26.08.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಗ್ಯಾರಂಟಿ ಕೊಡುತ್ತೀರಿ, ನಾವು ನಮ್ಮದೇ ಯೋಗ ಬಲದಿಂದ ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ,
ಅಲ್ಲಿ ಒಂದು ಧರ್ಮ-ಒಂದು ರಾಜ್ಯವಿರುತ್ತದೆ”
ಪ್ರಶ್ನೆ:
ಮಾಯೆಯ ಯಾವ
ವಿಘ್ನದಿಂದ ಸುರಕ್ಷಿತರಾಗಿರುವವರು ಬಹಳ ಒಳ್ಳೆಯ ಚಮತ್ಕಾರ ಮಾಡಬಹುದಾಗಿದೆ?
ಉತ್ತರ:
ಮಾಯೆಯ
ಎಲ್ಲದಕ್ಕಿಂತ ದೊಡ್ಡ ವಿಘ್ನವಾಗಿದೆ - ದೇಹಾಭಿಮಾನದಲ್ಲಿ ತಂದು ಒಬ್ಬರು ಇನ್ನೊಬ್ಬರ ನಾಮ-ರೂಪದಲ್ಲಿ
ಸಿಲುಕಿಸುವುದು. ಯಾವ ಮಕ್ಕಳು ಈ ವಿಘ್ನದಿಂದ ಸುರಕ್ಷಿತರಾಗಿರುವರೋ, ಮಾಯೆಯ ಮೋಸದಿಂದ
ಮುಕ್ತರಾಗಿರುವರೋ ಅವರು ಬಹಳ ಚಮತ್ಕಾರ ಮಾಡಿ ತೋರಿಸುತ್ತಾರೆ. ಅವರ ಬುದ್ಧಿಯಲ್ಲಿ ಸರ್ವೀಸಿನ ಹೊಸ
– ಹೊಸ ವಿಚಾರಗಳು ನಡೆಯುತ್ತಿರುತ್ತದೆ. ಯಾವಾಗ ದೇಹೀ-ಅಭಿಮಾನಿಗಳಾಗುವಿರೋ ಆಗ ಸೇವೆಯಲ್ಲಿ
ಉನ್ನತಿಯಾಗುವುದು.
ಓಂ ಶಾಂತಿ.
ತಂದೆಯು ಆತ್ಮಿಕಮಕ್ಕಳಿಗೆ ಶ್ರೀಮತವನ್ನು ಕೊಡಲು ಬಂದಿದ್ದಾರೆ. ಇದು ಮಕ್ಕಳಿಗೆ ತಿಳಿದಿದೆ –
ಸ್ವಲ್ಪ ಸಮಯದಲ್ಲಿಯೇ ಡ್ರಾಮಾನುಸಾರ ಎಲ್ಲಾ ಕಾರ್ಯವು ಆಗಬೇಕಾಗಿದೆ, ನಾವು ರಾವಣ ಪುರಿಯನ್ನು
ವಿಷ್ಣು ಪುರಿಯನ್ನಾಗಿ ಮಾಡುತ್ತೇವೆ. ತಂದೆಯೂ ಗುಪ್ತವಾಗಿದ್ದಾರೆ, ವಿದ್ಯೆಯೂ ಗುಪ್ತವಾಗಿದೆ.
ಅನೇಕ ಸೇವಾಕೇಂದ್ರಗಳಿವೆ, ಚಿಕ್ಕ-ಪುಟ್ಟ ಹಳ್ಳಿಗಳಲ್ಲಿ ಸೇವಾಕೇಂದ್ರಗಳಿವೆ ಮತ್ತು ಅನೇಕ ಮಕ್ಕಳೂ
ಇದ್ದಾರೆ. ಇನ್ನೂ ದಿನ - ಪ್ರತಿದಿನ ವೃದ್ಧಿಯಾಗುತ್ತಾ ಹೋಗುತ್ತದೆ. ಪುಸ್ತಕಗಳಲ್ಲಿಯೂ
ಬರೆಯುತ್ತಾರೆ- ನಾವು ಈ ಭಾರತ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಿ ತೀರುತ್ತೇವೆ. ನಿಮಗೆ ಈ ಭಾರತ
ಭೂಮಿಯು ಬಹಳ ಪ್ರಿಯವಾಗಿದೆ ಏಕೆಂದರೆ ನೀವು ತಿಳಿದುಕೊಂಡಿದ್ದೀರಿ, ಈ ಭಾರತವೇ ಸ್ವರ್ಗವಾಗಿತ್ತು,
ಇದಕ್ಕೆ 5000 ವರ್ಷಗಳಾಯಿತು. ಭಾರತವು ಬಹಳ ಗೌರವ ಪೂರ್ಣವಾಗಿತ್ತು, ನೀವು ಬ್ರಹ್ಮಾ ಮುಖ
ವಂಶಾವಳಿಗೇ ಈ ಜ್ಞಾನವಿದೆ. ಈ ಭಾರತವನ್ನು ಶ್ರೀಮತದಂತೆ ಸ್ವರ್ಗವನ್ನಾಗಿ ಮಾಡಬೇಕಾಗಿದೆ, ಎಲ್ಲರಿಗೆ
ಮಾರ್ಗವನ್ನು ತಿಳಿಸಬೇಕಾಗಿದೆ, ಮತ್ತ್ಯಾವುದೇ ಇಲ್ಲಿ ಕಿರಿ ಕಿರಿಯ ಮಾತಿಲ್ಲ. ಪರಸ್ಪರ ಕುಳಿತು
ಸಲಹೆ ತೆಗೆದುಕೊಳ್ಳಬೇಕು - ಈ ಚಿತ್ರಗಳ ಮೂಲಕ ಇಂತಹ ಯಾವ ಜಾಹೀರಾತು ನೀಡಬೇಕು, ಯಾವುದರಿಂದ
ಪತ್ರಿಕೆಗಳಲ್ಲಿಯೂ ಈ ಚಿತ್ರಗಳು ಬರಬೇಕಾಗಿದೆ. ಪರಸ್ಪರ ಇದರ ಬಗ್ಗೆ ಸೆಮಿನಾರ್ ಮಾಡಬೇಕಾಗಿದೆ.
