27.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ನಾಜೂಕುತನವೂ ಸಹ ದೇಹಾಭಿಮಾನವಾಗಿದೆ, ಮುನಿಸಿಕೊಳ್ಳುವುದು-ಅಳುವುದು, ಇವೆಲ್ಲಾ ಆಸುರೀ ಸಂಸ್ಕಾರಗಳು
ನೀವು ಮಕ್ಕಳಲ್ಲಿರಬಾರದು, ಸುಖ-ದುಃಖ, ಮಾನ-ಅಪಮಾನ ಎಲ್ಲವನ್ನೂ ಸಹನೆ ಮಾಡಬೇಕಾಗಿದೆ"
ಪ್ರಶ್ನೆ:
ಸರ್ವೀಸಿನಲ್ಲಿ
ಆಲಸ್ಯವು ಬರಲು ಮುಖ್ಯ ಕಾರಣವೇನು?
ಉತ್ತರ:
ಯಾವಾಗ
ದೇಹಾಭಿಮಾನದ ಕಾರಣ ಒಬ್ಬರು ಇನ್ನೊಬ್ಬರ ಕೊರತೆಗಳನ್ನು ನೋಡತೊಡಗುತ್ತಾರೆಯೋ ಆಗ ಸರ್ವೀಸಿನಲ್ಲಿ
ಉಮ್ಮಂಗವು ಕಡಿಮೆಯಾಗುತ್ತದೆ, ಪರಸ್ಪರ ಆಗದೇ ಇರುವುದೂ ಸಹ ದೇಹಾಭಿಮಾನವಾಗಿದೆ. ನಾನು ಇಂತಹವರ ಜೊತೆ
ನಡೆಯುವುದಿಲ್ಲ, ನಾನು ಇಲ್ಲಿರುವುದಿಲ್ಲ... ಇದೆಲ್ಲವೂ ನಾಜೂಕುತನವಾಗಿದೆ. ಈ ಮಾತುಗಳು ಬಾಯಿಂದ
ಹೊರ ಬರುವುದೆಂದರೆ ಮುಳ್ಳುಗಳಾಗುವುದು, ಅವಜ್ಞಾಕಾರಿಗಳಾಗುವುದಾಗಿದೆ. ತಂದೆಯು ತಿಳಿಸುತ್ತಾರೆ -
ಮಕ್ಕಳೇ, ನೀವು ಆತ್ಮಿಕ ಯೋಧರಾಗಿದ್ದೀರಿ ಆದ್ದರಿಂದ ಆದೇಶ ಸಿಕ್ಕಿದ ಕೂಡಲೆ ಹಾಜರಾಗಿ ಬಿಡಬೇಕು.
ಯಾವುದೇ ಮಾತಿನಲ್ಲಿ ನೆಪ ಹೇಳಬೇಡಿ.
ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳಿಗೆ ಮೊದಲು ಈ ಶಿಕ್ಷಣವು
ಸಿಗುತ್ತದೆ, ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ದೇಹಾಭಿಮಾನವನ್ನು ಬಿಟ್ಟು ದೇಹೀ ಅಭಿಮಾನಿಯಾಗಿ.
ನಾವು ಆತ್ಮರಾಗಿದ್ದೇವೆ, ದೇಹೀ ಅಭಿಮಾನಿಯಾದಾಗಲೇ ತಂದೆಯನ್ನು ನೆನಪು ಮಾಡಲು ಸಾಧ್ಯ. ಅದು ಅಜ್ಞಾನ
ಕಾಲವಾಗಿದೆ, ಇದು ಜ್ಞಾನ ಕಾಲ. ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ, ಅವರು ಸರ್ವರ ಸದ್ಗತಿ
ಮಾಡುತ್ತಾರೆ ಮತ್ತು ಅವರು ನಿರಾಕಾರನಾಗಿದ್ದಾರೆ ಅರ್ಥಾತ್ ಅವರಿಗೆ ಯಾವುದೇ ಮನುಷ್ಯನ ಆಕಾರವಿಲ್ಲ.
ಯಾರಿಗೆ ಮನುಷ್ಯನ ಆಕಾರವಿದೆಯೋ ಅವರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಆತ್ಮರೆಲ್ಲರೂ
ನಿರಾಕಾರಿಯೇ ಆಗಿದ್ದಾರೆ ಆದರೆ ದೇಹಾಭಿಮಾನದಲ್ಲಿ ಬರುವುದರಿಂದ ತಾನು ಆತ್ಮನೆಂಬುದನ್ನೇ ಮರೆತು
ಹೋಗಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಹಿಂತಿರುಗಿ ಹೋಗಬೇಕಾಗಿದೆ, ತಮ್ಮನ್ನು
ಆತ್ಮನೆಂದು ತಿಳಿಯಿರಿ, ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ಜನ್ಮ-ಜನ್ಮಾಂತರಗಳ
ಪಾಪಗಳು ಭಸ್ಮವಾಗುವುದು. ಆತ್ಮವೇ ಪತಿತ, ಆತ್ಮವೇ ಪಾವನವಾಗುತ್ತದೆ. ತಂದೆಯು ತಿಳಿಸಿದ್ದಾರೆ -
ಪಾವನ ಆತ್ಮಗಳು ಸತ್ಯ-ತ್ರೇತಾಯುಗದಲ್ಲಿರುತ್ತಾರೆ. ಮತ್ತೆ ರಾವಣ ರಾಜ್ಯದಲ್ಲಿ ಪತಿತ
ಆತ್ಮರಾಗುತ್ತಾರೆ. ಏಣಿಯ ಚಿತ್ರದಲ್ಲಿ ತಿಳಿಸಲಾಗಿದೆ - ಯಾರು ಪಾವನರಿದ್ದರೋ ಅವರೇ
ಪತಿತರಾಗಿದ್ದಾರೆ. 5000 ವರ್ಷಗಳ ಮೊದಲು ನೀವೆಲ್ಲಾ ಆತ್ಮರು ಶಾಂತಿಧಾಮದಲ್ಲಿ ಪಾವನರಾಗಿದ್ದಿರಿ,
ಅದಕ್ಕೆ ನಿರ್ವಾಣ ಧಾಮವೆಂದು ಕರೆಯಲಾಗುವುದು ಮತ್ತೆ ಕಲಿಯುಗದಲ್ಲಿ ಪತಿತರಾಗುತ್ತೀರಿ. ಆಗ ಹೇ
ಪತಿತ-ಪಾವನನೇ ಬನ್ನಿ ಎಂದು ಕರೆಯುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮಗೆ
ಪತಿತರಿಂದ ಪಾವನರಾಗುವ ಯಾವ ಜ್ಞಾನವನ್ನು ಕೊಡುತ್ತಿದ್ದೇನೆಯೋ ಇದನ್ನು ಕೇವಲ ನಾನೇ ಕೊಡುತ್ತೇನೆ.
