26.10.25 Avyakt Bapdada
Kannada
Murli 15.10.2007 Om Shanti Madhuban
“ಸಂಗಮಯುಗದ ಜೀವನ್ಮುಕ್ತ
ಸ್ಥಿತಿಯ ಅನುಭವ ಮಾಡಲು ಎಲ್ಲಾ ಹೊರೆ ಅಥವಾ ಬಂಧನವನ್ನು ತಂದೆಗೆ ಕೊಟ್ಟು ಡಬಲ್ಲೈಟ್ ಆಗಿ”
ಇಂದು ವಿಶ್ವದ ರಚಯಿತ
ಬಾಪ್ದಾದಾ ತನ್ನ ಮೊದಲನೇ ರಚನೆ ಅತಿ ಪ್ರಿಯ ಅದೃಷ್ಟವಂತ ಮಕ್ಕಳೊಂದಿಗೆ ಮಿಲನವನ್ನು
ಮಾಡುತ್ತಿದ್ದೇವೆ. ಕೆಲವರು ಸನ್ಮುಖದಲ್ಲಿದ್ದಾರೆ, ಕಣ್ಣುಗಳಿಂದ ನೋಡುತ್ತಿದ್ದಾರೆ ಮತ್ತು ನಾಲ್ಕೂ
ಕಡೆಯ ಕೆಲವು ಮಕ್ಕಳು ಹೃದಯದಲ್ಲಿ ಸಮಾವೇಶವಾಗಿದ್ದಾರೆ. ಬಾಪ್ದಾದಾ ಪ್ರತಿಯೊಬ್ಬ ಮಗುವಿನ
ಮಸ್ತಕದಲ್ಲಿ ಮೂರು ಭಾಗ್ಯದ ಮೂರು ನಕ್ಷತ್ರಗಳು ಹೊಳೆಯುತ್ತಿರುವುದನ್ನು ನೋಡುತ್ತಿದ್ದೇವೆ.
ಒಂದನೆಯದು - ಬಾಪ್ದಾದಾರವರ ಶ್ರೇಷ್ಠ ಪಾಲನೆ, ಎರಡನೆಯದು - ಶಿಕ್ಷಕನ ಮೂಲಕ ವಿದ್ಯೆ, ಮೂರನೆಯದು -
ಸದ್ಗುರುವಿನ ಮೂಲಕ ಸರ್ವ ವರದಾನಗಳ ಹೊಳೆಯುತ್ತಿರುವ ನಕ್ಷತ್ರ ಅಂದಾಗ ತಾವೆಲ್ಲರೂ ಸಹ ತಮ್ಮ
ಮಸ್ತಕದ ಮೇಲೆ ಹೊಳೆಯುತ್ತಿರುವಂತಹ ನಕ್ಷತ್ರದ ಅನುಭವ ಮಾಡುತ್ತಿದ್ದೀರಲ್ಲವೆ! ಸರ್ವ ಸಂಬಂಧ
ತಂದೆಯೊಂದಿಗಿದೆ ಆದರೂ ಸಹ ಜೀವನದಲ್ಲಿ ಈ ಮೂರು ಸಂಬಂಧಗಳ ಅವಶ್ಯಕತೆಯಿದೆ ಮತ್ತು ತಾವೆಲ್ಲಾ ಬಹಳ
ಕಾಲ ಅಗಲಿ ಮತ್ತೆ ಸಿಕ್ಕಿರುವ ಮುದ್ದು ಮಕ್ಕಳಿಗೆ ಸಹಜವಾಗಿ ಪ್ರಾಪ್ತಿಯಾಗಿದೆಯಲ್ಲವೆ!
ನಶೆಯಿದೆಯಲ್ಲವೆ! ಹೃದಯದಲ್ಲಿ ಹಾಡನ್ನು ಹಾಡುತ್ತಿರುತ್ತೀರಾ - ವಾಹ್ ಬಾಬಾ ವಾಹ್! ವಾಹ್ ಶಿಕ್ಷಕ
ವಾಹ್! ವಾಹ್ ಸದ್ಗುರು ವಾಹ್! ಪ್ರಪಂಚದವರಂತೂ ಲೌಕಿಕ ಗುರು ಯಾರನ್ನು ಮಹಾನ್ ಆತ್ಮನೆಂದು
ಹೇಳುತ್ತಾರೆ, ಅವರಿಂದ ಒಂದು ವರದಾನವನ್ನು ಪಡೆಯಲು ಎಷ್ಟೊಂದು ಪ್ರಯತ್ನ ಪಡುತ್ತಾರೆ ಮತ್ತು
ತಂದೆಯಂತೂ ಜನ್ಮತಃ ಸಹಜ ವರದಾನಗಳಿಂದ ಸಂಪನ್ನ ಮಾಡಿದ್ದಾರೆ. ಶ್ರೇಷ್ಠ ಭಾಗ್ಯವನ್ನು ಭಗವಂತ ತಂದೆಯು
ನಮ್ಮ ಮೇಲೆ ಇಷ್ಟೊಂದು ಬಲಿಹಾರಿಯಾಗುತ್ತಾರೆಂದು ಕನಸಿನಲ್ಲಿ ಯೋಚಿಸಿದ್ದೀರಾ! ಭಕ್ತರು ಭಗವಂತನ
ಗುಣ ಗಾನ ಮಾಡುತ್ತಾರೆ ಮತ್ತು ತಾವು ಅದೃಷ್ಟವಂತ ಮಕ್ಕಳ ಗುಣ ಗಾನವನ್ನು ಸ್ವಯಂ ಭಗವಂತ ತಂದೆಯು
ಮಾಡುತ್ತಾರೆ.