ಹೇಗೆ ಆ ಸರ್ಕಾರದವರು ಪರಸ್ಪರ ಸೇರುತ್ತಾರೆ, ಸಲಹೆ ತೆಗೆದುಕೊಳ್ಳುತ್ತಾರೆ - ಭಾರತವನ್ನು ನಾವು
ಹೇಗೆ ಸುಧಾರಣೆ ಮಾಡುವುದು! ಈಗ ಇಷ್ಟೊಂದು ಮತ ಭೇದಗಳಾಗಿ ಬಿಟ್ಟಿದೆ, ಅವರನ್ನು ಪರಸ್ಪರ ಸೇರಿಸಿ
ಒಂದು ಮಾಡಬೇಕು ಮತ್ತು ಭಾರತದಲ್ಲಿ ಸುಖ-ಶಾಂತಿಯು ಹೇಗೆ ಸ್ಥಾಪನೆಯಾಗುವುದು! ಹಾಗೆಯೇ ನೀವೂ ಸಹ
ಆತ್ಮಿಕ ಪಾಂಡವ ಸರ್ಕಾರದವರಾಗಿದ್ದೀರಿ, ಇದು ದೊಡ್ಡ ಈಶ್ವರೀಯ ಸರ್ಕಾರವಾಗಿದೆ. ಪತಿತ-ಪಾವನ ತಂದೆಯೇ
ಪತಿತ ಮಕ್ಕಳನ್ನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ. ಈ
ರಹಸ್ಯವನ್ನು ನೀವು ಮಕ್ಕಳು ಅರಿತುಕೊಂಡಿದ್ದೀರಿ. ಮುಖ್ಯವಾಗಿರುವುದು - ಭಾರತದ ಆದಿ ಸನಾತನ
ದೇವಿ-ದೇವತಾ ಧರ್ಮವಾಗಿದೆ, ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವ ತಂದೆಗೆ ರುದ್ರನೆಂದು
ಹೇಳಲಾಗುತ್ತದೆ, ಈಗ ತಂದೆಯು ಬಂದು ನಿಮ್ಮನ್ನು ಜಾಗೃತಗೊಳಿಸಿದ್ದಾರೆ. ಮತ್ತೆ ನೀವು ಅನ್ಯರನ್ನೂ
ಜಾಗೃತಗೊಳಿಸಬೇಕಾಗಿದೆ, ಡ್ರಾಮಾ ಪ್ಲಾನನುಸಾರ ನೀವು ಜಾಗೃತರಾಗುತ್ತಾ ಇರುತ್ತೀರಿ. ಇಲ್ಲಿಯವರೆಗೆ
ಯಾರ್ಯಾರು ಎಂತೆಂತಹ ಪುರುಷಾರ್ಥ ಮಾಡಿದ್ದಾರೆಯೋ ಕಲ್ಪದ ಮೊದಲೂ ಅಷ್ಟೇ ಮಾಡಿದ್ದರು, ನಿಮ್ಮದು
ಆತ್ಮಿಕ ಯುದ್ಧವಾಗಿದೆ. ಕೆಲವೊಮ್ಮೆ ಮಾಯೆಯ ಪ್ರಭಾವವು ಹೆಚ್ಚಾಗುತ್ತದೆ, ಕೆಲವೊಮ್ಮೆ ಈಶ್ವರನದೂ
ಹೆಚ್ಚಾಗುತ್ತದೆ. ಕೆಲಕೆಲವೊಮ್ಮೆ ಸೇವೆಯು ಬಹಳ ತೀವ್ರವಾಗಿ ನಡೆಯುತ್ತದೆ. ಕೆಲವೊಮ್ಮೆ ಕೆಲವು
ಮಕ್ಕಳಲ್ಲಿ ಮಾಯೆಯ ವಿಘ್ನಗಳು ಬೀಳುತ್ತವೆ, ಮಾಯೆಯು ಒಮ್ಮೆಲೆ ಮೂರ್ಛಿತರನ್ನಾಗಿ ಮಾಡಿ ಬಿಡುತ್ತದೆ.