ಇದು ನಂತರ ಪ್ರಾಯಲೋಪವಾಗಿ ಬಿಡುತ್ತದೆ. ತಂದೆಯೇ ಬಂದು ತಿಳಿಸಬೇಕಾಗುತ್ತದೆ. ಇಲ್ಲಿ ಮನುಷ್ಯರು
ಬಹಳಷ್ಟು ಶಾಸ್ತ್ರಗಳನ್ನು ರಚಿಸಿದ್ದಾರೆ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರವಿರುವುದಿಲ್ಲ. ಅಲ್ಲಿ
ಅಂಶ ಮಾತ್ರವೂ ಭಕ್ತಿ ಮಾರ್ಗವಿರುವುದಿಲ್ಲ.
ಈಗ ತಂದೆಯು
ತಿಳಿಸುತ್ತಾರೆ - ನೀವು ನನ್ನ ಮೂಲಕವೇ ಪತಿತರಿಂದ ಪಾವನರಾಗುತ್ತೀರಿ. ಪಾವನ ಪ್ರಪಂಚವು ಅವಶ್ಯವಾಗಿ
ಆಗಲೇಬೇಕಾಗಿದೆ. ನಾನಂತೂ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತೇನೆ. ದೈವೀಗುಣಗಳನ್ನು ಧಾರಣೆ
ಮಾಡಿಕೊಳ್ಳಬೇಕಾಗಿದೆ. ಅಳುವುದು, ಮುನಿಸಿಕೊಳ್ಳುವುದು - ಇವೆಲ್ಲವೂ ಆಸುರೀ ಸ್ವಭಾವವಾಗಿದೆ.
ತಂದೆಯು ತಿಳಿಸುತ್ತಾರೆ - ಸುಖ-ದುಃಖ, ಮಾನ-ಅಪಮಾನ ಎಲ್ಲವನ್ನೂ ನೀವು ಮಕ್ಕಳು ಸಹನೆ ಮಾಡಬೇಕಾಗಿದೆ.
ನಾಜೂಕುತನವು ಬೇಡ. ನಾನು ಇಂತಹ ಸ್ಥಾನದಲ್ಲಿ ಇರುವುದಿಲ್ಲ ಎನ್ನುವುದೂ ಸಹ ನಾಜೂಕುತನವಾಗಿದೆ. ಇವರ
ಸ್ವಭಾವವೇ ಹೀಗಿದೆ, ಇವರು ಹೀಗಿದ್ದಾರೆ, ಹಾಗಿದ್ದಾರೆ, ಇದೇನೂ ಇರಬಾರದು. ಮುಖದಿಂದ ಸದಾ ಹೂಗಳಂತಹ
ಮಾತುಗಳೇ ಹೊರ ಬರಲಿ, ಮುಳ್ಳುಗಳು ಬರಬಾರದು. ಅನೇಕ ಮಕ್ಕಳನ್ನು ಬಾಯಿಂದ ಮುಳ್ಳುಗಳಂತಹ ಮಾತುಗಳೇ
ಹೊರ ಬರುತ್ತವೆ. ಯಾರ ಮೇಲಾದರೂ ಕ್ರೋಧ ಮಾಡುವುದೂ ಸಹ ಮುಳ್ಳಾಗಿದೆ. ಪರಸ್ಪರ ಆಗದೇ ಇರುವ ಗುಣವು
ಮಕ್ಕಳಲ್ಲಿ ಬಹಳಷ್ಟಿದೆ. ದೇಹಾಭಿಮಾನವಿರುವ ಕಾರಣ ಒಬ್ಬರು ಇನ್ನೊಬ್ಬರ ಕೊರತೆಗಳನ್ನು ನೋಡುತ್ತಾ
ತನ್ನಲ್ಲಿ ಅನೇಕ ಪ್ರಕಾರದ ಕೊರತೆಗಳು ಉಳಿಯುತ್ತವೆ ಆದ್ದರಿಂದ ಮತ್ತೆ ಸರ್ವೀಸಿನಲ್ಲಿ ಇಳಿಮುಖವಾಗಿ
ಬಿಡುತ್ತದೆ. ತಂದೆಯು ತಿಳಿಯುತ್ತಾರೆ - ಇದೂ ಸಹ ಡ್ರಾಮಾನುಸಾರ ಆಗುತ್ತದೆ. ಸುಧಾರಣೆಯಾಗಬೇಕಲ್ಲವೆ.