ಈಗಲೂ ಸಹ ತಾವೆಲ್ಲರೂ
ಭಿನ್ನ-ಭಿನ್ನ ದೇಶದಿಂದ ಯಾವ ವಿಮಾನದಲ್ಲಿ ಬಂದಿದ್ದೀರಿ? ಸ್ಥೂಲ ವಿಮಾನದಲ್ಲಿಯೋ ಅಥವಾ ಪರಮಾತ್ಮ
ಪ್ರೀತಿಯ ವಿಮಾನದಲ್ಲಿ ಎಲ್ಲಾ ಕಡೆಯಿಂದ ಬಂದು ತಲುಪಿದ್ದೀರಾ! ಪರಮಾತ್ಮನ ವಿಮಾನವು ಎಷ್ಟೊಂದು
ಸಹಜವಾಗಿ ಕರೆದುಕೊಂಡು ಬರುತ್ತದೆ, ಯಾವುದೇ ಕಷ್ಟವಿಲ್ಲ. ಎಲ್ಲರೂ ಪರಮಾತ್ಮ ಪ್ರೀತಿಯ ವಿಮಾನದಲ್ಲಿ
ತಲುಪಿದ್ದೀರಿ, ಅದಕ್ಕಾಗಿ ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು. ಬಾಪ್ದಾದಾರವರು ಒಂದೊಂದು
ಮಗುವನ್ನೂ ನೋಡಿ ಭಲೆ ಮೊದಲನೆಯ ಬಾರಿ ಬಂದಿರಬಹುದು, ಬಹಳ ಕಾಲದಿಂದ ಬರುತ್ತಿರಬಹುದು ಆದರೆ
ಬಾಪ್ದಾದಾ ಒಂದೊಂದು ಮಗುವಿನ ವಿಶೇಷತೆಯನ್ನು ತಿಳಿದಿದ್ದಾರೆ. ಬಾಪ್ದಾದಾರವರ ಯಾವುದೇ ಮಗು ಭಲೆ
ಚಿಕ್ಕವರಿರಲಿ, ದೊಡ್ಡವರಿರಲಿ, ಮಹಾವೀರರಿರಲಿ, ಪುರುಷಾರ್ಥಿಗಳಿರಲಿ ಆದರೆ ಪ್ರತಿಯೊಂದು ಮಗು
ಪ್ರಿಯವಾದ ಮಕ್ಕಳಾಗಿದ್ದಾರೆ - ಏಕೆ? ತಾವಂತೂ ತಂದೆಯನ್ನು ಹುಡುಕಿದಿರಿ, ಸಿಗಲಿಲ್ಲ ಆದರೆ
ಬಾಪ್ದಾದಾರವರು ತಾವು ಪ್ರತಿಯೊಬ್ಬ ಮಗುವನ್ನು ಬಹಳ ಪ್ರೀತಿ, ಸ್ನೇಹದಿಂದ ಮೂಲೆ-ಮೂಲೆಯಲ್ಲಿ
ಹುಡುಕಿದ್ದೇವೆ. ನೀವೆಲ್ಲರೂ ಪ್ರಿಯರಾಗಿದ್ದೀರಿ ಅದಕ್ಕಾಗಿ ಹುಡುಕಿದೆವು ಏಕೆಂದರೆ ತಂದೆಗೆ
ತಿಳಿದಿದೆ- ನನ್ನ ಯಾವುದೇ ಒಂದು ಮಗು ಯಾರಲ್ಲಿ ಯಾವುದೇ ವಿಶೇಷತೆಯೇ ಇಲ್ಲದಂತಹ ಮಕ್ಕಳು ಯಾರೂ
ಇಲ್ಲ. ಯಾವುದೋ ವಿಶೇಷತೆಯೇ ಕರೆ ತಂದಿದೆ. ಕೊನೆ ಪಕ್ಷ ಗುಪ್ತ ರೂಪದಿಂದ ಬಂದಿರುವಂತಹ ತಂದೆಯನ್ನು
ಅರ್ಥ ಮಾಡಿಕೊಂಡಿದ್ದೀರಿ. ನನ್ನ ಬಾಬಾ ಎಂದು ಹೇಳಿದಿರಿ, ಎಲ್ಲರೂ ನನ್ನ ಬಾಬಾ ಎಂದು
ಹೇಳುತ್ತೀರಲ್ಲವೆ! ನಿನ್ನ ಬಾಬಾ ಎಂದು ಹೇಳುವವರು ಯಾರಾದರೂ ಇದ್ದೀರಾ? ಎಲ್ಲರೂ ನನ್ನ ಬಾಬಾ ಎಂದು
ಹೇಳುತ್ತೀರಿ ಅಂದಾಗ ಇದು ವಿಶೇಷತೆಯಲ್ಲವೆ. ಇಷ್ಟು ದೊಡ್ಡ-ದೊಡ್ಡ ವಿಜ್ಞಾನಿಗಳು, ದೊಡ್ಡ-ದೊಡ್ಡ
ವಿ.ಐ.ಪಿ.,ಗಳು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ತಾವೆಲ್ಲರೂ ಅರಿತುಕೊಂಡಿರಲ್ಲವೆ.
ತನ್ನವರನ್ನಾಗಿ ಮಾಡಿಕೊಂಡಿರಲ್ಲವೆ. ತಂದೆಯೂ ಸಹ ತನ್ನವರನ್ನಾಗಿ ಮಾಡಿಕೊಂಡರು, ಇದೇ ಖುಷಿಯಲ್ಲಿ
ಪಾಲನೆಯನ್ನು ಪಡೆಯುತ್ತಾ ಹಾರುತ್ತಿರುತ್ತೀರಲ್ಲವೆ! ಹಾರುತ್ತಿದ್ದೀರಿ, ನಡೆಯುತ್ತಿಲ್ಲ,
ಹಾರುತ್ತಿದ್ದೀರಿ ಏಕೆಂದರೆ ನಡೆಯುವುದರಿಂದ ತಂದೆಯ ಜೊತೆ ತಮ್ಮ ಮನೆಗೆ ಹೋಗಲು ಸಾಧ್ಯವಿಲ್ಲ
ಏಕೆಂದರೆ ತಂದೆಯಂತೂ ಹಾರುವವರಾಗಿದ್ದಾರೆ ಅಂದಾಗ ನಡೆಯುವವರು ಹೇಗೆ ಜೊತೆಯಲ್ಲಿ ತಲುಪುತ್ತಾರೆ!
ಆದ್ದರಿಂದ ತಂದೆಯು ಎಲ್ಲಾ ಮಕ್ಕಳಿಗೆ ಯಾವ ವರದಾನವನ್ನು ಕೊಡುತ್ತೇವೆ? ಫರಿಸ್ತಾ ಸ್ವರೂಪ ಭವ.
ಫರಿಸ್ತಾ ಹಾರುತ್ತದೆ, ನಡೆಯುವುದಿಲ್ಲ, ಹಾರುತ್ತದೆ. ಅಂದಾಗ ತಾವೆಲ್ಲರೂ ಹಾರುವ ಕಲೆಯುಳ್ಳವರಲ್ಲವೆ!
ಆಗಿದ್ದೀರಾ? ಯಾರು ಹಾರುವ ಕಲೆಯಲ್ಲಿದ್ದೀರಿ ಅವರು ಕೈಯೆತ್ತಿರಿ. ಕೆಲವೊಮ್ಮೆ ನಡೆಯುವ ಕಲೆ,
ಕೆಲವೊಮ್ಮೆ ಹಾರುವ ಕಲೆಯೋ? ಈ ರೀತಿ ಇರಬಾರದು. ಸದಾ ಹಾರುವ ಕಲೆ, ಡಬಲ್ಲೈಟ್ ಆಗಿದ್ದೀರಲ್ಲವೆ? ಏಕೆ?
ಯೋಚಿಸಿ, ತಂದೆಯು ತಮ್ಮೆಲ್ಲರಿಂದ ಗ್ಯಾರಂಟಿ ತೆಗೆದುಕೊಂಡಿದ್ದಾರೆ, ಯಾವುದೇ ಪ್ರಕಾರದ ಹೊರೆ
ಒಂದುವೇಳೆ ಮನಸ್ಸಿನಲ್ಲಿ, ಬುದ್ಧಿಯಲ್ಲಿದ್ದರೆ ತಂದೆಗೆ ಕೊಟ್ಟು ಬಿಡಿ. ತಂದೆಯು ತೆಗೆದುಕೊಳ್ಳಲು
ಬಂದಿದ್ದಾರೆ, ತಂದೆಗೆ ಹೊರೆಯನ್ನು ಕೊಟ್ಟಿದ್ದೀರೋ ಅಥವಾ ಸ್ವಲ್ಪ ಸಂಭಾಲನೆ ಮಾಡಿಕೊಂಡು
ಇಟ್ಟುಕೊಂಡಿದ್ದೀರೋ? ಯಾವಾಗ ತೆಗೆದುಕೊಳ್ಳುವವರು ತೆಗೆದುಕೊಳ್ಳುತ್ತಿದ್ದಾರೆ, ಹೊರೆಯನ್ನು
ಕೊಡುವುದರಲ್ಲಿ ಯೋಚಿಸುವ ಮಾತೇನಿದೆ? ಹೊರೆಯನ್ನು ಸಂಭಾಲನೆ ಮಾಡುವುದು 63 ಜನ್ಮದ ಅಭ್ಯಾಸವಾಗಿದೆ,
ಅಂದಾಗ ಕೆಲವು ಮಕ್ಕಳು ಕೆಲವೊಮ್ಮೆ ಹೇಳುತ್ತಾರೆ - ನಮಗೆ ಇಷ್ಟವಿಲ್ಲ ಆದರೆ ಅಭ್ಯಾಸವಾಗಿ ಬಿಟ್ಟಿದೆ,
ಈಗ ಬಲಹೀನರಲ್ಲ ತಾನೆ! ಬಲಹೀನರೋ ಅಥವಾ ಶಕ್ತಿಶಾಲಿಗಳೋ? ಎಂದೂ ಬಲಹೀನರಾಗಬಾರದು,
ಶಕ್ತಿಶಾಲಿಗಳಾಗಬೇಕು. ಶಕ್ತಿಯರು ಬಲಶಾಲಿಗಳೋ, ಬಲಹೀನರಾಗಿದ್ದೀರೋ? ಶಕ್ತಿಶಾಲಿಗಳಲ್ಲವೆ? ಮುಂದೆ
ಕುಳಿತಿರುವವರು ಏನಾಗಿದ್ದೀರಿ? ಶಕ್ತಿಶಾಲಿಗಳಿದ್ದೀರಲ್ಲವೆ! ಹೊರೆಯನ್ನು ಇಟ್ಟುಕೊಳ್ಳುವುದು
ಇಷ್ಟವಾಗುತ್ತದೆಯೇನು? ಹೊರೆಯೊಂದಿಗೆ ನಿಮ್ಮ ಮನಸ್ಸಾಗಿದೆಯೇ? ಬಿಟ್ಟರೆ ಬಿಡುಗಡೆಯಾಗುತ್ತದೆ.