ಯುದ್ಧದ ಮೈದಾನವಲ್ಲವೆ. ಮಾಯೆಯು ರಾಮನ ಸಂತಾನರನ್ನು ಮೂರ್ಛಿತಗೊಳಿಸುತ್ತದೆ. ಲವ-ಕುಶರ ಕಥೆಯೂ
ಇದೆಯಲ್ಲವೆ. ರಾಮನಿಗೆ ಇಬ್ಬರು ಮಕ್ಕಳನ್ನು ತೋರಿಸುತ್ತಾರೆ, ಇಲ್ಲಂತೂ ತಂದೆಗೆ ಅನೇಕ
ಮಕ್ಕಳಿದ್ದಾರೆ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಕುಂಭಕರ್ಣನ ನಿದ್ರೆಯಲ್ಲಿ ನಿದ್ರಿಸುತ್ತಿದ್ದಾರೆ,
ಅವರಿಗೆ ಇದೂ ಸಹ ತಿಳಿದಿಲ್ಲ - ಪರಮಪಿತ ಪರಮಾತ್ಮನು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆ,
ತಂದೆಯು ಭಾರತದಲ್ಲಿಯೇ ಬರುತ್ತಾರೆ. ಈ ಮಾತನ್ನು ಸಂಪೂರ್ಣ ಮರೆತು ಹೋಗಿದ್ದಾರೆ. ಭಾರತವಾಸಿಗಳೇ
ಸ್ವರ್ಗದ ಮಾಲೀಕರಾಗಿದ್ದರು, ಇದರಲ್ಲಿ ಯಾವುದೇ ಸಂಶಯವಿಲ್ಲ. ಪರಮಪಿತ ಪರಮಾತ್ಮನ ಜನ್ಮವು ಇಲ್ಲಿಯೇ
ಆಗುತ್ತದೆ, ಆದ್ದರಿಂದ ಭಾರತದಲ್ಲಿ ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಅವರು
ಬಂದು ಏನಾದರೂ ಮಾಡಿರಬೇಕು, ಬುದ್ಧಿಯೂ ಹೇಳುತ್ತದೆ - ಅವಶ್ಯವಾಗಿ ತಂದೆಯು ಬಂದು ಸ್ವರ್ಗದ ಸ್ಥಾಪನೆ
ಮಾಡಿರುವರು. ಪ್ರೇರಣೆಯಿಂದ ಸ್ಥಾಪನೆ ಮಾಡಿರುವುದಿಲ್ಲ. ಇಲ್ಲಂತೂ ನೀವು ಮಕ್ಕಳಿಗೆ ರಾಜಯೋಗವನ್ನು
ಕಲಿಸಲಾಗುತ್ತದೆ, ನೆನಪಿನ ಯಾತ್ರೆಯನ್ನು ಕಲಿಸಲಾಗುತ್ತದೆ, ಪ್ರೇರಣೆಯಿಂದ ಯಾವುದೇ ಶಬ್ಧವು ಕೇಳಿ
ಬರುವುದಿಲ್ಲ. ಶಂಕರನು ಪ್ರೇರಣೆಯಿಂದ ವಿನಾಶ ಮಾಡುತ್ತಾನೆಂದು ತಿಳಿಯುತ್ತಾರೆ ಆದರೆ ಇದರಲ್ಲಿ
ಪ್ರೇರಣೆಯ ಮಾತಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಡ್ರಾಮಾದಲ್ಲಿ ಅಣ್ವಸ್ತ್ರಗಳನ್ನು
ತಯಾರಿಸುವುದೇ ಅವರ ಪಾತ್ರವಿದೆ. ಅವರು ವಿನಾಶಕ್ಕಾಗಿ ನಿಮಿತ್ತರಾಗಿದ್ದಾರೆ. ಪ್ರೇರಣೆಯು
ಶಾಸ್ತ್ರಗಳ ಶಬ್ಧವಾಗಿದೆ, ಇದರಲ್ಲಿ ಪ್ರೇರಣೆಯ ಮಾತಿಲ್ಲ. ಶಂಕರನು ಸೂಕ್ಷ್ಮವತನದಲ್ಲಿರುತ್ತಾರೆ,
ಡ್ರಾಮಾನುಸಾರ ವಿನಾಶವಾಗಲೇಬೇಕಾಗಿದೆ. ಮಹಾಭಾರತ ಯುದ್ಧದಲ್ಲಿ ಈ ಅಣ್ವಸ್ತ್ರಗಳೆಲ್ಲವನ್ನೂ
ಉಪಯೋಗಿಸಿದ್ದರು ಎಂದು ಗಾಯನವಿದೆ. ಯಾವುದು ಕಳೆದು ಹೋಗಿದೆಯೋ ಅದು ಮತ್ತೆ ಪುನರಾವರ್ತನೆಯಾಗುವುದು.
ನೀವು ಗ್ಯಾರಂಟಿ ಕೊಡುತ್ತೀರಿ - ನಾವು ಯೋಗಬಲದಿಂದ ಸ್ವರ್ಗದ ಸ್ಥಾಪನೆ ಮಾಡುತ್ತೇವೆ, ಅಲ್ಲಿ ಒಂದು
ಧರ್ಮವಿರುವುದು. ಮತ್ತೆಲ್ಲಾ ಧರ್ಮಗಳು ಎಲ್ಲಿರುತ್ತವೆ? ಅವಶ್ಯವಾಗಿ ವಿನಾಶವಾಗಿ ಬಿಡುತ್ತವೆ. ಇದು
ತಿಳಿದುಕೊಳ್ಳುವ ಮಾತಾಗಿವೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಗಾಯನವಿದೆ, ವಿಷ್ಣುವಿನ ಮೂಲಕ
ಪಾಲನೆಯಂತೂ ಸರಿಯಾಗಿದೆ ಆದರೆ ಶಂಕರನನ್ನು ಶಿವನ ಜೊತೆ ಸೇರಿಸಿ ಬಿಟ್ಟಿದ್ದಾರೆ ಇದು ತಪ್ಪಾಗಿದೆ.
ಶಿವ-ಶಂಕರನೆಂದು ಹೇಳಿ ಬಿಡುತ್ತಾರೆ ಏಕೆಂದರೆ ಶಂಕರನು ಯಾವುದೇ ಕಾರ್ಯವನ್ನು ಮಾಡುವುದಿಲ್ಲ
ಆದ್ದರಿಂದ ಶಿವನೊಂದಿಗೆ ಸೇರಿಸಿ ಬಿಟ್ಟಿದ್ದಾರೆ ಆದರೆ ಶಿವ ತಂದೆಯು ತಿಳಿಸುತ್ತಾರೆ - ನಾನಂತೂ
ಬಹಳ ಕೆಲಸವನ್ನು ಮಾಡಬೇಕಾಗುತ್ತದೆ, ಎಲ್ಲರನ್ನೂ ಪಾವನ ಮಾಡಬೇಕಾಗುತ್ತದೆ. ನಾನು ಈ ಬ್ರಹ್ಮಾರವರ
ತನುವಿನಲ್ಲಿ ಪ್ರವೇಶ ಮಾಡಿ ಈ ಸಾಕಾರದ ಮೂಲಕ ಕಾರ್ಯ ಮಾಡಿಸುತ್ತೇನೆ. ಶಂಕರನ ಪಾತ್ರವೇನೂ ಇಲ್ಲ.