ಮಿಲಿಟರಿಯವರು ಯಾವಾಗ ಯುದ್ಧಕ್ಕೆ ಹೋಗುವರೋ ಆಗ ಅವರ ಕೆಲಸವೇ ಆಗಿದೆ - ಶತ್ರುಗಳೊಂದಿಗೆ
ಹೋರಾಡುವುದು. ಪ್ರವಾಹವಾಗುತ್ತದೆ ಅಥವಾ ಏನಾದರೂ ಏರುಪೇರುಗಳಾದರೂ ಸಹ ಮಿಲಿಟರಿಯವರನ್ನು
ಕರೆಸುತ್ತಾರೆ, ಆಗ ಮಿಲಿಟರಿಯವರು ಕೂಲಿಗಳ ಕೆಲಸವನ್ನೂ ಮಾಡತೊಡಗುತ್ತಾರೆ. ಸರ್ಕಾರವು ಮಿಲಿಟರಿಗೆ
ಈ ಮಣ್ಣೆಲ್ಲವನ್ನೂ ತುಂಬಿರಿ ಎಂದು ಆದೇಶ ನೀಡುತ್ತದೆ, ಒಂದುವೇಳೆ ಸೈನಿಕರು ಪರಿಪಾಲಿಸಲಿಲ್ಲವೆಂದರೆ
ಅವರು ಗುಂಡೇಟಿಗೊಳಗಾಗುತ್ತಾರೆ. ಸರ್ಕಾರದ ಆಜ್ಞೆಯನ್ನು ಪಾಲಿಸಲೇಬೇಕಾಗುತ್ತದೆ. ತಂದೆಯು
ತಿಳಿಸುತ್ತಾರೆ - ನೀವೂ ಸಹ ಸರ್ವೀಸಿಗಾಗಿ ಬಂಧಿತರಾಗಿದ್ದೀರಿ, ತಂದೆಯು ಎಲ್ಲಿಯಾದರೂ ಸೇವೆಗಾಗಿ
ಕಳುಹಿಸಿದರೆ ಕೂಡಲೇ ಹಾಜರಾಗಿ ಬಿಡಬೇಕು. ಪಾಲಿಸದಿದ್ದರೆ ನಿಮಗೆ ಯೋಧರೆಂದು ಹೇಳುವುದಿಲ್ಲ.
ಇಂತಹವರು ತಂದೆಯ ಹೃದಯವನ್ನೇರುವುದಿಲ್ಲ. ನೀವು ಎಲ್ಲರಿಗೆ ಸಂದೇಶ ಕೊಡುವುದರಲ್ಲಿ ತಂದೆಗೆ
ಸಹಯೋಗಿಗಳಾಗಿದ್ದೀರಿ. ತಿಳಿದುಕೊಳ್ಳಿ, ಎಲ್ಲಿಯಾದರೂ ದೊಡ್ಡ ಮ್ಯೂಸಿಯಂನ್ನು ತೆರೆಯುತ್ತಾರೆ, 10
ಮೈಲಿಗಳ ದೂರವಿದೆಯೆಂದು ಹೇಳುತ್ತಾರೆ. ಸರ್ವೀಸಿಗಾಗಿ ಹೋಗಲೇಬೇಕಾಗುತ್ತದೆಯಲ್ಲವೆ. ಖರ್ಚಿನ ಬಗ್ಗೆ
ಆಲೋಚಿಸಬಾರದು. ದೊಡ್ಡದಕ್ಕಿಂತ ದೊಡ್ಡ ಸರಕಾರ ಬೇಹದ್ದಿನ ತಂದೆಯ ಆದೇಶವು ಸಿಗುತ್ತದೆ. ಇವರಿಗೆ ಬಲ
ಭುಜವು ಧರ್ಮರಾಜನಾಗಿದ್ದಾರೆ. ಅವರ ಶ್ರೀಮತದಂತೆ ನಡೆಯದಿದ್ದರೆ ಬಿದ್ದು ಹೋಗುವಿರಿ. ಶ್ರೀಮತವು
ಹೇಳುತ್ತದೆ - ತಮ್ಮ ದೃಷ್ಟಿಯನ್ನು ನಿರ್ವಿಕಾರಿ ಮಾಡಿಕೊಳ್ಳಿ. ಕಾಮದ ಮೇಲೆ ಜಯ ಗಳಿಸುವ
ಸಾಹಸವನ್ನಿಡಬೇಕು. ತಂದೆಯ ಆಜ್ಞೆಯಾಗಿದೆ ಒಂದುವೇಳೆ ಅದನ್ನು ಮಾಡಲಿಲ್ಲವೆಂದರೆ ಒಮ್ಮೆಲೆ ಚಕನಾಚೂರ್
(ಪುಡಿ-ಪುಡಿ) ಆಗಿ ಬಿಡುತ್ತೇವೆ. 21 ಜನ್ಮಗಳ ರಾಜ್ಯಭಾಗ್ಯವು ಕಳೆಯುತ್ತದೆ. ತಂದೆಯು
ತಿಳಿಸುತ್ತಾರೆ - ನನ್ನನ್ನು ಮಕ್ಕಳ ವಿನಃ ಮತ್ತ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ಕಲ್ಪದ
ಹಿಂದಿನವರೇ ನಿಧಾನ-ನಿಧಾನವಾಗಿ ಬರತೊಡಗುತ್ತಾರೆ. ಇವು ಹೊಸ-ಹೊಸ ಮಾತುಗಳಾಗಿವೆ. ಇದು ಗೀತಾ
ಯುಗವಾಗಿದೆ ಆದರೆ ಶಾಸ್ತ್ರಗಳಲ್ಲಿ ಈ ಸಂಗಮ ಯುಗದ ವರ್ಣನೆಯಿಲ್ಲ. ಗೀತೆಯನ್ನೇ ದ್ವಾಪರ ಯುಗದಲ್ಲಿ
ತೆಗೆದುಕೊಂಡು ಹೋಗಿದ್ದಾರೆ ಆದರೆ ಯಾವಾಗ ರಾಜಯೋಗವನ್ನು ಕಲಿಸಿದರೋ ಅದು ಅವಶ್ಯವಾಗಿ
ಸಂಗಮವಿರಬೇಕಲ್ಲವೆ. ಆದರೆ ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿಲ್ಲ. ಈಗ ನಿಮಗೆ ಜ್ಞಾನದ ನಶೆಯೇರಿದೆ,
ಮನುಷ್ಯರಿಗಾದರೆ ಭಕ್ತಿಮಾರ್ಗದ ನಶೆಯಿದೆ. ಭಗವಂತನೇ ಬಂದರೂ ಸಹ ನಾವು ಭಕ್ತಿಯನ್ನು
ಬಿಡುವುದಿಲ್ಲವೆಂದು ಹೇಳುತ್ತಾರೆ. ಈ ಉತ್ಥಾನ ಹಾಗೂ ಪಥನದ ಏಣಿಯ ಚಿತ್ರವು ಬಹಳ ಚೆನ್ನಾಗಿದೆ ಆದರೂ
ಸಹ ಮನುಷ್ಯರ ಕಣ್ಣುಗಳು ತೆರೆಯುವುದೇ ಇಲ್ಲ. ಮಾಯೆಯ ನಶೆಯಲ್ಲಿ ಒಮ್ಮೆಲೆ ಚಕನಾಚೂರ್ ಆಗುತ್ತಾರೆ.