ಬಿಡಲಿಲ್ಲವೆಂದರೆ ಬಿಡುವುದಿಲ್ಲ. ಬಿಡುವುದರ ಸಾಧನವಾಗಿದೆ – ಧೃಡ ಸಂಕಲ್ಪ. ಕೆಲವು ಮಕ್ಕಳು
ಹೇಳುತ್ತಾರೆ – ಧೃಡ ಸಂಕಲ್ಪವನ್ನೇನೋ ಮಾಡುತ್ತೇವೆ ಆದರೆ, ಆದರೆ....... ಕಾರಣವೇನು? ಆದರೆ ಧೃಡ
ಸಂಕಲ್ಪವನ್ನೇನೋ ಮಾಡುತ್ತೀರಿ, ಮಾಡಿರುವಂತ ಧೃಡ ಸಂಕಲ್ಪವನ್ನು ರಿವೈಜ್ ಮಾಡಿಕೊಳ್ಳುವುದಿಲ್ಲ.
ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಸಿಕೊಳ್ಳಿ ಮತ್ತು ಅನುಭೂತಿ ಮಾಡಿ, ಹೊರೆಯೆಂದರೆ ಏನು ಮತ್ತು
ಡಬಲ್ಲೈಟ್ನ ಅನುಭೂತಿಯೇನು! ಅನುಭೂತಿ ಮಾಡುವ ಕೋರ್ಸನ್ನು ಈಗ ಸ್ವಲ್ಪ ಅಂಡರ್ಲೈನ್ ಮಾಡಿಕೊಳ್ಳಿ.
ಹೇಳುವುದು ಮತ್ತು ಯೋಚಿಸುವುದನ್ನು ಮಾಡುತ್ತೀರಿ ಆದರೆ ಮನಃಪೂರ್ವಕವಾಗಿ ಅನುಭೂತಿ ಮಾಡಿ.
ಹೊರೆಯೆಂದರೇನು ಮತ್ತು ಡಬಲ್ಲೈಟ್ ಏನಾಗಿರುತ್ತದೆ? ಅಂತರವನ್ನು ಮುಂದಿಟ್ಟುಕೊಳ್ಳಿ ಏಕೆಂದರೆ
ಬಾಪ್ದಾದಾ ಸಮಯದ ಸಮೀಪತೆಯ ಪ್ರಮಾಣ ಪ್ರತಿಯೊಬ್ಬ ಮಗುವಿನಲ್ಲಿ ಏನನ್ನು ನೋಡಲು ಬಯಸುತ್ತಾರೆ? ಏನು
ಹೇಳುತ್ತೀರೋ ಅದನ್ನು ಮಾಡಿ ತೋರಿಸಬೇಕು, ಏನು ಯೋಚಿಸುವಿರೋ ಅದನ್ನು ಸ್ವರೂಪದಲ್ಲಿ ತರಬೇಕು
ಏಕೆಂದರೆ ತಂದೆಯ ಆಸ್ತಿ ಜನ್ಮ ಸಿದ್ಧ ಅಧಿಕಾರದಲ್ಲಿ ಮುಕ್ತಿ-ಜೀವನ್ಮುಕ್ತಿ ಇದೆ. ತಾವು ಬಂದು
ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಪಡೆದುಕೊಳ್ಳಿ ಎಂದು ಎಲ್ಲರಿಗೂ ಇದೇ ನಿಮಂತ್ರಣವನ್ನೂ ಸಹ
ಕೊಡುತ್ತೀರಲ್ಲವೆ. ಅಂದಾಗ ಮುಕ್ತಿಧಾಮದಲ್ಲಿ ಮುಕ್ತಿಯ ಅನುಭವ ಮಾಡುವುದು ಅಥವಾ ಸತ್ಯಯುಗದಲ್ಲಿ
ಜೀವನ್ಮುಕ್ತಿಯ ಅನುಭವ ಮಾಡುವುದೋ ಅಥವಾ ಈ ಸಂಗಮಯುಗದಲ್ಲಿ ಮುಕ್ತಿ-ಜೀವನ್ಮುಕ್ತಿಯ ಸಂಸ್ಕಾರ
ಮಾಡಿಕೊಳ್ಳುವುದೋ? ಏಕೆಂದರೆ ನಾವು ಈಗ ತನ್ನ ಈಶ್ವರೀಯ ಸಂಸ್ಕಾರದಿಂದ ದೈವೀ ಸಂಸ್ಕಾರವನ್ನಾಗಿ
ರೂಪಿಸಿಕೊಳ್ಳುವವರಾಗಿದ್ದೇವೆಂದು ಹೇಳುತ್ತೀರಲ್ಲವೆ. ತಮ್ಮ ಸಂಸ್ಕಾರದಿಂದ ಹೊಸ ಜಗತ್ತನ್ನು
ಮಾಡುತ್ತಿದ್ದೀರಿ. ಈಗ ಸಂಗಮಯುಗದಲ್ಲಿಯೇ ಮುಕ್ತಿ-ಜೀವನ್ಮುಕ್ತಿಯ ಸಂಸ್ಕಾರವು ಇಮರ್ಜ್ ಆಗಬೇಕು.
ಅಂದಾಗ ಸರ್ವಬಂಧನಗಳಿಂದ ಮನಸ್ಸು-ಬುದ್ಧಿಯು ಮುಕ್ತವಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ. ಈ
ಬ್ರಾಹ್ಮಣ ಜೀವನದಲ್ಲಿ ಮುಕ್ತಿ-ಜೀವನ್ಮುಕ್ತಿಯ ಅನುಭವ ಮಾಡುವುದೇ ಬ್ರಾಹ್ಮಣ ಜೀವನದ
ಶ್ರೇಷ್ಠತೆಯಾಗಿದೆ ಏಕೆಂದರೆ ಸತ್ಯಯುಗದಲ್ಲಿ ಜೀವನ್ಮುಕ್ತ, ಜೀವನ ಬಂಧನ ಎರಡರ ಜ್ಞಾನ ಇರುವುದಿಲ್ಲ.