ಶಿವನ ಪೂಜೆಯು ನಡೆಯುತ್ತದೆ, ಶಿವನೇ ಕಲ್ಯಾಣಕಾರಿ ಜೋಳಿಗೆಯನ್ನು ತುಂಬಿಸುವವರಾಗಿದ್ದಾರೆ. ಶಿವ
ಪರಮಾತ್ಮಾಯ ನಮಃ ಎಂದು ಹೇಳುತ್ತಾರಲ್ಲವೆ. ಈ ಬ್ರಹ್ಮನೂ ಸಹ ಪ್ರಜಾಪಿತನಾದರು. ಬ್ರಹ್ಮನಿಂದ ವಿಷ್ಣು,
ವಿಷ್ಣುವಿನಿಂದ ಬ್ರಹ್ಮಾ, ಇವು ಬಹಳ ಗುಹ್ಯ ಮಾತುಗಳಾಗಿವೆ. ಇದನ್ನು ಕೇವಲ ನೀವು ಮಕ್ಕಳೇ
ತಿಳಿದುಕೊಂಡಿದ್ದೀರಿ. ಬುದ್ಧಿವಂತ ಮಕ್ಕಳ ಬುದ್ಧಿಯಲ್ಲಿ ಜ್ಞಾನವು ಬಹು ಬೇಗನೆ ಅರ್ಥವಾಗುತ್ತದೆ.
ಪತಿತ-ಪಾವನ ತಂದೆಯು ಯಾವಾಗ ಬರುತ್ತಾರೆಂದು ಮನುಷ್ಯರಿಗೇನೂ ತಿಳುವಳಿಕೆಯಿಲ್ಲ. ಈಗಂತೂ ಕಲಿಯುಗದ
ಅಂತ್ಯವಾಗಿದೆ, ಒಂದುವೇಳೆ ಕಲಿಯುಗದ ಅಂತ್ಯಕ್ಕೆ ಇನ್ನೂ 40 ಸಾವಿರ ವರ್ಷಗಳಿದೆ ಎಂದು ಹೇಳುವುದಾದರೆ
ಇನ್ನೆಷ್ಟು ಪತಿತರಾಗುವರು? ಎಷ್ಟು ದುಃಖವನ್ನು ಸಹನೆ ಮಾಡುವರು? ಕಲಿಯುಗದಲ್ಲಿ ಸುಖವಿರುವುದೇ
ಇಲ್ಲ. ಏನನ್ನೂ ಅರಿತುಕೊಂಡಿರದ ಕಾರಣ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳು ಪರಸ್ಪರ ಸೇರಿ
ಹೇಗೆ ಸರ್ವೀಸನ್ನು ವೃದ್ಧಿ ಪಡಿಸಬೇಕೆಂದು ಸಲಹೆ ತೆಗೆದುಕೊಳ್ಳಬೇಕು. ತಂದೆಯು ಯುಕ್ತಿಯನ್ನಂತೂ
ತಿಳಿಸುತ್ತಾ ಇರುತ್ತಾರೆ. ಮಕ್ಕಳು ಪರಸ್ಪರ ಸೇರಬೇಕಾಗಿದೆ. ಚಿತ್ರಗಳ ಬಗ್ಗೆ ಚೆನ್ನಾಗಿ
ತಿಳಿಸಬೇಕಾಗಿದೆ. ಡ್ರಾಮಾನುಸಾರ ಚಿತ್ರಗಳೂ ತಯಾರಾಗುತ್ತಿವೆ. ಮಕ್ಕಳಿಗೆ ತಿಳಿದಿದೆ - ಯಾವ-ಯಾವ
ಸಮಯವು ಕಳೆಯುತ್ತಾ ಹೋಗುತ್ತದೆಯೋ ಅದು ಹಾಗೆಯೇ ನಾಟಕವು ನಡೆಯುತ್ತಾ ಇರುತ್ತದೆ, ಮಕ್ಕಳ ಸ್ಥಿತಿಯು
ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ, ಇದು ನಡೆಯುತ್ತಾ ಇರುವುದು. ತಂದೆಯೂ ಸಹ ಸಾಕ್ಷಿಯಾಗಿ
ನೋಡುತ್ತಾರೆ, ಕೆಲ ಕೆಲವೊಮ್ಮೆ ಮಕ್ಕಳ ಮೇಲೆ ಗ್ರಹಚಾರಿ ಕುಳಿತುಕೊಳ್ಳುತ್ತದೆಯೆಂದರೆ ಅದನ್ನು
ಅಳಿಸುವುದಕ್ಕಾಗಿ ಪ್ರಯತ್ನ ಪಡುತ್ತಾರೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ತಂದೆಯನ್ನು ನೆನಪು
ಮಾಡಿರಿ. ಆದರೆ ದೇಹಾಭಿಮಾನದಲ್ಲಿ ಬರುವ ಕಾರಣ ಪೆಟ್ಟು ತಿನ್ನುತ್ತಾರೆ. ಇದರಲ್ಲಿ
ದೇಹೀ-ಅಭಿಮಾನಿಯಾಗಬೇಕಾಗಿದೆ ಆದರೆ ಮಕ್ಕಳಲ್ಲಿ ಬಹಳ ದೇಹಾಭಿಮಾನವಿದೆ. ನೀವು ದೇಹೀ-ಅಭಿಮಾನಿಯಾಗಿರಿ
ಆಗ ತಂದೆಯ ನೆನಪೂ ಇರುವುದು ಮತ್ತು ಸರ್ವೀಸಿನ ಉನ್ನತಿಯೂ ಆಗುತ್ತಿರುವುದು. ಯಾರು ಶ್ರೇಷ್ಠ
ಪದವಿಯನ್ನು ಪಡೆಯಬೇಕಾಗಿದೆಯೋ ಅವರು ಸದಾ ಸೇವೆಯಲ್ಲಿ ತೊಡಗಿರುತ್ತಾರೆ. ಒಂದುವೇಳೆ
ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವನ್ನೂ ಮಾಡುವುದಿಲ್ಲ. ಬಾಬಾ, ನಮಗೆ ಧಾರಣೆಯಾಗುವುದಿಲ್ಲ,
ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ತಾವೇ ಹೇಳುತ್ತಾರೆ. ಒಂದುವೇಳೆ