ಜ್ಞಾನದ ನಶೆಯು ಬಹಳ ನಿಧಾನವಾಗಿ ಏರುತ್ತದೆ. ಮೊದಲಿಗೆ ದೈವೀ ಗುಣಗಳು ಬೇಕು, ತಂದೆಯ ಯಾವುದೇ
ಆಜ್ಞೆಯು ಸಿಕ್ಕಿದರೆ ಅದರಲ್ಲಿ ನೆಪ ಹೇಳಬಾರದು. ಇದನ್ನು ನನ್ನಿಂದ ಮಾಡಲು ಆಗುವುದಿಲ್ಲ ಎಂದು
ಹೇಳಿದರೆ ಅಂತಹವರಿಗೆ ಅವಜ್ಞಾಕಾರಿಗಳೆಂದು ಹೇಳಲಾಗುತ್ತದೆ. ಹೀಗೀಗೆ ಮಾಡಬೇಕೆಂದು ಶ್ರೀಮತವು
ಸಿಗುತ್ತದೆ ಅಂದಮೇಲೆ ಶಿವ ತಂದೆಯ ಶ್ರೇಷ್ಠ ಮತವಾಗಿದೆ ಎಂದು ತಿಳಿಯಬೇಕು. ಅವರೇ
ಸದ್ಗತಿದಾತನಾಗಿದ್ದಾರೆ ಅಂದಮೇಲೆ ದಾತನೆಂದೂ ವಿರುದ್ಧವಾದ ಮತವನ್ನು ಕೊಡುವುದಿಲ್ಲ. ನಾನು ಇವರ
ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡಿದ್ದೇನೆಂದು ತಂದೆಯು ತಿಳಿಸುತ್ತಾರೆ. ನೋಡಿ, ಇವರಿಗಿಂತಲೂ
ಲಕ್ಷ್ಮಿಯು ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ಗಾಯನವೂ ಇದೆ - ಸ್ತ್ರೀಯರನ್ನು ಮುಂದಿಡಲಾಗುತ್ತದೆ,
ಮೊದಲು ಲಕ್ಷ್ಮೀ ನಂತರ ನಾರಾಯಣ. ಯಥಾ ರಾಜ-ರಾಣಿ ತಥಾ ಪ್ರಜೆಯಾಗಿರುತ್ತಾರೆ. ನೀವೂ ಸಹ ಈ ರೀತಿ
ಶ್ರೇಷ್ಠರಾಗಬೇಕಾಗಿದೆ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿಯೇ ರಾವಣ ರಾಜ್ಯವಿದೆ. ರಾಮ ರಾಜ್ಯವು
ಬೇಕೆಂದು ಎಲ್ಲರೂ ಹೇಳುತ್ತಾರೆ, ಈಗ ಸಂಗಮವಾಗಿದೆ. ಯಾವಾಗ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೋ ಆಗ
ರಾವಣ ರಾಜ್ಯವಿರಲಿಲ್ಲ. ನಂತರ ಹೇಗೆ ಪರಿವರ್ತನೆಯಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ.
ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ಕಲಿಯುಗವು ಇನ್ನೂ ಚಿಕ್ಕ ಮಗುವಾಗಿದೆ ಎಂದು ತಿಳಿಯುತ್ತಾರೆ.
ಆದ್ದರಿಂದ ಮನುಷ್ಯರು ಇನ್ನೂ ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆ. ಈ ಆತ್ಮಿಕ ಜ್ಞಾನವನ್ನು
ಆತ್ಮಿಕ ತಂದೆಯೇ ಆತ್ಮಗಳಿಗೆ ಕೊಡುತ್ತಾರೆ, ರಾಜಯೋಗವನ್ನೂ ಕಲಿಸುತ್ತಾರೆ. ಕೃಷ್ಣನಿಗೆ ಆತ್ಮಿಕ
ತಂದೆಯೆಂದು ಹೇಳುವುದಿಲ್ಲ. ಹೇ ಆತ್ಮಿಕ ಮಕ್ಕಳೇ ಎಂದು ಕೃಷ್ಣನು ಹೇಳುವುದಿಲ್ಲ. ಇದನ್ನೂ ಸಹ
ಬರೆಯಬೇಕು - ಆಧ್ಯಾತ್ಮಿಕ ಜ್ಞಾನವನ್ನು ಆತ್ಮಿಕ ಮಕ್ಕಳಿಗೆ ಆತ್ಮಿಕ ಜ್ಞಾನಪೂರ್ಣ ತಂದೆಯು
ತಿಳಿಸುತ್ತಾರೆ.