ಈಗ ಅನುಭವ ಮಾಡಲು ಸಾಧ್ಯವಿದೆ, ಜೀವನ ಬಂಧನವೆಂದರೆ ಏನು, ಜೀವನ್ಮುಕ್ತಿ ಎಂದರೆ ಏನು ಏಕೆಂದರೆ
ತಾವೆಲ್ಲರೂ ಅನೇಕ ಬಾರಿ ಪ್ರತಿಜ್ಞೆ ಮಾಡಿದ್ದೀರಿ, ಏನು ಮಾಡುತ್ತೀರಿ? ನೆನಪಿದೆಯೇ? ಈ ಬ್ರಾಹ್ಮಣ
ಜೀವನದ ಲಕ್ಷ್ಯವೇನೆಂದು ಯಾರನ್ನೇ ಕೇಳಿದರೆ ಏನು ಉತ್ತರವನ್ನು ಕೊಡುತ್ತೀರಿ? ತಂದೆಯ ಸಮಾನರಾಗುವುದು.
ಪಕ್ಕಾ ಅಲ್ಲವೆ? ತಂದೆಯ ಸಮಾನರಾಗಬೇಕಲ್ಲವೆ ಅಥವಾ ಸ್ವಲ್ಪ-ಸ್ವಲ್ಪ ಆಗಬೇಕಾ? ಸಮಾನರಾಗಬೇಕಲ್ಲವೆ!
ಸಮಾನರಾಗಬೇಕಾ? ಅಥವಾ ಸ್ವಲ್ಪ ನಡೆಯುವವರಿಗೆ ಸಮಾನರೆಂದು ಹೇಳುವುದಿಲ್ಲ ತಾನೆ? ಅಂದಾಗ ತಂದೆಯು
ಮುಕ್ತರಾಗಿದ್ದಾರೋ ಅಥವಾ ಬಂಧನದಲ್ಲಿದ್ದಾರೆಯೋ? ಅಂದಾಗ ಯಾವುದೇ ಪ್ರಕಾರದ ದೇಹದ, ಯಾವುದೇ ದೇಹದ
ಸಂಬಂಧದ, ಮಾತಾಪಿತ ಬಂಧು-ಸಖ ಇಲ್ಲ, ದೇಹದ ಜೊತೆ ಯಾವುದೆಲ್ಲಾ ಕರ್ಮೇಂದ್ರಿಯಗಳ ಸಂಬಂಧವಿದೆಯೋ ಆ
ಯಾವುದೇ ಕರ್ಮೇಂದ್ರಿಯದ ಸಂಬಂಧದ ಬಂಧನ, ಅಭ್ಯಾಸದ ಬಂಧನ, ಸ್ವಭಾವದ ಬಂಧನ, ಹಳೆಯ ಸಂಸ್ಕಾರದ
ಬಂಧನವಿದೆಯೆಂದರೆ ತಂದೆಯ ಸಮಾನ ಹೇಗಾದಿರಿ? ಮತ್ತು ಪ್ರತಿದಿನ ನಾವು ತಂದೆಯ ಸಮಾನರಾಗಲೇಬೇಕೆಂದು
ಪ್ರತಿಜ್ಞೆ ಮಾಡುತ್ತೀರಿ, ಕೈಯೆತ್ತಿಸಿದಾಗ ಎಲ್ಲರೂ ಏನು ಹೇಳುತ್ತೀರಿ - ಲಕ್ಷ್ಮೀ-ನಾರಾಯಣರಾಗಬೇಕು.
ಬಹಳ ಒಳ್ಳೊಳ್ಳೆಯ ಪ್ರತಿಜ್ಞೆ ಮಾಡುತ್ತಾರೆಂದು ಬಾಪ್ದಾದಾರವರಿಗೆ ಖುಷಿಯಾಗುತ್ತದೆ ಆದರೆ ವಾಯಿದೆಯ
ಲಾಭವನ್ನು ತೆಗೆದುಕೊಳ್ಳುವುದಿಲ್ಲ. ವಾಯಿದೆ ಮತ್ತು ಲಾಭದ ಬ್ಯಾಲೆನ್ಸ್ ತಿಳಿದಿಲ್ಲ. ವಾಯಿದೆಯ
ಫೈಲ್ ಬಾಪ್ದಾದಾರವರ ಬಳಿ ಬಹಳ ಬಹಳ ಬಹಳ ದೊಡ್ಡದಿದೆ. ಎಲ್ಲರದೂ ಫೈಲ್ ಇದೆ. ಹಾಗೆಯೇ ವಾಯಿದೆಯ ಫೈಲ್
ಬ್ಯಾಲೆನ್ಸ್ ಇರಲಿ. ಬ್ಯಾಲೆನ್ಸ್ ಇದ್ದಾಗ ಎಷ್ಟೊಂದು ಚೆನ್ನಾಗಿರುತ್ತದೆ.
ಸೇವಾಕೇಂದ್ರದ ಟೀಚರ್ಸ್
ಕುಳಿತಿದ್ದಾರಲ್ಲವೆ, ಇವರೂ ಸಹ ಸೇವಾಕೇಂದ್ರದ ನಿವಾಸಿಗಳು ಕುಳಿತಿದ್ದಾರೆ. ತಂದೆಯ ಸಮಾನರು
ಆಗುದಿರಲ್ಲವೆ. ಸೇವಾಕೇಂದ್ರದ ನಿಮಿತ್ತ ಮಕ್ಕಳು ಸಮಾನರಾಗಬೇಕಲ್ಲವೆ! ಇದ್ದೀರಾ? ಆಗಿಯೇ ಇದ್ದೀರಿ
ಆದರೆ ಕೆಲವೊಮ್ಮೆ ಸ್ವಲ್ಪ ಬಿಗುಮಾನವಾಗುತ್ತದೆಯೇ? ಬಾಪ್ದಾದಾ ಎಲ್ಲಾ ಮಕ್ಕಳ ಇಡೀ ದಿನದ ಸ್ಥಿತಿ
ಗತಿಯನ್ನು ನೋಡುತ್ತಿರುತ್ತಾರೆ. ತಮ್ಮ ದಾದಿಯೂ ಸಹ ವತನದಲ್ಲಿದ್ದಾರಲ್ಲವೆ, ದಾದಿಯವರು
ನೋಡುತ್ತಿದ್ದರು ಆಗ ಏನು ಹೇಳುತ್ತಿದ್ದರು? ಗೊತ್ತಿದೆಯೇ, ಬಾಬಾ ಹೀಗೂ ಸಹ ಇರುತ್ತಾರೆಯೇ ಎಂದು
ಹೇಳುತ್ತಿದ್ದರು. ಹೀಗೆ ಆಗುತ್ತದೆ, ಹೀಗೆ ಮಾಡುತ್ತಾರೆ, ನೀವು ನೋಡುತ್ತಿರುತ್ತೀರಾ? ಕೇಳಿದಿರಾ,
ನಿಮ್ಮ ದಾದಿ ಏನು ನೋಡಿದರು! ಈಗ ಬಾಪ್ದಾದಾರವರು ಇದನ್ನೇ ನೋಡಲು ಬಯಸುತ್ತೇವೆ - ಒಂದೊಂದು ಮಗು
ಮುಕ್ತಿ-ಜೀವನ್ಮುಕ್ತಿಯ ಆಸ್ತಿಗೆ ಅಧಿಕಾರಿಗಳಾಗಲಿ ಏಕೆಂದರೆ ಆಸ್ತಿಯು ಸಿಗುತ್ತದೆ,
ಸತ್ಯಯುಗದಲ್ಲಂತೂ ಸ್ವಾಭಾವಿಕ ಜೀವನವಿರುತ್ತದೆ, ಈಗಿನ ಅಭ್ಯಾಸದ ಸ್ವಾಭಾವಿಕ ಜೀವನವಾದರೆ ಆಸ್ತಿಗೆ
ಅಧಿಕಾರಿತನ ಈಗ ಸಂಗಮಯುಗದಲ್ಲಿದೆ ಆದ್ದರಿಂದ ಬಾಪ್ದಾದಾ ಇದನ್ನೇ ಬಯಸುತ್ತೇವೆ - ಪ್ರತಿಯೊಬ್ಬರೂ
ತನ್ನನ್ನು ಪರಿಶೀಲಿಸಿಕೊಳ್ಳಿ- ಯಾವುದೇ ಬಂಧನ ಸೆಳೆಯುತ್ತಿದೆಯೆಂದರೆ ಕಾರಣವನ್ನು ಯೋಚಿಸಿರಿ.