ಧಾರಣೆಯಾಗುವುದಿಲ್ಲವೆಂದರೆ ಖುಷಿಯೂ ಇರುವುದಿಲ್ಲ. ಯಾರಿಗೆ ಧಾರಣೆಯಾಗುವುದೋ ಅವರಿಗೆ ಖುಷಿಯೂ
ಇರುತ್ತದೆ, ಶಿವ ತಂದೆಯು ಬಂದಿದ್ದಾರೆಂಬುದನ್ನು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ
- ಮಕ್ಕಳೇ, ನೀವು ಬಹಳ ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ ತಿಳಿಸಿರಿ. ಕೆಲವರಂತೂ ಸರ್ವೀಸಿನಲ್ಲಿ
ತೊಡಗುತ್ತಾರೆ, ಪುರುಷಾರ್ಥ ಮಾಡುತ್ತಾ ಇರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ -
ಯಾವ-ಯಾವ ಕ್ಷಣವು ಕಳೆಯುತ್ತದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ ಮತ್ತೆ ಹಾಗೆಯೇ
ಪುನರಾವರ್ತನೆಯಾಗುತ್ತದೆ. ಮಕ್ಕಳಿಗೇ ತಿಳಿಸಲಾಗುತ್ತದೆ - ಹೊರಗಡೆ ಭಾಷಣ ಮಾಡುವ ಸಮಯದಲ್ಲಂತೂ
ಅನೇಕ ಪ್ರಕಾರದ ಮನುಷ್ಯರು ಬರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಎಲ್ಲಾ ವೇದ
ಶಾಸ್ತ್ರ, ಗೀತೆ ಮೊದಲಾದುದರ ಮೇಲೆ ಭಾಷಣ ಮಾಡುತ್ತಾರೆ ಆದರೆ ಅವರಿಗೆ ಇಲ್ಲಿ ಈಶ್ವರನು ತನ್ನ ಮತ್ತು
ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆಂಬುದು ತಿಳಿದೇ ಇಲ್ಲ. ಚಿತ್ರಗಳಲ್ಲಿ
ಪರಮಾತ್ಮನು ಯಾರೆಂಬುದನ್ನು ಎಷ್ಟು ಚೆನ್ನಾಗಿ ತೋರಿಸಿದ್ದಾರೆ! ಈ ಚಿತ್ರಗಳ ಬಗ್ಗೆ
ಪ್ರೊಜೆಕ್ಟರ್ನಲ್ಲಿ ತಿಳಿಸಲು ಸಾಧ್ಯವಿಲ್ಲ. ಪ್ರದರ್ಶನಿಯಲ್ಲಿ ಚಿತ್ರಗಳೂ ಇವೆ ಮತ್ತು ನೀವು
ತಿಳಿಸಿ ಕೇಳಬಹುದು - ಈಗ ಹೇಳಿರಿ - ಗೀತೆಯ ಭಗವಂತನು ಯಾರು? ಜ್ಞಾನ ಸಾಗರ ಯಾರು? ಪವಿತ್ರತೆ,
ಸುಖ-ಶಾಂತಿಯ ಸಾಗರ, ಮುಕ್ತಿದಾತ, ಮಾರ್ಗದರ್ಶಕ ಯಾರು? ಕೃಷ್ಣನಿಗೆ ಈ ರೀತಿ ಹೇಳಲು ಸಾಧ್ಯವಿಲ್ಲ,
ಪರಮಾತ್ಮನ ಮಹಿಮೆಯೇ ಬೇರೆಯಿದೆ. ಮೊದಲು ಬರೆಸಬೇಕು - ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು.
ಎಲ್ಲರಿಂದ ಸಹಿಯನ್ನೂ ತೆಗೆದುಕೊಳ್ಳಬೇಕಾಗಿದೆ.
(ಹಾಲ್ನಲ್ಲಿ ಪಕ್ಷಿಗಳು
ಹೊಡೆದಾಡುತ್ತಿವೆ) ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಜಗಳ-ಕಲಹವೇ ಇದೆ. ಎಲ್ಲರೂ ಪರಸ್ಪರ
ಹೊಡೆದಾಡುತ್ತಾ ಇರುತ್ತಾರೆ. ಮನುಷ್ಯರಲ್ಲಿಯೇ ಪಂಚ ವಿಕಾರಗಳ ಗಾಯನವಿದೆ, ಪ್ರಾಣಿಗಳ ಮಾತಿಲ್ಲ.
ಮನುಷ್ಯರಿಗಾಗಿಯೇ ವಿಕಾರಿ ಪ್ರಪಂಚ, ನಿರ್ವಿಕಾರಿ ಪ್ರಪಂಚದ ಗಾಯನವಿದೆ. ಕಲಿಯುಗದಲ್ಲಿ ಆಸುರೀ
ಸಂಪ್ರದಾಯ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿದೆ, ಮನುಷ್ಯರು ಇಷ್ಟು ತಮೋಪ್ರಧಾನ
ಬುದ್ಧಿಯವರಾಗಿದ್ದಾರೆ, ನಾವು ಆಸುರೀ ಸಂಪ್ರದಾಯದವರಾಗಿದ್ದೇವೆ ಎಂದು ತಿಳಿದುಕೊಳ್ಳುವುದೇ ಇಲ್ಲ.