ತಂದೆಯು ತಿಳಿಸುತ್ತಾರೆ
- ಪ್ರಪಂಚದಲ್ಲಿ ಎಲ್ಲಾ ಮನುಷ್ಯರು ದೇಹಾಭಿಮಾನಿಗಳಾಗಿದ್ದಾರೆ, ನಾನಾತ್ಮನಾಗಿದ್ದೇನೆ ಎಂಬುದು
ಯಾರಿಗೂ ತಿಳಿದಿಲ್ಲ. ಯಾವುದೇ ಆತ್ಮವು ಲೀನವಾಗುವುದಿಲ್ಲ. ಈಗ ನೀವು ಮಕ್ಕಳಿಗೆ ತಿಳಿಸಲಾಗಿದೆ,
ದಶಹರ, ದೀಪಾವಳಿ ಎಂದರೇನು? ಮನುಷ್ಯರಂತೂ ಯಾವುದೆಲ್ಲಾ ಪೂಜೆ ಇತ್ಯಾದಿಗಳನ್ನು
ಮಾಡುತ್ತಿರುತ್ತಾರೆಯೋ ಎಲ್ಲವೂ ಅಂಧಶ್ರದ್ಧೆಯಾಗಿದೆ. ಇದಕ್ಕೆ ಗೊಂಬೆ ಪೂಜೆ ಕಲ್ಲು ಪೂಜೆಯೆಂದು
ಕರೆಯಲಾಗುತ್ತದೆ. ಈಗ ನೀವು ಪಾರಸ ಬುದ್ಧಿಯವರಾಗುತ್ತೀರಿ ಅಂದಮೇಲೆ ಕಲ್ಲಿನ ಪೂಜೆ ಮಾಡುವಂತಿಲ್ಲ.
ಚಿತ್ರಗಳ ಮುಂದೆ ಹೋಗಿ ತಲೆ ಬಾಗುತ್ತಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ. ಜ್ಞಾನ, ಭಕ್ತಿ,
ವೈರಾಗ್ಯವೆಂದು ಹೇಳುತ್ತಾರೆ. ಜ್ಞಾನವು ಅರ್ಧಕಲ್ಪ ನಡೆಯಿತು, ನಂತರ ಭಕ್ತಿಯು ಆರಂಭವಾಯಿತು. ಈಗ
ನಿಮಗೆ ಜ್ಞಾನವು ಸಿಗುತ್ತದೆ ಆದ್ದರಿಂದ ಭಕ್ತಿಯಿಂದ ವೈರಾಗ್ಯವುಂಟಾಗುತ್ತದೆ. ಈ ಪ್ರಪಂಚವೇ
ಬದಲಾಗುತ್ತದೆ, ಕಲಿಯುಗದಲ್ಲಿ ಭಕ್ತಿಯಿದೆ, ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ. ಅಲ್ಲಿ ಪೂಜ್ಯರೇ
ಇರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಏಕೆ ತಲೆ ಬಾಗುತ್ತೀರಿ? ಅರ್ಧ ಕಲ್ಪ ನೀವು
ಹಣೆಯನ್ನೂ ಸವೆಸಿದಿರಿ, ಹಣವನ್ನೂ ಖರ್ಚು ಮಾಡಿದಿರಿ. ಏನೂ ಸಿಗಲಿಲ್ಲ. ಮಾಯೆಯು ಒಮ್ಮೆಲೆ ತಲೆಯನ್ನು
ತಿರುಗಿಸಿ ಬಿಟ್ಟಿದೆ, ಕಂಗಾಲರನ್ನಾಗಿ ಮಾಡಿದೆ. ಈಗ ಮತ್ತೆ ತಂದೆಯು ಬಂದು ಎಲ್ಲರ ತಲೆಯನ್ನು ಸರಿ
ಪಡಿಸುತ್ತಾರೆ. ಈಗ ನಿಧಾನ-ನಿಧಾನವಾಗಿ ಕೆಲವರು ಯುರೋಪಿಯನ್ನರೂ ಸಹ ಅರ್ಥ ಮಾಡಿಕೊಳ್ಳುತ್ತಾರೆ.
ತಂದೆಯು ತಿಳಿಸುತ್ತಾರೆ - ಈ ಭಾರತವಾಸಿಗಳಂತೂ ಸಂಪೂರ್ಣ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಅನ್ಯ
ಧರ್ಮದವರಾದರೂ ಕೊನೆಯಲ್ಲಿ ಬರುವುದರಿಂದ ಸುಖವೂ ಸ್ವಲ್ಪ, ದುಃಖವೂ ಸ್ವಲ್ಪ ಸಿಗುತ್ತದೆ.
ಭಾರತವಾಸಿಗಳಿಗೆ ಸುಖವೂ ಹೆಚ್ಚು, ದುಃಖವೂ ಹೆಚ್ಚು ಸಿಗುತ್ತದೆ. ಆರಂಭದಲ್ಲಿ ಎಷ್ಟೊಂದು ಧನವಂತರು
ಒಮ್ಮೆಲೆ ವಿಶ್ವದ ಮಾಲೀಕರಾಗುತ್ತೀರಿ. ಅನ್ಯ ಧರ್ಮದವರು ಮೊದಲೇನೂ ಧನವಂತರಾಗಿರುವುದಿಲ್ಲ.
ಕೊನೆಯಲ್ಲಿ ವೃದ್ಧಿಯನ್ನು ಹೊಂದುತ್ತಾ-ಹೊಂದುತ್ತಾ ಈಗ ಬಂದು ಧನವಂತರಾಗುತ್ತಾರೆ. ಈಗ ಮತ್ತೆ
ಭಾರತವು ಎಲ್ಲದಕ್ಕಿಂತ ಭಿಕಾರಿಯಾಗಿದೆ. ಅಂಧ ಶ್ರದ್ದಾಳುವೂ ಭಾರತವೇ ಆಗಿದೆ ಇದು ನಾಟಕದಲ್ಲಿ
ಮಾಡಲ್ಪಟ್ಟಿದೆ. ನಾನು ಯಾವುದನ್ನು ಸ್ವರ್ಗವನ್ನಾಗಿ ಮಾಡಿದೆನೋ ಅದು ಈಗ ನರಕವಾಗಿ ಬಿಟ್ಟಿದೆ.