ಕಾರಣದ ಜೊತೆ ನಿವಾರಣೆಯನ್ನೂ ಸಹ ಯೋಚಿಸಿ. ನಿವಾರಣೆಯನ್ನು ಬಾಪ್ದಾದಾರವರ ಅನೇಕಬಾರಿ ಭಿನ್ನ-ಭಿನ್ನ
ರೂಪದಿಂದ ನೀಡುತ್ತಿದ್ದೇವೆ. ಸರ್ವ ಶಕ್ತಿಗಳ ವರದಾನವನ್ನು ಕೊಟ್ಟಿದ್ದೇವೆ, ಸರ್ವ ಗುಣಗಳ
ಖಜಾನೆಯನ್ನು ಕೊಟ್ಟಾಗಿದೆ, ಖಜಾನೆಯನ್ನು ಉಪಯೋಗಿಸುವುದರಿಂದ ಖಜಾನೆಯು ವೃದ್ಧಿಯಾಗುತ್ತದೆ. ಎಲ್ಲರ
ಬಳಿ ಖಜಾನೆಯಿದೆ, ಬಾಪ್ದಾದಾರವರು ನೋಡಿದ್ದೇವೆ, ಪ್ರತಿಯೊಬ್ಬರ ಸ್ಟಾಕ್ನ್ನೂ ಸಹ ನೋಡುತ್ತೇವೆ.
ಬುದ್ಧಿಯು ಸ್ಟಾಕ್ರೂಂ ಆಗಿದೆ ಅಂದಾಗ ಬಾಪ್ದಾದಾ ಎಲ್ಲರದನ್ನೂ ನೋಡಿದ್ದೇವೆ. ಸ್ಟಾಕ್ನಲ್ಲಿದೆ ಆದರೆ
ಖಜಾನೆಯನ್ನು ಸಮಯದಲ್ಲಿ ಉಪಯೋಗಿಸುವುದಿಲ್ಲ, ಕೇವಲ ಪಾಯಿಂಟ್ ರೂಪದಿಂದ ಯೋಚಿಸುತ್ತೀರಿ, ಹಾ ಇದನ್ನು
ಮಾಡಬಾರದು, ಇದನ್ನು ಮಾಡಬೇಕು ಎಂದು ಪಾಯಿಂಟ್ನ ರೂಪದಲ್ಲಿ ಬಳಸುತ್ತೀರಿ. ಯೋಚಿಸುತ್ತೀರಿ ಆದರೆ
ಪಾಯಿಂಟ್ ಆಗಿ ಪಾಯಿಂಟ್ನ್ನು ಉಪಯೋಗಿಸುವುದಿಲ್ಲ ಆದ್ದರಿಂದ ಪಾಯಿಂಟ್ ಹಾಗೆಯೇ ಉಳಿದು ಬಿಡುತ್ತದೆ.
ಬಿಂದುವಾಗಿ ಉಪಯೋಗಿಸಿದ್ದೇ ಆದರೆ ನಿವಾರಣೆಯಾಗುತ್ತದೆ. ಇದನ್ನು ಮಾಡಬಾರದು ಎಂದು ಹೇಳುತ್ತಲೂ
ಇರುತ್ತೀರಿ ಆದರೆ ಮರೆತು ಬಿಡುತ್ತೀರಿ. ಹೇಳುವುದರ ಜೊತೆಗೆ ಮರೆತು ಬಿಡುತ್ತೀರಿ. ಇಷ್ಟೂ ಸಹಜ
ವಿಧಿಯನ್ನು ತಿಳಿಸಲಾಗಿದೆ, ಸಂಗಮಯುಗದಲ್ಲಿ ಇರುವುದೇ ಕೇವಲ ಬಿಂದುವಿನ ಅದ್ಭುತ, ಕೇವಲ ಬಿಂದುವನ್ನು
ಉಪಯೋಗಿಸಿ ಮತ್ತೆ ಯಾವುದೇ ಮಾತ್ರೆಯ (ಚಿಹ್ನೆ) ಅವಶ್ಯಕತೆಯಿಲ್ಲ. ಮೂರು ಬಿಂದುಗಳನ್ನು ಉಪಯೋಗಿಸಿ.
ಆತ್ಮ ಬಿಂದು, ತಂದೆ ಬಿಂದು, ಡ್ರಾಮಾ ಬಿಂದು, ಮೂರು ಬಿಂದುವನ್ನು ಉಪಯೋಗಿಸಿದ್ದೇ ಆದರೆ ತಂದೆಯ
ಸಮಾನರಾಗುವುದು ಯಾವುದೇ ಕಷ್ಟವಿಲ್ಲ. ಬಿಂದುವನ್ನಿಡಲು ಬಯಸುತ್ತೀರಿ ಆದರೆ ಇಡುವ ಸಮಯದಲ್ಲಿ ಕೈ
ಅಲುಗಾಡುತ್ತದೆ, ಪ್ರಶ್ನಾರ್ಥಕ ಚಿಹ್ನೆಯಾಗುತ್ತದೆ ಅಥವಾ ಆಶ್ಚರ್ಯದ ರೇಖೆಯಾಗಿ ಬಿಡುತ್ತದೆ. ಅಲ್ಲಿ
ಕೈ ಅಲುಗಾಡುತ್ತದೆ, ಇಲ್ಲಿ ಬುದ್ಧಿ ಅಲುಗಾಡುತ್ತದೆ. ಇಲ್ಲವೆಂದರೆ ಮೂರು ಬಿಂದುವನ್ನು
ಸ್ಮೃತಿಯಲ್ಲಿಟ್ಟುಕೊಳ್ಳುವುದು ಕಷ್ಟವಿದೆಯೇ? ಕಷ್ಟವಿದೆಯೇ? ಬಾಪ್ದಾದಾರವರು ಮತ್ತೊಂದು ಸಹಜ
ಯುಕ್ತಿಯನ್ನೂ ಸಹ ತಿಳಿಸಿದ್ದೇವೆ - ಅದು ಏನು? ಆಶೀರ್ವಾದ ಕೊಡಿ, ಆಶೀರ್ವಾದವನ್ನು ತೆಗೆದುಕೊಳ್ಳಿ.