ದೇವತೆಗಳ ಮುಂದೆ ಹೋಗಿ ನಾವು ನೀಚರು, ಪಾಪಿಗಳಾಗಿದ್ದೇವೆ. ನಾನು ನಿರ್ಗುಣನಲ್ಲಿ ಯಾವುದೇ
ಗುಣವಿಲ್ಲವೆಂದು ಹಾಡುತ್ತಾರೆ. ನೀವು ಅವರಿಗೆ ಸಿದ್ಧಮಾಡಿ ತಿಳಿಸಿರಿ. ಏಣಿಯ ಚಿತ್ರದಲ್ಲಿ ಬಹಳ
ಸ್ಪಷ್ಟವಾಗಿದೆ. ಹೇಗೆ ಏರುವ ಕಲೆಯಾಗುತ್ತದೆ ಮತ್ತು ಇಳಿಯುವ ಕಲೆಯಾಗುತ್ತದೆ ಎಂಬುದನ್ನು
ತೋರಿಸಿದ್ದಾರೆ. ಭಾರತವಾಸಿಗಳಿಗೆ ಮುಖ್ಯವಾದುದು ಏಣಿಯ ಚಿತ್ರವಾಗಿದೆ. ಇದು ಎಲ್ಲದಕ್ಕಿಂತ ಒಳ್ಳೆಯ
ಚಿತ್ರವಾಗಿದೆ, ಈ ಚಿತ್ರದ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಬಲ್ಲಿರಿ. 84 ಜನ್ಮಗಳನ್ನು
ಪೂರ್ಣಗೊಳಿಸಿ ಮತ್ತೆ ಮೊದಲ ನಂಬರಿನ ಜನ್ಮವನ್ನು ತೆಗೆದುಕೊಳ್ಳಬೇಕಾಗಿದೆ, ಮತ್ತೆ ಇಳಿಯುವ
ಕಲೆಯಲ್ಲಿ ಬರಬೇಕಾಗುತ್ತದೆ. ಎಲ್ಲರಿಗೆ ಹೇಗೆ ಮಾರ್ಗವನ್ನು ತಿಳಿಸಬೇಕೆಂದು ಪ್ರತಿಯೊಬ್ಬರಿಗೆ
ವಿಚಾರ ನಡೆಯಬೇಕು. ವಿಚಾರ ನಡೆಯದಿದ್ದರೆ ಸರ್ವೀಸ್ ಹೇಗೆ ಮಾಡುವಿರಿ? ಚಿತ್ರಗಳ ಬಗ್ಗೆ ತಿಳಿಸುವುದು
ಬಹಳ ಸಹಜವಾಗುತ್ತದೆ. ಸತ್ಯಯುಗದ ನಂತರ ಏಣಿಯನ್ನು ಇಳಿಯಲೇಬೇಕಾಗಿದೆ. ಮಕ್ಕಳಿಗೆ ತಿಳಿದಿದೆ -
ನಾವೀಗ ವರ್ಗಾವಣೆಯಾಗುತ್ತಿದ್ದೇವೆ ಆದರೆ ನೇರವಾಗಿ ಸತ್ಯಯುಗಕ್ಕೆ ಹೋಗುವುದಿಲ್ಲ. ಮೊದಲು
ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ನಾವು ಪಾತ್ರಧಾರಿಗಳಾಗಿದ್ದೇವೆ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ ಬಾಕಿ ನಿಮ್ಮಲ್ಲಿಯೂ ಈ ಡ್ರಾಮಾದ ಪಾತ್ರಧಾರಿಗಳೆಂದು ತಿಳಿದುಕೊಳ್ಳುವವರು
ನಂಬರ್ವಾರ್ ಇದ್ದಾರೆ. ನಾವು ಪಾತ್ರಧಾರಿಗಳೆಂದು ಹೇಳುವವರು ಪ್ರಪಂಚದಲ್ಲಿ ಮತ್ತ್ಯಾರೂ ಇಲ್ಲ. ನಾವು
ಬರೆಯುತ್ತೇವೆ - ಪ್ರತಿಯೊಬ್ಬ ಮನುಷ್ಯ ಮಾತ್ರನೂ ಈ ಬೇಹದ್ದಿನ ಡ್ರಾಮಾದ ಪಾತ್ರಧಾರಿಯಾಗಿದ್ದರೂ ಸಹ
ಡ್ರಾಮಾದ ಮುಖ್ಯ ಪಾತ್ರಧಾರಿಗಳು, ನಿರ್ದೇಶಕ, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ
ಆದ್ದರಿಂದ ಅವರು ಬುದ್ಧಿಹೀನರಾಗಿದ್ದಾರೆ. ಇದನ್ನು ಬರೆಯುವುದರಲ್ಲಿ ಏನೂ ಪರವಾಗಿಲ್ಲ. ಒಂದು
ಕಿವಿಯಿಂದ ಕೇಳಿ ಇನ್ನೊಂದರಿಂದ ತೆಗೆದು ಬಿಡಬಾರದು. ಸರ್ವೀಸ್, ಸರ್ವೀಸ್ ಮತ್ತು ಸರ್ವೀಸ್.....
ತಂದೆಗೆ ತಿಳಿದಿದೆ – ಮಕ್ಕಳ ಮೇಲೆ ಕೆಲವೊಮ್ಮೆ ಗ್ರಹಚಾರವು ಕುಳಿತುಕೊಳ್ಳುತ್ತದೆ, ಗ್ರಹಚಾರವು
ಕುಳಿತುಕೊಂಡಾಗ ಎಷ್ಟೊಂದು ನಷ್ಟವುಂಟಾಗುತ್ತದೆ. ಅದನ್ನು ತಂದೆಯು ತಿಳಿದುಕೊಂಡಿದ್ದಾರೆ.
ಸಾಹುಕಾರರು ಬಡವರಾಗಿ ಬಿಡುತ್ತಾರೆ. ಕಾರಣವಂತೂ ಇರುತ್ತದೆಯಲ್ಲವೆ. ಅನೇಕರಿಗೆ ತಂದೆಯು
ತಿಳಿಸುತ್ತಲೂ ಇರುತ್ತಾರೆ - ಮಕ್ಕಳೇ, ನಾಮ-ರೂಪದಲ್ಲಿ ಎಂದೂ ಸಿಲುಕಬೇಡಿ. ಇಲ್ಲವಾದರೆ ಮಾಯೆಯು
ಹೀಗಿದೆ, ಅದು ಮೂಗನ್ನಿಡಿದು ಬೀಳಿಸುತ್ತದೆ. ಮಾಯೆಯು ಬಹಳ ಮೋಸ ಮಾಡುತ್ತದೆ, ಇಲ್ಲಿ
ಪ್ರಿಯತಮ-ಪ್ರಿಯತಮೆಯರಾಗಬಾರದು. ಯಾವುದೇ ವಿಕಾರಕ್ಕಾಗಿ ಅವರು ಪ್ರಿಯತಮ -ಪ್ರಿಯತಮೆಯರಾಗುವುದಿಲ್ಲ.