ಮನುಷ್ಯರು ಮಂಗನ ಬುದ್ಧಿಯವರಾಗಿದ್ದಾರೆ. ಅವರನ್ನು ನಾನು ಬಂದು ಮಂದಿರಕ್ಕೆ ಯೋಗ್ಯರನ್ನಾಗಿ
ಮಾಡುತ್ತೇನೆ. ವಿಕಾರಗಳು ಬಹಳ ಕಠಿಣವಾಗಿರುತ್ತದೆ. ಎಷ್ಟೊಂದು ಕ್ರೋಧವಿರುತ್ತದೆ. ನಿಮ್ಮಲ್ಲಿ
ಯಾವುದೇ ಕ್ರೋಧವಿರಬಾರದು. ಸಂಪೂರ್ಣ ಮಧುರ, ಶಾಂತ ಮತ್ತು ಅತಿಮಧುರರಾಗಿ. ಇದನ್ನೂ
ತಿಳಿದುಕೊಂಡಿದ್ದೀರಿ – ರಾಜ್ಯ ಪದವಿಯನ್ನು ಪಡೆಯುವವರು ಕೋಟಿಯಲ್ಲಿ ಕೆಲವರೇ ಬರುತ್ತಾರೆ. ನಾನು
ನಿಮ್ಮನ್ನು ನರನಿಂದ ನಾರಾಯಣನನ್ನಾಗಿ ಮಾಡಲು ಬಂದಿದ್ದೇನೆ. ಅದರಲ್ಲಿಯೂ ಅಷ್ಟ ರತ್ನಗಳು
ಮುಖ್ಯವೆಂದು ಗಾಯನವಿದೆ. ಅಷ್ಟ ರತ್ನಗಳು ಮತ್ತು ಮಧ್ಯದಲ್ಲಿ ತಂದೆಯಿದ್ದಾರೆ. 8 ಮಂದಿಯು
ಗೌರವಾನ್ವಿತವಾಗಿ ತೇರ್ಗಡೆಯಾದವರಾಗಿದ್ದಾರೆ, ಅದೂ ನಂಬರ್ವಾರ್ ಪುರುಷಾರ್ಥದನುಸಾರ.
ದೇಹಾಭಿಮಾನದಲ್ಲಿ ಬಹಳ ಪರಿಶ್ರಮವಾಗುತ್ತದೆ. ಆದ್ದರಿಂದ ದೇಹಭಾನವು ಸಂಪೂರ್ಣ ಬಿಟ್ಟು ಹೋಗಲಿ.
ಕೆಲಕೆಲವರು ಯಾರು ಪಕ್ಕಾ ಬ್ರಹ್ಮಾ ಜ್ಞಾನಿಗಳಿರುತ್ತಾರೆಯೋ ಅವರದು ಹೀಗೆ ಆಗುತ್ತದೆ.
ಕುಳಿತು-ಕುಳಿತಿದ್ದಂತೆಯೇ ದೇಹ ತ್ಯಾಗ ಮಾಡುತ್ತಾರೆ. ಶರೀರವನ್ನು ಬಿಟ್ಟು ಬಿಡುತ್ತಾರೆ.
ವಾಯುಮಂಡಲವು ಶಾಂತವಾಗಿ ಬಿಡುತ್ತದೆ. ಮತ್ತು ಬಹಳ ಮಟ್ಟಿಗೆ ಮುಂಜಾನೆ, ಶುದ್ಧ ಸಮಯದಲ್ಲಿ
ಶರೀರವನ್ನು ಬಿಡುತ್ತಾರೆ. ರಾತ್ರಿಯಲ್ಲಿ ಮನುಷ್ಯರು ಬಹಳ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ.
ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮಾಡಿ ಭಗವಂತ, ಭಗವಂತ ಎಂದು ಹೇಳತೊಡಗುತ್ತಾರೆ, ಪೂಜೆ
ಮಾಡುತ್ತಾರೆ. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಪ್ರದರ್ಶನಿ ಮೊದಲಾದುವುಗಳಲ್ಲಿ
ಮೊಟ್ಟ ಮೊದಲಿಗೆ ತಂದೆಯ ಪರಿಚಯ ಕೊಡಿ. ಮೊದಲು ತಂದೆ ಮತ್ತು ಆಸ್ತಿ. ತಂದೆಯು ಒಬ್ಬರೇ
ನಿರಾಕಾರನಾಗಿದ್ದಾರೆ. ರಚಯಿತ ತಂದೆಯೇ ಕುಳಿತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿಸುತ್ತಾರೆ.
ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ದೇಹದ ಸಂಬಂಧವನ್ನು ಬಿಟ್ಟು
ತಮ್ಮನ್ನು ಆತ್ಮನೆಂದು ತಿಳಿದು ನನ್ನೊಬ್ಬನನ್ನೇ ನೆನಪು ಮಾಡಿ. ತಂದೆಯ ಪರಿಚಯವನ್ನು ನೀವು
ಕೊಡುತ್ತೀರಿ ಆನಂತರ ಯಾರಿಗೂ ಪ್ರಶ್ನೋತ್ತರ ಮಾಡುವ ಧೈರ್ಯವೇ ಇರುವುದಿಲ್ಲ. ಮೊದಲು ತಂದೆಯ ಪ್ರತಿ
ನಿಶ್ಚಯವು ಪಕ್ಕಾ ಆಗಲಿ. ಆಗ ತಿಳಿಸಿ, ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು.