ಯೋಗ ಶಕ್ತಿಶಾಲಿಯಾಗಿರುವುದಿಲ್ಲ, ಧಾರಣೆಗಳು ಸ್ವಲ್ಪ ಕಡಿಮೆಯಾಗುತ್ತದೆ, ಭಾಷಣ ಮಾಡಲು
ಸಾಹಸವಿರುವುದಿಲ್ಲ ಆದರೆ ಆಶೀರ್ವಾದವನ್ನು ಕೊಡಿ, ಆಶೀರ್ವಾದವನ್ನು ತೆಗೆದುಕೊಳ್ಳಿ. ಒಂದು ಮಾತನ್ನು
ಮಾಡಿ ಮತ್ತೆಲ್ಲವನ್ನು ಬಿಟ್ಟು ಬಿಡಿ. ಒಂದು ಮಾತನ್ನು ಮಾಡಿ - ಆಶೀರ್ವಾದವನ್ನು ತೆಗೆದುಕೊಳ್ಳಬೇಕು
ಆಶೀರ್ವಾದವನ್ನು ಕೊಡಬೇಕು. ಏನೇ ಆಗಿ ಬಿಡಲಿ, ಯಾರು ಏನನ್ನೇ ಕೊಡಲಿ ಆದರೆ ನಾನು ಆಶೀರ್ವಾದವನ್ನು
ಕೊಡಬೇಕು, ಆಶೀರ್ವಾದನ್ನು ತೆಗೆದುಕೊಳ್ಳಬೇಕು. ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ, ಇದರಲ್ಲಿ
ಎಲ್ಲವೂ ಬಂದು ಬಿಡುತ್ತದೆ. ಒಂದುವೇಳೆ ಆಶೀರ್ವಾದವನ್ನು ಕೊಡುತ್ತೀರಿ ಮತ್ತು ಆಶೀರ್ವಾದವನ್ನು
ತೆಗೆದುಕೊಳ್ಳುತ್ತೀರೆಂದರೆ ಇದರಲ್ಲಿ ಶಕ್ತಿಗಳು ಮತ್ತು ಗುಣ ಬರುವುದಿಲ್ಲವೇನು? ಸ್ವಾಭಾವಿಕವಾಗಿ
ಬರುತ್ತದೆಯಲ್ಲವೆ. ಒಂದೇ ಲಕ್ಷ್ಯವನ್ನಿಟ್ಟುಕೊಳ್ಳಿ. ಮಾಡಿ ನೋಡಿ, ಒಂದು ದಿನ ಅಭ್ಯಾಸ ಮಾಡಿ ನೋಡಿ
ನಂತರ 7 ದಿನ ಮಾಡಿ ನೋಡಿ. ಅನ್ಯ ಯಾವುದೇ ಮಾತು ಬುದ್ಧಿಗೆ ಬರುವುದಿಲ್ಲವೆಂದರೆ ಬಿಟ್ಟು ಬಿಡಿ.
ಒಂದಂತೂ ಬರುತ್ತದೆ! ಏನೇ ಆಗಲಿ ಆಶೀರ್ವಾದವನ್ನು ಕೊಡಿ, ಆಶೀರ್ವಾದವನ್ನು ತೆಗೆದುಕೊಳ್ಳಿ. ಇದನ್ನು
ಮಾಡಲು ಸಾಧ್ಯವಿದೆಯೋ ಅಥವಾ ಇಲ್ಲವೋ? ಮಾಡಲು ಸಾಧ್ಯವಿದೆಯೇ? ಒಳ್ಳೆಯದು - ಯಾವಾಗ ಇಲ್ಲಿಂದ
ಹೋಗುವಿರೋ ಆಗ ಪ್ರಯತ್ನ ಪಡಬೇಕು. ಇದರಲ್ಲಿ ಎಲ್ಲರೂ ತಾನಾಗಿಯೇ ಯೋಗಯುಕ್ತರಾಗಿ ಬಿಡುತ್ತೀರಿ
ಏಕೆಂದರೆ ವ್ಯರ್ಥ ಕರ್ಮವನ್ನು ಮಾಡುವುದೇ ಇಲ್ಲವೆಂದರೆ ಯೋಗಯುಕ್ತರಾಗಿ ಬಿಡುತ್ತೀರಲ್ಲವೆ. ಆದರೆ
ಆಶೀರ್ವಾದವನ್ನು ಕೊಡಬೇಕು, ಆಶೀರ್ವಾದವನ್ನು ಕೊಡಬೇಕೆಂಬ ಲಕ್ಷ್ಯವನ್ನಂತೂ ಇಟ್ಟುಕೊಳ್ಳಿ. ಯಾರು
ಏನೇ ಕೊಡಲಿ, ಶಾಪವೇ ಸಿಗಲಿ, ಕ್ರೋಧದ ಮಾತೂ ಸಹ ಬರುತ್ತದೆ, ಏಕೆಂದರೆ ವಾಯಿದೆ ಮಾಡಿದ್ದೀರಲ್ಲವೆ
ಅಂದಾಗ ಇವರು ವಾಯಿದೆ ಮಾಡುತ್ತಿದ್ದಾರೆಂದು ಮಾಯೆಯೂ ಸಹ ಕೇಳಿಸಿಕೊಳ್ಳುತ್ತಿದೆ. ಅದೂ ಸಹ ತನ್ನ
ಕೆಲಸವನ್ನು ಮಾಡುತ್ತದೆಯಲ್ಲವೆ. ಮಾಯಾಜೀತರಾಗಿದ್ದೇ ಆದರೆ ಮತ್ತೆ ಮಾಡುವುದಿಲ್ಲ. ಈಗ
ಮಾಯಾಜೀತರಾಗುತ್ತಿದ್ದೀರಿ ಆದ್ದರಿಂದ ಅದು ತನ್ನ ಕೆಲಸವನ್ನು ಮಾಡುತ್ತದೆ ಆದರೆ ನಾನು
ಆಶೀರ್ವಾದವನ್ನು ಕೊಡಬೇಕು, ಆಶೀರ್ವಾದವನ್ನು ತೆಗೆದುಕೊಳ್ಳಬೇಕು, ಇದು ಸಾಧ್ಯವಿದೆಯೇ?
ಸಾಧ್ಯವಿದೆಯೇ? ಸಾಧ್ಯವಿದೆ ಎನ್ನುವವರು ಕೈಯನ್ನೆತ್ತಿರಿ. ಒಳ್ಳೆಯದು - ಶಕ್ತಿಯರು ಕೈಯೆತ್ತಿರಿ.
ಹಾ! ಸಾಧ್ಯವಿದೆ. ಎಲ್ಲಾ ಕಡೆಯ ಟೀಚರ್ಸ್ ಬಂದಿದ್ದೀರಲ್ಲವೆ, ಎಲ್ಲಾ ಕಡೆಯ ಟೀಚರ್ಸ್
ಬಂದಿದ್ದೀರಲ್ಲವೆ. ನೀವು ನಿಮ್ಮ ದೇಶಕ್ಕೆ ಹೋಗುತ್ತೀರೆಂದರೆ ಮೊಟ್ಟ ಮೊದಲು ಎಲ್ಲರಿಗೂ ಒಂದುವಾರ
ಇದೇ ಹೋಮ್ವರ್ಕ್ನ್ನು ಮಾಡಿಸಬೇಕು ಮತ್ತು ಫಲಿತಾಂಶವನ್ನು ಕಳುಹಿಸಬೇಕು - ಎಷ್ಟು ಜನರು ತರಗತಿಯಲ್ಲಿ
ಇರುತ್ತಾರೆ, ಎಷ್ಟು ಜನರು ಓ.ಕೆ. ಆಗಿದ್ದಾರೆ, ಎಷ್ಟು ಜನ ಕಚ್ಚಾ ಇದ್ದಾರೆ ಮತ್ತು ಪಕ್ಕಾ ಇದ್ದಾರೆ.