ಕೆಲವರು ರೂಪಕ್ಕಾಗಿ ಬಲಿಹಾರಿಯಾಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಸೇವಾಕೇಂದ್ರಗಳಲ್ಲಿಯೂ
ಇಂತಹ ಮಾಯೆಯ ವಿಘ್ನಗಳು ಬರುತ್ತವೆ, ಒಬ್ಬರು ಇನ್ನೊಬ್ಬರ ನಾಮ-ರೂಪದಲ್ಲಿ ಸಿಲುಕುತ್ತಾರೆ. ಮಾಯೆಯು
ಇಷ್ಟು ಪ್ರಬಲವಾಗಿದೆ, ಮಾತೆಯು ಮಾತೆಯ ನಾಮ-ರೂಪದಲ್ಲಿ, ಕನ್ಯೆಯು ಕನ್ಯೆಯ ನಾಮ-ರೂಪದಲ್ಲಿ
ಸಿಲುಕುತ್ತಾರೆ. ಪುರುಷಾರ್ಥ ಮಾಡುತ್ತಿದ್ದರೂ ಮಾಯೆಯು ಹಿಡಿದುಕೊಂಡು ಬಿಡುತ್ತದೆ ಆದ್ದರಿಂದ
ತಂದೆಯು ಸಾವಧಾನ ನೀಡುತ್ತಾರೆ - ಮಕ್ಕಳೇ, ಮಾಯೆಯು ಬಹಳ ಸಿಕ್ಕಿ ಹಾಕಿಸುವ ಪ್ರಯತ್ನ ಮಾಡುವುದು
ಆದರೆ ನೀವು ಸಿಲುಕಬಾರದು. ದೇಹಾಭಿಮಾನದಲ್ಲಿ ಬರಬಾರದು, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು
ನೆನಪು ಮಾಡಬೇಕಾಗಿದೆ, ಮಾಯೆಯ ಮೋಸದಿಂದ ದೂರವಿರಬೇಕಾಗಿದೆ. ನೀವು ಮಕ್ಕಳನ್ನು ತಂದೆಯು ಸುಂದರ
ಹೂಗಳನ್ನಾಗಿ ಮಾಡಲು ಬಂದಿದ್ದಾರೆ. ನಿಮಗೆ ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಒಂದುವೇಳೆ
ಮನಸ್ಸಿನಲ್ಲಿ ಸಂಶಯ ಬಂದರೆ ಚೆನ್ನಾಗಿ ಸರ್ವೀಸ್ ಮಾಡಲು ಸಾಧ್ಯವಿಲ್ಲ. ಒಳಗೆ ಗುಟುಕರಿಸುತ್ತಾ
ಇರುತ್ತಾರೆ, ಇದರಲ್ಲಿ ಧೈರ್ಯವನ್ನು ಇಡಬೇಕಾಗಿದೆ. ಸಮಯವು ಬಹಳ ಕಡಿಮೆಯಿದೆ, ತಂದೆಯ ಮುರುಳಿಯನ್ನು
ಕೇಳುತ್ತೀರೆಂದರೆ ಉತ್ಸಾಹದಲ್ಲಿ ಬರುತ್ತೀರಿ, ಆತ್ಮ ಪ್ರಕಾಶ ಮಗುವು ಬಹಳ ಚೆನ್ನಾಗಿ ಚಿತ್ರಗಳ ಕಡೆ
ಗಮನ ಕೊಡುತ್ತಿದ್ದಾರೆ. ಬಾಂಬೆಯವರಿಗೂ ಬುದ್ಧಿಯಲ್ಲಿ ಬರಬೇಕಾಗಿದೆ. ಮುಖ್ಯಚಿತ್ರಗಳನ್ನು ಮೊದಲು
ಇವರು ಮಾಡಬೇಕಾಗಿದೆ. ಪರಿಶೀಲನೆ ಮಾಡಿಕೊಳ್ಳಿ, ಹೇಗೆ ಚಿತ್ರಗಳಲ್ಲಿ ಉನ್ನತಿಯಾಗಬೇಕು ಎಂದು ತಂದೆಯು
ಡೈರೆಕ್ಷನ್ ಕೊಡುತ್ತಾ ಇರುತ್ತಾರೆ. ಯಾವುದಾದರೂ ಇಂತಹ ಯುಕ್ತಿಯನ್ನು ರಚಿಸಿರಿ. ಏಣಿ ಚಿತ್ರವು
ವಿಮಾನ ನಿಲ್ದಾಣದಲ್ಲಿ ಹಾಕುವಂತಿರಬೇಕು, ಈ ಚಿತ್ರವನ್ನು ನೋಡಿ ಎಲ್ಲರೂ ಖುಷಿಪಡುವರು. ಕೊನೆಗೆ
ತಿಳಿದುಕೊಳ್ಳುತ್ತಾರೆ - ಇವರಿಗೆ ಮತ ಕೊಡುವವರು ಯಾರು? ಅಂದಾಗ ಮಕ್ಕಳಿಗೆ ಬಹಳ ನಶೆಯೇರಬೇಕು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನೀವು ಮಕ್ಕಳು
ಯುದ್ಧದ ಮೈದಾನದಲ್ಲಿದ್ದೀರಿ, ಮಾಯಾ ರಾವಣನೊಂದಿಗೆ ನಿಮ್ಮ ಯುದ್ಧವಿದೆ, ಮಾಯೆಯು ಬಹಳ ವಿಘ್ನಗಳನ್ನು
ಹಾಕುತ್ತದೆ. ಮಕ್ಕಳು ಬಹಳ ಸಾವಧಾನವಾಗಿರಬೇಕು.