ಚಕ್ರವನ್ನು ತಿಳಿದುಕೊಂಡರು, ತಂದೆಯನ್ನು ತಿಳಿದುಕೊಂಡ ಮೇಲೆ ಮತ್ತ್ಯಾವುದೇ ಪ್ರಶ್ನೆಯು
ಬರುವುದಿಲ್ಲ. ತಂದೆಯ ಪರಿಚಯವನ್ನು ಕೊಡದೇ ಬೇರೆಯದನ್ನು ನೀವು ಹೇಳುತ್ತಾ ಹೋಗುತ್ತೀರೆಂದರೆ
ಅದರಲ್ಲಿ ನಿಮ್ಮ ಸಮಯವು ವ್ಯರ್ಥವಾಗಿ ಬಿಡುತ್ತದೆ, ಗಂಟಲು ಕಟ್ಟುತ್ತದೆ. ಮೊಟ್ಟ ಮೊದಲು ತಂದೆಯ
ಮಾತನ್ನು ತಿಳಿದುಕೊಳ್ಳಿ. ನೀವು ಬೇರೆ-ಬೇರೆ ಮಾತನ್ನು ತಿಳಿಸುವುದರಿಂದ ಅವರು
ತಿಳಿದುಕೊಳ್ಳುವುದಿಲ್ಲ. ಸಂಪೂರ್ಣ ಸರಳ ರೀತಿಯಲ್ಲಿ ಮತ್ತು ನಿಧಾನವಾಗಿ ತಿಳಿಸಿ ಕೊಡಬೇಕು. ಯಾರು
ದೇಹೀ-ಅಭಿಮಾನಿಗಳಾಗಿರುವರೋ ಅವರೇ ಚೆನ್ನಾಗಿ ತಿಳಿಸಿ ಕೊಡುತ್ತಾರೆ. ದೊಡ್ಡ-ದೊಡ್ಡ ಮ್ಯೂಸಿಯಂನಲ್ಲಿ
ಚೆನ್ನಾಗಿ ತಿಳಿಸುವವರು ಸಹಯೋಗ ಕೊಡಬೇಕಾಗಿದೆ. ಸ್ವಲ್ಪ ದಿನಗಳ ಕಾಲ ತಮ್ಮ ಸೇವಾಕೇಂದ್ರವನ್ನು
ಬಿಟ್ಟು ಸಹಯೋಗವನ್ನು ಕೊಡಲು ಬಂದು ಬಿಡಬೇಕು. ಸೇವಾಕೇಂದ್ರವನ್ನು ಸಂಭಾಲನೆ ಮಾಡಲು ನಿಮ್ಮ ಹಿಂದೆ
ಯಾರನ್ನಾದರೂ ಇಟ್ಟುಕೊಳ್ಳಿ. ಒಂದುವೇಳೆ ಗದ್ದುಗೆಯನ್ನು ಸಂಭಾಲನೆ ಮಾಡಲು ಯೋಗ್ಯರನ್ನಾಗಿ ಯಾರನ್ನೂ
ತಮ್ಮ ಸಮಾನ ಮಾಡಿಕೊಳ್ಳಲಿಲ್ಲವೆಂದರೆ ಇವರು ಸರ್ವೀಸ್ ಮಾಡಿಲ್ಲ, ಏನೂ ಪ್ರಯೋಜನಕ್ಕಿಲ್ಲವೆಂದು
ತಂದೆಯು ತಿಳಿದುಕೊಳ್ಳುತ್ತಾರೆ. ಬಾಬಾ, ಸರ್ವೀಸ್ ಬಿಟ್ಟು ಹೇಗೆ ಹೋಗುವುದೆಂದು ತಂದೆಗೆ ಪತ್ರ
ಬರೆಯುತ್ತಾರೆ. ಅರೆ! ತಂದೆಯು ಇಂತಹ ಸ್ಥಳಕ್ಕೆ ಪ್ರದರ್ಶನಿಯಲ್ಲಿ ಸರ್ವೀಸ್ ಮಾಡಲು ಹೋಗಿ ಎಂದು
ಹೇಳುತ್ತಾರೆ. ಯಾರನ್ನೂ ಗದ್ದುಗೆಗೆ ಯೋಗ್ಯರನ್ನಾಗಿ (ಮುರುಳಿಯನ್ನು ಓದಲು) ಮಾಡಿಲ್ಲವೆಂದರೆ
ನೀವೇನು ಪ್ರಯೋಜನ? ತಂದೆಯು ಆಜ್ಞೆ ಮಾಡಿದರೆಂದರೆ ಕೂಡಲೇ ಸೇವೆಗಾಗಿ ಓಡಬೇಕು. ಅಂತಹವರಿಗೆ
ಮಹಾರಥಿಗಳು, ಬ್ರಾಹ್ಮಣಿಯರೆಂದು ಹೇಳಲಾಗುತ್ತದೆ. ಉಳಿದದವರು ಕುದುರೆ ಸವಾರರು,
ಕಾಲಾಳುಗಳಾಗಿದ್ದಾರೆ. ಎಲ್ಲರೂ ಸರ್ವೀಸಿನಲ್ಲಿ ಸಹಯೋಗಿಗಳಾಗಿದ್ದಾರೆ. ಇಷ್ಟು ವರ್ಷಗಳಲ್ಲಿ
ಯಾರನ್ನೂ ತಮ್ಮ ಸಮಾನ ಮಾಡಿಲ್ಲವೆಂದರೆ ಇನ್ನೇನು ಮಾಡುತ್ತಿದ್ದಿರಿ! ಇಷ್ಟು ಸಮಯದಲ್ಲಿ
ಸೇವಾಕೇಂದ್ರವನ್ನು ಸಂಭಾಲನೆ ಮಾಡುವ ಸಂದೇಶ ವಾಹಕರನ್ನೇ ತಯಾರು ಮಾಡಿಲ್ಲ. ಎಂತೆಂತಹ ಮನುಷ್ಯರು
ಬರುತ್ತಾರೆ ಅವರೊಂದಿಗೆ ಮಾತನಾಡಲು ತಿಳುವಳಿಕೆಯು ಬೇಕು. ಮುರುಳಿಯನ್ನು ಅವಶ್ಯವಾಗಿ ಓದಬೇಕು ಮತ್ತು
ಕೇಳಬೇಕಾಗಿದೆ. ಮುರುಳಿಯನ್ನು ಓದಲಿಲ್ಲವೆಂದರೆ ಗೈರು ಹಾಜರಿಯಾಯಿತು. ನೀವು ಮಕ್ಕಳು ಇಡೀ ವಿಶ್ವದ
ಮೇಲೆ ಮುತ್ತಿಗೆ ಹಾಕಬೇಕಾಗಿದೆ. ನೀವು ಇಡೀ ವಿಶ್ವದ ಸೇವೆ ಮಾಡಬೇಕಾಗಿದೆ. ಪತಿತ ಪ್ರಪಂಚವನ್ನು
ಪಾವನ ಮಾಡುವುದು ಮುತ್ತಿಗೆ ಹಾಕುವುದಲ್ಲವೆ. ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಧಾಮದ ಮಾರ್ಗವನ್ನು
ತಿಳಿಸಬೇಕು, ದುಃಖದಿಂದ ಬಿಡಿಸಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಬಹಳ ಮಧುರ,
ಶಾಂತ, ಅತಿ ಮಧುರ ಸ್ವಭಾವದವರಾಗಬೇಕಾಗಿದೆ. ಎಂದೂ ಕ್ರೋಧ ಮಾಡಬಾರದು. ತಮ್ಮ ಕಣ್ಣುಗಳನ್ನು
ಬಹಳ-ಬಹಳ ನಿರ್ವಿಕಾರಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ.