ಓ.ಕೆ., ಮಧ್ಯದಲ್ಲಿ ಲೈನ್ ಹಾಕಬೇಕು. ಇಷ್ಟೇ ಸಮಾಚಾರವನ್ನು ಕೊಡಿ - ಇಷ್ಟು ಜನರಿದ್ದಾರೆ, ಓ.ಕೆ.,
ಇಷ್ಟು ಜನರಲ್ಲಿ ಓ.ಕೆ.,ಗೆ ಗೆರೆಯೆಳೆದಿದೆ. ಇದರಲ್ಲಿ ನೋಡಿಕೊಳ್ಳಿ, ಡಬಲ್ ವಿದೇಶಿಗಳು
ಬಂದಿದ್ದೀರಲ್ಲವೆ ಅಂದಾಗ ಡಬಲ್ ಕೆಲಸವನ್ನು ಮಾಡುವವರಲ್ಲವೆ. ಒಂದುವಾರ ಫಲಿತಾಂಶವನ್ನು ಕಳುಹಿಸಿ
ಮತ್ತೆ ಬಾಪ್ದಾದಾ ನೋಡುತ್ತೇವೆ, ಸಹಜವೆ? ಸಹಜವಲ್ಲವೆ? ಕಷ್ಟವಲ್ಲ ತಾನೆ? ಮಾಯೆ ಬರುತ್ತದೆ, ತಾವು
ಹೇಳುತ್ತೀರಿ - ಬಾಬಾ ನನಗೆ ಮೊದಲು ಎಂದೂ ಸಹ ಬರುತ್ತಿರಲಿಲ್ಲ, ಈಗ ಬರುತ್ತಿದೆ. ಇದಾಗುತ್ತಿದೆ,
ಆದರೆ ಧೃಡ ನಿಶ್ಚಯವುಳ್ಳವರಿಗೆ ನಿಶ್ಚಿತ ವಿಜಯವಿದೆ. ಧೃಡತೆಯ ಫಲ ಸಫಲತೆಯಾಗಿದೆ. ಸಫಲತೆಯಾಗದಿರಲು
ಕಾರಣ ಧೃಡತೆಯ ಕೊರತೆಯಾಗಿದೆ. ಧೃಡತೆಯ ಸಫಲತೆಯನ್ನು ಮಾಡಿಕೊಳ್ಳಬೇಕು.
ಹೇಗೆ ಸೇವೆಯನ್ನು
ಒಲವು-ಉತ್ಸಾಹದಿಂದ ಮಾಡುತ್ತಿದ್ದೀರಿ ಹಾಗೆಯೇ ಸ್ವಯಂ ಪ್ರತಿ ಸೇವೆ, ಸ್ವ ಸೇವೆ ಹಾಗೂ ವಿಶ್ವ ಸೇವೆ,
ಸ್ವ ಸೇವೆ ಅರ್ಥಾತ್ ಪರಿಶೀಲಿಸಿಕೊಳ್ಳುವುದು ಮತ್ತು ತನ್ನನ್ನು ತಂದೆಯ ಸಮಾನ ಮಾಡಿಕೊಳ್ಳುವುದು.
ಯಾವುದೇ ಕೊರತೆ, ಬಲಹೀನತೆಯನ್ನು ತಂದೆಗೆ ಕೊಟ್ಟು ಬಿಡಬೇಕಲ್ಲವೆ, ಏಕೆ ಇಟ್ಟುಕೊಂಡಿದ್ದೀರಿ,
ತಂದೆಗೆ ಇಷ್ಟವಾಗುವುದಿಲ್ಲ. ಏಕೆಂದರೆ ಬಲಹೀನತೆಯನ್ನು ಇಟ್ಟುಕೊಳ್ಳುತ್ತೀರಾ? ಕೊಟ್ಟು ಬಿಡಿ.
ಕೊಡುವಂತಹ ಸಮಯದಲ್ಲಿ ಚಿಕ್ಕಮಗುವಾಗಿ ಬಿಡಿ. ಹೇಗೆ ಚಿಕ್ಕ ಮಗು ಯಾವುದೇ ವಸ್ತುವನ್ನು ತನ್ನ ಬಳಿ
ಇಟ್ಟುಕೊಳ್ಳಲು ಸಾಧ್ಯವಿಲ್ಲ, ಯಾವುದೇ ವಸ್ತು ಇಷ್ಟವಾಗಲಿಲ್ಲವೆಂದರೆ ಏನು ಮಾಡುತ್ತದೆ? ಮಮ್ಮಿ,
ಪಪ್ಪಾ ಇದನ್ನು ನೀವೇ ತೆಗೆದುಕೊಳ್ಳಿ ಎಂದು ಹೇಳುತ್ತದೆ ಹಾಗೆಯೇ ಯಾವುದೇ ಪ್ರಕಾರದ ಹೊರೆ, ಬಂಧನವು
ಇಷ್ಟವಾಗುವುದಿಲ್ಲ ಏಕೆಂದರೆ ಬಾಪ್ದಾದಾ ನೋಡುತ್ತೇವೆ - ಒಂದು ಕಡೆ ಇದು ಒಳ್ಳೆಯದಲ್ಲ, ಸರಿಯಿಲ್ಲ
ಆದರೆ ಏನು ಮಾಡುವುದು, ಹೇಗೆ ಮಾಡುವುದು ಅಂದಾಗ ಇದೂ ಸಹ ಒಳ್ಳೆಯದಲ್ಲ. ಒಂದು ಕಡೆ ಚೆನ್ನಾಗಿಲ್ಲ
ಎಂದು ಹೇಳುತ್ತಿರುತ್ತೀರಿ, ಮತ್ತೊಂದು ಕಡೆ ಸಂಭಾಲನೆ ಮಾಡಿ ಇಟ್ಟುಕೊಳ್ಳುತ್ತೀರಿ ಅಂದಾಗ ಇದಕ್ಕೆ
ಏನು ಹೇಳುವುದು? ಒಳ್ಳೆಯದು ಎಂದು ಹೇಳುವುದೇ? ಒಳ್ಳೆಯದಂತೂ ಅಲ್ಲ. ಅಂದಾಗ ತಾವು ಏನಾಗಬೇಕು?
ಒಳ್ಳೆಯದಲ್ಲ, ಒಳ್ಳೆಯದರಲ್ಲಿಯೂ ಒಳ್ಳೆಯದು. ಅಂದಾಗ ಯಾವುದೇ ಇಂತಹ ಮಾತು ಬಂದಾಗ ಬಾಬಾ
ಪ್ರತ್ಯಕ್ಷವಾಗಿ ನಿಮ್ಮ ಮುಂದೆ ಬಂದು ಬಿಡುತ್ತಾರೆ, ಅವರಿಗೆ ಕೊಟ್ಟು ಬಿಡಿ ಮತ್ತು ಒಂದುವೇಳೆ
ಬಲಹೀನತೆಯು ಹಿಂತಿರುಗಿ ಬಂದರೆ ಮತ್ತೆ ಇದು ತಂದೆಯದು ಎಂದು ತಿಳಿದು ಕೊಟ್ಟು ಬಿಡಿ.