2. ಪ್ರತಿಯೊಬ್ಬರೂ ತಮ್ಮ
ಉನ್ನತಿಗಾಗಿ ವಿಚಾರ ಮಾಡಬೇಕು, ಚಿತ್ರಗಳಲ್ಲಿ ಹೇಗೆ ತಿಳಿಸಬೇಕು, ಸರ್ವೀಸನ್ನು ಹೇಗೆ ವೃದ್ಧಿ
ಪಡಿಸಬೇಕು...... ಚಿತ್ರಗಳಲ್ಲಿ ಇಂತಹ ಯಾವ ಯುಕ್ತಿಯನ್ನು ರಚಿಸಬೇಕು, ಯಾವುದರಿಂದ ಮನುಷ್ಯರಿಗೆ
ಸಹಜವಾಗಿ ಅರ್ಥವಾಗಬೇಕು.
ವರದಾನ:
ದೇಹ-ಅಭಿಮಾನದ
ತ್ಯಾಗದ ಮೂಲಕ ಶ್ರೇಷ್ಠ ಭಾಗ್ಯವನ್ನು ರೂಪಿಸುವಂತಹ ಸರ್ವ ಸಿದ್ಧಿ ಸ್ವರೂಪ ಭವ.
ದೇಹ-ಅಭಿಮಾನದ ತ್ಯಾಗ
ಮಾಡುವ ಅರ್ಥಾತ್ ದೇಹಿ-ಅಭಿಮಾನಿ ಆಗುವುದರಿಂದ ತಂದೆಯ ಸರ್ವ ಸಂಬಂಧದ, ಸರ್ವ ಶಕ್ತಿಗಳ
ಅನುಭವವಾಗುತ್ತದೆ, ಈ ಅನುಭವವೇ ಸಂಗಮ ಯುಗದ ಸರ್ವ ಶ್ರೇಷ್ಠ ಭಾಗ್ಯವಾಗಿದೆ. ವಿಧಾತನ ಮೂಲಕ
ಸಿಕ್ಕಿರುವ ಈ ವಿಧಿಯನ್ನು ಉಪಯೋಗಿಸುವುದರಿಂದ ವೃದ್ಧಿಯೂ ಆಗುವುದು ಮತ್ತು ಸರ್ವ ಸಿದ್ಧಿಗಳೂ
ಪ್ರಾಪ್ತಿಯಾಗುವುದು. ದೇಹಧಾರಿಯ ಸಂಬಂಧ ಅಥವ ಸ್ನೇಹದಲ್ಲಂತು ತಮ್ಮ ಕಿರೀಟ, ಸಿಂಹಾಸನ ಮತ್ತು ತಮ್ಮ
ಸತ್ಯ ಸ್ವರೂಪ, ಎಲ್ಲವನ್ನೂ ಬಿಡಲಾಯಿತು ಅಂದಮೇಲೆ ತಂದೆಯ ಸ್ನೇಹದಲ್ಲಿ ದೇಹ-ಅಭಿಮಾನದ ತ್ಯಾಗವನ್ನು
ಮಾಡಲು ಸಾಧ್ಯವಿಲ್ಲವೆ!! ಇದೊಂದೇ ತ್ಯಾಗದಿಂದ ಸರ್ವ ಭಾಗ್ಯಗಳೂ ಪ್ರಾಪ್ತವಾಗಿ ಬಿಡುತ್ತದೆ.
ಸ್ಲೋಗನ್:
ಕ್ರೋಧ ಮುಕ್ತರು
ಆಗಬೇಕಾದರೆ ಸ್ವಾರ್ಥದ ಬದಲು ನಿಸ್ವಾರ್ಥವುಳ್ಳವರು ಆಗಿರಿ, ಇಚ್ಛೆಗಳ ರೂಪವನ್ನು ಪರಿವರ್ತನೆ
ಮಾಡಿರಿ.
ಅವ್ಯಕ್ತ ಸೂಚನೆಗಳು:-
ಅಪವಿತ್ರತೆಯ ಬೀಜವನ್ನು ಸಮಾಪ್ತಿ ಮಾಡಿ ಸಂಪೂರ್ಣ ಸ್ವಚ್ಛ ( ಪವಿತ್ರ ) ಆಗಿರಿ.
ತಂದೆಯೊಂದಿಗೆ ತಾವೆಲ್ಲರೂ
ಸಹ ಈ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದೀರಿ - ಪವಿತ್ರತೆಯ ಮೂಲಕ ನಾವು ಪ್ರಕೃತಿಯನ್ನು ಸಹ
ಪಾವನ ಮಾಡುವೆವು. ಎಂದಮೇಲೆ ಈ ಸಂಕಲ್ಪವನ್ನು ಪೂರ್ಣ ಮಾಡುವುದಕ್ಕಾಗಿ ಬಾಪ್ದಾದಾರವರು ಬಯಸುತ್ತಾರೆ
- ವಿಶ್ವದ ಪ್ರತಿಯೊಂದು ಮಗುವು ಮೊದಲು ಮೋಹದಿಂದ ಮುಕ್ತರಾಗಲಿ - ಸಂಬಂಧಿಕರೊಂದಿಗೆ ಆಗಲಿ,
ವ್ಯಕ್ತಿಗಳೊಂದಿಗೆ ಆಗಲಿ. ಸಾಧನೆಗಳನ್ನು ಉಪಯೋಗಿಸುವುದು ಬೇರೆ ಮಾತಾಗಿದೆ, ಅದರ ಮೇಲೆ ಮೋಹ ಬೇರೆ
ಮಾತಾಗಿದೆ. ಬಾಪ್ದಾದಾ ಪ್ರತಿಯೊಂದು ಮಗುವನ್ನು ಮೋಹದಿಂದ ಮುಕ್ತರನ್ನಾಗಿ ಮಾಡಲು ಬಯಸುತ್ತಾರೆ.