2. ತಂದೆಯು ಯಾವ ಆಜ್ಞೆ
ಮಾಡುವರೋ ಅದನ್ನು ಕೂಡಲೇ ಪಾಲಿಸಬೇಕಾಗಿದೆ. ಇಡೀ ಪತಿತವಾಗಿರುವ ವಿಶ್ವವನ್ನು ಪತಿತದಿಂದ
ಪಾವನವನ್ನಾಗಿ ಮಾಡುವ ಸೇವೆ ಮಾಡಬೇಕು ಅರ್ಥಾತ್ ಮುತ್ತಿಗೆ ಹಾಕಬೇಕು.
ವರದಾನ:
ತಂದೆಯ ನೆನಪಿನ
ಮೂಲಕ ಅಸಂತೋಷದ ಪರಿಸ್ಥಿತಿಯಲ್ಲಿಯೂ ಸಹಾ, ಸದಾ ಸುಖ ಅಥವಾ ಸಂತೋಷದ ಅನುಭೂತಿ ಮಾಡುವಂತಹ ಮಹಾವೀರ
ಭವ.
ಸದಾ ತಂದೆಯ
ನೆನಪಿನಲ್ಲಿರುವಂತಹ ಎಲ್ಲಾ ಪರಿಸ್ಥಿತಿಯಲ್ಲಿಯೂ ಸದಾ ಸಂತುಷ್ಠರಾಗಿರುತ್ತಾರೆ, ಏಕೆಂದರೆ ಜ್ಞಾನದ
ಶಕ್ತಿಯ ಆಧಾರದ ಮೇಲೆ ಬೆಟ್ಟದಂತಹ ಪರಿಸ್ಥಿತಿ ಸಹಾ ಹತ್ತಿಯ ಅನುಭವವಾಗುವುದು. ಕಲ್ಲು ಅರ್ಥಾತ್ ಏನೂ
ಇಲ್ಲ. ಪರಿಸ್ಥಿತಿ ಅಸಂತೋಷತರುವಂತಹದೇ ಇರಬಹುದು, ದುಃಖದ ಘಟನೆ ಇರಬಹುದು ಆದರೆ ದುಃಖದ
ಪರಿಸ್ಥಿತಿಯಲ್ಲಿಯೂ ಸುಖದ ಸ್ಥಿತಿ ಇರಬೇಕು ಆಗ ಹೇಳಲಾಗುವುದು ಮಹಾವೀರ. ಏನೇ ಆಗಿ ಬಿಡಲಿ, ನಥಿಂಗ್
ನ್ಯೂ ನ ಜೊತೆ-ಜೊತೆ ತಂದೆಯ ಸ್ಮತಿಯಿಂದ ಸದಾ ಏಕರಸ ಸ್ಥಿತಿ ಇರಲು ಸಾಧ್ಯ, ನಂತರ ದುಃಖ ಅಶಾಂತಿಯ
ಅಲೆಯೂ ಸಹಾ ಬರುವುದಿಲ್ಲ.
ಸ್ಲೋಗನ್:
ತಮ್ಮ ದೈವೀ
ಸ್ವರೂಪ ಸದಾ ಸ್ಮತಿಯಲ್ಲಿದ್ದಾಗ ಯಾರದೇ ವ್ಯರ್ಥ ದೃಷ್ಠಿ ಹೋಗಲು ಸಾಧ್ಯವಿಲ್ಲ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಹೇಗೆ ಶಾಂತಿಯ
ಶಕ್ತಿಯ ಪ್ರಯೋಗ ಲೈಟ್ನ ಮೇಲೆ ಆಧಾರವಾಗಿದೆ. ಒಂದುವೇಳೆ ಕಂಪ್ಯೂಟರ್ ನಡೆಯುತ್ತದೆಯೆಂದರೆ
ಕಂಪ್ಯೂಟರ್ ಮೈಟ್ ಆಗಿದೆ ಆದರೆ ಆಧಾರ ಲೈಟ್ ಆಗಿದೆ. ಈ ರೀತಿ ನಿಮ್ಮ ಸೈಲೆನ್ಸ್ನ ಶಕ್ತಿಯ ಆಧಾರವೂ
ಲೈಟ್ ಆಗಿದೆ. ಎಲ್ಲಿಯವರೆಗೆ ಆ ಪ್ರಕೃತಿಯ ಲೈಟ್ ಅನೇಕ ಪ್ರಕಾರದ ಪ್ರಯೋಗ ಪ್ರಾಕ್ಟಿಕಲ್ನಲ್ಲಿ ಮಾಡಿ
ತೋರಿಸುತ್ತಾರೆ ಅಂದಾಗ ನಿಮ್ಮ ಅವಿನಾಶಿ ಪರಮಾತ್ಮ ಲೈಟ್, ಆತ್ಮಿಕ ಲೈಟ್ ಮತ್ತು ಜೊತೆ-ಜೊತೆಯಲ್ಲಿ
ಪ್ರಾಕ್ಟಿಕಲ್ ಸ್ಥಿತಿ ಲೈಟ್, ಅಂದಾಗ ಇದರಿಂದ ಏನೆಲ್ಲಾ ಪ್ರಯೋಗವಾಗಬಹುದಲ್ಲವೇ!