ಕೊಟ್ಟಿರುವುದರ ಮೇಲೆ ವಿಚಾರ ಮಾಡಬಾರದು ಏಕೆಂದರೆ ತಾವಂತೂ ಕೊಟ್ಟು ಬಿಟ್ಟಿದ್ದೀರಿ, ಇದು ತಂದೆಯ
ವಸ್ತುವಾಯಿತು. ತಂದೆಯ ವಸ್ತುವನ್ನು ಅಥವಾ ಬೇರೆಯವರ ವಸ್ತುವನ್ನು ತಪ್ಪಾಗಿಯೂ ಬಂದರೆ ಅದನ್ನು
ಅಲೆಮಾರಿನಲ್ಲಿ ಇಟ್ಟು ಬಿಡುತ್ತೀರೇನು? ಇಡುತ್ತೀರಾ? ಅದನ್ನು ತೆಗೆದು ಬಿಡುತ್ತೀರಲ್ಲವೆ. ಏನಾದರೂ
ಮಾಡಿ ತೆಗೆಯುತ್ತೀರಿ, ಇಟ್ಟುಕೊಳ್ಳುವುದಿಲ್ಲ ಸಂಭಾಲನೆ ಮಾಡುವುದಿಲ್ಲ ಅಲ್ಲವೆ. ಅಂದಾಗ ಕೊಟ್ಟು
ಬಿಡಿ. ತಂದೆಯು ತೆಗೆದುಕೊಳ್ಳಲು ಬಂದಿದ್ದಾರೆ. ನಿಮ್ಮ ಬಳಿ ಕೊಡಲು ಮತ್ತೇನೂ ಇಲ್ಲ ಆದರೆ ಇದನ್ನಂತೂ
ಕೊಡಬಹುದಲ್ಲವೆ. ಎಕ್ಕದ ಹೂ ಇದೆ, ಅದನ್ನು ಕೊಟ್ಟು ಬಿಡಿ. ನಿಮ್ಮ ಬಳಿ ಸಂಭಾಲನೆ ಮಾಡುವುದು
ಚೆನ್ನಾಗಿರುತ್ತದೆಯೇ?
ಒಳ್ಳೆಯದು ನಾಲ್ಕೂ ಕಡೆಯ
ಎಲ್ಲಾ ಬಾಪ್ದಾದಾರವರ ಹೃದಯ ಪ್ರಿಯ ಮಕ್ಕಳು, ದಿಲಾರಾಮ್ ಆಗಿದ್ದಾರಲ್ಲವೇ, ಆದ್ದರಿಂದ ದಿಲಾರಾಮನ
ಹೃದಯ ಪ್ರಿಯ ಮಕ್ಕಳೇ, ಪ್ರೀತಿಯ ಅನುಭವಗಳಲ್ಲಿ ಸದಾ ತೇಲುತ್ತಿರುವಂತಹ ಮಕ್ಕಳೇ, ಒಬ್ಬ ತಂದೆ ಬೇರೆ
ಯಾರೂ ಇಲ್ಲ. ಸ್ವಪ್ನದಲ್ಲಿಯೂ ಬೇರೆ ಯಾರೂ ಇಲ್ಲ, ಈ ರೀತಿ ಬಾಪ್ದಾದಾರವರು ಅತೀ ಪ್ರೀತಿಯ ಹಾಗೂ ಅತೀ
ದೇಹಬಾನದಿಂದ ಭಿನ್ನ, ಅಗಲಿ ಹೋದ ಪದಮಾಗುಣ ಭಾಗ್ಯಶಾಲಿ ಮಕ್ಕಳಿಗೆ ಹೃದಯದ ನೆನಪು, ಪ್ರೀತಿ ಹಾಗೂ
ಪದಮಾ-ಪದಮಾಗುಣ ಆಶೀರ್ವಾದಗಳು ಇರಲಿ, ಜೊತೆಯಲ್ಲಿ ಬಾಲಕ ಸೋ ಮಾಲೀಕ ಮಕ್ಕಳಿಗೆ ಬಾಪ್ದಾದಾರವರ
ನಮಸ್ತೆ.
ವರದಾನ:
ಈಶ್ವರೀಯ
ಮರ್ಯಾದೆಗಳ ಆಧಾರದ ಮೇಲೆ ವಿಶ್ವದಮುಂದೆ ಉದಾಹರಣೆಯಾಗುವ ಸಹಜಯೋಗಿ ಭವ.
ವಿಶ್ವದ ಮುಂದೆ
ಉದಾಹರಣೆಯಾಗುವುದಕ್ಕಾಗಿ ಅಮೃತವೇಳೆಯಿಂದ ರಾತ್ರಿಯವರೆಗೆ, ಈಶ್ವರೀಯ ಮರ್ಯಾದೆಗಳೇನಿದೆಯೋ
ಅದರನುಸಾರವಾಗಿ ನಡೆಯುತ್ತಿರಿ. ವಿಶೇಷವಾಗಿ ಅಮೃತವೇಳೆಯ ಮಹತ್ವವನ್ನು ತಿಳಿದುಕೊಂಡು, ಆ ಸಮಯವನ್ನು
ಶಕ್ತಿಶಾಲಿ ಸ್ಥಿತಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಇಡೀ ದಿನದ ಜೀವನವು ಮಹಾನ್ ಆಗಿ ಬಿಡುತ್ತದೆ.
ಯಾವಾಗ ಅಮೃತವೇಳೆಯಲ್ಲಿ ವಿಶೇಷವಾಗಿ ತಂದೆಯಿಂದ ಶಕ್ತಿಯನ್ನು ತುಂಬಿಕೊಂಡುತ್ತೀರಿ, ಆಗ ಶಕ್ತಿ
ಸ್ವರೂಪರಾಗಿ ನಡೆಯುವುದರಿಂದ ಯಾವುದೇ ಕಾರ್ಯದಲ್ಲಿ ಕಷ್ಟದ ಅನುಭವವಾಗುವುದಿಲ್ಲ ಮತ್ತು ಮರ್ಯಾದಾ
ಪೂರ್ವಕ ಜೀವನವನ್ನು ಕಳೆಯುವುದರಿಂದ (ಮಾಡುವುದರಿಂದ) ಸಹಜಯೋಗಿಯ ಸ್ಥಿತಿಯೂ ಸಹ ಸ್ವತಹವಾಗಿ ಆಗಿ
ಬಿಡುತ್ತದೆ. ನಂತರ ವಿಶ್ವವು ತಾವುಗಳ ಜೀವನವನ್ನು ನೋಡಿ ತನ್ನ ಜೀವನವನ್ನು ಮಾಡಿಕೊಳ್ಳುತ್ತಾರೆ.
ಸ್ಲೋಗನ್:
ತಮ್ಮ ಚಲನೆ
ಮತ್ತು ಚಹರೆಯಿಂದ ಪವಿತ್ರತೆಯ ಶ್ರೇಷ್ಠತೆಯ ಅನುಭವವನ್ನು ಮಾಡಿಸಿರಿ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಪ್ರಯೋಗಿ ಆತ್ಮ
ಸಂಸ್ಕಾರಗಳ ಮೇಲೆ, ಪ್ರಕೃತಿ ಮೂಲಕ ಬರುವಂತಹ ಪರಿಸ್ಥಿತಿಗಳ ಮೇಲೆ ಮತ್ತು ವಿಕಾರಗಳ ಮೇಲೆ ಸದಾ
ವಿಜಯಿಯಾಗುವರು. ಯೋಗಿ ಅಥವಾ ಪ್ರಯೋಗಿ ಆತ್ಮರ ಮುಂದೆ ಈ ಐದು ವಿಕಾರ ರೂಪಿ ಸರ್ವ ಕೊರಳಿನ ಮಾಲೆ
ಅಥವಾ ಖುಷಿಯಿಂದ ನರ್ತಿಸುವ ಸ್ಟೇಜ್ ಆಗಿ ಬಿಡುವುದು.