳು. ಒಳ್ಳೆಯದು.

ಇಂದು ನಾಲ್ಕೂ ಕಡೆಯ ದೇಶ-ವಿದೇಶದ ಪ್ರತಿಯೊಬ್ಬ ತಂದೆಗೆ ಪ್ರಿಯ, ತಂದೆಗೆ ಮುದ್ದಾದ, ತಂದೆಗೆ ಅಗಲಿ ಹೋಗಿ ಸಿಕ್ಕಿರುವ ಮಕ್ಕಳಿಗೆ ಬೀಳ್ಕೊಡಿಗೆ ಹಾಗೂ ಶುಭಾಶಯಗಳು. ಬಾಪ್ದಾದಾ ಹೇಳಿದ್ದೇವೆ, ಹಳೆಯ ವರ್ಷದ ಜೊತೆಯಲ್ಲಿ ಹಳೆಯ ಸಂಸ್ಕಾರಕ್ಕೂ ಬೀಳ್ಕೊಡಿಗೆ ಕೊಡುವಂತಹವರು, ಹಳೆಯ ಸ್ವಭಾವಕ್ಕೂ ಬೀಳ್ಕೊಡಿಗೆ ಕೊಡುವಂತಹ ಮಹಾವೀರ ಮಕ್ಕಳು, ಪ್ರತಿಯೊಂದು ಹೆಜ್ಜೆಯಲ್ಲಿ ಪದಮದಷ್ಟು ಸಂಪಾದನೆ ಮಾಡಿಕೊಳ್ಳುವಂತಹವರಿಗೆ ಬಾಪ್ದಾದಾ ಸದಾ ಸ್ವಮಾನವನ್ನು ಕೊಡುತ್ತೇವೆ, ಆ ಸ್ವಮಾನದಲ್ಲಿ ಸ್ಥಿತರಾಗಿದ್ದು ಅನುಭವ ಮಾಡುವಂತಹವರು, ಪ್ರತಿಯೊಂದು ಮಗುವನ್ನೂ ಬಾಪ್ದಾದಾ ಈ ರೂಪದಲ್ಲಿ ನೋಡುತ್ತೇವೆ -ಒಂದೊಂದು ಮಗು 21 ಜನ್ಮಗಳ ಆಸ್ತಿಗೆ ಅಧಿಕಾರಿ, ಇಡೀ ಕಲ್ಪದಲ್ಲಿ 21 ಜನ್ಮಗಳ ಅಧಿಕಾರಿ ಆಗುವಂತಹ ಆಸ್ತಿ ನೀವು ಮಕ್ಕಳಿಗೆ ಮಾತ್ರ ಸಿಗುತ್ತದೆ. ಇಂತಹ ಶ್ರೇಷ್ಠ ಅಧಿಕಾರಿ ನಾಲ್ಕೂ ಕಡೆಯ ಮಕ್ಕಳಿಗೆ ಬಾಪ್ದಾದಾ ಪರಮ ಶಿಕ್ಷಕ ಹಾಗೂ ಗುರು ರೂಪದೊಂದಿಗೆ ಮೂರು ರೂಪದಲ್ಲಿ ನೆನಪು-ಪ್ರೀತಿ ಹಾಗೂ ನಮಸ್ತೆಯನ್ನು ನೀಡುತ್ತಿದ್ದೇವೆ.

ವರದಾನ:
ಸೇವೆ ಅಥವಾ ಪುರುಷಾರ್ಥದಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಡಬಲ್ ಕಿರೀಟಧಾರಿ ಭವ.

ಸಂಗಮ ಯುಗದಲ್ಲಿ ಸದಾ ತಮ್ಮನ್ನು ಡಬಲ್ ಕಿರೀಟಧಾರಿ ಎಂದು ತಿಳಿದುಕೊಂಡು ನಡೆಯಿರಿ - 1. ಲೈಟ್ ಅರ್ಥಾತ್ ಪವಿತ್ರತೆಯ ಕಿರೀಟ ಹಾಗೂ 2. ಜವಾಬ್ದಾರಿಯ ಕಿರೀಟ. ಪವಿತ್ರತೆ ಹಾಗೂ ಶಕ್ತಿ - ಲೈಟ್ ಹಾಗೂ ಮೈಟ್ನ ಕಿರೀಟವನ್ನು ಧರಿಸುವವರಲ್ಲಿ ಡಬಲ್ ಫೋರ್ಸ್ (ಶಕ್ತಿ) ಸದಾ ಕಾಯಂ ಆಗಿರುತ್ತದೆ. ಇಂತಹ ಡಬಲ್ ಫೋರ್ಸ್ ಇರುವಂತಹ ಆತ್ಮರು ಸದಾ ಶಕ್ತಿಶಾಲಿ ಆಗಿರುತ್ತಾರೆ. ಅಂತಹವರಿಗೆ ಸದಾ ಸೇವೆ ಅಥವಾ ಪುರುಷಾರ್ಥದಲ್ಲಿ ಸಫಲತೆಯ ಪ್ರಾಪ್ತಿಯಾಗುವುದು.

ಸ್ಲೋಗನ್:
ದಿವ್ಯ ಗುಣಗಳ ಆಧಾರದ ಮೇಲೆ ಮನ-ವಚನ ಹಾಗೂ ಕರ್ಮವನ್ನು ಮಾಡುವುದೇ ದಿವ್ಯತೆಯಾಗಿದೆ.

ಅವ್ಯಕ್ತ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಯಾವುದೇ ವಸ್ತುವನ್ನು ಬಿಸಿ ಮಾಡಿ ಮೃದು ಮಾಡಲಾಗುತ್ತದೆ, ನಂತರ ಮೊಲ್ಡ ಮಾಡಲಾಗುತ್ತದೆ. ಇಲ್ಲಿಯೂ ಬಿಸಿಯಾಗಿದೆ ಶಕ್ತಿ ರೂಪವಾಗಿದೆ ಮತ್ತು ಮೃದು ಅಥವಾ ಕೋಮಲತೆಯಾಗಿದೆ ನಿರ್ಮಾನತೆ ಅರ್ಥಾತ್ ಸ್ನೇಹ ರೂಪ. ಯಾವುದರಲ್ಲಿ ಪ್ರತಿ ಆತ್ಮರ ಪ್ರತಿ ಸ್ನೇಹವಿರುತ್ತದೆ ಅವರೇ ನಮ್ರಚಿತ್ತರಾಗಲು ಸಾಧ್ಯ. ಸ್ನೇಹವಿಲ್ಲವೆಂದರೆ ದಯಾಹೃದಯಿಯಾಗಲು ಸಾಧ್ಯವಿಲ್ಲ, ನಮ್ರಚಿತ್ತರಾಗಲು ಸಾಧ್ಯವಿಲ್ಲ. ಶಕ್ತಿ ರೂಪದಲ್ಲಿ ಮಾಲೀಕತನ ಮತ್ತು ನಮ್ರತೆಯಲ್ಲಿ ಸೇವೆಯ ಗುಣವಿದೆ. ಯಾವಾಗ ಈ ಕೋಮಲತೆ ಮತ್ತು ಬಿಸಿ (ಕಾವು) ಎರಡುವಿರುತ್ತವೆ ಆಗ ಪ್ರತಿ ಮಾತಿನಲ್ಲಿ ಮೊಲ್ಡ ಆಗಬಹುದು.